ಜಾತ್ರೆ ಉತ್ಸವಗಳಿಗೆ ನಾಟಕಗಳನ್ನು ಪ್ರಯೋಗಿಸುವವರು ತಿಂಗಳಾನುಗಟ್ಟಲೆ ತಾಲೀಮು ಮಾಡುತ್ತಾರೆ. ಅದಕ್ಕೆ ಹಾರ್ಮೋನಿಯಂ ಶಿಕ್ಷಕರು ನಾಟಕ ಮತ್ತು ಸಂಗೀತದ ನಿರ್ದೇಶನದ ಜವಾಬ್ದಾರಿ ಹೊತ್ತಿರುತ್ತಾರೆ. ಇಂಥವರನ್ನು ಮಾಸ್ತರ ಎಂತಲೂ ಗುರುತಿಸುತ್ತಾರೆ. ಕೆಲವು ಸಂದರ್ಭದಲ್ಲಿ ನಾಟಕಕಾರರೇ ತಮ್ಮ ನಾಟಕಗಳನ್ನು ಕಲಿಸಿ ಪ್ರಯೋಗಕ್ಕೆ ಅಳವಡಿಸುತ್ತಾರೆ. ನಾಟಕ ಪ್ರಯೋಗವು ಎರಡು, ಮೂರು ದಿವಸ ಇರುವ ಪೂರ್ವದಲ್ಲಿ ರಂಗತಾಲೀಮನ್ನು ಮಾಡುತ್ತಾರೆ. ರಂಗತಾಲೀಮು ಎಂದಾಕ್ಷಣ ಅದು ನಾಟಕ ಪ್ರಯೋಗದ ಪೂರ್ವ ಸಿದ್ಧತೆಯೆ ಆಗಿದೆ. ಹೀಗೆ ರಂಗತಾಲೀಮು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ಈ ರಂಗತಾಲೀಮಿನಲ್ಲಿ ಆದ ತಪ್ಪುಗಳನ್ನು ನಾಟಕ ಪ್ರಯೋಗಕ್ಕೆ ಮೊದಲು ತಿದ್ದಿಕೊಳ್ಳುವದು ಪ್ರಯೋಗದಲ್ಲಿ ಮತ್ತಷ್ಟು ಪರಿವರ್ತನೆ ಮಾಡಿಕೊಳ್ಳುವುದು. ಈ ಒಂದು ರಂಗ ತಾಲೀಮಕ್ಕೆ ಪ್ರೇಕ್ಷಕರು ನಾಟಕ ಪ್ರಯೋಗಕ್ಕೆ ಸೇರಿದಂತೆಯೇ ಸೇರುತ್ತಾರೆ. ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ನಾಟಕ ಪ್ರಯೋಗವಾಗುತ್ತಿದ್ದರೆ ರಂಗತಾಲೀಮನ್ನು ನೋಡಿ ಆನಂದಿಸಿದ ಪ್ರೇಕ್ಷಕರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿಕ್ಕೆ ಕಾರಣೀಭೂತರಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ರಂಗ ತಾಲೀಮನ್ನು ನೋಡಿದ ರಂಗಾಸಕ್ತರು ಜಾತ್ರೆಯ ಸಂದರ್ಭದಲ್ಲಿ ಪ್ರಯೋಗಗೊಳ್ಳುವ ನಾಟಕಗಳನ್ನು ನೋಡದೇಯೂ ಇರಬಹುದು. ಆದರೆ ಇಂಥ ಒಂದು ಪರಿಸರ ಗ್ರಾಮೀಣ ಮಟ್ಟದಲ್ಲಿ ಬೆಳೆದು ಬಂದದ್ದು ರಂಗಭೂಮಿಯ ಸ್ಪೂರ್ತಿಗೆ ಕಾರಣವೆನ್ನಬಹುದು. ಶ್ರೀ ರಾಮ ನಾಟ್ಯ ಸಂಘದಲ್ಲಿ ಭಸ್ಮೆಯವರು ರಚಿಸಿ ನಿರ್ದೇಶಿಸಿದ ನಾಟಕದ ರಂಗತಾಲೀಮು ವಿಜೃಂಭಣೆಯಿಂದ ಜರುಗಿತ್ತು. ಒಂದು ಪ್ರವೇಶದಲ್ಲಿ ಕಲಾವಿದ ಆಗಮಿಸಿ ನಿರ್ಗಮಿಸುವ ಸಂದರ್ಭ ಕಲಾವಿದ ತಪ್ಪು ಮಾಡಿದ ಆ ಸನ್ನಿವೇಶದಲ್ಲಿ ಭಸ್ಮೆಯವರು ಸಿಟ್ಟಿನಿಂದ ಬಂದು ಕಲಾವಿದನಿಗೆ ಕಪಾಳಕ್ಕೆ ಹೊಡೆದರು ಅವರಿಂದ ಬಡಿಸಿಕೊಂಡ ಕಲಾವಿದ ತನ್ನ ತಪ್ಪನ್ನು ನೆನಪಿಸಿಕೊಂಡ ಅ ಕಲಾವಿದ ಭಸ್ಮೆಯವರಿಗೆ ಯಾರು ಉತ್ತರವೂ ನೀಡದೆ ತಲೆ ತಗ್ಗಿಸಿದ ಆದರೆ ನಾಟಕ ನೋಡಲು ಕುಳಿತಿದ್ದ ಹಿರಿಯರು ತಕರಾರು ಮಾಡಿದರು. ರಂಗ ಪರದೆಯ ಮುಂದೆ ನಿಂತು ಹೊಡೆದದ್ದು ಸರಿಯೇ? ನೀವೂ ಏನೆ ಮಾರ್ಗದರ್ಶನ ನೀಡಿದರೂ ನಂತರ ನೀಡಿ ಈ ರೀತಿ ವರ್ತಿಸುವದು ಸರಿಯಲ್ಲ ಎಂಬುದು ಅವರವಾದ ಭಸ್ಮೆಯವರಿಗೆ ಅದನ್ನು ಸಹಿಸಲಾಗದೆ ಆ ರೀತಿ ವರ್ತಿಸಿದ್ದರು ಮತ್ತೊಂದು ರಸ್ತೆ ಪರದೆ ಬಿದ್ದ ಮೇಲೆ ಈ ಘಟನೆ ಜರುಗಿದ್ದರೆ ಅದು ಏನೂ ಅನಿಸುತ್ತಿರಲಿಲ್ಲ. ಭಸ್ಮೆಯವರೂ ಕೂಡಾ ಸಮಾಧಾನ ತಂದು ಕೊಂಡು ಸುಮ್ಮನಾದರು. ಮತ್ತೊಂದು ಮುಖ್ಯ ಸನ್ನಿವೇಶ ಸಂದರ್ಭದಲ್ಲಿ ಮನೆಯ ಪ್ಲಾಟಿನ ಸನ್ನಿವೇಶದಲ್ಲಿ ಹೊರಗಿನಿಂದ ಬರಬೇಕಾಗಿದ್ದ ನಾಯಕ ಒಳಗಿನಿಂದಲೇ ಪ್ರವೇಶ ಮಾಡಿದ. ಸನ್ನಿವೇಶ ಮುಗಿದ ಮೇಲೆ ಮನೆಯ ಒಳಗೆ ಪ್ರವೇಶಿಸುವ ಸಂದರ್ಭಕ್ಕೆ ಹೊರಗೆ ಹೊರಟ. ಭಸ್ಮೆಯವರಿಗೆ ತಾಲೀಮಿನಲ್ಲಿ ಎಷ್ಟು ತಿಳಿಸಿ ಹೇಳಿದರೂ ಕಲಾವಿದರು ತಪ್ಪು ಮಾಡುತ್ತಿರುವುದು ಸಹಿಸಿಕೊಳ್ಳಲಿಕ್ಕಾಗಿಲಿಲ್ಲ. ರಂಗನಿರ್ದೇಶನದಲ್ಲಿ ಭಸ್ಮೆಯವರು ಬಹಳ ಶಿಸ್ತಿನಿಂದ ವರ್ತಿಸುತ್ತಿದ್ದರು. ಕಲಾವಿದರು ತಪ್ಪು ಮಾಡಿದಾಗ ಕೈಯಲ್ಲಿರುವ ಬಡಿಗೆಯಿಂದ ಹೊಡೆದರೆ ಬಡಿಗೆ ಮೂರು ತುಂಡಾಗುತ್ತಿತ್ತು. ಅಭಿನಯದಲ್ಲಿ ನೈಜತೆ ಬರಬೇಕು. ಕಲಾವಿದರು ಆ ಪಾತ್ರವೇ ತಾವಾಗಿ ಅಭಿನಯಿಸಬೇಕು. ಅವರಲ್ಲಿ ತನ್ಮಯತೆ ಮೂಡಿ ಬರಬೇಕು. ಆ ನಾಟಕಕ್ಕೆ ಸಂಬಂಧಿಸಿದಂತೆ ರಂಗ ಪರದೆಗಳು ದೃಶ್ಯದ ಪರಿಕರಗಳು ಸಿದ್ದವಿರಬೇಕು, ಯಾವ ತೊಂದರೆಯೂ ಆಗಬಾರದು. ಒಮ್ಮೆ ಅಂಕಪರದೆ ಸರಿದ ಮೇಲೆ ನಾಟಕ ಯಶಸ್ವಿಯಾಗಿ ಪ್ರಯೋಗಗೊಂಡು ಪ್ರೇಕ್ಷಕರಲ್ಲಿ ಬೆರಗು ಹುಟ್ಟಿಸುವಂತಿರಬೇಕು. ಎಂಬುದು ಅವರ ಅಭಿಲಾಷೆ. ಶ್ರೇಷ್ಠ ನಾಟಕಕಾರರಾದ ಭಸ್ಮೆಯವರಿಗೆ ಗ್ರಾಮೀಣ ಪರಿಸರದಲ್ಲಿ ಸಾಕಷ್ಟು ಕಲಾವಿದರನ್ನು ನಿರ್ಮಾಣ ಮಾಡಿದರು. ಅವರಿಗೆ ರಂಗಭೂಮಿಯ ಪ್ರಜ್ಞೆ ತುಂಬಿದರು. ರಂಗ ತಾಲೀಮಿನ ಸಂದರ್ಭದಲ್ಲಿ ಕಲಾವಿದರು ಮತ್ತು ಭಸ್ಮೆಯವರ ನಡುವೆ ವಾಗ್ವಾದ ಬೆಳೆದು ತಮ್ಮ ಹಸ್ತಪ್ರತಿ ನಾಟಕವನ್ನು ಹರಿದು ಹಾಕಿ ಹೊರಟು ಹೋಗಿದ್ದಾರೆ. ಮುಂದೆ ಎರಡೇ ದಿನದಲ್ಲಿ ನಾಟಕವಿರುವುದರಿಂದ ಮತ್ತೆ ಹಗಲುರಾತ್ರಿ ಕುಳಿತು ನಾತಕದ ಹಸ್ತಪ್ರತಿಯನ್ನು ಸಿದ್ಧಪಡಿಸಿದ ಸಂದರ್ಭವನ್ನು ಮರೆಯುವ ಹಾಗಿಲ್ಲ.

ರಂಗ ಮಂದಿರದ ವಿವರ

ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯ ಕಂಪನಿಗಳು ನಾಟಕಗಳನ್ನು ಪ್ರಯೋಗಿಸುವ ಸಂದರ್ಭದಲ್ಲಿ ತಮ್ಮ ರಂಗಮಂದಿರದ ವಿನ್ಯಾಸವನ್ನು ತಯಾರಿಸಿ ಕೊಳ್ಳುತ್ತಿದ್ದರು.

೦೧. ಒಟ್ಟು ರಂಗಮಂದಿರ ೧೦೦ x ೫೦ ಅಡಿ
೦೨. ನೇಪಥ್ಯ ಹಾಗೂ ಡ್ರೆಸ್ ರೂಂ ೫೦ x ೧೦ ಅಡಿ
೦೩. ರಂಗ ೩ ೫ x ೨೨ ಅಡಿ
೦೪. ವಾದ್ಯಗೋಷ್ಠಿ ೧೫ x ೫ ಅಡಿ
೦೫. ಕುರ್ಚಿಗುಂಡಿ ೨ ೫ x ೪೦ ಅಡಿ
೦೬. ಬಾಜೂ ಕಟ್ಟಿ – ಅ ೨೫ x ೫ ಅಡಿ
೦೭. ಬಾಜೂ ಕಟ್ಟಿ – ಬ ೨೦ x ೫ ಅಡಿ
೦೮. ಚಾಪೆ ಪುರುಷರಿಗೆ ೩೫ x ೫೦ ಅಡಿ
೦೯. ಚಾಪೆ ಮುಂಭಾಗ. ವೇಶ್ಯಾ ಸ್ತ್ರೀಯರಿಗೆ ೧೫ x ೬ ಅಡಿ
೧೦. ಚಾಪೆ ಹಿಂಭಾಗ. ಕುಲೀನ ಸ್ತ್ರೀಯರಿಗೆ ೧೫ x ೬ ಅಡಿ
೧೧. ನೆಲ ಪುರುಷರಿಗೆ ೩೫ x ೫೫ ಅಡಿ
೧೨. ನೆಲ ಸ್ತ್ರೀಯರಿಗೆ ೩೫ x ೧೩ ಅಡಿ

ರಂಗಮಂದಿರದ ವಿವರಗಳನ್ನು ಗಮನಿಸಿದಾಗ

೧. ಪ್ರಮುಖ ಪ್ರವೇಶ ದ್ವಾರ

೨. ನೆಲಕ್ಕೆ ಹೋಗುವ ದ್ವಾರ

೩. ಚಾಪೆಗೆ ಹೋಗುವ ದ್ವಾರ

೪. ನೇಪಥ್ಯಕ್ಕೆ ಹೋಗುವ ದ್ವಾರ

೫. ಪುರುಷರ ಶೌಚಾಲಯ

೬. ಸ್ತ್ರೀಯರ ಶೌಚಾಲಯ

೭. ನೆಲ-ಮಹಿಳೆಯರೆಗಾಗಿ

೮. ನೆಲ-ಪುರುಷರಿಗಾಗಿ

೯. ಚಾಪೆ-ಕುಲೀನ ಸ್ತ್ರೀಯರಿಗಾಗಿ

೧೦. ಚಾಪೆ-ಕುಲೀನ ಸ್ತ್ರೀಯರಿಗಾಗಿ

೧೧. ಚಾಪೆ-ವೇಶ್ಯೆಯರಿಗಾಗಿ

೧೨. ಬಾಜೂ ಕಟ್ಟೆ-ಅ

೧೩. ಬಾಜೂ ಕಟ್ಟೆ-ಬ

೧೪. ಕುರ್ಚಿಗುಂಡಿ

೧೫. ವಾದ್ಯಗೋಷ್ಠಿ

೧೬. ಬೆಳಕು ನಿಯಂತ್ರಣಕೋಣೆ

೧೭. ರಂಗಮಂಟಪ

೧೮. ನೇಪಥ್ಯ (ಬಣ್ಣದಮನೆ)

೧೯. ಡ್ರೆಸ್ ರೂಂ.

೨೦. ರಂಗ ಚೌಕಟ್ಟು (ಅಂಕ ಪರದೆ)

೨೧. ರಂಗಕ್ಕೆ ಪ್ರವೇಶ ದ್ವಾರ

೨೨. ಟಿಕೆಟ್ ಕಿಟಕಿ-೧

೨೩. ಟಿಕೆಟ್ ಕಿಟಕಿ-೨

ಹೀಗೆ ಅವರದೇ ಆದ ತಾಂತ್ರಿಕ ಹಾಗೂ ವಾಸ್ತು ವಿನ್ಯಾಸವಿರುವುದನ್ನು ಗಮನಿಸಬೇಕು. ಆಟದ ಹಾಗೂ ಜಾಗದ ಅಗತ್ಯ ದಂತೆ ಇದನ್ನು ನಿರ್ಮಿಸಿಕೊಳ್ಳುತ್ತಿದ್ದರು.