ರಾಗ ಕಾಂಭೋಜಿ ಝಂಪೆತಾಳ
ಎನುತ ತೆಗೆದೆಚ್ಚನು ಸುಧನ್ವನರ್ಜುನನ ರಥ |
ರಣದಿ ಹಿನ್ನೆಲೆಗೆ ಜಾರಿದುದು ||
ದನುಜಾರಿ ಕಂಡು ರಥವನು ಸೈರಿಸುತಲರ್ಜು |
ನನ ಮೊಗವ ನೋಡುತಿಂತೆಂದ || ||೩೭೩||
ಮತವರಿಯದುಭ್ರಮಿಸಿ ನುಡಿದ ಭಾಷೆಯು ಜಯ |
ದ್ರಥನ ಕಥೆ ಬಂದೊದಗಿತಲ್ಲ
ಅತಿ ಸತ್ಯಸಂಧ ಸೂನೃತ ಸಾಹಸಿಗನೀತ |
ಮಥಿಸುವಡೆ ದಾರಿಗಳವಲ್ಲ ||೩೭೪||
ಪಿತನಾಜ್ಞೆಯನು ಮೀರದೆನ್ನನೇಕೋದೃಢದಿ |
ಸತತ ಧ್ಯಾನಿಸುವ ಸದ್ವ್ರತಿಯ ||
ಪೃಥಿವಿಲೇಕಪತ್ನೀವ್ರತನು ಕೊಲಲರಿದಿವನ |
ತ್ರಿತಯಮೂರ್ತಿಗಳು ಮುನಿದರೆಯು ||೩೭೫||
ವೀರವೈಷ್ಣವನಿವನು ನಿನ್ನಿಂದಲೆನಗೀತ |
ಸಾರಸದ್ಭಕ್ತನಾಗಿಹನು ||
ಮೇರೆದಪ್ಪಿದೆ ನೀನು ಕೆಡಿಸಿದೆಯಕಟವಿನ್ನು |
ಸೈರಿಸಲದೆಂತು ಕೇಳ್ ನಾನು ||೩೭೬||
ಅನ್ನಚಿಂತೆಯನುಳಿದು ಎನ್ನ ಭಜಿಸುವ ಭಕ್ತ |
ರನ್ನು ಬಿಟ್ಟಿರುವುದಾನೆಂತು ||
ನಿನ್ನನುಳುಹುವ ಬಿರುದು ಮುನ್ನವೇ ತಾಳ್ದಿರುವೆ |
ಇನ್ನೇನ ಮಾಡಲಾನಿಂತು ||೩೭೭||
ವಚನ || ಇಂತೆಂದು ಶ್ರೀಕೃಷ್ಣನು ಅನುತಪಿಸುತಾಲೋಚನೆಗೆಯ್ಯುತಿರಲಾ ಸಮಯದೊಳ್ ಸುಧನ್ವನು ಏನೆಂದನು ಎಂದರೆ –
ರಾಗ ಸೌರಾಷ್ಟ್ರ ರೂಪಕತಾಳ
ತಿಳಿದೆನು ನಿನ್ನಯ ಚಿತ್ತದು | ಮ್ಮಳಿಕೆಯ ನಿಜದೊಲವ |
ನ್ನಳಿವುದು ಕಾಯವು ಜಗದೊಳ | ದುಳಿವುವು ಕೀರ್ತಿಗಳು ||೩೭೮||
ಶ್ರೀಲೋಲನೆ ಕೇಳ್ ಪಾಂಡವ | ಪಾಲಕನೆಂಬೀ ಬಿರುದನು |
ಮೂರ್ಲೋಕದಿ ಪಡೆದಿಹೆ ಇ | ನ್ನಾಲೋಚಿಸಲೇಕೆ ||೩೭೯||
ಮೇಳದಿ ತವ ಬಾಹುಜರಾವ್ | ಕಾಳಗದಲಿ ಹಿಮ್ಮೆಟ್ಟದೆ |
ಕಾಲದಿ ತನುವನು ಒಪ್ಪಿಸಿ | ಸಾಲೋಕ್ಯವ ಪಡೆವೆ ||೩೮೦||
ಅಳುಕುವೆನೇ ನೋಡೆನುತಲಿ | ಸೆಳೆದೆಚ್ಚನು ಶರವೊಂದನು |
ಹೊಳೆಯುತ ನಡೆದು ವರೂಥವ | ಕೊಳುತೆರಗಿತೇನೆಂಬೆ ||೩೮೧||
ಥಳಥಳಿಸುವ ಮಣಿರಥವದು | ತೊಲಗುತ ತಿರುಗುವ ಬುಗುರಿಯ |
ಕುಲಗುರುವಂದದಿ ಗಾಲಿಗಳ್ | ನೆಲೆಗೊಳ್ಳದೆ ನಿಜಕೆ ||೩೮೨||
ತುರಗಂಗಳು ಬೆಂಡಾದುವು | ಉರುಳುತ ಗಾಲಿಗಳದ್ದವು |
ತರಹರಿಸದೆ ಸಿಂಧದಿ ಪಲ್ | ಕಿರಿದನು ಹನುಮಂತ ||೩೮೩||
ಹರಿ ಫಲುಗುಣರಿಗೆ ಭ್ರಮಣೆಯು | ಶಿರಕಡರಿತು ಕೃಷ್ಣನು ತರ |
ಹರಿಸುತಲೆ ಸುಧನ್ವನ ಭಾ | ಪುರೆ ಭಳಿ ಭಳಿರೆಂದ ||೩೮೪||
ರಾಗ ಶಂಕರಾಭರಣ ಮಟ್ಟೆತಾಳ
ಅರಸ ಕೇಳರ್ಜುನನು ರೋಷ | ಭರಿತನಾಗಿ ಶರವ ಪೂಡು |
ತಿರಲು ಕೃಷ್ಣ ಮುನ್ನ ಗೋವರ್ಧನಾದ್ರಿಯ ||
ಧರಿಸಿ ಗೋಕುಲವನು ಕಾಯ್ದ | ಭರಿತ ಪುಣ್ಯವೀಯೆ ಪಾರ್ಥ |
ಭರದಿ ಸೆಳೆದು ಬಿಟ್ಟನಾ ಸುಧನ್ವನಿದಿರಿಗೆ ||೩೮೫||
ಇತ್ತೆ ದೇವ ನಿನ್ನ ಪುಣ್ಯ | ಸತ್ತ್ವವೀಗಲೆಸೆವ ಶರವ |
ಕತ್ತರಿಸದಿರಲ್ಕೆ ನಿನ್ನ ಭಕ್ತನಲ್ಲೆಂದು ||
ಕತ್ತರಿಸಿದ ಕಣೆಯ ಕಾ | ಣುತ್ತಲಿವನ ಬಲದಿ ಕಹಳೆ |
ಮೊತ್ತ ಸೂಳವಿಸಿದವಾಗ ಲರ್ತಿಯಿಂದಲಿ ||೩೮೬||
ಬಳಿಕಲೊಂದು ಶರವ ಪೂಡ | ಲೊಲಿದು ಕೃಷ್ಣಾವತಾರ |
ದೊಳಗೆ ಗಳಿಸಿದತುಳ ಪುಣ್ಯ ಬಲುಹನೀಯಲು ||
ಸೆಳೆದು ಬಿಟ್ಟನಾಗ ಪಾರ್ಥ | ಕಲಿಸುಧನ್ವ ಕಾಣುತದನು |
ನಳಿನನೇತ್ರನೊಡನೆ ಪೇಳ್ದ ಚಳಕದಿಂದಲಿ
[ಕತ್ತರಿಸಿದ | ಹಿಳುಕ ಹಿಳುಕಿನಿಂದಲಾಗ ಕಳಕಳಿಸುತಲೆ] ||೩೮೭||
ವಾರ್ಧಕ
ಆಗಲತಿ ಕೋಪದಿಂದಾಲಿಗಳು ಕೆಂಪಡರ |
ಲೀಗಲರ್ಜುನನ ಬಾಣಕೆ ನಿನ್ನ ಪುಣ್ಯಮಂ |
ನೀಗಿದೆಯೆಲಾ ದೇವ ನೋಡು ಬಹ ದಿವ್ಯಾಸ್ತ್ರಮಂ ಕತ್ತರಿಸದಿರ್ದಡೆ ||
ಭೋಗದೊಳರುಂಧತಿಯ ಕೂಡಿಹ ವಸಿಷ್ಠನಂ |
ಪೋಗಿ ಕೊಂದವನ ದುರ್ಗತಿಗೆ ತಾನಿಳಿವೆನೆನು |
ತಾಗಸದೊಳರ್ಕನಂತಯ್ತಪ್ಪ ಸರಳಂ ಸುಧನ್ವನಿಕ್ಕಡಿಗೆಯ್ದನು ||೩೮೮||
ರಾಗ ಶಂಕರಾಭರಣ ಮಟ್ಟೆತಾಳ
ಸಂದುದೆರಡು ಶರವು ಉಳಿದು | ದೊಂದು ಶರದಿ ರಿಪುವ ಕೊಲುವೆ |
ನೆಂದು ಪಾರ್ಥ ಕಣೆಯ ಪೊಡಲಂದು ಕೃಷ್ಣನು ||
ಹಿಂದೆ ರಾಮಾವತಾರ | ದಿಂದ ಧರೆಯ ಪೊರೆದ ಪುಣ್ಯ |
ವೃಂದದತುಳ ಸತ್ತ್ವ ಶರಕೆ ಹೊಂದಿಸಿ ತಾನು ||೩೮೯||
ಬಳಿಕ ಶರಕೆ ತ್ರೈಮೂರ್ತಿಗಳ | ನಿಲಿಸುತಾವಾಹಿಸುತ ಸತ್ತ್ವ |
ಗೊಳಿಸುತಿರಲರ್ಜುನನ್ನು ಬಾಹುಗಳ ಚಪ್ಪರಿಸಲು ||
ಕಲಿಸುಧನ್ವ ಕಾಣುತಾಗ | ಕಳವಳಿಸುತ ನಗುತ ನುಡಿದ |
ನೆಲೆ ಮುರಾರಿ ನಿನ್ನ ಕರುಣೆಯಳತೆಯೊಳ್ಳಿತು ||೩೯೦||
ರಾಗ ಭೈರವಿ ಏಕತಾಳ
ಖಂಡವಿಲ್ಲದ ಪುಣ್ಯವನು | ಸೂರೆ | ಗೊಂಡವ ನಾನೋ ನರನೋ ||
ಕೊಂಡಾಡದಿರೈ ಬರಿದೆ | ಉ | ದ್ದಂಡ ಶರವ ಬಿಡಿಸಿರದೆ ||೩೯೧||
ಅಂಬಿದ ಕಡಿಯದಿರೆನ್ನ | ಸುತ | ನೆಂಬಳೆ ಮಾತೆಯು ತನ್ನ ||
ಕುಂಭಿನಿಯೊಳು ಸತಿ ಗಂಡ | ನೆಂದು | ನಂಬುವಳೇನು ಪ್ರಚಂಡ ||೩೯೨||
ತನುಜನೆ ತಾತಗೆ ನಾನು | ಕೇಳ್ | ಘನದೊಂದು ಪ್ರತಿಜ್ಞೆಯನು ||
ವಿನಯದಿ ಕಾಶಿಯೊಳ್ ಬಂದು | ವಿ | ಪ್ರನುಸುರಗಂಗೆಯೊಳ್ ಮಿಂದು ||೩೯೩||
ಕ್ಷೇತ್ರೋಪವಾಸದೊಳಿರ್ದು | ಶಿವ | ರಾತ್ರಿಯ ದಿನದೊಳು ನಿಂದು ||
ಶಾಸ್ತ್ರವಿಧಾನವನರಿತು | ತ್ರೈ | ನೇತ್ರ ವಿಶ್ವೇಶನ ಕುರಿತು ||೩೯೪||
ಬಿಡದರ್ಚಿಸುವನನೆದ್ದು | ತಡೆ | ದೆಡಗಾಲಿನೊಳುರೆವೊದ್ದು ||
ಕೆಡಹಿದವನ ಗತಿ ಪೊಂದು | ವೆನು | ಕಡಿಯದಿರ್ದಡೆ ಸರಳಿಂದು ||೩೯೫||
ಎನುತಲಿ ಭುಜಗಳ ಹೊಯ್ದು | ನಿಜ | ಧನು ಠಂಕಾರವ ಗೆಯ್ದು |
ಮನದಲಿ ರೋಷವನಾಂತ | ಕನ | ಲ್ದನು ಸುಧನ್ವನು ತಾ ನಿಂತ ||೩೯೬||
ಭಾಮಿನಿ
ಅನಕ ತ್ರೈಮೂರ್ತಿಗಳ ಶಕ್ತಿಯ |
ವಿನುತ ರಾಮಾಯಣದ ಶಕ್ತಿಯ |
ಘನ ಧನುರ್ವೇದದ ಸುಮಂತ್ರದ ಶಕ್ತಿಯಿಂದಾರ್ದು ||
ಅನುಪಮ ಮಹಾಸ್ತ್ರವನು ರೋಷದಿ |
ಕನಲ್ದು ಕಿವಿವರೆಗೆಳೆದನಾ ಕ್ಷಣ |
ವೆನಿತು ಸತ್ತ್ವಾಧಿಕನೊ ಜಗದೊಳಗಾ ಧನಂಜಯನು ||೩೯೭||
ರಾಗ ಶಂಕರಾಭರಣ ಮಟ್ಟೆತಾಳ
ಜಡಿದು ಪಾರ್ಥನೆಸೆವ ಶರವು | ಕಿಡಿಯುಗುಳ್ದು ಬರಲು ಉಭಯ |
ಪಡೆಯುನಡುಗಿತೇನನೆಂಬೆ ಕಡು ಪ್ರತಾಪವ ||
ದೃಢದೊಳಾ ಸುಧನ್ವನೆಸೆದ | ಬಿಡದೆ ಪ್ರತ್ಯಸ್ತ್ರವನು ಬಂದು |
ಕಡಿದುದಾಗ ಬರುವ ಶರವ ನಡುವೆ ಕೀಲಿಸಿ ||೩೯೮||
ಅಂದು ಅತುಳಸತ್ತ್ವದಸ್ತ್ರ | ಹಿಂದಣರ್ಧವಿರದೆ ಧರಣಿ |
ಗಂದು ಉದುರಿದುದ ನಾನೇನೆಂದು ಪೇಳುವೆ ||
ಮುಂದಣರ್ಧವಾ ಸುಧನ್ವ | ಕಂಧರವ ಕತ್ತರಿಸೆ ಹರಿ ಗೋ |
ವಿಂದಯೆನುತ ಶಿರವು ಅಭ್ರಕಂದು ಚಿಗಿದುದು ||೩೯೯||
ಭಾಮಿನಿ
ಜಲಜಲೋಚನ ವಿಷ್ಣು ಲಕ್ಷ್ಮೀ |
ನಿಲಯ ನಾರಾಯಣಯೆನುತ ನಭ |
ದೊಳಗೆ ಹರಿನಾಮಾವಳಿಯನುಚ್ಚರಿಸುತಾ ತಲೆಯು ||
ಪೊಳೆವ ರಾಕೇಂದುವಿನ ಕಾಂತಿಯ |
ಲಿಳಿದುದಿಳೆಗಚ್ಯುತನ ಶ್ರೀ ಪದ |
ನಳಿನದೆಡೆಯಲಿ ಬಿದ್ದುದೆಲೆ ಜನಮೇಜಯ ಕ್ಷಿತಿಪ ||೪೦೦||
ರಾಗ ತುಜಾವಂತು ಝಂಪೆತಾಳ
ಏನೆಂಬೆನಾ ಸುಧನ್ವನ ಪುಣ್ಯಫಲವ |
ಶ್ರೀನಾಥನೆತ್ತಿಕೊಂಡನು ಕರದಿ ಶಿರವ || ಪ ||
ನೋಡಿದನು ಶಿರವ ಮುಂಡಾಡಿದನು ಫಣೆಗೆ ಫಣೆ |
ಜೋಡಿಸಿದನೇನ್ ಸುಕೃತ ಮಾಡಿದನೊ ಜಗದಿ ||
ಕೂಡಲಾತ್ಮಜ್ಯೋತಿ ರೂಢಿಯಲಿ ಬೆಳಗುತ ಸ |
ಗಾಢದಿಂದಯ್ದಿದನು ಪ್ರೌಢ ಸದ್ಗತಿಗೆ ||೪೦೧||
ಭುಜಗಶಯನನು ಕರದಿ ಪಿಡಿದು ಶಿರವನು ಹಂಸ |
ಧ್ವಜನ ಮುಂದಿಡಲಲ್ಲಿ ಬಿದ್ದುದಾ ಇಳೆಗೆ ||
ನಿಜಸುತನ ಶಿರವ ಕಾಣುತ ಮೂರ್ಛಿಸುತಲೆದ್ದು |
ಗಜರುತಲಿ ಗಾಢ ದುಃಖದೊಳಾಳ್ದನವನು ||೪೦೨||
ರಾಗ ನೀಲಾಂಬರಿ ಏಕತಾಳ
ಕಂದಾ ಕಂದಾ ಕಾಮರೂಪ | ಸಿಂಧುಸಮಪ್ರತಾಪ ||
ಇಂದಿದೇನೀ ಪರಿಯೊಳ್ ಧೈರ್ಯ | ಗುಂದಿತೇಕೋ ನಿನಗೆ ||೪೦೩||
ನಿನ್ನ ಬಿಟ್ಟಿನ್ನುಂಟೇನೊ ಮೋ | ಹನ್ನರಾದಾತ್ಮಜರು ||
ಪನ್ನಗಾರಿವಾಹನಗೇನ್ | ಚೆನ್ನಾಗಿ ತೋರಿದುದು ||೪೦೪||
ರಣಕೆ ಸನ್ನಾಹದೊಳಯ್ದಿ | ಕ್ಷಣದೊಳಶ್ವ ಪಿಡಿದು ||
ಅನಕದಿಂದರ್ಜುನನ ಕೂಡೆ | ಸೆಣಸಬೇಕಲ್ಲಯ್ಯ ||೪೦೫||
ಮಗನೇ ನೀನಿಂತಳಿದ ಮೇಲೆ | ಪಗೆಯ ಗೆಲುವುದೆಂತು ||
ಮೊಗವನೆತ್ತಿ ಮಾತನಾಡು | ಮಿಗೆ ಮೌನವೇಕಿನ್ನು ||೪೦೬||
ಸಮರದಲ್ಲಿ ನೀನಿಂದು ವಿ | ಕ್ರಮವ ತೋರ್ದರಿಂದ ||
ಕಮಲನಾಭ ಮುನಿದನೇನೂ | ಸುಮತಿ ಪೇಳೆನ್ನೊಡನೆ ||೪೦೭||
ವಾರ್ಧಕ
ಮೋಹಮುಳ್ಳಡೆ ತಪ್ತತೈಲಪೂರಿತ ಘನ ಕ |
ಟಾಹದೊಳ್ ಕೆಡಪಿಸುವನೇ ತಂದೆ ತನಯನಂ |
ಬಾಹಿರಂಗದ ಶೋಕಮೆಂದು ಜರೆಯದೆ ಲೋಕಮೀಗ ಹಲುಬಲ್ ತನ್ನನು ||
ದ್ರೋಹಮಂ ಮಾಡಿದೆಂ ಎಂದೆನ್ನ ಮೇಲೆ ಮುಳಿ |
ದಾಹವದೊಳಳಿದೈ ಸುಧನ್ವ ಕಾಯ್ದೆಣ್ಣೆಯೊಳ್ |
ದೇಹಮಂ ಕಾಯ್ದ ಕೃಷ್ಣಂ ಕಾದಲಹಿತನೇಕಾದನೈ ನಿನಗೆಂದನು ||೪೦೮||
ರಾಗ ಆನಂದಭೈರವಿ ರೂಪಕತಾಳ
ಯಾತಕೆ ಮಡಿದೈ ಎಲೆ ರಣ | ಖ್ಯಾತ ಸುಧನ್ವನೆ ನಿನಗಿ |
ನ್ನ್ಯಾತಕೆ ಕೊಂದನು ನರನೆಂ | ಬಾತನು ಪೇಳಣುಗ || ಪ ||
ಅಣ್ಣನು ಕದನವ ಜಯಿಸಿ ಮು | ಕ್ಕಣ್ಣನಂದದಿ ಬಹನೆನುತಲಿ |
ಬಣ್ಣದ ಸೊಡರ್ ಗೊಂಡನುಜೆಯಂ | ಮಿಣ್ಣನೆ ಬಹಳಲ್ಲ ||
ಹುಣ್ಣಿಮೆ ಶಶಿಯಾಕಾರದೊ | ಳೆಣ್ಣುವ ವದನದ ನಿನ್ನಯ |
ಪುಣ್ಯ ಶ್ರೀಯೈತರುವಳು | ಕಣ್ಣಿಲಿ ನೀ ನೋಡು ||೪೦೯||
ನಂದನನೈತಹನೆಂಬಾ | ನಂದದೊಳಾ ತವ ಮಾತೆಯು |
ಪೊಂದೊಡವೆಗಳ್ಕೈ ಕೊಂಡತಿ | ಚಂದದೊಳೈತಹಳು ||
ಬಂದಿಹ ಜನನಿಯ ಸಂತಸ | ದಿಂದಲಿ ಮನ್ನಿಸು ಏಳ್ಳೈ |
ಕಂದನೆ ಹಾ ಹಾ ಭೂಮಿಪ | ವೃಂದ ಶಿಖಾಮಣಿಯೆ ||೪೧೦||
ಪೆತ್ತವನಲ್ಲವೆ ನಿನಗಾ | ನೆತ್ತಣ ಮುನಿಸಿದುಯೆನ್ನೊಡ |
ನುತ್ತರವಂ ಕೊಡು ಸಾಕಿನಿ | ತುತ್ತಮ ನಿನಗೆನ್ನ ||
ಪತ್ತಿರೆ ಕುಳಿತಾ ಸಮರದ | ಬಿತ್ತರವನು ಪೇಳ್ ಹಂಬಲಿ |
ಸುತ್ತಿಹ ಸೈನಿಕಕಭಯವ | ನಿತ್ತುಪಚರಿಸಿನ್ನು ||೪೧೧||
ಭಾಮಿನಿ
ಇಂತು ಸುತಶೋಕಾಬ್ಧಿಯಲಿ ಭೂ |
ಕಾಂತ ಮುಳುಗಿರಲಿತ್ತಲೀತನ |
ಕಾಂತೆ ಚಂದ್ರಾನನೆಯು ಕೇಳಿದಳಾಗ ವಾರ್ತೆಯನು ||
ಬಂತು ದೆಸೆ ಹಾಯೆಂದು ಮೂರ್ಛೆಯ |
ನಾಂತು ಬೀಳುತ್ತೇಳುತಾ ಸತಿ |
ಚಿಂತೆಯೊಳಗೈತಂದಳಾ ಸಭೆಗೊಡಲ ಹೊಯ್ಕೊಳುತ ||೪೧೨||
ರಾಗ ನೀಲಾಂಬರಿ ಝಂಪೆತಾಳ
ಹಾ ಹಾ ಎನ್ನಯ ಚೆಲ್ವ ಮಗುವೆ | ಸಮರದೊಳು |
ದೇಹವನು ತೊರೆದೆ ಸುಕು | ಮಾರ ಗುಣನಿಧಿಯೆ || ಪ ||
ಎಣ್ಣೆ ಕೊಪ್ಪರಿಗೆಯೊಳು ಬುಧನು | ಹಾಯ್ಕಿಸಲು |
ಪುಣ್ಯನಿಧಿ ಕಾಯ್ದನೆಂಬುದನು | ಕೇಳುತಲಿ |
ತಣ್ಣಗಾಗಿರ್ದೆ ವಿಧಿ | ಎಣ್ಣಿದನೆಯಿದನು ||೪೧೩||
ತಾತನಾಜ್ಞೆಯ ತಾಳ್ದು ರಣಕೆ | ಪೋಗುತಲಿ |
ಚಾತುರಂಗವನೆಲ್ಲ ತೃಣಕೆ | ತಾರದತಿ |
ಖ್ಯಾತಿಯಲಿ ಮೆರೆದದನು | ಘಾತಿಸಿದೆ ಕ್ಷಣಕೆ ||೪೧೪||
ಹಾಳು ಮಾಡಿದ ನಿನ್ನ ಪಿತನು | ಧರಣಿಯೊಳು |
ತಾಳಲಾರಳು ನಿನ್ನ ತರುಣಿ | ಯಿದನೆಲ್ಲ |
ಕೇಳಿದರೆ ತಾನೆಂತು | ಬಾಳುವಳು ಸತಿಯು ||೪೧೫||
ಧುರದೊಳಗೆ ವೈರಿಗಳ ಗೆದ್ದು | ಬಹನೆಂದು |
ಭರವಸದೊಳಿರ್ದೆನಲ್ಲೊ ಮುದ್ದು | ಕಂದಯ್ಯ |
ಬರಿದೆ ಬಳಲಿಸಲೇಡ | ಹರುಷದೋರೆದ್ದು ||೪೧೬||
ಹೆತ್ತೊಡಲು ಉರಿಯುತಿದೆ ಎನ್ನ | ನೀನಗಲಿಯಿ |
ನ್ನೆತ್ತ ಗಮಿಸಿದೆಯೊ ಮೋಹನ್ನ | ಮರೆದಿರಲು |
ಚಿತ್ತದಲಿ ನಿಲದಯ್ಯೊ ಪುತ್ಥಳಿಯ ಚಿನ್ನ ||೪೧೭||
ಕಂದ
ನಾನಾ ಪರಿಯಿಂ ದುಃಖಿಸು |
ತಾ ನಾರಿಯು ಹುಡಿಯೊಳು ಹೊರಳುತ್ತಿರಲಾಗಂ ||
ಭೂನಾಥನ ಸಭೆ ಕಂಪಿಸೆ |
ಮೀನಾಂಕರಗಿಣಿಯೊಲ್ ಪ್ರಭಾವತಿ ಬಂದಳ್ ಭರದಿಂದಂ ||೪೧೮||
ಮಾಲಿನೀವೃತ್ತ
ಧುರದೊಳೆರೆಯನಂದೂ ಧಾತುವಂಗೆಟ್ಟನೆಂದೂ |
ಭರದಿ ತಿಳಿದು ಕಾಂತೇ ಭಿರ್ರನೈತಂದು ಚಿಂತೇ |
ವೆರಸಿ ನೃಪನ ಮುಂದೇ ವಿಶ್ವಮಾಳಾಪದಿಂದೇ |
ಹೊರಳಿದಳು ಹುಡಿಗಳಲ್ಲೀ ಪೇಳ್ದಳಾ ದುಃಖದಲ್ಲೀ ||೪೧೯||
ರಾಗ ಆನಂದನೀಲಾಂಬರಿ ಏಕತಾಳ
ಏನು ಬುದ್ಧಿ ನೆನೆದೆಯಿಂದು | ಕಾಂತ ಕಾಂತ | ಸುಮ್ಮನೆ ಪೋಗಿ |
ಆ ನರನ ಧುರದಿ ಮಡಿದೆ | ಕಾಂತ ಕಾಂತ ||
ಭಾನುಕೋಟಿತೇಜನಾದ | ಕಾಂತ ಕಾಂತ | ಎನ್ನನು ಬಿಟ್ಟು |
ನೀನಿಲ್ಲಿಂದ ಅಗಲಿ ಪೋದೆ | ಕಾಂತ ಕಾಂತ ||೪೨೦||
ಕಾಣದೆ ನೀ ಪಿತನ ನುಡಿಗೆ | ಕಾಂತ ಕಾಂತ | ಯುದ್ಧಕೆ ಪೋಗಿ |
ಪ್ರಾಣವನ್ನು ಹೋಗಾಡಿಸಿದೆ | ಕಾಂತ ಕಾಂತ ||
ಜಾಣರೊಳತ್ಯಧಿಕವಾಗಿ | ಕಾಂತ ಕಾಂತ | ಮೋಹದಿ ಪಂಚ |
ಬಾಣನ ಮೀರ್ದವನಲ್ಲೊ | ಕಾಂತ ಕಾಂತ ||೪೨೧||
ಆವದೈವವಾದರ್ ನಿನ್ನ | ಕಾಂತ ಕಾಂತ | ಬೆನ್ನಿಗೆ ಬಾರ |
ದೀ ವಿಧದೊಳಳಿದೆಯಲ್ಲೊ | ಕಾಂತ ಕಾಂತ ||
ನಾವೆಲ್ಲರಿದ್ದಿಲ್ಲವಾಯ್ತು | ಕಾಂತ ಕಾಂತ | ಎಷ್ಟು ನೀ ಬಳಲಿ |
ಜೀವವನ್ನು ತೊರೆದೆ ಕಾಣೆ | ಕಾಂತ ಕಾಂತ ||೪೨೨||
ಭಾಮಿನಿ
ತರುಣಿ ಕಾಂತನ ಗುಣವ ಪೊಗಳುತ |
ಪರಿಪರಿಯ ದುಃಖದಲಿ ದೇಹದ |
ಸ್ಮರಣೆಯಿಲ್ಲದೆ ಕೂಗುತೊರಲುತಲೆದೆಯಮೇಲುದದ ||
ಸೆರಗನೆಳೆವಂಬಲವ ಬಿಟ್ಟಾ |
ತುರದ ಕ್ಲೇಶದೊಳೈದಿ ಭೂಪನ |
ಕರದೊಳಿರ್ದ ಕರೋಠದೆಡೆಯೊಳು ಬಿದ್ದು ಹಲುಬಿದಳು ||೪೨೩||
ರಾಗ ಸೌರಾಷ್ಟ್ರ ಏಕತಾಳ
ನಲ್ಲನಿನಿತು ಮಾಳ್ಪರೆ | ಎನಗಿಂಥ ಮೋಸ |
ದಲ್ಲಿ ಮುನಿದು ಪೋಪರೆ ||
ಫುಲ್ಲಾಸ್ತ್ರನುಪಟಳಕೆ | ಮೋಹದಿ ರಮಿಸಿ |
ಮೆಲ್ಲನೈದುವ ವೇಳ್ಯಕೆ ||೪೨೪||
ಆ ಗರ್ವದರಿಯ ಜನಿಸಿ | ಬರುವೆನೆಂದನು |
ವಾಗಿಯೆನ್ನನು ನಂಬಿಸಿ ||
ಪೋಗಿರಣಾಗ್ರದೊಳು | ಜೀವವ ವ್ಯರ್ಥ |
ನೀಗಿದೆಯಿಂದಿನೊಳು ||೪೨೫||
ಕಂತುಜನಕನೆ ನೀನು | ಮುನಿದೆಯೊ ಎನ್ನ |
ಕಾಂತನ ಮೇಲೆ ಇನ್ನು ||
ಎಂತು ತಾಳಲಿ ನಾನಿನ್ನು | ಲೋಕದಿ ಮೀರಿ |
ದಂಥ ವೈಧವ್ಯವನ್ನು ||೪೨೬||
ಅಯ್ಯೋ ಈ ವಿಧಿಯಾಯ್ತಲ್ಲ | ಪೂರ್ವದ ಕರ್ಮ |
ಕಯ್ಯಾರೆ ತೋರಿತಲ್ಲ ||
ಬಯ್ಯುವ ದಾರಿಗಿಂದು | ಪ್ರಾಪ್ತಾನುಸಾರ |
ವಯ್ಯನೆ ಸಿಕ್ಕಿತಿಂದು ||೪೨೭||
ಕಂದ
ಇಂತು ಸುಧನ್ವನ ನೆನೆವುತ |
ಕಾಂತೆಯು ಶೋಕಿಸುತಿರೆ ಕಂಡಾ ಸುರಥಂ ||
ಚಿಂತಿಸಿ ಮನದೊಳ್ ಬಳಿಕಾ |
ಕಂತುವಿದಾರಣನೊಲ್ ಗರ್ಜಿಸುತಿಂತೆಂದಂ ||೪೨೮||
ರಾಗ ಸಾಂಗತ್ಯ ರೂಪಕತಾಳ
ತಾತ ಲಾಲಿಸಿ ಕೇಳ್ವುದೆನ್ನ ಬಿನ್ನಪವಗ್ರ |
ಜಾತನು ಸಂಗರದೊಳಗೆ ||
ಯಾತುಧಾನಾರಿಯ ಮುಂದೆ ಭಾಷೆಯ ಸಲಿಸಿ |
ಖ್ಯಾತಿಯ ತಳೆದೈಕ್ಯವಾದ ||೪೨೯||
ಇದಕೆ ನೀವೆಲ್ಲ ಕೋಯೆಂದು ದುಃಖಿಸಲ್ಯಾಕೆ |
ಕದನದೊಳೆನ್ನಾಟೋಪವನು ||
ಒದಗಿ ನೋಡುವುದೆಂದು ಬಿಲ್ಗೊಂಡು ನಿಂತಿರ್ದ |
ಚದುರನೊಳ್ ಕ್ಷಿತಿಪನಿಂತೆಂದ ||೪೩೦||
ಉಂಟು ಕೃಷ್ಣನ ಮುಂದೆ ಭಾಷೆಯ ಪೂರಯ್ಸಿ |
ಬಂಟನಾಗುತ ದೇಹ ತೊರೆದು ||
ವೆಂಟೆಣಿಸುವ ಮುಕ್ತಿರಾಜ್ಯವನಿದಕೆ ನಾ |
ವೆಂಟೆರಡೆಣಿಸುವನಲ್ಲ ||೪೩೧||
ಕೊರಳ ಕತ್ತರಿಸಲಾ ತಲೆಯು ತನ್ನೆಡೆಗಾಗಿ |
ಬರಲೆತ್ತಿ ಪಿಡಿದು ತಕ್ಕಯ್ಸಿ ||
ಮುರಹರನದನೆನ್ನಲ್ಲಿಗೆ ಹಾಕಿದುದಕೆ ನಾ |
ಮರುಗುವೆನೆಂದನಾ ನೃಪತಿ ||೪೩೨||
ವಾರ್ಧಕ
ತಾತ ಚಿತ್ತಯ್ಸಿದರೊಳೇನಹುದು ತಿರುವಿ ಬಿಸು |
ಡೀ ತಲೆಯನಸುರಾಂತಕನ ಚರಣದೆಡೆಗೆ ಸಹ |
ಜಾತನಂ ಕೊಂದಾತನಂ ಕೊಲ್ವೆನೆಂದು ಸುರಥನು ರಥಕ್ಕಡರಿ ಬಳಿಕ ||
ಖಾತಿಯಿಂದಾ ಶಿರವನಾ ಮರಾಳಧ್ವಜಂ |
ಪೀತಾಂಬರನ ಪೊರೆಗೆ ಹಾಕಲಾ ಮುರಹರಂ |
ಪ್ರೀತಿಯಿಂ ತೆಗೆದು ನಭಕಿಡಲದಂ ರುಂಡಮಾಲೆಯೊಳಾಂತನಲ್ಲಿ ಶಿವನು ||೪೩೩||

Leave A Comment