ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜದ ಸಂಬಂಧವು ಭಾರತದಲ್ಲಿ ಸಂಕೀರ್ಣವಾಗಿದೆ. ಪಾಶ್ಚತ್ಯ ಪ್ರಜಾಪ್ರಭುತ್ವದಲ್ಲಿ ಹೀಗಿಲ್ಲ. ಭಾರತದ ಪ್ರಜಾಪ್ರಭುತ್ವದ ಕಾರ್ಯಕ್ಷಮತೆಯಲ್ಲಿನ ಇತ್ತೀಚಿನ ಬದಲಾವಣೆಗಳು ಇದನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ಇದನ್ನು ಇಲ್ಲಿ ಪರಿಶೀಲಿಸೋಣ, ಪೌರತ್ವದ ಸಂದರ್ಭದಲ್ಲಿ ಒಂದು ಸಾಂಸ್ಥಿಕ ಚೌಕಟ್ಟು ಅಥವಾ ರಾಜಕೀಯ ವ್ಯವಸ್ಥೆಯೊಳಗೆ ಅದರ ದಾರಿ ಮತ್ತು ಸಂಚಾರ ವ್ಯಾಪ್ತಿಯು ಒಂದೇ ಆಗಿರಲಾರದೆಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜವು ಒಂದು ಐತಿಹಾಸಿಕ ಕಾಲಘಟ್ಟ ಮತ್ತು ಪರಿಸ್ಥಿತಿಯಲ್ಲಿ ಬೇರೆ ಬೇರೆಯಾಗಿ ರೂಪುಗೊ೦ಡಾಗ ಅದರ ವಿಭಿನ್ನತೆಯನ್ನು ಎತ್ತಿ ತೋರಿಸಬಹುದು. ವಿಭಿನ್ನ ಸಮಾಜೋ-ಆರ್ಥಿಕ ಸ್ಥಿತಿಗತಿ ಮತ್ತು ಸಾಂಸ್ಕೃತಿಕ ಆಚರಣೆಗಳ ಸಂದರ್ಭದಲ್ಲೂ ಈ ಸಂಸ್ಥೆಗಳು ಒಂದು ಸಾರ್ವತ್ರಿಕ ಮೌಲ್ಯವು ಅನಂತವಾದ ವಿಭಿನ್ನತೆಯಲ್ಲಿ ಅಸ್ತಿತ್ವಗೊಳ್ಳಬಹುದು ಮತ್ತು ವಿಭಿನ್ನವಾದ ಚಾರಿತ್ರಿಕ ಸಂದರ್ಭದಲ್ಲಿ ಈ ಮೌಲ್ಯದ ಆಚರಣೆಯು ಭಿನ್ನವಾಗಿರಬಹುದು. ಎಸ್ಕಿಮೋಗಳು ಮತ್ತು ಆಂಧ್ರದವರ ಗೆಳೆತನದ ಮೌಲ್ಯದ ನಡಾವಳಿ ಅಥವಾ ಆತಿಥ್ಯದ ನಡಾವಳಿ ಒಂದೇ ಆಗಿರಲು ಸಾಧ್ಯವಿಲ್ಲ. ವಿವಿಧ ಸಮಾಜಗಳ ಸಾಂಸ್ಕೃತಿಕ ನಡಾವಳಿಗಳಲ್ಲಿ ವೈಯಕ್ತಿಕ ಸ್ವಾತಂತ್ರ‍್ಯದ ಮೌಲ್ಯ ಇಲ್ಲವೇ ಗುಣಕ್ಕೆ ವಿಭಿನ್ನ ಅರ್ಥಗಳಿವೆ.

ಅರಿಸ್ಟಾಟಲ್ ಹೇಳುವಂತೆ ಯಾವ ಹಂತದಲ್ಲಿ ಸ್ವಾತಂತ್ರ‍್ಯವು ಸಂಯಮದಿಂದ ಅತಿರೇಕಕ್ಕೆ ಹೋಗುತ್ತದೆ ಮತ್ತದು ಅರಾಜಕತೆ ಅಥವಾ ಮನ್ನಣೆಗಾಗಿ ಬದಲಾಗುತ್ತದೆಂದು ಸೈದ್ಧಾಂತಿಕವಾಗಿ ವಿವರಿಸಲಾಗದು. ಇದನ್ನು ಪರಿಸ್ಥಿತಿ ಮತ್ತು ಸಾಂದರ್ಭಿಕ ನಿರ್ಬಂಧಗಳೊಂದಿಗೆ ವಿವೇಕದಿಂದ ಬಗೆಹರಿಸಬೇಕು. ಇದಕ್ಕಾಗಿ ಎಲ್ಲ ಸಮಾಜದಲ್ಲೂ ಕೆಲವು ನಿಯಮಗಳಿದ್ದು ಇದನ್ನು ಯಾರೂ ಮೀರಲಾರರು. ಉದಾಹರಣೆಗೆ ದೇಹದ ಇಷ್ಟೇ ಭಾಗ ಕಾಣಬಹುದು ಇಲ್ಲವೇ ಕಾಣಬಾರದು ಎಂಬುದರ ಕುರಿತು ಪ್ರತಿ ಸಮಾಜದಲ್ಲೂ ಒಂದೊಂದು ನಿಯಮಗಳಿವೆ. ಪ್ರಜಾಪ್ರಭುತ್ವ ಕೂಡ ಹಾಗೆಯೇ ಒಂದು ಸಾರ್ವತ್ರಿಕ ಮೌಲ್ಯವೆನಿಸಿದೆ. ಹೀಗೆ ಒಂದು ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಲಾರದು. ಆದರೆ ಹೆಚ್ಚಾಗಿ ಒಂದೇ ತರದ ಪ್ರಜಾಪ್ರಭುತ್ವಗಳು ವಿಭಿನ್ನವಾಗಿರಬಹುದು. ಹಾಗಾಗಿ ಒಂದು ನಿರ್ದಿಷ್ಟ ಚೌಕಟ್ಟಿನ ಮೌಲ್ಯಯುತವಾದ ಪ್ರಜಾಪ್ರಭುತ್ವ ಎರಡು ಸಮಾಜಗಳಲ್ಲಿ ವಿಭಿನ್ನವಾಗಿ ರೂಪು ತಳೆಯುತ್ತದೆ.

ಪ್ರಜಾಪ್ರಭುತ್ವ ಕಾರ್ಯಕ್ಷಮತೆಯ ಪ್ರಗತಿಯಲ್ಲಿ ಈ ವಿವಿಧತೆ ಮತ್ತು ಭಿನ್ನತೆ ಹಾಗೂ ಸುತ್ತಲಿನ ಪರಿಸರ ಕಾರಣೀಭೂತವಾಗುತ್ತದೆ. ಇಂಥ ಒಂದು ಕಾರಣೀಭೂತ ಅಂಶವೆಂದರೆ ನಾಗರಿಕ ಸಮಾಜದ ಉದಯ, ಅದು ಮಾರುಕಟ್ಟೆ ಮತ್ತು ಸಾರ್ವಜನಿಕ ಕ್ಷೇತ್ರವನ್ನೊಳಗೊಳ್ಳುತ್ತದೆ. ಪಶ್ವಿಮ ಯುರೋಪಿನ ಸಮಾಜಗಳ ರಾಷ್ಟ್ರೀಯ ಸಮುದಾಯದಲ್ಲಿ ನಾಗರಿಕ ಸಮಾಜವು ಅವಿನಾಭಾವ ಸಂಬಂಧ ಹೊಂದಿತ್ತು. ಇವು ಪ್ರಜಾಪ್ರಭುತ್ವದ ಅರಿವಿನ ಜೊತೆಗೇ ಪ್ರಾರಂಭವಾಯಿತು. ಬಂಡವಾಳದ ಔನ್ನತ್ಯವು ಒಂದು ಹಂತದಲ್ಲಿ ಮಾರುಕಟ್ಟೆ ವಿನಿಮಯ, ಸರಕುಗಳ ಸೇವೆ ಮತ್ತು ಗುತ್ತಿಗೆ ಮುಂತಾದವುಗಳ ಮೂಲಕ ಸ್ಥಳೀಯ ಜನಗಳ ಬೇರ್ಪಡುವಿಕೆ ಮುಂದುವರಿಯದಂತೆ ಒತ್ತಾಯಿಸುತ್ತದೆ. ಹೀಗಾಗಿ ಜನಗಳು ಕೂಡ ಸಾಮಾನ್ಯ ತಿಳುವಳಿಕೆ ಮತ್ತು ಬಾಂಧವ್ಯವನ್ನು ವೃದ್ಧಿಗೊಳಿಸುವ ಮೂಲಕ ಪರಸ್ಪರ ಸಂಪರ್ಕದಲ್ಲಿ ತೊಡಗಿಸಿಕೊಂಡರು. ಹೀಗಾಗಿ ಸ್ಥಳೀಯ ಭಾಷೆಗಳ ಪ್ರಾಮುಖ್ಯತೆಗೆ ಬೇಡಿಕೆ ಬಂದಂತಾಯಿತು. ಯುರೋಪಿನಲ್ಲಿ ಈ ಮೂಲಕ ರಾಷ್ಟ್ರೀಯ ಸಮುದಾಯಗಳು ಪ್ರಾರಂಭಗೊಂಡವು. ಬಂಡವಾಳದ ಬೆಳವಣೆಗೆಯು ಜನಗಳನ್ನು ಹತ್ತಿರಕ್ಕೆ ಸೇರಿಸಿದುದರಿಂದ ಶ್ರೇಣೀಕೃತ ಸಂಬಂಧಗಳ ಊಳಿಗಮಾನ್ಯ ಹಿಡಿತ ಸಡಿಲಗೊಳ್ಳುವಂತಾಯಿತು. ಹೀಗಾಗಿ ಉಪ ಅವಲಂಬನೆ ಕೂಡ ದೂರವಾಯಿತು. ಈ ಹಂತದಲ್ಲಿ ನಾವು ವ್ಯಕ್ತಿಕೇಂದ್ರಿತ ಜನಗಳ ಬದಲಾದ ಅಸ್ತಿತ್ವವನ್ನು ಕಾಣಬಹುದು. ಈ ರೀತಿ ರೂಪುಗೊಳ್ಳುತ್ತಿರುವ ವ್ಯಕ್ತಿತನವು ಜೀವನ ಮತ್ತು ಸಮಾಜದ ಬಗೆಗೆ ಹೊಸ ಆಲೋಚನೆಗಳನ್ನು ಮುಂದಿಟ್ಟಿತ್ತು. ಈ ಹಂತದಲ್ಲಿ ಯುರೋಪಿನ ಹಲವಾರು ಪರಿಕಲ್ಪನೆಗಳು ಮತ್ತು ವಿಚಾರಗಳನ್ನು ಗಮನಿಸಬಹುದು.

ಈ ಆಲೋಚನೆಗಳ ನಡುವಿನ ವೈರುಧ್ಯಗಳು ಹಾಗೂ ಸಂಘರ್ಷಗಳು ಸ್ಪರ್ಧಿಗಳನ್ನು ಹುಟ್ಟುಹಾಕಿದವು. ಈ ಹಿನ್ನೆಲೆಯಲ್ಲಿ ನಾಗರಿಕ ಸಮಾಜ ರೂಪುಗೊಂಡಿತು. ಈ ಪ್ರಕ್ರಿಯೆ ಉದಾರವಾದಿ ಮನೋಭಾವದ ಬಂಡವಾಳದಂಥ ಬೆಳವಣಿಗೆಯ ಸಾಮಾಜಿಕ ನಿರ್ಮಾಣಕ್ಕೆ ದಾರಿಮಾಡಿತು. ಪ್ರಜಾತಾಂತ್ರಿಕ ಹಾಗೃತಿ ಹುಟ್ಟುತ್ತಲಿದ್ದು ನಾಗರಿಕ ಸಮಾಜವು ಕ್ರಮೇಣ ಪ್ರಜಾಪ್ರಭುತ್ವದೊಂದಿಗೆ ಉಗಮಗೊಂಡಿತು. ಇವೆರಡು ಅಗಾಧವಾಗಿ ಒಂದಕ್ಕೊಂದು ಹೊಂದಿಕೊಂಡು ಬೆಂಬಲಿಸುವಂತಾಯಿತು. ಈ ಚಾರಿತ್ರಿಕ ಬೆಳವಣಿಗೆಯು ಉಗಮದೊಂದಿಗೆ ಪ್ರಜಾತಂತ್ರದ ಉಳಿವಿಗೆ ನಾಗರಿಕ ಸಮಾಜ ಅಗತ್ಯವೆಂದು ನಂಬಲಾಗಿದೆ. ಇದನ್ನು ಮುಂದೆ ನೋಡೋಣ.

ಭಾರತದಲ್ಲಿ ನಾಗರಿಕ ಸಮಾಜವು ಪ್ರಜಾಪ್ರಭುತ್ವದೊಂದಿಗೆ ಹೇಗೆ ಹೊಂದಿಕೆಯಾಗುತ್ತಿದೆ ಎಂಬುದನ್ನು ಕೂಡ ಪರಿಶೀಲಿಸುವ ಭಾರತದಲ್ಲಿ ನಾಗರಿಕ ಸಮಾಜದಲ್ಲಿ ಗಣನೀಯವಾದ ಬೆಳವಣಿಗೆಗಳಾಗುತ್ತಿವೆ. ಹೊಸ ಸಾಮಾಜಿಕ ಚಳವಳಿಗಳ ಪ್ರಾಬಲ್ಯವು ಸ್ಪರ್ಧಾತ್ಮಕವಾಗಿ ಸಾರ್ವಜನಿಕ ಕ್ಷೇತ್ರದೆಡೆಗೆ ವ್ಯಾಪಿಸಿ ಸಮಾಜದಲ್ಲಿ ತಳವೂರಿದೆ. ಇಂದು ನಾವು ಯಾವುದೇ ಜನಪರ ಆಂದೋಲಗಳನ್ನು, ಸ್ಥಳೀಯರನ್ನು ಸಕ್ರಿಯಗೊಳಿಸುವ ಪಾತ್ರವುಳ್ಳ ಸರ್ಕಾರೇತರ ಸಂಸ್ಥೆಗಳಿಲ್ಲದೆ ಊಹಿಸಲಾಗದು. ಮುದ್ರಣ ಮತ್ತು ವಿದ್ಯುನ್ಮಾನ ಮಾದರಿಯ ಸಮೂಹ ಮಾಧ್ಯಮವು ವ್ಯಾಪಾಕವಾಗಿ ವಿಸ್ತಾರಗೊಂಡಿದೆ. ಅತಿಯಾಗಿ ಅನಕ್ಷರಸ್ಥರುಳ್ಳ ಸಮಾಜದಲ್ಲಿ ವಿದ್ಯುನ್ಮಾನ ಮಾಧ್ಯಮದ ಪ್ರಾಮುಖ್ಯತೆಯನ್ನು ಅಲ್ಲಗಳೆಯಲಾಗದು. ನೇರ ಸಂದೇಶಗಳ ಮೂಲಕ ಅವರ ಅಸಾಮರ್ಥ್ಯವನ್ನು ತಕ್ಷಣದಲ್ಲಿ ಅದು ನೀಗಿಸುತ್ತದೆ. ಜಗತ್ತಿನ ಆಗುಹೋಗುಗಳ ಬಗೆ ಅರಿಯಲು ಬಡವರು ಯಾವುದೇ ಮಧ್ಯವರ್ತಿಗಳನ್ನು ಇನ್ನೂ ಅವಲಂಬಿಸಲಾರರು. ಇವಲ್ಲದೆ ಹಲವಾರು ಸಾಂಪ್ರದಾಯಿಕ ವಿಧಾನಗಳ ಪ್ರತಿಪಾದನೆಯಿಂದಲೂ ಅವರು ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಾಜದ ಹೆಚ್ಚಿನೆಲ್ಲ ಸ್ತರದ ಸಂಪರ್ಕಜಾಲ ವಿಸ್ತರಿಸಿದುದರಿಂದ ಆಗುಹೋಗುಗಳ ಪ್ರಚಾರ ಮತ್ತು ಜ್ಞಾನ ಹೆಚ್ಚುತ್ತಿದೆ. ನಾಗರಿಕ ಸಮಾಜವು ಎದ್ದು ಕಾಣುತ್ತಿದ್ದರೂ ತಳಮಟ್ಟದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರ ಇಳಿಮುಖವನ್ನು ಗಮನಿಸಬಹುದು. ಇದೇ ಸಮಯದಲ್ಲಿ ಅದು ವಿಸ್ತಾರವಾಗುತ್ತಿದೆ ಮತ್ತು ಗುತ್ತಿಗೆಯಂತಾಗಿ ಗಟ್ಟಿಗೊಳ್ಳುತ್ತಿದೆ. ಇದಾದರೆ ಪ್ರಜಾಪ್ರಭುತ್ವದ ಯಶಸ್ವಿಗೆ ನಾಗರಿಕ ಸಮಾಜವು ಅಗತ್ಯವಾದ ಪೂರ್ವ ಷರತ್ತೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

ಯುರೋಪಿನ ತಾತ್ವಿಕ ಬರವಣಿಗೆ ಮತ್ತು ಪಾಶ್ಚಾತ್ಯ ಇತಿಹಾಸದ ನಾಗರಿಕ ಸಮಾಜ ಒಂದು ವಿಶೇಷ ಬಗೆಯದ್ದು. ಎಲ್ಲ ಸಮಾಜವು ನಾಗರಿಕ ಸಮಾಜವಲ್ಲ. ಅದು ರೂಪುಗೊಳ್ಳುವುದೇ ವೈರುಧ್ಯಗಳಿಂದ ಮೊದಲೇ ತಿಳಿಸಿದಂತೆ ಅದು ಬಂಡವಾಳ ಸಮಾಜದ ಉದಯದ ಜೊತೆ ವಿಕಸನಗೊಳ್ಳುತ್ತ ಹೆಚ್ಚು ಹೆಚ್ಚು ಜನರನ್ನು ಮಾರುಕಟ್ಟೆಯ ತೆಕ್ಕೆಗೆ ಸೇರಿಸುತ್ತದೆ. ಇದರಿಂದ ಬಾದಿತವಾಗದ ಸಮುದಾಯದ ಇರುವಿಕೆಯೇ ಕಷ್ಟ. ಒಬ್ಬನು ತನ್ನ ಎಲ್ಲ ಅಗತ್ಯಗಳನ್ನು ಮಾರುಕಟ್ಟೆಯಲ್ಲಿಯೇ ಪೂರೈಸಿಕೊಳ್ಳಬೇಕಾಗಿರುವುದರಿಂದ ಇಲ್ಲಿ ಇನ್ನೊಬ್ಬ ಆತನಿಗೆ ಸಹಾಯ ಮಾಡುವನೆಂದು ನಿರೀಕ್ಷಿಸಲಾಗದು.

ಈ ಹಿಂದೆ ತೀರ್ಥಯಾತ್ರೆ ಅಥವಾ ಜಾತ್ರೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರು ಒಟ್ಟು ಸೇರುತ್ತಿದ್ದರೆ ಈಗ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶದಿಂದಾಗಿ ಅವರು ಅನಾಮಧೇಯ ಸಾರ್ವಜನಿಕವಾಗಿ ಇರುವಂತಾಗಿದೆ. ಒಂದು ಹಂತದಲ್ಲಿ ನಾಗರಿಕ ಸಮಾಜ ಒಂದು ಜಾತ್ಯತೀತ ಸಾರ್ವಜನಿಕ ವೇದಿಕೆಯಾಗಿದ್ದು ಸ್ಪರ್ಧಾತ್ಮಕ ಬೂರ್ಶ್ವಾ ಜಗತ್ತಿನ ವಿಘಟಿತ, ಅಹಂಭಾವನೆಯುಳ್ಳ ವ್ಯಕ್ತಿಗಳಿಂದ ಕೂಡಿದೆ. ಹೀಗಾಗಿ ಹೆಗೆಲ್ ಮಾರುಕಟ್ಟೆಯನ್ನು ಅಹಂಭಾವನೆ, ಒಲವು, ಚಪಲವಂತರ ಮತ್ತು ಚಂಚಲ ಸ್ವಭಾವದ, ವಿಶಿಷ್ಟ ವ್ಯಕ್ತಿಗಳ ಪ್ರಪಂಚವೆನ್ನುತ್ತಾನೆ. ಹೀಗೆ ಮಾರುಕಟ್ಟೆ ಮಾತ್ರ ಮಾನವ ಬದುಕಲಿರುವ ಗಹೆಯೆಂದಾದರೆ ನಾವೆಲ್ಲ ಉಸಿರುಗಟ್ಟಿ ಸಾಯಬೇಕಾಗುತ್ತದೆ. ಆದರೆ ಪ್ರಜಾಪ್ರಭುತ್ವದ ಜಾಗೃತಿ ಮತ್ತು ವ್ಯಕ್ತಿವಾದದ ವಿಕಸನಕ್ಕೆ ಬಂಡವಾಳಶಾಹಿಯ ಪ್ರಾಬಲ್ಯವೂ ಕಾರಣವಾಗಿದೆ. ಸಮಾಜ ಮತ್ತು ಜೀವನದ ಉದ್ದೇಶಗಳ ಬಗೆಗೆ ಕಲ್ಪಿಸಿಕೊಳ್ಳಲು ಹೊಸ ದಾರಿಗಳು ಜನರಿಗೆ ಲಭ್ಯವಾಗುತ್ತಿದೆ. ಕಾಲಾಂತರದಲ್ಲಿ ಬೂರ್ಶ್ವಾ ಸಮಾಜದಲ್ಲಿ ವ್ಯಕ್ತಿಗಳು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ವಾರಸುದಾರರಾದರು. ರೂಪುಗೊಳ್ಳುತ್ತಿರುವ ಮೌಲ್ಯಗಳು, ಕಾಳಜಿ ಮತ್ತು ಹಿತಾಸಕ್ತಿಗಳ ಸಾಮಾನ್ಯವಾದ ಪ್ರತಿಪಾದನೆ ಮತ್ತು ಚರ್ಚೆಗೆ ಜನ ಒಟ್ಟಾದರೂ ಯಾರೊಂದಿಗೂ ಯಾರೂ ಪ್ರತಿಪಾದಿಸುವುದಿಲ್ಲವೆಂಬಂತಾಗಿದೆ. ನಾಗರಿಕ ಸಮಾಜದ ಇನ್ನೊಂದು ಕೇಂದ್ರವೆನಿಸಿದ ಹೇಬರ್ಮಸ್ ಹೇಳುವಂತಹ ಒಂದು ಬೂರ್ಶ್ವಾ ಸಾರ್ವಜನಿಕ ಕ್ಷೇತ್ರ ರೂಪು ಪಡೆಯಿತು. ಅಧಿಕಾರಕ್ಕೆ ಅಡ್ಡಿಯಾಗದ ಮತ್ತು ಎಲ್ಲರಿಗೂ ಸುಲಭವಾಗಿ ತಲುಪತಕ್ಕಂತೆ ಭಾವಿಸುವ ಹಕ್ಕುಗಳ ವಾರಸುದಾರರಾದ ವ್ಯಕ್ತಿಗಳ ಲೋಕದ ಒಂದು ಕ್ಷೇತ್ರವಾಗಿದೆ.

ವೈರುಧ್ಯಗಳ ಸರಮಾಲೆಯಿಂದ ವಿಚಾರಪ್ರಣೀತವಾಗಿ ಮತ್ತು ಕೆಲವೊಮ್ಮೆ ಸುಮ್ಮನೆ ಅನಗತ್ಯವಾಗಿಯೂ ನಾಗರಿಕ ಸಮಾಜದ ಪದವನ್ನು ವಿಭಿನ್ನವಾಗಿ ಉಪಯೋಗಿಸಲಾಗುತ್ತದೆ. ಸಮಾಜವಾದಿ ವಿಭಾಗದ ಅಧಃಪತನದ ನಂತರ ಮಾರುಕಟ್ಟೆಪ್ರೇರಿತ ಸಾಮಾಜಿಕ ಜೀವನವನ್ನು ನಾಗರಿಕ ಸಮಾಜವೆಂಬಂತೆ ಕೆಲ ಪಾಶ್ಚಾತ್ಯ ಚಿಂತಕರು ಮಾತಾಡಿದ್ದಾರೆ. ಇದನ್ನು ಬಲವಾಗಿ ವಿರೋಧಿಸಬೇಕಿದೆ. ಜಗತ್ತಿನಾದ್ಯಂತ ಮತ್ತು ಮುಖ್ಯವಾಗಿ ತೃತೀಯ ಜಗತ್ತಿನಲ್ಲಿ ಜಾಗತೀಕರಣದೊಂದಿಗೆ ಮಾರುಕಟ್ಟೆಯು ಸುಲಿಗೆಗೆ ಪ್ರಾಶಸ್ತ್ಯವಾದ ಸ್ಥಳವೆಂಬತಾಗಿದೆ. ಇತರರು ಹೆಚ್ಚಾಗಿ ಅಧಿಕಾರದ ಸಂಸ್ಥೆಗಳನ್ನು ಹೊರತುಪಡಿಸಿ ಸಮಾಜದ ಉಳಿದವನ್ನು ನಾಗರಿಕ ಸಮಾಜವೆನ್ನುತ್ತಾರೆ. ಇನ್ನೂ ಕೆಲವರು ಸಮಾಜಕ್ಕೆ ಈ ಪದವನ್ನು ಬಳಸುತ್ತಾರೆ.

ಪ್ರಸಕ್ತ ನಾಗರಿಕ ಸಮಾಜವೆಂದರೆ ಉದಾರವಾದಿ ಸಮಾಜಗಳಲ್ಲಿ ಹಕ್ಕುಗಳನ್ನು ಹೊಂದಿರುವ ಜನಗಳು ವಿಚಾರಗಳ ಮನ್ನಣೆ, ದೃಢ ನಿಶ್ಚಯ ಮತ್ತು ಸಾಮಾಜಿಕ ಒಲವುಗಳಿಗೆ ಹಾತೊರೆಯುವಂಥ ಕಾರ್ಯಕ್ಷೇತ್ರವೆನಿಸಿದೆ. ನಮ್ಮ ಸಮಾಜದಲ್ಲಿ ಬಹಳಷ್ಟು ಜನರು ಕೇವಲ ಹೆಸರಿಗೆ ಮಾತ್ರ ಹಕ್ಕುಳ್ಳವರಾಗಿದ್ದು ಅವನ್ನು ಚಲಾಯಿಸುವಂಥ ಸಾಮರ್ಥ್ಯ ಇಲ್ಲವೇ ಅವಕಾಶವಂಚಿತರಾಗಿರುವುದನ್ನು ಗಮನಿಸಬೇಕಿದೆ. ಇವರ ಬಗೆಗೆ ಹೆಚ್ಚು ಗಮನ ನೀಡಬೇಕಿದೆ.

ಎಲೀಟುಗಳ ಪ್ರತಿರೋಧ ಜೊತೆಗೆ ಹಿಂದುತ್ವದ ಬೆಳವಣಿಗೆಯಂಥ ವಿಶಿಷ್ಟತೆಯುಳ್ಳ ನಾಗರಿಕ ಸಮಾಜವು ಭಾರತದ ಪ್ರಜಾಪ್ರಭುತ್ವಕ್ಕೆ ರೂಢಿಗತವಾಗಲಾರದು ಎಂಬುದನ್ನು ಎತ್ತಿ ತೋರಿಸುತ್ತದೆ. ನಾಗರಿಕ ಸಮುದಾಯದ ಹೆಚ್ಚಿನ ಜನಸಮುದಾಯವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ ಇಲ್ಲವೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಂಥ ಕಾರ್ಯವೈಖರಿಯ ಪ್ರಕ್ರಿಯೆಗಳಿಂದ ದೂರವಾಗಿದ್ದಾರೆ. ಇವನ್ನು ಇನ್ನಷ್ಟು ಸ್ಪಷ್ಟಪಡಿಸಬೇಕಿದೆ. ನಾಗರಿಕ ಸಮಾಜದ ಸಕ್ರಿಯ ಸದಸ್ಯರು ಪ್ರಜಾಸತ್ತೆಯ ವಿಚಾರಗಳು ಅಥವಾ ಉದಾವಾದಿ ಪ್ರಜಾಪ್ರಭುತ್ವ ತಾತ್ವಿಕ ಗ್ರಹಿಕೆಗಳನ್ನು ವಿರೋಧಿಸುತ್ತಾರೆ. ಎಂಬರ್ಥವಲ್ಲ. ಬದಲು ಅವರು ಪ್ರಜಾಪ್ರಭುತ್ವವು ಪಾಶ್ಚಾತ್ಯ ಸಮಾಜಗಳಲ್ಲಿ ಕಾರ್ಯ ನಿರ್ವಹಿಸುವಂತೆ ಒಂದು ಮಾದರಿ ರೂಪದಲ್ಲಿ ಕಾರ್ಯ ನಿರ್ವಹಿಸುವಂತಹ ಪ್ರಜಾಪ್ರಭುತ್ವದ ಬಗೆಗೆ ಹೆಚ್ಚು ಬದ್ಧರಾಗಿದ್ದಾರೆ. ನಾಗರಿಕ ಸಮಾಜದಲ್ಲಿ ಮೂಡುವ ಅಭಿಪ್ರಾಯಗಳನ್ನು ನೋಡಿದರೆ ಅದರ ಪ್ರತಿಪಾದಕರು ವ್ಯಕ್ತಿಯ ಸ್ವಾಯತ್ತತೆಗೆ ಹೆಚ್ಚಿನ ಒತ್ತುಕೊಡುವ ಮೂಲಕ ಪರಾಧೀನವಲ್ಲದ ಹಕ್ಕುಗಳು, ಖಾಸಗಿ ಮತ್ತು ವೈಯಕ್ತಿಕ ವಿಚಾರಗಳಲ್ಲಿ ಸಾಮಾಜಿಕ ಪರಿಶೀಲನೆಯಿಂದ ದೂರವಾಗಿಡುವುದು ಮುಂತಾದ ಆಯಾಮಗಳಿಗೆ ಬದ್ಧರಾಗಿರುತ್ತಾರೆ. ಹಾಗೆಯೇ ಅಧಿಕಾರದ ಹಸ್ತಕ್ಷೇಪವಿಲ್ಲದ ಸಾರ್ವಜನಿಕ ಕಾರ್ಯಕ್ಷೇತ್ರಗಳಲ್ಲಿ ಮೌಲ್ಯಗಳ ಪ್ರತಿಪಾದನೆಗೆ ಒತ್ತು ನೀಡುತ್ತಾರೆ. ಹೀಗಾಗಿ ಅವರು ವೈಚಾರಿಕವಲ್ಲದವುಗಳು, ಅಧಿಕಾರದ ಮೋಹ ಮತ್ತು ಸ್ವಹಿತಾಸಕ್ತಿ ಮುಂತಾದವುಗಳಿಂದ ಸ್ವತಂತ್ರರಾಗಿರುತ್ತಾರೆ ಎಂದು ತಮ್ಮನ್ನು ಕಲ್ಪಿಸಿಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ ಎರಡು ಪ್ರಮುಖ ಸಂಗತಿಗಳನ್ನು ವಿಶದೀಕರಿಸಬೇಕಿದೆ. ಮೊದಲಿಗೆ ನಾಗರಿಕ ಸಮಾಜದ ಮಧ್ಯಭಾಗವಾದ ಎಲೀಟು ಭಾರತದಲ್ಲಿ ಪ್ರಜಾಸತ್ತಾತ್ಮಕ ಕಾರ್ಯಕ್ಷಮತೆಯ ಬಗೆಗೆ ನೀರಸವಾದ ಅಭಿಪ್ರಾಯವನ್ನು ಹೊಂದಿದೆ. ದಮನಿತ ವರ್ಗಗಳು ಕಾರ್ಯನಿರ್ವಹಿಸುವ ರೀತಿಯಿಂದ ರಾಜಕೀಯ ಕಾರ್ಯಕ್ಷೇತ್ರವು ಸದ್ದುಗದ್ದಲದಿಂದ ಕೂಡಿ ಒಂದು ಕೋಪಾವೇಶದ ಉಪಸ್ಥಿತಿಯನ್ನು ಉಂಟುಮಾಡಿದೆ. ಸಮಾನತೆ, ಅಧಿಕಾರದಲ್ಲಿ ಪಾಲುದಾರಿಕೆ ಮತ್ತು ದ್ವಿಜರಂತೆ ಸಮಾನಾಂತರವಾದ ಸ್ಥಾನವನ್ನು ಪ್ರತಿಪಾದಿಸುವಂತಹ ಕ್ರಮಗಳಲ್ಲಿ ಈ ಗುಂಪುಗಳು ಕೇಂದ್ರಿತವಾಗಿವೆ. ತಮ್ಮನ್ನು ಪ್ರಮುಖರೆಂದು ಒಪ್ಪಿಕೊಳ್ಳಲು ಎಲೀಟು ಮುಂದೆ ಅವರು ಒತ್ತಡ ಹಾಕುತ್ತಾರೆ. ಸಮಾನತೆ, ಹಕ್ಕುದಾರಿಕೆ ಮತ್ತು ಸಬಲೀಕರಣದಂತ ಅಂಶಗಳತ್ತ ಅವರ ಹೋರಾಟವು ಗದ್ದಲ ಮಾಡುವಂತೆ ಕಂಡು ರಾಜಕೀಯ ಕ್ಷೇತ್ರದಲ್ಲಿ ಒಂದು ಅಬ್ಬರ ನಿರ್ಮಿಸುತ್ತಿದೆ.

ರಾಜಕೀಯ ರಂಗ ಮತ್ತು ಚುನಾವಣಾ ಸ್ಪರ್ಧೆಯಲ್ಲೂ ಈ ವರ್ಗಗಳು ಹೆಚ್ಚು ಸಂಖ್ಯೆಯಲ್ಲಿ ಮುಂದೆ ಬರುತ್ತಿವೆ. ಇವು ಸಂಖ್ಯಾತ್ಮಕವಾಗಿ ಮಾತ್ರ ಹೆಚ್ಚುತ್ತಿದೆ. ಸಾರ್ವಜನಿಕ ಕಾರ್ಯಕ್ಷೇತ್ರವು ಇದರಿಂದ ಸ್ಥಗಿತಗೊಳ್ಳುವಂತೆ ಕಾಣುತ್ತಿದ್ದು ಈ ಸಂಖ್ಯಾತ್ಮಕ ಹೆಚ್ಚಳದ ಒತ್ತಡದಿಂದ ವಿಭಿನ್ನವಾಗಿ ರೂಪುಗೊಳ್ಳುವ ವೈಚಾರಿಕ ವಿನಿಮಯವು ನಾಗರಿಕ ಸಮಾಜವು ನಿರ್ವಹಿಸುವಂಥ ಮೌಲ್ಯ ಮತ್ತು ಉತ್ತಮ ಅಂಶಗಳನ್ನು ಒಪ್ಪಲು ಕಷ್ಟವೆನಿಸಿದೆ.

ಎರಡನೆಯದಾಗಿ ತನ್ನದೇ ಆದ ನೈತಿಕ ಅರ್ಥವ್ಯವಸ್ಥೆ ಮತ್ತು ಸಾಂಸ್ಕೃತಿಕ ತೋರಿಕೆಯೊಂದಿಗೆ ದಮನಿತ ವರ್ಗವು ಎಲ್ಲ ಭಿನ್ನತೆಗಳ ಮಧ್ಯೆಯೂ ಪ್ರಜಾತಂತ್ರ ಪ್ರಕ್ರಿಯೆಗೆ ಪ್ರವೇಶಿಕೆಯಾಗಿದೆ. ನೈತಿಕತೆ ಮತ್ತು ಸಂಸ್ಕೃತಿಯ ಅಗತ್ಯವಾಗಿ ಮೌಲ್ಯಗಳಾಗಿದ್ದು ಅದನ್ನು ನಾಗರಿಕ ಸಮಾಜದ ಸ್ವತ್ತು ಎಂದು ಪರಿಗಣಿಸಲಾಗದು. ಹಾಗೆ ನೋಡಿದಲ್ಲಿ ಈ ಮೌಲ್ಯಗಳೇ ನಾಗರಿಕ ಸಮಾಜ ರೂಪುಗೊಳ್ಳುವ ಅವಶ್ಯಕತೆಗಳನ್ನೇ ನಿರಾಕರಿಸುತ್ತದೆ. ಕೋಮು ಸಾಮರಸ್ಯ, ಅಂತರ್ ಜಾತಿ ಸಮುದಾಯಗಳೊಳಗೆ ಸಮಾನ ಭಾವನೆ, ಮುಂತಾದ ಆಶಯಗಳು ಸಾರ್ವಜನಿಕ ಜೀವನದಲ್ಲಿ ಹೆಚ್ಚು ಸಾಂಗತ್ಯಗೊಳ್ಳಬೇಕಿದೆ.

ರಾಜಕೀಯ ಜೀವನದಲ್ಲಿ ಸಮುದಾಯಗಳ ಕ್ರಿಯಾಶೀಲತೆಯ ಸ್ವರೂಪದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ರೂಪುಗೊಳ್ಳುತ್ತದೆ. ಈ ಜನಗಳು ಸಾರ್ವಜನಿಕ ಕಾರ್ಯಕ್ಷೇತ್ರಕ್ಕೆ ವ್ಯಕ್ತಿಗಳಾಗಿ ಪ್ರವೇಶಿಸುವ ಬದಲು ಸಮುದಾಯದೊಳಗಿನ ಜನಗಳಾಗಿ ಸೇರುತ್ತಾರೆ. ಸಮುದಾಯ ಜೀವನದ ಉಪಯೋಗ ಮತ್ತು ಬೆಲೆಯನ್ನು ಹೆಚ್ಚಾಗಿ ಈ ಸಮುದಾಯಗಳು ವಿಮರ್ಶಾತ್ಮಕವಾಗಿ ನೋಡುವುದಿಲ್ಲ. ಅಲ್ಲದೆ ದುರ್ಬಲ ವರ್ಗದ ಈ ಜನಗಳು ಸಾರ್ವಜನಿಕವಾಗಿ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಜ್ಜುಗೊಂಡಿರುವುದಿಲ್ಲ. ಸಾರ್ವಜನಿಕವಾಗಿ ಸ್ಪರ್ಧಿಸತಕ್ಕಂತೆ ಕುಶಲತೆ, ಗುಣಗಳು ಮತ್ತು ಆತ್ಮವಿಶ್ವಾಸದ ಕೊರತೆಯಿರುವುದು. ತಮ್ಮ ಮಾತಿನ ಕುಶಲತೆಯ ಕೊರತೆ ನೀಗಲು ಅವರು ಸಮೂಹವಾಗಿ ಪ್ರವೇಶಿಸುತ್ತಾರೆ. ಈ ಸಾಂಪ್ರದಾಯಿಕ ರೀತಿಯ ಸಮುದಾಯ ಸ್ಪರ್ಧೆಯ ರಾಜಕೀಯ ಸಂಸ್ಕೃತಿಯ ನಾಗರಿಕ ಸಮಾಜಕ್ಕೆ ವ್ಯತಿರಿಕ್ತವೆನಿಸುತ್ತದೆ. ಒಂದು ಪ್ರಬಲ ಬಂಧವುಳ್ಳ ಸಂಸ್ಕೃತಿಯು ನಿರ್ದಿಷ್ಟ ಸಾರ್ವತ್ರಿಕ ಲಕ್ಷಣವುಳ್ಳ ನಾಗರಿಕ ಸಮಾಜಕ್ಕೆ ನೆಲೆ ಒದಗಿಸುತ್ತದೆ.

ರಾಜಕಾರಣವನ್ನು ನಾವು ಈ ರೀತಿ ವರ್ಗೀಕರಿಸುವುದಾದರೆ ಅವು ವೈಚಾರಿಕತೆಯಿಂದ ಸಾರ್ವಜನಿಕವಾಗಿ ಮನ್ನಣೆಗೊಳಪಡುವ ಆದರ್ಶಗಳಿಂದ ಪ್ರೇರಿತವಾಗಿದೆ. ಹಕ್ಕುದಾರಿಕೆ ಮತ್ತು ಸಬಲೀಕರಣ ಮುಂತಾದ ಗುರಿಗಳು ಯಾವುದೇ ಪ್ರಜಾಪ್ರಭುತ್ವಕ್ಕೆ ಅಗತ್ಯದಲ್ಲಿ ಇರಬೇಕು. ಪ್ರಜಾಪ್ರಭುತ್ವವು ಇವನ್ನು ಸಾಕಾರಗೊಳಿಸುವ ದಾರಿ ಮಾತ್ರ ಪ್ರಶ್ನಾರ್ಹವಾಗಿದೆ. ನಾಗರಿಕ ಸಮಾಜದ ಸಂದರ್ಭದ ನಾಗರಿಕ ಮತ್ತು ಸಮಚಿತ್ತವಾದ ದಾರಿಗಳ ಬಗೆಗೆ ಈ ದುರ್ಬಲ ವರ್ಗದವರಿಗೆ ಯಾವುದೇ ಹಿಡಿತವಿಲ್ಲ. ಆದರೆ ಅವರು ತೆಗೆದುಕೊಂಡಿರುವ ಕ್ರಮಗಳು ತೋರಿಕೆಗೆ ನಾಗರಿಕ ಸಮಾಜದ ವಿರುದ್ಧದವು ಎಂದು ಕಾಣುತ್ತದೆ. ಆದರೆ ತೋರಿಕೆಯ ಹಿಂದೆ ಅವರು ಗುರುತಿಸಿಕೊಂಡಿರುವ ಚಳುವಳಿಯ ಪ್ರಮುಖವಾದ ಮೌಲ್ಯಗಳು ಸ್ಥಿರವಾದ ನಾಗರಿಕ ಸಮಾಜಕ್ಕೆ ಅಗತ್ಯವೆನಿಸಿದೆ. ಈ ಪರಿಸ್ಥಿತಿಯು ನಾಗರಿಕ ಸಮಾಜ ಸಿದ್ಧಾಂತದ ಒಪ್ಪಿತ ಮೌಲ್ಯಗಳನ್ನು ಸ್ವೀಕಾರಗೊಳಿಸಲು ಕಷ್ಟವಾಗುತ್ತದೆ.

ನಾಗರಿಕ ಸಮಾಜವು ಭಾರತೀಯ ಸಮಾಜದಲ್ಲಿ ಒಂದು ನಿರ್ಬಂಧಿತ ಪ್ರವೇಶಿಕೆಯಾಗಿದೆ. ವಿದ್ಯಾವಂತರು, ಸಂಸ್ಕೃತಿಯನ್ನು ಗೌರವಿಸುವವರು, ತಮ್ಮ ಹಕ್ಕುಗಳ ಚಲಾವಣೆ ಬಗೆಗೆ ಸಾಮರ್ಥವಿರುವವರಾಗಿದ್ದು ನಾಗರಿಕ ಸಮಾಜದ ಕೇಂದ್ರ ಸದಸ್ಯರು ಅಥವಾ ತಿರುಳು ಆಗಿರುತ್ತಾರೆ. ಇತರರು ತಮ್ಮ ಹಾಗೆ ಪ್ರತಿಕ್ರಿಯಿಸಲು ಸಮರ್ಥರು ಎಂದು ಒತ್ತಾಯದಿಂದ ತಮ್ಮ ಕಾರ್ಯವನ್ನು ಇತರರ ಪರಿವೆಯಿಲ್ಲದೆ ಮಾಡುತ್ತಾರೆ. ಎಲೀಟು ಜಗತ್ತಿನ ಸಾಮಾಜಿಕ ಪ್ರಾಮುಖ್ಯತೆ ಮತ್ತು ರಾಜಕೀಯ ಪ್ರಕ್ರಿಯೆಯ ಪ್ರತಿಪಾದನೆ ಕುಂಠಿತಗೊಳ್ಳುತ್ತದೆ. ಈ ಕಾರಣದಿಂದ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿಕೊಳ್ಳುವ ನಾಗರಿಕ ಸಮಾಜದ ಮೌಲ್ಯಗಳಿಗೆ ಯಾರು ಪ್ರಬಲವಾಗಿ ಬದ್ಧರಾಗಿದ್ದರೋ ಅವರೇ ದೂರವಾಗುತ್ತಿದ್ದಾರೆ, ನಾಗರಿಕ ಸಮಾಜದ ಪ್ರಜಾತಂತ್ರವು ಭಾರತದಲ್ಲಿ ತನ್ನ ಬಲಹೀನತೆಗಳ ಮಧ್ಯೆಯೂ ನಾಗರಿಕ ಸಮಾಜದ ವಿಸ್ತೃತವಾದ ನೆರವಿಲ್ಲದೆ ಮುಂದುವರಿಯದು ಮತ್ತು ಕಾರ್ಯವೆಸಗದು.

ಭಾರತದ ಪ್ರಸಕ್ತ ಪರಿಸ್ಥಿತಿಯು ಅಸಾಧಾರಣವಾಗಿದ್ದು ಪಶ್ಚಿಮದ ಜಗತ್ತಿಗಿಂತ ಭಿನ್ನವಾಗಿದೆಯಾದರೂ ಪ್ರಜಾಪ್ರಭುತ್ವದ ಮುಂದುವರಿಕೆಯ ಅಂಶಗಳು ಮಾತ್ರ ಅಲ್ಲಿಂದಲೇ ಪ್ರಭಾವಿಸಲ್ಪಟ್ಟಿವೆ. ಪ್ರಜಾಪ್ರಭುತ್ವ ಕಾರ್ಯಕ್ಷಮತೆಗೆ ನಾಗರಿಕ ಸಮಾಜ ಅಗತ್ಯವಾಗಿದ್ದು ನಿಜವಾದ ಜನತಾಂತ್ರಿಕ ಪ್ರಕ್ರಿಯೆಗೆ ವಿರುದ್ಧವಾಗಿದೆ ಅಥವಾ ಅದಕ್ಕೆ ವಿರುದ್ಧವಾದ ನಿಲುವು ಇರುತ್ತದೆ. ಇಲ್ಲಿ ಎಲೀಟುಗಳು, ಸ್ಥಾಪಿತ ಮಧ್ಯಮವರ್ಗ ಮತ್ತು ವಿದ್ಯಾವಂತ ಹಾಗೂ ಸಿರಿವಂತರು ಪ್ರಜಾಪ್ರಭುತ್ವದೆಡೆಗೆ ವಿಮುಖರಾಗಿರುವುದನ್ನು ವಿವರಿಸಲಾಗದು. ಚಿಂತನೆಯಲ್ಲಿ ತೊಡಗಿರುವ ಹೆಚ್ಚಿನ ವಿಮರ್ಶಾತ್ಮಕ ಬುದ್ಧಿಜೀವಿಗಳ ಗುಂಪು, ಸಾಮಾಜಿಕ ಚಳುವಳಿಗಳು ಮತ್ತು ಇತರೆ ಪ್ರಗತಿಪರ ಚಟುವಟಿಕೆಗಳು ಈ ಪರಾಧೀನತೆಯ ಅಪವಾದಕ್ಕೆ ಹೊರತಾಗಿದ್ದಾರೆ.

ಆಧುನಿಕ ಸಾಂಸ್ಕೃತಿಕ ಚಹರೆಗಳಿರುವ ಒಂದು ತೃತೀಯ ಜಗತ್ತಿನ ಎಲೀಟು ವಿಭಾಗದಲ್ಲಿ ನಾಗರಿಕ ಸಮಾಜವು ರೂಪುಗೊಂಡು ಹೊರಗಡೆ ಪ್ರಸರಣವಾಗುವುದು. ನಾಗರಿಕ ಸಮಾಜವು ಚಿಗುರಬೇಕಿದ್ದರೆ ಇಡೀ ಸಮಾಜವು ವಿದ್ಯಾವಂತರಾಗಿ, ಸಾಂಸ್ಕೃತಿಕ ಆಯಾಮಗಳನ್ನು ಒಳಗೊಂಡಿರಬೇಕಾದ ಅಗತ್ಯವೇನಿಲ್ಲ. ಜನಸಾಮಾನ್ಯರು ಮತ್ತು ಎಲೀಟುಗಳು ನಡುವಿನ ಮೌಲ್ಯ ಮತ್ತು ಆಶಯಗಳ ಮಧ್ಯೆ ಬಿರುಕು ಇರುವ ಸಂದರ್ಭದಲ್ಲಿ ಸ್ವಾತಂತ್ರ‍್ಯ ಸಂಗ್ರಾಮ ಮತ್ತು ಸಂವಿಧಾನ ನಿರೂಪಣೆ ಸಂದರ್ಭದಲ್ಲಿ ರೂಪುಗೊಂಡಂತೆ ಒಂದು ಕರಾರನ್ನು ಗುರುತಿಸಿಕೊಳ್ಳಬೇಕಿದೆ. ಜನಸಾಮಾನ್ಯರಿಗೆ ಒಂದು ಆಶಾಭಾವನೆಯ ಭವಿಷ್ಯವನ್ನು ಎಲೀಟು ಖಾತರಿಪಡಿಸಿತು. ಆದರೆ ಈ ವಾಗ್ದಾನ ಒಂದು ವೇಳೆ ಸ್ಪಷ್ಟವಾಗಿದ್ದರೆ ಈಗ ಕಾಣುವಂತೆ ಅದು ಇನ್ನಿತರರ ಅನುಕೂಲಕ್ಕೆ ಉಪಯೋಗವಾಗುತ್ತಿರಲಿಲ್ಲ. ಆದರೆ ರೂಪುಗೊಂಡ ಸಮಯದಲ್ಲಿ ಅದು ನಿಜವೆಂದು ಆಶಿಸಲಾಗಿತ್ತು. ಈ ಕರಾರಿನ ಹಿನ್ನೆಲೆಯಲ್ಲಿ ಕಾರ‍್ಯರೂಪುಗೊಳ್ಳಬೇಕಿದ್ದ ಉದ್ದೇಶಗಳು ಮತ್ತವುಗಳ ಕ್ರಮಗಳು ವ್ಯಾಪಕಗೊಳ್ಳಬೇಕಿಲ್ಲ ಚೌಕಟ್ಟು ಸಮಾಜದಲ್ಲಿ ವಿಸ್ತೃತಗೊಂಡಿತ್ತು. ಆದರೆ ಎಲೀಟು ಮತ್ತು ಜನಸಾಮಾನ್ಯರ ಮಧ್ಯದ ಲೋಕದೃಷ್ಟಿಯ ಭಿನ್ನಾಭಿಪ್ರಾಯಗಳು ಮಾತ್ರ ಕರಾರಿನ ಅನ್ವಯ ನಡೆದುದಲ್ಲ. ಇನ್ನೊಂದೆಡೆ ಸಮುದಾಯಗಳೊಳಗೆ ಮತ್ತು ಹೊರಗೆ ಸಂಸ್ಕೃತಿಗಳ ಭಿನ್ನತೆಯ ರೋಗಗ್ರಸ್ತವಾದ ಮುಂದುವರಿಕೆ ಮತ್ತು ರಾಜಕೀಯ ಪ್ರಕ್ರಿಯೆಯನ್ನು ಇವು ಪ್ರಭಾವಿಸದ ಕಾರಣ ಉಂಟಾಯಿತು. ವ್ಯತಿರಿಕ್ತವೆಂದರೆ ಈಗ ಇವು ಸಾರ್ವಜನಿಕ ಕಾರ್ಯಕ್ಷೇತ್ರಕ್ಕೆ ವ್ಯಾಪಿಸಿದೆ. ಜನರ ಒಪ್ಪಿಗೆಯ ಸಹಮತವುಳ್ಳ ಒಂದು ಉದ್ದೇಶದ ಏಕತೆಯನ್ನು ತಿಳಿಸುವ ಸಾರ್ವಜನಿಕ ಕಾರ್ಯಕ್ಷೇತ್ರದ ಬಗೆಗೆ ಬುದ್ಧಿಜೀವಿ ವಲಯದಲ್ಲಿ ಚರ್ಚೆಗಳು ನಡೆದಿವೆ. ಒಂದು ಸೀಮಿತ ವ್ಯಾಪ್ತಿ ಮತ್ತು ನಿರ್ಬಂಧಿತ ಮಟ್ಟದ ಲಕ್ಷಣಗಳುಳ್ಳ ನಾಗರಿಕ ಸಮಾಜವು ಸಾಧಾರಣವು ಭಾರತದಲ್ಲಿ ಕಾರ್ಯೋನ್ಮುಖವಾಗಿತ್ತು.

ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿಲ್ಲ. ಮೊದಲೇ ಚರ್ಚಿಸಿದಂತೆ ಒಂದು ವಿಶಿಷ್ಟ ಮಾದರಿಯ ಪ್ರಜಾಪ್ರಭುತ್ವದ ವಿಸ್ತರಣೆ ಮತ್ತು ತಳವೂರಿಕೆ ಭಾರತದಲ್ಲಿ ನಡೆಯುತ್ತಿತ್ತು. ಈ ಬೆಳವಣಿಗೆಯನ್ನು ಪ್ರಗತಿದಾಯಕವೆನ್ನಬಹುದೇ ಎನ್ನುವುದು ಬಹಳ ಮುಖ್ಯವಾದ ಪ್ರಶ್ನೆ. ಇದರ ವೈಚಾರಿಕ ನೆಲೆ ಮತ್ತು ದೃಷ್ಟಿಕೋನ ಬಗೆಗೆ ವ್ಯಾಪಕತೆಯೇ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ನ್ಯಾಯಸಮ್ಮತಗೊಳಿಸಿದೆ. ಆದರೂ ಪ್ರಜಾಪ್ರಭುತ್ವ ವಿಸ್ತರಣೆಯಲ್ಲಿನ ಸಡಿಲವಾದ ಸೂಕ್ಷ್ಮ ಮಟ್ಟದ ಪ್ರಕ್ರಿಯೆಗಳು ನಿಜವಾಗಿಯೂ ವಿಸ್ತೃತ ಮಟ್ಟದಲ್ಲಿ ಜಾತ್ಯತೀತ ಗುಣಲಕ್ಷಣಗಳ ಉಳಿವಿಗೆ ಸಹಕಾರಿಯಾಗಿವೆ. ಇವು ಬೆಳೆಯುತ್ತಿರುವ ಹಿಂದುತ್ವದ ಉಗ್ರವಾದದ ನಡುವೆ ಸಹ ಅಲ್ಪಸಂಖ್ಯಾತರಿಗೆ ಸಣ್ಣ ಮಟ್ಟಿನ ಆಶಾವಾದವನ್ನು ನೀಡಿದೆ. ಹಿಂದುತ್ವ ಅಧಿಕಾರದಲ್ಲಿನ ಏರಿಕೆ ಕೂಡ ನಾಗರಿಕ ಸಮಾಜದ ಮೂಲಕ್ಕೆ ನೇರವಾದ ಪೆಟ್ಟು ನೀಡುವ ಮೂಲಕ ಒಂದೆಡೆ ಪ್ರಜಾಪ್ರಭುತ್ವದೆಡೆಗೆ ತೋರಿಕೆಯ ಗೌರವ ನೀಡಿದರೂ ಅದು ಪ್ರಜಾಪ್ರಭುತ್ವದ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತದೆ.

ಈ ಪ್ರಜಾಪ್ರಭುತ್ವ ರೂಪವು ಭಾರತದ ರಾಜಕಾರಣವನ್ನು ಹಿಂದೂಕರಣಗೊಳಿಸುವ ತೆರೆಮರೆಯ ಹಿಂದುತ್ವದ ಉದ್ದೇಶಕ್ಕೆ ಹತ್ತಿರವಾಗಿದೆ. ನಾವು ಹಿಂದಿನ ಅಧ್ಯಾಯನದಲ್ಲಿ ಒಳಗೊಳ್ಳುವಿಕೆಯ ರಾಜಕಾರಣ ಅಂದರೆ ಜನರ ಆಸ್ಮಿತೆಯನ್ನು ಅನಾವರಣಪಡಿಸುವ ಒಂದು ವಿಧದ ಒಳಗೊಳ್ಳುವಿಕೆಯನ್ನು ನೋಡಿದ್ದೇವೆ. ಈ ಸ್ಥಿರಗೊಳ್ಳುತ್ತಿರುವ ರೂಪದ ತೋರಿಕೆಯ ಕ್ರಮವು ಬಹಳಷ್ಟು ಜನರನ್ನು ಹಿಂದುತ್ವದ ಕಡೆಗೆ ಆಕರ್ಷಿಸುವಲ್ಲಿ ಪ್ರಮುಖವಾಗಿದೆ. ಇಲ್ಲದಿದ್ದಲ್ಲಿ ಹೀಗಾಗುತ್ತಿರಲಿಲ್ಲ. ಹಾಗಾಗಿ ನಾಗರಿಕ ಸಮಾಜದ ಕೇಂದ್ರದ ಹೆಚ್ಚಿನ ಭಾಗವು ಹಿಂದುತ್ವದೊಂದಿಗೆ ಹೊಂದಿಕೊಂಡಿರುವುದಕ್ಕೆ ಆಶ್ಚರ್ಯವೆನಿಸುವುದಿಲ್ಲ. ಒಂದು ವೇಳೆ ಇದೆ ರೀತಿಯಾಗಿ ಮಮತಾ ಬ್ಯಾನರ್ಜಿ ಚೇಷ್ಟೆ ಮತ್ತು ಅಸಭ್ಯತೆ ಕೂಡ ಅಹಿತಕರವೆನಿಸುವುದಿಲ್ಲ. ಆದರೆ ಲಾಲೂ ಪ್ರಸಾದ್ ಸಂದರ್ಭದಲ್ಲಿ ಮಾತ್ರ ಹೀಗಾಗುವುದಿಲ್ಲ.

ಹಿಂದುತ್ವವು ಇನ್ನೊಂದು ಪ್ರಮುಖ ಬೆಳವಣಿಗೆ ಜೊತೆಗೆ ಸಾಗುತ್ತಿದೆ. ನೆಹರೂ ಅವರ ಪರಿವರ್ತನಾ ಕಾರ್ಯಸೂಚಿ ಪರ್ವದ ನಂತರ ದೇಶವು ಬಡವರ ಪರವಾಗಿ  ಕಾರ್ಯನಿರ್ವಹಿಸುವ ಬೆಂಬಲವ ಪಾತ್ರವು ಕುಂಠಿತಗೊಂಡಿದೆ. ದೇಶದ ಹೆಚ್ಚಿನ ಹಸ್ತಕ್ಷೇಪವನ್ನು ಕಡಿತಗೊಳಿಸುವುದು ಕೂಡ ಅಷ್ಟೇ ಪ್ರಮುಖವೆನಿಸಿದೆ. ಅದು ಜಾಗತಿಕ ಬಂಡವಾಳಪರವಾದ ಪರಿವರ್ತನೆಯಿಂದ ಹಸ್ತಕ್ಷೇಪದಲ್ಲಿ ಒಳಗೊಳ್ಳುತ್ತಿದೆ. ಇದು ಜನಗಳ ವಿವೇಚನೆಯ ಹಪಹಪಿಯಿಂದ ದೂರಗೊಳಿಸುವುದು. ದೇಶವು ಮೀಸಲಾತಿಯ ವ್ಯಾಪ್ತಿಯನ್ನು ಸಹ ಸಾಧ್ಯವಾದಷ್ಟು ಕುಗ್ಗಿಸುತ್ತಿರುವುದರಿಂದ ಬೂರ್ಶ್ವಾ ಸಮಾನತೆಗಾಗಿ ಅವರ ಹುಡುಕಾಟದ ಹಂಬಲಕ್ಕೂ ತೊಡಕಾಗುವಂತಿದೆ. ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜದ ಮಧ್ಯದ ಪರಸ್ಪರ ಸಂಬಂಧವನ್ನು ತಿಳಿಯುವಲ್ಲಿ ಪ್ರಾರಂಭದ ಬದಲಾವಣೆಯ ಕಾರ್ಯಸೂಚಿ ವಿಮೋಚನೆಯನ್ನೊಳಗೊಂಡಿತ್ತೇ ಎಂಬ ಪ್ರಶ್ನೆ ಪ್ರಮುಖವಲ್ಲ. ಹಾಗೆಯೇ ಬೂರ್ಶ್ವಾ ಸಮಾನತೆಯ ಹಂಬಲವು ಜನರ ಉನ್ನತಿಗೆ ಸಹಾಯಕವಾಗುವುದೇ ಎನ್ನುವ ವಿಷಯ ಕೂಡ ಇಲ್ಲಿ ಮಹತ್ವವಲ್ಲ. ಬೂರ್ಶ್ವಾ ಸಮಾನತೆಗಾಗಿರುವ ಹಂಬಲವು ಇತ್ತೀಚಿನ ದಿನ ಚಳವಳಿಗಳ ಕಾರಸ್ತಾನವಾಗಿದೆ.

ಪಾಶ್ಚಾತ್ಯ ದೇಶಗಳಲ್ಲಿರುವಂತೆ ವಿಸ್ತೃತ ಸಮಾಜದ ಕಲ್ಪನೆಗೆ ಅನುಗುಣವಾಗಿ ಎಲೀಟು ನಾಗರಿಕ ಸಮಾಜಕ್ಕೆ ಸಹಾಯ ಮಾಡದು. ಅದು ತಳಮಟ್ಟದಲ್ಲಿ ಪ್ರಜಾಪ್ರಭುತ್ವದ ಕಾರ್ಯವೈಖರಿಗೆ ಬೆಂಬಲ ಅಥವಾ ಉತ್ತೇಜನ ನೀಡುವ ಆರೋಗ್ಯ ಲಕ್ಷಣಗಳನ್ನು ಪೋಷಿಸದು. ಎಲೀಟು ಮತ್ತು ಜನಸಾಮಾನ್ಯರ ಮಧ್ಯದ ಬಿರುಕಿನ ಸಂಘರ್ಷ ಇಂದಿನ ರಾಜಕಾರಣದಲ್ಲಿ ಎದ್ದು ಕಾಣುತ್ತದೆ. ಸಮಾಜದ ದಿನ ನಿತ್ಯದ ಬದುಕಲ್ಲಿ ಇಬ್ಬರೂ ಒಂದೇ ಕಡೆ ಸೇರಲಾರರು ಮತ್ತು ಒಂದೇ ಭಾವನೆಯನ್ನು ಹೊಂದಲಾರರು. ಇಬ್ಬರ ಬಗೆಗೆ ನಡೆಯುವ ಸಾರ್ವಜನಿಕ ಚರ್ಚೆಯಲ್ಲೂ ಅವರು ಆಗಾಗ ಒಬ್ಬರನ್ನೊಬ್ಬರು ದೂಷಿಸುತ್ತಾರೆ. ಇಲ್ಲಿ ಬಹಳ ಮುಖ್ಯವಾಗಿ ಭಾರತದಲ್ಲಿ ನಾಗರಿಕ ಸಮಾಜದ ಬಲಹೀನತೆಯ ಪ್ರಮುಖ ಲಕ್ಷಣ ಅಡಗಿದೆ.

ಸಂಪರ್ಕ ಮತ್ತು ಚರ್ಚೆಗೆ ಪ್ರಾಶಸ್ತ್ಯವಾದ ಸಾರ್ವಜನಿಕ ಕಾರ್ಯಕ್ಷೇತ್ರವು ಛಿದ್ರಗೊಂಡು ಸಮುದಾಯಗಳ ಸಂಘಟಿತ ರಾಜಕಾರಣದಲ್ಲಿ ಎಲೀಟುಗಳೊಂದಿಗೆ ವಿರಸಗೊಂಡು ಹೋರಾಟಕ್ಕಿಳಿದಿವೆ. ಸಮುದಾಯಗಳೊಳಗೆ ಸಂದೇಶವು ನಿರಾತಂಕವಾಗಿ ಸಾಗದೆ ತಿರುಚಲ್ಪಟ್ಟು ಅರ್ಥಹೀನವಾಗುತ್ತಿದೆ. ಮಂಡಲ್ ವಿರೋಧಿ ಚಳವಳಿ ನಂತರ ದಕ್ಷತೆ ಅಥವಾ ಪ್ರತಿಭೆಯ ವಿಷಯಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂಧಂಥ ಸಂದರ್ಭದಲ್ಲಿ ಇಂಥ ಪ್ರಕ್ರಿಯೆಯನ್ನು ಕಾಣಬಹುದು. ಪ್ರಮುಖ ವಿಷಯಗಳು ಚರ್ಚೆಗೆ ಬರುವ ಸಂದರ್ಭದಲ್ಲಿ ಅವುಗಳ ಅರ್ಥಗಳು ಸಮುದಾಯ ಹಿತಾಸಕ್ತಿಯ ಆಸ್ತಿಗಳಂತಾಗಿ ಸಂದೇಶಗಳು ಸಹಕಾರಿಯಾಗುವ ಬದಲು ದಾರಿ ತಪ್ಪುತ್ತಿವೆ. ಇದೇ ರೀತಿಯಲ್ಲಿ ಪ್ರಜಾಪ್ರಭುತ್ವದ ಬಗೆಗೆ ಗೊಂದಲವನ್ನು ಉಂಟುಮಾಡಲು ಕೆಲವು ಪ್ರಮುಖ ವಿಷಯಗಳ ಚರ್ಚೆಯನ್ನು ಹಿಂದುತ್ವ ಕೂಡ ಯುಕ್ತಿಯಿಂದ ಬಳಸಿಕೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ ಬಹುಮತವು ಅನಿಶ್ಚಿತವಾಗಿದ್ದು ನಿಶ್ಚಿತ ಸ್ಪರ್ಧೆಯ ಮೂಲಕ ರೂಪುಗೊಳ್ಳುವುದರಿಂದ ಅದು ಹಿಂದು ಜನರನ್ನು ಒಟ್ಟು ಸೇರಿಸುವ ಮೂಲಕ ನಿರಂತರತೆಗೆ ಪ್ರೇರೇಪಿಸುತ್ತದೆ. ಹಿಂದೂಗಳೆಂದರೆ ಒಂದು ಎದ್ದು ತೋರುವ ಬಹುಮತದ ಪಂಗಡವೆಂದಾಗಿದೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಹುಮತೀಯ ಜನಗಳ ಕ್ರಮವನ್ನು ನ್ಯಾಯಸಮ್ಮತಿಗೊಳಿಸುವ ಮೂಲಕ ಅದು ಪ್ರಜಾಪ್ರಭುತ್ವದ ಕಾರ್ಯವಿಧಾನಕ್ಕೆ ಬಹಿರಂಗವಾಗಿ ಸವಾಲೆಸೆಯಿತು. ಅಸಮರ್ಥ ಪದಗಳಿಂದ ಪ್ರಜಾಪ್ರಭುತ್ವವನ್ನು ತುಚ್ಛೀಕರಿಸಿ ಆರೋಪಿಸಲಾಗಿದೆ.

ಎಲೀಡು ಮತ್ತು ಸಾಮಾನ್ಯರ ಮಧ್ಯ ಭಿನ್ನಾಭಿಪ್ರಾಯವನ್ನು ಸುಲಭವಾಗಿ ಮಾತುಕತೆ ಮೂಲಕ ಬಗೆಹರಿಸಲಾಗದು. ಎಲೀಟು ಸಂಕುಚಿತವಾದ ಸ್ವಹಿತಾಸಕ್ತಿಯ ಮೂಲಕ ತನ್ನ ಐಹಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದೆ. ಜಾಗತಿಕ ಪರ್ವದಲ್ಲಿ ರಾಜ್ಯವು ಕಲ್ಯಾಣ ಕಾರ್ಯಕ್ರಮಗಳಿಂದ ವಿಮುಖವಾಗಿ ಜನರು ತಮ್ಮ ತಮ್ಮ ಕಷ್ಟಸುಖಗಳನ್ನು ನೋಡಿಕೊಳ್ಳಲು ಇರುವಂತೆ ಎಲೀಟು ಆಸ್ಪದ ನೀಡಿದೆ. ವ್ಯಾಪಕ ಬಡತನವನ್ನು ಜನರ ದೈನಂದಿನ ಅಗತ್ಯಗಳ ಈಡೇರದಂತಹ ಸಮಾಜದಲ್ಲಿ ಯಾವುದೇ ನಾಗರಿಕ ಸಂಸ್ಥೆಯ ನೆರವಿಲ್ಲದೆ ಜನರು ದಯಾಳುವಾದ ಸಾಮಾಜಿಕ ಸಂಸ್ಥೆಗಳ ಮುಂದೆ ತಮ್ಮಷ್ಟಕ್ಕೆ ವಿಯೋಗ ಹೊಂದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವರು ತಮ್ಮ ಸಮುದಾಯದ ರಕ್ತಸಂಬಂಧಿಗಳಿಂದ ಬೆಂಬಲ ಸೂಚಿಸುವಂತಹ ಒತ್ತಾಯದ ಹಂತಕ್ಕೆ ದೂಡಲ್ಪಟ್ಟಿದ್ದಾರೆ. ಸಮುದಾಯಗಳು ಹೀಗೆ ಜನರು ಜೀವನವನ್ನು ಕೂಡಿ ಕೊಳ್ಳುವ ಧಾಮಗಳಂತಾಗಿವೆ. ಆದರೆ ಭಾರತದಲ್ಲಿ ಕೆಲವೊಮ್ಮೆ ಜನಗಳ ಜೀವನದಲ್ಲಿ ಸಮುದಾಯಗಳು ವೈರುಧ್ಯವುಳ್ಳ ಪಾತ್ರವನ್ನು ನಿರ್ವಹಿಸುತ್ತವೆ. ಸಮಾನತೆ ಮತ್ತು ಗುರುತಿಸಿಕೊಳ್ಳುವಿಕೆಯ ಆಂದೋಲನಗಳು ಜನರ ವಿಮೋಚನೆಯೆಡೆಗೆ ಹೇಗೆ ಪ್ರಭಾವ ಬೀರಬಲ್ಲದು ಎಂಬುದನ್ನು ಹಿಂದಿನ ಅಧ್ಯಾಯಗಳಲ್ಲಿ ನೋಡಿದ್ದೇವೆ. ತಮ್ಮ ಉಪಸ್ಥಿತಿಯನ್ನು ಪರಿಗಣಿಸುವಷ್ಟರ ಮಟ್ಟಿಗೆ ಅವರ ಪ್ರತಿಪಾದನೆ ಸಾಧ್ಯವಾಗಿದೆ. ಹೆಚ್ಚಿನ ವರ್ಗಗಳು ಮೂಕಪ್ರೇಕ್ಷಕವಾಗಿರುವಂಥ ಸಂದರ್ಭದಲ್ಲಿ ಸಮಾಜದಲ್ಲಿ ಇವರ ಪ್ರತಿಪಾದನೆಯ ಪ್ರಾಮುಖ್ಯತೆಯನ್ನು ಯಾರಾದರೂ ಗಮನಿಸತಕ್ಕದ್ದೆ, ಇನ್ನೊಂದೆಡೆ ಜನರು ತಮ್ಮ ದೈನಂದಿನ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುವಂತೆ ಸಮುದಾಯದ ಮೇಲೆ ಒತ್ತಡ ಹೇರುವ ಕ್ರಮವು ವ್ಯಕ್ತಿಗಳ ಸ್ವಾಯತ್ತತೆ ಮತ್ತು ಸ್ವಯಂಗೌರವಕ್ಕೆ ಹಾನಿ ತರಬಲ್ಲದು. ಸಮುದಾಯವನ್ನು ಅವಲಂಬಿಸಿರುವುದು ಅನುಚಿತವಾದಂಥ ಮಹತ್ವ ತರಬಹುದು. ಪಶ್ಚಿಮದಲ್ಲಿ ಕಾರ್ಮಿಕ ಸಂಘಟನೆ, ವ್ಯಾಪಾರಿ ಸಂಘಟನೆಗಳು ಅಥವಾ ಒತ್ತಡ ಗುಂಪುಗಳಿಗಿಂತ ವ್ಯತಿರಿಕ್ತವಾಗಿ ಭಾರತದಲ್ಲಿನ ಸಾಂಪ್ರದಾಯಿಕ ಸಮುದಾಯಗಳು ವಿಮರ್ಶಾತ್ಮಕವಲ್ಲದ ಬೇಡಿಕೆ ಮುಂದಿಡುತ್ತದೆ. ಸಮುದಾಯದ ನೀತಿ ನಿಯಮಗಳನ್ನು ಜನ ಒಪ್ಪತಕ್ಕದ್ದು. ಇಲ್ಲದಿದ್ದಲ್ಲಿ ಅವರು ಶಿಕ್ಷೆಗೊಳಗಾಗುವರು.

ಸಮುದಾಯದ ಆಂತರಿಕ ರಚನೆಯತ್ತ ನೋಡೋಣ. ನಾಗರಿಕ ಸಮಾಜದ ಪ್ರಮುಖ ಅಂಶದಂತೆ ಸಮುದಾಯ ಕೂಡ ತನ್ನ ಜೀವನಕ್ರಮವನ್ನು ಒತ್ತಿ ಹೇಳುವ ಮೂಲಕ ವ್ಯಕ್ತಿ ಇದಕ್ಕೆ ಬದ್ಧನಾಗಿರಬೇಕು ಮತ್ತು ವ್ಯಕ್ತಿಗೆ ತನ್ನದೇ ಜೀವನ ಕ್ರಮ ರೂಪಿಸುವ ಹಕ್ಕನ್ನು ಮಾನ್ಯ ಮಾಡುವುದಿಲ್ಲ. ವಿವಿಧ ಸಮುದಾಯಗಳಲ್ಲಿ ವ್ಯಕ್ತಿಗಳು ಉತ್ತಮ ಜೀವನ ಪಾಲನೆ ಮತ್ತು ಪ್ರತಿ ಸಮುದಾಯದ ಉತ್ತಮ ಅಂಶಗಳ ಬಗೆಗೆ ಸದಸ್ಯರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದರೆ ಅದು ಉತ್ತಮ ಸಮುದಾಯವೆನಿಸದು. ಇವು ನಾಗರಿಕ ಸಮಾಜದ ಸ್ವರೂಪ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದು. ನಾಗರಿಕ ಸಮಾಜವು ವಿಕಸಿತಗೊಂಡು ವ್ಯಾಪಕವಾಗಿ ಬದಲಾವಣೆ ಹೊಂದಿದ್ದರೂ ಅದು ತನ್ನ ಮೂಲ ರೂಪದಿಂದ ಅಂದರೆ ರೂಪಗೊಂಡ ಬಂಡವಾಳಶಾಹಿ ಮತ್ತು ಉದಾರವಾದಿ ಚಿಂತನೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಇಂಥವುಗಳ ವಿವರಣೆಯಿಂದ ನಾಗರಿಕ ಸಮಾಜಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪ್ರಜಾಪ್ರಭುತ್ವ ತಿಳುವಳಿಕೆಗೆ ಇದು ಉಪಯುಕ್ತವೆನಿಸಬಹುದು. ವ್ಯಾಪಕವಾದ ಬೂರ್ಶ್ವಾ ಪರಿಸ್ಥಿತಿಯ ಮಧ್ಯೆ ನಾವು ಜೀವಿಸುತ್ತಿರುವುದರಿಂದ ನಮ್ಮ ಆಕಾಂಕ್ಷೆಗಳು ಕೂಡ ಭಿನ್ನವಾಗಿರುತ್ತದೆ. ಸಮುದಾಯಗಳು ಸಮಷ್ಟಿ ವ್ಯಕ್ತಿತ್ವಗಳಾಗಿ ಸಮಷ್ಟಿ ಆರ್ಥಿಕ ಉನ್ನತಿಯನ್ನು ಗರಿಷ್ಟಗೊಳಿಸಬಯಸುತ್ತವೆ. ಕೇವಲ ಅಗತ್ಯವಿರುವ ಸದಸ್ಯರಿಗೆ ಮಾತ್ರವಲ್ಲದೆ ಹೆಚ್ಚಾಗಿ ಸಮುದಾಯದ ಉಪಯೋಗದ ಅಗತ್ಯವಾಗಿ ಅವರ ಹಕ್ಕುಗಳ ಬಗೆಗೆ ಹೋರಾಡುತ್ತಾರೆ. ಒಂದು ಸಮುದಾಯದ ಒಟ್ಟಾರೆ ಪ್ರಗತಿಯ ಸೂಚ್ಯಂಕವನ್ನು ಇನ್ನೊಂದು ಸಮುದಾಯದ ಜೊತೆ ಸಮೀಕರಿಸಿ ನೋಡಲಾಗುತ್ತದೆ. ಉದಾಹರಣೆಗೆ ದೀವರ ಸಮುದಾಯದಲ್ಲಿ ಇರುವ ಶ್ರೀಮಂತ ಪ್ರಬಲ ಸಂಖ್ಯೆಯನ್ನು ಇನ್ನೊಂದು ಶ್ರೀಮಂತ ಸಮುದಾಯವಾದ ಮುದಲಿಯಾರ್ ನೊಂದಿಗೆ ಹೋಲಿಸುವುದಾದರೆ ಹೆಚ್ಚಿನ ಬಡದೀವರ ಬಗೆಗೆ ಯಾರೂ ತಲೆಕೆಡಿಸಿಕೊಳ್ಳಲಾರರು. ಇನ್ನೊಂದು ಅರ್ಥದಲ್ಲಿ ತನ್ನೊಳಗಿನ ಆಂತರಿಕ ಭಿನ್ನತೆಗಳು ಏನೇ ಇದ್ದರೂ ಸಮುದಾಯಗಳು ಬೂರ್ಶ್ವಾ ಸ್ವಾಮ್ಯತೆಯ ಸ್ಪರ್ಧಾ ಜಗತ್ತಿನ ಅಹಂಭಾವದ ವ್ಯಕ್ತಿಗಳಿಗೆ ಸಮಾನವಾಗಿರುವಂತೆ ತೋರುತ್ತದೆ. ಈ ಸ್ವಾಮ್ಯತೆ ಎಂಬುದು ಮ್ಯಾಕ್ ಫರ್ಸನ್ ನ ಪದವಾಗಿದ್ದು ಸಾರ್ವಜನಿಕ ಸ್ಪರ್ಧೆಯನ್ನು ನಿಯಂತ್ರಿಸುವ ಮತ್ತು ಹಿತಾಸಕ್ತಿಗಳನ್ನು ಗರಿಷ್ಠಗೊಳಿಸುವಂತ ಸಾಮುದಾಯಿಕ ನಿಲುವಾಗಿದೆ. ಹೀಗಾಗಿ ಸ್ವಯಂ ಗರಿಷ್ಠಗೊಳಿಸುವಿಕೆಗೆ ಅನುವು ಮಾಡಿ ಅಂತರ್ ಸಮುದಾಯದ ಸಾಮಾನ್ಯ ಒಳಿತಿಗೆ ಆಸ್ಪದ ನೀಡದ ಆರೋಗ್ಯಕರವಲ್ಲದ ಒಂದು ನಾಗರಿಕ ಸಮಾಜವನ್ನು ಕಾಣಬಹುದು.

ಸಮುದಾಯಗಳ ಮಧ್ಯೆ ಸಮನ್ವಯತೆಯನ್ನು ತರದ ನಾಗರಿಕ ಸಮಾಜ ಹಾಗೂ ಕನಿಷ್ಠ ಏಕತೆಯನ್ನು ಪ್ರದರ್ಶಿಸದ ರಾಜಕೀಯ ಸನ್ನಿವೇಶವು ಪ್ರಜಾಪ್ರಭುತ್ವದಲ್ಲಿ ಪ್ರಗತಿಯ ದೃಷ್ಟಿಯಿಂದ ಒಂದು ಅನಿಶ್ಚಿತತೆಯನ್ನು ಉಂಟುಮಾಡುವುದು. ಇಬ್ಬರು ಸಹಕಾರಿಗಳಾಗಬೇಕಾದ ಸಂದರ್ಭದ ಈ ಜಗಳದಲ್ಲಿ ಯಾರೂ ಜಯಶಾಲಿಗಳಾಗುವುದಿಲ್ಲ. ಹೀಗೆ ಭಾರತವು ಒಂದು ಅಸೂಯೆಯಿಲ್ಲದ ಪರಿಸ್ಥಿತಿಯಲ್ಲಿದೆ. ನಾಗರಿಕ ಸಮಾಜದ ತಿರುಳು ತಡೆಯೊಡ್ಡುತ್ತಿದೆ. ಸಾರ್ವತ್ರಿಕತೆಯನ್ನು ಅಶಿಸುವ ಹೆಚ್ಚಿನ ಜನ ಕೂಡ ಈ ಸಾರ್ವತ್ರಿಕತೆಯ ಎದುರು ನಿರ್ದಿಷ್ಟತೆಯ ತನ್ನ ಅಹವಾಲು ಮಂಡಿಸುವಂತ ಗದ್ದಲದಿಂದ ದಿಗ್ಬ್ರಮೆಗೊಳಗಾಗಿದ್ದಾರೆ. ಇದನ್ನು ಮುಂದುವರಿಸುವುದರ ಬದಲು ಈ ರೀತಿಯ ಪ್ರಕ್ರಿಯೆಯ ಬಗೆಗೆ ತಿಳಿದುಕೊಳ್ಳುವತ್ತ ನಿಲುವು ತೆಗೆದುಕೊಳ್ಳಬೇಕಾದುದು ಬಹಳ ಅಗತ್ಯವಾಗಿದೆ.