ಏನಿಲ್ಲಾ ಏನೆಂಬುದು ಅಲ್ಲಿಲ್ಲಾ
ಏನೆಂಬುದನು ತಿಳಿವರಾರಾಬ್ಬರಿಲ್ಲ ಇಲ್ಲಿಲ್ಲಾ
ಭಾವದೊಳು ಭಾವವೋ ಶೂನ್ಯದೊಳು
ಶೂನ್ಯವೋ ಅರಿವಿನಿಂದಾಚೆ ಬರಿ ಮೌನ ಮೌನ || ತತ್ತ್ವ ||

ಚಿಂತೆಯ ಬಗೆದು ಸುಡುತಿದೆ ಜೀವ ಯಾವ
ಜನ್ಮದ ಪಾಪ ತಪ್ಪಾಗಿ ಯಾವ ಜನ್ಮದ ಪಾಪ
ತಪ್ಪಾಗಿ ಶಿವನೇ ಹೆಣ್ಣಿನ ಬಾಳೆ ಕಣ್ಣೀರು ||

ಪಾಪಿ ಹೊಟ್ಟೆಲಿ ಹುಟ್ಟಿ ಪರದೇಶಿ ನಾನಾಗೀ
ಪಂಚ ಪಾತನಕ ಕೈ ಹಿಡಿದು
ಪಂಚ ಪಂತನಕನ ಕೈಹಿಡಿದು ಶಿವನೇ ರಾಕ್ಷಸಿ
ಮನೆಗೆ ಸೊಸೆಯಾದೆ || ಚಿಂತೆಯ ||

ಹಗಲು ಬಿಡು ಇಲ್ಲ ಇರುಳು ನಿದ್ರೆಯಿಲ್ಲ
ಕೊಡುವಂತ ಕಷ್ಟಕ್ಕೆ ಕಡೆಯಿಲ್ಲ
ಕೊಡವೊ ಹಿಂಸೆಗೆ ಕಡೆಯಿಲ್ಲ ಶಿವನೇ
ಭಾಗ್ಯವ ಕೊಡೋ ನೀ ಶಿವ ಎಮಗೆ || ಚಿ ||

ಕರಿಯ ಕಂಬಳಿ ತಂದೆ ಹೊದೆಯಬಾರದ
ಮೈಯಗೆ ಅದನ್ಯಾಕೆ ತಂದೊ ದರವೇಸಿ
ಅದನ್ಯಾಕೆ ತಂದೋ ದರವೇಸಿ ಕಂಡೋರು
ಹೆಣ್ಣಿನ ಗೋಳು ಹ್ಯೋಕ್ಕೊಂತಿಯೋ || ಚಿಂತೆ ||