(ಕಾನುಕ್ರಮಣಿಕೆಯಲ್ಲಿ ಸಂಯೋಜಿತ)

. ಕದಂಬ ರವಿವರ್ಮನ ಹಲಸಿ ತಾಮ್ರಪಟ ಶಾಸನ
(JBBRAS, IX; IA. Vol. VI. pp. 24 – 27 and Vol. VII. pp. 33 – 35; CKI. No. 24. pp. 92 – 97)

೦೧ ಜಯತಿ ಭಗವಾನ್ಜಿನೇನ್ದ್ರೋ ಗುಣರುನ್ದ್ರಃ ಪ್ರಥಿತ
ಪರಮ ಕಾರುಣಿಕಃ ತ್ರ್ಯಲೋಕ್ಯಾ

೦೨ ಶ್ವಾಸಕರೀ ದಯಾಪತಾಕೋಚೇಚ್ಛ್ರಿತಾ ಯಸ್ಯ ||
ಸ್ವಾಮಿ ಮಹಾಸೇನ ಮಾತ್ರಿಗಣಾನು

೦೩ ದ್ಧ್ಯಾತಾನಾಂ ಮಾನವ್ಯ ಸಗೋತ್ರಣಾಂ ಪ್ರತಿಕೃತ
ಸ್ವಾಧ್ಯಾಯ ಚ (ರ್ಚ್ಛಾ)

೦೪ ಪಾರಗಾಣಾಮ್‌ ಸ್ವಕೃತ ಪುಣ್ಯ ಫಲೋಪ ಭೋಕ್ತೃ
ಣಾಂ ಸ್ವಬಾಹು ವೀರ್ಯ್ಯೋಪಾರ್ಜ್ಜಿತಾರ್ಜ್ಜಿ

೦೫ ತೈಶ್ವರ್ಯ್ಯ ಭೋಗಭಾಗಿನಾಮ್‌ ಸದ್ಧರ್ಮ್ಮ
ಸದಮ್ಬಾನಾಂ ಕದಂಬಾನಾಮ್‌ | ಕಾಕುಸ್ಥ

೦೬ ವರ್ಮ್ಮ ನೃಪಲಬ್ಧ ಮಹಾಪ್ರಸಾದಃ ಸ
ಭುಕ್ತವಾಞ್ವ್ರತ ನಿಧಿಶ್ರುತಕೀರ್ತ್ತಿ ಭೋಜಃ

೦೭ ಗ್ರಾಮ ಪುರಾನೃಷುವರಃ ಪುರು ಪುಣ್ಯಭಾಗೀ
ಖೇಟಾಹ್ವಕಂ ಯಜನ ದಾನ ದಯೋ

೦೮ ಪಪನ್ನಃ || ತಸ್ಮಿನ್‌ ಸ್ವರ್ಯ್ಯಾತೇ ಶಾನ್ತಿವರ್ಮ್ಮಾ
ವನೀಶಃ ಮಾತ್ರೇ ಧರ್ಮ್ಮಾರ್ತ್ಥಂ ದತ್ತವಾನ್ಹಾ

೦೯ ಮಕೀರ್ತ್ತೇಃ ಭೂಮೌ ವಿಖ್ಯಾತಸ್ತತ್ಸುತಶ್ಮ್ರೀ
ಮೃಗೇಶಃ ಪಿತ್ರಾನುಜ್ಞಾತಂ ಧಾರ್ಮ್ಮಿಕೋ ದಾನ

೧೦ ಮೇವ || ಶ್ರೀ ದಾಮಕೀರ್ತ್ತೇರೂರು ಪುಣ್ಯಕೀರ್ತ್ತೇಃ ಸ
ದ್ಧರ್ಮ್ಮಮಾರ್ಗ್ಗಸ್ಥಿತ ಶುದ್ಧಬುದ್ಧೇಃ ಜ್ಯಾಯಾ

೧೧ ನ್ಸುತೋ ಧರ್ಮ್ಮಪರೋ ಯಶಸ್ವೀ ವಿಶುದ್ಧ ಬುದ್ಧ್ಯಾ
ನ್ಗುಯುತೋ ಗುಣಾಢ್ಯಃ || ಆಚಾರ್ಯೈರ್ಬಂಧು

೧೨ ಶೇಣಾಹ್ವೈಃ ನಿಮಿತ್ತ ಜ್ಞಾನ ಪಾರಗೈಃ ಸ್ಥಾಪಿತೋ
ಭುವಿ ಯದ್ವಂಶಃ ಶ್ರೀಕೀರ್ತ್ತಿ

೧೩ ಕುಲವೃದ್ಧಯೇ || ತತ್ಪ್ರಸಾದೇನ ಲಬ್ಧಶ್ರೀಃ
ದಾನ ಪೂಜಾ ಕೃಯೋದ್ಯತಃ ಗುರು

೧೪ ಭಕ್ತೋ ವಿನೀತಾತ್ಮಾ ಪರಾತ್ಮಹಿತ ಕಾಮ್ಯಯಾ ||
ಜಯಕೀರ್ತಿ ಪ್ರತೀಹಾರಃ ಪ್ರಸಾದಾನ್ನೃಪ

೧೫ ತೇ ರವೇಃ ಪುಣ್ಯಾರ್ತ್ಥಂ ಸ್ವಪಿತುರ್ಮ್ಮಾತ್ರೇ
ದತ್ತವಾನ್ಪುರುಖೇಟಕಂ || ಜಿನೇನ್ದ್ರ ಮಹಿಮಾ

೧೬ ಕಾರ್ಯ್ಯಾ ಪ್ರತಿ ಸಂವತ್ಸರಂ ಕ್ರಮಾತಷ್ಟಾಹ ಕೃತ
ಮರ್ಯ್ಯಾದಾ ಕಾರ್ತ್ತಿಕ್ಯಾನ್ತದ್ಧನಾ

೧೭ ಗಮಾತ್ || ವಾರ್ಷಿಕಾಂಶ್ಚತ್ರರೋ ಮಾಸಾನ್‌ ಯಾಪನೀಯಾ
ಸ್ತಪಸ್ವಿನಃಭು (ನ್ಜೀರಸ್ತು)

೧೮ ಯಥಾ ನ್ಯಾಯ್ಯಮ್ಮಹಿಮಾಶೇಷ ವಸ್ತುಕಮ್‌||
ಕುಮಾರದತ್ತ ಪ್ರಮುಖಾಹಿ ಸೂರಯಃ

೧೯ ಅನೇಕ ಶಾಸ್ತ್ರಾಗಮಖಿನ್ನ ಬುದ್ಧಯಃ ಯಗತ್ಯತೀತಾ
ಸ್ಸು ತಪೋಧನಾನ್ವಿತಾಃ ಗಾಣೋ

೨೦ ಸ್ಯ ತೇಷಾಂ ಭವತಿ ಪ್ರಮಾಣತಃ | ಧಮ್ಮೇಪ್ಪು
ಭಿರ್ಜ್ಜಾಪದೈಸ್ಸನಾಗರೈಃ

೨೧ ಜಿನೇನ್ದ್ರಪೂಜಾ ಸತತಂ ಪ್ರಣೇಯಾ ಇತಿ ಸ್ಥಿತಿಂ
ಸ್ಥಾಪಿತವಾನ್‌ ರವೀಶಃ ಪಲಶಿಕಾ

೨೨ ಯಾಂ ನಗರೇ ವಿಶಾಲೇ ||

 

. ಮೃಗೇಶವರ್ಮನ ಹಲಸಿ ತಾಮ್ರ ಪಟ
(JBBRAS, IX; EI. VI.; IA. Vl., pp. 24 – 27; IA. VII. pp. 33 – 35; CKI. No. 13. pp. 49 – 52; C. 462 – 63C. E.)

೦೧ ಸ್ವಸ್ತಿ || ಜಯತಿ ಭಗವಾನ್ವಿನೇಂದ್ರೋ ಗುಣರುಂದ್ರಃ
ಪ್ರಥಿತ ಪರಮ ಕಾರುಣಿಕಃ ತ್ರೈಲೋಕ್ಯಾಶ್ವಾಸಕರೀ

೦೨ ದಯಾಪತಾಕೋಚ್ಛರಿತಾಯಸ್ಯ || ಕದಂಬ ಕುಲ ಸತ್ಕೇತೋಃ ಹೇತೋಃ
ಪುಣ್ಯೈ ಕ ಸಂ

೦೩ ಪದಾಮ್‌ ಶ್ರೀ ಕಾಕುರ್ಥ ನರೇಂದ್ರಸ್ಯ ಸೂನುಬಾನುರಿವಾಪರಃ || ಶ್ರೀಶಾಂತಿವರ

೦೪ ವರ್ಮ್ಮೇತಿ ರಾಜಾ ರಾಜೀವ ಲೋಚನಃ ಖಲೇವ
ವನಿತಾ ಕ್ರಿಷ್ಟಾ

೦೫ ಯೇನ ಲಕ್ಷ್ಮಿ ದ್ವೀಶದ್ದ್ರುಹಾತ್‌ ತತ್ಪ್ರಿಯ ಜ್ಯೇಷ್ಠತನಯಃ ಶ್ರೀ
ಮೃಗೇಶ ನರಾಧಿಪಃ

೦೬ ಲೋಕೈಕ ಧರ್ಮ್ಮ ವಿಜಯಾ ದ್ವಿಜ ಸಾಮಂತ ಪೂಜಿತಃ ||
ಮತ್ವಾ ದಾನಂ ದರಿದ್ರಾಣಾಂ

೦೭ ಮಹಾಫಲಮಿತೀವಯಃ ಸ್ವಯಂ ಭಯ
ದರಿದ್ರಾಪಿ ಶತ್ರುಭ್ಯೋದಾದ್‌ ಮಹಾಭಯಂ ||

೦೮ ತುಂಗ ಗಂಗ ಕುಲೋತ್ಸಾದಿ ಪಲ್ಲವ ಪ್ರಲಯಾನಲಃ
ಸ್ವಾರ್ಯ್ಯಕೇ ನೃಪತೌ ಭಕ್ತ್ಯಾ

೦೯ ಕಾರಯಿತ್ವಾ ಜಿನಾಲಯಮ್‌ ಶ್ರೀ ವಿಜಯ ಪಲಾಶಿಕಾಯಾಮ್‌
ಯಾಪನೀಯನಿರ್ಗ್ರಂಥ ಕೂರ್ಚ್ಚ

೧೦ ಕಾನಾಮ್‌ ಸ್ವವಿಜಯಿಕೇ ಅಷ್ಟಮೇ ವೈಶಾಖೇ
ಸಂವತ್ಸರೇ ಕಾರ್ತ್ತೀಕ ಪೌರ್ಣ್ಣಮಾಸ್ಯಾಮ್‌

೧೧ ಮಾತೃಸರಿತಾರಭ್ಯ ಆ ಇಂಗಣಿ ಸಂಗಮಾತ್‌ ರಾಜಮಾನೇನ
ತ್ರಯೋ ತ್ರಿಣ್‌ಶನ್ನಿವರ್ತನಂ

೧೨ ಶ್ರೀ ವಿಜಯವೈಜಯನ್ತಿ ನಿವಾಸೀ ದತ್ತವಾನ್‌
ಭಗವದ್ಭ್ಯೋ ಅರ್ಹದ್ಭ್ಯಃ || ತತ್ರಾಜ್ಞಪ್ತಿಃ

೧೩ ದಾಮಕೀರ್ತ್ತೀ ಭೋಜಕಃ ಜಯಂ ತಶ್ವಾಯುಕ್ತಕಃ
ಸರ್ವ್ವಸ್ಯಾನುಷ್ಠಾತಾ ಇತಿ ಅಪಿ ಚ

೧೪ (ಶಾಪಾಶಯ)

೧೫

೧೬ || ಸಿದ್ಧಿರಸ್ತು ||

 

. ಹೊಸಕೋಟೆ ಶಾಸನ
[MAR 1938, pp. 80 – 90; IWG: No. 14, pp. 48 – 51 ; C. 5th – 6th Cent. Hosakote (Bangalore Dt.)]

೨೩ ಸಿಂಹವಿಷ್ಣುಪಲ್ಲವಾಧಿರಾಜಸ್ಯ

೨೪ ಜನನ್ಯಾ ಭರ್ತೃಕುಲಕೀರ್ತ್ತಿ ಜನನ್ಯಾರ್ತ್ಥಞ್ಚಾತ್ಮನಶ್ಚ
ಧರ್ಮ ಪ್ರವರ್ದ್ಧನಾರ್ತ್ಥಞ್ಚ ಪ್ರತಿಷ್ಠಾಪಿತಾಯ ಅರ್ಹದ್ದೇ

೨೫ ವತಾಯತನಾಯ ಯಾಪನಿಕ ಸಂಘಾನುಷ್ಠಿತಾಯ
ಕೋರಿಕುನ್ದ ಭಾಗೇ ಪುಲ್ಲಿ ಊರನ್ನಾಮಗ್ರಾಮೇ

೨೬ ಮಹಾತಟಾಕಸ್ಯಾಧಸ್ತಾತ್‌ ಮೂಲಾಭ್ಯಾಶೇ ಶ್ರಮಣ ಕೇದಾರ
ಸಹಿತಂ ಸಪ್ತ ಕಣ್ಡಕಾವಾಪಮಾತ್ರ

ಇದು ಗಂಗರ ಅವಿನೀತ ರಾಜನ (ಸು. ೪೯೫ – ೫೫೫) ಶಾಸನ. ಗಂಗರ ಮತ್ತು ಪಲ್ಲವರ ನಂಟನ್ನು ಈ ಶಾಸನ ಹೇಳಿದೆ. ಪಲ್ಲವರಾಜ ಸಿಂಹವಿಷ್ಣುವಿನ ಮಡದಿಯೂ ಇಮ್ಮಡಿ ಸಿಂಹವರ್ಮನ ತಾಯಿಯೂ (ಜನನ್ಯಾ) ಆಗಿದ್ದಂತಹ ರಾಣಿಯ ವಿಚಾರವಿದ್ದರೂ ಆಕೆಯ ಹೆಸರು ದಾಖಲಾಗಿಲ್ಲ. ಆಕೆ ಕೋರಿಕುಂದ ಭಾಗದ ಪುಲ್ಲಿಯೂರಲ್ಲಿ ಒಂದು ಅರ್ಹದ್ದೇವಾಯತನವನ್ನು (ಬಸದಿ ಮಾಡಿಸಿದಳು, ಮತ್ತು ಈ ಬಸದಿಗೆ ಕೆಲವು ದತ್ತಿಗಳನ್ನೂ ಇತ್ತಳು. ಆಕೆ ಈ ಅರ್ಹದ್ದೇವಾಯತನವನ್ನು ತನ್ನ ಗಂಡನ ಮನೆತನದವರ ಒಳಿತಿಗಾಗಿಯೂ (ಭತೃಕುಲ ಕೀರ್ತಿ) ಯಾಪನೀಯ ಸಂಘದ ಆಚಾರ್ಯರಿಗಾಗಿಯೂ ಕಟ್ಟಿಸಿದಳು. ಪಲ್ಲವಕುಲಜನ್ಯ ರಾಜಮಾತೆ ಮಾಡಿಸಿದ ಈ ಜಿನಾಲಯಕ್ಕೆ, ಆಗ ಆಳುತ್ತಿದ್ದ ಗಂಗ ಪ್ರಭು ಅವಿನೀತನು, ತನ್ನ ಗುರುಗಳಾದ ವಿಜಯಕೀರ್ತಿ ಆಚಾರ್ಯರ ಆದೇಶದ ಮೇರೆಗೆ ದಾನಗಳನ್ನಿತ್ತನೆಂದು ಇನ್ನೊಂದು ಶಾಸನದಿಂದ ತಿಳಿದು ಬರುತ್ತದೆ [ಎಕ. ಸಂಪುಟ. ೧೦ ಸಂಖ್ಯೆ ೩೫.೭, ಮಾಲೂರು (ಕೋಲಾರ ಜಿ.)]. ಕೋಲಾರ ಜಿಲ್ಲೆಯಲ್ಲೂ, ಗಂಗರು ಮೊದಲು ಬೀಡು ಬಿಟ್ಟು ತಳವೂರಿ ನಿಂತ ಪರಿಸರದಲ್ಲೂ, ಯಾಪನೀಯ ಆಚಾರ್ಯರೂ,ಬಸದಿಗಳೂ ಇದ್ದವು. ಉತ್ತರ ಕನ್ನಡ ಜಿಲ್ಲೆಯ ಕಡೆ ಆದಿ ಕದಂಬರೂ ಹಳೆಯ ಮೈಸೂರು ಭಾಗದಲ್ಲಿ ಆದಿಗಂಗರೂ ಯಾಪನೀಯರಿಗೆ ಆಸರೆಯಾಗಿದ್ದರು. ಕ್ರಿ. ಶ. ೫ – ೬ ನೆಯ ಶತಮಾನಗಳ ವೇಳೆಗಾಗಲೇನೆ ಯಾಪನೀಯರು ರಾಜಾಶ್ರಯ ಪ್ರತಿಷ್ಠಿತರಾಗಿ ಕನ್ನಡ ನಾಡಿನ ಉದ್ದಗಲಗಳಲ್ಲಿ ಪಸರಿಸಿ ಬೇರು ಬಿಟ್ಟಿದ್ದರೆಂಬುದು ವಿಶೇಷಗಮನಿಕೆಗೆ ಅರ್ಹವಾದ ಸಂಗತಿ. ಈ ಆಧಾರಗಳು ಬಹುವಾಗಿ ಪರಂಪರೆಯ ನಿರೂಪಣೆಗೆ ಪ್ರಾಣ ತುಂಬುತ್ತವೆ. ಅಂದರೆ ಯಾಪನೀಯವು ಕರ್ನಾಟಕದಲ್ಲಿ ಎರಡನೆಯ ಶ. ದಲ್ಲಿ ಆರಂಭವಾಯಿತೆಂಬ ಹೇಳಿಕೆಗೆ ಪುಷ್ಟೀಕರಿಸುವ ಶಾಸನ ಸಾಮಗ್ರಿಯಿದೆ.

 

. ಕಡಬದ ಶಾಸನ
[EC. XII (1904) Gubbi, 61, C.E. 212. Kadaba. pp. 84a, b, c]

ಕುನಿಂಗಲ್ನಾಮದೇಶಮಯ ಶೃಱ್ಪರಾಣ್ಮುಖೇ
ಮನುಮಾರ್ಗ್ಗೇಣ ಪಾಲಯತಿಸತಿ ಶ್ರೀ ಯಾಪನೀಯ
ನನ್ದಿ ಸಂಘ ಪುನ್ನಾಗವೃಕ್ಷ ಮೂಲಗಣೇ ಶ್ರೀ ಕೀರ್ತ್ತ್ಯಾಚಾರ್ಯ್ಯನ್ವಯೇ
ಬಹುಷ್ವಾಚಾರ್ಯ್ಯೆಷ್ಟತಿಕ್ರಾ
ನ್ತೇಷುವ್ರತ ಸಮಿತಿಗುಪ್ತಿ ಗುಪ್ತ ಮುನಿವೃನ್ದ ವನ್ದಿತ
ಚರಣ ಕೂಚಿ ಆಚಾರ್ಯ್ಯೋ ನಾಮಾಸೀತ್‌
ತಸ್ಯಾನ್ತೇವಾಸೀ ಸಮುಪನತಜನ ಪರಿಶ್ರಮಹರಃ
ಸ್ವದಾನ ಸನ್ತರ್ಪ್ಪಿತ ಸಮಸ್ತ ವಿದ್ವಜ್ಜನೋ
ಜನಿತ ಮಹೋದಯಃ ವಿಜಯಕೀರ್ತ್ತಿನಾಮ ಮುನಿ
ಪ್ರಭುರಭವತ್‌ || ಆರ್ಕಕೀರ್ತ್ತಿರಿತಿ ಖ್ಯಾತಿ ಮಾತನ್ವ
ನ್ಮುನಿ ಸತ್ತಮಃ ತಸ್ಯ ಶಿಷ್ಯತ್ವ ಮಾಯತೋ ನಯಾತೋ ವಶಮೇನಸಾ ||
ತಸ್ಮೈ ಮುನಿವಹಾಯ
ಸತ್ಯ ವಿಮಳಾದಿತ್ಯಸ್ಯ ಶನೈಶ್ಚರ ಪೀಡಾಪನೋದಾಯ ಮಯೂರ
ಖಣ್ಣಿಮಧಿವಸತಿ
ವಿಜಯಸ್ಯನ್ದಾವಾರೇ ಜಾಕಿರಾಜೇನ ವಿಜ್ಞಾಪಿತೋ ವಲ್ಲಭೇನ್ದ್ರಃ
ಇಡಿಗೂರ್ವ್ವಿಷಯ ಮಧ್ಯವರ್ತ್ತಿ
ನಂ ಜಾಲಮಂಗಲ ನಾಮಧೇಯ ಗ್ರಾಮಂ ಶಕ ನೃಪ ಸಂವತ್ಸರೇ
ಷುಶರಶಿಖಿ ಮುನಿಷುವ್ಯತೀತೇ ಷು
ಜೇಷ್ಠಮಾಸಶುಕ್ಲಪಕ್ಷ ದಶಮ್ಯಾಂ ಪುಷ್ಯ ನಕ್ಷತ್ರೇಚನ್ದ್ರವಾರೇ
ಮಾನ್ಯಪುರವರಾ ಪರ
ದಿಗ್ವಿಭಾಗಾಳಂಕಾರ ಭೂತ ಶಿಲಾಗ್ರಾಮ ಜಿನೇನ್ದ್ರ
ಭವನಾಯ ದತ್ತವಾನ್‌ ತಸ್ಯಪೂರ್ವ್ವದಕ್ಷಿ
ಣಾಪರೋತ್ತರ ದಿಗ್ವಿಭಾಗೇಷು ಸ್ವಸ್ತಿಮಂಗಲಬೆಳ್ಳಿನ್ದ
ಗುಡ್ಡನೂತ್ತಱಿಪಾೞಿತಿ ಪ್ರಸಿದ್ಧಾ ಗ್ರಾ
ಮಾ ಎವಂಚ ಚತುರ್ಣ್ನಾಂ ಗ್ರಾಮಾಣಾಮ್ಮಧ್ಯೇವ್ಯವಸ್ಥಿತಸ್ಯ
ಜಾಲಮಂಗಲ ಸ್ಯಾಯಂ ಚತುರಾಘಾ
ಟೀಕ್ರಮಃ

 

. ಸೌಂದತ್ತಿ ಶಾಸನ
(ಸೌಇಇ. ಸಂಪುಟ ೨೦. ಸಂಖ್ಯೆ ೧೮. ಕ್ರಿ.ಶ. ೯೮೦)

೦೧ * ರಟ್ಟಕುಳಾನ್ಯಯನೃಪರಂ ಪಟ್ಟದ ತವರ್ಮ್ಮನೆಗಳೆನಿಪ ಗಾವುಂಡುಗಳುಂ ಬಿಟ್ಟುರ್ಜ್ಜಿನೇಂದ್ರಪೂಜೆಗೆ ನೆಟ್ಟನೆ ಧಾನ್ಯಂಗ

೦೨ ಳೊಳಗೆ ಪೊ… (ಕು)ಳಮಂ || ಱ(ಟ್ಟ)ರ ಪಟ್ಟಜಿನಾಲಯಕಿಟ್ಟಳವಾದಯ್ವ ತೊಕ್ಕಲನುಮತದಿಂದಂ ಕೊಟ್ಟರ್ಜ್ಜಿನೇಂದ್ರ ಪೂಜೆಗೆ ನೆಟ್ಟನೆ

೦೩ …..(ಘ?) || ದೀಪಾವಳಿಯ (ಪ)ರ್ವ್ವಕ್ಕೆ ದೇವರ ಸೊಡರಿಂಗೆ ಗಾಣದಲೊಮ್ಮಾನೆಣ್ಣೆ ||

೦೪ ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಂಚ್ಚನಂ ಜೀಯಾತ್ತೈಳೋಕ್ಯ ನಾಥಸ್ಯ ಶಾಸನಂ ಜಿನಶಾಸನಂ

೦೫ ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರ ಪರಮ –

೦೬ ಭಟ್ಟಾರಕಂ ಸತ್ಯಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್‌ ತ್ತೆಲಪದೇವರ ವಿಜಯರಾಜ್ಯ ಮುತ್ತರೋತ್ತರಾಭಿ –

೦೭ ವೃದ್ಧಯಿಂಸಲುತ್ತಮಿರೆ | ತಾತ್ಪಪದ್ಮೋಪಜೀವಿ | ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಂ ಸಮರವಿಜಯ –

೦೮ ಲಕ್ಷ್ಮೀಕಾನ್ತಂ ವೈಸಾನ್ವಯ ಸರೋಜವನಮಾರ್ತ್ತಣ್ಡಂ ನುಡಿದಂತೆ ಗಣ್ಡಂ ಹಯವತ್ಸರಾಜಂ ರೂಪಮನೋಜಂ ಪರಬಳ ಸೂಱೆ –

೦೯ ಕಾಱಂ ವೈರಿಬಂಗಾಱಂ ನರಸಂಕಭೀಮಂ ಚಲದಂಕರಾಮಂ ಗಣ್ಡರಗಣ್ಡಂ ವೈರಿಭೇರುಣ್ಡಂ ಪ್ರತಿಪನ್ನಮಂದರಂ ಶರಣಾಗ –

೧೦ ತವಜ್ರಪಂಜರಂ ಶ್ರೀಮತ್‌ ಶಾನ್ತಿವರ್ಮ್ಮರಸರ ವಂಸಾವತಾರಮೆಂತೆಂದೊಡೆ ಶ್ರೀಮದಮರೇಂದ್ರ ವಿಭವೋದ್ಧಾಮಂ

೧೧ ಸಂಗ್ರಾಮರಾಮನೂರ್ಜಿತತೇಜಂ ಭೀಮಪರಾಕ್ರಮನೆನಿಸಿದನೀ ಮಹಿಯೊಳ್‌ ಪೃಥ್ವೀರಾಮನನುಪಮರೂಪಂ || ತತ್ಸು –

೧೨ ತ || ಆರೂಢವತ್ಸ ರಾಜನುದಾರಗುಣಂ ವಿನುತಕಂಬುಕಾದಿತ್ಯಂ ಶ್ರೀನಾರೀಕಾನ್ತಂ ನಿಜ್ಚ್ರಿವೈರಿ ವ್ರಜನೆನಿಸಿ ಪಿಟ್ಟುಗಂ

೧೩ ಸಲೆನೆಗಱ್ದಂ || ವೃ || ಅಂತಕನನ್ತೆ ಬಂದಿದಿದರೊಳಾಂತಜವರ್ಮ್ಮನ ನೋಡಿಸುತ್ತೆ ಮಾಱಾಂತರನೇಕರಂ ತವಿಸಿ ವಸ್ತುಗಳಂ ಮದವಾರಣಂಗಳಂ ಕಾನ್ತೆ –

೧೪ ಯರಂ ತುರಂಗಚಯಮಂ ಪಿಡಿದತ್ತೊಡೆ ಮೆಚ್ಚಿರಾಭಯಂ ದನ್ತಿಯನಿತ್ತ ನಂತದುವೆ ಪೇಳದೆ ಪಿಟ್ಟುಗ ನಿನ್ನ ಗೆ (ಲ್ಲ) ಮಂ || ತ –

೧೫ ದಗ್ರಪತ್ನಿ || ವೃ || ಪೊಗಳಲಳುಂಬಮಪ್ಪ ಚರಿತಂ ಮಿಗೆ ಬಣ್ಣಿಸಲಬ್ಜ ಸಂಭವಂಗಗಣಿತಮಪ್ಪ ರೂಪವಿಭ –

೧೬ ವಂ ಪತಿಭಕ್ತಿಯೊಳೊಂದಿ ಸಜ್ಜನಿಕೆಗೆ ನೆಲೆಯಾದ ಮಾಂತನದ ಪೆಂಪು ಸಮಂತಳವಟ್ಟ ನೀಜಿಕಬ್ಬರಸಿ

೧೭ ಗೆ ಸಂದರುನ್ಧತಿ ಪೆಱರ್ದ್ದೊರೆಯೆಂದಡೆ ದೋಸವಲ್ಲದೇ || ತತ್ತನೂಜ |ಕಂ| ಶ್ರೀಮದುದಯಾದ್ರಿಶಿಖ –

೧೮ ರೋ‌ದ್ದಾಮೋದಯ ತಪನ ವಿಭವರೂಪಂ ಕೀರ್ತ್ತಶ್ರೀಮಹಿಮಾತಿಶಯಂ ಜಯರಾಮಾರಮಣಂ ಜಿತಾ –

೧೯ ರಿ ಶಾನ್ತನೃಪಾಳಂ || ದಯೆಯಿಂದೊಳ್ಪಿನ ತೆಳ್ಪಿನಿಂ ಗುಣಗಣಾಳಂಕಾರದಿಂ ಮಾರ್ಗ್ಗನಿರ್ಣ್ನಯದಿಂ ತತ್ವ –

೨೦ ಚಾರದಿಂ ಗಮಕದಿಂದಾಹಾರ ಭೈಷಜ್ಯಸಾಭಯ ಶಾಸ್ತ್ರಮಳದಾನದಿಂದಧಿಕ ನೆಂದಂದೊಳ್ಪನಿಂ ಶಾನ್ತಿವರ್ಮ್ಮನ ವಿ –

೨೧ ಖ್ಯಾತಿಯನೊಂದೆ ನಾಲಗೆಯೊಳಿನ್ನೇವಣ್ಣಿಪೋಂ ಬಣ್ಣಿಪಂ || ತದಗ್ರಪತ್ನಿ || ಶ್ರೀವನಿತೆ ತಾನೆ ಬನ್ದುಮಹಿವ –

೨೨ ನಿತೆಗೆ ತಿಳಕಮೆನಿಸಿ ಶಾನ್ತನ ಲಲಿತಶ್ರೀವನಿತೆಯಾದ ವಿಭವಮನೇವೊಗಳ್ವದೋ ಚಂದಿಕಬ್ಬೆಯರಸಿಯ ಪೆಂಪ ||

೨೩ ಯತಿ ತಾರಕಾಪರಿತಃ | ಕಣ್ಡೂರಗಣೋರುಕನ್ಠಿವೃದ್ಧಿ ಕರಃ ಬಾಹುಬಲಿದೇವಚಂದ್ರೋ ಜಿನಸಮಯ ನಭಸ್ಥಳೇ

೨೪ ಭಾತಿ || ವ್ಯಾಕರಣತೀಕ್ಷ್ಣದಂಷ್ಟ್ರಿಸಿದ್ಧಾನ್ತ ನಖಪ್ರಮಾಣಕೇಸರಭಾರಃ | ಬಾಹುಬಲಿದೇವಸಿಂಹಃ ಪ್ರವಾದಿಗಜತೀವ್ರಮ –

೨೫ ದಹರಸ್ಸಂಜಯತ್‌ || ವೃ || ಅವನೀಪಾಳಾನತ ಶ್ರೀಪದಕಮಳಯುಗಂ ತತ್ವನಿ (ರ್ನ್ನಿ)ಕ್ತ ರಾದ್ಧಾನ್ತವಿದಂ ಚಾರಿತ್ರರ –

೨೬ ತ್ನಾಕರಮಳ ವಜಶ್ರೀವಧೂ ಕಾಂತನಂಗೋದ್ಭವ ದರ್ಪ್ಪಾರಣ್ಯ ದಾವಾನಳನುದಿತ ಲಸದ್ಬೋಧ ಸಂಶುದ್ಧನೇತ್ರಂ ರವಿಚಂದ್ರ –

೨೭ ಸ್ವಾಮಿ ಭವ್ಯಾಂಬುಜ ದಿನಪನಘೌಘಾದ್ರಿ ಸದ್ವಜ್ರಪಾತ || ಕಂ || ಕಣ್ಡೂರ್ಗ್ಗಣಾಬ್ಧಿಚಂದ್ರನಖಣ್ಡಿತ ಸುತಪೋವಿಭಾ –

೨೮ ಸಿಖಣ್ಡಿತಮದನಂ ದಿಣ್ಡೀರಪಿಣ್ಡ ಸುರವೇದಣ್ಡ ಯಶಱ್ಪೆಣ್ಡನರ್ಹಣನ್ದಿ ಮುನಿಂದ್ರ || ವೃ || ಕನ್ತುರಾಜ ಗಜೇನ್ದ್ರಕೇಸ

೨೯ ರಿ ಭವ್ಯಲೋಕ ಸುಖಾಕಾರಂ ಕಂತುವಾಗ್ವನಿತಾಮನೋರಮನುಗ್ರ ವೀರತಪೋಮಯಂ ಶಾನ್ತಮೂರ್ತಿ ದಿಗನ್ತಕೀರ್ತ್ತಿ

೩೦ ರಾಜಿತಂ ಶುಭಚಂದ್ರಸಿದ್ಧಾನ್ತದೇವನಿಳೇಶ ವಂದಿತಪಾದಪಂಕರು ಹದ್ವಯ(ಂ) || ಕ || ನುತ ಯಾಪನೀಯ ಸಂಘ (ಪ್ರ)

೩೧ ತೀತ ಕಣ್ಡೂರ್ಗ್ಗಣಾಬ್ದಿ ಚಂದ್ರಮರೆಂದೀ ಕ್ಷಿತಿವಳೆಯಂ ಪೊಗಳ್ವಿನಮುನ್ನ ತಿವೆತ್ತರ್ಮ್ನೌನಿದೇವ ದಿವ್ಯ ಮುನೀಂದ್ರರ್‌ ||

೩೨ ಜಿತಕರ್ಮ್ಮಾರಾತಿ ಭೂಪಾಳಕ ಕುಳತಿಳಕಾಳಂಕೃತಾಂಘ್ರಿದ್ವಯಂ ರಾಜಿತ ಭವ್ಯವ್ರಾತ ಪಂಕೇರುಹ –

೩೩ ವನದಿನಪಂ ಚಾರುಚಾರಿತ್ರಮಾರ್ಗ್ಗಾಂ(ಚಿ) ತಸೂಕ್ತಂ ಶಬ್ದ ವಿದ್ಯಾಗಮಕಮಳಭವಂ ಶ್ರೀ ಪ್ರಭಾಚಂದ್ರದೇವ ಬ್ರತಿ ಷ –

೩೪ ಟ್ತರ್ಕಾಕಳಂಕಂಗೆಣೆಯೆನೆ ನೆಗಱ್ದಂ ಜೈನಮಾರ್ಗಾಬ್ಧಿ ಚಂದ್ರ || ಸ್ವಸ್ತಿ ಸಕನೃಪಕಾಲಾತೀತ – ಸಂವತ್ಸರಶತಂಗ ೯೦೨ನೇ –

೩೫ ಯ ವಿಕ್ರಮ ಸಂವತ್ಸರ ಪೌಷ್ಯ ಶುದ್ಧ ದಶಮೀ ಬೃಹಸ್ಪತಿ ವಾರದಂದಿನುತ್ತರಾಯಣ ಸಂಕ್ರಮಣದೊಳ್‌ ಬಾಹು –

೩೬ ಬಲಿಭಟ್ಟಾರಕರ ಕಾಲಂ ಕರ್ಚ್ಚಿ ಶಾನ್ತಿವರ್ಮರಸಂ ಸುಗನ್ದವರ್ತ್ತಿಯಲ್‌ ತನ್ನ ಮಾಡಿಸಿದ ಬಸದಿಗಾವೂರ ತನ್ನ ಸೀವಟದ ಪೊಲದೊ –

೩೭ ಳಗೆ ಸರ್ವ್ವಬಾಧಾ ಪರಿಹಾರಮಾಗಿ ಬಿಟ್ಟ ಮತ್ತರ್ನ್ನೂಱಯ್ವತ್ತದಱ ಚತುರಾಘಾಟದ ಸೀಮೆಯಾವುದೆಂದಡೆ ತದ್ದ –

೩೮ ರ ಪೊಲದ ಬ(ಡ)ಗಿವೊಲದ ಸಂದಿನಲೀಶಾನ್ಯದ ಗುಡ್ಡೆ | ಅಲ್ಲಿಂ ತೆಂಕಲೆಳೆಯಕೆಱೆಯ ಬಿಳಿಯ ಕಲ್ಲು | ಅಲ್ಲಿಂ ಪಡುವ –

೩೯ ಲು ಸೀವಟ್ಟದ ಸನ್ದಿನೊಲು ನೈರಿತಿಯ ಗುಡ್ಡೆ | ಅಲ್ಲಿಂ ಬಡಗಲು ಸೀವಟ್ಟದ ತದ್ಧರ ಪೊಲದ ಸಂದಿನಳು ವಾಯವ್ಯದ

೪೦ ಗುಡ್ಡೆ || ಮತ್ತಂ ನಿಜಿಯಬ್ಬರಸಿ ತನ್ನ ಮಗಂ ಶಾನ್ತಿ ವರ್ಮ್ಮರಸಂ ಮಾಡಿಸಿ (ದ) ಪಿರಿಯ ಬಸದಿಗೆ ತನ್ನ ಸೀವಟಂ ಪಿರಿ –

೪೧ ಯ ಪಸುಣ್ಡಿಗೆ ಪೋದ ಬಟ್ಟೆಯಿಂ ತೆಂಕ ಕಾಡಿಯೂರ ಪೊಲ (ದ)…. ನುಱಯ್ವತ್ತು ಮ(ತ್ತ) –

೪೨ ರ್ಕೈಯ್ಯಂ ನಮಸ್ಯಮಾಗಿ ಬಿಟ್ಟಳಾ ಭೂಮಿಯ ಚತುಸ್ಸೀ…. ರ ಕುಕ್ಕುಂಬಾ (ಳ)

೪೩ ಪೊಲದ ಸಂದಿನಲೀಶಾನ್ಯದ ಗುಡ್ಡೆ | ಅಲ್ಲಿಂತೆಂಕ…. ಕುಕ್ಕುಂಬಾಳ ಸುಗನ್ಧ (ವ) –

೪೪ ರ್ತ್ತಿಯ ಪೊಲದ ಸನ್ದಿನಲಾಗ್ನೇಯದ ಗು….ಗಿನ ಕೂಡ….

೪೫ ಗಿನೊಳ(ಗೈ ನೈ) ರಿತಿಯ ಗು (ಡ್ಡೆ)… ವಾಯವ್ಯ…

೪೬ ಡ್ಡೆ | ಇನ್ತಿನಿತು ಭೂಮಿಯಿ…. ರ್ವ್ವರುಂಪ್ರ….

೪೭ ಸುವರ್‌ * ಮಾ….

೪೮ ಮುನಾಸಂಗ….

೪೯ ದವರ್ಗ್ಗೇ…..

೫೦ ಣ್ಡನ್‌….