ದಮನಿತ ಜಾತಿಗಳು ರಾಜಕೀಯ ಪ್ರಕ್ರಿಯೆಯಲ್ಲಿ ಪಾತ್ರಧಾರರಾಗುವುದನ್ನು ಅರ್ಥೈಸುವುದು ಮೇಲ್ನೋಟಕ್ಕೆ ಸಂಬಂಧಿಸಿಲ್ಲವಾದರೂ ಮಹತ್ವದ್ದೆನಿಸಿದೆ. ಗ್ರೀಸ್, ಈಜಿಪ್ಟ್ ಅಥವಾ ರೋಮ್ ನಲ್ಲಿದ್ದಂತಹ ಗುಲಾಮಗಿರಿ ಭಾರತದಲ್ಲಿ ಅಸ್ತಿತ್ವದಲ್ಲಿತ್ತೆ ಎಂಬುದರ ಬಗೆಗೆ ಚರಿತ್ರೆ ಬರವಣಿಗೆಗಳು ಸಾಕಷ್ಟು ತಲೆಕೆಡಿಸಿಕೊಂಡರೂ ವಸಾಹತುಪೂರ್ವದ ಭಾರತ ಸಮಾಜ ವ್ಯವಸ್ಥೆಯಲ್ಲಿ ನೇರ ಉತ್ಪಾದಕನ ದಾಸ್ಯದ ಸ್ವರೂಪವೇನೆಂಬ ಪ್ರಶ್ನೆ ಇಲ್ಲಿ ಕೇಳಬೇಕಿದೆ. ಇಂದಿನ ದಲಿತರು ಮತ್ತು ಒಬಿಸಿಗಳು ಕೃಷಿ ಮತ್ತು ಕೈಗಾರಿಕಾ ಸಂಬಂಧಿ, ಗೃಹೋಪಯೋಗಿ ಮತ್ತು ಕರಕುಶಲ ಉತ್ಪನ್ನಗಳ ಚಾರಿತ್ರಿಕ ಉತ್ಪಾದಕರಾಗಿದ್ದರೆಂಬುದರಿಂದ ಈ ಪ್ರಶ್ನೆ ಮಹತ್ವದ್ದೆನಿಸಿದೆ. ಇವನ್ನು ಸಮಾಜದ ಎಲ್ಲರ ಉಪಯೋಗಕ್ಕೆ ಇಲ್ಲವೇ ಆಳುವ ವರ್ಗದವರಿಗಾಗಿ ಉತ್ಪಾದಿಸಲಾಗುತಿತ್ತು. ರೈತರು, ಕೃಷಿಕಾರ್ಮಿಕರು ಅಥವಾ ಕರಕುಶಲ ಕರ್ಮಿಗಳು ಮುಂತಾದ ಶ್ರಮಿಕ ವರ್ಗಗಳು ವಿಭಿನ್ನ ಜಾತಿಗಳಾಗಿ ಮೇಲ್ಜಾತಿಗಳನ್ನು ಅವಲಂಬಿಸುವಂತಾಯಿತು. ಈ ಅವಲಂಬನೆ ಸಾಮೂಹಿಕವಾಗಿತ್ತು ಮತ್ತು ಕೇವಲ ವ್ಯಕ್ತಿಗತವಲ್ಲ. ಚಾರಿತ್ರಿಕವಾಗಿ ನಿರ್ಬಂಧಿತವಾದ ಸಾಮಾಜಿಕ ಕಟ್ಟುಪಾಡುಗಳಿಂದ ಈ ಆರ್ಥಿಕ ಅವಲಂಬನೆ ಮತ್ತಷ್ಟು ಗಟ್ಟಿಕೊಂಡಿತು. ಭಾರತದಲ್ಲಿ ನೇರ ಉತ್ಪಾದಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಂಧಿಯಾಗಿದ್ದರು. ಈ ಪರಿಸ್ಥಿತಿಯ ವರ್ಗೀಕರಣಕ್ಕೆ ಪಾರ್ಥಚಟರ್ಜಿಯ ಪರಿಕಲ್ಪನೆಯನ್ನು ಬಳಸುವುದು ಉತ್ತಮ. ಚಟರ್ಜಿಯವರು ಉತ್ಪಾದಕರ ದಾಸ್ಯದ ಸ್ವರೂಪವನ್ನು ಬಂಧನವೆನ್ನುತ್ತಾರೆ. ಯುರೋಪಿನಲ್ಲದು ಸಮಷ್ಟಿ ಬದಲು ವ್ಯಕ್ತಿಗತ ಸ್ವರೂಪದ್ದಾಗಿತ್ತು. ಅದಲ್ಲದೆ ಸಾಮೂಹಿಕ ಬಂಧನದ ಸ್ವರೂಪವು ಏಕರೂಪಿಯಾಗಿಲ್ಲ. ಅದು ಕೆಲಸದ ಸ್ವರೂಪ ಅಥವಾ ಉತ್ಪಾದನೆಯನ್ನು ಪರಿಗಣಿಸಿ ಜಾತಿಯಿಂದ ಜಾತಿಗೆ ವಿಭಿನ್ನವಾಗಿತ್ತು. ಅತ್ಯಂತ ಮೇಲಿನ ಭೌತಿಕ ಶ್ರಮದಲ್ಲಿ ತಲ್ಲೀನವಾಗಿರುವವರು ಅತ್ಯಂತ ಬಂಧಿಯಾಗಿದ್ದರು. ಈ ಜನಗಳು ಈಗ ಅವರು ದಲಿತರಾಗಿ ಗುರುತಿಸಿಕೊಳ್ಳುತ್ತಾರೆ. ಆದರೆ ದಲಿತ ಜಾತಿಗಳೊಳಗೂ ಕೂಡ ಭಿನ್ನತೆಗಳುಂಟಾಗಿವೆ. ಅಸ್ಪೃಶ್ಯತೆಯ ಭೀಕರತೆ ಮತ್ತು ಹಕ್ಕುದಾರಿಕೆಯೇ ಇಲ್ಲದಂತಾಗಿ ಮಲ ಸಾಗಿಸುವ ವೃತ್ತಿಯಲ್ಲಿ ತೊಡಗಿದ್ದರು. ಏನೆಲ್ಲ ಭಿನ್ನತೆಗಳು ಇವರೊಳಗಿದ್ದರೂ ಸಾಮಾಜಿಕ ಜೀವನದಲ್ಲಂತೂ ದಲಿತರು ಬಹಳಷ್ಟು ದುರ್ಬಲರು, ಇನ್ನೊಂದೆಡೆ ಅವಲಂಬಿತ ರೈತ ಜಾತಿಗಳು ಈಗ ಒಬಿಸಿಗಳೆಂದು ಕರೆಯಲ್ಪಡುತ್ತಿದ್ದು ಅವರು ಕೂಡ ಬಂಧಿಗಳಾಗಿದ್ದು ತಕ್ಕಮಟ್ಟಿಗೆ ದಮನಕ್ಕೀಡಾಗಿದ್ದರು. ಕುರ್ಮಿ, ಯಾದವ, ಕುನ್ಬ್ ಅಥವಾ ದೀವರ ಮುಂತಾದ ಸಾಮೂಹಿಕ ಗುಂಪುಗಳು ಅಸ್ಪೃಶ್ಯರಲ್ಲ. ಜೊತೆಗೆ ಮೇಲ್ಜಾತಿ ಭೂಮಾಲೀಕರು ಹೆಚ್ಚಿನ ಕರ ವಿಧಿಸಿದರೂ ಈ ಗುಂಪುಗಳ ಬಂಧನ ಸಾಪೇಕ್ಷವಾಗಿ ಮೃದುಸ್ವರೂಪದ್ದು. ಇವೆರಡು ಗುಂಪುಗಳ (ದಲಿತ ಮತ್ತು ಒಬಿಸಿಗಳ) ಮಧ್ಯೆ ಅಸಂಖ್ಯಾತ ವೃತ್ತಿಗಳಲ್ಲಿದ್ದು ವಿಭಿನ್ನ ಕ್ರಮಾಂಕದ ಅಸಮರ್ಥನೆ ಮತ್ತು ಬಂಧನವಿರುವ ಈ ಕೆಲವು ಗುಂಪುಗಳು ಅತ್ಯಂತ ಹಿಂದುಳಿದ ಜಾತಿಗಳೆಂದು ವರ್ಗೀಕರಣಗೊಂಡಿವೆ. ಯುರೋಪಿನಲ್ಲಿನ ಗುಲಾಮರು ಮತ್ತು ಗುಲಾಮಗಿರಿ ಉತ್ಪಾದನಾ ವಿಧಾನದ ಈ ವಿಭಿನ್ನತೆಗಳು ಭಾರತದಲ್ಲಿ ಒಂದು ಪ್ರಮುಖ ವಿಶಿಷ್ಟತೆಯನ್ನು ಸೂಚಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ಹಕ್ಕುಗಳ ಪ್ರತಿಪಾದನೆ ಮತ್ತು ಘನತೆಗೆ ಹೋರಾಡಲು ಹಾಗೂ ಈ ಜಾತಿಗಳು ಹೇಗೆ ಅಸ್ಮಿತೆಗಳಾಗಿ ಅಳವಡಿಕೆಯಾಗುತ್ತವೆಂಬುದರ ತಿಳುವಳಿಕೆಗಾಗಿ ಜಾತಿಗಳ ಮಧ್ಯದ ಭಿನ್ನತೆಗಳು ಅಗತ್ಯವೆನಿಸುತ್ತವೆ. ಇದು ಸಮುದಾಯವಾದಿ ರಾಜಕಾರಣದ ಸ್ವರೂಪವನ್ನು ತಿಳಿಯುವಲ್ಲಿ ಮಹತ್ವದ್ದೆನಿಸಿದೆ. ಅಂತಿಮವಾಗಿ ಈ ಭಿನ್ನತೆಯು ವಿಭಿನ್ನ ದಮನಿತ ಗುಂಪುಗಳ ಮಧ್ಯೆಯಿರುವ ಸಂಘರ್ಷ ಮತ್ತು ವೈರುಧ್ಯಗಳನ್ನು ತಿಳಿಯಲು ತುಸು ಮಹತ್ವ ಒದಗಿಸುತ್ತವೆ. ಪರಿಣಾಮವಾಗಿ ದಮನಿತರು ಒಟ್ಟಾಗದಿರುವ ಅಸಮರ್ಥತೆಯು ನಮ್ಮ ಕಾಲದ ರಾಜಕಾರಣಕ್ಕೆ ಪ್ರಾಮುಖ್ಯವೆನಿಸಿದರೂ, ದಲಿತರು ಮತ್ತು ಒಬಿಸಿಗಳ ಮಧ್ಯೆ ಕೆಲವು ಭಾಗಗಳಲ್ಲಿ ನಡೆಯುವ ತೀಕ್ಷ್ಣ ಹೋರಾಟಗಳು ಈ ಕೃತಿಯಲ್ಲಿ ವಿಮರ್ಶೆಯ ವಸ್ತು ಅಲ್ಲ. ವಿವಿಧ ಗುಂಪುಗಳ ಮೇಲಿನ ದಮನದ ಕ್ರಮಾಂಕದ ಪರಿಣಾಮಕಾರಿ ಭಿನ್ನತೆಯು ಬಂಧನದ ಸ್ವರೂಪದ ಚರ್ಚೆಯಿಂದ ಸ್ಪಷ್ಟವಾಗಿದೆ. ಸಮಗ್ರ ಟ್ರೆಂಡನ್ನು ವಿಶ್ಲೇಷಿಸಿದಾಗ ಇವೆಲ್ಲ ಗುಂಪುಗಳು ದಮನಿತರು ಮತ್ತು ಸಂಕಷ್ಟದಲ್ಲಿರುವವರೆಂದು ಪರಿಗಣಿಸಬಹುದು.

ಸಾಮೂಹಿಕ ಬಂಧನ ಸ್ವರೂಪದ ಪರಿಣಾಮದ ಗಂಭೀರತೆಯನ್ನು ಅದು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹೋರಾಟದಲ್ಲಿ ಕಾಣಬಹುದು. ಬಂಡವಾಳವಾದದ ಬೆಳವಣಿಗೆಯೊಂದಿಗೆ ಬಂಧನದ ರಚನಾತ್ಮಕ ಸ್ಥಿತಿಯು ಬದಿಗೆ ಸರಿಸಲ್ಪಟ್ಟು ಗ್ರಂಥಸ್ಥ ನಿರ್ಬಂಧಗಳು ಮೌಲ್ಯಗಳನ್ನು ಕಳೆದುಕೊಂಡಿವೆ. ಸ್ವಾತಂತ್ರ‍್ಯದೊಂದಿಗೆ ಎಲ್ಲ ರೂಪದ ಬಂಧನಗಳಿಗೂ ನ್ಯಾಯಿಕ ರಕ್ಷೆ ದೊರೆತು ಇದು ಸಮಾಜದಲ್ಲಿನ ದಮನಿತ ವರ್ಗಗಳು ಸಮರ ಸಾರಲು ತಕ್ಕುದಾದ ಸನ್ನಿವೇಶವನ್ನು ಕಲ್ಪಿಸಿತು ಮತ್ತು ಪ್ರಜಾಪ್ರಭುತ್ವದ ಸಮರಕ್ಕೆ ಈ ಹಿಂದೆ ತುಳಿಯಲ್ಪಟ್ಟ ಜಾತಿ ಸಮುದಾಯಗಳು ಕೈಜೋಡಿಸಿದವು. ಸಂವಿಧಾನ ರಚನಾ ಸಂದರ್ಭದಲ್ಲಿ ದಮನಿತ ಗುಂಪುಗಳಿಗೆ ಮೀಸಲಾತಿ ನೀಡುವ ವಿಷಯ ಕುರಿತ ರಾಷ್ಟ್ರವ್ಯಾಪಿ ಚರ್ಚೆಯು ಈ ಸಮರ ಒಂದಂಶವಾಗಿತ್ತು. ಸಾಂವಿಧಾನಿಕ ಹಕ್ಕುಗಳು ದೊರೆತು ಆಸ್ತಿ, ಸಂಘಟನೆ ಮತ್ತು ರಾಜಕೀಯ ಅಧಿಕಾರ ಮುಂತಾದವೊಂದಿಗೆ ಹಿಂದೆ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿವಿಧ ದಮನಿತ ಗುಂಪುಗಳ ಬಲ ಮತ್ತು ಯಶಸ್ಸು ಈಗ ನಿಯಂತ್ರಿಸುವಂತಾಯಿತು. ಹಾಗೇಯೇ ನಿರ್ದಿಷ್ಟ ಪ್ರದೇಶಗಳಲ್ಲಿ ಉಂಟಾದ ಪ್ರಜಾತಂತ್ರ ಚಳುವಳಿಯ ಸ್ವರೂಪ ಕೂಡ ಇದಕ್ಕೆ ಪೂರಕವಾಯಿತು. ನಿರ್ಬಂಧ ಮತ್ತು ಅಸಾಮರ್ಥ್ಯಗಳ ಸ್ವರೂಪಕ್ಕೆ ಸಂಬಂಧಿಸಿ ಸ್ವಾತಂತ್ರ‍್ಯದೆಡೆಗಿನ ಸಮರ ಸಾಮೂಹಿಕ ಸ್ವರೂಪದ್ದಾಗಬೇಕು. ಆದರೆ ಪಶ್ಚಿಮದಲ್ಲಿ ಹೋರಾಟ ನಡೆದರೂ ಹಕ್ಕು ಮತ್ತು ಹಕ್ಕೊತ್ತಾಯಕ್ಕೆ ಸಂಬಂಧಿಸಿ ಹೋರಾಟಗಳು ವ್ಯಕ್ತಿಗತವಾಗಿದ್ದರೂ ಸಾಮೂಹಿಕವಾಗಿಯೇ ನಡೆದವು. ಘನತೆ, ಸಮಾನತೆ, ಹಕ್ಕುಗಳು ಮುಂತಾದವು ಮೊದಲಿಗೆ ಸಮುದಾಯಗಳತ್ತ ಕೇಂದ್ರಿತವಾಗುವ ಸಾಧ್ಯತೆಯನ್ನು ಸೂಚಿಸುತ್ತ ನಂತರ ವ್ಯಕ್ತಿಯ ಜೀವನದಲ್ಲಿ ಪ್ರತಿಫಲಿಸುವುದು.

ಭಾರತದಲ್ಲಿ ಪ್ರಜಾಸತ್ತೆಯ ವ್ಯಾಖ್ಯೆ ಏನೇ ಇದ್ದರೂ ಆಳಿಸಿಕೊಳ್ಳುವವರು ಇದನ್ನೊಂದು ಪರಿಣಾಮಕಾರಿ ಅಧಿಕಾರದ ಮಾಪನ ಮತ್ತು ಅಂತಸ್ತಿನ ಸಂಕೇತವೆಂಬುದಾಗಿ ಪರಿಗಣಿಸುತ್ತಾರೆ. ಕಾರ್ಮಿಕರು ಅಲ್ಲದೇ ಭಾರತದಲ್ಲಿ ದಲಿತ ಮತ್ತು ಒಬಿಸಿಗಳು ಹೆಚ್ಚಾಗಿ ಆಳಿಸಿಕೊಳ್ಳುವ ವರ್ಗವಾದರೂ ಆಳಿಸಿಕೊಳ್ಳುವ ವರ್ಗ ಹೆಚ್ಚು ಕಡಿಮೆ ನೇರ ಉತ್ಪಾದಕರ ಜೊತೆ ಗುರುತಿಸಿಕೊಂಡಿದೆ. ಉತ್ಪಾದಕರಲ್ಲೂ ಮಹಿಳೆಯರು ಮನೆವಾರ್ತೆ ಮತ್ತು ಕೃಷಿ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆಂಬುದಕ್ಕೆ ಅಗತ್ಯವಾಗಿ ಒತ್ತು ನೀಡಬೇಕಿದೆ. ಕುಟುಂಬ ಯೋಗಕ್ಷೇಮ ನಿರ್ವಹಣೆಗೆ ಇದು ಅಮೂಲ್ಯವಾದುದು. ಇದು ಕೌಶಲ್ಯಯುಕ್ತವಾಗಿದ್ದು ಹೆಚ್ಚಿನ ಸಂದರ್ಭಗಳಲ್ಲಿ ಗಂಡಸರ ಜೊತೆಗೆ ಹೋಲಿಸಬಹುದಾಗಿದೆ.

ಒಟ್ಟಾರೆ ಸಮಗ್ರವಾಗಿ ನೋಡೋಣ. ಮಂಡಲ್ ನಂತರದ ಅವಧಿಯಲ್ಲಿ ವ್ಯಕ್ತಗೊಂಡಂತೆ ಸಾಮೂಹಿಕ ನಿರ್ಬಂಧದ ಸ್ವರೂಪ ಮತ್ತು ಆಳಿಸಿಕೊಳ್ಳುವವರ ರಾಜಕಾರಣವು ಭಾರತದ ಪ್ರಜಾಸತ್ತೆಯ ಸಮರದಲ್ಲಿ ಜಾತಿಗಳು ಒಂದು ಬದಲಾವಣೆಯ ನಿರ್ಧಾರಕ ಎನ್ನುವಂತ ಪ್ರಾಮುಖ್ಯತೆಯನ್ನು ಪಡೆದಿದೆ ಎಂಬುದಕ್ಕೆ ಸೂಚನೆ ಒದಗಿಸುತ್ತದೆ. ಜಾತಿಗಳೆಂದು ಏನು ಕರೆಯುತ್ತೇವೆ ಅದರ ಸ್ವರೂಪ ಬಹಳಷ್ಟು ಬದಲಾವಣೆಗೊಳಪಡುತ್ತಿವೆ. ಜಾತಿಗಳು ನಾವು ವಾದಿಸುವ ಹಾಗೆ ಹಿಂದೆ ಇದ್ದಂತಿಲ್ಲ. ಬದಲಾವಣೆಗಳ ಚೌಕಟ್ಟಿನಲ್ಲಿ ಮಹಿಳೆಯರ ಹಕ್ಕು ಮತ್ತು ಹಕ್ಕುದಾರಿಕೆಗಳು ಸಂಕೀರ್ಣವಾದ ಸಮಸ್ಯೆಗಳಿಗೆ ಎಡೆಮಾಡಿವೆ. ಸಾಮೂಹಿಕ ನಿರ್ಬಂಧ ಮತ್ತು ಆಳಿಸಿಕೊಳ್ಳುವವರ ರಾಜಕಾರಣದ ಮಧ್ಯದ ಕಾರ‍್ಯಕಾರಣ ಕೊಂಡಿಯು ಪ್ರಸ್ತುತದ ಜಾತಿಗಳ ಅಸ್ಮಿತೆಗಳತ್ತ ನಿರ್ಣಾಯಕವಾದ ಒದಗಿಸುತ್ತದೆ. ಜಾತಿಯಲ್ಲಿನ ನಿರ್ದಿಷ್ಟ ಗುಣಗಳು ಒಂದು ಇನ್ನೊಂದನ್ನು ವಿಶಿಷ್ಟಪಡಿಸುತ್ತವೆ. ಅಸ್ಮಿತೆಯ ಈ ವ್ಯಾಖ್ಯೆ ಸ್ವೀಕಾರಾರ್ಹವಾದಲ್ಲಿ ಮೊಗಲರ ಪೂರ್ವದಿಂದ ಜಾತಿಗಳೆಂದು ಗುರುತಿಸಲ್ಪಟ್ಟಿರುವ ಅಂಗ ಅಥವಾ ಗುಂಪು ೨೦೦೦ದ ಸಂದರ್ಭದಲ್ಲಿ ಅದೇ ಜಾತಿಗಳೆಂದು ಪುನಃ ಗುರುತಿಸಲ್ಪಡುವುದು ಕಷ್ಟ ಒಂದು ಗುಂಪಿನ ಮಹತ್ವಕ್ಕೆ ಈ ಪುನರ್ ಗುರುತಿಸುವಿಕೆಗೆ ಪ್ರಶ್ನೆ ಬಹಳ ಮಹತ್ವದ್ದು. ಯಾಕೆಂದರೆ ವಸ್ತು,ವ್ಯಕ್ತಿ ಅಥವಾ ಸಮಷ್ಟಿ ಕೂಡ ಅಂಥವೇ ಅಸ್ಮಿತೆಯನ್ನು ಹೊಂದಿವೆ.

ಇಂಥ ಪುನರ್ ಗುರುತಿಸುವಿಕೆ ಸಾಧ್ಯದ ಮಾತಲ್ಲ. ಜಾತಿಗಳ ರೂಪಿಕೆಯಲ್ಲಿನ ನಿರ್ದಿಷ್ಟತೆ, ಗುಣಗಳು, ಲಕ್ಷಣಗಳೆಲ್ಲ ಮುಂದುವರಿದಿಲ್ಲ. ಕೆಲವೊಂದು ಮಾತ್ರ ಇವೆ. ಹಾಗಾಗಿ ಜಾತಿಗಳನ್ನು ಅದೇ ಚಾರಿತ್ರಿಕ ಗುಂಪುಗಳೆಂದು ಬೊಟ್ಟುಮಾಡಲಾಗದು. ಹಾಗಾಗಿ ಇವು ಅದೇ ಅಸ್ಮಿತೆಗಳೆನ್ನಲಾಗದು. ಈ ಗುಂಪುಗಳು ಸಮುದಾಯಗಳಾಗಿವೆ. ಇಟಲಿ, ಪೊಲೀಸ್ ಅಥವಾ ಐರಿಶ್ ಸಮುದಾಯಗಳಂತೆ ಇಲ್ಲೂ ಉಳ್ಳವರು ಇಲ್ಲದವರೆಂಬ ಭೇದವಾವವಿದೆ. ಹಾಗಾದಲ್ಲಿ ಜಾತಿ ಉಳಿಯುವಿಕೆ ಏನು? ರಾಜಕಾರಣದಲ್ಲಿ ದಮನಿತ ಜಾತಿಗಳ ಪಾತ್ರವನ್ನು ಹೇಗೆ ಮಾಡಬೇಕು? ಇದನ್ನು ಎಚ್ಚರಿಕೆಯಿಂದ ಪ್ರಾರಂಭಿಸಬೇಕು. ಬಹಳ ಹಿಂದಿನಿಂದಲೂ ಅಸ್ಮಿತೆಯಲ್ಲಿ ಸಾಮಾಜಿಕ ರೂಪಿಕೆಯ ಹಲವು ಲಕ್ಷಣಗಳು ಅವುಗಳ ಸಾಮಾಜಿಕ ಸ್ವರೂಪ ತ್ವರಿತವಾಗಿ ಬದಲಾದರೂ ಬದಲಾಗೊಲ್ಲ. ಬಹುಶಃ ಇವು ನಿರ್ಮೂಲನವಾಗಬೇಕಿದ್ದರೆ ಕ್ರಾಂತಿ ಅಥವಾ ಹಿಂಸಾತ್ಮಕ ಘಟನೆಗಳಿಂದ ಸಾಧ್ಯವೇನೋ. ಜಾತಿ ವ್ಯವಸ್ಥೆಯೊಳಗೆ ಏನಾಗುತ್ತಿದೆ ಎಂಬುದನ್ನರಿಯಲು ಎರಡು ಟ್ರೆಂಡ್ ಗಳನ್ನು ಪರಿಗಣಿಸಬೇಕಿದೆ.

ಮೊದಲ ಸಾದೃಶ ಟ್ರೆಂಡೆಂದರೆ ಜಾತಿ ಸಾಮಾಜಿಕ ರಚನೆಯಾಗಿ ಮುಂದುವರಿಯುತ್ತಿದ್ದರೂ ಅದರ ಹೆಚ್ಚಿನ ಆಂತರಿಕ ಸತ್ವಗಳು ಕಳೆದು ಹೋಗುತ್ತಿವೆ. ಹೆಚ್ಚಿನ ದಮನಿತ ಜಾತಿಗಳು ತಮ್ಮಷ್ಟಕ್ಕೆ ಮರು ರೂಪು ತಳೆಯುತ್ತದೆ. ಅವರ ಉಲ್ಲೇಖಗಳು ಸ್ವಯಂ ಘನತೆ ಮತ್ತು ಹೆಮ್ಮೆಯನ್ನು ಸೂಚಿಸುತ್ತದೆ. ಯಾವುದೇ ದಮನಿತ ಜಾತಿಗಳು ವರ್ಣ ವ್ಯವಸ್ಥೆಯಲ್ಲಿದ್ದಂತೆ ತಾವು ಕೀಳು, ಮಲೀನರೆಂದು ಹೇಳುತ್ತಿಲ್ಲ. ಮದುವೆಗೆ ಸಂಬಂಧಿಸಿದಂತೆ ಸಾಮಾಜಿಕ ವಿನಿಮಯದ ಕೆಲ ಲಕ್ಷಣಗಳು ಮುಂದುವರಿದರೂ, ಅವು ಶಾಶ್ವತವಾಗಿ ಉಳಿಯದೆ ಎಂಡೋಗಾಮಿಯ ಪರಿಧಿಯನ್ನು ವಿಸ್ತರಿಸುತ್ತದೆ ಅಥವಾ ವೈಚಾರಿಕವಾಗಿ ತಿರುವು ಉಂಟಾಗಿ ಜನರು ಯಥಾಸ್ಥಿತಿಯಲ್ಲಿ ಏನು ಮಾಡದಂತಾಗಿದೆ. ಹೆಚ್ಚಾಗಿ ಜಾಜ್ ಮಾನಿ ವ್ಯವಸ್ಥೆ ಕೂಡ ಉಳಿಯದೆ ಅದರಿಂದಾಗುವ ಉಪಯುಕ್ತತೆ ನಿಂತುಬಿಟ್ಟಿದೆ. ದಿನಗೂಲಿಯಿಂದ ಆಚರಣಾ ಅವಲಂಬನೆ ಮರೆಗೆ ಸರಿದು ಆರ್ಥಿಕ ಅವಲಂಬನೆಗೆ ಒತ್ತು ನೀಡಿದೆ. ದಲಿತರಲ್ಲೂ ನಿರ್ಬಂಧ ಮತ್ತು ಕೆಲವೊಮ್ಮೆ ಪೈಶಾಚಿಕತೆಯಿಂದ ಹಕ್ಕುದಾರಿಕೆ ಕುಂಠಿತವಾಗುತ್ತಿದೆ. ಗ್ರಾಮೀಣ ಅರ್ಥವ್ಯವಸ್ಥೆ ಮಾರುಕಟ್ಟೆ ಜಾತೀಕರಣಕ್ಕೊಳಪಟ್ಟು ಅರ್ಥವ್ಯಸ್ಥೆಯ ಅಂತರಕ್ರಿಯೆಯ ಭಾಗವಾಗಿ ಕಾರ‍್ಯವೆಸಗುತ್ತಿದೆ. ಆದುದರಿಂದ ಜಾತಿ ಈಗ ಕೇವಲ ಸೂಪರ್ ಸ್ಟ್ರಕ್ಚರ್. ಇದು ಉತ್ತಮವಾದ ದೃಷ್ಟಿಕೋನವಲ್ಲದಿರಬಹುದು. ಬಂಡವಾಳ ಶಕ್ತಿಗಳ ಅತಿಯಾದ ವಿರುದ್ಧ ರೂಪಗಳ ಫಲಿತವನ್ನು ನಿರ್ಧರಿಸುತ್ತವೆ. ವರ್ಣವ್ಯವಸ್ಥೆಯ ಆಂತರಿಕ ಕಾರ್ಯತಂತ್ರಗಳು ಈಗ ಚಾಲ್ತಿಯಲ್ಲಿಲ್ಲ. ಪರಿಣಾಮ ಸನ್ನಿವೇಶಾತ್ಮವಾಗಿ ಪ್ರವರ್ಗದ ವರ್ಗೀಕರಣ ಹೇರದೆ ಜಾತಿ ಎನ್ನುವುದನ್ನು ಬಳಸುವುದು ಉತ್ತಮ.

ಅತ್ಯಂತ ಸಂಕೀರ್ಣವಾದ ಎರಡನೇ ಟ್ರೆಂಡ್ ದಮನಿತ ಜಾತಿನ ಸ್ವರೂಪದಲ್ಲಿನ ಬದಲಾವಣೆ. ಅದು ವ್ಯಕ್ತಿಗಳ ಜಾತಿಗಳೊಳಗಿನ ಆಂತರಿಕ ಭಿನ್ನತೆ ಮತ್ತು ವರ್ಗ ರೂಪಿಕೆಯನ್ನು ಆಧಾರಿಸಿದೆ. ಈ ದಮನಿತ ಸಮುದಾಯಗಳಲ್ಲೂ ಎರಡು ಸಂಗತಿಗಳು ಉಂಟಾಗಿವೆ. ಮುಖ್ಯವಾಗಿ ಕೃಷಿಯಲ್ಲಿ ದೀರ್ಘ ಸಮಯದಿಂದ ಬಂಡವಾಳದ ಅಭಿವೃದ್ಧಿ ಇದ್ದು ಸ್ವಾತಂತ್ರ‍್ಯನಂತರ ಭೂಸುಧಾರಣೆ ಜರುಗಿತು. ಹೆಚ್ಚಿನ ಒಬಿಸಿಗಳು ಜಮೀನು ಹೊಂದುವ ರೈತರಾದರು. ಹೀಗೆ ಅವಲಂಬನೆ ಮತ್ತು ಜೀತ ಕುಂಠಿತಗೊಂಡಿತು. ಒಬಿಸಿಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದಿಂದಾಗಿ ಹೊಸ ವರ್ಗಗಳು ರೂಪುಗೊಂಡವು. ದಲಿತರಲ್ಲಿ ಮೀಸಲಾತಿಯಿಂದ ಸಣ್ಣಪ್ರಮಾಣದ್ದಾದರೂ ತಕ್ಕಮಟ್ಟಿನ ಬದಲಾವಣೆ ಜರುಗಿತು. ಭೂಸುಧಾರಣೆ ಕೆಲವೊಮ್ಮೆ ಉಳುವವರಿಗೆ ಭೂಮಿ ದೊರಕದೆ ದಲಿತರ ಸಮಷ್ಟಿ ಅಭಿವೃದ್ಧಿಗೆ ಹಿಂದೇಟು ಉಂಟಾಯಿತು. ಹೆಚ್ಚಿನ ದಲಿತರಿಗೆ ಭೂಮಿ ದೊರೆಯದಾಯಿತು. ಪರಿಣಾಮವಾಗಿ ಈ ಜಾತಿ ಸಮುದಯಗಳೊಳಗೆ ವರ್ಗ ಮತ್ತು ವರಮಾನದ ಭಿನ್ನತೆ ಉಂಟಾಗುತ್ತಿದ್ದು ಇದರಿಂದ ಸಾಂಪ್ರದಾಯಿಕ ನಾಯಕತ್ವದ ಹಿಂದಿನ ಅಧಿಕಾರ ರಚನೆ ಮರೆಯಾಗಿದೆ. ಅದೇ ಉದ್ಯೋಗ ಮತ್ತು ಕೌಶಲ್ಯ ಹಾಗೂ ವರಮಾನ ಮಟ್ಟದಿಂದ ಆಂತರಿಕವಾಗಿ ಸಮಾನಾಂತರವಾಗಿದ್ದು ಚಾರಿತ್ರಿಕವಾಗಿ ಇವು ಜಾತಿಗಳಾಗಿ ಸಂಘಟಿತಗೊಂಡಿತ್ತು. ಉದ್ಯೋಗ ಮತ್ತು ಧಾರ್ಮಿಕ ಅಂತಸ್ತು ಮಧ್ಯೆ ಉಲ್ಲಂಘಿಸಲಾಗದಂತಹ ವಿಘಟನೆಯಿಂದ ಪರಿಣಾಮಕಾರಿ ಸನ್ನಿವೇಶಗಳುಂಟಾದವು. ದಮನಿತರಲ್ಲಿ ಇದು ಜನಾಂದೋಲನಕ್ಕೆ ಉತ್ತೇಜನ ನೀಡಿತು. ವಿಭಿನ್ನ ಉದ್ಯೋಗ ಮತ್ತು ವಿಭಿನ್ನ ಕೌಶಲ್ಯಕ್ಕೆ ದಾರಿಮಾಡಿತು. ಈ ಬೆಳವಣಿಗೆಯೊಂದಿಗೆ ಜಾತಿಗಳು ಆಂತರಿಕವಾಗಿ ಅಸಮಾನವಾಗತೊಡಗಿದವು. ಸಾಂಪ್ರದಾಯಿಕ ವ್ಯವಸ್ಥೆಯಿಂದ ದೂರ ಹೋಗುವ ಈ ಆಂದೋಲನದಲ್ಲಿ ವಿಭಿನ್ನ ಜಾತಿಗಳಲ್ಲಿ ವಿಭಿನ್ನ ಸಂಗತಿಗಳುಂಟಾಗಿ ಈ ಜಾತಿ ಸಮುದಾಯಗಳೊಳಗೆ ಹೊಸ ವರ್ಗಗಳು ರೂಪುಗೊಂಡಿವು. ಜಾಗತಿಕ ಬಂಡವಾಳದ ಬೆಳವಣಿಗೆಯು ಹಿಂದಿನ ಅಧಿಕಾರಸ್ತಂಭಗಳಲ್ಲಿ ಭಿನ್ನತೆ ಮಾಡಿರುವುದರಿಂದ ಹಿಂದಿನ ಸಮುದಾಯಗಳ ಊರ್ಜಿತಕ್ಕೂ ದಾರಿ ಮಾಡುತ್ತಿವೆ. ವ್ಯಕ್ತಿಗಳ ವ್ಯಕ್ತಿಗತ ಹಿತಾಸಕ್ತಿ ಮಧ್ಯೆಯೂ ಭಾರತದಲ್ಲಿ ಇಂಥವು ನಡೆದಿಲ್ಲ. ಮುಂದೆ ಆಗುವ ಸೂಚನೆಯೂ ಇಲ್ಲ.

ಜಾತಿ ಆಧಾರಿತ ಸಮುದಾಯಗಳಲ್ಲಿನ ವರ್ಗ ರೂಪಿಕೆಯಿಂದ ಒಂದು ಮಧ್ಯಮ ವರ್ಗ ರಚನೆಯಾಗಿ ಗಟ್ಟಿಗೊಳ್ಳುತ್ತಿದೆ. ಈ ಆಂತರಿಕ ವರ್ಗ ರಚನೆಯಿಂದ ಜಾತಿಗಳ ಏಕತೆಯಾಗುತಿದೆ. ವರ್ಗ ರಚನೆಯು ಜಾತಿ ಸಮುದಾಯಗಳ ವಿಘಟನೆ ಬದಲು ಐಕ್ಯತೆಗೆ ದಾರಿಯಾಗುವಂತಹ ವೈರುಧ್ಯಕ್ಕೆ ಒತ್ತು ನೀಡಿದೆ. ಈ ಹೊಸದಾಗಿ ರೂಪುಗೊಳ್ಳುತ್ತಿರುವ ಮಧ್ಯಮವರ್ಗ ಈಗಾಗಲೇ ಹೆಚ್ಚಾಗಿ ಬ್ರಾಹ್ಮಣರಿಂದೊಡಗೂಡಿದ ಸ್ಥಾಪಿತ ಮಧ್ಯಮವರ್ಗಕ್ಕಿಂತ ಭಿನ್ನವಾಗಿದ್ದು ಈ ಸಮುದಾಯಗಳನ್ನು ಪ್ರಜಾಸತ್ತಾತ್ಮಕ ಚುನಾವಣಾ ಅಧಿಕಾರ ಸ್ಪರ್ಧೆಗೆ ಬ್ಲಾಕ್ ಗಳನ್ನಾಗಿ ಒಟ್ಟುಗೂಡಿಸುತ್ತದೆ. ಸ್ಥಾಪಿತ ಮಧ್ಯಮವರ್ಗದಿಂದ ಭಿನ್ನವಾಗಿ ದಮನಿತ ವರ್ಗದಿಂದ ರೂಪುಪಡೆಯುತ್ತಿರುವ ಈ ಮಧ್ಯಮವರ್ಗವನ್ನು ನವ ಮಧ್ಯಮವರ್ಗವೆನ್ನಬಹುದು.

ವಿಭಿನ್ನ ಮತ್ತು ಹಿಂದಿನ ರೀತಿಯ ಜಾತಿಯ ಸಾಂಸ್ಥಿಕತೆಯನ್ನು ಬಿಟ್ಟು ಆಂತರಿಕ ಏಕತೆಗೆ ಸಾಗುವ ಪ್ರಕ್ರಿಯೆ ವಿಶಿಷ್ಟ ಆಂದೋಲನದ ಜೊತೆಗೆ ಸಾಗುವುದು. ಸಮುದಾಯಗಳೊಳಗೆ ತಾನಾಗಿ ಉಂಟಾಗುವ ಈ ವರ್ಗರಚನೆ ಮತ್ತು ಪರಿಣಾಮದಿಂದ ವ್ಯಕ್ತಿಗತವಾದ ಆಸಕ್ತಿಗಳ ವೈರುಧ್ಯ ಫಲನೀಡಲಿಲ್ಲ. ವರ್ಗ ಪ್ರವೃತ್ತಿಯು ರಾಜಕೀಯ ಸ್ಥಾನವಾಗಿ ಪ್ರತಿಪಾದನೆಯಾಗುವ ಸಾಧ್ಯತೆ ಕುಂಠಿತವಾಯಿತು. ಅದರ ಬದಲು ವಿಸ್ತೃತವಾದ ಜಾತಿ ಗುಂಪುಗಳು ಮೊದಲಿಗಿಂತಲೂ ಅತಿಯಾಗಿ ಗಟ್ಟಿಗೊಳ್ಳತೊಡಗಿದವು.

ಪ್ರಜಾಸತ್ತೆ ಪ್ರಕ್ರಿಯೆಗೆ ಪರಿಣಾಮ ಬೀರುವಂತಹ ಎರಡು ರೀತಿಯ ಸ್ಪರ್ಧೆ ನಡೆಯುತ್ತದೆ. ಮೊದಲನೆಯದಾಗಿ ನವಮಧ್ಯಮವರ್ಗ ಬಿಳಿಕಾಲರ್ ಹುದ್ದೆ ಮತ್ತು ವೃತ್ತಿಪರ ಸ್ಥಾನಮಾನಗಳಿಗೆ ಹಂಬಲಿಸುತ್ತಾ ಈ ಮೂಲಕ ಸಮಾಜದಲ್ಲಿ ಘನತೆ ಮತ್ತು ಅಂತಸ್ತುಗಳಿಸಲು ದಾರಿ ಎಂದು ಭಾವಿಸಿದೆ. ಇತರ ಬ್ರಾಹ್ಮಣರಿಂದೊಡಗೂಡಿದ ಸ್ಥಾಪಿತ ಮಧ್ಯಮವರ್ಗದವರಿಗಿದ್ದಂತಹ ಅಂತಸ್ತು ಅಥವಾ ಸಾಮಾಜಿಕ ಆಸ್ತಿ ಅವರಿಗಿಲ್ಲ. ಸ್ಥಾಪಿತ ಮಧ್ಯಮವರ್ಗದ ವೃತ್ತಿಪರ ಏಕಸ್ವಾಮ್ಯತೆಯನ್ನು ಮುರಿಯುವುದರಲ್ಲಿ ಅವರ ಸ್ವಯಂ ಘನತೆಯ ನಿರ್ಣಾಯಕವಾದುದು. ಹೀಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಅಗತ್ಯವಾಯಿತು.

ಎರಡನೆಯದಾಗಿ ಅಧಿಕಾರದಲ್ಲಿ ಪಾಲುದಾರಿಕೆಗಾಗಿ ತೀಕ್ಷ್ಣ ಸ್ಪರ್ಧೆ. ಸಂಖ್ಯಾಬಲಕ್ಕೆ ಸಮವಾಗಿ ಅಧಿಕಾರದಲ್ಲಿ ಸ್ವಯಂ ಪ್ರಾತಿನಿಧ್ಯ, ಸಚಿವ ಖಾತೆಗಳ ಪಡೆಯುವಿಕೆ ಇತ್ಯಾದಿಗಳೆಲ್ಲವನ್ನು ಸವಲೀಕರಣವೆನ್ನಲಾಗುತ್ತದೆ. ಹಾಗಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ದಮನಿತ ಸಮುದಾಯಗಳ ರಾಜಕಾರಣ ಸ್ವಯಂ ವ್ಯಾಖ್ಯೆಯಾಗುತ್ತಿದೆ.

ಕೃಷಿ  ರಂಗದಲ್ಲುಂಟಾಗುವ ವಿಭಿನ್ನ ಬೆಳವಣಿಗೆಯ ಸಂಕ್ಷಿಪ್ತ ಚಿತ್ರಣ ನೋಡೋಣ. ಉಳುವವನಿಗೆ ಭೂಮಿ ಒದಗಿಸುವ ಭೂಮಸೂದೆಯಂತಹ ಪರಿಸ್ಥಿತಿಯನ್ನು ಊಹಿಸಿ ಕೃಷಿ ಕಾರ್ಮಿಕರು ಅಥವಾ ಅಭದ್ರ ಗೇಣಿದಾದರು ಭೂಮಿ ಪಡೆದರು. ಈ ಮಸೂದೆಯ ಮೂಲ ಆಶಯ ಮತ್ತು ಜಾರಿಗೆ ಹೆಚ್ಚಿನ ಭುಮಿಯು ಗೇಣಿದಾರರಾದ ಮಧ್ಯಮ ಮತ್ತು ಹಿಂದುಳಿದ ಜಾತಿಗಳಿಗೆ ದೊರಕಿತು. ಅದು ಇತರ ಉಳುಮೆಗಾರರಾದ ದಲಿತರಿಗೆ ಹೆಚ್ಚಾಗಿ ದೊರಕಿದ್ದರೆ ಪರಿಣಾಮಗಳೇನಾಗುತ್ತಿದ್ದವು. ಈ ಜಾತಿ ಸಮುದಾಯಗಳೊಳಗಿನ ಹಿತಾಸಕ್ತಿಯ ನಿಲುವು, ಸಮುದಾಯ ರಚನೆ ಮತ್ತವುಗಳ ಮಧ್ಯದ ಸೆಣಸಾಟ ಹಾಗೂ ಇವುಗಳೊಳಗಿನ ವರ್ಗರಚನೆ ಭಿನ್ನವಾಗಿರುತ್ತಿತ್ತು ಎಂಬುದು ಸ್ಪಷ್ಟ. ಸಂಘಟಿತ ವಿಧ ಮತ್ತು ಪರಿಣಾಮವಾಗಿ ಜಾತಿ ಆಧಾರಿತ ಸಮುದಾಯಗಳಾದ ಜಾಡರು, ಯಾದವರು, ಕುರ್ಮಿಗಳು, ಮರಾಠರು ಮುಂತಾದವರ ಮೇಲುಗೈಯನ್ನು ಊಹಿಸಲಾಗದು. ಈ ವಾದವನ್ನು ಮುಂದುವರಿಸಿದ್ದರೂ ಮುಖ್ಯವಾಗಿ ಗಮನಿಸಬೇಕು. ಕೃಷಿ ಆರ್ಥಿಕತೆಯಲ್ಲಿನ ಉತ್ತಾದನಾ ಸಂಬಂಧಗಳು ಮತ್ತು ಭಾರತದಲ್ಲಿ ಪ್ರಜಾಸತ್ತೆಯ ಆಂತರಿಕ ಗತಿಶೀಲತೆ ಮತ್ತದರ ತಿರುವಿಗೆ ಈ ವಾದ ಪುಷ್ಟಿನೀಡುತ್ತವೆ. ಈ ಕಾರಣದಿಂದಾಗಿ ಭಾರತದ ಪ್ರಜಾಸತ್ತೆಯ ಎಲ್ಲ ಚರ್ಚೆಯ ತಿಳುವಳಿಕೆಯ ಹಿನ್ನೆಲೆ ಇದನ್ನು ಆಧರಿಸಿದೆ ಎಂಬುದಾಗಿ ಒತ್ತಿ ಹೇಳುತ್ತೇನೆ. ನಮ್ಮ ಪ್ರಜಾಸತ್ತೆ ಬೆಳವಣಿಗೆಯ ಹಾದಿಯನ್ನು ವಿಶ್ಲೇಷಿಸಲು ಬೇರೆ ದಾರಿ ಇಲ್ಲವೆಂದೇನಲ್ಲ. ಅದು ಆಳದಲ್ಲಿ ಭಾರತದ ಸಮಾಜವನ್ನು ಕಾಡುವ ಬೂರ್ಶ್ವಾ ಪರಿಸ್ಥಿತಿಯ ವಿಶಿಷ್ಟತೆಯಿಂದ ನಿಭಾಯಿಸಿಲ್ಪಡುತ್ತದೆ. ಯಾವುದೇ ಸಾಮಾಜಿಕ ರಚನೆ ಅಸ್ತಿತ್ವಗೊಳ್ಳುವ ಪೂರ್ವದಲ್ಲಿ ಪರಿವರ್ತನೀಯ ತಂತ್ರಗಳನ್ನು ಅನುಸರಿಸಲು ಮತ್ತು ಜನಾಂದೋಲಗಳ ಸ್ವರೂಪದನ್ನು ಮುನ್ನಡೆಸಲು ಸಾಕಷ್ಟು ಸಾಧ್ಯತೆಗಳಿವೆ.

ಜಾತಿಗಳೊಳಗಿನ ವರ್ಗರಚನೆ ಸಂಬಂಧಿಸಿ ಮೊದಲಿಗೆ ನವಮಧ್ಯಮ ವರ್ಗಗಳಲ್ಲಿ ಇದು ಏಕತೆಯ ಪ್ರಕ್ರಿಯೆಗೆ ಹಿಂಜರಿಯಿತು. ಜಾತಿಗಳು ಅವುಗಳ ಆಂತರಿಕ ಸತ್ವವನ್ನು ಕಳೆದುಕೊಳ್ಳುತಿರುವ ಗಮನೀಯ ಅಂಶವನ್ನು ಇಲ್ಲಿ ಗಮನಿಸಬೇಕಿದೆ. ಯಾದವರು, ಕುರ್ಮಿ ಅಥವಾ ಮಾದಿಗರು ಈಗ ಹೆಸರಿಗೆ ಮಾತ್ರ ಜಾತಿ ಎನ್ನುವಂತಾಗಿದ್ದಾರೆ. ಯಾಕೆಂದರೆ ವರ್ಣವ್ಯವಸ್ಥೆ ರಚನೆಯ ಎಲ್ಲ ರೂಢಿಗತ ಗುರುತುಗಳನ್ನು ತಿರಸ್ಕರಿಸಲಾಗಿದೆ. ಅವು ಸಮುದಾಯಗಳಾಗಿವೆ ಮತ್ತು ಒಂದು ಸಾಮಾಜಿಕ ರಾಜಕೀಯ ಸನ್ನಿವೇಶದಲ್ಲಿ ಪ್ರತಿಪಾದಿಸಲ್ಪಟ್ಟಾಗ ಅವು ಸಮುದಾಯಗಳೆಂದು ಗುರುತಿಸಿಕೊಳ್ಳುತ್ತವೆ. ಹೀಗಾಗಿ ಈ ಪದಕ್ಕೆ ಸ್ಥಿರವಾದ ವ್ಯಾಖ್ಯೆ ದೊರೆಯುವುದು ತುಸು ಕಷ್ಟ. ಸಮುದಾಯದ ಗಡಿಮಿತಿಗಳು ಸನ್ನಿವೇಶಕ್ಕೆ ತಕ್ಕಂತೆ ಭಿನ್ನಗೊಳ್ಳುತ್ತವೆ. ಉದಾಹರಣೆಗೆ ಹಿಂದೂಗಳ ದಬ್ಬಾಳಿಕೆಯ ವಿರುದ್ಧ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ತಮ್ಮನ್ನು ಸಮುದಾಯಗಳಾಗಿ ಪರಿಗಣಿಸಿ ಪ್ರತಿಕ್ರಿಯಿಸುವರು. ಆದರೆ ಸುನ್ನಿ ಮತ್ತು ಶಿಯಾ ಮಧ್ಯೆ ವಿವಾದ ತಲೆದೋರಿದಾಗ ಮುಸ್ಲಿಮರು ತಮ್ಮನ್ನು ಪ್ರತ್ಯೇಕ ಸಮುದಾಯಗಳಾಗಿ ಗುರುತಿಸಿಕೊಳ್ಳುತ್ತಾರೆ. ಇಂತಹ ಉದಾಹರಣೆಗಳು ಹೆಚ್ಚುತ್ತಲಿವೆ. ಉದಾಹರಣೆಗೆ ಹಬ್ಬದ ಸಂದರ್ಭದಲ್ಲಿ ಗ್ರಾಮದ ಜನರು ಒಟ್ಟಾಗಿ ಗುರುತಿಸಿಕೊಂಡರೆ, ಪಕ್ಕದ ಗ್ರಾಮದೊಂದಿಗಿನ ವೈಷಮ್ಯದ ಸಂದರ್ಭದಲ್ಲಿ ಭಿನ್ನರಾಗಿ ಗುರುತಿಸಿಕೊಳ್ಳುತ್ತಾರೆ. ವರ್ಣ ಸಿದ್ಧಾಂತ ಆಧರಿಸಿ ಜಾತಿಗಳೊಳಗಿನ ಯಾವುದೇ ಸಂಬಂಧವನ್ನು ಪರಿಗಣಿಸಿದೆ ಸಾಮೂಹಿಕವಾದ ಗುರುತಿಸುವಿಕೆ ಪ್ರಕ್ರಿಯೆಗೆ ಒಳಪಟ್ಟರೆ ಆವಾಗ ಜಾತಿ ಎನ್ನುವುದರ ಸಾಮಾಜಿಕ ಅಸ್ತಿತ್ವದ ಮಾದರಿ ಮುಂದುವರಿಯುವುದು ಕಷ್ಟ.

ಇದು ಹೆಚ್ಚಾಗಿ ರಾಜಕೀಯದಲ್ಲಿದೆ. ಇತರೆ ಲಕ್ಷಣಗಳು ಬದಲಾಗದೆ ಮುಂದುವರಿದರೂ ಪ್ರಜಾಸತ್ತಾತ್ಮಕ ರಾಜಕಾರಣದಲ್ಲಿ ಯಾವುದೇ ಸಂದರ್ಭದಲ್ಲೂ ವಿಧಿತವಾದ ಏಣಿಶ್ರೇಣಿಗಳು ಏರುಪೇರಾಗುತ್ತವೆ. ಪ್ರಚಲಿತವಿರುವ ವರ್ಣದ ಷರತ್ತುಗಳು ವರ್ಣ ಪದಕೋಶಗಳಾಗಿ ಸಾಮಾನ್ಯ ಹೇಳಿಕೆ ಮತ್ತು ಚರ್ಚೆಯ ಚೌಕಟ್ಟು ಪಡೆಯುತ್ತವೆ. ದಮನಿತ ಜಾತಿಗಳ ಆಂತರಿಕ ಉಲ್ಲೇಖ ಅಥವಾ ಸ್ವಯಂಪ್ರತಿಷ್ಠೆ ಮೇಲ್ವರ್ಗದೊಂದಿಗಿನ ಸಮಾನತೆಯ ಚಲನೆಗೆ ಹೆಚ್ಚಿನ ಸಹಕಾರಿಯಾಗದು. ಯಾಕೆಂದರೆ ಮೇಲ್ವರ್ಗದವರು ಸಾಮಾಜಿಕವಾಗಿ ವಿಧಿತವಾದ ಮಡಿವಂತರು. ಆದರೆ ಜಾತಿವ್ಯವಸ್ಥೆಯೊಳಗೆ ಜಾತಿಗಳು ಸಮಷ್ಟಿ ಸ್ವರೂಪದೆಂದು ಷರತ್ತುಗಳು ಯಾವತ್ತೂ ವ್ಯಾಖ್ಯಾನಿಸಲಾರವು. ಮೇಲ್ಜಾತಿಗಳು ಅಥವಾ ಬ್ರಾಹ್ಮಣರು ಮಾತ್ರ ತಾವು ಬ್ರಾಹ್ಮಣರೆಂದು ಅಥವಾ ಠಾಕೂರ್ ಗಳೆಂದು ಹೆಮ್ಮೆಯಿಂದ ಉಲ್ಲೇಖಿಸುತ್ತಾ ವರ್ಗ ಆಳ್ವಿಕೆಯ ಭಾಗವಾಗಿ ಇತರ ಜಾತಿಗಳ ನ್ಯೂನತೆಯತ್ತ ಬೊಟ್ಟುಮಾಡಿ ತಮ್ಮ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಳ್ಳುತ್ತಾರೆ.

ದಮನಿತ ಜಾತಿಗಳಿಂದ ರೂಪುಗೊಂಡ ಸಮುದಾಯಗಳು ಒಂದೆಡೆ ಸಮಾನತೆ ಮತ್ತು ಗುರುತಿಸುವಿಕೆಗಾಗಿ, ಇನ್ನೊಂದೆಡೆ ಬ್ರಾಹ್ಮಣರು ಹಾಗೂ ಸ್ಥಾಪಿತ ಮಧ್ಯಮ ವರ್ಗದ ಸವಲತ್ತುಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ತೀಕ್ಷ್ಣ ಮತ್ತು ಅಸಹ್ಯವಾದುದು ಯಾಕೆಂದರೆ ದಮನಿತರಲ್ಲಿ ಹೆಚ್ಚಿನವರು ಸಮಾನತೆಗೆ ಹಕ್ಕೊತ್ತಾಯ ಮಾಡಲು ಏನೆಲ್ಲ ಬೇಕೋ ಅವನ್ನು ಗಳಿಸಲು ಉತ್ಸುಕರಾಗಿರುವರು. ಹಾಗಾಗಿ ಈ ಕುರಿತ ಯಾವುದೇ ವರದಿ ಅಥವಾ ಚರ್ಚೆಯ ಬಗೆಗಿನ ತೀರ್ಮಾನಗಳ ಬಗ್ಗೆ ಎಚ್ಚರ ವಹಿಸಬೇಕು. ಹಾಗೆಯೇ ಬ್ರಾಹ್ಮಣರೊಂದಿಗಿದ್ದ ಸಂಬಂಧಗಳ ಹಿಂದಿನ ನೆನಪುಗಳನ್ನು ಸುಡಬೇಕಾದ ಅಗತ್ಯವಿದೆ.

ಇವೆಲ್ಲ ಸಾಮೂಹಿಕ ನಿರ್ಬಂಧ ಮತ್ತು ಪ್ರಜಾಸತ್ತೆಯ ಹವಣಿಕೆಗೆ ಹತ್ತಿರದ ಸಂಬಂಧ ಹೊಂದಿವೆ. ಇಲ್ಲಿರುವ ಸಾಮೂಹಿಕ ನಿರ್ಬಂಧದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ದೆಡೆಗಿನ ಸಣ್ಣ ನಿಲುವು ಕೂಡ ಗುರುತಿಸುವಿಕೆಗೆ ದಾರಿ ಮಾಡಬಹುದು. ಗುರುತಿಸುವಿಕೆ ಹೆಗೆಲ್ ತಿಳಿಸಿದಂತೆ ವ್ಯಕ್ತಿಗಳ ಮಧ್ಯೆ ಒಂದು ಪರಸ್ಪರ ಆದರ್ಶದ ಸಂಬಂಧ. ಹಾಗಾಗಿ ಗುರುತಿಸುವಿಕೆ ಕರೆಯು ಒಂದು ಸಮಾನತೆಗಾಗಿನ ಕರೆಯಾಗಿದೆ. ಮತ್ತದು ಪರಸ್ಪರದ ಭಿನ್ನತೆಯನ್ನು ಕಡೆಗಣಿಸಬೇಕೆಂದಿಲ್ಲ. ಹಾಗಾಗಿ ಗುರುತಿಸಿಕೊಳ್ಳುವುದು ಮತ್ತು ಇನ್ನೊಬ್ಬರನ್ನು ಗುರುತಿಸುವ ಮೂಲಕ ವ್ಯಕ್ತಿಯನ್ನು ರೂಪಿಸಿ ಸ್ವತಃ ಕಲ್ಪನೆಯನ್ನು ತರುವುದು. ಹಾಗಾಗಿ ಇದರಿಂದ ಗುರುತಿಸುವಿಕೆಯಿಂದ ನಿರಾಕರಣೆಯ ವ್ಯಕ್ತಿತ್ವಕ್ಕೆ ವಿರೋಧವಾಗಿದೆ. ಹೆಗೆಲ್ ಸೂಚಿಸುವ ಪ್ರಕಾರ ಒಂದು ಅಸ್ಮಿತೆಯು ರೂಪು ಸಮಾಜದಲ್ಲಿ ಸಂಭಾಷಣೆ ಪ್ರಕ್ರಿಯೆಯಾಗಿದೆ. ಜಾತಿಯ ಸಂದರ್ಭದಲ್ಲಿ ಅಸ್ಮಿತೆಯ ನಿರ್ಮಾಣ ಮತ್ತು ಅಸ್ಮಿತೆಯ ರಾಜಕಾರಣ ಮಧ್ಯದಭಿನ್ನತೆಯ ಪ್ರಾಮುಖ್ಯತೆ ಕುರಿತು ಸ್ಪಷ್ಟತೆಯಿರಬೇಕು. ಅಸ್ಮಿತೆ ನಿರ್ಮಾಣವು ಒಂದು ಸ್ವಾಯತ್ತ ಪಾತ್ರದಾರರಾಗಲು ಅಗತ್ಯವಾದರೆ ಅಸ್ಮಿತೆ ರಾಜಕಾರಣವು ಜಾತಿಯ ಅಸ್ಮಿತೆ ಅಥವಾ ಚಹರೆಗಳನ್ನು ಕಾರ್ಯರೂಪಕ್ಕೆ ತರುವುದು. ಹಿಂದಿನ ನಿರ್ಬಂಧಿತ ಸ್ವರೂಪದ ಮಧ್ಯೆಯೂ ಸಮಾನತೆಗಾಗಿನ ಹವಣಿಕೆ ಅಗತ್ಯವಾಗಿ ಒಂದು ಸಾಮೂಹಿಕ ರೂಪ ತಳೆಯುತ್ತಿದೆ ಎಂಬುದನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಈ ಮೇಲಿನ ಹಿನ್ನೆಲೆಯಲ್ಲಿ ಕೆಳಜಾತಿಗಳ ಸಮಾನತೆಗಳ ಗುರುತಿಸುವಿಕೆಯನ್ನು ಭಾರತದಲ್ಲಿ ಮೇಲ್ಜಾತಿಗಳು ನಿರಾಕರಿಸಿದುದರಿಂದ ಪ್ರಜಾಸತ್ತೆಯ ಮೌಲ್ಯಗಳು ಹೆಚ್ಚಾಗಿ ಅರ್ಥಹೀನವಾಗಲು  ಕಾರಣವಾಗಿವೆ.

ಹಾಗಾಗಿ ನಾನು ಇದನ್ನು ಬೂರ್ಶ್ವಾ ಸಮಾನತೆಗಾಗಿನ ಹೋರಾಟವೆಂದಿರುವುದು ಮತ್ತು ಬೂಶ್ವಾ ಪದ ಬಳಕೆಯಲ್ಲಿ ಯಾವುದೇ ಪೂರ್ವಗ್ರಹವಿಲ್ಲ. ಇದನ್ನು ತತ್ವಾಧಾರಿತ ಸಮಾನತೆ ಬದಲು ನ್ಯಾಯಸಂಬಂಧಿವೆನ್ನಬಹುದು, ನ್ಯಾಯಸಂಬಂಧಿ ಪದವನ್ನು ಮಾರ್ಕ್ಸ್ ತನ್ನ ಮೊದಲಿನ ಬರವಣಿಗೆಗಳಲ್ಲಿ ಬಳಸಿದ್ದಾರೆ. ಈ ತತ್ವ ಆಧಾರಕ್ಕೆ ಸಂಬಂಧಿಸಿದಂತೆ ದಮನಿತರ ರಾಜಕಾರಣದ ಸಂಗತಿಯನ್ನು ನೋಡೋಣ. ಕಾರ್ಮಿಕರು ರಾಜಕಾರಣದ ಸಂದರ್ಭದಲ್ಲಿ ಕಂಡುಬರುವಂತೆ ಅವರ ಸಾಮಾಜಿಕ ನ್ಯಾಯದ ವಿಷಯಸೂಚಿಯಲ್ಲಿ ಯಾವುದೇ ಸತ್ವವುಳ್ಳ ಆರ್ಥಿಕ ಅಂಶಗಳಿರುವುದಿಲ್ಲ. ಈ ರಾಜಕಾರಣವು ತತ್ವಾಧಾರಿತ ಸಮಾನತೆಗೆ ಹೋರಾಡುವುದಿಲ್ಲ. ಕಾನ್ಸಿರಾಮ್ ಭೂಸುಧಾರಣೆ ಬಗೆಗೆ ಮಾತನಾಡುವುದಿಲ್ಲ. ಈ ಹಿಂದೆ ಬ್ರಾಹ್ಮಣರು ಇತರರ ಮೇಲೆ ಅಧಿಕಾರ ಚಲಾಯಿಸಿದ ರೀತಿಯಲ್ಲೇ ದಲಿತು ಕೂಡ ಅಧಿಕಾರ ಬಯಸುತ್ತಿದ್ದಾರೆ. ಇಂಥ ಬೇಡಿಕೆ ಪ್ರಜಾತಂತ್ರದ ಮುನ್ನಡೆಗಾಗಿಯೇ ಎನ್ನುವುದು ಇಲ್ಲಿ ಕಳಕಳಿಯ ವಿಷಯವಿಲ್ಲ. ಆದರೆ ಇದು ಭಾರತ ಪ್ರಜಾಸತ್ತೆಯಲ್ಲಿ ಖಂಡಿತಾಗಿಯೂ ಒಂದು ದೊಡ್ಡ ಪಲ್ಲಟವನ್ನು ತೋರಿಸುತ್ತದೆ. ಭಾರತದ ರಾಜಕಾರಣದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಬದ್ಧತೆಗೆ ಇಂಥ ಬೂರ್ಶ್ವಾ ಸಮಾನತೆಯ ಆಂದೋಲನವು ಹೊಸ ವಿಧದ ನೆಲೆಯನ್ನು ಸೂಚಿಸುತ್ತದೆ. ಮತ್ತು ಇದು ಪ್ರಜಾಸತ್ತೆಯ ಪುನರ್ ಗಟ್ಟಿಗೊಳಿಸುವಿಕೆಯ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ. ಪಶ್ವಿಮದಲ್ಲಿದ್ದಂತೆ ಅಸಮಾನ ವ್ಯಕ್ತಿಗಳ ಮಧ್ಯೆ ಹೋರಾಟ ನಡೆಯುತ್ತಿಲ್ಲ. ಸ್ವಾತಂತ್ರ್ಯ ಸಮಯ ಸಂದರ್ಭದಲ್ಲಿ ದುತ್ತನೆ ಉಂಟಾದ ಸ್ಪರ್ಧಾತ್ಮಕ ರಾಜಕಾರಣದಂತೆ ಈ ಹೋರಾಟವು ಸಾಮೂಹಿಕವಾಗಿ ನಿರ್ಬಧಿತರಾಗಿದ್ದು ಮತ್ತು ನ್ಯಾಯಬದ್ಧ ಸ್ವಾತಂತ್ರ್ಯದಲ್ಲಿರುವ ದಮನಿತ ಸಮುದಾಯಗಳಿಂದ ಅವರ ಮಧ್ಯೆಯೇ ಸಂಭವಿಸುತ್ತದೆ. ಮೇಲ್ಜಾತಿಗಳ ಮತ್ತು ಇಂಗ್ಲಿಷ್ ಶಿಕ್ಷಿತ ಸೌಲಭ್ಯ ಪಡೆದ ಸ್ಥಾಪಿತ ಮಧ್ಯಮವರ್ಗದಿಂದಾಗಿ ಅವಕಾಶಗಳಿಗೆ ವಿಘ್ನವುಂಟಾಗಿದೆ ಎಂದವರು ಕಂಡುಕೊಂಡಿದ್ದಾರೆ.

ದುಡಿಯುವ ವರ್ಗದ ಹೊರಗೆ ಎಲ್ಲ ಸಾಮೂಹಿಕ ಪ್ರತಿಪಾದನೆಗಳು ಹಿಂದಿನ ಸಾಮೂಹಿಕ ನಿರ್ಬಂಧಗಳ ಮಿತಿಯಿಂದ ನಿಯಂತ್ರಿಸಲ್ಪಡುವುದರಿಂದ ನಮ್ಮಲ್ಲಿನ ಎಲ್ಲ ಹೋರಾಟಗಳ ಬಗೆಗೆ ಯಾವಾಗಲೂ ಮಾಹಿತಿ ನೀಡತಕ್ಕ ಒಂದು ಸಮುದಾಯವಾದ ನಿಲುವಿನ ಗುರುತಿಸುವಿಕೆ ಬಹಳ ಮುಖ್ಯವಾದುದು. ಸಮುದಾಯಗಳಿಂದ ಕಳಚಿಕೊಳ್ಳಬಯಸುವವರನ್ನು ಆ ಸಮುದಾಯಗಳೇ ಕಠಿಣವಾಗಿ ಟೀಕಿಸುವುವು. ಆದ್ದರಿಂದ ಸಮುದಾಯದಲ್ಲಿನ ವ್ಯಕ್ತಿ ಒಬ್ಬ ಹಕ್ಕುದಾರ ವ್ಯಕ್ತಿಯಾಗಿ ಸಮುದಾಯ ಒತ್ತಡದಿಂದ ರೂಪುಗೊಳ್ಳುತ್ತಾನೆ.

ಸಮಾನ ಮನಸ್ಕ ಜಾತಿಗಳ ಏಕತೆಯ ವಿಸ್ತೃತ ಸಮಷ್ಟಿಗೆ ಅವಕಾಶ ಕಲ್ಪಿಸಿ ರಾಜಕೀಯ ಅಧಿಕಾರದ ಚಲನೆಯಿಂದ ವರ್ಣವ್ಯವಸ್ಥೆಯ ಸಂಬಂಧಗಳನ್ನು ಬುಡಮೇಲುಗೊಳಿಸುವುದು ದಮನಿತರಲ್ಲಿನ ಜಾತಿ ಬಗೆಗಿನ ನಿಲುವಾಗಿದೆ. ಕೆಲವೊಮ್ಮೆ ಆರೋಪಿಸುವಂತೆ ಜಾತಿ ಸಂವೇದನೆ ಇಲ್ಲಿ ಜಾತೀಯತೆಗಿಂತ ದೂರವಾದುದು. ಈ ಆರೋಪವು ಮೇಲ್ಮೈ ಲಕ್ಷಣಗಳ ಅತಿಯಾದ ಮೌಲ್ಯಮಾಪನಗಳನ್ನು ಆಧರಿಸಿದೆ ಮತ್ತು ಇದು ಭಾರತ ರಾಜಕಾರಣದ ಆಳವಾದ ಪ್ರಕ್ರಿಯೆಗಳ ಆಂತರಿಕ ತರ್ಕದ ಬಗೆಗೆ ಗಮನ ಹರಿಸಿಲ್ಲ. ಪಶ್ಚಿಮದಲ್ಲಿ ಬಂಡವಾಳವಾದದೊಂದಿಗೆ ಆದಿಮ ಬಂಧದ ಸಮುದಾಯಗಳು ನಿಧಾನವಾಗಿ ವಿಸರ್ಜಿತಗೊಂಡು ರಾಷ್ಟ್ರವೆಂಬ ಒಂದು ಉನ್ನತ ಬಂಧುತ್ವದ ಜೊತೆ ಗುರುತಿಸಿಕೊಳ್ಳುವ ಅಭಿವೃದ್ಧಿ ಮಾದರಿಯನ್ನು ಎಡಪಕ್ಷಗಳು ಇಲ್ಲಿ ಆಶಿಸುವುದು ಕಷ್ಟ. ಬಂಡವಾಳವಾದವು ತೃತೀಯ ಜಗತ್ತಿನಲ್ಲಿ ಬೂರ್ಶ್ವಾ ಪ್ರಜಾಸತ್ತಾತ್ಮಕ ಆಶೋತ್ತರನ್ನು ಸಾಕಾರಗೊಳಿಸಲು ಸಮುದಾಯಗಳನ್ನು ಊರ್ಜಿತ ಪಡಿಸುವಲ್ಲಿ ಯಶಸ್ವಿಯಾಗಿಲ್ಲ. ಇವು ಸಮರ್ಥ ರಾಜಕೀಯ ಶಕ್ತಿಗಳಾಗಿ ಬಹಳ ಕಾಲದವರೆಗೆ ಅಸ್ತಿತ್ವದಲ್ಲಿರುವುದು. ಹಾಗಾಗಿ ಮೂಲಜಿಜ್ಞಾಸು ಕ್ರಮಗಳಿಗಾಗಿ ಸಂದರ್ಭಕ್ಕೆ ತಕ್ಕುದಾದ ತಂತ್ರಗಳನ್ನು ಅಳವಡಿಸಬೇಕಿದೆ.

ಮಂಡಲ್ ನಂತರ ಸಾಮಾಜಿಕ ಸಮತೋಲನ ಲೆಕ್ಕಾಚಾರದಲ್ಲಿ ಈ ಆಂದೋಲನವು ಇನ್ನಷ್ಟು ಮಬ್ಬಾಯಿತು. ಬ್ರಾಹ್ಮಣ, ಠಾಕೂರ್ ಮುಂತಾದ ನಿರೂಪಿತ ಹಿತಾಸಕ್ತಿಗಳೆಡೆಗೆ ಸ್ಥಾಪಿತ ಮಧ್ಯಮ ವರ್ಗದ ಪ್ರಜ್ಞೆ ಕೂಡ ತುರ್ತಾಗಿ ಬದಲಾವಣೆ ಹೊಂದುತ್ತಾ ಇದೆ. ಸಾಂಪ್ರದಾಯಿಕ ಯಾಜಮಾನ್ಯದ ಮಧ್ಯಮವರ್ಗ ಯಾವಾಗಲೂ ತನ್ನ ಸೌಲಭ್ಯಗಳ ಈಡೇರಿಕೆಯು ಸಾಧನೆಗಳ ಹಿನ್ನೆಲೆಯಲ್ಲಿ ಆಯಿತೆಂದು ಕಲ್ಪಿಸುತ್ತದೆ ಮತ್ತು ಸಾಮಾಜಿಕ ಅಸ್ತಿತ್ವಕ್ಕೆ ಜಾತಿಯಾಚೆಗೆ ಮೀರಿರುವಂತೆ ನಂಬುತ್ತದೆ. ಜಾತಿ ಪ್ರಜ್ಞೆಯಿಂದ ಸ್ವಯಂಸ್ಫೂರ್ತಿಗೊಂಡ ಒಳನೋಟ ಈಗ ಭ್ರಮೆಯಂತೆ ತೋರುತ್ತಿರುವುದು. ಕಳೆದ ದಶಕದಿಂದ ನಿಧಾನವಾಗಿ ಮರೆಯಾಗಿ ಸಾಮಾಜಿಕ ಏಣಿಶ್ರೇಣಿ ಮೇಲಕ್ಕೇರುವ ನಿರಂತರವಾದ ಆಶಯವನ್ನು ವ್ಯಕ್ತಪಡಿಸುತ್ತದೆ. ಏಕರೂಪದ ಮೇಲ್ಜಾತಿ ಪ್ರಜ್ಞೆಯ ಬದಲು ಈಗ ಬ್ರಾಹ್ಮಣ, ಬನಿಯಾ ಇತ್ಯಾದಿ ಪ್ರತ್ಯೇಕ ಪ್ರಜ್ಞೆರೂಪುಗೊಳ್ಳುತ್ತಿದ್ದು ಇವು ಒಂದಕ್ಕೊಂದು ಹಾಸುಹೊಕ್ಕಾಗಿವೆ. ಬ್ರಾಹ್ಮಣ ಮತ್ತು ಬನಿಯಾ ಹಿಂದುತ್ವದೊಳಗೆ ಇನ್ನಷ್ಟು ಹತ್ತಿರದಲ್ಲಿದೆ. ಹೀಗಾಗಿ ಸೌಲಭ್ಯವಂತರೇ ಹೊಸ ತೀವ್ರತೆಯೊಂದಿಗೆ ಎದ್ದು ಕೂತಿದ್ದಾರೆ.

ಈ ಪ್ರಕ್ರಿಯೆಯನ್ನು ಸುಲಭವಾಗಿ ಅರ್ಥೈಸಲು ವಸಾಹತು ಸಂದರ್ಭದಿಂದಲೂ ಸ್ಥಾಪಿತ ಮಧ್ಯಮವರ್ಗವು ಹೆಚ್ಚಾಗಿ ಮೇಲ್ಜಾತಿಗಳಿಂದ ತುಂಬಿತ್ತು ಎಂಬುದನ್ನು ನೆನಪಿಸಬೇಕಿದೆ. ಹೀಗಾಗಿ ಆಸ್ತಿ, ಘನತೆ ಮತ್ತು ಅದರ ಅಂತಸ್ತಿನಿಂದ ಅಧಿಕಾರ ಇವೆಲ್ಲ ಈ ಪ್ರಕ್ರಿಯೆಯಲ್ಲಿ ಪಾರಂಪರ‍್ಯವೆನಿಸಿದೆ. ಆರ್ಥಿಕತೆ, ನೌಕರಶಾಹಿ ಮತ್ತು ಸಾರ್ವಜನಿಕ ಜೀವನದ ಇತರ ಸಂಸ್ಥೆಗಳಲ್ಲಿ ಮಧ್ಯಮವರ್ಗಗಳ ಸ್ಥಾಪಿತ ಯಾಜಮಾನ್ಯವು ಜಾತಿ ಅಗತ್ಯದ ಕುರಿತು ಯೋಚಿಸುವ ಬದಲು ಜಾತಿಯ ಗೋಡೆಗಳನ್ನು ಮೀರಿದೆ ಎನ್ನುವಂತೆ ಪ್ರಜ್ಞಾಪೂರ್ವಕ ಮತ್ತು ಅಭ್ಯಾಸಬಲದಿಂದ ಮಾತನಾಡುತ್ತಿದೆ. ಈ ಪ್ರಜ್ಞೆ ಬದಲಾಗಿದೆ ಈಗ ಹಲವು ಮೇಲ್ಜಾತಿಗಳಂತೆ ಯಾವುದೇ ಮಾರ್ಗದಲ್ಲಾದರೂ ತಮ್ಮ ಸವಲತ್ತುಗಳನ್ನು ರಕ್ಷಿಸಿಕೊಳ್ಳಬೇಕೆಂದು ಅವರು ಹಾತೊರೆಯುತ್ತಾರೆ. ಪ್ರತಿಭೆ ಮತ್ತು ದಕ್ಷತೆ ಯಾವುದೇ ಆಧುನಿಕ ಸಮಾಜದಲ್ಲಿ ಪ್ರಾಮುಖ್ಯವಾಗಿದ್ದು ಸಾಮಾಜಿಕವಾಗಿ ತುಳಿಯಲ್ಪಟ್ಟವರಿಗೆ ಮೀಸಲಾತಿಯು ನಿರ್ಣಾಯಕವಾದುದು. ಸಾಮಾಜಿಕ ಕಲ್ಯಾಣ ಮತ್ತು ಸಮತೆಯ ವಿಸ್ತೃತ ಪರಿಗಣನೆಯಿಂದ ಇಂಥ ಲಕ್ಷಣಗಳನ್ನು ಬೇರ್ಪಡಿಸಿದರೆ ಮತ್ತೆ ಅದು ಸ್ಥಾಪಿತ ಹಿತಾಸಕ್ತಿಯ ಮುಂದುವರಿಕೆಗೆ ಆಸ್ಪದ ನೀಡಬಹುದು. ಇದು ಇನ್ನೊಂದು ವಿಧದಲ್ಲಿ ಜಾತಿ ಅಸ್ಮಿತೆ ನಿರೂಪಿಸುವ ಲಕ್ಷಣವಾಗಿದೆ. ಇವೆಲ್ಲ ಅಭಿವೃದ್ಧಿಯನ್ನು ಗಮನಿಸಿದರೆ ಮೇಲ್ಜಾತಿಗಳು ಮತ್ತು ದಮನಿತರಲ್ಲಿ ವಿಭಿನ್ನ ದಿಸೆಗಳಲ್ಲಿ ಜಾತಿಪ್ರಜ್ಞೆ ನಡೆಯುತ್ತಿದೆ ಎಂಬುದನ್ನು ಮನಗಾಣಬಹುದು. ಮತ್ತು ದಮನಿತ ಸಮುದಾಯಗಳಲ್ಲಿ ಅಸ್ಮಿತೆಗಳು ಪರಿಣಾಮಕಾರಿಗೊಳ್ಳುವ ವಿಧಾನಗಳನ್ನು ಗುರುತಿಸಬೇಕಿದೆ. ಇತರ ಹಕ್ಕೊತ್ತಾಯಗಳನ್ನು ತಿರಸ್ಕರಿಸುವ ಜೊತೆಗೆ ಮೇಲ್ಜಾತಿಗಳು ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವುದರಿಂದ ಸಮಾನತೆಯ ಸಮರದಲ್ಲಿ ಮುಸ್ಲಿಮರು ಕೂಡ ಒಬಿಸಿ ಮತ್ತು ದಲಿತರ ಜೊತೆ ಸೇರುವಂತಾಗಿದೆ.

ದಮನಿತ ಸಮುದಾಯಗಳು ತಮ್ಮ ಎಲ್ಲ ಬಗೆಯ ರಾಜಕಾರಣವನ್ನು ಎಲ್ಲವೂ ಇತ್ಯಾತ್ಮಕವೆಂದು ಪರಿಗಣಿಸಿದರೂ ಬೂರ್ಶ್ವಾ ಸಮಾನತೆಗಾಗಿ ನಡೆಯುವ  ಹೋರಾಟದಲ್ಲಿ ಬಹಳಷ್ಟು ದೌರ್ಬಲ್ಯಗಳಿವೆ. ಪ್ರತಿ ಸಮುದಾಯ ತನ್ನ ಅಧಿಕಾರದ ಆಂತರಿಕ ಸಂಬಂಧಗಳನ್ನು ರಕ್ಷಿಸಲು ಮುಂದಾಗಿರುವುದರಿಂದ ಅದು ಅಂಥವೇ ರೀತಿಯ ಸಾಂಪ್ರದಾಯಿಕ ವಿಧಾನದ ಅಂಗೀಕಾರದತ್ತ ಮುಂದುವರಿಯುತ್ತಿದೆ. ಉದಾಹರಣೆಗೆ ಸಮಾನತೆಗಾಗಿ ನಡೆಯುವ ಹೋರಾಟದಿಂದ ಮಹಿಳೆಯರನ್ನು ವ್ಯವಸ್ಥಿತವಾಗಿ ಹೊರಗಿಡಲಾಗಿದೆ. ಆದರೆ ದಮನಿತ ಸಮುದಾಯದ ಮಹಿಳೆಗಿಂತ ಮೇಲ್ಜಾತಿ ಮಹಿಳೆಯರು ಹೆಚ್ಚು ಸಮಾನರಂತೆ ಪರಿಗಣಿಸಲ್ಪಡುತ್ತಾರೆ. ಆದರೆ ಈ ಎಲ್ಲ ಸಮುದಾಯಗಳಲ್ಲೂ ಆಕೆ ವ್ಯಕ್ತಿಯಾಗಿ ಪರಿಗಣಿತಳಾದಾಗ ಪುರುಷರಿಗೆ ಹೋಲಿಸಿದಲ್ಲಿ ಆಕೆ ಹೆಚ್ಚು ಅಸಮಾನಳು. ಆದರೆ ವಸಾಹತುಪೂರ್ವದ ಅರ್ಥವ್ಯವಸ್ಥೆಯನ್ನು ಪರಿಗಣಿಸಿದಾಗ ಮಹಿಳೆ ಪುರುಷನಷ್ಟೇ ಸಮಾನವಾದ ಕುಶಲತೆಯುಳ್ಳ ಶ್ರಮವನ್ನು ನಿರ್ವಹಿಸುತ್ತಿದ್ದಾಳೆಂಬುದನ್ನು ನೋಡಿದ್ದೇವೆ. ಈಗ ಪರಿಸ್ಥಿತಿ ಭಿನ್ನವಾಗಿದ್ದು ಪ್ರತಿಕೂಲಕರವೆನಿಸಿದೆ. ಉತ್ಪಾದನಾ ಶಕ್ತಿಗಳ ಬದಲಾವಣೆಗಳಿಂದ ಅವರ ಚಲನೆ ಕುಂಠಿತಗೊಂಡಿದೆ ಮತ್ತು ಪುರುಷರ ಸಮಾನವಾಗಿ ಅವರ ಕೌಶಲ್ಯಗಳನ್ನು ಪರಿಗಣಿಸಲಾಗುತ್ತಿಲ್ಲ. ಇದು ದಲಿತ ಮಹಿಳೆಯರಿಗಿಂತಲೂ ಬಹಳ ಹೆಚ್ಚಾಗಿ ಒಬಿಸಿ ಮಹಿಳೆಯರಲ್ಲಿ ಆಗಿರುವುದನ್ನು ಕಾಣಬಹುದು. ಆದರೂ ಎಲ್ಲ ದಮನಿತ ಸಮುದಾಯಗಳಲ್ಲೂ ಮಹಿಳಾ ಶ್ರಮವು ನಿರ್ಲಕ್ಷಿತಗೊಂಡಿರುವುದರ ಜೊತೆಗೆ ಆರ್ಥಿಕ ಅವಲಂಬನೆಗಾಗಿ ಪುರುಷರನ್ನೇ ಆಶ್ರಯಿಸಬೇಕಾದ ಸ್ಥಿತಿ ಉಂಟಾಗಿದೆ.

ಈ ಸಮುದಾಯಗಳಲ್ಲಿನ ಜೀವನ ವಿಧಾನದ ನೈತಿಕ ಸಂಹಿತೆಗಳು ಕೂಡ ಮಹಿಳೆಯರನ್ನು ಹೀನಾಯವಾಗಿಸಿವೆ. ಈ ಸಂಹಿತೆಗಳಲ್ಲ ಸಮಾನತೆ, ಲಿಂಗಸ್ಪಂದಿ, ಘನತೆ ಮುಂತಾದವುಗಳ ವಿರುದ್ಧವಿದ್ದು ಇವು ಪ್ರತಿಪಾದನೆಗೆ ಒತ್ತು ನೀಡುವ ಬದಲು ಹೇರುವಿಕೆಯನ್ನು ಮೂಲವಾಗಿಸಿವೆ. ಇದಕ್ಕೆ ವಿರುದ್ಧವಾಗಿ ಅಂಥ ನೈತಿಕತೆಯಲ್ಲಿ ಆಧುನಿಕ ದೃಷ್ಟಿಕೋನ ಮತ್ತು ಸಾಂಪ್ರದಾಯಿಕ ಸಂಹಿತೆಯ ಕುರಿತ ತೀರ್ಮಾನಗಳನ್ನು ವಿಶ್ಲೇಷಿಸಿ ಪರಿಗಣಿಸಬೇಕಿದೆ. ಒಂದು ಆರ್ಥಿಕ ನೈತಿಕ ದೃಷ್ಟಿಕೋನವು ಹೆಚ್ಚಿನ ಒತ್ತಾಯವನ್ನು ಮಾಡುವಂತಹ ರೀತಿಯಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವಂಥ ಪ್ರತಿಪಾದನೆಗೆ ಅಂಗೀಕಾರ ನೀಡುತ್ತದೆ. ಇದಕ್ಕೆ ವಿರುದ್ಧವಾಗಿ ಸಾಂಪ್ರದಾಯಿಕ ನೈತಿಕ ಸಂಹಿತೆಯ ಕೆಲಮೊಮ್ಮೆ ಹೆಚ್ಚಿನ ಹೇರಿಕೆಯಾಗಿದ್ದು ತಪ್ಪಿದಲ್ಲಿ ತೀಕ್ಷ್ಣಕ್ರಮದ ಮೂಲಕ ಅಂಗೀಕಾರವನ್ನೊದಗಿಸುತ್ತದೆ. ಹಾಗಾಗಿ ಇವು ಒಳಗೊಳ್ಳುವ ಅಂಶ(ಸತ್ವ)ಗಳಿಗಿಂತ ಪ್ರಕಾರ(ವಿಧಾನ)ದಲ್ಲಿ ಯಾವತ್ತೂ ಒಂದು ಆಧುನಿಕ ನೈತಿಕ ದೃಷ್ಟಿಕೋನ ಮೇಲುಗೈ ಪಡೆಯುತ್ತದೆ.

ಏಕ ರೂಪದ ಪ್ರವೃತ್ತಿ ವಿರುದ್ಧ ಬಹಳಷ್ಟು ಮಂದಿ ಪ್ರತಿಭಟಿಸುವ ಈ ಹಂತದಲ್ಲಿ ಸಮುದಾಯಗಳ ಹಕ್ಕುಗಳು ಅವುಗಳಿಗೆ ವಿಶಿಷ್ಟವಾಗಿರುವುದರಿಂದ ಅಸ್ಮಿತೆಯನ್ನು ಭಿನ್ನತೆಯೆಂಬುದಾಗಿ ಒತ್ತಿ ಹೇಳುವುದರ ಬಗೆಗೆ ಜಾಗರೂಕರಾಗಿರಬೇಕು. ಪ್ರಜಾಸತ್ತೆ ಹೆಸರಿನಲ್ಲಿ ನಾವು ದೌರ್ಜನ್ಯಕ್ಕೆ ಆಸ್ಪದ ನೀಡಬಾರದು. ಯಾಕೆಂದರೆ ಸಮುದಾಯಗಳು ಒಟ್ಟುಗೂಡಿರುತ್ತವೆ ಅಥವಾ ಪರ್ಯಾಯವಾಗಿ ಸಮುದಾಯದೊಳಗೆ ರೂಪು ಪಡೆಯಲು ಒಂದು ಸಂದರ್ಭಕ್ಕಾಗಿ ಕಾಯುತ್ತಿರಬಹುದು. ದಮನಿತ ಸಮುದಾಯದೊಳಗಿನ ದುರ್ಬಲರ ವಿರುದ್ಧ ಇಂತ ಪಗಡೆಯಾಟದ ಹೊರೆ ಇದ್ದು, ಮಹಿಳೆಯರ ಮೇಲೆ ಇದೆ ಬಾಧೆ ಇನ್ನೂ ಹೆಚ್ಚಾಗಲಿದೆ. ಸಂಸ್ಕೃತಿ ಮತ್ತು ನಂಬಿಕೆಯ ವ್ಯತ್ಯಾಸಗಳನ್ನು ಗೌರವಿಸುವುದು ಪ್ರಮುಖವಾದರೂ ಈ ಗೌರವವು ಶರತ್ತುಬದ್ಧವಾಗಿವೆ. ಅಂದರೆ ಯಾವುದೇ ನಡಾವಳಿ ವ್ಯಕ್ತಿಯ ಘನತೆಗೆ ಭಂಗ ತರುವುದಿದ್ದರೆ ಅಂಥವನ್ನು ಸಾರ್ವಜನಿಕವಾಗಿ ತಡೆಹಿಡಿಯಬೇಕಿದೆ. ಇವನ್ನು ನೈತಿಕವಾಗಿ ಎತ್ತಿಹಿಡಿಯಲಾಗದಿದ್ದ ಪಕ್ಷದಲ್ಲಿ ರಾಜ್ಯವು ವ್ಯಕ್ತಿಯನ್ನು ರಕ್ಷಸಿಬೇಕು.

ಭಾರತದ ರಾಜಕಾರಣವು ಜಾತಿ ಆಧಾರದ ಪಲ್ಲಟದ ಮೌಲ್ಯವನ್ನು ಗುರುತಿಸುತ್ತಾ ವಿಶೇಷವಾಗಿ ಲಿಂಗತಾಟಸ್ಥ್ಯ ಹಾಗೂ ರೂಪುಗೊಳ್ಳುತ್ತಿರುವ ಸಮುದಾಯಗಳ ಅಸಮಾನತೆ ಮತ್ತಿತರ ಮನೋಭಾವದ ವಿರುದ್ಧ ಸುಸ್ಥಿರಗತಿಯ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಿರತವಾಗಬೇಕಿದೆ. ದಮನಿತ ಸಮುದಾಯಗಳ ಅಸ್ಮಿತೆಯನ್ನು ಗೌರವಿಸುವುದರ ಜೊತೆಗೆ ಇವುಗಳ ವಿರುದ್ಧದ ಹುನ್ನಾರಗಳ ಬಗೆಗೆ ಎಚ್ಚರದಿಂದಿರಬೇಕು. ಪ್ರಜಾಸತ್ತೆಯ ವ್ಯಾಪಕತೆಯೊಂದಿಗೆ ಅದರ ಹರವನ್ನು ವಿಸ್ತರಿಸುವ ಆಂದೋಲನದತ್ತ ಕೈಜೋಡಿಸಬೇಕಿದೆ. ತಾತ್ವಿಕ ಅಂಶಗಳನ್ನು ಹೊರತುಪಡಿಸಿ ಪ್ರಜಾಪ್ರಭುತ್ವದ ಹರವು ಭಾರತದ ಸಂದರ್ಭದಲ್ಲಿ ಎರಡು ಔಪಚಾರಿಕ ಷರತ್ತುಗಳನ್ನು ಅವಲಂಬಿಸಿದೆ. ದಲಿತರು ಮತ್ತು ಮಹಿಳೆಯರು ಸಂಪೂರ್ಣವಾಗಿ ತಮ್ಮ ಚದುರಿಹೋದ ಹಕ್ಕುಗಳ ಧಾರಕರಾಗಬೇಕು ಮತ್ತು ಆವಾಗ ಮಾತ್ರ ಈ ಸಮುದಾಯಗಳು ವೈಚಾರಿಕವಾಗಬಹುದು. ಅಂದರೆ ಆತ್ಮವಿಮರ್ಶೆ ಮತ್ತಿತರ ತೀಕ್ಷ್ಣವಾದ ಚಿಂತನೆಗೆ ಸಾಧ್ಯವಾಗಿ ಇವು ಹಕ್ಕೊತ್ತಾಯಕ್ಕೆ ಪೂರ್ವ ಷರತ್ತುಗಳೆನಿಸಿವೆ.