ರಾಂಬೂಟಾನ್ಒಂದು ರುಚಿಕರವಾದ ಹಣ್ಣು. ನಮ್ಮಲ್ಲಿ ಇದು ಕಾಣ ಸಿಗುವುದು ಅಪರೂಪ. ಪ್ರಕೃತ ಇದು ಪಟ್ಟಣ ಪ್ರದೇಶಗಳಲ್ಲಿ ಜನರು ಸೇವಿಸುವ ಹಣ್ಣಾಗಿದೆ. ಇದರಲ್ಲಿ ಅನೇಕ ಪೌಷ್ಟಿಕಾಂಶಗಳಿದ್ದು, ಇದಕ್ಕೆಂದು ವಿದೇಶಿ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿದೆ. ದೃಷ್ಟಿಯಿಂದ ಇದರ ಉತ್ಪಾದನೆಯ ಹೆಚ್ಚಳಕ್ಕೆ ಏಷ್ಯಾದ ರಾಷ್ಟ್ರಗಳಿಂದು ಶ್ರಮ ಪಡುತ್ತಿವೆ. ಭಾರತದಲ್ಲಿ ಬೆಳೆಯ ಬಗ್ಗೆ ಸಾಕಷ್ಟು ಪ್ರಚಾರಗಳಾಗಿಲ್ಲ. ನಿಟ್ಟಿನಲ್ಲಿ ರಾಂಬೂಟಾನಿನ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನೊದಗಿಸುವ ಪ್ರಯತ್ನ ಮಾಡಿದ್ದೇನೆ. ಮಾಹಿತಿಗಳನ್ನು ವೆಬ್ಸೈಟ್ ಮತ್ತು ಕರ್ನಾಟಕ ಸರಕಾರದ ತೋಟಗಾರಿಕಾ ನಿರ್ದೇಶನಾಲಯಗಳಿಂದ ಸಂಗ್ರಹಿಸಲಾಗಿದೆ. ಮಾಧ್ಯಮಗಳಿಗೆ ನಾನು ಋಣಿಯಾಗಿದ್ದೇನೆ. ಇದೊಂದು ಮಾಹಿತಿ ಒದಗಿಸುವ ಪ್ರಯತ್ನವಾಗಿದ್ದು, ಇದರ ಪ್ರಯೋಜನ ನಮ್ಮೆಲ್ಲಾ ಕೃಷಿಕರಿಗೆ ಲಭ್ಯವಾಗಲಿ ಎಂಬಾಸೆ ನನ್ನದು.

ನನ್ನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲವನ್ನು ನೀಡುತ್ತಿರುವ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸ್ನೇಹಿತರಿಗೆ ನನ್ನ ನಮನಗಳು.

ನನ್ನ ಬರಹಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತಿರುವ ಕುಟುಂಬದ ಎಲ್ಲಾ ಸದಸ್ಯರುಗಳನ್ನು ಇಲ್ಲಿ ನೆನೆಸುತ್ತಿದ್ದೇನೆ.

ಡಾ|| ವಿಘ್ನೇಶ್ವರ ವರ್ಮುಡಿ
ವರ್ಮುಡಿ, ಗುಂಪೆ.
೨೩-೧೦-೨೦೦೪