ವಾರ್ಧಕ

ಮರುತಜನ ಕರಹತಿಗೆಯುಳಿದರಾರ್ ಮುನ್ನಖಳ |
ಸರಿದನಮರಾವತಿಗೆ ಮೇಣಂಜನೇಯಕಂ |
ಡುರೆನಗೋತ್ತಮ ವಡರಿದಿವ್ಯೌಷಧಿಗಳ ತಾ ಕಾಣದತಿ ಬೆರಗಾಗುತ ||
ಉರಿಮಸಗಿಯೋಚಿಸಿದ ಜಾಂಬವನ ಕಣ್ಣಮುಂ |
ದಿರಿಸುವೆನು ಗಿರಿಯನಿದನವನರಸಿಕೊಳಲೆಂದು |
ನೆರೆ ವಾಲಧಿಯ ಸುತ್ತಿ ಕಿತ್ತದ್ರಿಯಂ ಪೊತ್ತು ತಿರುಗಿದಂ ಜವದೊಳಿತ್ತ | ||121||

ಶರಷಟ್ಪದಿ

ಮಿಗಧರ ಕಾಂತದಿ |
ಮಿಗೆವಾತಜನಾ |
ಮಿಗಧರಗೆಸಗಿದ ಮಣಿರಥವೋ ||
ಬಗೆಯೇನೆನೆ ಹರಿ |
ಮಗನುನ್ನತದಾ |
ನಗ ಪೊತ್ತೈದಿದನೇನ್ ಬಲುವೋ | ||122||

ರಾಗ ಸಾಂಗತ್ಯ ರೂಪಕತಾಳ

ಇತ್ತಲನ್ನೆಗಹರಿ ಶರಣ ಜಾಂಬವಗೆಂದ |
ಹೊತ್ತೆಷ್ಟಾಯಿತು ನಮ್ಮ ಹನುಮ ||
ಮತ್ತೇಳುಶರಧಿ ದಾಟುವನೆ ತದ್ಗಿರಿಯನ್ನು |
ಹತ್ತುವನೇನೈ ನಿಸ್ಸೀಮ | ||123||

ತರುವನೆ ಮದ್ದನೆಂದರೆ ಜಾಂಬವಂತನು |
ಒರೆದನು ಕೇಳ್ ವಿಭೀಷಣನೆ ||
ಶರಧಿ ಬತ್ತಲಿ ಸುರ ಗಿರಿಜರಿಯಲಿಧರೆ |
ಗುರುಳಲಾದಿತ್ಯನು ತಾನೆ | ||124||

ತಂದಲ್ಲದಿರಮದ್ದನದು ತಿಳಿಯದೆ ಹೋದೆ |
ನಿಂದಪನಲ್ಲ ಬಲ್ಪಿನೊಳು ||
ಸಾಂದ್ರನಗೋತ್ತಮವನೆ ತಹನೆನುತ ವ |
ರಂದು ಮಾತಾಡುತ್ತಲಿರಲು | ||125 ||

ಆ ಹಂಸೋದಯದಂತೆ ಹೊಳೆವ ತದ್ಗಿರಿ ಸಹಿ |
ತಾಹರೀಶ್ವರಬರೆ ಕಂಡು ||
ಹೋ ಹೋ ಮಾತೇಕೆ ಬಂದನು ನೋಡಿ ಹನುಮನೆಂ |
ದಾಹರಿ ಶರಣತಾನಂದು | ||126||

ವಾರ್ಧಕ

ಒರೆಯಲಬ್ಜಜಜಾತ ದರಹಸಿತ ಮುಖದಿಂದ |
ಮರುತ ಜನ ಕೊಂಡಾಡಿ ಧುರವನೆಯಹೊಗದಂತೆ |
ಶರಣನಂ ಕಳುಹಿ ನಿಲಿಸುತ ಶರಧಿ ಸೇತುವಿನ ದಕ್ಷಿಣದಿಮಿಗೆಗಮಿಸುತ ||
ಬರಸೆಳೆದು ಬಿಗಿಯಪ್ಪಿ ಬಳಲಿದೈಹನುಮ ಎಂ |
ದಿರದೆ ತದ್ಗಿರಿಯಡರಿಯೌಷಧಿಯ ಕೊಂಡು ನಿಜ |
ಕರದೊಳರಚುತ ಜಗನ್ಮಯನ ನಾಸಾಗ್ರದೊಳು ಹಿಂಡಿದಂಸಲೆ ಪೊಗಳುತ | ||127||

ಭಾಮಿನಿ

ಸ್ಥಾಣುಸಖನಲಿದೆದ್ದನೈಕಡು |
ಜಾಣನಲ್ಲಾ ಜಾಂಬವನು ವರ |
ಕ್ಷೋಣಿಜೆಯ ಮೈದುನನನೆತ್ತಿದನಮಲವೈದ್ಯದೊಳು ||
ಕಾಣುತಜಭವರೊಸಗೆ ಪೂಮಳೆ |
ಕ್ಷೋಣಿಮಂಡಲ ತುಂಬಿತಾಗಳು |
ಮೇಣು ತಾರಾಪಿತನ ಘ್ರಾಣದೊಳೆರೆಯೆ ಮದ್ದುಗಳು | ||128||

ರಾಗ ಮಾರವಿ ಏಕತಾಳ

ಆಗ ಸುಷಿಪ್ತಿಯ | ನೀಗುತಲೇಳ್ವವೊ | ಲಾಗ ಸುಷೇಣಕನು ||
ಬೇಗನೆ ನಿಂದಿರ | ಲಾಗಜಸುತನನು | ವಾಗಿದನರುಹಿದನು | ||129||

ಬಾರೆನ್ನಯ ಗುಣ  | ವಾರಿಧಿ ಮದ್ದಿದ | ವೀರ ನೀ ಕೈಗೊಂಡು ||
ಈ ರಸೆಗೊರಗಿದ | ಸೂರಿಯ ಜಾದ್ಯರ | ಭೋರನೆ ನೆಗಹೆಂದು | ||130||

ಒರೆದಡೆಯವ ನಾ | ಪರಿವಿರಚಿಸಲೆ | ದ್ದರು ಮಡಿದೆಲ್ಲವರು ||
ಶರಧಿಯ ವೋಲ | ಬ್ಬರಿಸಲುಸುಮಮಳೆ | ಸುರಿದರು ಅನಿಮಿಷರು | ||131||

ಕಂದ

ಅನಿತರೊಳಾಗಿರಿಯಿಂದಂ |
ಘನಮೂಲಿಕೆಯ ಸುಷೇಣನು ಸಂವರಿಸಲ್ಕಂ ||
ಹನುಮನ ಹಸ್ತದೊಳಗಮೇ |
ಣನುವಿಂಮಾಯಕವಾಯ್ತೈ ಯಚ್ಚರಿಯೊಳಗಂ | ||132||

ಭಾಮಿನಿ

ಇದು ಕಣಾನರನಾಟಕ ದರೂ |
ಪದವಿನೋದವಲಾಜಗನ್ಮಯ |
ನಧಟಿಗಾವನು ಸಾಟಿಯಾನಿಶಿಯಂತ್ಯ ಜಾವದೊಳು ||
ಕದನಗಲಿ ಹನುಮಾದಿಕಪಿಭಟ |
ರೊದಗಿ ಪೊಗಳಿದರುಡು ಸಮೂಹದ |
ವಿಧುವಿನೋಲೆಸೆದಿರ್ದ ರಘುರಾಜೇಂದ್ರ ಚಂದ್ರಮನು | ||133||

ರಾಗ ಕಾಂಭೋಜಿ ಝಂಪೆತಾಳ

ರಾಜಕುವರರು ಕೇಳಿ ರಾಜೇಂದ್ರ ರಾಘವನು |
ರಾಜಿಸುವ ಕಪಿಗಳಾಳ್ತನದ ||
ರಾಜಸಕೆ ತಲೆದೂಗಿ ರಾಜತೇಜದೊಳುದಿನ |
ರಾಜನಣುಗನ ನೋಡಿನುಡಿದ ||134||

ಧುರಧುರಂಧರ ಕೇಳು ಧುರುಳಖಳರುಬ್ಬಟೆಯು |
ಬಿರುಸಾಯಿತೇನಯ್ಯ ಸಹಸಿ ||
ಅರುಹುದುರ್ಜನರ ನಿಷ್ಠುರದಿಂದನಾಹವದ |
ಪರಿಯದೇನೆನಲೆಂದ ನಮಿಸಿ | ||135||

ರಾಯರಾಘವ ಜಗದ ಮಾಯಗಾರರತೆರದಿ |
ಜೀಯನೀನಾಡುವದೆದೇವಾ ||
ಮಾಯಕದಿ ಮೇಣುವಿಧಿಸಾಯಕದೊಳಿಂದ್ರಾರಿ |
ಬೀಯಮಾಡಿದನೈಸೆಬಲವ | ||136||

ಮಡಪರಾಕ್ರಮಿಹನುಮ ಜಡಜಸುತಸುತನಮತ |
ವಿಡಿದೈದಿಸಂಜೀವನವನು ||
ಕಡುಸಾಹಸದಿ ತಂದು ತೆಯದಿನಿಬರಪ್ರಾಣ |
ವಿಡಿದನವನೆನೆಕೇಳ್ದು ನಪನು | ||137||

ವಾಯುಜನಕಂಡುಪುಳ ಕಾಯಮಾನಿತನಾಗಿ |
ಪ್ರೀಯದಲಿ ಬಿಗಿದಪ್ಪಿಕೊಳುತ ||
ಬಾಯ ಶೋನಿಧಿಯಹಿತರಾಯಮಸ್ತಕಶೂಲ |
ಬಾಯೆನ್ನಮರಿಯಾನೆಯಿತ್ತ | ||138||

ನೀನಿರ್ದರಿಂದ ಜಯಮಾನಿನಿಯವದನಾಬ್ಜ |
ತಾನೆದರ್ಶನವೆಮಗೆ ಮುಂದೆ ||
ಏನಿತ್ತಡೆಯು ನೆರೆಯದೈನಿನ್ನಸಾಹಸಕೆ |
ತಾನಜನವರವಿತ್ತೆನಂದೆ |  ||139||

ಎಂದೆನುತ ಶ್ರೀ ರಾಮ | ಚಂದ್ರ ಕೊಂಡಾಡುತಿರೆ |
ಗಂಧವಾಹಕುಮಾರನೆಂದ ||
ತಂದೆಮಕ್ಕಳಪೊಗಳೆ ಚಂದವೇದೇವಮಾ |
ತೊಂದಲಾಲಿಸೆನುತ್ತ ಮಣಿದ | ||140||

ರಾಗ ಘಂಟಾರವ ರೂಪಕತಾಳ

ವನರುಹಾಂಬಕ | ಮನುಜಪಾಲಕ |
ಚಿನುಮಯಾತ್ಮಕ | ದನುಜ ಘಾತಕ ||
ಮನುಜ ನಾಟಕ | ತನಗಳೇತಳೆ |
ಇನಿತು ಪೊಗಳುವೆ | ನಿನಗೆ ಸಹಜವೆ | ||141||

ನಿಗಮತತಿಗಳಾ | ನಿನ್ನಪದಗಳ |
ಬಗೆಯನರಿಯವು | ಪೊಗಳಿದಣಿಯವು ||
ರಘುಕುಲೇಂದ್ರನೀ | ನಿಂತುಪೇಳಲು |
ನಗದೆ ಲೋಕವು | ಪೇಳ್‌ವಿವೇಕವು | ||142||

ಮುಂದೆ ಮಾಡುವ | ಕಾರ್ಯದಂದವ |
ತಂದೆ ನೇಮಿಸೊ | ಮಾತಲಾಲಿಸೊ ||
ಎಂದು ಚರಣದಿ | ಎರಗೆ ತೋಷದಿ |
ನಿಂದು ರಘುಜನು | ಸಹಜಗೆಂದನು | ||143||

ರಾಗ ಕೇದಾರಗೌಳ ಅಷ್ಟತಾಳ

ಅನುಜಕೇಳಿದೆಯ ವಾನರಕುಲಕಮಲಾರ್ಕ |
ಹನುಮನಾಡಿದ ಮಾತನು ||
ಬಿನುಗುರಕ್ಕಸರಾಳು ತನಕೇನಕಂಡೆಯೆಂ |
ದೆನಲೆಂದ ಲಕ್ಷ್ಮಣನು | ||144||

ಎನ್ನ ಕೇಳುವೆಯಸಂಪನ್ನ ಪರಾಕ್ರಮ |
ನಿನ್ನೊಳವರಿಯದೇನೈ ||
ಕುನ್ನಿಗಳುಬ್ಬಟೆ ನಿನ್ನೊಳುಸಲುವುದೆ |
ಚೆನ್ನಿಗಬಿಡುಶಾಭಾಸೈ | ||145||

ಧುರ ಪರಾಕ್ರಮನೆ ಕೇಳರಿತೆನ್ನ ಸಹಜಾತ |
ದುರುಳರಿಗಜಮುಖ್ಯರು |
ಪರಿಪರಿಶಕ್ತಿಗಳಿರದಿತ್ತು ನಮ್ಮಸಂ |
ಗರಕೆನಿಷ್ಠುರರಹರು | ||146||

ಬರಿದೆವನೌಕಸ ವರರದಾನವರಿಂದ |
ನೆರೆಹಣಿಸಲು ಫಲವೆ |
ಅರೆನಿಮಿಷದಲಿ ಸಂ | ಹರಿಪೆನಾಜಾಂಡಮ |
ತ್ತಿರದಾಗ ವಿರಚಿಸುವೆ | ||147||

ರುಂಡಮಾಲೆಯನಾಂತುಕೊಂಡವಬರಲಿ ಯು |
ದ್ದಂಡಮಾಯಗಳಿರಲಿ ||
ಖಂಡಿಸದಿರೆಕಿಡಿಕೆಂಡವಾಗಲಿಲೋಕ |
ತಂಡಗಳೆನುತಪೇಳಿ | ||148||

ಭಾಮಿನಿ

ಗಂಡುಗಲಿರಘುಸೂನು ತಾಕೈ |
ಗೊಂಡುಲಕ್ಷ್ಮಣನಿಂದನಿಜ ಕೋ |
ದಂಡವನುಝೇಗೈದು ಕಮಲಭವಾಂಡಬಿರಿವಂತೆ ||
ಚಂಡಭುಜಬಲನಹಿತಮದವೇ |
ತಂಡಕಂಠೀರವನು ವಡಬಪ್ರ |
ಚಂಡ ಶಕ್ತಿಯನೆತ್ತಿ ಹುಂಕರಿಸುತ್ತಲಿಂತೆಂದ | ||149||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಡವಿರಿಂಚಾದಿಗಳು ಶಕ್ತಿಯ |
ಕೊಡುವವರು ಗಡಕೊಂಬವರು ಸುರ |
ರೊಡೆಯಜಿತುದಶಕಂಠ ಮುಖ್ಯರು |
ಗಡಯಿದೇನು | ||150||

ತಾನದಾರೆಂದರಿಯರೈನಾ |
ವೇನು ಸದರವೊಶಿವಶಿವಾಖಳ |
ರೇನಬಗೆದರೊಚಿತ್ತದಲಿ ಸು |
ಮ್ಮಾನದಿಂದ ||151||

ತಡೆಯಲೈ ವಿಕ್ರಮರು ತನ್ನಯ |
ಕಡುಹನಿದನೆಂದೆನುತಸಿಂಜಿನಿ |
ತೊಡಿಸಿಧನುಝೇಂಕರಿಸಿಶಕ್ತಿಯ |
ಬಿಡುವ ಭರದಿ | ||152||

ಒಡನೆ ಕಾಲ್ದೆಗೆಯಲ್ಕೆ ಭೂತಳ |
ನಡುಗಿತಹಿಪತಿ ಕುಸಿದ ಸುರಗಿರಿ |
ತಡೆಯದೊಲೆದುದು ನಾವೆಯಂದದಿ |
ನುಡಿಯಲೇನು | ||153||

ಉರಿಯಕರಡಿಗೆಯಂತೆ ಶಿಖಿಡಾ |
ವರಿಸಿತಬುಜಭವಾಂಡವನುತಾ |
ನಿರದೆಸಚರಾಚರದ ಬವಣೆಯ |
ನೊರೆಯಲೇನೈ | ||154||

ವಾರ್ಧಕ

ನಡುಗಿದಂ ದಂಡಧರಮತ್ಯುಮಗಧರನ ಬೆ |
ನ್ಹಿಡಿದರ ಮರರ್ಕಳುಂಧತಿಗೆಟ್ಟರಮರೇಂದ್ರ |
ಜಡಜೋದ್ಭವನ ಮರೆಯ ಸಾರಿದಂ ಕಪಿಕಟಕ ರಾಮರಾಮೆನಲಿತ್ತಲು ||
ಕಡೆಯಹುದಲಾಜಗಕೆ ಸಿತಪದ್ಮನೇತ್ರಖತಿ |
ವಿಡಿದನೇಕಕಟೆಂದು ವಿಧಿಯಂಚೆ ಗಮನದಿಂ |
ಪೊಡವಿಗೈತಂದಾ ರಘೂದ್ವಹನಸನ್ನುತಿಸತೊಡಗಿದಂ ಜಯರವದೊಳು | ||155||

ಭಾಮಿನಿ

ದೇವ ದೇವೊತ್ತಮಕಪಾನಿಧೆ |
ದೇವನರನಾಟಕ ವಿನೋದಕ |
ಲಾವಿದನೆ ಕಮನೀಯ ಮೂರುತಿ ಜಾಹ್ನವೀಪಿತನೆ ||
ಈ ವಿಧವದಾರೊಡನೆ ನಿಜಭುವ |
ನಾವಳಿಯೊದಶಕಂಠನೋ ನಿನ |
ಗಾವ ಹಗೆಯಲೆ ತಂದೆ ಜಯವೆಂದಜನುಮಣಿದೆಂದ  ||156||

ರಾಗ ಬೇಗಡೆ ಅಷ್ಟತಾಳ

ಶೂರವೀರೋದ್ಧಾರ ರಘುವರ್ಯ | ಬಿಡುಸಾಕು ಕೋಪವಿ |
ದಾರೊಡನೆ ಗಂಭೀರ ಘನಶೌರ್ಯ ||
ಮೇರುವೆತ್ತಣವೆತ್ತ ಜಂಬುಕ |
ನಾರುಭಟೆ ತಾನೆತ್ತ ನಿನಗೀ |
ಕ್ರೂರ ನಿಶಚರರಿದಿರೆ ಬಿಡುಖತಿ |
ಮಾರಿ ಹೋದುದನೆಲ್ಲದೇವನೆ || ಶೂರ ವೀರೋದ್ಧಾರ | ||157||

ಈಯಜಾಂಡವ ನಿರ್ಮಿಸಿದೆಯೆಂದು | ಸಚರಾಚರಂಗಳ |
ಕಾಯುವನೆ ನೀನಾಗಿಮಿಗೆಯಿಂದು ||
ಬೀಯ ಮಾಡಲು ಬೇಡ ಬೇಡೆಂ |
ಬಾಯತಿಕೆಯವರುಂಟೆ ನೋಡೆಲೆ |
ಜೀಯಮಕ್ಕಳ ತಾಯಿ ತಾನೇ |
ನೋಯಿಸಲು ಬೇರಾರುಕಾವರು || ಶೂರ ವೀರೋದ್ಧಾರ | ||158||

ತಪ್ಪುಸಾವಿರವಿಪ್ಪುದೆಮ್ಮೊಳಗೆ | ನೀ ನಲ್ಲದುರೆ ಬೇ |
ರೊಪ್ಪುಗೊಂಬವರುಂಟೆ ಪೇಳೆನಗೆ ||
ಕಪ್ಪು ಕಂಧರ ಮಿತ್ರ ಕೇಳೆಳ |
ತಿಪ್ಪತೃಣಕಲ್ಪಾಂತವಹ್ನಿಯೊ |
ಳೊಪ್ಪುವುದೆ ನಿನಗಿಪ್ಪ ರಾರ್‌ಸರಿ |
ಯಪ್ಪನೀ ನೀತಪ್ಪ ಮೆರೆವರೆ || ಶೂರವೀರೋದ್ಧಾರ | ||159||

ಉಗಿದಶರಮರುದ್ವೀಪದೊಳಗೆಸೆಯ | ಲಲ್ಲಿಯ ಪುಳಿಂದರು |
ಮುಗಿಯಲೈಮಾಸ್ವಾಮಿ ಖಳವಿಜಯ ||
ಹಗುರ ವೈನಿನಗುಗ್ಗಡವೆ ನೀ |
ನಗೆಯ ಬೀರದಿರಕಟ ಜಗಕೆನೆ |
ರಘುಜಕಿರುನಗೆ ಸೂಸೆಕಮಲದ |
ಮಗವಿಯತ್ತಳದತ್ತಸರಿದನು | ಶೂರವೀರೋದ್ಧಾರ ||160||

ಭಾಮಿನಿ

ನಡೆಯಲಬ್ಜಜನಿತ್ತಶರಬಿಡ |
ಲೊಡನೆ ತದ್ವೀಪದಕಿರಾತರು |
ಮಡಿದರೆಂಬೆತ್ತ್ಯೆ ದುಕೋಟಿಯದೇನ ಬಣ್ಣಿಪೆನು ||
ನುಡಿಗೆ ಖೋಡಿಗೆ ಕಪೆಗೆ ವಿಕ್ರಮ |
ದೆಡೆಗೆ ಪಲ್ಲಟವುಂಟೆ ನಿಮ್ಮಯ |
ಪೊಡವಿಪತಿಗೆಲೆ ಕೇಳಿದೈ ಕಾಕುಸ್ಥನಪಸೂನು | ||161||

ವಾರ್ಧಕ

ಆನೆರವಿಯೊಳು ವಿಭೀಷಣರವಿಜಪವಮಾನ |
ನೂಸುಸೌಮಿತ್ರ ಜಾಂಬವರಿನಿಬರಾಪದ್ಮ |
ಯೋನಿಯಂ ಕಂಡರೈಯಾಗ ಸುಮ್ಮಾನದಿಂ ರಾಘವನ ಸಿರಿಮುಡಿಯೊಳು ||
ಅ ನಿಳಿಂಪೌಘ ಪೂಮಳೆಗೆರೆದುದುಂದುಭಿ |
ದ್ವಾನದಿಂ ಕೊಂಡಾಡುತಿರ್ದರಭ್ರದೊಳಿತ್ತ |
ಭಾನುಕುಲಸಂಭವಂ ಮುಂದಪ್ಪಕಜ್ಜಮಂ ತಾನೆಂದನಿನಸುತನೊಳು ||162||

ರಾಗ ಶಂಕರಾಭರಣ ಮಟ್ಟೆತಾಳ

ವೀರಧೀರೋದ್ಧಾರಕೇಳು | ಭೋರನೀಗಮಾಳ್ಪ ರಾಜ |
ಕಾರಿಯವನು ದನುಜರಿರ್ಪ | ಊರನಿದರನು ||
ಮಾರುತಾತ್ಮಭವನು ಹಿಂದೆ | ಘೋರವಹ್ನಿಗಿತ್ತ ವೋಲು |
ಸೂರೆಗಾಗಿ ಸುಡುವ ಮನನಿ | ರ್ಧಾರ ವೆನಗಲೈ ||163||

ಎಂದಡೆರಗಿ ಕಪಿಕುಲೇಂದ್ರ | ನೆಂದದೇವರಿಂತುನೆನಸಿ |
ದಂದಲೇಸು ಹೊಂದದಿರದು | ಮುಂದೆ ಧುರದೊಳು ||
ಮಂದಮತಿಗಳಾಯುತೀರ್ದು | ದೆಂದು ಗ್ರಹಿಸಿಕೊಳ್ಳಿರೆನಲು |
ಗಂಧವಹಸುತಾಧ್ಯರಹುದಿ | ದೆಂದು ಪೇಳಲು | ||164||

ಗಂಡುಗಲಿಸುಮಿತ್ರೆಯಣುಗ | ಕಂಡು ವರಧನಂಜಯಾಸ್ತ್ರ |
ಗೊಂಡು ರಘುಜಗೆಂದ ಕೇಳ್ ಭೂ | ಮುಂಡಲೇಶನೆ ||
ಚಂಡತರಶರಪ್ರಯೋಗ | ಪಂಡಿತತ್ವ ತೋರ್ಪೆನಿದಿರು |
ರುಂಡಮಾಲನಿಂದು ಗೆಲಿದು | ಕೊಂಡು ಪೋಪನೆ | ||165||

ಧಿರುರೆಸಹಜಧೀರ ಭಳಿರೆ | ಖರೆಯನಹೆಯೆನುತ್ತಲುಭಯ |
ಧುರಧುರಂಧರುರುಸರೋಷ | ಭರದಿ ಧನುವನು ||
ಕರದೊಳೆತ್ತುತುರಿಕಳಂಬ | ಸುರಿಯಲಗ್ನಿವಿಸ್ಫು ಲಿಂಗ |
ಧರಣಿಮುಸುಕೆತರು ವ್ರಜಂಗ | ಳುರಿದವೇಳ್ಪೆನು | ||166||

ಅದನು ಕಂಡುರವಿಜನೀಲಾಂ | ಗದಸುಷೇಣ ಹನುಮಗವಯ |
ದಧಿಮುಖಾದಿ ಕೀಶವೀರ | ರಧಿಕ ಭರದೊಳು ||
ಮುದದಿಜ್ಯೋತಿಗೊಳ್ಳಿಗಳನು || ಕದನ ಶೂರರಾಂತು ನಡೆದ |
ರಧಟು ತನಗಳೆಂತೊಬೆದರೆ | ತ್ರಿದಶರಾಗಲು | ||167||

ಭಾಮಿನಿ

ರಣಮಹೀಮಂಡಲದ ಭೈರವ |
ಗಣದ ದೀಪಾವಳಿಯೊ ಈಶನ |
ಹಣೆಯಹುತವಹನಟ್ಟಹಾಸವೊ ಶಿವ ಮಹಾದೇವ ||
ಸೆಣಸಿ ಜ್ಯೊತಿರ್ಲೋಕ ವೀರಾ |
ವಣನ ಪಟ್ಟಣಕೈದಿಕದನವ |
ಕೆಣಕುವುದೊಕಪಿವರರೊ ನೋಡುವನಾವನದ್ಭುತವ | ||168||

ರಾಗ ಅಖಂಡಮಾರವಿ ಏಕತಾಳ

ಆರ್ಬಣ್ಣಿಪರೆಲೆ | ಯರ್ಭಕರಿರಕೇ |
ಳ | ರ್ಬುದ ಸಂಖ್ಯೆಯ | ಸರ್ಬವನೌಕಸ |
ರುರ್ಭರದಿಂವರ | ಕರ್ಬುರಕೋಟೆಯ |
ಪರ್ಬಿದರೈ ಯಜ | ಗರ್ಭವು ನಡುಗೆ || ಏನೆನೆಂಬೆ | ||169||

ಏರಿದುದುರ್ಗವ | ವೀರವಲೀಮುಖ |
ವಾರವುಮಿಗೆ ಕಾ | ಲೂರುತನಿಂದುರೆ |
ಬೀರಿದರಗ್ನಿಯ | ಕ್ರೂರನಿಶಾಚರ |
ವಾರದ ಮನೆಮನೆ | ಗಾರುಭಡಿಸುತ | ಏನನೆಂಬೆ | ||170||

ಅಗ್ಗಳಹಯದುರು | ಲಾಯ್ಗಳ ಭಟರ ಪೊ |
ಳಲ್ಗಳ ಶಸ್ತ್ರದ | ಸಾಲ್ಗಳ ನಿಭಸೊಂ |
ಡಿಲ್ಗಳ ರಥಸಂ | ಕುಳ್ಗಳ ನುರಿಯೊಳು |
ಗಾಲ್ಗಳ ಚಿದರುಮ | ಳಲ್ಗಳು ತುಂಬಿದು | ದೇನನೆಂಬೆ | ||171||

ನಿದ್ದೆಯೊಳುರೆ ಯೊ | ಪ್ಪಿದ್ದ ಪರಾಕ್ರಮ |
ರೆದ್ದಾಕೈದುವ | ತಿದ್ದುವುದಕೆ ಮೇಲ್ |
ಬಿದ್ದಾಕಿಚ್ಚಿನೊ | ಳದ್ದಿಯರುಹಿದರ್ |
ದೊದ್ದೆಗರನುಯಿವ | ರುದ್ದುರುಟುಗಳಿಂ | ದೇನನೆಂಬೆ | ||172||

ಕಳಕಳದಲಿಬಲ್ | ಖಳಬಲನಿವನ |
ಗ್ಗಳನು ಸುಷೇಣಕ | ನಳನಿವನೆನ್ನು |
ತ್ತೊಳಗೊಳ ಹೊದುರೆ | ಕಳಚಿದರಸುಗಳ |
ಪೊಳಲೊಳು ರಕ್ತದೋ | ಕುಳಿಯಾಯ್ತಂದದ | ನೇನನೆಂಬೆ | ||173||