ವಾರ್ಧಕ

ಭುಗಿಭುಗಿಲು ಭುಗಿಲೆಂಬ ದಳ್ಳುರಿಯೊಳಖಿಳಖಳ |
ರಗಳುರಿದುದೈ ಹೇಮಮಯ ಭವನರಾಜಿಗಳ್ |
ಧಗಧಗಿಲು ಧಗಿಲೆಂದು ಸಿಂಧಸೀಗುರಿಪತಾಕಾವಳಿಗಳುರಿಗೊಂಡವು |
ಮಿಗೆಯದೇನ್ ಬಣ್ಣಿಪೆಂ ಪರವಧೂವ್ಯಸನಿಗಳ |
ಪಗೆತನಂಕಾನನದ ಬೆಳ್ದಿಂಗಳಂತಲಾ |
ಬಗೆದಶಾನನಗಾಗದಿರ್ಪುದೇಯೆಂದು ಕುಶಲವರಿಂಗೆ ಮುನಿನುಡಿದನು | ||274||

ಭಾಮಿನಿ

ಅಣುಗಕೇಳನಿತರೊಳು ಶತದಿನ |
ಮಣಿಯ ವೋಲ್‌ದೀಪ್ತಿಕೆಗಳೊಪ್ಪಿರೆ |
ಮಣಿಖಚಿತಪೀಠದೊಳುಸುರದಲ್ಲಣದಶಗ್ರೀವ ||
ಹಣಿದ ನಿದ್ರೆಯನುಗಿದುಖಳತಿಂ |
ಥಿಣಿಯಳೋಲಗವಿತ್ತಡಾಗಲು |
ಮಣಿದು ಮಣಿ ಹಾರರುಖಳಾಧಿಪಗೆಂದರಿಂತೆನುತ ||275||

ರಾಗ ಮುಖಾರಿ ಏಕತಾಳ

ಪುಣ್ಯಜನೇಶರಾವಣೇಶ | ಚಿತ್ತವಿಸಗ್ರ |
ಗಣ್ಯನಮ್ಮಯ ಮಾತನೀಸ || ಪಲ್ಲವಿ ||

ಮಾತಾಡಲವಧಿಯಿಲ್ಲವಯ್ಯ | ಬೆನ್ನಟ್ಟಿಕೋತಿ |
ಪೋತಗಳಿದೆ ಬಂದರ್ಜೀಯ ||
ಭೂತಳವತಳತ | ಳಾತಳದೊಳಿವಿ |
ಖ್ಯಾತನೆ ಕೈಕಸೆ | ಜಾತನೆಧುರನಿ |
ರ್ಭೀತನೆಯಿಂದಿನ | ರೀತಿಯು ಪೊಪರಿ |
ಯಾತಗಳುಪಹತಿ | ಯೇತರ ಪೇಳಲಿ | || 276 ||

ಇಂದ್ರಾರಿರಣದ ದಿಗ್ವಿಜಯ | ಎಣಿಸದಿರಯ್ಯ |
ಬಂದಿದೆ ಮಾರಿನೋಡಯ್ಯ ||
ಅಂದು ಹನುಮ ಸು | ಟ್ಟಂದದೋಳಾರಘು |
ನಂದನನುರುಹುವ | ನಿಂದೀಕ್ಷಿಪುದುರಿ |
ಯಿಂದಲಿ ತವಭಟ | ರಿಂದೊದಗಿದರದೊ |
ಬಂದುದು ಕಿಚ್ಚೇ | ಳಿಂದು ಪರಾಕೆ | ||277||

ಪಗೆಯವರಿಂದು ಸುಡುವುದಲ್ಲಾ | ನೋಡಂದು ನಿನ್ನ |
ಭಗಿನಿ ತಾನಿಟ್ಟಿಕಿಚ್ಚಿಂತೆಲ್ಲಾ
ಮಿಗೆಯೇನೆಂಬೆವು | ಮುಗಿಸಿದುಕೋಟೆಯ |
ಹಗರಣದಲಿ ಮು | ತ್ತಿಗೆಯಿಂದಗ್ನಿಯ |
ಹೊಗಿಸಿದ ಕಪಿಪತಿ | ಹಗುರವೆನೋಡೆಂ |
ಒಗೆಪೊರೆಯೆಮ್ಮನು | ವಿಗಡಪರಾಕ್ರಮ |  ||278||

ಭಾಮಿನಿ

ನುಡಿಯನದ ಕೇಳುತ್ತ ಘುಡುಘುಡು |
ಘುಡಿಸಿ ಮಡನೊಲಿದಿತ್ತ ಖಡ್ಗವ |
ಝಡಿದುಹುಂಕರಿಸಿದಡೆ ನಡುನಡು ನಡುಗಿತವನಿತಳ ||
ಕಡೆಯಭೈರವನೋಲು ಸಲೆಕೆಂ |
ಗಿಡಿಗಳನು ಸೂಸುತ್ತ ಖತಿಯಲಿ |
ನುಡಿದ ನೀಲಾಚಲನಿಭಾಂಗ ಖಳೇಶನಾರ್ಭಟಿಸಿ | ||279||

ರಾಗ ಭೈರವಿ ಏಕತಾಳ

ಏನಚ್ಚರಿಯಿದು ಭಳಿರೆ | ರಿಪು |
ಸೇನೆಯವರು ಹೆಚ್ಚಿದರೆ ||
ತಾನಾರೆಂದರಿಯರಲಾ | ಶಿವ |
ತಾನೆ ಬರಲಿಬಿಡೆನಲ್ಲಾ | ||280||

ನಿನ್ನೆಯಧುರ ದಿಗ್ವಿಜಯ | ಕನ |
ಸನ್ನೆರೆಕಂಡಾಪರಿಯ ||
ಭಿನ್ನಣವಾಯ್ತಿನ್ನೇನು | ಸುಡ |
ಲಿನ್ನಹಿತರ ಪಾಡೇನು | ||281||

ಫಡಫಡ ಮಗರಾಜನನು | ಕುರಿ |
ಪಡೆತಾಗೆಲುವುದೆ ಮೇಣು ||
ಕಡುಹಿನಸುತನಿಂದ್ರಾರಿ | ಎತ್ತ |
ನಡೆದೆನೊ ಕಾಣೆನೀಬಾರಿ | ||282||

ಮುಕ್ಕುವೆ ವಾನರವರನ | ಮಿಗೆ |
ತಿಕ್ಕುವೆ ರಘುಕುಲದವನ ||
ಮಿಕ್ಕವರಿಂದೇನೆಂದು | ಗುಹಿ |
ಲಿಕ್ಕಿದ ಭೋರ್ಗರೆ ದಂದು | ||283||

ಒಡನಾಪುಷ್ಟಕವೇರಿ | ಸತಿ |
ಪಡೆಸಹಿತಿರದೆಸವಾರಿ ||
ವಿಡಿದುತ್ತರ ಗೋಪುರದಿ | ನಿಂ |
ದೊಡನುಸಿರಿದನೀತೆರದಿ | ||284||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕರೆಯಿರೋಸುತ ಮೇಘನಾದನ |
ಧುರವಿಜಯಮಕರಾಕ್ಷನನು ಮೇಣ್ |
ಕರೆಯಿರೋ ಕಲಿಯಹಸುಪಾರ್ಶ್ವಕ | ನಿರದೆಭರದಿ | ||285||

ಎಲ್ಲಿಯಾಶಶಕರ್ನದುರ್ಜಯ |
ನೆಲ್ಲಿಯೂಪಾಂ ಬಕಸುಬಾಹುಮ |
ತ್ತೆಲ್ಲಿದುರ್ಮದನೆನುತ ಖಳನಿಂ | ದಲ್ಲಿ ನುಡಿಯೆ | ||286||

ಎಂಬ ನುಡಿಯಿಂಮುನ್ನರಕ್ಕಸ |
ಕುಂಭಕರ್ನಾತ್ಮಜನುಭುಜಸಂ |
ರಂಭನಹಿತ ವಿಜಂಭಕುಂಭನು | ತಾಂಭರದೊಳು | ||287||

ಕಿಡಿಯಿಡುತ ಕಳ್ಪಾಂತರುದ್ರನ |
ಪಡಿಯೊಳಿರದೈತಂದು ರಾವಣ |
ನಡಿಗೆರಗಿತಾಪೇಳ್ದ ತನ್ನಯ | ಕಡುಹುತನವ | ||288||

ರಾಗ ಮಾರವಿ ಏಕತಾಳ

ಹಿರಿಯಪ್ಪನೆ ನೀಲಾಲಿಪುದಿಂತ |
ಚ್ಚರಿಯನುಬಡಲೇನು ||
ಧುರ ಕಟ್ಟೆನ್ನನು ನಿಮಿಷದೊಳುರೆಸೊ |
ಪ್ಪರವೆನುರಿಪುಗಳನು | ||289||

ಅಗ್ನಿ ಸ್ತಂಭನ ಬಲ್ಲೆನುಪುರವಿದ |
ನಗ್ನಿಯೊಳುರುಹುವರು ||
ಅಗ್ನಿನಿಧಿಯ ಪೊಗಲಗ್ನಿಯೊಳದ್ದುವೆ |
ನಗ್ನಿನಯನನಾಣೆ | ||290||

ನೋಡಲಿಬರ್ದಿಲ ವಿತತಿಗಳತಿಕೊಂ |
ಡಾಡಲಿಂದಿನಧುರದಿ ||
ಬೇಡಬಾಯ್ಬೆರಳಿಂ ರಿಪು ಸಂಚಯ |
ವಾಡಲುಬಿಡೆ ಭರದಿ | ||291||

ಹುಂಕರಿಸುವ ಮಿಂಚುಗಳಿದಿರೆ ಕೇಳ್ |
ಪಂಕಜಬಾಂಧವಗೆ ||
ನೀಂ ಕೊಡು ವೀಳ್ಯವಫಡಮರ್ಕಟಗಳ |
ಹಂಕೃತಿಯೆನಗಿದಿರೆ | ||292||

ಎನುತಲಿ ಹಿರಿಯುಬ್ಬಣವನುಝಳಪಿಸಿ |
ಘನಮದದಲಿನಿಂದ |
ತನುಜನಬಿಗಿದಪ್ಪುತದಶಮುಖನಂ |
ದನು ನಯದೊಳಗೆಂದ | ||293||

ರಾಗ ಶಂಕರಾಭರಣ ಅಷ್ಟತಾಳ

ಚೆಣ್ಣನೀನೋರ್ವನೆ ಪೋಗಿ | ಮಿಣ್ಣನರಿಗಳ ತಾಗಿ |
ಒಣ್ಣಗೆಡಿಸುವ ಮಾತಿ | ಗೆಣ್ಣಿಪೆ ನಾನು | ||294||

ಎಣ್ಣಿಸಬೇಡವೆ ತಾತ | ಚಿಣ್ಣನೆಂದು ಮಗೇಂದ್ರನು |
ಬಣ್ಣದಾನೆಗಳುಕುವುದೆ | ಗಣ್ಯಮಾಡೆನು | ||295||

ಅತಿಶೂರನಿನ್ನಯ್ಯ ಪ್ರಬಲ | ನತಿಕಾಯಾದಿಭಟರು ಮಡಿದ |
ವ್ಯಥೆಗುಂದಲಿಲ್ಲೆೀನ ಮಾಳ್ಪೆ | ಸುತನೆ ಕೇಳೊಂದ | ||296||

ಪಿತನೀನೆಂದನಿಬರಸಮರ | ಕೃತಿಶಯಾನೆನಿಸದ ಮೇಗೆ |
ಸುತನೆ ನಿನ್ನನುಜಗೆದಿವಿಜ | ಮಥನಕೇಳೆಂದ | ||297||

ಧುರಧೀರನೀನಹುದುಕಂದ | ಉರಿಛಡಾಳಪೆರ್ಚಿತಿದಕೊ |
ಪರಿಪಂಥಿಗಳ ಬಲುಹಿಗಾನೆ | ತೆರಳುವೆ ಕಾಣೈ | ||298||

ತೆರಳುವುದಂತಿರಲಿ ಶಿಖಿಮುಂ | ದರಿವುದು ಹಾಗಿರಲಿ ಸುರ |
ಗಿರಿಯುನುಸಿಗಳ್ಗಂಜಲುಂಟೆ | ತೆರಳುವೆನಾನೈ | ||299||

ಭಾಮಿನಿ

ಮತ್ತೆಕೇಳೆನ್ನಧಟರಿಪುಗಳ |
ನೊತ್ತಿಹತ್ತಿದ ಶಿಖಿಯನಂದಿಸ |
ದಿತ್ತ ಬಂದಿತೆನೋಡುಪಿತ ನೀನಿತ್ಯಲರ್ಚಿಸುವ |
ಕತ್ತಿವಾಸನ ಲಿಂಗವನು ಪೂ |
ಜೋತ್ತಮದ ವೇಳೆಯಲಿಯೆಡಗಾ |
ಲಿತ್ತು ಕೆದರಿದ ದೋಷಕುಂಭ ಕಗೆಂದು ಬೊಬ್ಬಿರಿದ | ||300||

ವಾರ್ಧಕ

ಅರ್ಗಳಪರಾಕ್ರಮಂ ನುಡಿದಿಂತುಬಲ್ಪಿಂದ |
ಭರ್ಗಗಿರಿಧರನನು ಜ್ಞೆಯಗೊಂಡು ನಡೆಗೊಂಡು |
ಭೋರ್ಗರೆವುತಾಕ ಪೀಟಿಯಮಂತ್ರಮಂ ಜಪಿಸಿಪ್ರಳಯಾಗ್ನಿ ರೂಪಧರಿಸಿ ||
ಮಾರ್ಗಣೋದ್ಧತವನುಂ ಸುರಗಿ ಶೂಲಂಗಳಂ |
ನೀರ್ಗೈಯೊಳಾಂತು ಧುರಕೈತಂದನೋಳ್ಪ ದಿವಿ |
ಜರ್ಗಳೆದೆ ಕಾತರಿಸೆಕಪಿವರ್ಗತಲ್ಲಣಿಸೆ ಕೂರ್ಗಣೆಯಮಳೆಯ ಸುರಿಸಿ | ||301||

ರಾಗ ಭೈರವಿ ತ್ರಿವುಡೆತಾಳ

ತರುಣಕೇಳೈಯಮರ ಬಾಣಿಸಿ |
ದುರುಳದಶಶಿರಗಂಜಿತಾನೇ |
ತೆರಳುವನೊ ಸಂಗರಕೆವಗ್ನಿಯ |
ವರವಮೇಣಿಂದೈದುವುದೊವಿ |
ಸ್ತರವ ಬಣ್ಣಿಪನಾವಕುಂಭಾ |
ಸುರನುತಾನಾಸುರ ವಿಕಾರದೊ |
ಳುರಿಯ ಮಧ್ಯದಿ ನಿಂದು ಶಸ್ತ್ರೋ |
ತ್ಕರವ ತೂರುತ ಫಡಫಡೆನ್ನುತ | ಬಂದನಾಗ | ||302||

ಬಲ್ಲಿದರಲಾಭಳಿರೆಕೋತಿಗ |
ಳೆಲ್ಲ ಕೈಗೊಳ್ಳಿಗಳ ಶಿಖಿಮೇ |
ಣೆಲ್ಲಿ ಸುಡುವವರೆಲ್ಲಿ ಬನ್ನಿರೆ |
ಕಲ್ಲುಮರದಣ್ಣಗಳೆನುತ್ತ |
ಲ್ಲಲ್ಲಿ ಹರಿಹರಿದಖಿಳರಿಪುಗಳ |
ಚಲ್ಲಬಡಿದುರುಳಿಚುತಲಾಘವ |
ದಲ್ಲಿ ಶಿರಚೆಂಡಾಡೆ ಪೊವುತ |
ಬಲ್ಲಿದಾ ಸುರಮಲ್ಲಸಮರಕೆ | ಬಂದನಾಗ | ||303||

ಭರಿತಬಲಕಪಿಭಟರು ರೋಷಾ |
ತುರದೊಳಗ್ನಿಯ ಬೀರಬಹಸಂ |
ಗರಭಯಂಕರಗಿರದ ಕಾಳುರಿ |
ತುರುಕಿ ಮೋರೆಯ ಹರುಕಿ ನಾನಾ |
ಪರಿವಿಧಾನದಿಸೆಣಸಿದಡೆ ನಿ |
ಷ್ಠುರನು ಬಗೆಯದೆ ಮುಂದೆಮುಂದೈ |
ತರಲು ಹರಿಯದೆಸುತ್ತಲೋಡುವ |
ವರನು ಬಡಿಬಡಿದರಚಿಯರಚುತ || ಬಂದನಾಗ ||
ಧುರಕೈ | ತಂದನಾಗ | ||304||

ವಾರ್ಧಕ

ಅಲ್ಲಿಗಲ್ಲಿಗೆ ತರುಬಿಕಾದುವರತೀದುವರ |
ಖುಲ್ಲಕುಂಭಕನು ಬೆನ್ನಟ್ಟಿದಂ ಕುಟ್ಟಿದಂ |
ಮಲ್ಲಕರಿಯೂಥಾದಿನಾಥರಂ ನಾಥರಂತಿನಜಾದಿಧುರ ವೀರರು ||
ನಿಲ್ಲದವನುಪಟಳಕೆಪಾರಿದರ್ ಪಾರಿದರ್ |
ಭಲ್ಲೂಕವಿತತಿ ಶಿಖಿಮಯದಿಂದ ಮಯದಿಂದ |
ಚೆಲ್ವಾಂತು ನಿಮಿಷದೊಳ್ ಪುರವಧುಂ ಪುರವಧುಂ ಸೊಂಪೆತ್ತಳುಲಿಯೆ ಖಳರು | ||305||

ಭಾಮಿನಿ

ಮಿತ್ರಕುಲಜರುಕೇಳ್ವುದಿಂತಾ |
ಶತ್ರುಗಳ ಬೆಂಬತ್ತಿಪದುಳದಿ |
ನಿತ್ರಿಸಿದನುರಿತಣಿಸಿ ಪುರನಿಜಭಾಷೆಗನುವಾಗಿ ||
ಗೋತ್ರರಿಪುಜಿತು ಮುಖ್ಯ ರಾವಣ |
ಪುತ್ರರುರೆಕೊಂಡಾಡಿದರು ಸುಪ |
ವಿತ್ರನೀಭಳಿರೆಂದು ದುಂದುಭಿಮೊಳಗೆ ಬಲುವಾಗಿ | ||306||

ವಾರ್ಧಕ

ಅನಕಶ್ರೀಚಕ್ರಿ ಹೊಕ್ಕುಳಕುಶೇಷಯದೆಲರ |
ಘನಶೋಣ ಸುಪರಾಗರುಚಿರ ಜ್ವಾಲೆಯದಭ್ರ |
ವನುಬಿಂಬಿಸಿತೊ ಮೇಣುಪೂರ್ವದಿಗ್ಗಾಂಗನಾನನದಕುಂಕುಮರೇಖೆಯೊ ||
ಎನುವಂತೆ ಪೊಂಬಿಸಿಲಝಳದೊಡನೆ ಥಳಥಳಿಸು |
ತಿನನೋಲಗಂಗೊಟ್ಟಡಾಗನೇಸರಕುವರ |
ನನುಮತಿಯೊಳಾಹವಾಂಗಣದಿ ಭುಲ್ಲೆಸಿದರು ಹನುಮಾದಿಭಟರತ್ತಲು | ||307||

ಕಂದ

ಉದಯದೊಳಾದಶವದನಂ |
ಮದನಾರಿಯನರ್ಚಿಸುತಿರೆ ಭರದಿಂದಾಗಳ್ ||
ಮುದದಿಂದೋಲಗವಿತ್ತಿರೆ |
ಕದನಾಗ್ರಣಿ ಕುಂಭಕನೈದಿಯೆ ಮಣಿದೆಂದಂ | ||308||

ರಾಗ ಸೌರಾಷ್ಟ್ರ  ಅಷ್ಟತಾಳ

ಚಿತ್ತಾವಧಾನ ಪರಾಕುರಕ್ಕಸರಾಯ | ಮಾತಕೇಳು || ಭಾಷೆ |
ಯಿತ್ತವೋಲೈದಿ ಸಂಗ್ರಾಮದಿ ಸೆಣಸಿದೆ | ಮಾತಕೇಳು | ||309||

ಮೊದಲಗ್ನಿ ಸ್ತಂಭನ ಬಲಿದೆನು ಬಲವಂತ | ಮಾತಕೇಳು | ಮತ್ತೆ |
ಸದೆದೆನಲ್ಲಲ್ಲಿ ಹೊಕ್ಕಿರುವ ಮರ್ಕಟರನ್ನು ಮಾತಕೇಳು | ||310||

ಇನಸೂನು ಹನುಮಾದಿ ಗಳದೆತ್ತಪೋದರೊ | ಮಾತಕೇಳು | ಪುರ |
ವನುಸುತ್ತಿದಗ್ನಿಯ ತಣಿಸಿತ್ತ ಬಂದೆನು | ಮಾತಕೇಳು | ||311||

ರಾಗ ಕೇದಾರಗೌಳ ಝಂಪೆತಾಳ

ಎಂದ ಮಾತನು ಕೇಳುತ | ದಶಕಂಠ |
ನಂದನನನಪ್ಪಿಕೊಳುತ ||
ಕಂದಬಾ ವೀರಬಾರೈ | ಎನ್ನಕುಲ |
ಚಂದ್ರಗುಣನಿಧಿಯೆ ಕುಳಿರೈ | ||312||

ಚೆನ್ನಿಗನುಮೇಘನಾದ | ಒಬ್ಬಕುಲ |
ರನ್ನಗವಗೆಣೆಯ ಕಂದ |
ನಿನ್ನಂದ ದಾಪ್ತರೆನಗೆ | ಸುತವರ್ಗ |
ದಿಂ ನೋಡಲುಂಟೆ ಕಡೆಗೆ | ||313||

ಮುಂದರಿಗಳಿಲ್ಲವೆನಿಸಿ | ಜಯವಧುವ |
ನಂದದಿಂದಿರದೆವರಿಸಿ ||
ಬಂದೆನ್ನವ್ಯಥೆಯ ಕಳೆದು | ಜಾನಕಿಯ |
ಮುಂದಲೆಯಪಿಡಿವು ತೆಳೆದು | ||314||

ರಮಿಸಿ ರಾಜ್ಯವನಾಳ್ದರೆ | ಹೊಣೆಯಿದಕೆ |
ಮಮ ಸೂನುನೀನು ಭಳಿರೆ |
ಕ್ಷಮೆಯೊಳೆಣೆಗಾಣೆನೆನುತ | ಬಿಗಿದಪ್ಪಿ |
ಲಮರಾರಿ ಮದಪೆರ್ಚುತ | ||315||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಬೊಪ್ಪನೀನೆಲೆನೋಡು ಜಗದೊಳ |
ಗಪ್ಪಪೊಗಳಲುಸುತರು ನಗರೇ |
ತಪ್ಪದುರೆಕಳುಹಿಂದುರಿಪುಗಳ | ಸೊಪ್ಪರವೆನು | ||316||

ಮೇಲೆ ವಾನರವರನ ಹನುಮನ |
ಸೋಲಿಸಿದುಮಿಗೆ ಮನುಜದಶರಥ |
ಬಾಲರನು ಹ್ಯೊದಾಡುವೆನು ಸ | ಲ್ಲೀಲೆಯಿಂದ | ||317||

ಧುರದಿಜಯವಪಜಯವ ದೆಂಬುದ |
ಹರನದಯ ತವಭಾಗ್ಯ ನಮ್ಮಯ |
ಪರಮಪುಣ್ಯೋದಯವದರ ನಿ | ರ್ಧರಿಪರಾರೈ | ||318||

ತಾತಕೇಳಾದಡೆರಣಾಗ್ರದಿ |
ಸೋತು ನಗರವ ಪೊಗೆನಿದಕೆಸುರ |
ಘಾತನೀನೇಸಾಕ್ಷಿಕಳುಹೆಂ | ಬಾತರಳಗೆ | ||319||

ಭಾಮಿನಿ

ತರಿಸಿಪೊಂಬರಿವಾಣದಲಿಕ |
ರ್ಪುರದ ವೀಳೆಯವಿತ್ತುರಿಪುಗಳ |
ಮುರಿದುಬಿಸುಡೆಂದ್ಹರಸಿ ತಿರುಗಿದನಾದಶಗ್ರೀವ ||
ಭರಿತದುಂದುಭಿರವವ ಜಾಂಡವ |
ಳಿರಿಯಲಾಗಲೆಕುಂಭಯೋಚಿಸಿ |
ಬರುತತಾಯ್ಪವಿಜ್ವಾಲೆಯಳ ಮನೆಗೈದಿ ಮಣಿದೆಂದ | ||320||

ರಾಗ ಸೌರಾಷ್ಟ್ರ ಏಕತಾಳ

ಲಾಸಿಸೆನ್ನ ಭಿನ್ನಪವ | ನೆಲೆತಾಯೆ | ರಘುನ |
ಪಾಲಗೆಮ್ಮೊಳಿಹ ವಿವಾದ | ವೆಲೆತಾಯೆ ||
ಶೀಲವಂತೆ ನೀನೆಬಲ್ಲೆ | ಯೆಲೆತಾಯೆ | ನಿನ್ನೆ |
ಸೋಲಿಸಿದೆನಹಿತ ಬಲವ | ನೆಲೆತಾಯೆ | ||321||

ಪಂಥದಿಸಂಗರಕಿಂದು | ಎಲೆತಾಯೆ | ವೀಳ್ಯ |
ವಾಂತೆ ಹಿರಿಯಯ್ಯನಿಂದ | ಎಲೆತಾಯೆ ||
ಇಂತು ನಿನ್ನೊಳರುಹಬಂದೆ | ನೆಲೆತಾಯೆ | ಮನದಿ |
ಚಿಂತಿಸದೆಪರಸಿಕಳುಹಿ | ಸೆಲೆತಾಯೆ ||322||

ರಾಗ ತೋಡಿ ಅಷ್ಟತಾಳ

ತರವೇನೋ | ಬಾಲ | ತರವೇನೋ | || ಪಲ್ಲವಿ ||

ತರವೇನೋ ನೀ ಧುರಕೈದುವ ಮಾತು |
ಅರುಹರುಹಿನ್ನೊಮ್ಮೆ ಕೇಳುವೆನಿಂತು |  || ಅನುಪಲ್ಲವಿ ||

ಇರುಳುನಿಟ್ಟಿಸಿದ ಬಾವಿಯಕಂಡುದಿವದಿ |
ನೆರೆಧುಮುಕುವರುಂಟೆ ವೈಕುಂಠ ನಿಜದಿ ||
ತರುಣಿಕುಲೇಂದ್ರಕೇಳ್ ದಿವಿಜರಾಯತದಿ |
ಹರಿವಂಶರೈಸೆ ನೀಭ್ರಮಿಪೆಯ ಮನದಿ | ||323||

ನೊರಜುಗಳುರುಬೆ ಮಂದರ ಜರಿದಪುದೆ |
ಇರುವೆ ವಾರಿಧಿಯನ್ನು ಕುಡಿದುತೇಗುವುದೆ ||
ಧುರಧೀರರ ನಿಬರು ನಿನ್ನಿಂದಹಿಂದೆ |
ತೆರಳಿದರ್ನೋಡಿಸಂಗರಕೈದು ಮುಂದೆ | ||324||

ಹೀನವಿಕ್ರಮನೆ ನಿನ್ನಪ್ಪಕೇಳ್ ಮಗನೆ |
ತಾನತಿಕಾಯನೋಡಿದಡಲ್ಪ ಬಲನೆ ||
ನೀನೀಗ ಪೋಗೆ ರಾಘವ ಬೆದರುವನೆ |
ಏನೆಂಬೆನಿಂಥದುರ್ಮತಿಗೆ ಸುಗುಣನೆ | ||325||

ರಾಗ ಕೇದಾರಗೌಳ ಅಷ್ಟತಾಳ

ಮಾತೆ ಚಿತ್ತೈಸು ನೀ | ನೀತರ ಪೇಳ್ವುದು |
ನೀತಿಯೆ ತಿಳಿಯೊಮ್ಮೆಗೆ |
ತಾತನಕೊಂದ ದು | ರ್ನೀತಿಗಾರನಗೆಲ್ಲ |
ದಾತರಳನೆ ಪಿತಗೆ | ||326||

ಖರೆಯಹುದಹುದು ಕೇಳು | ತರಳನೀನೆಂದುದಾ |
ದರು ಪೇಳ್ವೆ ಬಲವಂತರ ||
ನೆರೆತೊಡೆವುದು ದುರ್ಬ |
ಲರಿಗೊಳ್ಳಿತೇ ಪೇಳು |
ಮರುಳಾಟ ಬಿಡುಕುವರ | ||327||

ಭಳಿರೆ ಕೇಳಮ್ಮದು | ರ್ಬಲರೆನಾವಸುರರು |
ತಳುವದೆ ಮಾನವರ ||
ಸುಳಿವಕಂಡಲ್ಲಿ ಗಂ |
ಟಲಕೊಯ್ದು ನುಂಗುವ |
ರ್ತಿಳಿಯೆಂತು ಪೇಳುತ್ತರ | ||328||

ತಿಳಿದ ಕಾರಣದಿಂದ |
ತಿಳುಹಿದೆ ಕಂದಕೇ |
ಳಿಳೆಯ ಮಾನವನೆ ರಾಮ ||
ನಳಿನಾಕ್ಷನೊಳು ನಿನ್ನ |
ಛಲಬೇಡ ಸಾರಿದೆ |
ಖಳಕುಲ ಸಾರ್ವಭೌಮ | ||329||

ಸಾರಿಹುದಹುದಮ್ಮ | ಕೇಳಿಂದುಧುರದಿನಾ |
ಮೀರಿದರಿಗಳ ಮೊತ್ತ ||
ಸೂರೆಗೊಳ್ಳದಿರೆಕು |
ಮಾರನೆನಿನಗೆನ್ನ |
ಭೋರನೆ ಕಳುಹೆಯತ್ತ | ||330||