. ಹೊಸೂರು ಶಾಸನ
(ಸೌಇಇ. ೧೧ – ೧, ಸಂಖ್ಯೆ, ೬೫. ಕ್ರಿ.ಶ. ೧೦೨೮, ಹಸೂರು, ಗದಗ ಜಿ.)

೦೧ * ಶ್ರೀಮತ್ಪರಮಗಂಭೀರಸ್ಯಾದ್ವಾದಾಮೋಘಲಾಂಚ್ಛ –

೦೨ ನಂ ಜೀಯತ್ತೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ ( || *)

೦೩ ಸ್ವಸ್ತಿ ಶ್ರೀ ಯಾಪನೀಯಸಂಘ ಶ್ರಯಯಿ….

೦೪ ಣದೆ ಶ್ರೀವರತ್ರೈವಿದ್ಯ (ದೇವ)ರ ಶಿಷ್ಯ….

೦೫ …. ಜಯಶಾಸನಂ ||

೦೬ರುಮಾದಲ್ಲಿಂ ಬಳಿಯಂ ಜೈನಾಗಮಾಬ್ದಿರ್ಜ್ಜಯಕೀರ್ತ್ತಿದೇವೋಸ್ತನ್ಮೋಘಮುಖ್ಯೋಜವಿನ –

೦೭ … ಚನ್ದ್ರಃ | ಸಿದ್ಧಾನ್ತಬ್ದಾಗಮತತ್ವ ವೇದೀ ರಾಜೇನ್ದ್ರ ಚೂಡಾಮಣಿಚುಂಬಿತಾಂಘ್ರಿಃ ||

೦೮ ನಮಸ್ತಸ್ಮೈ ವರಾಹಾಯ ಲೀಳಾಯಾ ಚರತೇ ಮಹೀಂ ಖುರಾನ್ತರಗತೋ ಯಸ್ಯಮೇರುಃ ಕಣಕ –

೦೯ ಣಾಯ (ತೇ) ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರ

೧೦ ಮೇಶ್ವರ ಪರಮಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮಜ್ಜಗದೇ –

೧೧ ಕಮಲ್ಲದೇವರ ರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನ ಮಾಚನ್ದ್ರಾರ್ಕ್ಕತಾರಂಬ –

೧೨ ರಂ ಸಲುತ್ತಮಿರೆತತ್ಪಾದಪದ್ಮೋಪಜೀವಿ || ಸ್ವಸ್ತಿ ಸಮಧಿಗತ ಪಂಚಮಹಾಶಬ್ದಮ –

೦೩ ಹಾಸಾಮನ್ತಾಧಿಪತಿ ಮಹಾಪ್ರಚಣ್ಡದಣ್ಡನಾಯಕಂ ಶ್ರೀಮತ್ಕೇಸವಸರ ತದಾಗ್ರ –

೦೪ ತನೂಜಂ ಸ್ವಸ್ತಿ ಸಮಧಿಗತಪಞ್ಚ ಮಹಾಶಬ್ದ ಮಹಾಸನ್ಥಿವಿಗ್ರಹಾಧಿಪತಿ ಮಹಾ –

೦೫ ಪ್ರಚಣ್ಡದಣ್ಡ ನಾಯಕಂ ಶ್ರೀವಾವರಣರಸರೆರಱುನೂಱುಮಂ ಸುಖಸಂಕಥಾವಿನೋ –

೧೬ ದದಿನಾಳುತ್ತಮಿರೆ ತಸ್ಯಾನುಜಂ || ಸ್ವಸ್ತಿ ಸಮಧಿಗತಪಂಚಮಹಾಶಬ್ಧ ಮಹಾಸಾಮ –

೧೭ ನ್ತಾಧಿಪತಿ ಮಹಾಪ್ರಚಣ್ಡದಣ್ಡ ನಾಯಕಂ ಶ್ರೀಮತ್‌ ಶ್ರೀಪಾದರ ಸರ್ಮ್ಮುಳುಗುನ್ದ

೧೮ ಪನ್ನೆಡುಮನಾಳುತ್ತುಮಿರೆ || ಶ್ರೀಮದ್ವಾವರಣರಸನರಸಿಯ ರ್ದ್ವಿತೀಯಲಕ್ಷೀ –

೧೯ ಸಮಾನೆಯರಪ್ಪ ಶ್ರೀಮತ್‌ ರೇವಕಬ್ಬರಸಿಯರ್ಪ್ಪೋಸವೂರನಾಳುತಮಿರೆ ||

೨೦ ಸ್ವಸ್ತಿ ಶ್ರೀನ್ದಕುಳೋದ್ಭವಂ ಕಂನುಲವಂಶಪ್ರದೀಕಪಂ ಪನ್ನಗಧ್ವ ಜವಿರಾಜಮಾನಂ ಪಗ (ವ) –

೨೧ ರಭೀಮಂ ಶ್ರೀಮತ್ಕೊಱಲಗುನ್ದಂಪುರಸ್ಸರಮಾಗೆ | ತನ್ನನ್ದನಂ ವ್ಯಾಘ್ರಲಾಂಛನ…

೨೨ (ಮಾ) ರ್ತ್ತಣ್ಡಂ ಮುೞುಗುನ್ದಂ ಪುರಸ್ಸರಮಾಗೆ | ತನ್ನನ್ದನಂ ವ್ಯಾಘ್ರಾಲಾಂಛನ….

೨೩ ಸ್ವಸ್ತ್ಯನೇಕಗುಣಗಣ ವಿಪುಳದಳಾವಳಯವಳೆಯಿತಂ ಸತ್ಯಸೌಚಾಚಾ (ರ) –

೨೪ ಚಾರಿತ್ರ ನಯವಿನಯ ರಾರಾಜಿತಸರಾಗ ಪುಂಜಪಿಂಜರಿತಾತಿಸಯಶಿ…

೨೫ ಕಣ್ಠಿಕಾಳಂಕ್ರಿತಂ ಕಱೆಕಾಳೇಯಕಳಂಕಪಂಕರಹಿತಂ ಮನುಮುನಿಚರಿತಂ ಕಮಳೆ –

೨೬ ಮಧ್ಯಸ್ಥಿತಂ ದೇವದ್ವಿಜಗುರು ಪಾದಪಂಕಜಭ್ರಮರಂ ಪರನಾರೀದೂರಂ ವಿಬು –

೨೭ ಧಜನಾಧಾರಂ ವಿನಯಾಂಬುರಾಸಿ ಸೋಮೇಶ್ವರದಾಸಿ ಸತ್ಯಕಾನೀನಂ ಸೌಚಾಂ –

೨೮ ಜನೇಯನಕಳಂಕಚರಿತಂ ಸನ್ಮಾನದಾನಿ ವಿವೇಕ ಬೃಹಸ್ಪತಿ ಭಯ ಲೋಭ ವರ್ಜ್ಜಿತಂ

೨೯ ಸಕಳಗುಣಸಂಪೂರ್ಣ್ನಂಕಲಿಕಾಲಕರ್ಣ್ನನಮಳ ಚರಿತ್ರಂ ನಡುನಾಡ ತೀರ್ತ್ಥಂ ಶ್ರೀಮ –

೩೦ ತ್ಪೊಸವೂರಾಯ್ಚಗಾವುಣ್ಡಂ || ಧರ್ಮ್ಮವಿಚಾರ (ದೆ) ಗುಣದೆ ತವರ್ಮ್ಮನೆ ಕಲಿಕಾಲ –

೩೧ ಧರ್ಮ್ಮತನೆಯಂಸೌಚಕ್ಕಾರ್ಮ್ಮನಿವನೆನ್ದುಪಲರುಂ ನೆರ್ಮ್ಮುವರಾಯ್ಚಗ ನಿದೇಂ ಕೃತಾರ್ತ್ಥನೊ ಜ –

೩೨ ಗದೊಳ್‌ || ಕ್ರಮಮಱೆಯದೆ ಧರ್ಮ ವಿಚಾರಮನಳಿದೆಳಿಪಿಂಗೆ ವೇಳ್ವತಕ್ಕರಿ ಮೆಂಬೀ –

೩೩ ಕುಮತಿಗಳಂ ಪೆಸರ್ಗ್ಗೊಳಲಕ್ಕುಮೆ ಪೊಸವೂರಾಯ್ಚನಿರ್ದ್ಧ ರಾಜಿತಸಭೆಯೊಳ್‌ ||

೩೪ ಸಾರತರಮಪ್ಪ ಮನುಜರ್ವ್ಯಾರಿಧಿಪರ್ಯ್ಯನ್ತ (ಮೇಖ) ಳಾವನಿತಳದೊಳ್ಮೇರುಸಮಾನ

೩೫ (ಲ್ಕಂ)… (ರ್ಯ್ಯಂ) ಚಾರುವಚರ್ಪ್ಪೊಸವೂರಯ್ಚ ಪೋಲ್ವರೆ ನಿನ್ನಂ || ಆತನ ಕುಲವಧು ವಿನಯ –

೩೬ … ಸುಚಾರಿತ್ರ ಸಕಳಜನವನ್ದಿತ ವಿಖ್ಯಾತಕಲಿಕಾಲಸೀತೆ ವಿನೂತಯೆನ –

೩೭ …ಚಿಕಬ್ಬೆ ಸಲೆ ನಿಲ ನೆಗರ್ದ್ದೆ(ಳ್‌) || ಸೂಣ್ದಿಯ ಮದೆನಾಗಸೆಟ್ಟಿಯ ಮಗಳ್ಕೆಂಚೆಯಬ್ಬೆ

೩೮ …ಯದಾ ಸೀಮೆ ಶೀಳದೆ ತವರ್ಮ್ಮನೆ ಸದ್ಗುಣದಿರ್ಕ್ಕೆದಾಣಮಾರ್ಪ್ಪಿನ ಕಣಿಸ ಚ್ಚರಿತ್ರದೆ.

೩೯ … ನ್ದಭಿಮಾನದೆ ಜನ್ಮಭೂಮಿ ಮಾನ್ತನದೆ ಮೊದಲ್ವಿಳಾಸನಿದಿ ರೂಪಿನ ಪೊಂಪುಳಿ ಪುಣ್ಯಮೂರ್ತ್ತಿಯೆ

೪೦ … ನು ನಯದಿಂದೆ ಬಣ್ನಿಪುದಿಳಾವಳೆಯಂ ಸಲೆ ಕಂಚಿಕಬ್ಬೆಯಂ || ಹರಿಹರಹಿರಣ್ಯಗರ್ಬ್ಭ

೪೧ ರ್ದ್ದೊರೆಯೆನಿಪರ್ಮ್ಮೂವರರ್ತ್ತಿ ಯಱಗಂ ನಾಕಂ ಹರಿಸುತ ನನ್ನಂ ದೇವಂ ಮೊರಕಾಮ್ನಾಯಕ್ಕೆ ತಿಳಕ

೪೨ ರಾಯ್ಚನ ಪುತ್ರರ್‌ ಸ್ವಸ್ತಿ ಸಕನೃಪಕಾಳಾತೀತ ಸಂವತ್ಸರ ಸತಂಗ ೯೫೦ ನೆಯ

೪೩ ವಿಭಯ ಸಂತ್ಸರಂ ಪ್ತವರ್ತ್ತಿಸೆ ತದ್ವರ್ಷಾಭ್ಯಂತರದೆ ಪೌಷ್ಯಮಾಸ ಸುದ್ಧ ಪಕ್ಷಂ ತ್ರಯೋ –

೪೪ ದಸಿ ಆದಿತ್ಯವಾರಮುಮುತ್ತರಾಯಣ ಸಂಕ್ರಾನ್ತಿಯನ್ದು ಆಯ್ಚಗಾವುಣ್ಡಂ ತನ್ನ ಪೆಣ್ಡತಿ

೪೫ ಕಂಚಿಕಬ್ಬೆಗಾವುಣ್ಡಿಗೆ ಪರೋಕ್ಷವಿನಯಂ ವಸದಿಯಂ ಮಾಡಿಸಿ ಅರಸುಂ ನಾರ್ಗ್ಗಾವುಣ್ಡುಂ ಪುರಸ್ಸರ –

೪೬ ಮಾಗಿ ನಾಗಚನ್ದ್ರಸಿದ್ಧಾನ್ತಿಗರ್ಗ್ಗೆ ಕಾಲ್ಗಚ್ಚಿ ಬಿಟ್ಟ ಅಡಕೆಯ ತೋಟಂ | ಊರಿಂ ಬಡಗ ಗಾವುಣ್ಡನ ಕೊಡ –

೪೭ ಗೆಯ್ದೋಟದಿಂ ಬಡಗ | ಪೊಲೆಯಮದೋಟದಿಂ ಪಡುವ | ಬೆಟ್ಟದ ತರ್ಪ್ಪಲಕಣಿಯ ಬಟ್ಟೆ –

೪೮ ಯಿಂ ಮೂಡ || ಮೂಲಸ್ತಾನದೇವರ ತೋಂಟದಿಂ ತೆಂಕಲಿನ್ತಿವು ಚತುಸ್ಸೀಮೆ || ಅದರ್ಕ್ಕೆ ಬಿಟ್ಟ ಕೆ –

೪೯ ಯಿ ಮಲೆಪರಮಾರಿಯಕೋಲೋಳ್ನಾಲ್ಕು ಮತ್ತರ್ | ಊರಿಂಗೀಶಾನ್ಯದೆ ಪಳ್ಳದೆ ಬಡಗಣ ತ –

೫೦ ಡಿಯ ಪಿರಿಯ ದೇಹಾರದ ಕೆಯಿ ತೆಂಕಣಸೀಮೆ | ಮೂಲಸ್ಥಾನದೇವರ ಕೆಯಿ | ಪಡುವಣ

೫೧ ಸೀಮೆ ಕರ್ಗ್ಗಲ್ಲು ಬಡಗಣ ಸೀಮೆ | ಬಿಳಿಯ ಕಲ್ಲುಂ ಮೂಡನ ಸೀಮೆ | ಇನ್ತಿವು ಚತುಸ್ಸೀ –

೫೨ ಮೆ || ಬಸದಿಯ ತೆಂಕಣದೆಸೆಯೊಳ್ನಾಲ್ಕು ಮನೆಯ ನಿವೇಶಣಂ || ಇನ್ತೀ ತೋಟಕ್ಕಂ …

೫೩ … ಗದ್ಯಾಣ. ತೆಱುವುದು ಶ್ರೀಮದಾಯ್ಚಗಾವುಣ್ಡನ ಮಾಡಿಸಿದೆ ಬಸದಿ ಗೇೞು –

೫೪ ನೂರ್ವ್ವರುಮಿರ್ದ್ದು ಧರ್ಮ್ಮಕ್ಕೆ ಪುರಸ್ಸರರಾಗಿ ಎಲೆಯತೋಂಟದೊ (ಳೊ) ನ್ದು ಬಳ್ಳಿಯುಂ ಅಡಕೆಯ

೫೫ ತೋಂಟದೊಳೊನ್ದು ಮರನುಮಂ | ದೇವದೀವಿ (ಗೆ*) ಗೊಕ್ಕಲೊನ್ದು ಪೊಱೊಯುಮಂ ಕಟ್ಟರ್ || ಮೊರಕಕು –

೫೬ ಳತಿಳಕನೆಱಕನ ವರಪುತ್ರಂ ಪೊಲೆಗ ನೀ ಮಹೀಮಣ್ಡಳದೊಳ್‌ ಸ್ಥಿರಮಾಗಿರೆ ಶಾಸನಮಂ

೫೭ ಬರೆಯಿಸಿದಂ ನೆಲನುಮರ್ಕ್ಕನುಂ ನಿಲ್ವಿನೆಗಂ

 

. ಹೂಲಿ ಶಾಸನ
(ಸೌಇಇ. ಸಂಪುಟ. ೫. ಸಂಖ್ಯೆ ೮೪೯. ಕ್ರಿ.ಶ. ೧೦೪೪, ಹೂಲಿ)

೦೧ ಶ್ರೀಮತ್ಪರಮಗಂಭೀರಸ್ಯಾದ್ವಾದಾಮೋಘಲಾಂಚ್ಛನಂ ಜೀಯಾ (ತ್‌*) ತ್ರೈಲೋ –

೦೨ ಕ್ಯನಾಥಸ್ಯ ಶಾಸನಂ ಜಿನಶಾಸನಂ ||

೦೩ ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪೃಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರ –

೦೪ ಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀ ಮದಾಹವಮಲ್ಲ ದೇವರ ವಿಜಯರಾಜ್ಯ –

೦೫ ಮುತ್ತರೋತ್ತರಾಭಿವೃದ್ಧಿ ಪ್ರವರ್ದ್ಧಮಾನಮಾ ಚಂದ್ರಾರ್ಕ್ಕತಾರಂ ಸಲುತ್ತಮಿರೆ || ತತ್ಪಾದಪದ್ಮೋಪಜೀವಿ | ಮೇಲೇ –

೦೬ ರ್ದ್ದ ಪಗೆವರಂ ನಿರ್ಮ್ಮೂಳಿಸಿ ಜಸಮಂ ನಿಮಿರ್ಚ್ಚಿ ದಿಗ್ಭಿತ್ತಿವರಂ ಕಾಲಡಿಯ ಚೋಳಗಡಿ ತಲೆ ಪಾಳಿಸಿದಂ ತೊಂಬತಾ

೦೭ ಱುಮಂಭುಜಬಳದಿಂ || ಆತನ ಪುತ್ರಂ ವಿನಯೋಪೇತಂ ಪಾಯಿಂಮ್ಮ ನ್ರಿಪತಿಗೊಪ್ಪುವ ಸತಿ

೦೮ ವಿಖ್ಯಾ(ತಿ)ಯುತ ಹಮ್ಮಿ ಕಬ್ಬೆಗೆ ಸೀತೆಗೆ ಸರಿ ಭಾಗಣಬ್ಬೆ ಲಚ್ಚಲೆಯೊಗೆದರು || ಇಷ್ಟಜ –

೦೯ ನಕ್ಕೆ ಚಟ್ಟಸಮಯಕ್ಕೆ ಮಹಾಜನಭೋಜನಕೆ ಯುತ್ಕ್ರಷ್ಟ ತಪೋಧನರ್ಗ್ಗೆ ಯಳಿದಾಯ (ಮ) –

೧೦ ನಕ್ಕೆ ಸಕಂನ್ಯಕಾಳಿ(ಕ)ಗ್ನಿಷ್ಠಗೆ ಗೆಯ್ದೆ ನಾಲ್ಕು ಸಮಯಕ್ಕನುರಾಗದೆ ಬೇಗವಿಂ –

೧೧ (ತ) ಸಂತ್ತುಷ್ಟತೆ ಲಚ್ಚಿ (ಯ) ಬ್ಬರಸಿಗಾರ್ಸ್ಸತಿಯರ್ಸ್ಸಚರಾ ಚರೋರ್ವ್ವಿಯೊಳು ||

೧೨ ಸಕಳಧರಿತ್ರಿಯೊಳ್ನೆಗರ್ದ್ದ ವಂದಿಜನಂ ಸಲೆ ರೂಪಿನೇಳ್ಗೆಯಂ ಪ್ರಕಟತವೆತ್ತ ದಾ –

೧೩ ನಗುಣಮಂ ಕುಲದುಂನತಿಯಂ ಜಿನಾಂಘ್ರಿಗಳ್ಗಕುಟಿಳಚಿತ್ತಮಂ ಪೊಗಳುತ್ತಿರ್ಪ್ಪ –

೧೪ ದು ಕೂಂಡಿಯ ಬಿಂಕದಂ (ಕ) ಪಾಳಕನ ಕುಳೋತ್ತಮಾಂಗನೆಯನರ್ತ್ಥಿಎ ಲಚ್ಚಲದೇವಿಯಂ

೧೫ ಜಗಂ (||) ಶರನಿಧಿ ಮೇಖಳಾವ್ರಿತ ವಸುಂಧರೆಯೆಂಬ ವಿಲಾಸಿನೀ ಮುಖಾಂಬುರಹದವೋಲ್ವಿರಾಜಿ –

೧೬ ಸುವ ಬೆಳ್ವಳನಾಳ್ಕೆ ಪೊದಳ್ದ ಶೋಭೆಗಾಗರ (ಮೆನಿಸಿರ್ದ್ಧ) ಪುಲಿತಿಳಕಾಕ್ರಿತಿಯಿಂದಸೆದಿರ್ಪ್ಪದಾಪುರಂ ಸುರಪು –

೧೭ ರಮಂ ಕುಬೇರ (ನ)ಳಕಾಪುರಮಂ ನಗುಗುಂ ವಿಳಾಸದಿಂ (||) ಅಲ್ಲಿ || ಸಕಳವ್ಯಾಕರಣಾರ್ತ್ಥಶಾ –

೧೮ ಸ್ತ್ರಚಯದೊಳು ಕಾವ್ಯಂಗಳೊಳು (ಸಂ)ದ ನಾಟಕದೊಳು ವರ್ಣ್ನಕವಿತ್ವದೊಳ್ನೆಗರ್ದ್ಧ ವೇದಾಂತಗಳೊಳು

೧೯ ಪಾರಮಾ(ರ್ತ್ಥಿಕ) ದೊಳು ಲೌಕಿಕದೊಳು ಸಮಸ್ತಕಳೆಯೊಳು ವಾಗೀಶನಿಂದಂ ಯಶೋಧಿ –

೨೦ ಕರಾದರ್ಪ್ಪೊಗಳ್ವಲ್ಲಿಗಾರಳವೆ ಪೇಳು ಸಾಸಿರ್ವ್ವರ ಖ್ಯಾತಿಯಂ || ಸ್ವಸ್ತಿ ಶಕನ್ರಿಪಕಾಲಾತೀತ ಸಂವತ್ಸರ –

೨೧ ಶತಂಗಳು ೯೬೬ನೆಯ ತಾರಣ ಸಂವತ್ಸರದೆ ಪುಶ್ಯ ಸುದ್ಧೆ ೧೪ ಆದಿವಾರ (ವು)ತ್ತರಾಯಣ(ಣ) –

೨೨ ಸಂಕ್ರಾನ್ತಿಯಂದು || ಯಜನಯಾಜನ ಅಧ್ಯಯನಾಧ್ಯಾಪನ ದಾನಪ್ರತಿಗ್ರಹ ಷಟ್ಕರ್ಮನಿರತರುಂ ಶ್ರೀ –

೨೩ (ಮ) ಚ್ಚಾಳುಕ್ಯ ಚಕ್ರವರ್ತ್ತಿ ಬ್ರಹ್ಮಾಪುರಿಸ್ಥಾನಂ ಪಿತೃ ಪಿತಾಮಹ ಮಹಿಮಾಸ್ಪದ ರಕ್ಷಣಾ –

೨೪ ರ್ತ್ಥಕೋವಿದರುಂ ವಿದಗ್ಧ ಕವಿಗಮಕ ವಾದಿವಾಗ್ಮೀಶ್ವರ (ರ*)ರು ಮತಿಥಿಯಭ್ಯಾಗತವಿಶಿಷ್ಟ –

೨೫ ಜನ ಪೂಜನಪ್ರಿಯರುಂ ಹಿರಣ್ಯಗರ್ಬ್ಭಬ್ರಹ್ಮ ಮುಖ ಕಮಳವಿನಿರ್ಗ್ಗತ ರುಗ್ಯಜು –

೨೬ ಸ್ಸಾಮಾಥರ್ವ್ವಣ ಸಮಸ್ತವೇದಿವೇದಾಂಗೋಪಾಂಗನೇಕ ಶಾಸ್ತ್ರಷ್ಟಾದ ಶ ಸ್ಮೃತಿಪುರಾಣ.

೨೭ ಕಾವ್ಯನಾಟಕ ಧಮ್ಮಾಗಮ ಪ್ರವೀಣರುಂ ಸಪ್ತ ಸೋಮಸಂಸ್ಥಾನವ ಭೃತಾವಗಾಹನ ಪವಿತ್ರಿಕ್ರಿ –

೨೮ ತಗಾತ್ರರುಂ ಕಾಂಚನಕ (ಳ)ಶ ಸಿತಷಟ್ಫತ್ರ ಚಾಮರ ಪಂಚಮಹಾಶಬ್ದ ಘಟಿಕಾ ಭೇರಿರವನಿಂ –

೨೯ (ನಂ)ದಿತರುಮಾಶ್ರಿ(ತಜನ) ಕಳ್ಪವಿಕ್ಷರುಮಹಿತಕಾಳಾಂತಕರು ಮೇಕವಾಖ್ಯರುಂ

೩೦ ಶರಣಾಗತ ವಜ್ರಪಂಜ (ರರುಂ ಚ) ತುಸ್ಸಮಯ ಸಮುದ್ಧ ರಣರುಂ ಶ್ರೀಕೇಶವಾದಿತ್ಯದೇವ –

೩೧ ಲಬ್ಧವರಪ್ರಸಾದರುಮಪ್ಪ ಶ್ರೀ ಮನ್ಮಹಾಗ್ರಹಾರಂ ಪುಲಿಯೂರೊಡೆಯ ಪ್ರಮು –

೩೨ ಖ ಸಾಸಿರ್ವ್ವರ್ಮ್ಮಹಾಜನಂಗಳ ದಿವ್ಯ ಶ್ರೀಪಾದ ಪದ್ಮಂಗಳಂ (ಲ)ಚ್ಚಿ ಯಬ್ಬರಸಿಯರು ಸ –

೩೩ ಹಿರಣ್ಯ ಪೂರ್ವ್ವಕಮಾರಾಧಿಸಿ ಭೂಮಿಯಂ ಪಡೆದು ಬಸದಿಯಂ ಮಾಡಿಸಿ ಖಂ –

೩೪ ಡಸ್ಫು(ಟಿ)ತಜೀರ್ಣ್ನೋದ್ಧರಣಕ್ಕೆ ಪಡುವಣ ಪೊಲದಲು ಶಿವೆಯಗರಿ ಯಾಱುಮತ್ತರ್ವ್ವ –

೩೫ ಸುಗೆಯಂ (ಮತ್ತ)ರಿಂಗಡ್ಡ ಚಿನ್ನಲೆಕ್ಕದಿಂದಱುವಣ (ಮುಂ)ಮೂಱು ಪಣಮಂ ತೆತ್ತುಂಬಂ –

೩೬ ತಾಗಿ ಶ್ರೀ ಯಾಪನೀಯಸಂಘದೆ ಪುನ್ನಾಗವ್ರಿಕ್ಷ ಮೂಲಗಣದ ಶ್ರೀ ಬಾಳಚಂದ್ರಭ –

೩೭ ಟ್ಟಾರಕದೇವರ ಕಾಲಂ ಕರ್ಚ್ಚಿಬಿಟ್ಟಳು ||

 

. ಹೂಲಿ ಶಾಸನ
(ಸೌಇಇ. ಸಂಪುಟ. . ಸಂಖ್ಯೆ ೮೫೦. ಕ್ರಿ.. ೧೦೪೪, ಹೂಲಿ)

೦೧ ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀಪ್ರಿಥ್ವೀವಲ್ಲಭ ಮಹಾ –

೦೨ ರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾತ್ರಯಕುಳತಿಳಕಂ ಚಾಳುಕ್ಯಾಭರಣಂ

೦೩ ಶ್ರೀಮತ್ಪ್ರತಾಪ ಚಕ್ರವರ್ತ್ತಿ ಜಗದೇಕಮಲ್ಲ ದೇವರ ವಿಜಯರಾಜ್ಯ ಮುತ್ತರೋತ್ತ –

೦೪ ರಾಭಿವ್ರಿದ್ಧಿಪ್ರವದ್ಧಮಾನಮಾ ಚಂದ್ರಾರ್ಕ್ಕತಾರಂಬರಂ ಸಲುತ್ತಮಿ (ರೆ) ಶಕವ –

೦೫ ರ್ಷ ೧೦೬೭ನೆಯ ಕ್ರೋಧನ ಸಂವತ್ಸರದುತ್ತರಾಯಣ ಸಂಕ್ರಾನ್ತಿಯೆಂದು ಯಮನಿ –

೦೬ ಯಮ ಸ್ವಾಧ್ಯಾಯ ಧ್ಯಾನ ಧಾರಣ ಮೋನಾನುಷ್ಠಾಣ ಜಪ ಸಮಾಧಿ ಶೀಳ ಸಂಪಂನ್ನರ (ಪ್ಪ)

೦೭ ಶ್ರೀಮ(ನ್ಮ) ಹಾಗ್ರಹಾರಂ ಪುಲಿಯೂರೊಡೆಯಪ್ರಮುಖ (ಖ) ಸಾಸಿರ್ವ್ವರ್ಮ್ಮಹಾಜನಂ(ಗಳ)

೦೮ ದಿವ್ಯ ಶ್ರೀಪಾದಪದ್ಮಂಗಳಂ ಪಿರ್ಗ್ಗಡೆ ನೇಮಣಂ ಸಹಿರಣ್ಯಪೂರ್ವ್ವಕ ಮಾರಾಧಿಸಿ

೦೯ ಪೂರ್ವ್ವಕಂ ಮಾಡಿಸಿಕೊಂಡು ತಮ್ಮ ಮುತವ್ವೆ ಲಚ್ಚಿಯಬ್ಬರಸಿಯರು ಮಾಡಿಸಿದ ಬಸ –

೧೦ ದಿಯಲಿರ್ಪ್ಪರಿಷಿಯರಾಹಾರದಾನ ನಿಮಿತ್ತಮಲ್ಲಿಯಾಚಾರ್ಯ್ಯರು ರಾಮಚಂದ್ರ –

೧೧ ದೇವರ ಕಾಲಂ ಕರ್ಚ್ಚಿಯವರು ಮುನ್ನವಾಳುವ ಪಡುವಣ ಪೂಲದೆ ಶಿವೆಯಗೆರಿಯಾಱು ಮತ್ತ –

೧೨ ರ್ವ್ವಸುಗೆಯಿಂ ಪಡುವಣಭಾಗದಲು ಕಳಶವಳ್ಳಿಯಗೆರಿಯಸ್ಥ (ಳ) ದೊಳಗಾಱುಮತ್ತರ್ಕ್ಕೆಯ್ಯಂ

೧೩ ಮತರಿಂಗಡ್ಡ ಚಿನ್ನ (ಲೆಕ್ಕದಿಂದಱುವ)ಣಮಂ ಮೂಱುಪಣಮಂ ತೆತ್ತುಂಬಂತಾಗಿ ಬಿಟ್ಟರು ||

೧೪ ಪತಿಭಕ್ತೆ ದೇವ… ಸತಿ ಪಾಯಿಮ್ಮರಸನಗ್ರಸುತೆ ಸಕಳಜನಸ್ತುತ ಭಾ –

೧೫ ಗಿಯಬ್ಬೆರಾಣಿಗೆ (ಸ್ತು)… ಂದಿ. ಯ್ಯನೌದಾರ್ಯ್ಯಗುಣಂ (||) ಜಿನದೇವಂ ತನಗಾಪ್ತನ –

೧೬ (ರ್ತ್ಥಿ) ಜನತಾ (ಕ)ಳ್ಪದ್ರು (ಮಂ)… ಯ್ಯನೆ ತಮ್ಮಯ್ಯನನೂನದಾನಿ ಕಲಿದೇವಂ ಸಾಕ್ಷರಾ –

೧೭ ಗ್ರೇಸರಂ ತನ್ನಗಣ್ನಂ ಗುಣರ (ತ್ನ) ಭೂಷಣ… ಸಂದಿರ್ದೆನೇಮಂಗೆನಲ್ಕ ನವದ್ಯಾಚ…

೧೮ (ಗೆ) ಭೂವಳೆಯದೊಳು ಪೇ (ಳೆ)…

 

. ಮುಗದ ಶಾಸನ
(ಸೌಇಇ. ೧೧, ಸಂಖ್ಯೆ, ೭೮. ಕ್ರಿ.. ೧೦೪೫, ಮುಗದ)

೦೧ … ಭೀರಸ್ಯಾದ್ವಾದಾಮೋಘಲಾಂಛ್ಛನಂ ಜೀಯತ್ತೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ (||)*

೦೨ … ಯ ಸಮುದ್ರಾ (ಧಿಪ) ವರ್ದ್ಧಮಾನ ಜಿನಶಾಸನ ಸಮ್ಪದ್ರುಚಿರ ಯಾಪನೀಯ ಸುರದ್ರು – ಮ…

೦೩ … ಕುಮುದಿಗಣ… ||* ಭದ್ರ(ಮ್ಭೂಯಾ) ಜ್ಜಿನಶಾಸನಯ ||*

೦೪ *ಶ್ರೀ ಕುಮುದಿಗಣದಿ ಬುಟ್ಟಿ ಶ್ರೀ ಕೀರ್ತ್ತಿಗೊರವದಿ ದಿವ್ಯ ಮುನಿನಾಥರ್ವೈಯಾಕರಣಿ ತರ್ಕ್ಕಸಿದ್ದಾನ್ತಾಕರ ಹೃತ್ಕಮಳ ಪ…

೦೫ ವಿಖ್ಯಾತಂ || ವ || ಆ ಮುನೀಶ್ವರಂ ಸಚ್ಚರಿತ ತಪೋನುಷ್ಠಾಣ ನಿರತನಾದೆ… ಯಂ || ಕ || ನೆಟ್ಟನೆ…

೦೬ ತ್ರಯ ಮೊಡವಟ್ಟಿರೆ ಸಚ್ಚರಿತಭರಿತನಿಯಮೋತ್ಕರಿಷ(ಂ |) ಪುಟ್ಟೆ ವಸುನ್ಥರೆಗೆ…

೦೭ (ಬ್ರತಿ) ಸತಿಗಳ್‌ || ತಚ್ಛಿಷ್ಯರ್ಕ್ಕುಸುಮಾಸ್ತ್ರ ಕುಜಚ್ಛಿದುರರ್ಭ್ಭವ್ಯಸಮ್ಯ (ಕ್ತ್ವ*) ಸಂವರ್ದ್ಧನಂ.

೦೮ ಚ್ಛದರೆಸೆದರ್ಪ್ರಭಾಶಶಾಂಕಮುನೀನ್ದ್ರರ್ || ಅವರ ಸಹಧರ್ಮಿಗಳ್‌ || ವ್ರಿ || ವಿತತಖ್ಯಾ.

೦೯ ನಿಶ್ಚಳ ರ್ಪ್ಪಿನ್ನಯಬ್ರತಿನಾಥ ರ್ನ್ನೆಗೞ್ದೀಕವೀರಮುನಿಪರ್‌ ಶ್ರೀ ಮನ್ಮಹಾವೀರ ವಿಶ್ರುತಕೀರ್ತ್ಯವದಾ… ||

೧೦ (ನ್ದ್ಯಾ)ಚಾರ್ಯವರ್ಯ್ಯರ್ಜ್ಜಗನ್ನುತ ಚಾರಿತ್ರ ನರೇನ್ದ್ರಕೀರ್ತ್ತಿಮುನಿನಾಥ ರ್ಕ್ಕೀರ್ತ್ತಿಗೇನ್ನೋನ್ತರೊ || ಅವರ ಶಿಷ್ಯರ್ |

೧೧ ದ್ಧಾನಾದಿಷಟ್ತರ್ಕ್ಕ ವೈಯಾಕರಣ ಪರಿಣತಿಶ್ರೀ ತಮ್ಮೊಳೊಪ್ಪಿೞ್ದ. ಕಾಚ(ರ)ಣ… ಚಾರಿತ್ರ ಚಕ್ರೇಶ್ವ (ರ)…

೧೨ ನಾಗ (ಬಿ)ಕ್ಕಿ ಬ್ರತೀನ್ದ್ರಂ || ವ || ಆ ಚಾರತ್ರಚಕ್ರವರ್ತ್ತಿಗಳ ಸಹಧರ್ಮ್ಮಿಗಳ್‌ || ವ್ರಿ || ಪರಮ ಪುರುಷವನ್ದ್ಯಾನಿನ್ದ್ಯ ಪಾದಾರವಿನ್ದರ್ಸ್ಸುರ…

೧೩ ಧೈರ್ಯ್ಯಧುರ್ಯ್ಯರಾರ್ಚ್ಯಾವರ್ಯ್ಯರ್‌ ನಿರತಿಶಯತಪೋನುಷ್ಠಾನ ಸನ್ದರ್ಬ್ಭಗರ್ಭ್ಭರ್‌ ನಿರುಪಮ – ನಿರವದ್ಯರ್‌ ವಿಕೃತಾನೂನವಿದ್ಯರ್‌ || ವ ||

೧೪ ಆ ನಿರವದ್ಯಕೀರ್ತ್ತಿ ಭಟ್ಟಾರಕರ ಸಹಧರ್ಮ್ಮಿಗಳ್‌ || ಕ || ಈ ಮಹಿಯೊಳೆ ವಸುದೇವಸ್ವಾಮಿಗಳಂ ಜಗತ್ಪ್ರಸಿದ್ಧ…

೧೫ ಪಾರ್ಶ್ವದೇವಸ್ವಾಮಿಗಳ ವಿಚಿತ್ರಚರಿತಮಪಗತದುರಿತಂ || ಅವರ ಸಹಧರ್ಮ್ಮಿಗಳ್‌ || ವ್ರಿ || ದುರಿತ ತಿಮಿರನಾಶರ್ತ್ತತ್ವರತ್ನ ಪ್ರಕಾ(ಶ) ಸ…

೧೬ ರಿತಮೂರ್ತ್ತರ್ತ್ಯಕ್ತಶೇರ್ಷಾರ್ತ್ತವೃತ್ತರ್‌ ಪರಮಕರುಣಚಿತ್ತ ರ್ಚ್ಚಾರು ಚಾರತ್ರಪೂರ್ತ್ತರ್‌ ನಿರುಪಮ ಶುಭಚನ್ದ್ರ

ರ್ಮ್ಮಾಧವೇನ್ದುಬ್ರತೀನ್ದ್ರರ್‌ || ವ || ಆ ಮಾಧವೇ

೧೭ ನ್ದ್ರರ ಸಹಧರ್ಮ್ಮಿಗಳ್‌ || ವ್ರಿ || ಬ್ರತಿಪತಿಬಾಳ ಚನ್ದ್ರಮುನಿಪುಂಗವ ರಾಜಿತ ರಾಮಚನ್ದ್ರ ವಿಶ್ರುತಮುನಿಪೋತ್ತಮರ್ನ್ನೆಗೞ್ದರಾ ಮುನಿಪೋತ್ತಮ (ರಗ್ರಶಿ) –

೧೮ ಷ್ಯರಪ್ರತಿಹತವಾಗ್ಮಯರ್‌ ಜಿನಮತೋದಯ ರುನ್ದ್ರ ಗಿರೀನ್ದ್ರ ಭಾಸ್ಕರರ್ನ್ನುತ ಮುನಿಚ್ನದ್ರದೇವ ರವಿಕೀರ್ತ್ತಿದಯಾನಿಧಿ ದೀಪವರ್ತ್ತಿಗಳ್‌ || ವ || ಮತ್ತಮಾ (ನಿ)

೧೯ ರವದ್ಯ ಕೀರ್ತ್ತಭಟ್ಟಾರಕ ಕಳ್ಪವೃಕ್ಷ ಬೀಜಾಂಕುರಂ ಪುಟ್ಟುವನ್ತೆ ಪುಟ್ಟಿ || ವ್ರಿ || ವಾರ್ದ್ಧಿವೃತಾಖಿಳಾವನಿತಳಕ್ಕೆ ನಿಜಾಭಿಮತಾನ್ನಮಂ ದಯಾವಾರ್ದ್ಧಿ –

೨೦ ವಿವರ್ದ್ಧನಪ್ರದಮಿ (ವೆಂ) ಬಿನಮಿಕ್ಕಿಚರಿತ್ರಪಾತ್ರ ಗೋವರ್ದ್ಧನ ದೇವನೂಜ್ಜಿ(ರ್ಜ್ಜಿ) ತಗುಣಂ ಹರಹಾಸವಿಕಾಸಕೀರ್ತ್ತಿಗೋವರ್ದ್ಧನ (ಭೋ) ಜನಾಂಗ ತರು…

೨೧ …ಶಂಕೆಯನ್ನುಂಟುಮಾಡಿದಂ || ವ || ಆ ಮುನೀಶ್ವರನೆಮ್ಬ ಭೋಜನಾಂಗದ ಸಮೀಪದೊಳ್‌ ಭೂಷಣಾಂಗಂ ಪುಟ್ಟವನ್ತೆ ಪುಟ್ಟೆ || ವ್ರಿ || ಅನೇಕಮಣಿ ಮೌ

೨೨ ಕ್ತಿಕಾವಯವಗಾತ್ರವೈಚಿತ್ರ… ಮುನಿಪ್ರಕರ ದೇವಕೋಟಿವೃತ ಸತ್ಕಥಾಕೀರ್ಣ್ನಮಂ ಘನಾರ್ಣ್ನ ವಸುಕರ್ಮ್ಮವಿ. ತವಿತಾನಮಂ ಮಾಡಿಸ –

೨೩ ನ್ದನನಿನ್ದಿತನ್ನನ್ತ ವೀರ್ಯ್ಯಾ ಕೃತಕೀರ್ತಿಸಾಮಾನ್ಯಮೇ || ಕ || ಅವರ ಸಹಧರ್ಮ್ಮಿಗಳು ನತಭುವನರ್ಸ್ಸಿದ್ಧಾನ್ತ ತರ್ಕ್ಕವೈಯಾಕರಣ ಪ್ರವಿ –

೨೪ ಚಾರಲ (ಲ) ನ ಸರಸಿಜವೀ. ರ್‌ ಶ್ರೀ ಮತ್ಕುಮಾರಕೀರ್ತ್ತಿ ಮುನೀನ್ದ್ರರ್‌ || ವ || ಆಮುನೀಶ್ವರಪ್ರಿಯಶಿಷ್ಯರ್‌ || ವ್ರಿ || ಶಮದಮನ –

೨೫ ಯಮಾತ್ಮಾನನ್ತಶಾನ್ತಿಪ್ರಕಾನ್ತಂ | ಕುಮುದ ಕುವಳಯ ಶ್ರೀಕಾಸಿಸಂಕಾಸಿ ಕೀರ್ತ್ತಿಪ್ರಮದದಶ ದಿಶಾಭಾ ಭಾಸುರಂ ಭವ್ಯ –

೨೬ ಪದ್ಮದ್ಯುಮಣಿ ನತನರೇನ್ದ್ರಂ ದಾಮನನ್ದಿವ್ರತೀನ್ದ್ರಂ || ವ || ಅವರ ಸಹಧರ್ಮ್ಮಿಗಳು ಚತುಸ್ಸಮಯ ಸಮುಚಿತಾಚಾರ (ಪ್ರಿಯ) ರನ –

೨೭ ವದ್ಯ ವಿದ್ಯಾ ವಿಶಾರದ ಪ್ರಬುದ್ಧರುಂ ಜಗತ್ಪ್ರಸಿದ್ಧರುಮಪ್ಪ ತ್ರೈವಿದ್ಯಚೂಡಾಮಣಿಗಳ್‌ || ವ್ರಿ || ಅನವದ್ಯಾಚರಣರ್ಕ್ರಿಯಾ –

೨೮ ನುಕರಣರ್ಸ್ಸಿದ್ಧಾನ್ತ ಶಬ್ದಾನುಶಾಸನ ಷಟ್ತರ್ಕ್ಕವಿಚಿತ್ರನಾಟಕ ವಚೋಳಂಕಾರ ಸಾಹಿತ್ಯ ಪಾವನವಿದ್ಯಾ ಪರಿಪೂರ್ಣ್ನಚಿ –

೨೯ ತ್ರ ಕವಿತಾ ವಿಸ್ತೀರ್ಣ್ನಸನ್ದರ್ಭ್ಭಗಭ್ಭನಿರದ್ದೋನ್ನತಿಯಿಂ ನೆಗರ್ತ್ತವಡೆದೆ ತ್ರೈವಿದ್ಯಗೋವರ್ದ್ಧನರ್‌ || ವ || ಆ ತ್ರೈವಿದ್ಯಗೋವರ್ದ್ಧನ ದೇವರ ಶಿ –

೩೦ ಷ್ಯಮುಖ್ಯರ್‌ || ವ್ರಿ || ಶ್ರೀಮದಾನತ ನರೇಂದ್ರ ತಿರೀಟೋದ್ದಾಮರತ್ನ ನಿಕರಾರ್ಚ್ಚಿತಪಾದರ್ಕ್ಕಾಮ ದುರ್ದ್ಧರಗಜೇನ್ದ್ರ…

೩೧ ದ್ರ ರ್ದ್ದಾಮನನ್ದಿಮುನಿ ಗಣ್ಡವಿಮುಕ್ತರ್‌ || ವ || ಅನ್ತು ಕುಮುದಿಗಣಾನ್ವಯ ವಾಯ ಕೌಮುದೀ ಶರಶ್ಚಂದ್ರ…

೩೨ ಮಸ್ತ ವಡ್ಡಾಚಾರ್ಯ್ಯರುಂ ಸಕಳ ರಿಷಿಸಮುದಾಯಮುಂ ಯಮ ನಿಯಮ ಸ್ವಾಧ್ಯಾಯ ಧ್ಯಾನ ಧಾರಣ ಪರಮ ತಪೋನು –

೩೩ ಷ್ಠಾನನಿರತವೃತಿಯಿಂ ಭಗವದರ್ಹತ್ಪರಮೇಶ್ವರ ಪರಮಭಟ್ಟಾರಕ ತ್ರಿಳೋಕಾಶ್ರಯ ಶ್ರೀ ಸಮವಸರಣಾನುಕಾರಿಯಾಗಿ ವರ್ತ್ತಿಸುತ್ತಿರೆ*

೩೪ *ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾಳು –

೩೫ ಕ್ಯಾಭರಣಂ ಶ್ರೀ ಮತ್ರೈಳೋಕ್ಯಮಲ್ಲಾಹವಮಲ್ಲ ದೇವರ ವಿಜಯರಾಜ್ಯ ಮುತ್ತರೋತ್ತರಾಭಿವೃದ್ಧಿ ಪ್ರವರ್ದ್ಧಮಾನಮಾಚನ್ದ್ರಾರ್ಕ್ಕತಾರಂ

೩೬ ಸುಲುತ್ತಮಿರೆ | ತತ್ಪಾದಪದ್ಮೋಪಜೀವಿ ಸಮಧಿಗತಪಂಚ (ಮಹಾಶಬ್ದ*) ಮಹಾಮಣ್ದಳೇಶ್ವರಂ ಬನವಾಸೀಪುರವರಾಧೀಶ್ವರಂ ತ್ರಿಳೋಚನಕದಂಬ

೩೭ ಕುಳಕಮಳಿನೀ ವಿಕಾಸಬಾಸ್ಕರ | ನನೇ ಕ ಸಮರವಿಜ (ಯ) ಶಬ್ದಮಹೋದಯೋಪಾರ್ಜ್ಜಿತ ವೀರ ಶ್ರೀನಿವಾಸದಕ್ಷಿಣದೋಱ್ಡಣ್ಡಂ | ಪಗೆ –

೩೮ ಮುಟ್ಟೆಗಣ್ಡಂ | ಪ್ರಚಣ್ಡವೈರಿಮಣ್ಡ ಲಿಕಮದವೇದಣ್ಡ ಗಣ್ಡಸ್ಥಳ ಖಣ್ಡನ ಪಟಿಷ್ಠ ನಿಷ್ಠುರ ಭುಜಾ ದಣ್ಡ (ಂ) | ನನೂನ ದಾನವಾರಿ ಸನ್ತರ್ಪ್ಪಿ –

೩೯ ತಸಕಳವಿಭುಧಜನಶಸ್ಯ (ತ್ರೈ*) ಲೋಕ್ಯಕಳ್ಪದ್ರುಮಂ | ಮೂರ್ತ್ತಿ ನಾರಾಯಣಂ ಕೀರ್ತ್ತಿಮಾರ್ತ್ತಣ್ಡಂ | ಮಣ್ಡಲಿಕ ಲಲಾಟಪಟ್ಟ || ||

೪೦ ಶ್ರೀ ಮಚ್ಚಟ್ಟಯ್ಯದೇವರ್‌ ಪಲಸಿಗೆ ಪನ್ನಿರ್ಚ್ಚಾಸಿರಮುಂ ಕೊಂಕ ಮೊಂಬಯ್ನೂಱುಮಂ ದುಷ್ಟನಿಗ್ರಹ ಶಿಷ್ಟಪ್ರತಿಪಾಳನೆಯಿಂ ಸುಖ ಸಂಕಥಾ –

೪೧ ವಿನೋದದಿಂದಾಳುತ್ತಮಿರೆ || ಕ || ಪಲಸಿಗೆಪಲಸಿಗೆ ಪನ್ನಿರ್ಚ್ಚಾಸಿರದೊಳಗೆ ಮಹಾರಾಜವಾಡಿ ನಾಡೆಂಬುದು ಭೂಲಲನಾಲಪನಮದರ್ಕ್ಕಂ ತಿಳಕಮೆ –

೪೨ ನಿಪ್ಪ್ರದು ಮುಗುನ್ದ ಮೂವತ್ತೆನ್ದುಂ || ಭಾವಿಸೆ ಮುಗುನ್ದಮೂ (ವ)ರ್ತ್ತಕ್ಕೀವಸುಧೆಗೆ ತಿಳಕಮದ(ಱ) ನಾರ್ಗ್ಗಾವುಣ್ಡಂ ಚಾವುಣ್ಡಂ ನಿರ್ಜ್ಜಿತಶೌರ್ಯ್ಯಾ –

೪೩ ವಷ್ಟಂಭಾವಧೇಯ ಬಾಹಾಸ್ತಂಭಂ || ವ || ಸ್ವಸ್ತಿ ಸಮಸ್ತ ದುಸ್ತರಾರಾತಿ ಮಸ್ತಕವಿದಳನ ಕಿಶೋರ ಕಣ್ಠೀರವ | ಪರಸೈನ್ಯಭೈರವಂ | ತತ –

೪೪ ವಿತತ ಘನಶುಷಿರವಾದ್ಯ ವಿದ್ಯಾವಾಚಸ್ಪತಿ | ಕಾರ್ಯುಬೃಹಸ್ಪತಿ | ನಿಜಕುಳಕಮಳಮಾರ್ತ್ತಣ್ಡಂ | ನುಡಿದೆ. (ರ್ಗ್ಗ)ಣ್ಢಂ | ಶರಣಾ –

೪೫ ಗತವಜ್ರಪಂಜರಂ | ವೈರಿದಿಕ್ಕುಂಜರ (ಂ) | ಸುಜನಪ್ರಸಂಗಂ | ಸಾಹಸೋತ್ತುಂಗಂ | ನೇಕಾಂಗವೀರಂ | ವೀರಾವತಾರಂ | ಕದನಪ್ರಚಣ್ಡಂ ಪಗೆಮು –

೪೬ ಟ್ಟೆಗಣ್ಡಂ | ವಿನಯವಿಖ್ಯಾತಂ | ನೀತಿಮಾನ್ಧಾತಂ | ನಾಮಾದಿಸಮಸ್ತ ಪ್ರಶಸ್ತಿ ಸಮೇತರಪ್ಪ ಶ್ರೀಮನ್ನಾರ್ಗ್ಗಾವುಣ್ಡಂ ಚಾವುಣ್ಡಂಗಾಮುಣ್ಡಂ ಮುಗುನ್ದದೊಳು

೪೭ ತನ್ನ ಮಾಡಿಸಿದ ಸಮ್ಯಕ್ತ ರತ್ನಾಕರ ಚೈತ್ಯಾಳಯದ ಖಣ್ಡಸ್ಫುಟಿತ ನವಕರ್ಮ್ಮಕ್ಕಂ ನಾನಾದೇಸೀಯ ಚಾತುರ್ವ್ವರ್ಣ್ನ ಭೋಜನಕ್ಕಂ | ಮುಗುನ್ದದೆ.

೪೮ ಕೊಡಗೆಯ್ಯೊಳಗೆ ಸಕವರಿಷ ೯೬೬ ನೆಯ ಪಾರ್ತ್ಥಿವ ಸಂವತ್ಸರದ ಚೈತ್ರ ವಿಶುದ್ಧ ಪಂಚಮಿ ಆದಿವಾರದನ್ದು ಶ್ರೀಮತ್ಪಿರಿ –

೪೯ ಯ ಗೋವರ್ದ್ಧನದೇವರ ಕಾಲಂಕರ್ಚ್ಚಿ ಗರ್ದ್ದೆಯುಂ ಪಳಗಲುಮಂ ಬಿಟ್ಟಂ | ನಡು ಮುಗುನ್ದದೆ ವಾಯುವ್ಯದ ಮೊದಲ ಸವಣ್ಗೆಱೆಯುಮದಱ ಬ –

೫೦ ಡಗಣ ಗರ್ದ್ದೆಯುಮವರ್ಕ್ಕೆ ಸೀಮೆ ಸವಣ್ಗೆಱೆ ಮೂಡಣ ಸೀಮೆ | ಅಣಿಲಾಪುರದ ಪರ್ವ್ವಟ್ಟೆ ತಂಕಣ ಸೀಮೆ | ಮೇಣ್ವಯ ಪೆರ್ವ್ವಟ್ಟೆಪಡುವ –

೫೧ ಣಸೀಮೆ | ಮತ್ತಮಾ ಸವಮಣ್ಗೆಱೆಯೇಱಿಯ ಬಡಗಣ ಕೋಡಿಯಿ ಪಡುವಲ್ಪಾಳಿಕಟ್ಟಿನ ಮೋ(ಗ) – ಳಯ ಬರುಹುತೋಂಟಯಾಗಿ ಪಡುವಣ

೫೨ ಭಾಗದೊಳ್‌ ಮೇಣ್ಟೆಯ ಬಟ್ಟೆಯಂ ಮುಟ್ಟೆಬಡಗಣ ಸೀಮೆ. * ಬಸದಿಯ ನೈರಿತ್ಯದ ಗೋಂಟಿನ್ದಂ ಸೆಯು ತೆಂಕಮೊಗದೆ ಬೀದಿ(ಯ)ಂ ಮುಟ್ಟು

೫೩ ದಿನಮೊನ್ದೊನ್ದು ಮನೆಗೆ ಪದಿನಾಱು ಕಯ್ಯ ಲೆಕ್ಕದೆ ಮನೆ ಮೂಱು | ಆ ಮನೆಯಿಂ ಮೂಡಲ್ಪದಿನಾಱು ಕಯ್ಯ ದೇಹಾರ

೫೪ ದೆ ನೆಲನಾ ದೇಹಾರದ ಮೂಡಣ ಗೋಂಟಿನ್ದಂ ತೆಂಕಲ್ಪೀದಿವರಂ ನೆವೇಶಣಸೀಮೆ * ಪೆರ್ಗ್ಗೆಱೆಯೆ ಮೊದಲೇರಿಯ ಪಿರಿಯತೋಂಟದಿಂ

೫೫ ತೆಂಕಮೊಗದೆ ಗಾವುಣ್ಡರ ಪಡುವಣ ಪಿರಿಯತೋಣ್ಟದ ತೆಂಕಣ ಸೀಮೆಯಿಂ ಸಯುಮೂಡಲ್ಕೆಱೆಯೇರಿಯ ತೋಣ್ಟ…

೫೬ ಕ್ಕೆ ಸೀಮೆ || ಕೆಯ್ಗಂ ಮನೆಗಂ ತೋಣ್ಟಕ್ಕ ಮರುವಣಂ ಗದ್ಯಾಣಂ ಮೂಱು | ಪಣವಾಱು ಪರಿಪುಂ ಪಾರಣೆಯುಂ ಮೊದಲಾಗಿ ಕಿರುಕುಳಬಾ –

೫೭ ಧೆಯೊನ್ದುಮಿಲ್ಲದೆ ನಾಗಿಗಾವುಣ್ಡರ್‌ ಪ್ರತಿಪಾಳಿಸುವರ್ || ಇನ್ತು ಸಮ್ಯಕ್ತ ರತ್ನಾಕರಮೆಂಬ ಬಸದಿಯಂ ಮಾಡಿಸಿ ಭೂಮಿಯಂ ಬಿಟ್ಟುಕೃತ

೫೮ ಕ್ರಿತ್ಯನುಂ | ಸಮ್ಯಕ್ತರತ್ನಾಕರನುಂ | ಜಿನಧರ್ಮ್ಮನಿರ್ಮ್ಮಳನು (ಂ) ಮಾದ ನಾರ್ಗ್ಗಾವುಣ್ಡ ಚಾವುಣ್ಡಗಾವುಣ್ಡನೇ ದೊರೆಯೆನ್ದಡೆ || ವೃ ||

೫೯ ಮನುವಿಂ ಸನ್ಮಾರ್ಗ್ಗಶೀಳಂ ಸುರಪತಿಸುತನಿಂ ಶೌರ್ಯ್ಯಸಂಪನ್ನ ನಿನ್ದ್ರೇಜ್ಯನಿನುತ್ಯುತ್ಪನ್ನ ಮನ್ತ್ರಪ್ರಕಟನಪಟು (|) ನಾಗಾರಿಯಿಂ ಧೀರತಾತ್ಮಂ ದಿನಕೃ –

೬೦ ತ್ಸಂಜಾತನಿಂ ಸೂನೃತ ಸಕಳವಚೋವಾರ್ದ್ಧಿ (|) ವಿದ್ಯಾಧರಾಧೀಶ ನಿನುದ್ಯದ್ದಾನ ಧಾರಾನಿರತನೆನಿಪ ಚಾವುಣ್ಡರಾಯಂ ಕೃತಾರ್ತ್ಥಂ ||

೬೧ ಕ || ಆತನ ತನಯಮ್ಭುಜಪರಿ ಭೂತೋಗ್ರಾರಾತಿ ಸತ್ಯರವಿನ್ದನ ನುರ್ವ್ವೀತಿಳಕಂ ಮಾನವಮಾನ್ಧಾತಂ ಶ್ರೀನಾಗದೇವನ –

೬೨ ಸುಹೃದ್ದಾವಂ || ಆನ್ತ ವಿರೋಧಿಗೆ ಕುಪಿತಕೃತಾನ್ತಂ ಕಯ್ಯಾನ್ತವಿಬುಧ ಮಾಗಧಜನತಾಚಿನ್ತಾಮಣಿ ವೀರಶ್ರೀಕಾನ್ತನೆನನಲ್ನೆಗೞ್ದ ನಾ –

೬೩ ಗದೇವಂ ದೇವಂ || ವಾಗ್ನಾರೀ ಮುಖಮುಕುರಂ ದಿಗ್ನಾಗ ವಿಲಗ್ನ ವಿಶದಕೀರ್ತ್ತಿಪ್ರಸರಂ ಮಗ್ನಾರಿನಿಕರನ ಧರಿತಭೃಗ್ನಾಗಂ ನಾಗದೇವ

೬೪ ನದಟರ ದೇವಂ || ಎನೆ ನೆಗರ್ದ್ದ ನಾಗದೇವನ ತನಯ(ಂ*) ಸಂಗ್ರಾಮವಿಜಯ ಸಂಕ್ರನ್ದನ ನನ್ದನಹಿತ ತಿಮಿರಮಾರ್ತ್ತಣ್ಡನುದಾಗ್ರಾ –

೬೫ ಗ್ರಪ್ರತಾಪದೊಳ್‌ ಮಾರ್ತ್ತಣ್ಡಂ || ಮಾರ್ತ್ತಣ್ಡ (ಂ*) ರಣಮುಖದೊಳ್‌ ಮಾರ್ತ್ತಣ್ಡಮುನಿಱೆದು ಗೆಲ್ವಭುಜವಿಕ್ರಮಮಾ ಮಾರ್ತ್ತಣ್ಡಂ ದನುಜವ್ರಜಮಾ –

೬೬ ರ್ತ್ತಣ್ಡಮುನಿಱೆದುಗೆಲ್ವ ತೆಱನಂ ಪೋಲ್ದಂ || ಭುಜದೊಳ್‌ ನಿನ್ದುದು ವೀರಲಕ್ಷ್ಮಿ ಹೃದಯಾಂಬೋಜಾತದೊಳ್‌ ನಿನ್ದು ದಂಬುಜನಾಭಪ್ರಿಯ ಲಕ್ಷ್ಮಿ… ನೆ ನಿನ್ದದೆ…

೬೭ ತ್ತಾನನೋದ್ಭಿನ್ನ ಪಂಕಜದೊಳೆ ಸಾಕ್ಷತಲಕ್ಷ್ಮಿ ದಿಕ್ತಟದಿ (ನೀ) ಶಾಸಿರ್ದೆ ದಿಕ್ಸಾಮಜ ಬ್ರಜದೊಳ್‌ ನಿನ್ದುದು ಕೀರ್ತ್ತಿಯೆನ್ದೊಡಿದಿದೇಂ ಮಾರ್ತ್ತಣ್ಡ ಪುಣ್ಯೋದಯಂ ||

೬೮ ಉದಯಂ ನಿತ್ಯೋದಯಂ ಭಾಸುರತನುರುಚಿರೋತ್ಕರ್ಷ್‌ರಾಗಂ ಸರಾಗಂ ಮದವದ್ವಿದ್ವಿಷ್ಟ ಚೈತ್ರಂ ದನುಜ ವಿಜಯಮಾ ಪೂರ್ಣ್ನ ತೇಜಂ ಪ್ರಭಾ(ವಾ) ಸ್ವ –

೬೯ ದಮುದ್ಯತ್ತೀಕ್ಷಣ ತೇಜಂ | ರಿಪುಬಹಳತಮೋಧೂತನಿರ್ಗ್ಘಾತ ಮತ್ಯನ್ತದುರನ್ತಧ್ವಾನ್ತ ವಿದ್ವಂಸನಮೆನಿಸಿದ ಮಾರ್ತ್ತಣ್ಡನುಗ್ರಾಜಿಶೌಣ್ಡಂ || ಅಮೞ್ದ (ತ್ತ)

೭೦ ತ್ಯುಗ್ರತೇಜಪ್ರಸರ | ಮರಿಬಳಧ್ವಾನ್ತಪೀಣ್ಡ ಪ್ರಕಾಣ್ಡಂ ತಮುೞ್ದತ್ತುದ್ವೈತ್ತಗ ರ್ವ್ವೋತ್ಕಟ ಚಟುಳಹ(ಟಾ)ತ್ಕಾರ ಸಂಕೀರ್ಣ್ನಚೂರ್ಣ್ನಂ ಅಮೞ್ದುತ್ತಾ –

೭೧ ಶಗಂಗಾಜಳ ಜಳರುಹ ನೀಹಾರ ಕೀರ್ತ್ತಿಪ್ರತಾನಂ ನಿಮಿೞ್ದತ್ತಾಶಾನ್ತಮಂತಾ ಜನಮೆನಿಪುದು ಮಾರ್ತ್ತಣ್ಡನುಗ್ರಪ್ರಾತಾಪಂ || ಜಗದೊಳ್‌

೭೨ ಮಾರ್ತ್ತಣ್ಡತೇಜ ಪ್ರಸರಮನಿಳಿಸುತ್ತಿರ್ಪ್ಪ ಮಾರ್ತ್ತಣ್ಡನೊಳ್‌ ಸಂಯುಗ ಕೇಳೀಲೋಳನೊಳ್‌ ಭಾಸುರ ವಿತರಣ ವಿದ್ಯಾಭಿಸಾರ ಪ್ರಯೋಗ ಪ್ರಗುಣಸ್ವಾನ್ತಾತ್ಮ –

೭೩ ನೊಳ್‌ ಮಚ್ಚರಿಪ ಮಲೆವ ಮಾರ್ಕೊಳ್ವ ಮಾಱಾಂಪ ವಿದ್ವಿಷ್ಟಗಣಂ ಪ್ರತ್ಯುಜ್ವಳದ್ದೀಪ್ತಿಗೆ ಪೊಳೆವ ಪತಂಗಕ್ರಿಯಾಯುಕ್ತನಪ್ಪಂ ||

೭೪ ರ್ತ್ತನುತ್ತಂ ಪಗೆವಿನ ಪೆಸರೊಳ್‌ ರಾವಣಂ ಬರ್ಕ್ಕೆ ಬೆನ್ನಿತ್ತಱೆಯಂ | ಮತ್ತನ್ನ ದನ್ಯಪ್ರಮದೆಯ ಪೆಸರೊಳ್‌ ರಂಬೆ ಸಾಱ್ದೆರ್ಕ್ಕೆ ಮೇದಾ…

೭೫ ನಾರ್ತ್ಥಿಯೆಂಬೀ ಪೆಸೆರೊಳಖಿಳ ಭೂಮಣ್ಡಳಂ ಬೇಡುಗಿಲ್ಲೆನ್ದಱೆಯಂ ಕೀರ್ತ್ಯಂಗನಾದೃಕ್‌ಶಫರ ಸರಸಿಮಾರ್ತ್ತಣ್ಡನಾಜಿ ಪ್ರಚಣ್ಡಂ || ವಚನನಂ ||

೭೬ ಆ ಮಹಾನುಬಾವನ ಶೌರ್ಯಭಾವಮುಂ ವಿತರಣಪ್ರಭಾ(ವ*) ಮುಮುಪಮಾತೀತಮಾದುದದಲ್ಲದೆಯುಂ || ಬಳವತ್ಸಾ –

೭೭ ಮನ್ತಚಕ್ರ ಪ್ರಘನಶರಭ ಭೇರುಂಣ್ಡ ಸಾಮನ್ತಕಾನ್ತಾತಿಳಕಾದ್ಯಾಳಂಕ್ರಿ ಯಾಪೋಹನ ಕರಣಕುಶಾ (|) ಗ್ರೀಯಶೌರ್ಯ್ಯಪ್ರ (ತಾ) –

೭೮ ಪಾನಳ ಸಾಮನ್ತಾನ್ತ ರಂಗಗ್ಲಪನನಿಪುಣ (|) ಸಾಮಾನ್ತ ಮಾರ್ತ್ತಣ್ಡ ನಿನ್ನೊಳ್‌ ನೆಲಸಿರ್ಕ್ಕಾಕಳ್ಪಕಳ್ಪಂ ಬರಮನು –

೭೯ ಪಮ ದೀರ್ಗ್ಘಾಯುರಾರೋಗ್ಯಭಾಗ್ಯಂ || ಸ್ವಸ್ತಿ (||*) ಸಮಸ್ತ ದುಸ್ತರಾ ರಾತಿಹಸ್ತಿಮಸ್ತಕಸ್ಥಳ ವಿದಳನೋಗ್ರಪಂಚಾನನಂ | ಶೌರ್ಯ್ಯ ಷಡಾನನಂ. | ಸ –

೮೦ ಕಳಕಳಾಕಳತವಾಗ್ಲಲನಾಲಲಾಮ(ಂ) | ಭುಜಬಳಭೀಮಂ | ನರಿಬಳಜಳಧಿ ಬಡವಾನಳಂ | ದ್ರೋಹಕಾಳಾನಳ ರಿಪುಹೃದಯಸೆ –

೮೧ ಲ್ಲಂ ದುಷ್ಟಾಶ್ವಮಲ್ಲಂ | ಬನ್ದುಜನವನಜವರ್ತ್ತಣ್ಡಂ | ಕಾಯ್ವರಗಣ್ಡಂ | ಅರಿತುರಗತಟ್ಟಸಂಘಟ್ಟಂ | ಬಿರುದಗಾವಣಿಗಶರಭ ಭೇರುಣ್ಡಂ |

೮೨ ಅಷ್ಟಾದಶಪಟ್ಟಣಾಧಿಷ್ಠಿತ ಪಂಚಪುಟ್ಟಿಗಾದಿ ಬಾವನ್ನವೀರಂ | ಶಾಸನಪಟ್ಟಸಾಲಿಗ ಸಮಯಿ ಸಮುದಿತ ಲಲಾಟಪಟ್ಟಂ | ವೈರಿ –

೮೩ ಘರಟ್ಟ | ನನೇಕ ಸಂಗ್ರಾಮ ಪಾರಾವಾರ ಪಾರಾಯಣಂ ಚತರುಪಾರಾಯಣಂ ಸಮರವಿಜಯಕಾರಣಂ | ಮದಾನ್ಧರಿಪುಮದನಿ –

೮೪ ವಾರಣಂ | ಪರನಾರೀ ದೂರನೇಕಾಂಗ ವೀರನಸಹಾಯಶೌರ್ಯ್ಯ ಸಾಹಸೋತ್ತುಂಗನಯ್ಯನಸಿಂಗಂ ಗೇಣೆಕಾಱರದೇವನೊನ್ದಿಱಿವಾತಂ

೮೫ ಲೋಕವಿಖ್ಯಾತಂ ಸಮ್ಯಕ್ತ ರತ್ನಾಕರಂ | ಪದ್ಮಾವತೀಲಬ್ಧ ವರಪ್ರಸಾದ (ಂ) ನಾಮಾದಿಸಮಸ್ತ ಪ್ರಶಸ್ತಿ ಸಹಿತಂ ಶ್ರೀ ಮನ್ಮಹಾಸಾಮನ್ತಂ ಮಾರ್ತ್ತ

೮೬ ಣ್ಡಯ್ಯಂ ತಮ್ಮ ಮುತ್ತಯ್ಯಂ ಮಾಡಿಸಿದ ಬಸಿದಿಯಂ ಪಡಿಸಲಿಸಿ ನಾಟಕಶಾಲೆಯಂ ಮಾಡಿಸಿ ತನ್ನ ಕೀರ್ತ್ತಿ ಶಿಳಾಸ್ತಂಬಮನಾಚನ್ದ್ರಾ –

೮೭ ರ್ಕ್ಕತಾರಂಬರಂ ನಿಲಿಸಿದಂ ||*