ಅಬ್ಬೆ ತುಮಕೂರ

ತಾ. ಯಾದಗಿರಿ
ದೂರ: ೧೦ ಕಿ.ಮೀ.

ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ೧೦ ಕಿ.ಮೀ. ಸವೀಪದಲ್ಲಿದೆ. ಶ್ರೀ ವಿಶ್ವರಾಧ್ಯರು ಚನ್ನಯ್ಯ ಶಾಸ್ತ್ರೀಗಳು ಮತ್ತು ನೀಲಮ್ಮಾ ದಂಪತಿಗಳ ಮಗನಾಗಿ ೧೮೮೦ ವಿಕ್ರಮ ಸಂವತ್ಸರ ಚೈತ್ರ ಶುದ್ಧ ತದಿಗೆ ಗುರುಮಠ ಪ್ರಾತಃ ಕಾಲದ ಶುಭಗಳಿಗೆಯಲ್ಲಿ ಜನಿಸಿದರು.

ವಿಶ್ವಾರಾಧ್ಯರು ಬೆಳೆಯುತ್ತಾ ರಾಚೋಟ ಎಂಬ ಗುರುವಿನಲ್ಲಿ ವಿದ್ಯೆಯನ್ನು ಕಲಿತರು. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಬಾಲಕನಾಗಿದ್ದಾಗಲೇ ವಿಶ್ವರಾಧ್ಯರು ಅನೇಕ ನೀತಿಗಳನ್ನು ತೋರಿಸುತ್ತಾ ವಿದ್ಯೆಯಲ್ಲಿ ಪಾರಂಪರಾಗ ತೊಡಗಿದ್ದಾರೆ.

ಶ್ರೀ ವಿಶ್ವರಾಧ್ಯರು ಮುಲತಃ ಗಂವ್ಹಾರದವರಾದರೂ ಅಬ್ಬೆ ತುಮಕೂರು ಕ್ಷೇತ್ರದಲ್ಲಿ ನೆಲೆನಿಂತು ಭಕ್ತರಿಗೆ ತಮ್ಮ ಇಷ್ಟಾರ್ಥಗಳನ್ನು ಕೊಡುತ್ತಿರುವಾಗ ಸಾಗರ ಸಾಗರದಂತೆ ಭಕ್ತರು ಹರಿದು ಬರುತ್ತಾರೆ. ವಿಶ್ವಾರಾಧ್ಯರ ಪಾದಸ್ಪರ್ಶದಿಂದ ಪುಟ್ಟಿಗ್ರಾಮ ಅಬ್ಬೆ ತುಮಕೂರು ಶ್ರೇಷ್ಟವಾಗಿ ಪಾವನಗೊಂಡಿತು. ಅಬ್ಬೆ ತುಮಕೂರಿನಲ್ಲಿ ಪ್ರತಿ ವರ್ಷಕ್ಕೊಮ್ಮೆ ಮಹಾಶಿವರಾತ್ರಿಯ ಐದನೇ ದಿನದಂದು ಜಾತ್ರೆ ನಡೆಯುತ್ತದೆ.  ಯಾದಗಿರಿ, ಗುಲಬರ್ಗಾ, ದೂರ ದೂರಗಳಿಂದ ಲಕ್ಷಾನು ಗಟ್ಟಲೇ ಜನ ಸಮೂಹವೇ ಜಾತ್ರೆಗೆ ಬರುತ್ತದೆ.

 

ಗುರುಮಿಠಕಲ್       

ತಾ. ಯಾದಗಿರಿ
ದೂರ: ೪೦ ಕಿ.ಮೀ.

ಜಿಲ್ಲಾ ಕೇಂದ್ರವಾದ ಯಾದಗಿರಿಯಿಂದ ಈಶಾನ್ಯಕ್ಕೆ ೪೦ ಕಿ.ಮೀ. ದೂರದಲ್ಲಿರುವ ಚಾರಿತ್ರಿಕ ಮಹತ್ವದ ಸ್ಥಳವಾಗಿದ್ದು ಊರ ಹೊರಗೆ ಚಂಡ್ರಕಿ ರಸ್ತೆಯಲ್ಲಿರುವ ವಿರಕ್ತಮಠ (ಶಾಂತವೀರ ಮಠ ಖಾಸಾಮಠ)ದಿಂದಾಗಿ ಪ್ರಸಿದ್ಧವಾಗಿದೆ. ಇದು ಸುಮಾರು ೧೫೦ ವರ್ಷಗಳಷ್ಟು ಪ್ರಾಚೀನವಾದ ಕಟ್ಟಡವಾಗಿದ್ದು, ಇಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮಿಗಳ ಗದ್ದುಗೆಯು ಸೇರಿದಂತೆ ಆರು ಗದ್ದುಗೆಗಳಿದ್ದು ಮಠವು ಆಕರ್ಷಕವಾಗಿದೆ.  ಹಲವಾರು ದೇವರ ಗುಡಿಗಳಿವೆ.

ಗುರುಮಠಕಲ್ ಜಲಪಾತವು ಯಾದಗಿರಿ ತಾಲೂಕಿಗೆ ಸೇರಿದ ಗುರುಮಠಕಲ್ ಪಟ್ಟಣದಿಂದ ನಚಾರಾಪುರಕ್ಕೆ ಹೋಗುವ ಹಾದಿಯಲ್ಲಿ ೪ ಕಿ.ಮೀ. ದೂರದಲ್ಲಿರುವ ನಿಸರ್ಗದತ್ತ ತಾಣವಾಗಿದೆ. ಸುಮಾರು ೨೫-೩೦ ಅಡಿ ಎತ್ತರದಿಂದ ಧುಮುಕುವ ಈ ಜಲಪಾತವನ್ನು ವೀಕ್ಷಿಸಲು ಚಳಿಗಾಲ ಸೂಕ್ತವಾಗಿದೆ. ಆದರೆ ಇದನ್ನು ತಲುಪುವುದೇ ಕಷ್ಟಕರವಾಗಿದ್ದು, ಪ್ರವಾಸಾಭಿವೃದ್ಧಿಗೆ ಸದಾವಕಾಶವಿದೆ.