೧೦. ಮೊರಬ ಶಾಸನ
(ಸೌಇಇ. ೧೫, ಸಂಖ್ಯೆ, ೫೩೦. ಕ್ರಿ.ಶ. ೧೦೫೯, ಮೊರಬ)

೦೧ ಸ್ವಸ್ತಿ ಶ್ರೀಮತ್ಪರಮಗಂಭೀರ ಸ್ವಾದ್ವಾದಾಮೋ…

೦೨ (ತ್ರುಟಿತವಾಗಿದೆ)

೦೩ ಶ್ರೀ ಯಾಪನೀಯಾಂ( ಬುಧಿ )ಪೂರ್ಣ್ನಚನ್ದ್ರೋ ಮೈಳಾಪತಿ ರ್ತ್ಥ್ರಾಭರಣೋಗ

೦೪ ಣೋಭೂತ್ಕಾರೇಯೆ. ಮಾ ಪ್ರತಿಬುದ್ಧೆ ತತ್ವೈರಾಚಾರ್ಯ್ಯವರ್ಯ್ಯೈ –

೦೫ ಱ್ಪೃಥಿತಱ್ಪೃಥಿವ್ಯಾಂ || ತತ್ರಾಜನಿ ಶ್ರೀ ಜಯಕೀರ್ತ್ತಿದೇವಸಿದ್ಧಾನ್ತಶು –

೦೬ ದ್ದೇದ್ದೇಸಮೃದ್ಧಬುದ್ಧಿಶ್ಚಾರಿತ್ರಚುಂಚುರ್ಗ್ಗುಣ… ರ್ಭೂಪಾಳ ಮೌ(ಳಿಮಾ)

೦೭ ಳಾರ್ಚ್ಚಿತಪಾದಪದ್ಮಃ | ಯೋ… ಭೂರಿಭವಾಬ್ಧಿ ಪಾರಗಮನೇ ಸಂ…

೦೮ ನೇಪಾತ್ರಾಯತೇ ಯೋ ಲೋಕೇಶ ಜಿನೇಶಧರ್ಮ್ಮ…. ತ್ಯಾಶೇಶ( ಶೋ )ಕಾಯತೇ

೦೯ ಯೋದರ್ಪ್ಪೋದ್ಧತ ದರ್ಪ್ಪ…. ಮಥನೇ…. ನ್ನಗೇನ್ದ್ರಾಯತೇ ಸೋಯಂಶ್ರೀ

೧೦ ಜಯಕೀರ್ತ್ತಿನಾಮ ಭಗವಾನ್‌ ಭವ್ಯಾಬ್ಜಿನೀ ಭಾಸ್ಕರಃ || ಶಿಷ್ಯರ್ಶ್ಯೀಳನಿಧಿಸ್ಸುನಿ –

೧೧ ಶ್ಚಿತವಿಧಿಸ್ಸದ್ವೃತ್ತ ರತ್ನಾಂಬುಧಿ (ಶ್ಯಾನ್ತಃ) ಕನ್ತು (ನ) ದಾನ್ತಕೋ ಗುಣಗಣೈರ್ವ್ವಿಬ್ರಾ –

೧೨ ಜಮಾನೋಗ್ರಣೀಜಾ (ರ್ಜಾ) ತಸ್ತಸ್ಯೆ ವಿನಮ್ರಭೂರಿನರಪಃ ಶ್ರೀನಾಗ ಚಂದ್ರೋ ಯೆ –

೧೩ ತಿಃಸಿದ್ಧಾಂತಾದಿ ಸಮಸ್ತ ಶಾಸ್ತ್ರನಿಪುಣಃಖ್ಯಾತೋ (ಧಿ) ಧಾತ್ರೀತಳಂ | ನಿಶ್ಯೇಷಂ ಭ –

೧೪ ವಭಾವಿಭೂತಮತುಳಂ ಜ್ಯೋತಿರ್ವ್ವಿದಾವಿದ್ದಯೆ ಸೌತತ್ವಂ ಯಸ್ಯ ಪದಾರವಿನ್ದಮ –

೧೫ ಖಿಳಕ್ಷ್ಮಾ ಪಾಳಚೂಡಾಮಣಿಃ ಜಾತಂ ನೀತಿ ಸಮಸ್ತ ಮನ್ತ್ರ ವಿಷಯಃ ಕೀರ್ತ್ತ್ಯಂಗ –

೧೬ ನಾಸಂಗತಃ ತತ್ವದ್ಬಾತಿ ಮಹೋಮಹಾಗುಣ ನಿಧಿಃ ಶ್ರೀ ನಾಗಚಂದ್ರೋ ಯತಿಃ

೧೭ ಸತ್ಯಂ ಸ್ವೇನ ಸರಸ್ವತೀಪ್ರಿಯ ಸತಿ ಪ್ರೀತ್ಯಾ ಮಹಾತ್ಮಾ ಧೃತಾ ಪ್ರಾಪ್ತಾನಾಪ್ರತಿ –

೧೮ ನೋಹಿ ಸಮಯಾ ಸಾಕ್ಷಾತ್ಸಪತ್ಪ್ಯಾಪುರಃ ದಿಗ್ವಾಸೋ ಸ್ತುತಯೋತಿಸ…

೧೯ ತಿನಿಃಶೇಷಂ ಧರಿತ್ರೀತಳಂ ಸಾಕ್ಷೀ ಕೃತ್ಯ ಬುಧಾನಸೂಯತಿ ಸ(ದಾ)

೨೦ ….(ಚಂದ್ರಾ) ಶಿನಂ || ಕೀರ್ತ್ತಿ ಜ್ಯೋತ್ಸ್ನಾ ವದಾಪಾತೀಕೃತ ಸಕಳ ಕಳಾಶಾಂ ಬರಃ ಶ್ರೀ

೨೧ … ಸಃ ಸಿದ್ಧಾಂತಾಂಭೋಧಿವೃದ್ಧಿ ಪ್ರಭವವಿಭವಜಾತಂ …

೨೨ … ದ್ವೈತ್ತಾ ಸೌಮ್ಯಕಾಂತಿ ಪ್ರಥಿತ ಧರ(ಣಿ) ಭೃನ್ಮೂರ್ದ್ಧ್ನಿ (ವಿನ್ಯಸ್ತ) ಪಾದೋಜೀಯಾ

೨೩ …(ನಾ)ಗಚಂದ್ರೋ ಯತಿಪತಿರವೆ… ವ್ಯೋಮನಿ… ಮಳೇಂದುಃ || ಕ್ಷೋಣಿನಾ

೨೪ …(ಕಿ)ರೀಟಷೃಷ್ಟಚರಣಃ ಕಾಮೇಭಕಣ್ಠೀರವೋತೀತಾನಾಗತ ವರ್ತ್ತಮಾನನಿ

೨೫ …ದೊರಶ್ರುತಿಜ್ಞಾನಭಾಕ್‌ ಸಿದ್ಧಾಂತಮೃತವಾರ್ದ್ಧಿವರ್ದ್ಧನವಿಧುಃ ಸನ್ಮಂ –

೨೬ ತ್ರಚೂಡಾಮಣಿಃ ಹೋರಾಶಾಸ್ತ್ರ ವಿಶಾರದೋ ವಿಜಯತಾಂ ಶ್ರೀನಾಗ –

೨೭ ಚಂದ್ರೋ ಗುರುಃ ಸುರಗಜದ ರಜತಶೈಳದ ಶರದಭ್ರದ ಧವಳಪುಣ್ಡ –

೨೮ ರೀಕರದ ಶುಂಭದ್‌ ಹರಹಾಸದೆ ಬೇಳ್ಪನಧಃಕರಿಪುದು ಶ್ರೀನಾಗಚಂದ್ರ –

೨೯ ಮುನಿಪತಿಯಶ || (ಯೋ) ದೂರಕ್ರವಣಾದಿಲೋಕದಯಿತಾವಿ

೩೦ ಜ್ಞಾನವಿದ್ಯಾವ (ರೋ) ಯೋ ದುಷ್ಟಗ್ರಹನಿಗ್ರಹ ಪಟುತಮೋ ಮಂತ್ರ(ಸ್ಫು) –

೩೧ (ಟೋ) ಗಾರುಡಃ ಚಿತ್ರಂ ವಾರುಣಶಾಕಿನೀ ಭಯಕರಃ ಶ್ರೀ ಮಂತ್ರಚೂಡಾಮಣಿಂ

೩೨ ಮುಕ್ತ್ವಾವಿಶ್ರುತ ನಾಗಚಂದ್ರಮುನಿಪಂ ಕಸ್ಮಿನ್‌ ಲಭಂ(ತೇ) ಪದಂ || ಜಿತಪಂ –

೩೩ ಚೇಂದ್ರಿಯ ಬಾಪ್ಪ ಮನ್ಮಥಮದಪ್ರಧ್ವಂಸಿ ಜೀಹಯ್ಯ ಸ(ಂ) ನ್ಮಂತ್ರರಾ –

೩೪ ಗೇತರಭಂ ಮಝಮ್ಮ ಭುವನಪ್ರಸ್ತುತ್ಯ ಹೋ ಹೋ ಯಶೋನಿಧಿದೇವ

೩೫ ವ್ರತಿ ಜೀಯಜೀಯ ಬಬಬಾಪ್ಪೆಂದಿನ್ತು ಕೈವಾರದಿಂ ಸ್ತುತಿಗೆಯ್ಗಂ

೩೬ ಸಲೆ ನಾಗಚಂದ್ರಮುನಿಯಂ ವಿಸ್ವಂಭರಾಮಣ್ಡಳಂ || ಜಿನಾಗಮಾಬ್ಧಿ –

೩೭ ರ್ಜ್ಜಯಕೀರ್ತ್ತಿ ದೇವಸ್ತನ್ಮೌಖಮುಖ್ಯೋಜನಿ ನಾಗಚಂದ್ರಃ ಸಿದ್ಧಾಂತ ಶ

೩೮ ಬ್ದಾಗಮತತ್ವವೇದೀ ರಾಜೇಂದ್ರಚೂಡಾಮಣಿ ಚುಂಬಿತಾಂಹ್ರಿಃ ||*

೩೯ ಶಾಕಾಬ್ದೇ ಭೂಗಜಾಂಕಪ್ರಮಿತಿ ಪರಿಮಿತ ವತ್ಸರೇ ಸದ್ವಿಕಾರ್ಯಾ(ಂ) ಊ –

೪೦ ರ್ಜ್ಜೀಶುಕ್ಲ ದ್ವಿತೀಯಾಹನಿ ನುತಕರಣೆ ಕೌಲವೇ ಸೌಮ್ಯವಾರೇ ಪೂ (ಪೂರ್ವ್ವಾ) –

೪೨ ಶ್ರೀಮಂತ್ರಚೂಡಾಮಣಿರಮರಪುರಂ ನಾಗಚಂದ್ರೋ ಮುನಿಂದ್ರಃ || ಸ್ವಸ್ತಿಸ –

೪೩ ಮಸ್ತ ಭುವನವಳೆಯ ನಿರತಿಶಯ ಕೇವಳಜ್ಞಾನತ್ರಿತೀಯನೇತ್ರ –

೪೪ ರಾಜಮಾನ ಭಗವದರ್ಹತ್ಸರ್ವ್ವಜ್ಞ ವೀತರಾಗಪರಮೇಶ್ವರಪರ –

೪೫ ಮಭಟ್ಟಾರಕ ಮುಖ ಕಮಳವಿನಿರ್ಗ್ಗತ ಸದಸದಾದಿ… ದಸಮಾ –

೪೬ ಧಿ ಸಮಾಳಿಂಗತ ಸಮಸ್ತವಸು ಪ್ರಕ್ಷೇಪಣ ಪ್ರವೀಣ ರಾದ್ಧಾನ್ತಾ –

೪೭ ಮೃತ ಪಾರಾವಾರ ಪಾರಗರುಮನೇಕ ನೃಪತಿ ಮಕುಟತಡಖಚಿ –

೪೮ ತ ಮಣಿಗಣ ಕಿರಣಜಳ ಧಾರಧೌತಮಾತಪೂತ ಚರಣಾರವಿ –

೪೯ ನ್ದರುಂ ವಿಬುಧಜನಮನಱ್ಪುಣ್ಡರೀಕವನ ಮಾರ್ತಣ್ಡರುಮತೀತಾನಾ –

೫೦ ಗತವರ್ತ್ತಮಾನಕಾಲ ದೂರಶ್ರವಣ ವಿಜ್ಞಾನಕುಶಳರುಂ ಬ್ರಹ್ಮ –

೫೧ ರಾಕ್ಷಸ ಭೂತಪಿಶಾಚ ಭಯಂಕರರುಂ ಶಾಕನೀ ದರ್ಪ್ಪ –

೫೨ ದಳನರುಂ ಗಾರುಡಚಕ್ರವರ್ತ್ತಿಗಳುಂ ಜೈನಶಾಸನ ಮೂಳಸ್ತಂ –

೫೩ ಭರುಮಪ್ಪ ಶ್ರೀಮನ್ನಾಗಚಂದ್ರಸಿದ್ಧಾನ್ತದೇವರ್ಮ್ಮೊರಮ್ಬ –

೫೪ ದ ಘಟಾನ್ತಕಿಯ ಬಸದಿಯೊಳ್‌ ಸೆಂನ್ಯಸನವಿಧಿಯಿಂ ಮುಡಿಪಿ

೫೫ ಸ್ವರ್ಗ್ಗಸ್ಥರಾದವರರ್ಗ್ಗೆ ಪರೋಕ್ಷ ವಿನಯಮೆಂದವರ ಶಿಷ್ಯರ್ಕ್ಕನಕಶ –

೫೬ (ಕ್ತಿ) ಸಿದ್ಧಾನ್ತದೇವರ್ನ್ನಿಸಿದಿಗೆಯಕಲ್ಲಂ ನಿಲಿಸಿದರ್‌ ಜಗದಭಿಮತರಂ

೫೭ … ಪ್ರಗರ್ಭರಂ… ಕರಂ ಕೇಳಗಣಿತಗುಣ

೫೮ … ಟ್ಟನೆ ಪುಗಳದರಾರ್ನ್ನಾಗಚಂದ್ರಸಿದ್ಧಾಂತಿಗರಂ || ಮಂಗಳಂ***

೫೯ ಸರಸ್ವತೀ ಗಣದಾಸಿ ಬಮ್ಮೋಜ ಬೆಸೆಗಯ್ದ ***

 

೧೧. ಮೋಟೇಬೆನ್ನೂರ ಶಾಸನ
(ಸೌಇಇ. ೧೮, ಸಂಖ್ಯೆ, ೭೧. ಕ್ರಿ.. ೧೦೬೬, ಮೋಟೆಬೆನ್ನೂರು)

೦೧ *ಶ್ರೀಮತ್ಪರಮಗಂಭೀರ ಸ್ವಾದ್ವಾದಾಮೋಘಲಾಂಛನಂ ಜೀಯಾತ್ರ್ಯೆಳೋಕ್ಯನಾಥಸ್ಯ ಶಾಸನಂ ಜಿನಶಾಸನಂ || ****

೦೨ ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀ ಪೃಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮ ಭಟ್ಟಾರಕಂ ಸತ್ಯಾಶ್ರಯಕುಳತಿಳಕಂ

೦೩ ಚಾಳುಕ್ಯಾಭರಣಂ ಶ್ರೀ ಮತ್ರೈಲೋಕ್ಯಮಲ್ಲದೇವರ ವಿಜಯರಾಜ್ಯ ಮುತ್ತರೋತ್ತರಾಭಿ ಪ್ರವರ್ಧಮಾನಮಾಚನ್ದ್ರಾರ್ಕ್ಕತಾರಂ ಸುಲುತ್ತ –

೦೪ ಮಿರೆ ತತ್ಪಾದ ಪದ್ಮೋಪಜೀವಿ ಸಮಧಿಗತ ಪಂಚಮಹಾಶಬ್ದ ಮಹಾಮಣ್ಡಲೇಶ್ವರನುದಾರ ಮಹೇಶ್ವರಂ ಚಲಕ್ಕೆಬಲ್ಗಣ್ಡಂ ಶೌ –

೦೫ ರ್ಯಮಾರ್ತ್ತಣ್ಡಂ ಪತಿಗೇಕ (ದಾಡಂ?) ಸಂಗ್ರಾಮಗರುಡಂ ಮನುಜಮಾನ್ಧಾತಂ ಕೀರ್ತ್ತಿವಿಖ್ಯಾತಂ ಗೋತ್ರಮಾಣಿಕ್ಯಂ ವಿವೇಕ ಚಾಣಕ್ಯಂ ಪರ –

೦೬ ನಾರೀಸಹೋದರಂ ವೀರವೃಕೋದರಂ ಕೋದಣ್ಡಪಾರ್ತ್ಥಂ ಸೌಜನ್ಯತೀರ್ತ್ಥಂ ಮಣ್ಡಳಿಕ ಕಣ್ಠೀರವಂ ಪರಚಕ್ರ ಭೈರವಂ ರಾಯ (ಗಣ್ಡಗೋ) –

೦೭ ಪಾಳಂ ಮಲೆವ ಮಣ್ಡಳಿಕಮೃಗಶಾರ್ದ್ದೂಳಂ ಶ್ರೀಮತ್ತೈಳೋಕ್ಯ ಮಲ್ಲದೇವ ಪಾದಪಂಕಜಭ್ರಮರಂ ಶ್ರೀಮನ್ಮಹಾಮಣ್ಡಳೇಸ್ವರಂ ಲಕ್ಷ್ಮರಸರ್ಬ್ಬ

೦೮ ನವಾಸೆ ಪನಿಚ್ಛಾಸಿರಮುಮಂ ದುಷ್ಟನಿಗ್ರಹ ವಿಶಿಷ್ಟ ಪ್ರತಿಪಾಳನದಿಂ ಸುಖ ಸಂಕಥಾ ವಿನೋದದಿನಾಳ್ದರುಸಗೆಯ್ಯತ್ತಮಿರೆ || ಚತುರರ –

೦೯ ಮಾರಮಣಂ ಚಿತರಿಪುವರ್ಗ್ಗಂ ಚಲಕ್ಕೆ ಬಲ್ಗಣ್ಡಂ ವಿಸ್ತೃತಚಳುಕಿರಾಜ್ಯನುರ್ವ್ವಿ ಪತಿಗೆ ಧರಾತಳಮನೆಯ್ದೆ ಬಾಯ್ಕೇಳಿಸಿದಂ || ವಿದಿ –

೧೦ ಶಾಸ್ತ್ರಂ ರಿಪುರಾಯ ಮಣ್ಡಳಿಕ ಸೇನಾಭಂಜನಂ ವೈರಿನೀರದ ದುರ್ವ್ವಾರ ಸಮೀರಣಂ ವಿತರಣಂ ಕ್ರೀಡಾವಿನೋದಂ ಪ್ರತಾಪದಿಳೀಪಂ ರಿಪುಪುಂ –

೧೧ ಜಕಂಜನವನಕೇಳೀಕುಂಜರಂ ಲಂಜಿಕಾ ಮದನಾಸ್ತ್ರಂ ಚಲದಂಕರಾಮ ನೃಪಲಕ್ಷ್ಮೀಲಕ್ಷ್ಮಣಂ ಲಕ್ಷ್ಮಣಂ || ಅನವರತ ದಾನಿ ಲಕ್ಷ್ಮನ ಮನು –

೧೨ ಚರಿತನ ಪರಮಧೂಸಹೋದರನ ಜಗಜ್ಜನವಂದ್ಯಕಾಮಧೇನುವ ವಿನತಾರಿಯ ನಿಖಿಳಪಾದಪದಾರಾಧ್ಯರ್ || ಪ್ರಭು ಮಂತ್ರೋತ್ಸಾಹ ಶ –

೧೩ ಕ್ತಿತ್ರಯಗುಣವಿದಿತಂ ರಾಜಿಮಯ್ಯಂ ಮಹಾಮಾತ್ಯಭರಂ ಸದ್ವಾಚನಾಲೇಖನ ಗಣನಗುಣಸ್ತುತ್ಯನಿನ್ತಾಯ್ಚಿಮಯ್ಯಂ ವಿಭು ಸೌ –

೧೪ ಜನ್ಯಾಂಕುರಂ ಪಣ್ಡಿತಕುಳಯಸಂರಾಜ ಗೋವಿನ್ದರಾಜಂ ವಿಭವಾತ್ತಂ ಧೋರಪಾರ್ಯ್ಯಂ ಸುಜನಜನ ಮನೋರಂಜನರ್ದ್ಧರ್ಮ್ಮನರ್ಮ್ಮರ್ || ಇವ –

೧೫ ರನುಭವಣೆಯ ಕಾಲದೊಳವನೀಶಂ ಲಕ್ಷ್ಮಭೂಪನಾಜ್ಞೆಯಿನೀ ಬೆಣ್ನೆವುರದ ಪೆಳೆಯಗೇರಿಯೊಳವಿತಥ ಜಿನಗೃಹಮನಯ್ಚಣಂ ಮಾ –

೧೬ ಡಿಸಿದಂ || ಮಾಡಿಸಿ ತಜ್ಜಿನೇಂದ್ರ ಗೃಹಮಂ ತದನು ತ್ರಿಜಗದ್ವಿನೂತಮಂ ರೂಢಿ ಶಾನ್ತಿನಾಥ ಜಿನಬಿಂಬಮನೊಪ್ಪಿರೆ ತತ್ಪ್ರತಿಷ್ಠೆ –

೧೭ ಯಂ ಮಾಡಿ ಹಿಮಾದ್ರಿ ದಿಕ್ಕರಿ ಪಯೋಧಿಯೊಳ್ನಿಜಕೀರ್ತ್ತಿವಲ್ಲಿ ವಿಕ್ರೀಡಿಸೆ ಭವ್ಯಹೃತ್ಕಮಳಭಾಸ್ಕರನಯ್ಚಣನೇಂ ಕೃತಾರ್ತ್ಥ –

೧೮ ನೋ || ಮುನಿರಾಜಾಮರರಾಜ ನಾಗ ನರರಾಜೋನ್ಮೌಲಿಸಂಸೇವ್ಯಪಾದನಘಾರಾತಿ ಜಿನೇಂದ್ರನಾಪ್ತನಪಹಿಂಸಾಲಕ್ಷಣಂ ಧ –

೧೯ ರ್ಮ್ಮಮುದ್ಧನಿಯಾಮರ್ನಯಣನ್ದಿಪಣ್ಡಿತ ಮುನೀಂದ್ರ ರ್ವ್ವಾದಿವಾಗ್ಮೀಶ ರನ್ಯನಯಾಸ್ತರ್ಗ್ಗುರು ಗಳ್ನಿಸರ್ಗ್ಗಮೆನಲಿನ್ದಯ್ಚಣ್ನನೇನ್ಧ –

೨೦ ನ್ಯನೊ* ಸ್ವಸ್ತಿಸಮಸ್ತದುಸ್ತರಾರಾತಿಮಸ್ತಕಸ್ಥಳದೋರ್ದಣ್ಡಂ ನುಡಿದನ್ತೆ ಗಣ್ಡಂ ಧನುರ್ವ್ವಿದ್ಯಾಪಾರ್ತ್ಥಂ ಪರಿಗ್ರಹತೀರ್ತ್ಥಂ ಚಿಕ್ಕಂಬ ಕುಳಾನ್ವಯಂ

೨೧ ಶ್ರೀಪ್ರಣಮೇಶ್ವರದೇವ ಪಾದಪಂಕಜಭ್ರಮರ ನಾಮಾದಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮದ್ಗೋಯಿಮ್ಮರಸಂ ಸತ್ತಳಿಗೆಯೆಳ್ಪ –

೨೨ ತ್ತರ್ಕ್ಕೆ ನಾರ್ಗ್ಗಾವುಣ್ದುಗೆಯ್ಯೆ ತ್ತಪಾದಪದ್ಮೋಪಜೀವಿಗಳ್‌ | ಸಲ್ಲಿಯ ರಾಲಗಾವುಣ್ಡಂ ಮುಕ್ಕಟ ರೇಕಗಾವುಣ್ಡಂ ತೆನೆಯರ ಕುನ್ದಗಾ –

೨೩ ವುಣ್ಡಂ ಮಲ್ಲಗಾವುಣ್ಡಂ ಬಾದಿಗ ದೇವಗಾವುಣ್ಡಂ ಸೋವಗಾವುಣ್ಡಂ ಕೊಣ್ಡಸ ಬರ್ಮ್ಮಗಾವುಣ್ಡ ಅಲುಗರ ಬರ್ಮ್ಮಗಾವುಣ್ಡಂ ಸಲ್ಲಿಯರ –

೨೪ ಜ್ಜಗಾವುಣ್ಡಂ ಪೆಳೆಯರ ಚಾವಗಾವುಣ್ಡಂ ಕಲಿಯಮಗಾವುಣ್ಡಂ ನಟ್ಟಿಯ ಬರ್ಮ್ಮಗಾವುಣ್ಡನನ್ತು ಬೆಣ್ನೆವುರದ ಪನ್ನಿರ್ವ್ವರ್ಗ್ಗಾವು –

೨೫ ಣ್ಡುಗೆಯ್ಯೆ | ದೇವಗುರುಭಕ್ತನಖಿಳೋರ್ವ್ವೀವಿನುತ ಜಿನೇಂದ್ರಮನ್ದಿರಾವಾಸ ಮುಮಂ ಭೂಮಿಯುಮನೊಸೆದು ಕೊಟ್ಟಂ ಚಾವಂ ಪೆಳೆ –

೨೬ ಯಕುಳಾಬ್ದ ವನಮಾರ್ತ್ತಣ್ಡಂ | ಶ್ರೀಮೂಳಸಂಘವಾರಾಶೌ ಮಣೀನಾಮಿನ ಸಾರ್ಚ್ಚಿಷಾಂ ಮಹಾಪುರುಷರತ್ನಾನಾಂ ಸ್ಥಾನಂದೇಸಿಗಣ –

೨೭ ಯೋಜನಿ| ಅಜನಿ ಜಗದುದಗ್ರಸ್ಸೂಕ್ತಿಸಿನ್ದುಪ್ರಸೂತೇರ್ಜ್ಜಿನ ಸಮಯ ಮಹಾದ್ರೇಶ್ಚಂದ್ರಿಕಾವಾಟವಂಶಃಸುರುಚಿರಚರಿತಾ

೨೮ ಯದ್ಗುಣಶ್ರೇಣಿಮುಕ್ತಾಮಣಿವಿತತಿಮಯೋಭೂದದ್ಭುತಂ ಕರ್ಣ್ನಪೂರಃ || ಅನ್ತುನೆಗಱ್ತೆವೆತ್ತನ್ವಯದೊಳ್‌ || ಚಾನ್ಧ್ರಂ ಕಾತಂತ್ರ –

೨೯ ಜೈನೇಂದ್ರಂ ಶಬ್ದಾನುಶಾಸನಂ ಪಾಣಿನಿ ಮತ್ತೈಂದ್ರ ನರೇಂನ್ದ್ರಣನ್ದಿ ಮುನೀನ್ದ್ರಂಗೇಕಾಕ್ಷರಂ ಪೆಱಂಗಿವು ಮೊಗ್ಗೇ || ತಚ್ಛಿಷ್ಯರ್ಕ್ಕನಕಣನ್ದಿಭಟ್ಟಾರ –

೩೦ ಕರ್ || ತದನುಜರ್ನ್ನಯಣನ್ದಿಪಣ್ಡಿತದೇವರ್ | ತದನ್ತೇವಾಸಿಗಳ್ಸಿದ್ದಣನ್ದಿಪಣ್ಡಿತದೇವರ್ | ತತ್ಸಹೋದರರ್ || ಅಪಗತ ಮದ –

೩೧ ಮಾತ್ಸರ್ಯ್ಯರ್ಕ್ಕೃಪಾಪರರ್ಭ್ಬವ್ಯಸೇವ್ಯರಮಳಚರಿತ್ರರ್ಕ್ಕುಪಿತಬಹು ಬನ್ಧಗಳಿತರ್ನ್ನೃಪಪೂಜ್ಯರ್ನ್ನೆಗೞ್ದ ಶಾನ್ತಿಣನ್ದಿಮುನೀನ್ದ್ರರ್*

೩೨ ಸಕವರ್ಷಂ ೯೮೮ನೆಯ ಪರಾಭವ ಸಂವತ್ಸರದ ಪುಣ್ಯ ಸುಧ ಪಂಚಮಿ ಆದಿತ್ಯವಾರಮುತ್ತ ರಾಯಣಸಂಕ್ರಾನ್ತಿಯನ್ದು ಶ್ರೀ –

೩೩ ಮನ್ಮಹಾಮಣ್ಡಳೇಶ್ವರಂ ಲಕ್ಷ್ಮರಸರ್ ಅಯ್ಚಿಮಯ್ಯನಾಯಕನ ಬಸದಿಗೆ ಶಾನ್ತಿಣನ್ದಿಭಟ್ಟಾರಕರ ಪಾದೋದಕಮ್ಮಾಡಿ ಸರ್ವ್ವನ –

೩೪ ಮಶ್ಯಮಾಗೆ ಊರಿಂ ಪಡುವ ಮಲ್ಲವುರದ ಬಟ್ಟೆಯಿಂದ ಬಡಗ ಕಚ್ಛವಿಯ ಗಡಿಂಬದಲ್ಕೊಟ್ಟಮತ್ತರ್ ಮೂಱು ಕೆಱೆಯ ಕೆ –

೩೫ ಯ್ಯಿಂ ಬಡಗ ಎಕಲ ಕೆಳಗೆ ಮತ್ತರ್ ಆಱು ಎಕಲಿಂ ಮೂಡಣ… ಗಱ್ದಿಕಮ್ಮ ಇರ್ಪ್ಪತ್ತು ಬಸ –

೩೬ ದಿಯ ನಿವೇಸಣಕ್ಕೆ ಮೇರೆ ಈಶಾನ್ಯ ಕಮಾಗ್ನೇಯಕ್ಕಂ ಕುಂದಗಾ… ದನಲ್ನಟ್ಟಕರಿಯ

೩೭ … ವಾಯವ್ಯಕ್ಕೆ ಊರ್ಗ್ಗೋಡೆ ||

 

೧೨. ಚಾಂದಕವಟೆ ಶಾಸನ
(ಸೌಇಇ. ೨೦. ಸಂಖ್ಯೆ. ೨೮೬. ಕ್ರಿ. ಶ. ೧೦೬೮. ಚಾಂದಕವಟೆ)

*ಸ್ವಸ್ತಿ ಸಕವರ್ಷ ೯೮೯ ಪ್ಲವಂಗ ಸಂವತ್ಸರದ ಫಾಲ್ಗುಣ ಬ –

ಹುಳ ತದಿಗೆ ಆದಿವಾರದಂದು ಶ್ರೀಮತು ಮಾಘಣಂದಿ –

ಭಟ್ಟಾರಕರ ನಿಶಿದಿಗೆಯ ಸಮಸ್ತ ಸಂಪನ್ನೆಯರಪ್ಪ

ಶ್ರೀಮತು ಸಿಂದಿಗೆಯ… ಯ –

ರಪ್ಪ ಜಾಖಿಯಬ್ಬೆ (ಕ) ನ್ತಿಯರ್ನ್ನಿಲಿಸಿದರ್ ||

(ಕಂಬದ ಮೇಲುಗಡೆ)
(ಎಡಗಡೆ)           (ಬಲಗಡೆ)
ಕೊಪ್ಪ –         (ಚಂದಿ)ಸೆ –
ಸೆಟ್ಟಿಗೆ –       ಟ್ಟಿಮಾ –
(ಯ್ದ)ರ್        ಡಿದರ್

(ಕಂಬದ ಒಂದು ಪಕ್ಕ)
೦೧ *ಅಘವಿಘಟನೇ ಷಟ್ಪಕ್ಷಃ
೦೨ ಸುಘಟ… ತ್ರಿವಿದ್ಯಾ…
೦೩ ಸೇನಿ ಪ್ರತಿಪಕ್ಷಮಘವೇ –
೦೪ ದ್ರಾಱ್ಚಿತ ದಕ್ಷನುತದಕ್ಷಃ
೦೫ ಶ್ರೀ ಮಾಘಣಂದಿದೇವ ಮುಮುಕ್ಷು ( || )
೦೬ ಸೂರಸ್ತಗಣಾನ್ವಯ
೦೭ ತಿಳಕಕೆ ಮಂಗಳ
೦೮ ಮಹಾ ಶ್ರೀ * *

 

೧೩. ಸೊರಟೂರು ಶಾಸನ
(ಸೌಇಇ. ೧೧ – ೧. ಸಂಖ್ಯೆ. ೧೧೧. ಕ್ರಿ. ಶ. ೧೦೨೧. ಸೊರಟೂರು)

೦೧ ಭದ್ರಮಸ್ತು ಜಿನಶಾಸನ್ಯ || ಶ್ರೀ ಮತ್ಪರಮ ಗಂಭೀರಸ್ಯಾದ್ವಾ ದಾಮೋಘಲಾಂಚ್ಛನಂ (|*) ಜೀಯಾತ್ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ (|| ೧||*)

೦೨ *ಸ್ವಸ್ತಿ ಸಮಸ್ತ ಸುರಾಸುರ ಮಸ್ತಕ ಮಕುಟಾಂಶುಜಾಳ ಜಳಧೌತ ಪದಪ್ರಸ್ತುತ ಜಿನೇನ್ದ್ರಶಾಸನ ಮಸ್ತು ಚಿರಂ ಭದ್ರಮಮಳ ಭವ್ಯಜನಾನಂ | (೨|*)

೦೩ ಸ್ವಸ್ತಿ (||*) ಸಮಸ್ತ ಭುವನಾಶ್ರಯ ಶ್ರೀ ಪೃಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾ –

೦೪ ಳುಕ್ಯಾಭರಣಂ ಶ್ರೀಮದ್ಭುವನೈಕ ಮಲ್ಲದೇವರ ವಿಜಯರಾಜ್ಯ ಮುತ್ತರೋತ್ತರಾಭಿವೃದ್ಧಿಪ್ರವರ್ದ್ಧ ಮಾನಮಾಚಂದ್ರಾರ್ಕ್ಕ ತಾರಂ ಸಲು –

೦೫ ತ್ತಮಿರೆ || ವೃ || ಅಂಗ ವರಾಳ ಸಿಂಗಳಿಕ ಗೂರ್ಜ್ಜರ ಮಾಳವ ಚೇರ ಪಾಣ್ಡ್ಯ ಕಾಳಿಂಗ ಖಸಾನ್ಧ್ರ ಯಾದವ ಮಹೀಭುಜ ಮೌಳಿಮಣಿ ಬ್ರಜ –

೦೬ ಪ್ರಭಾಲಿಂಗಿತ ಪಾದಪೀಠನಮರೇನ್ದ್ರ ವಿಲಾಸನವಾರ್ಯ್ಯ ವೀರ್ಯ್ಯನುತ್ತುಂಗಯಶಂ ಸಮಸ್ತ ಭೂವನಾಶ್ರಯನಾಹವಮಲ್ಲನನ್ದನ || (೩ ||*)

೦೭ ಜನನಾಥಂ ಭುವನೈಕಮಲ್ಲ ಮಹಿಪಂ ಚಾಳುಕ್ಯ ಮಾರ್ತ್ತಣ್ಡನಾದಿನರೇನ್ದ್ರ ಪ್ರತಿಮಂ ಸ್ವಬಾಹುಬಳದಿಂದ ಪೂರ್ವ್ವಾಪರಾದ್ರಿನ್ದ್ರ ಹಿರ್ಮ್ಯ –

೦೮ ನಗಾಧೀಶ್ವರ ಸೇತುಸೀಮೆ ಯೆನಿಸಿರ್ದ್ದೀ ಧಾತ್ರಿಯಂ ಕೂಡೆ ವೈರಿನೃಪಾಳರ್ಕ್ಕಳನಿಕ್ಕಿ ಸೌರ್ಯ್ಯಧನನೇಕ ಚ್ಛತ್ರಮಂ ಮಾಡಿದಂ || (೪||*) ತತ್ಪಾದಪದ್ಮೋ –

೦೯ ಪಜೀವಿ || ಸಮಧಿಗತಪಞ್ಟ ಮಹಾಶಬ್ದ ಮಹಾಸಾಮಂತಾಧಿಪತಿ ಮಹಾಪ್ರಚಣ್ಡ ದಣ್ಡನಾಯಕಂ ಸಮಸ್ತ ಸಾಮಂತಪರಿ –

೧೦ ವೃತಸ್ಥಾನವಸ್ತು ಮಣಿನಾಯಕಂ | ಭುವನೈಕಮಲ್ಲ ವಲ್ಲಭ ತೇಜೋ ವಿರಾಜಿತ ಪ್ರಾರಬ್ದ ಪ್ರವೀಣಂ | ಸಮ್ಯಕ್ತ್ವಶೀಳ ಪ್ರಮಾಣನಿರ್ವ್ವಾ

೧೧ ಣ | ವಿಶಮಾದೇಶ ಕೌಶಳವ್ಯಾಪಾರಯೋಗನ್ಧರಂ | ಕುಂತಳಾಧೀಶಹಿ ತೋಪದೇಶಧುರನ್ಧರ | ಚನ್ದನಬಹಳಪರಿಮಳಾಮೋದಂ | ಜಿನೇನ್ದ್ರ –

೧೨ ಚರಣಾರ್ಚ್ಚನ ವಿನೋದಂ | ದೀನ ಹೀನ ನಾನಾಮನುಜ ಪರಿಪೋಷಣಂ ವಿಜಯಕಟಕ ವಿಭೂಷಣ | ನಣ್ನನವಜ್ಜ್ರಂ | ಸ್ವಾಮಿದ್ರೋಹಶಿ –

೧೩ ರರ್ಚ್ಛೇದಕಂ | ಶ್ರೀಮದ್ಭುನೈಕಮಲ್ಲ ದೇವಪಾದಾರಾಧಕಂ ಶ್ರೀಮನ್ಮಹಾ ಪ್ರಧಾನಂ | ಹೇರಿಸನ್ಧಿವಿಗ್ರಹಿ | ಸೇನಾಧಿಪತಿ | ಕಡಿತವೆರ್ಗ್ಗಡೆ |

೧೪ ದಣ್ಡನಾಯಕ ಬಲದೇವಯ್ಯಂ || ವೃ || ಪೊರೆದಾಳ್ದಂ ಭುವನೈಕಮಲ್ಲ ಮಹಿಪಂ ತನ್ನಿಷ್ಟದೈವಂ ಜಿನೇಶ್ವರನಾತಾಂಬಿಕೆ ಗೊಜ್ಜಿಕಬ್ಭೆ ಜನಕಂ ಗಂ –

೧೫ ಗಾನ್ವಯ ಶ್ರೀ ವಧೂವರನಪ್ಪಗ್ಗಳ ದೇವನಣ್ನನನಘಂ ಬೆಳ್ದೇವನೆನ್ದಂದೆ ಭಾಸುರತೇಜಂ ಬಲದೇವನೆಯ್ದೆ ಕೃತಕೃತ್ಯ… ಚಕ್ರದೊ –

೧೬ ಳ್‌ || (*||) ಕಂ || ಪರಮಜಿನಂ ತನಗಾಪ್ತಂ | ಗುರುಗ ಳ್ನಯಸೇನದೇವ ರೂರ್ಜ್ಜಿತಧರ್ಮ್ತ್ಯ್ರಂ ಪಿರಿದಪ್ಪ

೧೭ ನ್ತರುಮೊಳರೇ || (೬||*) ವಚ || ಇನ್ತೆನಿಸಿ ನೆಗೞ್ದ ಶ್ರೀಮದ್ದಣ್ಡನಾಯಕ ಬಲದೇವಯ್ಯಂಗಳ್‌ ||ವೃತ್ತಂ|| ಇದು ಧರ್ಮ್ಮಾಮೃತಸಿನ್ಧು ಸುಶ್ರುತ ಲತಾ –

೧೮ ಸನ್ದೋಹಕನ್ದಂದಯಾನದಿಗುತ್ಪತ್ತಿಯ ಬೆಟ್ಟು ತತ್ವದ ತವರ್ಸ್ಸಂಸಾರ ವಾರಾಸಿಗಿಕ್ಕಿದ ಭೈತ್ರಂ ತೊಡವಾರ್ಹತಕ್ಕೆನೆ ಜನಂ ಭೂ –

೧೯ ಭಾಗದೊಳ್ಪೆಂಪುವೆತ್ತುದು ಸೂರಸ್ಥಗಣಂ ಪ್ರಸಿದ್ಧ ಮದಱೊಳ್ಶ್ರೀ ಚಿತ್ರಕೂಟಾನ್ವಯಂ || (೭||*) ವಚ || ಆ ಚಿತ್ರಕೂ –

೨೦ ಟಾನ್ವಯದೊಳ್‌ || ವೃ || ಕನ್ತುಮದೇಭಸಿಂಹರೆನೆ ಸನ್ದ ಪೊಗರ್ತ್ತೆಯ ಚನ್ದಣನ್ದಿ ಸಿದ್ಧಾನ್ತ ಮುನೀಶ್ವರರ್ಗುರುಗಳೆಂಬ ನೆಗರ್ತ್ತೆಯ

೨೧ ದಾವಣನ್ದಿ ಸಿದ್ಧಾನ್ತ ಮುನೀಶ್ವರರ್ತ್ತಮ್ಮ ಶಿಷ್ಯಗಣಾಧಿಪರೆಂಬ ಪೆಂಪು ಲೋಕಾನ್ತ ಮನೆಯ್ದಿತೇಂ ಸಕಳಚನ್ದ್ರಮು –

೨೨ ನೀನ್ದ್ರರಗಣ್ಯಪುಣ್ಯರೋ || (೮||*) ಅವರ ಸಹಧರ್ಮ್ರಿಗಳ್‌ (|*) ಯಶಱ್ಪ್ರಸರ ನಿರ್ಮ್ರಳದ್ಯುತಿರಳಂಕೃತಾಶಾಂಬರೋ ಬುಧ –

೨೩ ಪ್ರಮದಕೃದ್ಗುಣಃ ಕುವಳಯಪ್ರಮೋದಪ್ರದ(ಃ*) ಜಯತ್ಯಧಿಕ ಜೈನಶಾಸನೆನ ಪಯೋಧಿ ಸಂವರ್ದ್ಧನ (ಃ*) ಪ್ರಭತಗು –

೨೪ ಣದೀಧಿತಿಃ ಕನಕಣ್ನದಿ ಸೈದ್ಧಾನ್ತಿಕ (ಃ*) || (೯||*) ಅವರ ಶಿಷ್ಯ ರ್ಪ್ಪರವಾದಿಸರಭ ಬೇರುಣಾಪರನಾಮಧೇಯರೆನಿಸಿ ನೆಗೞ್ದ ಸಿ –

೨೫ ರಿಣಂದಿ ಪರಣಿಡಿತದೇವರ ಶಿಷ್ಯಿಂತಿಯರಪ್ಪ ಹುಳಿಯಬ್ಬಾಜ್ಜಿಕಯರ್ಗ್ಗೆ || ಸಕ ವರ್ಷ ೯೯೩ ನೆಯ ವಿರೋಧ ಕೃತ್ಸಂವತ್ಸ –

೨೬ ರದ ಮಾಘ ಸುದ್ಧ ಪಾಡಿವಮಾದಿತ್ಯವಾರಮುತ್ತರಾಯಣ ಸಂಕ್ರಾಂತಿ ವ್ಯತೀಪಾತದಂದು ಪಾದಪ್ರಕ್ಷಾಳನ….

೨೭ (ತ)ನ್ನ ಪ್ರಭುಸಾಮ್ಯದ ಅಗ್ರಹಾರಂ ಸರಟವುರದ ಬಲದೇವಜಿನಾಲಯಕ್ಕೆ ತಮ್ಮ ಮಾನ್ಯದೊಳಗೆ ಇಂ (ಬ)….

೨೮ ದಿಂ ಪಡುವ ಮೂವತ್ತಾಱು ಮತ್ತರ್ಕ್ಕೆಯ್ಯಮಂ | ಹದಿಯಱ ದೋಂಟದಿಂ ತೆಂಕ ಮೂಡದೆಸೆಯಲಯ್ನೂಱು….

೨೯ ಟಮುಮಂ ತಳಭೋಗಮುಮಂ ಸರ್ಬ್ಬಬಾಧಾ ಪರಿಹಾರಮಾಗೆ ಬಿಟ್ಟು ಕೊಟ್ಟರ್ || ಮತ್ತಮಾ ಬಲದೇವಯ್ಯ…

೩೦ ಕ್ಕೆ | ಸ್ವಸ್ತಿ ಯಮನಿಯಮಸ್ವಾಧ್ವಾಯ ಧ್ಯಾನ ಧಾರಣ ಮೌನಾ ನುಷ್ಠಾನ ಪರಾಯಣ ಜಪಸಮಾಧಿಶೀಳ (ಸಂಪ್ಪ) –

೩೧ (ನ್ನ) ರಪ್ಪ ಶ್ರೀಮತ್ಸರಟವುರದ ಮಹಾಜನವಿನ್ನೂರ್ವ್ವರುಮಿೞ್ದು ಎಲೆವಳ್ಳದಿಂ ಮೂಡಲು ಪನ್ನಿರ್ಮ್ಮತ್ತರ್ಕ್ಕೆಯ್ಯು –

೩೨ …ಯ್ನೂರುಬಳ್ಳಿಯ ತೋಂಟಮುಮಂ | ಒನ್ದು ಗಾಣಮುಮಂ | ಎರಡು ಮನೆಯ ನಿವೇಶಣಮುಮಂ | ಸರ್ವ್ವ

೩೩ (ಬಾಧಾಪರಿ) ಹಾರಮಾಗೆ ಬಿಟ್ಟುಕೊಟ್ಟರ್