ರಾಗ ಶಂಕರಾಭರಣ ಅಷ್ಟತಾಳ
ಪೋರಲೇಸಾಯ್ತೆನ್ನಕೈಗೆ | ಭೋರನೆ ಸಿಕ್ಕಿದೆ ಮತ್ತೆ |
ನಾರಿ ಮೂಗಕೊಯ್ದಹಮ್ಮ | ತೋರುನೋಳ್ಪೆನು | ||400||
ತೋರಲೇನುಂಟೆಲೋಖುಲ್ಲ | ನಾರಿಮೂಗಕೊಯ್ದೆನಂದು |
ಮೀರಲಿಂದು ನಿನ್ನತಲೆಜ | ಜ್ಜಾರಮಾಳ್ಪೆನು | ||401||
ಭಳಿರೆ ಶೂರನಹುದೊ ಕೊಳು | ಗುಳದೊಳತಿಕಾಯನಸುವ |
ಸೆಳೆದಗರ್ವತೋರೆ ನಿನ್ನ | ನುಳಿಯಗೊಡೆನೆಂದ | ||402||
ಉಳಿಯ ಗೊಡೆನೆಂಬಹಮ್ಮಿ | ನೊಳವಬಲ್ಲೆ ರಾತ್ರಿ ಕೋತಿ |
ಗಳನು ಗೆದ್ದ ಪ್ರೌಢಕಯ್ಯ | ಚಳಕತೋರೆಂದ | ||403||
ನೋಡುನೋಡಾದಡೆನುತ್ತ | ಮೂಡಿಗೆಯಿಂ ಪೊಸಮಸೆ |
ಗೂಡಿದನಾರಾಚಜಾಲ | ಕೂಡೆ ತೆಗೆದೆಚ್ಚ | ||404||
ಗಾಢದಿಂ ಸೌಮಿತ್ರಿ ತುಂಡು | ಮಾಡಿಯದಸರಳೆಚ್ಚು |
ಝೂಡಿಸಿದ ವೈರಿತೇರ | ನಾಡಲೇನ್ ಹೆಚ್ಚು | ||405||
ಭಾಮಿನಿ
ರಥ ಮುರಿಯೆಬೇರೊಂದು ಪೊಸಮಣಿ |
ರಥದಿಮಿಂಚಲು ಕಡಿದ ನಿಂತರಿ |
ರಥಸಹಸ್ರವತರಿದುವಿರಥನ ಗೈದಡಾಖಳನು ||
ಪಥಿವಿಕಂಪಿಸುವಂತೆ ಗರ್ಜಿಸಿ |
ಪಥುಲಬಲನಿಂದೊಡನೆ ತ್ರಿಪುರರ |
ಮಥನನೋಲ್ ಕಿಡಿಗೆದರುತೆಚ್ಚನಿಕುಂಭಿಳಾಸ್ತ್ರವನು | ||406||
ರಾಗ ಮಾರವಿ ಏಕತಾಳ
ಅಚ್ಚರಿಯದನೇನೆಂಬೆನುಕುಶಕೇಳ್ |
ಕಿಚ್ಚಿನಮಯದಿಂದ ||
ಬೆಚ್ಚಿ ತುತ್ರಿಭುವನಖಳಹುಂಕರಿಸಿ ಕಾ |
ಳ್ಕಿಚ್ಚಿನ ವೋಲ್ ನಿಂದ | ||407||
ಅದಕಾ ಬೆಚ್ಚುವ ಚದುರನೆ ಲಕ್ಷ್ಮಣ |
ನುದಧಿಯ ಮಂತ್ರಾಸ್ತ್ರ ||
ಕೆದರಿದುಗೆಲಿ ದಾಶಿಖಿಯನು ನಿಲ್ಲೆೀಲೊ |
ಮದಮುಖ ಏನೆಂದ | ||408||
ಏನೆಲೊನರ ಗುರಿಹೀನಿಪೆಶರಸಂ |
ದಾನವಿದೇಯೆನುತ ||
ಅ ನಿಯತಿಯ ಶರವೆಚ್ಚಡೆ ಶಶಿಧರ |
ಧ್ಯಾನದಿಗೆಲೆಧೂರ್ತ | ||409||
ಮತ್ತಾತಿಮಿರಭುಜಂಗಾಸ್ತ್ರಗಳನು |
ಮುತ್ತಲುಹರಿಗರುಡ ||
ಸತ್ವದಿಗೆಲಿದಾಖಳ ಕಾರ್ಮುಕವನು |
ಕತ್ತರಿಸಲು ಜರೆದ | ||410||
ಪೂತುರೆ ಲಕ್ಷ್ಮಣ ಧನುಮುರಿದಡೆನಾ |
ಸೋತೆನೆ ತೊಲಗದಿರು ||
ಆ ತುಕೊಗದೆಯಿದರಾತಿಶಯವನೆಂ
ದಾತ ನುಲಿಯಲಿದಿರು | ||411||
ಭಾಮಿನಿ
ಎದ್ದು ರವಿಸುತನನಿತರೊಳು ನಿಂ |
ತಿದ್ದ ರಘುಜಾನುಜನ ಕಂಡಿದು |
ಪೊದ್ದಿನೇಮವಮನ ಹಾವಿಗೆರಗುವ ಹದ್ದಿನೋಲತ್ತ ||
ಗದ್ದರಿಸುತೈತಂದು ಖೂಳನ |
ಗುದ್ದಿದನು ಕೋಪದಲಿಧರೆದನಿ |
ಹೊದ್ದಲವಬಿದ್ದೇಳ್ದು ನಿಂದಿರೆಪೇಳ್ದನರ್ಕಸುತ | ||412||
ರಾಗ ಶಂಕರಾಭರಣ ಅಷ್ಟತಾಳ
ಎಲೆ ಮಂದಾಂಧನಿನ್ನ ಶೌರ್ಯ |
ಜಲಧಿ ವಡಬನೆನ್ನನುಳಿದು |
ಬಲು ಹತೋರ್ಪೆಯಕಟ ಸೂರ್ಯ | ಕುಲಲಲಾಮರ ||
ಗೆಲುವೆನೆಂದುನೆನೆಸಿದಿಷ್ಟ |
ಫಲವನಿದೊ ಕಯ್ಯರೆ ಕೊಡುವೆ |
ಗೆಲಿವೆಯೊಂದುಬಾರಿಗೆಂಬ | ಬಲುಮೆತೋರ್ತೋರ | ||413||
ತೋರಲೇನು ಸೋತುಮರಳಿ |
ಸಾರಿದೆಯಲ ಕೋತಿಮೊದಲೆ |
ಮಿರಿಸುಧೆಯಕುಡಿಯೆ ಚೇಳು | ಗೀರೆಕಾಲಿಗೆ ||
ಹಾರಿಕುಣಿಯುವಂತೆ ಕುಣಿದು |
ಪಾರದಿರು ಕತಾಂತನೆಡೆಗೆ |
ಸಾರಿನಿಲ್ಲೆನುತ್ತತಿವಿದ | ಜಾರದಿನಜಗೆ | ||414||
ಅಮ್ಮೆನುತ್ತಲುರುಳಿಯೊಡನೆ |
ಘಮ್ಮೆನುತ್ತಲೆದ್ದು ಕೇಳೊ |
ನಿಮ್ಮಹಣೆಯಲಿಖಿತವಿದೆಲ | ನಮ್ಮ ಕೈಯೊಳು ||
ಬೊಮ್ಮತಾನೆ ಬರಲಿಗೆಲುವ |
ಹಮ್ಮನೋಳ್ಪೆನೆಂದು ಭರದಿ |
ಸೊಮ್ಮಕರದಿ ಖಳನಶಿರವ | ನೆಮ್ಮಧರೆಯೊಳು | ||415||
ಬಿದ್ದು ಕುಂಭನಾಗಲತಿಯು |
ಬ್ಬೆದ್ದು ಕಾಲಹಿಡಿದುತಿರುಹಿ |
ಯದ್ಧಲಿನಜನಬ್ಧಿಯಿಂದ | ಲೆದ್ದುಭರದಲಿ ||
ಯುದ್ಧಸಾಕೆನಿಸುವೆ ಭಳಿರೆ |
ಗೆದ್ದಗೆಲವ ಮಾಣುಮಾಣೆಂ |
ದೊದ್ದುರವಿಜಗೆಲಿದ ಮರಳಿ | ಗುದ್ದಿಧುರದಲಿ | ||416||
ಇಂತುನೂರು ಬಾರಿಸೆಣಸಿ |
ನಿಂತರವಿಜಗಾಗಶರಣ |
ಗೊಂತುಗೊಳಿಸಿದನು ಕೈಸನ್ನೆ | ಯಾಂತುಮರ್ಮವ ||
ಹೊಂತಗಾರಿಕಂಡು ಕೆರಳಿ |
ಭ್ರಾಂತನಿಲ್ಲೆನುತ್ತಸೀಳಿ |
ಯಂತಕನಮೇಣ್ಸುರರ ಭವನ | ಕಂತುಭಾಗವ | ||417||
ಭಾಮಿನಿ
ಇಟ್ಟನೊಂದೊಂದಹಿತ ಕಾಯದ |
ಥಟ್ಟುಗೆಯ ಹೋಳೆರಡನಮರರು |
ದಿಟ್ಟಿಸುತಭಾಪೆಂದು ಸುಮಮಳೆಸುರಿಸೆತನಯಂಗೆ ||
ಕೊಟ್ಟು ಕಳುಹಿದ ಹನುಮನಯ್ಯನೊ |
ಳಿಟ್ಟ ಮಣಿಹಾರವ ಪ್ರಭಾಕರ |
ನಟ್ಟ ಹಾಸದಿ ಮರುತಜನುತಬ್ಬಿದ ಕಪೀಶ್ವರನ | ||418||
ಕಂದ
ಒಬ್ಬರು ಮುಳಿಯದ ತೆರದಿಂ |
ಕೊಬ್ಬಿದ ರಕ್ಕಸದಳವವಿ ಭಾಡಿಸಿ ಬಳಿಕಂ |
ಉಬ್ಬಿದಹರುಷೋತ್ಕಟದಿಂ |
ಸಬ್ಬಾಣಿಪ್ರಿಯಮಿತ್ರನ ಸಾರಿದು ಮಣಿಯಲ್ಕಂ | ||419||
ರಾಗ ಭೈರವಿ ಝಂಪೆತಾಳ
ಕಂಡುಪುಳಕದಲಿ ಮಾ | ರ್ತಾಂಡಕುಲಭವನು ಸೆಲೆ |
ಕೊಂಡಾಡಿದನು ಸುಪ್ರ | ಚಂಡ ಬಲರೆನುತ ||420||
ವಾನರೇಶ್ವರ ಕೇಳು | ದಾನ ವಾಮರೊಳಗೆ |
ತಾನಾರುಸರಿನಮ್ಮ | ಸೈನಿಕರಿಗಹಹ | ||421||
ಸಮರ ಸಾಕೆಮಗಿಂದು | ಕುಮತಿಗಳ ದಿಗ್ವಿಜಯ |
ನಮಗಾಯಿತಪರಾಬ್ಧಿ | ಗಮರ್ವನೈಭಾನು | ||422||
ಅಬುಜಕೋರಕವಾತು | ಸುಬಲರೀಕ್ಷಿಪುದೆನುತ |
ಶಿಬಿರಕಭಿಮುಖನಾದ | ವಿಬುಧನುತರಾಮ | ||423||
ವಾರ್ಧಕ
ತರುಣಕೇಳನ್ನೆಗಂ ಲೋಕದಿಲತಾಂಗಿಯರ್ |
ಪುರುಷನಪರಾಂಗ ದೊಳಗನ್ಯರಂ ನೆರೆವರತಿ |
ಯಿರಬಹುದು ಕಣ್ಮುಂದೆಸತಿಕಮಲೆ ಚಾಂಚಲ್ಯೆ ಹಂಸಪುನ್ನಾಗದುಂಬಿ ||
ದೊರೆಗಳೊಡವೆರವಳಿವಳುರೆ ಮಿತ್ರಳಾದುದಂ |
ಗುರುಮಂಗಳೋನ್ನತಿಯಪಳಿದು ದ್ವಿಜರಂದಗೆಡಿ |
ಸಿರುವ ಕಾರಣವಿನ್ನು ಮಿವಳಗಲದಿರೆನೆಂಬತೆರದೊಳಿನ ಮರೆಯಾದನು | ||424||
ಭಾಮಿನಿ
ಅಂದಿರುಳು ಲವಕೇಳುವಿಭವದಿ |
ಮುಂದುಲಿವಸುರನರಭುಜಂಗಮ |
ವಂದ ದೊಗ್ಗಿನೊಳಿತ್ತನೊಡ್ಡೋಲಗವ ದಶಕಂಠ |
ಬಂದುತತ್ಸಮಯದೊಳು ಖಳರಾ |
ಜೇಂದ್ರನಡಿಗಳಿಗೆರಗಿ ಕಣ್ಣೀ
ರಿಂದ ಕುಂಭನಸೂತ ಗದ್ಗದರವದೊಳಿಂತೆಂದ ||425||
ರಾಗ ನವರೋಜು ಏಕತಾಳ
ಯಾತುಧಾನಾಗ್ರಣಿಯೆ | ಕೇಳ್ | ಮಾತಸುದ್ಗುಣಮಣಿಯೆ ||
ಸೀತಾವಲ್ಲಭ | ನಾತಗಳುಪಹತಿ |
ರೀತಿಯನೆಲ್ಲವ | ನೀತವೆಚಿತ್ತದಿ || ಯಾತು | ||426||
ವರಯೂಪಾಕ್ಷಾದಿಗಳು | ಹೊ | ಕ್ಕರುಮುನ್ನಾಸಮರದೊಳು |
ಪರಿಪರಿಕೋಡಗ | ವರರೊಳು ಸೆಣಸಿದು |
ತೆರಳಿದ ರೈಭವ | ದುರುಳಿಯ ಹರಿದೂ || ಯಾತು | ||427||
ಏನೆಂಬೆಕಲಿಕುಂಭ | ಮ | ದ್ದಾನೆಯಾಹವರಂಭಾ ||
ವಾನರಪತಿಮುಖ | ರಾನುತತೊಲಗಲು |
ತಾನುರೆ ಕೆಣಕಿದ | ಭಾನುಕುಲಜನ | ||428||
ಅಗಲಕ್ಷ್ಮಣಪೋರ | ನನು | ವಾಗಲೀ ರಣಧೀರ |
ಬೇಗುದಿಗೊಳದಿರ | ಲಾಗಹರೀಶ್ವರ |
ತಾಗಿಗೆಲಿದ ಧುರ | ದಾಗಮವಿದುವೆ | ||429||
ಭಾಮಿನಿ
ನುಡಿಯನದಕೇಳುತ್ತ ಕಂಗಳೊ |
ಳಿಡಿದ ವಶ್ರುಕಣಾಳಿವೈರಿಗ |
ಳೊಡೆದರೇ ರಾಕ್ಷಸಚಮೂಪರ ವೀರರಸಕುಂಭ ||
ಮಡಿದರೇಕುಂಭಾದಿಗಳು ಜಯ |
ಗುಡಿಯಹತ್ತಿದರೇ ವಿರೋಧಿಗಳ್ |
ಪಿಡಿದರೇ ಛಲ ಸಂದುದೇಯೆಂದಸುರನಳವಳಿದ | ||430||
ರಾಗ ನೀಲಾಂಬರಿ ರೂಪಕತಾಳ
ಪೇಳುವೆನಾರಿಗೆಯನ್ನ ವಿ | ಟಾಳಿಸಿದತಿಯ ವಿಪತ್ತಿನ |
ಬೇಳಂಬವ ಪರಿಹರಿಪುದು | ಭಾಳಾಂಬಕಗರಿದು | || ಪಲ್ಲವಿ ||
ತಂಗಿಯ ನುಡಿಯೆನಗಂದಿಗೆ | ಇಂಗೋಲಂತಾಯ್ತಿಂದಿಗೆ |
ಸಿಂಗಿಯೋಲಾದುದು ಮತ್ಕುಲ | ಭಂಗವಿದಾದುದಲಾ ||
ಅಂಗದಿಪೋದ ವಿಭೀಷಣ | ಹಿಂಗದೆ ಕುಂಭಶ್ರವಣನು |
ಹಿಂಗಿದರಿಂತಿಬ್ಬರುಸಹ | ಕಂಗೊಳಿಸರುಬರರು | ||431||
ಅತಿಕಾಯಾಖ್ಯನು ಮೊದಲೇ | ಗತಿಸಿದ ತಾನಿಂದಿನೊಳೇ |
ಮತಿಯುತಕುಂಭಕ ಮಡಿದನು | ಜತೆಯಾರೆನಗಿನ್ನು ||
ಸುತಶಕ್ರಾರಿಯುರಿಪುಗಳ | ಹತಿಸಿದನಹಿಯಜರಾಸ್ತ್ರದೊ |
ಳತಿಶಯಜಯವದು ಸ್ವಪ್ನದ | ಗತಿಯಾಯ್ತಂದರಿಂದ | ||432||
ಭಾಮಿನಿ
ಅಳಲುತವನಿಂತಿರಲು ಬಳಿಕದ |
ತಿಳಿದು ವಜ್ರಜ್ವಾಲೆ ಖಳದಶ |
ಗಳನಸಭೆಗೈತಂದು ನೋಡಿದಡಾಗಲಾಸ್ಥಾನ ||
ಮೊಳಗಿದಬ್ಬರವಿಳಿದ ಗಗನ |
ಸ್ಥಳವೊ ಮೇಣ್ ಮುಂಗಾರ ಮೇಘದ |
ಸುಳಿವು ನಿಂದಂಬುಧಿಯೊಯೆನಲಿರೆ ಬಿದ್ದು ಹಲುಬಿದಳು | ||433||
ರಾಗ ನೀಲಾಂಬರಿ ಆದಿತಾಳ
ಅಕಟಕಟೆನ್ನಯ ಮಗನೆ | ಸಕಲಕಲಾಶೋಭಿತನೆ ||
ಪಕೃತಿ ರಿಪು ಕುಲಸ್ತಂಭ | ಸುಕತನಿಧಿಬಾರಕುಂಭ | ||434||
ಪರಿಪರಿಪೇಳಿದಮಾತ | ತೊರೆತೊರೆದೈದಿದೆಖ್ಯಾತ ||
ಹರಣವ ಸೋದರರ್ಸಹಿತ | ಅರಿಗಳಿಗಿತ್ತಿರೆ ಜಾತ | ||435||
ಪತಿಯಳಿದಾಶೋಕವನು | ಸುತರನು ಕಂಡ್ಮರೆತಿಹೆನು ||
ಗತಿಮತಿಯೇನೆ ನಗಿನ್ನು | ಕ್ಷಿತಿಯೊಳನಾಥೆಯು ನಾನು | ||436||
ಕಂದ
ಎನುತಲಿಧೊಪ್ಪೆನೆಕೆಡೆದಾ |
ವನಿತಾಮಣಿ ಚೇತರಿಸುತ ಖೇದದೋಳಾಗಳ್ ||
ಮನದಿಂಸೈರಿಸಲಾರದೆ |
ದನುಜೋತ್ತುಂಗನ ನೋಡುತ ಕಟಕಿಯುನುಡಿದಳ್ ||437||
ರಾಗ ನೀಲಾಂಬರಿ ಏಕತಾಳ
ಕಂಡಿರೇಸುತರ ಹಬ್ಬವ | ಭಾವಯ್ಯ ಹರುಷ |
ಗೊಂಡಿರೇ ಮುಂದೆ ರಾಜ್ಯವ ||
ಕೊಂಡೇಕ ಭಾಗವಾಗಿ | ಪೊರೆಯಲಿ ನಿಮ್ಮ |
ತಂಡ ಸಂಪೂರ್ತಿಯಾಗಿ | ||438||
ಪತಿಯನಂದಟ್ಟಿದಿರಿ | ಅಯ್ಯಯಿಂದೆನ್ನ |
ಸುತರನಾಹುತಿಗೊಟ್ಟಿರಿ ||
ಗತಿಹೀನೆಯಾದೆನಾನು | ನಿಮಗೇನು ಕುಂದು |
ಸ್ಥಿತಿಯುಂಟುತಕ್ಕುದಿನ್ನು | ||439||
ದುಗುಡಭಾರವಿದೇತಕೆ | ಹತ್ತು ಮುಸುಡೊಳು |
ನಗೆಯೊಂದು ಬಾರದೇಕೆ ||
ಮಿಗಿಯಿನಿತಾಗೆ ಬಾಳೆಂದು | ಇರೆ ನಯ್ಯನಿಮಿಷ |
ಮುಗಿಸೆನ್ನ ಕಡುಮುಳಿದು | ||440||
ರಾಗ ತೋಡಿ ಅಷ್ಟತಾಳ
ಎಂದು ಕಂಬಿನಿಯಿಂದ ಗೋಳಿ |
ಟ್ಟಂದು ಮೂರ್ಛೆಗೆ ಸಂದು ಸಹಜನ |
ಮಂದಗಮನೆಯ ನಿಂದು ತೆಗೆದೆತ್ತಿ ||
ಚಂದಿರಾನನೆಯಳಲದಿರುಯೇ |
ಳಿಂದವರು ನಾವ್ ನಾಳೆಯೆಂಬೀ |
ದೊಂದನರಿಯದೆ ಭ್ರಾಂತು ತಲೆಗ್ಹತ್ತಿ | || 441 ||
ಗಜಭುಜಂಗವಿಹಂಗಗಳು ಸೆರೆ |
ರುಜೆಗೆಮೈಗೊಡುವುದು ದಿವಾಕರ |
ದ್ವಿಜಪರಾಸ್ವರ್ಭಾನುಪಗೆಯೊಳಗೆ ||
ನಿಜಕಲಾಸುಪ್ರೌಢಿಗೆಡುವುದಿ |
ವಜನಲಿಖಿತಕಣಾನಿಧಾನಿಸೆ |
ಭುಜಗವೇಣಿಯೆಚಿಂತೆ ಸಾಕೆಲೆಗೆ | ||442||
ಭಾಮಿನಿ
ಅಂದರೆಲೆತಾರೇಶಮುಖಿಕೇಳ್ |
ಬೆಂದಹುಣ್ಣಿಗೆದೊಂದಿ ಮದ್ದೇ |
ಮುಂದುಗೆಡಿಸದಿರೆನ್ನ ನೀನಡೆನಾಳಿನಾಜಿಯಲಿ ||
ಕೊಂದವರನೆರೆಕೊಲ್ಲುವೆನುಹೋ |
ಗೆಂದವಳ ಕಳುಹಿತಿರಲಲ್ಲಿಗೆ |
ಬಂದನಾಮಕರಾಕ್ಷರಿಪುಕುಲದಕ್ಷತ್ರೈಯಕ್ಷ | ||443||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಖೇದವೇಕೆಲೆ ಜೀಯ ಚಿತ್ತದೊ |
ಳಾದುರಾಗ್ರಹರಾಹವಕೆ ಹಿಮ |
ಕಾದಿವಾಕರ ನಂಜುವನೆ ನಿನ | ಗಾದುದೇನೈ | ||444||
ದೇವರಿಪು ಚಿತ್ತೈಸು ನಮಗಿ |
ನ್ನಾವುದತಿಶಯ ನಾಳೇಧುರದಲಿ |
ರಾವಣಾಸುರ ವೀರನೇಕೋ | ದೇವನೆಂದು | ||445||
ದೇವತತಿಬಾಯಿಂದ ನುಡಿಸುವೆ |
ಸೇವಿಸಲಿ ಸುಧೆ ರಿಪುಗಳಾಮರು |
ಜೇವಣಿಯೊಳೆಭ್ಬಿಸಲಿ ಬಿಡೆನುರ | ಣಾವನಿಯೊಳು | ||446||
ತಿಂಬೆನಗ್ಗದಕದನಕೀಶಕ |
ದಂಬವನು ಕಪಿಪತಿಯ ಜೀವವ |
ಕೊಂಬೆ ಕೊಡುವೀಳೆಯವ ಘನ ಸಂ | ರಂಭದಿಂದ | ||447||
ಅಂದುವನದಲಿತನ್ನ ತಂದೆಯ |
ಕೊಂದರಾಮನ ಕೊಲುವೆ ಮೊದಲಲಿ |
ಬಂದಸೋಲಾಂಬುಧಿಗೆಸೇತುವೆ | ಯಂದವಹೆನು ||448||
ಭಾಮಿನಿ
ಧುರಧುರಂಧರ ಕೇಳು ಎನ್ನೀ |
ವರೆಗೆನೀಸಾಕಿದಕೆ ನಾಳೆಯೊ |
ಳರಿಗಳತಿ ಬಿಸಿರಕುತದಿಂಕುಲದೇವಿ ಕುಂಭಿಣಿಗೆ ||
ಭರಿತತರ್ಪಣವೀವೆ ಕಳುಹೆಂ |
ಬುರುಪರಾಕ್ರಮಿಗಪ್ಪಿಮುದ್ದಿಸಿ |
ಧುರುವಜೈಸೆಂದಿತ್ತಕರ್ಪುರ ಕವಳನಗೆಮಿನುಗೆ | ||449||
ಕಂದ
ಹರಿದುದುವೋಲಗವಾಂಗಂ |
ಬರತುದುನಿಶಿಯೆನ್ನೆಗಾರಾಮಾರ್ಚನೆಗಂ ||
ನೆರೆಕೆಂದಾವರೆಯಲರಂ |
ತರುವಳೊಪೂರ್ವದಿಶಾಂಗನೆಯೆ ನಲಿನನೆಸೆದಂ ||450||
ವಾರ್ಧಕ
ಆಹಂಸನುದಯದೊಳ್ ಮಕರಾಕ್ಷ ತನ್ನ ಸರಿ |
ಯಾಹವಸಮರ್ಥರುಂ ನೆರಹಿದಂತಾನೂರ |
ಕ್ಷೋಹಿಣಿಯ ಝಗಝಗಿಪರತುನಮಯ ರಥಗಳಂ ಗಜತುರಗಪದಚರರನು ||
ಆ ಹರಂಗರಿದುಲೆಕ್ಕಿಪಡೆ ಮಿಗೆ ಭೋರೆಂಬ |
ವಾಹಿನೀರವಕಮಲಜಾಂಡ ಜರಿವಂತಾಗೆ |
ಮೋಹರಕೆ ಬಲಸಹಿತಲಂಕಾಮಹಾದುರ್ಗವಿಳಿದೈದಿದರ್ ಭರದೊಳು | ||451||
ರಾಗ ಆಹೇರಿ ಝಂಪೆತಾಳ
ಬವರಕೈತಂದನಾಗ | ಮಕರಾಕ್ಷ |
ಜವನಭಟದಂಥಬಲದವರೊಳುಲಿದಾಗ | || ಪಲ್ಲವಿ ||
ಹೇಳಲೇನ್ ವಿಲಯಶಿವ | ನಾಳುಗಳೊ ರಕ್ಕಸರೊ |
ವ್ಯಾಳದಂತಿಗಳೊ ಖಳ | ನಾಳದಂತಿಗಳೊ ಇದ |
ಪೇಳಲಾರಳವೊ ಕೆಂ | ಧೂಳೆದ್ದು ಪದಹತಿಗೆ
ತೂಳಿತೇಳ್ ಭುವನದರೆ | ಯಾಳಿತಬ್ಧಿಯೊಳೆನಲು | ||452||
ಕರಿಯದಾರೈ ಬರಲಿ | ಕರಿಗೊರಳನೆಮ್ಮ ಧುರ |
ಕರಿದೆನುತಭೋರೆಂದು | ಕರಿಮೈಯ್ಯ ವರಕಹಳೆ |
ಕರಿಯಕೇತುಕದಂಬ | ಕರಿಲೆಂದು ಕೇತುವಂ |
ಕರಿದುಡುಕೆ ಕೂರ್ಮಫಣಿ | ಕರಿಗೆಯುಬ್ಬಸ ವೆನಲು || ಬವರ | ||453||
Leave A Comment