(ಕ್ರಿ. ಶ. ೧೫೭೧-೧೬೩೦) (ಗ್ರಹಚಲನ ನಿಯಮ)

ಖ್ಯಾತ ಜರ್ಮನ್ ವಿಜ್ಞಾನಿ ಯೋಹನ್ ಕೆಪ್ಲರ್ ೧೫೭೧ರಲ್ಲಿ ಜನಿಸಿದರು. ಈತ ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ವಿವರಿಸುವ ಗ್ರಹಚಲನೆಯ ಮೂರು (೩) ನಿಯಮಗಳನ್ನು ಕಂಡು ಹಿಡಿದರು. ಆತ ಕಂಡು ಹಿಡಿದ ನಿಯಮಗಳು : ಪ್ರತಿಯೊಂದು ಗ್ರಹವೂ ಸೂರ್ಯನ ಸುತ್ತ ದೀರ್ಘ ವೃತ್ತ ಕಕ್ಷೆಯಲ್ಲಿ ಚಲಿಸುತ್ತದೆ, ಸೂರ್ಯ ಇದರ ಒಂದು ನಾಭಿಯಲ್ಲಿದೆ; ಪ್ರತಿಯೊಂದು ಗ್ರಹವೂ ಸೂರ್ಯನನ್ನು ಕುರಿತಂತೆ ಸಮ ಅವಧಿಗಳಲ್ಲಿ ಸಮ ಕ್ಷೇತ್ರಫಲಗಳನ್ನು ರೇಖಿಸುತ್ತದೆ; ಗ್ರಹದ ಪರಿಭ್ರಮಣಾವಧಿಯ ವರ್ಗ ಸೂರ್ಯ ಮತ್ತು ಗ್ರಹಗಳ ನಡುವಣ ಸರಾಸರಿ ಅಂತರದ ಘನಕ್ಕೆ ಅನುಲೋಮವಾಗಿದೆ. ಇಂತ ಮಹಾನ್ ಸಂಶೋಧನೆ ಮಾಡಿದ ಈತ ಶ್ರೀಮಂತನಾಗಿರಲಿಲ್ಲ. ವೈಯುಕ್ತಿಕ ಜೀವನದಲ್ಲಿ ಹೊಟ್ಟೆಯ ಪಾಡಿಗಾಗಿ ಈತ ಫಲಜ್ಯೋತಿಷ್ಯದ ವೃತ್ತಿಯನ್ನು ಹಿಡಿದಿದ್ದನು.

ಗ್ರಹಗಳು ಕೆಪ್ಲರ್ ವರ್ಣಿಸಿದ ರೀತಿಯಲ್ಲಿಯೇ ಚಲಿಸುತ್ತವೆ ಎಂಬುದನ್ನು ಮುಂದೆ ಇಂಗ್ಲೆಂಡಿನ ಮಹಾನ್ ವಿಜ್ಞಾನಿ ಈಸಾಕ್ ನ್ಯೂಟನ್ ಸಮರ್ಥಿಸಿ ತೋರಿಸಿದರು. ಅದಕ್ಕಾಗಿ ಆತ ತನಗೆ ದೊರೆತ ಮಾಹಿತಿಗಳನ್ನು ಗಣಿತ ಶಾಸ್ತ್ರೀಯವಾಗಿ ವಿಶ್ಲೇಷಿಸಿದರು.

“ಕಾನ್ವೆಕ್ಸ್ ಆಬ್ಜೆಕ್ಟೀವ್” ಮತ್ತು “ಕಾನ್ವೆಕ್ಸ್ ಐಪೀಸ್” ಅಳವಡಿಸಲ್ಪಟ್ಟ ಟೆಲಿಸ್ಕೋಪನ್ನು ತಯಾರು ಮಾಡಿದ್ದು ಕೆಪ್ಲರ್ ರ ರ ಇನ್ನೊಂದು ದೊಡ್ಡ ಸಾಧನೆ. ಕೆಪ್ಲರ್ ೧೬೩೦ರಲ್ಲಿ ನಿಧನ ಹೊಂದಿದರು.