ನಮ್ಮ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯ ಅತ್ಯಂತ ವಿಶೇಷವಾದ ಫಲಿತಾಂಶವೆಂದರೆ ಭಾರತ ರಾಷ್ಟ್ರವನ್ನು ಜನರು ಪರಿಗಣಿಸುವ ನಿಲುವಿನಲ್ಲಿ ನಿಧಾನವಾಗಿಯಾದರೂ ಉಂಟಾಗಿರುವ ಬಿರುಸಿನ ಬದಲಾವಣೆ. ಭಾರತದ ಜನತೆಗೆ ಒಬ್ಬ ಭಾರತೀಯನಾಗಿರುವುದು ಏನರ್ಥ ನೀಡುತ್ತದೆ ಎಂಬುದನ್ನು ಪರಿಶೀಲಿಸೋಣ. ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ ಮತ್ತು ನಾಗಾಲ್ಯಾಂಡ್ ಮುಂತಾದ ಭಾಗಗಳಲ್ಲಿ ವಾಸಿಸುವ ಜನರಿಗೆ ಒಬ್ಬ ಭಾರತೀಯನಾಗಿರುವುದು ಒಂದೇ ಅರ್ಥವನ್ನು ಕಲ್ಪಿಸುತ್ತದೆಯೇ?.

ಬದಲಾವಣೆಗೊಳ್ಳದ ಮತ್ತು ಅಖಂಡವಾದ ಒಂದು ಭಾರತದ ಕಲ್ಪನೆ ಎಷ್ಟು ಸಂದೇಹವೋ, ಅದೇ ರೀತಿ. ಭಾರತೀಯನಾಗಿರುವುದು ಎನ್ನುವುದರ ಕುರಿತಂತೆ ಹಲವಾರು ನಿರೂಪಣೆಗಳು ಕಾಲಾಂತರದಲ್ಲಿ ರೂಪುಪಡೆಯುತ್ತಿದೆ. ೧೯೯೬ರ ಸಂಸದೀಯ ಚುನಾವಣೆಯ ಸಂದರ್ಭದಲ್ಲಿ ಭಾರತದ ವಿಭಿನ್ನ ಜನರು ಭಾರತ ಅನ್ನುವುದರ ಚಿತ್ರಣವನ್ನು ವಿಭಿನ್ನವಾಗಿ ಸಾದೃಶ್ಯೀಕರಿಸಿ ಕಲ್ಪಿಸಿಕೊಂಡರು. ಅದು ಸಂವಿಧಾನವರಲಿ ಅಥವಾ ನವದೆಹಲಿಯಿರಲಿ ಅಥವಾ ಎಲೀಟು ಆಗಿರಲಿ ಇದನ್ನು ಒಂದೇ ಮಾಪಕದಿಂದ ವ್ಯಾಖ್ಯಾನಿಸುವ ಕಾಲ ದೂರವಾಯಿತು. ನೆಹರೂ ತಿಳುವಳಿಕೆಯ ರಾಷ್ಟ್ರವು ಒಂದು ನಿರ್ದಿಷ್ಟವಾದ ನ್ಯೂನತೆಯಿಂದ ಕೂಡಿದ್ದು ಕೊರತೆ ಎದ್ದು ಕಾಣುವಂತಿತ್ತು. ಇದಕ್ಕೆ ಪ್ರಬಲ ಎಲೀಟುಗಳು ದನಿಗೂಡಿಸಿದವು. ಆದರೆ ವಿಭಿನ್ನ ಭಾಷೆ ಮತ್ತು ಸಾಂಸ್ಕೃತಿಕ ಪ್ರದೇಶಗಳ ಜನಗಳು ನೆಹರೂ ಕಲ್ಪನೆಯ ಅಖಂಡ ಭಾರತವನ್ನು ತಿರಸ್ಕರಿಸಿದರು. ಈ ಜಾತ್ಯತೀತ ನೆಹರೂ ಮಾದರಿಯು ಕೋಮುವಾದಿ ಮತ್ತು ಭಾರತೀಯರೆನ್ನಲು ನಿರಾಕರಿಸುವ ವಿನಾಶಕಾರಿ ಪರಿಕಲ್ಪನೆಯ ಸವಾಲನ್ನೆದುರಿಸಬೇಕಿದೆ. ಹಿಂದುತ್ವ ಅನುಯಾಯಿಗಳಿಗೆ ರಾಷ್ಟ್ರೀಯರು ಅಂದರೆ ಸಾಂಸ್ಕೃತಿಕವಾಗಿ ಏಕರೂಪದ ಮತ್ತು ಭಾರತದ ಬಗೆಗೆ ನಿರ್ಬಂಧಿತ ಅರ್ಥ ಕಲ್ಪಿಸುತ್ತದೆ. ಈ ವಾದಕ್ಕೆ ಬೆಂಬಲವಿದ್ದರೂ ಹೆಚ್ಚಿನ ಜನ ಇದನ್ನು ಒಪ್ಪುವುದಿಲ್ಲ. ಬಿಜೆಪಿಯ ಉಪಸ್ಥಿತಿಯಲ್ಲೂ ಒಬ್ಬ ಭಾರತೀಯನಾಗಿರುವುದರ ಅರ್ಥ ಏನೆಂಬುದಕ್ಕೆ ದೇಶದ ನಾನಾ ಭಾಗಗಳಿಂದ ವಿಭಿನ್ನ ವ್ಯಾಖ್ಯೆ ವ್ಯಕ್ತವಾಗುತ್ತಿದೆ. ಬಿಜೆಪಿ ಒಂದು ಅಧಿಕಾರ ಕೇಂದ್ರಕರಣದ ಪಕ್ಷವಾಗಿದ್ದು ರಾಷ್ಟ್ರದ ಸುಸಂಗತೆಗೆ ಅಗತ್ಯವಾದ ಮತ್ತು ಎನ್ ಡಿ ಎ ಮೈತ್ರಿ ಆಳ್ವಿಕೆಯ ಪ್ರಮುಖ ಅಭಿಬಾಜ್ಯ ಅಂಗವೆನಿಸಿದೆ. ಇದು ರಾಜಕಾರಣ ಕವಚದ ಪ್ರಬಲ ಸ್ವರೂಪದ ನಿರ್ದಿಷ್ಟ ಟ್ರೆಂಡ್ ಎಂಬುದನ್ನು ಸಾರುತ್ತದೆ ಮತ್ತು ಸಮಾಜದಲ್ಲಿ ನಿಧಾನವೆಂದರೂ ಬಿರುಸಿನ ಮಾದರಿಯಲ್ಲಿ ಅದು ವ್ಯಕ್ತಗೊಳ್ಳುತ್ತದೆ. ಬಿಜೆಪಿಯ ಭಾರತ ವಿಷನ್ ಹಿಂದೂ, ಹಿಂದಿ ಮತ್ತು ಹಿಂದೂಸ್ಥಾನ್ ಮತ್ತು ಈ ಕೊನೆಯದು ನಿಖರವಾದ ಹಿಂದೂ ಸಂಸ್ಕೃತಿಯೊಂದಿಗೆ ಇಂಡೋ-ಗಂಗಾ ಭಾಗದ ಆಂತರ್ಯದಲ್ಲಿ ಸೇರಿದೆ. ಕನಸಿನ ಭಾರತದ ಈ ರೂಪು ತಳೆಯುತ್ತಿರುವ ಪರ್ಯಾಯವು ಪಲ್ಲಟವಾಗತಕ್ಕ ಘಟನೆಗಳಾಗದೆ ಕಳೆದ ೫೦ ವರ್ಷಗಳಲ್ಲಿ ಭಾರತೀಯರ ವೈವಿಧ್ಯತೆಯ ಅನುಭವದೊಂದಿಗೆ ನಿರೀಕ್ಷೆ, ವೈಫಲ್ಯ, ಆಶಯ ಮತ್ತು ಭ್ರಮ ನಿರಸನವನ್ನು ಆಧರಿಸಿದೆ. ಪಶ್ಚಿಮಬಂಗಾಳ ಮತ್ತು ಮಣಿಪುರ ಅಥವಾ ಆಂಧ್ರ ಮತ್ತು ಸಿಕ್ಕಿಂ ಪ್ರದೇಶದ ಜನರ ಅನುಭವಗಳು ಉದಾಹರಣೆಗೆ ಹಿಂದಿ ಹಿಂದೂಸ್ತಾನ್ ಭಾಗದಿಂದ ವಿಶಿಷ್ಟವಾಗಿದೆ. ಭಾರತೀಯ ಜನಗಳ ಇಮೇಜಿಗೆ ವಿಶಿಷ್ಟ ರುಚಿಗಳಿವೆ. ಹಿಂದಿನ ನ್ಯೂನತೆ ಹೊರರೀತಿಯ ಚರ್ಚೆಯನ್ನುಂಟುಮಾಡಿ ಗೊಂದಲ ಸೃಷ್ಟಿಸಿದೆ. ಕೆಲವೊಮ್ಮೆ ಇಲ್ಲಿನ ದಲಿತರು, ಒಬಿಸಿ ಮತ್ತು ಮಹಿಳೆ ಮತ್ತಿತರ ಧಾರ್ಮಿಕ ಗುಂಪುಗಳೊಳಗೆ ಮಹತ್ತರವಾದ ಬದಲಾವಣೆಗಳು ಜರುಗುತ್ತಿದ್ದವು. ಇಂದಿನ ಬ್ರಾಹ್ಮಣೇಕೃತ ಸಂಸ್ಕೃತದ ಕನಸಿನ ಭಾರತವು ಈಗ ಪ್ರಶ್ನಾರ್ಹವಾಗಿದೆ. ಜಮ್ಮು ಕಾಶ್ಮೀರ ಮತ್ತು ಈಶಾನ್ಯದ ಕೆಲ ಭಾಗಗಳಲ್ಲಿ ತೊಂದರೆಯಿದ್ದರೂ ಭಾರತ ಒಂದು ವಿಶಿಷ್ಟವಾದ ರಾಷ್ಟ್ರವೆಂದು ಅತಿಯಾಗಿ ಒಪ್ಪುತ್ತಾರೆ. ಇದು ಇತರ ದೇಶಗಳಾದ ಸ್ಪೇನ್, ಈಜಿಪ್ಟ್ ಅಥವಾ ಬಾಂಗ್ಲಾದಂತಲ್ಲ. ಉಗ್ರ ಹಿಂದೂ ಬಲಪಂಥೀಯ ಒಪ್ಪಿತ ಸ್ವರದ ನಡುವೆಯೂ ಭಾರತದ ವಿಶಿಷ್ಟತೆ ಮತ್ತು ವಿವಿಧತೆ ರಾಷ್ಟ್ರೀಯ ಐಕ್ಯತೆಯನ್ನು ಗಟ್ಟಿಗೊಳಿಸುವುದರಲ್ಲಿ ಅತೀವವಾದ ಪ್ರಭಾವ ಬೀರುತ್ತದೆ ಎಂಬುದನ್ನು ಎಲ್ಲರೂ ಗುರುತಿಸುತ್ತಾರೆ.

ಈ ಗುರುತಿಸುವಿಕೆಯೇ ಎಡ ಮತ್ತಿತರ ಪುರೋಗಾಮಿ ಪ್ರಜಾತಂತ್ರ ಸಂಘಟನೆಗಳು ಭಾರತ ವಿಭಿನ್ನ ಭಾಷೆಗಳ-ಸಾಂಸ್ಕೃತಿಕ ಗುಂಪುಗಳ ಐಚ್ಛಿಕ ಒಕ್ಕೂಟವಾಗಬಹುದೆಂಬುದನ್ನು ಒತ್ತಿ ಹೇಳುತಿವೆ. ಆಳುವವರು ಇವುಗಳನ್ನು ಭಾರತದ ಭಾಗವೆಂದು ಒತ್ತಾಯಪೂರ್ವಕವಾಗಿ ಮೇಲಿಂದ ಹೇರಲಾಗದು. ಹಾಗಾದಲ್ಲಿ ಪ್ರಜಾತಂತ್ರ ವೈವಿಧ್ಯತೆ, ವಿಭಿನ್ನ ಚರಿತ್ರೆಯಿಂದ ಅಸ್ತಿತ್ವಗೊಂಡ ರಾಷ್ಟ್ರದಲ್ಲಿ ಏಕರೂಪದ ಭಾರತ ಇರಲಾರದು. ಹೀಗೆ ಏಕತೆ ಮತ್ತು ವೈವಿಧ್ಯತೆಯ ಹೊಸ ರೂಪು ಆಕೃತಿಗೊಳ್ಳುತ್ತಿದ್ದು ವೈವಿಧ್ಯಯೆಂಬ ಬೆಳವಣಿಗೆಯೆ ಏಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ದೇಶ ವಿಭಜನೆ ಸಂದರ್ಭದಲ್ಲಿ ಪ್ರಚಲಿತವಿದ್ದ ಹಾಗೂ ರಾಷ್ಟ್ರವಿರೋಧಿ ಎಂದು ಗುರುತಿಸಲ್ಪಡುವುದು ಅಂತಿಮವಾಗಿ ಈಗ ನಿಲ್ಲಿಸಲ್ಪಟ್ಟಿದೆ. ರಾಷ್ಟ್ರೀಯ ಏಕತೆಯ ಅಪಾಯವು ಅತಿಯಾದ ವೈವಿಧ್ಯತೆ ಮತ್ತದರ ವಿಭಿನ್ನ ವ್ಯಕ್ತಪಡಿಸುವಿಕೆಯಲ್ಲಿಲ್ಲ. ಅದು ಬಿಜೆಪಿಯು ಪ್ರಯತ್ನಿಸುತ್ತಿರುವ ವಿಭಿನ್ನ ರಾಷ್ಟ್ರದ ವ್ಯಾಖ್ಯಾನ ಮತ್ತದರ ರೋಗಗ್ರಸ್ತ ರಾಷ್ಟ್ರೀಯತೆಯಲ್ಲಿದೆ. ಬಿಜೆಪಿಯ ರಾಜಕಾರಣವು ಈ ತರದ ಭಾರತ ರಾಷ್ಟ್ರ ಭಾವನೆಯ ಪ್ರಜಾತಾಂತ್ರಿಕತೆಯ ಅನುಭವವನ್ನು ಬದಲಾಸುವುದಾಗಿದೆ. ಈ ಬಗೆಗಿನ ಸತ್ಯಾಸತ್ಯತೆ ತಿಳಿದು ನೈಜ ಟ್ರೆಂಡ್ ನ ಅಂಶಗಳನ್ನು ಹೊರತರಲು ಸಹಾಯ ಮಾಡಬೇಕು.

ಕಳೆದ ಐವತ್ತು ವರ್ಷಗಳಿಂದೀಚೆಗೆ ರಾಷ್ಟ್ರದ ಬಗೆಗಿನ ಏಕರೂಪದ ವ್ಯಾಖ್ಯಾನದ ವಿಘಟನೆಯನ್ನು ಯಾರೂ ಅತಿಯಾಗಿ ಗಮನಿಸದಿರುವುದು ಮತ್ತು ಚರ್ಚಿಸದಿರುವುದು ಭಾರತದ ಒಂದು ವಾಸ್ತವ ಲಕ್ಷಣವೆನಿಸಿದೆ. ರಾಷ್ಟ್ರದ ಬಗ್ಗೆ ಜನರಿಗಿರುವ ಪ್ರಜಾತಂತ್ರ ಪ್ರತಿಪಾದನೆಯ ಪರಿಣಾಮ ಇದಾಗಿದೆ. ಜನರ ವೈವಿಧ್ಯತೆ ಮತ್ತು ಭಿನ್ನತೆಗೆ ಮಿತಿ ವ್ಯಕ್ತಪಡಿಸುವಂತಹ ಏಕವಿನ್ಯಾಸದ ಪ್ರಯತ್ನದ ವಿರೋಧದ ಮಧ್ಯೆಯೂ ಈ ಅಸಮಗ್ರತೆ ಉಂಟಾಗಿದೆ. ಈ ಪ್ರತಿಪಾದನೆ ಗುರುತರವಲ್ಲದ ಬೆಳವಣಿಗೆಯಾದರೂ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲೂ ಇತ್ತು ಎಂದು ನಾನು ವಾದಿಸುತ್ತೇನೆ. ಬೆಳೆಯುತ್ತಿರುವ ಒಂದು ಒಕ್ಕೂಟದ ಅವಶ್ಯಕತೆಯ ಪರಿಪೂರ್ಣತೆಗೆ ನಾವು ಇದನ್ನು ಗಮನಿಸಬೇಕು.

೧೯೯೬ರ ಸಂಸದೀಯ ಚುನಾವಣಾ ನಂತರದ ಬೆಳವಣೆಗೆಗಳು ಭಾರತ ರಾಷ್ಟ್ರ ಮತ್ತದರ ವಿಭಿನ್ನ ಭಾಷಾವಾರು ಮತ್ತು ಸಾಂಸ್ಕೃತಿಕ ಸಮುದಾಯಗಳಿಂದ ಕೂಡಿದ ಅಂಗರಾಜ್ಯಗಳ ಸಂಬಂಧ ಸ್ವರೂಪವನ್ನು ನಿಧಾನವಾಗಿ ಬದಲಿಸಿದೆ. ಮೊದಲಿಗೆ ಪ್ರಾದೇಶಿಕ ಪ್ರತಿಪಾದನೆಗಳು ಭಾರತ ಒಕ್ಕೂಟದ ವಿರುದ್ಧ ಸೆಟೆದೇಳುವಂತೆ ಮಾಡುವಂತಹ ಒಂದು ಬಲವಾದ ಪ್ರವೃತ್ತಿ ಇತ್ತು. ೧೯೬೦ ರಿಂದೀಚೆಗೆ ರಾಷ್ಟ್ರೀಯ ಏಕತೆಗೆ ಪ್ರಾದೇಶಿಕತೆಯ ಬೆದರಿಕೆ ಕುರಿತು ಚರ್ಚೆ ಹೆಚ್ಚುತ್ತಲಿದೆ. ಪ್ರಾದೇಶಿಕ ಪಕ್ಷಗಳಿಂದ ರೂಪುಗೊಂಡ ಸರಕಾರಗಳನ್ನು ಕೇಂದ್ರ ಸರಕಾರವು ಉಚ್ಛಾಟಿಸಿರುವುದನ್ನು ಜನರು ಮರೆತಿಲ್ಲ. ರಾಷ್ಟ್ರತ್ವದ ವ್ಯಾಖ್ಯೆ ಮತ್ತು ಏಕತೆಯನ್ನು ಪ್ರಾದೇಶಿಕ ಪ್ರತಿಪಾದನೆ ಪ್ರಶ್ನಿಸುತ್ತದೆ ಎಂದು ಪರಿಗಣಿಸಲಾಗಿತ್ತು.

ಅನಂತರ ಹಲವಾರು ಬದಲಾವಣೆಗಳು ನಡದಿವೆ. ರಾಷ್ಟ್ರ ಮತ್ತು ಪ್ರಾದೇಶಿಕ ಪಕ್ಷಗಳ ಮತ ಗಳಿಕೆಯ ವಿತರಣೆಯಲ್ಲಿ ಈ ಬದಲಾವಣೆಗಳು ಸಾಮಾನ್ಯವಾಗಿ ಸ್ಪಟ್ಟವಾಗಿವೆ. ೧೯೭೧ರಲ್ಲಿ ರಾಷ್ಟ್ರೀಯ ಪಕ್ಷಗಳ ಮತಗಳಿಗೆ ಶೇಕಡ ೭೮. ೧೯೬೭ರಲ್ಲಿ ಮೊದಲಬಾರಿಗೆ ಪ್ರಾದೇಶಿಕ ಪ್ರತಿಪಾದನೆ ಬಲಗೊಂಡರೂ ರಾಷ್ಟ್ರೀಯ ಪಕ್ಷಗಳು ಶೇಕಡ ೭೬ರಷ್ಟು ಮತಗಳನ್ನು ಪಡೆದವು. ೧೯೮೦ರಲ್ಲಿ ಇದು ಶೇಕಡ ೮೫ಕ್ಕೆ ಬಿರುಸಿನಿಂದ ಏರಿತು. ಮತ್ತು ೧೯೮೪ರಲ್ಲಿ ಶೇಕಡ ೭೮ಕ್ಕೆ ಇಳಿದು ೧೯೯೧ರಲ್ಲಿ ಮತ್ತೆ ಶೇಕಡ ೮೧ಕ್ಕೆ ಏರಿತು. ಕುತೂಹಲದ ಸಂಗತಿಯೆಂದರೆ ೧೯೯೬ರ ಸುಮಾರಿಗೆ ರಾಷ್ಟ್ರೀಯ ಪಕ್ಷಗಳ ಮತಗಳಿಕೆ ಪ್ರಮಾಣವು ಶೇಕಡ ೧೨ರಷ್ಟು ಕುಸಿಯಿತು. ಆಗ ಅದು ಶೇಕಡ ೬೯ಕ್ಕೆ ನಿಂತಿತು. ರಾಜಕೀಯ ವೀಕ್ಷಕರು ಮತ್ತು ಕಾರ್ಯಕರ್ತರು ಹೇಳುವಂತೆ ಮುಂದಿನ ದಿನಗಳಲ್ಲಿ ಈ ಟ್ರೆಂಡು ಮೇಲೇರದೆ ಹಾಗೆ ಉಳಿಯಬಹುದು. ಪ್ರಾದೇಶಿಕ ಗುರುತಿಸುವಿಕೆಯ ವಿಭಿನ್ನ ಪ್ರತಿಪಾದನೆಗಳು ರಾಷ್ಟ್ರಿಯ ವ್ಯಾಖ್ಯೆಯ ಭಾಗವಾಗಿರುವುದೇ ಹಿಂದಿನದಕ್ಕಿಂತ ಈ ವ್ಯತ್ಯಾಸಕ್ಕೆ ಕಾರಣ. ರಾಷ್ಟ್ರೀಯ ಮತ್ತು ಪ್ರಾದೇಶಿಕತೆಗಳ ಮಧ್ಯೆ ಹೇಳುವಂತಹ ವೈರತ್ವವಿಲ್ಲ. ಇದನ್ನು ರಾಜಕಾರಣದ ಮಟ್ಟ ಮತ್ತು ಭಾರತ ರಾಷ್ಟ್ರವನ್ನು ವ್ಯಾಖ್ಯಾನಿಸುವುದರಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ರಾಜಕಾರಣದ ಪ್ರಯೋಗದಲ್ಲಿ ಇವೆರಡೂ ಒಟ್ಟು ಸೇರಬಹುದು. ಆದರೆ ವಿಮರ್ಶಾತ್ಮಕವಾಗಿ ಇವನ್ನು ಸುಲಭದಲ್ಲಿ ಪ್ರತ್ಯೇಕಗೊಳಿಸಬಹುದು.

ರಾಷ್ಟ್ರೀಯ ಮತ್ತು ಪ್ರಾದೇಶಿಕದ ಸಂವಿಧಾನವನ್ನು ವ್ಯವಸ್ಥೆಯ ಆಡಳಿತದ ನಡವಳಿಕೆಯಲ್ಲಿ ಪರಿಶೀಲಿಸಬಹುದು. ೧೯೯೬ರ ಚುನಾವಣೆಗಳ ನಂತರ ಕೇಂದ್ರದಲ್ಲಿ ರೂಪುಗೊಂಡ ಸರಕಾರದ ಸ್ವರೂಪವು ರಾಷ್ಟ್ರ ಮತ್ತು ರಾಜ್ಯದ ಸಹ ವ್ಯವಸ್ಥೆ ಪಾಲನೆ (ಸಹಸರಕಾರ ಆಡಳಿತ) ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಇದು ಹಿಂದಿನ ಸಾಂಪ್ರದಾಯಿಕ ಸಮ್ಮಿಶ್ರಕ್ಕಿಂತ ವಿಶಿಷ್ಟವಾಗಿದೆ. ಅಂದರೆ ಪ್ರಾದೇಶಿಕ ಶಕ್ತಿಗಳು ಕೇಂದ್ರದ ವಿರುದ್ಧವಾಗಿದರೆ ಅದರ ನೇರ ಅಂಗಗಳಾಗಿದ್ದವು. ಪ್ರಾದೇಶಿಕಗಳಿಂದ ಪ್ರತಿನಿಧಿಸಲ್ಪಟ್ಟು ರೂಪಿತವಾದ ರಾಜಕಾರಣದಿಂದ ಕೇಂದ್ರದ ಅಧಿಕಾರವು ರಚನೆಯಾಗುತ್ತಿತ್ತು. ರಾಜಕೀಯ ಪಕ್ಷಗಳು ಸಹಕಾರಿ ಒಕ್ಕೂಟದ ಕುರಿತು ಮಾತನಾಡಿವೆ. ಆದರೆ ನಾವು ನೋಡುತ್ತಿರುವದು ಸಹ-ಒಕ್ಕೂಟ ಸರಕಾರ. ರಾಜ್ಯದ ರಾಜಕೀಯ ಪಕ್ಷಗಳಿಂದ ಕೇಂದ್ರವನ್ನು ಏನನ್ನು ಎದುರು ನೋಡುತ್ತಿದೆ. ಅದು ಕೇಂದ್ರದಷ್ಟೇ ಪರಿಣಾಮಕಾರಿಯಾಗಿ ಪರಿಗಣಿಸಲು ಬೇಡಿಕೆ ಮುಂದೊಡ್ಡಿದೆ. ಕೇಂದ್ರ ಮತ್ತು ರಾಷ್ಟ್ರೀಯ ಪಕ್ಷಗಳಷ್ಟೇ ಸಮಾನವಾಗಿ ಈ ಪ್ರಾದೇಶಿಕ ಬಲ ರೂಪುಗೊಳ್ಳುತ್ತಿದೆ. ೧೯೯೬ರಿಂದಿಚೀನ ಸರಕಾರಗಳು ಈ ಸಂಗತಿಯನ್ನು ವ್ಯಕ್ತಪಡಿಸುತ್ತದೆ. ಇದು ರಾಷ್ಟ್ರ ಮತ್ತು ಪ್ರಾದೇಶಿಕಗಳ ಸಂಗಮವಾಗಿದ್ದು ರಾಜಕೀಯ ಪಕ್ಷಗಳ ಹೆಸರಿನಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ.

೧೯೯೬ರಲ್ಲಿ ಕೂಲಂಕಷವಾಗಿ ಪರಿಶೀಲಿಸಿದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕುರಿತು ಶೇಕಡ ೨೧ರಷ್ಟು ಜನ ಅಭಿಮತವಿತ್ತರು. ೧೯೭೧ರಲ್ಲಿ ಕೇವಲ ಶೇಕಡ ೧೪ರಷ್ಟು ಎರಡು ಸರಕಾರಗಳ ಬಗೆಗೆ ಅಭಿಪ್ರಾಯಸಿದರು. ಹಾಗೆಯೇ ೧೯೯೬ರದಲ್ಲಿ ಹೆಚ್ಚಿನ ಶೇಕಡವಾರು ಮಂದಿ ರಾಜ್ಯ ಸರಕಾರದ ಬಗೆಗೆ (೨೩ ಶೇಕಡ) ಅಭಿಪ್ರಾಯಿಸಿದರೆ, ೧೯೭೧ರಲ್ಲಿ ಅದು ಶೇಕಡ ೧೯ ಆಗಿತ್ತು. ಪರ್ಯಾಯವಾಗಿ ೧೯೭೧ರ ಶೇಕಡ ೨೧ರ ಬದಲು ೧೯೯೬ರಲ್ಲಿ ಕೆಲವೇ ಅಂದರೆ ಶೇಕಡ ೧೧ರಷ್ಟು ಮಾತ್ರ ಕೇಂದ್ರ ಸರಕಾರದ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ವಿರುದ್ಧವಾಗಿ ೧೯೯೬ರಲ್ಲಿ ಎರಡೂ ಸರಕಾರಗಳ ಬಗೆಗೆ ಶೇಕಡ ೪೦ರಷ್ಟು ಮಂದಿ ಯಾವುದನ್ನೂ ವ್ಯಕ್ತಪಡಿಸಲಿಲ್ಲ. ೧೯೭೧ರಲ್ಲಿ ಇದು ಇನ್ನೂ ಕಡಿಮೆಯಾಗಿ ಶೇಕಡ ೨೫ಕ್ಕೆ ಇಳಿಯಿತು. ಆಶ್ಚರ್ಯವೆಂದರೆ ೧೯೯೬ರಲ್ಲಿ ಕೇವಲ ಶೇಕಡ ೫ರಷ್ಟು ಮಂದಿ ೧೯೭೧ರ ಶೇಕಡ ೨೧ಕ್ಕೆ ಹೋಲಿಸಿದಾಗ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ೨೫ ವರ್ಷಗಳ ಹಿಂದಿನದ್ದಕ್ಕಿಂತ ಇದು ಹೆಚ್ಚಾಗಿ ತೀರ್ಮಾನಿಸಲು ಮತ್ತು ಒಂದು ನಿಲುವು ತೆಗೆದುಕೊಳ್ಳಲು ಸಕಾಲವಾಗಿದೆ. ಕೇಂದ್ರ ಸರಕಾರದೊಳಗಿನ ಅಧಿಕಾರ ಸಂಬಂಧಗಳ ರಚನೆ ಮತ್ತು ನಿಲುವಿನಲ್ಲಿ ಪ್ರಕ್ರಿಯೆಯಿಂದ ರಾಷ್ಟ್ರವು ತನ್ನ ನಿರ್ದಿಷ್ಟತೆಗೆ ಹೆಚ್ಚು ಒತ್ತು ನೀಡತೊಡಗಿದೆ. ಈ ಸಂಕೀರ್ಣ ತಿಳುವಳಿಕೆಯಿಂದಾಗಿ ಪಾಶ್ಚಾತ್ಯ ಪ್ರೇರಿತ ಎಲೀಟುಗಳ ವ್ಯಾಖ್ಯೆಗೆ ತಡೆಯೊಡ್ಡಿದಂತಾಯಿತು.

ಸ್ವಾತಂತ್ರ‍್ಯನಂತರ ಸ್ವಾತಂತ್ರ‍್ಯ ಚಳವಳಿ ಪ್ರಣೀತ ರಾಷ್ಟ್ರೀಯತೆಯ ತರ್ಕದಲ್ಲಿ ಕ್ರಮೇಣ ತಿರುವು ಮುರುವು ಉಂಟಾದವು. ೧೯೮೪ರ ಮೊದಲು ಅದು ಯಾವುದೇ ಬಾಹ್ಯ ಶಕ್ತಿಗಳ ಆಧಿಪತ್ಯವನ್ನು ಪ್ರಶ್ನಿಸಲು ತಕ್ಕುದಾದರೆ ತಮಿಳುನಾಡು ಮತ್ತು ಅಸ್ಸಾಂ ಸಂದರ್ಭದಲ್ಲಿ ಈ ತರ್ಕ ನಡೆಯದಾಯಿತು. ಕೇಂದ್ರಕ್ಕೆ ತನ್ನ ಅಧಿಕಾರದ ಸ್ವರೂಪದಿಂದ ಪ್ರದೇಶ ಘಟಕಗಳು ಬಾಹ್ಯವಾಗುವಂತಾಯಿತು. ಇಂಥ ಬಹಳಷ್ಟು ಪ್ರದೇಶ ಘಟಕಗಳು ತಾವು ಕೂಡ ರಾಷ್ಟ್ರದ ಅಸ್ತಿತ್ವ ಮಾದರಿಗಳೆಂಬಂತೆ ನಡೆದು ಕೊಳ್ಳಲಾರಂಭಿಸಿದವು. ೧೯೮೯ರಿಂದ ತೊಡಗಿದಂತೆ ೧೯೯೬ರ ಸಂಸದೀಯ ಚುನಾವಣೆಯ ನಂತರ ಇದು ಇನ್ನಷ್ಟು ಶೃತಗೊಂಡಿತು. ಎಲ್ಲ ವಿಧದಲ್ಲೂ ಕೇಂದ್ರ ಪ್ರಾಬಲ್ಯವು ಮರೆಗೆ ಸರಿದಂತಾಯಿತು. ಹೊಸರೂಪದ ರಾಷ್ಟ್ರ ಸಂಬಂಧಗಳ ವಿಶಿಷ್ಟತೆಯನ್ನು ನೋಡುವಂತಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ಮುಖ್ಯವಾಗಿ ಎರಡು ವಿರೋಧಾರ್ಥವಾದ ಮತ್ತು ಏಕತಾನದ ಭಾರತೀಯ ರಾಷ್ಟ್ರತೆಯ ವ್ಯಾಖ್ಯೆಯನ್ನು ಮುಂದಿಟ್ಟಿತು. ಏಕತ್ವದ ಪರಿಕಲ್ಪನೆಯ ಮೂಲಕವೇ ಭಾರತವನ್ನು ತಿಳಿಯಬಹುದೆಂದರು. ಭಾರತವು ಒಂದು ರಾಷ್ಟ್ರವಾಗಿ ಪ್ರಾಚೀನದಿಂದಲೂ ಅಸ್ತಿತ್ವದಲ್ಲಿತ್ತೆಂದು ಅವರು ಸಾರಿದರು. ಪಶ್ಚಿಮ ಯುರೋಪಿನ ಮಾದರಿಯಲ್ಲಿರುವ ರಾಷ್ಟ್ರೀಯತೆ ಮತ್ತು ಪ್ರಭುತ್ವ ಮಾದರಿ ರಾಷ್ಟ್ರಕಲ್ಪನೆ ಕಾಂಗ್ರೆಸ್ಸಿನದ್ದಾಗಿದೆ. ಜ್ಯಾತ್ಯತೀತ ನಿಲುವಿನ ಕಾಂಗ್ರೆಸ್ ಪರಿಕಲ್ಪನೆ ಫ್ರೆಂಚ್ ಕ್ರಾಂತಿ ನಂತರದ್ದು ನೆಹರೂ ಮಾದರಿಯ ರಿಯಾಯತಿ ಎಂದರೆ ವೈವಿಧ್ಯತೆ. ಯುರೋಪಿನಲ್ಲಿ ಎಲ್ಲ ತರದ ವೈರುಧ್ಯತೆ ಪಡೆದು ಏಕತೆಗೆ ರೂಪಾಂತರವಾಗುತ್ತಿದೆ. ಆದರೆ ಬಿಜೆಪಿಗೆ ಭಾರತವೆಂದರೆ ಮೊದಲನೆಯ ಹಿಂದೂ ರಾಷ್ಟ್ರ ಮತ್ತು ಅದರ ಸಂಸ್ಕೃತಿಯ ಮೂಲದ ನಿರಂತರತೆಗೆ ಮುಖ್ಯವಾಗಿದ್ದು ಹಿಂದೂ ಧರ್ಮ, ಹಾಗಾಗಿ ಸಾವರ್ ಕರ್ ಅವರ ಮಾತಿನಂತೆ ರಾಜಕಾರಣವನ್ನು ಹಿಂದೂಮಯಗೊಳಿಸಿ ಹಿಂದೂ ಪಾರುಪತ್ಯಕ್ಕಾಗಿ ಹೋರಾಟ. ಹಾಗಾಗಿ ಧರ್ಮನಿರಪೇಕ್ಷವೆಂಬುದು ಖೋಟಾ ಮತ್ತು ಪರಕೀಯ. ಅದು ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿದೇಶಿ ಪ್ರಭಾವದ ಇರುವಿಕೆಗಿರುವ ರಿಯಾಯಿತಿಯಾಗಿದೆ. ಈ ತಿರುವಿನ ಹಿಂದೆ ಹಲವು ಪ್ರಾದೇಶಿಕ ಅಸ್ಮಿತೆಗಳ ನ್ಯಾಯಸಮ್ಮತ ದ್ವೇಷವಿದೆ. ಸೀಮಿತ ವ್ಯಾಖ್ಯೆಯ ಹೇರಿಕೆ ವಿರುದ್ಧ ಅದು ಒಂದು ರಾಜ್ಯದ ರೂಪದಲ್ಲಿರಬಹುದು. ಈಶಾನ್ಯ ಭಾಗ ಅಥವಾ ದಕ್ಷಿಣ ಪ್ರಸ್ಥಭೂಮಿಯಲ್ಲಿ ಒಬ್ಬ ಭಾರತೀಯತೆಯನ್ನು ಹೊಂದುವುದು ಇಂಡೋ-ಗಂಗಾಬೆಲ್ಟಿನ ನಿವಾಸಿಗಳ ಹಾಗೆ ಮೌಲ್ಯಯುತವಾದ ನ್ಯಾಯಸಮ್ಮತವಾಗಲಾರದು. ಇಲ್ಲವೇ ಹಾಗೆ ಕಾಣಲಾರದು. ರಾಷ್ಟ್ರದ ಪ್ರಾತಿನಿಧ್ಯವೇ ವೈವಿಧ್ಯಮಯ ವ್ಯಾಖ್ಯೆಯ ಎರಡು ಏಕರೂಪಗಳ ಮೌನವಾದ ಪ್ರಶ್ನಿಸುವಿಕೆಯನ್ನೊಳಗೊಂಡಿದೆ. ಇದು ಸಾಂಸ್ಥೀಕರಣ ಇಲ್ಲವೇ ಪರಿಕಲ್ಪನಾತ್ಮಕವಲ್ಲವಾದುದರಿಂದ ಈ ಪ್ರಕ್ರಿಯೆಗೆ ಸ್ಫರ್ಧೆ ನೀಡುವುದು ಬಹಳ ಸಲೀಸು. ಹಾಗಾಗಿ ಈ ಪ್ರಕ್ರಿಯೆಗೆ ಒಂದು ಪ್ರಜ್ಞಾಪೂರ್ವಕವಾದ ಸೈದ್ಧಾಂತಿಕ ವಿವರಣೆ ಅತೀ ಅಗತ್ಯವಾಗಿದೆ. ಇದರ ಪ್ರತಿಪಾದನೆ ಇಷ್ಟರತನಕ ನಡೆದಿಲ್ಲ.

ಪ್ರಾದೇಶಿಕ ವರ್ಗ ಶಕ್ತಿಗಳು ರಾಷ್ಟ್ರವನ್ನು ಪುನರ್ ವ್ಯಾಖ್ಯಾನಿಸಲು ಸ್ಥಳೀಯ ಅಂದೋಲನಕ್ಕೆ ಬಲ ನೀಡಬಹುದು. ಉದಾಹರಣೆಗೆ ಪಂಜಾಬಿನ ಶ್ರೀಮಂತ ರೈತರು ಅಥವಾ ಜಮೀನ್ದಾರರು ಮತ್ತು ತಮಿಳುನಾಡಿನ ಸ್ಥಳೀಯ ಬೂರ್ಶ್ವಾಗಳು ನಿರ್ದಿಷ್ಟ ಹಂತಗಳಲ್ಲಿ ಭಾರತೀಯ ಏಕಸ್ವಾಮ್ಯ ಬೂರ್ಶ್ವಾಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡರು. ೧೯೬೦ರಿಂದ ೧೯೮೮ರವರೆಗಿನ ಪ್ರಾದೇಶಿಕ ಆಂದೋಲನಗಳಿಂದ ರಾಜ್ಯ ಸರ್ಕಾರವು ಅಖಿಲ ಭಾರತ ಬೂರ್ಶ್ವಾದೊಂದಿಗೆ ಚೌಕಾಸಿ ಮಾಡಲು ಒತ್ತಾಯಿಸಿತು. ಇದು ಕೇಂದ್ರ ಮತ್ತು ರಾಜ್ಯಗಳ ಮಧ್ಯದ ದ್ವೇಷಕ್ಕೆ ಮೂಲವಾಯಿತು. ಈ ವೈರುಧ್ಯದ ತೀವ್ರತೆಯಿಂದ ಹೊಸರೀತಿಯ ಸಹಕಾರ ಬಲಗೊಂಡು ಕಾರ‍್ಯಾರ್ಥವಾಗಿದೆ. ಉದಾರೀಕರಣ ಮತ್ತು ರಚನಾತ್ಮಕ ಹೊಂದಾಣಿಕೆಯ ಫಲದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿ ವಿದೇಶಿ ಸಹಯೋಗದೊಂದಿಗೆ ಕೈಜೋಡಿಸಲು ಉತ್ಸುಕವಾಗಿದೆ. ಇದರಿಂದ ವಿದೇಶಿ ನೇರ ಹೂಡಿಕೆ ಸೌಲಭ್ಯ ದೊರೆಯುತ್ತದೆ. ಈ ಸಹಯೋಗದಿಂದ ಸ್ಥಳೀಯ ಬೂರ್ಶ್ವಾಗಳು ದೊಡ್ಡ ಬೂರ್ಶ್ವಾಗಳಾಗಿ ಬೆಳೆಯಬಹುದು. ಇದರಿಂದ ಪ್ರಜಾತಂತ್ರದಲ್ಲಿ ಎಡಪಂಥೀಯರು ಭಾವಿಸಿದಂತೆ ವಿದೇಶಿ ಬಂಡವಾಳದ ಅತಿಯಾದ ಸಹಯೋಗ ಸ್ಪರ್ಧೆಯಿಂದ ಬೂರ್ಶ್ವಾ ಏಕಸ್ವಾಮ್ಯ ಹಿಡಿತವು ದುರ್ಬಲಗೊಳ್ಳುವುದು. ೧೯೬೦ ಮತ್ತು ೧೯೭೦ರಲ್ಲಿ ರಾಜ್ಯ ಸ್ವಾಯತ್ತ ಹೋರಾಟದತ್ತ ಮುಂಚೂಣೆಯಲ್ಲಿದ್ದ ಪ್ರಾದೇಶಿಕ ರಚನೆಗಳು ಬಿಜೆಪಿ ಅಸ್ತಿತ್ವದಲ್ಲಿರುವ ಭಾಗಗಳಲ್ಲಿದ್ದು ಯಾವುದೇ ಪ್ರಮುಖ ತಿರುವು ನೀಡಲು ವಿಫಲವಾಗಿತ್ತು. ಈ ಪ್ರಾದೇಶಿಕಗಳು ಕೆಲವೊಮ್ಮೆ ಪಾನ್ ಇಂಡಿಯನ್ ರಾಷ್ಟ್ರೀಯತೆಯನ್ನು ಅಲ್ಲಗಳೆದು ಕೇಂದ್ರದ ಪ್ರಾಬಲ್ಯದ ವಿರುದ್ಧ ವಾದಿಸಿತ್ತು. ಇಂಥ ವಿಶೇಷ ಷರತ್ತಿನ ಪ್ರತ್ಯೇಕ ಭಾವದ ಪ್ರದೇಶ ಘಟಕಗಳು ಬಿಜೆಪಿಗೆ ಸಾಮೀಪ್ಯವೆನಿಸಿದೆ. ಹಾಗಾದರೆ ಬಿಜೆಪಿಯ ರಾಷ್ಟ್ರೀಯವಾದ ಅಥವಾ ರಾಷ್ಟ್ರಪರಿಕಲ್ಪನೆ ನಿರ್ದಿಷ್ಟ ಪ್ರದೇಶ ಘಟಕಗಳ ಜನರಿಗೆ ಯಾಕೆ ಸ್ಪಂದಿಸುತ್ತದೆ. ೧೯೨೦ರಿಂದ ಸಾವರ್ ಕರ್ ಹಾಗೂ ಬಿಜೆಪಿಯ ಹಿಂದೂ ರಾಷ್ಟ್ರದ ಪರಿಕಲ್ಪನೆಯು ಮುಸ್ಲಿಮರನ್ನು ಒಂದು ಸಂಶಯಾಸ್ಪದರಂತೆ ಕಾಣುತ್ತಬಂದಿದೆ ಮತ್ತು ಇದನ್ನು ವಿಭಿನ್ನ ಸಂದರ್ಭದ ಎಲ್ಲ ಆಯಾಮಗಳಲ್ಲೂ ನೋಡಬಹುದು. ಅದು ಹಿಂದೂ ಮಹಾಸಭಾವಿರಲಿ. ಆರ್ ಎಸ್ ಎಸ್, ಜನ ಸಂಘ ಮತ್ತು ಹೀಗಿನ ಬಿಜೆಪಿ. ಭಾರತದ ಯಾವ ಪ್ರದೇಶದಲ್ಲಿ ಮುಸ್ಲಿಂ ಆಳ್ವಿಕೆಗೆ ಪ್ರತಿರೋಧಗಳು ಉಂಟಾದವೋ ಅಲ್ಲಿ ಈ ರೀತಿಯ ಮುಸ್ಲಿಂ ವಿರೋಧಿ ಧೋರಣೆಗಳು ಉಂಟಾಗಿರುವುದು ಪ್ರಮುಖ ರಾಜಕೀಯ ಲಕ್ಷಣವೆನಿಸಿದೆ. ಇಂಥವು ದೇಶವಿಭಜನೆ ಸೇರಿದಂತೆ ಈ ಪ್ರದೇಶದ ಜನಗಳ ಸಮಷ್ಟಿ ಪ್ರಜ್ಷೆಯ ಭಾಗವಾಗಿದೆ. ಆದ್ದರಿಂದ ಬಲಪಂಥೀಯ ಹಿಂದು ಸಂದೇಶವು ಇವರನ್ನು ಅತಿಯಾಗಿ ಆವರಿಸಿಕೊಂಡಿದೆ.

ಹತ್ತೊಂಬತ್ತನೇ ಶತಮಾನದ ಕೊನೆಯ ಅರ್ಧಭಾಗದ ಆರಂಭದಿಂದಲೂ ಪ್ರಮುಖ ಹಿಂದೂ ಪಂಥದ ಅಧಿನಾಯಕರೆನಿಸಿದ ಶಿವಾಜಿ ಅಥವಾ ಮಹಾರಾಣಾಪ್ರತಾಪರಂತವರು ಜನಸಾಮಾನ್ಯರ ಚಾರಿತ್ರಿಕ ಪ್ರಜ್ಞೆಯ ಭಾಗವಾಗಿದ್ದುದು ಈ ಭಾಗದಲ್ಲೇ ಎನ್ನುವುದು ಕುತೂಹಲಕರವೆನಿಸಿದೆ. ಈ ಚೇತನಗಳು ಈ ಪ್ರದೇಶದ ಜನರಿಗೆ ಚಾರಿತ್ರಿಕ ವ್ಯಕ್ತಿಗಳಾಗಿದ್ದರು. ದಕ್ಷಿಣ ಅಥವಾ ಪೂರ್ವಭಾರತದಲ್ಲಿ ಮುಸ್ಲಿಮರ ಆಳ್ವಿಕೆ ಇರಲಿಲ್ಲವೆಂದಲ್ಲ ಬಂಗಾಳ, ಮೈಸೂರು ಮತ್ತು ನಿಜಾಮ ಮುಂತಾದ ಸಂಸ್ಥಾನಗಳಲ್ಲಿ ಮುಸ್ಲಿಂ ಆಳ್ವಿಕೆಯಿತ್ತು. ದೇಶದ ವಿಭಿನ್ನ ಭಾಗಗಳಲ್ಲಿ ಮುಸ್ಲಿಂ ಆಳ್ವಿಕೆಯನ್ನು ಪ್ರತಿರೋಧಿಸಿದರೂ ಇವು ಮುಸ್ಲಿಮರ ದಾಳಿಯ ವಿರುದ್ಧ ಹಿಂದುಗಳ ದಿಟ್ಟ ಕ್ರಮವೆಂದು ಚರಿತ್ರೆಯಲ್ಲಿ ದಾಖಲಾಗಿಲ್ಲ. ಹಾಗಾಗಿ ಈ ಹೋರಾಟಗಳು ಐತಿಹ್ಯಗಳಾಗಿರಲಿಲ್ಲ ಮತ್ತು ಆದರ್ಶ ಹಿಂದೂ ಪಂಥದ ನಾಯಕರ ಬಗ್ಗೆ ವಿವರ ನೀಡಿಲ್ಲ. ಇನ್ನೊಂದೆಡೆ ಸಿರಾಜ್‌ಉದ್ ದೌಲ ಅಥವಾ ಟಿಪ್ಪುಸುಲ್ತಾನರಂಥ ಕೆಲ ಮುಸ್ಲಿಂ ರಾಜರು ವಸಾಹತು ವಿರುದ್ಧ ಹೋರಾಡಿ ದಿಟ್ಟತನದ ಸಂಕೇತಗಳೆನ್ನಿಸಿಕೊಂಡ ಕಾರಣ ಹಿಂದೂ ಕೋಮುವಾದದ ಮಧ್ಯೆಯೂ ಮನೋಧರ್ಮವು ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ತನ್ನ ಬಲವನ್ನು ಗಟ್ಟಿಗೊಳಿಸುವುದರ ಜೊತೆಗೆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬೆಸೆಯಲು ಕಾಂಗ್ರೆಸ್ ವಿರುದ್ಧ ತಂತ್ರ ಹೆಣೆಯುತ್ತ ಬಿಜೆಪಿ ದೇಶದ ಇತರ ಭಾಗಗಳಿಗೆ ಪ್ರಜ್ಞೆಯ ಹರವನ್ನು ವಿಸ್ತರಿಸುತ್ತದೆ.

ನಿರ್ದಿಷ್ಟ ಸಾಂಸ್ಕೃತಿಯ ಛಾಯೆಯ ಭಾರತ ರಾಷ್ಟ್ರ ಕಲ್ಪನೆಗೆ ದೇಶದ ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನವಾದ ಪ್ರತಿಕ್ರಿಯೆಯಿದೆ. ಈ ಹರವಿನ ಬಗೆಗೆ ಸ್ವಲ್ಪ ಯೋಚಿಸಿ. ಹಿಂದೂ ಭಾರತವು ಹಿಂದಿ ಹೃದಯಭಾಗದಿಂದ ಗುಜರಾತ್, ಮಹಾರಾಷ್ಟ್ರ ಮತ್ತಿತರ ಸಾಂಸ್ಕೃತಿಕ ಭಾಗಗಳಿಂದ ಪಶ್ಚಿಮ ಭಾಗಗಳಿಗೆ ಯಾವ ರಾಜಕೀಯ ಅಡೆತಡೆಯಿಲ್ಲದೆ ಪಸರಿಸಿದೆ. ಉದಾಹರಣೆಗೆ ೧೯೯೬ರಲ್ಲಿ ಪ್ರದೇಶ ಅಥವಾ ದೇಶದ ಒಲವಿನ ಬಗೆಗೆ ಸಮೀಕ್ಷೆ ಮಾಡಿದಾಗ ಮಹಾರಾಷ್ಟ್ರದಲ್ಲಿ ಕೇವಲ ಶೇಕಡ ೩೯ ಹಾಗೂ ಗುಜರಾತಿನಲ್ಲಿ ಶೇಕಡ ೫೯ರಷ್ಟು ಮಾತ್ರ ಒಲವು ತೋರಿದರು. ಆದರೆ ದಕ್ಷಿಣದಲ್ಲಿ ವಿಭಿನ್ನ ಮಾದರಿಯನ್ನು ಕಾಣಬಹುದು. ಇಲ್ಲಿ ವಿಭಿನ್ನ ಭಾಷೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ವಿಶಿಷ್ಟ ರಾಷ್ಟ್ರೀಯ ಗುರುತನ್ನು ಮತ್ತು ಅವುಗಳಲ್ಲಿ ವಿಭನ್ನತೆಯನ್ನು ಗುರುತಿಸಬಹುದು. ಕೇರಳದಲ್ಲಿ ೭೯, ತಮಿಳುನಾಡಿನಲ್ಲಿ ೭೪ ಮತ್ತು ಕರ್ನಾಟಕದಲ್ಲಿ ಕೇವಲ ೫೪ ಮತ್ತು ಆಂಧ್ರದಲ್ಲಿ ೬೯. ದೇಶದ ಪೂರ್ವಭಾಗಕ್ಕೆ ಹೋದರೆ ದೇಶಾಭಿಮಾನದ ಒಲವು ಪಶ್ಚಿಮ ಭಾಗದಷ್ಟು ಗಟ್ಟಿಯಾಗಿಲ್ಲ. ಇಲ್ಲಿ ಸ್ವಾಯತ್ತತೆ ಮತ್ತು ವಿಭಿನ್ನ ರಾಷ್ಟ್ರೀಯತೆಗಳ ಗುರುತಿಗಾಗಿ ಮೌನದ ಕೂಗು ಇದೆ. ಬುಡಕಟ್ಟು ಭಾಗವೆನಿಸಿದ ಜಾರ್ಖಡ್ ವಿಭಿನ್ನವಾಗಿದ್ದು ಅದು ಬಂಗಾಳ ಮತ್ತು ಒರಿಸ್ಸಾದೆಡೆಗೆ ಹಬ್ಬುತ್ತದೆ. ಈಶಾನ್ಯವೇ ಒಂದು ವಿಭಿನ್ನ ಘಟಕ. ಬುಡಕಟ್ಟು ಜನಾಂಗದ ಪ್ರತ್ಯೇಕ ಸಾಮಾಜಿಕ ರಚನೆ ಹಾಗೂ ವಿಭಿನ್ನ ರಾಜ್ಯಗಳ ಉದಯದ ಬಳಿಕ ಅಸ್ಸಾಂನಲ್ಲಿ ೭೮ರಷ್ಟು ಜನ ಪ್ರದೇಶದೆಡೆಗೆ ಒಲವು ತೋರುತ್ತಾರೆ. ಬುಡಕಟ್ಟು ರಾಜ್ಯವಾದ ಮೇಘಾಲಯದಲ್ಲಿ ಶೇಕಡಾ ೯೮ರಷ್ಟು ಮಂದಿ ಪ್ರದೇಶದ ಬಗೆಗೆ ಒಲವು ತೋರಿಸುತ್ತಾರೆ.

ಈ ಭಾಗಗಳ ಗಡಿಗಳು ಅನಮ್ಯ ಅಥವಾ ಸುಲಲಿತವಾಗಿ ರೂಪುಗೊಂಡವಲ್ಲ. ಅಖಿಲ ಭಾರತ ಮಟ್ಟದಲ್ಲಿ ಪ್ರಾದೇಶಿಕತೆ ಒಲವಿನ ಸರಾಸರಿ ಶೇಕಡ ೫೩ ಆಗಿರುವುದು ವಿಶೇಷವೆನಿಸಿದೆ. ಹಾಗೆಯೇ ದೇಶದ ಒಲವು ಕೂಡ ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ಶೇಕಡ ೨೧. ಇದು ಅತಿ ದೊಡ್ಡ ಭಾಷಿಕ-ಸಾಂಸ್ಕೃತಿಕ ಸಮುದಾಯವಾದ ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಶೇಕಡಾ ೪ ಅಥವಾ ಅದಕ್ಕಿಂತ ಕಡಿಮೆಯೇ ಇದೆ. ಪ್ರದೇಶವಾರು ಸಂಪರ್ಕಗಳಿದ್ದರೂ ರಾಷ್ಟ್ರದ ಬಗೆಗೆ ಪ್ರತಿ ಪ್ರದೇಶಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಈ ವಾಸ್ತವವನ್ನು ಅರಿತು ಒಂದು ಜನರ ಐಚ್ಛಿಕ ಸಂಯೋಗವನ್ನು ಕೊನೆಯವರೆಗೂ ಬೆಳೆಸುವುದು ಕಷ್ಟ. ಹಾಗಾಗಿ ದೇಶದ ಯಾವುದೇ ಭಾಗದಲ್ಲಿ ಒಂದು ಭಾರತ ಎಂಬ ನಿಲುವನ್ನು ಒಪ್ಪಿಕೊಳ್ಳುವುದನ್ನು ವಿರೋಧಿಸಬೇಕಾಗುತ್ತದೆ. ಭಾರತ ವಿಸ್ತಾರತೆ ವಿಭಿನ್ನವಾಗಿದ್ದು ಯಾವುದೇ ರೀತಿಯ ವಿಭಿನ್ನ ಪರಿಕಲ್ಪನೆಗಳನ್ನು ಸೇರಿಸಿಕೊಳ್ಳಬಹುದಾಗಿದೆ.

ಜಾತ್ಯತೀತ ಅಥವಾ ಹಿಂದುತ್ವ ಮಾದರಿಯಿರಲಿ ಭಾರತದ ಏಕತೆಯು ಯಾವುದೇ ಒಂದು ಏಕರೂಪದ ಪರಿಕಲ್ಪನೆಯ ಮೇಲೇ ಅವಲಂಬಿತವಾಗಿಲ್ಲ. ಇವೆರಡು ಹೆಚ್ಚಿನ ಭಾರತೀಯರಿಂದ ವಿಭಿನ್ನ ಭಾಗದಲ್ಲಿ ಭಿನ್ನವಾಗಿ ತಿರಸ್ಕರಿಸಲ್ಪಡುತ್ತವೆ. ೧೯೯೬ರಲ್ಲಿದ್ದ ಬಿಜೆಪಿ ಸರಕಾರವನ್ನು ಕೆಳಗಿಳಿಸಿದಲ್ಲಿ ಬಾಳಠಾಕ್ರೆ ಅವರ ಬೆದರಿಕೆಯು ಭಾರತದ ಒಂದು ಭಾಗವು ಇನ್ನೊಂದು ಭಾಗದ ಮೇಲೆ ಪ್ರಾಬಲ್ಯದ ಉಳಿವಿಗೆ ಹೇರುವ ಯುದ್ಧವೆನಿಸಿದೆ.

ಇದು ಭಾರತದಲ್ಲಿ ಪ್ರಜಾಸತ್ತೆ ಸಮಸ್ಯೆಗೆ ನೇರವಾದ ಕೊಂಡಿಯೆನಿಸಿದೆ. ಜನತಾದಳದ ವಿಭಿನ್ನ ಗುಂಪುಗಳಾದ ಎಸ್ ಪಿ ಇಲ್ಲವೆ ಆರ್ ಜೆ ಡಿ ಒಬಿಸಿಗಳನ್ನು ಓಲೈಸಿದ ತಂತ್ರವು ಆಂತರಿಕವಾಗಿ ವಿಚಿತ್ರವೆನಿಸಿದೆ. ಸಂಘ ಪರಿವಾರದ ಸಾಂಸ್ಕೃತಿಕ ರಾಷ್ಟ್ರೀಯತೆ ವಿರುದ್ಧ ಪ್ರಬಲ ಪ್ರತಿರೋಧ ಒಡ್ಡಿಯೂ ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ರೂಪಿಕೆಯು ಸಂಸದೀಯ ಪ್ರಜಾಸತ್ತಾತ್ಮಕ ಆಳ್ವಿಕೆಗೆ ಭದ್ರ ಬುನಾದಿ ನೀಡುವಷ್ಟು ಸಮರ್ಥವೆನಿಸಲಿಲ್ಲ. ಇವು ಅಧಿಕಾರದ ಹವಣಿಕೆಯ ಸ್ಪರ್ಧೆಯಲ್ಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ನಿಯಮವನ್ನು ಮುರಿಯುತ್ತಾ ಸಾಲಿನ ಸರತಿಯನ್ನು ಬದಿಗೊತ್ತಿದೆ. ಇದರ ಹೆಚ್ಚಿನ ನಾಯಕರು ಮತ್ತು ಪ್ರಮುಖ ಬೆಂಬಲಿಗರ ಸಾಮಾಜಿಕ ಚಿತ್ರಣವೇ ಸ್ವಾಗತಾರ್ಹವಲ್ಲ. ಮತ್ತವರ ರಾಜಕೀಯ ವರ್ತನೆಯ ಶೈಲಿಯೇ ಸ್ಥಾಪಿತ ಮಧ್ಯಮವರ್ಗಕ್ಕೆ ಪೂರಕವಾಗಿಲ್ಲ. ಹಾಗಾಗಿ ಇಂಥ ರಾಜಕೀಯ ರೂಪಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ.

ಇಂಥ ರಾಜಕೀಯ ರೂಪಿಕೆ ಮಹತ್ವವನ್ನು ತಿಳಿಯಬೇಕಾದರೆ ಈ ಗುಂಪುಗಳ ಸೂಕ್ಷ್ಮರಾಜಕಾರಣ ಮತ್ತು ವಿಸ್ತೃತ ಫಲಿತಗಳ ಅಸಂಯೋಗವನ್ನು ದಾಖಲಿಸುವ ಅಗತ್ಯವಿದೆ. ಅಂದರೆ ಇದರ ಗುರಿ ಮತ್ತು ಶೈಲಿ ಹಾಗೂ ಗುರಿ ಮತ್ತು ಸನ್ನಿವೇಶಗಳ ಮಧ್ಯದ ವ್ಯತ್ಯಾಸವನ್ನು ಗುರುತಿಸಬೇಕು. ಇದರ ಗುಣ ಲಕ್ಷಣಗಳು ಆಶಾದಾಯಕವಾಗಿಲ್ಲವಾದರೂ ಸನ್ನಿವೇಶಾತ್ಮವಾಗಿ ಪರಿಗಣಿಸಿದರೆ ಹಿಂದುಳಿದ ಜಾತಿ ರೂಪಿಕೆಯ ರಾಜಕಾರಣವು ವಿಸ್ತೃತ ಮಟ್ಟದಲ್ಲಿ ಪ್ರಜಾಸತ್ತೆ ಮತ್ತು ಕೋಮುಸಾಮರಸ್ಯ ಪದ್ಧತಿಯನ್ನು ರಕ್ಷಿಸುತ್ತಾ ಬಲಗೊಳಿಸಿದೆ. ಈ ಅಂಶವನ್ನು ಚಿಗುರಲು ಅನುವು ಮಡಿ ಶೋಚನೀಯವಾಗಿ ಅಲ್ಪಸಂಖ್ಯಾತರಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ರಾಷ್ಟ್ರದ ಬೆನ್ನಿಗಿದ್ದಾರೆ. ಮತ್ತು ಹಿಂದು ಉಗ್ರ ಫ್ಯಾಸಿಸ್ಟ್ ಸಂಘಟನೆಗಳು ವಿಕೃತಿಗೆ ಪ್ರತಿರೋಧ ಒಡ್ಡುವ ಅದರ ರಾಜಕಾರಣದಿಂದ ಅಲ್ಪಸಂಖ್ಯಾತರು ಕೂಡ ಭರವಸೆಯನ್ನು ವ್ಯಕ್ತಪಡಿಸುತ್ತಾರೆ.

ಯಾವುದೇ ಮೈತ್ರಿ ಅಥವಾ ಇತರ ಪಕ್ಷಗಳ ಅಗತ್ಯವಿದೆ ಬಿಜೆಪಿ ತನ್ನ ಸ್ವಂತ ಬಲದಿಂದ ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಯಾಜಮಾನ್ಯ ಸ್ಥಾನಕ್ಕೆ ಏರುವ ಸ್ಥಿತಿಯನ್ನು ಊಹಿಸಿಕೊಳ್ಳಿ. ಯಾರು ಭಾರತೀಯನೆಂಬುದನ್ನು ವ್ಯಕ್ತಿಯ ಮತೀಯ ಗುರುತಿಸುವಿಕೆ ನಿರ್ಧರಿಸಲಾಗದು. ಮನುಷ್ಯರ ವ್ಯಕ್ತಿತ್ವವನ್ನು ಘನತೆ, ಗೌರವ, ಕಾಳಜಿ ಮುಂತಾದ ಸಾಮಾನ್ಯ ಮತ್ತು ಅಮೂರ್ತ ಲಕ್ಷಣಗಳಿಂದ ವ್ಯಾಖ್ಯಾನಿಸಲಾಗುತ್ತಿದೆ. ಧರ್ಮ, ಸಂಸ್ಕೃತಿ ಅಥವಾ ಚರಿತ್ರೆಯ ಅಸಮಾನತೆಗೆ ದಾರಿ ಮಾಡಿ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು. ಬಿಜೆಪಿಗೆ ಒಬ್ಬ ಹಿಂದೂ ಆಗಿರುವವನು ವ್ಯಕ್ತಿಗಿಂತಲೂ ಹೆಚ್ಚಿನವನು. ಮಾನವೀಯತೆಯನ್ನು ಮತೀಯ ನೆಲೆಯಿಂದ ನಿರ್ಧರಿಸಲಾಗುವುದು. ಹಿಂದೂಯೇತರ ಸಮುದಾಯಗಳ ಸ್ವರವನ್ನು ಮೌನವಾಗಿಸುವ ಗುರಿಯಿಂದಾಗಿ ಬಿಜೆಪಿಯ ರಾಷ್ಟ್ರೀಯ ಧೋರಣೆಯು ಪ್ರಜಾಸತ್ತೆ ವೀರೋಧಿಯಾಗಿದೆ. ಹಾಗಾಗಿ ವೈಚಾರಿಕತೆ ಮತ್ತು ರಕ್ಷಣೆಗೆ ಅರ್ಹವಲ್ಲದ ಕೋಪಾವೇಶದ ಜನಗಳ ಹಿಂದೂ ಸಮುದಾಯವನ್ನು ಸೃಜಿಸುತ್ತದೆ. ಹೀಗಾಗಿ ಭಾರತ ರಾಷ್ಟ್ರದ ಸ್ವರೂಪವನ್ನು ಸೈದ್ಧಾಂತೀಕರಿಸುವ ತುರ್ತು ಅಗತ್ಯವಿದೆ. ಇದು ಸ್ವೀಡನ್, ಪೋರ್ಚುಗಲ್, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಹೇಗೆ ಭಿನ್ನ. ಭಾರತದ ಮೇಲ್ಮೈ ತೋರಿಕೆಯನ್ನು ಗಮನಿಸಿದಾಗ ಹಿಂದಿನ ಯು ಎಸ್ ಎಸ್ ಆರ್ ನ್ನು ನೆನಪಿಸುತ್ತದೆ. ಆದರೆ ಇದರ ವಿಕಾಸದ ವಿಶಿಷ್ಟತೆ. ಜನರ ಅಂತರ್ಮಯತೆ ಮತ್ತು ಒಳಗೊಳ್ಳುವಿಕೆಯ ಪರಿ. ದೇಶನಿರ್ಮಾಣದ ಪ್ರಕ್ರಿಯೆ ಇತ್ಯಾದಿ ಪ್ರಮುಖವಾಗಿ ವಿಭಿನ್ನವೆನಿಸಿದೆ. ವಿಭಿನ್ನ ಜನಗಳ ರಾಷ್ಟ್ರೀಯತೆಯ ರಾಷ್ಟ್ರವೆಂಬ ಆಳವಾದ ಭಾವನೆಯನ್ನು ಪ್ರಜಾಸತ್ತೆಯಲ್ಲಿ ಮೂಡಿಸಬೇಕಾದರೆ ಈ ಭಿನ್ನತೆಗಳನ್ನು ಅಗತ್ಯವಾಗಿ ಚಾರಿತ್ರಿಕವಾಗಿ ಕೊಂಡಿಯಂತೆ ಪರಿಗಣಿಸಬೇಕಿದೆ. ಭಾರತದಲ್ಲಿ ರಾಷ್ಟ್ರೀಯ ಸಂಬಂಧಗಳೆಂಬ ಸುಲಭ ಪರಿಕಲ್ಪನೆಯು ಪ್ರಜಾಸತ್ತೆ ಹೋರಾಟಕ್ಕೆ ಧುಮುಕಬೇಕಿದೆ. ಹಾಗೆಂದರೆ ತಮಿಳರು, ಬಂಗಾಳಿಗಳು ಮೊದಲಾದ ರೂಪಿತ ಗುರುತುಗಳ ಅಥವಾ ಜಾರ್ಖಡ್ ಮುಂತಾದ ಗುರುತು ರೂಪಿಸುವಂತಹ ಪ್ರಕ್ರಿಯೆಯಿರುವ ಗುರುತುಗಳ ವಿಭಿನ್ನ ರಾಷ್ಟ್ರೀಯ ಗುಂಪುಗಳನ್ನು ಸಮಾನವಾಗಿ ಕಾಣತಕ್ಕದ್ದು. ಅವುಗಳ ಆಕಾರ, ಪ್ರಭಾವ, ಅಧಿಕಾರ ಮುಂತಾದವಕ್ಕೆ ಆಸ್ಪದವೀಯಬಾರದು. ಇಂಥ ಪ್ರಜಾಸತ್ತೀಕರಣವನ್ನು ಸಾಂಸ್ಥಿಕಗೊಳಿಸುವುದು ಒಂದು ಪ್ರಮೇಯ ಆಗಬಾರದು. ದೇಶದ ವಿಭಿನ್ನ ಭಾಗಗಳಲ್ಲಿ ಜನರನ್ನು ಪ್ರತಿನಿಧೀಕರಿಸುವ ಶಕ್ತಿಗಳೊಳಗಿನ ಹೋರಾಟ ಮತ್ತು ಸ್ಪರ್ಧೆಗಳ ಫಲಿತಗಳೊಂದಿಗೆ ಇದು ಸಾಕಾರಗೊಳ್ಳಬೇಕು.

ಗಾಂಧಿ ಮತ್ತು ಲೆನಿನ್ ತಮ್ಮ ವಿಭಿನ್ನವಾದ ವಿಚಾರಧಾರೆ ಮತ್ತು ಬದ್ಧತೆಯ ನಡುವೆಯೂ ನಿರ್ದಿಷ್ಟ ಸೀಮಿತ ನೆಲೆಗಟ್ಟಿನ ಭಾರತದ ಬದಲು ಪ್ರಜಾಸತ್ತಾತ್ಮಕ ರಾಷ್ಟ್ರೀಯ ಸಂಬಂಧಗಳುಳ್ಳ ಭಾರತದತ್ತ ಎದುರುನೋಡುತ್ತಿದ್ದರು.