ದಮನಿತ ಜಾತಿಗಳು ಮತ್ತು ಮುಸ್ಲಿಮರ ಮೇಲೆ ಪ್ರಜಾಪ್ರಭುತ್ವ ಪರಿಣಾಮವು ಭಾರತದ ಪೌರತ್ವದ ವಿಕಾಸದ ಮೇಲೆ ನೇರವಾದ ಛಾಯೆಯನ್ನು ಬೀರಿದೆ. ಈ ವಿಕಾಸದ ಹಾದಿಗೆ ಪಾಶ್ಚಾತ್ಯ ಪ್ರಜಾಸತ್ತೆಯಲ್ಲಿರದಂಥ ವಿಶೇಷತೆ ಇದೆ. ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಿಂದ ೧೯೩೫ರ ಕಾಯ್ದೆಯವರೆಗೆ ವಿಭಿನ್ನ ಮಟ್ಟದಲ್ಲಿ ಒಂದಲ್ಲ ಒಂದು ತರದ ಪ್ರಾತಿನಿಧ್ಯವಿದ್ದರೂ ಪೌರತ್ವದ ಮೇಲಾಗಿ ನಿರ್ಬಂಧಿತವಾಗಿತ್ತು. ದೇಶವು ವಿದೇಶಿ ಆಳ್ವಿಕೆಯ ಅಧೀನದಲ್ಲಿದ್ದುದರಿಂದ ಜನತಾ ಸಾರ್ಮಭೌಮತೆಗೆ ಮಾನ್ಯತೆ ಇದ್ದಿಲ್ಲ. ಜನಗಳು ಆದ್ದರಿಂದ ಹೆಚ್ಚಾಗಿ ಪ್ರಜೆಗಳ ಸ್ವರೂಪದಲ್ಲಿದ್ದು ನಿಧಾನವಾಗಿ ಪೌರಮ ಹೊಂದಿರುವಂತ ನಿರ್ದಿಷ್ಟ ಹಕ್ಕುಗಳನ್ನು ಅನುಭವಿಸತೊಡಗಿದರು. ಒಬ್ಬ ಪೌರನು ವ್ಯಕ್ತಿಗಿಂತ ವಿಶಿಷ್ಟವಾಗಿದ್ದು ನಿರ್ದಿಷ್ಟವಾದ ಪರಾಧೀನಗೊಳ್ಳದ ಹಕ್ಕುಗಳ ವಾರಸುದಾರನಾಗಿರುತ್ತಾನೆ. ಹಕ್ಕುಗಳಿಲ್ಲದ ವ್ಯಕ್ತಿಯು ಪೌರನಲ್ಲ. ಆದರೆ ವ್ಯಕ್ತಿತ್ವದ ಪ್ರಕ್ರಿಯೆಯಿಂದ ವ್ಯಕ್ತಿಯಾಗಿ ರೂಪಿತ ಅಥವಾ ರೂಪುಗೊಳ್ಳುತ್ತಿರಬಹುದು. ಆಧುನಿಕತೆಯ ಮೌಲ್ಯ ಮತ್ತು ಬಂಡವಾಳದ ಅಭಿವೃದ್ಧಿಯುಂಟಾಗುವ ಸಹಜವಾದ ಐಹಿಕತೆಯಿಂದ ಈ ವ್ಯಕ್ತಿತ್ವ ರೂಪು ಪಡೆಯಬಹುದು. ವ್ಯಕ್ತಿ ಎಲ್ಲ ಸಮಯದಲ್ಲೂ ತನ್ನ ಹಿತಾಸಕ್ತಿಯನ್ನು ಗರಿಷ್ಠಗೊಳಿಸುವ ಬೂರ್ಶ್ವಾನಂತ ಸ್ಥಿತಿಯಲ್ಲಿರುವನು. ಆದರೆ ಪೌರನು ಇತರ ವ್ಯಕ್ತಿಗಳ ಜೊತೆ ಸೇರಿ ಅಥವಾ ಸಹಾಯದಿಂದ ತನ್ನ ಕಾಳಜಿ ಮೌಲ್ಯಗಳು ಅಥವಾ ಹಿತಾಸಕ್ತಿಗಳನ್ನು ಮತ್ತು ಇದಕ್ಕೆ ಆತ ಹೆಚ್ಚು ಒತ್ತು ನೀಡಲಾರನು. ಪೌರನು ಇತರರೊಂದಿಗೆ ತನ್ನತನವನ್ನು ನಿರೂಪಿಸಲು ಶ್ರಮಪಡುವನು ಮತ್ತು ಪ್ರಭುತ್ವದ ಅಧಿಕಾರದ ಬಗೆಗೆ ಜಾಗರೂಕನಾಗಿರುವಂತಹ ಲಕ್ಷಣಗಳನ್ನು ಹೊಂದಿರುತ್ತಾನೆ. ಹಾಗಾಗಿ ಪೌರತ್ವವು ಪ್ರಜಾಪ್ರಭುತ್ವ ವ್ಯಾಪಕ ಉಳಿವಿಗೆ ಆದ್ಯತೆ ನೀಡುತ್ತದೆ.

ಬಂಡವಾಳದ ಉದಯ, ಆಧುನಿಕತೆ ಮತ್ತು ಪ್ರಜಾ ಪ್ರಕ್ರಿಯೆಯ ಪಾಶ್ಚಾತ್ಯ ಸಮಾಜಗಳ ಸಹ ನಾಮಾರ್ಥವೆನಿಸಿದೆ. ಒಂದರ್ಥದಲ್ಲಿ ಅವು ಲಿಂಗತ್ವವನ್ನು ಬಲಪಡಿಸಲು ಒಂದು ಇನ್ನೊಂದು ಸೀಮಿತಪಡಿಸಿತು. ಇದು ಸಂಕೀರ್ಣವಾದರೂ ಬಂಡವಾಳದ ಅತಿ ಹೊಂದುವಿಕೆಯು ವ್ಯಕ್ತಿಯ ಭೂ ಹೊಂದುವಿಕೆಯ ಹಕ್ಕಿನ ಅಗತ್ಯಕ್ಕೆ ದಾರಿ ಮಾಡಿತು. ಅಂದರೆ ಸಾಂಪ್ರದಾಯಿಕವಾದ ನಿರ್ಬಂಧವಿಲ್ಲದೆ ಆಸ್ತಿ ಮತ್ತು ಲಾಭ ಹೊಂದುವ ಸ್ವಾತಂತ್ರ‍್ಯ ಮನ್ನಣೆ ನೀಡಿತು. ಗುತ್ತಿಗೆ ಆಧಾರಿತ ಶ್ರಮದ ಫಲದಿಂದ ತಾತ್ವಿಕವಾಗಿ ಬಂಡವಾಳ ಸಂಚಯನಗೊಳ್ಳುತ್ತಿದೆ. ಕರಾರಿನ ಅಗತ್ಯದಂತೆ ವ್ಯಕ್ತಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಸಮಾನರೆಂದು ಪರಿಗಣಿಸತಕ್ಕದ್ದು. ಯಾಕೆಂದರೆ ಅಸಮಾನರ ಮಧ್ಯೆ ಕರಾರು ನಡೆಯದು. ಸಮಾನತೆಯ ಈ ಪಯಣದಿಂದ ಹಕ್ಕುಗಳು ಚಾಲ್ತಿಗೆ ಬಂದವು. ಮೌಲ್ಯಗಳ ಹೋರಾಟ ಮತ್ತು ಹೊಸ ಬಗೆಯ ಐಹಿಕ ಆಚರಣೆಗಳ ಈ ಸಂದರ್ಭದಲ್ಲಿ ಪೌರತ್ವ ವಿಕಸನಗೊಂಡಿತು. ವಸಾಹತು ದೇಶಗಳಲ್ಲಿ ಇದು ಮುರಿಯಲ್ಪಟ್ಟಿತು. ಭಾರತದಲ್ಲಿ ಬಂಡವಾಳಶಾಹಿ ಬೆಳೆದರೂ ವಸಾಹತು ಆಡಳಿತದಿಂದ ಆಧುನಿಕತೆ ನಿರೂಪಿತಗೊಂಡರೂ ಇದು ಪೌರತ್ವಕ್ಕೆ ಕೊಂಡಿಯಾಗಿಲ್ಲ. ಪ್ರಜೆಯ ಸ್ಥಾನಮಾನದಿಂದ ಹೊರಬರಲು ಮತ್ತು ವಸಾಹತುಶಾಹಿಯ ಶೋಷಣೆ ತಪ್ಪಿಸಲು ಪ್ರಜಾಸತ್ತಾತ್ಮಕ ಕಾರ್ಯಕ್ರಮಗಳು ರೂಪುಗೊಂಡರೂ ಪಶ್ಚಿಮದ ಪ್ರಜಾಸತ್ತಾತ್ಮಕ ಹಕ್ಕುಗಳ ಸಾರ್ವತ್ರಿಕತೆಯಂತೆ ಇದು ನಡೆದಿಲ್ಲ.

೧೯೪೭ರಲ್ಲಿ ಸ್ವತಂತ್ರ‍್ಯಗೊಂಡಾಗ ಸಂವಿಧಾನವು ಪ್ರತಿಯೊಬ್ಬರೂ ಕಾನೂನು ಮತ್ತು ನ್ಯಾಯಿಕ ಪೌರತ್ವ ಪ್ರಾಪ್ತವಾಯಿತು. ಇಲ್ಲೂ ಕೂಡ ಪಶ್ಚಿಮದಲ್ಲಿ ನಡೆದಂತಹ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಹೋರಾಟವಾಗಲಿ. ಕಾರ್ಮಿಕರ ಮತದಾನ ಮತ್ತು ಸಂಘಟನೆಗೆ ನಡೆದ ಹೋರಾಟದ ರೀತಿಯಲ್ಲಿ ಹೆಚ್ಚಾಗಿ ನಡೆದಿಲ್ಲವೆನ್ನಬಹುದು. ಪ್ರಜಾಸತ್ತಾತ್ಮಕ ಹಕ್ಕುಗಳ ಮತ್ತು ಸಮಾನತೆಗಾಗಿ ಹೋರಾಟವು ವಸಾಹತು ಮತ್ತು ಊಳಿಗಮಾನ್ಯದ ವಿರುದ್ಧ ವಿಮೋಚನಾ ಚಳುವಳಿಯ ಒಂದು ಅಂಶವೆನಿಸಿದರೂ ಮತದಾನ ಹೋರಾಟದ ಮಹತ್ವಕ್ಕಿಂತ ಭಿನ್ನವಾಗಿತ್ತು. ಮಧ್ಯಮವರ್ಗದ ನಿರೂಪಣೆ, ಆಧುನಿಕ ಉದ್ದಿಮೆಗಳ ಕಾರ್ಮಿಕರು ಮತ್ತು ಭಾಗಶಃ ಹೋರಾಟ ಮನೋಭಾವದ ರೈತರನ್ನು ಹೊರತುಪಡಿಸಿ ಉಳಿದ ಯಾವ ವರ್ಗವೂ ಹಕ್ಕುಗಳ ಬೇಡಿಕೆಗೆ ಹೆಚ್ಚು ಒತ್ತು ಕೊಟ್ಟಿಲ್ಲ ಮತ್ತು ಇದರ ಅಗತ್ಯ ಅವರಿಗೆ ಉದ್ಭವಿಸಿಲ್ಲ. ಹಾಗಾಗಿ ಮೊದಲಿನ ಪ್ರಜಾತಂತ್ರದ ಪೋಷಕರು, ರಾಷ್ಟ್ರೀಯ ಹೋರಾಟದ ನಾಯಕರು ಸರಕಾರ ಮತ್ತು ವಿರೋಧಿಸ್ಥಾನದಲ್ಲಿದ್ದರು. ಪ್ರಜಾಸತ್ತೆಯ ಧರ್ಮದರ್ಶಿಗಳಂತೆ ಕಾರ್ಯ ನಿರ್ವಹಿಸಿದರು ಎಂದು ಹೇಳಬಹುದು. ಜನಗಳು ನಿಧಾನವಾಗಿ ಮೇಲೆ ನಾವು ವಿವರಿಸಿದಂತೆ ಹಕ್ಕಿನ ಪ್ರಾಮುಖ್ಯತೆ ಬಗೆಗೆ ಅರಿವು ಹೊಂದಿದರು. ಭಾರತದಲ್ಲಿ ಅದು ಕೇವಲ ಪೌರತ್ವ ನೀಡುವ ಕುರಿತು ಮಾತ್ರವಲ್ಲ ಪೌರತ್ವದ ಹಕ್ಕುಗಳನ್ನು ನೇರವಾಗಿ ಚಲಾಯಿಸುವುದು ಪ್ರಜಾಪ್ರಭುತ್ವದೆಡೆಗಿನ ನಿಜವಾದ ಪಯಣವೆನಿಸಿದೆ.

ಪ್ರಜಾಸತ್ತೆಯ ಬೆಳವಣಿಗೆ ಚಾರಿತ್ರಿಕ ಘಟನೆಯ ಪ್ರತಿಧ್ವನಿ ಮತ್ತೊಮ್ಮೆ ಎಲ್ಲೂ ಎಂದೂ ಸಂಭವಿಸಲಾರವು ಎಂಬುದನ್ನು ಮನಗಂಡಿದ್ದೇವೆ. ಬಂಡವಾಳಶಾಹಿಯ ಉತ್ತುಂಗದ ಅವಧಿಯಲ್ಲಿ ಪ್ರಜಾತಂತ್ರವು ಪಶ್ಚಿಮದಲ್ಲಿ ಪ್ರಥಮ ಆಧುನಿಕ ಅನುಭವ ಕುರಿತ ಒಂದು ಪ್ರಮುಖ ಲಕ್ಷಣವೆಂದರೆ ಹಿಂದಿನ ಸಮುದಾಯಗಳ ನಿಧಾನವಾದ ವಿಘಟನೆ ಅಥವಾ ನಿರ್ಗಮನ, ಸಮುದಾಯದ ನಿಘಟನೆಯಿಂದ ಜನರು ಜನ್ಮತಃ ರೂಢಿಸಿಕೊಂಡ ರಕ್ತಸಂಬಂಧ ಮುಂತಾದ ಬಂಧಗಳಿಂದ ದೂರವಾಗುತ್ತ ವ್ಯಕ್ತಿಮಯಗೊಂಡರೂ ಕುಟುಂಬವನ್ನು ಹೊರತುಪಡಿಸಿ ಉಳಿದ ಲಕ್ಷಣಗಳು ಸಂಪ್ರದಾಯವೆಂದು ವರ್ಗೀಕರಿಸಲಾಗಿದೆ. ಆದರೆ ಧರ್ಮದಂತೆ ಕುಟುಂಬವು ಮೂಲಜಿಜ್ಞಾರೂಪದಲ್ಲಿ ಪುನರ್ ವ್ಯಾಖ್ಯಾನಿಸಲ್ಪಟ್ಟು ಸಂಪೂರ್ಣವಾಗಿ ವಿಭಕ್ತವಾಯಿತು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಭಾಗದಲ್ಲಿ ಹಿಂದಿನ ಸಮುದಾಯದ ಸೂಚಕಗಳಾದ ರಕ್ತಸಂಬಂಧ ಮುಂತಾದ ಪದಗಳು ಸಾರಾಸಗಟಾಗಿ ಯುರೋಪಿನ ರಾಜಕೀಯ ಪದಕೋಶದಿಂದ ಕಾಣೆಯಾದವು. ಇನ್ನೂ ಸರಳವಾಗಿ ಹೇಳುವುದಾದರೆ ಸಮುದಾಯದಲ್ಲಿ ಜೀವಿಸುವ ವ್ಯಕ್ತಿಗೂ ಮತ್ತು ರಾಜ್ಯದ ಮಧ್ಯೆ ಯಾವುದೇ ಬಂಧ ಅಡ್ಡಿ ಇಲ್ಲದಂತಾಯಿತು. ಕೆಲವು ತತ್ವಜ್ಞಾನಿಗಳು ಇದನ್ನು ಏಕತಾನದ ಜೀವಿಸುವಿಕೆ ಎಂದಿದ್ದಾರೆ ಮತ್ತು ಈ ಏಕತಾನತೆಯನ್ನು ವ್ಯಕ್ತಿಗತವಾಗಿ ನಿವಾರಿಸಬಹುದೆನ್ನುತ್ತಾರೆ. ಹೀಗೆ ಒಬ್ಬ ವ್ಯಕ್ತಿಯ ನೆರೆಹೊರೆಯವರಲ್ಲಿ, ಕೆಲಸದ ಸ್ಥಳ ಇಲ್ಲವೇ ಸಮಾನ ಕಾಳಜಿಯ ನಿರೀಕ್ಷೆಗಾಗಿ ಸಮುದಾಯ ರೀತಿಯ ಗುಂಪುಗಳನ್ನು ರೂಪಿಸಬಹುದೆಂದು ಮತ್ತು ಅವುಗಳನ್ನು ಸ್ವಯಂರಚಿತ ಸಮುದಾಯಗಳೆನ್ನಬಹುದು. ಇವು ಜಾತಿ ಅಥವಾ ಧಾರ್ಮಿಕ ಸಂಘಟನೆಗಳಂತೆ ಮೊದಲೇ ಅಸ್ತಿತ್ವದಲ್ಲಿರುವುದಿಲ್ಲ. ಒಬ್ಬ ಏಕತಾನದ ವ್ಯಕ್ತಿ ತಾನು ಏನಾದರೂ ಆಗಬಹುದು. ಆದ್ದರಿಂದ ಯಾವುದೇ ಅಡೆತಡೆಯಿಲ್ಲದ ಉತ್ತಮ ಮಟ್ಟದ ಸ್ವಾಯತ್ತತೆಯನ್ನು ಹೊಂದುವನು. ಹಿಂದಿನ ಸಮುದಾಯದ ಮೌಲ್ಯಗಳಲ್ಲದೆ ಮೂಲಜಿಜ್ಞಾಸೆಯ ಸ್ವಯಂ ನಿರೂಪಣೆ ಸಾಧ್ಯ. ಆದ್ದರಿಂದ ಜೀವನವು ಅಂಜಿಕೆಯ ಮೂಲವಾಗಬಹುದು. ಏಕತಾನ ವ್ಯಕ್ತಿಗೆ ಇತರರ ಹಸ್ತಕ್ಷೇಪವಿಲ್ಲದೆ ಉತ್ತಮ ಜೀವನಕ್ಕೂ ಆಗ ಹಕ್ಕುಗಳು ಮತ್ತು ಆಶ್ರಯವಾಗಬಲ್ಲದು.

ಪೌರರು ಹೊಂದಿರುವ ಹಕ್ಕುಗಳ ಉಪಯುಕ್ತತೆಯ ದಟ್ಟವಾಗಿ ಪ್ರಭಾವದಿಂದ ವಿಭಿನ್ನ ಸಂಸ್ಕೃತಿಯ ಹಿಂದಿನ ಸಮುದಾಯಗಳು ಭಾರತದಲ್ಲಿ ದಟ್ಟವಾಗಿ ಜೀವಿಸುತ್ತಿದ್ದವು. ವಸಾಹತು ಆಳ್ವಿಕೆ ಮತ್ತು ಸುಲಿಗೆಯಿಲ್ಲದ ಸಮಾಜ ನಿರ್ಮಿತದ ಅವಧಿಯಲ್ಲಿ ಆಧುನಿಕತೆಗೆ ಹಂಬಲ ಮತ್ತು ಸ್ವಾತಂತ್ರ‍್ಯ ನಂತರ ಚುನಾವಣಾ ಪ್ರಜಾತಂತ್ರದಿಂದಾಗಿ ಈ ಸಮುದಾಯಗಳು ಜೀವಂತವಾಗಿದ್ದು ತುಡಿತಕ್ಕೊಳಗಾಗಿವೆ. ವಸಾಹತು ಆಳ್ವಿಕೆ ಅವಧಿಯಲ್ಲಿ ಈ ಸಮುದಾಯಗಳು ಪುನರ್ ರೂಪಿಸಲ್ಪಟ್ಟು ಎದ್ದು ನಿಂತವು ಹಾಗೂ ಸ್ವಾತಂತ್ರ‍್ಯ ನಂತರವೂ ಹಾಗೇ ಮುಂದುವರಿದವು. ಸುಮಾರು ೨೫೦ ವರ್ಷಗಳ ಅವಧಿಯಲ್ಲಿ ವಿಭಿನ್ನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಯುಳ್ಳ ಈ ಸಮುದಾಯಗಳು ಮುಂದುವರಿದು ತೀವ್ರಗತಿಯ ಆಂತರಿಕ ಬದಲಾವಣೆಗೆ ಒಳಗಾಗಿ ಇವುಗಳೊಳಗಿನ ಪರಸ್ಪರ ಸಂಬಂಧಗಳಲ್ಲೂ ಶೀಘ್ರಗತಿಯ ಬದಲಾವಣೆಗಳು ಸಂಭವಿಸಿವೆ. ಜಾತಿ ಮತ್ತು ಧರ್ಮದ ಮತ್ಸರದ ನಿರಂತರತೆಯ ನಡುವೆ ಇಂಥವುಗಳ ಬದಲಾವಣೆಗೆ ಗಮನ ನೀಡದೆ ವಿಫಲರಾಗಿದ್ದೇವೆ. ಹಿಂದೆ ಇವು ಆಚರಣಾ ನೆಲೆಯ ಗುಂಪುಗಳಾಗಿದ್ದು ರಾಜಕೀಯ ಮಹತ್ವ ಪಡೆದಿರಲಿಲ್ಲ. ಈಗ ಇದು ಬದಲಾಗಿದ್ದು ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತರವಾಗಿದೆ. ಪ್ರಜಾತಾಂತ್ರಿಕ ನಡಾವಳಿ ಮತ್ತು ಹಕ್ಕುಗಳ ಚಲಾವಣೆಯಿಂದ ಪೌರತ್ವಕ್ಕೂ ಬೇಡಿಕೆ ನೀಡಿದೆ. ಈ ಸಮುದಾಯಗಳ ಸ್ವರೂಪ ಮತ್ತು ಪ್ರಭಾವವನ್ನು ಗಮನಿಸಿದಲ್ಲಿ ಭಾರತದ ಪೌರತ್ವ ಮತ್ತು ಇತರ ದೇಶಗಳ ಪೌರತ್ವವನ್ನು ಗಮನಿಸಬಹುದು. ಇವು ಸ್ವಾಗತಾರ್ಹ ಭಿನ್ನತೆಯಲ್ಲವಾದರೂ ಪರಸ್ಪರ ಮನೋಹರ ವ್ಯತ್ಯಾಸದ ಕಥೆಯೆನಿಸಿದೆ.

ಈ ಸಮುದಾಯಗಳ ಆಂತರಿಕ ರಚನೆಯೊಳಗೆ ಮೂರು ಪ್ರಮುಖ ಬದಲಾವಣೆಗಳನ್ನು ಗಮನಿಸಬಹುದು. ಮೊದಲನೆಯದಾಗಿ ವಸಾಹತು ಆಳ್ವಿಕೆಯ ಜಾಯಿ ಗುಂಪುಗಳೊಳಗಿನ ಆಚರಣಾ ಅಂತಸ್ತು ಮತ್ತು ವೃತ್ತಿ ಸ್ಥಾನಮಾನದ ಮಧ್ಯದ ನಿಕಟ ಸಂಪರ್ಕವನ್ನು ದೂರ ಮಾಡಿತು. ಜಾತಿಯ ಧಾರ್ಮಿಕ ಅಂತಸ್ತು ಗುಂಪಾಗಿ ಕೆಲಸದ ಮಾಡಿ ಕ್ರಮಾಂಕದೊಂದಿಗೆ ವೃತ್ತಿಸ್ಥಾನಮಾನವಿತ್ತು. ಪ್ರತಿ ಜಾತಿ ಗುಂಪಲ್ಲಿ ಸದಸ್ಯರು ಒಂದೇ ರೀತಿಯ ಕೆಲಸವನ್ನು ಮಾಡುತ್ತಿದ್ದರಿಂದ ಸಾಮಾನ್ಯವಾಗಿ ಒಂದೇ ರೀತಿಯ ಜ್ಞಾನ ಅಥವಾ ಕುಶಲತೆ ಹೊಂದಿದ್ದು ಹೋಲಿಕಾತ್ಮಕವಾದ ಆದಾಯ ಮಟ್ಟವಿದ್ದು ಆಂತರಿಕವಾಗಿ ಸಮಾನರಾಗಿದ್ದರು. ಆದರೂ ವಿವಿಧ ಜಾತಿಗುಂಪುಗಳ ಮಧ್ಯದ ಸಂಬಂಧದಲ್ಲಿ ಅತಿಯಾದ ಅಸಮಾನತೆಯಿತ್ತು. ಈ ಅಂತಸ್ತು ಮತ್ತು ವೃತ್ತಿಯೊಳಗಿನ ಸಂಬಂಧ ಪುರೋಗಾಮಿಯಾಗಿ ಮುರಿಯಲ್ಪಟ್ಟರೂ ಈ ಸಮಾನ ಜಾತಿ ಗುಂಪುಗಳೊಳಗೆ ಆಂತರಿಕ ಆದಾಯ ವ್ಯತ್ಯಾಸಗಳು ಹೆಚ್ಚಾಗಿ ನಡೆದವು. ಹೀಗಾಗಿ ಒಂದೇ ಜಾತಿಯಿಂದ ಹೆಚ್ಚು ಹೆಚ್ಚು ಜನರು ವೃತ್ತಿಯನ್ನು ತೊರೆದು ಹೊರಗಡೆ ಕೆಲಸ ಮಾಡಿದರು. ಪ್ರಥಮವಾಗಿ ಇದರ ಲಾಭ ಪಡೆದವರು ದ್ವಿಜರು, ಬ್ರಾಹ್ಮಣರು ಮತ್ತು ಕಾಯಸ್ಥರು ಪ್ರಮುಖರು. ಈ ಜಾತಿಯ ಜ್ಞಾನ ಮತ್ತು ಕಲಿಕೆಯ ಸಂಪ್ರದಾಯದ ವಾರಸುದಾರರಾಗಿದ್ದವು. ಇವರು ಇಂಗ್ಲಿಷ್ ಶಿಕ್ಷಣಕ್ಕೆ ತಕ್ಷಣ ಯಶಸ್ವಿಯಾಗಿ ಹೊಂದಿಕೊಂಡರು. ಈ ಜಾತಿಗಳ ಸದಸ್ಯರು ವಿವಿಧ ಹಂತದ ಸೇವೆಗಳಿಗೆ ಸೇರಿಕೊಂಡರು. ಬಂಡವಾಳ ಸಂಘಟನೆಗಳು, ವ್ಯಾಪಾರ ವಹಿವಾಟು ಮತ್ತು ವೇಗವಾಗಿ ಬೆಳೆಯುತ್ತಿರುವ ಆಡಳಿತಶಾಹಿಯಲ್ಲಿ ಸೇರಿಕೊಂಡರು. ಹಾಗಾಗಿ ಬ್ರಿಟಿಷ್ ಆಳ್ವಿಕೆ ಅವಧಿಯಲ್ಲಿ ಸ್ಥಾಪಿಸಲ್ಪಟ್ಟ ಬೆಳೆದ ಮಧ್ಯಮ ವರ್ಗ ಹೆಚ್ಚಾಗಿ ದ್ವಿಜವಾಗಿತ್ತು. ಆಧುನಿಕ ರೀತಿಯ ಅಧಿಕಾರ, ಪ್ರಭಾವ ಮತ್ತು ಅವರಿಗೆ ದೊರೆತು ಬ್ರಿಟಿಷ್ ಬಿಟ್ಟ ನಂತರ ಸವಲಿಲ್ಲವಾದರೂ ಈ ಪ್ರಕ್ರಿಯೆಯನ್ನು ಇತರೆ ಹಲವು ಜಾತಿಗಳು ಸಂತರದಲ್ಲಿ ಪುನರಾವರ್ತಿಸಿದರೂ ಪ್ರಮುಖ ಸ್ಥಾನಗಳು ಬ್ರಾಹ್ಮಣರಲ್ಲಿ ಇದ್ದು ಒಂದು ನವಬ್ರಾಹ್ಮಣ ಮಾದರಿಯ ಪ್ರಾಬಲ್ಯ ನೆಲೆಯಾಯಿತು.

ಎರಡನೆಯದಾಗಿ ಭಾರತ ಸಮಾಜದ ಆಂತರಿಕ ಸಾಮರಸ್ಯ ಮುರಿಯಿತು. ಬಹಳಷ್ಟು ಸಣ್ಣ ಸಮುದಾಯಗಳು ಸಣ್ಣಮಟ್ಟಿನ ಆಂತರಿಕ ಸಂಬಂಧ ಹೊಂದಿದ್ದರೂ ಇವುಗಳ ಮಧ್ಯೆ ನಿಕಟವಾದ ತಿಳುವಳಿಕೆಯಿದ್ದು ಸಂತಸದಿಂದ ಸಹಬಾಳ್ವೆ ನಡೆಸುತ್ತಿದ್ದ ದಿನಗಳು ದೂರವಾದವು. ಅವು ಸ್ಪರ್ಧಾತ್ಮಕ ಸಹಜೀವನಕ್ಕಿಳಿದಿವೆ. ಇವುಗಳ ಮಧ್ಯೆ ಯಾವುದೇ ಮಧ್ಯಸ್ಥಿಕೆ ತತ್ವ ಇಲ್ಲದಂತಾಗಿದೆ. ಒಂದು ಸಮುದಾಯದ ಅನುಕೂಲವಲ್ಲವೆಂದು ಕಾಣುವಂತಾಯಿತು. ಹೀಗಾಗಿ ಸಮುದಾಯಗಳ ಮಧ್ಯೆ ಸಂಘರ್ಷಗಳು ಸಾಮಾನ್ಯವಾದವು. ಹಿಂದೆ ವಸಾಹತು ಆಡಳಿತ ಮತ್ತೀಗ ಭಾರತ ಒಕ್ಕೂಟ ಮಧ್ಯಸ್ಥನಂತಾಯಿತು. ಅದೇನೂ ಹೊಸತಲ್ಲ. ಈಗ ಅದು ಬಹಳ ವ್ಯಾಪಕವಾಗಿದೆ ಮತ್ತು ಸಮುದಾಯಗಳ ಹೆಸರಿನಲ್ಲೂ ಹಕ್ಕುಗಳನ್ನು ಒತ್ತಾಯಿಸಲಾಗುತ್ತಿದೆ. ಇದು ಆರಂಭದಲ್ಲಿ ತಿಳಿಸಿರುವಂತೆ ಪಶ್ಚಿಮದ ಪ್ರಜಾತಂತ್ರದ ವಿಕಸನಕ್ಕಿಂತ ವಿಭಿನ್ನ ಮಾದರಿಯನ್ನು ನಾವು ಅಳವಡಿಸಿರುವುದು. ಪಶ್ಚಿಮದಲ್ಲಿ ಹಕ್ಕುಗಳು ಸಾಮಾನ್ಯ ನಿಯಮಗಳಾಗಿ ವ್ಯಕ್ತಿಯೊಂದಿಗೆ ಬಳುವಳಿಯಾಗಿದೆ. ಹಿಂದಿನ ಮಾದರಿಯ ಸಮುದಾಯಗಳು ಇಂಥ ಹಕ್ಕುಗಳ ಒತ್ತಾಯಕ್ಕೆ ಮೊದಲೇ ವಿಸರ್ಜಿತಗೊಂಡವು. ನಂತರದಲ್ಲಿ ಕೆಲವು ಸ್ವಯಂನಿರ್ಮಿತ ಸಮುದಾಯಗಳಾದ ಕಾರ್ಮಿಕ ಸಂಘಟನೆ ಮುಂತಾದವುಗಳು ಹಕ್ಕುಗಳಿಗೆ ಒತ್ತಾಯಿಸಿದವು. ಆದರೆ ಇದೊಂದು ಒಟ್ಟಾರೆ ವಿಭಿನ್ನವಾದ ಬೇಡಿಕೆ ಪ್ರಸ್ತಾವ ಎಂಬುದು ಸ್ಫುಟ. ಪೌರತ್ವ ಮತ್ತು ಅದರ ಹಕ್ಕುಗಳ ವಿಕಸನವು ಈ ರೀತಿಯ ಸಮುದಾಯ ಆಧಾರಿತ ಹಕ್ಕುಗಳ ದಕ್ಕುವಿಕೆ, ಹಕ್ಕುದಾರಿಕೆಯ ಹೋರಾಟದಿಂದ ಪ್ರತ್ಯೇಕವಾಗಿದ್ದಲ್ಲಿ ಅದನ್ನು ಅರ್ಥ ಮಾಡಿಕೊಳ್ಳಲಾಗದು. ಹಕ್ಕು ಮತ್ತು ಗುರುತಿಗೆ ಬಲವಾದ ಸಂಬಂಧವನ್ನು ಹೊಂದಿದೆ. ಹಕ್ಕುಗಳ ನೈಜವಾದ ಚಲಾವಣೆಯು ಇಂಥ ಅಭಿವೃದ್ಧಿ ಮಾಹಿತಿಯಿಂದ ಸಾಕಾರಗೊಳ್ಳುವುದು.

ಸಮುದಾಯಗಳು ಹಲವಾರು ಶಕ್ತಿ ಘಟಕಗಳಾಗಿ ಬಿಂಬಿಸಲ್ಪಟ್ಟು ರೂಪುತಾಳುತ್ತಿವೆ. ವಸಾಹತು ಆಳ್ವಿಕೆಯಲ್ಲಿ ಉದ್ಯೋಗದ ಚೌಕಾಸಿಗೆ ಅಧಿಕಾರದಲ್ಲಿ ಪಾಲು ಮುಂತಾದ ಮೀಸಲಾತಿಗೆ ಒತ್ತು ಕೊಟ್ಟರೆ ಸ್ವಾತಂತ್ರ‍್ಯ ನಂತರ ಸರಕಾರ ಅಧಿಕಾರಕ್ಕಾಗಿ ಹವಣಿಸುತ್ತಿದೆ. ಈಗಾಗಲೇ ಆರಂಭದಲ್ಲಿ ಸ್ಥಾನ ಗಳಿಸಿದವರು ಮತ್ತು ಆಡಳಿತಶಾಹಿ ಮತ್ತು ಅರ್ಥವ್ಯವಸ್ಥೆಯಲ್ಲಿ ಏಕಸ್ವಾಮ್ಯದ ಸ್ಥಾನದಲ್ಲಿದ್ದವರು ಜಾತಿಯನ್ನು ಮುಂದಿಟ್ಟು ಬೇಡಿಕೆ ಸಲ್ಲಿಸುವ ಅಗತ್ಯ ಕಾಣಲಿಲ್ಲ. ಬ್ರಾಹ್ಮಣರು ಈಗಾಗಲೇ ಆಧುನಿಕ ವೃತ್ತಿಗಳಲ್ಲಿದ್ದುದರಿಂದ ಮೊದಲೇ ತಿಳಿಸಿದಂತೆ ಮಧ್ಯಮ ವರ್ಗವಾಗಿ ಸಾರ್ವಜನಿಕವಾಗಿ ಜಾತಿ ಸಂಲಗ್ನತೆಯನ್ನು ಹೆಚ್ಚು ಪ್ರಚುರ ಪಡಿಸಿಲ್ಲ. ಇನ್ನೊಂದೆಡೆ ಈ ಹಂತದಲ್ಲಿ ಈ ಹಂತದಲ್ಲಿ ಕಳಚಿಕೊಂಡು ಅಧಿಕಾರ ಮತ್ತು ಅಂತಸ್ತಿಗೆ ಹೋರಾಡುವವು. ಧಾರ್ಮಿಕ ಅಂತಸ್ತಿನ ಸಮುದಾಯಗಳು ಅಂಚಿಗೆ ತಳ್ಳಲ್ಪಟ್ಟು ಈಗ ಹೆಚ್ಚಾಗಿ ಅವು ಸಾಂಸ್ಕೃತಿಕ ಸಮುದಾಯಗಳಾಗಿ ಕಾರ್ಯರೂಪದಲ್ಲಿವೆ. ಈಗಾಗಲೇ ಸವಲತ್ತು ದಕ್ಕಿಸಿಕೊಂಡು ಮಧ್ಯಮ ವರ್ಗವು ಈ ಹಂತದಲ್ಲಿ ಜಾತ್ಯತೀತ ನಿಲುವಿನ ರಾಜಕೀಯ ಸಹಭಾಗಿತ್ವವನ್ನು ಪ್ರದರ್ಶಿಸುವ ಹೆಮ್ಮೆಯನ್ನು ಮುಂದಿಟ್ಟಿತು. ಇದು ಸುಳ್ಳು ಎನ್ನುವ ಬದಲು ಬಹಳ ನಾಜೂಕಿನದ್ದಾಗಿದೆ. ಉಳಿದ ಸಮುದಾಯಗಳು ಸ್ಪರ್ಧಾತ್ಮಕವಾಗಿ ತೂಗುಯ್ಯಾಲೆಯಲ್ಲಿದ್ದು ಮೀಸಲಾತಿ ರಕ್ಷಣೆಗೆ ಬೇಡಿಕೆಯಿಟ್ಟಿತ್ತು ಮತ್ತು ವಸಾಹತು ಆಳ್ವಿಕೆಯಿಂದಲೂ ಇಂಥ ಬೇಡಿಕೆಗಳನ್ನು ನಿಭಾಯಿಸುವುದು ರಾಜ್ಯಕ್ಕೆ ಕಷ್ಟವೆನಿಸಿದೆ. ವಸಾಹತುರಾಜ್ಯವು ತನ್ನ ಆಳ್ವಿಕೆಯನ್ನು ಗಟ್ಟಿಗೊಳಿಸಲು ಜನರನ್ನು ವಿಭಜಿಸುವಂತಹ ಗಿಮ್ಮಿಕ್ಕುಗಳನ್ನು ಬಳಸಿರುವುದನ್ನು ನಾವು ಮರೆಯಬಾರದು. ಆದರೆ ಆ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಲಿದೆ. ಮಂಡಲ್ ಆಯೋಗ ವರದಿಯ ಅನುಷ್ಠಾನದನ್ವಯ ಒಬಿಸಿಗಳಿಗೆ ಕೇಂದ್ರ ಸರ್ಕಾರಿ ಸೇವೆಯಲ್ಲಿ ಶೇಕಡ ೨೭ ಮೀಸಲಾತಿ ಒದಗಿಸಿರುವುದು ಈ ಕೊನೆ ಪ್ರಮುಖ ಹಂತದ ನಿರ್ದೇಶನವೆನಿಸಿದೆ. ಈ ಕ್ರಮದ ವಿರುದ್ಧ ಆಗ ಮೀಸಲಾತಿ ಕುರಿತು ಮಿಷಮತೆ ಉಲ್ಪಣಿಸಿ ಎಲೀಟುಗಳ ಮಕ್ಕಳು ದೊಡ್ಡಮಟ್ಟದಲ್ಲಿ ಪ್ರತಿರೋಧ ಒಡ್ಡಿದರು.

ಮೂರನೇ ಅಂಶವು ಮೊದಲೇ ವಿವರಿಸಿದಂತೆ ನವಮಧ್ಯಮವರ್ಗ ಮತ್ತದಕ್ಕೆ ಸಂಬಂಧಿಸಿದ ಅಭಿವೃದ್ಧಿ. ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಒಬಿಸಿ ಮತ್ತು ದಲಿತರು ಮಧ್ಯಮರ್ಗಕ್ಕೆ ಸೇರುತ್ತಿದ್ದು ಹಿಂದೆ ಮೇಲ್ಜಾತಿಗಳೇ ಇದರಲ್ಲಿ ಹೆಚ್ಚಿರುತ್ತಿದ್ದರು. ಹಾಗಾಗಿ ಈ ಮಧ್ಯಮವರ್ಗದ ಕ್ರಮಾಂಕದೊಳಗೆ ಗುರುತರವಾದ ಬಿರುಕುಗಳಾಗುತ್ತಿವೆ. ನವಮಧ್ಯಮವರ್ಗವು ಮಾತೃಭಾಷೆ ಶಿಕ್ಷಣ ಹೊಂದಿದ್ದು ಸಣ್ಣ ಪಟ್ಟಣ ಇಲ್ಲವೇ ಅರೆಗ್ರಾಮೀಣ ಪ್ರದೇಶದವರು. ಹೀಗಾಗಿ ದ್ವಿಜರಷ್ಟು ಸೊಫಿಸ್ಟಿಕೇಟೆಡ್ ಅಲ್ಲ. ಅವುಗಳ ಕುಶಲತೆಯು ಸಾಪೇಕ್ಷವಾಗಿ ಕಡಿಮೆಯಿದ್ದು ಹೆಚ್ಚುವರಿಯಾಗಿ ಅಂತಸ್ತು ಮತ್ತು ಘನತೆಯ ಸ್ವತ್ತಿನಲ್ಲಿ ಕೊರತೆ ಅನುಭವಿಸುತ್ತಾರೆ. ನವಮಧ್ಯಮವರ್ಗದ ಅಸ್ತಿತ್ವವು ಹೆಚ್ಚಾಗಿ ವ್ಯಕ್ತಿ ಜಾತಿಗಳ ಆಂತರಿಕ ಭಿನ್ನತೆಯಿಂದಾಗಿ ಅತಿಯಾದ ಅಸಮಾನತೆಯನ್ನು ಕಾಣಬಹುದು. ಆದರೂ ವರ್ಣ ವಿಚಾರಧಾರೆಯ ಜೀವನವನ್ನು ನಿರ್ಧರಿಸುವ ಸುಸಂಗತ ವ್ಯವಸ್ಥೆಯು ಕುಸಿದಿರುವುದು ಈ ಬದಲಾವಣೆಯ ಪ್ರಮುಖ ಲಕ್ಷಣವೆನಿಸಿದೆ. ಹಾಗಾಗಿ ಮೇಲ್ವರ್ಗದ ಎದುರು ಧಾರ್ಮಿಕ ನಡಾವಳಿ ಪಾಲಿಸುವುದು ಒಂದು ಗೌರವದ ಸಂಕೇತವೆನಿಸಿದೆ. ಈ ತರದ ಸಾದೃಶ್ಯಜನ್ಯ ಬದಲಾವಣೆಯು ಸಮಾನತೆಯ ಹಕ್ಕೊತ್ತಾಯ ಮತ್ತು ದೈನಂದಿನ ಜೀವನದ ಜ್ಯಾತ್ಯತೀತಕ್ಕೆ ಸಹಾಯ ಹಸ್ತಚಾಚಿದೆ. ಈ ಜಾತಿಗಳ ರಾಜಕಾರಣದ ಪಡಸಾಲೆಯಲ್ಲಿ ಈಗ ಒಗ್ಗೂಡಿದ  ಸಮುದಾಯಗಳು ಸಮಷ್ಟಿ ವ್ಯಕ್ತಿತ್ವಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

ಈ ಬದಲಾವಣೆಗಳು ಒಬಿಸಿ ಮತ್ತು ದಲಿತರನ್ನು ರಾಜಕೀಯ ಅಧಿಕಾರ ಪಡೆಯಲು ಮತ್ತು ಕಬಳಿಸಲು, ಒಗ್ಗೂಡಲು ಮತ್ತು ಹೋರಾಡಲು ರಾಜಕೀಯವಾಗಿ ಛಾಪುಮೂಡಿಸಬಲ್ಲ ಅಧಿಕಾರ ಗಣಗಳಾಗಿ ಕಕ್ಷೆ ಬಲಪಡಿಸುವಂತೆ ಪರಿಣಾಮ ಬೀರಿತು. ಸೌಲಭ್ಯವುಳ್ಳವರ ಪ್ರಜ್ಞೆಯು ಶೀಘ್ರದಲ್ಲಿ ನಿರಚನಗೊಳ್ಳುವ ಪ್ರಮುಖವಾದ ಅಭಿವೃದ್ಧಿವೊಂದು ಸಮಾನಾಂತರವಾಗಿ ಈ ಹೊಸ ಅಧಿಕಾರ ಗಣಗಳ ಬೇಡಿಕೆಯಿಂದ ಉದ್ಭವಿಸಿದೆ. ಮಂಡಲ್ ವರದಿ ನಂತರ ಈ ಸೌಲಭ್ಯಯುತ ಗುಂಪುಗಳು ಮಧ್ಯಮ ವರ್ಗದಿಂದ ಹೊರಬಂದು ಮೇಲ್ಜಾತಿಗಳ ವಿವಿಧ ಜಾತಿರಚನೆಯನ್ನು ಒಗ್ಗೂಡಿಸುತ್ತಿದೆ. ಈಗ ಅವರು ತಮ್ಮ ಸ್ವ-ಆಸಕ್ತಿಗಾಗಿ ಮೆರಿಟ್ ಮತ್ತು ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದೆ. ಅವರು ಕಾರ್ಯಕ್ಷಮತೆಯ ಮೌಲ್ಯಗಳನ್ನು ಆಧುನಿಕ ಜೀವನದ ಮುಖ್ಯ ಬೇಡಿಕೆ ಎತ್ತಿ ಹಿಡಿಯುತ್ತಿದ್ದಾರೆ.

ಸ್ಥಾಪಿತ ಮಧ್ಯಮವರ್ಗದಿಂದ ಹೊರಹಾಕಲ್ಪಟ್ಟ ಅಥವಾ ನಿರಚಿತ ಪ್ರಜ್ಞೆಯ ಮುಖ್ಯರು ಆರ್ ಎಸ್ ಎಸ್ ನ ತೀಕ್ಷ್ಣ ರಾಜಕೀಯ ಘಟಕವಾದ ಸಂಘ ಪರಿವಾರದೆಡೆಗೆ ತಮ್ಮ ರಾಜಕೀಯ ಒಲವನ್ನು ಪಲ್ಲಟಗೊಳಿಸಿದ್ದಾರೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಜೀವನಶೈಲಿಯ ಭಾಗವೆಂದು ಒಪ್ಪಿಸಿಕೊಳ್ಳುತ್ತಾರೆ. ಜೀವನ ಶೈಲಿ ಮತ್ತು ರಾಜಕೀಯ ಭಿನ್ನತೆಯನ್ನು ತೋರ್ಪಡಿಸುವ ವಿರಚಿತ ವರ್ಗವು ಜಾತಿ ಪ್ರಶ್ನೆ ಮತ್ತು ಸಮುದಾಯಕ್ಕೊಂದು ಹೊಸ ಆಯಾಮವನ್ನು ಕೊಟ್ಟಿದೆ. ಸಂಘ ಪರಿವಾರವು ಹೊಸ ಹಿಂದೂ ಸಮುದಾಯ ಮಾದರಿ ಬಗೆಗೆ ಮಾತನಾಡಿ ಅದು ಭಾರತದ ಸಾಂಸ್ಕೃತಿಯ ಹಿರಿಮೆಯ ನಿಜವಾದ ವಾರಸುದಾದರೆಂದು ಮತ್ತು ಭಾರತ ರಾಷ್ಟ್ರೀಯತೆಯ ಆಧಾರದ ಮೇಲೆ ಹಿಂದುತ್ವ ಮಾತ್ರ ಅದರ ರಾಜಕೀಯ ವಿಚಾರಧಾರೆ ಎಂದು ವಿವರಿಸುತ್ತದೆ.

ಈ ಬೆಳವಣಿಗೆ ಪೌರತ್ವದ ಪ್ರಶ್ನೆಗೆ ಸಂಬಂಧಿಸಿದ ಹಕ್ಕುಗಳಿಗೆ ಹೊಸ ರೀತಿಯ ಹಕ್ಕೊತ್ತಾಯವನ್ನು ಕಲ್ಪಸಿದಂತಾಗಿದೆ. ಭಾರತದ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಕ್ಕುಗಳ ದೊರೆಯುವಿಕೆಗೆ ಒತ್ತಾಯಗಳು ನಡೆಯುತ್ತಿವೆ. ಆಧುನಿಕ ಜನತಂತ್ರ ಮೌಲ್ಯಗಳ ನೆಲೆಯಲ್ಲಿ ಇವಕ್ಕೆ ಆಧಾರಗಳಿವೆಯೇ ಎನ್ನುವ ಮೊದಲು ನಮ್ಮ ಪ್ರಜಾ ಸಂವಿಧಾನದತ್ತ ಕಣ್ಣು ಹಾಯಿಸುವ. ಸಂವಿಧಾನದಲ್ಲಿ ಮೂಲಭೂತ ಹಕ್ಕು, ಸಂಸ್ಕೃತಿ, ಅಲ್ಪಸಂಖ್ಯಾತರ ಗುರುತಿಗೆ ರಕ್ಷಣೆ ಮತ್ತು ನಿಯಮಾವಳಿಗಳಿವೆ. ಹಾಗೆಯೇ ಎಸ್ ಸಿ (ದಲಿತರು) ಮತ್ತು ಎಸ್ ಟಿ, ಆದಿವಾಸಿಗಳಿಗೆ ಶಿಕ್ಷಣ ಸಂಸ್ಥೆ ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಸಿದೆ. ಇದೇ ಮಾದರಿಯಲ್ಲಿ ತುಸು ಕಡಿಮೆಯೆಂಬಂತೆ ಒಬಿಸಿಗಳಿಗೂ ಇದನ್ನು ವಿಸ್ತರಿಸಲಾಗಿದ್ದು ಇದರಲ್ಲಿ ನೇಕಾರಿಕೆ ಅಥವಾ ಕ್ಷೌರಿಕ ಮತ್ತು ಕೆಲ ನಿರ್ದಿಷ್ಟ ವ್ಯವಸಾಯ ವೃತ್ತಿಯಲ್ಲಿರುವ ಕೆಲ ಮುಸ್ಲಿಂ ಗುಂಪನ್ನು ಇದರಲ್ಲಿ ಸೇರಿಸಲಾಗಿದೆ. ಹೀಗೆ ಇಂಥ ಯೋಜನೆ ಮತ್ತು ಹಕ್ಕುಗಳಿದ್ದು ಪೌರರು ಅನುಭವಿಸುವ ಹಕ್ಕುಗಳಲ್ಲಿ ಸಾಮಾನ್ಯವಾಗಿ ಭಿನ್ನತೆಯನ್ನು ನೋಡಬಹುದಾಗಿದೆ. ಆದ್ದರಿಂದ ಸಾರ್ವತ್ರಿಕ ಹಕ್ಕುಗಳ ಹೊಂದುವಿಕೆಯ ಮೇಲೂ ಕೆಳಗೂ ಗುಂಪು ಮತ್ತು ಸಮುದಾಯಗಳಿಗೆ ವಿವಿಧ ಹಕ್ಕುಗಳು ಈ ಸಂವಿಧಾನಬದ್ಧವಾಗಿದ್ದು ಇದು ಭಿನ್ನವಾದ ಪೌರತ್ವಕ್ಕೂ ಆಧಾರ ಒದಗಿಸುತ್ತದೆ. ವಿಭಿನ್ನ ಹಕ್ಕುಗಳ ಅಸ್ತಿತ್ವವನ್ನು ನಿರಾಕರಿಸಲಾಗದು. ಆದರೆ ಆಚರಣೆಯಲ್ಲಿ ನಿರ್ದಿಷ್ಟ ಸಮುದಾಯಗಳ ಹಕ್ಕುಗಳು ಹಾಗೂ ಸಾರ್ವತ್ರಿಕ ಹಕ್ಕುಗಳಿಗೆ ಹೇಗೆ ಒಂದಕ್ಕೊಂದು ತಾಳೆಯಾಗುತ್ತಿವೆ. ಅಥವಾ ಸಂಬಂಧಿಸಿವೆ? ಸಾರ್ವತ್ರಿಕ ಹಕ್ಕುಗಳ ಹೊಂದುವಿಕೆಗೆ ಗುಂಪು ಹಕ್ಕುಗಳು ಪೂರಕವೋ ಅಥವಾ ಮಾರಕವೋ ಎಂಬುದನ್ನು ಸ್ಪಷ್ಟವಾಗಿ ವಿಶ್ಲೇಷಿಸುವ ಅಗತ್ಯವಿದೆ. ಪಶ್ಚಿಮದಲ್ಲಿ ಹಕ್ಕುಗಳಿಗೆ ಸಂಬಂಧಿಸಿದ ಮೂರುನೆಲೆಯ ಆಂದೋಲನದಿಂದ ಪೌರತ್ವವು ವಿಕಸನ ಹೊಂದಿತು. ನಾಗರಿಕ ಹಕ್ಕುಗಳೊಂದಿಗೆ ಶುರುವಾಗಿ ಮಾನ್ಯತೆ ಪಡೆದು ನಿಧಾನವಾಗಿ ರಾಜಕೀಯ ಹಕ್ಕುಗಳೆಡೆಗೆ ಮುಂದುವರಿದಂತೆ ಸುಮಾರು ಎರಡು ಶತಮಾನಗಳ ಬಳಿಕ ಸಾರ್ವತ್ರಿಕ ಮತದಾನಕ್ಕೆ ಲಗ್ಗೆ ಹಾಕಿತು. ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಜನರು ಕನಿಷ್ಟ ಆದಾಯ ಮತ್ತು ಸೇವೆಗಳ ಲಭ್ಯತೆಗೆ ಸಂಬಂಧಿಸಿದ ಸಾಮಾಜಿಕ ಹಕ್ಕುಗಳನ್ನು ಹೊಂದಲು ಜನರು ಉಪಯೋಗಿಸಿಕೊಂಡರು. ಇದು ಸುಖ ನಿಯಮಗಳಿಗೆ ದಾರಿ ಮಾಡಿತು. ಇವು ಮೂರು ಹಕ್ಕುಗಳು ಸಂಕೀರ್ಣವಾಗದೆ ಸಮಗ್ರವಾಗಿ ಬೆಳೆಯುತ್ತ ಸಹಕಾರಿಯಾಗುತ್ತ ಒಂದು ಇನ್ನೊಂದನ್ನು ಪರಿಶೀಲಿಸುತ್ತಿದೆ. ಆದರೆ ಆಸ್ತಿಯ ಹಕ್ಕಿಗೆ ಸಂಬಂಧಿಸಿದಂತೆ ಗೊಂದಲ ಮತ್ತು ವೈರುಧ್ಯಗಳು ಸೃಷ್ಟಿಯಾದವು. ವೈಯಕ್ತಿಕ ಹಕ್ಕುಗಳು ಯಾವಾಗಲೂ ವಿಸ್ತಾರದೆಡೆಗೆ ಮತ್ತು ಹೆಚ್ಚು ಅರ್ಥಪೂರ್ಣವಾದ ಪ್ರತಿಪಾದನೆಗೆ ಒತ್ತು ಕಲ್ಪಿಸಿದರೆ ಆಸ್ತಿ ಹಕ್ಕಿನ ಆಂತರಿಕ ಸ್ಥಿತ್ಯಂತರವು ವಿಸ್ತಾರತೆಯನ್ನು ತಡೆಯುವುದು ಮತ್ತು ಸಾಂದರ್ಭಿಕವಾಗಿ ವೈಯಕ್ತಿಕ ಹಕ್ಕುಗಳ ಹಿಂಬೀಳಿಕೆಗೆ ಕಾರಣವಾಗುತ್ತವೆ. ಆಸ್ತಿಗಾಗಿ ಹಕ್ಕಿನ ಆಂತರಿಕ ನಿರ್ದೇಶನವು ಇತರ ವೈಯಕ್ತಿಕ ಹಕ್ಕುಗಳ ವಿರುದ್ಧವಾದುದು. ಎಲ್ಲ ಹಕ್ಕುಗಳ ಬೇಡಿಕೆಗಳು ಹೆಚ್ಚಿನ ಉತ್ತರದಾಯಿಕತೆಯಿರಲು ಸಾಮಾಜಿಕ ಮತ್ತು ರಾಜಕೀಯ ಜೀವನ ರಂಗಗಳನ್ನು ತೆರೆದಿಡುತ್ತವೆ. ವ್ಯವಹಾರ ಸಂಘಟನೆಗಳು ಮತ್ತು ಕಾರ್ಪೋರೇಶನ್ ಗಳಂತಹ ಐಹಿಕದ ಸಂಸ್ಥೆಗಳು ಆಸ್ತಿಹಕ್ಕಿನ ಕಾರ್ಯಗಳಿಗೆ ನೆರವಾಗುವುದು ಇಲ್ಲವೇ ಈ ಮೂಲಕ ವಿಸ್ತೃತವಾಗುವುದಾದರೂ ಸಾರ್ವಜನಿಕ ಪರಿಶೀಲನೆಯಿಂದ ಪಾರಾಗುವ ವೈಯಕ್ತಿಕ ಹಕ್ಕನ್ನು ಸೀಮಿತ ಪಡಿಸಲು ಪ್ರಯತ್ನಿಸುತ್ತದೆ. ಯಾಕೆಂದರೆ ಇವಕ್ಕೆ ಲಾಭ ಗಳಿಸಬೇಕು. ಪೌರರ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ ಹಕ್ಕೊತ್ತಾಯ ಹೊಂದುವಿಕೆಯಿಂದ ಹೆಚ್ಚು ಗಳಿಕೆಗೆ ಅವಕಾಶ ನೀಡದಂತೆ ಕಾರ್ಪೋರೇಷನ್ ನಿಗಾ ವಹಿಸಿ ಜಾರಿಗೊಳಿಸಬೇಕು, ಈ ರೀತಿಯ ವೈರುಧ್ಯದ ಬಂಡವಾಳಶಾಹಿ ಆಸ್ತಿಯ ಸಂರಚನೆಯು ಪಶ್ಚಿಮದಲ್ಲಿ ಸುಖಿ ರಾಜ್ಯವನ್ನು ಉರುಳಿಸಲು ಒತ್ತಾಯಿಸಿದರೆ ತೃತೀಯ ಜಗತ್ತಿನಲ್ಲಿ ಅರ್ಥವ್ಯವಸ್ಥೆಗಳಿಗೆ ಹೇರಲ್ಪಟ್ಟ ಜಾಗತೀಕರಣವು ಕಾರಣವಾಯಿತು. ಆಸ್ತಿ ಹಕ್ಕನ್ನು ಹೊರತುಪಡಿಸಿ ಹೆಚ್ಚಿನೆಲ್ಲ ಇತರ ಹಕ್ಕುಗಳು ಸಾಮರಸ್ಯದಿಂದಲ್ಲದಿದ್ದರೂ ಸಮಜಾಯಿಷಿಕೆಯ ನೆಲೆಯಲ್ಲಿ ಕೆಲವೊಮ್ಮೆ ಅಸ್ತಿತ್ವದಲ್ಲಿರುತ್ತದೆ.

ಭಾರತದಲ್ಲಿ ವ್ಯಕ್ತಿಗತ ಸಾರ್ವತ್ರಿಕ ಹಕ್ಕುಗಳು ಅಷ್ಟೇನೂ ಚಲಾವಣೆಯಲಿಲ್ಲ. ಸ್ವಾತಂತ್ರ‍್ಯ ಸಂಧರ್ಭದಲ್ಲಿ ಎಲ್ಲ ವ್ಯಕ್ತಿಗಳಿಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಪ್ರಸ್ತಾಪಿಸಲಾಯಿತು. ಅತಿಯಾದ ಬಡತನ, ಅನಕ್ಷರತೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಹಿನ್ನೆಲೆಯಲ್ಲಿ ಈ ಹಕ್ಕುಗಳನ್ನು ಹೇಗೆ ಮತ್ತು ಏತಕ್ಕೆ ಉಪಯೋಗಿಸಿಕೊಳ್ಳಬಹುದು ಎನ್ನುವುದರ ಬಗೆಗೆ ಚರ್ಚೆಗಳು ನಡೆಯಬೇಕಿದೆ. ಇದರಿಂದ ಈ ಸಂಗತಿಗಳು ಮಾತ್ರ ಹೆಚ್ಚಬಾರದು. ಆದಾಯದ ಆಶ್ವಾಸನೆ, ವೈದ್ಯಕೀಯ ಮತ್ತು ಶೈಕ್ಷಣಿಕ ಖಾತರಿ ಕುರಿತ ಸಾಮಾಜಿಕ ಹಕ್ಕುಗಳ ಬಗೆಗೆ ಸಂವಿಧಾನದಲ್ಲಿ ನಿಯಮಾವಳಿ ಇವೆ. ವ್ಯಕ್ತಿ ಮತ್ತು ಗುಂಪು ಹಕ್ಕುಗಳ ಮಧ್ಯದ ಭಿನ್ನಾಭಿಪ್ರಾಯ ಮತ್ತು ಅವುಗಳನ್ನು ಪರಿಹರಿಸುವ ತಂತ್ರದ ಬಗೆಗೆ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಹಾಗಾಗಿ ಕೆಲವೊಮ್ಮೆ ವ್ಯಕ್ತಿ ಸಂಬಂಧಿ ತಕರಾರು ಬಂದರೆ ಇದರ ಪ್ರತಿಪಾದನೆ ಹಿನ್ನೆಲೆ ಸಮುದಾಯದ ಒಲವನ್ನು ಹಿಂಬೀಳಿಸುತ್ತದೆ.

ಸಮುದಾಯ ನೆಲೆಯ ರಾಜಕಾರಣವು ಜನರಿಗೆ ಎರಡು ವಿಶಿಷ್ಟ ದಾರಿಯಲ್ಲಿ ಮತದಾನವನ್ನು ವಿಸ್ತರಿಸಿದೆ. ಒಂದು ತುಡಿತಕ್ಕೊಳಗಾದ ಸಮುದಾಯಗಳಿಗೆ ಮೇಲ್ವರ್ಗ ಇಲ್ಲವೇ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರದಿಂದ ಹಿಂದೆ ಮತದಾನಕ್ಕೆ ಅವಕಾಶವಿರಲಿಲ್ಲ. ದಲಿತ ರಾಜಕಾರಣದ ಸಬಲೀಕರಣದ ಅಭಿವ್ಯಕ್ತಿಯಿಂದಾಗಿ ಇವು ಪ್ರಥಮ ಬಾರಿಗೆ ತಮ್ಮ ಆಯ್ಕೆಗನುಗುಣವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಿತು. ಎರಡನೇಯದಾಗಿ ಈ ರೀತಿಯ ಸಬಲೀಕರಣದ ರಾಜಕಾರಣವು ಪೋಷಕ-ಅವಲಂಬೀ ಜಾತೀಕರಣವನ್ನು ವಿಘಟಿಸಿದೆ. ಇನ್ನೊಂದೆಡೆ ಮೇಲ್ವರ್ಗದ ಜೊತೆ ಸಹಕರಣ ಇಲ್ಲವೇ ಅವರ ಒತ್ತಾಯದಂತೆ ಮತ ಹಾಕದಿದ್ದಲ್ಲಿ ಅವಲಂಬಿತರು ತಮ್ಮ ಅಭ್ಯರ್ಥಿಗಳನ್ನು ಆರಿಸಲು ಕಷ್ಟವಾಗುವುದು, ಈ ತರದ ಅಸಮರ್ಥ ಜಾತೀಕರಣವು ಸಂಪೂರ್ಣವಾಗಿ ಮಾಯವಾಗಿಲ್ಲವಾದರೂ ಸಾಕಷ್ಟು ತೆಳುವಾಗಿದೆ. ಈ ರೀತಿ ಅವು ಸಮುದಾಯ ಮತ್ತು ಪ್ರದೇಶಗಳಲ್ಲಿ ವಿಭಿನ್ನವಾಗಿವೆ. ಆದರೂ ಮತದಾನದೊಂದಿಗೆ ಸಬಲೀಕರಣವೂ ದೇಶದ ಎಲ್ಲ ಭಾಗಗಳಲ್ಲೂ ಪಸರಿಸಿದೆ. ಈ ಅರ್ಥದಲ್ಲಿ ಸಮುದಾಯ ರಾಜಕಾರಣವು ಪ್ರಜಾತಂತ್ರದ ವಿಸ್ತರಣೆ ಮತ್ತು ಪೌರತ್ವದ ಹಕ್ಕು ಉತ್ತಮ ಉಪಯೋಗಕ್ಕಾಗಿ ಮಹತ್ವದ ಪಾತ್ರವನ್ನೇ ನಿರ್ವಹಿಸಿದೆ. ಈ ಬೆಳವಣಿಗೆಯ ದಾಖಲೀಕರಣದ ಜೊತೆಗೆ ಹಿಂದುತ್ವವೆಂಬ ಮತ್ತೊಂದು ಬಗೆಯ ಸಮುದಾಯಾಧಾರಿತ ರಾಜಕಾರಣವು ಇತರ ಧರ್ಮದ ಬದಲು ಹಿಂದೂ ಒಲವಿನ ಬಗೆಗೆ ಹೋರಾಡುತ್ತದೆ. ಜೊತೆಗೆ ಅದು ಈ ದೇಶದ ರಾಷ್ಟ್ರೀಯತೆಯ ಬಗೆಗೆ ಸಂಶಯ ಹೊಂದಿರುವ ಸಮುದಾಯವನ್ನು ಮತದಾನದಿಂದ ನಿರಾಕರಣೆಯ ಮೂಲಕವಾಗಿರದೆ ರಾಜಕೀಯದಲ್ಲಿ ಅವರ ಸ್ವರವನ್ನು ಕ್ಷೀಣಗೊಳಿಸುವ ಹುನ್ನಾರದ ಮೂಲಕ ಮಾಡುತ್ತದೆ. ಮುಸಲ್ಮಾನರು ರಾಷ್ಟ್ರ ವಿರೋಧಿಗಳೆಂದು ಕೆಲವೊಮ್ಮೆ ಗುರುತಿಸಲ್ಪಟ್ಟರೆ, ೧೯೯೮ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ರಿಶ್ಚಿಯನ್ನರನ್ನು ಕೂಡ ಮಿಶನರಿಗಳೆಂದು ಸಂಶಯದಿಂದ ನೋಡಲಾಗುತ್ತಿದೆ. ಈ ಹಂತದಲ್ಲಿ ನಾವು ಮತ್ತೊಂದು ಸಂಕೀರ್ಣವಾದ ಸಂಗತಿಯನ್ನು ಎದುರಿಸಬೇಕಿದೆ. ಈ ಭಿನ್ನ ಸಂಸ್ಕೃತಿ ಮತ್ತು ನಂಬಿಕೆಯ ಸಮುದಾಯಗಳು ಸಮಷ್ಟಿಯ ಹೆಸರಿನಲ್ಲಿ ಹಕ್ಕುಗಳಿಗೆ ಬೇಡಿಕೆಯಿಟ್ಟಿವೆ. ಆದರೆ ಸಮುದಾಯದ ಆಸಕ್ತಿಗೆ ವಿರೋಧವಾಗಿ ಅಥವಾ ಸಮುದಾಯ ಗುರುತಿಸಿ ಸಾಂಸ್ಕೃತಿಕತೆಯ ಸಂಕೇತಕ್ಕೆ ಅಡಚಣೆಯಾಗುವಂತ ಸಂದರ್ಭದಲ್ಲಿ ವ್ಯಕ್ತಿಗಳ ಹಲವು ಹಕ್ಕುಗಳನ್ನು ನಿರಾಕರಿಸುತ್ತದೆ. ಸಮುದಾಯದ ಪ್ರತಿಷ್ಠೆಗಾಗಿ ವ್ಯಕ್ತಿಯನ್ನು ಹೀನಾಯವಾಗಿ ಪರಿಗಣಿಸಿರುವ ಉದಾಹರಣೆ ಸಾಕಷ್ಟು ನಡೆದಿವೆ. ಅಂತರ್ಜಾತಿ ವಿವಾಹ, ನಿರ್ದಿಷ್ಟ ಧಾರ್ಮಿಕ ಸಂಗತಿಗಳ ಉಲ್ಲಂಘನೆ ಅಥವಾ ಭಿನ್ನಾಭಿಪ್ರಾಯ ಮುಂತಾದ ಸಂಗತಿಯಲ್ಲಿ ವ್ಯಕ್ತಿ ಅಭಿಪ್ರಾಯ ಹಾಗೂ ಬಟ್ಟೆ (ಉಡಿಗೆ-ತೊಡುಗೆ) ಸಂಬಂಧಿಸಿದ ವಿಷಯದಲ್ಲಿ ಇವನ್ನು ಪರಿಗಣಿಸಬಹುದು. ವ್ಯಕ್ತಿಗಳ ವೈಯಕ್ತಿಕ ನಡವಳಿಕೆ ಮತ್ತು ನೈತಿಕತೆಯನ್ನು ಕಾಯುವ ಸಂದರ್ಭದಲ್ಲಿ ಸಮುದಾಯವು ಪ್ರಬಲವಾಗಿ ಸಮಷ್ಟಿ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ನಡಾವಳಿ ಮತ್ತು ನೈತಿಕ ಆಯ್ಕೆಗೆ ಸಂಬಂಧಿಸಿ ಭಾರತದ ಪ್ರತಿ ಸಮುದಾಯದಲ್ಲೂ ಮಹಿಳೆಯರಂತೂ ಕೆಟ್ಟದಾಗಿ ಬಲಿಪಶುಗಳಾಗುತ್ತಾರೆ. ಧರ್ಮ, ಜಾತಿಯನ್ನು ಹೊರತುಪಡಿಸಿ ಅಥವಾ ಲಿಂಗಸಮಾನತೆ ಪ್ರತಿಪಾದಿಸುವ ಯಾವುದೇ ಸಮುದಾಯವು ಭಾರತದಲ್ಲಿ ಅತೀ ವಿರಳ ಎನ್ನಬಹುದು. ಇದು ಲಿಂಗತಾರತಮ್ಯವನ್ನು ಪ್ರಪಂಚದ ಯಾವುದೇ ಸಮುದಾಯದಲ್ಲಿ ಬಹಳ ಚಾತುರ್ಯದಿಂದ ಪ್ರಚುರಗೊಳಿಸುವ ರೂಪವೆನಿಸಿದೆ. ಸಮುದಾಯವು ಮಹಿಳೆಯರ ಪಾಲನೆ ಹಕ್ಕು, ಕೆಲಸ ಹಕ್ಕು, ಅವರ ದೇಹ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಂಗತಿಯಲ್ಲೂ ಸಹ ಹಸ್ತಕ್ಷೇಪ ಚಾಚುತ್ತಿದೆ. ಪ್ರಜಾತಂತ್ರದ ವ್ಯಾಪಕತೆ ಮತ್ತು ಸಮಾನತೆಯ ಮೌಲ್ಯಗಳು ಮಹಿಳಾ ವ್ಯಕ್ತಿ ಮತ್ತು ಮಹಿಳಾ ಕಾರ್ಯನಿರತ ಗುಂಪುಗಳು ಅವರ ವೈಯಕ್ತಿಕ (ನಾಗರಿಕ ಮತ್ತು ರಾಜಕೀಯ) ಹಕ್ಕುಗಳಿಗೆ ಒತ್ತಾಯಿಸುತ್ತವೆ. ಆದರೆ ತೀವ್ರಗತಿಯಲ್ಲಿ ಈ ತರದ ಮಹಿಳಾ ಬೇಡಿಕೆಗಳಿಗೆ ಸಮುದಾಯವು ಸಮಷ್ಟಿ ವ್ಯಕ್ತಿಗಳ ಹಿನ್ನೆಲೆಯಲ್ಲಿ ಪ್ರತಿರೋಧ ಒಡ್ಡುತ್ತಿವೆ. ಸಮುದಾಯದ ಧಾರ್ಮಿಕತೆ ಅಥವಾ ಸಂಪ್ರದಾಯವನ್ನು ಮುರಿದ ಸಂದರ್ಭಗಳಲ್ಲಿ ಮಹಿಳಾ ವ್ಯಕ್ತಿಗೆ ಜಾತಿ ಪಂಚಾಯತಿಗಳು ಕೆಲವು ಸಂದರ್ಭದಲ್ಲಿ ಸಂಕಷ್ಟಕ್ಕೆ ಈಡು ಮಾಡಿವೆ. ಗುಂಪು ಹಕ್ಕುಗಳ ಹಕ್ಕೊತ್ತಾಯದ ಬಗೆಗೆ ಹೆಚ್ಚಿನ ಮಹಿಳಾಪರ ಸಕ್ರಿಯವಾದ ಸಂಘಟನೆಗಳು ಅನುಮಾನದಿಂದ ನೋಡುವುದು ಆಶ್ಚರ್ಯವೇನಲ್ಲ. ಆದರೆ ಈ ಅಸಮರ್ಥ ಸ್ಥಿತಿಯನ್ನು ಸಮಷ್ಟಿ ಅಥವಾ ಗುಂಪು ಹಕ್ಕುಗಳ ನಿರಾಕರಣೆಗೆ ಆಧಾರವೆನ್ನುವುದು ಸರಿಯಲ್ಲ.

೧೯ನೇ ಶತಮಾನದ ಮಧ್ಯಭಾಗದಿಂದೀಚೆಗೆ ಹಲವರು ಪ್ರಮುಖ ಹಕ್ಕು ಬೇಡಿಕೆಗಳು ಸಮಷ್ಟಿಯ ಹಕ್ಕುಗಳಾಗಿವೆ. ಉದಾರಹಣೆಗೆ ಕಾರ್ಮಿಕ ಸಂಘಟನೆ ಸಂದರ್ಭದಲ್ಲಿ ಕಾರ್ಮಿಕರು ಒಟ್ಟಾಗಿ ಧರಣಿ ನಡೆಸಬಹುದು. ಆದರೆ ಒಬ್ಬ ಕಾರ್ಮಿಕ ಮಾಡಿದರೆ ಅದು ರಜೆ ಅಥವಾ ಕೆಲಸದ ಅವಧಿಯಿಂದ ದೂರವಿರುವುದು ಎಂದರ್ಥ. ಪಿಕೆಟಿಂಗ್ ನಡೆಸುವುದನ್ನು ಸಾಮೂಹಿಕವಾಗಿ ಮಾಡದಿದ್ದಲ್ಲಿ ಅದು ಹರತಾಳ ಅಥವಾ ಶಾಂತಿಯುತ ಮೆರವಣಿಗೆ ಅಥವಾ ಚಳವಳಿಗೆ ಭಂಗ ತರುವುದು ಎಂದರ್ಥ. ತುಳಿತಕ್ಕೊಳಗಾದವರಿಗೆ ಮೀಸಲಾತಿ ಹಕ್ಕು ನೀಡಿದ್ದು ಇದು ಕಲ್ಯಾಣ ಹಕ್ಕುಗಳಿಗಿಂತ ಭಿನ್ನವಾದದ್ದು. ಆದುದರಿಂದ ಪ್ರಸ್ತುತ ಸಂದರ್ಭದಲ್ಲಿ ಗುಂಪು ಹಕ್ಕುಗಳ ಮತ್ತು ವ್ಯಕ್ತಿಗಳ ರಕ್ಷಣೆಗೆ ಬೇಕಾದ ಅರ್ಥಪೂರ್ಣವಾದ ತಂತ್ರಗಾರಿಕೆಯನ್ನು ಪ್ರಜಾತಂತ್ರ ಆಂದೋಲನಗಳು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ.

ಸಮುದಾಯ ಒಲವು ರಾಜಕಾರಣದಲ್ಲಿ ವ್ಯಕ್ತಗೊಳ್ಳುವ ವಿಭಿನ್ನ ವಿಧಗಳ ದಾರಿ ಸುಲಭವೆನಿಸಿದರೂ ಸುಲಭವೇನಲ್ಲ. ಸಾಂಸ್ಥಿಕ ಘಟಕಗಳಲ್ಲಿ ಪ್ರಜಾತಂತ್ರದ ಕಾರ್ಯ ನಿರ್ವಹಣೆಗೆ ಅದು ನಿರ್ದಿಷ್ಟ ಹಕ್ಕುಗಳ ಚಲಾವಣೆಯನ್ನು ಶೃತಗೊಳಿಸಬೇಕಾಗುತ್ತದೆ. ಅದೇ ಸಮಯದಲ್ಲಿ ವ್ಯಕ್ತಿಗಳ ಸಾಮರ್ಥ್ಯವನ್ನು ನಿರೂಪಿಸಿದ ಪ್ರಮುಖ ಹಕ್ಕುಗಳ ಚಲಾವಣೆಯನ್ನು ಅದು ಅನುಭವಿಸದಂತೆ ಮಾಡಬಹುದು. ಪ್ರಜಾತಂತ್ರದ ಕಾರ್ಯಕ್ಷಮತೆಯನ್ನು ಖಾತರಿಪಡಿಸುತ್ತ ಅದು ನಾಗರಿಕ ಸಮಾಜ ಚಟುವಟಿಕೆಗೆ ಮತ್ತು ನಿಲುವುಗಳಿಗೆ ಉತ್ತೇಜಿಸಬಹುದು. ಅಧಿಕಾರ ದುರುಪಯೋಗದ ವಿರುದ್ಧ ವ್ಯಕ್ತಿಗಳ ಪೋಷಕರಂತಿರುವ ನಾಗರಿಕ ಸಮಾಜದ ಸ್ವಾಯತ್ತತೆಯನ್ನು ಅದು ಕುಂಠಿತಗೊಳಿಸಬಹುದು. ಹಲವು ವ್ಯಕ್ತಿಗಳ ಹಕ್ಕುಗಳ ಹೊಂದುವಿಕೆಗೆ ತೊಡಕುಂಟು ಮಾಡುವ ಮೂಲಕ ಒಂದು ಸಕ್ರಿಯವಾದ ನಾಗರಿಕ ಸಮಾಜವಿಲ್ಲದೆ ಬೂರ್ಶ್ವಾ ಆಸ್ತಿಯಂತಿರುವ ಉದಾರವಾದಿ ಸಮಾಜವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ನಾಗರಿಕ ಸಮಾಜಕ್ಕೆ ಸಂಬಂಧಿಸಿದ ಪ್ರಜಾತಂತ್ರ ಪ್ರಶ್ನೆಯು ಬಹಳ ಸಂಕೀರ್ಣವಾದುದು. ಆದ್ದರಿಂದ ನಾಗರಿಕ ಸಮಾಜವು ಭಾರತದಲ್ಲಿ ವಿರೋದಭಾಸವಾಗಿ ವಿಸ್ತಾರಗೊಳ್ಳುತ್ತಾ ಅದರೊಟ್ಟಿಗೆ ಕುಂಠಿತಗೊಳ್ಳುವ ಪ್ರಕ್ರಿಯೆಯನ್ನು ಎದುರಿಸುತ್ತಿದೆ.