ಅನಂತಮೂರ್ತಿಯವರ ಪುಸ್ತಕಗಳು ಯಾವಾಗಲೂ ಜನರ ಕೈಗೆ ಸಿಗಬೇಕು ಎನ್ನುತ್ತಿದ್ದ ಹಾಗೆ ನೋಡಿಕೊಳ್ಳುತ್ತಿದ್ದ ಕೆ.ವಿ. ಸುಬ್ಬಣ್ಣ ಅವರ ಮಾತು ನೆನಪಾಗುತ್ತಿದೆ.

ನಮ್ಮ ನಡುವಿನ ಕ್ರಿಯಾಶೀಲ ಚೇತನ ಶ್ರೀ ಯು.ಆರ್. ಅನಂತಮೂರ್ತಿ ಅವರ ಈ ಕೃತಿಯನ್ನು ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಲಾಗಿತ್ತು. ಆ ಮುದ್ರಣದ ಪ್ರತಿಗಳು ಖರ್ಚಾಗಿ ತುಂಬಾ ದಿನಗಳಾಗಿದ್ದರೂ ಪುನರ್ ಮುದ್ರಿಸಲಾಗಿರಲಿಲ್ಲ. ಈಗ ಮತ್ತೆ ಪುನರ್ ಮುದ್ರಣಗೊಳ್ಳುತ್ತಿದೆ. ಪುನರ್ ಮುದ್ರಣಕ್ಕೆ ಅನುಮತಿ ನೀಡಿದ ಶ್ರೀ ಅನಂತಮೂರ್ತಿಯವರನ್ನು ಎಂದಿನ ನಗುಮುಖದ ಪ್ರೀತಿಯ ಶ್ರೀಮತಿ ಎಸ್ತರ್ ಅವರನ್ನು ಅಭಿನವದ ಜೊತೆಗಿರುವ ಹಿರಿಯರನ್ನು, ಗೆಳೆಯರನ್ನು ನೆನೆಯುತ್ತಾ….

. ರವಿಕುಮಾರ
ಅಭಿನವದ ಪರವಾಗಿ