ಶ್ರಾವಣ ಮಾಸದ ಸಂಪತ್ ಶನಿವಾರದ ಕಥೆ:

ಒಂದು ಊರಿನಲ್ಲಿ ದೊಡ್ಡ ವ್ಯಾಪಾರಸ್ಥ ದಂಪತಿಗಳಿರುತ್ತಿದ್ದರು. ಅವರಿಗೆ ಎಷ್ಟೋ ವರ್ಷಗಳಿಂದಲೂ ಮಕ್ಕಳೇ ಆಗಲಿಲ್ಲ. ಆಗ ಅವರು ಈ ಸಂಪತ್ ಶನಿವಾರದ ಪೂಜೆಯನ್ನು ನೇಮದಿಂದ ಮಾಡುತ್ತಾ ಬಂದಾಗ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಅವರಿಗೆ ಸತ್ಯಕ್ಕ ಸಾಯಕ್ಕ ಎಂದ ನಾಮಕರಣ ಮಾಡಿ, ಬಹಳ ಪ್ರೀತಿಯಿಂದ ಸಾಕಿ ಪ್ರಾಪ್ತ ವಯಸ್ಕರಾದಾಗ ದೊಡ್ಡ ಶ್ರೀಮಂತರ ಮನೆಗೆ ಕೊಟ್ಟು ಮದುವೆ ಮಾಡಿದರು. ಅವರು ಗಂಡನ ಮನೆಗೆ ಹೋಗುವಾಗ ಇಬ್ಬರಿಗೂ ಮಕ್ಕಳೇ ನೀವು ಗಂಡನ ಮನೆಗೆ ಹೋದರೂ ಈ ಸಂಪತ್ ಶನಿವಾರದ ಪೂಜೆಯನ್ನು ಮಾಡಲು ಮರೆಯಬೇಡಿ ಎಂದು ಪೂಜಾ ವಿಧಾನವನ್ನು ಹೇಳಿದರು. ಶ್ರಾವಣಮಾಸದಲ್ಲಿ ಬರುವ ಎಲ್ಲಾ ಶನಿವಾರದಂದು ಬೆಳಿಗ್ಗೆ ಶುಚಿರ್ಭೂತರಾಗಿ ಐದು ತರಹದ ಹಿಟ್ಟು ತೆಗೆದುಕೊಳ್ಳಬೇಕು. ಗೋಧಿ, ಜೋಳ, ಅಕ್ಕಿ, ಕಡ್ಲೆಹಿಟ್ಟು, ಹೆಸರು, ಹಸಿಮೆಣಸಿನಕಾಯಿ, ಉಪ್ಪು ಹಾಕಿ ಕಲಸಿ ರೊಟ್ಟಿ ಮಾಡಬೇಕು. ಎರಡು ಮೂಲಂಗಿ ಹಾಗೂ ಮೆಂತೆ ಸೊಪ್ಪಿನ ಪಲ್ಯ ಮಾಡಿ ಒಂದು ತಟ್ಟೆಯಲ್ಲಿ ಇಟ್ಟು ಮಣೆ ಮೇಲೆ ಇಡಬೇಕು. ಪೂಜೆ ಮಾಡಿ ಕಾಯಿ ಒಡೆಯಬೇಕು. ತಮ್ಮ ಇಷ್ಟಾರ್ಥವನ್ನು ಬೇಡಿಕೊಳ್ಳಬೇಕೆಂದು ಹೇಳಿ ಅವರಿಗೆ ಗಂಡನ ಮನೆಗೆ ಕಳುಹಿಸಿದ್ದರು.

ಅವರಿಬ್ಬರೂ ಗಂಡನ ಮನೆಯಲ್ಲಿ ಸುಖ ಸಂತೋಷದಿಂದ ಗಂಡು ಮಕ್ಕಳೊಂದಿಗೆ ಇದ್ದರು ದೊಡ್ಡ ಮಗಳಾದ ಸತ್ಯಕ್ಕನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಅವರು ದೊಡ್ಡವರಾದಾಗ ತಾಯಿ ಶ್ರಾವಣ ಮಾಸದ ಈ ವ್ರತ ಮಾಡುವುದನ್ನು ನೋಡಿ ತಾಯಿಗೆ ಈ ರೊಟ್ಟಿ ಹಾಗೂ ಪಲ್ಯದ ನೈವೇದ್ಯ ಇಡದೆ ಹೋಳಿಗೆ ಮಾಡಲು ಹೇಳಿದರು. ಮಕ್ಕಳ ಮಾತು ಕೇಳಿ ತಾಯಿ ಹೋಳಿಗೆ ಮಾಡಿ ನೈವೇದ್ಯ ಮಾಡಿದಳು.

ಮುಂದಿನ ಶನಿವಾರದೊಳಗೆ ಆಕೆಯ ಗಂಡನಿಗೆ ವ್ಯಾಪಾರದಲ್ಲಿ ಬಹಳೇ ನಷ್ಟವಾಗಿ ಅಪರಾಧದ ಮೇಲೆ ಜೈಲಿಗೆ ಹೋದನು. ಸ್ವಲ್ಪ ದಿನದಲ್ಲೇ ಎಲ್ಲಾ ಧನಕನಕ ಆಸ್ತಿ ಎಲ್ಲಾ ಹೋಗಿ ನಾಲ್ಕೂ ಜನ ಮಕ್ಕಳು ತಾಯಿ ಬಡತನದ ಬೇಗೆಯಲ್ಲಿ ತತ್ತರಿಸಿ ಹೋದರು. ಆಗ ಮಕ್ಕಳು ತಾಯಿಯನ್ನು ಉದ್ದೇಶಿಸಿ  ಅಮ್ಮ  ಈ ಬಡತನದಿಂದ ನಾವೆಲ್ಲಾ ತುಂಬಾ ಕಂಗಾಲಾಗಿ ಹೋಗಿದ್ದೇವೆ. ನಮ್ಮವರೆಂಬುವವರು ಯಾರೂ ಇಲ್ಲವೇ ಎಂದು ಪ್ರಶ್ನಿಸಿದರು. ಆಗ ತಾಯಿಯು ತಮ್ಮವರೆಂಬುವವರು ಯಾರೂ ಇಲ್ಲ. ಆದರೆ ಸಾಯಕ್ಕ ಎಂಬ ಒಬ್ಬ ತಂಗಿ ಮಾತ್ರ ಇರುವಳೆಂದು ಮಕ್ಕಳಿಗೆ ಹೇಳಿದಳು.ಆಗ ದೊಡ್ಡ ಮಗನು ನಾನು ಅವಳ ಹತ್ತಿರ ಹೋಗಿ ಬರುತ್ತೇನೆ ಎಂದು ಹೊರಟನು.

ಆ ಊರಿಗೆ ಹೋಗಿ ಊರ ಹೊರಗಿನ ಭಾವಿಕಟ್ಟೆಯ ಮೇಲೆ ಕುಳಿತುಕೊಂಡನು. ಆ ಭಾವಿಗೆ ಬಂದ ಹೆಂಗಳೆಯರು ಈ ಹುಡುಗ ಯಾರೆಂದು ಕೇಳಿದರು. ಆಗ ಅವನು ಸಾಯಕ್ಕನ ಅಕ್ಕ ಸತ್ಯಕ್ಕನ ದೊಡ್ಡಮಗ ಬಂದಿರುವುದಾಗಿ ಹೇಳಿ ಕಳುಹಿಸಿದನು. ಅವರು ಹೋಗಿ ಸಾಯಕ್ಕನಿಗೆ ಈ ವಿಷಯ ತಿಳಿಸಿದರು. ಆಗ ಅವಳು ಆ ಹೆಂಗಳೆಯರಿಗೆ ಅವನು ಹೇಗಿದ್ದಾನೆಂದು ಕೇಳಿದಳು. ಆಗ ಅವರು ಅವನು ಒಬ್ಬ ಭಿಕ್ಷುಕನಂತೆ ಗಡ್ಡ ಮೀಸೆ ಬೆಳೆಸಿಕೊಂಡು ಹರಿದ ಬಟ್ಟೆಗಳನ್ನು ಹಾಕಿಕೊಂಡು ಬಂದಿರುವುದಾಗಿ ಹೇಳಿದರು. ಆಗ ಸಾಯಕ್ಕ ಅವರಿಗೆ ಅವನನ್ನು ಹಿಂದಿನ ಬಾಗಿಲಿನಿಂದ ಕರೆದುಕೊಂಡು ಬರಲು ಹೇಳಿದಳು. ನಂತರ ಅವನಿಗೆ ಕ್ಷೌರ ಮಾಡಿಸಿ  ತಲೆ ಸ್ನಾನ ಮಾಡಿಸಿ ಶುಚಿರ್ಭೂತನಾದ ಮೇಲೆ ಉಣಬಡಿಸಿ ನಂತರ ಅವನ ಯೋಗಕ್ಷೇಮವನ್ನು ವಿಚಾರಿಸಿದಳು.

ಆಗ ಅವನು ತಮ್ಮ ತಂದೆಗೆ ವ್ಯಾಪಾರದಲ್ಲಿ ತುಂಬಾ ನಷ್ಟವಾಗಿ ತಂದೆ ಅಪರಾಧದ ಮೇಲೆ ಜೈಲಿಗೆ ಹೋದ ಮೇಲೆ ನಮಗೆಲ್ಲಾ ಬಹಳ ಬಡತನ ಬಂದಿರುವುದಾಗಿ ಹೇಳಿಕೊಂಡನು.

ಆಗ ಸಾಯಕ್ಕ ಅವನನ್ನು ಕೆಲವು ದಿವಸ ಇಟ್ಟುಕೊಂಡು ನಂತರ ಊರಿಗೆ ಹಿಂತಿರುಗಿ ಹೋಗಲು ಹೇಳಿದಳು. ಅವನು ನಿರಾಕರಿಸಿದಾಗ ಎಲ್ಲರಿಗೂ ಬಟ್ಟೆಗಳನ್ನು ಕೊಟ್ಟು ಊರಿಗೆ ಹೋಗೆಂದು ಕಳುಹಿಸಿದಳು. ಸ್ವಲ್ಪ ದೂರ ಹೋಗುತ್ತಿರುವಾಗ ಬಿರುಗಾಳಿ ಬೀಸಿ ಅವನ ಬಟ್ಟೆಯ ಗಂಟು ಹಾರಿ ದೊಡ್ಡ ಮರದ ಮೇಲೆ ಹೋಗಿ ಸಿಕ್ಕಿಕೊಂಡಿತು. ಅದನ್ನು ತೆಗೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ನಿರಾಶನಾಗಿ ಊರಿಗೆ ಮರಳಿದನು. ತಾಯಿಗೆ ಚಿಕ್ಕಮ್ಮನ ಮನೆಯಲ್ಲಿ ಸುಖಪಟ್ಟ ವಿಚಾರ ಹಾಗೂ ಅವಳು ಕೊಟ್ಟ ಬಟ್ಟೆಗಂಟು ಹೇಗೆ ಹೋಯಿತೆಂದು ವಿವರಿಸಿದನು. ಇದನ್ನೆಲ್ಲಾ ಕೇಳಿ ಎರಡನೇ ಮಗ ತಾನೂ ಚಿಕ್ಕಮ್ಮನ ಊರಿಗೆ ಹೋಗಿ ಅದೇ ಭಾವಿಯ ಕಟ್ಟೆ ಮೇಲೆ ಕುಳಿತುಕೊಂಡು ಸಾಯಕ್ಕನಿಗೆ ಹೇಳಿ ಕಳುಹಿಸಿದನು. ಸಾಯಕ್ಕ ಅವನಿಗೂ ಅದೇ ರೀತಿ ಊಟೋಪಚಾರಗಳನ್ನು ಮಾಡಿ ಕೆಲದಿನಗಳ ನಂತರ  ಅವನಿಗೆ ಕಾಲ್ಗಡಗ ಮಾಡಿ ವಜ್ರ ವೈಢೂರ‍್ಯಗಳನ್ನು ತುಂಬಿ ಕಾಲಿನಲ್ಲಿ  ಹಾಕಿ ಕಳುಹಿಸಿದಳು. ಅವನು ಊರಿಗೆ ಹೋಗುವ ದಾರಿಯಲ್ಲಿ ಮಳೆಯಿಂದ ತುಂಬಾ ಕೆಸರು ಇತ್ತು ಅವನ ಎರಡೂ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡವು. ಕಾಲುಗಳನ್ನು ತೆಗೆದಾಗ ಎರಡೂ ಕಾಲಕಡಗ ಬಿಚ್ಚಿಹೋಗಿದ್ದವು. ಎಷ್ಟು ಹುಡುಕಿದರೂ ಸಿಗದಾಗ ದುಃಖತಪ್ತನಾಗಿ ಬಂದು ತಾಯಿಯಲ್ಲಿ ಎಲ್ಲಾ ವಿಷಯವನ್ನು ಹೇಳಿಕೊಂಡು ಅತ್ತನು. ನಂತರ ಮೂರನೇ ಮಗನೂ ಕೂಡಾ ತಾಯಿಗೆ ಹೇಳಿ ಚಿಕ್ಕಮ್ಮನ ಊರಿಗೆ ಬಂದು ಹೇಳಿ ಕಳುಹಿಸಿದನು. ಸಾಯಕ್ಕ ಅವನಿಗೂ ಕರೆಸಿ ಒಳ್ಳೆಯ ಉಪಚಾರ ಮಾಡಿ ಕೆಲವು ದಿನ ಇದ್ದ ಮೇಲೆ ಊರಿಗೆ ಹಿಂತಿರುಗಲು ಹೇಳಿದಳು. ಹೋಗುವಾಗ ಅವನಿಗೆ ಒಂದು ಕೋಲಿನಲ್ಲಿ ವಜ್ರ ವೈಢೂರ‍್ಯ ಹಾಗೂ ಹಣವನ್ನು ತುಂಬಿ ಈ ಸಲ ಈ ಕೋಲನ್ನು ಎಲ್ಲಿಯೂ ಇಡದೇ ನೇರ ಊರಿಗೆ ಹೋಗಲು ಹೇಳಿದಳು.

ಅವನು ಸ್ವಲ್ಪ ದೂರ ಹೋಗಳು ಒಬ್ಬ ಕುರಿಕಾಯುವ ಹುಡುಗ ಅವನ ಕೈಯಲ್ಲಿ ಇದ್ದ ಕೋಲು ತನ್ನದೆಂದು ಜಗಳವಾಡಿ ಅವನಿಂದ ಕಸಿದುಕೊಂಡು ಹೊಡೆದು ಕಳುಹಿಸಿದನು.

ಊರಿಗೆ ಬಂದು ತಾಯಿಯ ಹತ್ತಿರ ಎಲ್ಲಾ ವಿಚಾರವನ್ನು ಹೇಳಿ ಅತ್ತನು. ಅದನ್ನು ಕೇಳಿ ತಾಯಿ ತಮ್ಮ ದುರದೃಷ್ಟಕ್ಕೆ ಹಳಿಯುತ್ತಾ ಸುಮ್ಮನಾದಳು. ಕೆಲದಿನಗಳ ನಂತರ ಮಕ್ಕಳಿಗೆ ತಾಯಿ ನೀವೆಲ್ಲಾ ಹೋಗಿ ನಿಮ್ಮ ಚಿಕ್ಕಮ್ಮನಲ್ಲಿ ತಿಂದು ಉಂಡು ಸುಖಪಟ್ಟು ಬಂದಿರುವಿರಿ. ನಾನೂ ಕೂಡಾ ಸ್ವಲ್ಪ ದಿನ ತಂಗಿಯ ಊರಿಗೆ ಹೋಗಿ ಬರುತ್ತೇನೆಂದು ಚಿಕ್ಕಮಗನ ಜೊತೆಗೆ ಸಾಯಕ್ಕನ ಊರಿಗೆ ಹೋದಳು.

ಅಲ್ಲಿ ಕೆಲದಿನ ಇರಲು ಶ್ರಾವಣ ಮಾಸದ ಸಂಪತ್ ಶನಿವಾರ ಬಂದಿತು. ಅಂದು ಸಾಯಕ್ಕನ ಮನೆಯಲ್ಲಿ ಬೆಳಗಿನಿಂದಲೇ ಹಬ್ಬದ ಸಂಭ್ರಮ ಗಡಿಬಿಡಿ. ಅಡಿಗೆ ಎಲ್ಲವನ್ನೂ ಮಾಡಿ ಪೂಜೆಯ ವೇಳೆಗೆ ಅಕ್ಕ ಸತ್ಯಕ್ಕನನ್ನು ಕರೆದಳು. ಆದರೆ ಅಕ್ಕ ಎಲ್ಲೂ ಕಾಣದಿರಲು. ಮನೆಯವರಿಗೆಲ್ಲಾ ಅಕ್ಕ ಎಲ್ಲಿ ಹೋದಳೆಂದು ವಿಚಾರಿಸಲು ಮನೆಯ ಕೆಲಸದವನು ದನದ  ಕೊಟ್ಟಿಗೆಯಲ್ಲಿ ಮೇವು ಹಾಕಲು ಹೋದಾಗ ಗ್ವಾದಲಿಯಲ್ಲಿ ಏನೋ ಮಿಸುಕಾಡಿದಂತೆ ಆಯಿತು ಎಂದನು. ಆಗ ಸಾಯಕ್ಕ ದನದ ಕೊಟ್ಟಿಗೆಗೆ ಹೋಗಿ ನೋಡಲು, ಸತ್ಯಕ್ಕ ಬೆಳಗಿನಿಂದ ಅತ್ತು ಅತ್ತು ಬೆಂಡಾಗಿದ್ದಳು. ಕಾರಣ ಕೇಳಿದಾಗ ಬೆಳಗಿನಿಂದ ಹಬ್ಬದ ದಿನ ಹೋಳಿಗೆ ಮೃಷ್ಟಾನ್ನ ಭೋಜನ ಮಾಡುವುದನ್ನು ಬಿಟ್ಟು ರೊಟ್ಟಿ ಹಾಗೂ ಸೊಪ್ಪಿನ ಪಲ್ಯ ಮಾಡಿ ನನಗೆ ಅವಮಾನ ಮಾಡಿದಳೆಂದು ದುಃಖಿಸಿದಳು. ಆಗ ತಂಗಿ ಸಾಯಕ್ಕ ಅಕ್ಕನಿಗೆ ಸಮಾಧಾನ ಹೇಳಿ ನಮ್ಮ ತಂದೆ ತಾಯಿ ತಾವಿಬ್ಬರೂ ಮದುವೆಯಾಗಿ ಬರುವಾಗ ಈ ವ್ರತದ ಬಗ್ಗೆ ಹೇಳಿದ್ದನ್ನು ನೆನಪು ಮಾಡಿಕೊಟ್ಟಳು. ಆಗ ಸತ್ಯಕ್ಕ ತಾನು ಈ ವ್ರತವನ್ನು ಮರೆತ ಕಾರಣ ಇಷ್ಟೆಲ್ಲಾ ಕಷ್ಟಕ್ಕೆ ಗುರಿಯಾದೆನೆಂದು ನೊಂದುಕೊಂಡಾಗ ಸಾಯಕ್ಕ ಅವಳಿಗೆ ಸಮಾಧಾನ ಹೇಳಿ ಹಬ್ಬವನ್ನು ಇಬ್ಬರೂ ಕೂಡಿ ಮಾಡಿದರು. ಮರುದಿನ ಸಾಯಕ್ಕ ಅಕ್ಕ ಸತ್ಯಕ್ಕನಿಗೆ ಊರಿಗೆ ಹೋಗಿ, ಸಂಪತ್ ಶನಿವಾರದ ಪೂಜೆ ಮಾಡಲು ಹೇಳಿ ಕಳುಹಿಸಿದಳು. ಹೋಗುವಾಗ ಏನ್ನನ್ನೂ ಕೊಡಲಿಲ್ಲ. ಅಷ್ಟರಲ್ಲಿ ಸತ್ಯಕ್ಕನ ಉಳಿದ ಮೂರುಜನ ಮಕ್ಕಳೂ  ಬಂದರು. ಎಲ್ಲರೂ ತಮ್ಮ ಊರಿಗೆ ಹಿಂತಿರುಗಿ ಬಂದು ಶ್ರಾವಣ ಮಾಸದ ಸಂಪತ್ ಶನಿವಾರದ ಪೂಜೆಯನ್ನು ನೆರವೇರಿಸಲು ಭಕ್ತಿಯಿಂದ ಬೇಡಿಕೊಂಡು. ಹೊರಟಾಗ ದಾರಿಯಲ್ಲಿ ದೊಡ್ಡ ಮಗ ತಾಯಿಗೆ ಅಮ್ಮಾ ಇದೇ ಮರದ ಮೇಲೆ ಚಿಕ್ಕಮ್ಮ ಕೊಟ್ಟ ಬಟ್ಟೆಗಳ ಗಂಟು ಇದೆ ನೋಡಿ ಎನ್ನುವುದರಲ್ಲಿ ಮೇಲಿನಿಂದ ಬಟ್ಟೆ ಗಂಟು ಕೆಳಗೆ ಬಿದ್ದಿತು. ಆನಂದದಿಂದ ಅದನ್ನು ತೆಗೆದುಕೊಂಡು ಮುಂದೆ ಹೋಗುತ್ತಿರುವಾಗ ಎರಡನೆಯ ಮಗನ ಕಾಲಿನಿಂದ ಕೆಸರಿನಲ್ಲಿ ಕಳೆದ ಕಾಲುಗಡಕಗಳು ಕೆಸರೆಲ್ಲ ಒಣಗಿ ಮೇಲೆ ಬಂದಿದ್ದವು. ಅದನ್ನು ತೆಗೆದುಕೊಂಡು ಮುಂದೆ ಸಾಗಲು, ಮೂರನೇ ಮಗನ ಕೈಯಿಂದ ಕೋಲನ್ನು ಕಸಿದುಕೊಂಡ ಕುರಿಕಾಯುವ ಹುಡುಗ ಇವನನ್ನು ಕರೆದು ’ಏ ಹುಡುಗಾ ಈ ಕೋಲು ನನ್ನದಲ್ಲ ನಿನ್ನದೇ ಆಗಿರುತ್ತದೆ ತೆಗೆದುಕೋ”ಎಂದು ವಾಪಸ್ಸು ಕೊಟ್ಟನು. ಆ ಹುಡುಗ ಯಾರೂ ಅಲ್ಲದೆ ನರಸಿಂಹ ನಾರಾಯಣನೇ ಎಂದು ಎಲ್ಲರೂ ಭಕ್ತಿಯಿಂದ ಅವನನ್ನು ನಮಸ್ಕರಿಸಿ ಮನೆಗೆ ಬರುವಷ್ಟರಲ್ಲಿ ಸತ್ಯಕ್ಕನ ಗಂಡ ಜೈಲಿನಿಂದ ವಾಪಸ್ಸು ಮನೆಗೆ ಬಂದಿರುತ್ತಾನೆ.

ಮರುದಿನವೇ ಸಂಪತ್ ಶನಿವಾರ ಇದ್ದ ಕಾರಣ ಎಲ್ಲರೂ ಭಕ್ತಿಯಿಂದ ಶುಚಿರ್ಭೂತರಾಗಿ ನೇಮದಿಂದ ಪೂಜೆ ಮಾಡಿ ಇನ್ನು ಮುಂದೆ ಎಂದೂ ಈ ಪೂಜೆಯನ್ನು ಮರೆಯದೇ ಮಾಡುವುದಾಗಿ ಬೇಡಿಕೊಂಡು ಸುಖ ಸಂತೋಷದಿಂದ ಇರಲಾರಂಭಿಸಿದರು.

ಈ ಪೂಜೆಯನ್ನು ನೇಮದಿಂದ ಯಾರು ಆಚರಿಸುತ್ತಾರೋ ಅವರಿಗೆ ನಾರಾಯಣನು ಸುಖ, ಸಂತೋಷ, ಐಶ್ವರ‍್ಯಾರೋಗ್ಯವನ್ನು ಕೊಟ್ಟು ಕಾಪಾಡುತ್ತಾನೆ. ಈ ಶ್ರಾವಣ ಮಾಸದ ಸಂಪತ್ ಶನಿವಾರದ ಕಥೆ ಜನಪ್ರಿಯವಾಗಿದೆ.

ನವರಾತ್ರಿ :

ಆಶ್ವಯುಜ ಶುದ್ಧ ಮೊದಲನೇ ದಿನ ನವರಾತ್ರಿ ಪಾಡ್ಯವಾಗಿದ್ದು, ಈ ಹಬ್ಬವನ್ನು ದಶಮಿಯವರೆಗೆ ಆಚರಿಸುತ್ತಾರೆ, ಪಾಡ್ಯ ದಿನ ಕಳಸ ಸ್ಥಾಪನೆ ಮಾಡುತ್ತಾರೆ. ನವರಾತ್ರಿಯ ೭ನೇ ದಿನ ಸರಸ್ವತಿಯನ್ನು ೮ನೇ ದಿನ ಶಕ್ತಿ ದೇವತೆಯಾದ ದುರ್ಗಾದೇವಿಯನ್ನು ಬಹು ವಿಜೃಂಭಣೆಯಿಂದ ಪೂಜಿಸುತ್ತಾರೆ. ಇವರಿಗೆ ನವರಾತ್ರಿ ಬಹು ಶ್ರೇಷ್ಠವಾದ ಹಬ್ಬ

ನವರಾತ್ರೀ ಆರತಿ :

ಮನ್ ಮಾಝೇ ಮೋಹಿಲೆ ಶರಣ ಆಲೋ ತುಝ ಲಾಗುನೀ ಹೋ !
ಸ್ಥನಪಾನ ದೇವುನ ಸುಖೀಕೇಲೆ ಅಂಥಃಕರಣೀ ಹೋ !!
ನವಮೀಚೇದಿವಸಿ ನವ ದಿವಸಾಚೆ ಪಾರಣೀ ಹೋ !
ಸಪ್ತ ಶಕ್ತೀ ಜಪ ಹೋಮಹವನೇ ಸದ್ಭಕ್ತಿ ಕರೋ ನಿಹೋ !
ಷಡ್ರಸ ಅನ್ನ ನೇವೇದ್ವ್ಯಾಸಿ ಅರ್ಪಿಲೀ ಭೋಜ ನೀಹೋ !
ಆಚಾರ್ಯ ಬ್ರಾಹ್ಮಣ ತೃಪ್ತ ಕೇಲೆ ಕೃಪೇಕರೂ ನಿ ಹೋ!

ದಶಮೀ ಚಾ ದಿವಸಿ ಅಂಬಾನಿಗೇ ಸಿಮಹೋ ಲಿಂಗ ನೀಹೋ !
ಸಿಂಹಾರೂಢಕರೀ ದಾರುಣ ಅಸ್ತ್ರೆ ಅಂಬ ತ್ವಾ ಘೇವು ನೀಹೋ !
ಶುಂಭನಿಶುಂಭಾದಿ ರಾಕ್ಷಸಾಸಿ ಕೇಲೆ ಮಾರಸೀರಣಿಹೋ!
ಏಪ್ರಾರಾಮದಾಸಾ ಆಶ್ರಯದಿಧಲಾ ಕೋ ಚರಣೀಹೋ!!
ಉದೋ ಬೋಲಾ ಉಧೋ ಅಂಬಾಬಾಯಿಮಾವುಲೀ ಚಾಹೋ !!

) ಆರತಿ ತುಝ ಅಂಬೆ :

ಆರತಿ ಜಗದಂಬೆ ತುಜೆ ಅಂಬೆ ||
ತಾರಕ ವಿರ್ಶವ ಕುಟುಂಬೇ |
ಆರತಿ ಜಗದಂಬೆ ||
ಪಹಿಲೀಹೀ ಪೂಜಾ |
ತುಝ ಓಝಾ || ಓವಾಳಿನ ಸುಖ ಕಾಜಾ || ಆ.ಜ. ||
ದುಸರೀಹೀ ಪೂಜಾ | ತುಝ ಭಕ್ತಿ | ಓವಾಳಿನ ಸುಖಕಾಂತೀ || ಆ.ಜ. ||

ತೀಸರೀ ಪೂಜಾ | ತುಝ ತ್ರಿಕಾಳಿ | ವಂದಿನ ಅಂಬಾಬಾಯಿ || ಆ. ಜ. ||
ಚವಥೀಹೀ ಪೂಜಾ | ತುಝ ಛಂದ | ಕೋಯಿ | ಮಜ ಆನಂದ || ಅ.ಜ. ||
ಪಂಚಾರತಿ ಗಾಯಿ | ತುಘ ಆಯೀ | ವಂದಿನ ಅಂಬಾಭಾಯಿ || ಅ.ಜ. ||
ಷಡ್ರಸ ಪರಿಪೂರ್ಣ | ಅನ್ನಪೂರ್ಣಾ | ನೇಯಿಮಜ ಸುಖಧಾಮ || ಆ. ಜ. ||

) ಶ್ರೀ ದೇ ಚಿ ಆರತಿ :

ದುರ್ಗೇದುರ್ಗಟಭಾರಿತುಜಮಾ ಸಂಸಾರಿ |
ಆನಾಥೇ ಅಂಭೇರಯುವಾ ವಿಸ್ತಾರಿ |
ವಾರಿವಾರೀ ಜನ್ಮಮರಣಾತೇ ಬಾರಿ |
ಹಾರಿಪಡಲೋ ಆತಾಃ ಸಂಕಟನಿವಾರಿ ||

ಜಯದೇ ಜಯದೇ ಜೈ ಮಹಿಷಾಸುರಮರ್ದಿನಿ |
ಸುರವರ ಈಶ್ವರಿ ವರದೇ ತಾರಕ ಸಂಜೀವಿನಿ ||
ತ್ರಿಭುವನ ಭುವನೀಪಾಹತಾ ತುಝ ಏ ಸೀನಾಹಿ |
ಚಾರೀಶ್ರಮಲೇ ಪರಂತು ನ ಭೋಲ ವೇ ಕಹಿ ||

ಸಾಹೀ ವಿವಾಧ ಕರಿತಾ ಷಡಲೋಗ್ರವಾಹಿ |
ಕೇಸೂ ಭಕ್ತಾಲಾಗೀಪಾವ ಸೀಲ ವಲಾಹೀ ||
ಪ್ರಸನ್ನ ವದನೇ ಪ್ರಸನ್ನ ಹೋಸೀ ನಿಜ

ದಾಸಾ ಕ್ಲೇಶಾಪಾಸುನಿ ಪೋಡವೀ ಥೋಡಿ ಭವಪಾಶಾ |
ಅಂಬೇತುಜವಾಚುನ ಕೋಣ ಪುರವಿಲಾ ಆಶಾ |
ನರಹರೀತಲ್ಲೀನ ಝಾಲಾ ಪದಪಂಕುಜಲೇಖಾ ||
ಜಯದೇವಿ ಜಯದೇವಿ ಜಯಮಹಿಷಾಸುರಮರ್ದಿನೀ ||
ಸುರವರ ಈಶ್ವರ ವರದೇ ತಾರಕ ಸಂಜೀವಿನಿ ||

೨) ಅಶ್ವಿನ ಶುದ್ಧ ಪಕ್ಷ್‌ಇ ಅಂಬಾ ಬೈಸಲಿ ಸಂಹಾಸನೀ ಹೋ |
ಪ್ರತಿ ಪದೆ ಪಾಸೂನ ಘಟಸ್ಥಾಪನಾ ತೀ ಕರುನಿ ಹೋ ||
ಮೂಲ ಮಂತ್ರಜಪ ಕರೂನಿ ಭ್ಯೋವತೆ ರಕ್ಷಕ ಠೇವೋ ನೀ ಹೋ |
ಬ್ರಂಹಾಃ ವಿಷ್ಣು ರುದ್ರ ಆಯಿಚೆ ಪೂಜನ ಕರಿ ತೀ ಹೋ || ಪ ||

ಉದೋಬೋಲಾ ಉದೋಅಂಬಾಬಾ ಈ ಮಾವುಲೀಚಾಹೋ
ಉದೋಕಾರೆಗರ್ಜತೀ ಕಾಯಮಹಿಮಾ ವಣ್ರೂತಿಚಾ ಹೋ || ೧ ||

ದ್ವಿತೀಯಚೇ ದಿವಶೀ ಮಿಳತೀ ಚೌಸಷ್ಟ ಯೋಗಿನೀ ಹೋ |
ಸರಳಾ ಮಧ್ಯೇ ಶ್ರೇಷ್ಠ ಪರಶುರಾಮಮಾಚೀ ಜನನೀ ಹೋ ||
ಕಸ್ತೂರಿ ಮಳವಟ ಭಾಂಗೀ ಶೇಂಧೂರ ಭರೂನೀ ಹೋ |
ಉದೋಆರೆ ಗರ್ಜತಿ ಸಕಳ ಚಾಮುಮಡಾ ಮಿಳೂನಿ ಹೋ || ೨ ||

ತೃತೀಚೆ ದಿವಶೀ ಅಂಬೆ ಶೃಂಗಾರ ಮಾಂಡಿಲಾ ಹೋ |
ಮಳವಟ ಪಾತಳ ಚೋಳೀ ಕಿಂಠೀ ಹಾರ ಮುಕ್ತಫಳಾ ಹೋ ||
ಕಂಠೀಚೀ ದಕೇ ಆಂಸೆ ಪಿತಾಂಬರ ಪಿವಳಾ ಹೋ |
ಅಷ್ಟಭುಜಾ ಮಿರರವತಿ ಅಂಬೆ, ಸುಂದರ ದಿಸೆ ಲೀಲಾಹೋ ||| ೩ ||

ಚತುರ್ಥೀ ಚಿದಿವಶೀ ವಿಶ್ವವ್ಯಾಪಕ ಜನನಿ ಹೋ |
ಉಪಾಸಕಾ ಪಾಹಸೀ ಅಂಬೆ ಪ್ರಸನ್ನ ಅಂತಃಕರಣಿ ಹೋ ||
ಭಕ್ತಂಚಾ ಮಾವುಲೀ ಸೂರತೆ ಏಲೆ ಲೋಟಾಂಗಣಿ ಹೋ || ೪ ||
ಪಂಚಮೀಚೆ ದಿವಶೀ ವ್ರತ ತೆ ಉಪಾಗಲಲಿತಾಹೋ |
ಅರ್ಧ ಪಾದ್ಯಪೂಜನೇ ತಜಲಾ ಭವಾನಿ ಸ್ತಮಿತಿ ಹೋ ||
ರಾತ್ರೀಚಿ ಸಮಯೀ ಕರತೀ ಜಾಗರಣ ಹರಿಕಥಾ ಹೋ ||
ಆನಂದ ಪ್ರೇಮೆ ತೆ ಆಲೇ ಸದ್ಭಾವೇ ಕ್ರೀಇತಾಹೋ ||  ೫ ||

ಷಷ್ಠಿಚೆ ದಿವಶೀ ಭಕ್ತಾ ಆನಂದ ವರ್ತಲಾ ಹೋ |
ಘೇವೂನಿ ದಿವಟ್ಯಾ ಹಸ್ತಿ ಹರ್ಷೇ ಗೋಂಧಳ ಘಾತಲಾ ಹೋ |
ಕವಡಿ ಏಕ ಅರ್ಪಿತಾ ದೇಸಿ ಹಾರ ಮುಕ್ತಾ ಫಳಾ ಹೋ || ೬ ||

ಸಪ್ತಮೀಚೆ ದಿವಶೀ ಸಪ್ತಶೃಂಘ ಗಡಾವರೀ ಹೋ ||
ತೆಥೇ ತೂ ನಾಂದಸೀ ಭೋವತೀ ಪುಷ್ಟೇ ನಾನಾಪರಿ ಹೋ ||
ಜಾಈ ಜುಈ ಶೆವಂತೀ ಪೂಜಾ ರಾಖವೇಲಿ ವರತಿ ಹೋ |
ಭಕ್ತ ಸಂಕಟೀ ಷಡತಾ ಝೆಲೂನಿ ಘೆಸಿ ವರಚೆವರೀ || ೭ ||

ಅಷ್ಟಮೀಚೆ ದಿವಶೀ ಅಷ್ಟಭುಜಾ ನಾರಾಣಿ ಹೋ ||
ಸಹಾದ್ರಿ ಪರ್ವತಿ ಪಾಲೇ ಉಭೀ ಜಗಜ್ಜನನೀ ಹೊ ||
ಮನ ಮಾಝೆ ಮೋಲೆ ಶರಣ ಆಲಾ ತುಜಲಾಗೂನಿ ಹೋ |
ಸ್ತುನಪಾನ ದೇವೂನಿ ಸುಖೀ ಕೆಲೇ ಅಂತಃಕರಣಿ ಹೋ || ೮ ||

ನಮೀಚೆ ದಿವಶೀ ನವ ದಿವಸಾಂಚಿ ಪಾರಣೆ ಹೊ ||
ಷಡ್ರಸ ಅನ್ನೇ ನವೇದಾಸೀ ಅರ್ಪಿಲೀ ಭೂಜನಿ ಹೊ ||
ಆರ್ಚಾ ಬ್ರಾಹ್ಮಣಾ ತೃಪ್ತ ಎಲೇ ಕೃಪೆ ಕರೂನೀ ಹೊ || ೯ ||

ದಶಮೀಚ್ಯಾ ದಿವಶೀ ಅಂಬಾ ನಿಘೇ ಸೀಮೊಲ್ಲಂಘನೀ ಹೊ |
ಸಿಂಹಾರೂಢರಿ ದಾರುಣ ಆಸ್ತೇ ಓಬಾ ತ್ವಾಂ ಘೇವೂನಿ ಹೊ |
ಶುಂಭು – ನಿಶುಂಭಾದಿ ರಾಕ್ಷಸಾ ಕಿತಿ ಮಾಋಇಸಿ ರಣಿ ಹೋ |
ವಿಪ್ರ ರಾಮದಾಸಾ ಆಶ್ರಯ ದಿಧಲಾ ತವ ಚರಣಿ ಹೊ |
ಉದೋ ಬೋಲಾ ಅಂಬಾಬಾಯಿ ಮಾವುಲೀ ಚಾಹೊ || ೧
– ಹೇಳಿದವರು : ಶ್ರೀಮತಿ ಸುನಂದಾತಾಯಿ ಮಹೀಂದ್ರಕರ

ಆರಾಧ್ಯ ದೈವ:

ಭಾರತದ ಉದ್ದಗಲಕ್ಕೂ ಭಾವುಸಾರ ಕ್ಷತ್ರಿಯ ಸಮಾಜದಲ್ಲಿ ಶ್ರೀ ಆದಿಶಕ್ತಿಯೇ ಆರಾಧ್ಯ ದೈವ. ಇವರು ಹೆಣ್ಣು ದೇವತೆಗಳಾದ ಹಿಂಗುಲಾಂಬಿಕಾ, ಚಂದ್ರಲಾ ಪರಮೇಶ್ವರಿ, ಮುನಿರಾಬಾದ ಹುಲಿಗೆಮ್ಮ, ಸವದತ್ತಿ ಎಲ್ಲಮ್ಮ, ತುಳಜಾಪೂರ ಅಂಬಾಭವಾನಿ ಮತ್ತು ಗಂಡು ದೇವತೆಗಳಾದ ಜೇಜೋಡಿ ಖಂಡೋಲಾ ಮತ್ತು ವಿಠೋಬ ದೇವರನ್ನು ಪೂಜಿಸುತ್ತಾರೆ.

ಆದರೆ ಎಲ್ಲರೂ ಹಿಂಗುಲಾಂಬಿಕಾ ದೇವಿಯನ್ನು ತಮ್ಮ ಕುಲದೇವತೆ ಎಂದು ವಿಶೇಷವಾಗಿ ನಂಬಿ ಪೂಜಿಸಿ  ಭಕ್ತಿ ಸಲ್ಲಿಸುತ್ತಾರೆ. ಈ ದೇವಿಯ ಮೂಲ ಗುಡಿ ಪಾಕಿಸ್ತಾನದ ಬಲೂಚಿಸ್ಥಾನದ ಮಕ್ರಾನ್ ದಡದಲ್ಲಿ ಸಿಂಧೂ ನದಿಯ ಮುಖ ಪ್ರದೇಶದಿಂದ ಹನ್ನೆರಡು ಮೈಲುಗಳ ಅಂತರದಲ್ಲಿದೆ. ಉನ್ನತವಾದ ಬೆಟ್ಟದ ಕೆಳಗೆ ಹಿಂಗುಲಾಂಬ ನದಿಯು ಹರಿದಿದೆ. ಆ ನದಿಯ  ತೀರದಲ್ಲಿ ಹಿಂಗುಲಾಂಬಾ ದೇವಿಯ ಗುಡಿಯಿದೆ. ಗೋರಖನಾಥ ಪಂಥಕ್ಕೆ ಸೇರಿದ ಕಾನಘಾಟೆ ಯೋಗಿಗಳು ಯಾತ್ರಗೆಂದು ಇಲ್ಲಿಗೆ ಬರುತ್ತಾರೆ. ಶಾಕ್ತರಿಗೆ  ಬೇಕಾಗುವ ಬಿಳಿಯ ಮಣಿಗಳೂ ಇಲ್ಲಿಯೇ ದೊರೆಯುತ್ತವೆ. ಉನ್ನತವಾದ ಗುಡ್ಡಗಳ ಸೆರಗಿನಲ್ಲಿ ಹರಿಯುವ ಆ ನದಿಯ ಪಾತ್ರವು ಸುಮಾರು ಇನ್ನೂರು ಗಜದಷ್ಟು ಕಣಿವೆಯಲ್ಲಿ ಹರಿಯುವ ಈ ನದಿಯ ಸ್ಥಳಕ್ಕೆ ಅಘೋರ ‌ಎನ್ನುತ್ತಾರೆ. ಇಲ್ಲಿ ಪ್ರತಿಷ್ಠಾಪಿಸಿರುವ ಹಿಂಗುಲಾದೇವಿಯು ರಕ್ತವರ್ಣ ಭಯಂಕರವಾದ ಅಗ್ನಿದೇವತೆಯೇ ಇವಳೆಂಬ ನಂಬಿಕೆ ಮುಸಲ್ಮಾನರು ಇವಳನ್ನು ’ಬೇಬಿನಾನಿ’ ಎಂದು ಕರೆದರೆ ಹಿಂದೂಗಳು (ಭಾರತೀಯರು) ಕಾಳಿಪಾರ್ವತಿ ಮಾತಾ ಎಂದು ಕರೆಯುತ್ತಾರೆ. ಒಟ್ಟಾರೆ ಈ ಬೇಬಿನಾನಿಯ ಉತ್ಸವವನ್ನು ಗಂಗಾನದಿಯಿಂದ ಯುಪ್ರಟಿಸ್ ನದಿಯವರೆಗಿನ ಜನರು ಆಚರಿಸುತ್ತಾರೆ. ಬಲೂಚಿಸ್ಥಾನದಲ್ಲಿ ಇದು ಮಿಗಿಲಾದ ಯಾತ್ರಾಸ್ಥಳ. ಈ ದೇವಿಯು ಭಾರತದ ಅನೇಕ ಜಾತಿ ಕುಲಗಳ ಮನೆದೇವತೆ. ಇಲ್ಲಿ ಬರುವ ಯಾತ್ರಿಕರು ಕರಾಚಿಯಾನಿ, ಹಿಂಗುಲಾಜ ಮಾರ್ಗದಿಂದ ಮಕ್ರಾನ ದಡವನ್ನು ಹಿಡಿದು ಹೋಗುತ್ತಾರೆ. ಈ ದಾರಿಯ ಅಂತರವು ಒಂದುನೂರ ಐವತ್ತು ಮೈಲು, ದಾರಿ ಅತೀ ದುರ್ಗಮ ಕರಾಚಿಯಿಂದ ತಲುಪಲು ಇಪ್ಪತ್ನಾಲು ದಿವಸಗಳು. ಇಲ್ಲಿಗೆ ಹೋಗಬೇಕಾದರೆ ನಲವತ್ತು ಐವತ್ತು ಜನ  ಸೇರಿ ಗುಂಪುಗುಂಪಾಗಿ ಹೋಗುತ್ತಾರೆ. ಪ್ರತಿಯೊಂದು ಗುಂಪಿಗೂ ಒಬ್ಬ ಬ್ರಾಹ್ಮನ ಮಾರ್ಗದರ್ಶಿಯಾಗಿರುತ್ತಾನೆ. ಈ ಬ್ರಾಹ್ಮಣನಿಗೆ ’ಅಗುವಾ’ ಎಂದು ಹೆಸರು. ದೇವಿಯ ಸ್ಥಾನಕ್ಕೆ ತಲುಪುವುದರೊಳಗಾಗಿ ಹದಿನೈದು ಸ್ಥಳಗಳಲ್ಲಿ ನೈವೇದ್ಯ ಕೊಡಬೇಕಾಗುವುದು. ತಿರುಗಿ ಬರುವಾಗ ಕೋಟೇಶ್ವರದಲ್ಲಿ ಬಲ ಭುಜದ ಮೇಲೆ ತಪ್ತಮುದ್ರೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಉತ್ಸವದ ಸಮಯದಲ್ಲಿ ಇಲ್ಲಿ ಮೂರು ನಾಲ್ಕು ಫರ್ಲಾಂಗುಗಳವರೆಗೆ ರಕ್ತ ಚೆಲ್ಲಿ ನೆಲವೆಲ್ಲ ಕೆಂಪಗೆ ಆಗಿರುತ್ತದೆ.

ಈ ಹಿಂಗುಲಾಂಬಾ ದೇವಿಯೇ ಕಲಬುರಗಿ ಜಿಲ್ಲೆಯ ನಾಲವಾರ ಸಮೀಪದ ಸನ್ನತಿಯಲ್ಲಿ ನೆಲೆನಿಂತಿರುವ ಚಂದ್ರಲಾ ಪರಮೇಶ್ವರಿ ಎಂದೂ ಇವಳೇ ಚಾಮುಂಡಿ, ಬನಶಂಕರಿ, ತುಳಜಾಭವಾನಿ, ವರದೆ, ಕಲ್ಯಾಣಿ ಎಂದೂ ಎಲ್ಲ ರೂಪದ ಶಕ್ತಿ ದೇವತೆಯಾಗಿದ್ದಾಳೆ. ಪ್ರತಿ ವರ್ಷ ಆಶ್ವೀಜ ಶುದ್ಧ ಪ್ರತಿಪದೆಯಿಂದ ನವಮಿಯವರೆಗೆ ನವರಾತ್ರಿ ಉತ್ಸವವು ನಡೆಯುತ್ತದೆ. ಇದೊಂದು ಪವಿತ್ರ ಜಾಗೃತ ಯಾತ್ರಾಸ್ಥಳ ದೇಶದ ಮೂಲೆ ಮೂಲೆಯಿಂದ ಜನ ಉತ್ಸವಕ್ಕೆ ಬಂದು ಸೇರುತ್ತಾರೆ ಎನ್ನುವ ವಿಷಯವನ್ನು ಶ್ರೀ ಚಂದ್ರಲಾ ಪುರಾಣದಲ್ಲಿ ಕಾಣಬಹುದು.

ಪುರಾಣ ಪುಣ್ಯ ಕಥೆಗಳಲ್ಲಿ ಶ್ರೀ ಹಿಂಗುಲಾಂಬಿಕಾ

ಸಮಸ್ತ ಕ್ಷತ್ರಿಯರನ್ನು ನಿರ್ಮೂಲನೆ ಮಾಡಲು ಹೊರಟ ಪರಶುರಾಮನಿಂದ ಪ್ರಾಣಭಿಕ್ಷೆ ಪಡೆಯಲು ಭಾವಸಿಂಗ ಮತ್ತು ಸಾರಸಿಂಗ ಎಂಬ ಕ್ಷತ್ರಿಯ ರಾಜಕುಮಾರರು ಶ್ರೀ ಹಿಂಗುಲಾಂಬಿಕಾ ದೇವಿಯ ಮೊರೆ ಹೊಕ್ಕಾಗ ಶ್ರೀ ದೇವಿಯು ರಕ್ಷಿಸಿ ಆ ರಾಜಕುಮಾರರಿಗೆ ಇಂದಿನಿಂದ ನೀವು ಭಾವುಸಾರರೆಂದು ಪ್ರಸಿದ್ಧಿ ಹೊಂದಿ ಬಟ್ಟೆಗಳಿಗೆ ಬಣ್ಣ ಹಾಕುವ, ಬಟ್ಟೆ ಹೊಲಿಯುವ ಕಾರ್ಯ ಮಾಡಿರೆಂದು ಹರಸುತ್ತಾಳೆ.

ದಕ್ಷ ಯಜ್ಞ ಸಮಯದಲ್ಲಿ ಶಿವನಿಗಾದ ಅವಮಾನ ಸಹಿಸದ ಪಾರ್ವತಿ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ. ಶೋಕ ತಪ್ತನಾದ ಶಿವ ಸತಿಯ ಶರೀರವನ್ನು ಹೆಗಲ ಮೇಲೆ ಹೊತ್ತುಕೊಂಡು ಸುತ್ತುತ್ತಿರುತ್ತಾನೆ. ಸತಿಯ ಶವ ಸಂಸ್ಕಾರಕ್ಕೆ ಶಿವನ ಮನಸ್ಸು ಒಪ್ಪುವುದಿಲ್ಲ. ಶಿವನ ಈ ಅವಸ್ಥೆ ನೋಡಲಾರದೆ ಶ್ರೀ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಪಾರ್ವತಿಯ ಶರೀರವನ್ನು ೫೨ ಭಾಗಗಳಾಗಿ ಛೇದಿಸಿದ ಪಾರ್ವತಿಯು ೫೨ ಭಾಗಗಳು ಬಿದ್ದ ಸ್ಥಳಗಳಲ್ಲಿ ೫೨ ಶಕ್ತಿ ಪೀಠಗಳು ಉದ್ಭವವಾದುವು. ಶ್ರೀ ಪಾರ್ವತಿ ಶರೀರದ ಬ್ರಹ್ಮರಂದ್ರವು ಹಿಂಗುಲಾಜ ಪ್ರದೇಶದಲ್ಲಿ ಬಿದ್ದಿತು. ಇದೇ ಕಾರಣಕ್ಕಾಗಿ ಹಿಂಗುಲಾಜ, ಹಿಂಗಲಾಜ ಅಥವಾ ಹಿಂಗುಲಾಚ್ ಎಂಬ ಹೆಸರಿನಿಂದ ಸರ್ವಶಕ್ತಿ ಪೀಠಗಳಲ್ಲಿ ಪ್ರಥಮ ಸ್ಥಾನ ಪಡೆಯಿತು.

ಈಗಿನ ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತದ ದಡದಲ್ಲಿ ಸಿಂಧೂ ನದಿಯ ಮುಖ ಪ್ರದೇಶದಿಂದ ಹನ್ನೆರಡು ಮೈಲುಗಳ ಅಂತರದಲ್ಲಿ ಉತ್ತರ ಭಾಗದಲ್ಲಿ ಸ್ಥಿರವಾದ ಮುಖರಾಜ ಮತ್ತು ಲೂಸ್ ಪರ್ವತ ಶ್ರೇಣಿಗಳನ್ನು ವಿಂಗಡಿಸುವ ಜಾಗದಲ್ಲಿ ಹರಿಯುವ ಹಿಂಗುಲಾ ನದಿಯ ದಂಡೆಯಲ್ಲಿ ಕತಲಮಯವಾದ ಒಂದು ಗುಹೆಯಲ್ಲಿ ಶ್ರೀ ಹಿಂಗುಲಾಂಬಿಕಾ ದೇವಿಯ ಪೀಠವಿದೆ. ಅಲ್ಲಿ ಗೋಖನಾಥ್ ಪಂಥಕ್ಕೆ ಸೇರಿದ ಒಬ್ಬ ಭೈರವನಿದ್ದಾನೆ. ಅವನಿಗೆ ಭೀಮಲೋಚನನೆಂಬ ಹೆಸರು ಎಂದು ತಿಳಿದು ಬರುತ್ತದೆ. (ಪ್ರಜಾವಾಣಿ ೬.೮.೨೦೦೫)

ಇದಕ್ಕಿಂತಲೂ ಹೆಚ್ಚಿನ ವಿವರಗಳ ಬಗ್ಗೆ ಪದ್ಮಶ್ರೀ ಮುಝಫರ್ ಹುಸೇನ್ ಹೀಗೆ ವಿವರಿಸುತ್ತಾರೆ.