‘ಹೂಂ ವಾಂಟ್ಸ್ ಡೆಮಾಕ್ರಸಿ’ಯನ್ನು ನನ್ನ ಮೊದಲ ತುಸು ಶ್ರಮಭರಿತ ಕೃತಿಯಾದ ಇಂಡಿಯಾ: ಲಿವಿಂಗ್ ವಿಥ್ ಮಾಡರ್ನಿಟಿ ನಂತರ ಆರಾಮದಲ್ಲಿ ತೊಡಗಿಸಿಕೊಂಡೆ. ನಾನಾವಾಗ ಸಿ ಎಸ್ ಡಿ ಎಸ್ ನಲ್ಲಿ ಸಂದರ್ಶಕ ಫೆಲೋ ಆಗಿದ್ದೆ. ೧೯೯೬ರ ಸಂಸದೀಯ ಚುನಾವಣೆ ಕುರಿತು ವಿವಿಧ ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಅಂಕಿ ಅಂಶಗಳಿಂದ ಸಹೋದ್ಯೋಗಿಗಳು ಕುತೂಹಲಭರಿತರಾದರು. ಪ್ರಮುಖ ರಾಜಕೀಯ ವಿಜ್ಞಾನಿಗಳು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಇದರಲ್ಲಿ ತಲ್ಲೀನನಾದೆ. ಹಾಗಾಗಿ ಈ ಅಂಕಿಅಂಶಗಳತ್ತ ಸೂಕ್ಷವಾಗಿ ಕಣ್ಣು ಹಾಯಿಸಿದೆ. ಆಗ ‘ಭಾರತ ಪ್ರಜಾಪ್ರಭುತ್ವ’ದ ಒಂದು ಹೊಸ ಚಿತ್ರಣ ರೂಪು ಪಡೆಯಲು ಪ್ರಾರಂಭಿಸಿತು. ಇದು ಜನರು ಹೇಳುವುದಕ್ಕಿಂತ ಮತ್ತು ನಾನು ಈ ಹಿಂದೆ ಕೇಳಿದ್ದಕ್ಕಿಂತ ಭಿನ್ನವಾಗಿದ್ದು ಭಾರತದ ಪ್ರಜಾಪ್ರಭುತ್ವ ಬಗೆಗೆ ಪಾಠ ಮಾಡಿದ್ದಕ್ಕಿಂತಲೂ ಬಹಳ ವಿಭಿನ್ನವಾಗಿತ್ತು. ಈ ಚಿತ್ರಣ ನನಗೆ ಗೊಂದಲದ ಜೊತೆಗೆ ಆಸಕ್ತಿ ಮೂಡಿಸಿತ್ತು. ಗೊಂದಲ ಯಾಕೆಂದರೆ ಪ್ರಜಾಪ್ರಭುತ್ವದ ಮುಂದಾಳುಗಳೆಂದು ಕಲ್ಪಿಸಲ್ಪಟ್ಟ ಸಾಮಾಜಿಕ ಸ್ತರಗಳು ಈ ಪ್ರಕ್ರಿಯೆಯಿಂದ ದೂರ ಹೋಗುತ್ತಿದ್ದರೆ. ಪ್ರಜಾಸತ್ತೆಯ ಅವಶ್ಯಕತೆಗಳ ಗ್ರಹಿಕೆಯನ್ನರಿಯಲು ಅಸಮರ್ಥರೆಂದೆನಿಸಿದವರು ಪ್ರಜಾಸತ್ತೆಯ ಜ್ಞಾನಕ್ಕಾಗಿಯಾದರೂ ಇದರ ಪ್ರತಿಪಾದನೆಗೆ ಒಗ್ಗೂಡುತ್ತಿದ್ದರು. ಬಹಳ ದಿನಗಳಿಂದ ಒಬ್ಬ ಕಮ್ಯೂನಿಸ್ಟನಾದ ನನಗೆ ಇದು ಆಸಕ್ತಿಯೆನಿಸಿತು.

ಈ ಬಗೆಯ ಹೊಳಹುಗಳಿಂದಾಗಿ ನಾನು ಇದರಲ್ಲಿ ತೊಡಗಿಸಿಕೊಂಡೆ. ಇದು ಇನ್ನಷ್ಟು ವಿಸ್ತರಿಸಿತು. ಇದೇ ಸಮಯ ನಾನು ಕಡ್ಡಾಯ ನಿವೃತ್ತಿ ಪಡೆಯಲು ಶಿಮ್ಲಾಕ್ಕೆ ಹೋದಾಗ ಮಿತ್ರ ಗ್ಯಾನ್ ಪಾಂಡೆ ಅಲ್ಲಿ ಜೊತೆಯಾಗಿ ನನ್ನ ಬರವಣಿಗೆಯನ್ನು ಓದಿ ಇದರಲ್ಲಿನ ಸಬಾಲ್ಟರ್ನ್ ಉಪಸ್ಥಿತಿಯ ಅಂಶದಿಂದ ಪ್ರೇರಿತನಾಗಿ ಪುಸ್ತಕ ರೂಪದಲ್ಲಿ ತರುವಂತೆ ಕೋರಿದ. ಆದರೆ ಮಧ್ಯೆ ಕೆಲವು ಬೆಳವಣಿಗೆಗಳಿಂದ ತೊಡಕಾಯಿತು. ನನ್ನ ಅಧ್ಯಯನ ವಿಷಯ ಭಾರತದ ಪ್ರಜಾಪ್ರಭುತ್ವ ಬಹಳ ನಾಜೂಕಿನಂತಾದವು. ಒಂದರ ನಂತರ ಒಂದು ಸರಕಾರ ಉರುಳತೊಡಗಿದವು. ಹೀಗಾಗಿ ೧೯೯೮ ಮತ್ತು ಪುನಃ ೧೯೯೯ರಲ್ಲಿ ಚುನಾವಣೆಗಳು ನಡೆದವು. ಇವುಗಳ ಬಿಸಿ ಆರುವವರೆಗೆ ಕಾದೆ. ೨೦೦೦ದ ಕೊನೆಗೆ ತೊಡಗಿಸಿಕೊಂಡರೂ ೨೦೦೧ರ ಜನವರಿಯಲ್ಲಿ ಹೊಸ ಹುದ್ದೆಯಿಂದಾಗಿ ಇದು ಮುಂದೂಡಲ್ಪಟ್ಟಿತು.

ಭಾರತದ ಪ್ರಜಾಪ್ರಭುತ್ವದೆಡೆಗಿನ ಮನೋಭಾವ ಮತ್ತು ಬದ್ಧತೆ ಕುರಿತಂತೆ ಸಮಾಜದ ಎಲೀಟು ಮತ್ತು ಆಳಿಸಿಕೊಳ್ಳುವವರ ಮಧ್ಯದ ಭಿನ್ನತೆಯೇ ಈ ಸಮೀಕ್ಷೆಯ ಮಾಹಿತಿಯ ಮುಖ್ಯ ತಿರುಳು, ಸಂಕಷ್ಟದಲ್ಲಿರುವ, ಜೀವನಕ್ಕೆ ಬೇಕಾದ ಮೂಲ ಸೌಲಭ್ಯಗಳ ಕೊರತೆಯನ್ನು ಅನುಭವಿಸುವ, ಯಾವುದೇ ಬೆಂಬಲ ಆಧಾರವಿಲ್ಲದೆ ಭೂಮಿಯತ್ತ ನೋಡುವ ಈ ಆಳಿಸಿಕೊಳ್ಳುವವರು ಪ್ರಜಾಪ್ರಭುತ್ವದ ಶಕ್ತಿಯ ಮೂಲಾಧಾರ ಹೇಗಾಗುತ್ತಾರೆ ಎನ್ನುವುದೇ ಈ ವಾದದ ಮುಖ್ಯ ವಿಷಯವಸ್ತು. ಜನರ ಬಡತನವನ್ನು ಹೋಗಲಾಡಿಸಲು ತೀವ್ರ ಆಸಕ್ತಿ ವಹಿಸಿದ, ಅನಕ್ಷರತೆ, ಅನಾರೋಗ್ಯ, ಸೂರು ಮುಂತಾದ ಅವಕಾಶಗಳ ಕೊರತೆಯ ಮಧ್ಯೆ ಒಂದರ ಮೇಲೊಂದು ಸರಕಾರಗಳ ಆಳ್ವಿಕೆಗೆ ಸಾರ್ವಜನಿಕವಾಗಿ ಸ್ಥಳಾವಕಾಶವನ್ನು ಇವು ಹೇಗೆ ಒದಗಿಸಿತೆಂಬುದೇ ಮುಖ್ಯ ಪ್ರಶ್ನೆಯಾಗಿದೆ. ಇಂಥವುಗಳ ವಿರೋಧಾಭಾಸವನ್ನು ಈ ಪುಸ್ತಕ ಅನಾವರಣಗೊಳಿಸುತ್ತದೆ. ಇಲ್ಲಿಯೇ ಭಾರತದ ಪ್ರಜಾಸತ್ತೆಯ ಸಮಸ್ಯೆ ಅಡಗಿದೆ. ಅಸ್ಥಿರತೆ, ದುರ್ಬಲ ಆಡಳಿತ, ಭ್ರಷ್ಟಾಚಾರ, ನೀತಿ ನಡಾವಳಿಗೆ ಮನ್ನಣೆ ನೀಡದಿರುವಂತ ನಮ್ಮ ಪ್ರಜಾಪ್ರಭುತ್ವದ ಸಮಸ್ಯೆಗಳ ಕಾಳಜಿ ಬದಲು (ಬಹಳ ಮುಖ್ಯವಾಗಿ ವಿಶಿಷ್ಟ ಸ್ವರೂಪದ ಅಸಮಾನತೆಯ) ಕಠಿಣ ಪ್ರಜಾಸತ್ತೆ ತಲೆಕೆಡಿಸಿಕೊಳ್ಳಬೇಕಿದೆ. ಎಲ್ಲ ವರ್ಗ ಸಮಾಜಗಳಲ್ಲೂ ತಾತ್ವಿಕವಾದ ಅಸಮಾನತೆಯಿದ್ದು ಇವು ರಾಜಕೀಯ ಆಡಳಿತ ಸಾಮಾಜಿಕ ತಳಹದಿಯೆನಿಸಿದೆ. ಆದರೆ ಈ ಅಸಮಾತೆಗಳು ನಾಜೂಕಿನ ಏಣಿಶ್ರೇಣಿಗಳನ್ನಾಧರಿಸಿದೆ. ಜಾತಿಯಾಧಾರದ ಮೇಲೆ ನೆಲೆನಿಂತಿರುವ ಭಾರತದ ಅಸಮಾನತೆ ಅನಮ್ಯದ ತೊಂದರೆಯನ್ನೆದುರಿಸುತ್ತಿದೆ. ಅದು ಕೇವಲ ಆರ್ಥಿಕ ಭಿನ್ನತೆಯಲ್ಲ. ಇವು ಆಳಿಸಿಕೊಳ್ಳವರಿಗೆ ಆಹಾರದ ಹಕ್ಕುದಾರಿಕೆ ಮತ್ತು ಉತ್ಪಾದನಾ ಪ್ರಕ್ರಿಯೆಯ ತಜ್ಞತೆಯಲ್ಲಿ ಹೊಂದಿರುವ ಸ್ಥಾನಮಾನವನ್ನಾಧರಿಸಿದೆ. ದೈಹಿಕ ಶ್ರಮದಲ್ಲಿ ನಿರತರಾಗಿರುವವರ ಮಧ್ಯೆ ಅದು ಆಚರಣಾವಾದಿ ಮೈಲಿಗೆ ಕ್ರಮಾಂಕವನ್ನು ಉಂಟುಮಾಡಿತ್ತು. ಇವು ಸಾಂಪ್ರದಾಯಿಕ ಊಳಿಗ ತಳಹದಿಯ ಜೊತೆ ಗ್ರಂಥಸ್ಥವಾದ ಪಾವಿತ್ರತೆಯ ಅನುಮೋದನೆ ಹೊಂದಿದೆ.

ಈ ಅನುವಂಶೀಯ ಏಣಿ ಶ್ರೇಣಿ ಮತ್ತು ಅಸಮಾನತೆಗಳು ಪ್ರಜಾಸತ್ತಾತ್ಮಕ ನ್ಯಾಯದ ಪ್ರತಿ ತಾತ್ವಿಕತೆಯನ್ನು ಮತ್ತು ಸಭ್ಯತೆಯನ್ನು ಅವಗಣನೆ ಮಾಡುತ್ತದೆ. ಹಾಗಾಗಿ ಭಾರತದಲ್ಲಿ ಪ್ರಜಾಸತ್ತೆ ಕೇವಲ ಹಂಚುವಿಕೆ ಅಥವಾ ಅಧಿಕಾರ ಚಲಾವಣಾ ವಿಧಾನ ಮಾತ್ರವಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತಿಸುವಿಕೆಗೆ ಸಾಧನ ಮತ್ತು ಇದಕ್ಕೆ ಅಡ್ಡಿಪಡಿಸುವ ವಿಧಾನಗಳನ್ನು ತಡೆಹಿಡಿಯಲು ಅಧಿಕಾರ ಉಪಯೋಗವಾಗಿದೆ. ಹಾಗಾಗಿ ಈ ವಂಚಿತರು ಯಾಕೆ ಪ್ರಜಾಪ್ರಭುತ್ವ ಪ್ರತಿಪಾದಕರಾಗುತ್ತಾರೆಂಬುದರ ವಿರೋಧಾಭಾಸವನ್ನು ಅರ್ಥೈಸಬೇಕಿದೆ. ಅವರ ಸಬಲೀಕರಣದ ತಿಳುವಳಿಕೆ ಮತ್ತದರ ಸಂಬಂದಿಸಿದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಇವನ್ನು ಹಿಡಿದಿಡಬೇಕು. ನಾಗರಿಕತೆ ನಿರ್ಮಾಣ, ಅಲ್ಪಸಂಖ್ಯಾತರ ಧೋರಣೆಗಳ ರೂಪುಗೊಳ್ಳುವಿಕೆ ಮತ್ತು ರಾಷ್ಟ್ರ ರೂಪುಗೊಳ್ಳುವಿಕೆಯ ವಿವಿಧ ಆಯಾಮಗಳ ಪ್ರಜಾಸತ್ತೆಯ ಕಾರ‍್ಯಕ್ಷಮತೆಯನ್ನು ನೋಡಬೇಕಿದೆ. ಕೊನೆಯದಾಗಿ ಪ್ರಜಾಸತ್ತಾತ್ಮಕ ಆಂದೋಲನಗಳು ಹೇಗೆ ಉಂಟಾಗುತ್ತದೆ ಮತ್ತು ವಿಸ್ತೃತ ಸಮಾಜಕ್ಕೆ ಇದು ಏನನ್ನು ಸೂಚಿಸುತ್ತದೆ ಎಂಬುದರತ್ತ ಗಮನ ನೀಡಬೇಕಿದೆ.

ಈ ಮಾಹಿತಿ ಮತ್ತದರ ತಥ್ಯಗಳನ್ನು ೧೯೯೬ರ ರಾಷ್ಟ್ರೀಯ ಚುನಾವಣಾ ಆಧ್ಯಯನ ಸಮೀಕ್ಷೆಯಿಂದ ಪಡೆಯಲಾಗಿದ್ದು ಸುಮಾರು ೧೫,೦೧೫ ನಮೂನೆಯನ್ನು ಕೆಳಗಿನಂತೆ ರೂಪಿಸಲಾಗಿದೆ. ಜಮ್ಮು ಕಾಶ್ಮೀರ ಹೊರತುಪಡಿಸಿ ೫೩೭ ಸಂಸದೀಯ ಮತಕ್ಷೇತ್ರಗಳಲ್ಲಿ ಒಟ್ಟು ೧೦೮ ಮತಕ್ಷೇತ್ರಗಳನ್ನು ಆರಿಸಲಾಗಿದೆ. ಪ್ರತಿ ಎರಡು ಅಸೆಂಬ್ಲಿ ಕ್ಷೇತ್ರಗಳಲ್ಲಿ ಆರಿಸಲಾಗಿದೆ. ಪ್ರತಿ ೨೧೬ ಅಸೆಂಬ್ಲಿ ಕ್ಷೇತ್ರಗಳಿಂದ ೨ ಮತಗಟ್ಟೆ ಬೂತುಗಳನ್ನು ಆರಿಸಲಾಗಿದೆ. ಅಂದರೆ ಒಟ್ಟು ೪೩೨ ಬೂತುಗಳು. ಪ್ರತಿ ರಾಜ್ಯಗಳಿಂದ ಸಮ ಪ್ರಮಾಣದಲ್ಲಿ ನಿಗದಿತ ಸಂಖ್ಯೆಯ ವಕ್ತೃಗಳನ್ನು ಇತ್ತೀಚಿನ ಮತದಾರ ಯಾದಿಯಿಂದ ಆರಿಸಲಾಗಿದೆ. ಈ ನಮೂನೆಯಲ್ಲಿ ಒಟ್ಟು ೯,೬೧೪ ಸಂದರ್ಶನಗಳನ್ನು ಪೂರ್ಣಗೊಳಿಸಲಾಯಿತು. ಈ ಸಂದರ್ಶನಗಳಿಂದ ಎಲ್ಲ ಅಂಕಿ ಅಂಶಗಳನ್ನು ಪಡೆಯಲಾಯಿತು, ಅಗತ್ಯ ವಿವರಣೆ ಮತ್ತು ಹೋಲಿಕೆಗೆ ೧೯೭೧ರ ಸಮೀಕ್ಷೆಯ ನೆರವು ಪಡೆಯಲಾಗಿದೆ.

ಇದೇ ನಮೂನೆಯನ್ನು ೧೯೯೮ ಮತ್ತು ೧೯೯೯ರ ಸಂಸದೀಯ ಹಾಗೂ ಬೇರೆ ಬೇರೆ ಅಸೆಂಬ್ಲಿ ಚುನಾವಣೆಗೆ ಬಳಸಲಾಗಿದೆ. ೧೯೯೬ರ ಮೂಲ ಸಮೀಕ್ಷೆಯನ್ನು ಉಪಯೋಗಿಸಲಾಗಿದೆ ವಿನಾ ನಂತರದವನ್ನಲ್ಲ. ಇದಕ್ಕೆ ಎರಡು ಕಾರಣಗಳಿವೆ. ೧. ೧೯೯೬ರ ಸಮೀಕ್ಷೆ ಚಿತ್ರಣ ಇನ್ನಿತರದಕ್ಕೆ ಹೋಲಿಸಿದಾಗ ಯಾವುದೇ ಅರ್ಥಪೂರ್ಣ ರೀತಿಯಲ್ಲಿ ಬದಲಾವಣೆಯಾಗುವುದಿಲ್ಲ. ಕೇವಲ ಪ್ರಮುಖವಲ್ಲದ ಭಿನ್ನತೆಗಳನ್ನು ಗಮನಿಸಲಾಗಿದೆ. ೨. ೧೯೯೬ರ ಸಮೀಕ್ಷೆ ಅಂಕಿ ಅಂಶಗಳ ಬಳಕೆಯಿಂದ ಬಿಜೆಪಿ ಬೆಂಬಲ ನೆಲೆಯನ್ನು ಕಾಂಗ್ರೆಸ್ ನಂಥ ಇತರ ಪಕ್ಷಗಳ ನೆಲೆಯ ಉತ್ತಮ ತುಲನೆಗೆ ಸಹಕಾರಿಯಾಗಿದೆ. ಶಿವಸೇನೆ ಹೊರತುಪಡಿಸಿ ಇನ್ನಿತರ ಯಾವುದೇ ಮೈತ್ರಿ ಜೊತೆ ಹೊಂದಾಣಿಕೆಯಿಲ್ಲದೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿರುವುದರಿಂದ ೧೯೯೬ರ ಸಮೀಕ್ಷೆ ಪ್ರಮುಖವೆನಿಸಿದೆ. ೧೯೯೮ ಮತ್ತು ೧೯೯೯ರಲ್ಲಿ ಬಿಜೆಪಿ ಇತರ ಚುನಾವಣಾ ಪೂರ್ವ ಮೈತ್ರಿ ಜೊತೆ ಹೊಂದಾಣಿಕೆ ನಡೆಸಿ ಸ್ಪರ್ಧಿಸಿದ್ದು ಈ ಮೈತ್ರಿ ಸಂಖ್ಯೆ ಎರಡೂ ಚುನಾವಣೆಗಳಲ್ಲಿ ೧೩ರಿಂದ ೨೪ರಷ್ಟಾಗಿತ್ತು. ಬಿಜೆಪಿಯ ಅಂಕಿ ಅಂಶಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಲು ಸಾಧ್ಯತೆಯಿದ್ದರೂ ರಾಜಕೀಯವಾಗಿ ಇದು ಒಳ್ಳೆಯ ಕೆಲಸವಾಗದು. ಯಾಕೆಂದರೆ ಒಂದು ಪಕ್ಷದ ಮೈತ್ರಿಗಳ ಮತದಾರರ ಆಯ್ಕೆಯನ್ನು ಪ್ರಭಾವ ಬೀರುವ ಮಾದರಿಯು ಹತ್ತಿರದ ಬೆಂಬಲ ಗುಂಪುಗಳನ್ನು ಪ್ರಭಾವಿಸುತ್ತವೆ. ಈ ಮಾಹಿತಿಯ ನಿಖರತೆ ಮತ್ತು ಕರಾರುತನಕ್ಕೆ ಅಂಕಿ ಅಂಶಗಳನ್ನು ಹೊರತುಪಡಿಸಿದ ಕೆಲವು ತಡೆ ಅಂಶಗಳನ್ನು ಉಪಯೋಗಿಸಲಾಗಿದೆ. ಉದಾಹರಣೆಗೆ ವಿಭಿನ್ನ ರಾಜಕೀಯ ಪಕ್ಷಗಳಿಗೆ ಬಡವರು ಬೆಂಬಲ ನೀಡುತ್ತಾರೆಂದಾಗ ಒಂದು ನಿರ್ದಿಷ್ಟ ಚಿತ್ರಣ ದೊರೆಯುತ್ತದೆ. ಇದನ್ನು ಪರೀಕ್ಷಿಸಲು, ಅನಕ್ಷರಸ್ಥರ ಜೊತೆ ಹೋಲಿಸಿದಾಗ ಎರಡಕ್ಕೂ ಒಂದೇ ತೆರನಾದ ಬಲವಾದ ಅಂಶಗಳನ್ನು ನೀಡುತ್ತವೆ. ಪರ್ಯಾಯವಾಗಿ ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಬೆಂಬಲ ನೆಲೆಗಳತ್ತ ಕಣ್ಣುಹಾಯಿಸಿದರೆ ವಿಭಿನ್ನ ಸಾಮಾಜಿಕ ವರ್ಗಗಳಲ್ಲಿ ಸಂಪೂರ್ಣವಾಗಿ ಒಂದು ವಿಭಿನ್ನ ಬೆಂಬಲದ ಚಿತ್ರಣ ಕಾಣುವುದು. ನನ್ನ ಪ್ರಕಾರ ಮಾಹಿತಿ ನಿಖರತೆಯ ಪರಿವೀಕ್ಷಣೆಗೆ ಇದೊಂದು ಉತ್ತಮ ರಾಜಕೀಯ ದಾರಿ. ಏಕೆಂದರೆ ಬಡವರು ಮತ್ತು ಅನಕ್ಷರರಸ್ಥರು ಹೆಚ್ಚು ಕಡಿಮೆ ಒಂದಕ್ಕೊಂದು ಹತ್ತಿರವಿದ್ದಂತೆ ಇದ್ದರೆ ಬಿಜೆಪಿ ಮತ್ತು ಸಿಪಿಐ(ಎಂ) ವಿಭಿನ್ನ ವರ್ಗ ನಿಲುವುಗಳನ್ನು ಪ್ರತಿನಿಧಿಸುತ್ತದೆ.