ಹಣ್ಣಿನ ರಸ ಸೇವಿಸಿ ಉಪವಾಸ ಮಾಡುವುದರಿಂದ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ. ನೆಗಡಿಯಿದ್ದಾಗ ಹಣ್ಣಿನ ರಸ ಸೇವಿಸಿ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುವುದರಿಂದ ಪರಿಹಾರ ಉಂಟಾಗುತ್ತದೆ.

ತಾಜಾ ಹಣ್ಣಿನ ರಸದಲ್ಲಿ ಹೆಚ್ಚು ವಿಟಮಿನ್ನುಗಳು ಇರುವುದರಿಂದ ಸೇವನೆಗೆ ಯೋಗ್ಯ. ಹಣ್ಣಿನ ರಸ ತಯಾರಿಸಿದ ಕೂಡಲೇ ಕುಡಿಯಬೇಕು. ಹಾಗೇ ಇಡಬಾರದು.

ಮಲಬದ್ಧತೆ ಇರತಕ್ಕವರು ನಿಂಬೇಹಣ್ಣಿನ ರಸ ಸೇವಿಸಿ ಕೆಲವು ದಿನ ಉಪವಾಸ ಮಾಡಬಹುದು.

೧. ಕ್ಯಾರೆಟ್‌ ಜ್ಯೂಸ್‌: ೨೭೫ ಎಂ.ಎಲ್‌.
೨. ಸೇಬಿನ ರಸ: ೨೭೫ ಎಂ.ಎಲ್‌.
೩. ಆಲೂಗಡ್ಡೆ ರಸ: ೩೫೦ ಎಂ.ಎಲ್‌.
೪. ಬೀಟ್‌ರೂಟ್‌ ಜ್ಯೂಸ್‌ : ೪೫೦ ಎಂ.ಎಲ್‌.
೫. ಕುಂಬಳಕಾಯಿ ಜ್ಯೂಸ್‌: ೧೭೫ ಎಂ.ಎಲ್‌.

* * *