ಸುಟ್ಟ ಗಾಯಗಳು

ಸುಟ್ಟ ಭಾಗವನ್ನು ಕೂಡಲೇ, ನೋವು ಕಡಿಮೆ ಆಗುವ ತನಕ ಶುದ್ಧವಾದ ತಣ್ಣನೆಯ ನೀರಿನಲ್ಲಿ ಮುಳುಗಿಸಬೇಕು.

ಕಾರಣ

ಸುಟ್ಟ ಗಾಯಗಳ ಉಷ್ಣತೆಯಿಂದ ಶರೀರದ ಅಂಗಾಂಶ (ಟಿಶ್ಯೂಗಳು) ಗಳಲ್ಲಿ ತೊಂದರೆ ಉಂಟಾಗುತ್ತದೆ. ಉಷ್ಣತೆಯ ತೊಂದರೆಯನ್ನು ಯತೇಚ್ಛವಾದ ತಣ್ಣನೆಯ ನೀರಿನಿಂದ ನಿವಾರಿಸಬಹುದು. ನೀರು, ಆಲೂಗಡ್ಡೆ ಅಥವಾ ಮೊಟ್ಟೆಯನ್ನು ತಣ್ಣಗೆ ಮಾಡುವಂತೆ.

ಎಚ್ಚರಿಕೆ:

ಯಾವುದೇ ಸಂಧರ್ಭದಲ್ಲೂ ಸುಟ್ಟಗಾಯಗಳಿಗೆ ಗ್ರೀಸ್‌, ಬೆಣ್ಣೆ ಅಥವಾ ಕೊಬ್ಬಿನ ಪದಾರ್ಥಗಳು ಅಥವಾ ಆಯಿಂಟ್‌ಮೆಂಟ್‌ನ್ನು ಉಪಯೋಗಿಸಬೇಡಿರಿ.

ಉಳುಕು (Sprains)

ಉಳುಕು ಆಗಿರುವ ಕೀಲಿನ ಭಾಗವನ್ನು ತಣ್ಣೀರಿನಲ್ಲಿ ಸುಮಾರು ೩೦ ನಿಮಿಷಗಳ ಕಾಲ ಮುಳುಗಿಸಬೇಕು.

ಕಾರಣ: ಉಳುಕಿನ, ಒಳಭಾಗದಲ್ಲಿ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

ಎಚ್ಚರಿಕೆ:

ಉಳುಕು ಆಗಿರುವ ಕೀಲಿನ ಭಾಗವನ್ನು ಯಾವುದೇ ಕಾರಣಕ್ಕೂ ಮಸಾಜ್‌ ಮಾಡಬೇಡಿರಿ, ಅಥವಾ ಆ ಭಾಗದ ಮೇಲೆ ತೂಕ (ಭಾರ) ವನ್ನು ಹೇರಬೇಡಿರಿ.

ನಾಯಿ ಕಚ್ಚಿದ್ದರೆ

ನಾಯಿ ಕಚ್ಚಿರುವ ಮೂಗುಗಾಯವನ್ನು ಮೈಸೋಪನ್ನು ಉಪಯೋಗಿಸಿ, ಚೆನ್ನಾಗಿ ನೀರಿನಿಂದ ತೊಳೆದು, ತಡಮಾಡದೆ ವೈದ್ಯರಿಗೆ ತೋರಿಸಿರಿ.

ಕಾರಣ:

ನೀರಿನಿಂದ ನಾಯಿ ಕಚ್ಚಿರುವ ಭಾಗವನ್ನು ತೊಳೆಯುವುದರಿಂದ ಜೊಲ್ಲು ಹೋಗುತ್ತದೆ ಮತ್ತು ಸೋಪು, ಸೋಂಕು ನಿವಾರಣಾ ಕ್ರಿಯೆಯನ್ನು ನೆರವೇರಿಸುತ್ತದೆ.

ಎಚ್ಚರಿಕೆ:

ದಯವಿಟ್ಟು ಗಾಯಕ್ಕೆ ಆಯಿಂಟ್‌ಮೆಂಟ್‌ ಮೊದಲಾದುದನ್ನು ಖಂಡಿತ ಹಚ್ಚಬೇಡಿರಿ. ಇದರಿಂದ ಗಾಯದಲ್ಲಿ ಸೋಂಕು ಉಂಟಾಗುತ್ತದೆ.

ವಿಷವೇರಿಕೆ (Poisoning)

ವಿಷ ಕುಡಿದ ರೋಗಿಗೆ ಒಂದು ಅಥವಾ ಎರಡು ಲೋಟಗಳಷ್ಟು ನೀರನ್ನಾಗಲಿ, ಹಾಲನ್ನಾಗಲಿ ಕುಡಿಸಬೇಕು.

ಕಾರಣ:

ನೀರು ಅಥವಾ ಹಾಲು, ಹೊಟ್ಟೆಯಲ್ಲಿ ಸೇರಿರುವ ವಿಷವನ್ನು ತೆಳುವಾಗಿಸುತ್ತದೆ ಮತ್ತು ರಕ್ತ ಸಂಚಲನೆಗೆ ವಿಷ ಹೋಗುವುದು ತಡವಾಗುತ್ತದೆ.

ಎಚ್ಚರಿಕೆ:

ಯಾವುದೇ ಕಾರಣಕ್ಕ ಆಸಿಡ್‌ಗಳು, ಬಣ್ಣಗಳು, ಸೀಮೆಎಣ್ಣೆ, ಪೆಟ್ರೋಲ್‌ಮತ್ತು ರಾಸಾಯನಿಕ ಪದಾರ್ಥಗಳನ್ನು ಸೇವಿಸಿದ್ದರೆ, ವಾಂತಿಯನ್ನು ಮಾಡಿಸಬೇಕು.

ರಾಸಾಯನಿಕಪದಾರ್ಥಗಳಿಂದಸುಟ್ಟಗಾಯಗಳು (CHEMICAL BURNS)

ರಾಸಾಯನಿಕ ಪದಾರ್ಥಗಳಿಂದ ಸಂಪರ್ಕ ಪಡೆದಿರುವ ಭಾಗವನ್ನು ಸಾಕಷ್ಟು ನೀರಿನಿಂದ ರಾಸಾಯನಿಕ ವಸ್ತುವು ಹೋಗುವತನಕ ತೊಳೆಯಬೇಕು.

ಕಾರಣ:

 ಇದರಿಂದ, ರಾಸಾಯನಿಕ ವಸ್ತು ತೆಳ್ಳಗಾಗಿ ಚರ್ಮದಿಂದ ಹೊರಟುಹೋಗಲು ಸಹಾಯಕವಾಗುತ್ತದೆ.

ಎಚ್ಚರಿಕೆ:

ಕ್ಷಾರದಿಂದಾದ ಸುಟ್ಟ ಗಾಯಗಳನ್ನು ಸಾಕಷ್ಟು ನೀರಿನ ಸೌಲಭ್ಯವಿದ್ದರೆ ಮಾತ್ರ ತೊಳೆಯಬೇಕು. ಇಲ್ಲದಿದ್ದರೆ, ಕೆಲವು ಸಂದರ್ಭಗಳಲ್ಲಿ ರಾಸಾಯನಿಕ ಪ್ರತಿಕ್ರಿಯೆ ಉಂಟಾಗಿ ಉಷ್ಣತೆ ಬಿಡುಗಡೆಯಾಗುತ್ತದೆ.

* * *