೦೧.    “ಕಿಂ ಮಿತ್ರಂ? ಯತ್ ನಿವರ್ತಯತಿ ಪಾಪಾತ್” : (೪ ; ೩೬)
ಮಿತ್ರ ಯಾರು ? ಪಾಪದಿಂದ ಯಾರು ತಿರುಗಿಸುತ್ತಾನೋ ಅವನು.

೦೨.    “ಚಿತ್ರಂ ಅಪಾತ್ರೇ ರಮತೇ ನಾರೀ” : (೨ :೧೬)
ವಿಚಿತ್ರ! ಅಯೋಗ್ಯನಲ್ಲಿ ಹೆಂಗಸು ರಮಿಸುತ್ತಾಳೆ

೦೩.    “ದುರ್ಬಲಸ್ಯ ಬಲಃ ರಾಜಾ” : (೪.೩೮)
ದುರ್ಬಲರಿಗೆ ಬಲೆ ದೊರೆ

೦೪.   “ಯಥಾ ರಾಜಾ ತಥಾ ಪ್ರಜಾ” : (೪.೫೬)
ರಾಜನಂತೆ ಪ್ರಜೆ

೦೫.   “ಶುಚಿಃ ಅಜರಜಸಿ ಭವೇತ್ ಮಾಸ್ ಪಚನೇ ಶ್ವಸ್ಪೃಷ್ಟ ದೋಷಃ” : (೩ : ೫೭)
ಮಾಂಸಪಚನ ಮಾಡುವಲ್ಲಿ ನಾಯಿ ಮುಟ್ಟಿದ ದೋಷ ಆಡಿನ ರಜಸ್ಸಿನಿಂದ ಶುದ್ಧಿಯಾಗುತ್ತದೆ.

೦೬.    “ಸಂಸ್ಕಾರ ಶತೇನ ಅಪಿ ನ ಗೂಥಃ ಕುಂಕುಮಾಯತೇ” : (೪. ೪೨)
ಸಂಸ್ಕಾರಗಳು ನೂರು ಆದರೂ ಅಮೇಧ್ಯ ಕುಂಕುಮ (ಕೇಸರಿ) ಆಗುವುದಿಲ್ಲ.

೦೭.    “ಗಮನ ಪ್ರಾಯಶ್ಚಿತ್ತ ನಿಮಿತ್ತಂ” : (೧ :೧೭) ಜೈನಯತಿ ನಡೆಯುವಾಗ ತನ್ನ ಹೆಜ್ಜೆಗೆ ಯಾವ ಜೀವವೂ ಸಿಕ್ಕಿ ಹಿಂಸೆ ನಡೆಯಬಾರದು, ಇದಕ್ಕಾಗಿ ನೆಲದ ಮೇಲೆ ಮೂರು ಗಜ ದೂರದಲ್ಲಿ ಅವರ ಕಣ್ಣು ನೆಟ್ಟಿರಬೇಕು. ಹೀಗೆ ನಡೆಯುವಾಗ ಏನಾದರೂ ಪ್ರಾಣಿ ಹಿಂಸೆ ನಡೆಯಲಿ, ನಡೆಯದಿರಲಿ, ಸಂದೇಹ ಪರಿಹಾರಕ್ಕಾಗಿ ಅವನು ತನ್ನ ಗಮನಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಇದಕ್ಕೆ ‘ಗಮನ ಪ್ರಾಯಶ್ಚಿತ್ತ’ ಎಂದು ಹೆಸರು.