ವಾರ್ಧಕ

ಮತ್ತೆ ಕೇಳಂಬೆ ಶ್ರೋತ್ರಿಯನಿಲ್ಲದಾಮಖಂ |
ಚಿತ್ತೋದ್ಭವನ ಕರುಣವೆತ್ತಿರದ ಸಂಮೋಹ |
ಮತ್ತ ಕರಚರಣಗತ ಸಪ್ತಿಗಳು ಮಿನಿತಿಳೆ ಯೊಳಿದ್ದೇನ್ ಫಲಂವೀರನು ||
ತತ್ತಬಲವಿರಲಹಿತರಂ ನಿರಿಯ ಲಿರಿಸಿಕೊಳ |
ದೊತ್ತೆ ಪೌರುಷವಿರ್ದರೇನಿಲ್ಲದಿರ್ದರೇನ್ |
ಚಿತ್ತಿಚಂಚಲವ ಬಿಡುಬಹೆನೆಂದು ಬಲ್ಪಿನಿಂದೆದ್ದುನೇಮವ ಗೊಂಡನು | ||331||

ಕಂದ

ಅರ್ಬುದಸಂಖ್ಯೆಯಸರಿಭಟ |
ಕರ್ಬುರದಳದೊಳುರಿಪುಸ್ತಂಭಂ ಕಲಿಕುಂಭಂ ||
ಸರ್ಬಾಯತಧುರ ಕಣಕಂ |
ಶರ್ಬನ ವೋಲುವರೂಥವ ನಡರುತಮಿಗೆ ಪೊರಟಂ | ||332||

ರಾಗ ಮಾರವಿ ಏಕತಾಳ

ಆಗಲೆ ಕಲಿಯೂಪಾಂಬಕರಣಕನು |
ವಾಗುತಭರದಿಂದ ||
ಬೇಗದಿರಥವನು ಹಾರಿಸುತವನೆಡ |
ಭಾಗದಿನೆರೆನಿಂದ ||333||

ಕುಂಭಾನುಜರು ನಿಕುಂಭಕಮಿಗೆ ಶೋಣಿ |
ತಾಂಬಕರೆಂಬವರು ||
ಸಂಭ್ರಮದಲಿ ಬಿಲುಗೊಂಬಾತೇರ್ಗಳೊ |
ಳುಂಬರುತಾಖಳರು | ||334||

ಅಗ್ರ್ರಭವನೆಕೇಳರಿಗಳೊಳಿಂದಿನ |
ವಿಗ್ರಹಕೆನ್ನುವನು ||
ಶೀಘ್ರದಿ ಕಳುಹಿಪರೀಕ್ಷಿಪುದಿನ್ನುಸ |
ಮಗ್ರದಸತ್ವವನು | ||335||

ಎಂಬ ನಿಕುಂಭನಮಾತಿಗೆ ಖಳಶೋಣಿ |
ತಾಂಬಕ ನೆಲೆಯಣ್ಣ ||
ಕೊಂಬೆನುಕಪಿಸೇನಾನಿಯಧುರ ಸಂ |
ರಂಭಕೆ ಕಳುಹೆನ್ನ | ||336||

ತಕ್ಕುದನಾಡಿದಿರೆನ್ನಯ ನಡವಳಿ |
ತಕ್ಕೆ ಸರಿಯಮಾತ |
ತಕ್ಕವರೈ ಭಳಿರೆನುತವರೊಡವೆರ |
ದುಕ್ಕುತ ಉನ್ಮತ್ತ | ||337||

ವಾರ್ಧಕ

ಪೊಂದೇರಡರ್ದುನಾಲ್ವರುದೈತ್ಯರಬ್ಬರದಿ |
ಮುಂದುಲಿವರಣಕಹಳೆಗಳನಿನಾದದಲಿ ಭೋ |
ರೆಂದುರಿವಕಾಳರಕ್ಕಸ ಗಣದೊಳು ತೊಳಪ ಕಾರ್ಮುಗಿಲ ಮಿಂಚಿನಂತೆ ||
ಗೊಂದೆವಳವಿಗೆಯನೋಲುದ್ದಂಡ ಕಾರ್ಮುಕವ |
ನುಂಧರಿಸಿ ಕಲಿಕುಂಭನ ಹಿತಗಿರಿವಜ್ರವೆಂ |
ಬಂದದೊಳು ದುರ್ಗವಿಳಿದೈದಿದಂ ಖಳವರ್ಗಭೋರ್ಮೊರೆದು ಪಿಂದೆ ಬರಲು ||338||

ಭಾಮಿನಿ

ಅಸುರಬಲಬಲುಭಾರ ದಲಿಧರೆ |
ಕುಸಿದುದೋಕುಲಶೈಲಜರಿದುದೊ |
ಉಸಿರಲೆನ್ನಳವಲ್ಲಗಜರಥ ತುರಗಪಾದಾತಿ ||
ವಿಸರವಬ್ಧಿಯೊಳುರೆ ತರಂಗ |
ಪ್ರಸರಬಹವೊಲ್‌ಬಹುದಕಂಡಾ |
ಬಿಸುಗದಿರಕುಲಭವನು ಕೇಳಿದನಾವಿಭಿಷಣನ | ||339||

ರಾಗ ಕಾಂಭೋದಿ ಏಕತಾಳ

ಎಲೆ ವಿಭೀಷಣಾಂಕಬರುವ |
ಬಲುಭಟರನುನೋಡ ||
ಜಲಧಿಯಿಂದ ತೆರೆಬಪ್ಪಂತೆ |
ನಲಿದುಬರುವಪಾಡ | ||340||

ರಥದೊಳದಕೊ ಭರದಿ ತ್ರಿಪುರ |
ಮಥನನಂತೆ ನಿಂದ ||
ರಥಿಕನಾವನವನ ಹಿಂದೆ |
ಪಥುಲ ಕಾರ್ಯದಿಂದ | ||341||

ವ್ಯಥೆಗೊಳಿಸುವರಾರುಪೇು |
ಕಥೆಯನೆಂಬ ಧನುಜ ||
ಮಥನಗೆರಗಿಪೇಳ್ದಲಂಕಾ |
ಪಥವಿಪಾಲನನುಜ  ||342||

ರಾಗ ಕೇದಾರಗೌಳ ಅಷ್ಟತಾಳ

ಚಿತ್ತಾವಧಾನಪರಾಕುರಕ್ಕಸವೈರಿ |
ತತ್ತರಗೊಳದಿರಯ್ಯ ||
ಚಿತ್ತಜಾರಿಗೆ ಸೋಲರಿವರು ಸಂಗರಮದ |
ಹತ್ತಿದಸುಭಟರಯ್ಯ | ||343||

ಅಂಬುಜದಳನಿಭನೇತ್ರಕೇಳಾಖಳ |
ಕುಂಭಕರ್ನಾತ್ಮಜರು ||
ಕುಂಭನಿಕುಂಭ ಯೂಪಾಂಬಕಮಿಗೆ ಶೋಣಿ |
ತಾಂಬಕರೆಂಬವರು | ||344||

ಇರುಳಿನಾಜಿಯೊಳಿಂದು ಗೆಲಿದನಮ್ಮವರನೀ |
ದುರುಳಕುಂಭಾಖ್ಯಕಾಣೈ ||
ಧುರದೀರ ದಶಕಂಠಗತಿಹಿತಪ್ರಬಲ ನಿ |
ಷ್ಠುರ ಜಾಣಮತ್ತೆ ಕೇಳೈ | ||345||

ವೀತಿ ಹೋತ್ರನಜಪದಾತನು ಪ್ರತಿಯಗ್ನಿ |
ಯಾತೆರಧುರರಂಗದಿ ||
ಈತನಗೆಲು ವಂಥ ರೀತಿಯೆಂತೆನಲಿನ |
ಜಾತನೆರಗಿಪಾದದಿ | ||346||

ರಾಗ ಮಾರವಿ ಏಕತಾಳ

ಯಾಕಿನಿತೆಂಬುದುಖಳ ಕುಲತಿಮಿರ ಪ್ರ |
ಭಾಕರನಾನಿರಲು ||
ಸಾಕೆನಿಸುವೆ ರಿಪುಗಳನುವಿಭಾಡಿಸಿ |
ಶಾಕಿನಿಯರಿಗುಣಲು | ||347||

ಕುಂಭಾ ಸುರನ ಬಲಾಂಬುಧಿಕುಂಭಜ |
ನೆಂಬ ಬಿರುದನಿಂದೆ ||
ಕುಂಭಿನಿಯೊಳು ನಾ ತುಂಬುವೆ ನೋಡಬು |
ಜಾಂಬಕನೆನಲಿರದೆ | ||348||

ಆಡದೆ ನೀನೀ ಬಾರಿ ಮದಾಂಧರ |
ಛೇದಿಸಿ ಬಿಸುಡೆನುತ ||
ಮಾಧವ ಪರಸುತಕಳುಹಲು ಕಪಿ
ಪಡೆ ಗೋದಿದನಿನಜಾತ ||349||

ರಾಗ ಮಾಧ್ಯಮಾವತಿ ಏಕತಾಳ

ಕೇಳಿವನೌಕಸವರರೆನ್ನ ಮಾತ |
ಗಾಳಿನಂದನ ನೀಲಾದಿಗಳೆಲ್ಲನಿರತ  || ಪಲ್ಲವಿ ||

ಇಂದಿನಾಹವ ಭಾರ | ಬಂದುದೆಮ್ಮಯ ಭಾಗ |
ಕಂದದಿಂದಿರ ದೇಳಿ | ನಿಂದಿರಬೇಡಿ ||
ಬಂದನಿಷ್ಠೂರಮ | ದಾಂಧಸಮಗ್ರರೊ |
ಳ್ಮುಂದೆ ನಿಮ್ಮಯಶೌರ್ಯ | ಮಂದೋರಿ ಪೊಯ್ದಡಿ | ||350||

ಕೆಡಹಿರಣಾಂಗಣ | ದೆಡೆಯೊಳವರ ಕರು |
ಳುಡಿಸಿ ತೋರಣದಿಂದ | ಲೆಡೆಬಿಡದುರಿದು ||
ಪಿಡಿದೌಕಿಜಯಲಕ್ಷ್ಮಿ | ಗೊಡೆಯರೆನಿಸಿ ಸುಖ |
ಕಡಲೊಳಾಳುವ ಬಲು | ಮಿಡುಕುಳ್ಳಭಟರಿಂದು | ||351||

ರಾಗ ಶಂಕರಾಭರಣ ಮಟ್ಟೆತಾಳ

ಜಡಜಸಖಕುಮಾರನೆಂದ |
ನುಡಿಯಕೇಳುತುರುಸಮರ್ಥ |
ಪಡೆಗಳರಸ ಹನುಮಮುಖ್ಯ | ರೊಡನೆಗಜರುತ |
ಮಡನಿವಾಸ ಶಿಖರಸರಿಯ |
ಪೊಡವಿಧರ ಮಹೀಜ ಕಲ್ಲು |
ಗಡಣಧರಿಸಿ ಯುದ್ಧಕಣದಿ | ಸಿಡಿದು ಪರ್ಬುತ | ||352||

ಮೊರೆಯಲದನು ಕಂಡು ದೈತ್ಯ |
ತರಳಕುಂಭನಾಜ್ಞೆಯಿಂದ |
ಲುರುವಿರೋಧವೆತ್ತು ದನುಜ | ರುರುಬುತಾಗಳು ||
ಬಿರುಸ ತೋರಿರೆಲವೊ ಕಲ್ಲು |
ಮರಗಳಣ್ಣರೆನುತ ಬಲುಕಾ |
ಹುರತೆಯಿಂದ ಸರಳಮಳೆಯ | ಸುರಿದು ತಾಗಲು | ||353||

ಚೂಣಿಯಲ್ಲಿ ಮುಂದುವರಿವ |
ಕೌಣಪರನು ಹನುಮನೀಲ |
ಜಾಣನಂಗದಾದಿಭಟರ | ಶ್ರೇಣಿ ಮುಸುಕುತ ||
ಕೇಣದೊಳಗೆ ಸವರುತಿರಲು |
ಕಾಣುತಲಿಯೂಪಾಕ್ಷನಾಗ |
ಬಾಣಗೊಂಡು ತರಿವುತಿರದೆ | ಮೇಣುಕನಲುತ | ||354||

ವಾರ್ಧಕ

ಸೊಕ್ಕಿ ಕಪಿವಾಹಿನಿಯನಟ್ಟಿದಂ ಮೆಟ್ಟಿದಂ |
ಮಿಕ್ಕ ಬಲಶಾಲಿಗಳ ಧಟ್ಟಿದಂ ಕುಟ್ಟಿದಂ |
ಸಿಕ್ಕಿದರ ಹಿಡಿಹಿಡಿದು ತಿಕ್ಕಿದಂ ಮುಕ್ಕಿದಂ ದೆಕ್ಕ ತುಳ ಶೌರ್ಯದಿಂದ ||
ಸೊಕ್ಕಾನೆ ಕೊಳಕದಡುವಂದದಿಂಬಂಧದಿಂ |
ದುಕ್ಕಿ ಖಳನೈತಹುದ ಕಾಣುತ್ತ ಮೇಣತ್ತ |
ತಕ್ಕಭಟಕಪಿ ದ್ವಿವಿಧ ತಡೆ ದೆಂದ ಕಡುಹಿಂದ ಮುಕ್ಕಣ್ಣ ನಂದದಿಂದ | ||355||

ರಾಗ ಘಂಟಾರವ ಅಷ್ಟತಾಳ

ನಿಲ್ಲುನಿಲ್ಲೆಲೋ ಘಡನಕ್ತಂಚರವೀರ |
ಎಲ್ಲಿಗೈದುವೆಮಲ್ಲ ಪ್ರತಿ ಭಟ| ರಲ್ಲವೇನಾವೆಂದನು | ||356||

ಮರುಳುಕೋಡಗ ನೀನೊಮ್ಮೆ ತಡೆವೆಯ ||
ಸುರಪ ದುಹಿಣಾದ್ಯರುಗಳೆಮ್ಮಂ |
ತರಕೆ ನಡುಗುವರರಿಯೆಲಾ | ||357||

ಬಲ್ಲೆಬಲ್ಲೆದಿವೌ ಕಸರನು ಗೆಲ್ದ ||
ಬಲ್ಲವಿಕೆ ತೋರೀವನೌಕಸ |
ನಲ್ಲಿಸೆಣಸಿದು ಬದುಕೆಲಾ | ||358||

ಈ ಸುವಿಕ್ರಮನಹೆಯ ನೋಡಾದಡೆ |
ಈ ಸುಸತ್ವವನೆನುತಖಳಶಶಿ |
ಹಾಸವನು ಕೊಂಡೆರಗಿದ | ||359||

ತಡೆದು ಗಾಯವ ಪುಟನೆಗೆದುರುಶೈಲ |
ಝಡಿಯೆರಿಪುಶಿರ | ವೊಡೆದು ನೆತ್ತರು |
ಬುಡುಬಡಿಸೆ ಸರ್ವಾಂಗದಿ | ||360||

ಭಾಮಿನಿ

ಸುರರು ಕಂಡುಬ್ಬಿರಿದು ಹೂವಿನ |
ಸರಿಯ ಸುರಿದರು ದ್ವಿವಿಧನಂಗದೊ |
ಳಿರದೆ ಬಳಿಕದ ಕಂಡುನೆರೆಕ್ರೋದಾಗ್ನಿ ಧಗಧಗಿಸೆ ||
ಧರಣಿಮಂಡಲ ಬಿರಿಯವೋಲ |
ಬ್ಬರಿಸುತಗ್ಗದ ಶೋಣಿತಾಕ್ಷನು |
ಧುರಕೆಮಿಂಚಲು ತಡೆದನಗ್ನಿಕುಮಾರನಿಂತೈಸೆ | ||361||

ರಾಗ ಭೈರವಿ ಏಕತಾಳ

ಎಲೆರಾತ್ರಿಂಚರವರನೆ | ನಿ |
ಲ್ಲಲಸದೆ ಧುರಕೆನ್ನೊಡನೆ ||
ಚಲಿಸುವೆ ಮುಂದಾವಲ್ಲಿ | ಭುಜ |
ಬಲವ ಪರೀಕ್ಷಿಪೆ ನಿಲ್ಲಿ | ||362||

ಮೆಚ್ಚಿದೆ ನಿನ್ನಯ ನುಡಿಗೆ | ಮದ |
ಹೆಚ್ಚಿದಕರಿಯಹೆನೆನಗೆ ||
ಬೆಚ್ಚಿಸುವೆಯ ಮಾತಿನೊಳು | ಶರ |
ದಚ್ಚಸವಿಯನೋಡೆನಲು | ||363||

ಕೇಡಿಗರಾವಣನೋರ್ವ | ನಿ |
ಷ್ಕೇಡಿಗರೈನೀಸರ್ವ ||
ರೂಢಿಪತಿಯ ಮರೆಹೊಕ್ಕ್ಕು | ಖಯ |
ಖೋಡಿಲ್ಲದೆ ನೀ ಬದುಕು | ||364||

ಅಳುಕೆನು ತನು ನಿಶ್ಚಯವೆ | ಇಂ |
ದುಳಿದರು ನಾಳೆಯೊಳಾವೆ ||
ಅಳಿವುದೆ ಕೀರ್ತಿಯಶೇಷ | ಬಿಡೆ |
ಕೊಳುಗುಳದಲಿ ನೋಡೀಸ | ||365||

ನೋಡಾದಡೆ ಖಳಕಪಿಯ | ಧುರ |
ಪಾಡನು ಮಡಿದವರೆಡೆಯ ||
ಬೇಡಿಕೊ ಬೇಗದೊಳೆನುತ | ಶಿರ |
ಗಾಢದಿತಿವಿದನು ಮತ್ತ | ||366||

ಭಾಮಿನಿ

ತಪ್ಪದೀನುಡಿಯೆಂದುಖಳದಿವ |
ಕೊಪ್ಪಿದನು ಕೇಳಣುಗಲವನಿ |
ನ್ನಪ್ಪಸಲೆ ಬಾಯ್ದಣಿಯೆ ಕೊಂಡಾಡುತಲಿದಳಪತಿಯ ||
ಅಪ್ಪಲರಳನು ಸುರಿದರಮರರು |
ಕಪ್ಪಡವ ಸುತಗಿತ್ತ ಶಿಖಿಕಂ |
ಡುಪ್ಪರಿಸಿ ಬರಲಾನಿಕುಂಭನ ತಡೆದ ಹನುಮಂತ | ||367||

ರಾಗ ಮಾರವಿ ಏಕತಾಳ

ಬಾರೆಲೊ ರಕ್ಕಸ ಪೋರನೆ ಹನುಮನನ |
ಭಾರಿಕರಾಯತದ ||
ಸಾರಪರೀಕ್ಷೆಗೆ ತಾರದೆ ಫಡಫಡ |
ಸಾರದಿರೈಮುಂದಾ | ||368||

ಬಡ ಮರ್ಕಟ ವಾಲಧಿಯನು ಸುಡಿಸಿಕೊಂ |
ಡೊಡನೋಡಿದಪ್ರೌಢ ||
ಕಡು ಹನುಮರೆಯದಿರೆನ್ನೊಳು ಕರೆನಿ |
ನ್ನೊಡೆಯನ ನಡೆಮೂಢ | ||369||

ಧಿರುರೆ ಶಭಾಸೆಲೆ ಪಾಮರ ಹೊಳೆಯು |
ತ್ತರಿಸದೆ ಜಲನಿಧಿಯ ||
ಪರಿಲಂಘನಕಂಗೈಪೆಯಗೆಲಿದೆನ್ನ |
ನೆರೆಕೇಳ್ ರಘುಪತಿಯ | ||370||

ಎನುತ ವನೆರಗಿದ ಹತಿಯನು ಸೈರಿಸಿ |
ಹನುಮನ ವಕ್ಷವನು ||
ಬಿನುಗನೆತೊಲಗದಿರೆಂದಾಗದೆಯಿಂ |
ಕನಲಿಬಡಿದಖಳನು | ||371||

ಧಡಧಡಿಸುತಬಿದ್ದೊಡನಾವಿಲಯದ |
ಸಿಡಿಲಂದದೊಳೆದ್ದು ||
ಕಡೆನಿನಗೆಂದಾ ದಡಿಗನಶಿರ ತಿವಿ |
ದಡೆಯಸುಮೇಲ್ವಾಯ್ದು | ||372||

ಭಾಮಿನಿ

ನಡೆಯೆಸುರಪುರಿಗಾಗಹರುಷೋ |
ದ್ಗಡದಿಹನುಮನ ಹೊಗಳಿ ಸುಮಮಳೆ |
ಬಿಡುನಯನರುರುಳಿಸಿದರಿನಿತನು ಕಂಡು ಕಲಿಕುಂಭ ||
ಕಡೆಯ ಭೈರವನಂತೆ ಕಣ್ ಕೆಂ |
ಪಡರೆರಥವೇರ್ದೊಡನೆ ಶರಗಳ |
ಝಡಿದು ವಾತೋದ್ಭವನ ತಡೆದಿಂತೆಂದ ಖತಿಯಿಂದ | ||373||

ರಾಗ ನಾದನಾಮಕ್ರಿಯೆ ಅಷ್ಟತಾಳ

ಫಡಫಡ ಪಟುಭಟನಾದೆಲಾ | ಮರ |
ಗಿಡಗಳಚರಿಸುವುದುಳಿದೆಲಾ ||
ಕೆಡಹಿನಿಕುಂಭನರಣದೊಳು | ಎತ್ತ |
ನಡೆವೆಯ ಬಿಡುನಿಲ್ಲು ಎನ್ನೊಳು | ||374||

ಅಹಹ ಮೆಚ್ಚಿದೆ ನಿನ್ನ ಮಾತಿಗೆ | ಮತ್ತೆ |
ವಿಹಿತ ಸಂಗ್ರಾಮದ ರೀತಿಗೆ ||
ಅಹಿಖಗರಾಜನ ಗೆಲುವುದೆ | ನಿನ್ನ |
ಬಹುಶರ ವೆಮ್ಮನು ತಡೆವುದೆ | ||375||

ಇನಿತಪ್ಪಭಟನೆ ನಿಲ್ಲೆಲೊ ಕೋತಿ | ಎನ್ನ |
ಅನುವರ ನೋಡೆನುತಲಿ ಖಾತಿ ||
ಘನದಿಂದ ಶರತತಿಮುಸುಕಿದ | ಕಾದಿ |
ಹನುಮನರಣದೊಳು ಮುಸುಕಿದ | ||376||

ಕಂದ

ಪರಿಭವಿಸಿದು ಮಾರುತಿಯಂ |
ಧುರದೊಳು ನಳನೀಲರ ಪಲ್ಗಿರಿಸುತ ಮುಂದೈ ||
ತರುವ ಭಟೋತ್ತಮನಂತಡೆ |
ದುರೆಜರೆದನುರಿಪು ಕಾಲಗ್ರೀವ ಸುಗ್ರೀವಂ | ||377||

ರಾಗ ಭೈರವಿ ಅಷ್ಟತಾಳ

ಕಲಿಕುಂಭನಹುದೋನೀನು | ಸಂಗ್ರಾಮದಿ |
ಕಲಿತಸುಪ್ರೌಢಿಯನು ||
ಸಲೆತೋರಿರಿಪು ಮೇಘ ಮರುತನಾಬಂದೆಕೋ |
ಮಲಪದ್ಮ ಸಖಸುತನು | ||378||

ತರುಣಿಜನೈಸೆ ನೀನು | ಭಾಸ್ಕರಕುಲ |
ದರಸಿನ ಪ್ರಿಯಸಖನು ||
ಮರುತಪಾವಕರಂತೆ ನೀವ್ ಮಿತ್ರರಾದುದ |
ಚ್ಚರಿ ತೊಲಗದಿರೆಂದನು | ||379||

ಮೂಕೊಕರೈಖಳರು | ನಿನ್ನಪ್ಪನ |
ಕೊಕತನವ ಕಂಡಿರು ||
ಯಾಕೆಲೋರಣಭಂಡನಿಲುನಿಲು ಶಿರಕೀಗ |
ತಾಕೊಕನಹೆನಿಂದಿರು | ||390||

ಅಕಟ ಮತ್ತಾತನನು | ಭಂಗಿಸಿದವೈ |
ಸಿಕದ ಹೆಗ್ಗಳಿಕೆಯನು ||
ಸಕಲ ತೋರಣ್ಣನ ಕೊಲಿಸಿದ ದ್ರೋಹಿ ನಾ |
ಸಿಕಕೆ ಮಸ್ತಕಗೊಂಬೆನು | ||391||

ಬಗುಳದಿರೆಲವೊ ಮೂಢ | ನೋಡಾದರೊ |
ಮ್ಮೆಗೆನಮ್ಮ ಸಮರ ಪಾಡ ||
ಹಗರಣದಿರುಳ ಗರ್ವವ ತೋರೆನುತ ಮುಷ್ಟಿ |
ಬಿಗಿದೆರಗಿದ ಕುಂಭನ | ||392||

ಎಷ್ಟು ಸಾಹಸಗೊಂಡರು | ನಿನ್ನನು ಫಡ |
ಹುಟ್ಟು ಮರ್ಕಟನೆಂಬರು ||
ದಿಟ್ಟತನವ ನೋಡೆನುತ ಗದೆಯಿಂದಿಡೆ |
ಸೃಷ್ಟಿಗಿನಜಬಿದ್ದನು | ||393||

ವಾರ್ಧಕ

ಮೀರಿದಂಕಪಿಪತಿಯ ವಾನರ ಮಹಾಬ್ದಿಯಂ |
ಬೀರಿದಂ ತನ್ನಶರ ವಡಬಾಗ್ನಿಯಿಂ ಖಳಂ |
ಏರಿದಂ ಖತಿಶಿಲೋಚ್ಚಯವಮಿಗೆ ರಘುಜನಂ ಸಾರಿದಂ ಬಲುಭರದೊಳು ||
ತೂರಿದಂ ಬಾಣೌಘಮಾಗಸೀತಾಧವಂ |
ಕಾರಿದಂ ಕಣ್‌ಕಿಡಿಯ ಕೋದಂಡ ಧ್ವಾನವಂ |
ತೋರಿದಂ ಭುವನ ತ್ರಯಂ ನಡುಗೆ ಕುಂಭಜಂ ಜಾರಿದಂ ಕೊಳ್ಳೆಂದನು | ||394||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನೆಲವೊರಿಪುವೆಂದು ಗಾಳವ |
ಮೀನು ನುಂಗಿದು ಬಾಳ್ವುದೇಖಳ |
ನೀನು ನಮ್ಮಾಹವದೊಳುಳಿವ ವಿ | ದೊಳುಳಿವಧಾನಪೇಳೈ | ||395||

ಎನಲು ರಘುವರ ಗೆಂದಕೇಳ್ ನರ |
ಮನುಜಕುರಿಮದವೇರಲಾನೆಯ |
ಹನನ ಗೈವುದೆ ಸೆಣಸಿನೋಡೆ | ನ್ನನುವರವನು | ||396||

ಆದಡಿದ ಕೊಳ್ಳೆಂದು ಬಾಣ ಮ |
ಹೋದಧಿಯ ಕದರಿದನು ರಾಘವ |
ಬೇಧಿಸಿದ ಖಳನರಿಯಶರ ನಡು | ಹಾದಿಯಿಂದ | ||397||

ಚಂಡಬಲಸೌಮಿತ್ರಿಮಿಗೆ ಮುಂ |
ಕೊಂಡೊದಗಿ ರಘುವರನಬೆಸಕೈ |
ಕೊಂಡು ಧುನುಝೇಂಕರಿಸಿ ವೈರಿಯ | ಕಂಡು ನುಡಿದ | ||398||

ಜಗದದೈವವ ಕೂಡೆ ಕದನವ |
ನೆಗಳುವರೆ ಫಡಖೋಡಿ ರಕ್ಕಸ |
ಬಗೆಯನೋಡಾಲಕ್ಷ್ಮಣಾಂಕನ ಖಗವಿದೆನಲು | ||399||