“ಯಾರು ಈ ಗಾರುಡಿಗ, ಕದಂಬ ವನದಲಿ ಕುಳಿತು
ಕೊಳಲನೂದುತ ಮನವ ಮರುಳುಮಾಡಿ,
ಎದೆಯೊಳಗನೇ ಕಡೆದು, ಆತ್ಮವನೆ ಕೊರೆಕೊರೆದು
ಕೊಳಲಿನುಲಿಯೊಳೆ ಗೈವನೆಂಥ ಮೋಡಿ!

ತುಡಿ ತುಡಿವ ಎದೆಯಲ್ಲಿ, ಸುರಿವ ಕಂಬನಿಯಲ್ಲಿ
ಉಸಿರಿಡದ ಮೌನದಲಿ ಆಲಿಸಿಹೆನು !
ಆಃ ಅದೊ ಕೊಳಲದನಿ! ಮಿಂಚುವೊಳೆ ಎದೆಯೊಳಗೆ !
ಮನೆಯೊಳಿರಲಾರೆ ನಾ, ಎಲ್ಲಿ ಅವನು?

ಎದೆಯು ಹಂಬಲಿಸಿಹುದು, ನನ್ನ ಆ ಪ್ರಿಯತಮನ
ಮತ್ತೊಮ್ಮೆ ಕಾಣದಿರೆ ಬದುಕಲಾರೆ.”
ನುಡಿವನುದ್ಧವ ದಾಸ: “ಓ ರಾಧೆ ನೀನವನ
ಕಂಡ ಮರುಚಣದಲ್ಲೆ ಬದುಕಲಾರೆ!”