ಕವಿ ಗುರುದೇವ ರವೀಂದ್ರರ ಜನ್ಮಶತಮಾನೋತ್ಸವದ ಅಂಗವಾಗಿ 1961ರಲ್ಲಿ ಭಾರತ ಸರ್ಕಾರವು ಭಾರತದ ಪ್ರಮುಖ ಕೇಂದ್ರಸ್ಥಾನಗಳಲ್ಲಿ ರವೀಂದ್ರ ಸ್ಮಾರಕ ಕೇಂದ್ರಗಳ ನಿರ್ಮಾಣಕ್ಕೆ ಸಂಕಲ್ಪಿಸಿ ಮುಂದಾಯಿತು. ಈ ಸರಣಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ಕೊಲ್ಕೊತ್ತಾದ ‘ರವೀಂದ್ರ ಸದನ್’, ಮಂಬಯಿಯ ‘ರವೀಂದ್ರ ನಾಟ್ಯಮಂದಿರ್’, ಭೋಪಾಲ್‍ನಲ್ಲಿರುವ ‘ರವೀಂದ್ರ ಭವನ’ ಮತ್ತು ಹೈದರಾಬಾದಿನ ‘ರವೀಂದ್ರ ಭಾರತಿ’ ನಿರ್ಮಾಣಗೊಂಡ ಇತರ ರಂಗಮಂದಿರಗಳು.

ನೊಬೆಲ್ ಪುರಸ್ಕøತ ಕವಿ, ಶಾಂತಿನಿಕೇತನದ ಕರ್ತಾರ ಶಕ್ತಿ, ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕಲಾಕ್ಷೇತ್ರ ನಿರ್ಮಾಣದ ಬಗ್ಗೆ 1959ನೆಯ ಅಕ್ಟೋಬರ್ 23ರಂದು ಗುಬ್ಬಿ ನಾಟಕ ಮಂದಿರದಲ್ಲಿ ರವೀಂದ್ರ ಕಲಾಕ್ಷೇತ್ರ ಎಂಬ ಪರಿಕಲ್ಪನೆಯನ್ನು ಅಂದಿನ ಮುಖ್ಯಮಂತ್ರಿ ಶ್ರೀ ಬಿ.ಡಿ.ಜತ್ತಿ ಅವರು ಈ ಕಲಾಕ್ಷೇತ್ರ್ರ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಎರಡು ಲಕ್ಷ ರೂಪಾಯಿಗಳ ಅನುದಾನ ನೀಡುತ್ತಿದ್ದು, ರಾಜ್ಯ ಸರ್ಕಾರವು ಎರಡು ಲಕ್ಷ ರೂಪಾಯಿಗಳ ಅನುದಾನದೊಂದಿಗೆ ಒಟ್ಟು ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ಆರಂಭಿಸುವುದಾಗಿ ಘೋಷಿಸಿದರು. ಒಟ್ಟು ಹತ್ತು ಲಕ್ಷ ರೂಗಳ ಒಟ್ಟು ಅಂದಾಜು ಮೊತ್ತದೊಂದಿಗೆ ಆರಂಭಗೊಂಡ ಈ ಯೋಜನೆಯ ವೆಚ್ಚವು ಪರಿಷ್ಕಾರಗೊಂಡು ಹದಿನಾಲ್ಕು ಲಕ್ಷ ರೂಪಾಯಿಗಳಾಯಿತು.

ravindra-kaleshtra

ದಿನಾಂಕ: 05.01.1959ರಲ್ಲಿ ಮೈಸೂರು ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಡಿ.ಜತ್ತಿ ಅವರ ನೇತೃತ್ವದಲ್ಲಿ ನಾಡಿನ ಸಾಂಸ್ಕøತಿಕ ಲೋಕದ ಮಹನೀಯರನ್ನೊಳಗೊಂಡ ಶತಮಾನೋತ್ಸವ ಸಮಿತಿಯನ್ನು ರಚಿಸಲಾಯಿತು.ಸರ್ವಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೋಟಾ ಶಿವರಾಮ ಕಾರಂತ, ದ.ರಾಬೇಂದ್ರೆ, ಬಿ.ಶಿವಮೂರ್ತಿ ಶಾಸ್ತ್ರಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅ.ನ.ಕೃಷ್ಣರಾವ್, ಪಿ.ಮಲ್ಲಿಕಾರ್ಜುನ ಮನ್ಸೂರ್, ಎಂ.ಪಿ.ಎಲ್ ಶಾಸ್ತ್ರಿ, ಎಸ್.ಎಸ್.ಒಡೆಯರ್, ಬಿ.ಎಂ.ರಾಮಲಿಂಗಯ್ಯ, ಜಿ.ಆರ್.ಘೋಷ್, ಪಿಟೀಲು.ಟಿ. ಚೌಡಯ್ಯ, ಎಂ.ಜಿ.ಮಹಾದೇವ ಸ್ವಾಮಿ, ಎಲ್.ಎಸ್.ವೆಂಕಾಜಿರಾವ್, ವಿಮಲಾ ರಂಗಾಚಾರ್ ಮತ್ತಿತರ ಪದನಿಮಿತ್ತ ಅಧಿಕಾರಿ ವರ್ಗದವರ ಒಳಗೊಂಡಿತ್ತು. ಈ ಸಮಿತಿಯು ಶತಮಾನೋತ್ಸವ ಆಚರಣೆಯ ಅಂಗವಾಗಿ 1959ರಲ್ಲಿ ರವೀಂದ್ರ ಕಲಾಕ್ಷೇತ್ರ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ಕ್ರಮ ವಹಿಸಿತು.

ಕಲಾಕ್ಷೇತ್ರ ನಿರ್ಮಾಣಕ್ಕೆ ಸಾರ್ವಜನಿಕ ಸಹಭಾಗಿತ್ವವೂ ದೊರಕಿ ಸರ್ಕಾರದ ವಿವಿಧ ಇಲಾಖೆಗಳು, ಖಾಸಗಿ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಮತ್ತು ಸಾರ್ವಜನಿಕರು ದೊಡ್ಡ ಮಟ್ಟದ ದೇಣಿಗೆಯನ್ನು ಆಸಕ್ತಿಯಿಂದ ನೀಡಿದ್ದು ಕಲೆಯ ಪ್ರೋತ್ಸಾಹಕ್ಕೆ ಈ ಕೇಂದ್ರ ನಿರ್ಮಾಣ ಮಾಡುವಲ್ಲಿ ದೊಡ್ಡ ಇಂಬು ನೀಡಿತು. ಶತಮಾನೋತ್ಸವ ಸಮಿತಿಯ ಸದಸ್ಯರಾಗಿದ್ದ ಶ್ರೀ ಎಂ.ಜಿ.ಮಹಾದೇವಸ್ವಾಮಿ ಅವರು ರೂ.22,000.00ಗಳ ದೇಣಿಗೆ ನೀಡಿ ನೆರವಾಗಿದ್ದಾರೆ. ನಾಡಿನ ಹಲವು ಪ್ರಮುಖ ಸಂಘ-ಸಂಸ್ಥೆಗಳು, ವ್ಯಾಪಾರೋದ್ಯಮಗಳ ಸಹಕಾರದೊಂದಿಗೆ ನಿರ್ಮಾಣ ಸಾಧ್ಯವಾಯಿತು.
ಹಿರಿಯ ರಂಗಕರ್ಮಿ ಹಾಗೂ ಚಿತ್ರನಟ ಶ್ರೀ ಶಿವಾಜಿ ಗಣೇಶನ್ ಅವರು ತಮ್ಮ ಜನಪ್ರಿಯ ರಂಗಪ್ರಯೋಗ ‘ವೀರಪಾಂಡ್ಯ ಕಟ್ಟಬೊಮ್ಮನ್’ ಪ್ರದರ್ಶನವನ್ನು ರವೀಂದ್ರ ಕಲಾಕ್ಷೇತ್ರ ನಿರ್ಮಾಣ ಸಹಾಯಾರ್ಥ ಪ್ರದರ್ಶನ ಮಾಡಿ ಸುಮಾರು ರೂ.22,000.00ಗಳ ದೇಣಿಗೆ ಸಂಗ್ರಹಿಸಿ ನೀಡಿದ್ದು ಸಹ ಕಲಾಕ್ಷೇತ್ರದ ವ್ಯಾಪ್ತಿ ದೇಶ-ಭಾಷೆಗಳ ಗಡಿ ಮೀರಿ ನಿಂತ ದ್ಯೋತಕವಾಗಿದೆ.

20160906_144138

ರವೀಂದ್ರ ಕಲಾಕ್ಷೇತ್ರದ ಕಟ್ಟಡ ನಿರ್ಮಾಣಕ್ಕೆ ದಿನಾಂಕ 16.09.1960ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಕಟ್ಟಡದ ವಿನ್ಯಾಸವನ್ನು ಖ್ಯಾತ ವಾಸ್ತುಶಿಲ್ಪಿ ಶ್ರೀ ಚಾಲ್ರ್ಸ್ ವಿಲ್ಸನ್ ಅವರು ಸಿದ್ದಪಡಿಸಿದರು. ಲೋಕೋಪಯೋಗಿ ಇಲಾಖೆಯ ಶ್ರೀ ಬಿ.ಆರ್.ಮಾಣಿಕ್ಯಂ ಮತ್ತು ಶ್ರೀ ಕೆ.ಎಂ.ಜೋಷಿ ಅವರ ನೇತೃತ್ವದಲ್ಲಿ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸಲಾಯಿತು.
ರವೀಂದ್ರ ಕಲಾಕ್ಷೇತ್ರವನ್ನು ದಿನಾಂಕ: 09.03.1963ರಂದು ಕೇಂದ್ರ ಸಾಂಸ್ಕøತಿಕ ವ್ಯವಹಾರಗಳ ಸಚಿವರಾಗಿದ್ದ ಶ್ರೀ ಹುಮಾಯೂನ್ ಕಬೀರ್ ಅವರು ಕಲಾಲೋಕಕ್ಕೆ ಲೋಕಾರ್ಪಣೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಮಹಾರಾಜರಾಗಿದ್ದ ರಾಜಪ್ರಮುಖ ಶ್ರೀ ಜಯಚಾಮರಾಜ ಒಡೆಯರ್ ಅವರ ವಹಿಸಿದ್ದರು.

fb_img_1463069265781

ಪ್ರೊಸಿನೀಯಮ್ ಆರ್ಚ್ ಮಾದರಿಯ ರವೀಂದ್ರ ಕಲಾಕ್ಷೇತ್ರ ರಂಗಮಂದಿರವು ಸಾಂಸ್ಕøತಿಕ ಲೋಕದ ಎಲ್ಲಾ ಪ್ರಕಾರಗಳಿಗೆ ವೇದಿಕೆಯಾಗಿದೆ. ನೆಲಮಹಡಿಯಲ್ಲಿ 500 ಆಸನಗಳು ಮತ್ತು ಬಾಲ್ಕನಿಯಲ್ಲಿ 300 ಆಸನಗಳು ಒಟ್ಟು 800 ಆಸನಗಳ ರಂಗ ಮಂದಿರವಾಗಿದ್ದು ನಗರದ ಹೃದಯಭಾಗದಲ್ಲಿರುವ ಪ್ರಮುಖ ಸಾಂಸ್ಕøತಿಕ ತಾಣವಾಗಿದೆ. ರವೀಂದ್ರ ಕಲಾಕ್ಷೇತ್ರದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾಗಿರುವ ಕಲಾಕ್ಷೇತ್ರದ ಸಾಕ್ಷ್ಯಚಿತ್ರಕ್ಕಾಗಿ (ಇಲ್ಲಿ ಕ್ಲಿಕ್ ಮಾಡಿ{ವಿಡಿಯೋ ಲಿಂಕ್})

ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಕೇಂದ್ರ ಕಚೇರಿಗೆ ನೆಲೆಯಾದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಜನನಿಬಿಡ ವಲಯದಲ್ಲಿ ಹಸಿರು ವಲಯವನ್ನು ಸೃಷ್ಟಿಸಿ ಶಿಲ್ಪವನಗಳನ್ನು ರಚಿಸಿದೆ. ನಯನ ರಂಗಮಂದಿರ ಮತ್ತು ಸಂಸ ಬಯಲು ರಂಗಮಂದಿರಗಳು ಹಾಗೂ ಪಡಸಾಲೆ ಆರ್ಟ್ ಗ್ಯಾಲರಿ, ಮತ್ತು ವರ್ಣ ಆರ್ಟ್ ಗ್ಯಾಲರಿಗಳು ಕಲಾ/ಸಾಂಸ್ಕøತಿಕ ಚಟುವಟಿಕೆಗಳಿಗೆ ನೆಲೆಯಾಗಿದೆ.

ರವೀಂದ್ರ ಕಲಾಕ್ಷೇತ್ರವು ಆಯಾ ಕಾಲಘಟ್ಟದ ಸಾಂಸ್ಕøತಿಕ ತಲ್ಲಣಗಳಿಗೆ, ವರ್ತಮಾನದ ಸಂವೇದನೆÉಗಳಿಗೆ ಸ್ಪಂದಿಸುವ ಚಿಂತಕರ, ಹೋರಾಟಗಾರರ ಸ್ಪೂರ್ತಿಯ ನೆಲೆಯೂ ಆಗಿದೆ.
ರಾಷ್ಟ್ರದ ಪ್ರತಿಷ್ಟಿತ ರಂಗತಾಣಗಳಲ್ಲೊಂದಾದ ರವೀಂದ್ರ ಕಲಾಕ್ಷೇತ್ರವು ಐವತ್ತು ವರ್ಷಗಳಿಗೂ ಮೀರಿ ಸಾಂಸ್ಕøತಿಕವಾಗಿ ಸಕ್ರಿಯವಾಗಿರುವ ಸುವರ್ಣ ಸಂಭ್ರÀಮದ ನೆನಪಿಗೊಂದು ನೆಲೆ ಕಟ್ಟುವ ಉತ್ಸವವನ್ನು ನೃತ್ಯ, ಜಾನಪದ, ಯಕ್ಷಗಾನ-ಬಯಲಾಟ, ಸಂಗೀತ, ನಾಟಕ, ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆ, ಹೊರನಾಡ ಕಲಾವಿದರ ಉತ್ಸವ, ಕಾಲೇಜು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭಾ ಪ್ರದರ್ಶನ, ಮಹಿಳಾ ಮತ್ತು ಮಕ್ಕಳ ಕಲಾಪ್ರದರ್ಶನಕ್ಕೆ ವೇದಿಕೆ ಒದಗಿಸುವ ಮೂಲಕ ಹತ್ತು ತಿಂಗಳ ಕಾಲದಲ್ಲಿ ಅತ್ಯಂತ ವಿಶಿಷ್ಟವಾಗಿ ರೂಪಿಸಲಾಗಿದೆ.