ಯಾಕೆ ಹೊಡೆದಾಡ್ತಿ ತಮ್ಮ ಮನಮೆಚ್ಚಿ
ಒಂದು ದಿನ ಹೋಗುತೈತೆ ಕಣ್ಣಮುಚ್ಚಿ
ಮೇಲ್ ಮಣ್ಣ ಮುಚ್ಚಿ || ಯಾಕೆ ತಮ್ಮ ||

ಅಣ್ಣ ತಮ್ಮ ಇರುವರಣ್ಣ ಎಲ್ಲಿತನಕ
ಆಸ್ತಿ ಹಂಚುತನಕ ತಂದು ತೇಗೋತನಕ
ಉಂಡು ತಿಂದು ತೇಗೋತನಕ || ಯಾಕೆ ||

ಮಡದಿ ಮಕ್ಕಳಿರುವರಣ್ಣ ಎಲ್ಲಿತನಕ
ಉಂಡು ತಿಂದು ತೇಗೋತನಕ || ಯಾಕೆ ||

ಸತ್ತ ಮೇಲೆ ಬರುವರಣ್ಣ ಎಲ್ಲಿತನಕ
ಗುಂಡಿಗೆ ಎಳೆಯೊತನಕ ಮಣ್ಣ ಮುಚ್ಚೊತನಕ || ಯಾಕೆ ||

ಮಾಡಿದ್ದೆಲ್ಲ ಮುಟ್ಟಿದ್ದೆಲ್ಲ ಹೊಟ್ಟೆಗಾಯ್ತು
ಮಾಡಿದ್ದೆಲ್ಲೆ ಪುಣ್ಯಕಾಯ್ತು ಮುಂದೆ
ಮುಕ್ತಿಗಾಯ್ತು || ಯಾಕೆ ||