ವಾರ್ಧಕ

ಭೋರೆಂಬಭೂರಿಭೆರಿಗಳ ಘನ ನಾದದಿಂ |
ಸಾರೆಂಬಭಟರ ಬಾಹಾರವ ವಿಶೇಷದಿಂ |
ಧೀರಂಬಲೋತ್ಕರದ ದತಧನುರ್ನಾದದಿಂ ನಿತ್ರಾಣ ಜವಗಾಗಲು ||
ಆರಂಭಮಿಂದಾಗುವಂತಾಗದಿರದಜಗೆ |
ಭೂರಂಭೆ ಮೇಲೆ ಯಾಪತ್ತಿನಿಂದಮರಗಣ |
ಬೇರೆಂಬವೋಲ್ ಸುರಗಿ ಶೂಲಗಳ ಪಿಡಿದೈದಿಮುತ್ತಿದರ್ ಧುರಕಣನೊಳು | ||454||

ಭಾಮಿನಿ

ನಿಂದನಾನಿಜಸಕಲ ಸೇನೆಯ |
ಮುಂದುಗಡೆಯಲಿ ತಾರಕಾಗ್ರಹ |
ವಂದಮಧ್ಯದರವಿಯ ವೋಲ್‌ರಥವೊಳಗೆ ಮಕರಾಕ್ಷ ||
ಹಿಂದಣತಿರಕ್ಕಸರಿಗಿವಹ |
ನ್ನೊಂದುಮಡಿ ಕಾಣಿಸಲು ದಶರಥ |
ನಂದನನು ನಿಜ ಚರಣಕಮಲಾರಾಧಕನೊಳೆಂದ | ||455||

ರಾಗ ಕಾಪಿ ಅಷ್ಟತಾಳ

ಬಂದವನಿವನ್ಯಾವವೀರ | ಗುಣ |
ಸಾಂದ್ರನೀನೆನಗಿದ ಪೇಳುಗಂಭೀರ | || ಪಲ್ಲವಿ ||

ಇವನಂದಿನಂಧಕನೇನೈ | ಮೇಣಿ |
ನ್ನಿವಕೈಟಭಾಸುರನಹುದೇನೀ ಕಾಣೈ ||
ಭುವನದೊಳೆಣೆಗಾಣೆನಲ್ಲೆ | ಇಂಥ |
ಹವಣಿಗರಿನ್ನುಂಟೆಖಳರೊಳ್ ನೀಪೇಳೈ | ||456||

ರಾಗ ಬೇಗಡೆ ಏಕತಾಳ

ಲಾಲಿಸೈ ರಾಜೇಂದ್ರಕುಲದೀಪ | ಎನ್ನರಿಕೆಯನು ಕರು |
ಣಾಲವಾಲಸುಶೀಲ ಕುಲದೀಪ ||
ನೀಲಮೇಘ ನಿಭಾಂಗಸಜ್ಜನ |
ಪಾಲದಶರಥ ಬಾಲಸೀತಾ |
ಲೋಲನಿತ್ಯನಿರಾಳನಿರ್ಗುಣ |
ಕಾಲಕಾಲಾತೀತ ನಿರ್ಮಲ |    || ಪಲ್ಲವಿ ||

ಜೀಯ ಕೇಳಿವ | ನಾಯತವ ಪೂ | ರಾಯಚಿತ್ತದಲಿ || ಜಯಯುವ |
ತೀಯಶಶ್ರುತಿ | ಸ್ಥಾಯಿಮೇಣತಿ | ಕಾಯನಿಂದಲ್ಲಿ || ಸುಮನಸ |
ರಾಯಜಿತುವಿಂ | ಜೇಯನಿವಖಳ | ರಾಯತಂಡದಲಿ || ಬಹಳ ಸಂ |
ಪ್ರೀಯ ನಮ್ಮಣ್ಣನಿಗೆ ಧುರದಿವ |
ಜ್ರಾಯುಧಗೆ ಗಿರಿ | ರಾಯನಳಿಯಗೆ |
ತಾಯಿವನೆಯೆನಿಸುವನು ನಾನೋ |
ಪಾಯದಲಿ ನೋಡೈಜಗಧ್ವಿಭು | ||457||

ಅಂದುವನದಿ ಮ | ದಾಂಧತನದಲಿ | ಹೊಂದಿ ಯುದ್ಧದಲಿ || ನಿಮ್ಮನು |
ಮುಂದುಗೆಡಿಸಿ ಸು | ರೇಂದ್ರ ಭವನಕೆ | ಸಂದ ಖರನಲ್ಲಿ || ಆತನ |
ಕಂದನಿವಗುಣ | ವಂದಝಶದಶ | ನೆಂದುಪೆಸರಿನಲಿ || ಕರೆವರು |
ತಂದೆಯಿಂ ಬಾಲ್ಯದಲಿ ಕಳುಹಿಸಿ |
ಬಂದು ದಂಶಕಂಧರನ ಸೇರಿಹ |
ನಿಂದಿನಾಜಿಯೊಳಿವನಗೆಲಿದಡೆ |
ಮುಂದೆ ವಿಜಯಿಗಳಾವು ಧಾರ್ಮಿಕ | ||458||

ರಾಗ ಕೇದಾರಗೌಳ ಅಷ್ಟತಾಳ

ಅದರೇನೆಂಬೆ ತಪ್ಪಿಲ್ಲಿವನೆಮ್ಮೊಳ |
ಗೈದಲುಳ್ಳವಧುರದಿ ||
ಆದಿ ವೀರರೊಳೀತನಯ್ಯಗೆ ಸರಿಯಾರು |
ಕಾದಿದಡಾಹವದಿ | ||459||

ಮುರಿಯೆಚ್ಚುಬಿಲ್ಲ ಮೂವತ್ತೈದು ಹೆಜ್ಜೆಹಿಂ |
ದಿರುಗಿಸಿದನು ನಮ್ಮನು ||
ಅರಿಗಳಾವಿದರಿಂದಲಿವಗೆ ನಿಶ್ಚಯವು ಇಂ |
ತರಿದಮೇಲ್ ಕಪಿಗಳನು ||460||

ಹಗೆಯವನಿದಿರಿಕ್ಕಿಗಗನ ಪಥಿಕರಾಗಿ |
ನೆಗಳಿಚುವುದು ಗುಣವೆ ||
ಸಗರ ವಂಶಜನಿಂತು ಬಗೆಗೈದನೆಂದೆಮ್ಮ |
ನಗುವರು ಜಗದೊಳಗೆ | ||461||

ತಮ್ಮ ನೀನಡೆ ಖಳ ಬಲವನಿರ್ಣೈಸುನಾ |
ನೊಮ್ಮೆಗೀರಕ್ಕಸನ ||
ಹಮ್ಮನೋಡುವೆನೆಂದು ಧನುಶರಗಳ ಪರ |
ಬೊಮ್ಮತಾ ಕೈಗೊಂಡನು | ||462||

ಅನಿತರೊಳಿತ್ತ ಸುಗ್ರೀವನಾಜ್ಞಾವರ್ತ |
ವನಚರರಬ್ಬರದಿ ||
ದನುಜಸೈನಿಕ ಪೊಕ್ಕುಸದೆದರು ಗಿರಿತರು |
ಗೊನೆಯಿಂದ ಸಂಗರದಿ | ||463||

ವಾರ್ಧಕ

ಒತ್ತಿಬಹರಥಿಕರಂ ವ್ಯಥಿಕರಂ ಮಾಡಿದರು |
ಮುತ್ತುವ ತುರಂಗ ಮದತುಂಗ ಮದದಂತಿಗಳ |
ಮೊತ್ತಮಂ ಪೋಳಾಗಿ ಸೀಳಾಗಿ ಕೆಡಹಿದರ್ ಕೊಡಹಿದರ್ ವಾಹಕರನು ||
ಮತ್ತೆ ಭಟರಂಗಮಂ ಭಂಗಮಂಬರಿಸಿದು ಮ |
ರುತ್ತನಯ ಮುಖ್ಯರುಂ ಮುಖ್ಯರಂ ಕಾಳ್ಗೆಡಿಸಿ |
ನೆತ್ತರಂ ಪರಪಿದರ್ ನೆರಪಿದರ್ ಮರುಳ್ಪಡೆಗೆ ಧುರಭಯಂಕರಮಾಗಲು | ||464||

ಕಂದ

ಈ ಪರಿಕಂಡಾಖರಜಂ
ಕೋಪದಿ ಶರಮಳೆ ಸುರಿಸುತನೇಕರ ತರಿದುಂ |
ತ್ರೈಪುರಹರನೊಲು ಮುಂದಾ |
ಟೋಪದಿಬರುತಾ ಹನುಮನ ತಡೆಗೊಂಡೆಂದಂ | ||465||

ರಾಗ ಭೈರವಿ ಅಷ್ಟತಾಳ

ಹನುಮನೆಂಬವನೆ ನೀನು | ಬಾಲ್ಯದಿ ಸೂರ್ಯ |
ನನು ನುಂಗಲೆ ನುತಮೇಣು ||
ಮನಕೊಟ್ಟು ಲಂಘಿಸಿ ಶಕ್ರನಿಂದಳಿದು ಬಂ |
ದನಘಶಾಭಾಸೆಂದನು | ||466||

ಒರಲದಿರೆಲವೊಧೂರ್ತ | ತಂದೆಯ ುಕ್ಕ |
ಳಿರವಿನೊಳುಲಿದುಮತ್ತಾ ||

ಪರರತಾಂಬೂಲಕೆ ಕೈಯೊಡ್ಡಿ ಬಾಳುವ |
ದುರುಳ ನೀತೆರಳೆಂದನು ||467||

ಏನೆಂದೆ ಫಡಯೆನ್ನನು | ಸಂಗ್ರಾಮದಿ |
ಹೀನ ವಿಕ್ರಮನೆ ತಾನು ||
ತಾನಿಕೊಳ್ಳಾದಡೆನ್ನುತಲಸ್ತ್ರಸಾರದಿ |
ವಾನರನನು ಝಡಿದ | ||468||

ಗಣಿಸದೆ ಹನುಮಂತನು | ನಿಂತುಗ್ರದಿ |
ಸೆಣಸಲುಮಕರಾಕ್ಷನು ||
ಬಣಗುಮರ್ಕಟ ತೊಲಗೆಂದಜಶರದಿಕುಂ |
ಭಿನಿಗುರುಳಿಸಿದ ನಾಗ | ||469||

ಆತನ ಹರಿಬಕೆಂದು | ಅಂಗದನೀಲ |
ರಾತು ಸಂಗರದಿ ನೊಂದು ||
ಭೂತಳಕೊರಗೆ ಕಂಡಿನಜಲಂಘಿಸಿಸುರಾ |
ರಾತಿಯ ತಡೆದೆಂದನು | ||470||

ರಾಗ ಘಂಟಾರವ ಅಷ್ಟತಾಳ

ನಿಲ್ಲು ನಿಲ್ಲೆಲೊ ಮಕ್ಷರಾಕ್ಷಫಡನಿನ್ನ ||
ಝಲ್ಲಿಗಳ ತೋರೆಲ್ಲ ಬೇಗೆಂ ||
ದ್ಹಲ್ಲ ಕಿರಿವೋಲೆರಗಿದ ||471||

ಹೇವನೌಕಸವರನೆ ಹೆಬ್ಬುಲಿ ಬಾಯ ||
ಗೋವುತಾ ಬಾಳುವುದೆ ಸಿಕ್ಕಿದೆ |
ಜೀವಿಸಲು ಬಿಡೆನಿನ್ನನು | ||472||

ಬಾಯ ಪೌರುಷದಾಯವೆ ಸುಡುಸುಡು |
ನಾಯಿ ಹೋಗೆಂದದ್ರಿಯಿಂದವ |
ನಾಯುಮುಗಿವೊಲೆರಗಿದ | ||473||

ಕೆರಳಿಕೆಂಗಿಡಿ ಕಾರುತ್ತ ಬಹಗಿರಿ |
ತರಿದುಬಹುಶರ ಸುರಿದುಮಿಗೆ ಜ |
ಜ್ಝರಿತಮಾಡಿದ ನಿನಜನ | ||474||

ಒಡನೆರಕ್ಕಸ ಹಾಯ್ದು ಮುಂದಲೆಯೊತ್ತಿ |
ಪಿಡಿದುಖಡುಗವಝಮ್ಮೆ ಕೊರಳಿಗೆ |
ನುಡಿದ ಜಾಂಬವಜಾಣನು | ||475||

ರಾಗ ಮಧುಮಾಧವಿ ಅಷ್ಟತಾಳ

ಖರಸೂನು ಕೇಳೆನ್ನ ಮಾತನೀನಿಂದು |
ತರಣಿಜನೇತರಸಹಸಿಗನೆಂದು ||
ತರಿವೆಹೆಬ್ಬುಲಿಯ ಮೇಲುರೆಕೋಪ ತಳೆದು |
ಕುರಿಯಕೊಂದನ ಗಾದೆ ಮಾಡದಿರರಿದು | ||476||

ಕಡುಪರಾಕ್ರಮಶಾಲಿಯಾಗಿನೀನಬಲ |
ಬಡವನಚರಮೂರ್ಛೆಗೈದನ ಕೊರಳ ||
ಕಡಿವುದುನೀತಿಯೆ ದುರುಳತನಗಳ |
ಬಿಡು ಕೇಳುಪೇಳುವ ವಿಹಿತ ಕಾರ್ಯಗಳ | ||477||

ಸಂಗರ ಶೂರನು ರಾಮನೆಂಬರಸು |
ಹಿಂಗದೆ ನಿಮ್ಮವಂಶಾಂತಕನೆಣಿಸು ||
ತುಂಗವಿಕ್ರಮವ ತೋರವನೊಳು ಸೆಣಸು |
ಮಂಗನಕೊಲುವುದಿದಾವ ಶಾಭಾಸು | ||478||

ಭಾಮಿನಿ

ಏನೆಲವೊ ಮುದಿಕೋತಿನೀತಿ ವಿ |
ಧಾನ ತಾನರಿಯದನೆ ಪೋಗೆಂ |
ದಾನಿ ಶಾಚರಖಡುಗಮಂ ಝಳಪಿಸಿದಡನಿತರೊಳು ||
ಏನುಭಕ್ತಾಧೀನರೋ ರಘು |
ಸೂನುಲಕ್ಷಣರುಗಳು ಜ್ಯೇಷ್ಠನ |
ತಾನುಳಿದುಬರುತಿತ್ತ ನೋಡಿದನದರಸೌಮಿತ್ರ  | ||479||

ಕಂದ

ಎಸುಗೆಯನೋಡಿದುದಿಲ್ಲಾ |
ಗಸಿಯಿಕ್ಕಡಿಯಿಂದಭ್ರದಿಹೊಳಕಿದುದಾಗಳ್ |
ಪೊಸಸುಮಮಳೆಯಂಮಿಗೆಸುಮ |
ನಸರುಂ ಲಕ್ಷ್ಮಣನಂಗದಿಸುರಿಯಲ್ಕಾಗಳ್ ||480||

ರಾಗ ದೇಸಿ ಅಷ್ಟತಾಳ

ಏನಯ್ಯ | ಖೂಳ | ಏನಯ್ಯ    || ಪಲ್ಲವಿ ||
ಏನಯ್ಯ ಖೂಳ ಸಂಗರದಿಕೈಸೋತ |
ವಾನರವರನ ಕೊಲ್ಲುವುದುದುರ್ನೀತ   || ಅ.ಪ ||

ಇನಿಬರಪ್ರಾಣಕ್ಕೆ ಹೊಣೆನಾನಾಗಿರುತ |
ಮುನಿದುಕತಾಂತ ಬಂದರು ಕೊಲ್ವೆನೆನುತ ||
ಕೊನೆಸೇರದೈಯಿಷ್ಟನಿಲುಧುರಕೆಂದು |
ಘನಶರವ್ರಾತದಿಮುಸುಕಿದ ನಂದು | ||481||

ಬರುವಶರಂಗಳ ತರಿದುದಾನವನು |
ಉರಿ ಮಸಗುತಲಕ್ಷುಮಣಗುಸಿರಿದನು ||
ಧಿರುರೆಸಮರ್ಥನೆ ನರಗುರಿನೀನು |
ಬರಿದೇಕೆ ಕೆಡುವೆ ಸಾರೆನುತೆಚ್ಚಡದನು | ||482||

ಬಗೆವನೆಶೂರಪರಾಕ್ರಮಶಾಲಿ |
ಬಗೆಯಾದಡಿದಕೊನಿಲ್ಲೆನುತಲಿ ಪೇಳಿ |
ತೆಗೆದೆಚ್ಚಡಿರದೆ ಲಕ್ಷ್ಮಣನ ಶರಾಳಿ |
ಮುಗಿಸಿತು ಖಳನೇರ್ದರಥತುರಗಾಳಿ ||483||

ಕದನಪ್ರಚಂಡನು ನರನಾದಡೆಂದು |
ಬದಲೊಂದುರಥವೇರಿಬರೆ ಖಳಮುಂದು ||
ಅದಕೊ ರಾಘವನಿನ್ನ ಮತ್ಯುಹೋಗೆಂದು |
ಮುದದಿಂದಲೆಚ್ಚಡಾತನು ಸಹಿ ತಂದು | ||484||

ಭಾಮಿನಿ

ತೇರುಶತಬಿಲ್ಲಂತರಕೆಹಿಂ |
ಜಾರಲಾರಿಪು ಸೈನ್ಯದಲಿರಣ |
ಮಾರಿಯಂತೈತಂದು ಹೊಕ್ಕನು ವೀರಸೌಮಿತ್ರ ||
ಕ್ರೂರಖಳನಾರ್ಭಟಿಸಿಧನುಝೇಂ |
ಕಾರವಂ ಗೈದಬ್ಬರದಿನಿಜ |
ಸಾರಥಿಯೊಳಿಂತೆಂದ ಘುಡುಘುಡಿಸುತ್ತಗಜರುತ್ತ | ||485||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭಳಿರೆ ಸಾರಥಿಕೇಳು ರಾಮನ |
ಬಳಿಗೆ ಬಿಡುರಥವನುವಲೀ ಮುಖ |
ರೊಳಗೆ ನಾಬಿಲುದುಡುಕೆ ನಲ್ಲೆ | ತಳುವದಿಂದು | ||486||

ಕಲಹರಾಮನ ಕೂಡೆಗೆಲವಿನ |
ಬಲುಹುರಾಮನಕೂಡೆ ತಂದೆಯ |
ಕೊಲೆಗೆ ಕೊಲೆಯನುಗೊಂಬೆನೆನಲಿಳೆ | ಯಲುಗುವಂತೆ | ||487||

ತುರಗವನುಚಪ್ಪರಿಸಿ ಸಾರಥಿ |
ಹರಿಸಿದನುಹೊಂದೇರನಿತ್ತಲು |
ತರಣಿಕುಲರಾಜೇಂದ್ರನಹಿತನ | ಬರವಕಂಡು | ||488||

ವಾರ್ಧಕ

ಕಂಡಾಕ್ಷಣಂ ರಘೂದ್ವಹನ ಮುಖಕೆಂಪೇರೆ |
ಕೆಂಡದಂತರಳ್ದ ವಕ್ಷಿಗಳು ರೋಮಾಳಿಹುರಿ |
ಗೊಂಡುದುಸಿರೊಳು ವಿಸ್ಪುಲಿಂಗಮೋಸರಿ ಸೆರಿಪು ಗಂಡಭೇರುಂಡ ಖಂಡ ||
ಖಂಡಪರಶುವಿನ ಕೋದಂಡಖಂಡಂ ಕೋಪ |
ಗೊಂಡುಬಲು ಝೇಂಕರಿಸೆಸಿಂಜಿನಿಯರವ ಕಮಲ |
ಜಾಂಡ ಬಿರಿವಂತಾಗಲನ್ನೆಗಂ ಮಕರಾಕ್ಷಕಂಡೆಂದ ಖಾತಿಯಿಂದ | ||489||

ಭಾಮಿನಿ

ಈತನೇಮತ್ಪಿತನ ಕೊಂದವ |
ಸೂತಕೇಳ್ ಹಗೆಯೆಂದು ಶರಸಂ |
ಘಾತದಿಂ ಮುಸುಕಿದರೆ ಕತ್ತರಿಸುತ್ತಕಿಡಿಯಿಡುತ |
ಭೂತನಾಥನ ವೋಲು ರಣನಿ |
ರ್ಭೀತರಾಘವದೇವನಿಂದಿರ |
ಲಾತಭೋರ್ಗುಡಿಸುತ್ತ ಮೂದಲಿಸುತ್ತಲಿಂತೆಂದ | ||490||

ರಾಗ ಶಂಕರಾಭರಣ ಮಟ್ಟೆತಾಳ

ನೀನೆ ರಾಮನೆಂಬಮನುಜ |
ಹೀನರಾಜ್ಯ ಬಿಟ್ಟು ಘೋರ |
ಕಾನನಕ್ಕೆ ಬಂದುಕಾಂತೆ | ತಾನೆಕಳೆದವ | ||491||

ಏನೆಲೊ ರಕ್ಕಸಕುನ್ನಿ |
ಮಾನಿನಿಯ ನೀ ಗಾಡಿದಲ್ಲ |
ದಾನವರ ಕುಲಕೆ ಮತ್ಯು | ತಾನಟ್ಟಿದವ | ||492||

ಬಿಡುಬಿಡದನು ಕೇಳೊತನ್ನ |
ಪಡೆದಪಿತನಕೊಂದ ಗರ್ವ |
ಮಡಿದಡಾತನೆಡೆಗೆ ನಿನ್ನ | ನಡೆಸದಿರೆನೆಂದ ||493||

ದಡಿಗಕೇಳ್ ಲೋಕದಿತಾತ |
ನೆಡೆಗೆ ಮಕ್ಕಳ್ ಪೋಪನೀತಿ |
ದಢವಿದಲ್ಪಬಗುಳಿ ಪ್ರಾಣ | ಗೊಡದಿರೀಗೆಂದ | ||494||

ಧಿರುರೆನೀತಿಮರುಳನೀನು |
ನಿರಪರಾಧಿ ವಾಲಿಯನ್ನು |
ತರಿದುದ್ಯಾಕೆಯಲ್ಪರಿಂಗೆ | ಗುರುಕಣಾಯೆಂದ | ||495||

ದುರುಳಕೇಳು ವಾಲಿ ತಮ್ಮ |
ನರಸಿಯ ಕೂಡಿದ ಕ್ರೋಧ |
ವರಿತುಕೊಂದೆವಯ್ಯ ಭಂಡ | ರರಿಯರದನೆಂದ | ||496||

ಷಂಡನೀನನ್ಯರುತಾನೆ |
ಕೊಂಡುಪೋದ ನಾರಿಗಾಗಿ |
ದಂಡುಕೂಡಿ ಬಂದುದಿಂದು | ಭಂಡಾಟವಲ್ಲೆ | ||497||

ಪುಂಡರೀಕನೇತ್ರೆಗಾಗಿ |
ಯಂಡಲೆದುಬಂದುದಲ್ಲ |
ದಂಡಿತಾನರಣ್ಯಗಾಗಿ | ದಂಡುತಂದೆವೈ | ||498||

ಭಳಿರೆಲೇಸಾಯ್ತಯ್ಯ ಮಾತಿ |
ನೊಳಗೆ ಜಾಣನಾದಡೆನ್ನ |
ಹಿಳುಕನೋಡೆನುತ್ತಲಸ್ತ್ರ | ತುಳುಕಿದಡವನು | ||499||

ನಳಿನ ನೇತ್ರನದರ ಖಂಡ |
ಗೊಳಿಸಿ ಪೇಳ್ದನಿನ್ನೇನುಂಟು |
ಕಳುಹುನಿನ್ನಸ್ತ್ರಗಳೆಂದು | ಘಳಿಲನೆಚ್ಚನು | ||500||

ಭಾಮಿನಿ

ಎಸುಗೆಯನು ಖಂಡಿಸುತಖರಸುತ |
ನೆಸೆದ ಧಾರಿಣಿಯೆಲ್ಲಿ ಮೇಣಾ |
ಗಸವದೆಲ್ಲಿಯೆನಲ್ಕೆಶರಮಯವಾಗೆ ಸರ್ವತ್ರ ||
ಮುಸುಕುವರಿಖಗಸಮಿತಿಯನು ತುಂ |
ಡಿಸುವ ನೀರಘನಾಥ ನಿಂತಾ |
ಲಸಿಕೆ ದೋರದೆಸೆಣಸಿದರು ಮಿಗೆ ಜಾವಪರಿಯಂತ | ||501||

ರಾಗ ಭೈರವಿ ಅಷ್ಟತಾಳ

ಪೂತು ಮಝರೆ ರಾಘವ | ಸಂಗರದಿ ವಿ |
ಖ್ಯಾತ ಕೇಳ್ ಕಮಲಭವ ||
ಭೂತೇಶಾದಿಗಳೆನ್ನ | ಘಾತಿಗಂಜುವರಿದ |
ನೀತಿಳಿಯದೆ ಕೆಟ್ಟೆಲಾ |   ||502||

ಅಸುರಾಗ್ರಣಿಯೆ ಕೇಳು | ನೀನೆಂದ ಪ |
ದ್ಮಾಸನಾದ್ಯಮರರೊಳು ||

ನಾಸೇರಿದವನೆಂದು ಬಗೆವೆ ನಿನ್ನಯತಲೆ |
ಮೀಸಲೆನ್ನಯ ಶರಕೆ |  ||503||

ಹಾರದಿರೆಲವೊರಾಮ | ಬಲ್ಲೆನುಬಡ |
ಹಾರುವನನುನಿಸ್ಸೀಮ ||
ದಾರಿಯೊಳ್ ಗೆದ್ದು ಮಾರೀಚಾದಿಗಳ ಗೆದ್ದ |
ಶೂರವಿಕ್ರಮಸಾಕೆಲಾ |  ||504||

ಮುಂಗಯ್ಯ ಸರಪಣಿಗೆ | ನೋಡಲುಪರ್ದ |
ಣಂಗಳೇ ಕೈಯೊಮ್ಮೆಗೆ ||
ಅಂಗದ ಹನುಮಪತಂಗ ಜಾಧ್ಯರಗೆದ್ದ |
ತುಂಗವಿಕ್ರಮನೀನಲ್ಲೆ |   ||505||

ಮೆಚ್ಚಿದೆಭಾಷಿತಕೆ | ಸಂಗರಮದ |
ಹೆಚ್ಚಿನೀಕುಣಿಯಲೇಕೆ ||
ಹೆಚ್ಚಿನ ಭಟನಪ್ಪೆನೆಚ್ಚಿಕೊಳ್ಳೆನುತಲಿ |
ಕಿಚ್ಚಿನಶರವೆಚ್ಚನು |  ||506||

ರಾಗ ಅಖಂಡಮಾರವಿ ಏಕತಾಳ

ಖಗಕುಲಜನೆಕೇ | ಳಘಟಿತಶಿಖಿಶರ |
ಭುಗುಭುಗಿಸುತಲಾ | ರಘುಜನಮುಸುಕಲು |
ವಿಗಡಪರಾಕ್ರಮ | ಬಗೆವನೆವಾರುಣ |
ಖಗವಾರ್ದೆಸುತದ | ಮುಗಿಸಿದುಮೆರೆದ || ಏನೆನೆಂಬೆ | ||507||

ಗರಳಮಯದೊಳಿಳೆ | ತುರುಗಿಪುದೆನಲ |
ಬ್ಬರಿಸುತಲಹಿಶರ | ಭರದಿಂದೆಚ್ಚಡೆ
ಗರುಡಕಳಂಬದಿ | ತರಿದನು ರಘುಭೂ |
ವರಹುಂಕರಿಸುತ | ಜರೆದಡೆ ಖಳನ | ಏನನೆಂಬೆ | ||508||

ರಾಗ ಶಂಕರಾಭರಣ ಮಟ್ಟೆತಾಳ

ಕೆರಳಿಬಳಿಕ ಯಾತುಧಾನ |
ಒರೆದನೆಲವೊ ರಘುಜ ಎರಡು |
ಶರವಗೆಲಿದೆಯೆಂದು ಹಿಗ್ಗ | ದಿರು ಕೇಳಿದರನು ||
ತರಿವಡುಳ್ಳಡಿದಕೊಯೆಂದು |
ದುರುಳನಧಿಕ ಕೋಪದಿಂದ |
ನಿಋತಿಮೇಘ ತಿಮಿರವೆಂಬ | ಶರಗಳೆಸೆದನು |  ||509||

ದುರುಳಕೇಳುಧುರದಿ ಹಿಗ್ಗಿ |
ಮೆರೆವರಲ್ಲ ನಾವು ನೀವೇ |
ಕುರಿಗಳಂತೆ ಕೂಗಿಯೊಮ್ಮೆ | ಹರಿಗಳಂದದಿ ||
ಮೊರೆದು ಕಡೆಗೆ ಸಾವಿರೆಂದು |
ಭರದಿಬರುವ ಶರವಗೆಲಿದ |
ವರಕಪರ್ದಿ ವಾಯುಸೂರ್ಯ | ಸರಳೊಳುಗ್ರದಿ |  ||510||

ಪೂತುರೇನಪಾಲಭಳಿರೆ |
ಖ್ಯಾತನಹೆಯಯಿದ ಕೊಯಮುನಾ |
ಭ್ರಾತಶರವ ತೊಡುವೆ ಹರಣ | ವಾತುನಿಲ್ಲೆನ್ನ ||
ತಾತನನ್ನುಗೆಲಿದ ಹಗೆಯ |
ರೀತಿಲೇಸೆನುತ್ತಲೆಚ್ಚ |
ಭೀತಿಗೊಳಲಖಿಳ್ಳಬಲಗ | ಳಾತತುಕ್ಷಣ |  ||511||

ಚಂಡರಘುಕುಲೇಂದ್ರನದರ |
ರುಂಡಮಾಲಮಂತ್ರಶರದಿ |
ತುಂಡುಗೈದು ಪೇಳ್ದ ಮಗುಳು | ದ್ದಂಡ ಬಲನೊಳು ||
ಷಂಡಕೇಳು ನಾವು ಮನುಜ |

ತಂಡವಲ್ಪರೆಮ್ಮಸತ್ವ |
ಕಂಡುಕೊಳ್ಳೆನ್ನುತ್ತ ರೋಷ | ಗೊಂಡು ಧುರದೊಳು | ||512||