ಪಲ್ಲವಿ : ಯಶೋದ ನಂದನ ಶೋಧನೆ ತಾಳಲಾರೆ

ಶೋಕವ ಹರಿಸುವನೆ ಮೋಸಹೋದೆ ಮಾಯೆಯಲ್ಲಿ

ಚರಣ :  ದಯಾ ಸಮುದ್ರನೆ ದಾರಿ ತೋರೋ ನನಗೆ
ನಂಬಿದೆ ನಿನ್ನನು ಉದ್ಧರಿಸು ಎನ್ನನು         

ದಮ ಶಮಾದಿ ಗಣಿಯೇ ಗುಣಗಳ ರಾಶಿಯೇ
ನಾದನಾಮ ಕ್ರಿಯನೇ ಜಯ ರಣಧೀರನೇ

ಶೋಭಾಯ ಮಾನನೇ ಸುರರೊಳು ಗಣ್ಯನೇ
ಧರಣಿಗೆ ಪತಿಯೇ ಶೇಷ ಸಂರಕ್ಷಕ

ನೇರಳೆ ಕಾಂತನೇ ನೀ ನನಗೆ ನೆರಳು
ತಾಳ ಹಾಕಿ ಕರೆಯುವ ನನಗೆ ಮುಕ್ತಿ ನೀಡಯ್ಯಾ

“ಳಂ’ ಮಂತ್ರ ಬೀಜನೇ ತಂತ್ರ ಶಾಸ್ತ್ರ ನಿಪುಣನೆ
ಲಾಜಾ ಸುಪ್ರೀತನೇ ಅಲ್ಪ ಸಂತೃಪ್ತನೇ

ರೇ-ಹಳ್ಳಿ ವಾಸನೇ ಜಗದಿ ಸಂಚರಿಪನೇ
ಜಯವು ಜಯವು ನಿನಗೆ ಜಯ ಜಗನ್ನಾಥನೇ