ಅನೇಕ ಸ್ತ್ರೀಯರು ರಕ್ತ ಕೊರೆ ಅಥವಾ ಅನಿಮಿಯಾದಿಂದಾಗಿ ಬಹಳ ಬೇಗನೆ ಆಯಾಸಕ್ಕೆ ತುತ್ತಾಗುತ್ತಾರೆ. ಅದರಲ್ಲೂ ಗರ್ಭಿಣಿಯಾಗಿದ್ದಾಗ, ಸಾಕಷ್ಟು ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸದಿದ್ದರೆ ಸುಸ್ತು ಕಾಣಿಸಿಕೊಳ್ಳುತ್ತದೆ.

ಮುಟ್ಟಿನ ಸಂದರ್ಭದಲ್ಲಿ ಗರ್ಭಪಾತದಲ್ಲಿ ಅಥವಾ ಹೆರಿಗೆಯ ಸಂದರ್ಭದಲ್ಲಿ ರಕ್ತವನ್ನು ಕಳೆದುಕೊಳ್ಳಬಹುದು.

ಹೆಂಗಸರಲ್ಲಿ ಅನಿಮಿಯಾವನ್ನು ಪತ್ತೆಹಚ್ಚುವುದು ಹೇಗೆ?

೧. ಮೈಯೆಲ್ಲಾ ಬಿಳಿಚಿಕೊಂಡಿದ್ದರೆ (Looks Pale), ಸುಲಭವಾಗಿ ಆಯಾಸಗೊಂಡರೆ ಅಥವಾ ನಿಶ್ಚಕ್ತಿ ಇದ್ದರೆ ಅನಿಮಿಯಾ ಇದೆ ಎಂದು ತಿಳಿಯಬಹುದು.

೨. ಕಣ್ಣುಗಳನ್ನು ಪರೀಕ್ಷಿಸುವುದರಿಂದ ಅನಿಮಿಯಾ ಇದೆಯೋ, ಇಲ್ಲವೋ ಎಂದು ತಿಳಿದುಕೊಳ್ಳಬಹುದು.

೩. ಬಾಯಿಯ ಲೋಳೆ ಪೊರೆಯನ್ನು (Mucous Membrane of the Mouth) ಪರೀಕ್ಷಿಸುವುದರಿಂದ ತಿಳಿದುಕೊಳ್ಳಬಹುದು.

೪. ಹಿಮೋಗ್ಲೋಬಿನ್‌ ಪ್ರಮಾಣದಿಂದ ತಿಳಿದುಕೊಳ್ಳಬಹುದ.

ಕಬ್ಬಿಣಾಂಶದ ಕೊರತೆಯಿಂದಲೇ ಸಾಮಾನ್ಯವಾಗಿ ಅನಿಮಿಯಾ ಉಂಟಾಗುವುದು. ಹಿಮೋಗ್ಲೋಬಿನ್‌ ತಯಾರಾಗಬೇಕಾದರೆ ಕಬ್ಬಿಣ ಮತ್ತು ಪ್ರೋಟೀನ್‌ ಎರಡೂ ಅಗತ್ಯ.

ಪೋಲಿಕ್‌ ಆಯಸಿಡ್‌, ವಿಟಮಿನ್‌, ಕೆಂಪು ರಕ್ತ ಕಣಗಳ ತಯಾರಿಕೆಗೆ ಬಹಳ ಅಗತ್ಯ. ಗರ್ಭಿಣಿಯರಿಗೆ ಪೊಲೀಕ್‌ ಆಯಸಿಡ್‌ ಮತ್ತು ಕಬ್ಬಿಣಾಂಶ ಹೆಚ್ಚಾಗಿ ಬೇಕು. ವಿಟಮಿನ್‌ ಬಿಕ-೧೨ರ ಕೊರತೆಯಿಂದಲೂ ಅನಿಮಿಯಾ ಉಂಟಾಗುತ್ತದೆ.

ಚಿಕಿತ್ಸೆ:

ಗರ್ಭೀಣಿಯರು ಮತ್ತು ಮೊಲೆಹಾಲನ್ನು ಕುಡಿಸುತ್ತಿರುವ ತಾಯಂದಿರು, ಗರ್ಭ ನಿರೋಧಕಗಳನ್ನು ಬಳಸುತ್ತಿರುವವರಲ್ಲಿ ೧೨ ಗ್ರಾಮಿಗಿಂತಲೂ ಹಿಮೋಗ್ಲೋಬಿನ್‌ ಕಡಿಮೆ ಇದ್ದರೆ ಅವರು, ಐರನ್‌ ಮತ್ತು ಪೊಲಿಕ್‌ ಆಸಿಡ್‌ ಮಾತ್ರೆಗಳನ್ನು ವೈದ್ಯರ ಸಲಹೆಯನ್ನು ಪಡೆದು ಸೇವಿಸಬೇಕು.

ಸೂಚನೆ:

ಐರನ್ ಮಾತ್ರೆಗಳನ್ನು ಊಟವಾದ ನಂತರ ಸೇವಿಸಬೇಕು.

೨. ಐರನ್‌ ಮಾತ್ರೆಗಳ ಜೊತೆಗೆ ಕಬ್ಬಿಣಾಂಶವಿರುವ ಹಸಿರು ತರಕಾರಿಗಳನ್ನು ಯಥೇಚ್ಛವಾಗಿ ಪ್ರತಿನಿತ್ಯ ಬಳಸಬೇಕು.

೩. ಕನಿಷ್ಠ ಮೂರು ತಿಂಗಳವರೆಗಾದರೂ ಐರನ್‌ ಮತ್ತು ಪೋಲಿಕ್‌ ಆಯಸಿಡ್‌ ಮಾತ್ರೆಗಳನ್ನು ಸೇವಿಸಬೇಕು.

೪. ಐರನ್‌ ಮತ್ತು ಪೋಲಿಕ್ ಆಯಸಿಡ್‌ ಮಾತ್ರೆಗಳು ಉಚಿತವಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತವೆ.

ವಿವಾಹಿತ ಮಹಿಳೆಯರು, ಒಂದು ಮಗುವಿಗೂ, ಇನ್ನೊಂದು ಮಗುವಿಗೂ ಕನಿಷ್ಠ ಮೂರು ವರ್ಷಗಳ ಅಂತರವನ್ನು ಇರಿಸಿಕೊಳ್ಳುವುದರಿಂದ, ಆರೋಗ್ಯ ಮತ್ತು ಶಕ್ತಿಯನ್ನು ಪುನಃ ಗಳಿಸಲು ಸಾಧ್ಯವಾಗುತ್ತದೆ.