ಭಾಮಿನಿ
ವರಮಹೋತ್ಸವದಿಂದ ರನ್ನದ |
ಮೆರೆವತೊಟ್ಟಿಲೊಳಿಟ್ಟು ರೇವತಿ |
ಹರಿಹಲಾಯುಧ ದೇವಕಿಯೆ ಮೊದಲಾದ ನಾರಿಯರೂ ||
ಪುರದಮುಪ್ಪಿನ ಸತಿಯರೆಲ್ಲರು |
ಪರಿಪರಿಯ ಲಾಲಿಸುವ ಸಂತಸ |
ವೆರದು ನೋಡುತ ಮೋಹವಿಡಿತುವಳಿರ್ದನೊಲವಿನಲೀ ||೨೩೨||
ವಾರ್ಧಕ
ಧರಣಿಪತಿ ಕೇಳಿತ್ತ ಶಂಭರಾಸುರನೆಂಬ |
ದುರುಳ ಪೂರ್ವದಲಿ ಪರಶಿವನಲ್ಲಿ ತಪಗೈದು |
ನಿರುತ ಮಹಾಶೌರ್ಯಮಂಪಡೆದು ತನ್ನೊಡನೆ ಗರಡಿಯೊಳು ಸಾಧಕವನೂ ||
ಅರಿತನೆಲೆ ಜಾಣನಿಂದವಸಾನಬರಲೆಂದು |
ವರವಿತ್ತು ಮಣಿಪುರವನಾಳುತ್ತ ಗರ್ವದಿಂಮುನಿಪದಿರಲೊಂದುದಿನ
ನಾರದಂ ನಡೆತಂದು ಪೇಳ್ದನವನೊಡನೆ ಇಂತು || ||೨೩೩||
ರಾಗ ಸಾಂಗತ್ಯ ರೂಪಕತಾಳ
ಭರದಿ ಭೂಮಿಯ ಭಾರ | ಕಳೆಯಲೋಸುಗ ತನ್ನ | ತರಳೆಯಾ ಗಂಟಿಕ್ಕುವೆನೆಂದೂ ||
ಕರದಿಕಂಡದಲಕ್ಷಮಾಲೆಯ ಧರಿಸಿ ಶ್ರೀ | ಹರಿನಾರಾಯಣ ಕೃಷ್ಣ ಯೆನುತಾ ||೨೩೪||
ತುಳಸಿಗೋಪಿಚಂದನ ಕಾವಿ ವಸ್ತ್ರವ | ನಳವಟ್ಟು ವೀಣನಂಗದಲೀ ||
ಇಳೆಗೆ ಮಾರ್ತಾಂಡನೆಳ್ತರು ವಂತೆ ಬಂದು ನಿಂ | ದೊಲಿದಾ ತೇಜೊಸ್ಪುಂಜನಾಗಿ ||೨೩೫||
ನಾರದ ನೀಕ್ಷಿಸಿಶಂಭರನೆದ್ದು ಪಾ | ದಾರವಿಂದಕೆ ಕೈಯ್ಯಾಮುಗಿದೂ ||
ಚಾರುಸಿಂಹಾಸನವೇರಿಸಿ ದಿವ್ಯವಿಚಾರವ ಗೈವುತಿಂತೆಂದಾ ||೨೩೬||
ಚರಣಾಬ್ಜದರುಶನದಿಂದೆರಗುತ್ತರೋ | ತ್ತರಕಾರ್ಯವೆಂದು ತೋರುತಿಹೆ ||
ಬರಿದೆಚಿತ್ತೈಸುವರಲ್ಲ ನೀವೆನಲು ಶಂ | ಭರನೊಳಿಂತೆಂದನು ಮುನಿಪ ||೩೨೭||
ರಾಗ ಕೇತಾರಗೌಳ ಅಷ್ಟತಾಳ
ಪರಿತೋಷವಾಯ್ತು ಕೇಳ್ ಖಳರಾಯ ಬಹಳ ಸ | ತ್ಕರಿಸಿದೆ ಪ್ರೀತಿಯಿಂದಾ |
ಸುರನರೋರಗರಲ್ಲಿ ನಿನ್ನ ಸಂಪತ್ತಿಗೆ | ಸರಿಗಾಣೆ ಬಿಡುಶಾಭಾಸಯ್ಯಾ ||೨೩೮||
ಆದರಿನ್ನೊಂದುಂಟು ಪೇಳ್ವೆಯೇಕಾಂತದಿ | ಭೇದವಿಲ್ಲದೆ ಗ್ರಹಿಸು ||
ಸಾಧಿಸಿದರೆ ಮುಂದೆ ಕೆಲಬಹುದೀಗನೀ | ವಾದಿಸಬೇಡವೈಯ್ಯಾ ||೨೩೯||
ಬಟ್ಟಿಸಿಕ್ಕಿದರೆ ಮೊದಲೆ ಪೇಳುವನಲ್ಲಾ | ಗುಟ್ಟಿನ ಕಾರ್ಯವಿದು ||
ಗುಟ್ಟಿನೊಳ್ ಮಣಿದು ಕೂಗಿದರೆ ಶೀಘ್ರದಿಂದಾ | ಕೆಟ್ಟು ಪೋಗುವದು ಸಿದ್ದಾ ||೨೪೦||
ಚಿತ್ತವಿಟ್ಟಿದನೀ ಲಾಲಿಸು ಪೋಗುವ | ಹೊತ್ತಾದುದಿಲ್ಲೆಗೈದು |
ಮತ್ತೇನಾಗದೆ ನೋಡೆಚ್ಚರಿಸಿರು ನಿನಗೊಂದು | ಮೃತ್ಯು ಬಂದೊದಗಿಹುದೂ ||೨೪೧||
ಮುರಹರನರ್ಧಾಂಗಿ ರುಕ್ಮಿಣಿಯಲಿ ಪಂಚ | ಶರನುದಿಸಿಹನು ಕೇಳೈ ||
ಸ್ಮರ ನಿನ್ನ ವೈರಿಯೆಂಬುದ ನೀನು ಬಲ್ಲೆಯಾ | ಮರೆವುದುಚಿತವಲ್ಲವೈ ||೨೪೨||
ಉಗುರಿಂದಾಚಿಕುಟವ ತಳಿರೆಗೆ ಖಡ್ಗವಾ | ತೆಗೆದು ಕೊಂಬುದುಲೇಸಲ್ಲಾ
ಪಗೆವಯರಿರುಣ ರೋಗಗಳನು ಕಂಡಾದಿಯೊಳ್ | ಮುಗಿಸುವದತಿ ಸುಲಭಾ ||೨೪೩||
ನಾನೆ ಯತ್ನದಿ ಪೋಗಿ ಶಿಶುವ ತಂದೀಕ್ಷಣ | ಸೂನು ಯೆನ್ನಾ ಬೇಗದಿ |
ಹಾನಿಯಗೈದರೆ ಮುಂದೆ ಕಂಟಕ ಹೋಯಿತು | ಮಾನಿಸಬೇಡವೈಯಾ ||೨೪೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತೊರೆದ ನುಡಿಕೇಳಿ ಖಳ ತ | ನ್ನಂತರಂಗದಿ ನಂಬಿ ಧಿಟವೆ |
ತಾಂತವಕದಿಂ ಬಂದು ಮನಸಿನೊಳ್ | ಚಿಂತೆಗೊಳುತಾ ||೨೪೫||
ಮರೆತು ಮಲಗಿಹ ಶಿಶುವನೆಬ್ಬಿಸಿ | ಭರದಿ ಪಾಲೆರದಂತೆ ನೀ ಬಂ
ದೊರದರೀ ವಾರ್ತೆಯನು ಕೇಳ್ವುದು ಮರೆವುದುಂಟೆ ||೨೪೬||
ಉಮೇರಮೆಯರಾಸ್ಥಾನವಾಗಲಿರೆ ನಿಮಿಷದಲಿ ನಾಪೊಕ್ಕು ತಂದೀ
ಕ್ರಮವ ನಡಸದ ಬಳಿಕ ಶಂಭರ ಪರಾ | ಕ್ರಮಿಯೆ ಜಗದೀ ||೨೪೭||
ಯೆಂದು ನಾರದ ಮುನಿಯ ಬೀಳ್ಕೊ | ಟ್ಟೊಂದುಚಿತ್ತದಿ ಯೋಚಿಸುತ ಖತಿ |
ಯಿಂದ ತದ್ವಾರಕಿಗೆ ಪೊರಟೈ | ತಂದ ದಿತಿಜ ||೨೪೮||
ಮಾಯದಲಿ ಮಲಗಿರುವ ಶಿಶುವನು | ನೋಯಿಸದೆ ನು
ಶಿಯಂತೆ ಕರದೊಳು ಕಾಯಜನ ಕೊಂಡೊಯ್ದನಾ ಖಳ | ರಾಯನಂದೂ ||೨೪೯||
ಭಾಮಿನಿ
ಬರಬರುತ್ತಲಿ ಶಿಶುವನೋಡುತ |
ತರಳ ತನ್ನಯ ವೈರಿಯೆಂಬುದ |
ದುರುಳತಾ ನಾರದನ ನುಡಿ ಪುಸಿಯೆಂದು ನಿಶ್ಚಯಿಸಿ ||
ಬರಿದೆನಾ ಶಿಶುಹತ್ಯವಂಗೀ |
ಕರಿಸಲ್ಯಾತಕೆಯೆಂದು ಶಂಭರ |
ಶರಧಿಯೊಳು ಬಿಸುಟಾಗ ಪೋಗುತ್ತೀರ್ದ ಗರ್ವದಲೀ ||೨೫೦||
ಕಂದ
ಇತ್ತಲು ದ್ವಾರಕಿಯೊಳಗಾ |
ಚಿತ್ತಜನಯ್ಯನ ಶಿಶು ತೊಟ್ಟಿಲೊಳ್ ಕಾಣದಿರಲು |
ಅತ್ಯಂತ ದುಗುಡದಿ ಸತಿಯ
ರ್ಮುತ್ತುತ ಈಕ್ಷಿಸದೆಲ್ಲರತಿ ಕವುತಕ ವಿಚಿತ್ರಂ || ||೨೫೧||
ರಾಗ ಕಾಂಭೋಜಿ ಅಷ್ಟತಾಳ
ಏನಿದೇನಾಶ್ಚರ್ಯಮಗುವಿಲ್ಲ ತೊಟ್ಟಿಲೊಳ್ | ನೋಡಿ ನೋಡಿ ||
ನಾನೀಗ ಪಾಲ್ಗೊಟ್ಟು ಬಾಗಿಡಿ ಬಂದೆದೆ | ನೋಡಿ ನೋಡಿ ||
ಈ ನಮ್ಮ ಕೋಣೆಗೆ ಬರುವವರ್ಯಾರೆಂದು ಬೇಗ | ನೋಡಿ ನೋಡಿ ||
ಮವುನದಿ ಮರನಂತೆ ನಿಲುವದ್ಯಾತಗೆ ಬೇಗಾ | ನೋಡಿ ನೋಡಿ ||೨೫೨||
ಅರೆಕ್ಷಣವಿಲ್ಲ ತೊಟ್ಟಿಲ ತೂಗಿನಾ ಬಂದು | ಯೇನಿರವ್ವಾ |
ಸರಸದೊಳಗೆ ಕಣ್ದೆರದು ಆಡುತಲಿರ್ದ | ಯೇನಿರವ್ವಾ ||
ಪುರುಷನ ಬಿಡಿಸಿ ಬರುವೆನೆಂದು ಮನೆಗೈಯದೆ | ಯೇನಿರವ್ವಾ |
ತರುಣಿಗರುತುವಾಗಿ ಇಂದಿಲ್ಲಿ ಬರಲಿಲ್ಲಾ | ಯೇನಿರವ್ವಾ ||೨೫೩||
ಪಗಲಿರುಳಲಿ ಕಾದಿದ್ದವರಾದರು | ಕಂಡಿರೇನೈ |
ಮಗುವುಮಂಗಳಮಾಯವಾಗುವದುಂಟೆ ಕೇಳ್ | ಕಡಿರೇನೈ ||
ಬಗೆಬಗೆಯಲಿ ಸರ್ವರಕೂಡೆ ಯೆಂಬುವೋಲ್ | ಕಂಡಿರೇನೈ |
ಜಗದೊಡೆಯನ ಸನ್ಮೊದ ಸುಕುಮಾರನ | ಕಂಡಿರೇನೈ ||೨೫೪||
ಭಾಮಿನಿ
ಇನಿತು ಗೋಳಿಡುತಿರುವ ಯದು ಪ
ಟ್ಟಣದಿ ಮಕ್ಕಳ ಪೆತ್ತ ಸತಿಯರು
ಮನೆ ಮನೆಯಪೊಕ್ಕಲ್ಲಿ ಕಾಣದೆ ಶಿಶುವನೀಕ್ಷಿಸುತಾ ||
ಮನದೊಳಡರಿಗೊಳುತ್ತ ಸರ್ವರು
ಘನತರದ ಚಿಂತೆಯನು ತಾಳ್ದಿರ |
ಲನಿತರೊಳೆದು:ಖಿಸಿದಳಾ ರುಕ್ಮಿಣಿಯು ಬಹು ವಿಧದೀ ||೨೫೫||
ರಾಗ ಸಂಗೀತ ಏಕತಾಳ
ಶಿಶುವೆಲ್ಲಿ ಪೋದುದವ್ವಾ | ಎನ್ನಂತ ಪಾಪಿ | ವಸುಧೆಯೊಳಿಹರೇನವ್ವಾ |
ಬಸುರಾದುದ್ಯಾತಕಪ್ವಾ | ಈ ಜನ್ಮದಿ ಜೀ | ವಿಸುವದಿನ್ನೆನು ತಯ್ಯಯ್ಯೊ ||೨೫೬||
ಅರ್ತಿಯೊಳ್ ನಲಿನಲಿದು | ಮುದ್ದಿಸಲಿಲ್ಲಾ | ಶಕ್ತಿಯೊಳಿಂತಾದುದೆ ||
ಕೃತ್ತಿವಾಸನ ನುಡಿಯು | ಕಪಟಸಿದ್ದಾ | ಚಿತ್ತ ಜನಕವೈರಿಯೂ ||೨೫೭||
ಶಿವನೇನಾ ಪೇಳಿದನೊ | ನಮ್ಮನೆಯ | ಭವನೊಡನೆಂದುದರೊ |
ಅವರವರೇನಬಲ್ಲರು | ನಾ ಬರಿದೆ | ಹೆತ್ತವನ ಇನ್ನಾರೊದರೋ ||೨೫೮||
ಭಾಮಿನಿ
ಅಳಲುತಳಲುತ ದುಃಖಿಸುತ ಈ |
ಲಲನೆಯನು ಕಾಣುತ್ತ ದೇವಕಿ |
ಹಲಧರನು ಹರಿಮುಖ್ಯ ಗೋಪಾಂಗನೆಯರೈತಂದೂ |
ಹಲವು ಚಿತ್ರವಿಚಿತ್ರ ಸನ್ಮತ |
ದಲಿ ವಡಂಬಡಿಸಿದರು ಮನಸಿನ |
ಕಲಕು ನಿಲ್ಲದೆ ಮರಳಿ ಹಲುಬಿದಳಧಿಕ ಚಿಂತೆಯಲೀ ||೨೫೯||
ರಾಗ ನಿಲಾಂಬರಿ ಆದಿತಾಳ
ಎಲ್ಲಿರುವೆ ಯೆಲೊ ಕಂದಾ | ಯೇನಾದುದೈ ಯಲೆ ಕಂದಾ |
ಅಲ್ಲಲ್ಲಿ ಪೋಗುವದ್ಯಾಕೆ | ಆಗದು ಕೇಳ್ ಜೋಕೆ ||೨೬೦||
ಕುಣಿದಾಡುತ ಬಾರೊ | ಕರುಣದಿ ನೀ ಮೊಗದೋರೊ |
ಸೆಣಸುವದ್ಯಾತಕೆನ್ನೊಡನೆ | ಚಿನ್ನ ಮೋಹದ ಮಗನೇ ||೨೬೧||
ತೊಟ್ಟಿಲ ತೂಗುವೆ ಮಗುವೆ ಬಾರೀಕ್ಷಣ
ತಟ್ಟನೇ ನೀಬಂದೆನ್ನ | ತೊಡೆಯೊಳು ಮಂಡಿಸು ಚಿಣ್ಣಾ ||೨೬೨||
ಕಂದ ಪದ್ಯ
ಉರುತರ ಬೆದದೊಳಿರಲಾ |
ಗರುಡಧ್ವಜನರಿತುಯಿಪರಿಯ ಕರುಣವೆ ||
ತ್ತು ರುಕ್ಮಿಣಿಯೆಡೆಗೊಂಪರಿ ತಂದತಿ |
ಪೂರ್ಣತ್ಕರುಣದಿಂ ವಡಂಬಿಡಿಸಿದನಾಗ ಬಹುವಿಧದಿ ||೨೬೩||
ರಾಗ ಸಾರಂಗ ರೂಪಕತಾಳ
ಮರಿದುಂಬೆ ಗುರುಳೆಯೇನೆಂಬೆ | ನಾನೆಂಬೆ | ಮರಿದುಂಬೆಗುರುಳೆ ಏನೆಂಬೆ || ಪ ||
ತರುಣಿ ಚಂದ್ರಮರು ಸಂಚರಿಸದೆನಿಂದರು | ಹರಪೇಳ್ದ ನುಡಿ ಹುಸಿಬಾರದು ನೀನರಿಯೆ ||೨೬೪||
ಚಿಂತೆಯ ಬಿಡುಚದುರೆ | ನೀನೇನ ಬಲ್ಲೆ | ರಿಂತಿತ್ತ ಮಗನಲ್ಲಾವೇ |
ನಿಂತುನಿಂತಲ್ಲಿಗೆ | ಭ್ರಾಂತಿಯೊಳ್ ಕುಣಿವಂತೆ | ಮಂತರಿಸುವಳಲ್ಲಾಗಂತರವಲ್ಲಾ ||೨೬೫||
ಒಲ್ಲದಯವನ ಸ್ಮರಾ | ತಮ್ಮೊಳು ರತಿಯಲ್ಲಿ ಮುನಿದು ಜನರ |
ಬಿಲ್ಲ ತೋರಿಕ್ಷಣದಲಿ ವಲ್ಲಿಸುವಂತ ಫುಲ್ಲಾಧರೆಗೆ ಮೋಸಾವೆಲ್ಲಿ ಮಲ್ಲಿಗೆ ಗಂದಿ ||೨೬೬||
ಸರಸಿಜಾಕ್ಷಿಯರೊಡನೆ | ಮುಂದಾಗುವ | ದೊರೆಯಲ್ಯಾತಕೆ ಸುಮ್ಮನೇ
ತರುಣಿ ನಿನ್ನಾಣೆ | ಪೂಶರನೆಲ್ಲಿದ್ದರೂ ತಂದು | ಕರದುಕೊಡುವೆ ಸ್ಮರನರ ಗಿಣಿ ಹರುಷದಿ ||೨೬೭||
ಭಾಮಿನಿ
ಇನಿತು ನಾನಾ ವಿಧದಿ ನಂಬಿಸಿ |
ಮನದ ಚಿಂತೆಯ ಪರಿಹರಿಸಿ ಬ
ಲ್ಲೆನು ತಿರುವ ಕಣ್ಣೀರ ಕೈಯಿಂದೊರಸಿ ಮುಂಗುರುಳಾ ||
ವನಜಲೋಚನಸಿದ್ಧಿ ಸನ್ಮೋ
ಹನದಿಗಲ್ಲವ ಪಿಡಿದಲುಗಿ ಚುಂ
ಬನವಗೈದಾನಂದದಿಂದಲೇ ನೇಮಿಸಿದ ಸತಿಯಾ ||೨೬೮||
ವಾರ್ಧಕ
ಅಂದು ಶಿಶುವನು ದೈತ್ಯವಾರಿಯೊಳ್ ಬಿಸುಟಿರ |
ಲ್ಕೊಂದು ಮಿನದ ನುಂಗುತಿರಲಾಗ ಗರ್ಭದೊಳು |
ಕಂದರ್ಪ ಬೆಳವುತಿರಲಾಗ ಅಂಬಿಕನೋರ್ವನೈತಂದು ಬಲೆ ಬೀಸಲು ||
ಸಿಂಧುವಿನೊಳಗಿಹ ಜಂತುಗಳು ಪಿಡಿಯಲು ಮತ್ಸಾ |
ಬಂಧನಕೆ ಸಿಲುಕಲಾ ಸುಂದರವನೀಕ್ಷಿಸುತ |
ತಂದರಾರತಿಪತಿಯ ಶಿಶುರೂಪ ಶಂಭರನ ಮುಂದಿಟ್ಟು ಮಣಿದೆಂದರೂ ||೨೬೯||
ರಾಗ ಕಾಪಿ ಅಷ್ಟತಾಳ
ಖಳರಾಯಾ ಬಿನ್ನಹಮಾಡ್ತೆನೂ | ಸ್ವಾಮಿ | ವಳ್ಳೆಮಿನಾ ತಂದಿಲ್ಲಿ ಭಿಟ್ಟಿದೆ ಕಾಣ್ಕೆ | ನೀಕೊಡೆನಾದರೀಗ | ದರೆಯ ನಾನತಾಡೆಯಾನಿತ್ತು ಹೋಯೆಕಂ ಬೇಗಾ |
ಬೇಕಿಲ್ಲಿ ಬರಬೇಕೆಂದೆಯಾ ಯೇ ಪರಾಕುಸಮುದ್ರದಿ ಕಚ್ಚಿಕೊಣ್ದೊಡೆಯಾ ||೨೭೦||
ಕಂದ
ಶಂಭರಖಳ ಮಾಂಸಂಗಳ
ತುಂಬಿರುವ ಜಸವನ್ನು ನೋಡುತಾಶ್ಚರ್ಯ ಬಿಡುತ |
ಸಂಭ್ರಮದಿಂ
ದಲೆ ಮನ್ನಿಸಿಕಳುಹಿ ತೋಷದೊಳ ಗವನಿರ್ದಂ ||೨೭೧||
ವಾರ್ಧಕ
ಕ್ಷಿತಿಪಾಲಕೇಳೊಂದು ವಿಧಿಘಟನೆಯಂ ಪೇಳ್ವೆ |
ಚಿತಿಗಳನು ಗಣ್ಗೆಚ್ಚಿನ್ನಿಂದುರಿದು
ಮಥನುರಿದು ಪೋಗಿತದ ನಂತರದಿ ತತ್ಸತಿಯಲಿ ಬಹುದೇಶಗಳನು ತಿರುಗಿ |
ಪತಿಯನೆ ಧ್ಯಾನಿಸುತಾನಿರುತಿರಲ್ ದೈವ
ಗತಿಯಿಂದಲಾ ಶಂಭರಾಸುರನ ಸನ್ನಿಧಿಯೊ
ಳತಿಶಯದಿ ಪಾಕಮಂ ಗೈಯುತಿರಲಾಜಿಸವ ಕೊಟ್ಟುರತಿಯೊಡನೆಂದನೂ ||೨೭೨||
ರಾಗ ಭೈರವಿ ಝಂಪೆತಾಳ
ಆಹಾಹಾ ನೋಡುಮತ್ಸ್ಯ | ಬಹು ಚಿತ್ರವರ್ಣ ಇಂ |
ದಿಹುದು ಕೇಳೀಕ್ಷಣದೊಳಹಿವೇಣಿ ಮುದದೀ ||೨೭೩||
ಪರಿ ಪರಿ ಪದಾರ್ಥಗಳ ವಿರಿಚಿಸಿ ಸದ್ಯೋಗ್ರುತದಿ
ಸುರಿದು ಹರಿ ಜಿಹ್ವೆಯೊಳು ಕರಗದಂದದಲೀ ||೨೭೪||
ಯೆನಲು ಮತ್ಸ್ಯನ ತಂದು ಘನವೇಗದಿಂ ಸೀಳಿ |
ಅನುಪಮದ ಶಿಶುವಿರಲು | ಇಣಿಕಿ ನೋಡಿದಳು ||೨೭೫||
ಚೆಲುವ ಸನ್ಮೋಹನದೊಳಳುವ ಸುಕುಮಾರನ ಕಂಡು |
ಲಲನೆ ಮನಬೆಚ್ಚುತೆಂದಳು | ತನ್ನೊಳಂದೂ ||೨೭೬||
ರಾಗ ಏಕತಾಳ ಸವಾಯ್
ಎಲೆ ಎಲೆ ಇದೇನು ವಿಚಿತ್ರವೈ ಶಿವಶಿವಾ |
ಜಲಜಂತುವಿನಲಿ ಮಾನವನುದಿಸುವದು |
ಚೆಲುವತನದಿ ನೊಡಯೆಣೆ ಇಲ್ಲಾ ಭುವನದಲ್ಲಿ |
ಫಲವಿನ್ನೆಂತಿಹುದೊ ಶ್ರೀ ಹರಿಗೆ ಗೋಚರವು ||೨೭೭||
ಮಾಯಕದ ಶುಬೂತವೊ ವುತ್ಪಾತ ಧೈರ್ಯವೊ |
ನಾ ಏನು ಮಾಡಲಿ ಮೊದಲೆ ದುಷ್ಕುತದೀ |
ಪ್ರಿಯನ ಹರನಿತ್ತು ನಾನಾ ವ್ಯಥೆಗಳ ಬಿಟ್ಟು |
ಈ ಅವಸ್ತೆಗೆ ಬಂದೆ ಹರಹರ ಶಿವನೇ ||೨೭೮||
ಪರಸೇವೆಯೆಂಬುದೆ ಸಾಕು ಮತ್ತದರೊಳು |
ದುರುಳನೋಲಗವೆನುತ ವ್ಯರ್ಥವಾಯ್ತು ||
ದೊರೆತನದೊಳಗಂತರಂಗವ ಸ್ಥಳವೆಲ್ಲಿ |
ಪುರುಷನ ಬಚ್ಚಿಟ್ಟು ಸಂತೈಸುವದಕೆ ||೨೭೯||
ಭಾಮಿನಿ
ಅದುಭುತವೆಂದಾ ಮಾನಿಸಿ ವಿಧವಿಧದಿ ಚಿಂತಿಸಲ್ಕೆ ನಾರದ ನಂಬರದಿಂ ನೀಕ್ಷಿಸುತ ರತಿ ಪದ್ಮದೊಳೆರಗಿ ಮುದದಿಂಪೇಳ್ದಳ್ ||೨೮೦||
ರಾಗ ರೇಗುಪ್ತಿ ಝಂಪೆತಾಳ
ಸಾಕು ಬಿಡು ಮನೋವ್ಯಾಕುಲತೆ ಚದುರೆ |
ಶ್ರೀಕಾಂತನೊಲಿದನಿನ್ಯಾಕೆ ಚಿಂತಿಸುವೆ || ಪಲ್ಲ ||
ರತಿಯೆನೊಳ್ತವಪತಿವ್ರತ ನಿರೀಕ್ಷಿಸಿದೆಯೆದೊಳೆತ್ತಿ ಸೊಬಗದಿಂದ ಮನುಮಥನ ಶಿವನೊಲಿದೂ | ಪ್ರತಿಗಾಗಿ ನಿನಗೆ ದಂಪತಿಗಳಾ ನಂದದಲಿ | ಜೊತೆಯದಾರಿವನ್ನೇನು ಸತಿಶಿರೋಮಣಿಯೇ ||೨೮೧||
ಹರನ ಕಣ್ಣೆಚ್ಚಿ ನಿಂದುರಿದ ಕಂದರ್ಪ ಕೇಳ್ | ತರಳಾಕ್ಷಿ ತತ್ಪ್ರಾಣದರಸ ||
ಹರಿತನುಜ ಮರಳಿ ರುಕ್ಮಿಣಿಯಲ್ಲಿ ತರಳನಾಗಿ ನಿ ನ್ನರಸು ತೈದದಿ ವಿರಹವೆಗ್ಗಳಿಸಿ ||೨೮೨||
ಚಿಣ್ಣನವನೆಂದು ವಿಸ್ತನ್ಯ ಪಾನವ ಕೊಡದೆ | ಮನ್ನಿಸುವದಿನ್ನು ಗುಣರನ್ನೆ ಸನ್ಮತದೀ
ಅನ್ಯದುತ್ತರ ಕಾರ್ಯದುನ್ನತಿಯಂ ಪೇಳ್ವೆ | ನೆನ್ನುತ ನಡರ್ದನಭವನು ತಾಕ್ಷಣದೀ ||೨೮೩||
ಭಾಮಿನಿ
ಈಕಳಂಕಿನೊಳಹುದು ತರವ |
ಖಳಲ್ಲಾ ಮುಂದಿಡುವನೆನ್ನುತ |
ಲಾಕೆ ಸಂಭ್ರಮದಿಂದ ತೇಜೋಸ್ಪುಂಜದಿಂದೊಲಿದೂ ||
ಲೋಕದೊಡೆಯನ ಕುವರನೊಡಗೊಂ |
ಡಾ ಕಮಲದಲನಯನೆ ಮಾರನೊಳ್ |
ಕೈಕಠಾರಿಯ ತೆರದಿ ಬಂದಸುರೇಂದ್ರಗುಸರಿದಳೂ ||೨೮೪||
ರಾಗ ಸುರಟಿ ಆದಿತಾಳ
ಏನಿದು ದನುಜೇಂದ್ರ | ಜೋದ್ಯವಿ | ದೇನಿದು ಗುಣಸಾಂದ್ರಾ ||
ನೀನೇಮಿಸಲಾ ಮತ್ಸ್ಯವನರಿಯಲು ಮಿನಿನ ಗರ್ಭದೊಳುದಿಸಿದ ನೋಡೇ ||೨೮೫||
ಸುರದಿತಿಜಾದ್ಯರಲೀ | ಯಿಂತ | ಪುರುಷರೀವನಿಯಲೀ ||
ಸ್ಮರನೇ ಬಲು ಸುಂದರನೆಂಬವರೈ ಮರೆಸಿದನಿವ ಸುಮಶರನನು ಮಿರಿದಾ | ||೨೮೬||
ಭಾಮಿನಿ
ಸ್ಥಾವರಾದಿಗಳೊಲಿದು ಪುರುಷಗೆ |
ಜೀವರನು ಮೋಹಿಸದೆ ಮನವಿ |
ನ್ನಾವ ಲಾಭವ ನೋಡಿ ತನ್ನಂಗದೊಳು ಕುಳ್ಳಿರಿಸೀ ||
ಆ ವಿದೂಚಿಯದೆಂತು ಸ್ತುತಿಸಿದಾ |
ದೇವನೀನೆ ಬಲ್ಲೆಯೆನುತತಿ |
ಸಾವಧಾನದೊಳಂದು ಶಂಭರ ರತಿಗೆ ಯಿಂತೆಂದಾ ||೨೮೭||
ರಾಗ ಮಧುಮಾಧವಿ ತ್ರಿವುಡೆತಾಳ
ಚಿಂತೆ ಯೇನಿದು ಚಲುವೆ ಕೇಳ್ ರಿಪು | ರಾಂತಕನು ನಮಗೊಲಿದ ಕರುಣದಿ |
ಸಂತಸದೊಳಾ ಶಿಶುವ ಕೊಂಡೈ | ದಂತರಂಗದಿ ಸಲಹಿಕೊ | ಚಂದವಾಗೀ ||೨೮೮||
ರನ್ನ ಮಾಣಿಕದುಡಿಗೆ ತೊಡಿಗೆಗ | ಳನ್ನು ತೊಡಿಸಿ ವಿನೋದದೊಳ್ |
ಸಣ್ಣವಗೆ ಚವುಷಷ್ಟಿ ವಿದ್ಯವ | ಭಿನ್ನವಿಲ್ಲದೆ ಕಲಿಸುವೆ | ಚಂದವಾಗಿ ||೨೮೯||
ಗರುಡಿಯಾಲಯದಲ್ಲಿ ಸಾಧಕ | ವರುಹಿದರು ಸಂಧಾನಗಳ ನೀ
ಸರಳುಗಳಭವನೀಡಿಸಂಪತ್ರುಣದಿಂದಲಿ ಸಲಹಿಕೊ | ಚಂದವಾಗಿ ||೨೯೦||
ಕಂದ
ಇಂತಪ್ಪಣೆಕೊಡುತಲಾಕ್ಷಣ |
ಚಿಂತಿತಫಲವಾವುದೆಂದು ರತಿಮುದದಿಂ |
ಕಂತುವಿನೊಡಗೊಡೈತಂದು |
ಸಂತತದಲಿ ತತ್ಪುರವಾಸದೊಳಿರ್ದಳ್ ||೨೯೧||
ವಾರ್ಧಕ
ವನರುಹಾಂಬಕಿಯಿಂತು ನಿರ್ಭಯದಿ ಮನುಮಥನ |
ನನುಪಮ ಸ್ನೇಹದಲಿ ಮನ್ನಿಸುತ ವಿಧವಿಧದಿ |
ಉಣಬಡಿಸುತಸ್ತನ್ಯಪಾನಕೊಡದೇ ಶುಕ್ಲಶಶಿಯಂತೆ ಬೆಳೆವುತೀರ್ದಾ ||
ದಿನದೊಳೀಕ್ಷಿಸುತಲವನೊಡನೆ ಮುದದಿಂದ ಕಾ |
ಮನೆ ರತಿಗಳೊಂದಾದ ಸಂಭ್ರಮ ವಿಲಾಸ ಚುಂ |
ಬನ ಸರಸದಾಲಿಂಗನಾದಿಗಳ ಮೋಹದಿಂದಾಡುತಿರಲತಿ ವಿರಹದೀ || ||೨೯೨||
ರಾಗ ಕಾಂತಾರವ ತ್ರಿವುಡೆತಾಳ
ಇಂದೆನ್ನ ಮನೋರಥನಂದದೊಳಿವೆ ಕೇಳ್ | ಕಂದರ್ಪ ಕರುಣದಲಿ |
ಅಂದಿಂದಿನಗಲಿದ ಸನ್ಮೋಹ ಸರಸವು | ಕೇಳೊಂದು ಪ್ರೀತಿಯಿಂದಾ ನೆರದಿಂದಾ ||೨೯೩||
ವರತಪಸಿಗಳಾದರೂ ನಿಜಂಕರಿಸಿ ಪೂ | ಸರಳು ಬೆಂಬಿಡದಾದುದು |
ಪರುಶವೇರಿಸಿ ಸರ್ವತೆರದೆಂದು ಮಾಳ್ಪದ ತ್ಪುರುಷನ ಕೈಪಿಡಿದೂ ||೨೯೪||
ವಿರಹತಾಪವ ತಾಳಿರುವದೆನ್ನಯ ವಿಧಿ | ಬರಹವಲ್ಲದೆ ಬೇರೆ ನೊರೆಯಲ್ಯಾತಕೆ ಕಾಂತಾ ||೨೯೫||
ಭಾಮಿನಿ
ಇನಿತು ವಿರಹೇಕಾಂತದಲಿ ಮನು |
ಮಥನನನುಪಮ ದಿವ್ಯಸಂಗ |
ನನವರತ ಹಂಬಲಿಸುತಿರಲಾ ಮದನವರ್ಧಿಸುತಾ ||
ಅನಿತರೊಳು ನಿಜ ಬಾಲಲೀಲೆಯ |
ನನುಕರಿಸಿಚಿತ್ತದಲಿ ತನ್ನಯ |
ಜನನಿ ಭಾವವ ತಿಳಿದಿರಲುಅವಳೆಂದಳತಿಭರದಿ ||೨೯೬||
ರಾಗ ಕಾಂತಾರವ ಝಂಪೆತಾಳ
ಅಹಹಾ ನೋಡು ಬಲು ಮೋಸವಹುದು ಕೇಳ್ನೀನೆನ್ನ | ವಿವ | ಸುವ ಮತ್ಪ್ರಾಣದರಸಾ ||
ಗ್ರಹಿಸು ಪೂರ್ವದಲಿ ಹರನೇತ್ರದಿಂದದೀಗಾ | ಮಹಿಯೊಳುದಿಸಿದೆ ಕೃಷ್ಣನಲ್ಲಿ ||೨೯೭||
ನಾರತಿ ನಿನ್ನರಸಿ ಮಧಾನ ಕಾಯವನು | ಸಾರದಿಂದಲೆ ನೆಲಸಿಹೆವು |
ನಾರದೈತರು ವನಕಾಗುಪ್ತದೊಳಿಹುದು ಮತ್ತಾರ ಭಯವಿಲ್ಲಾ ನಮ್ಮ ನಿನ್ನಾ ||೨೯೮||
ವಾರ್ಧಕ
ಸರಸದಿಂದಲೆ ಮದನವರ್ಧಿಸುತ ಸದ್ಗುಣದೊ |
ಳಿರುವದ ನಿರೀಕ್ಷಿಸಿರನ್ನದುಡಿಗೆ ತೊಡಿಗೆಗಳಲಂ |
ಕರಿಸಿ ಬಹು ವಿಧದ ವಿದ್ಯಂಗಳಂ ಸಲೆಕಲಿತು ಗರುಡಿಯೊಳ್ ದಿನ ದಿನದಲಿ ||
ಪರಿಪರಿಯ ಪಾದಕದ ವರ್ಮಗಳ ನರುಹಿ ಸ |
ತ್ಮ್ಕರುಣದಿಂ ಕ್ಷಣಬಿಡದೆ ಮೋಹದಿಂದಿರುತಿರಲ |
ಕವನೆಡೆಗೆ ನಭದಿಂದ ನಾರದ ಮುನೀಶ್ವರಂ ನಡೆತಂ ಪೇಳ್ದನೊಲಿದೂ ||೨೯೯||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸ್ಮರನೆ ಕೇಳ್ದಂಪತಿಗಳಿರ್ವರು | ವೆರದು ರತಿಸಂತೋಷವಾಯಿತು |
ಕೊರತೆವೊಂದಿಹುದೊರೆವೆ ನಂತ | ಷ್ಕರುಣದಿಂದಾ ||೩೦೦||
ದುರುಳ ಶಂಭರನಸುವನೀ ಸಂ | ಹರಿಸದಿರೆ ಪುರುಹೂತ ಮುಖ್ಯಾ |
ಮರರ ಸಂಕಟವಡಗಿ ಹರುಷದೊ | ಳಿರುವದಿನ್ನೂ ||೩೦೧||
ಪೊಡವಿ ಭಾರವ ನಿಳುಹಬೇಕೈ | ಕಡು ಪರಾಕ್ರಮಿ ನಿನ್ನ ಖಳಬಂ
ದೊಡನೆ | ಕೆಣಕುವ ತೆರಳಿ ಯತ್ನವ | ನಡಿಸಿ ಬರುವೇ ||೩೦೨||
ಭಾಮಿನಿ
ಇಂತು ಕೇಳ್ದತಿ ಕರುಣದಿಂದ
ತ್ಯಂತ ಕರಸಂಧಾನಕೊದಗುವ |
ಮಂತ್ರಿಗಳನುಪದೇಶವಿತ್ತರಿಗಳನು ಸಂಹರಿಸಿ ||
ಸಂತಸದೊಳಿಹುದೆಂದು ಪರಸುತ
ಕಂತುವಿನ ಬೀಳ್ಕೊಟ್ಟು ನಾರದ
ತಾಂತವಕದಿಂ ಬಂದು ದುರುಳನೊಳೆಂದ ನಸುನಗುತ ||೩೦೩||
Leave A Comment