ಅ
ಅಂಗಚ್ಛವಿ – ಮೈಕಾಂತಿ, ಹೋಗರು
ಅಂಗಿ – ಅಂಗಗಳುಳ್ಳವನು, ದೇಹಿ
ಅಗುಱ್ದು – ಅಗೆದು
ಅಗೆ – ಮೊಳಕೆ
ಅಳುಂಬ – ಅತಿಶಯ
ಅಘ – ಪಾಪ
ಅಘಜಲದಿ – ಪಾಪ(ವೆಂಬ) ಸಮುದ್ರ
ಅಘಧ್ವಾತ +ಓಘ ಮಧುಪಮಾಲಿಕ – ಪಾಪವೆಂಬ ಕತ್ತಲೆಯ ಗುಂಪು ಎಂಬ ದುಂಬಿ ಸಾಲು
ಅಚ್ಚಿದ – ಅಚ್ಚಿಟ್ಟ?
ಅಜ ಗರ್ಭಿಣಿ – ಬಸುರಾದ, ತೆನೆಯಾದ ಆಡು
ಅಜಪೋತ – ಆಡಿನ ಮರಿ, ಹೋತ
ಅಜೆ – ಹೆಣ್ಣಾಡು
ಅಟ್ಟಿಸು – ಕಳಿಸು
ಅಟ್ಟೆ _ ತಲೆಯಿಲ್ಲದ ಮೈ
ಅಡಗು – ಬಾಡು, ಮಾಂಸ
ಅಡಸು – (ಮೇಲೆ, ಮುಂದೆ) ಬಂದು ಅಮರಿಕೊ
ಅಡಿಸು – ಅಡಿಗೆ ಮಾಡಿಸು, ಬೇಯಿಸು
ಅಡೆಯೊತ್ತು – ಅಡಚು, ಗಿಡುಗು
ಅಣಕ – ಕೊಂಚ
ಅಣುವ್ರತ – ಜೈನಗೃಹಸ್ಥರು ಕೈಕೊಳ್ಳುವ ಸುಲಭ ವ್ರತ
ಅಣ್ಮು – ಸಾಹಸ, ಪ್ರಯತ್ನ – ಮಾಡು
ಅನಂಗನ ಕೃತಿ – ಕಾಮಚೇಷ್ಟೆ
ಅನಂತ ಪ್ರಭೋಧ ದರ್ಶನ ಸೌಖ್ಯನ್ – ಅನಂತವಾದ, ಕೇವಲವಾದ ಜ್ಞಾನ, ದರ್ಶನ (ದೃಷ್ಟಿ), ಸೌಖ್ಯ ಉಳ್ಳವನು
ಅನುಜ – ತಮ್ಮ, ಸಹೋದರ
ಅನುಜೆ – ತಂಗಿ, ಸಹೋದರಿ
ಅಬ್ಬೆ – ಅಮ್ಮ (ಇಲ್ಲಿ; ಮಾರಿ)
ಅಭಿದಾನ – ಹೆಸರು
ಅಭ್ರಗಜ – ಐರಾವತ
ಅಭ್ರಮು – ಐರಾವತನ ಹೆಂಡತಿ
ಅಮರ್ – ಸೇರಿಬರು, ಒಪ್ಪು
ಅಮಳದೃಷ್ಟಿ – ನಿರ್ಮಲ, ಪರಿಶುದ್ಧ – ಜ್ಞಾನ
ಅಮಳ್ಗಳ್ – ಜತೆಗಳು, ಜೋಡಿ, ಯುಗಳ
ಅಮೋಘ – ತಪ್ಪದ, ವ್ಯರ್ಥವಾಗದ
ಅಂಗಜಾವ – ಕಾವಲುಗಾರ
ಅಂಬರತರಂಗಿಣೀ – ಆಕಾಶ ನದಿ, ಗಂಗೆ
ಅಂಬಾಚರಿ – ಹಿಂದಿನ ಜನ್ಮದಲ್ಲಿ, ತಾಯಾಗಿದ್ದವಳು
ಅಂಬಿಕೆ – ತಾಯಿ
ಅಂಬುಜ – ತಾವರೆ
ಅರಲಂಬ – ಕಾಮ
ಅರಿ – ಕತ್ತರಿಸು, ಕೊಯ್ಯಿ
ಅಱಸು – ಹುಡುಕು
ಅಱೆ – ತಿಳಿ
ಅಱೆಕೆ – ತಿಳಿವಳಿಕೆ, ಅರಿವು, ಜ್ಞಾನ
ಅಱುನೀರ್ – ಬತ್ತಿದ ನೀರು
ಅರ್ಕಾಡು – ನಾಶವಾಗು (ಅಱ್ಕಾಡು – ಜೀರ್ಣವಾಗು)
ಅರ್ತಿ (ಅಱ್ತಿ) – ಪ್ರೀತಿ
ಅರ್ದಳೊ – ಅದ್ದಿ, ಮುಳುಗಿ, ಸತ್ತು – ಹೋದಳೊ, (ಧಾತು : ಅಱ್)
ಅಲಂಘನೀಯ – ಮೀರಬಾರದ್ದು
ಅಲಂಪು – ಸಂಭ್ರಮ, ಪ್ರೀತಿ, ಮುದ
ಅಲರ್ – ಅರಳು, ವಿಕಾಸವಾಗು
ಅಲರ್ ವೋಗು – ಹೂಬಿಡು
ಅಲವಱಲ್ – ಹಂಬಲು, ಪೇಚಾಟ
ಅಲಸು – ಆಯಾಸ, ಅಸರು – ಪಡು
ಅವಧಾರಿಸು – ಗಮನಕೊಡು
ಅವಧಿ – ಒಂದು ಬಗೆಯ ದಿವ್ಯಜ್ಞಾನ (ಇಂದ್ರಿಯಗಳ ಸಾಧನವಿಲ್ಲದೆಯೆ ತಿಳಿಯಲಾಗುವ ಆದರೆ, ಕೆಲವು ಅವಧಿ ಅಥವಾ ಮಿತಿಗಳುಳ್ಳ ಜ್ಞಾನ)
ಅವಱ – (ನಪುಂಸಕ ಬಹುವಚನ) ಅವುಗಳ (ಅದಱ -ಅದರ )
ಅವಿಕಲ್ಪಂ – ವಿಕಲ್ಪವಿಲ್ಲದೆ, ಎರಡಿಲ್ಲದೆ. ನಿಶ್ಚಯವಾಗಿ
ಅಸಿಯಳ್ – (ಕೋಮಲವಾದ) ತೆಳುಹೆಣ್ಣು, ಕೃಶಾಂಗಿ
ಅಸುಕೆ – ಅಶೋಕ
ಅಳವು – ಶಕ್ತಿ, ಸಾಮರ್ಥ್ಯ
ಅಳಿಪು – ಆಸೆ, ಪ್ರೀತಿ
ಅಳುರ್ – ವ್ಯಾಪಿಸು
ಅಳುರ್ಕೆ – ಹೆಚ್ಚಿಗೆ, ಅಧಿಕ
ಅಳುಂಬ – ಅತಿಶಯ
ಅಳ್ಕು – ಹೆದರು
ಅಱಲಿಸು – ನೋಯಿಸು, ವ್ಯಥೆಪಡಿಸು
ಅಱೆ – ಸಾಯಿ, ಸಾಯಿಸು
ಅಱೆಗಣ್ – ವಿಕಾರವಾದ ಕಣ್ಣು
ಅಱ್ಕಱ್ – ಅಕ್ಕರೆ, ಪ್ರೀತಿ
ಅಱ್ದಳ್ – ಮುಳುಗಿ ಹೋದಳು (ಧಾತು : ಅಱ್)
ಆ
ಆಗ – ಆಗದು, ಕೂಡದು, ಬೇಡ
ಆಗಮ – ವೇದದಂತೆಯೇ ಪೂರ್ವದಿಂದ ಬಂದ ಪವಿತ್ರ ಗ್ರಂಥ, ಶಾಸ್ತ್ರ
ಆತೋದ್ಯ – ವಾದ್ಯ
ಆಂದೆಯ – ಒಂದು ಬಗೆಯ ಗೂಬೆ, ಹಾಲವಕ್ಕಿ
ಅಂದೋಳನಮನಾಡು – ತೂಗಾಡು, ಹೊಯ್ದಾಡು
ಆಪೊತ್ತುಂ – ಯಾವಾಗಲೂ
ಆಪೋಶಿಪಲ್ಲಿ – (ಊಟಕ್ಕೆ ಮೊದಲು ಅಥವಾ ಊಟದ ಕೊನೆಯಲ್ಲಿ) ಅಂಗೈಯಲ್ಲಿ ನೀರು ತೆಗೆದು ಕುಡಿಯುವಾಗ
ಆಮಿಷ – ಆಸೆ, ಭೋಗ
ಆಮುತ್ರಿಕ – ಪರಲೋಕ, ಮೋಕ್ಷ
ಆಮೂಲಚೂಲ- ಬುಡದಿಂದ ತುದಿಯವರೆಗೆ, ಸಂಪೂರ್ಣವಾಗಿ
ಆಯತಿ – ಬಲ, ಶಕ್ತಿ
ಆರ್ – ಕೂಗು
ಆರೋಗಿಸು – ಆರೋಗಿಸು, ಊಟಮಾಡು
ಆವಹನ – ಆವಾಹನ, ಬರಮಾಡಿಕೊಳ್ಳುವುದು : (ನೆನಪನ್ನು) ಎಬ್ಬಿಸುವುದು, ಉಂಟು ಮಾಡುವುದು
ಆವೀಕ್ಷಿತಘೃತನ್- ತುಪ್ಪ ನೋಡಿ (ದವನು)
ಆಸನ್ನಭವ್ಯ – ಜೈನಧರ್ಮ ಸ್ವೀಕಾರಕ್ಕೆ ಯೋಗ್ಯತೆ ಬಂದವನು (ಹೆಚ್ಚು ಕಾಲ ಕಾಯಬೇಕಾಗಿಲ್ಲದವನು)
ಆಸ್ಪೃಷ್ಟಕಪಿಳನ್ – ಹಸುಮುಟ್ಟಿ (ದವನು)
ಆಸ್ಯ – ಮುಖ
ಆಸ್ರವ – ಕರ್ಮ (ಜೀವದೊಳಕ್ಕೆ) ಹರಿದು ಬರುವುದು, ಒಳ ಸೇರಿಕೊಳ್ಳುವುದು
ಇ
ಇನಿತಂ – ಇಷ್ಟು
ಇನ್ನರ್ – ಇಂಥವರು
ಇಂಬುಕಯ್ – ಎಡೆಮಾಡು, ಹಿಡಿ, ರುಚಿಸು
ಇರಿವ – ಕೊಲ್ಲುವ
ಇಷಂ – ಅಶ್ವಯುಜ
ಇಳಾಕಾಂತೆ – ಭೂಮಿ (ಎಂಬ ಹೆಣ್ಣು)
ಇಳಿಕಯ್ – ಕಡಮೆಯಾಗಿ ತಿಳಿ, ಕಡೆಗಣಿಸು
ಇಳಿಕಯ್ಯಲ್ + ಆಗ – ಕಡೆಗಣಿಸಲು + ಆಗದು
ಇಳಿದು – ಹಗುರವಾದ್ದು, ಬೆಲೆಯಿಲ್ಲದ್ದು (ವಿರುದ್ಧಪದ : ಅರಿದು)
ಇಱೆದೆರ್ದೆ – ಕುಗ್ಗಿ, ಅಡಗಿಹೋದ ಎದೆ
ಈ
ಈಕ್ಷಣ – ಕಣ್ಣು
ಈ ದೊರೆಯನ್ – ಇಂಥವನು (ದೊರೆ = ಎಣೆ, ಸಮಾನ)
ಈಶಾನಕಲ್ಪ – (ಜೈನ) ಒಂದು ಸರ್ಗ
ಈಟ್ – ಎಳೆ
ಉ
ಉಕ್ಕಡ – (ಊರ ಬಾಗಿಲು) ಠಾಣೆ
ಉಗಿ – ಕಿತ್ತು ತಗೆ, ಸುಲಿ
ಉಗು – ಉಕ್ಕಿಬರು, ಹೊರಬರು
ಉಚ್ಚ್ವಾಸನಿತಪ್ತಾಧರರುಚಿ – ಮೇಲುಸಿರಿನಿಂದ ಬೆಂದ ತುಟಿಯ ಕಳೆಯುಳ್ಳವಳು, ತುಟಿ ಒಣಗಿದವಳು
ಉಜ್ಜಳಿಕೆ – ಉಜ್ವಲತೆ
ಉಡಿ – ಒಡೆ, ಮುರಿ
ಉಣ್ಮು – ಮೇಲೇಳು, ಹೊಮ್ಮು
ಉತ್ಕರ್ಷ – ಮೇಲಾದ, ಹೆಚ್ಚಾದ
ಉದಧಿ – ಕಡಲು, ಸಮುದ್ರ
ಉದರ – ಬಸಿರು, ಹೊಟ್ಟೆ
ಉದ್ಗಾರವೆತ್ತು – ಅಸಹ್ಯಪಟ್ಟು, ಹೇಸಿ (ಪೆಱು = ಪಡೆ, ಹೊಂದು)
ಉದ್ದೀಪನ – ಕೆರಳಿಸುವುದು, ಕೆರಳಿಕೆ
ಉದ್ವೇಗಪರಂ – ಚಿಂತಾಕ್ರಾಂತ, ಕಲಕಿದ ಮನಸ್ಸಿನವನು
ಉಂತೆ – ಹಾಗೆಯೇ, ಸುಮ್ಮನೆ
ಉಪಾಯನ- ಮೆಚ್ಚಿಗೆ, ಕಾಣಿಕೆ (ಯಾಗಿ ಕೊಟ್ಟದ್ದು)
ಉಬ್ಬೆಗ – ಉದ್ವೇಗ, ತಾಪ, ಚಿಂತೆ
ಉಭಯ ಭವ – ಇಹ ಪರಲೋಕಗಳು ಎರಡೂ
ಉಯ್ಯಲ್ – ಉಯ್ಯಾಲೆ, ತೂಗು (ಮಣೆ)
ಉರಗಿ – ಹೆಣ್ಣು ಹಾವು
ಉರ್ಕು – ಕೆಚ್ಚು, ಪರಾಕ್ರಮ
ಉರ್ಚು – ಹೊರದೆಗೆ, ಕಳಚು
ಉರ್ವರೆ – (ಬೆಳೆ) ನೆಲ
ಉರ್ವೀಭರ – ರಾಜ್ಯಭಾರ
ಉರ್ವೀರಮಣ – ನೆಲೆದೊಡೆಯ, ದೊರೆ
ಉಲಿ – ಧ್ವನಿ
ಉಱೆದಿದ – ಉಳಿದಿದ್ದ, ಕುಳಿತಿದ್ದ
ಊ
ಊಳ್ – (ನಾಯಿ, ನರಿ) ಕೂಗು, ಬಗುಳು
ಎ
ಎಚ್ಚನ್ – ಬಾಣ ಹೊಡೆದನು (ಇಸು =ಬಾಣಬಿಡು)
ಎಡೆವಗಲ್ – ಮಧ್ಯಾಹ್ನ
ಎಡೆವೋಗು- ನಡುವೆ ಬರು, ಸಂಧಿಸು
ಎನ್ನನ್ – ಎಂಥವನು
ಎಯ್, ಎಯ್ಯಮೃಗ – ಮುಳ್ಳು ಹಂದಿ
ಎರವಿಗೊಳ್- ಬೇಡು, ಕೇಳು (ಧಾತು : ಎರೆ)
ಎಱಕ – ಪ್ರೀತಿ
ಎಱಗು – ಬಗ್ಗು, ಮಣಿ, ನಮಸ್ಕರಿಸು
ಎಲುವು – ಎಲುಬು ಮೂಳೆ
ಎಸಗು – ಮೊಳಗು, ಹರಡು
ಎಸೆ – ಚೆನ್ನಾಗಿ ಕಾಣು, ಶೋಭಿಸು, ಒಪ್ಪು
ಎಸೆ – ಬಾಣ ಹೊಡೆ
ಎಳವೆಱೆ – ಎಳೆಯಚಂದ್ರ, ಬಾಲಚಂದ್ರ
ಎಳೆ – ಅಲುಗಾಟ
ಎಱಲ್ – ತೂಗಾಡು, ನೇತಾಡು
ಎಱ್ತರ್ – ಬರು
ಏ
ಏದೊರೆಯನ್ – ಎಂಥವನು?
ಏನಂಗಳ್ – ಪಾಪಗಳು
ಏಱ್ – ಗಾಯ, ಹುಣ್ಣು
ಏಱೆಪ – ಏರಿಸುವ
ಏಱ್ಗೆ – ಏಳಿಗೆ, ಅಭಿವೃದ್ಧಿ
ಐ
ಐಹಿಕ – ಇಹಲೋಕದ್ದು, ಇಲ್ಲಿಯ ಬಾಳು
ಒ
ಒಗೆ – ಹುಟ್ಟು
ಒಚ್ಚುತ – ಸೇರಿಕೆ, ಒಪ್ಪಿಕೆ, ಹಿತ? ಪ್ರಿಯ
ಒಡರಿಸು – ಉಂಟುಮಾಡು, ಮಾಡಿಸು
ಒತ್ತಿನ – ಮಗ್ಗುಲಿನ
ಒದವಿಸು – (ಉಂಟು ಮಾಡು)
ಒಪ್ಪಂಬಡೆ – ಬೆಳಗು, ಪ್ರಕಾಶಿಸು
ಒಱೆವಾಯ್ – ಜೊಲ್ಲು ಸೋರುವ ಬಾಯಿ
ಒಲವು – ಪ್ರೀತಿ, ಪ್ರಣಯ
ಒಲೆ – ತೂಗಾಡು, ಆಂದೋಲನವಾಡು
ಒಸೆದು – ನಲಿದು, ಹಿಗ್ಗಿ, ಸಂತೋಷಪಟ್ಟು
ಒಳನ್ – ಇದ್ದಾನೆ (ಧಾತು : ಉಳ್)
ಒಳ್ದು – ಒಳ್ಳೆಯದು
ಓ
ಓಘ – ಗುಂಪು
ಓಜೆ – ಪಾಳಿ, ಕ್ರಮ
ಓದು – ಹೇಳು
ಓಪಳ್ – ಪ್ರೀತಿಪಾತ್ರೆ, ನಲ್ಲೆ, ಪ್ರಣಯಿನಿ
ಓಲಗಿಸು – ಕಾಣಿಕೆಕೊಡು
ಓವು – ಕಾಪಾಡು, ಸಲಹು, ನೋಡಿಕೊ
ಕ
ಕಡಲ್ವರಿ – ಹೆಚ್ಚಾಗು, ಮೇರೆವರಿ
ಕಣ್ – (ಮಲ್ಲಿಗೆಯ ಅಂಟಿನಲ್ಲಿ) ಕುಡಿ ಒಡೆಯುವ ಗೆಣ್ಣು, ಕಣ್ಣು
ಕತಕಬೀಜ – ಕದಡಿದ ನೀರನ್ನು ತಿಳಿಮಾಡುವ ಒಂದು ಬೀಜ, ಚಿಲ್ಲದ ಬೀಜ
ಕತಿಪಯ – ಕೆಲವು
ಕದಂಬ – ಗುಂಪು
ಕನಲ್ – ಉರಿಯಾಗು, ಕೋಪಗೊಳ್ಳು
ಕನ್ನರ – ಕೃಷ್ಣ
ಕಂತು – ಮನ್ಮಥ
ಕಪೋತ – ಪಾರಿವಾಳ
ಕಯ್ದು – ಆಯುಧ, ಸಾಧನ
ಕಯ್ಪೆಸೊರೆ – ಕರಿಯಾದ ಸೋರೆಕಾಯಿ
ಕರಣತತಿ – ಇಂದ್ರಿಯ ಸಮೂಹ
ಕರವಾಳ್ – (ಕೈ) ಕತ್ತಿ
ಕರಿ – ಆನೆ
ಕರಿಣಿ – ಹೆಣ್ಣಾನೆ
ಕರುಮಾಡ – ಉಪ್ಪರಿಗೆ ಮನೆ
ಕಱೆದೊವಲ್ – ಕರೆಯಾದ ಚರ್ಮ
ಕಲಾಪಿಸ್ತ್ರೀ – ಹೆಣ್ಣು ನವಿಲು
ಕಳ್ – ಹೆಂಡ, ಮಧ್ಯ
ಕಱಲ್ – ಕಳಪೆ, ಹೀನ
ಕಲುಲ್ – ಉದುರು, ಬೀಳು
ಕಱೆ – ತಪ್ಪಿಸಿಕೊ, ಹೋಗಲಾಡಿಸು
ಕಱೆ – ಸಾಯಿ
ಕಱೆಪು – ಬಿಸುಡತಕ್ಕದು, ಕಳಪೆ (ಕುಂದು ದೋಷ)
ಕಱೆಯುಂಡು – ತೃಪ್ತಿಯಾಗಿ ತಿಂದು
ಕಾದಲನ್ – ನಲ್ಲ, ಪ್ರೇಮಿ
ಕಾಪು – ರಕ್ಷೆ
ಕಾರ್ – ಮಳೆ (ಗಾಲ)
ಕಾಲಲಬ್ಧಿ -ಸರಿಯಾದ, ಪಕ್ವಕಾಲ
ಕಾವರ್ – ಕಾಪಾಡುವವರು
ಕಾಷ್ಠ – ಕಟ್ಟಿಗೆ
ಕಿತ್ತಡ – ಕೆಟ್ಟಕೆಲಸ, ಅವಹೇಳನ
ಕಿಱವರೆಯ – ಎಳೆಯ ಪ್ರಾಯ
ಕಿಸುಗುಳ – ಹೇಯ, ಕ್ಷುದ್ರ, ನೀಚ ವಸ್ತು
ಕಿಸುಗುಳಿ – ನೀಚ, ಅಲ್ಪಳು
ಕುಕ್ಕಟ – ಕೋಳಿ
ಕುಕ್ಕುರಿ – ಹೆಣ್ಣು ನಾಯಿ
ಕುಟ್ಮಳ – ಮೊಗ್ಗು
ಕುಡಿಯನ್ – ಒಕ್ಕಲಿಗ
ಕುದಿರ್ – ಹಗೇವು, ಕಣಜ
ಕುನಿ – ಬಗ್ಗು, ಕುಗ್ಗು, ಅಡಗಿರು
ಕುನ್ನಿ – ನಾಯಿ (ಮರಿ)
ಕುಂದು – ಕಡಮೆಯಾಗು
ಕುರಂಗ – ಜಿಂಕೆ, ಚಿಗರಿ
ಕುರುಂಗರಿಪು – ಹುಲಿ
ಕುರುಳು – ತಲೆಗೂದಲು
ಕುಱುಗಣ್ – (ನೀಳವಲ್ಲದ) ಸಣ್ಣ ಕಣ್ಣು
ಕುಱುಪು – ಗುರುತು (ಕುಱೆ + ಪು)
ಕುವಳಯ – ಕನ್ನದಿಲೆ
ಕುಸುರಿದಱೆ -ಸಣ್ಣ ಸಣ್ಣಗೆ ಕತ್ತರಿಸು
ಕುಱೆ – ಗುಳಿ, ಗುಂಡಿ
ಕುಱೆನೊಸಲ್- ಗುಂಡಿ ಬಿದ್ದ ಹಣೆ
ಕೂರ್ – ಪ್ರೀತಿಯ
ಕೂರ್+ಅಸಿ – ಹರಿತಕತ್ತಿ
ಕೂರ್ತೆ – ಪ್ರೀತಿಸಿದೆ (ಧಾತು :ಕೂರ್)
ಕೂರ್ಪು – ಮೊನಚು, ಹರಿತ
ಕಱ್ – ಅನ್ನ, ಆಹಾರ
ಕೈಕವಾಕು – ಕೋಳಿ
ಕೃತಕ – ಮಾಡಿದ್ದು, ಸಹವಲ್ಲದ್ದು
ಕೃತನಿತ್ಯದಾನನ್ – ಮಾಡಬೇಕಾದ ದಾನಮಾಡಿ(ದವನು)
ಕೃತಾಂತ – ಯಮ
ಕೆಮ್ಮನೆ – ಸುಮ್ಮನೆ, ಬರಿದೆ
ಕೆಳರ್ – ಕೆರಳು, ರೇಗು
ಕೇಕಿ – ನವಿಲು
ಕೇತು – ಧೂಮಕಾಂತಿ
ಕೇರೆ – ಕೇರೆಹಾವು
ಕೇಳಿ – ಆಟ
ಕರ್ಮೆ – ಪ್ರೀತಿ
ಕೇಸರ – ಹೂವಿನ ಎಳೆ
ಕೈಗುಡು – ನೆರವಾಗು. ಸಹಾಯಮಾಡು
ಕೈರವ – ನೈದಿಲೆ
ಕೈವೋದ – ಚಿಗುರಿದ
ಕೊಕ್ಕ – ಒಂದು ಹಕ್ಕಿ
ಕೊಂಕಿಂ – ವಕ್ರವಾಗಿ, ವ್ಯಂಗ್ಯವಾಗಿ
ಕೊಂಕು – ಡೊಂಕು, ಸೊಟ್ಟು
ಕೊಟ್ಟು – ದಾನಕೊಟ್ಟು ; ಜುಟ್ಟು
ಕೊಳ್ ಕೋಳಿಸು – ಕೊಳ್ ಕೊಳ್ ಎಂದು ಚೂಬಿಡು
ಕೋಟಲೆ – ಕಾಟ ತೊಂದರೆ
ಕೌಮುದಿ – ಬೆಳದಿಂಗಳು
ಕ್ಷೋಣಿ – ಭೂಮಿ
ಕೌಕ್ಷೇಯಕ – ಕತ್ತಿ
ಕೌಳೇಯಕ(ತತಿ) – ನಾಯಿ (ಪಡೆ, ಗುಂಪು)
ಖ
ಖಗ – ಹಕ್ಕಿ
ಗ
ಗಜವೆಡಂಗ – ಆನೆಸೊಬಗ
ಗಣೆ (ಕಣೆ) – ಬಾಣ
ಗಂಡರ್ – ಗಂಡಸರು
ಗರಗರಿಕೆ – ಮೆರಗು, ಹೊಳಪು? ಸೊಗಸು
ಗರಗರಿಕೆ – ಗರಗರ ಶಬ್ದ, ಗದ್ಗವ?
ಗರಟಿಗೆ – (ಪೋಲೀಸಿನವನ) ಸುತ್ತು, ಗಸ್ತು
ಗಿಡು – ಗಿಡ, ಮರ
ಗುಜ್ಜ – ಗೂನ
ಗುರುವಚನ – (ತಂದೆ, ತಾಯಿ, ಗುರು ಮೊದಲಾದ) ಹಿರಿಯರ ಮಾತು
ಗೆಡೆ – ಗಳಹು, ಹರಟು
ಗೆಂಟು – ದೂರ (ಕಾಣುವಷ್ಟು) ದೂರ
ಗೆತ್ತು – (ತಪ್ಪಾಗಿ) ತಿಳಿದು, ಭ್ರಮಿಸಿ (ದಾತು : ಗಿಱು)
ಗೇಹ – ಮನೆ, ಆಶ್ರಯ
ಗೋದಾಮೆ – (ನವಿಲಿಗೆ ಅಪ್ರಿಯವಾದ ಒಂದು ಪ್ರಾಣಿ)? ಓತಿಕೇತ? ಗೋದುಮೆ ಹಾವು?
ಗೋರಿಗೊಳಿಸು – (ಮೋಸದಿಂದ) ಎಳೆ, ಆಕರ್ಷಿಸು
ಘ
ಘೃತ – ತುಪ್ಪ
ಚ
ಚರಣಾಯುಧ – ಕೋಳಿ
ಚರಣಾಯುಧವಧು – ಹೆಣ್ಣು ಕೋಳಿ
ಚರಮಾಂಗಪ್ರಮಿತನ್ – ಚರಮ (ಕೊನೆಯ) ಶರೀರದ ಪ್ರಮಾಣದ (ಅಳತೆಯ) ಮುಕ್ತ ದೇಹವುಳ್ಳವ್ಲನು
ಚರಿಗೆ – ಭಿಕ್ಷೆ
ಚರು – ಒಂದು ಬಗೆಯ ಅನ್ನದ ಹವಿಸ್ಸು
ಚಾಗ – ತ್ಯಾಗ, ಕೊಡುಗೈತನ
ಚಿಕುರ – ಕೂದಲು
ಚಾಳೆಯ – ನೆಗೆತ, ಜಿಗಿತ
ಜ
ಜನಾನಂದನರ್ – ಜನರಿಗೆ ಆನಂದಕೊಡುವವರು
ಜಲಧಿ – ಸಮುದ್ರ
ಜವ – ಯಮ
ಜವಳಿಗೆಟ್ಟು – ಜೋಡಿ
ಜಾತ – ಹುಟ್ಟಿದ್ದು : ಸಮುದಾಯ, ವರ್ಗ
ಜಾತಿಸ್ಮರ – ಹಿಂದಿನ ಜನ್ಮದ ಸ್ಮರಣೆಯುಳ್ಳ
ಜಾಯಿಲ – ಕುದುರೆ (ಒಳ್ಳೆಯ ಜಾತಿಯದು?)
ಜಾಲಗಾಱ – ಮೀನು ಹಿಡಿಯುವವನು, ಬೆಸ್ತ
ಚಾಲಾಂಧರ – ಜಾಲಾಂಧ್ರ, ಕಿಟಕಿ
ಜೀವಹತಿ – ಪ್ರಾಣಿವಧೆ
ಜೇನೆಯ್ – ಜೇನುತುಪ್ಪ
ಝಂಪೆ – ತಾಳ
ಠ
ಠಕ್ಕುಗೊಳ್ – ಬೆರಗಾಗು, ದಿಗ್ ಭ್ರಮೆಗೊಳ್ಳು
ತ
ತಗುಳ್ -ತೊಡಗು, ಮೊದಲು ಮಾಡು
ತಣಿದೆರ್ದು – ತೃಪ್ತಿಹೊಂದಿ ಎದ್ದು
ತಣಿವು – ತೃಪ್ತಿ
ತಂಡುಲ – ಅಕ್ಕಿ
ತತ್ತ್ವಪರಿಣತ – ಚೆನ್ನಾಗಿ ತತ್ತ್ವ ತಿಳಿದವನು
ತದೀಯ – ಅವರ
ತದೆ – ಸದೆ ಬಡಿ, ಚಚ್ಚು
ತಮ – ಕತ್ತಲೆ ಅಜ್ಞಾನ, ಪಾಪ
ತಮಿಸ್ರ – ಕತ್ತಲೆ
ತರಕ್ಷು – ಹುಲಿ
ತಱೆಸಲ್ – ತೀರ್ಮಾನಿಸು, ನಿಶ್ಚಯಿಸು
ತವರಾಜ – ಒಂದು ಬಗೆಯ ಸಕ್ಕರೆ?
ತವೆ – ಸವೆಯಲು, ಕ್ಷಮಿಸಲು
ತಳ – ಕೈ, ಕಾಲು – (ಕರತಲ, ಪದತಲ)
ತಳರ್ – ಹೊರಡು
ತಳರ್ – ಕದಲು
ತಳಾಮಳಕ – ಅಂಗೈ ನೆಲ್ಲಿಕಾಯಿ (ಸ್ಪಷ್ಟವಾದಕ್ಕೆ ಉಪಮಾನ)
ತಳಾಱ – ತಳವಾರ, ಗ್ರಾಮಾಧಿಕಾರಿ
ತಳಿ – ಚಮುಕಿಸು, ಎರಚು
ತಳಿರ್ – ಚಿಗುರು
ತಳ್ತು – ಸೇರಿ
ತಾಮ್ರಚೂಡ – ಕೋಳಿ
ತಾರಾ – ನಕ್ಷತ್ರ
ತಾರಾಧರ – ಚಂದ್ರ
ತಾಳುಗೆ – ಅಂಗುಳು
ತಿಂಗುಱೆ – ತಿನ್ನುವ ಕುರಿ
ತಿಣ್ಣಂ – ಹೆಚ್ಚಾಗಿ, ಚೆನ್ನಾಗಿ, ಬಲವಾಗಿ
ತಿರೋಹಿತೆ – ಕಣ್ಣಿಗೆ ಮರೆಯಾದವಳು
ತಿರ್ಯಕೆ +ಗತಿ – ಪಶು – ಜನ್ಮ
ತೀವಿರು – ತುಂಬಿರು
ತುಪ್ಪೇಱೆದ – ತುಪ್ಪಲೇಪಿಸಿದ
ತೂಂಬು – ತೂಬು
ತೂಲ – ತುಪ್ಪುಳು
ತೆಂಕವಂಕ – ದಕ್ಷಿಣ
ತೆತ್ತಿಸು – ಹೊಗಿಸು, ಸೇರಿಸು, ನೆಡು
ತೆನೆತೀವು – ಬಸಿರು, ತುಂಬು, ಬೆಳೆ
ತೆಂಬೆಲರ್ – ತೆಂಕಣಗಾಳಿ
ತೆಱ – ತರ, ಬಗೆ, ರೀತಿ
ತೆಱಪು – ಬಿಡುಹೊತ್ತು, ಅವಕಾಶ
ತೊಡಂಕು – ತೊಡಕು, ಸಿಕ್ಕು, ಬಂಧನ
ತೊಱೆ – ಸಂಸಾರಬಿಟ್ಟು ಸಂನ್ಯಾಸಿಯಾಗಿ
ತೊವಲು – ತೊಗಲು, ಚರ್ಮ
ತೋರ – ದಪ್ಪ, ದಟ್ಟ
ದ
ದತ್ತಾವಧಾನ – ಗಮನಕೊಟ್ಟವನು
ದಂತಫ್ರಭೆ – ಹಲ್ಲಿನ ಹೊಳಪು, ಕಾಂತಿ
ದಂತಿಪ – ಆನೆಯ ಮಾವುತ
ದಂದುಗ – ತೊಂದರೆ, ಕಾಟ, ಗೋಜು
ದರ್ಪಣ – ಕನ್ನಡಿ
ದವಳಾರ – ಧವಳಾಗಾರ, (ಸುಣ್ಣದ) ಬಿಳಿಯ ಮನೆ
ದಸಿ – ಗೂಟ
ದಾವಣೆಗುಱೆ – ಹಗ್ಗ ಕಟ್ಟಿದ ಕುರಿ (ಸಾಲು)
ದಿವ – ಸ್ವರ್ಗ
ದಿವಾಕರ – ಹಗಲು ಮಾಡುವವನು, ಸೂರ್ಯ
ದಿವಿಜಶರಾಸನ – ಕಾಮನಬಿಲ್ಲು
ದೀವ – ಬೇಟೆಯನ್ನು ಹಿಡಿಯಲು ಸೆಳೆಯಾಗಿ ಬಳಸುವ ಪ್ರಾಣಿ
ದೀವಿಗೆ – ದೀಪ
ದುಗ್ಧ – ಹಾಲು
ದುದುಂಭಿ – ಒಂದು ಬಗೆಯ ಭೇರಿ
ದುರಿತ -ಪಾಪ
ದುರಿತ – ಕೇಡು, ಅಮಂಗಳ
ದುರ್ನಯ – ಕೇಡು, ಅಪಶಕುನ?
ದೂದವಿ – ದೂತಿ
ದೂಳಿಚಿತ್ರ – ರಂಗೋಲಿ
ದೇಗುಲ – ದೇವಸ್ಥಾನ, ಗುಡಿ
ದೇವಾನಾಂಪ್ರಿಯ – ದಡ್ಡ
ದೇಹಿ – ಪ್ರಾಣಿ, ಜೀವಿ
ದೊರೆವಡೆ – ಶ್ಲಾಘ್ಯವಾಗು, ಶೋಭಿಸು
ದೊರೆವೆತ್ತು – ಶ್ಲಾಘ್ಯವಾಗಿ, ಶೋಭಿಸಿ
ದೋಷಾವಹಂ – ದೋಷ, ಕೆಡು – ತರತಕ್ಕದ್ದು
ಧ
ಧರಿತ್ರೀನಾಥಪದವಿ – ರಾಜಪದವಿ
ಧೃತಿ – ಧೈರ್ಯ, ತಾಳ್ಮೆ
ಧ್ವಾಂತ – ಕತ್ತಲೆ
ನ
ನಗ – ಬೆಟ್ಟ
ನಚ್ಚು – ಪ್ರೀತಿ
ನಂಜು – ವಿಷ
ನಡೆ – ಚೆನ್ನಾಗಿ (ನೋಡಲು, ಅರಸ)
ನಣ್ಪು – ಸ್ನೇಹ, ಸಂಬಂಧ, ಪ್ರೀತಿ
ನನೆ – ಮೊಗ್ಗು
ನನೆಕೊನೆ – (ಮೊಗ್ಗು) ಮೂತಿ ಬಲಿ, ತುಂಬು
ನನೆಕೊನೆವೋಗು- ಚಿಗುರಿ ಮೊಗ್ಗಾಗು, ಪುಲಕಿತವಾಗು
ನನೆಗಣೆ – (ಹೂ ಮೊಗ್ಗಿನ) ಬಾಣ
ನಂದನಚರ – ಹಿಂದಿನ ಜನ್ಮದಲ್ಲಿ ಮಗನಾಗಿದ್ದವನು
ನಮೇರು – ಸ್ವರ್ಗದ ಒಂದು ಮರ
ನಯವಿದೆ – ಮಾರ್ಗ ತಿಳಿದವಳು
ನಲ್ಲರ್ – ಪ್ರೇಮಿಗಳು, ಪ್ರಣಯಿಗಳು
ನಲ್ಲಳ್ – ಹೆಂಡತಿ, ಹೆಂಗಸು
ನಾಕ – ಸ್ವರ್ಗ
ನಾಗ – ಹಾವು
ನಾಡಾಡಿ – ಸಾಮಾನ್ಯ
ನಾಡೆ – ನೋಡಲು, ಯೋಚಿಸಲು
ನಾಯಕ ನರಕ – ಮುಖ್ಯ ನರಕ
ನಾರಿ – ಬಿಲ್ಲಿನ ಹಗ್ಗ, ಹೆದೆ
ನಾಸಾಕುಟ್ಮಳ – ಮೂಗು ಎಂಬ ಮೊಗ್ಗು
ನಿಗ್ಗವ – ದಂತ
ನಿಗ್ರಹ – ಪೀಡೆ, ಹಿಂಸೆ
ನಿಟ್ಟಿಸು – (ದೃಷ್ಟಿಸಿ) ನೋಡು
ನಿತ್ಯನ್ – ಶಾಶ್ವತನು, ಎಂದೆಂದೂ ಇರುವವನು
ನಿನದ – ಶಬ್ದ
ನಿಯತಿ – ವಿಧಿ
ನಿರಪೇಕ್ಷಕನ್ – ಅಪೇಕ್ಷಿಸಿದವನು, ಬಯಸದವನು
ನಿರವಯವನ್ – ಅವಯವ, ಅಂಗ, ಭಾಗ, ಇಲ್ಲದವನು
ನಿರವಿಸು – ನಿರೂಪಿಸು, ಹೇಳು
ನಿರ್ದುರಿತನ್ – ಪಾಪವಿಲ್ಲದವನು
ನಿರ್ವೆಟ್ಟಿದು – ಮೃದು
ನಿಲವಿನ ಸೂಡು – ಏರಿಳಿತಗಳಿಲ್ಲದ ಒಂದೇ ಸಮನಾದ ಕಾವು
ನಿಶ್ಚಿದ್ರ – ಬಿರುಕು, ರಂಧ್ರ, ಇಲ್ಲದ್ದು
ನಿಶ್ಯಂಕತೆ – ನಿರ್ಯೋಚನೆ, ನಿರ್ಭಯತೆ
ನೀರಜವನ – ತಾವರೆಯ ವನ
ನೀರಡಸು – ನೀರಡಿಕೆ, ಬಾಯಾರಿಕೆ – ಆಗು
ನೀರೋಡು – ಬಣ್ಣ ಕೆಡು, ಕಳೆಗುಂದು
ನೀಲಾಚಲ – ಕರಿಯಬೆಟ್ಟ
ನೆಗಪು – ಮಾಡು, ನಡೆ, ಆಚರಿಸು
ನೆರಱ್ತೆ – ನಡತೆ, ಚರಿತ್ರೆ
ನೆತ್ತ – ಪಗಡೆ
ನೆರಬಂಡೆ – ಸಹಾಯ ಹೊಂದು
ನೆರೆ – ಕೂಡು ಸೇರು
ನೆಱೆ – ಪೂರ್ತಿ, ಚೆನ್ನಾಗಿ
ನೆಱೆದ – ತುಂಬಿ ಬೆಳೆದ
ನೆಲೆ+ಅಂದೆಯ – ಕದಲದೆ ನೆಲೆಯಾಗಿರುವ ಅಂದೆಯ (=ಗೂಬೆ)
ನೇರಣ – ಶುದ್ಧ
ನೊಸಲ್ – ಹಣೆ
ನೋಂತು – ವ್ರತಮಾಡಿ
ಪ
ಪಜ್ಜಳಿಸು – ಪ್ರಜ್ವಲಿಸು, ಹೊಳೆ
ಪಂಚಶತ – ಐನೂರು
ಪಟ್ಟು -ಮಲಗು (ಧಾತು : ಪಡು)
ಪಥ್ಯ -ನಡೆಯತಕ್ಕದು, ಇಷ್ಟವಾದ್ದು
ಪದ(ನ್) -ಹದ, ಸ್ಥಿತಿ
ಪದಾಬ್ಜ -ಅಡಿದಾವರೆ
ಪದುಳಿಸು -ನೆಮ್ಮದಿಯಾಗು, ಸಮಾಧಾನಗೊಳ್ಳು
ಪಂದರ್ -ಹಂದರ, ಚಪ್ಪರ
ಪಂದೆ -ಹಂದೆ, ಹೇಡಿ
ಪರಕೆ -ಹರಕೆ, ಆಶೀರ್ವಾದ
ಪರತ್ರೆ -ಪರಲೋಕ, ಮೋಕ್ಷ
ಪರದ -ವ್ಯಾಪಾರಿ
ಪರಪು -ಹರವು, ಅರಹಾಕು
ಪರಮಶ್ರೀ(ವಧು, ಕಾಂತೆ) – ಮೋಕ್ಷಲಕ್ಷ್ಮಿ
ಪರಸಿ – ಹರಸಿಕೊಂಡು, ಹರಕೆ ಮಾಡಿಕೊಂಡು
ಪರಿ – ಬಗೆ, ಕ್ರಮ
ಪರಿಖೆ – ಕಂದಕ
ಪರಿಚ್ಛೇದಿಸು – ತೀರ್ಮಾನಿಸು
ಪರಿಸರ – ಸುತ್ತುಮುತ್ತು
ಪರಿವೇಷಿತ – ಬಳಸಿದ
ಪರಿಹರಿಸು – ತೆಗೆದುಹಾಕು, ಕಳೆ
ಪರೀಷಹ – (ಸಾಧನೆ ಮಾರ್ಗದಲ್ಲಿ ಯಾರೂ ಉದ್ದೇಶಿಸದೆ ಬರುವ) ಹೊರಗಿನ ಅಡ್ಡಿ, ಅಡಚಣೆ : ತಪೋವಿಘ್ನ ಕಾರಿಗಳಾದ ಕ್ಲೇಶಗಳು; ಹಸಿವು, ನೀರಡಿಕೆ ಮೊದಲಾದವು
ಪರ್ಬುಗೆ – ಹಬ್ಬುಗೆ
ಪರೆ – ಚೆದುರು, ತೊಲಗು
ಪರೆ – ಹಬ್ಬು, ಹರಡುಗ, ಪ್ರಸರಿಸು
ಪಱಮೆ – ದುಂಬಿ
ಪಱುದಲೆ – ಹರುಕು ತಲೆ
ಪವಡಿಸು – ಮಲಗು
ಪಸಾಯದಾನ – ಪ್ರಸಾದ (ಮೆಚ್ಚಿಕೊಟ್ಟ) ದಾನ
ಪಸಾಯಿತ – ಪ್ರಸಾದಿತ, ಮೆಚ್ಚು ಪಡೆದ
ಪಱ – ಹಣ್ಣು
ಪಱಿಯ – ಹಳೆಯ
ಪಾಣ್ಪೆ – ಹಾದರಗಿತ್ತಿ, ಜಾರೆ
ಪಾತ್ರಮನಾಡು- ಕುಣಿ, ನರ್ತನ ಮಾಡು
ಪಾದರಿ – ಹಾದರಗಿತ್ತಿ, ಜಾರೆ
ಪಾರ್ವನ್ – ಬ್ರಾಹ್ಮಣ
ಪಾಳಿ – ಕ್ರಮ, ಸಾಲು?
ಪಿಟ್ಟು – ಹಿಟ್ಟು
ಪಿಂಡು – ಹಿಂಡು, ಗುಂಪು
ಪಿತ್ತಳೆ -ಹಿತ್ತಾಳೆ
ಪಿಸುಳ್ – ಹಿಸಿದುಹೋಗು
ಪಿಳುಕು – ಮರಿ
ಪೀತಚ್ಛತ್ರ – ಹೊಂಗೊಡೆ, ಚಿನ್ನದ ಛತ್ರಿ
ಪುಂಜ – ಹುಂಜ
ಪುರುದೇವ – ಮೊದಲನೆಯ ತೀರ್ಥಂಕರ
ಪುರುಳ್ – ಹುರುಳು, ಅರ್ಥ
ಪುರ್ವು – ಹುಬ್ಬು
ಪುಲಿಗೋಣ – ಹುಲಿ ಹಿಡಿಯಲು ಸೆಳೆಯಾಗಿ ಕಟ್ಟುವ ಕೋಣ
ಪುಳಿ – ಹುಳಿ
ಪುಳಿನ – ಮರಳು
ಪುಳಿಂದ – ಬೇಡ, ಬೇಟೆಗಾರ
ಪುಱುಕರು – ಹುಳುಕರು, ಕ್ಷುದ್ರರು
ಪುಱುಪತ್ತು – ಹುಳುಹಿಡಿ, ಹುಳುತು ಹೋಗು
ಪೆತ್ತಿರೆ – ಹೊಂದಿರಲು, ಪಡೆದಿರಲು (ಧಾತು ಪೆಱು)
ಪೆಱಗೆ – ಹಿಂಗಡೆ
ಪೆಱತು – ಬೇರೆ (ಯದು)
ಪೆಱೆ – ತಿಂಗಳು, ಚಂದ್ರ
ಪೆಸರ್ಗೊಳ್ – ಹೆಸರು ಹೇಳು, ಉಚ್ಚರಿಸು
ಪೆಳಱು – ಹೆದರು
ಪೇರ್ +ಅಡಗು – ಹೆಚ್ಚು ಮಾಂಸ
ಪೇರ್ +ಉರ – ಅಗಲ, ದೊಡ್ಡ ಎದೆ
ಪೊಡವಡು – ನಮಸ್ಕಾರ ಮಾಡು
ಪೊಣ್ಮು – ಹೊಮ್ಮು ಹೊರತೋರು, ಉಂಟಾಗು
ಪೊನ್ – ಹೊನ್ನು
ಪೊಂಪುಱೆ – ಉಕ್ಕು, ಅಧಿಕ್ಯ
ಪೊಯ್ ವಡೆ- ಏಟುತಿನ್ನು
ಪೊಯ್ ಸಾಸವೆ – ಹೊಯ್ಯುವ ಸಾಸವೆ
ಪೊರೆ – ಹೊರೆ, ಹತ್ತಿರ
ಪೊರೆಯೇಱು- ಕಳೆದುಂಬು, ಕಾಂತಿಗೂಡು
ಪೊಱಂಟ – ಹೊರಕ್ಕೆ ಹೊರಟುಕೊಂಡ
ಪೊಱಮಡು – ಹೊರ-ಹೊರಡು, ಬರು
ಪೊಲಂಬು – ಹೊಲಬು, ದಾರಿ
ಪೊಲ್ಲದು – ಸರಿಯಲ್ಲ(ದ್ದು)
ಪೊಲ್ಲಮೆ – ಕೇಡು, ಕೆಟ್ಟದ್ದು
ಪೊಳಂಕು – ಹೊಳೆದು ಹಾರಾಡು, ಚಿಮ್ಮು
ಪೋಗಂಡ – ಅಂಗಹೀನ
ಪೋಂತು – ಹೋತ
ಪೋರಿ – ಹೋರಿ
ಪೋರ್ಕುಳಿ – ಹೋರಾಟ
ಪ್ರಕುಪಿತಚಿತ್ತನ್ – ಕೋಪಗೊಂಡ ಮನದವನು
ಪ್ರಚಯ – ಗುಂಪು, ಪುಂಜ
ಪ್ರಚ್ಛನ್ನ – ಮರೆ, ಒರೆ
ಪ್ರತಿಪಕ್ಷನ್ – ಎದುರಾಳಿ, ಹಗೆ
ಪ್ರಧಾನರ್ – ಮಂತ್ರಿಗಳು, ಪ್ರಮುಖರು
ಬ
ಬಗೆಕದಡಿ – ಮನಕಲಕಿ
ಬಟ್ಟೆ – ದಾರಿ, ಮಾರ್ಗ
ಬಣಂಬೆ – ಬಣಬೆ, ಮೆದೆ, ರಾಶಿ
ಬದಗ – ಕೀಳಾಳು, ಕ್ಷುದ್ರ, ಸೇವಕ
ಬದಗುಳಿಗ – ಬದಗ
ಬಂದಿಸು – ವಂದಿಸು, ನಮಸ್ಕರಿಸು
ಬಯ್ಸಿಕೆ – ಬೆಸುಗೆ
ಬಱಗೊಳ – ಬತ್ತಿದ ಒಣಗಿದ ಕೊಳ
ಬರ್ದಳೊ – ಬದುಕಿದಳೊ (ಧಾತು : ಬಱ್)
ಬರ್ದಿದ – ಬದುಕಿದ, ಸಂಸಾರ ನಡೆಸಿದ
ಬಲಗೊಳ್ – ಪ್ರದಕ್ಷಿಣೆ ಮಾಡು
ಬಸನಿಗತನ – ದುರ್ವ್ಯಸನಕ್ಕೆ ಬಿದ್ದಿರುವುದು
ಬಸಿಱ್ – ಹೊಟ್ಟೆ
ಬಸ್ತಕ – ಗಂಡಾಡು
ಬಳರಿ – ಮಾರಿಯ ಹೆಸರು (ಬಳಾರಿ)
ಬಾಡು – ಮಾಂಸ
ಬಾಣಸು – ಅಡಿಗೆಯ ಮನೆ
ಬಾಯ್ಕೇಳಿಸು – ವಿನೋದಿಸು
ಬಾರಿಪರ್ – ನಿವಾರಿಸುವವರು, ಬಿಡಿಸುವವರು
ಬಾರೇಱೆ – ಚರ್ಮ ಕಿತ್ತು ಬರುವುದು
ಬಾಷ್ಪ – ಕಣ್ಣೀರು
ಬಾಸಣಿಸು – ಮುಚ್ಚು
ಬಾಱ್ – ಬಾಳು, ಬದುಕು
ಬಿದಿ – ವಿಧಿ
ಬಿನದ – ವಿನೋದ
ಬಿಬ್ಬಿಱುವಲ್ – ಉಬ್ಬುಹಲ್ಲು
ಬಿಲ್ಲುಂಬೆಱುಗು -ಬಹಳ ಆಶ್ಚರ್ಯ
ಬೀಜಾವಾಪ – ಬಿತ್ತನೆ, ಬೀಜ ನೆಡುವುದು
ಬೀಟೆ – ಬಿರುಕು
ಬೇಧಿಸು – ನಾಟಿಸು
ಬೆದೆಯಾದ – ಸಂಭೋಗ ಕಾಲ ಒದಗಿದ
ಬೆಂತರ – ಗಾಳಿ, ಪಿಶಾಚಿ
ಬೆರಗು – ಉಪಾಯ
ಬೆರ್ಚು – ಹಕ್ಕಿ ಹೆದರಿಸಲು ಕಟ್ಟಿದ ಬೊಂಬೆ ಮೊದಲಾದುವು
ಬೆಸಗೂಳ್ – ಕೇಳು
ಬೆಸನ – ವ್ಯಸನ, ಹಂಬಲ
ಬೇಡು – ಕೋರು, ಆಸೆಪಡು
ಭ
ಭಂಗಿ – ರೀತಿ, ಅವಸ್ಥೆ
ಭವನಿಬದ್ಧ – ಸಂಸಾರದ ಕಟ್ಟು
ಭವರೋಷ – (ಹೋದ) ಜನ್ಮದ ಕೋಪ
ಭವಾಂತರವ್ಯಾಮೋಹ – ಬೇರೆ ಜನ್ಮದಿಂದ ಬಂದ ಮೋಹ
ಭವ್ಯ – ಜೈನಧರ್ಮ ಸ್ವೀಕಾರಕ್ಕೆ ಯೋಗ್ಯತೆ ಬಂದವನು, ಪಕ್ವಾವಸ್ಥೆಯಲ್ಲಿರುವವನು
ಭೂತಚತುಷ್ಟ + ಅವಯವ – ಪೃಥ್ವಿ, ಅಪ್ಪು, ವಾಯು ಮತ್ತು ತೇಜಸ್ಸುಗಳಿಂದ ಆದ ದೇಹ
ಭೈರವ – ಈಶ್ವರನ ಎಂಟು ರೂಪಗಳಲ್ಲಿ ಒಂದು
ಭೌಮಾಷ್ಟಮಿ – ಮಂಗಳಕರವಾದ ಅಷ್ಟಮಿ
ಮ
ಮಕುಟ ಮಸ್ತಕ – ಕಿರೀಟ ಧರಿಸಿದ ತಲೆ
ಮಗುಳ್ – ಹಿಂದಿರುಗು
ಮಗ್ಗು (ಮಱ್ಗೆ) – ತಗ್ಗು, ಅಡಗು
ಮಗ್ಗುಲಿಕ್ಕು – ಮಗ್ಗುಲಾಗಿ ಒರಗು
ಮಂಚಿಕೆ – ಒಂದು ಬಗೆಯ ಅಟ್ಟಣೆ
ಮಣಕು – (ಎಣ್ಣೆ, ಬೆವರು, ಮೊದಲಾದವುಗಳ ಗಬ್ಬು ನಾತ)
ಮದಿಲ್ – (ಪಾಳಿಯ) ಗೋಡೆ
ಮನದನ್ನಳ್ – ತನ್ನ ಪ್ರಾಣಪ್ರಿಯೆ
ಮನಸಿಜ – ಮನ್ಮಥ, ಕಾಮ
ಮನುಜೇಂದ್ರಾಂಗನೆ – ರಾಣಿ, ಅರಸಿ
ಮಂದಾರ – ಸ್ವರ್ಗದ ಒಂದು ಮರ
ಮಯೂರ – ನವಿಲು
ಮರಲ್ – ಹೂವಿಡು, ಅರಳು
ಮರಾಳ – ಹಂಸ
ಮರೀಚಿಕೆ – ಮೃಗಜಲ
ಮಱುಗು – ಕುದಿ, ಸಂಕಟಪಡು
ಮಲಯಜ – ಶ್ರೀಗಂಧ
ಮಲಯಾನಿಲ – ಮಲಯಪರ್ವತದ ಗಾಳಿ
ಮಸಿಮುಸುಡನ್ – ಕರಿಮೂತಿಯವನು
ಮಸುಳ್ – ಕಳೆಗುಂದು, ಮಾಸು, ಕೆಡು
ಮಸ್ತಕ – ತಲೆ
ಮಹಳ – ಮಹಾಲಯ
ಮಹಿಷ – ಕೋಣ
ಮಾಡ – ಮನೆ
ಮಾಡಿತು – ಮಾಡಿದ್ದು
ಮಾಣ್ – ಬಿಡು
ಮಾಣಿಸ್ – ಬಿಡಿಸು, ತಪ್ಪು
ಮಾದರ – ಹೊಲೆಯ
ಮಾನಸವಾಱ್ – ಮನುಷ್ಯನ ಬಾಳು
ಮಾಱಂಕ – ಪಡಿಯಚ್ಚು, ಹೊಲಿಗೆ
ಮಾರ್ಗಾವಲಗ್ನನೇತ್ರೆ – (ಕೆಳದಿ ಬರುವ) ದಾರಿಯಲ್ಲೆ ನೆಟ್ಟ ಕಣ್ಣುಳ್ಳವಳು, ಹಾರೈಸಿ ಎದುರು ನೋಡುತ್ತಿರುವವಳು
ಮಾಱ್ಕೆ – ಬಗೆ, ತೆರ, ರೀತಿ
ಮಿಡುಕು – ಮಿಡಿಯುವುದು, ತುಡಿತ, ನೋವು, ಅಲುಗು, ಅಳ್ಳಾಡು
ಮಿಥ್ಯಾಕಂದರ – ಹುಸಿ (ಎಂಬ) ಗವಿ
ಮಿಳಿ – ಚರ್ಮದ ಹಗ್ಗ, ಬಾರು
ಮುಗಿ – ಮುಚ್ಚು
ಮುಗಿಲ್ – ಮೋಡ
ಮುಗುಳ್ – ಮೊಗ್ಗು (ಆಗು)
ಮುಡಿ – ಕೂದಲ ಗಂಟು, ಶಿಖೆ, ತಲೆ
ಮುಡಿ(ಡು)ಪು – ಮುಗಿಸು, ಸಾಯಿ
ಮುದಿರ್ – ಮುದುರಿಹೋಗು, ಕುಗ್ಗು
ಮುದುದೊವಲ್ – ಮುದಿಯಾದ ಸುಕ್ಕಿದ ಚರ್ಮ
ಮುನ್ನೀರ್ – ಕಡಲು, ಸಮುದ್ರ
ಮುರುಟಿದ – ಸುರುಟಿಕೊಂಡ
ಮುರುಡನ್ – ಮುದುರಿ, ಸುರುಟಿ – ಹೋಗಿರುವವನು
ಮುರುಡು – ವಕ್ರ, ಸೊಟ್ಟು
ಮೂದಲಿಸು – ಕೆಣಕಿ ಕರೆ
ಮೂದಲೆ (ಉಲಿ) – ಕೆಣಕು ನುಡಿ, ಚುಚ್ಚುಮಾತು, ಜರೆಯುವುದು
ಮೂರಿ – ಮುಖ; ಬಾಯಿ
ಮೃಗಮದ – ಕಸ್ತೂರಿ
ಮೃಗನಾಭಿತಿಲಕ – ಕಸ್ತೂರಿ
ಮೃಗಯಾನರ್ಮಮನ – ಬೇಟೆಯ ವಿನೋದದ ಮನಸ್ಸಿನವನು
ಮೃತಿ – ಸಾವು, ಮರಣ
ಮೆಱೆವ – ಶೋಭಿಸುವ
ಮೇಗು – ಮೇಲಾದ್ದು, ಒಳ್ಳೆಯದು
ಮೇದಿನಿ – ಭೂಮಿ
ಮೇಳಿಸಿಕೊಂಡು – (ಹಾವಭಾವದಿಂದ) ಪ್ರೀತಿ, ತೋರಿ, ಪುಸಲಾಯಿಸಿಕೊಂಡು
ಮೊದಲ್ – ಮೂಲ, ಬೇರು
ಮೊನಸು – (ಮೊಗ್ಗು) ಮೂತಿಯಿಡು
ಮೊರಡಿ – ಕಲ್ಗುಡ್ಡ
ಮೊಳೆವೋಗು – ಮೊಳೆ, ಆಗತಾನೆ ಹುಟ್ಟು
ಮೋಳಿಗೆ – (ಸೌದೆಯ) ಕಟ್ಟು, ಕಂತೆ, ಹೊರೆ
ಮೌರ್ವಿ – ಹುಲ್ಲಿನದಾರ ; ಬಿಲ್ಲಿನ ಹಗ್ಗ
ಯ
ಯುಗ (ಳ) – ಜೋಡಿ
ಯೋಜಿಸು – ಕೂಡಿಸು, ಹೊಂದಿಸು
ರ
ರಣಧೌತ – ಯುದ್ಧದಲ್ಲಿ (ರಕ್ತಮಿಂದು) ಮಡಿಯಾದ್ದು
ರವ – ಧ್ವನಿ
ರಸಿಗೆ – ಗಾಯದ ನೀರು
ರಾಧೆ – ಅನುರಾಧಾ ನಕ್ಷತ್ರ
ಲ
ಲಕ್ಕ – ಲಕ್ಷ
ಲಂಪಣ – ಲಂಪಟ, ಕಾಮುಕ
ಲುಲಾಯ – ಕೋಣ
ಲೆಂಕರ್ – ಸೇವಕರು
ಲೋಹತಮತ್ಸ್ಯ – ಕೆಮ್ಮೀನು
ವ
ವಕ್ತ್ರ – ಮುಖ, ಬಾಯಿ
ವನಜವನ – ತಾವರೆಯ ವನ
ಮನಮೃಗ – ಜಿಂಕೆ, ಎರಲೆ
ವಂದಿ – ಹೊಗಳುಭಟ್ಟ
ವರ್ತಿ – ಬತ್ತಿ
ವಾರಿ – ಕತ್ತಿ (ಮಾರಿ) ?
ವಾರ್ ಬಿಂದು – ನೀರಹನಿ
ವಾಸಂತಿಕೆ – ವಾಸಂತಿ ; ವಸಂತ ಋತು
ವಿನೇಯ – ನಯವಂತ, ಮಾರ್ಗ ತಿಳಿದವನು
ವಿಪ್ರ – ಬ್ರಾಹ್ಮಣ
ವಿಭ್ರಮ – ಶೃಂಗಾರವಿಲಾಸ
ವಿಮೋಹಮೃಗ – ಮಾಯಾಮೃಗ
ವಿಷಣ್ಣ ಆನನೆ – ಕಳೆಗೆಟ್ಟ, ಕಂದಿದ ಮುಖದವಳು
ವಿಷಯ – ದೇಹ, ನಾಡು
ವಿಸರುಹ – ತಾವರೆ
ವಿಳಯ – ಪ್ರಳಯ, ನಾಶ
ವೆರಸು(ಬೆರಸು) – ಕೂಡಿ, ಸೇರಿ
ಮೇಱ್ಟದು(ಬೇಱ್ಟುದು) – ಬೇಕು
ವಜ್ರ – ಗುಂಪು ಸಮೂಹ
ಶ
ಶಯ್ಯಾತಳ – ಹಾಸಿಗೆ
ಶಿಖರಿ – ನವಿಲು
ಶೀತಕರ – ಚಂದ್ರ
ಶೀತಾಂಶು – ತಣ್ ಗದಿರ, ಚಂದ್ರ
ಶೀರ್ಷಾಭರಣ – ತಲೆಯೊಡವೆ, ಉತ್ತಮವಾದುದು
ಶುಭೇತರ – ಅಶುಭ, ಕೇಡು
ಶ್ರಾವಕಜನ – ಜೈನಗೃಹಸ್ಥ (ಹತಿಯಲ್ಲದವನು)
ಸ
ಸಂವರಣೆ – ನಿರ್ವಹಣೆ
ಸಂಸಾರ – ಜನ್ನ
ಸಂಕಲ್ಪನ ವಧೆ – ಮನಸ್ಸಿನಲ್ಲಿ ನೆನೆದ ಕೊಲೆ
ಸದ್ಬೋಧ – ಸುಜ್ಞಾನ
ಸಮಾಧಿಮರಣ – ಸಮಾಧಿಯಲ್ಲಿ ಧ್ಯಾನದಲ್ಲಿ, ಇದ್ದಾಗ ಆದ ಸಾವು
ಸಮೆ – ಮಾಡು
ಸಮ್ಯಕ್ತ್ವ – ಉತ್ತಮ ದಾರಿ, ಧರ್ಮ
ಸಯ್ಪು – ನೇರವಾದ್ದು; ನೇರ್ಪು, ಪುಣ್ಯ
ಸರಲ್ – ಸರಲು, ಬಾಣ
ಸರವಿ – ಹುರಿ, ಹಗ್ಗ
ಸರಸಿರುಹ – ತಾವರೆ
ಸರ್ವಭಾಷಾ ಸಾಮಾನ್ಯ – ಬೇರೆ ಬೇರೆ ಜನರಿಗೆ ಅವರವರ ಭಾಷೆಯಾಗಿ ಕೇಳಿಸುವ ದೇವಭಾಷೆ
ಸಲ್ವೆಂ – ಸಲ್ಲುವೆವು, ಸಾರುವೆವು
ಸವಣ – ಶ್ರವಣ, ಜೈನಯತಿ
ಸವಿದುಣ್ – ರುಚಿಹತ್ತಿ ತಿನ್ನು
ಸಾಗುದುರೆ – ಸಾಯು(ತ್ತಿರು)ವ ಕುದುರೆ
ಸಾರಂಗಟ್ಟು – ಕಟ್ಟಿಹಾಕು
ಸಿಂಟನ್ – (ತೊಳೆಯದೆ) ಹೊಲಸು, ನಾರುವವನು
ಸಿಸಿರ – ಶಿಶಿರ
ಸುಖೋದ್ವೀಪನ – ಸುಖ ಹೆಚ್ಚಿಸುವುದು
ಸುಟ್ಟರೆ – ಬಿರುಗಾಳಿ
ಸುಧಾಂಶು – ಚಂದ್ರ
ಸುಧಾಬಿಂದು – ಬೆಳುದಿಂಗಳ ಹನಿ
ಸುಧಾರ್ಣವ – ಹಾಲುಗಡಲು, ಕ್ಷೀರ ಸಮುದ್ರ
ಸುಪಕ್ಷ – ಒಳ್ಳೆಯ ರೆಕ್ಕೆ, ಶುಕ್ಲ, ಪಕ್ಷ
ಸುಮನೋಬಾಣ – ಕಾಮ, ಮನ್ಮಥ
ಸುಯ್ – ಉಸಿರು
ಸುರಭಿಶರನ್ – ಕಾಮ
ಸುರಚಾಪಚ್ಪವಿ – ಕಾಮನ ಬಿಲ್ಲಿನ ಕಾಂತಿ
ಸುವ್ರತ – ೨೦ನೆಯ ತೀರ್ಥಂಕರ
ಸುಹಾಹೆ – ಒಳ್ಳೆಯಗೊಂಬೆ
ಸೂಡು – ಸುಡುವುದು, ಮಸಣ
ಸೂರಿ – ವಿದ್ವಾಂಸ
ಸೂಱ್ಗೆ – ಸರದಿಯ ಮೇಲೆ
ಸೆಜ್ಜರ – ಮಲಗುವ ಮನೆ
ಸೆಜ್ಜೆಯ ದವಳಾರ – ಮಲಗುವ (ಸುಣ್ಣ ತೊಡೆದ) ಮನೆ
ಸೆಳ್ಳುಗುರ್ – ಚೂಪಾದ ಉಗುರು
ಸೈರಿಭ – ಕೋಣ
ಸೊಣರ್ – ದೀಪ
ಸೊದೆ – ಸುಧೆ, ಸುಣ್ಣ
ಸೋಗೆ – ನವಿಲುಗರಿ
ಸೋಲಿಸು – ಮೋಹಗೊಳಿಸು
ಸೌರಭ – ಕಂಪು, ವಾಸನೆ
ಸ್ಮರಚಾಪ – ಕಾಮನಬಿಲ್ಲು, (ಎಂದರೆ) ಕಬ್ಬು
ಸ್ಮೇರ – ಮಂದಹಾಸದ, ಪ್ರಪುಲ್ಲ, ಅರಳಿದ
ಸ್ರಜ – ಹೂವಿನ ಸರ
ಸ್ವನ – ನಾದ, ಧ್ವನಿ
ಸ್ವರವೇದವಿದ್ಯೆ – ಧ್ವನಿಯಿಂದ ಗುರುತಿಸಿ ಬಾಣಬಿಡುವ ವಿದ್ಯೆ
ಹ
ಹಪ್ಪಳಿಕೆ ಮೂಗು – ಚಪ್ಪಟೆ ಮೂಗು
ಹರಿ – ಸಿಂಹ
ಹರಿ – ದಾಳಿ
ಹರಿ – ದೂತ
ಹರಿಣ – ಜಿಂಕೆ, ಚಿಗರಿ
ಹಸಾದ – ಪ್ರಸಾದ, ಸಂತೋಷ
ಹೇಂಟೆ – ಹೆಣ್ಣುಕೋಳಿ
ಹೊಱಸು – ಒಂದು ಬಗೆಯ ಪಾರಿವಾಳ
Leave A Comment