ಮೂಸಂಬಿ ರಸ
ಟೈಫಾಯ್ಡ್ ರೋಗಿಗಳಿಗೆ, ಮೂಸಂಬಿ ಹಣ್ಣಿನ ರಸವನ್ನು ನೀಡುವುದರಿಂದ, ರೋಗಿ ಬೇಗನೆ ಗುಣಮುಖನಾಗಲು ಸಹಾಯಕವಾಗುತ್ತದೆ.
ಕೆಳಕಂಡ ಸಾಮಾನ್ಯವಾದ ಕಾಯಿಲೆಗಳಿಗೆ ಈ ಕೆಳಕಂಡ ತಾಜಾ ಹಣ್ಣುಗಳ ಅಥವಾ ತರಕಾರಿಗಳ ಜ್ಯೂಸ್ನ್ನು ಚಿಕಿತ್ಸೆಯಲ್ಲಿ ಬಳಸಬಹುದು.
- ಮೊಡವೆ: ದ್ರಾಕ್ಷಿ, ಟೊಮೊಟೋ, ಸೌತೆಕಾಯಿ, ಕ್ಯಾರೆಟ್, ಆಲೂಗಡ್ಡೆ.
- ಅಲರ್ಜಿ: ದ್ರಾಕ್ಷಿ, ಕ್ಯಾರೆಟ್, ಬೀಟ್ರೂಟ್.
- ಆರ್ತ್ರೈಟಿಸ್ ಅಥವಾ ಕೀಲುರಿತ: ನಿಂಬೇಹಣ್ಣು, ಪೈನಾಪಲ್ (ಅನಾನಸ್ ಹಣ್ಣು) ಕ್ಯಾರೆಟ್.
- ಆಸ್ತಮ: ನಿಂಬೇಹಣ್ಣು, ಅನಾನಸ್ ಹಣ್ಣು, ಟೊಮೊಟೋ ಹಣ್ಣು ಕ್ಯಾರೆಟ್, ಈರುಳ್ಳಿ.
- ನೆಗಡಿ: ನಿಂಬೇಹಣ್ಣು, ಕಿತ್ತಳೆಹಣ್ಣು, ದ್ರಾಕ್ಷಿ, ಅನಾನಸ್ ಹಣ್ಣು, ಕ್ಯಾರೆಟ್, ಈರುಳ್ಳಿ.
- ಮಲಬದ್ಧತೆ: ಸೇಬು, ದ್ರಾಕ್ಷಿಹಣ್ಣು, ನಿಂಬೇಹಣ್ಣು, ಕ್ಯಾರೇಟ್, ಬೀಟ್ರೂಟ್.
- ಗೌಟ್ ಅಥವಾ ಕಾಲ್ಬೇನೆ: ಅನಾನಸ್ ಹಣ್ಣು, ಟೊಮೊಟೋ ಸೌತೆಕಾಯಿ, ಬೀಟ್ರೂಟ್, ಕ್ಯಾರೆಟ್.
- ತಲೆನೋವು: ದ್ರಾಕ್ಷಿಹಣ್ಣು, ನಿಂಬೇಹಣ್ಣು, ಕ್ಯಾರೆಟ್.
- ಹೃದಯದ ಕಾಯಿಲೆಗಳಿಗೆ: ದ್ರಾಕ್ಷಿ, ನಿಂಬೆಹಣ್ಣು, ಸೌತೆಕಾಯಿ, ಕ್ಯಾರೆಟ್, ಬೀಟ್ರೂಟ್.
- ಜಾಂಡೀಸ್: ನಿಂಬೆಹಣ್ಣು, ದ್ರಾಕ್ಷಿಹಣ್ಣು, ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ.
- ಪೈಲ್ಸ್ (ಮೂಲವ್ಯಾಧಿ): ನಿಂಬೆಹಣ್ಣು, ಕಿತ್ತಳೆಹಣ್ಣು, ಪರಂಗಿಹಣ್ಣು, ಅನಾನಸ್ ಹಣ್ಣು, ಕ್ಯಾರೆಟ್.
- ಲಿವರ್ ಕಾಯಿಲೆಗಳಿಗೆ: ನಿಂಬೇಹಣ್ಣು, ಪರಂಗಿಹಣ್ಣು, ದ್ರಾಕ್ಷಿಹಣ್ಣು ಕ್ಯಾರೆಟ್, ಟೊಮೊಟೊ, ಬೀಟ್ರೂಟ್, ಸೌತೆಕಾಯಿ.
- ಗಂಟಲು ಹುಣ್ಣಿಗೆ: ದ್ರಾಕ್ಷಿಹಣ್ಣು, ನಿಂಬೆಹಣ್ಣು, ಅನಾನಸ್, ಕ್ಯಾರೆಟ್, ಮೂಲಂಗಿ.
ಚಿಕಿತ್ಸಾ ಸೂಚಿ:
ಮೊಡವೆ: ಕೊಬ್ಬು, ಕ್ರೀಮ್, ಚಾಕೋಲೆಟ್ಗಳನ್ನು ಮಿತಪ್ರಮಾಣದಲ್ಲಿ ಸೇವಿಸಿರಿ. ಪ್ರತಿದಿನ ೪೫೦ ಎಂ.ಎಲ್. ಕ್ಯಾರೆಟ್ ಜ್ಯೂಸ್ನ್ನು ಸೇವಿಸಿರಿ.
ಅಲರ್ಜಿ: ಕ್ಯಾರೆಟ್ ೨೨೫ ಎಂ.ಎಲ್. ಮತ್ತು ಬೀಟ್ರೂಟ್ ೨೨೫ ಎಂ.ಎಲ್. ಎರಡನ್ನು ಮಿಶ್ರಮಾಡಿ ಅಲರ್ಜಿ ಕಡಿಮೆಯಾಗುವತನಕ ಸೇವಿಸಬೇಕು.
ಆಯಂಟಿಬಯೋಟಿಕ್ಸ್: ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ಹಾಗೂ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಆಯಂಟಿಬಯೋಟಿಕ್ಸ್ಗಳನ್ನು ಕೊಡುತ್ತಾರೆ. ಇದರಿಂದಾಗಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳೆರಡು ನಾಶವಾಗುತ್ತವೆ. ಆದುದರಿಂದ, ಗ್ಯಾಸ್ಟ್ರಿಕ್ ಪ್ಲೋರಾವನ್ನು ಪುನಃ ಗಳಿಸಲು ಈ ಕೆಳಕಂಡ ಯಾವುದಾದರೂ ಒಂದು ಜ್ಯೂಸ್ನ್ನು ಹತ್ತು ದಿನಗಳವರೆಗಾದರೂ ಸೇವಿಸಿದರೆ ಸಹಾಯಕವಾಗುತ್ತದೆ.
೧. ಸೇಬಿನ ರಸ ೨೭೫ ಎಂ.ಎಲ್.
೨. ಸೌತೆಕಾಯಿ ರಸ ೨೭೫ ಎಂ.ಎಲ್.
೩. ಪರಂಗಿ ಹಣ್ಣಿನ ರಸ ೪೫೦ ಎಂ.ಎಲ್.
ಆತ್ರೈಟಿಸ್ (ಕೀಲುರಿತ): ಕೆಳಕಂಡ ಯಾವುದಾದರೂ ಒಂದು ಜ್ಯೂಸ್ ಅನ್ನು ಪ್ರತಿ ನಿತ್ಯ ಸೇವಿಸಬೇಕು.
೧. ಸೌತೆಕಾಯಿ ರಸ-೨೭೫ ಎಂ.ಎಲ್.
೨. ದ್ರಾಕ್ಷಿಹಣ್ಣಿನ ರಸ-೪೫೦ ಎಂ.ಎಲ್.
ಅಸ್ತಮ: ಈ ಕೆಳಕಂಡ ಜ್ಯೂಸ್ಗಳಲ್ಲಿ ಯಾವುದಾದರೂ ಎರಡನ್ನು ಮಿಶ್ರ ಮಾಡಿ ಒಂದು ವಾರ ಸೇವಿಸಬೇಕು. ಎರಡು ಜ್ಯೂಸ್ನ್ನು ಮಿಶ್ರಮಾಡಿ ಸೇವಿಸಿದಾಗ ಅನುಕೂಲವಾದರೆ ಅದನ್ನು ಮುಂದುವರೆಸಬೇಕು.
ರಸ | ಪರಿಮಾಣ |
೧. ದ್ರಾಕ್ಷಿಹಣ್ಣಿನ ರಸ: | ೫೫೦ ಎಂ.ಎಲ್. |
೨. ಕ್ಯಾರೆಟ್ ರಸ: | ೨೭೫ ಎಂ.ಎಲ್. |
೩. ಬೆಳ್ಳುಳ್ಳಿ ರಸ: | ೨೫ ಎಂ.ಎಲ್. |
೪. ಕಿತ್ತಳೆ ಹಣ್ಣಿನ ರಸ: | ೧೦೦ ಎಂ.ಎಲ್. |
ನೆಗಡಿ: ಕಿತ್ತಳೆ ಹಣ್ಣಿನ ರಸ ೫೦೦ ಎಂ.ಎಲ್. ಅಥವಾ ಬಿಸಿ ನೀರಿಗೆ ಕಿತ್ತಳೆ ಹಣ್ಣಿನ ರಸವನ್ನು ಹಿಂಡಿ, ಸ್ವಲ್ಪ ಸಕ್ಕರೆಯನ್ನು ಸೇರಿಸಿ ಬೆಳಗ್ಗೆ, ಮಧ್ಯಾಹ್ನ ಕನಿಷ್ಠ ಮೂರು ದಿವಸವಾದರೂ, ಆರಾರು ಘಂಟೆಗೊಮ್ಮೆ ೧೫೦ ಎಂ.ಎಲ್. ಕಿತ್ತಳೆ ಹಣ್ಣಿನ ಜ್ಯೂಸ್ನ್ನು ಕುಡಿದು ಪೂರ್ಣ ವಿಶ್ರಾಂತಿಯನ್ನು ಪಡೆಯಬೇಕು.
ಮಲಬದ್ಧತೆ ನಿವಾರಣೆಗೆ: ಸಾಕಷ್ಟು ಪ್ರಮಾಣದಲ್ಲಿ ನಾರುಳ್ಳ ಆಹಾರ ಪದಾರ್ಥಗಳನ್ನು ಹಸಿರು ತರಕಾರಿಗಳನ್ನು ಸೇವಿಸಬೇಕಲು. ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಬೇಕು. ರಾತ್ರಿ ಮಲಗುವಾಗ ಒಂದು ಲೋಟ ಬಿಸಿ ನೀರಿಗೆ ಎರಡು ಟೀ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಅಲ್ಲದೆ, ಕೆಳಕಂಡ ಯಾವುದಾದರೂ ಜ್ಯೂಸ್ನ್ನು ಸೇವಿಸಬೇಕು.
ರಕ್ತ ಪರಿಚಲನೆಗೆ: ಪ್ರತಿ ನಿತ್ಯ ಕ್ರಮವಾಗಿ ವ್ಯಾಯಾಮವನ್ನು ಮಾಡಬೇಕು. ಪ್ರತಿನಿತ್ಯ ೨೭೫ ಎಂ.ಎಲ್. ಕ್ಯಾರೆಟ್ ಜ್ಯೂಸನ್ನು ಸೇವಿಸಬೇಕು.
ಜ್ವರ ನಿವಾರಣೆಗೆ: ಮೂಸಂಬಿ ಅಥವಾ ಕಿತ್ತಳೆಹಣ್ಣು ಅಥವಾ ದ್ರಾಕ್ಷಿ ಹಣ್ಣಿನ ರಸವನ್ನು ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ಲಘು ಊಟವಾದ ನಂತರ ಒಂದೊಂದು ಲೋಟ ಜ್ಯೂಸನ್ನು ಸೇವಿಸಿ ವಿಶ್ರಾಂತಿಯನ್ನು ಪಡೆಯಬೇಕು. (ಶರೀರದಲ್ಲಿ ಸೋಂಕಿದ್ದರೆ, ಸೂಕ್ತ ಚಿಕಿತ್ಸೆಯನ್ನು ವೈದ್ಯರಿಂದ ಪಡೆಯಬೇಕು).
ಲೈಂಗಿಕ ನಿಶ್ಚಕ್ತಿಯ ನಿವಾರಣೆಗೆ: ಕೆಳಕಂಡ ಯಾವುದಾದರೂ ಒಂದನ್ನು ಪ್ರತಿದಿನ ಸೇವಿಸಬೇಕಲು.
ಮೈ ಚರ್ಮದ ಅಭಿವೃದ್ದಿಗೆ: ಸೇಬಿನ ಹಣ್ಣಿನ ಜ್ಯೂಸ್: ಪ್ರತಿ ದಿನ ೩೫೦ ಎಂ.ಎಲ್ ಅಥವಾ ಬೀಟ್ರೂಟ್ ಜ್ಯೂಸ್ ಪ್ರತಿ ದಿನ ೩೫೦ ಎಂ.ಎಲ್.
Leave A Comment