ಯಲುರಾಜನ ಮಡದಿ
(ಪ್ರತಿ ಸಾಲಿಗೂ ಸಿವs ಸಿವs ಅನ್ನಬೇಕು)

ಅಕ್ಕನೂs ತಂಗೀss ನೂss ಸಿವsss ಸಿವsss
ಹೊಳೆ ನೀರೀಗ್ ಹೋಗೀರೂ
ಹೊಳ್ಳs ದಿಂಬುದು ಮೇವೆ
ಹಲಿ ಮಾಡೇs ಹssಚ್ಚಿರೂ     ೧

ಕೇಳಲ್ಲೇ ನsನ್ನಕ್ಕಾss,
ಹಲಿಯsಚೀತ್ತsರs ನೋಡೇss
”         ”         ”
ಮರುಳೀಗೇ ಆsssದೆsನೇs    ೨

ಕೇಳಲೇ ನsನ್ನಕ್ಕಾss,
ಹೊಳಿರ್ನ್ ಸಂsಗsಡ್ ಹೊಗುತೇನೆ.
ಹೊಲಿನ್        ”
ಯೇನಾದಾsರೇನs-ಕ್ಕಾsss?        ೩

ಹೊಲಿನ್ ಸಂಗsಡ ಹೊಗುತೇನೆ
ಕೇಳಲ್ಲೆ ನನು ತಂಗೀss,
ಹೊಲಿನ್ ಸಂಗಾsಡ್ ಹೋsದಾsರೇ
ಜಾತೀಯಾs ಬಿಡುವ್ಯಾಲೆs     ೪

ಕೇಳೇಲೇs ನsನ್ನಕ್ಕಾs,
ಜಾತೀs ಹೋದಾsರೇನೇs?
ಅಟ್ಟಂಬೂ ಮಾsಲೇsಗೇ
ಕೇಳಿತ್ತೇ ನsನ್ನಕ್ಕಾs        ೫

“ಕೇಳಲ್ಲೇ ನನು ತಂಗೀ,
ನಂದೊಂದೂ ಮಾsತಿರಸೇ”
ಕೇಳಲ್ಲೇ ನsನ್ನಕ್ಕಾss
ಮಾsತಿಗೆs ಉsತ್ತಿsರವೇss          ೬

“ಕೇಳಲ್ಲೇ ನನು ತಂಗೀs
ನಿನು ದಂಡಿಗ್ಹೋsದ ಗಂsಡನೆ
“”  ”
ಬಂದಾsರೇss ಹೊಡುನಾsಲೇs”         ೭
“ಹೊಡುದಾsರೇ ಯೇನಕ್ಕಾs?
ಬಯ್ದಾರೇss ಯೇನಕ್ಕಾs
”   ”   ”
ಹೊಲಿನ್ ಸಂಗಾsಡಾ ಹೋಗುತೇನೆ”        ೮

ಲಟ್ಟಂಬೂss ಮಾss ತೀಗೇsss
ಕೇಳಿತ್ತೆ ನsನ್ನsಕ್ಕಾs
ಮುತ್ತಿನ್ ಕಣ್ಣೀರಾs ಬಿಡುವಾsಳೂ
”            ”   ರು”          ೯

ತಂಗೀಯಾs ಲಾssದಾ ರೇsss
”         ”           ”
“ಹೊಲಿನ್ ಸಂಗsಡ್ ಹೋಗುತೇನೇ”
ಅಸುವಂತನ ಕಟ್ಟೆ ಮೇಲೇ           ೧೦

ಹೊಲಿಯsನು ಅಂsಬಾನೂ
ಕರs ಕಂಬುಳಿ ಹಾsನಾs ನೂ
೧೦ಹೋಳೂ | ಬೆಳಿಯಲ್ಯ ಮೆಲsದಾsನೂ
”    ”  ”
ಕಯ್ಯಲ್ ಕೊರುಳ್೧೧ ಹಿಡಿದಾsನೂ    ೧೧

”          ಕೊರುಳು          ”
೧೨ನಾsಚು ಮಾsಡೀ ಕರಿದಾ ನೂ
“ಕೇಳಲ್ಲೇss ನsನ್ನsಕ್ಕಾsss
ನಾs | ಆsಚೆ ನಾsದಾರ್ ಹೊಗುತೇನೆ”          ೧೨

ಅಟ್ಟಂಬೂ ಮಾsತಿಗೇss
ಕೇಳಿತ್ತು ಯಲು ತಂಗೀss
ಕೇಳಿತ್ತೇ         ”
ಊರ ಮುಂದಿನ ಕಟ್ಟೆಗೀಗೇss           ೧೩

ಕಟ್ಟಿಗೇಗೆs ಬರುವಾsಳೇ
ಕಟ್ಟಿಮೇನೇ ಹತ್ತುವಾsಳೂ
”   ”
“ಕೇಳೀರೆs ಸ್ವಾsಮ್ಯವು     ೧೪

ಕೇಳೀರೆs ಸ್ವಾsಮ್ಯವು
ನನ್ನ ಪತಿಯೇ ನೀವ್ಯೇಗೇ
”         ” ”
ನಿಮ್ಮ ಸತಿಯೇ ನಾನೀಗೆs          ೧೫
ನಿಮ್ಮ ಸತಿಯೇ ನಾನೀಗೆs
ಲಂದ್ಹೇಳೀss ನುಡುದಾsಳೂ
” ”
ಹೋಳು ಬೆಳಿಯಲಿ ಮೆಲಿದಾರೂ    ೧೬

ಹೋಳು ಬೆಳಿಯಲಿ ಮೆಲಿದಾರೂ
ತನ್ನ ಮನಿಗೇs ಕರ್ಕಂಡ್ ನೆಡುದಾ
”            ”          “ನೆಡಿದಾs
ಅತ್ಲಾsಗೇs ಲಾsದಾsರೇs         ೧೭

ದಂಡಿಗ್ಹೋದಾs ಗಂಡ ಗೂs
ಸಪನೀಗೇ೧೩s ಬಿಳುವಾsದೋ
”     ”
ನಿನ್ನ | ಮಡದಿಯಾsದಾs ಹೆಂಡುತಿಯಾ       ೧೮

ನಿನ | ಮಡದಿಯಾsದಾs ಹೆಂಡುತಿಯಾ
ಮಡದೀಗೆ ಹೋಗsದೇss
ಹರs ಹೇರs ಲಂsದೀದಾs
ಸಿವs ಸಿsವ ಲಂದೀದಾ            ೧೯

ಗಾsಬುರೀs ಬಿಳುವಾsನೊ
ಕುದುರೀಗೆs ಜಿನ  ಬಿಗಿದಾs
ಕೊದರಿಗೇ ಜಿನ ಬಿಗಿದಾs
“”  ”
ಕುದ್ರ ಮನೆ ಕುಂತಿದವನೂ        ೨೦

ಕೊದ್ರಿ ಮೇನೆs ಹಂತಿ೧೬ ಕುಂತಾs
ಮನಿದಾsರೀ ಹಿಡುದಾsನೂ
”      ”
ಮನಿಗೇಗೇ ಬರುವಾsನೂ         ೨೧

ಮನಿಗೇನೇ ಬರುವಾ ನೂ
ಅತ್ತೂಗೀs ಲಂಬsಳೂss
ಅತ್ತೂಗೀs ಅಂsಬsಳೂ
ಮುತ್ತಿನಾsರುಲೆ ತರುವಾsಳೂ    ೨೨

“ಕೇಳಾsಲೇ ನನ್ನತ್ಗೇs
ನಿನ್ ತಂಗಿಯಾರs ಯೆಲ್ ಹೊಯ್ತೋ?
ನೀನು ಆsರತಿ ತಂದೇ
ನೀನ್ಯೇಗೇ೧೭  ನೀರೂ ತಂದೇ       ೨೩

ನೀನ್ಯೇಗೇ ನೀರೂ ತಂದೇ
ನಿನ್ನ ತಂದಿಯಾsರೇ ಯೆಲ್ ಹೋಯ್ತೋ?”
“ಕೇಳಾsಲೋ ಬಾsವಾಯ್ಯಾs,
ನಿನ | ಮಡದೀಯಾs ಸುದ್ದೀಯು  ೨೪

ನಿನ | ಮಡದೀಯಾs ಸುದ್ದೀಯು
ನಿನ  ನೆಂಟsರ ಮನಿಗ್ಹೋಗು”
ಅಟ್ಟಂಬೂ ಮಾತ್ಯೇಗೇ
ಕೇಳಿದs ಯಲು ರಾಜಾs          ೨೫

ಕೇಳಿದs ಯಲು ರಾಜಾs
ಮುತ್ತಿನ ಕಣ್ಣೀರಾs ಬಿಡುವಾsನೂs
”         ಕಣ್ಣೀರು  ”
ಹಿಂತಿರುಗಿ ಕುದುರೀಯೂ         ೨೬

ಹಿಂತಿರುಗಿ ಕೊದುರೀಗೇ
ನೆಂಟರಾs ಮನಿಗ್ ಹೊಡುದಾs
”        ”           ಹೋದಾs
ಅಲ್ಹೋಗೀ ನುಡುದಾsನೂ         ೨೭

ಕೇಳಲ್ಲೇ ನsನ್ನತ್ತೇ,
ನಿನ | ಮಗುಳಾsರುs ಯೆಲ್ ಹೋಯ್ತೇ?”
“ಯೇನಂದೀs ಹೇಳು ಬೇಕೋ?
”        ಮರುಗಾsಲೋs    ೨೮

ನಿನ ಮಡುದೀ ನಿನ್ನಲ್ಲೇ
ಹೊsಳಿ ನೀರಿಗೆ ಹೋಗಿದುರೋ
”       ”           ಹೋಗೀರೂ
ಹೊಳಿಯಾs ದಿಂಬದ ಮೇನೇ     ೨೯

ಹೊಳಿಯಾs ದಿಂಬದ ಮೇಲೇ
ಹಲಿಮಾಡೀss ಹsಚ್ಚಿದನೂ
”        ”
ಮೋದ್ಯೇಗೇ೧೮ ss ನೋsಡಾsಳೂs    ೩೦

ಮೋದೇಗೇss ನೋsಡಾsಳೂs
ಅಕ್ಕನ ಕೂಡೇ ಯೋಗಿನ್ನೇ೧೯
”          ಕೋಡೇ     ”
“ಹೊಲಿನ್ ಸಂಗಾsಡ್ ಹೊಗುತೇನೆ”           ೩೧

ಲಂದ್ಹೇಳಿ ಯೇಗಿನ್ನೇ
ಹೊಲಿನ ಸಂಗಾsಡ್ ಹೋಗಾsಳೆ”
ಅಂಟ್ಟಂಬೂs ಮಾsಲೇಗೇs
ಹೇಳಿದಾs ಯಲುರಾಜಾs         ೩೨

ಹೇಳಿದಾs ಯಲುರಾಜಾ
ಹೊಲಿನ್ ಮsನಿ ದಾsರಿ ಹಿಡಿದಾs
”            “ಹಿಡುದಾs
ಅಲ್ಲಿಗಾsದಾsರ್ ಹೋದಾsನೂ   ೩೩

ಅಲ್ಲಿಗಾsದಾsರ್ ಹೋದಾsನೋ
“ಕೇಳಲೋ ಹೊsಲಿರವನೇs,
ವೋಡೂ ಬೇಡಾs ಅಡುಗೆ ಬೇಡಾs
” ”     ಲಡಗಬೇಡಾs       ೩೪

ನಿನಗೇನೂ ಹೊಡುದಿಲ್ವೋs
”            ”       ದೆಲ್ಲಾs
ಬಾಯೆತ್ತೇ೨೦   ಬವ್ ದಿಲ್ಲಾss
”          ಬವ್ ದೆಲವೋ         ೩೫

ನನ್ನಾsಲು ಹಿಂಡುತಿಯೂ
”            ”
ಜೋಪಾsನs ಮಾsಡುಬೇಕೋ
”           ”                           ೩೬

ಯಾವ ದಿನಕೆ ಮಡಿತಾsಳೋ
”           “”
ಅಗಣೀಗೇ೨೧    s ಹಾಕುಬೇಡಾs
”                  ”                   ೩೭
ಮಣ್ಣೀಗೇss ಹಾಕುಬೇಕೋ
”           ”
ನಲವತ್ತೊಂದು ದಿವಸಾsಕೇ
”          ದಿವಸಾsಕೋ
ತಲಿಯೇಗೇ೨೨   ತೆಗುಬೇಕೋ       ೩೮

ತಲೆಯೇಗೇ ತೆಕ್ಕಂsಡೀs
ಹರುವಹಳ್ಳsಕ್ಹೋಗೀs
ಹರವಾs ಹಳ್ಳಕ್ಕೆ  ಹೋಗೀs
ಚೆಂದಾsಗೀ ತೊಳಿಬೇಕೋ       ೩೯

ಚೆಂದಾsಗೀ ತೊಳಿಬೇಕೊ
ನನ ಕೈಲೀs ತಂದಿ ಕೊsಡೋ
ಲಚ್ಚಂಬೂ ಮಾತೇಗೇ
ಕೇಳೀದs ಹೊಲಿರವ್ನೂ            ೪೦

ಕೇಳೀದs ಹೊಲಿರವ್ನೂ
ಅವ್ನ ಮಡದೀs ತೀರ್ ಹೋಯ್ತೋ
ಅವ್ನ    ”            ”         ”
ಮಣ್ಣಿಗಾದಾsರ್ ಹಾsಕಿದ್ನೋ     ೪೧

ಮಣ್ಣಿಗಾದ್sರ್ ಹಾsಕಿದ್ನೋ
ರಾಜ ಕೇಳಿದ ನೆಕ್ಕಪತ್ರಾss
ರಾಜ ಹೇಳಿದ”
ತಲೆ ವಳಗೇ ಜಾsನಿಟದಾs       ೪೨

ತಲಿ ವಳಗೇ ಳಾನಿಸಿದಾ
ಮಣ್ಣಿಗಾsದ್ರೇ ಹಾsಕಿದನೋ
ಮಣ್ಣಿಗಾದsರ್
ನಲವತ್ತೊಂದ್ ದಿವಸಾsವೋ    ೪೩

ನಲವತ್ತೊಂದ್ ದಿವಸಾsಕೋ
ಸೋಸಾs೨೫  ಣಕೇ ಹೋಗಿದನೋ
”            ”
ಮಣ್ಣಿನಾsದಾರೇ ಬಗು೨೬ದಾsನೋ  ೪೪

ಮಣ್ಣಿನಾsದಾರ್ ಬಗುದಾsನೋ
ತಲೆಯೇಗೇ ತೆಗುದಾsನೆs
”  ”
ಹರು ಹಳ್ಳಕೆನೆಡಿದಾsನೋs           ೪೫

ಹರು ಹಳ್ಳಕೇ ನೆಡುದಾsನೋ
ಚೆಂದಾsಗೀ ತೊಳುದೀನೇ
”         ತೊಳುದಾsನೋ
ರಾsಜುsನಾs ಮನಿಗ್ಹೋದಾs    ೪೬

ರಾsಜನಾs ಮನಿಗ್ಹೋದಾs
ರಾಜಾsನಾs ಕರುದಾsನs
”  ಕರಿದಾsನೋ
ನಿನ ಮಡದೀಗಾs ತೀರ್ ಹೋಗೀ   ೪೭

ಮಡದೀಯಾ ತೀರ್ ಹೋಗೀ
ನಲವತ್ತೊಂದೂ ದಿವಸಾss
ನಲವತ್ತೊಂದಾ ”
ಆಜಾಣೀ೨೭ ಪರುಕಾರಾ೨೮           ೪೮

ಲಾsಜೂಣಿ ಪರುಕಾರಾ
“ತಲೆಯೇಗೇ ತಂದಿದೇನೇ”
”         ”
ಲಂದ್ಹೇಳೀs ಕೊಡುವಾsನೋ     ೪೯

ಲಂದ್ಹೇಳೀs ಕೊಡುವಾsನೋ
ರಾಜಾsನು ಬೇಡುಕಂಡಾs
ರಾಜಾನೇ         ”
ಯೋಳುಪ್ಪೂರಗೀ ಮೇಲೆ
ಹೋಗೀಲೂs ಕೂತಿಕಂಡಾs          ೫೦

ಹೋಗೇಳೂ ಕೂತಿಕಂಡಾs
ತಲಿ ತೆಗದಿ ಓದಿದನೋ
ಅರಸೂಗೇs ಹುಟುಬೇಕೋ
ರಾಜರೀಗೇ ಮದ್ ಯಾಗ್ಬೇಕೋ  ೫೧

ರಾಜಾಗೇ ಮದಿಯಾsಗೀ
ಮೂರು ವರ್ಸಾ ಆಳುಬೇಕೇ
”        ”       ”   ಬೇಕೋ
ನಾಕ್ನೆ ವರ್ಸಕೆ ದಂಡಿಗ್ಹೋದಾ     ೫೨

ನಾಕ್ನೆ ವರ್ಸಕೆ ದಂಡಿಗ್ಹೋದಾ
ಹೊಲಿನ್ ಸಂಗಾsಡ್ ಹೋಗುಬೇಕೇ
“”            ”
ಅಂದ್ಹೇಳೀ ಬಿರ್ಮ೨೯ ಬರುದಾsss  ೫೩

ಲಂದ್ಹೇಳೀ ಬಿರ್ಮ ಬರುದಾsss
ವೋದೀಗೇs ನೋಡಾನೇs
”         ನೋಡೀದಾs
ಮುತ್ತಿನ್ ಕಣ್ಣಿರಾs ಬಿಡುವಾsನೋ            ೫೪

ಮುತ್ತಿನ್ ಕಣ್ಣಿರಾs ಬಡುವಾ ನೋ
ತಲಿಯೇಗೆ ಹಿಡಿದಾsನೋ
”   ”
ಲಾsಚೇರೀ೩೦ ಮನಿಗ್ಹೋದಾsss   ೫೫

ಲಾsಚೇರೀ ಮನಿಗ್ಹೋದಾsss
ಆಚೆರಿ ಕೋಡೇ ಯೆನ ನುಡಿದಾs?
“ಕೇಳsಲೋ ಆಚೇರೀs,
ಗಂದsದಾs ಪೆಟುಗೀಗೇs   ೫೬

ಗಂದsದಾs ಪೆಟ್ಗೆಯೇಗೇ
ಗೆಯ ಕೊಡೋ೩೧  ಆsಚೇರಿ
”        ಲಾsಚೇರಿ
ಲಂದ್ಹೇಳೀ ನುಡಿದಾsನೋ      ೫೭

ಅಂದ್ಹೇಳೀ ನುಡಿದಾsನೋ
ಗಂದಂದ್ ಪೆಟ್ಗೆ ಗೆಯ್ ಕೊಟ್ಟಾ
”        ”        ”
ಕೇಳಲ್ಲೊ ಲಾsಚೇರೀ,
”        ”                             ೫೮

ನೀವು ತಾಗಿದಾs ಹಣ ತೆಕ್ಕೋ
ಪೆಟ್ಗೆ ನಾsದರೆ ತಕಂಡೋದಾs
“”    ತsಕ್ಕಂಡೂ
ಮನಿಗ್ ಸೀದಾs ಬರುವಾsನೂ      ೫೯

“””
ಪೆಟ್ಗೆಯೋಳೂ ಉಪ್ಸರ್ಗಿ ಮೇನೇ
ಯೇಳೂ ಉಪ್ಸರ್ಗಿ ಮೇನೇ
ಇಟ್ಟದs ರಾಜಾsನೇ
”    ”  ೬೦

ಸಂಪೂಗೀs೩೨ ಹೂಂಗ್ ಕೊಯ್ದ
”           ”            ”
”     ಸರಮಾಡ್ದಾs
”           ”
ಮಲ್ಲೂಗೀ ಬನsಕ್ಹೋದಾs           ೬೧

ಮಲ್ಲೂಗೀ ಬನsಕ್ಹೋದಾs
ಮಲ್ಲೂಗೀ ಹೂಂಗ್ ಕೊಯ್ದಾs
ದಂಡಿ೩೩ ನಾsರೇ ಕಟುತಾsನೂ
ದಂಡಿ ನಾರೇ      ”            ೬೨

ಹಿಂತಿರಗಿ ಮನಿಗ್ ಬಂದಾ
ಕೊಬುರಿ೩೪ ಯಾ ಕಾಯ್  ತೆಗೆದಾss
ಗಾಣಗೀsರ೩೫   ಮನಿಗ್ಹೋದಾs
ಗಾಣಗೇರಾs
”          ಕೋಡ್ಯೇನೂs     ೬೩

ಗಾಣಗೇರಾs ಕೋಡ್ಯೇನೂs
ಯೇನಂದೀs ನಡುದಾsನೂs?
ಇದ್  | ಹತ್ತುವಾs೩೬ ಕಾಯ್ ಯೇಗೆ
ಗಾsಣsಕೇ ಹಾಕ್ಯೇsಗs     ೬೪

ಗಾsಣsಕೇ ಯೇಗ್ ಹಾಕೇs
ಚೆಂಬೆಣ್ಣೇ೩೭ss ತೆಕ್ಕೋಡೋ೩೮
”          ತೆಕ್ಕೋsಡೀs
ತಾಗಿದ್ ಹಣವಾs ನಾs ಕೊಡ್ತೇ            ೬೫

ತಾಗಿದ್ ಹsಣಾs ಕೊಡುತೇನೇ
ಲಂದ್ಹೇಳೀ ನುಡಿದಾsನೇ
”        ನುಡುದಾ ನೋ
ಗಾಣ್ಗರ ಶೆಟ್ಟ ಲಂಬs      ೬೬

ಗಾಣ್ಗರ ಶೆಟ್ಟಿ ಲಂಬsವ್ನೂ
ಕಾಯ್ ಗಾಣಕೆ ಹಾsಕಿದನೊ
”               ”           ”
ಯೆಣ್ಣೆ ನಾದ್ರೆ ತೆಗಿದಾsನೋ                    ೬೭

ಯೆಣ್ಣೆ ನಾsದರೆ ತೆಗುದಾsನೋ
ರಾsಜ್ರಿಗೇ ಕೊಡುವಾsನೋs
”           ”
ರಾಜರ್ ಹsಣs ಕೊಡುವರೋ                 ೬೮

ರಾಜಾsರೂs ಲಂಬಾsರೂs
ಯೆಣ್ಣೆ ಚಂಬೇs ಹಿಡುದಾsರೂs
”          ”            ”
ಹಿಂತಿರ್ಗ್ ಮನಿಗೆ ಬರುವಾsರೂ               ೬೯

ಹಿಂತಿರ್ಗ್ ಮನಿಗೆ ಬರುವಾsರೋ
ಚಿನ್ನsದಂಗುಡಿಗ್ ಹೋದ್ರೂs
”           ”            ”
ಕೊರುಳೀಗೆ ಹಾsಕುವಾs                            ೭೦

ಚಿನ್ನಾsನೇ ತಕ್ಕಂಡ್ರೂs
ತಕ್ಕಂಡೀ  ರಾsಜಾರೇ
ತಾಗಿದ್ ಹsಣಾs ಕೊಡುವಾsರೂ
”             ”       ”
ಜವಳೀ ಅಂಗಡೀಗ್ ಹೋದ್ರೂs               ೭೧

ಜವಳೀs ಲಂಗುಡಿಗ್ ಹೋಗೀ
ಶೇರೀಯಾs೩೯ ತೆಗೆದಾsರೂs
ಶೇರೀಗೆs ತೆಗುದಾರೂ
ತಾಗಿದ್ ಹsಣಾs ಕೊಡುವಾsರೋ           ೭೨

ತಾಗಿದ್ ಹsಣಾs ಕೊಡುವಾsರೋ
ಹಿಂತಿರ್ದ್ ಮನಿಗೇ ಬರುವಾರೊ
ಹಿಂತಿರ್ಗ್ ಮನಿಗೇ ಬರುವಾsರೋs
ಗುಡುಗಾರ್ನ ಮನಿಗ್ಹೋದ್ರೂ                  ೭೩

ಗುಡುಗಾರಾs ಮನಿಗೋದ್ರೂ
”  ಕೇಳೀರೀ ಗುಡುಗಾsರೇ,
”           ”          ”
ಹೆಣ್ಣ ಬೊಂಬೇ ಗೈಬೇಕೋ                   ೭೪

ಹೆಣ್ಣ ಬೊಂಬೇ ಗೈಬೇಕೋ
ತಲಿನಾsದ್ರೆ ಗೈವ್ ಕೆಲ್ಲs೪೦
ತಲುಕಿಂದಾs ಕೆಳಗೀಗೆss
ಹೆಣ್ಣ ಬೊಂಬೆ ಗೈಬೇಕೋ”                   ೭೫

ಹೆಣ್ಣ ಬೊಂಬೆ ಗೈಬೇಕೋ”
ಅಂದ್ಹೇಳೀs ನುಡುದಾsರೋs
”              ”             ”
ಗುಡುಗಾsರಾs ಲಂಬಾರೋ                 ೭೬

ಗುಡುಗಾsರಾs ಲಂಬಾರೋs
ಹೆಣ ಬೊಂಬೇ ಗೈದಾsರೋs
”              ”            ”
ತಾಗಿದ್ ಹsಣಾs ಕೊಡುವಾsರೋ          ೭೭

ತಾಗಿದ್ ಹsಣಾs ಕೊಡುವಾsರೋ
ಹಿಂತಿರ್ಗ್ ಮನಿಗೇ ಬರುವಾsರೋ
”            ”          ”
ಬೊಂಬೀಯಾ ಹಿಡಿದಾsರೋs               ೭೮

ಬೊಂಬೀಯಾ ಹಿಡಿದಾsರೋs
ಬೊಂಬಿಗೇ ತಲಿಹಚ್ಚೇ
”          ”          ”
ಕುರುಬಾsರಾs ಮನಿಗ್ ನೆಡದ್ರೂ            ೭೯

ಕುರುಬಾsರಾs ಮನಿಗ್ ಹೋಗೀs
ಚವಲಾನೇ೪೨ss ತರುವಾsರೋs
”             ”                 ”
ತಾಗಿದ್ ಹsಣಾs ಕೊಡುವಾsರೋ         ೮೦

ತಾಗಿದ್ ಹsಣಾs ಕೊಡುವಾsರೋ
ಹಿಂತಿರ್ಗ್ ಮನಿಗೇ ಬರುವಾsರೋ
”           ”             ”
ತಲಿಗ್ ಚವ್ಲಾsss ಬಗುದಾsರೋ           ೮೧

ತಲಿಗ್ ಚವ್ಲಾsss ಬಗುದಾರೋ
ಯೆಣ್ಣೆ ಹಾಕೀsss ಕಂಟ್ವಾssರೋss
”             ”              ”
ಸಂಪ್ಗಿ ಮಾssಲೀss ಕೊಳ್ಳಿಗ್ ಹಾsಕೀs     ೮೨

ಸಂಪ್ಗಿ ಮಾssಲೀss ಕೊಳ್ಳೀಗ್ ಹಾsಕೀs
ಮಲ್ಲಿಗಿ ಹೂಂಗೂ ಮುಡಿಸಾsರೋs
”                  ”                 ”
ಶೇರೀಗೆ ಉಡುಸಾsರೋs                      ೮೩

ಶೇರಿ ಈಗೇ ಉಡುಸಾsರೋss
ಕೂಕುಮ್ಮಾss೪೩  ಹಚ್ಚಾರೋsss
”    ”     ”
ಗಂದೆಣ್ಣೆss  ದರುಸಾsರೋs                  ೮೪

ಗಂದೆಣ್ಣೆss ದರುಸಾsರೋss
ಪೆಟ್ಗೆಮೇನೇs ಕಳುಸಾsರೋs
ಪೆಟ್ಗೆಮೇನೇs ಕುಳುಸೀದಾs
ಪರದಕ್ಸ್ಣೀ೪೫  ಮಾಡಿದರೋ                  ೮೫

ಪರದಕ್ಸ್ಣೀ ಮಾಡೀsದಾs
(ದಿವಸಾಕೂ ಅದ್ರ ಮುಂದೆ
ಮುತ್ತಿನ ಕಣ್ಣೀರ ಬಿಡುವಾನೋ”
“ತಾನು ಮಡುದೀ೪೬  ಹೋದೀನೋ”        ೮೬
ಪದಕೋಶ:

೦೧.     ಹೊಳ್ಯ  – ಹೊಳೆಯ
೦೨.     ದಿಂಬದು – ದಿಂಬದ, ದಡದ
೦೩.   ಹಲಿ – ನೆಲದ ಮೇಲೂ ಗೋಡೆಯ ಮೇಲೂ ಬರೆದ ಚಿತ್ರ
೦೪.    ಮರುಳೀಗೇ  – ಈಗ ಮರುಳು
೦೫.    ಹೊಲಿನ್  – ಹೊಲೆಯವ
೦೬.    ಬಿಡುವ್ಯಾಲೇ  – ಬಿಡುದಿಯಲ್ಲೇ
೦೭.    ಅಟ್ಟಂಬೂ     – ಅಷ್ಟು ಹೇಳುವ
೦೮.    ಅಸುವಂತನ –  ಅಶ್ವತ್ಥದ
೦೯.    ಹಾಸಾನು  – ಹಾಸಿದನು
೧೦.    ಹೋಳು ಬೆಳಿಯೆಲ್ಯ  – ಅಡಿಕೆಯ ಹೋಳು ಮತ್ತು ಬಿಳಿಯೆಲೆಗಳನ್ನು, ವೀಳ್ಯವನ್ನು.
೧೧.    ಕೊರಳ್   – ಕೊಳಲು
೧೨.    ನಾಚು  – ಕುಣಿತ
೧೩.    ಸಪನೀಗೇ   – ಸ್ವಪ್ನ ಈಗ
೧೪.   ಗಾಬುರಿ   – ಗಾಬರಿ
೧೫.   ಜಿನ  – ಜೀನನ್ನು
೧೬.    ಹಂತಿ    – ಹತ್ತಿ
೧೭.    ನೀನ್ಯೇಗೆ   –   ನೀನು ಈಗ
೧೮.    ವೋದ್ಯೇಗೆ   –  ಈಗ (ಆಗ) ಓದಿ
೧೯.    ಯೇಗಿನ್ನೆ  – ಈಗ ಇನ್ನು
೨೦.    ಬಾಯೆತ್ತೇ   – ಬಾಯಿ ಎತ್ತಿ
೨೧.    ಅಗಣಿ   – ಅಗ್ನಿ, ಬೆಂಕಿ
೨೨.    ತಲಿಯೇಗೇ   – ತಲೆಯನ್ನು ಆಗ
೨೩.    ನೆಕ್ಕಪತ್ರಾ   – ಲೆಕ್ಕಪತ್ರ, ಇಲ್ಲಿ ದಿನಗಳ ಲೆಕ್ಕ
೨೪.    ಜಾನಿಟದಾ   – ನೆನಪಿಟ್ಟನು, ಧ್ಯಾನ (ಜ್ಞಾನ) ದಲ್ಲಿ ಇಟ್ಟಿದ್ದನು
೨೫.    ಸೊಸಾಣ   – ಸ್ಮಶಾನ
೨೬.    ಬಗುದಾನು  – ಬಗಿದನು, ಓರೆ ಮಾಡಿದನು, ಆಚೆ ಈಚೆ ಮಾಡಿದನು
೨೭.    ಆಜಾಣೀ  – ಆಜ್ಞೆ
೨೮.    ಪರುಕಾರಾ   – ಪ್ರಕಾರ
೨೯.    ಬಿರ್ಮ  – ಬ್ರಹ್ಮ
೩೦.    ಲಾಚೇರಿ   – ಆಚಾರಿ, ಬಡಿಗ
೩೧.    ಗೆಯಕೊಡು   – ಮಾಡಿಕೊಡು
೩೨.    ಸಂಪೂಗಿ  – ಸಂಪಗೆ
೩೩.    ದಂಡಿ   – ದಂಡೆ
೩೪.    ಕೊಬುರಿ   – ಕೊಬರಿ
೩೫.    ಗಾಣಗೀರಾ  – ಗಾಣಿಗರ
೩೬.    ಹತ್ತುವಾ   – ಹತ್ತು
೩೭.    ಚೆಂಬೆಣ್ಣೆ  – ಚೆಂಬು ಎಣ್ಣೆ
೩೮.    ತಕ್ಕೊಡೊ   – ತೆಗೆದು ಕೊಡೊ
೩೯.    ಶೇರಿ   – ಸೀರೆ
೪೦.   ಗೆವ್ ಕಲ್ಲ  – ಗೆಯ್ಯಬಾರದು, ಮಾಡಬಾರದು
೪೧.   ಲಂಬಾರೋ   – ಎನ್ನುವವರು
೪೨.   ಚವಲಾ   –  ಕೂದಲು
೪೩.   ಕೂಕುಮ್ಮಾ   – ಕುಂಕುಮ
೪೪.   ಗಂದೆಣ್ಣೆ   – ಶ್ರೀಗಂಧದ ಎಣ್ಣೆ
೪೫.   ಪರದಕ್ಸ್ಣಿ    – ಪ್ರದಕ್ಷಿಣೆ
೪೬.   ಮಡುದಿ   – ಮಡಿದು