ಹಿಂದಿನ ಮೂರು ವರ್ಷಗಳಿಂದ ವಸಾಹತ್ತೋತರ ಕರ್ನಾಟಕದ ಅಭಿವೃದ್ದಿ ರಾಜಕಾರಣ ಎನ್ನುವ ಸಂಶೋಧನ ಯೋಜನೆಯ ಕೆಲಸ ನಡೆದಿದೆ. ಡಿಸೆಂಬರ್ ೨೦೧೦ಕ್ಕೆ ಯೋಜನೆ ಅಂತಿಮ ವರದಿ ಸಿದ್ಧಗೊಳ್ಳಬೇಕಿತ್ತು. ನಿರ್ಧರಿತ ವೇಳೆಗೆ ಯೋಜನೆಯ ವರದಿ ಸಿದ್ಧಗೊಂಡರು ಅದನ್ನು ಪುಸ್ತಕ ರೂಪದಲ್ಲಿ ತರಲು ಮತ್ತೆ ಕೆಲವು ತಿಂಗಳ ಕಾಲವಕಾಶಬೇಕೆಂದು ಮಾನ್ಯ ಕುಲಪತಿಗಳನ್ನು ವಿನಂತಿಸಿಕೊಂಡೆ. ಡಿಸೆಂಬರ್ ಅಲ್ಲ, ನವೆಂಬರ್ ೩೦ರೊಳಗೆ ಯೋಜನೆ ಪುಸ್ತಕ ರೂಪದಲ್ಲಿ ಸಿಗಬೇಕೆಂದು ಕುಲಪತಿಗಳು ಒತ್ತಾಯಿಸಿದರು. ಇಡೀ ಯೋಜನೆಯ ಅಧ್ಯಾಯಗಳನ್ನು ಮೂರು ಭಾಗ ಮಾಡಿ ಪ್ರತಿ ಭಾಗವನ್ನು ಪ್ರತ್ಯೇಕ ಪುಸ್ತಕ ರೂಪದಲ್ಲಿ ತಂದರೆ ನವೆಂಬರ್ ೩೦ರೊಳಗೆ ಎರಡು ಪುಸ್ತಕಗಳನ್ನು ಬರೆದು ಮುಗಿಸಬಹುದು. ಯೋಜನೆಯ ಕೆಲಸದಲ್ಲಿ ಈ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕುಲಪತಿಗಳನ್ನು ಕೋರಿದೆ. ನನ್ನ ಮನವಿಯನ್ನು ಪರಿಗಣಿಸಿ ಕುಲಪತಿಗಳು ಒಪ್ಪಿಗೆ ನೀಡಿದುದರ ಫಲವಾಗಿ ವಸಾಹತ್ತೋತ್ತರ ಕರ್ನಾಟಕದ ಭೂ ಸುಧಾರಣ ರಾಜಕಾರಣದ ಅಧ್ಯಯನ ‘ಯಾಕೀಗ ಭೂಮಿ ಪ್ರಶ್ನೆ?’ ಎನ್ನುವ ಪುಸ್ತಕ ಹೊರಬಂದಿದೆ. ಡಾ. ಮಂಜುನಾಥ ಬೇವಿನಕಟ್ಟಿ, ಕುಲಸಚಿವರು ಮತ್ತು ಶ್ರೀ ಜನಾರ್ಧನ, ವಿಭಾಗದ ಮುಖ್ಯಸ್ಥರು ಯೋಜನೆಯ ಕೆಲಸಕಾರ್ಯಗಳಿಗೆ ಬೇಕಾದ ರಜೆ ಹಾಗೂ ಹಣಕಾಸಿನ ನೆರವನ್ನು ನೀಡಿ ಯೋಜನೆಯ ಕೆಲಸ ಅಡೆತಡೆ ಇಲ್ಲದ ಮುಂದುವರಿಸಲು ಸಹಕರಿಸಿದ್ದಾರೆ. ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷರಾದ ಮಾರುತಿ ಮಾನ್ಪಡೆ ಮತ್ತು ನನ್ನ ಹಿರಿಯ ಸಹದ್ಯೋಗಿ ಡಾ.ಟಿ.ಆರ್. ಚಂದ್ರಶೇಖರ ಇವರಗಳು ಪುಸ್ತಕದ ಕರಡು ಪ್ರತಿಯನ್ನು ಓದಿ ಪ್ರತಿಕ್ರಿಯಿಸಿದ್ದಾರೆ. ಸ್ನೇಹಿತ ಡಾ. ಹರೀಶ ರಾಮಸ್ವಾಮಿ ಜತೆ ಯೋಜನೆಯ ರೂಪುರೇಶೆಗಳ ಬಗ್ಗೆ ನಡೆಸಿದ ಚರ್ಚೆ ಪುಸ್ತಕದ ಬರಹಕ್ಕೆ ನೆರವಾಗಿದೆ. ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಂದ ಸಂಗ್ರಹಿಸಿದ್ದೇನೆ. ಈ ಎರಡೂ ವಿಶ್ವವಿದ್ಯಾಲಯಗಳ ಗ್ರಂಥಪಾಲಕರು ಹಾಗೂ ಸಿಬ್ಬಂದಿಗಳು ಮಾಹಿತಿ ಕೆಲಸಕ್ಕೆ ಅತ್ಮೀಯವಾಗಿ ಸಹಕರಿಸಿದ್ದಾರೆ. ಪ್ರಸಾರಾಂಗ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಹಿಂದಿನ ನಿರ್ದೇಶಕರಾದ ಡಾ. ಮೋಹನ್ ಕುಂಟಾರ್, ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಕೆ.ಕೆ. ಮಕಾಳಿ ಮತ್ತು ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ ಹಾಗೂ ಮುದ್ರಕರಿಗೆ ಕೃತಜ್ಞತೆಗಳು.

ಎಂ. ಚಂದ್ರ ಪೂಜಾರಿ