ಹೆಸರು: ಸರೋಜ
ಊರು: ಮೈಸೂರು

 

ಪ್ರಶ್ನೆ: ನಮಸ್ತೆ ಡಾಕ್ಟರ್ ರಿಗೆ, ವಯಸ್ಸು ೩೯ ವರ್ಷ. ನನ್ನ ಎತ್ತರ . ಅಡಿ, ತೂಕ ೫೪ ಕೆ.ಜಿ. ರಕ್ತದ ಗುಂಪು: ‘O’. Hb: 9.1gm, Sugar: Nil, BP-Nil.

ನನಗೆ ಗರ್ಭಕೋಶದಲ್ಲಿ ತೊಂದರೆ ಇದೆ. ಅದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಹೇಳಿದ್ದಾರೆ. ಶಸ್ತ್ರ ಮಾಡಿಸಿಕೊಳ್ಳಲು ನನಗಿರುವ ರಕ್ತ ಸಾಕಾಗುವುದಿಲ್ಲವೇ? ನನಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯೇ? ಇಲ್ಲವೇ? ದಯವಿಟ್ಟು ಸಲಹೆ ನೀಡಿ. ರಕ್ತ ಹೀನತೆ ಎಂದರೇನು. ಅದು ಹೇಗೆ ಉಂಟಾಗುತ್ತದೆ ಮತ್ತು ಅದನ್ನು ಪರಿಹರಿಸಿಕೊಳ್ಳಲು ಸುಲಭ ಉಪಾಯಗಳನ್ನು ತಿಳಿಸಿ ಕೊಡಿ.

ಉತ್ತರ: ರಕ್ತ ಹೀನತೆ ಎಂದರೆ, ಕೆಂಪು ರಕ್ತಕಣಗಳು ಕಡಿಮೆ ಇದ್ದು ಆ ಕಣಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿರುವ ಸ್ಥಿತಿ. ಇದು ದೇಹಕ್ಕೆ ಅವಶ್ಯಕತೆ ಇರುವುದಕಿಂತ ಕಡಿಮೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ.

ಸಾಮಾನ್ಯವಾಗಿ ಹಿಮೋಗ್ಲೋಬಿನ್ ಪ್ರಮಾಣ ಮಹಿಳೆಯರಲ್ಲಿ ಈ ಕೆಳಕಂಡಂತೆ ಇರಬೇಕಾಗುತ್ತದೆ.

ಸಾಮಾನ್ಯ: ೧೨.೧ ರಿಂದ ೧೫.೧ ಗ್ರಾಂ

ರಕ್ತಹೀನತೆ ಇದ್ದರೆ: ೮ ರಿಂದ ೧೨ ಗ್ರಾಂ ಇರುತ್ತದೆ.

ತೀವ್ರ ರಕ್ತಹೀನತೆ: ೮ ಗ್ರಾಂ ಕ್ಕಿಂತ ಕಡಿಮೆ ಇರುತ್ತದೆ.

ರಕ್ತಹೀನತೆ ಉಂಟಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

. ರಕ್ತ ನಷ್ಟ: ಹೊರಗಿನ ಗಾಯಗಳಿಂದ ಅಥವಾ ಜಠರ, ಕರುಳು, ಪೆಟ್ಟು ಇತ್ಯಾದಿ ಒಳ ಅಂಗಾಂಗಗಳಿಂದ ರಕ್ತ ಹೊರಹೋಗುವುದರಿಂದ ರಕ್ತಹೀನತೆ ಬರಬಹುದು.

. ರಕ್ತ ಉತ್ಪತ್ತಿ ಕಡಿಮೆಯಾಗುವುದು: ರಕ್ತಕಣಗಳಿಗೆ ಬೇಕಾದ ವಸ್ತುಗಳೆಂದರೆ, ರಕ್ತಕಣಗಳ ಉತ್ಪತ್ತಿಗೆ ಬೇಕಾಗುವಂತಹ ಅಂಶಗಳ ಕೊರತೆಯಿಂದ ಮತ್ತು ಮುಳೆಗಳಲ್ಲಿರುವ ಸಾರದ ನಿಷ್ಕ್ರಿಯೆಯಿಂದಲೂ ರಕ್ತಹೀನತೆ ಕಂಡುಬರಬಹುದು.

. ಹೆಚ್ಚಿನ ಪ್ರಮಾನದಲ್ಲಿ ರಕ್ತಕಣಗಳು ಛಿದ್ರಗೊಂಡು ನಾಶವಾಗುವುದು: ಕಬ್ಬಿಣಾಂಶದ ಕೊರತೆಯಿಂದ, ಸಾಮಾನ್ಯವಾಗಿ ಋತುಸ್ರಾವವಾಗುತ್ತಿರುವ ಹೆಣ್ಣು ಮಕ್ಕಳಲ್ಲಿ, ಸ್ತ್ರಿಯರಲ್ಲಿ ಹೆಚ್ಚಿನ ರಕ್ತಸ್ರಾವದಿಂದಾಗಿ, ಗರ್ಭಪಾತ, ಪುನಃ, ಪುನಃ, ಗರ್ಭಧರಿಸುವುದರಿಂದ, ಅವಳಿ ಮಕ್ಕಳು ಜನಿಸುವುದರಿಂದ, ಮುಲವ್ಯಾಧಿ ಹಾಗೂ ಲ್ಯುಕೇಮಿಯಾ ಖಾಯಿಲೆಗಳಿಂದ, ಸೋಂಕು ಮುಂತಾದವುಗಳಿಂದ ರಕ್ತಹೀನತೆ ಕಂಡುಬರುತ್ತದೆ.

ರಕ್ತಹೀನತೆ ಉಂಟಾಗದಂತೆ ನೋಡಿಕೊಳ್ಳಲು ಕೆಲವು ಸುಲಭ ಉಪಾಯಗಳಿವೆ ಅವುಗಳೆಂದರೆ,

೧. ಪೌಷ್ಠಿಕ ಆಹಾರವನ್ನು ಸೇವಿಸಬೇಕು, ಅದರಲ್ಲೂ ಕಬ್ಬಿಣಾಂಶ ಹೆಚ್ಚಿಗೆ ಇರುವ, ರಕ್ತ ವರ್ಧಕ ಆಹಾರವನ್ನು ಸೇವಿಸಬೇಕು. ಹಣ್ಣು ಹಂಪಲುಗಳನ್ನು ಹಾಗೂ ಹಸಿ ತರಕಾರಿಗಳನ್ನು ಅಧಿಕವಾಗಿ ಸೇವಿಸಬೇಕು.

೨. ತರಕಾರಿಗಳನ್ನು ಹೆಚ್ಚಾಗಿ ಬೇಯಿಸಬಾರದು.

೩. ಗರ್ಭಿಣಿ ಸ್ತ್ರಿಯರಿಗೆ ಕಬ್ಬಿಣ ಮತ್ತು ಫೋಲಿಕ್‌ಆಸಿಡ್ ಮಾತ್ರೆಗಳನ್ನು ನೀಡುವುದು.

೪. ಗಾಯಗಳು, ಹುಣ್ಣುಗಳಾಗದಂತೆ ಎಚ್ಚರವಹಿಸುವುದು.

೫. ಋತುಕ್ರಿಯೆಯ ಅವಧಿಯಲ್ಲಿ ಹೆಚ್ಚಿನ ರಕ್ತಸ್ರಾವವಾಗದಂತೆ ನೋಡಿಕೊಳ್ಳಬೇಕು.