ಭಾರತದಲ್ಲಿ ಪ್ರಜಾಪ್ರಭುತ್ವದ ಆರಂಭ ಒಂದು ಒಪ್ಪಂದದ ಫಲ. ಎಲೀಟು, ಸಫಲ ಬುದ್ಧಿಜೀವಿಗಳು ಮತ್ತು ಅವಕಾಶಪ್ರೇರಿತ ಮಧ್ಯಮ ವರ್ಗದವರು ಈ ಒಪ್ಪಂದದ ಒಂದು ಮಗ್ಗುಲಲ್ಲಿದ್ದರೆ, ಭಿನ್ನ ಸಂಸ್ಕೃತಿ, ಅವಕಾಶವಂಚಿತ ಸಮಸ್ಯೆಗಳ ಜನಸಾಮಾನ್ಯರು ಈ ಒಪ್ಪಂದದ ಇನ್ನೊಂದು ಮಗ್ಗುಲಲ್ಲಿದ್ದರು. ಆಧುನಿಕ ಉದಾರವಾದಿ ಜಗತ್ತಿನ ವಿರುದ್ಧ, ತಿಳಿವಳಿಕೆಹೀನ ಅವಕಾಶ ವಂಚಿತ ಜನರ ಜಗತ್ತು ಪ್ರಜಾಪ್ರಭುತ್ವದಲ್ಲಿ ಒಂದು ಒಪ್ಪಂದವನ್ನು ಪ್ರವೇಶಿಸಿತ್ತು. ಎಲೀಟು ಭವಿಷ್ಯದ ಬಗ್ಗೆ ವಾಗ್ದಾನ ನೀಡಿತು. ಸ್ವಾತಂತ್ರ್ಯ ಸಂದರ್ಭದ ನೆಹರೂ ಅವರ ‘ವಿಧಿಯೊಂದಿಗಿನ ಚೆಲ್ಲಾಟ’ ಭಾಷಣದ ‘ನಮ್ಮ ವಾಗ್ದಾನವನ್ನು ಸಾಕಾರಗೊಳಿಸುವ ಸಮಯವೀಗ ಬಂದಿದೆ’ ಎಂದು ಮಾತು ಜನರಿಗೆ ನೀಡಿದ ಒಪ್ಪಂದದ ಸ್ವರೂಪವನ್ನು ಸ್ಪಷ್ಟೀಕರಿಸುತ್ತಿತ್ತು. ಕೆಲವೇ ಸಮಯದ ಹಿಂದೆ ವಸಾಹತುಶಾಹಿ ಹೋರಾಟದಲ್ಲಿ ಜನಸಾಮಾನ್ಯರ ಜೊತೆ ಮುಂಚೂಣಿಯಲ್ಲಿದ್ದ ಪ್ರಭಾವಶಾಲಿ ಎಲೀಟು ಈಗ ಅಧಿಕಾರದ ಗದ್ದುಗೆಯೇರಿತ್ತು.

ಮೇಲ್ಜಾತಿ ಬ್ರಾಹ್ಮಣರಿಂದ ಕೂಡಿದ ಹೆಚ್ಚಿನ ಶ್ರೀಮಂತ ಮಧ್ಯಮ ವರ್ಗದ ಮತ್ತು ಕೆಳಜಾತಿಗಳ ಸಣ್ಣಗುಂಪು ಸೇರಿದಂತೆ ಈ ಎಲೀಟುಗಳ ಸಾಮಾಜಿಕ ಮೂಲ ನೆಲೆ ಏನೇ ಇದ್ದರೂ ಅವರೆಲ್ಲ ಈ ರೀತಿ ರೂಪುಗೊಂಡ ಹೊಸ ಪ್ರಪಂಚದಲ್ಲಿ ಜನಸಾಮಾನ್ಯರೊಂದಿಗೆ ನಿಯಮಿತಗೊಂಡರು. ಇದು ಚಳುವಳಿಯಿಂದ ರೂಪುತಳೆದ ಪ್ರಪಂಚವಾಗಿತ್ತು. ಹೀಗೆ ರೂಪುತಳೆದ ಪ್ರಪಂಚದ ಹೊರಗೆ ಇನ್ನೆರಡು ವಿಭಿನ್ನ ಧ್ವನಿಗಳಿದ್ದವು. ಮಾರ್ಕ್ಸ್ ಪ್ರೇರಿತ ಎಡಪಂಥವು ಕಮ್ಯೂನಿಸ್ಟ್ ಪಕ್ಷದಡಿ ಕ್ರಾಂತಿಗಾಗಿ ಹೋರಾಡುತ್ತಿದ್ದರೆ. ಹಿಂದೂ ಬಲಪಂಥೀಯವು ಭಾತರದ ವೈಭವೋಪೇತ ಸಾಮಾಜಿಕ ವ್ಯವಸ್ಥೆಯ ಮುಂದುವರಿಕೆಯನ್ನು ಒಪ್ಪಿಕೊಂಡಿತು.

ಸ್ವಾತಂತ್ರ್ಯ ಸಂದರ್ಭದಲ್ಲಿ ಕಮ್ಯೂನಿಸ್ಟ್ ಪಕ್ಷವು ಜನಕೇಂದ್ರಿತ ಆಂದೋಲಗಳ ಮುಂಚಣೆಯಲ್ಲಿತ್ತು. ನಂತರ ಇಂಥವನ್ನು ಊಹಿಸಲು ಸಾಧ್ಯವಾಗಲಿಲ್ಲ. ಒಂದು ಸಂಘಟಿತ ಹಿಂದೂ ಬಲಪಂಥಕ್ಕೆ ಅದರದ್ದೇ ಸೀಮಿತವಾದ ವ್ಯಾಪ್ತಿಯಿತ್ತು.

ಹೀಗೆ ಈ ಒಪ್ಪಂದವು ಎಲ್ಲ ಅಂದುಕೊಂಡಂತೆ ಒಂದು ನಂಬಿಕೆಯ ಕಾರ‍್ಯರೂಪವೇನಲ್ಲ. ಅದಕ್ಕೊಂದು ಚರಿತ್ರೆಯಿದ್ದು ಎಲೀಟು ಮತ್ತು ಜನಸಾಮಾನ್ಯರಿಂದ ಅದು ಮುಕ್ತವಾಗಿರಲಿಲ್ಲ. ಆಧುನಿಕ ಸಾಂವಿಧಾನಿಕ ಬೆಳವಣಿಗೆಯ ಚರಿತ್ರೆಯ ಮೇಲೆ ರೂಪುಗೊಂಡ ರಾಜಕೀಯ ಸಂಘಟನೆ ಮತ್ತು ಜಗತ್ತಿನಲ್ಲೇ ಸುದೀರ್ಘವೆನಿಸಿದ ಭಾರತ ಸ್ವಾತಂತ್ರ್ಯ ಹೋರಾಟದ ಹಿರಿಮೆ ಇವೆರಡು ಇದರ ಪ್ರಮುಖ ಆಯಾಮಗಳು. ಈ ಹೋರಾಟದ ಹೊರನೋಟ, ಮಿತಿಗಳನ್ನು ನೇತೃತ್ವ ವಹಿಸಿದ ಪ್ರಭಾವಶಾಲಿ ಬೂರ್ಶ್ವಾ ನಾಯಕತ್ವದ ಜೊತೆಗೆ ಸಾಮಾನ್ಯ ಜನರ ಕ್ರಾಂತಿಕಾರಿ ಬಯಕೆಗಳು ಇದರಲ್ಲಿ ಮಹತ್ವದ ಒತ್ತಡವನ್ನು ಹೇರಿದ್ದವು. ಉಳಿಗಮಾನ್ಯ ವಿರೋಧಿ ರೈತ ಹೋರಾಟಗಳು ಹಾಗೂ ಭಾರತದ ಸಾಮಾಜಿಕ ಕನಿಷ್ಟತೆಯ ಅಂಚಿನಲ್ಲಿದ್ದ ದಲಿತರ ಅಸ್ಪೃಶ್ಯತೆಯ ವಿರುದ್ಧ ಸಂಘಟಿಸಿದ ಹೋರಾಟಗಳು ರಾಷ್ಟ್ರೀಯ ಚಳುವಳಿಯ ನಾಯಕತ್ವದ ವಹಿಸಿದ ಪ್ರಭಾವಶಾಲಿ ಬುದ್ಧಿಜೀವಿಗಳಿಂದ ಬೆಳಕಿಗೆ ಬರದ ಹಾಗೆ ಅದುಮಲ್ಪಟ್ಟಿದ್ದರೂ, ಈ ಚರಿತ್ರೆ ರಾಷ್ಟ್ರೀಯ ಚಳುವಳಿಯಲ್ಲಿ ಸಾಮಾಜಿಕವಾದಿ ಪ್ರವೃತ್ತಿಯಾಗಿ ಗುರುತಿಸಲ್ಪಟ್ಟ, ನೆಹರು ಅವರನ್ನೊಳಗೊಂಡ ಸಮಾಜವಾದಿ ಕಾಂಗ್ರೆಸ್ ಪಕ್ಷ ಹಾಗೂ ಇತರ ಲಘು ಕ್ರಾಂತಿಕಾರಿ ಪ್ರವೃತ್ತಿಗಳು, ಕಮ್ಯೂನಿಸ್ಟ್ ಪಕ್ಷಕ್ಕಿಂತ ಭಿನ್ನವಾದ ರೂಪದಲ್ಲಿ ವ್ಯಕ್ತವಾಯಿತು. ಈ ಪ್ರವೃತ್ತಿಗಳು ರಾಷ್ಟ್ರೀಯ ಚಳುವಳಿಯಲ್ಲಿ ಜೋರಾಗಿ ಗುರುತಿಸಲ್ಪಡದಿದ್ದರೂ, ಪ್ರಭಾವಶಾಲಿಯಾಗಿದ್ದ ಬೂರ್ಶ್ವಾ ಸ್ಥಿತಿಗೆ ಎದುರು ತಡೆಯಾಗಿ, ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಒಂದು ಸಂವಾದವನ್ನು ರೂಪಿಸಿತ್ತು. ಇಂದಿಗೂ ಕೂಡ ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಪ್ರಭುತ್ವವಿರೋಧಿ ಪರಂಪರೆಯ ಕೊಂಡಿಯ ಪ್ರಾತಿನಿಧ್ಯವಿದೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಬುದ್ದಿಜೀವಿಗಳ ಧ್ವನಿಗಳಿಗೆ ವಿರೋಧಿ ಸವಾಲುಗಳಿದ್ದ ಕಾರಣ ಭಾರತದ ರಾಷ್ಟ್ರೀಯ ಚಳುವಳಿಯನ್ನು ಜೀವನ ಚರಿತ್ರೆಯ ರೂಪದಲ್ಲಿ ಬರೆಯಲು ಸಾಧ್ಯವಿಲ್ಲ. ಇತರ ಧ್ವನಿಗಳು ಈ ಚರಿತ್ರೆಯ ಸಮಗ್ರತೆಗೆ ಯಾವಾಗಲೂ ಭಂಗವನ್ನು ಉಂಟುಮಾಡುತ್ತವೆ. ಈ ಸೈದ್ಧಾಂತಿಕ ಅಥವಾ ರಾಜಕೀಯ ಸಂಚಲನಗಳನ್ನು ಗುರುತಿಸಿದ ಭಾರತದ ಜೀವನ ಚರಿತ್ರೆಗಳು ಹೆಚ್ಚು ನಿಜವಾಗುತ್ತವೆ ಹಾಗೂ ಅವೆಲ್ಲ ಜೊತೆಯಲ್ಲಿ ರಾಷ್ಟ್ರೀಯ ಚಳುವಳಿಯ ಅಥವಾ  ಸ್ವಾತಂತ್ರ್ಯ ಹೋರಾಟದ ಅಥವಾ ವಸಾಹತುಶಾಹಿ ವಿರೋಧಿ ಹೋರಾಟದ ಕಥೆಯನ್ನು ಕಟ್ಟುತ್ತವೆ.

ಹೀಗೆ ರಾಷ್ಟ್ರೀಯ ಚಳುವಳಿಗೆ ಭಾರತದ ಬುದ್ಧಿಜೀವಿ ವರ್ಗ ನೆಲದ ವಾಸ್ತವತೆಗೆ, ಜನರ ಆಶೋತ್ತರಗಳಿಗೆ ಸ್ಪಂದಿಸುವಂತೆ ಒತ್ತಡ ಹೇರಿತು ಹಾಗೂ ಇವು ಕೆಲವು ನಾಯಕರನ್ನು ಪ್ರೇರೇಪಿಸಿತು. ಈ ಹಿನ್ನೆಲೆಯಲ್ಲಿ ಪರಸ್ಪರ ದೂರದ ಅಂತರಗಳಿಂದ ಮತ್ತು ವ್ಯತ್ಯಾಸಗಳಿಂದ ರಾಜಕೀಯ ಅವಶ್ಯಕತೆ ಮತ್ತು ವಿಚಾರಗಳ ಶೋಧಗಳು ನಡೆದು ಈ ಒಪ್ಪಂದ ತಿರುಳನ್ನು ಪಡೆಯಿತು ಹಾಗೂ ಭಾರತದ ಸಂವಿಧಾನ ರಚನೆಯಲ್ಲಿ ಮುಂದುವರಿಯಿತು. ಭಾರತದ ಸಂವಿಧಾನದ ಪೀಠಿಕೆ ಹಾಗೂ ರಾಜ್ಯ ನೀತಿಯ ನಿರ್ದೇಶಕ ತತ್ವಗಳಲ್ಲಿರುವ ಅಂಶಗಳು ಈ ಸಂವಾದಕ್ಕೆ ಗೌರವ ಸಲ್ಲಿಸುವಂತಿದೆ.

ಈ ಕರಾರಿನ ನ್ಯಾಯಸಮ್ಮತಿಯೇ ಅದರ ಮಿತಿ, ರೈತಾಪಿವರ್ಗ, ಕಾರ್ಮಿಕ-ಶ್ರಮಿಕ ವರ್ಗ, ತುಳಿತಕ್ಕೊಳಗಾದ ಜಾತಿಗಳನ್ನೊಳಗೊಂಡ ಜನಸಾಮಾನ್ಯರ ಕ್ರಾಂತಿಕಾರಿ ಉದ್ರೇಕಗಳ ಜೊತೆ ಎಲೀಟು ದೃಷ್ಟಿಕೋನ ಮತ್ತು ಬೂರ್ಶ್ವಾನ ಇಷ್ಟಾರ್ಥಗಳನ್ನು ಒತ್ತಾಯಪೂರ್ವಕವಾಗಿ ರಾಜಿಗೊಳಿಸಲಾಯಿತು. ಬಡವರು, ಅನಕ್ಷರಸ್ಥ, ಸಂಸ್ಕೃತಿಹೀನ, ಸೂರಿಲ್ಲದ, ದುರ್ಬಲ ಆರೋಗ್ಯದ ಸ್ಥಿತಿಯಲ್ಲಿರುವ ಜನರಿಗೆ ತಕ್ಷಣ ನೆರವು ಮತ್ತು ಕ್ರಮೇಣ ಪರಿಹಾರದ ಭರವಸೆಯನ್ನು ನೀಡಲಾಗಿತ್ತು. ಈ ಅರ್ಥದಲ್ಲಿ ನಾವು ನೆಹರೂ ಅವರ ‘ಈಗ ನಮ್ಮ ವಾಗ್ದಾನಗಳನ್ನು ಸಾಕಾರಗೊಳಿಸುವ ಸಮಯ ಬಂದಿದೆ’ ವಾದವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಜನರ ಮೇಲಿನ ನಂಬಿಕೆಯ ಆಧಾರದಲ್ಲಿ ವಯಸ್ಕ ಮತದಾನ ಮತ್ತು ಮೂಲಭೂತ ಹಕ್ಕುಗಳನ್ನು ಒದಗಿಸಲಾಯಿತು. ಇದು ಆಳ್ವಿಕೆಗೆ ನ್ಯಾಯಸಮ್ಮತಿ ಒದಗಿಸಿತು. ಪೂರ್ವಯೋಚಿತ ವಿಧಿಯೊಂದಿಗಿನ ಚೆಲ್ಲಾಟದ ಭರವಸೆಯೊಂದಿಗೆ ಆಳಲು ಅಧಿಕಾರಗಳನ್ನು ನಿಯೋಜಿಸಲಾಯಿತು.

ಸ್ವಾತಂತ್ರ್ಯೋತ್ತರದ ಯುಗದಲ್ಲಿ ಈ ಆಂದೋಲನ ಸಂವಾದದೊಳಗೆ ವರ್ಗ ಒತ್ತಾಯಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ತನ್ನ ಆರ್ಥಿಕ ಬಲಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಪರಿಗಣಿಸಬೇಕಾದ ಶಕ್ತಿಯಾಗಿ ಬೆಳೆಯುತ್ತದೆ ಹಾಗೂ ಇದರ ಪ್ರಾತಿನಿಧ್ಯವೇ ಭಾರತದ ಭವಿಷ್ಯವೆಂದು ರೂಪುಗೊಳ್ಳುತ್ತಿರುವ ರಾಜಕೀಯ ನಾಯಕತ್ವ ಪರಿಗಣಿಸುತ್ತದೆ. ಹೀಗೆ ರಚನಾತ್ಮಕ ದುರ್ಬಲತೆ ಮತ್ತು ಅದರ ಜನರ ಕ್ರಾಂತಿಕಾರಿ ಉದ್ರೇಕಗಳಿಗೆ ಭೂಮಾಲೀಕ ವರ್ಗದ ಜೊತೆ ಸೇರುವಂತೆ ಮಾಡಿ ಭಾರತದ ರಾಜಕೀಯದಲ್ಲಿ ಮುಂದಾಳತ್ವದ ಶಕ್ತಿಯಾಗುತ್ತದೆ. ಭಾರತದ ಭೂಮಾಲೀಕ ವರ್ಗ ಭಾರತದ ರಾಜಕೀಯದಲ್ಲಿ ಹೆಚ್ಚು ಸಂಪ್ರದಾಯವಾದಿ ಪ್ರವೃತ್ತಿಗಳ ಗುಂಪಾಗಿದ್ದು, ಅದರ ಹೆಚ್ಚಿನ ಹಿಂಸಾತ್ಮಕ ಶಕ್ತಿ ಜನರನ್ನು ಹಿಮ್ಮೆಟ್ಟಿಸಲೆಂದೇ ಬಳಕೆಯಾಗುತ್ತದೆ ಎನ್ನುವುದು ಭಾರತದ ರಾಜಕೀಯದಲ್ಲಿ ಗುರುತಿಸಬೇಕಾದ ಅಂಶವಾಗಿದೆ. ಹೀಗೆ ಭಾರತದ ಬೂರ್ಶ್ವಾ ಮುಂದಾಳತ್ವದ ನಾಯಕತ್ವ ಅದಗಲೇ ಜಾಗತೀಕರಣದ ಪ್ರವೃತ್ತಿಗೊಳಗಾದ ಪಾಶ್ಚಾತ್ಯ ಬಂಡವಾಳಶಾಹಿ ವ್ಯವಸ್ಥೆಯನ್ನು ನಂಬಿ, ಪಾಶ್ಚಾತ್ಯಪ್ರೇರಿತ ಆಧುನಿಕತೆಯನ್ನು ಅನುಸರಿಸಿ, ಜನರನ್ನು ಮುಕ್ತಿಗೊಳಿಸುವ ರಚನಾತ್ಮಕ ಬದಲಾವಣೆಗಳನ್ನು ಮೂಲೆಗೆಸೆಯುತ್ತದೆ. ಇದರ ಸೂಚನೆ ನೆಹರೂ ಅವರ ಭಾಷಣದ ವಿಧಿಯೊಡನೆ ಚೆಲ್ಲಾಟ ಸಂಪೂರ್ಣವಾಗಿ ಅಲ್ಲದಿದ್ದರೂ ಗಮನಾರ್ಹವಾಗಿ ‘ನಮ್ಮ ವಾಗ್ದಾನಗಳನ್ನು ಸಾಕಾರಗೊಳಿಸುವ ಸಮಯ ಬಂದಿದೆ’ ಮಾತುಗಳಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಸ್ವಾತಂತ್ರ್ಯ ಸಮಯದ ವರ್ಗ ಒತ್ತಾಯಗಳು ರಾಜಕೀಯವನ್ನು ಪ್ರವೇಶಿಸಿ ಈ ಪೂರ್ವಯೋಚಿತ ವಿಧಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಿದ ಪೂರ್ವ ಸೂಚನೆಯನ್ನು ನೀಡುತ್ತದೆ. ಈ ಭರವಸೆ ಮೂಲಭೂತವಾಗಿ ಈಡೇರಲಿಲ್ಲವೆನ್ನುವುದು ಈಗ ಸ್ಪಷ್ಟವಾಗಿದೆ.

ಇದು ಹಾಗಾದರೆ ಪ್ರಜಾಪ್ರಭುತ್ವದ ಸಮಸ್ಯೆಯಾಗುತ್ತದೆ. ಬಡತನ, ಜಾತಿ ಶೋಷಣೆ, ಲಿಂಗ ಮುಂತಾದ ವಿಕಲತೆಯ ಅಸಮಾನತೆಗಳು ಕಡಿಮೆಯಾಗಿಲ್ಲ. ಆದುದರಿಂದ ಭಾರತದ ಪ್ರಜಾಪ್ರಭುತ್ವದೊಳಗಿನ ಹೋರಾಟ ಪ್ರಾಥಮಿಕವಾಗಿ ಸಮಾನತೆಯಾಗಿದ್ದು ಭಾರತದ ಪ್ರಜಾಪ್ರಭುತ್ವದ ಕತೆ ವ್ಯಕ್ತವಾದಂತೆ ಇವು ಸ್ವಷ್ಟರೂಪವನ್ನು ಪಡೆಯುತ್ತಾ ಸಾಗುತ್ತದೆ.

ಈ ಕರಾರನ್ನು ಹಲವಾರು ವೀಕ್ಷಕರು ಸಂಶಯದಿಂದ ನೋಡುತ್ತಾರೆ. ಹಾಗಾದರೆ ಭಾರತದ ಪ್ರಜಾಪ್ರಭುತ್ವದ ಆರಂಭವನ್ನು ನೋಡುವವರಲ್ಲಿ ಈ ಹಿಂಜರಿಕೆ ಯಾಕೆ? ಭಾರತದ ಪ್ರಜಾಪ್ರಭುತ್ವದ ಮೂಲದಲ್ಲೇ ಈ ಹಿಂಜರಿಕೆ ಯಾಕೆ? ಭಾರತದ ಪ್ರಜಾಪ್ರಭುತ್ವದ ಮೂಲದಲ್ಲೇ ಈ ಹಿಂಜರಿಕೆ, ಸಂಶಯ ಬೇರೂರಿದೆ. ಬಡತನ, ಸಾಂಸ್ಕೃತಿಕವಾಗಿ ಹಿಂದುಳಿದ ಜನರು ಪ್ರಜಾಪ್ರಭುತ್ವದ ರುಜುವಾತುದಾರಾಗಲು, ಆಧಾರವಾಗಲು, ಪಾತ್ರದಾರರಾಗಲು ಸಾಧ್ಯವೇ? ಸಾರ್ವತ್ರಿಕ ಮತದಾನ ವ್ಯವಸ್ಥೆಯಿಂದ ಸ್ವತಂತ್ರ ಭಾರತ ಆರಂಭವಾಗುತ್ತದೆ ಎನ್ನುವುದನ್ನು ನಾವು ನೆನಪಿಡಬೇಕಾಗುತ್ತದೆ. ಭಾರತವನ್ನು ಹೊರತುಪಡಿಸಿ ಪ್ರಜಾಪ್ರಭುತ್ವದ ತಾಯಿ ನಾಡಾದ ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ವಯಸ್ಕ ಮತದಾನ ಪದ್ಧತಿ ಮುಂಬಡ್ತಿಯ ಸೇರಿಕೆಯಂತೆ ಬೆಳೆಯುತ್ತದೆ. ಆದರೆ ಭಾರತದ ವಸಾಹಾತುಶಾಹಿ ವಿರೋಧಿ ಹೋರಾಟದ ತರ್ಕ ಹೇಗಿತ್ತೆಂದರೆ ವಯಸ್ಕ ಮತದಾನ ಪದ್ಧತಿಯನ್ನು ಹೊರತುಪಡಿಸಿ ಯಾವುದೇ ಅನ್ಯ ದಾರಿಯನ್ನು ಅನುಸರಿಸಿದರೂ ಅದು ಜನರನ್ನು ಅಧಿಕಾರವಂಚಿತರನ್ನಾಗಿ ಮಾಡುತ್ತಿತ್ತು. ಇದು ಜನರು ಚಳುವಳಿಯ ಶಕ್ತಿಯಾಗಿತ್ತು.

ಈ ಕರಾರು ಎಷ್ಟು ಮಾತ್ರವಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಆರಂಭಿಸಿದ ಕರಾರು ಬೇರೆ ಎಲ್ಲ ಕರಾರುಗಳಿಗಿಂತ ಕ್ರಾಂತಿಕಾರಿಯಾಗಿ ಭಿನ್ನವಾಗಿತ್ತು. ಹಾಬ್ಸ್ ಅವರ ಸಾಮಾಜಿಕ ಕರಾರು ಜೀವ ಮತ್ತು ದೇಹದ ಸುರಕ್ಷತೆಗೆ ಸಂಬಂಧಿಸಿದ್ದರೆ. ಲಾಕ್ ಅವರ ಸಾಮಾಜಿಕ ಕರಾರು ಜೀವ ಮತ್ತು ಆಸ್ತಿಯ ರಕ್ಷಣೆಯನ್ನೊಳಗೊಂಡಿತು. ಆದರೆ ಭಾರತದ ಕರಾರು ರೂಸೋ ಅವರ ಪ್ರತಿಪಾದನೆಯ ಕ್ರಾಂತಿಕಾರಿ ಆವೃತ್ತಿಯಾಗಿತ್ತು. ಆಸ್ತಿ ಸಾಂಸ್ಥೀಕರಣಗೊಂಡಾಗ ಕಳೆದುಹೋದ ಸಮಾನತೆಯ ತತ್ವವನ್ನು ಮರುಸ್ಥಾಪಿಸುವುದು ರೂಸೋ ಅವರ ಬಯಕೆಯಾಗಿದ್ದರಿಂದ, ಸಾಮಾನ್ಯ ಒಳಿತಿಗಾಗಿನ ಹುಡುಕಾಟ ಎಲ್ಲ ಧ್ವನಿಗಳನ್ನೊಳಗೊಂಡಿರಬೇಕು ಎನ್ನುವುದು ಅವರ ವಾದವಾಗಿತ್ತು. ಪುನರುಜ್ಜೀವನ ಯುಗದ ಇಂಗ್ಲೆಂಡಿನಲ್ಲಿ ರೂಸೋ ಅವರದ್ದು ಅಪಹಾಸ್ಯದ, ಅಸಮ್ಮತಿಯ ಧ್ವನಿಯಾಗಿತ್ತು. ಜಾತಿ ಮತ್ತು ಲಿಂಗ ತಾರತಮ್ಯದ ಪ್ರಶ್ನೆಗಳನ್ನು ಹೆಚ್ಚಾಗಿ ಸೇರಿಸಿಕೊಂಡ ಭಾರತದ ಕರಾರು ಕೂಡ ರೂಸೋ ಅವರ ಸಾಮಾಜಿಕ ಕರಾರಿನಂತೆ ಸಮಾನತೆಯ ದಾರಿ ಪಡೆಯುವ ಎಲ್ಲ ಎಡರುತೊಡರುಗಳನ್ನು ಕಿತ್ತೊಗೆಯಲು ನಿರ್ದೇಶಿಸಲ್ಪಟ್ಟಿತು. ಭಾರತದಲ್ಲಿ ಇಂದಿಗೂ ಕೂಡ ಸಮಾನತೆಗೋಸ್ಕರ ಹೋರಾಟವೆಂದರೆ ಒಳಗೊಳ್ಳುವಿಕೆಯ ಹೋರಾಟ. ಯಾಕೆಂದರೆ ಭಾರತದಲ್ಲಿ ಹೊರಗಿಡುವುದು ಬೇರೆ ಬೇರೆ ಮೂಲ ಮತ್ತು ಸ್ತರಗಳ ಆಧಾರದಲ್ಲಿ ನಿಂತಿತ್ತು. ಭಾರತದ ಪ್ರಜಾಪ್ರಭುತ್ವ ಭಾರತದ ಎಲ್ಲ ಜನರಿಗೆ ಸಮಾನತೆ ಸಾಧಿಸುವುದೆ? ಆದುದರಿಂದ ಸಮಾನತೆಯನ್ನು ಸೃಷ್ಟಿಸುವುದು ಭಾರತದ ಪ್ರಜಾಪ್ರಭುತ್ವದ ಸ್ಥಾಪನಾ ತತ್ವವಾಗಿತ್ತು ಹಾಗೂ ಸಮಾನತೆಗಾಗಿ ಶೋಧನೆ ಇನ್ನೂ ವಿಭಿನ್ನ ರೀತಿಯಲ್ಲಿ ಭಾರತದ ಪ್ರಜಾಪ್ರಭುತ್ವದ ಉಳಿಯುವಿಕೆಯ ಚಾಲನಾಶಕ್ತಿಯಾಗಿದೆ.

ಈ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವ ಕರಾರಿನಲ್ಲಿರುವ ಎಲ್ಲವನ್ನು ಸಾಧಿಸಿದೆಯೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಾಧಿಸಿಲ್ಲವೆನ್ನುವುದು. ಹಾಗಾದರೆ ಕಳೆದ ೫೦ ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಯಾವ ಅಂಶಗಳು ಉಳಿಯುವಂತೆ ಮಾಡಿದೆ? ಭಾರತದಲ್ಲಿ ಪ್ರಜಾಪ್ರಭುತ್ವ ಆಗಲೇಬೇಕಾದ ಪತನ. ಅದರ ಕೀಳ್ಯಾಡುವಿಕೆ ಪ್ರಜಾಪ್ರಭುತ್ವದ ಮೇಲೆ ಬರೆದ ಜೀವನ ಚರಿತ್ರೆಯ ಮುಖ್ಯ ಅಂಶಗಳಾಗಿವೆ. ಆದರೆ ಪ್ರಜಾಪ್ರಭುತ್ವ ಉಳಿದಿದೆ. ೧೯೫೦ರ ದಶಕದ ಕೊನೆಯಭಾಗದಿಂದ, ಹ್ಯಾರಿಸನ್ ಅವರ ಪತನದ ಅಭಿಪ್ರಾಯದ ಮಧ್ಯೆಯೂ ಉಳಿದುಕೊಂಡು ಇಂಥ ಪ್ರವಾದಿಗಳಿಗೂ ನಿರಾಸೆ ತಂದಿದೆ. ಪ್ರಜಾಪ್ರಭುತ್ವ ಮತ್ತು ಅದರ ರಾಜಕೀಯ ಸಂಸ್ಥೆಗಳು ಕೇವಲ ತುರ್ತುಪರಿಸ್ಥಿತಿಯ ಭಯಾನಕ ಸ್ಥಿತಿಯನ್ನು ಮೀರಿ ಕೆಲವು ಚುಕ್ಕೆಗಳ ಮಧ್ಯೆಯೂ ಅಭಾಧಿತವಾಗಿದೆ. ಆದರೆ ಇವತ್ತು ಒಂದು ಹೊಸ ಅಪವಾದ ಪ್ರಜಾಪ್ರಭುತ್ವದ ಮೇಲೆ ಎಲ್ಲ ಕಡೆ ವ್ಯಕ್ತವಾಗುತ್ತಿದೆ. ಇದು ಪ್ರಜಾಪ್ರಭುತ್ವದ ಬಗ್ಗೆ ಜನ ಗೌರವ ಕಳೆದುಕೊಂಡಿದ್ದಾರೆನ್ನುವುದಾಗಿದೆ. ಇದು ಸಮೂಹ ಮಾಧ್ಯಮ, ಸಾರ್ವಜನಿಕ ಮಾತುಕತೆಗಳು ಮತ್ತು ಅಕಾಡೆಮಿಕ್ ವಲಯದಲ್ಲೂ ಚರ್ಚಿತವಾಗಿದೆ. ಉದಾಹರಣೆಗೆ; ಎಡಪಂಥೀಯ ಒಲವುಳ್ಳ ಕ್ರಾಂತಿಕಾರಿ ವಿಚಾರಗಳ ಬುದ್ಧಿಜೀವಯಾದ ಅತುಲ್ ಕೋಹ್ಲಿಯವರು ಭಾರತದಲ್ಲಿ ಸರಿ ರೀತಿಯ ಪ್ರಜಾಪ್ರಭುತ್ವದ ಕೊರತೆ ಇದ್ದು ತಪ್ಪು ರೀತಿಯ ಪ್ರಜಾಪ್ರಭುತ್ವ ಹೆಚ್ಚಾಗಿದೆ ಹಾಗೂ ಆಡಳಿತ ಸಾಮರ್ಥ್ಯ ಬಿಕ್ಕಟ್ಟು ಈ ತಪ್ಪು ರೀತಿಯ ಪ್ರಜಾಪ್ರಭುತ್ವದ ಬೆಳವಣಿಗೆ ತನ್ನ ಕೊಡುಗೆಗಳನ್ನು ನೀಡುತ್ತದೆ ಎಂದು ವಾದಿಸಿದ್ದಾರೆ. ಅತಿಯಾದ ರಾಜಕೀಯ ಮತ್ತು ಚುನಾವಣಾ ಒತ್ತಡಗಳಿಗಾಗಿ ಶರಣಾಗುವ ಪ್ರವೃತ್ತಿ ಸರಕಾರದಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಬೆಳೆದು, ರಾಜ್ಯದ ಸಂಸ್ಥೆಗಳು ಅಧಃಪತನದತ್ತ ಸಾಗುತ್ತಿವೆ. ಇದನ್ನು ಹ್ಯಾರಿಸನ್ ಅವರ ಅಂದರೆ ೧೯೫೦ರ ಪತನದ ಭವಿಷ್ಯ ನುಡಿಯುವಿಕೆಯ ೩೦ ವರ್ಷಗಳ ನಂತರ ಅಂದರೆ ೧೯೮೦ರಲ್ಲಿ ಬರೆಯಲಾಗಿದೆ.

ಇದರರ್ಥ ಭಾರತದ ರಾಜಕೀಯದಲ್ಲಿ ಎಲ್ಲವೂ ಸರಿಯಿದೆ ಎಂದಲ್ಲ. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯಾವ ರೀತಿ ನಡಾವಳಿಗಳಾಗಿ ಸಂಸ್ಥೆಗಳಲ್ಲಿ ಸ್ಥಾಪಿಸಬಹುದು, ಯಾವ ರೀತಿ ಅವುಗಳನ್ನು ಭಾರತದ ಸ್ಥಿತಿಗಳಿಗೆ ಪೂರಕಗೊಳಿಸಬಹುದು. ಬಡಜನರು ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾದರೆ ಅದು ಪ್ರಜಾತಾಂತ್ರಿಕ ನಡಾವಳಿ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು? ಮೌಲ್ಯಾಧಾರಿತವಾಗಿ ಪ್ರಜಾಪ್ರಭುತ್ವವನ್ನು ಸಕ್ರಿಯಗೊಳಿಸಲು ಸಾಧನಗಳಿಲ್ಲದ ಜನರಲ್ಲಿ ಪ್ರಜಾಪ್ರಭುತ್ವದ ವಿಸ್ತರಣೆ ಹಾಗೂ ಮತದಾನದ ರಾಜಕೀಯ ಆಳದ ಬೇರೂರಿಕೆಯ ಸಂದರ್ಭದಲ್ಲಿ ಈ ಪ್ರಶ್ನೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ೧೯೯೦ರ ದಶಕದಲ್ಲಿ ಪ್ರಜಾಪ್ರಭುತ್ವದ ಅರ್ಥೈಸುವಿಕೆ ಮತ್ತು ಸೀಮಿತತೆಯ ಕಲ್ಪನೆಗಳು ಇನ್ನೂ ಬೆಳೆದಿವೆ. ೧೯೮೯ರಲ್ಲಿ ಮಂಡಲ್ ಆಯೋಗದ ಶಿಫಾರಸ್ಸುಗಳ ಅನುಷ್ಠಾನ ಮತ್ತು ಮೇಲ್ಜಾತಿಯವರ ವಿಧ್ವಂಸಕತೆ, ೧೯೯೨ರಲ್ಲಿ ಬಾಬರಿ ಮಸೀದಿಯ ಉರುಳಿಸುವಿಕೆ ಮತ್ತು ಅದರ ಮುಂದುವರಿದ ಭಾಗವಾದ ಕೋಮುವಾದಿ-ರಾಷ್ಟ್ರೀಯ ದುರಭಿಮಾನದ ಪ್ರಚಾರಗಳು ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದ ಹೆಗ್ಗುರುತುಗಳಾಗಿವೆ. ಮಂಡಲ್ ಮತ್ತು ಮಸ್ಜಿದ್ ಭಾರತದ ರಾಜಕೀಯದಲ್ಲಿ ವೈರುದ್ಯ ಪರಿಣಾಮಗಳನ್ನು ಸೃಷ್ಟಿಸಿದೆ. ಇದನ್ನು ಈ ಲೇಖನದ ನಂತರದ ಭಾಗದಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಮಂಡಲ್ ಪ್ರಜಾಪ್ರಭುತ್ವಕ್ಕೆ ಯಾವ ಅರ್ಥವನ್ನು ಪಡೆಯಿತು ಎನ್ನುವುದನ್ನು ಸಂಕ್ಷಿಪ್ತವಾಗಿ ಇಲ್ಲಿ ಪರಿಶೀಲಿಸಲಾಗಿದೆ.ಸಮೂಹ ಸಂಪರ್ಕ ಮಾಧ್ಯಮಗಳನ್ನು ನಿಯಂತ್ರಿಸುವ ಜನವರ್ಗದವರು ಮಂಡಲ್ ಕುರಿತಂತೆ ನಿರಂತರ ಮತ್ತು ವಿಶಾಲವಾಗಿ ವ್ಯಕ್ತಪಡಿಸುವ ಐದು ಊಹೆಗಳನ್ನು ಅರ್ಥಮಾಡಿಕೊಳ್ಳುವುದು ಅದರ ಗುಣಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಊಹೆಗಳು ಯಾವುದೆಂದರೆ ಒಂದು, ಭಾರತದ ಜನರಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳ ಬಗ್ಗೆ ಅತಿಯಾದ ಸಿನಿಕತನ ಮತ್ತು ಭ್ರಮನಿರಸನವಿದೆ. ಎರಡು, ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಇರುವ ನಾಯಕರು ಅವಕಾಶವಾದಿಗಳು, ತತ್ವ ಆದರ್ಶಗಳಿಲ್ಲದೆ ರಾಜಕೀಯ ವಿಧೇಯತೆ ಮತ್ತು ಒಪ್ಪಂದಗಳನ್ನು ಬದಲಾಯಿಸುವವರು. ಮೂರು, ಯಾವ ತಡೆಯೂ ಇಲ್ಲದ ಭ್ರಷ್ಟಾಚಾರ ಮತ್ತು ಹೊಲಸು ರಾಜಕೀಯದಿಂದಾಗಿ ಸಾರ್ವಜನಿಕ ಜೀವನದಲ್ಲಿ ನೈತಿಕತೆಯ ಅಧಃಪತನ. ನಾಲ್ಕು, ಜಾತಿಭಾವನೆ ಮತ್ತು ಜಾತಿ ಸಂಘರ್ಷಗಳಿಂದಾಗಿ ಸಾಮಾಜಿಕ ಅಶಾಂತಿಯ ಹೆಚ್ಚಳ ಹಾಗೂ ಲಾಲೂ ಯಾದವ್, ಮುಲಾಯಂ ಸಿಂಗ್ ಮತ್ತು ಮಾಯಾವತಿಯಂತಹ ನಾಯಕರು ಮುಖ್ಯ ಪಾತಧಾರಿಗಳಾಗುವುದು ಹಾಗೂ ಐದು, ಮೊದಲ ನಾಲ್ಕು ಊಹೆಗಳಿಂದಾಗಿ ಉಂಟಾದ ದುರಾಚಾರದ ಹಾಗೂ ಶಕ್ತಿಗುಂದಿದ ಸಾಮಾಜಿಕ ಜೀವನ.

ಯಾವುದೇ ಪ್ರಜಾಪ್ರಭುತ್ವಕ್ಕೆ ಅದರ ಸಾರ್ವಜನಿಕ ದೃಢವಿಶ್ವಾಸವೇ ಶಕ್ತಿಯ ಮೂಲ. ಆದರೆ ದಿನಪತ್ರಿಕೆಗಳ, ನಿಯತಕಾಲಿಕೆಗಳ ಅಥವಾ ದೃಶ್ಯ ಮಾಧ್ಯಮಗಳ ಅಭಿಪ್ರಾಯಗಳನ್ನು ಗಮನಿಸಿದಾಗ ಸಾರ್ವಜನಿಕ ದೃಢವಿಶ್ವಾಸ ಅಗಾಧವಾಗಿ ಕಡಿಮೆ ಇರುವುದು ಅಥವಾ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಇದು ಹೇಗೆ ಸಂಭವಿಸಿತು? ಈ ಪ್ರಶ್ನೆಯನ್ನು ಉತ್ತರಿಸಲು ನಾವು ಭಾರತದ ೨೦ನೇ ಶತಮಾನದ ಕೊನೆಯ ಎರಡು ದಶಕಗಳು ಮರು ಪರಿಶೀಲಿಸಬೇಕಾಗುತ್ತದೆ.

೧೯೮೪ರ ಇಂದಿರಾ ಹತ್ಯೆಯ ತದನಂತರ ರಾಜೀವ್ ಗಾಂಧಿ ಮತ್ತು ಅವರ ಬೃಹತ್ ಚುನಾವಣಾ ವಿಜಯ ಭಾರತದ ಅಭಿವ್ಯಕ್ತಿ ಎಲೀಟಿಗೆ ಒಂದು ಆಶಾಕಿರಣವನ್ನು ಮೂಡಿಸಿತು. ಭಾರತವನ್ನು ೨೧ನೇ ಶತಮಾನಕ್ಕೆ ಕೊಂಡೊಯ್ಯುವ ದೃಷ್ಟಿಕೋನದ ನಾಯಕನೆಂದು ಈ ಎಲೀಟು ಅವರನ್ನು ಗುರುತಿಸಿತು. ಆದರೆ ಈ ಆಸೆ ಹೆಚ್ಚು ಸಮಯ ಉಳಿಯಲಿಲ್ಲ. ಭ್ರಷ್ಟಾಚಾರದ ರಾಡಿಯಿಂದಾಗಿ ೧೯೮೯ರಲ್ಲಿ ಕಾಂಗ್ರೆಸ್ ಕೆಟ್ಟದಾಗಿ ಚುನಾವಣೆಯಲ್ಲಿ ಸೋತಿತು. ಅವರಿಗೆ ಪರ್ಯಾಯವಾಗಿ ಮೂಡಿಬಂದ ವಿ.ಪಿ. ಸಿಂಗ್ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಮೇಲೆ ಚುನಾವಣೆಗೆ ಸ್ಪರ್ಧಿಸಿದರು. ಅವರೂ ಕೂಡ ಇದೇ ಅಭಿವ್ಯಕ್ತ ಎಲೀಟಲ್ಲಿ ಜನಪ್ರಿಯರಾದರು. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಮಿಸ್ಟರ್ ಕ್ಲೀನ್ ಎಂದು ಅವರನ್ನು ಪರಿಗಣಿಸಲಾಯಿತು. ಆದರೆ ಆಗಸ್ಟ್ ೧೯೮೯ರಲ್ಲಿ ವಿ.ಪಿ. ಸಿಂಗ್ ನಾಯಕ ಸ್ಥಾನದಿಂದ ಖಳನಾಯಕನ ಸ್ಥಾನಕ್ಕೆ ಬದಲಾದರು. ಇತರ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಶೇಕಡಾ ೨೭ರಷ್ಟು ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿಯ ಅನುಷ್ಠಾನ ಈ ಅಭಿವ್ಯಕ್ತಿ ಎಲೀಟ್ ನ ವೈಯಕ್ತಿಕ ಭಾವನೆಗಳಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿತು.

ಈ ಬೆಳವಣಿಗೆ ಸಮಾಜದ ಅಕಡೆಮಿಕ್ ಮತ್ತು ರಾಜಕೀಯ ಕ್ರಿಯಾಶೀಲ ವಿಮರ್ಶಕರನ್ನು ಹೊರತುಪಡಿಸಿ ಎಲ್ಲ ವರ್ಗ ಮತ್ತು ಜಾತಿಯ ಎಲೀಟು ಆಶಯ ಮತ್ತು ಭಾವನೆಗಳನ್ನು ಮರುಜೋಡಿಕೆಯ ಪ್ರಕ್ರಿಯೆಗೆ ಪ್ರೇರೇಪಿಸಿತು. ಮಂಡಲ್ ವರದಿಯ ಕೊಡುಗೆಯಿಂದಾಗಿ ಸಮಾಜದಲ್ಲಿ ಸಾರ್ವಜನಿಕ ಆಸ್ತಿಯ ವಿರುದ್ಧ ಮೇಲ್ಜಾತಿ ಯುವಕರ ಗೂಂಡಾಗಿರಿ ಮತ್ತು ದೈನಂದಿನ ಸಾರ್ವಜನಿಕ ಜೀವನದ ಅರಾಜಕತೆಯೊಂದಿಗೆ ಸಮಾಜದಲ್ಲಿ ಜಾತಿಕಲಹವನ್ನೇ ಪ್ರಾರಂಭಿಸಿತು. ಭಾರತದ ಸ್ಥಾಪಿತ ಮಧ್ಯಮವರ್ಗ ಮತ್ತು ಎಲೀಟು ಈ ಬೆಳವಣಿಗೆಗೆ ಹೆಚ್ಚಿನ ಸಮರ್ಥನೆ ಮತ್ತು ಸಹಾನುಭೂತಿ ವ್ಯಕ್ತಪಡಿಸಿತು. ಈ ಹೊಸಬೆಳವಣಿಗೆಯಾದ ಸಾರ್ವಜನಿಕ ಜೀವನದ ಲಯ ತಪ್ಪಿಸುವಿಕೆ ಮತ್ತು ಸಾರ್ವಜನಿಕ ಆಸ್ತಿಯ ನಾಶ ಮುಂತಾದವು ಹಾಗೂ ಸಾಮಾನ್ಯವಾದ ಸಾರ್ವಜನಿಕ ಮಾತುಕತೆಯಲ್ಲಿಯೂ ಹಿಂದೆಂದೂ ಕಾಣದ ರೀತಿ ಸಹಾನುಭೂತಿ ಮತ್ತು ಸಮರ್ಥನೆಯನ್ನು ಪಡೆಯಿತು. ಭಾರತದ ಸಾರ್ವಜನಿಕ ಸಂಸ್ಥೆಗಳಲ್ಲಿರುವ ರಾಜಕೀಯ ಸಂಸ್ಕೃತಿಗೆ ಜನಕೇಂದ್ರಿತ ಚಳುವಳಿಗಳಾದ ಕಾರ್ಮಿಕ ವರ್ಗ, ರೈತ ಅಥವಾ ಶ್ರಮಜೀವಿಗಳ ಹೋರಾಟದ ಬಗ್ಗೆ ಸಹಾನುಭೂತಿ ಮತ್ತು ಸಮರ್ಥನೆಯ ಕೊರತೆ ಯಾವಾಗಲೂ ಇರುತ್ತಿತ್ತು. ಮಂಡಲ್ ಗೊಂದಲದ ಸಮಯದಲ್ಲಿ ಮಾತ್ರ ರೈಲುಗಳು ಓಡದಿದ್ದಾಗ, ವಾಹನ ಸಂಚಾರ ಸ್ಥಗಿತಗೊಂಡಾಗ ಎಲೀಟುಗಳಿಗೆ ಅದು ಕಾಡಲೇ ಇಲ್ಲ. ವೈರತ್ವಗಳು ಶೋಷಣೆಗೊಳಗಾದ ಜನರ ಮುಷ್ಕರಗಳಿಗಿಂತ ಹೆಚ್ಚಿನ ಸಮಯ ಸಮಾಜದಲ್ಲಿ ಮುಂದುವರಿದವು.

ವಾರ್ತಾಪತ್ರಿಕೆಗಳು ಮತ್ತು ಟಿವಿ ವರದಿಗಳ ಆಧಾರದಲ್ಲಿ ಊಹಿಸುವುದಾದರೆ ಪಾಶ್ಚಾತ್ಯ ಶಿಕ್ಷಣದ ಮತ್ತು ಮೇಲ್ಜಾತಿಯವರ ಮಕ್ಕಳಿಂದಾದ ವಿಧ್ವಂಸಕತೆ ಸಮಾಜದಲ್ಲಿ ಕ್ರಮಬದ್ಧ ಸಂವಾದವನ್ನು ಹುಟ್ಟುಹಾಕುತ್ತದೆ. ಅರ್ಹತೆ, ಸಾಮರ್ಥ್ಯ ಮತ್ತು ದಕ್ಷತೆ ಸುತ್ತ ಕೇಂದ್ರಿತವಾದ ಸಂವಾದ ಚರ್ಚೆಯ ಬಿಸಿಯನ್ನು ಹೆಚ್ಚಿಸುತ್ತದೆ. ವೇಗವಾದ ಈ ಚರ್ಚೆ ಆಯಾಮಗಳ ಬದಲಾಗಿ ಎರಡು ಅಪರಿಮೀಯ ಅಥವಾ ಜೊತೆ ಸೇರಲಾಗದಂತಹ ಸಂವಾದಗಳು ರೂಪತಳೆಯುತ್ತವೆ. ದಲಿತರು ಮತ್ತು ಒಬಿಸಿಗಳು ಬಳಸುವ ಪರಿಭಾಷೆಗಳು ಮೇಲ್ಜಾತಿ ಮತ್ತು ಪಾಶ್ಚಾತ್ಯ ಶಿಕ್ಷಿತರಿಗೆ ಸ್ಪಷ್ಟವಾಗಿ ಗೃಹಿಕೆಯಾಗಲಿಲ್ಲ. ಭಾರತದ ಸಾರ್ವಜನಿಕ ವಲಯದ ಕೆಟ್ಟ ವಿಭಜನೆಯಿಂದಾಗಿ ಗ್ರಹಿಕಾ ಕೊರತೆ ಮುಂದುವರಿದು ಪರಸ್ಪರ ವ್ಯಕ್ತಿನಿಷ್ಠ ತಿಳುವಳಿಕೆಯ ಬಗ್ಗೆ ಕನಿಷ್ಠ ಸಾರ್ವಜನಿಕ ಒಗ್ಗಟ್ಟು ಇಲ್ಲವಾಗಿದೆ.

ಇದು ಜಾತಿವಾದದ ಅವಧಿಯ ಆರಂಭ, ದಮನಿತ ಜಾತಿಗಳ ರಾಜಕೀಯವನ್ನು ಸಾರ್ವಜನಿಕವಾಗಿ ಜಾತಿವಾದವೆಂದು ಪರಿಗಣಿಸಲಾಗುತ್ತದೆ. ಅದರೆ ಇದಕ್ಕೆ ಮೇಲ್ಜಾತಿಯವರ ಪ್ರತಿರೋಧವನ್ನು ಈ ರೀತಿ ಜಾತಿವಾದವೆಂದು ಪರಿಗಣಿಸಲಾಗುವುದಿಲ್ಲ. ಈವರೆಗೆ ಅಭ್ಯರ್ಥಿಗಳ ನೇಮಕಾತಿ, ಉದ್ಯೋಗಿಗಳ ಅವಶ್ಯಕತೆ, ಸಹಾಯ, ಪ್ರೋತ್ಸಾಹ ನೀಡುವಾಗ ಜಾತಿಯನ್ನು ಮುಚ್ಚುಮರೆಯಲ್ಲಿ ಬಳಸಿದರೂ, ಇದನ್ನು ಕೀಳಾಗಿ ಪರಿಗಣಿಸಲಾಗಿತ್ತು. ಇದನ್ನು ಮಾಡುವವರು ಅಪರಾಧಿ ಪ್ರಜ್ಞೆಯಿಂದ ನರಳಿದರೆ ಇದರ ಪ್ರಯೋಜನ ಪಡೆದವರು ನಾಚಿಕೆಗೆ ಒಳಗಾಗುತ್ತಿದ್ದರು. ಮಂಡಲ್ ನಂತರ ಸಾಮಾಜಿಕ ಸ್ಥಾನಮಾನಗಳಲ್ಲಿ ಸಮಾನತೆಯನ್ನು ಪಡೆಯುವ ಹೋರಾಟದಲ್ಲಿ ದಮನಿತರಿಗೆ ಜಾತಿ ಗೌರವಯುತ ಪರಿಭಾಷೆಯಾಯಿತು. ಸಮಾಜದಲ್ಲಿ ತೀರಾ ಅತ್ಯಲ್ಪವಾದ ಅಧಿಕಾರ ಹಕ್ಕುಗಳನ್ನು ಹೆಚ್ಚಿಸುವ ಅಧಿಕಾರ ಕೊಡುವಿಕೆಯ ಸಬಲೀಕರಣವನ್ನಾಗಿ ಇದನ್ನು ಕಾಣಲಾಗಿದೆ.

ಸಮೂಹ ಮಾಧ್ಯಮದ ಸಾರ್ವಜನಿಕ ಚರ್ಚೆಯ ಮೇಲೆ ನಾವು ಕಣ್ಣು ಹಾಯಿಸಿದರೆ ಪ್ರಜಾಪ್ರಭುತ್ವದ ಅಧಃಪತನ ಇಲ್ಲಿಂದ ಪ್ರಾರಂಭವಾಗುತ್ತದೆ ಎಂಬ ಅರ್ಥ ಬರುತ್ತದೆ. ಈ ಜಾತಿವಾದಿ ಪ್ರಜಾಪ್ರಭುತ್ವ ಈಗ ನಮ್ಮ ಸಮಾಜದಲ್ಲಿ ಕ್ಯಾನ್ಸರಿನಂತಹ ಅಸ್ತಿತ್ವವನ್ನು ಹೊಂದಿದೆ. ಆದರೆ ಇದೇ ಪ್ರಜಾಪ್ರಭುತ್ವ ಎಲ್ಲ ವಿಕಲತೆ ಜೊತೆ ಭಯ ಹುಟ್ಟಿಸುವಂತಹ ಸ್ಥಿರತೆಯನ್ನು ಪಡೆಯುತ್ತದೆ. ಅದರ ಪ್ರತಿಪಾದನೆಯಲ್ಲಿ ದಿಟ್ಟತನವನ್ನು ತೋರುತ್ತದೆ. ಪ್ರಜಾಪ್ರಭುತ್ವದ ಶ್ರೇಷ್ಠ ಗ್ರಹಿಕೆ ಮತ್ತು ಅದರ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಭ್ರಾಂತಿಹರಣ ಉಂಟಾಗುತ್ತಿದೆ. ಆದರೆ ಈ ಸಾರ್ವಜನಿಕರಲ್ಲಿ ಯಾರು ಸೇರಿದ್ದಾರೆ? ಈಗಿನ ನಿದರ್ಶನದಂತೆ ಬರೆಯುವ, ಅನುಕೂಲ ಸ್ಥಳದಿಂದ ಪೋಷಣೆ ಮಾಡುವ, ಸಂವಾದ ಷರತ್ತುಗಳನ್ನು ಮಂಡಿಸುವ ಅಥವಾ ಯಾವುದನ್ನು ಸಾಮೂಹಿಕ ಸಾಮಾನ್ಯ ಜ್ಞಾನವೆಂದು ಪರಿಗಣಿಸಲಾಗುತ್ತಿದೆಯೇ ಅದನ್ನು ನಿರ್ಧರಿಸುವವರು. ಇವರ ಕೆಳಗೆ ಇರುವ ಅಪೂರ್ಣಾವಸ್ಥೆಯ ಜನರು, ಕೋಲಾಹಲ ಗದ್ದಲ ಸೃಷ್ಟಿಸಬಹುದಾದ ಗುಂಪು. ಆದರೆ ಜನಸಾಮಾನ್ಯರನ್ನೊಳಗೊಂಡ ಸಾರ್ವಜನಿಕರು ಅಥವಾ ಪಬ್ಲಿಕ್ ಈಗ ಪರಕೀಯರಾಗಿದ್ದಾರೆ. ಈ ಅಪೂರ್ಣಾವಸ್ಥೆಯ ಜನರು ಸ್ವ-ಚಲನಾಶೀಲರಾಗಿದ್ದಾರೆ. ಈ ಪರಕೀಯತೆಯಲ್ಲಿ ಎಲೀಟು ಮತ್ತು ಪಬ್ಲಿಕ್ ನಡುವೆ ಕಂದಕವಿದೆ. ಆದುದರಿಂದ ವಾದಸರಣಿ ಮುಂದುವರಿಸಬೇಕಾದರೆ ಕೇಳಬೇಕಾದ ಪ್ರಶ್ನೆ ಎಂದರೆ ಸಾರ್ವಜನಿಕ ಕೊರತೆ ಭಾರತದಲ್ಲಿ  ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದೆಯೇ ಎನ್ನುವುದಾಗಿದೆ.

ಎಲೀಟುಗಳ ನಡುವಿನ ಸಾಮಾನ್ಯ ಗ್ರಹಿಕೆಯ ಹೊರತಾಗಿಯೂ ಕಳೆದ ಐವತ್ತು ವರ್ಷಗಳಿಂದ  ಪ್ರಜಾಪ್ರಭುತ್ವ ಆಳವಾಗಿ ಬೇರೂರಿದೆ ಎನ್ನುವುದು ನಿರೂಪಿಸಲು ಸಾಧ್ಯ. ನೆಹರೂ ನಂತರ ಇಂದಿರಾಗಾಂಧಿಯವರು ಪ್ರಧಾನಮಂತ್ರಿ ಹುದ್ದೆಗೇರಿದ ಆರಂಭದಲ್ಲಿದ್ದ ಮೂಲಭೂತ ಜನಪ್ರಿಯತೆಯ ಹೊರತಾಗಿಯೂ ಇಂದು ಜನರು  ಪ್ರಜಾಪ್ರಭುತ್ವಕ್ಕೆ ಒಲಿದಿದ್ದಾರೆ. ಇವೆಲ್ಲ ಆಸಕ್ತಿದಾಯಕವಾಗಿ ಕಂಡರೂ ಮಾಹಿತಿಯ ಆಧಾರದಲ್ಲಿ ನಾವು ಪ್ರಸ್ತುತ ಭಾರತದ ರಾಜಕೀಯದ ಮೇಲೆ ಒಳನೋಟ ಬೀರಿದಾಗ ನಮಗೆ ಕೆಲವು ನಿಜ ಅಚ್ಚರಿಗಳು ಎದುರಾಗುತ್ತವೆ.

ಇಲ್ಲೊಂದು ವಿರೋಧಾಭಾಸ ವ್ಯಕ್ತವಾಗುತ್ತದೆ. ಸುದ್ದಿ ಪತ್ರಿಕೆಗಳು, ಟಿವಿ, ಪುಸ್ತಕ ಮತ್ತು ನಿಯತಕಾಲಿಕೆಗಳಲ್ಲಿ ಬುದ್ಧಿಜೀವಿ ವರ್ಗ ನೀಡುವ ವಿಶ್ಲೇಷಣಾತ್ಮಕ ವಿವರಣೆಯಿಂದ ಸಮಾಜದ ಎಲ್ಲ ವರ್ಗಗಳ ಜನರು ಸರಕಾರದ ಕಾರ‍್ಯವೈಖರಿಯ ಬಗ್ಗೆ ಸಂಶಯಗೊಂಡಿದ್ದಾರೆ ಹಾಗೂ ರಾಜಕೀಯ ಪಕ್ಷ ಮತ್ತು ರಾಜಕೀಯ ನಾಯಕರ ಮಾತು ಮತ್ತು ಕ್ರಿಯೆಗಳ ಮೇಲೆ ಜನರು. ಅಪನಂಬಿಕೆ ಮತ್ತು ಕೀಳು ಭಾವನೆ ಹೊಂದಿದ್ದಾರೆ ಎಂಬುದು ಸರಿಯೇ ಆಗಿದೆ. ಆದರೂ ಆಡಳಿತ ವ್ಯವಸ್ಥೆಯಾಗಿ  ಪ್ರಜಾಪ್ರಭುತ್ವವನ್ನು ಗುಮಾನಿ, ಸಂಶಯಕ್ಕೀಡು ಮಾಡುವುದು ಅಸಮರ್ಥನೀಯವಾದ ನೆಗೆತವಾಗುತ್ತದೆ. ಭಾರತದ  ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ತಾರ್ಕಿಕ ಅನುಮಾನಗಳ ಆಧಾರದಲ್ಲಿ ನಿಂತ ತಿಳುವಳಿಕೆ, ಕಷ್ಟಕಾರಿ ಮತ್ತು ವಿರೋಧಗಳಿಂದ ಕೂಡಿದ ಗ್ರಹಿಕೆ ಮತ್ತು ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಸರಿಹೊಂದುವುದಿಲ್ಲವೆಂಬುದು ಮುಂದಿನ ವಾದಗಳಲ್ಲಿ ಸ್ಪಷ್ಟವಾಗುತ್ತದೆ. ಹಾಗೂ ಭಾರತದ ಜನರ ಪ್ರಜ್ಞೆ ಆಂತರಿಕವಾಗಿ ವಿರೋಧಾತ್ಮಕವೆನ್ನುವುದನ್ನು ಕೂಡ ತೋರಿಸುತ್ತದೆ. ಈ ಪ್ರಜ್ಞೆ ವಿರೋಧಾತ್ಮಕ ಅನುಭವಗಳಿಂದ ಮತ್ತು ಸ್ಥಿರ ಸೈದ್ಧಾಂತಿಕ ನೆಲೆಗಳಿಂದ ಸೆಳೆಯಲ್ಪಟ್ಟದ್ದಲ್ಲ. ಗ್ರಹಿಕಾ ಸಿದ್ಧಾಂತಗಳು ನಾವು ಬದುಕುವ ಲೋಕದ ಒಟ್ಟು ಮೊತ್ತ ಅಥವಾ ನಮ್ಮ ಲೋಕದ ಪ್ರತ್ಯೇಕ ಪ್ರತಿನಿಧಿಸುವಿಕೆಗಳಾಗಿವೆ. ವಸ್ತುಗಳ ಪ್ರತಿನಿಧಿಸುವಿಕೆ ಎಲ್ಲ ಸಂದರ್ಭಗಳಲ್ಲೂ ನಿಖರವಾಗಿರುವುದಿಲ್ಲ. ಪ್ರಜ್ಞೆಯನ್ನು ವಾಸ್ತವಿಕೆಯಂತೆ ಪ್ರಮಾಣೀಕರಿಸಲಾಗುವುದಿಲ್ಲ. ಆದುದರಿಂದ ಪ್ರಜ್ಞೆಯ ಒಂದು ಪಾರ್ಶ್ವ ಜನರ ಅಂಶಗಳು ವಿಸ್ತರಿತ ಸಮಯದಲ್ಲಿ ಪ್ರಜಾಪ್ರಭುತ್ವದ ಒಪ್ಪಿಕೊಳ್ಳುವಿಕೆಯಲ್ಲಿ ಯಾವುದೇ ನಕಾರಾತ್ಮಕ ಪರಿಣಾಮವಿಲ್ಲದೆ ಪುಷ್ಟಿಕರವಾಗಿರಬಹುದು.

ಭಾರತದ ಹೆಚ್ಚಿನ ಜನರು ಬಹಳ ಅನರ್ಹವೆನಿಸುವಂಥ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ತಾರತಮ್ಯಗಳು. ಗರಿಷ್ಠ ಸಾಮರ್ಥ್ಯವನ್ನು ಸಾಧಿಸುವುದರಲಿ ಕನಿಷ್ಠ ಆಶೆಗಳನ್ನು ಈಡೇರಿಸಲಾಗದ ಅವಕಾಶ ಕೊರತೆಗಳಿಂದ ಬಹಿಷ್ಕೃತರು ಬಡತನದಲ್ಲಿ ತತ್ತರಿಸುತ್ತಿದ್ದಾರೆ. ಆದುದರಿಂದ ಸ್ವಾತಂತ್ರ್ಯದ ಆರಾಮವಾಗಲಿ, ಹುಸಿ ಚುನಾವಣಾ ಆಯ್ಕೆಯಾಗಲಿ ಈ ಜನರ ಸಮಸ್ಯೆಗಳನ್ನು ಪರಿಹರಿಸದೆ ಜನರು ಇದೇ ರೀತಿಯಲ್ಲಿ ಮುಂದುವರಿಯುತ್ತಾರೆಂಬುದು ಊಹಿಸುವುದು ಕೂಡ ಸಾಮಾನ್ಯಜ್ಞಾನವಾಗಿದೆ. ಆದರೆ ತಾರ್ಕಿಕವಾಗಿ ವಾಸ್ತವವಾಗಿ ತೋರುವುದು, ವಾಸ್ತವಿಕತೆಯಲ್ಲಿ ನಿಜವಲ್ಲ. ಜನರು ಪ್ರಜಾಪ್ರಭುತ್ವವನ್ನು ಬಯಸುತ್ತಾರೆ. ಜನರ ಅಸ್ತಿತ್ವದ ಸ್ಥಿತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರವೇ ಮುಖ್ಯ. ಆದರೆ ಆ ಪರಿಹಾರಕ್ಕಾಗಿ ಅವರು ಪ್ರಜಾಪ್ರಭುತ್ವಕ್ಕೆ ವಿದಾಯ ಹೇಳಲು ಬಯಸುವುದಿಲ್ಲ. ಭಾರತದಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳ ದಕ್ಷತೆ ಮತ್ತು ಹೊಣೆಗಾರಿಕೆ ಹಾಗೂ ಪ್ರಜಾತಾಂತ್ರಿಕ ಆಡಳಿತ ಮತ್ತು ಅದನ್ನು ಕ್ರಿಯಾಶೀಲಗೊಳಿಸುವ ಸಂಸ್ಥೆ ಮತ್ತು ಪ್ರಕ್ರಿಯೆಗಳ ಮೇಲೆ ದೃಢವಿಶ್ವಾಸ ಮತ್ತು ನಂಬಿಕೆಗಳ ನಡುವೆ ಸ್ಪಷ್ಟ ಅಸಾಂಗತ್ಯವಿದೆ. ಪ್ರಶ್ನೆ ಈ ಸ್ಥಿತಿಗೆ ಹೇಗೆ. ಬಹುರೂಪಿ ಅನುಭವಗಳಿಂದ ಯಾವಾಗಲೂ ಬದಲಾಗುತ್ತಾ ಇದ್ದು ಬಗೆಹರಿಸಲಾರದಂತಿರುತ್ತದೆ. ಆದರೆ ಪ್ರಜ್ಞೆಯ ಇನ್ನೊಂದು ಪಾರ್ಶ್ವ ಜನರು ಬದುಕುವ ಸಿದ್ಧಾಂತದ ಮೇಲೆ ಲಂಗರು ಹಾಕುತ್ತದೆ. ಪ್ರಜ್ಞೆಯ ಈ ವ್ಯಾಖ್ಯಾನವನ್ನು ಈ ಪ್ರಬಂಧದುದ್ದಕ್ಕೂ ಅದರ ಯಾವ ಪಾರ್ಶ್ವವೆಂದು ಸ್ಪಷ್ಟವಾಗಿ ಗುರುತಿಸಿದೆ ಬಳಸಲಾಗುತ್ತದೆ ಸೃಷ್ಟಿಯಾಯಿತು ಎನ್ನುವುದು ಮಾತ್ರವಲ್ಲದೆ, ಏನು ಈ ಸ್ಥಿತಿಯನ್ನು ಬಾಳುವಂತೆ ಮಾಡುತ್ತದೆ ಎನ್ನುವುದು ಕೂಡ ಆಗಿದೆ. ಪ್ರಜಾಪ್ರಭುತ್ವ ಮತ್ತು ಅದನ್ನು ಆವರಿಸಿರುವ ಅಧಿಕಾರದ ಸ್ವಭಾವವನ್ನು ನಿರ್ಣಯಿಸುವುದರೊಂದಿಗೆ ಪ್ರಜಾಪ್ರಭುತ್ವದ ಪರಿಗಣನೆಯನ್ನು ಆರಂಭಿಸೋಣ.

ಪ್ರಜಾಪ್ರಭುತ್ವದ ಬಗ್ಗೆ ಜನರ ನಿರ್ಣಯಿಸುವಿಕೆಯ ಮೇಲೆ ನಾವು ಕಣ್ಣು ಹಾಯಿಸಿದರೆ ಸ್ಪಷ್ಟವಾಗಿ ಗೋಚರಿಸುವ ಕಷ್ಟಕಾರಿ ಚಿತ್ರಣ ಮೂಡುತ್ತದೆ.  ಪ್ರಜಾಪ್ರಭುತ್ವದ ಪಾರ್ಶ್ವಗಳೊಂದಾದ  ಪ್ರಜಾಪ್ರಭುತ್ವದ ಮೌಲ್ಯ ಪ್ರಕ್ರಿಯೆ ಮತ್ತು ಸಂಸ್ಥೆಗಳ ವ್ಯವಸ್ಥೆ ಇನ್ನೊಂದು ಪಾರ್ಶ್ವವಾದ, ಇದನ್ನು ಕಾರ್ಯಗತಗೊಳಿಸುವ ಜನರು, ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಜಾಪ್ರಭುತ್ವದ ನಿರ್ಣಯಿಸುವಿಕೆಯನ್ನು ನಿರ್ಧರಿಸುತ್ತಾರೆ. ಜನರಿಗೆ  ಪ್ರಜಾಪ್ರಭುತ್ವ ಅನುಭವದ ಮಾದರಿಯೆನಿಸಿದೆ. ಆದರೆ  ಪ್ರಜಾಪ್ರಭುತ್ವದ ಅದರ ಎರಡು ಪಾರ್ಶ್ವಗಳಲ್ಲಿ ಅನುಭವ ಅಭಿಪ್ರಾಯ ಬೇಧದಿಂದ ಕೂಡಿದೆ.  ಪ್ರಜಾಪ್ರಭುತ್ವದ ಮೌಲ್ಯಗಳ ಬಗೆಗಿನ ಅಭಿಪ್ರಾಯಗಳು ವಿರೋಧಾತ್ಮಕವಾಗಿವೆ. ಈ ಕ್ಲಿಷ್ಟತೆ  ಪ್ರಜಾಪ್ರಭುತ್ವದ ಮೌಲ್ಯಗಳ ನಿರ್ಧರಿಸುವಿಕೆ ಮತ್ತು ಅವು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಸಂಬಂಧಿಸಿದೆ. ಎಲ್ಲ ಸಮಾಜಗಳಲ್ಲೂ ಇಂತಹ ಅಸಾಂಗತ್ಯಗಳು ಇರುವ ಸಾಧ್ಯತೆಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಕಳೆದ ೨೫ ವರ್ಷಗಳಿಂದ ಜನರ ಪ್ರಜಾಪ್ರಭುತ್ವದ ಅನುಭವಗಳಲ್ಲಿ ಆದ ಬದಲಾವಣೆಗಳಿಗೆ ಕಾರಣಗಳನ್ನು ಸ್ಪಷ್ಟಪಡಿಸಬೇಕಾಗುತ್ತದೆ. ೧೯೭೧ ಮತ್ತು ೧೯೯೬ರ ಎರಡು ನಿರ್ದಿಷ್ಟ ಅವಧಿಗಳ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯತ್ಯಾಸಗಳ ಸಮೀಕ್ಷೆಯ ಆಧಾರದಲ್ಲಿ ನಾವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅದರ ಕಾರ್ಯಕ್ಷಮತೆಯ ನಡುವಿನ ಅಸಾಂಗತ್ಯವನ್ನು ನಿರ್ಧರಿಸಬೇಕಾಗುತ್ತದೆ. ಇದಕ್ಕೆ ಆಧಾರಾಂಶಗಳಾದ ಪ್ರಜಾಪ್ರಭುತ್ವದ ಸಾಂಸ್ಥಿಕ ತಂತ್ರಗಳಾದ ಮತದಾನ ಪ್ರತಿನಿಧಿಸುವಿಕೆ, ರಾಜಕೀಯ ಪಕ್ಷ ಮತ್ತು ನಾಯಕರುಗಳ ಮೇಲೆ ಮೊದಲು ತ್ವರಿತವಾಗಿ ಕಣ್ಣುಹಾಯಿಸಿ ನಂತರ ಅವುಗಳನ್ನೆಲ್ಲ ಜೊತೆ ಸೇರಿಸಿ ಪ್ರಜಾಪ್ರಭುತ್ವವನ್ನು ಸ್ಥೂಲವಾಗಿ ನೋಡಬೇಕಾಗುತ್ತದೆ.

೧೯೯೬ರಲ್ಲಿ ನಡೆಸಿದ ಸಮೀಕ್ಷೆಯಂತೆ ಸುಮಾರು ಶೇಕಡಾ ೬೦ಕ್ಕಿಂತ ಸ್ವಲ್ಪ ಕಡಿಮೆ ಜನರು ದೇಶದ ಆಳ್ವಿಕೆ ಪ್ರಕ್ರಿಯೆ ಮೇಲೆ ತಮ್ಮ ಮತ ಪ್ರಭಾವ ಬಿರುತ್ತದೆಯೆಂಬ ನಂಬಿಕೆಯನ್ನು ಹೊಂದಿದ್ದಾರೆ.

ಇದರ ಸುಮಾರು ೨೫ ವರ್ಷಗಳಿಗಿಂತ ಮೊದಲು ೧೯೭೧ರಲ್ಲಿ ಶೇಕಡಾ ೪೮ ಜನರು ಮಾತ್ರ ಈ ರೀತಿ ಭಾವಿಸುತ್ತಿದ್ದರು. ತಮ್ಮ ಮತದ ಸಾಮರ್ಥ್ಯ ಮತ್ತು ಅಧಿಕಾರದ ಮೇಲೆ ಜನರ ದೃಢವಿಶ್ವಾಸ ಗಮನಾರ್ಹವಾಗಿ ಹೆಚ್ಚಾಗಿದೆ. ಜನಸಾಮಾನ್ಯರ ಮತದಾನ ಸಕ್ರಿಯತೆ ಅವರ ಅಧಿಕಾರದ ಸಂಭ್ರಮಾಚರಣೆಯಾಗಿದೆ. ಈ ಪ್ರಕ್ರಿಯೆ ಕೇವಲ ಮತದಾನಕ್ಕೆ ಮಾತ್ರ ಸಂಬಂಧಪಟ್ಟ ತಪ್ಪು ನಿರ್ಧಾರವಾಗಿದೆ. ಇತರ ಸಂಬಂಧಿತ ಸಂಸ್ಥೆಗಳ ಅರ್ಥೈಸುವಿಕೆಯಲ್ಲೂ ಕಾಣಬಹುದು. ಪ್ರಾತಿನಿಧ್ಯ ವ್ಯವಸ್ಥೆಯ ಅನುಮೋದನೆಯಲ್ಲೂ ನೋಡಬಹುದು. ಸುಮಾರು ಶೇಕಾಡು ೬೦ರಷ್ಟು ಜನರು ವ್ಯವಸ್ಥೆಯ ಕಾರ್ಯಚರಣೆಗೆ ಚುನಾವಣಾ ಪ್ರಾತಿನಿಧ್ಯ ಮಹತ್ವದೆಂದು ಯೋಚಿಸುತ್ತಾರೆ. ಶೇಕಡಾ ೬೧ರಷ್ಟು ಜನರು  ಪ್ರಜಾಪ್ರಭುತ್ವದ ಕಾರ್ಯಾಚರಣೆಗೆ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇರಿಸಿದ್ದಾರೆ. ಜನಸಾಮಾನ್ಯರ ಬಡತನ ಮತ್ತು ಅನಕ್ಷರತೆಯ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಿದರೆ ಇದು ಪ್ರಜಾಪ್ರಭುತ್ವದ ಸಂಸ್ಥೆಗಳ ಅಗಾಧ ಪ್ರಮಾಣದ ಅನುಮೋದನೆಯಾಗುತ್ತದೆ. ಮುಂದಿನ ಅಧ್ಯಾಯದಲ್ಲಿ ಸ್ಪಷ್ಟವಾಗುವಂತೆ ಉತ್ತಮ ಸ್ಥಾನ ಮತ್ತು ಜೀವನಮಟ್ಟವನ್ನು ಹೊಂದಿರುವವರಿಗಿಂತ ಹೆಚ್ಚು ಬಡವರು ಮತ್ತು ದುರ್ಬಲರು, ಪ್ರಜಾಪ್ರಭುತ್ವ ಮತ್ತು ಅದರ ಅತ್ಯಾವಶ್ಯಕವಾದ ಸಂಸ್ಥೆಗಳನ್ನು ಹೆಚ್ಚಿಗೆ ಅನುಮೋದಿಸುತ್ತಾರೆ.

ತಮ್ಮ ಎಡರುತೊಡರುಗಳ ನಡುವೆಯೂ ಜನರು ಪ್ರಜಾಪ್ರಭುತ್ವದ ಮೇಲಿಟ್ಟಿರುವ ನಂಬಿಕೆ ಅಚ್ಚರಿ ತರುತ್ತದೆ. ಅಚ್ಚರಿ ಯಾಕೆಂದರೆ ಶೇಕಡಾ ೬೩ರಷ್ಟು ಜನರು ತಾವು ಚುನಾಯಿಸಿದ ಪ್ರತಿನಿಧಿಗಳು ತಮ್ಮ ಮತದಾರರ ಬಗ್ಗೆ ಕಾಳಜಿ ಹೊಂದಿಲ್ಲವೆಂದು ಯೋಚಿಸುತ್ತಾರೆ. ಶೇಕಡಾ ೨೨ರಷ್ಟು ಜನರು ಮಾತ್ರ ತಮ್ಮ ಪ್ರತಿನಿಧಿಗಳು ತಮ್ಮ ಬಗ್ಗೆ ಕಾಳಜಿ ಹೊಂದಿದ್ದಾರೆಂಬ ಯೋಚನೆ ಹೊಂದಿದ್ದಾರೆ. ಪ್ರಾತಿನಿಧ್ಯ ವ್ಯವಸ್ಥೆಯ ಬಗ್ಗೆ ಗೌರವ, ಆದರೆ ಆಯ್ಕೆಯಾದ ಪ್ರತಿನಿಧಿಗಳ ಪರಿಣಾಮದ ಬಗ್ಗೆ ಕನಿಷ್ಟಮಟ್ಟದ ನಂಬಿಕೆ ಈ ಅಚ್ಚರಿ ಮತ್ತು ತಳಮಳಕ್ಕೆ ಮೂಲವಾಗಿದೆ. ೧೯೭೧ರಲ್ಲಿ ಕೇವಲ ಶೇಕಡಾ ೫೮ರಷ್ಟು ಜನರು ಪ್ರಜಾತಾಂತ್ರಿಕ ವ್ಯವಸ್ಥೆಯ ಬಗ್ಗೆ ನಂಬಿಕೆ ಹೊಂದಿದ್ದರು ಮತ್ತು ಶೇಕಡಾ ೨೭ರಷ್ಟು ಜನರು ಆಯ್ಕೆಯಾದ ಪ್ರತಿನಿಧಿಗಳ ಪರಿಣಾಮವನ್ನು ಗುರುತಿಸಿದ್ದರು. ಆದರೆ ೧೯೯೬ರಲ್ಲಿ ಈ ಪರಿಣಾಮದ ಗುರುತಿಸುವಿಕೆ ಶೇಕಡಾ ೨೩ಕ್ಕೆ ಇಳಿಯುತ್ತದೆ. ಇಲ್ಲಿ ಸ್ಪಷ್ಟವಾಗುವುದೇನೆಂದರೆ ಜನರು ಪ್ರತಿನಿಧಿ ವ್ಯವಸ್ಥೆಯನ್ನು ಮನ್ನಿಸುತ್ತಾರೆ. ಆದರೆ ಅವರನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಗೌರವಕ್ಕೆ ಅರ್ಹರಲ್ಲ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ಇದೇ ಅಭಿಪ್ರಾಯ ತಮ್ಮ ಜೀವನದಲ್ಲಿ ಪ್ರತಿದಿನ ಆನುಭವಿಸುವ ಅದರ ಮಹತ್ವದ ಅರ್ಥದಲ್ಲಿ ನಾವು ಮಾಡಬಹುದಾದ ಅಥವಾ ಮಾಡಲು ಸಾಧ್ಯವಾದ ದಿನನಿತ್ಯದ ವಿಷಯಗಳಿಗೆ ಸಂಬಂಧಿಸಿದೆ. ಕೇವಲ ಶೇಕಡಾ ೩೧ರಷ್ಟು ಜನರು ಮಾತ್ರ ಸರಕಾರಿ ಅಧಿಕಾರಿಗಳು ಮತ್ತು ಜನರ ಸಂಬಂಧಗಳು ಶಾಂತಿಯುತವಾಗಿವೆ ಎಂದು ಯೋಚಿಸುತ್ತಾರೆ, ಶೇಕಡಾ ೨೮ರಷ್ಟು ಜನರು ಸಾರ್ವಜಿನಿಕ ಜೊತೆಗೆ ಪೊಲೀಸರು ಮಾನವೀಯ ನೆಲೆಯಲ್ಲಿ ವ್ಯವಹರಿಸುತ್ತಾರೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇಕಡಾ ೪೨ರಷ್ಟು ಜನರಿಗೆ ನೌಕರಶಾಹಿ ವರ್ಗದ ಮೇಲೆ ನಂಬಿಕೆಯೇ ಇಲ್ಲವಾಗಿದೆ. ಶೇಕಡಾ ೫೭ರಷ್ಟು ಜನರು ಪೊಲೀಸರನ್ನು ನಂಬುವುದೇ ಇಲ್ಲ (ಈ ಕಾರಣಗಳಿಂದಾಗಿ ಶೇಕಡಾ ೮೦ರಷ್ಟು ಜನರು ರಾಜಕೀಯ ನೇತಾರರನ್ನಾಗಲಿ, ಸರಕಾರಿ ಅಧಿಕಾರಿಗಳನ್ನಾಗಲೀ ಭೇಟಿಯಾಗಿಲ್ಲವೆನ್ನುವ ಅಂಶ ಇಲ್ಲಿ ಅಚ್ಚರಿ ಹುಟ್ಟಿಸುವುದಿಲ್ಲ). ಇದು ಜನರು ಸಿಕ್ಕಾಪಟ್ಟೆ ಅಥವಾ ಮನಬಂದಂತೆ ಮಾಡಿದ ಪರ್ಯಾಲೋಚನೆ ಎನ್ನುವುದನ್ನು ಸರಳವಾಗಿ ನಿರೂಪಿಸಬಹುದು. ಏಕೆಂದರೆ ಇದೆ ಜನರು ಇತರ ಸಂಸ್ಥೆಗಳನ್ನು ಮೌಲ್ಯಮಾಪನದಲ್ಲಿ ಉನ್ನತವಾಗಿ ಪರಿಗಣಿಸುತ್ತಾರೆ. ಸುಮಾರು ಶೇಕಡಾ ೭೫ಕ್ಕಿಂತ ಹೆಚ್ಚಿನ ಜನರು ನ್ಯಾಯಾಂಗ ಮತ್ತು ಚುನಾವಣಾ ಆಯೋಗದ ಬಗ್ಗೆ ಪ್ರಶಂಸನೀಯ ರೀತಿಯಲ್ಲಿ ಯೋಚಿಸುತ್ತಾರೆ. ಈ ಎಲ್ಲ ಮಾಹಿತಿಗಳಲ್ಲಿ ವೈರುಧ್ಯತೆಯನ್ನು ಗುರುತಿಸಬಹುದಾದ ಅಂಶ ಯಾವುದೆಂದರೆ, ಶೇಕಡಾ ೪೩ರಷ್ಟು ಜನರು ರಾಜಕೀಯ ಪಕ್ಷಗಳಿಂದಾಗಿ ಸರಕಾರದ ಗಮನ ಜನರೆಡೆಗೆ ಸೆಳೆಯಲ್ಪಡುತ್ತದೆಂಬ ಅಭಿಪ್ರಾಯವನ್ನು ಹೊಂದಿದ್ದರೆ. ಶೇಕಡಾ ೩೦ರಷ್ಟು ಜನರು ರಾಜಕೀಯ ಪಕ್ಷಗಳು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲವೆನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರು ರಾಜಕೀಯದೊಂದಿಗೆ ವ್ಯವಹರಿಸುವ ಹಾಗೂ ರಾಜಕೀಯದಿಂದ ಕಲಿಯುವ ಮಾರ್ಗದಲ್ಲಿ ನಿರ್ಣಾಯಕ ಒಡಕು ಇದೆ. ಜನರ ರಾಜಕೀಯ ಅನುಭವಗಳ ಕ್ಲಿಷ್ಟತೆಯನ್ನು ಭಾರತೀಯ ಪ್ರಜಾಪ್ರಭುತ್ವದ ಶೈಕ್ಷಣಿಕ ಅಥವಾ ಪತ್ರಿಕಾ ವರದಿಗಳಿಂದಾಗಲಿ ಸಂಗ್ರಹಿಸಲಾಗಿಲ್ಲ, ಜನರು ಅನುಭವದ ಮೂಲಕ ತಳಕು ಹಾಕಿದ ಪ್ರಜಾಪ್ರಭುತ್ವದ ಅರ್ಥೈಸುವಿಕೆಯನ್ನು ಅರ್ಥ ಮಾಡಿಕೊಳ್ಳಲು ಕೇವಲ ತಾರ್ಕಿಕ ನಿರ್ಗಮನ ಸಹಾಯಕಾರಿಯಾಗುವುದಿಲ್ಲ. ಪ್ರಜಾಪ್ರಭುತ್ವ ಕುಟುಂಬ ಅಥವಾ ಆಹಾರಕ್ಕಿಂತಲೂ ಮಿಗಿಲಾದುದಲ್ಲದಿದ್ದರೂ, ಇವಕ್ಕೆ ಸಂಬಂಧಿಸಿದ ನಿರಂತರ ಸಮಸ್ಯೆಗಳು ಮತ್ತು ಪ್ರಜಾಪ್ರಭುತ್ವದ ಅವಶ್ಯಕತೆಯ ಬಗ್ಗೆ ಜನರು ವೈರುಧ್ಯವನ್ನು ಕಾಣುವುದಿಲ್ಲ. ರಾಜಕೀಯ ನಾಯಕರ ಬಗ್ಗೆ ಅತೃಪ್ತಿ ಮತ್ತು ಪರಕೀಯಭಾವದ ಹೊರತಾಗಿಯೂ, ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಸ್ಥೆಗಳು ಪ್ರಜಾಪ್ರಭುತ್ವವನ್ನು ಒಂದು ಸರಿಯಾದ ನಂಬಲರ್ಹವಾದ ಆಡಳಿತ ವ್ಯವಸ್ಥೆಯಾಗಿ ಆಯ್ಕೆ ಮಾಡದಿದ್ದರೂ, ಸಾಮಾನ್ಯ ಭಾರತೀಯನಿಗೆ ಪ್ರಜಾಪ್ರಭುತ್ವ ಮೌಲ್ಯಯುತವಾದುದು ಮತ್ತು ರಕ್ಷಿಸಬೇಕಾದುದಾಗಿದೆ. ರಾಜಕೀಯ ಪಕ್ಷಗಳಿಲ್ಲದೆ, ಚುನಾವಣೆಗಳಿಲ್ಲದೆ, ಸಹಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದೇ ಎಂಬ ಪ್ರಶ್ನೆಯನ್ನು ಬಹುಜನರು ಶೇಕಡಾ ೭೦ಕ್ಕೆ ಹತ್ತಿರ ಇಲ್ಲವೆನ್ನುವ ಮೂಲಕ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಕೇವಲ ಶೇಕಡಾ ೧೧ರಷ್ಟು ಜನರು ಮಾತ್ರ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳನ್ನು ಬೆಂಬಲಿಸುವ ಸಂಸ್ಥೆಗಳಲ್ಲಿ ಏನೇ ಆದರೂ ಕೂಡ, ೧೯೮೦ ಮತ್ತು ೧೯೯೦ರ ದಶಕದಲ್ಲಿ ಇವುಗಳ ದೌರ್ಬಲ್ಯ ಸ್ಪಷ್ಟ ಗೋಚರವಾದರೂ ಕೂಡ, ಜನರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಡಿಮೆಯಾಗಿಲ್ಲ. ಯಾಕೆಂದರೆ ಇದು ಜನರ ಹೋರಾಟಕ್ಕೆ ಸ್ಥಳವನ್ನೊದಗಿಸುತ್ತದೆ. ವಾಸ್ತವದಲ್ಲಿ ಪ್ರಜಾಪ್ರಭುತ್ವದ ಮೇಲಿನ ದೃಢವಿಶ್ವಾಸ ಬೆಳೆದಿದೆ ಹಾಗೂ ಹೆಚ್ಚು ವಿಸ್ತರಿಸಿದೆ. ೧೯೭೧ರಲ್ಲಿ ಶೇಕಡಾ ೪೩ರಷ್ಟು ಜನರು ಮಾತ್ರ ಈ ಮಟ್ಟದ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು ಹಾಗೂ ಶೇಕಡಾ ೪೨ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ ೧೯೯೬ರಲ್ಲಿ ಕೇವಲ ಶೇಕಡಾ ೧೯ರಷ್ಟು ಜನರು ಮಾತ್ರ ವ್ಯಕ್ತಪಡಿಸಿಲ್ಲ. ಶೇಕಡಾ ೧೪ರಷ್ಟು ಜನರು ಮಾತ್ರ ಚುನಾವಣೆ ಮತ್ತು ರಾಜಕೀಯ ಪಕ್ಷಗಳಿಲ್ಲದೆ ದೇಶ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಮತದಾನದ ಪರಿಣಾಮ ಮತ್ತು ಪ್ರಜಾಪ್ರಭುತ್ವದ ಸ್ವೀಕಾರಾರ್ಹತೆಯ ನಿರ್ಧರಿಸುವಿಕೆ ಮಾಹಿತಿಯ ನಂಬಲರ್ಹತೆಯನ್ನು ಸ್ವೀಕಾರಾರ್ಹಗೊಳಿಸುತ್ತದೆ. ಪ್ರಜಾಪ್ರಭುತ್ವದ ಈ ವಿಸ್ತೃತ ಸ್ವೀಕಾರಾರ್ಹತೆ ರೂಪುಗೊಂಡ ಈ ಅವಧಿಯನ್ನು ನಾವು ಮುಂದೆ ಸಂಕ್ಷಿಪ್ತವಾಗಿ ಪರಿಶೀಲಿಸಬೇಕಾಗುತ್ತದೆ.

ಭಾರತದ ರಾಷ್ಟ್ರೀಯತೆಯಲ್ಲಿ ೧೯೭೧ರಲ್ಲಿ ವರ್ಷ ಕ್ರಾಂತಿಕಾರಿ ಜನಪ್ರಿಯತೆಯ ಉನ್ನತ ಕ್ಷಣ, ವಿಜಯೀ ಗುರುತು. ೧೯೭೧ರಲ್ಲಿ ನಡೆಸಿದ ಸಮೀಕ್ಷೆಯಂತೆ ಇಂದಿರಾಗಾಂಧಿಯವರು ಕಾಂಗ್ರೆಸ್ಸಿನೊಳಗಿನ ಸಾಂಪ್ರದಾಯಿಕ ಬಣವನ್ನು ನಿರ್ಣಾಯಕವಾಗಿ ಸೋಲಿಸಿದ ನಂತರ. ಅವರನ್ನು ಇನ್ನೂ ಹೆಚ್ಚು ಅಂಚಿಗೆ ತಳ್ಳಲು ಒಂದರ ಮೇಲೊಂದು ಕ್ರಾಂತಿಕಾರಿ ಸೂಕ್ಷ ಕಾರ್ಯಕ್ರಮಗಳನ್ನು ಪ್ರಕಟಿಸಲಾಯಿತು. ಇವೆಲ್ಲದರ ಪರಿಣಾಮವೇ ಭಾರತದ ರಾಜಕೀಯದಲ್ಲಿ ಹಿಂದೆಂದೂ ಪ್ರಕಟವಾಗದ ಆಕರ್ಷಣೀಯ ಬಲೆಗೆ ಬೀಳಿಸುವ ಘೋಷಣೆ ಗರೀಬಿ ಹಟಾವೋ, ಪೂರ್ವ ಪಾಕಿಸ್ತಾನದ ಭಾಗದಿಂದ ಬಾಂಗ್ಲಾದೇಶದ ರಚನೆಯ ನಂತರದ ಈ ಸ್ಥಿತಿ ಒಂದು ಭ್ರಾಂತಿಕಾರತೆಯನ್ನು ಸೃಷ್ಟಿಸುತ್ತದೆ. ಆದರೆ ಅಚ್ಚರಿದಾಯಕವಾಗಿ ಈ ಚುನಾವಣಾ ವಿಜಯದ ನಂತರದ ಸ್ಥಿತಿ ಭಾರತಕ್ಕೆ ಒಂದು ಮಹತ್ವಪೂರ್ಣ ಸವಾಲಾಗುತ್ತದೆ. ಈ ವಿಜಯ ಮುಂದೆ ಗಟ್ಟಿಗೊಳ್ಳುವ ಬದಲು ದೇಶ ಜನಸಾಮಾನ್ಯರ ಸತತ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಗುಜರಾತಿನ ಜನಸಾಮಾನ್ಯರ ಪ್ರತಿಭಟನೆಯ ನಂತರ ಬಿಹಾರದ ದೀರ್ಘವಾದ ಜನ ಚಳುವಳಿ ವೇಗವಾಗಿ ಬೆಳೆದು ಜಯಪ್ರಕಾಶ್ ಅಥವಾ ಜೆ.ಪಿ. ಚಳುವಳಿಯಾಗಿ ಭಾರತದ ಹೆಚ್ಚಿನ ಭಾಗಗಳಲ್ಲಿ ಬೆಳೆಯುತ್ತದೆ. ಈ ಅವಧಿಯಲ್ಲಿ ಭಾರತದ ಹಿಂದಿನ ಹೋರಾಟಗಳಾದ ಕಾರ್ಮಿಕ ವರ್ಗದ ಪ್ರತಿಭಟನೆಗಳು ತೀವ್ರವಾಗಿ ಬೆಳೆದು ರೈತ ಮುಷ್ಕರದಲ್ಲಿ ಅಂತಿಮ ಘಟ್ಟವನ್ನು ತಲುಪುತ್ತದೆ.

೧೯೬೯ರ ಇಂದಿರಾಗಾಂಧಿ ಪರಿಣಾಮದ ಕಾಂಗ್ರೆಸ್ ವಿಭಜನೆಯ ನಂತರ ರಾಜ್ಯ ಅಧಿಕಾರ ಕೇಂದ್ರಿಕರಣ ಪ್ರಕ್ರಿಯೆ ಒಳಪಟ್ಟು ನಂತರ ಎದುರಾದ ಎಲ್ಲ ಸವಾಲುಗಳನ್ನು ಹೆಚ್ಚಿನ ಮತ್ತು ತೀಕ್ಷ್ಣ ದಬ್ಬಾಳಿಕೆಯ ಮೂಲಕ ಎದುರಿಸುತ್ತದೆ. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿರಿ’ ಚಳುವಳಿಯಲ್ಲಿ ಬಂಧಿಸಲ್ಪಟ್ಟ ಜನರಿಗಿಂತ ಹೆಚ್ಚು ಜನರು ಬಂಧಿಸಲ್ಪಡುತ್ತಾರೆ. ಪೊಲೀಸರ ಗುಂಡಿನೇಟಿಗೆ ಬಲಿಯಾಗುತ್ತಾರೆ. ಈ ಕ್ರಿಯೆಗಳು ಸ್ವತಂತ್ರ ಭಾರತದ ಕರಾಳ ಆಧ್ಯಾಯನವಾದ ಆಂತರಿಕ ತುರ್ತುಪರಿಸ್ಥಿತಿಯ ಹೇರಿಕೆ ಮತ್ತು ಪ್ರಜಾಪ್ರಭುತ್ವದ ಪರಿತ್ಯಾಗದಲ್ಲಿ ಪರಾಕಾಷ್ಠೆಯನ್ನು ತಲುಪುತ್ತದೆ. ಅಲ್ಲಿಯವರೆಗೆ ಭಾರತದ ರಾಜಕೀಯದಲ್ಲಿ ವಿರಳ ಮತ್ತು ನಿಧಾನವಾಗಿ ವ್ಯಾಪಿಸುತ್ತಿದ್ದ ಸರ್ವಾಧಿಕಾರ ಸಾಂಸ್ಥೀಕರಣಕ್ಕೊಳಗಾಗುತ್ತದೆ. ಆದರೆ ಸುಯೋಗವೆಂಬಂತೆ ಈ ನಿರಂಕುಶ ಪ್ರಭುತ್ವ ಕೇವಲ ೧೯ ತಿಂಗಳು ಮಾತ್ರ ಮುಂದುವರಿಯುತ್ತದೆ.

ಈ ಸಂದರ್ಭದಲ್ಲಿ ೧೯೮೦ರ ದಶಕದಲ್ಲೂ ಮುಂದುವರಿದ ಲಕ್ಷಣವನ್ನು ನಾವು ಅವಶ್ಯಕವಾಗಿ ಮರು ನೆನಪಿಸಿಕೊಳ್ಳಬೇಕಾಗುತ್ತದೆ. ೧೯೭೧ರಲ್ಲಿ ಇಂದಿರಾಗಾಂಧಿಯವರು ಜನರಿಂದ ಅಗಾಧ ಜನಮನ್ನಣೆಯನ್ನು ಪಡೆಯುತ್ತಾರೆ. ಕಮ್ಯೂನಿಸ್ಟರನ್ನು ಹೊರತುಪಡಿಸಿ, ಇತರ ಒಗ್ಗಟ್ಟಾದ ವಿರೋಧ ಪಕ್ಷಗಳು ಸೋಲಿಸಲ್ಪಡುತ್ತವೆ. ಆದ್ದರಿಂದ ೧೯೮೪ರ ಚುನಾವಣೆಗಳವರೆಗೆ ಇಂದಿರಾಗಾಂಧಿಯವರ ಹತ್ಯೆ ಮತ್ತು (ಅದರಿಂದಾಗಿ ಉಂಟಾದ ಸಿಖ್ಖರ ಸಾಮೂಹಿಕ ನರಮೇಧ) ರಾಜೀವ್ ಗಾಂಧಿಯವರ ಅಧಿಕಾರಾರೋಹಣದವರೆಗೆ ಭಾರತದ ಸಾರ್ವಜನಿಕ ರಾಜಕೀಯ ಚಿತ್ತಸ್ಥಿತಿ ಹಿಂದು ಮುಂದಾಗುತ್ತದೆ. ಚುನಾವಣಾ ಫಲಿತಾಂಶ ಮತ್ತು ಚುನಾವಣಾ ಪ್ರಕ್ರಿಯೆಯ ನಡುವಿದ್ದಂತಹ ರಾಜಕೀಯ ಪ್ರತಿಕ್ರಿಯೆ ಉಲ್ಲಂಘನೆಯಾಗುತ್ತದೆ. ಯಾವ ಸರಕಾರಕ್ಕಾಗಿ ಜನರು ಅಗಾಧ ಪ್ರಮಾಣದ ಮತ ಬೆಂಬಲ ವ್ಯಕ್ತಪಡಿಸಿದ್ದರೋ ಅದೇ ಜನರು ಅದೇ ಸರಕಾರದ ವಿರುದ್ಧ ತಿರುಗಿ ಬಿದ್ದು ಭಾರತದ ರಾಜ್ಯ ಸಾರ್ವಜನಿಕ ಆಕ್ರಮಣಕ್ಕೊಳಗಾಗುತ್ತದೆ.

ತುರ್ತು ಪರಿಸ್ಥಿತಿ ಪ್ರಭುತ್ವವನ್ನು ಮಣಿಸಿ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಿದ ಜನತಾ ಸರಕಾರ ಕೂಡ ಇದೇ ರೀತಿಯ ಜನತಾ ಕ್ಷೋಬೆಯನ್ನು ಎದುರಿಸಬೇಕಾಗುತ್ತದೆ. ೧೯೮೦ ಮತ್ತು ೧೯೮೪ರ ಸ್ಥಿತಿ ಕೂಡ ಇದೇ ಆಗಿರುತ್ತದೆ. ಇದು ಜನರ ಸಮಸ್ಯೆಗಳಿಗೆ ಆಳುವ ವರ್ಗ ಪ್ರತಿಕ್ರಿಯಾತ್ಮಕವಾಗಿ ಸ್ಪಂದಿಸದಿರುವುದನ್ನು ಹಾಗೂ ಸರಕಾರದ ಹೊಣೆಗಾರಿಕೆಯ ಕೊರತೆ ಹಾಗೂ ಬೇಜವಾಬ್ದಾರಿಯನ್ನು ಸ್ಪಷ್ಟವಾಗಿ ತೋರಿಸಿ ಕೊಡುತ್ತದೆ. ಈ ತೊಳಲಾಟ ೧೯೮೯ರ ನಂತರ ಸಮ್ಮಿಶ್ರ, ಅಲ್ಪಸಂಖ್ಯಾತ ಬಲದ ಸರಕಾರಗಳ ಯುಗ ಪ್ರಾರಂಭವಾದ ನಂತರ ಕೊನೆಯಾಗುತ್ತದೆ.

ರಾಜಕೀಯ ಈ ಹಂತ ನಾಯಕರನ್ನು ಅಪಮೌಲ್ಯಕ್ಕೀಡು ಮಾಡುವ, ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಸ್ಥೆಗಳು ಅವುಗಳ ಸ್ವಾಯತ್ತತೆಯನ್ನು ಕಳೆದುಕೊಂಡು ಕೇವಲ ಅಧಿಕಾರ ಚಲಾವಣೆಯ ಯಂತ್ರಗಳಾಗುವ ಸ್ಥಿತಿ. ಇವು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೇರಲಾದ ಸ್ಥಿತಿಯಾಗಿದ್ದು ಈಗಲೂ ಹೆಚ್ಚು ಕಡಿಮೆ ಉಳಿದಿದೆಯೆಂದು ಈಗ ನಾವು ಊಹಿಸಬಹುದು. ಈ ಕಾರಣದಿಂದಾಗಿ ಜನರು ಇವುಗಳಲ್ಲಿ ನಂಬಿಕೆ ಉಳಿಸಿಕೊಂಡಿಲ್ಲ. ಎಡೆಬಿಡದೆ ಪ್ರಕಟವಾದ ದೈತ್ಯ ಭ್ರಷ್ಟಾಚಾರದ ಮತ್ತು ಸಾರ್ವಜನಿಕನಿಧಿ ವಂಚನೆಯ ಪ್ರಕರಣಗಳಾದ ರಾಜೀವ್ ಗಾಂಧಿಯವರನ್ನೊಳಗೊಂಡ ಬೋಫೋರ್ಸ್ ಅಥವಾ ನರಸಿಂಹರಾವ್ ಅವರನ್ನು ಒಳಗೊಂಡ ಹವಾಲ ಪ್ರಕರಣಗಳಿಂದಾಗಿ ರಾಜಕೀಯ ನಾಯಕರು ಮತದಾರವರ್ಗದ ಮರುವಿಶ್ವಾಸವನ್ನು ಗಳಿಸಲು ಸುಲಭ ಸಾಧ್ಯವಾಗಿಲ್ಲ. ಎಡಪಕ್ಷಗಳು ಹೊರತುಪಡಿಸಿ ಇತರ ಪಕ್ಷಗಳ ಸ್ಥಿತಿ ಕೂಡ ಉತ್ತಮವಾಗಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮಧ್ಯಮಮಾರ್ಗಿ ಸಮ್ಮಿಶ್ರ ಪಕ್ಷಗಳಾಗಲಿ ಅಥವಾ ಏಕಪಕ್ಷವಾಗಿರಲಿ ಈ ತೀಕ್ಷ್ಣವಾಗಿ ಕಾಡುವ ರೋಗದಿಂದ ಪೀಡಿಸಲ್ಪಡುತ್ತದೆ. ಕಾಂಗ್ರೆಸ್ ಸರಕಾರದ ಆಡಳಿತ ಅನುಭವಿಸಿದ ಜನರು ಅದನ್ನು ನಿರಾಕರಿಸಿದರು. ಪರ್ಯಾಯವಾಗಿ ಸ್ಥಾಪಿಸಲಾದ ಜನತಾಪಕ್ಷ ಅಥವಾ ಜನತಾದಳ ಉತ್ತಮ ಉದ್ದೇಶಗಳಿಂದ ಆಡಳಿತ ಪ್ರಾರಂಭಿಸಿದರೂ ಅದನ್ನು ಹೆಚ್ಚು ಸಮಯ ಮುಂದುವರಿಸಲಾಗಲಿಲ್ಲ. ವಿಭಜನೆ ಮತ್ತು ಮಧ್ಯಮಮಾರ್ಗಿ ರಾಜಕೀಯ ಪಕ್ಷಗಳ ಈ ಸಹಿಸಲಾಗದ ವರ್ತನೆಯೇ ಜನರು ಈ ಪಕ್ಷಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ತಳೆಯುವಂತೆ ಮಾಡುತ್ತದೆ.

ಪ್ರಜಾಪ್ರಭುತ್ವವನ್ನು ಸುತ್ತುವರಿದಿರುವ ಹೆಚ್ಚಿನ ಅಂಶಗಳು ಸಂದೇಹಸ್ಪದವಾದರೂ, ಪ್ರಜಾಪ್ರಭುತ್ವವನ್ನು ವಿಸ್ತಾರವಾಗಿ ಮತ್ತು ಗಟ್ಟಿಯಾಗಿ ಅನುಮೋದಿಸುವ ಕಾರಣಗಳನ್ನು ಸಂಭೋಧಿಸುವ ಮೊದಲು. ಮಹತ್ವದ ಅಂಶವಾದ ಪ್ರಜಾಪ್ರಭುತ್ವದ ಅನುಮೋದನೆಯ ಅಂತರಾರ್ಥವನ್ನು ಗುರುತಿಸಬೇಕಾಗುತ್ತದೆ. ಪ್ರಜಾಪ್ರಭುತ್ವ ಒಂದು ಆಡಳಿತ ವ್ಯವಸ್ಥೆಯಾಗಿ, ಅಧಿಕಾರದ ಸಂರಚನೆಯಾಗಿ, ಸಂಘರ್ಷಗಳಿಗೆ ಸ್ಥಳಾವಕಾಶವಾಗಿ ತನ್ನ ಪ್ರಕ್ಷುಬ್ಧ ಸಮಯದ ದೀರ್ಘಾವಧಿಯಲ್ಲಿ ಸ್ವತಂತ್ರ‍್ಯವಾಗಿ ಮತ್ತು ಅದಕ್ಕಾಗಿಯೇ ಮಾನ್ಯತೆ ಪಡೆದಿದೆ. ಪ್ರಜಾಪ್ರಭುತ್ವಕ್ಕೆ ತನ್ನ ಅಸ್ತಿತ್ವಕ್ಕಾಗಿ, ಜನರ ನಂಬಿಕೆಯುಳ್ಳ ಪ್ರಜಾಪ್ರಭುತ್ವದ ಪೋಷಕರಂತಿರುವ ಶಕ್ತಿಶಾಲಿ ನಾಯಕರ ಕಂಕುಳುಗೋಲುಗಳ ಅವಶ್ಯಕತೆಯಿಲ್ಲ. ನೆಹರೂ ಅವರ ಬದ್ಧತೆ, ಇಂದಿರಾಗಾಂಧಿಯವರ ಜನಪ್ರಿಯತೆ ಪ್ರಜಾಪ್ರಭುತ್ವ ಅದರ ಸತ್ಕರಿಸದ ಪರಿಸರವೆಂದು ಗುರುತಿಸಿದ ಸಂದರ್ಭದಲ್ಲಿ ದಿಂಬನ್ನೊದಗಿಸಿತು. ಆದರೆ ತುರ್ತುಪರಿಸ್ಥಿತಿ ಅದನ್ನೆಲ್ಲ ಬದಲಾಯಿಸಿತು. ಸ್ವಾತಂತ್ರ್ಯ ಕಳೆದುಕೊಂಡರೇನಾಗುತ್ತದೆ ಎಂದು ಜನರಿಗಾಗ ಸ್ಪಷ್ಟವಾಯಿತು. ಈ ಹಿನ್ನಲೆಯ ನೆನಪಿನಿಂದ ಸ್ವಾತಂತ್ರ್ಯೋಕ್ಕೋಸ್ಕರ ಹೋರಾಟ ಸಾಧ್ಯವೆನ್ನುವುದು ಅವರು ಅರಿತರು. ಬಡತನದ ಬೇಗೆಯ ನಡುವೆಯೂ ಸ್ವಾತಂತ್ರ್ಯವೆಷ್ಟು ಮೌಲ್ಯಯುತವೆನ್ನುವುದನ್ನು ಅವರು ಗುರುತಿಸಿದರು. ಭಾರತದ ಸಾಮಾನ್ಯ ಜನರು ಪ್ರತಿಯೊಂದು ವರ್ಗಾಧಾರಿತ ಸಮಾಜದಲ್ಲಿರುವಂತೆ ಶೋಷಣೆಯ ಜೊತೆಯಲ್ಲಿ, ಸಾಂಸ್ಥೀಕರಣಗೊಂಡ ಹಿಂಸೆ, ದಬ್ಬಾಳಿಕೆ ಮತ್ತು ಭಯದಿಂದ ಜರ್ಜರಿತದಾಗಿದ್ದರು. ಹಿಂದೆ ಶೋಷಣೆಗಳನ್ನು ಹೊರತುಪಡಿಸಿ ಇತರ ಎಲ್ಲ ಕಠೋರ ತಂತ್ರಗಳು ಸ್ವಭಾವದಲ್ಲಿ ವಿರಳ ಮತ್ತು ತತ್ ಪೂರ್ತವಾಗಿದ್ದವು. ತುರ್ತುಪರಿಸ್ಥಿತಿ ಅದನ್ನು ಕ್ರಮಬದ್ಧ ಮತ್ತು ವ್ಯಕ್ತಿಯ ಖಾಸಗಿತನದವರೆಗೆ ವಿಸ್ತೃತಗೊಳಿಸಿ ಆಳುವ ಪಕ್ಷದ ಗುಂಡಾಗಳಿಗೆ ಮತ್ತು ರಾಜ್ಯದ ಕಾರ್ಯಭಾರಿಗಳ ದಾಳಿಗೆ ಅವಕಾಶವನ್ನೊದಗಿಸಿತು. ಹಿಂದೆ ಅಲ್ಪಸ್ವಲ್ಪ ಕಾಣಿಸುತ್ತಿದ್ದ ಮತ್ತು ಈಗ ರಾಜಕೀಯದ ಅಪರಾಧೀಕರಣ ಎಂದು ಕರೆಯಲಾಗುವ ಈ ಪ್ರವೃತ್ತಿ ಅನಂತರದ ರಾಜಕೀಯದ ದೈನಂದಿನ ಲಕ್ಷಣವಾಯಿತು.

ಇಂದು ಚುನಾಯಿತ ಪ್ರತಿನಿಧಿಗಳು ಮತ್ತು ನಾಯಕರ ಹೊರತಾಗಿಯೂ, ಸಾರ್ವಜನಿಕ ಅಭಿಪ್ರಾಯದ ಪರಿಸರವೇ ಪ್ರಜಾಪ್ರಭುತ್ವವನ್ನು ಸಲಹುತ್ತಿದೆ. ಆದರೆ ಪ್ರಾತಿನಿಧ್ಯ ವ್ಯವಸ್ಥೆ ಇಲ್ಲದೆ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸುವುದು ಮತ್ತು ರಾಜಕೀಯ ಪಕ್ಷಗಳು ಮತ್ತು ನಾಯಕರಿಲ್ಲದೆ ಚುನಾವಣೆಗಳು ಉಂಟಾಗಲಾರವು. ಸ್ಪರ್ಧೆ ಎಂಬ ಕಾರಣದಿಂದಾಗಿ ಈ ವಿಷಯಗಳಿಗೆ ಸ್ವಲ್ಪ ಮೌಲ್ಯ ಉಳಿದುಕೊಂಡಿದೆ. ಭಾರತದಂತಹ ವಿಸ್ತಾರವಾದ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿ ವ್ಯವಸ್ಥೆ ನಾಯಕರು ಹಾಗೂ ಅವರನ್ನು ಆವರಿಸಿದ ಜನರ ರಚನೆ ಹಾಗೂ ಪಕ್ಷಗಳು ಅವಶ್ಯಕವಾಗಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಜನರಿಗೆ ಪ್ರಜಾಪ್ರಭುತ್ವ ಬೇಕಾಗಿರುವುದರಿಂದ ಅವರು ರಾಜಕೀಯ ಪಕ್ಷಗಳು ಅದರ ನಾಯಕರು ಹಾಗೂ ಪ್ರತಿನಿಧಿಗಳನ್ನು  ಸಹಿಸಿಕೊಳ್ಳಬೇಕಾಗಿದೆ.

ಹಿಂದಿನ ಹಂತದ ಈ ಬದಲಾವಣೆ ಅದರಲ್ಲೇ ಮುಖ್ಯವಾಗಿದೆ. ಇದು ಪ್ರಜಾತಾಂತ್ರಿಕ ಸಂಸ್ಥೆಗಳಿಗೆ ಉತ್ತಮ ನೆಲೆಯನ್ನೊದಗಿಸಿ ಪ್ರಜಾಪ್ರಭುತ್ವದ ಆಚರಣೆಯನ್ನು ಅದರ ಮಾದರಿ ಆಧಾರದಲ್ಲಿ ನಡೆಯುವಂತೆ ಮಾಡುತ್ತದೆ. ಪ್ರಜಾಪ್ರಭುತ್ವದ ಪ್ರಾಧಿಕಾರದಿಂದ ಆಳ್ವಿಕೆಯ ವಿಧಾನದ ಕಡೆ ರಾಜಕೀಯ ವರ್ಗದಿಂದ ಸಂಸ್ಥೆಗಳಿಗೆ ಬದಲಾಗುವ ನ್ಯಾಯ ಸಮ್ಮತಿಯನ್ನು ನಾವು ಗುರುತಿಸುತ್ತಿದ್ದೇವೆ. ರಾಜಕೀಯ ವಲಯದ ಐವತ್ತು ವರ್ಷಗಳ ಅನುಭವದಲ್ಲಿ ಜನರ ಮಹತ್ವದ ಪ್ರಯೋಜನವಾಗಿದೆ. ಪ್ರಜಾಪ್ರಭುತ್ವದ ರಾಜಕೀಯ ಅಂತಿಮವಾಗಿ ಜನರ ಆಂತರಿಕ ರಾಜಕೀಯ ಪ್ರಜ್ಞೆಯಾಗಿದೆ. ಪ್ರಜಾಪ್ರಭುತ್ವ ಮೇಲಿನಿಂದ ನೀಡಲ್ಪಟ್ಟ ನಂಬಿಕೆಯಾಗದೆ ಜನರ ಆಯ್ಕೆಯಾಗಿ ಮೂಡಿಬರುತ್ತಿದೆ. ಎಲೀಟುಗಳು ಪ್ರಜಾತಾಂತ್ರಿಕ ಸಂಸ್ಥೆಗಳಿಂದ ಮತ್ತು ಅಭ್ಯಾಸಗಳಿಂದ ಪರಕೀಯರಾಗುತ್ತಿದ್ದಾರೆ. ಆದರೆ ಮುಂಜಾಗ್ರತೆಯ ಟಿಪ್ಪಣಿಯೊಂದು ಇಲ್ಲಿ ಅವಶ್ಯಕ. ಪ್ರಜಾಪ್ರಭುತ್ವದ ಮೌಲ್ಯದ ಬಗ್ಗೆ ಜನರು ನಿಶ್ಚಿತಾಭಿಪ್ರಾಯ ಹೊಂದಿದ್ದರೂ, ಜನಜಂಗುಳಿ ನಾಯಕರ ಮಧ್ಯಪ್ರದೇಶದಿಂದ ಅದು ಕೊರೆದುಹೋಗುವ ಸಾಧ್ಯತೆಗಳಿವೆ. ಸಾರ್ವಜನಿಕ ಗ್ರಹಿಕೆಯ ಈ ಭಾಗ ಪ್ರಜಾಪ್ರಭುತ್ವದ ಸಾಂಸ್ಥಿಕ ಮತ್ತು ನಿಯಮಾತ್ಮಕ ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸುವ ಸಾಮರ್ಥ್ಯ ಪಡೆದಿರಬಹುದು. ಭಾರತದಲ್ಲಿ ಅಧಿಕಾರಕ್ಕೋಸ್ಕರ ಹೋರಾಟ ಅಪನಂಬಿಕೆಗೆ ಒಳಗಾದಂತೆ ಕಂಡು ಬರುತ್ತದೆ. ಭಾರತದ ಸುಮಾರು ಶೇಕಡಾ ೬೦ರಷ್ಟು ಜನರು ರಾಜಕೀಯ ಪಕ್ಷಗಳ ಅಧಿಕಾರಕ್ಕೋಸ್ಕರದ ಹೋರಾಟ ಸಮಾಜಕ್ಕೆ ಒಳಿತಲ್ಲ ಎಂದು ಭಾವಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತವೆಂದರೆ ಅಧಿಕಾರಕ್ಕಾಗಿ ನಿರಂತರ ನಡೆಯುವ ತಕರಾರು ಎನ್ನುವುದು ಅವರಿಗೆ ಮನವರಿಕೆಯಾಗುವುದಿಲ್ಲ.

ಭಾರತದಲ್ಲಿ ಸಾಮಾಜಿಕ ಜೀವನದ ಧಾರ್ಮಿಕ ಬಹುಸಂಖ್ಯಾತತೆ ಶಾಶ್ವತವಾದರೆ, ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತತೆ ಯಾವಾಗಲೂ ಸಂಭವನೀಯ ಅಂಶ. ಹೋರಾಟವೆನ್ನುವುದು ಪ್ರಜಾಪ್ರಭುತ್ವದಲ್ಲಿ ಆಂತರಿಕವಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳದಿದ್ದರೆ, ಬಹುಮತವನ್ನು ಕಟ್ಟುವುದು ಮತ್ತು ಬಿಚ್ಚುವುದನ್ನು ಕಲ್ಪಿಸಿಕೊಳ್ಳಲು ಕಷ್ಟ. ಆದುದರಿಂದ ಜನರು ಅಧಿಕಾರಕ್ಕೋಸರ ಹೋರಾಟವನ್ನು ಅಪನಂಬಿಕೆಯಿಂದ ನೋಡುವುದು ಹಾಗೂ ಶೇಕಡಾ ೭೩ರಷ್ಟು ಜನರು ಬಲಿಷ್ಠ ಮತ್ತು ದೃಢನಿರ್ಧಾರದ ನಾಯಕತ್ವದಿಂದ ರಾಜಕೀಯ ಗೊಂದಲವನ್ನು ಶುಚಿಗೊಳಿಸಬಹುದೆಂಬ ನಂಬಿಕೆಯನ್ನು ಹೊಂದಿರುವುದು ಅಚ್ಚರಿಯನ್ನು ಉಂಟುಮಾಡುವುದಿಲ್ಲ. ಇದನ್ನು ಕೇವಲ ಶೇಕಡಾ ೮ರಷ್ಟು ಜನರು, ಮಾತ್ರ ಒಪ್ಪುವುದಿಲ್ಲ. ಜನಜಂಗುಳಿ ಪುಢಾರಿಗಳಿಂದ ತುಂಬಿರುವ ಈ ದೇಶದಲ್ಲಿ ಇದು ಅನಿಷ್ಟಸೂಚಕ ಮುನ್ನೆಚ್ಚರಿಕೆಯಾಗಬಹುದು.

ಈ ರೀತಿಯ ಪ್ರಕ್ರಿಯೆಗಳು ಭಾರತದ ಆಂತರಿಕ ರಾಜಕೀಯ ಪ್ರಜ್ಞೆಯಲ್ಲಿರುವ ವೈರುಧ್ಯತೆಗಳ ಲಕ್ಷಣಗಳಾಗಿವೆ. ಪ್ರಜಾಪ್ರಭುತ್ವವನ್ನು ಅದಕ್ಕಾಗಿಯೇ ಮಾನ್ಯ ಮಾಡುವುದು. ಆದರೆ ಅದರ ಆಂತರಿಕ ಲಕ್ಷಣವಾದ ಪಕ್ಷಗಳ ಅಧಿಕಾರಕ್ಕೋಸ್ಕರ ಸ್ಪರ್ಧೆಯನ್ನು ಮಾನ್ಯ ಮಾಡದೆ ಅಪನಂಬಿಕೆಯಿಂದ ನೋಡುವುದು ಇದು ಭಾರತದ ರಾಜಕೀಯ ಪ್ರಜ್ಞೆ ಅಂತರ್ಗತವಾಗಿ ವೈರುಧ್ಯತೆಯಿಂದ ಕೂಡಿದೆ ಎನ್ನುವುದನ್ನು ಪ್ರಕಟಿಸುತ್ತದೆ. ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ನ್ಯಾಯಬದ್ಧತೆಯನ್ನು ಈ ಆಳವಾಗಿ ಬೇರೂರಲ್ಪಟ್ಟಂತೆ ಪಡೆದ ಸಾರ್ವಜನಿಕ ಪ್ರಜ್ಞೆಯ ವೈರುಧ್ಯತೆಯಲ್ಲಿ ಸ್ಥಿತಗೊಳಿಸಬೇಕಾಗುತ್ತದೆ.

ರಾಜಕೀಯ ಪ್ರಜ್ಞೆಯ ವೈರುಧ್ಯ ಸ್ವರೂಪದ ನಡುವೆಯೂ ಪ್ರಜಾಸತ್ತೆಯು ನ್ಯಾಯಸಮ್ಮತ ಪಡೆದಿದೆ ಅಂದರೆ ಅದು ಸಾಮಾಜಿಕ ನೆಲೆಗಳನ್ನು  ಕಂಡುಕೊಂಡಿದೆ.

ಇದು ನ್ಯಾಯಿಕ ಮತ್ತು ಸಾಂವಿಧಾನಿಕ ಖಾತರಿಗಳ ಜೊತೆಗೆ ಜನರ ಮನೋಭಾವ ಮುಖ್ಯವಾಗಿದ್ದು ಪ್ರಜಾಪ್ರಭುತ್ವದ ಆಚರಣೆಯು ನೈತಿಕವಾಗಿ ಒಪ್ಪಿತ ಮಾದರಿಯೆನಿಸಿದೆ. ಇದರ ರಕ್ಷಣೆಗೆ ಯಾವುದೇ ಪೋಷಕರು ಇಲ್ಲವೇ ಟ್ರಸ್ಟಿಗಳು ಬೇಕಾಗಲಾರವು. ಸ್ವಾತಂತ್ರ್ಯ ಹೋರಾಟದ ಸಂದರ್ಭದ ಮುಂಚೂಣಿಯಲ್ಲಿದ್ದ ನೆಹರೂರಂತವರು ಕೂಡ ಈಗ ಇದರ ಉಳಿವಿಗೆ ಮೂಲಾಧಾರದ ನಾಯಕರೆನಿಸುವುದಿಲ್ಲ.

ಇವು ಹೇಗಾದವು? ಜನರು ಏಕತ್ರಯರಾಗಿ ಇಲ್ಲವೆ ಸಮಷ್ಟಿಯಾಗಿ ಎದುರಿಸುವ ಆಹಾರ, ಸೂರು, ಆರೋಗ್ಯ ಮುಂತಾದ ಯಾವುದೇ ಸಮಸ್ಯೆಗಳನ್ನು ಸರಕಾರ ಪರಿಹರಿಸಿಲ್ಲ. ಇವು ತೀವ್ರ ಸಮಸ್ಯೆಗಳಲ್ಲ. ಇಲ್ಲವೇ ಕೆಲವರು ಮಾತ್ರ ಇದರಿಂದ ಬಾಧಿತರಾಗಿರುವರೆಂದು ಹಾಗೂ ಇವನ್ನು ಪರಿಹರಿಸಲು ಅರ್ಥವ್ಯವಸ್ಥೆಯು ಅಭಿವೃದ್ಧಿಗೆ ಒತ್ತು ನೀಡಿಲ್ಲವೆನ್ನಲಾಗದು. ನಮ್ಮ ಅಭಿವೃದ್ಧಿ ಮಾದರಿಯ ಸಾಪೇಕ್ಷವಾದ  ಅಸಮರ್ಥನೆಯಿಂದ ಇವು ಕಾರ್ಯಗತವಾಗದಿರಬಹುದು. ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಫಲವಾಗಿದೆ. ಹಾಗಾಗಿ ಸಮಾಜದ ಸಮಸ್ಯೆಯನ್ನು ಪರಿಹರಿಸಿದೆ ಎಂದು ಪ್ರಜಾಪ್ರಭುತ್ವವನ್ನು ಒಪ್ಪಿತ ಮಾದರಿಯೆಂದು ಪರಿಗಣಿಸಲಾಗದು. ಇದು ಭಾರತದ ಅನುಭವದ ವೈಶಿಷ್ಟ್ಯವೆನಿಸಿದೆ. ಹಾಗಾದರೆ ಪ್ರಜಾಪ್ರಭುತ್ವದ ವಿಸ್ತೃತವಾದ ಸ್ವೀಕಾರಾರ್ಹತೆಯನ್ನು ಯಾವ ರೀತಿ ಗ್ರಹಿಸಬಹುದು? ಇದಕ್ಕೆ ಸುಳಿವು ಎಂಬಂತೆ ಪ್ರಜಾಸತ್ತೆಯ ಕಾರ‍್ಯಕ್ಷಮತೆಯಲ್ಲಿ ಸಾಮಾಜಿಕ ಸಂರಚನೆಗೆ ಏನಾಗಿದೆ ಎಂಬುದರಲ್ಲಿ ಉತ್ತರವನ್ನು ಗ್ರಹಿಸಬಹುದು. ಬಂಡವಾಳದ ಅಭಿವೃದ್ಧಿಯ ಸನ್ನಿವೇಶ ಮತ್ತು ಸಾಂಪ್ರದಾಯಿಕವಾಗಿ ಜಾರಿಯಲ್ಲಿದ್ದ ಅನಮ್ಯವಾದ ನಡಾವಳಿಗಳ ಮೂಲಕ ಸಾಮಾಜಿಕ ಮನ್ನಣೆಯಲ್ಲೂ ಇದನ್ನು ಗುರುತಿಸಬಹುದು. ಎಲ್ಲ ಸಾಂಪ್ರದಾಯಿಕ ಸಮಾಜಗಳು ಕಠಿಣವಾದ ಬದ್ಧತೆಯನ್ನು ಜಾರಿಗೊಳಿಸುತ್ತದೆ. ನೈತಿಕ ಸಂಹಿತೆ ಮತ್ತು ನಡಾವಳಿಗಳ ಮೂಲಕ ಇವನ್ನು ಹೇರಲಾಗುತ್ತದೆ ವಿನಾ ಪ್ರತಿಪಾದಿಸಲಾಗುವುದಿಲ್ಲ. ಒತ್ತಾಯ ಮತ್ತು ವೈಚಾರಿಕತೆ ಬದಲು ಬಲಪ್ರಯೋಗದ ಮೂಲಕ ವಿಧೇಯತೆಯನ್ನು ಜಾರಿಗೆ ತರುತ್ತದೆ. ಇವು ಯಾಕೆ ಮುಖ್ಯವೆಂದರೆ ಮನವೊಲಿಕೆ ಒತ್ತಾಯ ಅಥವಾ ಹೇರಿಕೆಯೆನಿಸಿದರೆ ಒತ್ತಡವು ಬಲಪ್ರಯೋಗವೆನಿಸುತ್ತದೆ. ಆದರೆ ಭಾರತದಲ್ಲಿ ಇದರ ಜೊತೆ ಇನ್ನು ಕೆಲವು ಇವೆ. ಜಾತಿ ವ್ಯವಸ್ಥೆ, ಏಣಿಶ್ರೇಣಿ ಮುಂತಾದವು ಕೆಳಹಂತದ ಜನರನ್ನು ವ್ಯವಸ್ಥಿತವಾದ ನಿರಾಕರಣಿಗೆ ಈಡುಮಾಡಿದೆ. ಗ್ರಂಥಸ್ಥ ಅನುಮೋದನೆಯೊಂದಿಗೆ ಜಾತಿ ವ್ಯವಸ್ಥೆ ಸ್ವಯಂ ಸಿಂಧುತ್ವ ಪ್ರಾಧಿಕಾರದ ವ್ಯವಸ್ಥೆಯೆನಿಸಿದೆ. ಈ ವ್ಯವಸ್ಥೆ ಸಡಿಲಗೊಳ್ಳ ತೊಡಗಿದರೂ ಕಾಲ ಸರಿದಂತೆ ಗಟ್ಟಿಗೊಳ್ಳ ತೊಡಗಿ ಕೈಗಾರಿಕೀಕರಣ, ನಗರ ಬೆಳವಣಿಗೆ, ಹಳ್ಳಿ ಪ್ರದೇಶಗಳಲ್ಲೂ ಅತಿಯಾದ ಬಂಡವಾಳ ಸಂಚಯನದ ಹರಿವು, ಕಾರ್ಮಿಕರು ಮುಂತಾದ ಬಂಡವಾಳಶಾಹಿ ಅಭಿವೃದ್ಧಿ ಲಕ್ಷಣಗಳು ಇವಕ್ಕೆ ಪೂರಕವೆನಿಸಿವೆ. ಹೆಚ್ಚುಕಡಿಮೆ ಇಂಥ ಬಂಡವಾಳ ಅಭಿವೃದ್ಧಿ ಪ್ರಕ್ರಿಯೆ ಒಂದು ನಿರಂತರತೆಯುಳ್ಳ ಪ್ರಜಾಸತ್ತೆಯಲ್ಲಿ ನಡೆಯುತಲಿದ್ದು ಭಾರತದ ಆಧುನಿಕತೆ ರೂಪಿಕೆಗೆ ಅದರದ್ದೇ ಕೊಡುಗೆ ನೀಡಿದೆ.

ಸಾಮಾನ್ಯವಾದ ಆರೋಪದಂತೆ ಆಧುನಿಕತೆ ಸಹಜತೆಯನ್ನು ಹೇರುತ್ತಿದೆ. ಪ್ರತಿಯೊಬ್ಬರೂ ಸಮಾನ ಮಟ್ಟದ ಕ್ರಮಾಂಕ ಮತ್ತು ತತ್ವದಂತೆ ಬದುಕುತ್ತಿದ್ದಾರೆ. ಆಧುನಿಕತೆ ವ್ಯಕ್ತಿಗಳಿಗೆ ಸಾಕಷ್ಟು ಸ್ವಾಯತ್ತತೆ ಒದಗಿಸಿದೆ. ಮೊದಲಿಗೆ ಒಂದು ವಸ್ತುನಿಷ್ಠ, ವ್ಯಕ್ತಿತ್ವವಾದದ ಚಾರಿತ್ರಿಕ ಪ್ರಕ್ರಿಯೆಗೆ ಅನುವು ಮಾಡಿ ನಂತರ ಜನಗಳನ್ನು ಸಮುದಾಯಗಳಾನ್ನಾಗಿಸಿ ಸ್ವಯಂ ಉಲ್ಲೇಖಿತ ವ್ಯಕ್ತಿಗಳನ್ನಾಗಿಸುತ್ತವೆ. ನಂತರ ವ್ಯಕ್ತಿಯ ಆಯ್ಕೆಯ ಜೀವನ ವಿಧಾನಕ್ಕೆ ಪ್ರಾಮುಖ್ಯತೆ ನೀಡಿ ಆತನ ಸ್ವದ ಕಲ್ಪನೆಯನ್ನು ಪುನರ್ ರೂಪಿಸುತ್ತದೆ. ಒಬ್ಬನ ಪರಿಸರದಿಂದ ವ್ಯಕ್ತಿಯನ್ನು ವಿಭಿನ್ನವಾಗಿಸಲು ಅನುವು ಮಾಡುತ್ತದೆ ಮತ್ತು ತಾನು ಯಾವ ಸಮುದಾಯದಿಂದ ರೂಪುಗೊಂಡೆನೋ ಅಲ್ಲಿಂದ ನಿರ್ದಿಷ್ಟವಾದ ಅಂತರವನ್ನು ಕಾಯ್ದುಕೊಳ್ಳಲು ಅನುವು ಮಾಡುತ್ತದೆ. ಇದು ಸ್ವತಂತ್ರ ವ್ಯಕ್ತಿಯಾಗುವುದಕ್ಕೆ ಆಸ್ಪದ ನೀಡುತ್ತದೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಧಕ್ಕೆಯಿಲ್ಲದೆ ಮುಂದುವರಿಯುತ್ತಿರುವಾಗ ಒತ್ತು ನೀಡುವುದು ಇಲ್ಲವೇ ಅವಕಾಶವನ್ನು ತಡೆಗಟ್ಟುವುದು ಸಾಮಾಜಿಕ ರಚನೆಯಲ್ಲಿ ಸಡಿಲವಾದ ಪರಿಣಾಮವುಂಟು ಮಾಡುವುದು. ಈ ರೀತಿಯ ಸಡಿಲಿಕೆಯನ್ನು ನಮ್ಮ ಪ್ರಜಾಪ್ರಭುತ್ವದ ಕಾರ‍್ಯಕ್ಷಮತೆಯಲ್ಲಿ ಮೊದಲಿನಿಂದಲೂ ಮಾಡಲಾಗುತ್ತಿದೆ. ಏನೇ ಮಿತಿಗಳಿದ್ದರೂ ಬಹುಮತವು ಅಧಿಕಾರವು ಮತಾಧಿಕಾರದ ಸಮಾನತೆಯನ್ನು ವ್ಯಕ್ತಿಗಳ ಹಂತದಲ್ಲಿ ಗುರುತಿಸುತ್ತಿದ್ದು ಇನ್ನಿತರ ಸಮಾನತೆಯ ಅಂಶಗಳನ್ನು ಸತತವಾಗಿ ನಿರಾಕರಿಸುತ್ತದೆ. ನಿರಾಕರಣೆ ಮತ್ತು ಮನ್ನಣೆ ನಮ್ಮ ಸಮಾಜದ ಸಂದರ್ಭದಲ್ಲಿ ಒಂದು ಸಂಕೀರ್ಣವನ್ನು ರೂಪಿಸಿದೆ. ಒಬ್ಬ ದಲಿತರಿಗೆ ಸಾರ್ವಜನಿಕ ಬಾವಿ, ಮೇಲ್ಜಾತಿಯವರ ಮನೆಗೆ ಇಲ್ಲವೇ ಕ್ಷೌರಿಕನ ಅಂಗಡಿಗೆ ಪ್ರವೇಶ ನಿರಾಕರಿಸಲಾಗಿದೆ. ಮಹಿಳೆಗೆ ದುಡಿಮೆ ಅಥವಾ ವಿಶಾಂತ್ರಿಯನ್ನು ನಿರಾಕರಿಸಬಹುದು. ಆದರೂ ದಲಿತ ಮತ್ತು ಮಹಿಳೆಯ ಮತವು ಯಾವುದೇ ಬ್ರಾಹ್ಮಣ ಭೂಮಾಲೀಕನ ಮತಕ್ಕಿಂತ ಕಡಿಮೆಯೇನಲ್ಲ. ಸಾಮಾಜಿಕ ಅಸ್ತಿತ್ವ ನಾಗರಿಕತೆಯ ಈ ಭಿನ್ನತೆ ದಮನಿತನ ಕಾರ್ಯಕ್ಷಮತೆಗೆ ಅಡ್ಡಿಪಡಿಸಬಹುದು. ಆದರೆ ನಿಷೇಧಿಸದು. ಇದು ನಿಜವಾಗಿಯೂ ಹೋರಾಟಗಳಿಗೆ ಅವಕಾಶ ನೀಡುತ್ತ ಸೀಮಿತವಾದರೂ ಒಬ್ಬನು ನಾಗರಿಕವಾಗಿ ಕಾರ್ಯ ನಿರ್ವಹಿಸುವಂತಹ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವೂ ಹೌದು. ಜನಸಂಖ್ಯಾತ್ಮಕ ಬಲದ ಬಗ್ಗೆ ಪ್ರಜ್ಞೆ ಹೊಂದಿದಾಗ ತಮ್ಮ ಕೆಲಸ ಕಾರ್ಯಗಳ ಈಡೇರಿಕೆಗೆ ಪ್ರಭಾವ ಬೀರುವಂತ ಭಾವನೆ ಹೊಂದುತ್ತಾರೆ. ಆದ್ದರಿಂದ ಭಾರತದಲ್ಲಿ ಪ್ರಜಾಪ್ರಭುತ್ವವೆಂದರೆ ಸ್ವಯಂ ಘನತೆಯ ಪ್ರತಿಪಾದನೆ ಮತ್ತು ಒಬ್ಬನು ತನ್ನನ್ನು ಉತ್ತಮಗೊಳಿಸುವ ಸಾಮರ್ಥ್ಯಕ್ಕೆ ಒತ್ತು ನೀಡುತ್ತದೆ. ಇದು ಸಮಾಜದ ಧರ್ಮನಿರಪೇಕ್ಷ ಅಧಿಕಾರದ ಸ್ಪಷ್ಟ ಅಭಿಮತವೂ ಹೌದು. ಜೊತೆಗೆ ಸಾಮಾಜಿಕ ಸಂರಚನೆಯ ಸ್ವಯಂ ಸಿಂಧುತ್ವ, ಸ್ವರೂಪದ ಅಧಿಕಾರಕ್ಕೆ ಕುತ್ತು ತರುತ್ತದೆ. ಇದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರೂಪುಗೊಂಡ ಪ್ರಬಲ ಜನಾಂದೋಲಗಳ ಮೂಲಜಿಜ್ಞಾಸು ಛಾಪಕ್ಕೆ ಆಳುವ ವರ್ಗದ ಅಡೆತಡೆ ಮಧ್ಯೆಯೂ ಮತ್ತಷ್ಟು ಒತ್ತು ಕೊಟ್ಟಂತಾಗಿದೆ. ತಲಾತಲಾಂತರದಿಂದ ಭಾರತದ ಸಮಾಜದಲ್ಲಿ ಬ್ರಾಹ್ಮಣರೆಂಬ ಸಣ್ಣ ವರ್ಗಕ್ಕೆ ಒಂದು ಪರಿಣಾಮಕಾರಿ ಹಿರಿತವಿತ್ತು. ಬಹುಶಃ ಬೇರಾವುದೇ ಆಧುನಿಕ ಪೂರ್ವದ ವರ್ಗಾಧಾರಿತ ಸಮಾಜಕ್ಕಿಂತ ಇವು ಮೇಲ್ನೋಟಕ್ಕೆ ಕಡಿಮೆ ದಮನಕಾರಿಯೆಂದೆನಿಸಿದರೂ ಗ್ರಂಥಸ್ಥ ಮನ್ನಣೆಯ ಅಂತರ್ಗತಗೊಳಿಸುವಿಕೆಯಂತ ವಿಚಾರಧಾರೆಯ ತಂತ್ರಗಾರಿಕೆ ಎಲ್ಲಕ್ಕಿಂತ ಹೆಚ್ಚಿನದು. ಇವು ಉಳಿದೆಲ್ಲರ ಧ್ವನಿ ಅಡಗಿಸಿತ್ತು. ಬ್ರಾಹ್ಮಣೀಕೃತ ಯಜಮಾನಕ್ಕೆ ಬೌದ್ಧಧರ್ಮ, ಭಕ್ತಿ ಚಳವಳಿ, ಸೂಫಿ ಪಂಥ, ಸಿಖ್ ಪಂಥ ಮುಂತಾದವು ಕೆಲವೊಮ್ಮೆ ಸವಾಲು ಒಡ್ಡಿದರೂ ಅದರ ದೀರ್ಘಕಾಲದ ಬಾಳ್ವಿಕೆಗೆ ತಡೆ ಒಡ್ಡುವಷ್ಟು ಪ್ರಖರವಾಗಿರಲಿಲ್ಲ.

ಪ್ರಜಾಪ್ರಭುತ್ವವು ತನ್ನ ಹೋರಾಟ, ಆಂದೋಲನ, ಚುನಾವಣಾ ಪ್ರಾತಿನಿಧ್ಯ ಮುಂತಾದವುಗಳಿಂದ ಸಾಮಾಜಿಕ ಸಂರಚನೆಯ ತಂತ್ರಗಾರಿಕೆಯ ಅನಮ್ಯ ಮುಂದುವರಿಕೆಯನ್ನು ಕುಂಠಿತಗೊಳಿಸಿತು. ಸಮಾಜದಲ್ಲಿನ ಕಟ್ಟಕಡೆಯವನಿಗೂ ಅದು ಉಸಿರು ಕಟ್ಟಿಸುವಿಕೆಯ ವಾತಾವರಣ ತಪ್ಪಿಸಿ ಸ್ವಾತಂತ್ರ್ಯದ ಉಸಿರನ್ನು ನೀಡಿದೆ. ಇಲ್ಲಿ ಹೇರಿಕೆಯ ತಂತ್ರಗಾರಿಕೆಯಲ್ಲಿನ ನಮ್ಯತೆಯನ್ನು ಸಾಮಾಜಿಕ ಸಂಸ್ಥೆಗಳ ಆಧುನೀಕರಣದಿಂದ ಇಲ್ಲವೇ ಜಾತಿಯ ಹೋಗಲಾಡಿಸುವಿಕೆ ಅಥವಾ ಸಾಂಪ್ರದಾಯಿಕ ಸಂಸ್ಥೆಗಳ ಬದಲು ಹೊಸ ಸಂಸ್ಥೆಗಳಿಂದ ಆಗಿದೆಯೆಂಬುದಾಗಿ ಅರ್ಥೈಸಲಾಗದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ. ತಮ್ಮ ಸಾಮಾಜಿಕ ಅಸ್ತಿತ್ವದ ನೆಲೆಯಲ್ಲಿ ಜನಸಾಮಾನ್ಯರಿಗೆ ಪ್ರಾಪ್ತವಾಗಿರುವುದೇ ಬಹಳ ಕಡಿಮೆ. ಈ ನಿರ್ದಿಷ್ಟ ವ್ಯಾಪ್ತಿಯ ಸ್ವಾತಂತ್ರ್ಯ  ಮಿತಿಯನ್ನು ತಿಳಿದುಕೊಳ್ಳಬೇಕಿದೆ. ಸಾಂಪ್ರದಾಯಿಕ ಸಂಸ್ಥೆಗಳ ಅಧಿಕಾರಗಳು ಸಂಪೂರ್ಣವಾಗಿ ಕುಂಠಿತಗೊಂಡಿಲ್ಲ ಮತ್ತು ಇದರಿಂದಾಗಿ ಜನಸಾಮಾನ್ಯರ ಅಧಿಕಾರ ಚಲಾವಣೆಗೆ ತಡೆ ಬಂದು ಆಯ್ಕೆಗಳು ಹಾಗೇ ಇವೆ. ಆದರೂ ಜನಸಾಮಾನ್ಯರು ಈ ಅಡೆತಡೆಗಳ ಮಧ್ಯೆ ತಮ್ಮ ಆಯ್ಕೆಯ ಬಗೆಗೆ ಎಚ್ಚರದಿಂದಿದ್ದಾರೆ. ಹಾಗಾಗಿ ಇಂದು ಪೊಲೀಸ್ ಠಾಣೆಗೆ ಹೋಗಿ ಪ್ರಥಮ ಮಾಹಿತಿ ವರದಿ ನೋಂದಾಯಿಸಲು ಸಾಧ್ಯವಾಗಿದ್ದು ತಮ್ಮ ಹೋರಾಟಕ್ಕೆ ಜನರನ್ನು ಒಟ್ಟು ಸೇರಿಸುತ್ತಾರೆ. ನಿರಾಕರಣೆ ಮತ್ತು ದುಸ್ಥಿತಿ ಮಧ್ಯೆ ಇದು ನಿಜವಾದ ತೊಡಗಿಸಿಕೊಳ್ಳವಿಕೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಪಾದನೆಯಲ್ಲಿ ಇದು ಕಡಿಮೆ ಗಳಿಕೆಯೆಂದೆನಿಸಿದರೂ ಇದರಿಂದ ವಂಚಿತರಾಗಲು ಅವರು ಸಿದ್ಧರಲ್ಲ.

ಮೇಲಿನ ಸಂಗತಿಗಳಿಂದ ಕೆಲವೊಂದು ಅಂಶಗಳನ್ನು ಗಮನಿಸಬಹುದು. ಸಾಮಾಜಿಕ ಅಸ್ತಿತ್ವದ ಸ್ಥಿತಿಗತಿ ಹೇಗಿದ್ದರೂ ಅತೀವ ಅಸಮಾನತೆಗಳ ಮಧ್ಯೆಯೂ ಬದಲಾವಣೆಯನ್ನು ಸಾಪೇಕ್ಷವಾಗಿ ನೋಡುವುದು ಮುಖ್ಯ. ಜನರನ್ನು ಮೌನಿಗಳನ್ನಾಗಿಸಿದ ಸಾಮಾಜಿಕ ಅಸಮಾನತೆಗಳ ಜಾಗದಲ್ಲಿ ಆರ್ಥಿಕ ಅಸಮಾನತೆಗಳಿದೆ ಮತ್ತು ಧರ್ಮನಿರಪೇಕ್ಷತೆಯಲ್ಲಿ ಅಧಿಕಾರದ ಅಸಮಾನತೆಯಿದೆ. ಸಾಮಾಜಿಕ ಜಗತ್ತಿನಲ್ಲಿದ್ದಂತೆ ಧರ್ಮನಿರಪೇಕ್ಷ ಜಗತ್ತಿನ ಅಸಮಾನತೆಗಳು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಪ್ರತಿಪಾದನೆಗೆ ತಡೆ ಒಡ್ಡುವುದಿಲ್ಲ. ಅವು ನಿಜವಾಗಿ ಅಂಥವಕ್ಕೆ ಉತ್ತೇಜನ ನೀಡುತ್ತದೆ. ಇತರೆಡೆಯಲ್ಲಿರುವಂತೆ ಅವು ಪ್ರಜಾಪ್ರಭುತ್ವ ತತ್ವದ ಹೋರಾಟ ಮತ್ತು ಚರ್ಚೆಗೆ ಸಮಾನತೆಯ ತತ್ವದ ಮೌಲ್ಯಗಳನ್ನು ಮುಂದಿಡುತ್ತದೆ. ಮುಖ್ಯವಾಗಿ ಆರ್ಥಿಕ ಮತ್ತು ಇತರೆ ಧರ್ಮನಿರಪೇಕ್ಷ ಅಸಮಾನತೆಗಳಿಗೆ ಪ್ರತಿಬಂಧ ಒಡ್ಡುವಂತಹ ಒಂದು ಪುರೋಗಾಮಿ ಪ್ರಜ್ಞೆಯನ್ನು ಮುಂದಿಡಬೇಕು.

ಭಾರತದ ಪ್ರಜಾಸತ್ತೆಯಲ್ಲಿ ಪಕ್ಷಗಳು, ಪ್ರಾತಿನಿಧ್ಯ ಇಲ್ಲವೇ ನಾಯಕತ್ವ ಮುಂತಾದವುಗಳಿಂದ ಸುತ್ತುವರಿದ ಸಾಂಸ್ಥಿಕ ದೌರ್ಬಲ್ಯಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅಥವಾ ಇದನ್ನು ಕಾರ‍್ಯಗೊಳಿಸುವ ಪ್ರಕ್ರಿಯೆಯಿಂದ ಪ್ರತ್ಯೇಕವಾಗಿರುವುದೇ ಮುಖ್ಯ ಕಾರಣವೆನಿಸಿದೆ. ಈ ಬೇರ್ಪಡುವಿಕೆಯ ದಾರಿಯಲ್ಲಿ ಪ್ರಕ್ರಿಯೆಯು ಅದರದ್ದೇ ಆದ ಒಂದು ಸ್ವಾಯತ್ತತ್ತೆಯನ್ನು ಪಡೆದಿದೆ.

ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿನ ಚುನಾವಣಾ ಹೋರಾಟ ಮುಂತಾದ ಸಂಘಟಿತ ಹಾಗೂ ಅಸಂಘಟಿತ ಆಂದೋಲನಗಳಲ್ಲಿ ಪ್ರಜಾಪ್ರಭುತ್ವದ ಆಳವಾದ ನ್ಯಾಯಸಮ್ಮತಿ ಹುದುಗಿರುತ್ತದೆ. ಜನರ ವಿಭಿನ್ನ ಸಾಮರ್ಥ್ಯದ ಆಂದೋಲನಗಳ ವಿಸ್ತರಣೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅವಕಾಶ ಒದಗಿಸಿದೆ. ಕಾಣದ ಬಡ್ತಿರೂಪದ ಬೆಳವಣಿಗೆ ಮತ್ತು ರಿಯಾಯಿತಿಗಳನ್ನು ಇಲ್ಲಿ ಗುರುತಿಸಬಹುದು. ಸಂಘಟಿತ ರಾಜಕಾರಣ ಕ್ಷೇತ್ರದ ಮಧ್ಯೆಯೂ ಇವು ನಡೆಯುತ್ತವೆ. ಇವುಗಳ ನ್ಯಾಯಸಮ್ಮತಿಯ ಸಿದ್ಧಾಂತಗಳ ಪುರೋಗಾಮಿ ಪರಿಷ್ಕರಣೆ ನಡೆಯಬೇಕಿದೆ. ಭಾರತದ ಪ್ರಜಾಪ್ರಭುತ್ವದಲ್ಲಿನ ಬೆಳೆಯುತ್ತಿರುವ ಬದ್ಧತೆಯನ್ನು ಗಮನಿಸಿದಾಗ ಪ್ರಜಾಪ್ರಭುತ್ವದ ತತ್ವಗಳು ತಳವೂರಿವೆಯೇ, ಇಲ್ಲ ನಿಜವಾಗಿಯೂ ನಡಾವಳಿಗಳಿಗೆ ಗೌರವವಿದೆಯೇ ಎನ್ನುವುದರ ಬಗೆಗೆ ಅನುಮಾನಗಳಿವೆ. ಸಾಮಾಜಿಕ ಜೀವನದ ಸಮಸ್ಯೆಗಳಿಗೂ ನಮ್ಮ ಪ್ರಜಾಸತ್ತೆಯ ಕಾರ‍್ಯವೈಖರಿ ಒಂದು ಪುರೋಗಾಮಿ ಸಲಹೆಯನ್ನು ಒದಗಿಸುವಂತಹ ಅವಕಾಶವನ್ನು ಕಲ್ಪಿಸಿಲ್ಲ. ಬೂರ್ಶ್ವಾ ಯಜಮಾನಿಕೆ ಮತ್ತು ಧಾರ್ಮಿಕ ಜಗತ್ತಿನ ಉಳಿವಿನಿಂದ ನಿರ್ಬಂಧಿತವಾಗಿರುವ ಒಂದು ಹೊಸ ವಿಧದ ಪ್ರಜಾಪ್ರಭುತ್ವ ಪ್ರಗತಿಗೆ ಇದು ಆಸ್ಪದ ನೀಡಿರುವುದನ್ನು ನಾವು ಕಾಣಬಹುದು.