೧೮. ನದಿಹರಳಹಳ್ಳಿ ಶಾಸನ
(ಸೌಇಇ. ೧೮. ಸಂಖ್ಯೆ. ೧೮೦. ಕ್ರಿ. ಶ. ೧೧೬೮. ನದಿಹರಹಳ್ಳಿ)

೦೧ *ಶ್ರೀಮತ್ಪರಮ ಗಂಭೀರಸ್ಯಾದ್ವಾದಾಮೋಘಲಾಂಛನಂ ಜೀಯಾತ್ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ ||

೦೨ ಶ್ರೀಗೆ ನೆಲೆಯೆನಿಪ… ಗೆ ತವ (ರ್ಮ್ಮ)ನೆ… ನಿಪನೊಲ್ದೆಮಗೀಗೊಳ್ಪಂ

೦೩ ಗೊಟ್ಟಗಡಿಯ ವೃಷಭಜಿನೇಂದ್ರಂ || ಶ್ರೀಕಾಂತಮೆನಿಸಿ ಭರತ ಮಹೀಕಾಂತೆಗೆ ಕುಂತಳ (ವೆನ) ಲೆಸೆಗುಂ ವಿಷಯಂ ಲೋ –

೦೪ ಕನುತಂ ಕುಂತಳಮಂತಾ ಕುಂತಳ ವಿಷಯ ಮಧ್ಯದೊಳ್ಸೊಗಯಿಸುಗುಂ || ದೊರೆವೆತ್ತ ತುಂಗಭದ್ರೆಯ ವರದೆಯ

೦೫ ಮಧ್ಯ ಪ್ರದೇಶದೊಳ್ಸೊಗಯಿಸಗುಂ ಸಿರಿಯ ತವರ್ಮ್ಮನೆ ಸೌಖ್ಯಾಕರಮೆನೆ ಬನವಸೆ (ದೇಶ) ವತುಳವಿಳಾಸಂ || ವನರು –

೦೬ ಹವನದಿಂ ವನರುಹವನಮಧು ಮುದಿತಾಳಿಮಾಳೆಯಿಂದಳಿ ಮಾಳಾಧ್ವನಿ ಹೃದ್ಯೋದ್ಯಾನದಿನಾ ಜನಪದವೊ(ಡ)ರಿಸು –

೦೭ ವುದಖಿಳವನಸುಖಪದಮಂ || ಪಿಕರವದಿಂ ತಂಬೆಲರಿಂ ಶುಕಶತಚಾರುಪ್ರ(ಕ)ರ(ದಿಂ) ದೆಳೆನೀರಸ ತವನರುಹವನದಿಂ ಸಕಳೇಂದ್ರಿ –

೦೮ ಯತೃಪ್ತಿ ಚತುರ ವಿಷಯಂ ವಿಷಯಂ || ಕಳಕರದಿನಾಮ್ರವನಂ ಗಿಳಿವಿಂಡಿಂ ಗಡ ಶಾಳೀವ(ನ)… ಕು… ಲಲಿತ ಲತಿಕಾವನಂ ಕಣ್ಗೊಳಿಸು –

೦೯ ಗುಮದಱೊಳ್ಮರಾಳದಿಂ ವನಜವನಂ || ಕೊಡೆ ಸೊಗಯಿಸುವ ಬನವಸೆನಾಡೊಳ್ಕಣ್ಗೆಸೆವ ಕಂಪಣಂ ವನಲಕ್ಷ್ಮಿ (ನಿಂದುರೂಢಿಯ ನೂಱು)

೧೦ ಬಾಡಂ ಭೂಯುವತಿನೂತ್ನರತ್ನಾಪೀಡಂ || ಅದನಾಳ್ವಂ ಸಕಳಜಗದ್ವಿದಿತಯ (ಶಂ) ಶ್ರೀನಿಕೇತನ… ದಿಯಿಸಿದ ಪಾಂಡ್ಯನ –

೧೧ ಮಳಿನಹ್ರಿದಯಂ ಸೌಂದರ್ಯ್ಯದೊಳಭಿನವಮದನಂ || ಆ ವಿಜಯ… ಪಾಂಡ್ಯ… ಪರಬಲ

೧೨ ವಿದ್ರಾವಣ ವಿಧಾನಷೌಂಡಂ ಚಾವುಂಡಂ ಗುಣಕ (ರಂ) ಡನೊಳ್ಪಿನ (ಷಂಡಂ) ಅಮರೇಂದ್ರ… ಹಳ್ಳಿಗಧಿಪತಿ ಭೂಪೋತ್ತಮ

೧೩ ನುತ್ತಮಪುರುಷ ಪಾಂಡ್ಯಮಹಿಪ… ಧರೆಗೆಸೆವ ತುಂಗ (ಭದ್ರಾ)… ಪರಿಖಾಕೃತಿಯಾಗಿ ಸುತ್ತೆಸುತ್ತುಂ

೧೪ ಪುದಿದಾವರಿಸಿದ ನಂದನವನದಿಂದ ಕರಮೆಸೆವುದು ಗೊ (ಟ್ಟಗಡಿ)… (ಪಸರಿಸೆ) ಸರಸೀರುಹಷಂ –

೧೫ ಡಮಂಡಿತಂ ನವನವಮಾಳಿಕಾ… ಷಟ್ಟದಿ

೧೬ ಗವವೃತಮಪ್ಪಗೊಟ್ಟಗಡಿಗೇಂ ಪಡಿಯಕ್ಕು… ಭೂಮಿ… ಲೆ –

೧೭ ಯೆರೆನಿತನಿತುಂ ನಿರ್ಮ್ಮಳಜೈನಧರ್ಮ್ಮಪರರುಳಿದ ಸಂಯಮ ನಿರ… ವಲ್ಲಿವೇ –

೧೮ ಲ್ಲಿತದಿಗಂತರಾಳ… ಕಲ್ಲ… ನಿಕೇತನನಿ… ಸತ್ಯದ

೧೯ ಬಿತ್ತುಭೋಗದಾಗರ ವಸು… ಕೇತಗಾವುಂಡ… ಆತನ ವದು ಸೀಳಗುಣೋ –

೨೦ ಪೇತೆ ಜಗಖ್ಯಾತೆ ಸೀತೆಯೆನೆ ಪೆಸರ್ವಡೆದಳ್‌… ಭೂತಳದೊಳ್‌ ಲೋಕವೆ… ಲಿಯೊಳ್‌ ||

೨೧ (ಅಂಗ)… ವಿಕ್ರಾಂ…

೨೨ (ವ)ಂದು ಬೇಡಿದೊಡೆ… ವಱೆಯ….

೨೩ ಗಾರ್ಮ್ಮನೆನಿಪಂ ಬರ್ಮ್ಮ ಎನೆ ನೆಗಳ್ದಬರ್ಮ್ಮ (ಗವುಂಡನ) ಸತಿ ಗುಣವತಿ ವಿ… ವನಿತೆಯ –

೨೪ ರೊಳಗರಸಿಯೆಂಬ ಪೆಸರೆಸೆವಿನ… ರಸಿಯ –

೨೫ ಕ್ಕಂ ಭೂತಳದೊಳ್ಮಿಗಿಲೆನಿಪ್ಪ ಪೆರ್ಮ್ಮೆ… ಜನಿಯಿಸಿದ… ಮೊಳ್ಪಿ –

೨೬ ನ ರಾಶಿ ಕೇತಗಾವುಂಡನುಮೆನೆಪೆಸ… ತಳಮನ…

೨೭ ತೋದ್ಯೋಗಂ ಜಿನ ಪೂಜಾ… ಪ್ಸಂಗ…

೨೮ ಪ್ತಾಗಮಾನ್ವಯವರ್ತ್ಥಿಬ್ರಜರಕ್ಷ… ಸಕ –

೨೯ ಮಂ ಸಾಮನ್ತ ನಾಗಂ ಗುಣಾಶ್ರಯನೆ… ದಿಕ್ಷಾಕ್ಷಮ… ಮಂಗಳಾ –

೩೦ ನಕರವಂ ಜೈನಾಭಿಷೇಕಾರ್ಚನಾದಿ ಸತಸ್ತೋ (ತ್ರಾವಳಿ)… ನಾಕರನ ಜಿನಭಕ್ತಪ್ರ (ಕ)ರ… ಜೈನ.

೩೧ ಬ್ರತಾಶಂಸನವನಿಯೊಳ್‌ ನಿತ್ಯ ವಿನೋದನೆಂದಡೆಳೆಯೊ… ನಾತ್ತ ತತ್ವವಿ –

೩೨ ಚಾರಪ್ರವ್ಯಕ್ತ ಹೃದಯನುಚಿತ ಧನವ್ಯಯ… ವಿತ ಚಾರು –

೩೩ ಚರಿತದ ಪೆಂಪಿಂ ಸದಮಳ ಜಿನಪೂಜಾ… ವಂದನೆ… ವಸುಧಾ –

೩೪ (ವ) ಸನಕ್ಕೆ ಸುರಾಚಳಕ್ಕೆ ಪೆಂಪಲ್ಪಮೆನುತ್ತು… ಯರಲಿ

೩೫ ಕುಲಲೋಲುಪರ್ಪ್ಪೋಲ್ವರೆ ಸಾದವಂಶಕುಮುದ… ಯಧನಂ –

೩೬ ಗೀಗೆ ನಾಗಗಾವುಂಡಂಗೈಶ್ವಯಮ (ನರ್ಹತ್ಸಿದ್ದಾಚಾರ್ಯ್ಯ)… ದಡೆ ||

೩೭ ಶ್ಲೋಕ || ಶ್ರೀ ಮೂಲಸಂಘಸೂರಸ್ಥರೋ ||

೩೯ ಸುಪೂಜ್ಯ ಮುನೀಂದ್ರಂ || ಸಿದ್ಧಾಂತತ್ರಯ… ಸಿದ್ಧಾಂತಚಕ್ರವ –

೪೦ ರ್ತ್ತಿ ಜಗದ್ದವಳಿತಕೀರ್ತ್ತಿ… ರಿಯಂ || ಅನ್ತವರ… ರ –

೪೧ ನವದ್ಯರನಘರ್ಶಾ(ಂ) ತಮನರ್ಣೆಗಳ್ದ ರಾವಣಂದಿಮುನೀಂದ್ರ… ಗೆ

೪೨ ರಾವಣಂದಿಮುನೀಂದ್ರಂ ವಿನಯನಿಧಿ… ನೆನನುಪಮನೆ… ಜ –

೪೩ ನವಿನೂತನುಪಮಾತೀತಂ ಭೂತಳವಿನು… ಜನಗುಣ… ವಿನೂತ –

೪೪ ಚರಿತಂ ಶಿಷ್ಟೇಷ್ಟ ಸಂರಕ್ಷಣಂ ಜಿನಪಾದಾ… ಪ್ರಮೋದನಾಂ ತಾತ್ಪರ್ಯ್ಯ… ಶೌರ್ಯ್ಯವನ –

೪೫ ವರ್ದ್ಯೌದಾಯವಂಗೀಕ್ರಿತಂ ತನಗೆಂದಂದುಜಸ… ಮಿಕೇತಗಾವುಂಡನಾತನ ಸತಿಗೆ ರಿ… ರುಂಧತಿ(ಗವ) –

೪೬ ದ್ರಿಸುತೆಗಂ ಧರಣೀಭಾಗದೊಳೆಣೆಯೊಳರೆ ಕುಲಸ್ತ್ರೀ… ನಾಗಗಾ –

೪೭ ವುಂಡನುದಾತ್ತವಿಶದ ಕೀರ್ತ್ತಿಲತೆಗಿದಡರ್ಪ್ಪಾಯ್ತೆನೆ ಗೊಟ್ಟಗಡಿಯೊಳ… ಜಿನಭವನವನಜನುಪಮ… ದಿಳೆ ||

೪೮ ವರಸೌಧಾತ್ಮಾಂಶುವಿಂ ಕಾಂಚನಕಳಶ ಕನತ್ಕಾಂತಿಯಿಂ ನೀಳರತ್ನಸ್ಪುರಿತಾ… ಚ್ಚಾರು… ರುಣಮಣಿ… ತ್ಪ್ರ –

೪೯ ಭಾನಿರ್ಬ್ಭರ ಶೋಬಾಭೋಗದಿಂ ಶೋಭಿಸಿ ಸಕಳಜಗದ್ಭವ್ಯ ಲಕ್ಷ್ಮೀಕರ(ಂ) ಪಾಂಡುರಿತಂ… ರಿತವರುಣಿತರುಂದ್ರ –

೫೦ ಜೈನೇಂದ್ರಗೇಹಂ || ದಾನವಿನೋದನೆಂಬುದು ಗುಣಾಂಬುಧಿಯೆಂಬುದು ಸತ್ಯಶೌಚ (ದಣ್ಮಿನ) ನಿಧಾನನೆಂಬದವನೀತಳ –

೫೧ ಕೀತನೆ ತೀರ್ತ್ಥನೆಂಬುದನ್ಮಾನಿಸದೀವ ಕಳ್ಪತರುವೆಂಬುದು ಸಾದಕುಳಪ್ರದೀಪನ… ನೆಗಳ್ದ ಬುಧಜನಸ್ತುತನಾಗ(ಗೌಂ) –

೫೨ ಡನ || ಅದು ನಿಜಪುಣ್ಯಪುಂಜವದು ತಂನ ವಿಶುದ್ಧ ಯಶಸ್ಸಮೂಹವಂತದು ತ… ಮಸಮು –

೫೩ ಚ್ಚಯವಂತದಾತ್ಮವಂಶದ ಸುಚರಿತ್ರಸಂಸ್ತವ(ನ) ಶಾಸನಶೈಳವೆನಿಪ್ಪ ಪೆರ್ಮ್ಮೆಗಾಸ್ಪದನೆನೆ ನಾಗ (ವರ್ಮ್ಮವಿಭು) ಮಾಡಿಸಿದಂ

೫೪ ಜಿನರಾಜಗೇಹಮಂ || ಅನು(ಪ*) ಮಮಹಿಮಂ ಸುರೇಂದ್ರವಿನುತಂ ಮಾಡುಗೆ ಜಿನೇದ್ರಭದ್ರಂ ದಯೆಯಿಂ ಮನಮೊಸೆದು (ನಾ) –

೫೫ ಗಗಾವುಂಡನ ಮನದಭಿಲಷಿತಫಳ ಮನಾಚಂದ್ರಾರ್ಕ್ಕಂ ಧರೆ ಪೊಗಳೆ ಶಾಂತಿರಂ ವಿರಚಿಸದಂ ಸುಕವಿ ತಿರ್ದ್ಧಿಕವಿಪ –

೫೬ ರಮಾತ್ಮಂ ಬರಯಿಸಿದಂ ಬರದಂ ಸಾಳ್ವರ ತಿಳಕಂ (ಸ) ಕಳಾರ್ಯ್ಯನೀಶಾಸನಿಂ || *ಸ್ವಸ್ತಿ ಶ್ರೀಮತ್‌ ಕಳಚುರ್ಯ್ಯ

೫೭ ಪ್ರತಾಪ ಚಕ್ರವರ್ತ್ತೀ ವೀರಬಿಜ್ಜಣದೇವರು ಕಲ್ಯಾಣದ ನೆಲೆವಿಡಿನೊಲು ಸುಖದಿಂ ರಾಜ್ಯಂ ಗೆಯ್ಯುತಮಿರೆ ತತ್ಪಾ –

೫೮ ದಪದ್ಮೋಪಜೀವಿ || ಸಕವರ್ಷ ೧೦೯೦ನೆಯ ಸರ್ವ್ವಧಾರಿ ಸಂವತ್ಸರದ ಚೈತ್ರದ ಪು(ಣ್ನ) ಮಿ ಸೋಮವಾರ

೫೯ ಸೋಮಗ್ರಹಣದಂದು ಅರಸಿಗಾವುಂಡಿಯುಂ ನಾಗಗಾವುಂಡನುಂ ತಂಮ ಮಾಡಿಸಿದ (ಜಿನಾಲಯಕ್ಕೆ ಬಿಟ್ಟ ಧರ್ಮ್ಮಮೆಂತೆಂದಡೆ)

೬೦ ರಿಷಿಯರಯ್ವರಾಹಾರ ದಾನಕ್ಯಂ ಅಜ್ಜಿಯರಾಹಾರದಾನಕ್ಕಂ ಖಂಡಸ್ಪುಟಿತ ಜಿರ್ಣ್ನೋದ್ಧಾ(ರ) ಕ್ಕಂ ಬಿಟ್ಟತೋಂಟ ಹಿರಿಯ (ಕೆ) –

೬೧ ಱೆಯ ಕೆಳಗೆ (ತುಂ) ಬಿನ ಮೊದಲಲು ತೋಂಟ ಅಡಕೆಯ ಮರ ನಾಲ್ನೂಱುಸಿಡಿಲಗೆಱೆಯ ಕೆಳಗೆ (ತುಂ) ಬಿಂದ ಕೆಳಗೆ ಗದ್ದೆ

೬೨ ಮತ್ತರೊಂದು | ಊರಿಂದಂ ಬಡಗಲೋಣಿಯಿಂದ ಹಡುವಲು ಎರೆಯಕೆಯಿಮತ್ತರು ಮೂಱು ಸಿಡಿಲಗೆಱೆ –

೬೩ ಯ ತೆಂಕಣ ಕೋಡಿಯ ಕೆಳಗೆ ಹಾಳಕೆಯಿ ಮತ್ತರೊಂದು | ಮೂಲೆವತ್ತ ಹೇಱೆ (ಬಳ್ಳವೊಂದು) ಹೆಜ್ಜುಂಕದ ನಾಗಣದೇ

೬೪ ವ ದೇವರ ನಂದಾದೀವಿಗೆಗೆ ತಿಂಗಳಿಂಗೆ ಬಿಟ್ಟ ಪಟಣವೊಂದು ದೇವಗೊಳಗ ಧರ್ಮ್ಮ ಗೊಳಗಮಂ ಸಲಿಸುವರಿಂತೀ ಧರ್ಮ್ಮವ ನಾಡ ಮೇ –

೬೫ ಲಾಳ್ಕಯರಸುಗಳುಂ ಮೇಲಾಳ್ಕೆಯಮನ್ನೆಯರುಂ ಗೌಂಡನುಂ ಪ್ರಜೆಗಳುಂ ಧರ್ಮ್ಮದಿಂ ನಡೆಸಿದವರು.

 

೧೯. ಅರಸೀಕೆರೆ ಶಾಸನ
(ಜ.ಕ.ಯು. ಸಂಪುಟ ೧೦. ಕ್ರಿ. ಶ. ೧೧೬೮. ಅರಸೀಕೆರೆ)

೦೧ ಶ್ರೀಮತ್ಪರಮ ಗಂಭೀರಸ್ಯಾದ್ವಾದಾಮೋಘಲಾಂಛನಂ ಜೀಯಾತ್ತ್ರೈಳೋಕ್ಯನಾಥಸ್ಯ ಸಾ(ಶಾ) ಸನಂ ಜಿನಸಾ (ಶಾ) ಶಾಸನಂ || (ಹಂಸ ಚಿತ್ರ).

೦೨ ರುಶುಮಕರಕರಿಕುಳಾಕುಳ ಲವಣಾಂಬುಧಿ ವಳೆಯವೃಷ್ಟಿತದ್ವೀಪೇ ಗಿರಿಪತಿರಿವ ಮಡು

೦೩ ವಗಣಂ ತಿಷ್ಟತು ವರಯಾಪನೀಯಸ್ಯತು || ವಿಷ್ಟು ವಿನಗ್ರಸುತಂ ತಾಂಜಿಷ್ಣುಗೆ ಮೇಲೆನಿಪನೀವ ಕಾವೂಳುಗುಣದಿಂದುಷ್ಣಕ

೦೪ ರಂಪಗೆವಡೆಯೊಳು ವಿಷ್ಣುಪದಾಂಬುಜದ ಭೃಂಗವೀ ನರಸಿಂಘಂ || ಇದಿರಾ ದರಿಭೂಪಾಳರ ಮದದಾನೆ

೦೫ ಯ ಕೊಂಬನುಡಿದು ದಂತದಬಳೆಯಂ ಬಿದುರಿನಮುತ್ತಿನಹಾರ ಮನೋದವಿಸಿ ಜಯಸಿರಿಗೆ ತೊಡಿಸುವಂ ನರಸಿಂಹಂ || ವ್ರಿ ||

೦೬ ಮಾರಿಯ ಮೂರಿ ಮ್ರಿತ್ತುವಿನ ನಾಲಗೆ ನಂಜಿನಪುಂಜು ಭೈರವಾಕರದ ಕಾಯ್ಪು ಬಂದೆಱಗಿ ಹೊಯ್ದ ಸಿಡಿೞ(ಲ್‌) ಸಿಡಿವೇಳ್ಗೆ ಕಾದಿ

೦೭ ಕೈವಾರದಬಂದುರಕ್ಕಸನೊಳಳುಱದಾಂತು ಬರ್ದುಂಕುವಂ ನರಾರ್ವೀರಮೆ ಮೂರ್ತಿಗೊಂಡ ನರನಾತನೊ

೦೮ ಳೀ ನರಸಿ(ಂಹ) ಭೂಪನೋಳು (ಳ್‌) || ಸ್ವಸ್ತಿ ಸಮಧಿಗತ ಪಂಚಮಹಾಸಬುದ ಮಹಾಮಂಡಲೇಸ್ವ (ಶ್ವ)ರಂ ದ್ವಾರಾವತೀಪುರವರಾಧೀಸ್ವ (ಶ್ವ)

೦೯ ರಂ ತುಳವಬಳಜಳಧಿ ಬಡವಾನಳಂ ದಾಯಾದ ದಾವಾನಲಂ ಪಾಂಡ್ಯ ಕುಲಕಮಳ ವನವೇದಂಡ ಗಂಡಭೇರುಂಡ ಮಂಡಲಿ

೧೦ ಕ ಬೇಂಟೆಕಾಱ ಪರಮಂಡಳಸೂಱೆಕಾರಿ ಸಂಗ್ರಾಮಭೀಮ ಕಲಿಕಾಲಕಾಮ ಸಕಳವಂದಿಬ್ರಿಂದಸಂತರ್ಪಣ ಸಮರ್ತ್ಥವಿ

೧೧ ತರಣವಿನೋದ ವಾಸಂತಿಕಾದೇವಿ ಲಬುಧ ವರಪ್ರಸಾದ ಯಾದವಕುಳಾಂಬರ ದ್ಯುಮಣಿ ಮಂಡಳಿಕ ಮಕುಟ ಚೂಡಾಮಣಿ ಕದನ

೧೨ ಪ್ರಚಂಡ ಮಲೆಪರೊಳುಗಂಡ ನಾಮಾದಿ ಪ್ರಸ(ಶ)ಸ್ತಿ ಸಹಿತಂ ಶ್ರೀ ಮತ್ತ್ರಭುನಮಲ್ಲತಳಕಾಡು ಕೊಂಗು ನಂಗಲಿ ಗಂಗವಾಡಿ(ನೊ)

೧೩ ಳಂಬವಾಡಿ ಬನವಸೆ ಹಾನುಂಗಲುಗೊಂಡ ಭುಜಬಳ ವೀರಗಂಗೆ ಪ್ರ(ತಾ)ಪ ಹೊಯ್ಸಳ ನಾರಸಿಂಹದೇವರ ಸಕಳಮಹೀ ಮಂಡಳ

೧೪ ಮಂದುಷ್ಟ ನಿಗ್ಗ್ರಹಸಿ(ಶಿ)ಷ್ಟ ಪ್ರತಿಪಾಳನಂಗೆಯ್ದು ರಕ್ಷಿಸುತ್ತುಂಧೋರಸಮುದ್ರದ ನೆಲೆವೀಡೊಳು ಸುಖಸಂಕಥಾ ವಿನೋದದಿಂ

೧೫ ರಾಜ್ಯಂಗೆಯ್ಯತ್ತಮಿರೆಯಿರೆ || ಶ್ರೀಮದಮರೇಂದ್ರ ವಿನಮಿತಕೋಮಳ ಚರಣಾಂಘ್ರಿಯುಗಳ ಪಾರ್ಶ್ವಜಿನಂ ಕಾಮಾ

೧೬ ರಿ ಕೊಡುಗೆ ನಿಚ್ಚಂ ಶ್ರೀಮಹಿಮೋಂನತಿಯ ನಖರನಿಕರಕ್ಕೆನಸುಂ || ವ್ರಿ || ಬೆಳೆದ ಸುಗಂಧಶಾಳಿ ಗಿಳಿವಿಂಡುಗಳೋಳಿ ಮನೋ

೧೭ ಜನರ್ತ್ತಿಯಿಂ ಸುಳಿವವನಾಳಿ ಬಗ್ಗಿಪಪಿಕಾಳಿ ಪುಳಿಂದಿಯರಿಪ್ಪಕೇಳಿ ಪೊಂಗಳಸದ ದೇವತಾ ಭವನದೊಳೆ ವಿಟೀಜನಧಾಳಿಸುತ್ತ

೧೮ ಲಂ ಬಳಸಿದ ಕೋಟೆಯಿಂದರಸಿಯೊಳುಗೆಱೆರಮ್ಯಮದೆಂತು ನೋರ್ಪ್ಪಡಂ ನಖರ ಜಿನಾಲಯ ವೂರಿನಮುಖಮಂ

೧೯ ಡನ ಧರೆಗೆಪೂಜ್ಯವಿದು ಲೇಸೆನಿಸಲು ನಖರಜನಂಗಳು ಮೂಡಿಸೆ ಸುಖರತೆಯಿಂ ಜಿನಮುನೀಂದ್ರರಿಂ ಸೊಗಯಿಸುಗುಂ ಎಕ್ಕೋಟಿ

೨೦ ಯಜಿನಗ್ರಿಹಮಿದನುಕ್ಕೆವದಿಂ ಹೊರವೆದ ಸಲ್ಲದೆನುತುಂ ಮಿಕ್ಕಿರ್ದ್ದೆಸೆವಗಣಂಗಳು ತಕ್ಕೂರ್ಮ್ಮೆಯೊಳೊಲ್ದು ರಕ್ಷಿಪುದು ಧರ್ಮಮು

೨೧ ಮಂ || ವ್ರಿ || ಪ್ರಭುತನದೊಳುಪು ಸತ್ಯದಮಹಾತ್ಮಿಕೆ ನಿರ್ಮ್ಮಳಚಿತ್ರವ್ರಿತ್ತಿಯಿಂತ ಭಾವ ಪದಾರದಿಂದ ಮಧುಪಂ ಸಕಳಾಗಮ

೨೨ ಸಾ(ಶಾ)ಸ್ತ್ರಸಾತ (?) ಪಂ ಸಭೆಗೆ ಸುಪೂಜಿತಾ ಚರಣತಾನೆನಿಪಂ ಮುದದಿಂದವಾಗಳುಂ ತ್ರಿಭುವನ ಸ(ಶ)ಕ್ತಿ ಪಂಡಿತ ಮಹಾಮುನಿಪಂಗೆ

೨೩ ಪಗೆ ಯಾವ ನುರ್ವಿಯೊಳು(ಳ್‌) ಸುರಗಿರಿ ಬಿಣ್ಪಿನೊಳಂ (ಳ್‌) ತರಣ ತೇಜದೊಳೀ ನಡೆಗರ್ಕ್ಕನಂದನಂ ಸುರತರು ದಾನದೊಳು (ಳ್‌) ಸು(ಶು) ಚಿನದೀ ಸುತ

೨೪ ನೊಳ್‌(ಳ್‌) ಮನುನೀತಿ ನೀತಿಯೊಳು(ಳ್‌) ಸರಿದೊರೆ ಪಾಟಿಪಾಸಟಿ ಸಮಂತೆಣೆ ತಾನೆನೆ ಕೇಳ ಲಕುಲೀಯಕೆ (?) ಗುಣಿರೇವಣ (ನೊಳು?) ಸಮನಾರ್ಗ್ಗಳ

೨೫ ಮಾನವನೀ ಧಾತ್ರಿಯೊಳು(ಳ್‌) ಸುರತರುವಿರ್ದ್ದತಾಣ ಹರಿಯಿರ್ದ್ದಮಿತ್ರಾರ್ಣವ ಭಾನುವಿರ್ದ್ದ ಭಾಸುರಗಗನಂ ಮಹಾರತುನವಿರ್ದ್ದ ಸು.

೨೬ ಕೇವಣ ವಿಂದ್ರನಿರ್ದ್ದರೆಂನರ ಸುರರೊಳ್ವಿನೋಲಗಂ ಪಿತಾಮಹನಿರ್ದ್ದ ಮುನೀಂದ್ರ ಸಂಕುಳಂ ವರಗುಣಿಗೋಪನಿರ್ದ್ದನ್ರಿ (ನೃ) ಪಮಂದಿ

೨೭ ರಮೋಪ್ಪುವುದೇನೋ ಕೌತುಕಂ ಅಂಜಿಸುವಂ ಮಚ್ಚೆರವನೆಪುಂಜಿಸುಂವಂ ವಿಮಳಕೀರ್ತಿಯಂ ವಸುಮತಿಯೊಳು ರಂಜಿಸುವವಂ ಬುಧಸ

೨೮ ಭೆಯೊಳು (ಳ್‌) ಸಂಜೀವನ ವಿದ್ದೆಬುದ್ದಿ ಹೆಗ್ಗಡೆಗೋಪಂ (*) ಸತ್ಯದ ಕಣಿ ಸಾಹಿತ್ಯದ ಮೊತ್ತ ಮೊದಲು ವಿನೆಯದಾಗರಂ ತಾನೆನಿಪತ್ಯುತ್ತಮನ ಕೇತ

೨೯ ಮಲ್ಲನ ಪೆತ್ತನು ಮಮದ (?) ಬಿದಿಯ ಜನ್ಮಂ ಸಫಳಂ || ಸ್ವಸ್ತಿ ಸಮಸ್ತ ಪ್ರಸ(ಶ) ಸ್ತಿ ಸಹಿತಂ ಮನುನೀತಿ ಮಾರ್ಗ್ಗರುಂ ಚೌಶಷ್ಟ ಕಳಾಕುಶ

೩೦ ಳರುಂ ಸಕಳ ಗುಣಸಂಪಂನರುಂ ಮಹಾರಾಭಯಭೈಸಜ್ಯುಶಾಸ್ತ್ರದಾನ ವಿನೋದರುಂ ಚತುಸ್ಸಮಯಸಮುದ್ಧರಣರುಂ ಸ (ಶ) ರ

೩೧ ಣಾಗತವಜ್ರಪಂಜರರುಂ ವೈರಿಗಜಕೇಸರಿಗಳುಂ ನಖರ ಮುಖಮಂಡಳರುಂ ನುಡಿದಂತೆ ಗಂಡರುಂ ಪರೋಪಕಾರಪಾರಾಯ

೩೨ ಣರುಂ ಚಾತುರ್ಯ್ಯ ಚತುರಾನನರುಮಪ್ಪ ಶ್ರೀಮದರಸಿಯಕೆಱೆಯ ಸಮಸ್ತ ಪ್ರಜೆಗಾವುಂಡುಗಳುಂ ಹೆಗ್ಗಡೆಗಳುಂ ನೆರದೇಕಸ್ತ

೩೩ ರಾಗಿ ಸ (ಶ) ಕವರಶ(ಷ) ೧೦೯೦ನೆಯ ಸರ್ವ್ವಧಾರಿ ಸಂವತ್ಸರದ ವೈಸಾ(ಶಾ)ಖ ಸು(ಶು)ದ್ಧ ದಸ(ಶ)ಮಿ ಸೋಮವಾರದಂದು ಸ್ವಸ್ತಿ ಯಮನಿಯಮಸ್ವಾ

೩೪ ಧ್ಯಾಯಧ್ಯಾನಧಾರಣಮೋನಾನುಷ್ಠಾಣ ಜಪಸಮಾಧಿಸೀ(ಶೀ)ಲ ಗುಣಸಂಪನ್ನರುಂ ಸಕಳೇಳಾಪಾಳಮೌಳಿಲಾಳಿತ

೩೫ ಚಾರುಚರಣಾರವಿಂದದ್ವಂದ್ವರುಂ ತುಶಾರಹರಹಾಸಾದ (?) ಶ ಕೀರ್ತ್ತಿ ಗಳು ವಿಸ (ಶ)ದ ಯಶೋಮೂರ್ತಿಗಳುಂ ಮಂತ್ರವಾದಿಮ

೩೬ ಖರಧ್ವಜರುಂ ಬ್ರಹ್ಮರಾಕ್ಷಸಭಯಂಕರರುಂ ಸಾಖಿನಿದಿಸಾ(ಸಾ) ಪಟ್ಟರುಂ ಸಿದ್ಧಾಂತಸಿ(ಶಿ) ರೋಮಣಿಗಳು ಮಪ್ಪ ಶ್ರೀ (ಯಾಪನೀಯ)

೩೭ ಂಘಮಡುವಗಣದ ಕುಮಾರಕೀರ್ತಿ ಸಿದ್ದಾಂತದೇವರ ಸಿಷ್ಯ ಪಾರಿಸ್ವ (ಶ್ವ) ಪಂಡಿತರ ಕಾಲಂ ಕರ್ಚ್ಚಿ ಧಾರಾಪೂರ್ವಕಂ ಮಾಡಿಕೊ

೩೮ ಟ್ಟರು (||*) ಚೆಂನಪಾರೀಸ್ವ (ಶ್ವ) ದೇವರ ಚೆರುಗು ನಿವೇದ್ಯಕ್ಕಂ ಖಂಡಱ್ಫು (ಸ್ಫು) ಟಿತ ಜೀರ್ನ್ನೋಧ್ಧಾರಕ್ಕಂ ರಿಷಿಯರಾಹಾರ ದಾನಕ್ಕಂ ಬಿಟ್ಟ

೩೯ ದತ್ತಿ (||*) ಅಂಕಾಚಾರ್ಯಂಕೆಱೆ ಆ ಕಱೆಯ ಕೆಳಗುಳಂ ತೆಪ್ಪಗದ್ದೆ ಮೂಡಲೊಡ್ಡರಹಳ್ಳಿಗೆ ಹೋಹ ಹಿರ್ಯ್ಯ ಹಿರ್ಯ್ಯ ಬಟ್ಟೆಯಂ ಹಡುವಲು

೪೦ ಗಡಿ ಹಡುವಲು ನೊರಡಿಗಡಿ ವಡಗಲು ಮುತ್ತನ ಹೊಸವೂರಿಂಗೆ ಹೋಹ ಹೆಬ್ಬಟ್ಟೆ ಕೊಂಡಗದ ಗೊಂದಿಯ ತೋಂಟ

೪೧ ಗದ್ದೆ ಕಂಮ್ಮ ೩೦ ರಿಂ ಮೂಡಲು ತೋಟದ ಮಣಲಕಡೆಯ ಕಂಮ ೨೫ ಎರಡು ಮನೆಗೆ ತೆಱೆಮಾನ್ಯ ದೇವರ ನಂದಾದೀವೆಗೆಗೆ ಬಿಟ್ಟ

೪೨ ಎತ್ತುಗಾಣವೊಂದು ಕೈಗಾಣವೊಂದು ಪಟ್ಟಣಸಾವಿ ಮಹಾವಡ್ಡಬ್ಯವಹಾರಿ ಎತ್ತಿನ ಶೆಟ್ಟಿಯರು ಮುತ್ತಿನ ಹೊಸವೂರು ಸಾತಗೌಂ

೪೩ ಡನ ಕೊಡಗಿನ ಗದ್ದೆಯಲು ಮಾಱೆಕೊಂಡು ದೇವರಿಗೆ ಬಿಟ್ಟ ತೋಟ ಗದ್ದೆಸಲಗೆ ಮೂಱು ಬೆದ್ದಲೆ ಮತ್ತರೊಂದು ಸಮಸ್ತ

೪೪ ಪ್ರಜಱಸತಂ ಹಡಿವಲ್ಲಿವರಿಷಿ ಪ್ರತಿ ಕುಡುವ ಗದ್ಯಾಣವೊಂದು (೪೫ – ೪೭ ಶಾಪಾಶಯ)

೪೮ ದಕ್ಷಿಣಸೋಮನಮಮ್ಮಂ ಲಾಕ್ಷಣಗವಿ ಶಾಂತಿನಾಥ ಕವಿಕುಳ ತಿಳಕಂ ದಾಕ್ಷಿಣ್ಯನಿಧಿಗುಣೋತ್ಕರ ಶಿ

೪೯ ಕ್ಷಾರಗುರು ಪೇಳ್ದನರ್ತಿಯಿಂ ನಾ(ಶಾ) ನನಮಂ ಪೊಂನಾಗವ್ರಿಕ್ಷ ಮೂಲಗಣ (ಯಾಪನೀಯ) ಸಂಘದ ಗುಡ್ಡ ಮಹಾವಡ್ಡಬ್ಯಬಹಾ

೫೦ ರಿ ವಚನಮಾಣಿಕ ಶೆಟ್ಟಿಯರು ಪ್ರಥುಮೆಯಮಾಡಿಸಿ ಪ್ರತಿಷ್ಠೆಯಂ ಮಾಡಿಸಿ ಕೊಟ್ಟ || ಸಾ(ಶಾ)ಂತರಸ ಸ್ವಭಾವ ಪರಿಣಾಮರಸ

೫೧ ಂ ರಸಪ್ತ್ರ ಭಾವಮಂ ಸಂತತವೀಳಿಗಂತ ವರಮನಂತ ಸಮುದ್ರದಿವೇಷ್ಟಿಸಿರ್ದ್ದ ಭೂಕಾಂತೆಗೆನಿತ್ಯ ಶೋಭನ ಸುಭೋದಯಮಾ

೫೨ ಗೆ ಕುಮಾರಕೀರ್ತ್ತಿ ಸಿದ್ದಾಂತ ಮುನೀಂದ್ರನೀ ಧರೆಗೆ ತಾ ಕುಟಿಳೇಂದು ವಿನಂತಿ ರೊಪ್ಪುವಂ || ಪರಿಹಿತನೆಂದು ಸಚ್ಚರಿತನೆಂದುದಯಾ

೫೩ ಪರನೆಂದು ಮೇರು ಭೂಧರ ನಿಜ ಧೈರ್ಯನೆಂದು ಜಿನಧರ್ಮ್‌ಸುನಿರ್ಮ್ಮಳನೆಂದು ವಾದಿಪಂಕರುಹಜನೆಂದು ಶಿಷ್ಠಜನತಾ ಮುನಿಪೂಜಿತನೆಂದು

೫೪ ನಲುಮೆಯಿಂ ಧರೆಹೊಗಳುತ್ತ ವಿಪ್ಪುದು ಕುಮಾರಸುಕೀರ್ತ್ತಿಯನು ದ್ಘಕೀರ್ತಿಯಂ || ಕಾಳಾಮುಖ ಪ್ರತಿಬದ್ಧ

೫೫ ಶ್ರೀ ಗುಣನಿಧಿಯೆಂದು ಧೈರ್ಯನಿಧಿ ಕಳಾನಿಧಿಯೆಂದು ಪದಜಿಕ್ಷಣ ನಿಧಿಯೆಂದು ಸತ್ಯ ನಿಧಿಯೆಂದು

೫೬ ದಯಾ ನಿಧಿಯೆಂದು ವಿಶ್ವಭೂಷಣನಿಧಿಯೆಂದು ಮೂರ್ತಿನಿಧಿಯೆಂದು ಯಶೋನಿಧಿಯೆಂದು ಕೀರ್ತ್ತಿಕುಂ ಪ್ರ

೫೭ ಶಾಂತ ಚರಿತ್ರನಂ ವಸುಧೆಕೇಳವನಂ ದ್ವಿಜವಂಸ (ಶ) ಸೇವ್ಯನಂ || ಶ್ರೀಮತು ಹಿರಿಯ ಭಂಡಾರಿ ಕೇಶವದೇವ ದೇವಿಂಗೆಱೆಯ ಮೂ

೫೪ ಡಣತುಂಬಿಂ ಹಡುವಲುಯೇರಿಯ ಮೊದಲ ಪಾರಿಶ್ವದೇವರ ಚರುವಿಂಗೆ ಕೊಟ್ಟ ಗದ್ದೆ ಖಂಡುಗ ೧ ಕೊ ೧.

೧೯. ಅದೇ ಶಾಸನಶಿಲೆಯ ಎಡಭಾಗದಲ್ಲಿ ಇರುವ ಶಾಸನ

೦೧ ಶ್ರೀ ಸ್ವಸ್ತಿಸಮಸ್ತ ದನುಜ ಮನುಜ

೦೨ ವಿಕಟಮಕುಟ ಕೂಟಕೋಟಿ ಶೋಣಾಶ್ಮಿರ

೦೩ ಶ್ಮಿ ಪುಂಜರಂಜಿತಂ ಭವನೀಧವ ಚಳನವಳಿ

೦೪ ನ ಮಂನ್ದ ಮಕರನ್ದ ಶಿಳೀ ಮುಖನುಂ ಚಾ

೦೫ ತುರ್ಯ್ಯ ಚತುರ್ಮ್ಮುಖನುಂ ಶಬ್ದವಿದ್ಯಾ

೦೬ ವಿಶಾರದನುಂ ಪರವಾದಿಮರಾಳನೀ

೦೭ ರದನುಂ ನಿರೀಕ್ಷಣಮಾತ್ರ ನಿರ್ದ್ದಳಿತಾಕ್ಷ

೦೮ ಪಾದನುಂ ಸಂಭಾಷಣ ಮಾತ್ರ ನಿರಾಶ್ರಿತ

೦೯ ಕಣಾದನುಂ ದ್ವಾಸಪ್ತತಿನಿಯೋಗ ಯೋಗಂ

೧೦ ಧರನುಂ ಕಂಬುಕಂಧರನುಂ ಸಾಹಿತ್ಯ ನಿಧಿ ನಿ

೧೧ ಧಾರನುಂ ಮಹಾಪ್ರಧಾನನುಂ ಮ

೧೨ ಪ್ಪ ಶ್ರೀಮಚ್ಚಂದ್ರಮೌಳಿಯಣ್ಣಂಗ

೧೩ ಳು ಅರಸಿಯಕೆಱೆಯ ಕೆಱೆಯ

೧೪ ನಖರ ಜಿನಾಲಯ ಖಂಡಸ್ಫು

೧೫ ತ ಜೇರ್ನ್ನೋದ್ಧಾರಕ್ಕೆ ನಖರಂಗಳಾಧೀ

೧೬ ನಂ ಮಾಡಿಕೊಟ್ಟಕ್ಷಯದಾನಂ ಗ ೧೦ (||*) ಅ

೧೭ ದನಾಚಂದ್ರರ್ಕ್ಕತಾರಂಬರಂ ನಡಸು

೧೮ ವದು || ಶ್ರೀ ಯಾಪನೀಯ ಸಂಘ

೧೯ ಶ್ರೀ ಪಟ್ಟಣಸ್ವಾಮಿ ಸೋಮ

೨೦ ಯ್ಯ ಕೊಟ್ಟಂ ಗದ್ಯಾಣ

೨೧ ಮಂ ೩ || ಪ್ರಸಂನ ಕೇತಿ

೨೨ ಸೆಟಿಯರು ಕೊಟ್ಟಗ

೨೩ ದ್ಯಾಣ ೨… (?) (||*)

೨೪ ಗೋವಿಂ(ದ) ದೇವ

೨೫ ನಮಗ ನಾಗ

೨೬ ಯ ಕೊಟ(ಟ್ಟ) ೧ (||*)

 

೨೦. ಗರಗ ಶಾಸನ
(ಸೌಇಇ. ೧೫. ಸಂಖ್ಯೆ. ೬೧೦. ಕ್ರಿ. ಶ. ೧೨೩೦. ಗರಗ)

೦೧ ಶ್ರೀ ಯಾಪನೀಯ ಸ()ಘ ಕುಂಮ

೦೨ ಡಿಗಣದೆ ಆಚಾರ್ಯ್ಯ ಕಾಂತಿ

೦೩ ವೀರದೇವರು ವಿಕ್ರುತಾಂ ಸೆಂತ್ಸರದ

೦೪ ಸ್ರಾವಣ ಮಾಸದಲಿ ಬಹಳ ಚವು

೦೫ ತಿ ಬ್ರಿಸ್ಪೆತಿವಾರದಲ್ಲಿ ಸಮಾಧಿ

೦೬ ಯಿಂ ಮುಡಿಪಿ ಮೋಕ್ಷಪದವ(ಂ) –

೦೭ ನೆಯ್ದಿದೆರು ಮಂಗಳ ಮಹಾಶ್ರೀ

 

೨೧. ಗರಗ ಶಾಸನ
(ಸೌಇಇ. ೧೫. ಸಂಖ್ಯೆ. ೬೧೮. ಸು. ೧೩ ಶ. ಗರಗ)

೦೧ ಶ್ರೀ ಯಾಪನೀಯ ಸ()ಘ ಕು

೦೨ ಮುಡಿಗಣದೆ ಬೆಳಿದಿಗೆ(ಯಿ)

 

೨೨. ಬಾಡ್ಲಿ ಶಾಸನ
(ಕಇ. ಸಂಪುಟ. ೧. ಸಂಖ್ಯೆ. ೩೨. ಕ್ರಿ. ಶ. ೧೨೧೯. ಬಾಡ್ಲಿ)

೦೧ *ಶ್ರೀಮತ್ಪರಮ ಗಂಭೀರಸ್ಯಾದಾಮೋಘಲಾಂಛನಂ (|*) ಜೀಯಾತ್ತ್ರೈಲೋಕ್ಯ ನಾಥಸ್ಯ ಶಾಸನಂ ಜಿ…

೦೨ ನ್ವಯದಿಂ ಬಂದೀ ವಿಶ್ರುತ ಯಾಪನೀಯ ಸಂಘದೊಳೆ(ಶೆವಂ) ಭಾವಿಸೆ

೦೩ ರೆಯಗಣವುಂ || ಅನ್ತಾ ಕಾರೆಯಗಣದೊಳತಿ ಪ್ರಸಿದ್ಧರುಂ ಮಹಾಪ್ರಬುದ್ಧ…

೦೪ ನ ಶಾಸನರುಂ ಸಕಳ ಶಾಸ್ತ್ರ ವಿಚಕ್ಷಣರುಮೆನಿಸಿ ನೆಗಳ್ದ ಮಹಾ ಮಂಡಳಾಚಾರ್ಯ…

೦೫ ತಪೋ ಮಂಡನರೆಸೆವ ಮಾಧವಭಟ್ಟಾರಕ ನಾಮ… ರಲಿಂ ಬಳಿಕಂ… ದ್ವಿ ನಯದೇವರವ(ರಿಂ) ಬಳಿಕಂ || ಗು(ಣಿ)

೦೬ ಳಿಕಂ ಪ್ರಣುತ ತಪೋಧನರಂ ಧಾರಿಣಿಪೊಗಳ್ಗುಂ… ನ್ತೀ ಕೀರ್ತ್ತಿ ಭಟ್ಟಾರಕರಂ || ಅಲ್ಲಿಂ ಬಳಿಕ ವೆಸೆದರ್ನ್ನೆಲ್ಲಿಯ…

೦೭ ದ್ದಾನ್ತಕೋವಿದರ್ಜ್ಜಿನ ದೇವರುಂ || ಶ್ರೀ ವಿಬ್ರಾಜಿತ ಯಾಪನೀಯವರ ಸಂಘಾಂಭೋಜಿನೀಭಾಸ್ಕ

೦೮ ಚಾರಶ್ರೀಕನ (ಕ) ಪ್ರಭ ಬ್ರತಿಸುತರ್ಯೋಗೀಶ್ವರಂ ಶ್ರೀಧರ ತ್ರೈವಿದ್ಯರ್ಕೃತ ವಿದ್ಯ…

೦೯ ತಕ್ಕವೀಂದ್ರ ಕಳ್ಪದ್ರುಮಸ್ಸುಕೀರ್ತ್ತಿ ನಿಧಾನರ್ಭ್ಭುವನಸ್ತುತರನುಪಮ…

೧೦ ರೆ ನಿನಗಂಭೋಜಾರಿಯೊಳು ನಣ್ಪು ನಿಲ್ವನೆ ಮಂದಾನಿಳ (ನಿಂದು) ವಿಗ್ರಹದೊಳು

೧೧ ತಿಪ ರಾದ್ಧಾಂತೇಶವಾರ್ದ್ಧಿಸ್ಥನಂ || ಭೂಪಾ… ನಿಸಿದಾಚಾಯ್ಯಾವಳಿಯಿಂ…

೧೨ ಯಂ || ಪೆಱತೇಂ ನನ್ನಿ ನೃಪಂಗೆ ಕತ್ತಮರಸಂ ಶ್ರೀಕತ್ತನೋರ್ವ್ವೀಧರಂ ಗೆಱೆಯ…

೧೩ ಪಗೆ ತಾನೆಱೆಸಂದಾತ್ಮ ಜನಾದನುರ್ವ್ವಿ ಪೊಗಳಲು ಭೂಪೋತ್ತಮಂ ಕತ್ತ…

೧೪ ರ್ತ್ಥಿಗೆ ಗಂಡರ ತೀರ್ತ್ಥವಾಜಿರಂಗಾರ್ತ್ಥಿಗೆ ಮೃತ್ತು ಮೂರ್ತ್ತಿಶ…

೧೫ ರಾರ್ತ್ಥನಿಧಿ ಱಟ್ಟಕುಲೋದ್ಭವ ಲಕ್ಷ್ಮಭೂಭುಜಂ || ಎ…

೧೬ ಅಬಳರನಭಿರಕ್ಷಿಸುವಂ ಪ್ರಬಳರ ನಱೆ (ಯ)….

೧೭ ದ ಮುನಿಚಂದ್ರ ದೇವನೂರ್ಜ್ಜಿತ ಪುಣ್ಯಂ ಕ(ಲಿ)…

೧೮ ವಾಸಸಹಿತಂ ಶ್ರೀಮನ್ಮಹಾಮಂಡ…

೧೯ ೧೧೪೧ ನೆಯ ಪ್ರಮಾಥಿಸಂವ(ತ್ಸ)

೨೦ ದೇವರು ತಮ್ಮ ಹೊಸ….

೨೧ ಕಂ ಅಭಿನಂದನ ಸಿದ್ದಾ.

೨೨ * ಪನ್ನಿರ್ವ್ವ ಬ್ಬ್ರಾ…

೨೩ ….