ಜನನ : ೨೫-೫-೧೯೫೦ ಧಾರವಾಡ

ಮನೆತನ : ಸುಸಂಸ್ಕೃತ – ಕಲಾವಿದರ ಮನೆತನ. ತಂದೆ ಹನುಮಂತ ಹಳಿಬಂಡಿ, ತಾಯಿ ಬಸವೇಶ್ವರಿ.

ಗುರುಪರಂಪರೆ : ಶ್ರೀ ಲಕ್ಷ್ಮಣರಾವ್ ದೇವಾಂಗ ಮಠ ಹಾಗೂ ನಾರಾಯಣರಾವ್ ಮೆಜುಂದಾರ್ ಅವರಲ್ಲಿ ಸಂಗೀತ ಶಿಕ್ಷಣ, ಸುಗಮ ಸಂಗೀತದಲ್ಲಿ ತಮ್ಮದೇ ಆದ ಶೈಲಿ.

ಸಾಧನೆ : ವರಕವಿ ದ.ರಾ. ಬೇಂದ್ರೆಯವರ ನೆಚ್ಚಿನ ಗಾಯಕ. ಅವರ ಸಾಹಿತ್ಯ, ಬದುಕು ಬರಹಗಳಿಂದ ಪ್ರಭಾವಿತರಾಗಿ ಅವರ ಗೀತೆಗಳಿಗೆ ರಾಗಸಂಯೋಜನೆ ಮಾಡಿ ಹಾಡಿದ್ದಾರೆ. ಬೇಂದ್ರೆ ಕಾವ್ಯವಾಣಿ ಎಂಬ ರೂಪಕ ಅತ್ಯಂತ ಜನಪ್ರಿಯ, ರಾಜ್ಯ. ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲಿ ಇವರ ಸಹಸ್ರಾರು ಕಾರ್ಯಕ್ರಮಗಳು ನಡೆದಿವೆ. ೨೦೦ ಕ್ಕೂ ಮಿಕ್ಕಿ ಇವರ ಗಾಯನದ ಧ್ವನಿ ಸುರುಳಿಗಳು ಹೊರಬಂದಿವೆ. ಶರಣರ ವಚನ, ದೇಶಭಕ್ತಿ ಗೀತೆ, ನಾಡಗೀತೆ, ಭಾವಗೀತೆಗಳನ್ನು ಜಾನಪದ ಸೊಗಡಿನೊಂದಿಗೆ ಹಾಡುವಲ್ಲಿ ಸಿದ್ಧಹಸ್ತರು. ಇವರೊಬ್ಬ ಉತ್ತಮ ವಿನ್ಯಾಸಕಾರರೂ ಕೂಡ. ಡ್ರಾಯಿಂಗ್ ಕಲೆಯಲ್ಲಿ ಡಿಪ್ಲೊಮಾ ಪಡೆದು ಕಟ್ಟಡಗಳ ಮಾದರಿ ವಿನ್ಯಾಸಗಳನ್ನು ರಚಿಸಿ ಪ್ರದರ್ಶಿಸಿರುತ್ತಾರೆ. ಆಕಾಶವಾಣಿ-ದೂರದರ್ಶನ ಕಲಾವಿದರು.

ಪ್ರಶಸ್ತಿ – ಸನ್ಮಾನ : ಅನೇಕ ಮಠ ಮಾನ್ಯಗಳಿಂದ ಗೌರವ ಪ್ರಶಂಸೆಗಳಿಗೆ ಪಾತ್ರರಾಗಿರುವ ಹಳಿಬಂಡಿಯವರಿಗೆ ೧೯೯೯ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕನಾಟಕ ಕಲಾಶ್ರೀ ಪ್ರಶಸ್ತಿಯೆ ಅಲ್ಲದೆ ೨೦೦೮ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಸಂದಿದೆ.