ವಿವಿಧ ರಾಷ್ಟ್ರಗಳ ಪ್ರಜಾಪ್ರಭುತ್ವದ ಅಂಶಗಳನ್ನು ಪರಿಗಣಿಸಿ ಭಾರತದ ಪ್ರಜಾಪ್ರಭುತ್ವಕ್ಕೆ ಹೋಲಿಸಿದರೆ ಒಂದು ಅಸಮಂಜಸವಾದ ಒಂದು ಫಲಿತಾಂಶ ದೊರೆಯುವುದು. ಪಶ್ಚಿಮದೊಂದಿಗೆ ಹೋಲಿಸಿದಾಗ ನಮ್ಮ ಪ್ರಜಾಪ್ರಭುತ್ವವು ನಮ್ಮ ಚಾರಿತ್ರಿಕತೆಯಲ್ಲಿ ಯಾವುದೇ ವ್ಯತ್ಯಯವಿರದ ವಿರೋಧಾಭಾಸಗಳಿಂದ ಆವೃತಗೊಂಡಿದೆ. ತನ್ನದೇ ಆದ ದಾರಿಯನ್ನು ಕ್ರಮಿಸುತ್ತ ಅದು ಯಶಸ್ವಿಯಾಗುತ್ತಿದೆ. ಹಾಗೇಯೇ ಸಾಕಷ್ಟು ಮಹತ್ವದ ಜನಪರ ಆಂದೋಲನಗಳು ನಡೆಯುತ್ತಿದೆಯಾದರೂ ರಾಚನಿಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮುಂದೆ ಸಾಗುತ್ತಿದೆ.

ವ್ಯಾಪಕವಾದ ಬಡತನ, ಹೆಚ್ಚಿನ ಅನಕ್ಷರತೆ ಮತ್ತು ಬಡವರ ಬಗೆಗಿನ ಅತಿಯಾದ ಕಾಳಜಿ ನಡುವೆಯೇ ವಿರೋಧಾಭಾಸ ಮುಂದುವರಿದಿದೆ. ಭದ್ರ ಬುನಾದಿಯಿಲ್ಲದ ನಾಗರಿಕ ಸಮಾಜದ ಜೊತೆ ಪ್ರಜಾಪ್ರಭುತ್ವವು ಮುಂದುವರಿಯುವುದು ಮತ್ತೊಂದು ವಿರೋಧಾಭಾಸ. ನಾಗರಿಕ ಸಂಘಟನೆಗಳ ಬದಲು ಶ್ರೇಣೀಕೃತ ವ್ಯವಸ್ಥೆಯಲ್ಲಿ ಎದ್ದು ಕಾಣುವ ಸಮುದಾಯಗಳೇ ಪ್ರಬಲ ಒತ್ತಡಗಳಾಗಿ ಕಾರ್ಯನಿರ್ವಹಿಸುವುದು ಇನ್ನೂ ತನ್ನ ಹಿಂದಿನ ಪ್ರಜಾತಾಂತ್ರಿಕ ಅನುಭವಗಳನ್ನು ತೆಗೆದುಕೊಳ್ಳದ ವಿಶಿಷ್ಟತೆ ಮತ್ತು ವಿರೋಧಾಭಾಸಗಳ ಮಧ್ಯೆ ಭಾರತದ ಪ್ರಜಾಪ್ರಭುತ್ವ ನಿರ್ವಹಿಸಲ್ಪಡುತ್ತದೆ.

ಇದನ್ನು ಇನ್ನಷ್ಟು ವಿಸ್ತರಿಸಬಹುದು. ಭಾರತದಲ್ಲಿನ ಪ್ರಜಾಪ್ರಭುತ್ವದ ಅನುಭವವು ಈ ವಿಷಯದ ಸಿದ್ಧಾಂತಗಳಿಗೆ ಹೊಸ ಆಯಾಮ ಒದಗಿಸುತ್ತದೆ. ಅನಕ್ಷರಸ್ಥರು ಮತ್ತು ಬಡವರು ಪ್ರಜಾಸತ್ತಾತ್ಮಕ ವಿಷಯಗಳ ಭಾಗವಾಗಲಾರರು ಎಂದು ಸಾರ್ವತ್ರಿಕವಾಗಿ ಜೆ.ಎಸ್.ಮಿಲ್ ನುಡಿದಿದ್ದನು. ತನ್ನ ರೆಪ್ರೆಸೆಂಟೇಟಿವ್ ಗವರ್ನಮೆಂಟ್ ನಲ್ಲಿ ಸಾರ್ವತ್ರಿಕ ಮತದಾನಕ್ಕೆ ಮೊದಲು ಸಾರ್ವತ್ರಿಕ ಕಲಿಕೆ ಅಥವಾ ಸಾಕ್ಷರತೆ ಇರಬೇಕೆಂದು ಮಿಲ್ ಸ್ಪಷ್ಟಪಡಿಸಿದ್ದನು. ಇದರಿಂದ ನಿಜವಾಗಿ ಭಾರತದ ಪ್ರಜಾಪ್ರಭುತ್ವವು ಸ್ವೀಕಾರಾರ್ಹ ಸಿದ್ಧಾಂತಗಳಿಗೆ ಸಂಬಂಧಿಸಿದರೆ ಮಾತ್ರ ಒಂದು ವಿರೋಧಾಭಾಸವೇ ಸರಿ. ಸಮಾನತೆ, ಸ್ವಾತಂತ್ರ‍್ಯ, ಘನತೆ ಮುಂತಾದ ಸಾರ್ವತ್ರಿಕ ಲಕ್ಷಣಗಳ ಸಾಕಾರಗೊಳಿಸಲು ಮತ್ತು ಎಲ್ಲ ವಿಧದ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳನ್ನೊಳಗೊಂಡು ಸಾಮಾನ್ಯವಾಗಿ ಪ್ರಜಾಪ್ರಭುತ್ವಕ್ಕೆ ಅಪವಾದ ಎಂಬಂತೆ ತೋರಿದರೂ ನಿರ್ದಿಷ್ಟ ವಿಶೇಷತೆಗಳನ್ನು ಒಳಗೊಳಿಸುವಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದಿಂದ ಮಾತ್ರ ಸಾಧ್ಯ ಮತ್ತು ಸಾಧನ, ಸಹಜಪ್ರವೃತ್ತಿ ಮತ್ತು ತಟಸ್ಥ ವ್ಯಕ್ತಿಗಳ ವ್ಯಕ್ತಿತ್ವವಾದದ ವಿಚಾರಧಾರೆಯುಳ್ಳ ವ್ಯವಸ್ಥೆಯ ನ್ಯಾಯಸಮ್ಮತ ಸದಸ್ಯರಾಗಿ ನಾಗರಿಕರಿರುವ ಚಾರಿತ್ರಿಕ ಅನುಭವದ ಪಾಶ್ಚಾತ್ಯ ವ್ಯವಸ್ಥೆಗಳಿಗಿಂತ ಇದು ಭಿನ್ನ.

ಜನಗಳ ಭಾಗವಹಿಸುವಿಕೆಯ ಕಲ್ಪನೆಯಿಲ್ಲದ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ಊಹಿಸಲಾಗದು. ಆಧುನಿಕತೆಯ ಭಾರತದಲ್ಲಿ ಪ್ರಜಾಪ್ರಭುತ್ವದ ಜೊತೆ ಅನ್ಯ ಅಥವಾ ಪರ ಎನ್ನುವುದನ್ನು ನಿರೂಪಿಸದೆ ಒಂದು ಸಮರೂಪವಲ್ಲದ ಭಿನ್ನತೆಯನ್ನು ವಿಲೀನಗೊಳಿಸಬಲ್ಲ ವೈರುಧ್ಯಗಳ ಕಾರ್ಯಕ್ಷಮತೆಯ ಏಕತೆಗೆ ಪ್ರಯತ್ನಿಸುತ್ತಿದೆ. ಪ್ರಜಾಪ್ರಭುತ್ವ ಮತ್ತು ಆಧುನಿಕತೆಯು ಭಾರತದಲ್ಲಿ ಜೊತೆಗೂಡುವುದು ಈ ಹಂತದಲ್ಲೆ, ಭಾರತದಲ್ಲಿ ಪ್ರಜಾಪ್ರಭುತ್ವ ಇಂಥ ನಿರ್ದಿಷ್ಟ ವಿಶಿಷ್ಟ ರೂಪುತಳೆದು ಅವು ಧ್ವನಿಯಾಗಿ ತಮ್ಮ ಹಕ್ಕೊತ್ತಾಯ ಮಂಡಿಸಲು ಆಸ್ಪದವಿರುವುದು. ಈ ವಿಶಿಷ್ಟ ನಿರ್ದಿಷ್ಟತೆಗಳ ರಾಜಕೀಯ ಒಲವು ಆಧುನಿಕತೆಯ ಸಾರ್ವತ್ರಿಕತೆಯಿಂದ ಯಾವುದೇ ಭಿನ್ನವಲ್ಲ. ಇತರ ಅಂಶಗಳನ್ನು ಬದಿಗಿರಿಸಿ ಪ್ರಜಾಪ್ರಭುತ್ವವು ಆಧುನಿಕತೆ ಹಕ್ಕೊತ್ತಾಯವನ್ನು ಸಮರೂಪಗೊಳಿಸಿದೆ. ವೈಚಾರಿಕತೆಯ ಏಕಮಾತ್ರ ವಾರಸುದಾರನೆಂಬ ಹಿಂದಿನ ಯುರೋಪಿನ ಅನುಭವವನ್ನು ಬದಿಗಿರಿಸಿ ಇತರ ಎಲ್ಲ ರಾಜಕೀಯ ರೂಪಗಳನ್ನು ಆಧುನಿಕತೆಯು ನಿಷ್ಪ್ರಯೋಜಕಗೊಳಿಸಿದೆ. ಭಾರತದಲ್ಲಿ ಆಧುನಿಕತೆ ಏನೆಲ್ಲ ಪ್ರತಿನಿಧಿಸುತ್ತವೆಯೇ ಅವು ಮುಕ್ತ ಪ್ರಜಾಪ್ರಭುತ್ವದ ಸಮರದಲ್ಲಿ ಗೆಲ್ಲಬೇಕು. ಇವು ಫೂಕೋವಾದಿಗಳು ಹೇಳುವಂತೆ ಮಾರಣಾಂತಿಕವಲ್ಲವಾದರೂ ಗೊಂದಲವನ್ನು ಹೆಚ್ಚಿಸುತ್ತದೆ.

ಸ್ವಾತಂತ್ರಕ್ಕಾಗಿ ಜನರ ಹಂಬಲ, ಮಾನ್ಯತೆ ಮತ್ತು ನಿಯೋಗವು ಮುಖ್ಯವಾಗಿ ಆಧುನಿಕತೆಯನ್ನು ಸ್ವೀಕರಿಸುವಲ್ಲಿನ ತಿರುಳಾಗಿದೆ. ಆಧುನಿಕತೆಯ ಸಂಸ್ಥೆಗಳು ಹಾಗೂ ಅದರ ನ್ಯಾಯ ವ್ಯವಸ್ಥೆ ಮೊದಲೇ ವಿವರಿಸಿದಂತೆ ವ್ಯಕ್ತಿಯ ಅನುಭವಜನ್ಯ ಅಗತ್ಯ ಮತ್ತು ಆತನ ನಿಜವಾದ ಒತ್ತಡಗಳನ್ನು ಉದ್ದೇಶಿಸುತ್ತವೆ. ಇದರಿಂದಾಗಿ ಸಾಮಾಜಿಕ ಆಚರಣಾವಾದಿ ಶ್ರೇಣೀಕರಣ ಮತ್ತದರ ಕೊನೆಯಿಲ್ಲದ ಅಡೆತಡೆಗಳಿಂದ ಅದು ಸಶಕ್ತ ರೂಪದ ಸ್ವಾತಂತ್ರ‍್ಯವನ್ನು ಪಡೆದಿದೆ. ಬಡವರು, ಹಿಂದುಳಿದವರು ತುಳಿತಕ್ಕೀಡಾದವರು ಮತ್ತು ಅಲ್ಪಸಂಖ್ಯಾತರು ತಮ್ಮನ್ನು ಅಧೀನರಾಗಿಸುವ ಸ್ಥಳೀಯ ಪ್ರಬಲ ಸಮುದಾಯಗಳಿಂದ ಹೊರಬರಲು ಹಾತೊರೆಯುತ್ತಾರೆ. ಸಮಾಜದಲ್ಲಿ ಅಲಕ್ಷಿತರ ಉಪಸ್ಥಿತಿ ಮತ್ತು ಧ್ವನಿಗೆ ಮನ್ನಣೆ ಇರದ ಈ ಸಂದಿಗ್ಧತೆಯಲ್ಲಿ ಒಬ್ಬ ವ್ಯಕ್ತಿಯೆಂದು ಸಂಬೋಧಿಸಲ್ಪಡುವುದೇ ಒಂದು ದೊಡ್ಡ ನೈತಿಕ ಆಶ್ವಾಸನೆಯೆನಿಸಿದೆ. ಸ್ವಾತಂತ್ರ‍್ಯವನ್ನು ದಯಪಾಲಿಸುವವರೆಗೂ ಆಧುನಿಕತೆಯನ್ನು ನ್ಯಾಯಸಮ್ಮತವೆಂದು ಪರಿಗಣಿಸಲಾಗುತ್ತದೆ. ಉಪೇಕ್ಷಿತ ಸಾಮಾಜಿಕ ಗುಂಪುಗಳಿಂದ ದೂರವಿರುವುದು ಭಾರತದ ಸಮಾಜದ ಸಂದರ್ಭದಲ್ಲಂತೂ ಕಷ್ಟವೆನಿಸಿದೆ. ಈ ಜನಗಳಿಗಾಗಿ ಪ್ರಜಾಸತ್ತೆಯು ನಿರಂತರವಾಗಿ ಬಲಯುತವಾಗಿ ಮುಚ್ಚಲ್ಪಟ್ಟ ಬಾಗಿಲನ್ನು ತೆರೆಯುತ್ತದೆ. ತಮ್ಮ ಆಯ್ಕೆಗಳನ್ನು ವಿಸ್ತರಿಸುವ ವೈಯಕ್ತಿಕ ಸ್ವಾಯತ್ತತೆಗೆ ಅನುವಾಗಲು ಯಾವೆಲ್ಲ ವಿಧದಲ್ಲಿ ಸಾಧ್ಯವಾಗುತ್ತದೋ ಆ ರೀತಿ ಜನ ಒಟ್ಟಾಗುತ್ತಿದ್ದಾರೆ. ದುಸ್ಥಿತಿಗೊಳಗಾದ ಯಾವನೇ ವ್ಯಕ್ತಿ ಇದರಿಂದ ಹೊರಗುಳಿಯಲಾರನು. ವ್ಯಕ್ತಿ ಮತ್ತವನ ಪ್ರಾಪಂಚಿಕ ಅಗತ್ಯಗಳನ್ನು ನೇರವಾಗಿ ಗುರಿಯಾಗಿಸಿಕೊಂಡು ಆಧುನಿಕತೆಯು ಇಂತಹ ಅವಕಾಶವನ್ನು ಭಾರತದಲ್ಲಿ ಕಲ್ಪಿಸಿದೆ ಮತ್ತು ಪ್ರಜಾಸತ್ತೆಗೆ ಆಧುನಿಕತೆ ವಿರುದ್ಧವಾದ ಮೌಲ್ಯಗಳನ್ನು ಹೆಚ್ಚಿಸುವ ಶಕ್ತಿ ಇರುವ ಕಾರಣ ಇವೆರಡೂ ಜೊತೆ ಸೇರುವಾಗ ಬಿಗುವು ಉಂಟಾಗುತ್ತದೆ.

ಈ ರೀತಿಯ ವೈರುಧ್ಯಮಯ ಲಕ್ಷಣಗಳ ವಿಸ್ತಾರತೆಯ ಸನ್ನಿವೇಶದಲ್ಲಿ ನಿಧಾನ ಗತಿಯ ಅದರೆ ದೃಢವ್ಯಕ್ತಿತ್ವದಿಂದ ವ್ಯಕ್ತಿತ್ವವಾದವು ರೂಪು ಪಡೆಯುತ್ತಿದೆ. ಇದರ ಜೊತೆಗೆ ಸ್ವಾತಂತ್ರ‍್ಯ ಮತ್ತು ಹಕ್ಕುಗಳ ಒತ್ತಾಯವು ಸೇರಿಕೊಂಡಿತು.

ಸಮುದಾಯಗಳ ಆಧುನಿಕತೆ ಮತ್ತು ಭಿನ್ನತೆಯ ಒಂದು ಪ್ರಕ್ರಿಯೆ ಮೂಲಕ ವ್ಯಕ್ತಿವಾದವು ಸಾಂಗತ್ಯಗೊಳ್ಳುತಿತ್ತು. ಭಾರತದಲ್ಲಿ ವ್ಯಕ್ತಿವಾದವು ಅಗತ್ಯವಾಗಿ ಒಂದು ಸಂಘಟನಾ ಸಾಮರ್ಥ್ಯದ ಬೆಳವಣಿಗೆಯ ಹಿನ್ನೆಲೆಯಲ್ಲಿ ಗುರುತಿಸಲ್ಪಡುವುದಿಲ್ಲವೆಂಬುದನ್ನು ಪ್ರಮುಖವಾಗಿ ಗಮನಿಸಬೇಕು. ಬದಲಿಗೆ ಅದು ವಸಾಹತು ಸಂದರ್ಭದಲ್ಲಿ ವಿಸ್ತೃತಗೊಂಡು ಸಾಕಷ್ಟು ಪ್ರತಿಭೆ ಇದ್ದರೂ ಉತ್ಪಾದನಾ ವಿಧಾನವನ್ನು ಕ್ರಾಂತಿಕಾರಕವಾಗಿಸುವ, ಊಳಿಗಮಾನ್ಯ, ಜಾತೀಯ ತಾರತಮ್ಯವನ್ನು ತೊಡೆದುಹಾಕುವ ಇತ್ಯಾದಿ ಚಾರಿತ್ರಿಕ ಸಂಕಲ್ಪದ ದೃಷ್ಟಿಕೋನವಿಲ್ಲದ ಒಂದು ಮಧ್ಯದ ವರ್ಗದ ರೂಪುಗೊಳ್ಳುವಿಕೆಯ ಜೊತೆಗೂಡಿತು. ಸಮಾಜದ ಇತರ ವರ್ಗಗಳಿಗೆ ಹೋಲಿಸಿದಲ್ಲಿ ಪ್ರತಿಭೆ ಮತ್ತು ಆಸ್ತಿಯ ಹಿನ್ನೆಲೆಯಲ್ಲಿ ಅದು ಸಾಕಷ್ಟು ಅಧಿಕಾರ ಮತ್ತು ಸಾಮಾನ್ಯ ಮಟ್ಟದ ಗೌರವವನ್ನು ಹೊಂದಿತ್ತು. ಆದ್ದರಿಂದ ಪರ್ವದ ಆರಂಭದಿಂದಲೂ ಹೆಚ್ಚಾಗಿ ಭಾರತದ ರಾಜಕಾರಣವು ಮಧ್ಯಮವರ್ಗಕ್ಕೆ ಹೇಗೆ ತ್ವರಿತವಾಗಿ ಪ್ರವೇಶ ಪಡೆಯಬಹುದೆಂಬುದನ್ನು ಕೇಂದ್ರಿಕರಿಸಿತು. ಸ್ಥಾಪಿತ ಮಧ್ಯಮವರ್ಗದಿಂದ ಅಲ್ಪ ಪ್ರತಿಭೆಯ ಜನಗಳೆಂದು ಗುರುತಿಸಿಕೊಂಡವರು ಶಕ್ತಿಯುತವಾಗಿ ಅವರ ಕ್ರಮಾಂಕಕ್ಕೆ ಲಗ್ಗೆಯಿಡುವ ಸಂದರ್ಭದಲ್ಲಿ ಬೆದರಿ ಅವರ ಒತ್ತಡವನ್ನು ತಾಳಲಾರದೆ ಮುದುಡಿ ಹೋಗುವರು. ಆರಂಭದಿಂದಲೂ ಇದು ಭಾರತದ ಮಧ್ಯಮವರ್ಗದ ಚರಿತ್ರೆಯಾಗಿದೆ ಮತ್ತು ೧೯೮೦ರಿಂದ ಅವರ ಮನೋಭಾವವನ್ನು ಗುರುತಿಸಬಹುದಾಗಿದೆ.

ಮಧ್ಯಮವರ್ಗವು ಸೌಲಭ್ಯ ಗುಂಪು ಆಗುವುದನ್ನು ಕುಂಠಿತಗೊಳಿಸುವುದನ್ನು ಬೆಂಬಲಿಸುವ ಪ್ರಕ್ರಿಯೆ ಭಾರತ ರಾಜಕಾರಣದ ವಿಶಿಷ್ಟ ಗುಣಲಕ್ಷಣವೆನಿಸಿದೆ. ರಾಷ್ಟ್ರೀಯ ಹೋರಾಟ ನಮ್ಮ ಸಂವಿಧಾನ ಮತ್ತು ವ್ಯವಸ್ಥೆ ವ್ಯಕ್ತಿಸ್ವಾತಂತ್ರ‍್ಯಕ್ಕೆ ವಚನಬದ್ಧವಾದರೂ ವ್ಯಕ್ತಿ ಯಾಕೆ ಸ್ವತಂತ್ರನಾಗಬೇಕು ಮತ್ತು ಸ್ವಾತಂತ್ರ‍್ಯ ಯಾವ ರೀತಿ ಸಾಧ್ಯ ಎಂಬುದಕ್ಕೆ ದೇಶದ ರಾಜಕೀಯ ಚರ್ಚೆಯಲ್ಲಿ ಹೆಚ್ಚಿನ ಗಮನ ನೀಡಿಲ್ಲ. ಸ್ವಾತಂತ್ರ‍್ಯವು ಅಪೇಕ್ಷಣೀಯವಾದ ಸಂಗತಿಯಾದರೂ ಅದನ್ನು ನಿರಾಕರಿಸುವ ಇಲ್ಲವೇ ಅದರಿಂದ ವಂಚಿತವಾಗುವುದರ ವಿರುದ್ಧ ಏರುಧ್ವನಿ ಇಲ್ಲದಿರುವುದೇ ಸಮಸ್ಯೆ.

ನಾಗರಿಕ ಸಮಾಜದ ಈ ವಿಚಿತ್ರಗಳನ್ನು ಚರ್ಚಿಸುತ್ತ ನನ್ನೊಬ್ಬ ದಲಿತ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾನೆ. ಕೇವಲ ಭಾರತದಲ್ಲಿ ಹಲವಾರು ಸಂಸ್ಥೆಗಳು ಅಸ್ತಿತ್ವದಲ್ಲಿದ್ದು ಅವುಗಳ ಸದಸ್ಯರ ಆಶೋತ್ತರಗಳನ್ನು ಉನ್ನತಗೊಳಿಸುವುದಕ್ಕಲ್ಲ. ಆದರೆ ಬೇರೆ ಜಾತಿಯ ಜನಗಳು ತಮ್ಮ ಸ್ವಾತಂತ್ರ‍್ಯವನ್ನು ಚಲಾಯಿಸದಂತೆ ನೋಡಿಕೊಳ್ಳುವುದಾಗಿದೆ. ಮುಂದುವರಿದು ಆತ ಹೇಳುತ್ತಾನೆ; ನೀವು ನನ್ನನ್ನು ಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಿಡುವುದಿಲ್ಲ. ಆದರೆ ಬೇರೆಡೆಯಲ್ಲಿ ಮಾಡಲನುವಾದರೆ ಕಾನೂನಿನಿಂದ ಅದಕ್ಕೆ ತಡೆ ಒಡ್ಡುತ್ತೀರಿ. ರಾಜ್ಯವು ಸಂವಿಧಾನದ ರಕ್ಷಕನಾಗುವ ಬದಲು ಕೆಲವೊಮ್ಮೆ ಸ್ವಾತಂತ್ರ‍್ಯವನ್ನು ನಿರಾಕರಿಸುವ ಮಂದಿ ಜೊತೆ ಸೇರಿದಂತಿದೆ. ಸ್ವಾತಂತ್ರ‍್ಯದ ನಿರಾಕರಣೆಯನ್ನು ವ್ಯವಸ್ಥಿತವಾಗಿ ತೊಡಗಿಸಿಕೊಂಡಿರುವ ಕ್ರಮವು ಭಾರತದ ಪ್ರಜಾಸತ್ತೆಯ ಚರ್ಚೆಗಳ ಸಂಘಟಿತ ಜ್ಞಾನದ ಭಾಗವಾಗಿ ಇನ್ನೂ ರೂಪುಗೊಳ್ಳಬೇಕಿದೆ. ಇದು ಸ್ವಾತಂತ್ರ‍್ಯದ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟು ಗಮನ ನೀಡಲಾಗಿದೆ ಎಂಬುದನ್ನು ತಿಳಿಸುತ್ತದೆ. ಕೆಲವೊಮ್ಮೆ ಎಲೀಟುಗಳ ಗಮನಕ್ಕೆ ಬಾರದಿದ್ದರೂ ಮುಖ್ಯವಾಗಿ ದಲಿತರು ಮುಂತಾದ ತುಳಿತಕ್ಕೊಳಗಾದ ಗುಂಪುಗಳಲ್ಲಿನ ರೂಪುಗೊಳ್ಳುತ್ತಿರುವ ಬುದ್ಧಿಜೀವಿಗಳ ತಲೆಕೆಡಿಸುತ್ತದೆ. ಈ ಕೊರತೆಯಿಂದಾಗಿ ಇನ್ನಿತರ ಚರ್ಚೆಗಳು ಮೂಲೆಗುಂಪಾಗಿವೆ.

ಬಹುಶಃ ಈ ಕಾರಣದಿಂದಾಗಿ ಜಾತ್ಯತೀತ ಚರ್ಚೆಯು ಧರ್ಮ ಮತ್ತು ರಾಜಕಾರಣದ ಸಂಬಂಧದ ಪ್ರಶ್ನೆಗೆ ಸೀಮಿತವಾಗಿ ಉಳಿದಿದೆ. ಯಾವುದೇ ನಂಬಿಕೆ ವ್ಯವಸ್ಥೆ ಧಾರ್ಮಿಕ ಅಥವಾ ಕೋಮುವಾದ ಹಿಡಿತದಿಂದ ಹೊರಗಿದ್ದು ಗೌರವ ತೋರಿ ವ್ಯಕ್ತಿಯು ಉತ್ತಮ ಜೀವನ ನಡೆಸಬಲ್ಲ. ಹಕ್ಕಿನ ತಾತ್ವಿಕ ಬದ್ಧತೆಯ ಸೇರ್ಪಡೆಯ ವಿಸ್ತರಣೆಯನ್ನು ಇದು ಒಳಗೊಂಡಿಲ್ಲ. ಯಾವುದೇ ನೈತಿಕಸಂಹಿತೆಯಿಂದ ಸಮಾನ ಒಳಿತು ಸ್ವತಂತ್ರವೆಂದು ಜಾತ್ಯತೀತವಾದ ವ್ಯಾಖ್ಯಾನಿಸುತ್ತ ಹೀಗೆ ರಾಜಕೀಯವನ್ನು ಸ್ವಾಯತ್ತವೆನ್ನಲು ಆಸ್ಪದ ನೀಡುತ್ತದೆ. ಜಾತ್ಯತೀತವಾದವು ರಾಜಕೀಯವನ್ನು ಧರ್ಮದಿಂದ ಸ್ವಾಯತ್ತಗೊಳಿಸಿವುದು ಏನಾದರೂ ನಾವು ಸಮರ್ಥರೆಂದೆನಿಸಿಕೊಳ್ಳುವ ಸ್ವಾತಂತ್ರ‍್ಯದ ಮೂಲಸೆಲೆಯೇ ಜಾತ್ಯತೀತವಾದ ಸ್ವತಂತ್ರವಲ್ಲದ ಜನರು ತಮ್ಮ ಸಾಮರ್ಥ್ಯವನ್ನು ಅರಿಯದೆ ಬಲಶಾಲಿಗಳಾಗಲಾರರು. ಒಬ್ಬ ವ್ಯಕ್ತಿ ಸ್ವತಂತ್ರನಲ್ಲವೆನ್ನುವ ಪರಿಸ್ಥಿತಿ ಜಾತ್ಯತೀತಕ್ಕೆ ವಿರುದ್ಧವಾಗಿದ್ದು ಇದೊಂದು ಭಾರತದ ಜಾತಿ ಆಧಾರಿತ ಒತ್ತಾಯದ ನೈತಿಕ ಆಚಾರ ಸಂಹಿತೆಯೆನಿಸಿದೆ.

ಪ್ರಸ್ತುತ ರಾಜಕೀಯ ಸಂದಿಗ್ಧತೆಯಲ್ಲಿ ಪ್ರಜಾಸತ್ತಾತ್ಮಕ ಸ್ಪರ್ಧೆ ಮತ್ತು ಚರ್ಚೆಗಳು ಸಮಾನ ಒಳಿತಿನ ಆಶಯದ ಕುರಿತ ಒಪ್ಪಂದಕ್ಕೆ ಬರಲು ಅಥವಾ ಅವು ಹೇಗೆ ರೂಪುಗೊಳ್ಳುತ್ತವೆ ಎನ್ನಲು ಕಷ್ಟವೆನಿಸಿದೆ. ಮಂಡಲ್ ವರದಿ ದೊಂಬಿಯ ನಂತರ ಎಲೀಟು ಮತ್ತು ಆಳುವ ವರ್ಗ ಯುಕ್ತಿಯಿಂದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಯಾವುದೇ ಸಮಾಜದಲ್ಲಿ ಸಮಾನ ಒಳಿತಿನ ಕೋರಿಕೆಗಾಗಿ ವ್ಯಾಪಕ ಸಹಮತವು ಪ್ರಜಾಸತ್ತೆ ಕಾರ್ಯವನ್ನು ಸುಗಮಗೊಳಿಸುವುದು ವ್ಯಾಪಾರ ಸಂಘಟನೆ ಇಲ್ಲವೆ ಸಮುದಾಯ, ಗುಂಪು ಮತ್ತಿತರ ನಿರ್ದಿಷ್ಟ ಹಿತಾಸಕ್ತಿಗಳ ಸಹಕಾರ ಬಯಸುವ ಜನರಿಲ್ಲದ ಒಂದು ಉದಾರವಾದಿ ಛಾಯೆಯ ಪ್ರಜಾಪ್ರಭುತ್ವ ಕಾರ್ಯವೆಸಗಲು ಸಾಧ್ಯವಿಲ್ಲ. ಮತ್ತು ಈ ಹಿತಾಸಕ್ತಿಗಳ ಗುರುತಿಸುವಿಕೆ ಮತ್ತವುಗಳ ಸಾಕಾರ ಇಡೀ ಸಮಾಜದ ಶಾಂತಿ, ಒಳಿತಿಗೆ ಪೂರಕವಾಗಿದ್ದು ಅಷ್ಟೇ ಸಮವಾಗಿ ಪ್ರಜಾಪ್ರಭುತ್ವದ ಸುಗಮವಾದ ಕಾರ್ಯನಿರ್ವಹಣೆಗೆ ಪೂರಕವೆನಿಸಿದೆ. ಜನರ ನಿರ್ದಿಷ್ಟ ಹಿತಾಸಕ್ತಿಗಳು ಸಮಾನ ಒಳಿತಿನ ಆಶಯ ವಿರುದ್ಧವಲ್ಲವೆಂಬ ಸಾಮಾನ್ಯ ಅರಿವು ಇದಲ್ಲಿ ಸಮಾಜವು ಸಮಗ್ರ ಹಿತಾಸಕ್ತಿಗಳ ಸಾಕಾರಕ್ಕೆ ಹಂಬಲಿಸಲು ಸಾಧ್ಯವಾಗುವುದು. ಹೀಗಾಗಿ ನಿರ್ದಿಷ್ಟ ಹಿತಾಸಕ್ತಿಗಳು ಸಮಾನ ಒಳಿತಿಗೆ ಹಾತೊರೆದಲ್ಲಿ ಪ್ರಜಾಸತ್ತೆಯ ಪ್ರತಿ ಸದಸ್ಯರಿಗೂ ಇದು ಒಳ್ಳೆಯದನ್ನು ಆಶಿಸುವುದು.

ಭಾರತದ ಪರಿಸ್ಥಿತಿ ಹಾಗಿಲ್ಲ. ಚರ್ಚೆ ಮತ್ತು ವಿವಾದಗಳನ್ನು ಗೊಂದಲ ಮತ್ತು ಮಾಹಿತಿಯ ನಿರಾಕರಣೆ ಸೃಷ್ಟಿಸಲು ಉಪಯೋಗಿಸಲಾಗುತ್ತದೆ. ಇದನ್ನು ಒಂದು ಸಾಮಾಜಿಕ ಕಳಕಳಿಯ ಸಂಗತಿಯ ಹಿನ್ನೆಲೆಯಲ್ಲಿ ಪರೀಕ್ಷಿಸೋಣ. ದಲಿತರು ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳಿರಬೇಕೆಂದಿದೆ. ಸಾಮಾನ್ಯವಾಗಿ ಈ ರೀತಿಯೆಂದಾಗ ಇದು ಎಲ್ಲರ ಗಮನ ಸೆಳೆಯುತ್ತದೆ. ಅಮೂರ್ತರೂಪದ ಈ ತತ್ವಗಳು ಕೆಲವೊಮ್ಮೆ ವಿವಾದಕ್ಕೊಳಗಾಗದು. ಆದರೆ ಇವನ್ನು ಜಾತಿಗೊಳಿಸಲು ನೀತಿ ನಿರೂಪಣೆ ಹಾಗೂ ಕ್ರಮ ಕೈಗೊಂಡ ಸಂದರ್ಭಗಳು ವಿವಾದಕ್ಕೆಡೆ ಮಾಡುತ್ತವೆ. ಶೋಷಿತರಿಗೆ ಮೀಸಲಾತಿ ಒದಗಿಸುವ ಚರ್ಚೆಗಳ ಸಂದರ್ಭದಲ್ಲಿ ನಾವಿದನ್ನು ನೋಡಿದ್ದೇವೆ. ಮಹಿಳಾ ಮೀಸಲಾತಿ ಮಸೂದೆಗೆ ಆಗಾಗ ತಡೆ ಒಡ್ಡಿದರೂ ಮಹಿಳೆಯರಿಗೆ ಶಾಸಕಾಂಗದಲ್ಲಿ ಹೆಚ್ಚಿನ ಸ್ಥಾನ ನೀಡಬೇಕೆಂಬುದನ್ನು ಜನ ಮಾತಾಡುವುದನ್ನು ಮುಂದುವರಿಸುತ್ತಾರೆ. ಶಿಕ್ಷಣ ಮತ್ತು ಉದ್ಯೋಗ ರಂಗಗಳಲ್ಲಿ ಮೀಸಲಾತಿ ಬದಲು ವರಮಾನವೊಂದೇ ನಿರ್ಧಾರಕವೆಂಬ ಕಲ್ಯಾಣದ ತತ್ವದ ತಂತ್ರವನ್ನು ಪ್ರಬಲ ವರ್ಗಗಳು ಮುಂದಿಡುತ್ತವೆ. ಒಂದು ಕಲ್ಯಾಣ ತತ್ವವು ಯಾವತ್ತೂ ವ್ಯಕ್ತಿಗಳನ್ನು ಉದ್ದೇಶಿಸಿರುತ್ತದೆ. ಮತ್ತು ಮೀಸಲಾತಿಯಿಂದ ಸದೃಢ ಕ್ರಮಗಳು ಯಾವತ್ತೂ ಸಮುದಾಯಗಳ ಗುಂಪುಗಳನ್ನು ಉದ್ದೇಶಿಸುತ್ತದೆ. ಈ ಥರದ ಗೊಂದಲಗಳು ಬೇಕೆಂದೇ ಲಿಂಗತ್ವವನ್ನು ಅಪಾಯದಂಚಿಗೆ ಸಿಲುಕಿಸಿದಲ್ಲಿ ಚರ್ಚೆಯ ದಿಕ್ಕು ವಿರೂಪಗೊಂಡು ತತ್ವ ಮತ್ತು ಆಚರಣೆ ಮಧ್ಯದ ಭಿನ್ನತೆಯನ್ನು ಅಳಿಸಿ ಹಾಕುವುದು. ಈ ಥರದ ವಿವಾದಗಳು ಅಗಾಗ ಕಾಣಿಸಿಕೊಳ್ಳುತ್ತಿದ್ದು ಭಾರತದಲ್ಲಿರುವ ಹಾಗೆ ಅಸಮಾನದ ಸ್ಥಾನಮಾನಗಳುಂಟಾಗಿ ಪರಿಸ್ಥಿತಿಗೆ ಗೊಂದಲದ ಕಾರಣವಾಗುವುದು. ಹೀಗಾಗಿ ವಿವಾದಕ್ಕೊಳಗಾಗಿರುವ ಪಕ್ಷಗಳು ಹೊಂದಿರುವ ತಾಳ್ಮೆಯ ಮಟ್ಟದ ಸಾಮರ್ಥ್ಯ ಮುಖ್ಯವೆನಿಸುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ತಾಳ್ಮೆಯ ಕೊರತೆ ಎದ್ದು ಕಾಣುತ್ತಿತ್ತು. ೧೯೮೯ರಿಂದ ಮಂಡಲ ವರದಿ ಹುಟ್ಟು ಹಾಕಿದ ಸಾಮಾಜಿಕ ಬಿಗುವಿನಿಂದ ಮೇಲ್ಜಾತಿಗಳು, ಮುಖ್ಯವಾಗಿ ಅದರಲ್ಲಿನ ಎಲೀಟುಗಳು ಸ್ವಾತಂತ್ರ‍್ಯ ಸಂದರ್ಭದಲ್ಲಿ ರೂಪಿತವಾದ ಸಹಮತದಿಂದ ಹೊರಬರಲು ನಿರ್ಧರಿಸಿದ್ದಾರೆ. ಸಮಾನ ವ್ಯವಸ್ಥೆಯ ನಿರ್ಮಾಣದ ಆಶಯವುಳ್ಳ ಭಾರತ ಸಂವಿಧಾನ ಒಪ್ಪಂದವನ್ನು ಅವರು ಮುರಿದಿದ್ದಾರೆ. ಹಾಗಾಗಿ ವಂಚಿತರ ಪಾಲಿಗೆ ಎಲೀಟುಗಳು ನೀಡಿದ್ದ ವಚನಬದ್ಧತೆಯನ್ನು ಏಕಪಕ್ಷೀಯವಾಗಿ ಹಿಂತೆಗೆಯಲಾಗಿದೆ. ಎಲೀಟು ಭಾರತದಲ್ಲಿ ಅನುಕೂಲಕರವಾದ ಸ್ಥಾನಮಾನದಲ್ಲಿರುವುದಲ್ಲದೆ ಎಲ್ಲ ರಂಗಗಳಲ್ಲೂ ಯಜಮಾನಿಕೆಯನ್ನು ಹೊಂದಿದೆ. ಪ್ರಜಾಸತ್ತೆಯ ಪ್ರಕ್ರಿಯೆಗಳ ಒಳಗೆ ಕಾರ್ಯಾಚರಿಸುವ ವಿಷಯವನ್ನು ಹೊರತುಪಡಿಸಿ ಪ್ರಜಾಸತ್ತೆಯ ನಿಜವಾದ ಆಶಯಗಳು ಈ ಪ್ರಕ್ರಿಯೆಯ ಮುಂದಿನ ಫಲಿತಗಳನ್ನು ನಿರ್ಧರಿಸುವುವು. ಆದರೆ ಈ ಫಲಿತಗಳನ್ನು ತಮಗೆ ಅನುಕೂಲವಾಗುವಂತೆ ಮಾಡಿಬಿಡುವಂತಹ ಸ್ಥಾನಮಾನವನ್ನು ಎಲೀಟು ಹೊಂದಿರುತ್ತವೆ. ಇದರಿಂದಾಗಿ ನಾವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಅಧಿಕಾರವನ್ನು ಅವರು ಹೊಂದಿರುವುದು ಖಾತರಿಯಾಗಿದೆ. ತಮ್ಮ ಸಾಮಾಜಿಕ ಸ್ಥಾನಮಾನವನ್ನು ರಾಜಕೀಯ ಹುದ್ದೆ ಮುಂತಾದ ಲಾಭಕ್ಕೆ ಬಳಸಿಕೊಳ್ಳುವ ಹೆಚ್ಚುವರಿ ಅಧಿಕಾರ ಅವರಲ್ಲಿದೆ. ಈ ಮಿಗುತೆ ಅಥವಾ ಹೆಚ್ಚುವರಿ ಅಧಿಕಾರದ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿ ಬುಡಮೇಲು ಮಾಡಲು ಉಪಯೋಗಿಸುತ್ತಾರೆ. ವಂಚಿತ ಜನಗಳ ನಿರ್ದಿಷ್ಟ ಹಿತಾಸಕ್ತಿಗಳ ಸಾಕಾರಕ್ಕೆ ಈ ಪ್ರಕ್ರಿಯೆ ಕಾರ್ಯವೆಸಗುತ್ತದೆ. ಈ ಹಿತಾಸಕ್ತಿಗಳು ಸಮಾನ ಒಳಿತಿನ ನಿಜವಾದ ಆಶಯಗಳೇ. ಆದರೆ ಸಮಾನತೆ ಮತ್ತು ಸ್ವಾತಂತ್ರ‍್ಯದ ಮೌಲ್ಯಗಳುಳ್ಳ ಸಮಾನ ಒಳಿತಿನ ಆಶಯಕ್ಕೆ ಯಾವಾಗಲೂ ವಿರುದ್ಧವಾಗಿ ಸೌಲಭ್ಯವಂತರ ನಿರ್ದಿಷ್ಟ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಫಲಿತಗಳ ತಿರುವುಮುರುವು ಸಂಭವಿಸುವುದು. ಸ್ವಾತಂತ್ರ‍್ಯ ಮತ್ತು ಸಮಾನತೆಯಂತಹ ಮೌಲ್ಯಗಳು ಸಾಕಾರಗೊಳ್ಳದೆ ಕೇವಲ ಹೇಳಿಕೆ ರೂಪದ ಆಶ್ವಾಸನೆಗಳೆನಿಸಿವೆ.

ಪ್ರಜಾಸತ್ತೆ ಪ್ರಕ್ರಿಯೆಯಲ್ಲಿ ಚಿತ್ರಿತವಾದ ರಾಜಕೀಯ ಸ್ಥಳಾವಕಾಶವು ಅಸಾಮರ್ಥ್ಯವನ್ನು ತೊಡೆದು ಹಾಕುವುದಕ್ಕೆ ನಿರಂತರತೆಯನ್ನು ಒದಗಿಸುತ್ತದೆ. ಸಾಮಾಜಿಕ ಸಮೀಕರಣವು ಸತತವಾಗಿ ಪುನಾರಚನೆಯಾಗುವ ಹಂತದಲ್ಲಿರುತ್ತದೆ. ಚಳುವಳಿ, ಆಂದೋಲನ, ಪ್ರತಿರೋಧ, ಕಾನೂನುಭಂಗ ಅಥವಾ ಸರಳ ಪ್ರತಿಭಟನೆ ಕೂಡ ಜನಸಾಮಾನ್ಯರಿಗೆ ಸಹಜ ಅಥವಾ ಸ್ವಾಭಾವಿಕವೆನಿಸಿದೆ. ಆದರೂ ಸಾಂಸ್ಥಿಕ ರಾಜಕಾರಣದ ಫಲಿತಗಳು ರಾಚನಿಕವಾಗಿ ರೂಪುಗೊಳ್ಳುತ್ತ ಅಧಿಕಾರ ಮತ್ತದರ ವಿನಿಮಯದ ಸಂಗತಿಗಳು ಸಂಕೀರ್ಣವಾದ ರೂಪು ತಳೆಯುತ್ತವೆ. ಮೊದಲನೆಯದಾಗಿ ಜನಸಾಮಾನ್ಯರು ಮತ್ತು ಎಲೀಟುಗಳು ಒಗ್ಗೂಡುವ ಸಾಮರ್ಥ್ಯವು ಸಮಪ್ರಮಾಣದಲ್ಲಿಲ್ಲ. ಎರಡನೆಯದಾಗಿ ಸಾಂಸ್ಥಿಕ ಚೌಕಟ್ಟಿನ ಏಕೈಕ ಆಯಾಮದಲ್ಲಿ ಒಗ್ಗೂಡುವುದೆಂದರೆ ಅಗತ್ಯವೆನಿಸುವಂತಹ ಆರ್ಥಿಕ ದೃಢತೆಯಿರಬೇಕು. ಜನಸಾಮಾನ್ಯರಲ್ಲಿ ಈ ಕೊರತೆ ಇದೆ ಅಥವಾ ಕಡಿಮೆ ಇದೆ. ಹಾಗಾಗಿ ಸಾಂಸ್ಥಿಕ ಚೌಕಟ್ಟಿನ ಏಕೈಕ ಆಯಾಮವು ಸಾಮರ್ಥ್ಯ ಮತ್ತು ಸ್ವತ್ತಿನ ವಿಚಾರದಲ್ಲಿ ಜನಸಾಮಾನ್ಯರನ್ನು ತೀರಾ ವಂಚಿತರಾಗಿಸುತ್ತದೆ. ಹೀಗಾಗಿ ಈ ಪ್ರಕ್ರಿಯೆಯಿಂದ ಅವರಿಗೆ ಏನು ಲಾಭವಿಲ್ಲದೆ ಒಂದು ಅಬ್ಬರವನ್ನು ಉಂಟುಮಾಡುವ ಸಾಮರ್ಥ್ಯವೇ ಒಂದು ಆಸ್ತಿಯಾಗಿ ಮಾರ್ಪಾಡಾಗುವುದು. ಪಲ್ಲಟಗಳಿದ್ದರೂ ನಾಜೂಕುತನದಿಂದ ಅಸಮತೆಯ ಪ್ರಮಾಣವನ್ನು ಸರಿಪಡಿಸುವಲ್ಲಿ ಹೀಗೆ ಈ ಪ್ರಕ್ರಿಯೆ ಒಂದು ಸಾಧ್ಯತೆ ನೀಡಬಹುದು. ಇವುಗಳನ್ನು ಸರಿಪಡಿಸುವ ಸಮತೋಲನಕ್ಕೆ ಸಂಬಂಧಿಸಿದ ಸಂದಿಗ್ಧತೆಯಲ್ಲಿ ಪಲ್ಲಟಗಳಾಗಬಹುದು. ಉದಾಹರಣೆಗೆ ೧೯೯೬ ಮತ್ತು ೧೯೯೮ ಮಧ್ಯೆ ಸಂಯುಕ್ತರಂಗ ಸರಕಾರ ರೂಪುಗೊಂಡ ಸಂದರ್ಭದಲ್ಲಿ ದಮನಕ್ಕೊಳಗಾದ ಜನರನ್ನು ಪ್ರತಿನಿಧಿಸುವ ಪಕ್ಷಗಳಿಗೆ ಸಾಕಷ್ಟು ಉಪಾಯತಂತ್ರ ಹೂಡಲು ಸ್ಥಳವಕಾಶವಿತ್ತು. ಈ ಪಕ್ಷಗಳು ಮತ್ತು ಒಬಿಸಿಗಳ ಸಾಕಷ್ಟು ಬೆಂಬಲವಿದ್ದ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದುದು. ಈ ತರದ ಸರಿಪಡಿಸುವಿಕೆಯ ಸಾಧ್ಯತೆ ಸಾಪೇಕ್ಷವಾಗಿ ಕಡಿಮೆಯಾಯಿತು. ಇಂತಹ ಪಲ್ಲಟಕ್ಕೆ ಮುಖ್ಯ ಕಾರಣವೆಂದರೆ ಅತೀವವಾಗಿರುವ ಬಿಜೆಪಿಯಲ್ಲಿನ ಮೇಲ್ಜಾತಿಗಳ ಬೆಂಬಲ. ಒಂದು ವೇಳೆ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರ ಗದ್ದುಗೆ ಏರಿದಲ್ಲಿ ವಂಚಿತ ಜನಗಳಿಗೆ ಅನ್ಯಾಯವಾಗಬಹುದೆಂಬ ಊಹೆಯನ್ನು ಇದು ನೀಡುತ್ತದೆ.

ಮೇಲಿನ ಸಂಗತಿಗಳ ಅವಲೋಕನದಿಂದ ರಜನಿ ಕೊಥಾರಿ ಮತ್ತು ಇತರ ಚಿಂತಕರು ಭಾರತದಲ್ಲಿನ ಪ್ರಜಾಪ್ರಭುತ್ವ ಮಾದರಿಗಳ ಬಗೆಗೆ ಪ್ರತಿಪಾದಿಸಿದ ನಿಲುವುಗಳು ಅಬಾಧಿತವಾಗಿ ಮುಂದುವರಿಯುತ್ತವೆ. ಸ್ಥಿರ, ಗುರುತರವಾದ ಕೇಂದ್ರ ಇಲ್ಲವೆಂದು ರಜನಿ ಕೊಥಾರಿಯವರು ಒಪ್ಪತಕ್ಕ ಅಭಿಪ್ರಾಯವನ್ನು ಮುಂದಿಟ್ಟಿದ್ದರು. ಹಿಂದಿನ ಮಾದರಿಯ ಕೇಂದ್ರ ನಾಶಗೊಂಡಿದೆ. ಪರಧಿಗಳು ವಿಸ್ತೃತಗೊಳ್ಳುತ್ತಿದ್ದು ಅಧಿಕಾರದ ಗಣ, ವಿಚಾರಗಳ ಪುಂಜ ಮತ್ತು ವಿನಿಯಮಯಗಳ ಆಕೃತಿಯಾಗಿ ಕೇಂದ್ರದ ಅವಿಭಾಜ್ಯವಾಗುತ್ತಿವೆ. ಇಂಥ ಹಿಂಬೀಳಿಕೆ ಅಥವಾ ನಾಶದ ಹಿನ್ನೆಲೆಯಲ್ಲಿ ಹಿಂದುತ್ವದ ಅಧಿಕಾರ ಮತ್ತು ವಿಚಾರಧಾರೆ ಆಧಾರಿತ ಪರ್ಯಾಯ ಕೇಂದ್ರವೊಂದನ್ನು ನಿರ್ಮಿಸುವ ಪ್ರಯತ್ನವಿದೆ. ಹಿಂದಿನ ಕೇಂದ್ರವು ಜಾತ್ಯತೀತ ನೆಲೆಗಟ್ಟಿನದ್ದಾಗಿದ್ದು ಜಾತಿ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರ ಮುಂತಾದ ವಿಭಿನ್ನತೆಗಳನ್ನು ಮುಕ್ತವಾಗಿ ಅಂತರ್ಗತಗೊಳಿಸುವ ಚೌಕಟ್ಟಿನ ಆಧುನಿಕ ಕಲ್ಪನೆಯಿತ್ತು. ಹೀಗಾಗಿ ಅಧಿಕಾರ ಮತ್ತು ವಿಚಾರಧಾರೆಯ ಸುತ್ತ ಒಂದು ಪರ್ಯಾಯ ಕೇಂದ್ರ ಯಾವತ್ತೂ ರೂಪು ಪಡೆಯುತ್ತಿದ್ದರೆ ಅದು ಸಾಂಸ್ಕೃತಿಕವಾಗಿ ಪ್ರತ್ಯೇಕ ಧಾರ್ಮಿಕವಾಗಿ  ಅಸಹಿಷ್ಣುತೆ ಮತ್ತು ಹಿಂದುತ್ವವೊಂದನ್ನು ಹೊರತುಪಡಿಸಿ ಪ್ರಾದೇಶಿಕ ವಿಭಿನ್ನತೆಗಳ ಬಗೆಗೂ ಸಂಶಯ ವ್ಯಕ್ತಪಡಿಸುತ್ತಿದೆ. ಪರಿಣಾಮವಾಗಿ ಅದು ಪ್ರಜಾಪ್ರಭುತ್ವ ಸ್ವರೂಪಕ್ಕೆ ವಿರುದ್ಧವಾದುದು. ಅದು ರೂಪುಗೊಳ್ಳುವುದಿದ್ದರೆ ಪ್ರಜಾಪ್ರಭುತ್ವದ ಪ್ರಕಾರಗಳನ್ನು ಕಿತ್ತೊಗೆಯದಿದ್ದರೂ ಖಂಡಿತವಾಗಿಯೂ ಪ್ರಜಾಸತ್ತೆ ಕಾರ್ಯಗಳ ಮೇಲೆ ಅದು ಕಠಿಣವಾದ ನಿರ್ಬಂಧಗಳನ್ನು ಹೇರುವುದನ್ನು ನಾವು ಕಾಣಲಿದ್ದೇವೆ. ಆಗ ನಮಗೆ ಭಾರತದಲ್ಲಿ ಪ್ರಜಾಸತ್ತೆ ಮಾತಾಡಲು ಅವಕಾಶಗಳೇ ಕುಂಠಿತಗೊಳ್ಳಬಹುದು.

ಭಾರತದಲ್ಲಿ ಪ್ರಜಾಸತ್ತೆಯ ಕಾರ್ಯವೈಖರಿ ಹೇಗಿದೆಯಂದರೆ ಒಂದು ಮಾದರಿ ಭಾರತ ಪ್ರಜಾಪ್ರಭುತ್ವ ರೂಪುಗೊಳ್ಳಬಹುದೆಂಬುದರ ಕುರಿತು ಮಾತನಾಡಲು ಸಾಧ್ಯವಿಲ್ಲವೆನಿದೆ. ಈ ಕೃತಿಯು ಸೂಚಿಸುವಂತೆ ಪ್ರಜಾಪ್ರಭುತ್ವವೆನ್ನುವ ಸಾರ್ವಜನಿಕ ಒಂದು ಮಾದರಿಯು ಭಾರತದ ನಿರ್ದಿಷ್ಟತೆಗಳ ಪರಿಣಾಮದ ಪಡಿಯಚ್ಚು ಅಥವಾ ನಕಲುಗಳಾಗುತ್ತವೆ ಎಂದು ಯಾರೊಬ್ಬನು ವಿವರಿಸಬಹುದು. ಭಾರತದಲ್ಲಿ ಪ್ರಜಾಪ್ರಭುತ್ವದ ಮಾದರಿಯ ಮುಂದಿನ ದಶಕದ ಮುನ್ನೋಟದ ಬಗೆಗೆ ತಿಳಿಸುವುದೇ ಕಷ್ಟಕರವೆನಿಸಿದೆ. ಹೊಸ ನಿರ್ದಿಷ್ಟತೆಗಳು ಒಂದು ಸಾರ್ವತ್ರಿಕವನ್ನು ವ್ಯಾಖ್ಯಾನಿಸುವ ಈ ಪಡಿಯಚ್ಚಿನ ಪರಿ ಮತ್ತು ಸಾರ್ವತ್ರಿಕವು ಇಂಥ ನಿರ್ದಿಷ್ಟತೆಯನ್ನೂ ಹಿಂದೆದೂ ಮುಖಾಮುಖಿಯಾಗಿಸದ ಪರಿಣಾಮ ಒಂದು ಮೂಲ ಜಿಜ್ಞಾಸೆಯ ಸಂದಿಗ್ಧತೆ ಉಂಟಾಗಬಹುದು. ಕಠಿಣ ಪ್ರಸಂಗಗಳು ಸತತವಾಗಿ ಮರುಕಳಿಸುವುದರಿಂದ ಮುಂದಿನ ಕೆಲ ದಿನಗಳಲ್ಲಿ ನಾವು ತಪ್ಪಿಸಲಾಗದ ಅನಿಶ್ಚಿತತೆಯಲ್ಲಿ ಬಾಳಬೇಕಾಗುವುದು.