ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಕೆಳಜಾತಿ ಜನಗಳು ದಿನನಿತ್ಯ ಸಾಮಾಜಿಕ ಅನಿಷ್ಟ ಪದ್ಧತಿಗೆ ವ್ಯವಸ್ಥಿತವಾಗಿ ಬಲಿಯಾಗುತ್ತಿದ್ದಾರೆ, ಗೌರವಯುತ ಜೀವನದ ಹೋರಾಟದ ಸಾಧ್ಯತೆಗೆ ಸಾಕಾರವಾಗುವ ಒಂದು ವ್ಯವಸ್ಥೆಯನ್ನು ಅವರು ಪ್ರಜಾಪ್ರಭುತ್ವದಲ್ಲಿ ಕಾಣುತ್ತಿದ್ದಾರೆ. ಸಾಮಾಜಿಕ ರಚನೆಯ ಸಡಿಲಿಕೆ ಮತ್ತು ಇದು ಒದಗಿಸುವ ಅವಕಾಶಗಳಿಂದ ಜನಸಾಮಾನ್ಯರು ತಮ್ಮ ಘನತೆ, ಹಕ್ಕು ಮತ್ತು ಹಕ್ಕುದಾರಿಕೆಗೆ ಹೋರಾಡಲು ಅನುವು ಮಾಡುತ್ತದೆ. ಅವರ ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳಿಂದ ಬಹುಶಃ ವ್ಯಾಪಕವಾದ ರಿಯಾಯಿತಿಯನ್ನು ಕಳೆದುಕೊಂಡಿದ್ದಾರೆ ಎಂದು ಭಾವಿಸುವಂತಾಗಿದೆ. ಈ ಹೇಳಿಕೆಯನ್ನು ಇನ್ನಷ್ಟು ಮಾಹಿತಿಯೊಂದಿಗೆ ವಿಸ್ತೃತಗೊಳಿಸಬಹುದು (ಪ್ರಜಾಪ್ರಭುತ್ವ ಮತ್ತದರ ಸಂಸ್ಥೆಗಳ ವ್ಯಾಪಕ ಗೊಳ್ಳುತ್ತಿರುವ ಸ್ವೀಕೃತಿಯ ಮಾಹಿತಿಯನ್ನು ಒರೆಗೆ ಹಚ್ಚಿದಲ್ಲಿ). ಸಮಾಜದ ದುರ್ಬಲ ಮತ್ತು ಸಂಕಷ್ಟದಲ್ಲಿನ ಜನಗಳ ವಿರುದ್ಧ ಸಾಪೇಕ್ಷವಾಗಿ ಹೆಚ್ಚಿರುವ ಸೌಲಭ್ಯವಂತರ ಸಂದರ್ಭದಲ್ಲಿ ಜಾತಿ ಮತ್ತು ಸಮುದಾಯಗಳಿಗೆ ಸಂಬಂಧಿಸಿದಂತೆ ನಾವು ಕೆಲವು ಹೊರಬರತಕ್ಕ ಒಲವುಗಳನ್ನು ಕಂಡುಕೊಳ್ಳಬಹುದಾಗಿದೆ. ಆದರೂ ಸಾಮಾಜಿಕ ಸಂರಚನೆಯಲ್ಲಿ ಮಾತ್ರವಲ್ಲದೆ ಬಂಡವಾಳ ಸಂಬಂಧಗಳ ಅಭಿವೃದ್ಧಿಯಲ್ಲಿ ಕೂಡ ಭಾರತದಲ್ಲಿ ಸಂಕಷ್ಟಕ್ಕೊಳಗಾದವರು ಪಕ್ಷಕ್ಕೆ ಸರಿಸಲ್ಪಟ್ಟಿದ್ದಾರೆ. ಮಾರುಕಟ್ಟೆ ವಿನಿಮಯದ ಭಾಗವಾಗಿದ್ದರೂ ಅವರಲ್ಲಿ ಬಹಳಷ್ಟು ಮಂದಿ ಒಂದು ಮಾರುಕಟ್ಟೆ ಕೂಲಿ ಅಥವಾ ತಮ್ಮ ಉತ್ಪಾದನೆಗೆ ತಕ್ಕ ವಿನಿಮಯ ದರವನ್ನು ಅವರು ಪಡೆಯುವುದಿಲ್ಲ. ಇದು ಔಪಚಾರಿಕವಾದ ಸಮಾನತೆಯ ಷರತ್ತುಗಳಿಗೆ ವಿರುದ್ಧವಾಗಿದೆ. ಹೀಗಾಗಿ ಆಧುನಿಕ ಅಭಿವೃದ್ಧಿಯ ಫಲಗಳನ್ನು ಅನುಭವಿಸುವಲ್ಲಿ ಅಂಚಿಗೆ ತಳಲ್ಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಯತ್ತ ಒಂದು ಮರುನೋಟವನ್ನು ಈ ಅಧ್ಯಯದಲ್ಲಿ ನೋಡಬಹುದಾಗಿದೆ.

ಇದನ್ನು ಬದಲಾಗುತ್ತಿರುವ ಮತದಾರ ವರ್ಗದ ಸ್ವರೂಪದ ಹಿನ್ನೆಲೆಯಲ್ಲಿ ಅಂದರೆ ಯಾರು ಮತದಾನ ಮಾಡುತ್ತಾರೆ ಮತ್ತು ಯಾರು ಮಾಡುವುದಿಲ್ಲವೆನ್ನುವುದರ ಸಮಗ್ರ ಸಂರಚನೆಯನ್ನು ಪರೀಕ್ಷಿಸುವ ಮೂಲಕ ನೋಡೋಣ. ಮತದಾರ ವರ್ಗದ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆ ನಡೆದಿವೆ. ಯಾಕೆಂದರೆ ೧೯೭೧ ಮತ್ತು ೧೯೯೬ರ ಮಧ್ಯೆ ಮತದಾನ ಮಾಡಿರುವ ಮತದಾರ ವರ್ಗದಲ್ಲಿ ಪ್ರಶಂಸನೀಯವಾದ ಬದಲಾವಣೆಯಾಗಿಲ್ಲ. ಅಂದರೆ ಯಾರು ಮತದಾನ ಮಾಡುತ್ತಾರೆ ಮತ್ತು ಯಾರು ಮಾಡುವುದಿಲ್ಲವೆನ್ನುವ ಸಂರಚನೆಯಲ್ಲಿ ನಾಟಕೀಯ ರೀತಿಯಲ್ಲಿ ಬದಲಾವಣೆಗಳುಂಟಾಗಿದೆ. ೧೯೭೧ಕ್ಕೆ ಹೋಲಿಸಿದಾಗ, ಒಟ್ಟಾರೆ ಶೇಕಡವಾರು ಪರಿಗಣಿಸಿದಾಗ ಒಂದು ಬದಲಾವಣೆ ಘಟಿಸಿದ್ದು. ಈಗ ಮತದಾನ ಮಾಡುವವರಲ್ಲಿ ಹೆಚ್ಚಾಗಿ ಅನಕ್ಷರಸ್ಥರು, ಗ್ರಾಮೀಣ ಭಾಗದವರು, ಪರಿಶಿಷ್ಟರು ಮತ್ತು ಒಬಿಸಿಗಳಿರುತ್ತಾರೆ. ೧೯೯೬ರ ಬದಲು ೧೯೭೧ರಲ್ಲಿ ಹೆಚ್ಚಾಗಿ ಮೇಲ್ಜಾತಿಗಳು, ನಗರ ಮತ್ತು ಕಾಲೇಜು ಶಿಕ್ಷಿತ ಮತದಾರರಿದ್ದರು. ಅದೇ ರೀತಿಯಲ್ಲಿ ಪ್ರತಿಶತ ಮುಸ್ಲಿಮರು ಅಥವಾ ಬುಡಕಟ್ಟು ಮತದಾರರು ಹೆಚ್ಚಾಗಿ ಸಹ ರಾಷ್ಟ್ರೀಯ ಸರಾಸರಿಗೆ ವ್ಯತಿರಿಕ್ತವಾಗಿ ಮತದಾನ ಮಾಡಿದರು. ಸಮೀಕ್ಷೆಯ ಹಿನ್ನೆಲೆಯಲ್ಲಿ ಕಂಡುಕೊಂಡ ಪ್ರತಿಶತ ಅಂಕಿಅಂಶಗಳಿಂದ ಒಟ್ಟಾರೆ ಮತದಾರ ವರ್ಗದಲ್ಲಿ ಮಿಲಿಯಗಟ್ಟಲೆ ಮತದಾರರು ಈ ಗುಂಪಿಗೆ ಸೇರುತ್ತಾರೆ ಎಂಬುದನ್ನು ತೋರಿಸುತ್ತಾರೆ. ೧೯೭೧ಕ್ಕಿಂತಲೂ ೧೯೯೬ರಲ್ಲಿ ನಿಕೃಷ್ಟಕ್ಕೊಳಗಾದ ಜನಗಳು ಹೆಚ್ಚು ಮತದಾರರಾಗಿರುವುದನ್ನು ಕಾಣಬಹುದು. ರಾಜ್ಯದ ವರ್ಗ ಸ್ವರೂಪ ಏನೇ ಇದ್ದರೂ ಹೆಚ್ಚಾಗಿ ತುಳಿತಕ್ಕೊಳಗಾದ ಜನರಿದ್ದು ಇದು ೧೯೭೧ರಂತಲ್ಲವೆಂದು ಆತ್ಮಸ್ಥೈರ್ಯದಿಂದ ಹೇಳಬಹುದಾಗಿದೆ. ಯಾರು ಮತ ಹಾಕುತ್ತಾರೆ ಎನ್ನುವ ಸಂರಚನೆಯನ್ನು ಇದೊಂದು ಗಮನಿಸಿದ ಬದಲಾವಣೆಯೆಂದು ನನಗನಿಸುತ್ತದೆ.

ಪ್ರಾತಿನಿಧ್ಯದ ನಿಟ್ಟಿನಲ್ಲಿ ಭಾರತದ ಪ್ರಜಾಸತ್ತೆಯನ್ನು ನಿಯಂತ್ರಿಸುವವರ ಹಣೆಬರಹದತ್ತ ಕಣ್ಣುಹಾಯಿಸಿದರೆ ಅಗತ್ಯವಾಗಿಯೂ ಅದು ದುರ್ಬಲರು ಮತ್ತು ಅಧಿಕಾರರಹಿತರಿಂದಾಗಿ ಒಂದು ಅನಿರೀಕ್ಷಿತವಾದ ರೀತಿಯಲ್ಲಿ ಅತೀ ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ ಎಂಬುದನ್ನು ನಾವು ಮನಗಾಣಬಹುದು. ೧೯೬೨ರ ಮೂರನೇ ಮಹಾಚುನಾವಣೆ ಸಮಯದಿಂದ ಮತದಾನದ ಅಂಕಿ ಅಂಶಗಳು ಭಾರತದಲ್ಲಿ ಸ್ಥಿರಗೊಂಡವು. ಹೆಚ್ಚಿನ ಚುನಾವಣೆಗಳಲ್ಲಿ ಇದು ಯಾದೃಚ್ಛಿತವಾಗಿ ಶೇಕಡಾ ೫೫ ಮತ್ತು ಶೇಕಡಾ ೬೨ರ ಮಧ್ಯೆ ಏರುಪೇರಾಗಿ ಇರುತ್ತಿತ್ತು. ೧೯೯೧ರಲ್ಲಿ ಇದು ಶೇಕಡಾ ೫೧ಕ್ಕೆ ಇಳಿದರೆ ೧೯೮೪ರಲ್ಲಿ ಅದು ಶೇಕಡಾ ೬೪ಕ್ಕೇರಿತು. ಇವಲ್ಲದಿದ್ದರೆ ಏಳು ಸಂಸದೀಯ ಚುನಾವಣೆಗಳಲ್ಲಿ ಈ ಕ್ರಮಾಂಕವನ್ನು ಗಮನಿಸಬಹುದು. ೧೯೭೧ರಲ್ಲಿ ಶೇಕಡಾ ೫೫.೩ ಮತ್ತು ೧೯೯೬ರಲ್ಲಿ ಶೇಕಡಾ ೫೭.೯ ಮತದಾನದ ಅಂಕಿ ಅಂಶಗಳ ಮಧ್ಯೆ ಪ್ರಮುಖವಾದ ಭಿನ್ನತೆಯಿದ್ದು ಇದು ನಾಟಕೀಯವಾದ ಹೋಲಿಕೆಯೇನಲ್ಲ. ಹಾಗಾಗಿ ಭಾರತದಲ್ಲಿ ಶೇಕಡಾ ಮತದಾನವು ಬಹಿರಂಗಪಡಿಸುವುದಕ್ಕಿಂತ ಹೆಚ್ಚು ಕಮ್ಮಿ ಗೌಪ್ಯತೆಯಲ್ಲೇ ಉಳಿದುಕೊಂಡಿದೆ ಎಂದು ಹೇಳಬಹುದು. ಬಡವರಲ್ಲಿ ಹೆಚ್ಚುಮಂದಿ ಮತ ಹಾಕಲು ನಿರ್ಧರಿಸಿದರೆ ಮತ್ತು ಶ್ರೀಮಂತರಲ್ಲಿ ಕಡಿಮೆ ಜನ ಮತ ಚಲಾಯಿಸಿದರೆ ಅದು ಗಣನೀಯವಾದುದು. ಪ್ರಜಾಪ್ರಭುತ್ವವು ಬಗೆಹರಿಸುವ ಸಮಸ್ಯೆಗಳಾದ ಸಾಕ್ಷರತೆ, ಆರೋಗ್ಯ, ಪೌಷ್ಟಿಕತೆ, ವಸತಿ, ಉದ್ಯೋಗ, ಸಾಮಾಜಿಕ ಮತ್ತು ಲಿಂಗತಾರತಮ್ಯ ಇವೆಲ್ಲವೂ ಹೆಚ್ಚಾಗಿ ಬಡಜನರ ಕಾಳಜಿಗಳಾಗಿವೆ. ಲಿಂಗ ತಾರತಮ್ಯವನ್ನು ಹೊರತುಪಡಿಸಿ ಶ್ರೀಮಂತರಲ್ಲಿನ ಈ ಸಮಸ್ಯೆಗಳನ್ನು ಬೇರೆ ರೀತಿಯಲ್ಲಿ ಉತ್ತಮಪಡಿಸಲಾಗುತ್ತದೆ. ಅರ್ಧದಶಕದ ಭಾರತ ಪ್ರಜಾಸತ್ತೆಯ ಉಳಿವು ಸಮಸ್ಯೆಗಳನ್ನು ಬಗೆಹರಿಸಿರುವ ಸ್ವರೂಪ ಬದಲು ತುಳಿತಕ್ಕೊಳಗಾದವರಿಗೆ ಅವರ ಘನತೆ ಮತ್ತು ಹಕ್ಕುಗಳಿಗೆ ಹೋರಾಡಲು ಅವಕಾಶ ಕಲ್ಪಿಸಿರುವುದರಲ್ಲಿ ಅದು ನಿಂತಿದೆ. ಭಾರತದಲ್ಲಿ ಸಂಕಷ್ಟಕ್ಕೊಳಗಾದ ಜನರಲ್ಲಿ ಶೋಷಿತರು ಮತ್ತು ಸಾಮಾಜಿಕ ತುಳಿತಕ್ಕೊಳಗಾದವರಿದ್ದಾರೆ. ಇವೆರಡು ವರ್ಗೀಕರಣವನ್ನು ಬೇರೆಯಾಗಿ ಪರಿಗಣಿಸಬೇಕು. ಉದಾಹರಣೆಗೆ ಶೋಷಣೆಗೊಳಗಾದ ಒಬ್ಬ ಮೇಲ್ಜಾತಿ ಕಾರ್ಮಿಕ ಅಗತ್ಯವಾಗಿಯೂ ಸಾಮಾಜಿಕ ತುಳಿತಕ್ಕೊಳಗಾದವನಲ್ಲ. ಆದರೆ ಒಬ್ಬ ಒಬಿಸಿ ರೈತ ಶೋಷಿತನಲ್ಲ. ಆದರೆ ಭಾರತದ ಸಾಮಾಜಿಕ ಕ್ರಮಾಂಕದಲ್ಲಿ ಅವನು ಚಾರಿತ್ರಿಕವಾಗಿ ತುಳಿತಕ್ಕೊಳಗಾದವನು. ಒಬ್ಬ ದಲಿತ ಕೃಷಿ ಕಾರ್ಮಿಕನು ಶೋಷಿತನು ತುಳಿತಕ್ಕೊಳಪಟ್ಟವನು ಮತ್ತು ಹೀನಾಯವಾಗಿ ಪರಿಗಣಿಸಲ್ಪಟ್ಟವನು. ಶ್ರೀಮಂತ ವರ್ಗದಲ್ಲಿನ ಮಹಿಳೆ ಸಾಮಾಜಕವಾಗಿ ತುಳಿತಕ್ಕೊಳಗಾಗಿರುತ್ತಾಳೆ. ಆದರೆ ಬಡವನಿಗೆ ಇಲ್ಲವೇ ಕಾರ್ಮಿಕನಿಗೆ ಆಕೆ ಶೋಷಕಿ ಹಾಗೂ ತುಳಿತಕ್ಕೀಡು ಮಾಡುವವಳು. ಮುಂದಿನ ವಿಶ್ಲೇಷಣೆಯಲ್ಲಿ ಸಂಕಷ್ಟಕ್ಕೊಳಗಾದ ಸಮುದಾಯವನ್ನು ಪರಿಗಣಿಸಲಾಗುವುದು. ಶೋಷಿತರಾದ ಕಾರ್ಮಿಕರು ಮತದಾನ ಮಾಡುವರೆಂದಾದರೆ ಅದನ್ನು ನಿಲ್ಲಿಸಲಾಗದು. ಇದನ್ನೇ ದಲಿತ ಮತ್ತು ತೀರಾ ಹಿಂದುಳಿದ ಜಾತಿಗಳ ಸಂದರ್ಭದಲ್ಲಿ ಹೇಳಬಹುದು. ಸ್ಥಳೀಯ ಪ್ರಬಲ ಸಾಮಾಜಿಕ ಗುಂಪುಗಳು ಆಕ್ರಮಣ ಮಾಡಿಯಾರೆಂಬ ಭೀತಿಯಿಂದ ಬಹಳಷ್ಟು ಸಂದರ್ಭಗಳಲ್ಲಿ ಅವರು ಭಯದಲ್ಲೇ ಮತ ಚಲಾಯಿಸುತ್ತಾರೆ.

ಬದಲಾದ ಮತದಾರದ ಸಂರಚನೆಯು ಕೂತೂಹಲಕಾರಿ ಚಿತ್ರಣವನ್ನು ಹೊರಗಿಡುವುದು. ಜಾತಿಗಳ  ಹಿನ್ನೆಲೆಯಲ್ಲಿ ಒಬಿಸಿಗೆದುರಾಗಿ ಮೇಲ್ಜಾತಿಗಳನ್ನು ಪರಿಗಣಿಸಿದಲ್ಲಿ ೧೯೯೬ರಲ್ಲಿ ಮೇಲ್ಜಾತಿಗಳಲ್ಲಿ ಶೇಕಡಾ ೫೨ರಷ್ಟು ಮತದಾನಕ್ಕೆ ವಿರುದ್ಧವಾಗಿ ಶೇಕಡಾ ೫೯ರಷ್ಟು ಒಬಿಸಿ ಮತದಾನವಾಗಿತ್ತು. ಶೇಕಡಾ ೫೮ರ ಸರಾಸರಿ ಮತದಾನಕ್ಕೆ ಹೋಲಿಸಿದಲ್ಲಿ ಒಬಿಸಿ ಮತದಾನ ಶೇಕಡಾ ೧ರಷ್ಟು ಹೆಚ್ಚಾಗಿದ್ದರೆ ಮೇಲ್ಜಾತಿಗಳ ಮತವು ಸುಮಾರು ಶೇಕಡಾ ೨ರಷ್ಟು ಕಡಿಮೆಯಿತ್ತು.

ಇದನ್ನು ಪರಿಶಿಷ್ಟ ಜಾತಿ ಸಂದರ್ಭದಲ್ಲಿ ಪರಿಗಣಿಸಿದಲ್ಲಿ ಮತ್ತಷ್ಟು ವ್ಯಕ್ತಗೊಳ್ಳುತ್ತದೆ. ಅವರ ಮತವು ಶೇಕಡಾ ೨ರಷ್ಟು ಸರಾಸರಿಗಿಂತ ಹೆಚ್ಚಿದೆ. ಅಂದರೆ ಮೇಲ್ಜಾತಿಗರ ಶೇಕಡಾ ೫೬ರಷ್ಟು ಮತಗಳಿಗೆ ಹೋಲಿಸಿದಲ್ಲಿ ಶೇಕಡಾ ೬೦ರಷ್ಟು ಪರಿಶಿಷ್ಟರು ಮತ ಹಾಕಿರುವರು. ೧೯೭೧ರಲ್ಲಿ  ಈ ವ್ಯತ್ಯಾಸವು ಅಷ್ಟೊಂದು ವ್ಯಾಪಕವಲ್ಲ. ಒಬಿಸಿ ಮತ್ತು ಮೇಲ್ಜಾತಿಗಳು ಸರಾಸರಿಗಿಂತ ಶೇಕಡಾ ೧.೫ರಷ್ಟು ಹಿಂದಿದ್ದರೆ. ಪರಿಶಿಷ್ಟರು ಸರಾಸರಿಗಿಂತ ಕೇವಲ ಶೇಕಡಾ ೦.೫ರಷ್ಟು ಸರಾಸರಿಗಿಂತ ಮುಂದಿದ್ದರು.

ಇನ್ನೂ ಮುಂದುವರಿದು ಅನಕ್ಷರಸ್ಥ ಮತ್ತು ಕಾಲೇಜು ಮತ್ತು ಹೆಚ್ಚಿನ ಹಂತದ ವಿದ್ಯಾವಂತರ ಮಧ್ಯದ ಮತದಾನದ ಅಂಕಿಅಂಶಗಳು ಹೆಚ್ಚಿನ ಪಲ್ಲಟವನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು. ೧೯೯೬ರಲ್ಲಿ ಅನಕ್ಷಸ್ಥರ ಮತ ಸರಾಸರಿಗಿಂತ ಶೇಕಡಾ ಅರ್ಧದಷ್ಟು ಹೆಚ್ಚಿದರೆ ಬಹಳ ಆಶ್ಚರ‍್ಯಕರವೆಂದರೆ ವಿದ್ಯಾವಂತರ ಮತ ಸರಾಸರಿಗಿಂತ ಶೇಕಡಾ ೦.೫ ಕಡಿಮೆ ಇತ್ತು. ಚುನಾವಣಾ ದಿನದಂದು ಶೇಕಡಾ ೬೦.೫ರಷ್ಟು ಅನಕ್ಷರಸ್ಥರು ಮತ್ತು ಕೇವಲ ಶೇಕಡಾ ೫೫ರಷ್ಟು ವಿದ್ಯಾವಂತರು ಮತ ಹಾಕಿದರು. ೧೯೭೧ರಲ್ಲಿ ವಿದ್ಯಾವಂತರು ಶೇಕಡಾ ೫೫ರಷ್ಟು ಸರಾಸರಿಗೆ ಹೋಲಿಸಿದಲ್ಲಿ ಶೇಕಡಾ ೬ರಷ್ಟು ಹೆಚ್ಚಿನ ಮತ ಚಲಾಯಿಸಿದರೆ ಅನಕ್ಷರಸ್ಥರು ಸರಾಸರಿಗಿಂತ ಶೇಕಡಾ ೩.೫ರಷ್ಟು ಕಡಿಮೆ ಮತದಾನ ಮಾಡಿದರು. ಮತದಾರವರ್ಗದ  ಸಂರಚನೆಯಲ್ಲಿ ಇದು ಒಂದು ವ್ಯಾಪಕ ಬದಲಾವಣೆ ಸೂಚಿಸುತ್ತದೆ. ಮತದಾರ ವರ್ಗದ ಸಕ್ರಿಯ ಭಾಗ ಹೆಚ್ಚಾಗಿ ಅನಕ್ಷರಸ್ಥರಾಗಿದ್ದು ಇವರು ಕಾಲೇಜು ಶಿಕ್ಷಕರಿಗಿಂತ ಅತೀ ಬಡವರಾಗಿರುತ್ತಾರೆ.

ಇಲ್ಲಿ ನಮಗೊಂದು ಹೋಲಿಕೆಯ ದಿಗ್ಭ್ರಮೆಯಿದೆ. ವಿವಿಧ ದೇಶಗಳ ಅಧ್ಯಯನದ ಸಮೀಕ್ಷೆ ಮತ್ತು ಪ್ರಪಂಚದಾದ್ಯಂತ ವಿಭಿನ್ನ ತರದ ಇಂಥ ಸಮಗ್ರ ಮಾಹಿತಿ ಪ್ರಕಾರ ಅನಕ್ಷರತೆ, ಬಡತನ, ದಬ್ಬಾಳಿಕೆ ಮತ್ತು ಇತರೆ ಸಂಗತಿಗಳು ನಿರಂತರವಾಗಿರುವಲ್ಲಿ ಪ್ರಜಾಸತ್ತೆಯ ಉಳಿವು ನಕಾರಾತ್ಮಕವನ್ನು ಸೂಚಿಸುತ್ತದೆ. ಇಂಥ ಲಕ್ಷಣಗಳಿಂದ ಆ ಸಮಾಜದಲ್ಲಿ ನಾಯಕರ ಲೆಕ್ಕಾಚಾರ ಮತ್ತು ಜನಪ್ರಿಯ ಉಪಾಯ ಕೌಶಲ್ಯಗಳು ಹೆಚ್ಚಾಗಿರುವುದನ್ನು ಅಧ್ಯಯನಗಳು ಶ್ರುತಪಡಿಸುತ್ತವೆ. ಮೂಲ ಜಿಜ್ಞಾಸು ಜನಪ್ರಿಯತೆಯ ಕೆಲ ನೀತಿ ಮತ್ತು ಆಡಳಿತ ಕ್ರಮಗಳು ಭಾರತದಂಥ ಸಮಾಜೋ-ಆರ್ಥಿಕ ಸ್ಥಿತಿಗಳಿರುವ ಇತರ ಸಮಾಜಗಳಲ್ಲೂ ಸ್ಥಾನ ಪಡೆದಿವೆ. ೧೯೭೧ರ ಸಂದರ್ಭದಲ್ಲಿ ಕೇಂದ್ರ ಸರಕಾರ ತಳೆದ ಮೂಲಜಿಜ್ಞಾಸು ನೀತಿ ನಿರ್ಣಯಗಳಿಂದ ಉ೦ಟಾದ ಸ್ವಾಸ್ಥ್ಯಭಾವವು ಆಳುವ ವರ್ಗದ ಲೆಕ್ಕಾಚಾರಗಳ ಫಲವಾಗಿ ಬದಿಗೊತ್ತಲ್ಪಟ್ಟಿರುವುದು ಒಂದು ನಿದರ್ಶನ. ಆದರೆ ಇಂಥ ಜನಪ್ರಿಯ ವಾಙ್ಮಯಗಳನ್ನು ಜನರು ತಕ್ಷಣದಲ್ಲಿ ಗುರುತಿಸಿ ತಿರಸ್ಕರಿಸುವುದನ್ನು ಕೂಡ ಭಾರತದ ಅನುಭವದಲ್ಲಿ ಕಂಡಿದ್ದೇವೆ. ತುರ್ತುಪರಿಸ್ಥಿತಿಯ ಕರಾಳತೆಯನ್ನು ಜನಸಾಮಾನ್ಯರು ತಿರಸ್ಕರಿಸಿರುವುದು ಕೂಡಾ ಒಂದು ನಿರ್ಣಾಯಕವಾದ ರುಜುವಾತೆನಿಸಿದೆ.

ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಸಾಮಾನ್ಯವಾಗಿ ಭಾರತದ ಪ್ರಜಾಸತ್ತೆಯೆಡೆಗೆ ಬಡವರು ಮತ್ತು ಅನಕ್ಷರಸ್ಥರಿಗೆ ಒಂದು ಔದಾಸೀನ್ಯ ಮನೋಭಾವವಿದೆ ಎಂದು ಹೇಳುತ್ತದೆ. ಉದಾಹರಣೆಗೆ ೧೯೮೦ರ ಉತ್ತರಾರ್ಧ ಮತ್ತು ೧೯೯೦ರಲ್ಲಿನ ಪ್ರತಿ ಚುನಾವಣೆಗಳಲ್ಲೂ ಭಾರತದ ಉದ್ದಗಲಕ್ಕೂ ಮಾಧ್ಯಮದ ಮಿತ್ರರು ಸಂಚರಿಸುತ್ತಾ ಜನಸಾಮಾನ್ಯರು ಚುನಾವಣಾ ವಿಷಯದಲ್ಲಿ ತೀರಾ ನಿರುತ್ಸಾಹದಿಂದ ಇದ್ದರೆಂದು ವರದಿ ಮಾಡಿದ್ದರು. ಮತ್ತಿದನ್ನು ಔದಾಸೀನ್ಯತೆ ಎಂದು ಕರೆದಿದ್ದರು. ಮತಯಾಚನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಜನಸಾಮಾನ್ಯರಿಗೆ ಉತ್ಸಾಹವಿಲ್ಲದಿದ್ದುದು ನಿಜವಾದರೂ ಮತದಾರರು ಔದಾಸೀನ್ಯ ನಿಲುವಿನವರೆಂಬುದು ಸರಿಯಲ್ಲ. ಮತಯಾಚನೆ ಪ್ರಕ್ರಿಯೆಯಲ್ಲಿ ಮತದಾರರ ಔದಾಸೀನ್ಯತೆ ಮತ್ತು ಆಸಕ್ತಿಹೀನತೆ ಮಧ್ಯೆ ಇರುವ ವ್ಯತ್ಯಾಸ ಮಹತ್ವದ್ದು. ಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ಅಭ್ಯರ್ಥಿಗಳೆಡೆಗೆ ಕನಿಷ್ಟ ಗೌರವವು ಇಲ್ಲದಿರುವುದೆಂದು ವಿವರಿಸಬಹುದು. ತೀರಾ ಅಕ್ಷೇಪಣೀಯ ಸನ್ನಿವೇಶದಲ್ಲಿ ಮತಯಾಚನೆ ಸಂದರ್ಭದಲ್ಲಿ ಏನು ಆಶ್ವಾಸನೆ ನೀಡಲಾಗಿದೆಯೇ ಅದರಲ್ಲಿ ಕೆಲವನ್ನಾದರೂ ಸರಕಾರಿ ಹಸ್ತಕ್ಷೇಪದಿಂದ ಜಾರಿಗೆ ತಂದಿರುವ ಅನುಭವಗಳನ್ನು ನಾವು ಕಂಡಿದ್ದೇವೆ. ಸೌಲಭ್ಯವಂತರು ಮತ್ತು ಸಮಾಜದ ಪ್ರತಿಪಾದಕ ವರ್ಗದವರಂತೆ ಕೆಲವೊಮ್ಮೆ ಸುಸಂಗತವಾಗಿ ಜನ ಬಹುಶಃ ರಾಜಕೀಯದ ಕುರಿತು ಮಾತನಾಡಲಾರರು ಅಥವಾ ಅವರೊಳಗೆ ಹಾಗೇನು ಮಾಡಲಾರರು. ಜನ ಸಾಮಾನ್ಯರೊಳಗೆ ಅತಿಯಾದ ಸ್ವಯಂ ಚಾಲನೆ ಅಥವಾ ಸನ್ನದ್ಧತೆ ಹಿಂದೆಂದಿಗಿಂತಲೂ ಹೆಚ್ಚಾಗಿ ನಡೆಯುತ್ತಿದೆ ಎಂಬುದನ್ನು ಪ್ರಮುಖವಾಗಿ ಗಮನಿಸಬೇಕು. ಇದು ಕೆಲಸ ಅಥವಾ ರಕ್ತಸಂಬಂಧದಂಥ ಅಸ್ತಿತ್ವದಲ್ಲಿರುವ ಜಾತೀಕರಣದ ಮೂಲಕ ನಡೆಯುತ್ತದೆ ಮತ್ತು ಹೆಚ್ಚಾಗಿ ಇದು ಮೌನವಾಗಿ ಸಾಂಗತ್ಯಗೊಳ್ಳುತ್ತದೆ. ಮೊದಲಿನಂತೆ ಮತದಾನದ ಬೂತ್ ಗೆ ಹೋಗಲು ಜನರ ಮೇಲೆ ಒತ್ತಡ ಹಾಕಬೇಕಾಗಿಲ್ಲ ತುರ್ತುಪರಿಸ್ಥಿತಿಯಂಥ ಕರಾಳತೆಯನ್ನು ಮೊತ್ತಮೊದಲ ಬಾರಿಗೆ ಜನ ಮೌನವಾಗಿ ತಿರಸ್ಕರಿಸಿದ ನಂತರವಂತೂ ಇದು ನಡೆಯುತ್ತಲಿದೆ ಎಂದು ನನಗನಿಸುತ್ತಿದೆ.

ಸಂಕಷ್ಟದಲ್ಲಿರುವ ಇನ್ನೆರಡು ಸಮುದಾಯಗಳಾದ ಆದಿವಾಸಿ ಮತ್ತು ಮುಸ್ಲಿಮರತ್ತ ಕಣ್ಣು ಹಾಯಿಸೋಣ. ೧೯೯೬ರಲ್ಲಿ ಹಲವು ಆದಿವಾಸಿ ಸಮುದಾಯಗಳ ಒಟ್ಟಾರೆ ಮತ ರಾಷ್ಟ್ರೀಯ ಸರಾಸರಿ ಶೇಕಡಾ ೫೮ಕ್ಕೆ ಕನಿಷ್ಟ ಶೇಕಡಾ ಒಂದು(ಶೇ. ೫೭) ಕಡಿಮೆಯಿತ್ತು. ೧೯೭೧ರಲ್ಲಿ ಅದು ಸರಾಸರಿಗಿಂತ ಶೇಕಡಾ ೬೫ರಷ್ಟು ಕಡಿಮೆಯಾಗಿತ್ತು. ಆಗ ಸರಾಸರಿ ಮತದಾನ ಶೇಕಡಾ ೫೫ರಷ್ಟಿದ್ದರೆ ಆದಿವಾಸಿ ಮತಗಳು ಶೇಕಡಾ ೪೮.೫ ಆಗಿತ್ತು. ರಾಜಕೀಯದಲ್ಲಿ ಆದಿವಾಸಿ ಜನಗಳ ಆಸಕ್ತಿ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ ಮುಸ್ಲಿಮರ ಸಂದರ್ಭದಲ್ಲಿ ೧೯೯೬ರಲ್ಲಿ ಸರಾಸರಿಗೆ ಶೇಕಡಾ ಒಂದರಷ್ಟು ಕಡಿಮೆಯಾಗಿದ್ದರೆ, ೧೯೭೧ರಲ್ಲಿ ಅದು ಸರಾಸರಿಗೆ ಶೇಕಡಾ ಏಳರಷ್ಟು ಕಡಿಮೆಯಿತ್ತು. ಇವೆರಡೂ ಸಮುದಾಯಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಸರಾಸರಿಗೆ ಕಡಿಮೆಯಿದ್ದರೂ ಚುನಾವಣಾ ಪಾಲ್ಗೊಳ್ಳುವಿಕೆಯಲ್ಲಿ ಅವರು ಪಾಲು ಹೆಚ್ಚಾಗಿದ್ದು ಈ ವ್ಯತ್ಯಾಸ ಕಡಿಮೆಗೊಳ್ಳುತ್ತಾ ಇದೆ ಎಂಬುದನ್ನು ಗಮನಿಸಬೇಕು. ಮುಸ್ಲಿಂ ಸಮುದಾಯವು ಆದಿವಾಸಿಗಳಿಗಿಂತ ಉನ್ನತ ಸ್ಥಾನಮಾನವನ್ನು ಹೊಂದಿದೆ. ಇವರಲ್ಲಿ ಭೂಮಾಲೀಕರು, ವೃತ್ತಿಪರರು ಮತ್ತಿತರ ಸಾಕಷ್ಟು ಸಂಖ್ಯೆಯ ಮಧ್ಯಮ ವರ್ಗದವರಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ೧/೨ರಷ್ಟು ಮಂದಿ ಶ್ರೀಮಂತರಿದ್ದು ಉಳಿದವರು ಒಬಿಸಿ ಸ್ಥಾನಮಾನಕ್ಕೆ ಸಮವಾಗಿದ್ದಾರೆ. ದಲಿತರಲ್ಲಿ ಶೇಕಡಾ ೧೯ ಮತ್ತು ಆದಿವಾಸಿಗಳಲ್ಲಿ ಶೇಕಡಾ ೧೬.೪ರಷ್ಟು ಸ್ಥಿತಿವಂತರಿದ್ದು ಮುಸ್ಲಿಮರ ಪ್ರಮಾಣಕ್ಕೆ ಹೋಲಿಸಿದರೆ ಇದು ಕಡಿಮೆಯೇ. ಇದನ್ನು ಹೊರತುಪಡಿಸಿದರೆ ಉಳಿದ ಮುಸ್ಲಿಮರು ಸಂಕಷ್ಟದಲ್ಲಿರುವ ಮಂದಿ ಎಂದು ಪರಿಗಣಿಸಲ್ಪಡುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಅವರ ಚಾರಿತ್ರಿಕ ಪಾತ್ರ ಮತ್ತು ಮುಸ್ಲಿಂ ಲೀಗಿನ ಪ್ರತ್ಯೇಕತಾ ರಾಜಕಾರಣದ ಜೊತೆ ವಿಭಿನ್ನ ಕ್ರಮಾಂಕದಲ್ಲಿ ಗುರುತಿಸಿಕೊಂಡಿರುವುದರಿಂದ ವಿಸ್ತೃತ ಜನಸಾಮುದಾಯದ ಮುಂದೆ ಅವರ ಉಪಸ್ಥಿತಿಯೇ ಸಂಶಯಾಸ್ಪದ ಎನ್ನುವಷ್ಟರ ಮಟ್ಟಿಗೆ ಸಂಕಷ್ಟದಲ್ಲಿದ್ದಾರೆ. ಈ ಸಂಶಯ ಎರಡು ರೂಪದಲ್ಲಿ ಕಂಡುಬರುವುದು. ಕೋಮುಭಾವನೆಯಿಂದ ಸಾಕಷ್ಟು ಮಂದಿಯ ಜೊತೆ ಹೊಂದಾಣಿಕೆ ಹಾಗೂ ಹಿಂದುತ್ವದ ಪಾಲಕರಿಂದ ವ್ಯಾಪಕವಾದ ದ್ವೇಷಕ್ಕೆ ಒಳಗಾಗಿರುವುದು. ಭಾರತದ ಮುಸ್ಲಿಮರು ಈ ಇಕ್ಕಟ್ಟಿನಲ್ಲಿದ್ದು ತಮ್ಮ ಪರಿಸ್ಥಿತಿ ಬಗೆಗೆ ಖಾತರಿಯಿಲ್ಲದಿದ್ದು ಮತ್ತು ಇವು ಕೋಮುದಂಗೆ ಸಂದರ್ಭದಲ್ಲಿ ಮತ್ತಷ್ಟು ಏರುಪೇರಾಗುವುದನ್ನು ಭಾರತದ ರಾಜಕಾರಣದ, ಕೋಮುದಂಗೆಗಳ ಸಾಮಾಜಿಕ ನೆಲೆಗಳನ್ನು ಗಮನಿಸಿದಲ್ಲಿ ಕಂಡುಕೊಳ್ಳಬಹುದು.

ಈಗ ನಗರ ಮತ್ತು ಗ್ರಾಮೀಣ ಜನಸಂಖ್ಯೆಯತ್ತ ದೃಷ್ಟಿ ಹಾಯಿಸೋಣ. ಗ್ರಾಮೀಣ ಜನರು ಸಂಕಷ್ಟದಲ್ಲಿರುತ್ತಾರೆ ಮತ್ತು ನಗರದವರು ಇಲ್ಲ ಎನ್ನುವುದು ಸರಿಯಾದ ವಾದವಲ್ಲ. ಚರಣ್ ಸಿಂಗ್ ಕಾಲದಿಂದ ಭಾರತ ರಾಜಕಾರಣದಲ್ಲಿ ಇದೊಂದು ಜನಪ್ರಿಯ ಉವಾಚವಾಗಿದ್ದು ಇದನ್ನು ಪ್ರಚಾರಪಡಿಸಿದವರು ಶ್ರೀಮಂತ ರೈತರು. ಗ್ರಾಮೀಣ ಜನಸಂಖ್ಯೆಯ ಸರಿಸುಮಾರು ಶೇಕಡಾ ೪.೫ರಷ್ಟು ಭೂಮಾಲೀಕರಾಗಿದ್ದು ಇವರೆಲ್ಲ ಗ್ರಾಮೀಣ ಭಾರತದ ಅತ್ಯಂತ ತೀಕ್ಷ್ಣ ವಿಚಾರಧಾರೆಯ ಪ್ರತಿಪಾದಕರಾಗಿದ್ದಾರೆ. ಇದರ ಜೊತೆ ಸಾಕಷ್ಟು ಸಂಖ್ಯೆಯ ಅಂದರೆ ಶೇಕಡಾ ೧೦.೧೨ರಷ್ಟು ಕೃಷಿ ಕಾರ್ಮಿಕರು ಕುಲಕ್ ಮತ್ತು ಶ್ರೀಮಂತ ರೈತರಾಗಿರುತ್ತಾರೆ. ಅದೇ ರೀತಿ ನಗರ ಪ್ರದೇಶದಲ್ಲೂ ಕಾರ್ಮಿಕ ವರ್ಗ, ಬಡ ಸ್ವಉದ್ಯೋಗಿ, ನಿರ್ಗತಿಕರು ಮುಂತಾಗಿ ವ್ಯವಸ್ಥಿತವಾಗಿ ಶೋಷಣೆಗೆ ಒಳಗಾಗುವವರಿದ್ದಾರೆ. ಆದರೂ ನಗರ ಪ್ರದೇಶದಲ್ಲಿ ಮಾಹಿತಿ ಮತ್ತು ಮಧ್ಯಮ ಸಂಪರ್ಕಕ್ಕೆ ಸಂಬಂಧಿಸಿ ವಿಪುಲತೆ ಇದ್ದು ಇವುಗಳನ್ನು ಹೊಂದಿರುವುದು ಇಲ್ಲವೇ ಈ ಪ್ರಯೋಜನದಿಂದ ಅಧಿಕಾರ ಸಾಮರ್ಥ್ಯದ ಅವಕಾಶ ದೊರೆಯುವುದು. ಇದಲ್ಲದೆ ಪ್ರಬಲ ವೃತ್ತಿಪರ ಗುಂಪುಗಳಿವೆ ಮತ್ತು ಅದಕ್ಕಿಂತ ಮಿಗಿಲಾಗಿ ಅತಿ ಶಕ್ತಿಶಾಲಿ ಮತ್ತು ಆಳುವ ವರ್ಗದ ಸ್ಥಿರ ಗುಂಪೆನಿಸಿದ ಆಡಳಿತಶಾಹಿಯಿದೆ. ನಗರ ಈ ಎಲ್ಲದರಿಂದ ಹೆಚ್ಚು ಅನುಕೂಲಕರವಾಗಿದೆ ಎನ್ನುವುದು ಗ್ರಾಮವನ್ನು ನಗರದೊಂದಿಗೆ ಹೋಲಿಸಲು ಕಾರಣ ೧೯೯೬ರಲ್ಲಿ ಗ್ರಾಮೀಣ ಭಾಗದ ಮತದಾನ ಸರಾಸರಿಗಿಂತ ಶೇಕಡಾ ಒಂದರಷ್ಟು ಕಡಿಮೆಯಿತ್ತು. ಉಳಿದವುಗಳೊಂದಿಗೆ ಹೋಲಿಸಿದಾಗ ಇದು ಪ್ರಮುಖವಾದ ಪಲ್ಲಟವೇನಲ್ಲ. ಆದರೆ ನಗರ ಮತದಾರರ ಸಂದರ್ಭದಲ್ಲಂತೂ ಪ್ರಾಮುಖ್ಯತೆ ಪಡೆಯುತ್ತದೆ. ೧೯೯೬ರಲ್ಲಿ ನಗರ ಮತದಾನ ಸರಾಸರಿಗಿಂತ ಸುಮಾರು ಶೇಕಡಾ ೨.೫ರಷ್ಟು ಕಡಿಮೆಯಾಗಿತ್ತು. ಆದರೆ ೧೯೭೧ರಲ್ಲಿ ಅದು ಶೇಕಡಾ ೪ರಷ್ಟು ಹೆಚ್ಚಾಗಿತ್ತು. ಮತದಾರ ವರ್ಗದಲ್ಲಿನ ಔದಾಸೀನ್ಯತೆ ಮತ್ತು ಕಳೆಗುಂದಿದ ಆಸಕ್ತಿಯಿಂದ ನಗರ ಮತದಾನ ಕುಂಠಿತಗೊಂಡಿರುವುದು ಸ್ಪಷ್ಟವಾಗಿದೆ.

ಈ ಹೋಲಿಕೆಯ ಸಾಮಾನ್ಯ ತಿಳುವಳಿಕೆಗಿಂತ ವಿಭಿನ್ನವೆನಿಸುತ್ತದೆ. ಪ್ರಶ್ನಾರ್ಹ ಹೇಳಿಕೆಯಂಥ ನಿರಂತರ ಬರವಣಿಗೆಗಳು ತೋರಿಕೆಗಳೆನಿಸಿವೆ. ಅಗೋಚರ ಮಾದರಿಗಳು ಸ್ಪಷ್ಟವಾಗಿ ನಮ್ಮ ಪ್ರಜಾಸತ್ತೆಯ ಸಂಗತಿಗಳ ಅನಾವರಣಗೊಳಿಸುತ್ತವೆ. ಇವನ್ನು ಪರಿಗಣಿಸುವುದೆಂದರೆ ಭಾರತದಲ್ಲಿ ಪ್ರಜಾಸತ್ತಾತ್ಮಕ ಜನ ಸಾಮಾನ್ಯರು ಯಾರೆಂದು ಗುರುತಿಸುವುದಾಗಿದೆ. ಭಾರತದ ಪ್ರಜಾಸತ್ತೆ ಕಾರ್ಯಕ್ಷಮತೆಯ ಎಲ್ಲ ರೋಗಗಳಿಗೆ ಜನಸಾಮಾನ್ಯರೇ ಹೊಣೆ ಎಂದು ನಿರ್ಭೀತವಾಗಿ ಸಾರುವ ಎಲೀಟುಗಳು ಬಣ್ಣ ಬಯಲು ಮಾಡಬಲ್ಲ ಪರಿಗಣನೆ ಅಗತ್ಯವೆನಿಸಿದೆ.

ಪ್ರಜಾಸತ್ತೆ ಸಂಸ್ಥೆ ಮತ್ತದರ ಆಡಳಿತ ಕಾರ್ಯಕ್ಷಮತೆಯ ಗಂಭೀರ ಸಮಸ್ಯೆಗಳ ಬಗೆಗೆ ಭಾರತ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಬಗೆಹರಿಸಿಲ್ಲವೆನ್ನುವುದು ನನ್ನ ಯೋಚನೆಯಲ್ಲ. ಯಾಕೆಂದರೆ ತುರ್ತುಪರಿಸ್ಥಿತಿ ನಂತರ ಕಾಂಗ್ರೆಸ್ ಗೆ ಜನಬೆಂಬಲ ಕಡೆಗಣನೆ ಮತ್ತು ೧೯೮೯ರ ಸಂಸದೀಯ ಚುನಾವಣೆಯಲ್ಲಿ ಅದು ಹಠಾತ್ ಇಳಿಮುಖಗೊಂಡ ನಂತರವಂತೂ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ.

ಹಿಂದಿನ ಬಹಿಷ್ಕೃತ ಸ್ತರದಿಂದ ಎಲೀಟುಗಳಾಗಿ ರೂಪುಗೊಳ್ಳುತ್ತಿರುವ ಮಂದಿ ಮತ್ತು ಸ್ಥಾಪಿತ ಎಲೀಟುಗಳನ್ನೊಳಗೊಂಡ ಆಳುವ ವರ್ಗದ ಸಾಮರ್ಥ್ಯದಿಂದ ಈ ಸಮಸ್ಯೆಗಳಿಗೆ ಕಾರಣಗಳನ್ನು ಹುಡುಕಬಹುದು. ಜನಸಮಾನ್ಯರ ಸ್ವಯಂ ಚಾಲನೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಒದಗಿಲ್ಲ, ಬದಲು ರೂಪುಗೊಳ್ಳುತ್ತಿರುವ ಎಲೀಟುಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಿರ್ವಹಣೆಗೆ ಬೇಕಾದ ಕೌಶಲ್ಯಗಳ ಕೊರತೆಯಿರುವುದೇ ಕಾರಣವೆನಿಸಿದೆ. ಪ್ರಜಾಪ್ರಭುತ್ವದ ನಡಾವಳಿಗೆ ಅಲ್ಪಗಮನ ನೀಡುವ ಮೂಲಕ ನಿಯಮ ಉಲ್ಲಂಘನೆಗೆ ಹೆಚ್ಚು ಆದ್ಯತೆ ಅವರು ಶೀಘ್ರಗತಿಯ ಪಲ್ಲಟ ನಡೆಯುತ್ತಿದೆ. ಇದರ ಪರಿಣಾಮಗಳನ್ನು ಮುಂದೆ ಚರ್ಚಿಸೋಣ.

ಭಾರತದ ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗದವರ ರಾಜಕಾರಣ ಮತ್ತದರ ರಾಜಕೀಯ ಜನಪ್ರತಿನಿಧಿಗಳಿಂದಾಗಿ ಈ ಸ್ಥಿತಿ ಉಂಟಾಗಿದೆ. ೧೯೬೦ರಿಂದೀಚೆಗೆ ಆಳುವ ವರ್ಗ ಜನಕೇಂದ್ರಿತ ಒಲವುಗಳ ಬಗೆಗೆ ಬಲವಾದ ದಮನಕಾರಿ ನೀತಿ ಅನುಸರಿಸಿದುದುರಿಂದ ೧೯೭೬ರಲ್ಲಿ ಇದು ಆಂತರಿಕ ಪರಿಸ್ಥಿತಿಯಲ್ಲಿ ಅವಸಾನಗೊಂಡಿರುವುದನ್ನು ಕಾಣಬಹುದು. ಹಾಗಾಗಿ ಅನಕ್ಷರಸ್ಥರು ಅಥವಾ ಬಡವರ ಬದಲು ಪ್ರಜಾಪ್ರತ್ತಾತ್ಮಕ ವ್ಯವಸ್ಥೆಯ ಮೇಲಿನ ಅವರ ಒತ್ತಡಗಳಿಂದಾಗಿ ಭಾರತದಲ್ಲಿ ಪ್ರಜಾಸತ್ತೆ ಮುಂದುವರಿಯುತ್ತದೆಯೆಂದು ಯಾರಾದರೂ ಹೇಳಬಹುದು. ತಪ್ಪಿಸಿಕೊಳ್ಳವಿಕೆ ಮತ್ತು ದಮನಕಾರಿ ಲಕ್ಷಣಗಳನ್ನು ಎಲೀಟು ಮೈಗೂಡಿಸಿಕೊಂಡಿದೆ. ಜನಹಿತ ಆಂದೋಲನ ಮತ್ತು ಚಳವಳಿಗಳ ತೀವ್ರ ಒತ್ತಡದ ಫಲವಾಗಿ ತುಸು ಬಡ್ತಿರೂಪದ ಪರಿಹಾರಗಳು ಜನರಿಗೆ ದೊರಕುತ್ತವೆ. ಈ ಹಂತವನ್ನು ರಕ್ಷಿಸಲು ಮತ್ತು ಎತ್ತಿಹಿಡಿಯಲು ಜನ ಹಾತೊರೆಯುತ್ತಾರೆ.

ರಾಜಕೀಯ ಮತ್ತು ಆರ್ಥಿಕ ಭಿನ್ನತೆ ಮಧ್ಯೆಯೂ ಸಾಮಾನ್ಯವಾಗಿ ತಮ್ಮ ಹಿತಾಸಕ್ತಿಗಳನ್ನು ತಾವೇ ಪ್ರತಿನಿಧಿಸುವ ಮತ್ತು ನಿರ್ದಿಷ್ಟವಾಗಿ ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸುವ ಅಗತ್ಯ ಎಲ್ಲ ದಮನಿತ ವರ್ಗಗಳ ಒಂದು ಸಮಾನ ಆಕಾಂಕ್ಷೆಯೆನ್ನುವುದನ್ನು ಗಮನಿಸಬೇಕು. ದಲಿತರು ಮತ್ತು ಆದಿವಾಸಿಗಳಿಗೆ ಪ್ರಾತಿನಿಧ್ಯ ಸಂಸ್ಥೆಗಳಲ್ಲಿ ಮೀಸಲಾತಿ ಇದ್ದರೂ ಪ್ರಾತಿನಿಧ್ಯವೆಂಬುದು ಇದಕ್ಕಿಂತಲೂ ಹೆಚ್ಚಿನದ್ದಾಗಿದೆ. ತಮ್ಮ ಆಸಕ್ತಿಯ ಬದಲು ಬಹಳ ಮುಖ್ಯವಾಗಿ ವ್ಯಕ್ತಿನಿಷ್ಠತೆಯ ಬಗೆಗೆ ಇತರರು ಮಾತನಾಡುತ್ತಾರೆಂಬ ಬಗ್ಗೆ ದುರ್ಬರು ತೀಕ್ಷಣವಾಗಿ ಅರಿತಿದ್ದಾರೆ. ಬಹಳಷ್ಟು ಸನ್ನಿವೇಶಗಳಲ್ಲಿ ಶೋಷಣೆಗಿಂತಲೂ ನೋವು, ಅವಮಾನ ಮುಂತಾದವು ತೀವ್ರತರದ ಪರಿಣಾಮ ಉಂಟುಮಾಡುತ್ತವೆ. ಇದು ಪ್ರಬಲವಾದ ಅನುಭವ ನೀಡಿದೆ. ಹಾಗೇಯೇ ಸಮಾನ ಒಳಿತನ್ನು ವ್ಯಕ್ತಪಡಿಸಿದರೂ ವ್ಯವಸ್ಥಿತವಾಗಿ ಹೊರಗಿಡುವ ದುಸ್ಥಿತಿ ಉಂಟಾಗುತ್ತಿದೆ. ದುರ್ಬಲರ ಕಾಳಜಿ ಕುರಿತು ವಿವಿಧ ಗುಂಪುಗಳು ಮತ್ತು ರಾಜಕೀಯ ವಿಭಜಕವೆಂಬುದಾಗಿ ಎಲೀಟು ಇವನ್ನು ಕಡೆಗಣಿಸುತ್ತಿವೆ. ಇದರಿಂದಾಗಿ ಸಮಾಜದಲ್ಲಿ ಬಿರುಕು ಉಂಟಾಗಿ ತೀವ್ರತೆ ಹೆಚ್ಚುತ್ತಿದೆ. ಹೀಗಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಉದ್ಘಾಟನೆ ಕಂಡ ಆ ಕರಾರಿನ ಗುರುತು ಕಾಣದಂತಾಗಿದೆ.

ದುಸ್ಥಿತಿಗೊಳಗಾದವರಲ್ಲಿ ಸ್ವಪ್ರಾತಿನಿಧ್ಯದ ಹೆಚ್ಚಳಕ್ಕೆ ಪ್ರಯತ್ನಗಳು ನಡೆದುದರಿಂದ ಕೆಲವು ದಮನಿತ ಗುಂಪುಗಳ ಪ್ರಾತಿನಿಧ್ಯದಲ್ಲಿ ಹೆಚ್ಚಳವಾಗಿದೆ. ಒಬಿಸಿ ರೈತ ವಿಭಾಗದಲ್ಲಿ ಇದನ್ನು ಗಮನಿಸಬಹುದು. ಇದಕ್ಕೆ ವಿರುದ್ಧವೆಂಬಂತೆ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ಕಡಿಮೆಗೊಳ್ಳುತ್ತಿದೆ ಮತ್ತು ಬಿಜೆಪಿ ಹೆಚ್ಚು ಬೆಂಬಲ ಪಡೆಯುತ್ತಿದೆ. ಇದಕ್ಕೆ ಆಯಾ ಸಮುದಾಯಗಳ ಬೆಂಬಲ ಇಲ್ಲವೇ ವಿರೋಧ ಕಾರಣವಾಗಿದೆ. ಒಟ್ಟಾರೆಯಾಗಿ ದಮನಿತರನ್ನು ಒಂದಾಗಿ ಪರಿಗಣಿಸಿದಲ್ಲಿ ಅವರ ಪ್ರಾತಿನಿಧ್ಯ ಗಣನೀಯವಾಗಿದೆ. ಆದರೆ ಅಂಕಿ ಅಂಶಗಳ ಹೆಚ್ಚಳ ಮಾತ್ರ ಇಲ್ಲಿ ಪ್ರಾಮುಖ್ಯವಲ್ಲ. ಒಬಿಸಿಗಳ ಪ್ರಾತಿನಿಧ್ಯ ಹೆಚ್ಚಾಗಿರುವುದರ ಜೊತೆಗೆ ಪ್ರಾತಿನಿಧ್ಯ ಮತ್ತು ಆಡಳಿತದ ಮಧ್ಯೆ ತಾಳೆ ಇಲ್ಲದಂತಾಗಿದೆ. ಉತ್ತಮ ಆಡಳಿತದ ಅವಶ್ಯಕತೆ ಆನುಷಂಗಿಕವೆಂಬಂತಾಗಿದೆ. ಒಬಿಸಿ ಉನ್ನತ ಸ್ತರದಿಂದ ರೂಪುಗೊಳ್ಳುತ್ತಿರುವ ಹೊಸ ಮಧ್ಯಮವರ್ಗವು ಸಂಸದೀಯ ಆಡಳಿತ ನಡಾವಳಿಯನ್ನು ಪಾಲಿಸುವ ಅಗತ್ಯಕ್ಕೆ ತಕ್ಕುದಾಗಿ ಸನ್ನದ್ಧಗೊಂಡಿಲ್ಲ ಅಥವಾ ತನ್ನ ಸ್ವಹಿತಾಸಕ್ತಿಯಿಂದಾಗಿ ಅದು ಹಾಗಾಗುವಂತೆ ಆಗಿದೆ. ಹಾಗಾಗಿ ಸಂಸದೀಯ ಮತ್ತು ಸರಕಾರದ ಕಾರ‍್ಯಕ್ಷೇತ್ರಗಳ ನಡಾವಳಿ ಮತ್ತಿತರ ನಿಯಮಗಳಿಗೆ ಲಕ್ಷ್ಯವಿಲ್ಲದಂತಾಗಿದೆ. ರಾಜಕಾರಣಿಗಳು ಕೂಡ ಸಾರ್ವಜನಿಕ ಸಂಗತಿಗಳ ಬಗೆಗೆ ಗಮನಹರಿಸುವಲ್ಲಿ ಎಡವುತ್ತಿದ್ದಾರೆ.

ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಾರ್ಯಕ್ಷಮತೆಯ ಮಾದರಿಗಳ ರೂಪದಲ್ಲೂ ಮತ್ತು ಸಾರ್ವಜನಿಕ ಚರ್ಚೆಯ ವೇದಿಕೆಯಲ್ಲೂ ಗಣನೀಯವಾದ ಇಳಿಮುಖವನ್ನು ನಾವು ಕಾಣಬಹುದಾಗಿದೆ.

ಪ್ರಜಾಪ್ರಭುತ್ವದ ಕೆಲವು ಸಾಂಸ್ಥಿಕ ಅಂಶಗಳ ಜನರ ಒಲವು ಮತ್ತು ಅನಿಸಿಕೆಗಳು ಬೇರೆಯೇ ಚಿತ್ರಣವನ್ನು ಹೊರಗೆಡುಹುತ್ತವೆ. ಬಹಳಷ್ಟು ಮಂದಿ ಎಲೀಟುಗಳು ಪ್ರಜಾಪ್ರಭುತ್ವ ಬಗೆಗೆ ಅನುಮಾನದಿಂದಿದ್ದರೆ, ಇನ್ನೊಂದೆಡೆ ಜನಸಾಮಾನ್ಯರಲ್ಲಿ ವ್ಯಾಪಕವಾದ ಸ್ವೀಕಾರ ಮನೋಭಾವವಿದೆ. ರಾಜಕೀಯ ಎಲೀಟುಗಳಿಂದ ಈ ಸಂಸ್ಥೆಗಳು ಯಾವ ರೀತಿ ಕಾರ‍್ಯಾಚರಿಸಿದರೂ ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಪ್ರಕ್ರಿಯೆಗಳ ಬಗೆಗೆ ದಮನಿತರ ನಾಯಕತ್ವದಲ್ಲಿನ ಒಳಜಗಳ ಏನೇ ಇರಲಿ ರೂಪುಗೊಳ್ಳುತ್ತಿರುವ ಇಂಥ ಒಂದು ಒಳ ಒಪ್ಪಂದವನ್ನು ಗಮನಿಸಬೇಕಾದುದು ಅತ್ಯಂತ ಅವಶ್ಯಕವಾಗಿದೆ. ಈ ಒಪ್ಪಂದ ತೆಳುವಾದ ನಾಜೂಕಿನ ಹಾಗೂ ಪಲ್ಲಟ ರೂಪದಂತಾದರೂ ಇದೊಂದು ಬಲಯುತಗೊಳ್ಳುವುದರ ಸಂಕೇತವಾಗಿದೆ. ಆಳುವ ವರ್ಗದ ದಬ್ಬಾಳಿಕೆಯನ್ನು ಪ್ರತಿರೋಧಿಸಲು ಸಾಧ್ಯವಾದದಂಥ ಜನಸಾಮಾನ್ಯರ ಈ ದೌರ್ಬಲ್ಯದಿಂದ ಇದು ಹೆಚ್ಚಾಗಿ ನಾಜೂಕಿನದ್ದಾಗಿದೆ. ಉದಾಹರಣೆಗೆ ಜಾಗತೀಕರಣದ ಸನ್ನಿವೇಶದಲ್ಲಿ ದಮನಿತರು ಬಲಿಪಶುಗಳಾದಾಗ ಅವುಗಳ ಪರಿಣಾಮಗಳನ್ನು ಸಹಿಸಬಲ್ಲರು. ಆದರೆ ಆ ಪರಿಣಾಮಗಳ ಮುಂದಾಲೋಚನೆ ಕುರಿತು ಜಾಗರೂಕತೆ ವಹಿಸುವಷ್ಟು ಸಮರ್ಥರಲ್ಲ. ಆದರೆ ಆಳುವ ವರ್ಗಕ್ಕೆ ಅಧಿಕಾರ ಬಲದಿಂದ ಜಾಗತೀಕರಣವನ್ನು ಗಟ್ಟಿಗೊಳಿಸುವ ದಾರಿಯಿದೆ. ಇತರ ಯಾವುದೇ ಸಮಾಜದ ವರ್ಗಗಳಿಗೆ ಹೋಲಿಸಿದಲ್ಲಿ ಜನಸಾಮಾನ್ಯರು ಮತ್ತು ಸಂಕಷ್ಟದಲ್ಲಿರುವವರು ಪ್ರಜಾಸತ್ತೆಯ ಸಾಂಸ್ಥಿಕತೆ ಮತ್ತು ಅದು ಒದಗಿಸುವ ಸನ್ನಿವೇಶದಿಂದ ಬಲವಾದ ನಂಬಿಕೆಯನ್ನಿಟ್ಟಿರುತ್ತಾರೆ.

ಪ್ರಜಾಪ್ರಭುತ್ವ ಆಯಾಮಗಳಿಗೆ ಸಂಬಂಧಿಸಿ ಈವರೆಗೆ ಪರೀಕ್ಷಿಸಿದ ಮೂರು ದಮನಿತ ಸಮುದಾಯಗಳತ್ತ ನೋಟ ಬೀರೋಣ.

ಗೊಂದಲ ನಿವಾರಣೆಗಾಗಿ ಎರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ ಆಯ್ಕೆ ಮಾಡಿದ ಎಲ್ಲ ಚಲಕಗಳನ್ನು ಹೋಲಿಸಿದಾಗ ಮೇಲ್ಜಾತಿ ಮತ್ತು ಮೇಲ್ವರ್ಗಗಳು ದಮನಿತರಿಗಿಂತ ಮುಂದಿದ್ದಾರೆ. ಆದರೆ (೧೯೭೧ ಮತ್ತು ೧೯೯೬ರ ಅವಧಿ ಮಧ್ಯೆ) ಇವರೆಡರೊಳಗಿನ ಭಿನ್ನತೆಯ ಅಂತರ ಗಣನೀಯವಾಗಿ ಕಡಿಮೆಯಾಗಿದ್ದು ಪ್ರಜಾಸತ್ತೆಯ ವಿವಿಧ ಆಯಾಮಗಳತ್ತ ಸಕಾರಾತ್ಮಕ ಒಲವನ್ನು ತೋರಿಸುತ್ತದೆ. ಇದು ಮಹತ್ವದ್ದೆನಿಸಿದೆ. ಎರಡನೆಯದಾಗಿ ಪ್ರಜಾಪ್ರಭುತ್ವದ ತಿಳುವಳಿಕೆ ಮತ್ತದರೆಡೆಗಿನ ಒಲವು ಜನರಲ್ಲಿ ಹೇಗೆ ರೂಪುಗೊಳ್ಳುತ್ತಿದೆ ಎಂಬುದನ್ನು ಪರಿಗಣಿಸಬೇಕಿದೆ. ಎಲೀಟುಗಳಿಗೆ ಹೋಲಿಸಿದಲ್ಲಿ ಶೋಷಿತರು ಮತ್ತು ದಮನಿತರಲ್ಲಿ ಪ್ರಜಾಸತ್ತೆಯ ಅರಿವು ರೂಪುಗೊಳ್ಳುವುದರ ವಿಧಾನ ಕುರಿತಂತೆ ಬಹಳಷ್ಟು ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ‍್ಯನಿರ್ವಹಿಸುವಿಕೆ ಅಥವಾ ಅದರ ಉಪಯೋಗದಿಂದಾಗಿ ಜನರು ಪ್ರಜಾಪ್ರಭುತ್ವದ ಬಗೆಗೆ ತಿಳಿಸಿಕೊಳ್ಳುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಈ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಅವರು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವಷ್ಟು ಶಕ್ತರಾಗಿಲ್ಲ. ಇವುಗಳ ಫಲಶ್ರುತಿಯ ವಿಧಾನಗಳು ಅವರಿಗೆ ಅಷ್ಟಾಗಿ ತಿಳಿದಿಲ್ಲ. ಅವರ ಮಾತಿನ ಕೌಶಲ್ಯತೆ ಸಂಸದೀಯ ಕ್ರೀಡಾ ನಿಯಮಗಳಿಗೆ ಸಾಕುಗುವುದಿಲ್ಲ. ಹಾಗಾಗಿ ಕಲಿಕೆ ಎಲ್ಲಿ ಶುರುವಾಗುತ್ತದೆ ಎನ್ನುವ ಉದ್ಭವಿಸುತ್ತದೆ.

ಹಿಂದಿನ ಅಧ್ಯಾಯದ ಕೊನೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆ ವಿಸ್ತೃತವಾದ ತಿಳುವಳಿಕೆಯಂತೆ ಸ್ವಾಯತ್ತಗೊಂಡಿದೆ ಎಂಬುದನ್ನು ತಿಳಿದುಕೊಂಡೆವು. ಈ ತರದ ಪ್ರಕ್ರಿಯೆಯಲ್ಲಿ ಪ್ರಬಲವರ್ಗ ಮತ್ತು ಸ್ತರಗಳಿಗೆ ನೇರ ನಿಯಂತ್ರಣವಿದಲ್ಲದಂತಹ ಹಲವಾರು ಕಾರ್ತಕ್ರಮಗಳ ಒಂದು ಕಾರ್ಯಕ್ಷೇತ್ರ ರೂಪಗೊಂಡಿದೆ. ಈ ಒಂದು ಕಾರ‍್ಯಕ್ಷೇತ್ರದಲ್ಲಿ ವಿಷಯಗಳ ಕುರಿತು ಅವಿರತವಾದ ಚರ್ಚೆಗಳು ನಡೆಯುವುವು, ಮತ್ತು ಇವುಗಳ ಫಲಿತಗಳು ಕೊನೆಯತನಕ ನಿರ್ಧಾರಕವಲ್ಲ. ಇಂಥ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಹೋರಾಟಗಳ ಮೂಲಕ ಅದನ್ನು ರೂಪಿಸುವ ಜನರು ಆಡಳಿತ ವರ್ಗವನ್ನು ರಿಯಾಯತಿಗಳಿಗಾಗಿ ಒತ್ತಾಯಿಸುತ್ತಾರೆ. ತಾವು ಸಂಘಟಿತರಾಗಲು ಒಂದು ಸ್ಥಳವಕಾಶವನ್ನು ಸೃಷ್ಟಿಸಿ ಒತ್ತಡದ ರೀತಿಯಲ್ಲಿ ಕಾರ‍್ಯಾಚರಿಸುತ್ತಾರೆ. ಈ ಹಂತದಲ್ಲಿ ಪ್ರಜಾಸತ್ತಾತ್ಮಕ ರಾಜಕಾರಣದ ಆಟಗಳು ನಡೆಯುವುದು; ಸಾಮಾಜಿಕ ಅಸಮಾನತೆಗಳು ಹೆಚ್ಚಿದಂತೆ ಇವು ಮಹತ್ವ ಪಡೆಯುವುದು. ನಿಯಮ ಮತ್ತು ನಡಾವಳಿಕೆ ಅಸಹಕಾರ ಅಥವಾ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಭಂಗ ತರುವಂತ ಅಂಶಗಳು ಇಲ್ಲಿ ನಡೆಯಲೇಬೇಕು. ಇಲದಿದ್ದರೆ ಎಲೀಟು ಆಶಿಸಿದಂತೆ ಪ್ರಜಾಸತ್ತೆ ವ್ಯವಸ್ಥೆ ಮುಂದುವರಿದರೆ ಅದು ಜನರ ವಿರುದ್ಧ ತಿರುಗಿಬೀಳುವುದು. ಈ ರೀತಿಯ ಒಳಗೊಳ್ಳುವಿಕೆಯ ಘಟ್ಟದಲ್ಲಿ ಪ್ರಜಾಪ್ರಭುತ್ವವು ದಮನಿತರ ಮತ್ತು ಶೋಷಿತರ ರಾಜಕಾರಣವಾಗುವುದು.

೧೯೭೧ರ ಶೇಕಡಾ ೪೯ಕ್ಕೆ ಎದುರಾಗಿ ೧೯೯೬ರಲ್ಲಿ ಶೇಕಡಾ ೫೯ರಷ್ಟು ಜನರು ಮತನೀಡಿ ದೇಶದ ಸುಗಮ ಆಳ್ವಿಕೆಗೆ ನೆರವಾದುದನ್ನು ಹಿಂದೆ ನಾವು ಗಮನಿಸಿದ್ದೆವು. ವಿಭಿನ್ನ ಸಮುದಾಯಗಳು ಮತ್ತು ಸ್ತರಗಳು ಈ ಸರಾಸರಿಗೆ ಹೇಗೆ ಮತದಾನ ಮಾಡಿವೆ ಎಂದು ಹೋಲಿಸಿದಾಗ ನಮಗೆ ಒಟ್ಟು ಮತದಾರರಲ್ಲಿ ಮತ ಹಾಕಿದವರ ಕುರಿತ ಉತ್ತಮ ಚಿತ್ರಣ ದೊರೆಯದು. ಮತದಾನದ ಪ್ರಖರತೆ ಸಮುದಾಯ ಮತ್ತು ಸ್ತರಗಳಿಗೆ ಸಂಬಂಧಿಸಿ ವಿಭಿನ್ನವಾದರೂ ಸಂಕಷ್ಟಕ್ಕೊಳಗಾದ ಜನಗಳು ಮತ್ತು ಸಾಪೇಕ್ಷವಾಗಿ ಉತ್ತಮ ಸ್ಥಿತಿವಂತರಾಗಿರುವ ಜನಗಳ ಮಧ್ಯದ ಮತದಾನ ವಿಧಾನದ ಕುರಿತ ಸ್ಪಷ್ಟತೆ ದೊರೆಯದು. ದಮನಕ್ಕೊಳಗಾದ ಮುಸ್ಲಿಮರು (ಶೇಕಡಾ ೬೦ಕ್ಕಿಂತ ತುಸು ಹೆಚ್ಚು) ಮತ್ತು ಶೇಕಡಾ ೬೦ರಷ್ಟು ಮತದಾನದ ದಲಿತರನ್ನು ಪರಿಗಣಿಸಿದರೆ ಇವರ ಮತದಾನ ಪ್ರಭಾವ ಅಖಿಲ ಭಾರತ ಸರಾಸರಿಯ ಶೇಕಡಾ ೫೯ಕ್ಕೆ ಹೆಚ್ಚಿರುವುದನ್ನು ಕಾಣಬಹುದು. ಇನ್ನಿತರ ದಮನಿತ ಸಮುದಾಯಗಳಲ್ಲಿ ಈ ಮಾದರಿಯನ್ನು ಕಾಣಲಾಗುವುದು. ಉದಾಹರಣೆಗೆ ಒಬಿಸಿ ಸರಾಸರಿಗಿಂತ ಒಂದು ಪ್ರತಿಶಯ ಕಡಿಮೆ (ಶೇಕಡಾ ೫೮) ಆದರೆ ಆದಿವಾಸಿಗಳು (ಶೇಕಡಾ ೪೮) ಸರಾಸರಿಗಿಂತ ಶೇಕಡಾ ೧೦ರಷ್ಟು ಕಡಿಮೆ ಇದ್ದುದನ್ನು ಕಾಣಬಹುದು. ಅನಕ್ಷರಸ್ಥರು (ಶೇಕಡಾ ೪೭) ಇನ್ನೂ ಕೆಳಗಿನ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದನ್ನು ಕಾಣಬಹುದು. ಹೆಚ್ಚಿನ ಸೌಲಭ್ಯವಂತರಲ್ಲಿ ಮತದಾನ ಕಡಿಮೆಯಾಗುತ್ತಿತ್ತು ಆದರೂ ಅವರಲ್ಲಿ ಮತ ಹಾಕಿದವರಲ್ಲಿ ತಮ್ಮ ಮತ ಒಂದು ಭಿನ್ನತೆಯನ್ನು ರೂಪಿಸುವುದೆಂಬ ಹೆಚ್ಚಿನ ಆತ್ಮವಿಶ್ವಾಸವಿರಿಸಿರುವುದನ್ನು ಕಾಣಬಹುದು. ಶಿಕ್ಷಿತರಲ್ಲಿ ಶೇಕಡಾ ೬೦ರಷ್ಟು ನಿಖರವಾಗಿ ಹೇಳುವುದಾದರೆ ಹೇಳುವುದಾದರೆ ಮೇಲ್ಜಾತಿಗಳ ಶೇಕಡಾ ೬೨ ಮತ್ತು ಸುಮಾರು ಶೇಕಡಾ ೬೨ರಷ್ಟು ಮೇಲ್ವರ್ಗ ಹಾಗೇ ಭಾವಿಸುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದ ಇವರು ರಾಜಕಾರಣದಲ್ಲಿ ಸಕ್ರಿಯವಾಗಿರಲಿ ಇಲ್ಲದಿರಲಿ ಸಾಕಷ್ಟು ಪ್ರಮಾಣದ ಅಧಿಕಾರವನ್ನು ಈಗಲೂ ಹೊಂದಿರುತ್ತಾರೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ.

೧೯೯೬ರ ಮಾಹಿತಿಯನ್ನು ೧೯೭೧ರ ಜೊತೆ ಹೋಲಿಸಿದಾಗ ಇಂಥ ಅವರ ಧೋರಣೆ ಕುರಿತ ಕೆಲ ಅಂಶಗಳು ಸೂಚನೆ ಒದಗಿಸುತ್ತವೆ. ಉದಾಹರಣೆಗೆ ವಿದ್ಯಾವಂತರಲ್ಲಿ ೧೯೭೧ರಲ್ಲಿ ಮತದಾನದ ವ್ಯಾಪಕತೆ ಕುರಿತ ಒಲವು ಸರಾಸರಿಗಿಂತಲೂ ಶೇಕಡಾ ೩೧ರಷ್ಟು ಇದ್ದರೆ ೧೯೯೬ರಲ್ಲಿ ಅದು ಶೇಕಡಾ ೧೯ಕ್ಕೆ ಗಣನೀಯವಾಗಿ ಇಳಿಯಿತು. ಹಾಗೇಯೇ ಮೇಲ್ಜಾತಿಗಳಲ್ಲಿ ೧೯೭೧ರಲ್ಲಿ ಸರಾಸರಿಗಿಂತ ಸರಿಯಾಗಿ ಶೇಕಡಾ ೯ರಷ್ಟು ಹೆಚ್ಚಿದ್ದರೆ, ೧೯೯೬ರಕ್ಕೆ ಅದು ಸರಾಸರಿಗಿಂತಲೂ ಶೇಕಡಾ ೩ಕ್ಕೆ ಇಳಿಯಿತು. ೧೯೭೧ರಲ್ಲಿ ನಗರವಾಸಿಗಳಲ್ಲೂ ಶೇಕಡಾ ೧೫ರಷ್ಟು ಸರಾಸರಿಗಿಂತ ಹೆಚ್ಚಿನ ಮತದಾನವಾದರೆ, ೧೯೯೬ರಲ್ಲಿ ಅವರ ಇಳಿಮುಖ ಶೇಕಡಾ ೫ರಷ್ಟಾಯಿತು. ದಮನಿತರಲ್ಲೂ ತಮ್ಮ ಮತದಾನ ಸಣ್ಣ ಪ್ರಮಾಣದಲ್ಲಿ ಏರಿದ್ದರಿಂದ ಇದು ರಾಜಕೀಯದಲ್ಲಿ ತುಸು ನಿರ್ಣಾಯಕವೆಂದಾಗಿ ಅವರು ಗ್ರಹಿಸಿರುವುದನ್ನು ಗಮನಿಸಬೇಕಿದೆ. ೧೯೭೧ರಲ್ಲಿ ಅನಕ್ಷರಸ್ಥರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಶೇಕಡಾ ೧೩ರಷ್ಟು ಕಡಿಮೆಯಿದ್ದರೆ, ೧೯೯೬ರಲ್ಲಿ ಅವರ ಸಂಖ್ಯೆ ಸರಾಸರಿಗಿಂತ ಶೇಕಡಾ ೧೧.೫ರಷ್ಟು ಕಡಿಮೆಗಿಳಿಯಿತು. ಪರಿಶಿಷ್ಟರಲ್ಲಿ ೧೯೭೧ರಲ್ಲಿ ಶೇಕಡಾ ೬.೫ರಷ್ಟು ಕಡಿಮೆಯಿದ್ದರೆ, ೧೯೯೬ರಲ್ಲಿ ಶೇಕಡಾ ೧.೫ಕ್ಕೆ ಇಳಿಯಿತು. ಹಾಗೆಯೇ ಗ್ರಾಮೀಣ ಜನಸಂಖ್ಯೆ ೧೯೭೧ರಲ್ಲಿ ಶೇಕಡಾ ೪.೫ರಷ್ಟಿದ್ದದ್ದು ೧೯೯೬ರಲ್ಲಿ ಶೇಕಡಾ ೨ಕ್ಕೆ ಇಳಿಯಿತು.

ಎಲ್ಲ ವರ್ಗ ಮತ್ತು ಸಮುದಾಯಗಳತ್ತ ಕಣ್ಣು ಹಾಯಿಸಿದಾಗ ಸೌಲಭ್ಯವಂತರಲ್ಲಿ ಹೆಚ್ಚಿನವರು ತಮ್ಮ ವರ್ಗ ಮತ್ತು ಮತಾಧಿಕಾರದಲ್ಲಿ ಕಳೆದುಕೊಳ್ಳುವಿಕೆಯ ಭಾವನೆಯನ್ನು ಅನುಭವಿಸುತ್ತಿದ್ದಾರೆ. ಮತದಾರ ವರ್ಗದ ಸಂರಚನೆಗೆ ಸಂಬಂಧಿಸಿದಾಗ ಇವರ ಸಂಖ್ಯೆ ಯಾಕೆ ಇಳಿಮುಖವಾಗುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ಮತ ಹಾಕದಿರಲು ಕಾರಣವೇನೆಂಬುದು ಸ್ಪಷ್ಟವಾಗುತ್ತದೆ. ಆದರೆ ಅವರ ಮತದ ಅಧಿಕಾರದ ಕುಂಠಿತವಾಗಿದೆಯೆಂಬ ಭಾವನೆಯಿಂದ ಒಟ್ಟಾರೆಯಾಗಿ ಅವರ ರಾಜಕೀಯ ಅಧಿಕಾರ ಇಳಿಕೆಯಾಗಿದೆಯೆಂದು ಅಗತ್ಯವಾಗಿ ಭಾವಿಸುವಂತಿಲ್ಲ. ಇವು ಸಾಧ್ಯವೇ ಇಲ್ಲ. ಮತದಾನೇತರ ಸಂಸ್ಥೆಗಳು ಹಾಗೂ ಆಡಳಿತಾಂಗದಲ್ಲಿ ಅವರಿಗೆ ಅಧಿಕಾರ ಮತ್ತು ನಿಯಂತ್ರಣವಿರುವುದರಿಂದ ಜನಪರ ನಿರ್ಧಾರಗಳನ್ನು ಅವರು ತಡೆ ಹಿಡಿಯಬಲ್ಲರು ಸಂಕಷ್ಟದ ಜನ ಸಂಖ್ಯಾತ್ಮಕವಾಗಿ ಮತ್ತು ಮತದಾರರಾಗಿ ಹೆಚ್ಚಿದ್ದರೂ, ತಮ್ಮ ಮತದಾನದ ಪ್ರಭಾವ ಹೆಚ್ಚಿದ್ದರೂ ಆ ರೀತಿ ಎಂದೂ ಭಾವಿಸದಿರುವ ಟ್ರೆಂಡ್ ಕೂಡ ಅದೇ ರೀತಿಯಲ್ಲಿದೆ. ಅಂದರೆ ಹೆಚ್ಚಿನ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಮತದಾನದ ಜ್ಞಾನ ಕೂಡ ಹೆಚ್ಚುವುದು. ಆಯ್ಕೆಯಾದ ಪ್ರತಿನಿಧಿಗಳಿಗೆ ಮತದಾರರ ಬಗೆಗಿರುವ ಕಾಳಜಿ ಅಥವಾ ಅವರ ಸಾಮರ್ಥ್ಯದಲ್ಲಿನ ಆತ್ಮವಿಶ್ವಾಸಕ್ಕಿಂತಲೂ ಬಹುಶಃ ಇದು ಹೆಚ್ಚಿನ ನಿರೀಕ್ಷೆಯನ್ನು, ಭರವಸೆಯನ್ನು ಸೂಚಿಸುತ್ತದೆ. ಜನರು ಪ್ರತಿನಿಧಿ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು ಆದರೆ ಪ್ರತಿನಿಧೀಕರಿಸುವವರ ಆಸಕ್ತಿ ಬಗೆಗೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದನ್ನು ಹೀಗಾಗಲೇ ಹಿಂದಿನ ಅಧ್ಯಾಯ ಶೃತಪಡಿಸಿದೆ.

ಪ್ರಜಾಪ್ರಭುತ್ವವು ಆಯ್ದ ಮಾದರಿಯ ಆಡಳಿತವೆಂಬುದರ ಸ್ವೀಕಾರಾರ್ಹದ ಬಗೆಗೆ (ವಿವಿಧ ಸಮುದಾಯ ಮತ್ತು ವರ್ಗಗಳ ಮಧ್ಯೆ ಪ್ರಶ್ನೆ) ಕೇಳಿದಾಗ ಅಷ್ಟೇ ಸಮಾನ ಹಿತಾಸಕ್ತಿಯ ಮಾದರಿ ಕಂಡುಬರುವುದು. ೧೯೯೬ರ ಸಮೀಕ್ಷೆಯಂತೆ ಶೇಕಡಾ ೬೯ರಷ್ಟು ಭಾರತೀಯರು ಪ್ರಜಾಪ್ರಭುತ್ವದ ಬಗೆಗೆ ಒಲವು ತೋರಿರುವುದನ್ನು ಅಧ್ಯಾಯ ಒಂದರಲ್ಲಿ ನೋಡಿದ್ದೆವು. ಇದೇ ಪ್ರಶ್ನೆಯನ್ನು ನಕಾರಾತ್ಮಕವಾಗಿ ಮುಂದಿಟ್ಟಾಗ ಬಹಳ ಮಂದಿ ಪಕ್ಷಗಳು, ಶಾಸಕಾಂಗ ಮತ್ತು ಚುನಾವಣೆಗಳಿಲ್ಲದ ಬೇರೆ ಸರಕಾರ ವ್ಯವಸ್ಥೆಯ ಬಗೆಗೆ ಚಿಂತಿಸಲು ವಿರೋಧ ವ್ಯಕ್ತಪಡಿಸಿರುವರು. ಇವರಲ್ಲಿ ನಗರವಾಸಿ(ಶೇಕಡಾ ೬೮)ಗಳಿಗಿಂತ ಗ್ರಾಮೀಣ ಜನರೇ (ಶೇಕಡಾ ೬೯) ಹೆಚ್ಚು ಮುಂದಿದ್ದರು. ಮುಸ್ಲಿಮರು ಸರಾಸರಿಗಿಂತ ಶೇಕಡಾ ೩ರಷ್ಟು ಹೆಚ್ಚಿಗೆ (ಶೇಕಡಾ ೭೨) ಪ್ರಜಾಪ್ರಭುತ್ವದ ಬಗೆಗೆ ಒಲವು ತೋರಿಸಿದ್ದಾರೆ. ಆದರೆ ಒಬಿಸಿಗಳು ಶೇಕಡಾ ೬೪ರಷ್ಟು, ಪರಿಶಿಷ್ಟ ಪಂಗಡಗಳು ಶೇಕಡಾ ೬೩ರಷ್ಟು ಮತ್ತು ಪರಿಶಿಷ್ಟ ಜಾತಿಗಳು ಶೇಕಡಾ ೬೭ರಷ್ಟು, ಹೀಗೆ ಸರಾಸರಿಗಿಂತ ಕಡಿಮೆ ಹಂತದಲ್ಲಿ ಪ್ರತಿಕ್ರಿಯಿಸಿರುತ್ತಾರೆ. ಮೇಲ್ವರ್ಗದವರು ಶೇಕಡಾ, ೭೨, ಮೇಲ್ಜಾತಿಗಳು ಶೇಕಡಾ ೭೪ ಮತ್ತು ವಿದ್ಯಾವಂತರು ಶೇಕಡಾ ೭೪ರಷ್ಟು ಸರಾಸರಿಗಿಂತ ಮುಂದಿದ್ದಾರೆ. ಒಟ್ಟಾರೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವೀಕಾರಕ್ಕೆ ಸಂಬಂಧಿಸಿ ದಮನಿತರು ಮತ್ತು ಸೌಲಭ್ಯವಂತರಲ್ಲಿನ ಪಲ್ಲಟವು ಮತದಾನದ ಉಪಯುಕ್ತತೆಗೆ ಸಂಬಂಧಿಸಿ ಸಮಾನವಲ್ಲವೆಂಬುದನ್ನು ಮನಗಾಣಬಹುದು.

ಪ್ರಜಾಪ್ರಭುತ್ವದ ಒಲವು ಮತ್ತು ಮತದಾನದ ಪ್ರಖರತೆಯ ಮಾಹಿತಿಯನ್ನು ಹೋಲಿಸಿದಾಗ ಕೆಲವು ಭಿನ್ನತೆಗಳ ಜೊತೆಗೆ ನಿರ್ದಿಷ್ಟ ಅಂಶಗಳತ್ತ ನೋಡಬಹುದು. ಪರಿಣಾಮಕಾರಿ ಮತದಾನದ ಬಗೆಗೆ ಯಾರೆಲ್ಲ ಹೆಚ್ಚು ಅಂಕ ಪಡೆದಿರುವರೋ ದಲಿತರನ್ನು ಹೊರತುಪಡಿಸಿ ಅವರೆಲ್ಲಾ ಪ್ರಜಾಪ್ರಭುತ್ವದ ಒಲವಿನ ಬಗೆಗೂ ಉತ್ತಮ ಅಂಕ ಗಳಿಸಿರುತ್ತಾರೆ. ಆದರೆ ಸಮುದಾಯ ಮತ್ತು ಸ್ವರಗಳ ಮಧ್ಯೆ ಭಿನ್ನತೆಯಿರುವುದು. ಉದಾಹರಣೆಗೆ ಆದಿವಾಸಿಗಳು ಪ್ರಜಾಪ್ರಭುತ್ವದ ಕುರಿತಂತೆ ರಾಷ್ಟ್ರೀಯ ಸರಾಸರಿಗೆ ಹೋಲಿಸಿದಾಗ ನೀರಸವಾದ ಅಭಿಪ್ರಾಯ ವ್ಯಕ್ತಪಡಿಸಿದರೂ ಮತದಾನ ಪ್ರಖರತೆ ಬಗೆಗಲ್ಲ. ವಿದ್ಯಾವಂತರು ಪ್ರಜಾಪ್ರಭುತ್ವ ಬಗೆಗೆ ಸರಾಸರಿಗಿಂತ ಶೇಕಡಾ ೧೧ರಷ್ಟು ಹೆಚ್ಚು ವ್ಯಕ್ತಪಡಿಸಿದರೆ, ಮತದಾನಕ್ಕೆ ಸಂಬಂಧಿಸಿದ ಸರಾಸರಿ ಹೆಚ್ಚಳ ಕೇವಲ ಶೇಕಡಾ ೫. ಈ ತರದ ಹೋಲಿಕೆಯನ್ನು ಇತರ ಗುಂಪುಗಳಲ್ಲೂ ಕಾಣಬಹುದು. ಈ ಭಿನ್ನತೆ ಹೆಚ್ಚಾಗಿ ನಿರ್ದಿಷ್ಟವೆನ್ನುವುದಕ್ಕಿಂತಲೂ ತಾತ್ಕಾಲಿಕವಾದುದು. ಇಂಥ ಮಾದರಿ ಭಿನ್ನತೆಯನ್ನು ಇನ್ನಷ್ಟು ನೋಡಬಹುದು.

ವಿಶೇಷವಾಗಿ ಮುಸ್ಲಿಮರ ಪ್ರಕ್ರಿಯೆಯನ್ನು ಗಮನಿಸಬೇಕಿದೆ. ದಮನಿತರಲ್ಲಿ ಮುಸ್ಲಿಮರು ಎಲ್ಲ ಚಲಕಗಳಲ್ಲೂ ರಾಷ್ಟ್ರೀಯ ಸರಾಸರಿಗಿಂತ ನಿರ್ದಿಷ್ಟವಾಗಿ ಮುಂದಿದ್ದು ದಮನಿತರಲ್ಲಿ ಇವರು ಪ್ಯಾಕ್ ನಲ್ಲಿನ ಜೋಕರ್ ತರ ಸರಾಸರಿಯನ್ನು ಇನ್ನಷ್ಟು ಮೇಲಕ್ಕೇರಿಸುತ್ತಾರೆ. ಇನ್ನೊಂದೆಡೆ ಆದಿವಾಸಿಗಳು ಸಾಕಷ್ಟು ಸಲ ಮೇಲೆ ಕೆಳಗೆ ಚಲಿಸಲ್ಪಟ್ಟು ದುರ್ಬಲರಲ್ಲಿ ಅವರ ಪ್ರಕ್ರಿಯೆ ಪರಿಣಾಮಕಾರಿ. ಮತದ ಪ್ರಶ್ನೆ ಬಂದಾಗ ೧೯೭೧ ಮತ್ತು ೧೯೯೬ರಲ್ಲಿ ಮುಸ್ಲಿಮರು ಸರಾಸರಿಗಿಂತ ಶೇಕಡಾ ೧ ಮತ್ತು ೧/೨ರಷ್ಟು ಮುಂದಿದ್ದರೆ, ಆದಿವಾಸಿಗಳ ಪ್ರಖರತೆ ತೀರಾ ಕಡಿಮೆ (೧೯೭೧ರಲ್ಲಿ ಸರಾಸರಿಗಿಂತ ಶೇಕಡಾ ೧೮ ಇಳಿಮುಖವಿತ್ತು. ಆದರೆ ೧೯೯೬ರಲ್ಲಿ ಸರಾಸರಿಗಿಂತ ಕಡಿಮೆ ಮಟ್ಟ. ಶೇಕಡಾ ೧೧ಕ್ಕೆ ಇಳಿಯಿತು). ಪ್ರಜಾಪ್ರಭುತ್ವದ ಸ್ವೀಕಾರಾರ್ಹತೆ ಕುರಿತಂತೆ ಮುಸ್ಲಿಮರು ೧೯೭೧ರಲ್ಲಿ ಸರಾಸರಿಗಿಂತ ಶೇಕಡಾ ೪ರಷ್ಟು ಕಡಿಮೆಯಿದ್ದರೆ. ೧೯೯೬ರಲ್ಲಿ ಸರಾಸರಿಗಿಂತ ಕೇವಲ ಶೇಕಡಾ ೩ರಷ್ಟು ಮುಂದಿದ್ದರು. ಆದಿವಾಸಿಗಳ ಸಂದರ್ಭಗಳ ಪಲ್ಲಟವು ೧೯೭೧ರಲ್ಲಿ ಸರಾಸರಿಗಿಂತ ಶೇಕಡಾ ೨ರಷ್ಟು ಕಡಿಮೆಯಿದ್ದರೆ ೧೯೯೬ರಲ್ಲಿ ಸರಾಸರಿಗಿಂತ ಶೇಕಡಾ ೨.೫ರಷ್ಟು ಮುಂದಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯಾಯಸಮ್ಮತಿ ಕುರಿತು ಸಂಕ್ಷಿಪ್ತವಾಗಿ ಹಿಂದಿನ ಅಧ್ಯಾಯದಲ್ಲಿ ಮೇಲೆತ್ತಿದ ಅಂಶವು ದುರ್ಬಲ ವರ್ಗದವರು ವಿಸ್ತೃತ ಪ್ರಮಾಣದಲ್ಲಿ ಇದನ್ನು ಸ್ವೀಕಾರಾರ್ಹಗೊಳಿಸಿರುವುದು ಇದಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಬಹಳಷ್ಟು ಸೌಲಭ್ಯವಂತರು ಸಾಪೇಕ್ಷವಾಗಿ ಹೆಚ್ಚಿನ ಮಂದಿ ಪ್ರಜಾಪ್ರಭುತ್ವ ಸಕಾರಾತ್ಮವಾಗಿ ಪ್ರತಿಕ್ರಿಯಿಸಿದರೂ ನಿಜವಾಗಿ ಸೌಲಭ್ಯವಂತ ಸಮುದಾಯಗಳ ಸಮ ಪ್ರಮಾಣಕ್ಕೆ ಪರಿಗಣಿಸಿದಾಗ ಅದು ಕಡಿಮೆಯೇ. ಎಲ್ಲ ಸಮುದಾಯ ಮತ್ತು ವರ್ಗಗಳಲ್ಲೂ ಬಹುಪಾಲು ಮಂದಿ ಪ್ರಜಾಪ್ರಭುತ್ವ ಮಾದರಿಗೆ ಒಳವು ತೋರಿದರೂ ಸೌಲಭ್ಯ ವಂಚಿತರು ಇದಕ್ಕೆ ಇನ್ನಷ್ಟು ಮೌಲ್ಯ ನೀಡುತ್ತಾರೆ. ಬಂಡವಾಳವಾದದೊಂದಿಗೆ ಜೊತೆ ಸೇರಿ ಕಾರ್ಯವೆಸಗುವ ಪ್ರಜಾಸತ್ತೆಯ ಜಾತಿಯಾಧಾರಿತ ಸಾಮಾಜಿಕ ರಚನೆಯ ಅನಮ್ಯತೆಯನ್ನು ದುರ್ಬಲಗೊಳಿಸಿದೆ ಎಂದು ಇಲ್ಲಿ ನಾವು ನಿಖರವಾಗಿ ಪ್ರತಿಪಾದಿಸಬಹುದು. ಆದರೆ ಒಳಗಿನ ಬದಲಾವಣೆಗಳೇನೇ ಇದ್ದರೂ ಈ ಜಾತಿ ರಚನೆಗಳು ಆಧುನಿಕ ಸಂಸ್ಥೆಗಳಾಗಿ ಬೆಳೆಯಲಾರವು. ಜಾತಿಯಾಧಾರಿತ ಸಾಮಾಜಿಕ ಸಂರಚನೆಗೆ ಹೀಗೆ ಮುಂದುವರಿದು ಹೆಚ್ಚಿನ ಮಂದಿ ಬ್ರಾಹ್ಮಣರಿಗಿಂತ ಕೆಳ ಅಂತಸ್ತಲ್ಲಿ ಮತ್ತು ಸಂಕೋಲೆಯಲ್ಲಿ ಇರುವುದಕ್ಕೆ ಪ್ರಮುಖ ಕಾರಣವಾಗಿದೆ. ಪ್ರಜಾಸತ್ತೆಯ ಕಾರ್ಯಕ್ಷಮತೆ ಈ ಸನ್ನಿವೇಶದಲ್ಲಿ ಹೆಚ್ಚಿನ ಜನರಿಗೆ ಪರಿಹಾರ, ಹಕ್ಕುಗಳು ಮತ್ತು ಘನತೆಯತ್ತ ಆಂದೋಲನ ನಡೆಸಲು ಅನುವು ಮಾಡುತ್ತದೆ. ಈ ಹಂತದಲ್ಲಿ ಆರ್ಥಿಕ ಸಮಾನತೆಗೆ ಮುಕ್ತವಾಗಿ ಹೋರಾಡುವ ಭಾವನೆಯ ನಿಧಾನವಾಗಿ ಸಾಮಾಜಿಕ ಅಸಮಾನತೆಯ ಅನಮ್ಯತೆಯನ್ನು ತೊಡೆದುಹಾಕುತ್ತದೆ. ಈ ಕಾರಣದಿಂದಾಗಿ ಬಂಡವಾಳವಾದದ ಜೊತೆ ಹೆಣೆದುಕೊಂಡು ವ್ಯಾಪಕವಾಗಿ ಸ್ವೀಕೃತವಾದ ಪ್ರಜಾಪ್ರಭುತ್ವವು ಜನಸಾಮಾನ್ಯರ ಮೂಲ ಅಗತ್ಯಗಳಿಗೆ ಪರಿಹಾರ ಹುಡುಕವಲ್ಲಿ ವಿಫಲಗೊಳ್ಳುತ್ತದೆ.

ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆ ಮಧ್ಯದ ವೈರುಧ್ಯವು ಸಮಾಜದಲ್ಲಿ ಸಾಮಾಜಿಕ ಸಂಬಂಧಗಳ ಪ್ರಜಾಪ್ರಭುತ್ವೀಕರಣದ ಸಾಧ್ಯತೆಗಳಿಗೆ ಪ್ರಮುಖವಾದ ಒಂದು ದಾರಿಯನ್ನು ಸೂಚಿಸುತ್ತದೆ. ಆರ್ಥಿಕ ಅಸಮಾನತೆ ವಿರುದ್ಧ ಜನರು ಹೆಚ್ಚು ಹೋರಾಡಿದಷ್ಟು ವಿಮೋಚನಾ ಸಾಧ್ಯತೆಗಳ ವಿಸ್ತರಣೆಗೆ ಹೆಚ್ಚು ಅವಕಾಶ ಸಿಗುವುದು. ಈ ನಿರ್ದಿಷ್ಟ ಹಂತದಲ್ಲಿ ಯಾವಾಗ ಬಂಡವಾಳಶಾಹಿ ವಿಫಲವಾಗುತ್ತೋ ಆಗ ಜನರ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಒಲವು ಹೆಚ್ಚುವುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ತಾರ್ಕಿಕತೆಗೆ ಸಂಬಂಧಿಸಿದ ಪ್ರಾತಿನಿಧ್ಯ ಮತ್ತು ಆಡಳಿತ ಮಧ್ಯದ ವೈರುದ್ಯ ಕಂಡುಬರುವುದು. ದಮನಿತ ಸಮುದಾಯಗಳು ಇಂದು ಬೂರ್ಶ್ವಾ ಸಮಾನತೆಗಾಗಿ ದೊಡ್ಡ ಯುದ್ಧವನ್ನೇ ಸಾರಿದ್ದಾರೆ. ಚಾರಿತ್ರಿಕವಾಗಿ ದೊರೆತ ಸೌಲಭ್ಯಗಳನ್ನು ಅನುಭವಿಸುವ ವರ್ಗ ಮತ್ತು ಸಮುದಾಯಗಳ ವಿರುದ್ಧ ಈ ಸಮುದಾಯಗಳು ಯುದ್ಧ ಸಾರಿವೆ. ತಮ್ಮ ಸಮುದಾಯಗಳನ್ನು ತಾವೇ ನೇರವಾಗಿ ಪ್ರತಿನಿಧೀಕರಿಸಲು ಸಾಕಷ್ಟು ಅಧಿಕಾರವುಳ್ಳ ನಾಯಕರು ದಮನಿತ ವರ್ಗಗಳಿಂದ ರೂಪುಗೊಂಡಿದ್ದಾರೆ, ಇಂಗ್ಲಿಷ್ ಶಿಕ್ಷಣ, ಹೆಚ್ಚಿನ ಆದಾಯ ಮುಂತಾದ ಲಕ್ಷಣಗಳುಳ್ಳ ಹೆಚ್ಚಾಗಿ ದ್ವಿಜರಿಂದ ಸೇರಿರುವ ಸ್ಥಾಪಿತ ಎಲೀಟುಗಳು ಹಸ್ತಕ್ಷೇಪದ ಅಗತ್ಯ ಇಲ್ಲಿ ಬೇಕಾಗಿಲ್ಲ.

ವಿವಿಧ ಸಮುದಾಯಗಳ ವಿಭಿನ್ನ ವರ್ಗ ಮತ್ತು ಸ್ತರಗಳ ಜನರನ್ನು ಈ ಅವಕಾಶ ಪ್ರೇರಿತ ಎಲೀಟು ಬಹಳ ಹಿಂದಿನಿಂದಲೂ ಪ್ರತಿನಿಧಿಸುತ್ತಿತ್ತು. ಕಾಂಗ್ರೆಸ್ ಪಕ್ಷದಂತೆ ಒಂದು ಸಂಕೀರ್ಣ ಅಂತರ ಕೊಂಡಿಯಿಂದ ಈಗ ಅದರ ಹಿಡಿತ ಕುಂಠಿತಗೊಂಡಿದೆ. ಚಾರಿತ್ರಿಕವಾಗಿ ಸಂಕಷ್ಟಕ್ಕೀಡಾಗಿರುವ ಸಮುದಾಯಗಳಿಗೆ ಈಗ ಪ್ರಾತಿನಿಧ್ಯದ ಹಿಡಿತ ಪಲ್ಲಟವಾಗಿದೆ. ಇಂತಹ ಮೂಲ ಅಥವಾ ದೇಸೀಯರನ್ನು ಸ್ಥಾಪಿತ ಮಧ್ಯಮವರ್ಗ ಸಮಾಧಾನದ ಮಾತುಕತೆಗೂ  ತೊಡಗಿಸಿಕೊಂಡಿಲ್ಲ. ಹೀಗಾಗಿ ಯಾವತ್ತೂ ಈ ದೇಸೀಯರು ಸಮಾಧಾನದ ಮಾತುಕತೆಯನ್ನು ಅಳವಡಿಸಿಕೊಂಡಿಲ್ಲ. ಆದರೆ ಎಲೀಟುಗಳ ಜೊತೆ ರಾಜಕೀಯ ಸಮರಕ್ಕೆ ಮುನ್ನುಗ್ಗಿದ್ದಾರೆ. ಈ ಹೊಸ ಪ್ರತಿನಿಧಿಗಳು ಒರಟಾಗಿದ್ದು ಇವರ ಶೈಲಿ ಎಲೀಟುಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸ್ಥಾಪಕ ಎಲೀಟುಗಳು ಇವರ ಆಂತರ್ಯದ ಸಾಕಷ್ಟು ಸತ್ವವುಳ್ಳ ಚರ್ಚೆಯನ್ನು ಗುರುತಿಸಲು ನಿರಾಕರಿಸಿ ಸಭ್ಯತೆಯ ಕೊರತೆಯೆಂದು ನಿಂದಿಸುತ್ತದೆ. ಆಡಳಿತಶಾಹಿ, ಮಾಧ್ಯಮ ಮುಂತಾದವಲ್ಲ ಈ ಮೇಲ್ಜಾತಿಗಳಿಂದ ಕೂಡಿದ ಸ್ಥಾಪಿತ ಮಧ್ಯಮವರ್ಗದ ನಿಯಂತ್ರಣದಲ್ಲಿರುವುದರಿಂದ ಎಲೀಟು ಮತ್ತು ಇತರ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮಧ್ಯೆ ಕಂದಕವೇರ್ಪಟ್ಟಿದೆ. ಇದು ಸಹಮತದ ವಿಘಟನೆಯಾಗಿದ್ದು ಎರಡು ಪಕ್ಷಗಳು ಇದರಲ್ಲಿ ಕಳೆದುಕೊಳ್ಳುವಂತಾಗಿದೆ.

ದಮನಿತ ಸಮುದಾಯಗಳಿಂದ ರೂಪುಗೊಂಡ ಪ್ರತಿನಿಧಿಗಳ ನಾಜೂಕಿನ ಸಂಸದೀಯ ಆಡಳಿತದಿಂದ ಈ ಸಮಸ್ಯೆ ಸಂಕೀರ್ಣಗೊಂಡಿದೆ. ಜನರನ್ನು ಪ್ರತಿನಿಧಿಸಿ ಬಹುಮತ ಗಳಿಸಿದರೂ ಆಡಳಿತದ ನಿಯಮಗಳನ್ನು ಅವರು ಕಲಿತಿಲ್ಲ. ಸಬಲರಾಗುವ ತವಕದಲ್ಲಿ ನಿಯಮಗಳನ್ನು ಮುರಿದು ಸಾಲಿನ ಸರದಿಗೆ ಸೇರುವ ಈ ಕ್ರಮ ಸ್ಥಾಪನೆಯಾದ ವ್ಯವಸ್ಥೆಗೆ ವಿರುದ್ಧವೆನಿಸಿದೆ. ಸಾಮಾಜಿಕ ಇಲ್ಲವೇ ಪ್ರಮುಖವಾಗಿ ರಾಜಕೀಯ ರಂಗದ ಸಂಬಂಧಗಳ ಬಗೆಗೆ ತಮ್ಮೊಳಗೂ ಯಾವುದೇ ನಿಯಮಗಳ ಕಲಿಕೆಗೆ ಅವರು ಆಸಕ್ತಿ ವಹಿಸಿಲ್ಲ. ಸಭ್ಯತೆ ಅಥವಾ ಶಿಷ್ಟಾಚಾರದ ಇಳಿಮುಖ ಮಾತ್ರವಲ್ಲ ಇದು ಅಸ್ಥಿರತೆಗೂ ಕಾರಣವಾಗಿದೆ. ಪ್ರಜಾಪ್ರಭುತ್ವದ ಅವಶ್ಯಕತೆಗಳ ಅನ್ವಯ ಈ ನಾಯಕರು ಹೆಚ್ಚು ಪರಿಣಾಮಕಾರಿ ಪ್ರಾತಿನಿಧ್ಯ ಒದಗಿಸಿದರೂ ಅವರು ಮುಂದಾಲೋಚನಾಯಿಟ್ಟುಕೊಂಡು ಆಡಳಿತ ನಡೆಸಲು ಅಸಮರ್ಥರಾದ ಕಾರಣ ಆಡಳಿತದ ತಾರ್ಕಿಕತೆ ಬಗೆಗೆ ಅವರಿಗೇನೂ ತಿಳಿಯದು. ಮುಂದಿನ ತಕ್ಷಣದ ಸಮಯದಲ್ಲಿ ನಾವು ಈ ಸಂಗತಿಯನ್ನು ತಿಳಿಯಲು ಪ್ರಯತ್ನಿಸಿ ಮತ್ತು ಇದರ ಜೊತೆಗೆ ಸಾಗಿ ಬಾಳದಿದ್ದರೆ ಉಳಿದಿರುವ ಪರ್ಯಾಯ ಒಂದೇ ಮಿಲಿಟರಿ ಸ್ವರೂಪದ ಸರಕಾರ ವ್ಯವಸ್ಥೆ. ಸಭ್ಯತೆಯ ಅಥವಾ ಶಿಷ್ಟಾಚಾರದ ಬಗೆಗೆ ಕಲಿಯಲು ಸಮಯವಿಲ್ಲದವರ ಬಗೆಗಿನ ಅಸಹನೆಯು ಪ್ರಜಾಪ್ರಭುತ್ವದ ಅಂತ್ಯದಲ್ಲಿ ಕೊನೆಗೊಳ್ಳಬಹುದು. ಈ ಅಸಹನೆಯಲ್ಲಿ ಪ್ರಜಾಪ್ರಭುತ್ವಕ್ಕೆ ಒಂದು ನಿಜವಾದ ಗಂಡಾಂತರ ಅಡಗಿದೆ.

ಈ ಸಂಗತಿಗಳ ಫಲಿತದ ಬಗೆಗೆ ನಿರೀಕ್ಷಿಸುವ ಬದಲು ಪ್ರಜಾಪ್ರಭುತ್ವದ ಮಾಹಿತಿ ನೀಡುವ ಪ್ರಕ್ರಿಯೆಯ ತಿಳುವಳಿಕೆಗೆ ಗೌರವ ಕೊಡುವುದು ಬಹಳ ಮುಖ್ಯ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಅದರ ಸಾಂಸ್ಥಿಕ ನಿರ್ಬಂಧಗಳಿಂದ ದೂರಗೊಂಡು ಸ್ವಾಯತ್ತವಾಗುತ್ತಿದೆ. ಆಳಿಸಿಕೊಳ್ಳುವವರು ಅಂದರೆ ಸಂಕಷ್ಟಕ್ಕೊಳಗಾದ ಜನಗಳ ರಾಜಕಾರಣದ ಮೇಲೆ ಇವುಗಳ ಪರಿಣಾಮಗಳನ್ನು ಪರೀಕ್ಷಿಸಲೇ ಬೇಕಿದೆ. ಆರ್ಥಿಕತೆಯಂಥ ಸಮಗ್ರ ಸಾಂಸ್ಥಿಕತೆಯು ಹೆಚ್ಚಾಗಿ ದೇಶದ ಹೊರಗಿನ ಶಕ್ತಿಗಳಿಂದ ನಿಯಂತ್ರಿಸಲ್ಪಡುವುದರಿಂದ ಎಲೀಟುಗಳ ನಿಯಂತ್ರಣ ಮತ್ತು ಲೆಕ್ಕಚಾರಗಳಿಂದ ಈ ಪ್ರಕ್ರಿಯೆ ಸಾಪೇಕ್ಷವಾದ ಸ್ವಾಯತ್ತತೆ ಹೊಂದಿದೆ ಎನ್ನಲಾಗುತ್ತಿದೆ. ಆದರೂ ಎಲೀಟು ರಾಜಕಾರಣದ ಮಾದರಿಗಳ ಎಷ್ಟು ಲೆಕ್ಕಾಚಾರ ಹಾಕಿದರೂ ಮತ್ತು ಜನರ ಪ್ರಜ್ಞೆಯನ್ನು ಗೊಂದಲಮಯ ಮಾಡಿದರೂ ಹೋರಾಟದ ಪ್ರಕ್ರಿಯೆ ಮುಂದುವರಿದು ಇವಕ್ಕೆ ಜನ ಮೌಲ್ಯವೀಯುವರು ಮತ್ತು ಆಶಿಸುತ್ತಾರೆ.

ಈ ಪ್ರಕ್ರಿಯೆಯ ಸ್ವಾಯತ್ತತೆ ಹೋರಾಟದ ಕ್ಷಣದಿಂದ ಪ್ರಾರಂಭವಾಗುತ್ತದೆ. ಸಬಲೀಕರಣ, ಸಮಾನತೆ, ಹಕ್ಕುದಾರಿಕೆ, ಘನತೆ ಮುಂತಾದವೆಲ್ಲ ತಕ್ಷಣದ ಹೋರಾಟದಲ್ಲಿ ಕೇಂದ್ರಿತವಾಗುತ್ತದೆ. ಹೀಗೆ ಈ ಪ್ರಕ್ರಿಯೆ ಒಂದು ಕಾರ‍್ಯಕ್ಷೇತ್ರ ಅಥವಾ ಹೊಸ ರೂಪದ ಕಾರ‍್ಯಕ್ಷಮತೆಯ ಸಾಕಾರಕ್ಕೆ ಪಾತ್ರಧಾರಿಗಳು ಕಲ್ಪಿಸಿದ ಒಂದು ಅವಕಾಶವಾಗಿದೆ. ಅವಿಧೇಯತೆ ಅಥವಾ ಅಸಹಕಾರದ ಧಾರಣಾಶಕ್ತಿಯನ್ನು ಹೊಂದುವುದೇ ಕಾರ‍್ಯಕ್ಷಮತೆಯ ಒಂದು ಪ್ರಮುಖ ಅಂಶವಾಗಿದೆ. ಪಾರಂಪರಿಕ ಸಾಮಾಜಿಕ ನಿರ್ಬಂಧಗಳ ಉಲ್ಲಂಘನೆ ಕೆಲವು ಅಸಾಮಾರ್ಥ್ಯವನ್ನು ತೊಡೆದು ಹಾಕಲು ಅಗತ್ಯವಾಗಿದ್ದು ಇವರು ಸಮಾನತೆಗೆ ಹಾತೊರೆಯಲು ಮತ್ತು ಹೋರಾಡಲು ನಿರ್ಣಾಯಕವಾಗಿದೆ. ಬ್ರಾಹ್ಮಣೀಕೃತ ದೃಷ್ಟಿಕೋನಕ್ಕೆ ಸವಾಲೊಡ್ಡುವ ಮೂಲಕ ಅಧಿಕಾರವನ್ನು ಉಲ್ಲಂಘಿಸುವ ಹೊಸ ಧಾರಣಾಶಕ್ತಿಯ ಸ್ಪಷ್ಟತೆ ಕಂಡುಬರುತ್ತಿದೆ. ಉಲ್ಲಂಘಿಸುವ ಸಾಮರ್ಥ್ಯ ಕ್ಷಣಿಕ ಅಥವಾ ತಾತ್ಕಾಲಿಕವಾಗಿರದೆ ಅದು ದಮನಿತ ವರ್ಗಗಳ ವ್ಯಕ್ತಿತ್ವದ ಅಂಗವಾಗಿ ರೂಪುಗೊಳ್ಳುತ್ತದೆ. ಹಿಂದಿನ ಆಚರಣಾ ರೀತಿಗಿಂತ ಕಾರ್ಮಿಕ ವರ್ಗಗಳಲ್ಲಿದ್ದಂತೆ ಕೆಳ ಜಾತಿಗಳ ಸಮುದಾಯ ಜೀವನಕ್ಕೆ ಹೋರಾಟ ಪ್ರಮುಖ ಅಂಗವೆನಿಸಿದೆ. ಹೊಸ ರೂಪ ವಿಧಾನದ ಮೂಲಕ ಸಮುದಾಯ ಪಾಲ್ಗೊಳ್ಳುವಿಕೆಯ ಸಾರ್ವಜನಿಕವಾಗಿ ಸಾದೃಶ್ಯೀಕರಿಸುವುದು. ಕೀಳುಮಟ್ಟದ ಅಚರಣಾ ಸ್ಥಾನಮಾನ ಇಂದು ಸಂಗತಿಯಲ್ಲ. ಸಭ್ಯತೆಯ ಕೊರತೆಯಿದ್ದರೂ ಬಡವರು ಮತ್ತು ದುಃಸ್ಥಿತಿಗೊಳಗಾದವರಿಗೆ ಸಾರ್ವಜನಿಕ ಆಶ್ವಾಸನೆ ಮಹತ್ವದ್ದೆನಿಸುತ್ತದೆ.

ಜನರು ತಮ್ಮ ಹಕ್ಕೊತ್ತಾಯ ಮತ್ತು ಹೋರಾಟಗಳನ್ನು ಮುಂದಿಟ್ಟು ಅವನ್ನು ಪರಿಗಣಿಸುವ ಸಂದರ್ಭದಲ್ಲಿ ಪ್ರಕ್ರಿಯೆಯ ಸ್ವಾಯತ್ತತೆಗೆ ಅವಕಾಶವಿದೆ. ಹಕ್ಕೊತ್ತಾಯ ಯಾವುದೇ ವಿಷಯ ಇಲ್ಲವೇ, ವ್ಯಕ್ತಿ, ದಲಿತ, ಘನತೆ ಮುಂತಾದವುಗಳಿರಬಹುದು. ನಾಗರಿಕತೆ ಅಗತ್ಯಗಳಿಂದ ಯಾರು ವಂಚಿತರಾಗುತ್ತಾರೋ ಇದಕ್ಕೆ ಹೋರಾಡಲೇಬೇಕಿದೆ. ಜನ ಯಾವುದು ಮಹತ್ವವುಳ್ಳದ್ದು ಎಂದು ಪರಿಗಣಿಸುತ್ತಾರೋ ಮತ್ತು ಅಂತಹ ಸಾಲಿನ ಜನಗಳಾಗಲು ಅವರು ನಿಯೋಗವನ್ನು ಬಳಸುತ್ತಾರೆ. ಈ ಹಂತದಲ್ಲಿ ಲೆಕ್ಕವಿಲ್ಲದಷ್ಟು ತಪ್ಪುಗಳ ಮಧ್ಯೆಯೂ ಕೇವಲ ಪ್ರಜಾಪ್ರಭುತ್ವ ಮೇಲುಗೈ ಸಾಧಿಸುತ್ತದೆ.