ಭಾರತಾಹವ ತೀರಿತಿಂದಿಗೆ |
ವೀರನಶ್ವತ್ಥಾಮನೈತಹ |
ಮಾರಮಥನನಿಗರಿದು ಜಯಿಸಲು ರಣದ ಪಂಡಿತನಾ ||
ಮೀರಲಾರಿಗೆ ಸಾಧ್ಯ ವಿಧಿಯನು |
ಬೇರೆ ಗತಿಯನು ಕಾಣೆನೆಂದಾ |
ಮಾರಜನಕನು ಜರುವನಾಗತಬಾಧೆಯರಿತೊಡನೇ  || ೨೯೦ ||

ಕಂದ

ಕಿರಿಯರ್ ಕೃಷ್ಣೆಯ ತನುಜಾ |
ತರ ಕಾಪಿಡುತಂಕರಿಪುರಕತಿ ಜತನದೊಳಂ||
ಹರಿನೀಲಾಚಲ ಕೈವರ |
ಕರೆದೊಯ್ಯಲ್ ದ್ರೌಪದಿ ಸಹಿತವರಂ ಜವದೊಳ್  || ೨೯೧ ||

ವಚನ || ನೀಲಾಂಗನ ಮತದಿಂ, ನೀಲಾಚಲಕೈದಲ್ಪಾಂಡವರನ್ನೆಗಂ ಗಾಂಗೇಯನರುಪೆ ಕೌರವೇಶ್ವರನಿರ್ದೆಡೆಯನಶ್ವತ್ಥಾಮನರಿದಾಗಳ್ ||

ಕಂದ

ಕೊರಲಕರೆ ಶಿರದ ಪೆರೆನೊಸ |
ಲುರಿಗಣ್ ಧೃತಚಾಪ ಹಸ್ತ ಶಾಕ್ವರ ಚಿಹ್ನಂ ||
ವಿರಚಿಸೆ ಕೃಪ ಕೃತವರ್ಮ |
ರ್ಬೆರಸಾಗಳ್ಮುಳಿದು ಬಂದನಶ್ವತ್ಥಾಮಂ  || ೨೯೨ ||

[ಧರ್ಮರಾಯಾದಿಗಳು ಭೀಮಸೇನನ ಗದಾದಂಡಕ್ಕೆ ಪುಷ್ಪ, ಗಂಧ, ಅಕ್ಷತೆ, ಫಲ, ತಾಂಬೂಲ, ಧೂಪ, ದೀಪ, ನೈವೇದ್ಯಾದಿ ದ್ರವ್ಯಗಳಿಂದ ಸಾತ್ವಿಕ ಪೂಜೆಯನ್ನು ಮಾಡಿ ತೀರಿಸಿದ ಭೀಮನು ಕಠೋರ ತಂತ್ರೋಕ ಕ್ರಮದಂತೆ ಗದಾದಂಡವನ್ನರ್ಚಿಸುವನು ಕಠೋರ ತಂತ್ರದಂತೆ ಗದಾರ್ಚನೆಗೆ ಬೇಕಿದ್ದ ದ್ರವ್ಯಗಳು ಮತ್ತು ಅರ್ಚನಾ ಕ್ರಮ : ಶತ್ರುಗಳ ಮಾಂಸವೇ ನೈವೇದ್ಯ, ರಕ್ತವೇ ಮಧು, ವೈರಿಗಳ ತಲೆಗಳೆಂಬುದೇ ಕಮಲವುಶತ್ರುಗಳ ಕಠೋರವಾದ ದಂತಕುಲಗಳೇ ಮೊದಲಾದ, ರೌದ್ರಾರ್ಚನಾ ದ್ರವ್ಯಗಳಿಂದ ಭೀಮನು ಗದಾದಂಡವನ್ನರ್ಚಿಸುವನು. ಇದೇ ಕಠೋರ ತಂತ್ರೋಕ್ತವಾದ ತಾಮಸ ಪೂಜೆಯು.]