ಕಲಿಂಗದೇಶದ (ಒರಿಸ್ಸಾ) ರಾಜನಾದ ಖಾರವೇಲನ (ಕ್ರಿ.ಪೂ. ೧೫೦) ಹಾಥಿಗುಂಪಾದ ಪ್ರಾಕೃತ ಶಾಸನದಲ್ಲಿ ‘ಯಾಪ – ಞಾವಕೆಹಿ’ ಎಂಬ ಪ್ರಯೋಗವಿದೆ. ಇದು ಯಾಪನೀಯಕ್ಕೆ ಸಂಬಂಧಿಸಿದ್ದಿರಬಹುದೆಂಬ ಸೂಚನೆಯಿದೆ, ಆದರೆ ಈ ವಿಚಾರದಲ್ಲಿ ಏಕಾಭಿಪ್ರಾಯವಿಲ್ಲ (ಎಇ. ಸಂಪುಟ ೨೦. ಸಂಖ್ಯೆ – ೭. ಕ್ರಿ. ಪೂ. ೧೫೦. ಪು. ೮೦).

ಈಗ ಖಚಿತವಾಗಿ ತಿಳಿದಿರುವಂತೆ, ಶಾಸನಗಳಲ್ಲಿ ಅತ್ಯಂತ ಪ್ರಾಚೀನವೂ ಮೊತ್ತಮೊದಲನೆಯದೂ ಆದ ಪ್ರಯೋಗ ಕರ್ನಾಟಕದ್ದು, ಬನವಾಸಿಯ ಆದಿಕದಂಬರ ಕಾಲದ್ದು. ಮೃಗೇಶ ವರ್ಮನು (ಕ್ರಿ. ಶ. ೪೫೫ – ೮೦) ಕ್ರಿ. ಶ. ೪೬೨ – ೬೩ರಲ್ಲಿ ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ, ತನ್ನ ಸ್ವರ್ಗೀಯ ತಂದೆಯ ಪರೋಕ್ಷ ವಿನಯಾರ್ಥವಾಗಿ ಜಿನಾಲಯವನ್ನು ಮಾಡಿಸಿದನು. ರಾಜಧಾನಿ ಪಲಾಶಿಕಾ (ಹಲಸಿ) ನಗರದಲ್ಲಿ ಮಾಡಿಸಿದ ಈ ಸಂದರ್ಭದಲ್ಲಿ ‘ಯಾಪನೀಯ – ನಿರ್ಗ್ರಂಥ – ಕೂರ್ಚಕ’ ರೆಂಬ ಜೈನ ಪಂಥಗಳವರಿಗೆ ೩೩ ನಿವರ್ತನ ಭೂಮಿಯನ್ನು, ಮಾತೃಸರಿತ್‌ ತೊರೆಯಿಂದ ಇಂಗಣಿ ಸಂಗಮದವರೆಗೆ ಇದ್ಧುದನ್ನು ದತ್ತಿಯಿತ್ತನು (ಜೆಬಿಬಿಆರ್‌ಎ ಎಸ್‌. ಸಂಪುಟ. ೯. ಎಇ. ಸಂಪುಟ ೬; ಇಆ.೬. ಪು.೨೪ – ೨೭; ಅದೇ, ಸಂಪುಟ. ೭. ಪು. ೩೩ – ೫೫; ಸಿಕೆಐ, ಸಂಖ್ಯೆ. ೧೩, ಪು. ೪೯ – ೫೨). ದಾಮಕೀರ್ತಿ ಭೋಜಕನೂ ಆಯುಕ್ತಕ ಜಯಂತನೂ ಈ ದಾನವನ್ನು ಪಡೆದರು.

ಆರನೆಯ ಶತಮಾನದ ಅನಂತರ ಅನೇಕ ಶಾಸನಗಳಲ್ಲಿ ಯಾಪನೀಯ ಸಂಘದ, ಅದರ ಶಾಖೆಗಳ, ಬಿಳಿಲುಗಳ ಹೆಸರುಗಳೂ ಗುರುಶಿಷ್ಯರ ವಿಚಾರಗಳು ಸಿಗುತ್ತವೆ. ಅವುಗಳಲ್ಲಿ ಪ್ರಸ್ತಾಪಿತವಾಗಿರುವ ಆಚಾರ್ಯರು, ಬಸದಿಗಳು, ದಾನಿಗಳು, ದಾನದ ಕಾಲ ಮತ್ತು ಸ್ವರೂಪ ಮೊದಲಾದವನ್ನು ಕುರಿತು ಪ್ರತ್ಯೇಕವೂ ವ್ಯಾಪಕವೂ ಆದ ಸಂಶೋಧನೆಗೆ ಇನ್ನೂ ಅವಕಾಶವಿದೆ. ಈಹೊತ್ತಿಗೆಯ ಪರಿಮಿತಿಯಲ್ಲಿ ಆ ಪ್ರಯತ್ನಕ್ಕೆ ನಾಂದಿಯ ರೂಪದಲ್ಲಿ ಕೆಲವು ವಿಚಾರಗಳನ್ನು ಚರ್ಚಿಸಲಾಗಿದೆ.

ಕರ್ನಾಟಕದ ಶಾಸನಗಳಲ್ಲಿ ಅನೇಕ ಯಾಪನೀಯ ಗುರುಶಿಷ್ಯ ಪರಂಪರೆಯ ಪೀಳಿಗೆಯನ್ನು ದಾಖಲಿಸಿದೆ. ಅದರ ಮಾದರಿಗಾಗಿ, ಕೇವಲ ಪ್ರಾತಿನಿಧಿಕ ರೂಪದಲ್ಲಿ ಏಳು ಗುರ್ವಾಳಿಯನ್ನು ಕೊಟ್ಟಿದೆ.

ಚಂದ್ರಿಕಾವಾಟ

1.

  ಧರ್ಮಸೇನ ತ್ರೈವಿದ್ಯ (ಸು. ೮೩೦)  
ಕುಮಾರಸೇನ (ಸು. ೮೬೦)
(ಚಾಂದಕವಟೆಯಿಂದ ಮುಳ್ಗುಂದಕ್ಕೆ ಈ ಸಂಘವನ್ನು ಸ್ಥಳಾಂತರಿಸಿದವರು)
ವೀರಸೇನ (ಸು. ೮೯೦)
ಕನಕಸೇನ (ಮುಳುಗುಂದ)
ಅರ್ಯಸೇನ – ಅರ್ಯನಂದಿ (ಸು. ೯೩೦)
ಅಜಿತಸೇನ ( ೯೬೦)
ಜಿನಸೇನ (೧೦೨೦)   ನರೇಂದ್ರಸೇನ (೯೯೦)
ಮಲ್ಲಿಷೇಣಸುರಿ (೧೦೫೦) ನಯಸೇನ – ೧ (೧೦೫೦)
(ಮಹಾಪುರಾಣ, ನಾಗಕುಮಾರಕಾವ್ಯ, ತಾಂತ್ರಿಕ ಕೃತಿಗಳು) ನರೇಂದ್ರಸೇನ – ೨ (೧೦೮೦)
ತ್ರೈವಿದ್ಯ ಚಕ್ರೇಶ್ವರ ನಯಸೇನ (೧೧೨೨) (ಧರ್ಮಾಮೃತ ಕಾವ್ಯ)

 

2.

ನರೇಂದ್ರಣಂದಿ ಮುನೀಂದ್ರ
|
(ತಚ್ಛಿಷ್ಯರ್‌) ಕನಕಣನ್ದಿ ಭಟ್ಟಾರಕರ್‌
|
(ತದನ್ತೇವಾಸಿಗಳ್‌) ಸಿದ್ಧಣನ್ದಿ ಪಣ್ದಿತದೇವರ್‌
|
(ತತ್ಸಹೋದರರ್‌) ಶಾನ್ತಿಣನ್ದಿ ಮುನೀನ್ದ್ರರ್ ( ಭಟ್ಟಾರಕರ್)
|
ಕ್ರಿ. ಶ. ೧೦೬೬
ದೇವಣನ್ದಿ ಭಟ್ಟಾರಕರ್‌
(ಸೌಇಇ. ೧೮.೭೧.೧೦೬೬)

*
ಸೂರಸ್ಥಗಣಚಿತ್ರಕೂಟಾನ್ವಯ
|
ಚಂದಣಾಂದಿ ಸಿದ್ಧಾಂತಮುನಿ
|
ಸಕಳಚಂದ್ರಮುನೀನ್ದ್ರ
|
ದಾವಣಂದಿ ಸಿದ್ಧಾನ್ತಮುನಿ
|
ಕನಕಣಂದಿ ಸೈದ್ಧಾಂತಿಕ (ಭಟ್ಟಾರಕ)
|
(ಶಿಷ್ಯ) ಉತ್ತರಾಸಂಘ ಭಟ್ಟಾರಕ
|
ಸಿರಿಣಂದಿ (ಶ್ರೀನಂದಿ) ಪಂಡಿತದೇವ
|
ಹುಳಿಯಬ್ಬಾಜ್ಜಿಕೆಯರು
|
(ಸೌಇಇ. ೧೧ – ೧.೧೧೧.೧೦೭೧. ಸೊರಟೂರು)
|
(ಶಿಷ್ಯ) ಭಾಸ್ಕರ ನಂದಿ ಪಣ್ದಿತದೇವ
|
(ಸಾಧರ್ಮಿ)ನಂದಿಭಟ್ಟಾರ
|
(ಸಾಧರ್ಮಿ) ಅರುಹಣಂದಿ ಭಟ್ಟಾರಕ
|
(ಶಿಷ್ಯ) ಅರ್ಯಪಂಡಿತ

(ಸೌಇಇ. ೧೧ – ೧.೧೧೩.೧೦೭೪. ಹುನಗುಂದ)

*
ನಂದಿಸಂಘ ಪುನ್ನಾಗವೃಚ್ಛ ಮೂಲಗಣಯಾಪನೀಯ

ಶ್ರೀ ಕೀರ್ತಿ ಆಚಾರ್ಯ
|
ಕೂಲಿ ಆಚಾರ್ಯ
|
ವಿಜಯಕೀರ್ತಿ
ವಿಮಲಾದಿತ್ಯ, ವಲ್ಲಭೇಂದ್ರ (ಮಯೂರಖಂಡಿಥಳವಾಸಿ)
(ಪ್ರಭೂತವರ್ಷನ ಕದಂಬ ತಾಮ್ರಪಟಗಳು; ಎಇ. ೪. ೪೯. ಕ್ರಿ.ಶ. ೮೧೩, ಪು. ೩೩೨ – ೪೯)

*
ಕ್ರಾಣೂರ್ಗಣ ತಿಂತ್ರಿಣಿಗಚ್ಛ
: ಎಕ. ೯ (ಪ) ಬೇ.೩೮೩. ೧೨೬೩ ೧೨೬೬ ಹಳೇಬೀಡು
*
ಜಟಾಸಿಂಹ ನಂದ್ಯಾಚಾರ್ಯ. ೮ನೆಯ ಶತಮಾನ
|
ಇಂದ್ರನಂದ್ಯಾಚಾರ್ಯ (ಪುಂನಮಯ್ಯನ ಗುರುಗಳು ) ಸು.೯೩೦
|
ಗುಣನಂದ್ಯಾಚಾರ್ಯ (ಗುಣಕರುಚಿ ಕ್ರಿ. ಶ) ಸು.೯೬೦
|
ಜಿನಚಂದ್ರದೇವ, ಸು. ೯೮೦
|
ಮೇಘಚಂದ್ರ ಸಿದ್ಧಾಂತದೇವ, ಸು. ೧೦೦೦
|
ಕನಕಚಂದ್ರ ಸಿದ್ಧಾಂತದೇವ – ೧, ಸು. ೧೦೧೦
|
ಮಾಧವಚಂದ್ರ ಸಿದ್ಧಾಂತದೇವ – ೧ ಸು. ೧೦೨೦
|
ಕನಕಚಂದ್ರ ತ್ರೈವಿದ್ಯದೇವ – ೨, ಸು. ೧೦೩೫
|
ಸಾಗರಚಂದ್ರ ಸಿದ್ಧಾಂತದೇವ, ಸು. ೧೦೪೦
|
ಮಾಧವಚಂದ್ರದೇವ – ೨, ಸು. ೧೦೫೦
|
ಬಾಳಚಂದ್ರ ಸಿದ್ಧಾಂತದೇವ, ಸು.೧೦೭೫
|
ಬಾಳಚಂದ್ರ ತ್ರೈವಿದ್ಯದೇವ, ಸು. ೧೧೦೦
|
ನೇಮಿಚಂದ್ರ ಸಿದ್ಧಾಂತದೇವ, ಸು. ೧೧೨೫
|
ಜಾವಳಿಗೆಯ ಮುನಿಚಂದ್ರದೇವ, ಸು. ೧೧೫೦
|
ಸಕಳಚಂದ್ರ ಭಟ್ಟಾರಕ ಸು. ೧೧೭೫
|
ಮಾಧವಚಂದ್ರ ತ್ರೈವಿದ್ಯ – ೩, ಸು. ೧೨೦೫
|
ಗಂಡವಿಮುಕ್ತ ಮಾಘನಂದಿಭಟ್ಟಾರ, ಸು. ೧೨೩೫
|
ಹೇಮಚಂದ್ರ ತ್ರೈವಿದ್ಯ, ಕ್ರಿ. ಶ. ೧೨೬೬ (ಮರಣ)

.

*
ಸೂರಸ್ಥಗಣ ಗುರುಪರಂಪರೆ
*
ಎ. ಕ. ೭(ಪ) ನಾಮಂ. ೩೩ (೪ ನಾಮಂ ೧೯) ಕ್ರಿ. ಶ. ೧೧೧೮ – ೧೯.
ಕಂಬದ ಹಳ್ಳಿ (ಮಂಡ್ಯ ಜಿ. ನಾಮಂ ತಾ.) ಪು. ೨೦ – ೨೨
*
ಅನಂತವೀರ್ಯ
(ಭೂಪಾಳಾನತ ಪಾದಾಬ್ಜೋ)
|
(ಶಿಷ್ಯ) ಬಾಳಚಂದ್ರಮುನಿಮುಖ್ಯ
|
(ತತ್ಸೂನು) ಪ್ರಭಾಚಂದ್ರ
|
(ಶಿಷ್ಯ) ಕಲ್ನೆಲೆದೇವ (ಅಚ್ಚ ಕನ್ನಡ ಹೆಸರನ್ನು ಸವಣರಿಗೆ ಇಡಲಾಗಿದೆ)
|
(ಸೂನು) ಅಷ್ಟೋಪವಾಸಿಮುನಿಮುಖ್ಯ
|
(ಸೂನು) ಹೇಮನನ್ದಿ ಮುನಿಶ್ವರ
|
(ರಾದ್ಧಾಂತ ಪಾರಗ, ಸೂರಸ್ಥಗಣ ಭಾಸ್ಕರ)
|
(ಅಂತೇವಾಸಿ) ವಿನಯನನ್ದಿಯತಿ
|
(ಸೂನು) ಏಕವೀರ ಮುನಿನಾಥ
|
(ಅನುಜ) ಪಲ್ಲಪಂಡಿತಯತಿ (ಪಾಲ್ಯಕೀರ್ತಿ ಪಂಡಿತದೇವ) ಅಭಿಮಾನದಾನಿ

[ಶ್ರೀ ಸೂರಸ್ಥಗಣೇಜಾತಾಶ್ವಾರುಚಾ | ರಿತ್ರಭೂಧರಃ
ಭೂಪಾಳಾನತ ಪಾದಾಬ್ಜೋ ರಾದ್ಧಾನ್ತಾರ್ಣ್ನವ ಪಾರಗಃ||]

ಚಿತ್ರಕೂಟಾನ್ವಯ ಗುರ್ವಾವಳಿ :
*
ಚಂದಣಂದಿ
|
ಸಕಳಚಂದ್ರಮುನಿಂದ್ರ
|
ದಾವಣಂದಿ ಸಿದ್ಧಾಂತ ಮುನೀಶ್ವರ
|
ಕನಕಣಂದಿ ಸೈದ್ಧಾಂತಿ/ಕನಕನಂದಿ ಭಟ್ಟಾರಕ
|
ಉತ್ತರಾಸಂಘ ಭಟ್ಟಾರಕರು
|
ಆಚಾರ್ಯ ಪಂಡಿತ
|
ಸಿರಿಣಂದಿ ಪಂಡಿತದೇವ/ಶ್ರೀನಂದಿ ಭಟ್ಟಾರಕ
(ಪರವಾದಿ ಶರಭ ಭೇರುಂಡ)
ಅರುಹಣಂದಿ ಭಟ್ಟಾರಕ/ ಅರ್ಹನಂದಿಪಂಡಿತ
ಕ್ರಿ. ಶ. ೧೦೦೭[ಸೌಇಇ. ೧೧ – ೧.೧೧೩. ೧೦೭೪. ಪು. ೧೧೨
ಅದೇ, ಸಂಖ್ಯೆ, ೧೧೧.೧೦೭೧, ಸೊರಟೂರು
ಅದೇ, ಸಂಖ್ಯೆ, ೫೨,೧೦೦೭.ಲಕ್ಕುಂಡಿ]

ಕೆಲವು ಶಾಸನಗಳಲ್ಲಿ ಆಯಾ ಕಾಲದಲ್ಲಿದ್ದ ಯಾಪನೀಯ ಯತಿಯ ಹೆಸರು ಇರುತ್ತದೆಯಾದರೂ ಮತ್ತೆ ಕೆಲವು ಶಾಸನಗಳಲ್ಲಿ, ಅವು ರಚಿತವಾದ ಅವಧಿಯಲ್ಲಿ ಜೀವಿಸಿದ್ದ ಸವಣರನ್ನಲ್ಲದೆ, ಅವರ ಹಿಂದೆ ಆಗಿಹೋದ ಹಲವು ತಲೆಮಾರಿನ ಗುರುಶಿಷ್ಯ ಪರಂಪರೆಯನ್ನೂ ಧಾಖಲಿಸಿದೆ ಎಂಬುದು ಮೇಲೆ ಉದಾಹರಿಸಿದ ಮೂರುನಾಲ್ಕು ಮಾದರಿಗಳಿಂದ ತಿಳಿಯುತ್ತದೆ. ಈ ಪಟ್ಟಿಯನ್ನು ಬೆಳಸದೆ ಸಾರಾಂಶವಾಗಿ ಹೇಳುವುದಾರೆ, ಶಾಸನಗಳಲ್ಲಿ ನೂರಾರು ಯಾಪನೀಯ ರಿಷಿಗಳ ನಾಮೋಲ್ಲೇಖ ಸಿಗುತ್ತದೆ. ಉದಾಹರಣೆಗಾಗಿ ಕೆಲವು ಹೆಸರುಗಳನ್ನು ಮಾತ್ರ ಆಕಾರಾದಿಯಾಗಿ ಕೆಳಗೆ ನಮೂದಿಸಿದ್ದೇನೆ; ಇನ್ನಿಷ್ಟು ಹೆಸರುಗಳು ಸಿಗುತ್ತವೆ.

ಅನಂತವೀರ್ಯ, ಎಕ. ೭ (ಪ) ನಾಮಂ. ೩೩. ೧೧೧೮ – ೧೯ ಕಂಬದಳ್ಳಿ, ಪು. ೨೦ – ೨೨

ಅರ್ಕಕೀರ್ತಿ, ಕ್ರಿ. ಶ. ೮೧೨, ಎಕ. ೧೨ (ಹ. ಆ), ಗುಬ್ಬಿ ೬೧. ಕ್ರಿಶ. ೮೧೨, ಕಡಬ, ಪು. ೮೪

ಅಮಲಮುದಲ್ಕುರು, ಎಆರ್‌ಎಸ್‌ಐಇ ೧೯೩೪ – ೩೫. ಸಂಖ್ಯೆ ೨೨. ಪು. ೧೦. ಕ್ರಿ. ಶ. ೯ನೆಯ ಶ. ಕೀರಪಾಕ್ಕಮ್‌ (ತಮಿಳುನಾಡು)

ಅರಸವ್ವೆ ಕಂತಿಯರು, ಎಕೆ ೭(ಪ) ನಾಮಂ ೩೩.೧೧೧೮.೧೯. ಕಂಬದಹಳ್ಳಿ

ಅಷ್ಟೋಪವಾಸಿ, ಎಕ ೭(ಪ) ನಾಮಂ. ೩೩.೧೧೧೮.೧೯. ಕಂಬದಹಳ್ಳಿ

ಅರ್ಹನಂದಿ, ಜೆಬಿಬಿಆರ್‌ಎ ಎಸ್‌. ಸಂಪುಟ. ೧೦. ಪು. ೨೦೬ – ೭. ಕ್ರಿ. ಶ. ೯೮೦ ಸೌದತ್ತಿ

ಏಕವೀರಮುನಿನಾಥ, ಎಕ.೭ (ಪ) ನಾಮಂ. ೩೩ ಕ್ರಿ.ಶ. ೧೧೧೮ – ೧೯

ಏಕವೀರ ಸೌಇಇ. ೧೧ – ೧. ಸಂಖ್ಯೆ ೭೮. ಕ್ರಿ. ಶ. ೧೦೪೫

ಕಲ್ನೆಲೆದೇವ, ಎಕ ೭(ಪ) ನಾಮಂ. ೩೩ ೧೧೧೮ – ೧೯ ಕಂಬದಹಳ್ಳಿ ಮಂಡ್ಯ ಜಿ.)

ಕನಕ ಶಕ್ತಿ. ಎಆರ್ಐ ಎಸ್‌ಇ ೧೯೨೮ – ೨೯. ಸಂಖ್ಯೆ. ೨೩೯. ಪು. ೫೬ ಮೊರಬ

ಕೀರ್ತ್ಯಾಚಾರ್ಯ, ಎಕ. ೧೨ (ಹ.ಆ). ಗುಬ್ಬಿ. ೬೧. ಕ್ರಿ. ಶ. ೮೧೨. ಕಡಬ, ಪು. ೮೪

ಕೂಚಿ ಆಚಾರ್ಯ, ಎಕ. ೧೨ (ಹ. ಆ) ಗುಬ್ಬಿ, ೬೧. ಕ್ರಿ.ಶ. ೮೧೨. ಕಡಬ, ಪು. ೮೪

ಕುಮಾರ ಕೀರ್ತಿ, ಜೈಸೌಇ. ಪು. ೧೬೫, ಹೊಸೂರು (ಬೆಳಗಾವಿ/ಸೌದತ್ತಿ ತಾ.); ಸೌಇಇ. ೧೧ – ೧. ಸಂಖ್ಯೆ ೭೮

ಕುಮಾರ ಕೀರ್ತಿ ಪಂಡಿತ, ಜಬಾಸೊ – ೨. ಪು. ೧೯೨ – ೨೦೦.ಕ್ರಿ. ಶ. ೧೦೨೦

ಕುಮಾರ ಕೀರ್ತಿ ಸಿದ್ಧಾಂತ, ಜಕಯೂ – ೧೦, ೧೯೬೬. ಪು. ೧೫೯

ಕುಮಾರದತ್ತ, ಸಿಕೆಐ – ೨೪, ಹಲಸಿ ತಾಮ್ರಪಟ. ಸು. ೫೦೦. ಕ್ರಿ. ಶ. ಪು. ೯೨ – ೯೭

ಗುಣಕೀರ್ತಿ, ಐ. ಎ. ಸಂಪುಟ. ೧೮.ಪು. ೩೦೯. ೧೧ನೆಯ ಶ. ಕಲಭಾವಿ; ಜೈಸೌಇ, ಪು. ೧೧೩

ಚಂದ್ರಮತಿ ಅವ್ವೆ, ಸೌಇಇ. ೧೮. ಸಂಖ್ಯೆ ೧೫೧. ಕ್ರಿ. ಶ. ೧೧೪೮ ನೀರಲ್ಲಿ (ಹಾವೇರಿ ಜಿ/)

ಚಂದ್ರಕೀರ್ತಿ, ಜೈಸೌಇ. ಪು. ೧೬೫

ಚಾರುಕೀರ್ತಿ ಪಂಡಿತದೇವ, ಜೈಸೌಇ. ಪು. ೧೪೪; ಸೌಇಇ.೧೧ – ೧.೧೪೦.೧೦೯೬ ದೋಣಿ. ಪು. ೧೬೯ – ೭೧

ಜಯಕೀರ್ತಿ, ಸೌಇಇ. ೧೧ – ೧.೬೫ ಕ್ರಿ. ಶ. ೧೦೨೮ – ೨೯; ಎಆರ್‌ ಎಸ್‌ಐಇ. ೧೯೨೮ – ೨೯.೨೩೯

ಜಿನನಂದಿ, ಎಇ. ೯. ಸಂಖ್ಯೆ. ೬. ಪು. ೪೭. ಕ್ರಿ. ಶ. ೯೫೦

ಜಿನಚಂದ್ರ ಇಆ. ೧೮. ಪು. ೩೦೯.೧೧ನೇ ಶ. ಕಲಾಭಾವಿ; ಜೈಸೌಇ. ಪು. ೧೧೫

ಜಿನದೇವಸೂರಿ ಎಆರ್‌ಎಸ್‌ಐಇ. ೧೯೫೧ – ೫೨, ನಂ, ೩೩, ೧೧೦೦, ಪು. ೧೨, ಬೈಲಹೊಂಗಲ

ಜಾಕೆವ್ವೆಗಂತಿ ಎಆರ್‌ಎಸ್‌ಐಇ. ೧೯೨೧ – ೨೭, ಅನುಬಂಧ ಇ – ೧೫, ೧೦೬೮: ಇಆ. ೨೧. ಪು. ೭೩.

ತ್ರೈವಿದ್ಯ ಗೋವರ್ಧನ, ಸೌಇಇ: ೧೧ – ೧ ಸಂಖ್ಯೆ. ೭೮. ಕ್ರಿ. ಶ. ೧೦೪೫

ತ್ರೈವಿದ್ಯ ವಿಜಯಕೀರ್ತಿ, ಎಂಎಆರ್‌ ೧೯೧೬. ಪು.೪೮ – ೫೦ ಕ್ರಿ. ಶ. ೧೨ ಶ ಎಕ್ಸಂಬ (ಬೆಳಗಾವಿ ಜಿ/)

ದಾಮನಂದಿ; ಸೈಇಇ. ೧೧ – ೧. ೭೮.೧೦೪೫ ಮುಗುದ

ದಾಮನಂದಿ ವೊಡ್ಡಾಚಾರ್ಯ, ಸೌಇಇ. ೧೧ – ೧.೭೮. ೧೦೪೫

ದಿವಾಕರ, ಎಇ. ೯. ಸಂಖ್ಯೆ. ೬. ಪು. ೪೭. ಕ್ರಿ. ಶ. ೯೫೦

ದೇವಕೀರ್ತಿ ಕ್ರಿ. ಶ. ೯೫೦ ಕಲಭಾವಿ; ಇಆ. ಸಂಪುಟ. ೧೮. ಪು. ೩೦೯

ನಯಬ್ರತಿನಾಥ, ಸೌಇಇ. ೧೧ – ೧. ೭೮.೧೦೪೫ ಮುಗುದ

ನರೇಂದ್ರ ಕೀರ್ತಿ, ಸೌಇಇ. ೧೧ – ೧. ೭೮.೧೦೪೫

ನೇಮಿಚಂದ್ರ – ೧ ಮತ್ತು ನೇಮಿಚಂದ್ರ – ೨, ಜೈಸೌಇ. ಪು. ೧೬೫

ನಾಗಚಂದ್ರ ಸಿದ್ಧಾಂತದೇವ, ಎಆರ್‌ಎಸ್‌ಐಇ. ೧೯೨೮ – ೨೯, ಸಂಖ್ಯೆ, ೨೩೯.ಪು. ೫೬

ನಾಗಬಿಕ್ಕಿವ್ರತೀಂದ್ರ, ಸೌಇಇ. ೧೧ – ೧, ೭೮.೧೦೪೫

ನಿರವದ್ಯ ಭಟ್ಟಾರಕ, ಸೌಇಇ. ೧೧ – ೧. ೭೮. ೧೦೪೫

ನಾಗಚಂದ್ರ, ಇಆ. ಸಂಪುಟ, ೧೮. ಪು. ೩೦೯. ಕಲಭಾವಿ

ನಾಗವೀರ ಸಿದ್ಧಾಂತದೇವ, ಎಆರ್‌ಎಸ್‌ಐಇ. ೧೯೬೦ – ೬೪ ಸಂಖ್ಯೆ ೫೧೧. ೧೨ ನೇ ಶ. ತೆಂಗಳಿ

ಪಲ್ಲಪಂಡಿತಯತಿ, ಎ. ಕ. ೭(ಪ) ನಾಮಂ. ೩೩. ಕ್ರಿ. ೧೧೧೮ – ೧೯ ಕಂಬದಹಳ್ಳಿ (ಮಂಡ್ಯ ಜಿ/)

ಪಾಲ್ಯ ಕೀರ್ತಿ, ಎಆರ್‌ಎಸ್‌ಐಇ. ೧೯೪೦ – ೪೪. ಸಂಖ್ಯೆ ೬೩ – ೬೫. ಕ್ರಿ. ಶ. ೧೨ಶ. ಪು. ೨೪೫ (ಮನೋಳಿ ಬೆಳಗಾವಿ ಜಿ/)

ಪ್ರಭಾಚಂದ್ರ (ಪ್ರಭಾಶಶಾಂಕ) ಸೌಇಇ. ೧೧ – ೧. ೭೮. ೧೦೪೫ ಮುಗುದ

ಪ್ರಭಾಚಂದ್ರ, ಜೈಸೌಇ. ಪು. ೧೬೫

ಪ್ರಭಾಚಂದ್ರ ದೇವ, ಜೆಬಿಬಿಆರ್‌ ಎ ಎಸ್‌, ೧೦. ಕ್ರಿ. ಶ. ೯೮೦, ಸೌದತ್ತಿ

ಬಾಲಚಂದ್ರ ಭಟ್ಟಾರಕ, ಎಇ. ೧೮. ಕ್ರಿ. ಶ. ೧೦೪೪ ಹೂಲಿ; ಸೌಇಇ. ೧೧ – ೧, ೭೮. ೧೦೪೫ ಮುಗುದ

ಬಾಹುಬಲಿದೇವ, ಜೆಬಿಬಿಆರ್‌ ಎ ಎಸ್‌, – ೧೦. ಕ್ರಿ. ಶ. ೯೮೦, ಸೌದತ್ತಿ; ಎಇ. ೧೮. ಪು. ೨೦೧ – ೨೫೩

ಮಹಾವೀರ ಸೌಇಇ. ೧೧ – ೧. ೭೮. ೧೦೪೫ ಮುಗುದ

ಮೌನಿದೇವ, ಜೆಬಿಬಿಆರ್‌ ಎ ಎಸ್‌ – ೧೦. ಕ್ರಿ. ಶ. ೯೮೦, ಎಇ. ೧೮. ಪು. ೨೦೧ – ೨೦೩ ಧರ್ಮಪುರಿ (ಮಹಾರಾಷ್ಟ್ರ, ಭೀಡ್‌ ಜಿ/)

ಮಾದವೇಂದು (ಮಾದವ ಚಂದ್ರ), ಸೌಇಇ. ೧೧ – ೧. ೭೮. ೧೦೪೫

ಮಾಘನಂದಿ, ಎಇ. ೧೮. ಪು. ೨೦೧ – ೨೦೩.

ಮುನಿಚಂದ್ರ, ಸೌಇಇ. ೧೧ – ೧. ೭೮. ೧೦೪೫ ಮುಗುದ

ಮುನಿಚಂದ್ರ ದೇವ, ಎಆರ್ಎಸ್‌ಐಇ.೧೯೪೦ – ೪೪. ಸಂಖ್ಯೆ ೬೩ – ೬೫; ಸೌಇಇ. ೧೧ – ೨.೧೪೦. ೧೦೯೬ ದೋಣಿ.; ಜೈಸೌಇ. ಪು. ೧೪೪

ಮುಳ್ಳಭಟ್ಟಾರಕ, ಎಆರ್ಎಸ್‌ಐಇ. ೧೯೫೧ – ೩೩. ಪು. ೧೨. ೧೧೦೦ ಬೈಲಹೊಂಗಲ

ರವಿಕೀರ್ತಿ, ಸೌಇಇ. ೧೧ – ೧. ೭೮. ೧೦೪೫

ರವಿಚಂದ್ರಸ್ವಾಮಿ, ಜೆಬಿಬಿಆರ್ ಎ ಎಸ್‌, ೧೦. ಕ್ರಿ. ಶ. ೯೮೦

ರಾಜಮತಿ ಕಂತಿ, ಧಾರವಾಡ ತಾ|| ಶಾಸನಗಳು, ನಂ. ೪೫, ೧೨ ಶ. ನುಗ್ಗಿಕೇರಿ

ರಾಮಚಂದ್ರ ದೇವ, ಎಇ. ೧೮. ೧೧೪೫ ಹೂಲಿ; ಸೌಇಇ. ೧೧ – ೧. ೭೮. ೧೦೪೫ ಮುಗುದ

ರಾತ್ರಿಮಂತಿಗಂತಿ, ಎಆರ್ಎಸ್‌ಐಇ. ೧೯೫೧ – ೫೨. ಪು. ೧೨; ಇಆ. ೧೨. ಪು.೧೦೨ – ೧೧೦೮ ಹೊನ್ನೂರು

ವಿಜಯಕೀರ್ತಿ – ೧, ಎಕ – ೧೨ (ಹ. ಆ. ) ಗುಬ್ಬಿ ೬೧ .ಕ್ರಿ. ಶ. ೮೧೨. ಕಡಬ, ಪು. ೮೪

ವಿಜಯಕೀರ್ತಿ – ೨, ಎಂಎಆರ್ ೧೯೧೬. ೧೨ ಶ. ಪು. ೪೮ – ೫೦ ಎಕ್ಸಂಬ

ವಿನಯನಂದಿ, ಎಕ. ೭(ಪ) ನಾಮಂ. ೩೩. ಕ್ರಿ. ಶ. ೧೧೧೮ – ೧೯ ಕಂಬದಳ್ಳಿ

ಮಾಕವ್ವೆಕಂತಿ, ಎಕ. ೭(ಪ) ಆಗೂ. ೧೩೬ ಕ್ರಿ. ಶ. ೧೦೯೫. ಸುಳಗೋಡು ಸೋಮವಾರ (ಹಾಸನ ಜಿ/)

ಶ್ರೀಕಲಶ (ಕ್ರಿ. ಶ. ೧೪೮); ದೇವಸೇನ ಕೃತ (ಕ್ರಿ. ಶ. ೯೪೧) ದರ್ಶನಸಾರ ಕೃತಿ, ಪ್ರಾಕೃತ ಭಾಷೆ

ಶ್ರೀಕೀರ್ತಿ, ಎಕ ೧೨ (ಹ. ಆ) ಗುಬ್ಬಿ ೬೧, ೮೧೨, ಕಡಬ, ಪು. ೮೪

ಶ್ರೀಕೀರ್ತಿಗೊರವಡಿ, ಸೌಇಇ. ೧೧ – ೧. ೭೮. ೧೦೪೫ ಮುಗುದ

ಶ್ರೀಮಂದಿರದೇವ, ಎಇ. ೯. ಸಂಖ್ಯೆ. ೬. ಪು. ೪೭. ಕ್ರಿ. ಶ. ೯೫೦

ಶುಭಕೀರ್ತಿ, ಇಆ. ೧೮. ಪು. ೩೦೯, ೧೧ ಶ. ಕಲಭಾವಿ ; ಜೈಸೌಇ. ಪು. ೧೧೫

ಶುಭಚಂದ್ರ ಸಿದ್ಧಾಂತದೇವ, ಜೆಬಿಬಿಆರ್ಎಎಸ್‌, – ೧೦. ಕ್ರಿ. ಶ. ೯೮೦ ಪು ೨೦೬ – ೨೦೭ ಸೌದತ್ತಿ

ಶುಭಚಂದ್ರ – ೧ ಮತ್ತು ಶುಭಚಂದ್ರ – ೨, ಜೈಸೌಇ ೧೬೫, ಹೊಸೂರು (ಬೆಳಗಾವಿಜಿ/) ;ಎ. ಇ. ಸಂಪುಟ. ೧೮. ಪು. ೨೦೧ – ೨೦೩

ಸಕಲೇಂದು (ಸಕಲಚಂದ್ರ) ಸಿದ್ಧಾಂತಿಕ, ಕೆಆರ್ಐ (ಧಾರವಾಡ) ೧೯೪೨ – ೪೮, ಸಂಖ್ಯೆ. ೪೭.೧೨ ಶ.

ಹೇಮಚಂದ್ರ ತ್ರೈವಿದ್ಯ, ಎಕ. ೯(ಪ) ಬೇ. ೩೮೩. ಕ್ರಿ. ಶ. ೧೨೬೩, ೧೨೬೬ ಹಳೇಬೀಡು

ಹೇಮನಂದಿ ಮುನೀಶ್ವರ, ಎಕ. ೭ (ಪ) ನಾಮಂ ೩೩. ಕ್ರಿ. ಶ. ೧೧೧೮ – ೧೯

ಯಾಪನೀಯ ಮುನಿಗಳನ್ನೂ ಅವರ ಆಗಾಧ ಪಾಂಡಿತ್ಯವನ್ನೂ ಶಾಸನಗಳು ಕೊಂಡಾಡಿವೆ. ದೃಷ್ಟಾಂತರೂಪದಲ್ಲಿ ಕೆಲವನ್ನು ನೋಡಬಹುದು:

. …. ಯಾಪನೀಯಸ್ತಪಸ್ವಿನ ….||
ಕುಮಾರದತ್ತ ಪ್ರಮುಖಾಹಿ ಸೂರಯ : ಅನೇಕ ಶಾಸ್ತ್ರಾಮಖಿನ್ನ ಬುದ್ಧಯಃ
ಯಗತ್ಯತೀತಾಸ್ಸುತಪೋಧನಾನ್ವಿತಾ: ಗಾಣೋಸ್ಯತೇಷಾಂ ಭವತಿ ಪ್ರಮಾಣತಃ ||
(ಹಲಸಿತಾಮ್ರಪಟ, ಕದಂಬ ರವಿವರ್ಮ, ಕ್ರಿ. ಶ, ೪೬೨ – ೬೩; ಸಿ.ಕೆ. ಐ. ನಂ. ೧೩; ಪು. ೪೯ – ೫೨)

. ……ಶ್ರೀಯಾಪನೀಯ …. ವ್ರತಸಮಿತಿ ಗುಪ್ತಿ ಗುಪ್ತ ಮುನಿವೃನ್ದವನ್ದಿತ
ಚರಣ ಕೂಚಿ ಆಚಾರ್ಯ್ಯೋ ನಾಮಾಸೀತ್‌
ತಸ್ಯಾನ್ತೇವಾಸೀ ಸಮುಪನತಜನ ಪರಿಶ್ರಮಹರಃ
ಸ್ವದಾನ ಸನ್ತರ್ಪ್ಪಿತ ಸಮಸ್ತ ವಿದ್ವಜ್ಜನೋ ಜನಿತ
ಮಹೋದಯಃ ವಿಜಯಕೀರ್ತ್ತಿ ನಾಮ ಮುನಿಪ್ರಭುರಭವತ್‌ ||[ಎಕ. ೧೨(ಹ. ಆ) ಗುಬ್ಬಿ . ೬೧ ಕ್ರಿ. ಶ. ೮೧೨ ಕಡಬ. ಪು. ೮೪]

. ವಿಶ್ರುತ ಯಾಪನೀಯ ಸಂಘದೊಳೆಸೆವ …
ಅತಿಪ್ರಸಿದ್ಧರುಂ ಮಹಾಪ್ರಬುದ್ಧ ….ಶಾಸನರುಂ ಸಕಳ ಶಾಸ್ತ್ರ
ವಿಚಕ್ಷಣರುಮೆನಿಸಿ ನೆಗಳ್ದ ಮಹಾ ಮಂಡಳಾಚಾರ್ಯ
ತಪೋ ಮಂಡನರೆಸೆವ ಮಾಧವ ಭಟ್ಟಾರಕ ಬಳಿಕಂ…
ಪಣುತ ತಪೋಧನರಂ ಧಾರಿಣಿ ಪೊಗಳ್ಗುಂ …. ಕೀರ್ತಿ ಭಟ್ಟಾರಕರಂ
ಅಲ್ಲಿಂ ಬಳಿಕವೆಸೆದರ್ನ್ನೆಲ್ಲಿಯ… ಸಿದ್ಧಾನ್ತಕೋವಿದರ್ಜಿನದೇವರುಂ|
ಶ್ರೀವಿಭಾಜಿತ ಯಾಪನೀಯ ವರ ಸಂಘ – ಅಂಬೋಜಿನೀ ಭಾಸ್ಕರ….
ಶ್ರೀ ಕನಕ ಪ್ರಭು ಬ್ರತಿಸುತ ಯೋಗಿಶ್ವರಂ ಶ್ರೀಧರ ತ್ರೈವಿದ್ಯರ್‌
ಕೃತ ವಿದ್ಯ…..ಕವೀಂದ್ರ ಕಳ್ಪದ್ರುಮರ್ಸುಕೀರ್ತ್ತಿನಿಧಾನರ್
ಭುವನಸ್ತುತರ್ಅನುಪಮ(ರ್) (ಕ.ಇ. ಸಂಪುಟ. ೧. ಸಂಖ್ಯೆ. ೩೨. ಕ್ರಿ. ಶ. ೧೨೧೯. ಬಾಡ್ಲಿ. ಪು. ೭೫ – ೭೬)

. ಯಾಪನೀಯ ಸಂಘದ ಧರ್ಮಕೀರ್ತಿ ಮತ್ತು ನಾಗಚಂದ್ರ – ಇವರ ಸಮಾಧಿ (ನಿಸಿದಿ) ಯನ್ನು ಪ್ರಸ್ತಾಪಿಸುವಾಗ ಇವರಿಬ್ಬರಿಗೆ ಓಜರಾಗಿದ್ದ ನೇಮಿಚಂದ್ರ ಆಚಾರ್ಯರನ್ನು ತುಳುವ ರಾಜ್ಯಸ್ಥಾಪನಾಚಾರ್ಯಎಂದು ತಿಳಿಸಿದೆ.

. ಶ್ರೀಯಾಪನೀಯಾಂಬುಧಿ ಪೂರ್ಣ್ನಚಂದ್ರೋ ಮೈಳಾಪ ತೀರ್ತ್ಥಾಭರಣೋ[ಸೌಇಇ. ೧೫.೫೩೦. ೧೦೫೯. ಮೊರಬ(ನವಲ್ಗುಂದ ತಾ.)]

. ಯಾಪನಿಕ ಶಬ್ದದ ತದ್ಭವ ಪ್ರಾಕೃತ ರೂಪವಾದ ಜಾವಳಿಗೆ ಎಂಬ ಶಬ್ಧವನ್ನು ಕನ್ನಡ ಶಾಸನಗಳಲ್ಲೂ ಕಾವ್ಯಗಳಲ್ಲೂ ಬಳಸಿದೆ. ಜಾವಳಿಗೆಯ ಮುನಿಚಂದ್ರ ಸಿದ್ಧಾಂತದೇವನ ಖ್ಯಾತಿ ದೊಡ್ಡದು (ಎಕ. ೯(ಪ) ಬೇ. ೩೮೩. ಕ್ರಿ. ಶ. ೧೨೬೩ ಮತ್ತು ೧೨೬೬. ಹಳೇಬೀಡು. ಪು. ೩೪೧ – ೪೫). ಈ ಮುನಿವರನನ್ನು ಕವಿಗಳಾದ ಪಾರ್ಶ್ವಪಂಡಿತನೂ (ಕ್ರಿ. ಶ. ೧೨೦೫) ಜನ್ನನೂ (ಕ್ರಿ. ಶ. ೧೨೦೯ – ೩೦) ನೆನೆದು ಕೈಮುಗಿದಿದ್ದಾರೆ. ಯಾಪನೀಯ ಆಚಾರ್ಯ ಮುನಿಚಂದ್ರದೇವನಿಗೆ ಸ್ಮಾರಕ ನಿಲ್ಲಿಸಿದುದನ್ನು ಬೆಳಗಾವಿ ಜಿಲ್ಲೆಯ ಮನೋಳಿ ಶಾಸನ ನಮೂದಿಸಿದೆ. ಅಲ್ಲದೆ ಈ ಮುನಿಚಂದ್ರದೇವನ ಶಿಷ್ಯನಾದ ಪಾಲ್ಯಕೀರ್ತಿಯೂ ಅಲ್ಲಿಯೇ ಸಮಾಧಿ ಹೊಂದಿದನೆಂದು ಹೇಳಿದೆ
(ಎಆರ್‌ಎಸ್‌ಐಇ ೧೯೪೦ – ೪೪, ಸಂಖ್ಯೆ. ೬೩ ರಿಂದ ೬೫. ಪು. ೨೪೫).

. ಶ್ರೀ ಮೂಲ ಸಂಘ ಕುಂದಕುಂದಾನ್ವಯ ಕಾನೂರ್ಗಣ ತಿಂತ್ರಿಣಿ ಗಚ್ಛದ ಜವಳಿಗೆಯ ಮುನಿಭದ್ರ ಸಿದ್ಧಾನ್ತದೇವರ ಶಿಷ್ಯ ಮೇಘಚಂದ್ರ ಸಿದ್ಧಾನ್ತದೇವವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದಡಗ ಗ್ರಾಮದ ಶಾಸನ ಹೆಸರಿಸಿದೆ [ಎಕ. ೭(ಪ) ನಾಮಂ. ೬೮ (ರಿ ೧೯೪೦) ಸು. ೧೧೩೨. ಪು. ೫೨. ಸಾಲು : ೨೫ – ೨೭]

. ರಾಘವಾಂಕ ಕವಿಯ (ಸು. ೧೨೨೫) ಸೋಮನಾಥ ಚಾರಿತ್ರ ಷಟ್ಟದಿ ಕಾವ್ಯದಲ್ಲಿ (೬ – ೪೩) ಜಾಪುಲಿ ಸಂಘದ ಪ್ರಸ್ತಾಪವಿದೆ. (ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಲ್ಲಿ ಜಾವಳಿಗೆ, ಜಾಪುಲಿ ಸಂಘ ಎಂಬ ಶಬ್ಧಗಳು ದಾಖಲಾಗಿಲ್ಲ).

. ಶ್ರೀಯಾಪನೀಯ ಸಂಘದ ಪುನ್ನಾಗ ವೃಕ್ಷ ಮೂಲಗಣದ ಶ್ರೀಬಾಲಚಂದ್ರ ಭಟ್ಟಾರಕದೇವರ ಸ್ಮರಣೆಯಿದೆ
(ಸೌಇಇ. ೫. ೮೪೯. ಕ್ರಿ. ಶ. ೧೦೪೪. ಹೂಲಿ)

೧೦. ಅವನೀ ಸಂಸ್ತುತ್ಯಮೆನಿಪ ಕಾನೂರ್ಗಣ ಕೈರವ ಚಂದ್ರನೆನಿಸಿ ನೆಗಳ್ದಂ ವಿವೇಕಿ ಶುಭಚಂದ್ರವಿನುತ ಪಂಡಿತದೇವಂ [ಎಕ. ೭(ಹ. ಆ.) ಶಿಕಾರಿ ಪುರ ೨೨೫. ಕ್ರಿ. ಶ. ೧೨೦೪. ಪು. ೩೦]

೧೧. ಯಾಪನೀಯ ಸಂಘದ ಅತಿ ಪ್ರತಿಷ್ಠಿತ ಗಣವೆಂದರೆ ಕಂಡೂರುಗಣ. ಈ ಗಣಕ್ಕೆ ಸೇರಿದ ಅತಿರಥ ಮಹಾರಥರೆನಿಸಿದ ಆಚಾರ್ಯವರೇಣ್ಯರನ್ನು ಶಾಸನಗಳು ನುತಿಸಿವೆ. ಹಾಗೆ ದಾಖಲಿಸಿರುವ ಶಾಸನಗಳಲ್ಲಿ ಪ್ರಾಚೀನವೂ ಪ್ರಸಿದ್ಧವೂ ಆದ ಶಾಸನವೆಂದರೆ ಸೌದತ್ತಿಯ ರಟ್ಟರ ಪಟ್ಟಜಿನಾಲಯ ಕುರಿತು ಪ್ರಸ್ತಾಪಿಸಿರುವ ಶಿಲಾಶಾಸನ. ಅದರಿಂದ ಆಯ್ದ ಕೆಲವು ಭಾಗ ಹೀಗಿದೆ :

ಕಣ್ದೂರುಗಣೋರತನ್ಠಿವೃದ್ಧಿಕರಃ ಬಾಹುಬಲಿದೇವ ಚಂದ್ರೋ
ಜಿನಸಮಯ ನಭಸ್ಥಳೇ ಭಾತಿ ||
ವ್ಯಾಕರಣ ತೀಕ್ಷ್ಣ ದಂಷ್ಟ್ರ ಸಿದ್ಧಾನ್ತನಖ ಪ್ರಮಾಣ ಕೇಸರ ಭಾರಃ |
ಬಾಹುಬಲಿದೇವ ಸಿಂಹಃ ಪ್ರವಾದಿಗಜತೀವ್ರಮದಹರಸ್ಸಂಜಯತ್‌ ||

ಅವನೀಪಾಳಾನತ ಶ್ರೀ ಪದಕಮಳಯುಗಂ ತತ್ವನಿರ್ನಿಕ್ತರಾದ್ಧಾ
ನ್ತವಿದಂ ಚಾರಿತ್ರರತ್ನಾಕರನಮಳ ವಚಶ್ರೀ ವಧೂಕಾಂತನಂಗೋ
ದ್ಭವ ದರ್ಪ್ಪಾರಾಣ್ಯದಾವಾನಳನಳನುದಿತಸದ್ಭೋಧ ಸಂಶುದ್ಧನೇತ್ರಂ
ರವಿಚಂದ್ರ ಸ್ವಾಮಿ ಭವ್ಯಾಂಬುಜ ದಿನಪನಘೌಘಾದ್ರ್ರಿ ಸದ್ವಜ್ರಪಾತ ||

ಕಣ್ಡೂರ್ಗ್ಗಣಾಬ್ಥಿಚಂದ್ರನ
ಖಣ್ಡಿತ ಸುತಪೋವಿಭಾಸಿ ಖಣ್ಢಿತ ಮದನಂ
ದಿಣ್ಡೀರ ಪಿಣ್ಡಸುರವೇ
ದಣ್ಡ ಯಶಱ್ಱೆಣ್ಡನರ್ಹನ್ದಿ ಮುನಿಂದ್ರ ||

ಕನ್ತುರಾಜಗಜೇಂದ್ರಕೇಸರಿ ಭವ್ಯಲೋಕ ಸುಖಾಕರಂ
ಕಾಂತ ವಾಗ್ವನಿತಾ ಮನೋರಮನುಗ್ರವೀರತಪೋಮಯಂ
ಶಾನ್ತ ಮೂರ್ತಿ ದಿಗನ್ತ ಕೀರ್ತ್ತಿ ವಿರಾಜಿತಂ ಶುಭಚಂದ್ರ ಸಿ
ದ್ಧಾನ್ತದೇವನಿಳೇಶ ವಂದಿತ ಪಾದ ಪಂಕರುಹದ್ವಯಂ||

ನುತಯಾಪನೀಯ ಸಂಘ
ಪ್ರತೀತ ಕಣ್ಡೂರ್ಗ್ಗಣಾಬ್ಥಿಚಂದ್ರಮರೆಂದ್ರೀ
ಕ್ಷಿತಿವಳೆಯಂ ಪೊಗಳ್ವಿನಮು
ನ್ನತಿವೆತ್ತ ರ್ಮ್ಮೌನಿದೇವ ದಿವ್ಯ ಮುನಿಂದ್ರರ್‌‍ ||

ಜಿತಕರ್ಮ್ಮಾರಾತಿ ಭೂಪಾಳಕ ಕುಳತಿಕಾಳಂಕೃತಾಂಘ್ರಿದ್ವಯಂರಾ
ಜಿತಭವ್ಯವ್ರಾತ ಪಂಕೇರುಹವನದಿನಪಂ ಚರುಚಾರಿತ್ರ ಮಾರ್ಗ್ಗಾಂ
ಚಿತಸೂಕ್ತಂ ಶಬ್ಧವಿದ್ಯಾಗಮನ ಕಮಳಭವಂ ಶ್ರೀ ಪ್ರಭಾಚಂದದೇವ
ಬ್ರತಿ ಶಟ್ತರ್ಕ್ಕಾಕಳಂಕಂಗೆಣೆಯೆನೆ ನೆಗಱ್ದಂ ಜೈನ ಮಾರ್ಘಾಬ್ದಿಚಂದ್ರ ||
(ಜೆಬಿಬಿಆರ್‌ಎಸ್‌ – ೧೦. ಪು. ೨೦೪; ಸೌಇಇ. ೨೦. ಸಂಖ್ಯೆ. ೧೮. ಕ್ರಿ. ಶ. ೯೮೦. ಪು. ೧೫ – ೧೭)

ಯಾಪನೀಯ ವೃಕ್ಷವು ಕಲ್ಯಾಣ ಪಟ್ಟಣದಲ್ಲಿ ಮೊಳಕೆಯೊಡೆದು ಪಲಾಶಿಕೆಯಲ್ಲಿ ಪಲ್ಲವಿಸಿತು. ಗಂಗರು, ಕದಂಬರು, ರಾಷ್ಟ್ರಕೂಟರು ಕಲ್ಯಾಣ ಚಾಳುಕ್ಯರು ಅದಕ್ಕೆ ನೀರೆರೆದರು ನೆರಳಿತ್ತರು. ಯಾಪನೀಯ ಸಂಘ ಗಳಿಸಿದ ರಾಜ್ಯ ಮಾನ್ಯತೆಯ ಸ್ಪಷ್ಟ ಉಲ್ಲೇಖಗಳು ಕ್ರಿ. ಶ. ಆಯ್ದನೆಯ ಶತಮಾನದ ಶಾಸನಗಳಲ್ಲಿ ಉತ್ಕೀರ್ನವಾಗಿವೆ. ಕಲ್ಯಾಣ (ಬಸಬಕಲ್ಯಾಣ) ಪಟ್ಟಣದಲ್ಲಿ ವಿಕ್ರಮ ಸಂವತ್ಸರ ೨೦೫ (ಕ್ರಿ. ಶ. ೧೫೯)ರಲ್ಲಿ ಶ್ರೀ ಕಲಶಮುನಿಯಿಂದ ಯಾಪನೀಯ ಸಂಘ ಉದ್ಘಾಟಿತವಾಯಿತೆಂಬ ಪರಂಪರೆಯನ್ನು ಪ್ರಶ್ನಿಸಬೇಕಾದ ಪ್ರಮೇಯವಿಲ್ಲ. ಯಾಪನೀಯರು ಪಾರ್ಶ್ವಜಿನರಿಗೆ ಹತ್ತಿರವಾದವರು. ಮಹಾವೀರರ ಕಾಲಕ್ಕಾಗಲೇನೆ ಬಹುರಯ ಮತ್ತು ಜೀವ ಪಏಸಿಯ ಎಂಬೆರಡು ಜೈನ ಪಂಥಗಳಿದ್ದುವಾದರೂ ಅವು ಪ್ರಸಾರ ಪಡೆಯಲಿಲ್ಲ. ಪಾರ್ಶ್ವನಾಥರ ಚಾವುಜ್ಜಾಮ (ಚಾತುರ್ಯಾಮ) ವು ಮಹಾವೀರರ ಪಂಚಕ್ಖಯ – ಚರುರ್ವಿಧ ಶ್ರಮಣ ಸಂಘದಲ್ಲಿ ವಿಲೀನವಾಯಿತು. ಮಹಾವೀರರ ಸಮಾಕಾಲೀನವಾಗಿದ್ದ ಆಜೀವಿಕ ಪಂಥದ ಬಹ್ವಂತವು ಮಹಾವೀರರ ಸಂಘದಲ್ಲಿ ಸಾಮವೇಶವಾಯಿತು. ಅವರಿಗೆ ಪ್ರಬಲ ವಿರೋಧಿಯಾಗಿ ಸಂಘದಿಂದ ಸಿಡಿದು ಹೋದ ಮಂಕಲಿ ಗೋಸಾಲನೂ ಇಲ್ಲವಾದ. ಪಾರ್ಶ್ವನಾಥರ ಪ್ರಶಿಷ್ಯ ಕೇಶೀಗುರುವೂ ಮಹಾವೀರರ ಶಿಷ್ಯನಾದನು