. ಸಮಾಪ್ಯ ಕಾಲನಿಯಮಂ ಸಕಲಂ
ಜಗದಂಡಲಂಘಿಜಯಶಂಖರವಃ |
ಅಧಿರುಹ್ಯ ವಾಹನಮಹನ್ಯುಚಿತೇ
ನೃಪಕುಂಜರೋsಪಿ ನಿರಗಾನ್ನಗರಾತ್ ||

ರಾಜಶ್ರೆಷ್ಠನಾದ ಅಚ್ಯುತರಾಯನು ಕೂಡ ಪ್ರಾತಃಕಾಲದ ಎಲ್ಲ ನಿಯಮಗಳನ್ನು ನಿರ್ವರಿಸಿ ಯೋಗ್ಯವಾದ ದಿವಸದಲ್ಲಿ ರಥವನ್ನು ಏರಿ ಬ್ರಹ್ಮಾಂಡವನ್ನು ಗೆಲ್ಲುವ ಛಲದಿಂದ ವಿಜಯನಾದವನ್ನು ಮೊಳಗಿಸಿ ನಗರದಿಂದ ಹೊರಟನು.

. ಪ್ರತಿಮಂಟಪಂ ಪ್ರತಿರವಚ್ಛಲತೋ
ಗೃಹದೇವತಾಪಿ ಕಿಮನ್ವಕರೋತ್ |
ಅಥ ವೇತ್ರಿಭಿರ್ನಿಗದಿತಾನ್ಪುರತೋ
ಜನನಾಯಕಸ್ಯ ಜಯಜೀವರವಾನ್ ||

ಅನಂತರ ಅಚ್ಯುತರಾಯನ ಮುಂದೆ ಕಂಚುಕಿಗಳು ಹೇಳಿದ ಜಯಘೋಷದ ಶಬ್ದವು ಎಲ್ಲ ಮಂಟಪಗಳಲ್ಲಿ ಪ್ರತಿಧ್ವನಿಯಾಗುವ ನೆಪದ ಮೂಲಕ ಮಂಟಪದಲ್ಲಿನ ಗೃಹದೇವತೆಗಳು ಈ ಧ್ವನಿಯನ್ನು ಅನುಕರಿಸುತ್ತಿರುವರೋ ಎನ್ನುವಂತೆ ಭಾಸವಾಗುತ್ತಿತ್ತು.

. ಪರುಷಂ ವ್ಯರಾಣಿ ಪಟಹೇನ ತಥಾ
ಶ್ಲಥಮೂರ್ತಯಃ ಶಿಖರಿಣೋ ನಿಖಿಲಾಃ |
ನಿಜಪಕ್ಷಮಾತ್ರಪರಿಭಾವಿ ಯಥಾ
ಕಥಯಂತಿ ವಜ್ರಮಪಿ ಕಾರುಣಿಕಮ್ ||

ಭೇರಿಯಿಂದ ಭಯಂಕರ ಶಬ್ದವು ಹೊರಡುತ್ತಿದ್ದರೂ, ಸಮಸ್ತವಾದ ಪರ್ವತಗಳು ಭೇರಿಯ ಶಬ್ದವನ್ನು ಸಹಿಸಿ ಮೂರ್ತಸ್ವರೂಪ ಹೊಂದಿದವು. ನಿಜವಾದ ಅರ್ಥದಲ್ಲಿ ತನ್ನಷ್ಟು ದೊಡ್ಡದಲ್ಲವೆಂಬ ತಿರಸ್ಕಾರವಿದ್ದರೂ, ವಜ್ರದಷ್ಟು ಕಠಿಣವಾದರೂ ಕರುಣೆಯುವುಳ್ಳದೆಂದು ಹೇಳುವಂತೆ ಸಜ್ಜನರ ಚಾರಿತ್ರ್ಯದಂತೆ ಭಾಸವಾಗುತ್ತಿತ್ತು.

. ಪಟಹಸ್ವನೇನ ಪಟುನಾ ಕಕುಭಃ
ಸ್ಫುಟದದ್ರಿವೇಣುವಿಗಲನ್ಮಣಯಃ |
ಪ್ರಥನಶ್ರಿಯಾ ಪರಿಣಯೋಸ್ಯ ಭವೇ
ದಿತಿ ಲಾಜಭರ್ಜನಮಿವಾರಚಯನ್ ||

ಭೇರಿಯ ಭಯಂಕರ ಶಬ್ದದಿಂದ ಪರ್ವತದಲ್ಲಿರುವ ಬಿದಿರುಮರಗಳನ್ನು ಸೀಳಿಕೊಂಡು ಬೀಳುತ್ತಿರುವ ಮುತ್ತುಗಳಿಂದ, ದಿಕ್ಕುಗಳೆಂಬ ಸ್ತ್ರೀಯರು ರಣಲಕ್ಷ್ಮಿಯೊಂದಿಗಿನ ಅಚ್ಯುತರಾಯನ ವಿವಾಹವೆಂದು ತಿಳಿದು ತಾಪದಿಂದ ಭರ್ಚಿಗಳನ್ನೆಸದರು.

. ನಿಜಸಂಗಮಾನ್ನಿಖಿಲಶೈಲದರೀ
ಫಲಿತೋದಯೇ ಪ್ರತಿರವಾತ್ಮಭವೇ |
ಜಲಧೀನ್ವಿಗಾಹ್ಯ ಜಯತೂರ್ಯರವೋ
ಜಗದಂಡದಾನಮತನು ವ್ಯತನೋತ್ ||

ವಿಜಯದುಂದುಬಿಗಳ ಧ್ವನಿಯು ತನ್ನದೇ ಸಂಬಂಧದಿಂದ ಎಲ್ಲಿ ಪರ್ವತಗಳ ಗುಹೆಗಳಲ್ಲಿ ಪ್ರತಿಫಲಿತವಾಗಿ ಹುಟ್ಟಿದ ಪ್ರತಿಧ್ವನಿಯಿಂದಾಗಿ ಸಮುದ್ರವನ್ನು ಪ್ರವೇಶಿಸಿ ಅಲ್ಲಿ ಸ್ನಾನಗೈದು ಜಗತ್ತಿನ ನಿಯಮದಂತೆ ದಾನಗಳನ್ನು ಆಚರಿಸಿತು.

. ಮಹಿಪಾನವೇಕ್ಷಿತನಿಜಾಗಮನಾ
ನ್ಮಕುಟಾಂಚಲಸ್ತಬಕಿತಾಂಜಲಿಕಾನ್ |
ವಿಭುರನ್ವಕಂಪತ ವಿಲೋಕನತಃ
ಕಮಲೋತ್ಕರಾನಿವ ಕರೈಃ ಸವಿತಾ ||

ಕಿರೀಟಗಳನ್ನು ಹೂವಿನ ಗೊಂಚಲುಗಳಂತೆ ಕೆಳಗಿಟ್ಟು, ಅಂಜಲಿಬದ್ಧರಾಗಿ ನಿಂತು, ತನ್ನ ಆಗಮನವನ್ನು ನಿರೀಕ್ಷಿಸುತ್ತಿರುವ ರಾಜರುಗಳೆಡೆಗೆ ಅಚ್ಯುತರಾಯನು ಅನುಗ್ರಹದ ನೋಟವನ್ನು ಬೀರಿದನು. ಹೇಗೆ ಸೂರ್ಯನ ಕಿರಣಗಳು ಅರಳುವ ಕಮಲಗಳನ್ನು ಅನುಗ್ರಹಿಸುತ್ತವೆಯೋ ಹಾಗೇ

. ಅಭಿಶಂಕ್ಯ ಪಂಕಜಮಮುಷ್ಯ ಮುಖಂ
ಗರುತೋ ವಿತತ್ಯ ಗಗನೇ ವಲತಃ |
ವಿಜಹಾಸ ಹಂಸ ಮಿಥುನಸ್ಯ ವಿಭಾಂ
ವಿಶದಾತಪತ್ರಯುಗಲೀ ನೃಪತೇಃ ||

ರಾಜನ ಶ್ವೇತಛತ್ರ ಯುಗ್ಮವು ಅಚ್ಯುತರಾಯನ ವದನವನ್ನು ಕಮಲವೆಂದು ಶಂಕಿಸಿ ರೆಕ್ಕೆಯನ್ನು ವಿಸ್ತರಿಸಿ ಆಕಾಶದಲ್ಲಿ ಹಾರಾಡುವ ಹಂಸದ್ವಯಗಳ ಕಾಂತಿಯನ್ನು ಮೀರಿಸುವಂತಿತ್ತು. ಅಂದರೆ ಹಂಸದ್ವಯಗಳ ಕಾಂತಿಯನ್ನು ಪರಿಹಾಸಗೊಳಿಸುತ್ತಿತ್ತು.

. ಕಶಯಾ ಪ್ರಚೋದಯಿತುಮಪ್ರಭವಃ
ಪ್ರಭವಃ ಸ್ವಪಾರ್ಷ್ಣಿಪರಿತಾಡನತಃ |
ತುರಗಾನ್ಪ್ರಚಾಲ್ಯ ತುಮುಲೇsಪಿ ಮಿಥ
ಸ್ತುಹಿನಾಂಶುವಂಶಮಣಿಮನ್ವಗಮನ್ ||

ಅಚ್ಯುತರಾಯನ ಸ್ನೇಹಿತರು ಕುದುರೆಗಳನ್ನು ಚಾಟಿಯಿಂದ ಹೊಡೆದು ವೇಗವಾಗಿ ಓಡಿಸಲು ಅಶಕ್ತರಾದರೂ ಕೂಡ ತನ್ನ ಅಂಗಾಲಿನ ಹೊಡೆತದಿಂದಲೇ ಅಶ್ವಗಳನ್ನು ಓಡಿಸುವ ಚಂದ್ರವಂಶದ ಶ್ರೇಷ್ಠನಾದ ಅಚ್ಯುತರಾಯನನ್ನು ಪರಸ್ಪರ ದಟ್ಟವಾದ ಸಮೂಹಗಳಿಂದ ಅನುಸರಿಸಿದರು.

. ವಿಜಯೋದ್ಯತಂ ವಿಭುಮವೇಕ್ಷ್ಯ ಭಟಾ
ವ್ಯಸರನ್ಸಸಿಂಹರವಸಂಹತಯಃ |
ಉದಿತಂ ವಿಧುಂ ನಿಕೃತಯೇ ತಮಸಾ
ಮುದಧೇರಿವೋರ್ಮಿನಿಕರಾ ಮುಖರಾಃ ||

ದಿಗ್ವಿಜಯಕ್ಕಾಗಿ ಉದ್ಯುಕ್ತನಾದ ಪ್ರಭು ಅಚ್ಯುತರಾಯನನ್ನು ನೋಡಿ ಯೋಧರು ಸಿಂಹನಾದವಾದೊಡನೆ ಸುತ್ತುವರಿದರು. ಹೇಗೆಂದರೆ ಕತ್ತಲನ್ನು ಕಳೆಯುವ ಚಂದ್ರನನ್ನು ನೋಡಿ ಶಬ್ದಮಾಡುವ ಸಮುದ್ರದ ತರಂಗಗಳಂತೆ.

೧೦. ಅಖಿಲೈರ್ಬಲೈರನುಗತಂ ವಿಶಿಖಾ
ಮವಗಾಹಮಾನಮವನೀರಮಣಮ್ |
ಹರಿಣೀದೃಶೋsಪ್ಯನುಯಯುರ್ಹೃದಯೈ
ರವಲೋಕನೈರಪಿ ಹರ್ಮ್ಯಜುಷಃ ||

ರಥ, ಗಜ, ತುರಗ, ಪದಾತಿರೂಪವಾದ ಸಮಸ್ತ ಸೈನ್ಯದಿಂದ ಅನುಸರಿಸಲ್ಪಟ್ಟು ರಾಜಮಾರ್ಗದಲ್ಲಿ ಬರುವ ಅಚ್ಯುತರಾಯನನ್ನು, ಅರಮನೆಯ ಉಪ್ಪರಿಗೆಯಲ್ಲಿರುವ ಯುವತಿಯರು ಕೂಡ ತಮ್ಮ ಮನೋಭಿಲಾಷೆಯಿಂದ ಕೂಡಿದ ನೋಟಗಳಿಂದ ಅನುಸರಿಸಿದರು.

೧೧. ವಿಪಣೌ ವಲೇನ ನಿಬಿಡಂ ವಲತಾ
ವಿತತಿಂ ಚತುಷ್ಪಥೇ ಭಜತಾ |
ಸ್ತಿಮಿತೇನ ತೋರಣಮುಖೇ ಮಹತಾ
ವಿಲಂಘತೇ ಸ್ಮ ಶನಕೈರ್ನಗರೀಮ್ ||

ಅಂಗಡಿಗಳ ಮಾರ್ಗದಲ್ಲಿ ದಟ್ಟವಾದ ಸಂಚಾರವಿರುವುದರಿಂದ, ಕೂಡುಮಾರ್ಗದಲ್ಲೂ ವಿಸ್ತಾರವನ್ನು ಪಡೆದುಕೊಂಡು ಮಹಾದ್ವಾರದ ಮುಂದಿನ ಭಾಗದಿಂದ ನಿಶ್ಚಲವಾದ ದೊಡ್ಡ ಸೈನ್ಯದೊಂದಿಗೆ ಅಚ್ಯುತರಾಯನು ಸಾವಕಾಶವಾಗಿ ವಿದ್ಯಾನಗರಿಯನ್ನು ದಾಟಿದನು.

೧೨. ಕ್ವಚನ ಪ್ರಚಂಡಕರಿಷಂಡಮಯಂ
ಕ್ವಚಿದಪ್ಯಭಂಗುರ ತುರಂಗಮಯಮ್ |
ಕ್ವಚನೋದ್ಭಟಾಯುಧಭಟೌಘಮಯಂ
ಬಲಮೈಕ್ಷ ದಿಕ್ಷು ಬಹುಧಾ ವಿತತಮ್ ||

ಕೆಲವು ಸ್ಥಳಗಳಲ್ಲಿ ಭಯಂಕರವಾದ ಗಜಗಳ ಸಮೂಹವು, ಕೆಲವು ಕಡೆ ಶಕ್ತಿವಂತವಾದ ಕುದುರೆಗಳು, ಕೆಲವು ಕಡೆ ಭಯಂಕರ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾದ ಯೋಧರು ಹರಡಿಕೊಂಡಿರುವುದು ಕಂಡುಬರುತ್ತಿತ್ತು.

೧೩. ಪರಿಕೀರ್ಣಪುಷ್ಕರಪಯಃ ಕಣಿಕಾ
ಪ್ರಸರಾವಸಿಕ್ತನಿಜಪಾರ್ಶ್ವಯುಗಾಃ |
ಕರಿಣೋ ಯಯುಃ ಕದಲಿಕಾಮರುತಾ
ವಿನಿವಾರಿತಶ್ರಮವಿಯತ್ಪಥಿಕಾಃ ||

ಆನೆಗಳು ತಮ್ಮ ಸೊಂಡಿಲಿನಲ್ಲಿರುವ ನೀರಿನ ಬಿಂದುಗಳಿಂದ ಎರಡು ಬದಿಗಳಲ್ಲಿ ಆರ್ದ್ರತೆಯನ್ನುಂಟು ಮಾಡಿ ಧ್ವಜದ ಗಾಳಿಯಿಂದ ಶ್ರಮನಿವಾರಿಸಿಕೊಂಡು ಅಂತರಿಕ್ಷದಲ್ಲಿ ತೇಲುವಷ್ಟು ಸಹಜವಾಗಿ ದಾರಿಯಲ್ಲಿ ನಡೆದವು.

೧೪. ಭರಿತಾ ರಜೋಭಿರುಪರಿ ಪ್ರಸೃತೈಃ
ಕರಿಣಸ್ತೃಣೀಕೃತಘನಾಪಘನಾಃ |
ಹರಿದಂತಗಂಧಕರಿಣಾಂ ಸರಣೀ
ರಭಜಂತ ಭೂಭರಣತಂತ್ರವತಾಮ್ ||

\ರಸ್ಕೃತಗೊಂಡ ಮೋಡದ ತುಣುಕಿನಂತೆ ಆನೆಗಳು, ತಮ್ಮ ಮೇಲ್ಭಾಗದಲ್ಲಿ ಬಿದ್ದ ಧೂಳಿನಿಂದ ತುಂಬಿದರೂ ಭೂಭಾರ ಹರಣ ಸಿದ್ಧಾಂತದಂತೆ ದಿಗಂತಗಳಲ್ಲಿ ಕಾಣುವ ಮದಗಜಗಳ ಮಾರ್ಗಗಳನ್ನು ಅನುಸರಿಸಿದವು.

೧೫. ಸೃಣಿಕೋಣತಃ ಶಿರಸಿ ಹಸ್ತಿಪಕಃ
ಪ್ರಹರನ್ಪುರಶ್ಚಟುಲತೋತ್ರಿಕುಲಮ್ |
ಅಪಥಂ ನಿನಾಯ ಸಮದಂ ದ್ವಿರದಂ
ಪುರುಷೋದಿತೇನ ಪರಿಧಾವ್ಯ ಜನಾನ್ ||

ಅಂಕುಶದಿಂದ ಮಾವಟಿಗನು ತಲೆಯಲ್ಲಿ ತಿವಿದಾಗಲೂ, ಮುಂದೆ ಅತ್ತಿತ್ತ ಓಡಾಡುವ ಮಾವಟಿಗರ ಕುಲವನ್ನು ನಿಷ್ಠುರವಾಗಿ ತುಳಿದು ಹೋಗುವ ಮದೋನ್ಮತ್ತ ಆನೆಯಂತೆ ದಾರಿಯಿಲ್ಲದ ಪ್ರದೇಶಕ್ಕೆ ಹೋದನು.

೧೬. ಅವಟೇsವತಾರಿತಭರೌಘ ಇವ
ದ್ರುತಮುನ್ನತೇ ದ್ವಿಗುಣಭಾರ ಇವ |
ಶಕಟಂ ಸಮೇ ಪಥಿ ಚಕರ್ಷ ಧೃತಾ
ಧೃತಭೂರಿಭಾರ ಇವ ಭದ್ರಗಣಃ ||

ಎತ್ತುಗಳ ಸಮೂಹವು ದಾರಿಯಲ್ಲಿ ಯಾವುದೇ ಏರಿಳಿತವಿಲ್ಲದೇ ಹಳ್ಳ ತಗ್ಗುಗಳಲ್ಲಿ ವೇಗವಾಗಿ ಇಳಿಯುತ್ತಲೂ ಎರಡರಷ್ಟು ಭಾರಹೊತ್ತು ವೇಗವಾಗಿ ಮೇಲೇರುತ್ತಲೂ ಎದ್ದು ಕಾಣುವ ಅಧಿಕ ಭಾರದಿಂದ ಬಂಡಿಯನ್ನು ಎಳೆಯುತ್ತಿದ್ದವು.

೧೭. ವಹಮಾನವಾಹಲಹರೀನಿವಹೇ
ವಸುಧಾ ನಿಮಜ್ಜ್ಯ ಬಲವಾರಿನಿಧೌ |
ನಿಜಗಾದ ನಿರ್ಭರಪರಾಗಭುಜೋ
ನ್ನಮನೇನ ಗಾಧಮದಸೀಯಮಿವ ||

ಭೂಮಿಯೇ ಮುಚ್ಚಿರುವ ಹಾಗೇ ಕಾಣುವ, ಸೇನಾಸಾಗರದಲ್ಲಿ ಚಲಿಸುತ್ತಿರುವ ಅಶ್ವಗಳು ಅಲೆಗಳ ಸಮೂಹಗಳಂತೆ ಕಾಣುತ್ತಿದ್ದವು. ಮೇಲೆದ್ದ ದಟ್ಟವಾದ ಧೂಳಿನಿಂದಾಗಿ ಈ ಸೇನಾ ಸಾಗರವು ಕ್ಷೀಣಸ್ವರದಲ್ಲಿ ಮಾತನಾಡಿತು.

೧೮. ಅಭಿಪಾತಿ ಹಸ್ತಯುಗಲೇನ ರಜೋ |
ನಿಖಿಲಾಸು ದೃಷ್ಟಿಷು ನಿವಾರಯಿತುಮ್
ಅಪಟುಃ ಶಚೀಪತಿರದೂಯತ
ತ್ಫಲಿತಾ ಕಿಮಸ್ಯ ಪರದಾರಗತಿಃ ||

ಇಂದ್ರನು ಎರಡು ಕೈಗಳಿಂದ ಎಲ್ಲರ ಕಣ್ಣುಗಳಲ್ಲಿ ಬಿದ್ದಿರುವಂತಹ ಧೂಳನ್ನು ನಿವಾರಿಸಲು ಅಶಕ್ತನಾಗಿ ವಿಷಣ್ಣನಾದನು. ಅಂದರೆ ಕೈಗಳಿಂದಲೇ ಎಲ್ಲರಲ್ಲಿಯೂ ಸದ್ಭಾವದಿಂದ ಕಣ್ಣುಗಳನ್ನು ಮುಚ್ಚಲು ಸಾಧ್ಯವಿರುವ ದೇವನಿಂದ ಕಣ್ಣುಮುಚ್ಚಿಕೊಳ್ಳುವ ರೀತಿಯಾಯಿತು. ಅಂತಹ ಇಂದ್ರನಿಗೆ ಪರಸ್ತ್ರೀ ಗಮನ ದೋಷ ಉಂಟಾಗಿ ಪರಿಣಾಮ ದುಃಖವೇ ಆಯಿತಲ್ಲವೇ

೧೯. ನಿಬಿಡಂ ಪತತ್ಸು ರಜಸಾಂ ನಿವಹೇ
ಷ್ಟಧಿನಂದನೋಪವನಮಭ್ರಧುನೌ |
ಅಭಿಧಾನಮರ್ಥವದದೋಜನುಷೋ
ರಜನಿಷ್ಟ ಭೂಮಿರುಹಪಂಕಜಯೋಃ ||

ನಂದನವೆಂಬ ವನದಲ್ಲಿ ನಿರಂತರವಾಗಿ ಬೀಳುವ ಗಂಗೆಯ ಸಾನಿಧ್ಯವಿದ್ದರೂ, ಆ ಪರಾಗದಿಂದುಂಟಾದ ಕೆಸರಿನಲ್ಲಿ ಪಂಕಜಹುಟ್ಟದೇ ಭೂಮಿಯಲ್ಲಿನ ಸಾಮಾನ್ಯ ಕೆಸರಿನಲ್ಲಿ ಪಂಕಜ ಬೆಳೆಯುವ ಹಾಗೆ.

೨೦. ಪಣಿನಾಯಕಃ ಫಣನಿಮಗ್ನಮಣೀ
ಪಟಲೋಬಲೇ ಪರಿಚಲೇ ಪ್ರಬಲೇ |
ಅಸಕೃಚ್ಛಿರೋವಿನಿಮಯಾದವನೀಂ
ವಹತಿ ಸ್ಮ ವಾಮನಸಿರಾಲಗಲಃ ||

ಬಲಿಷ್ಠವಾದ ಸೈನ್ಯವು ಹೋಗುತ್ತಿರುವಾಗ ಆದಿಶೇಷನು ತಲೆಯ ಮೇಲಿನ ಭಾರವನ್ನು ಕಡಿಮೆ ಮಾಡಲು, ಕುತ್ತಿಗೆಯನ್ನು ಬದಲಾಯಿಸುವದು, ಮತ್ತೆ ಹೊರೆಯಿಂದ ಮಣಿರಾಶಿಯನ್ನು ಕಡಿಮೆಮಾಡಿ, ಭೂಮಿಯ ಸ್ಥಾನವನ್ನು ಮತ್ತೆ ಮತ್ತೆ ಬದಲಾಯಿಸುವಂತೆ ಕಾಣಿಸುತ್ತಿತ್ತು.

೨೧. ವಿಭುನಾಮುನಾ ವಿಲಸತಾ ಪರಿತಃ
ಸಕಲಂ ಪ್ರಕಾಶ್ಯ ಚತುರಂಗಬಲಮ್ |
ಸ್ಫುಟವಿಶ್ವರೂಪಮಹಿಮಾತಿಶಯಃ
ಪುರುಷೋಜನಿಷ್ಟ ಪುನರುಕ್ತ ಇವ ||

ಸುತ್ತಲೂ ಚದುರಂಗ ಸೈನ್ಯವನ್ನು ಪ್ರದರ್ಶಿಸುತ್ತಾ ವಿರಾಜಿಸುತ್ತಿರುವ ಪ್ರಭು ಅಚ್ಯುತರಾಯನು ಎಲ್ಲವನ್ನು ವ್ಯಾಪಿಸಿ ಎಲ್ಲರಿಗೂ ಕಾಣುವ ವಿಶ್ವರೂಪದರ್ಶನದಿಂದ ಪರಮಪುರುಷನಾದ ನಾರಾಯಣನ ಅನುರೂಪವೇ ಆದನು. ಈ ರೀತಿ ವಿಶ್ವರೂಪ ಧರಿಸಿದ ನಾರಾಯಣನನ್ನು ಸಮಸ್ತ ಲೋಕವು ಅನುಸರಿಸಿತು.

೨೨. ಅಥ ವೇದಿಕಾಮಮರಮೌಲಿಮಣೀ
ರವಧೂತಮಂದರಮಹೇಂದ್ರಗಿರಿಮ್ |
ಶನಕೈರಗಾಹತ ಚಂದ್ರಗಿರಿಂ
ನಗರೀಂ ಶ್ರೀಯಾ ಹಸ್ತಿನಾಕಪುರೀಮ್ ||

ಅಚ್ಯುತರಾಯನು ಭಗವಂತನ ನೆಲೆಯಾದ ಮಂದರ ಮಹೇಂದ್ರ ಪರ್ವತಗಳ ಔನ್ನತ್ಯವನ್ನು ನಿರಾಕರಿಸಿದ, ಸಮೃದ್ದಿಯಲ್ಲಿ ಸ್ವರ್ಗದ ಅಮರಾವತಿಯನ್ನು ಹಾಸ್ಯಮಾಡುವ ಚಂದ್ರಗಿರಿ ಎಂಬ ಗಿರಿ ಪ್ರದೇಶವನ್ನು ಪ್ರವೇಶಿಸಿದನು.

೨೩. ಅಖಿಲಾನಿ ತತ್ರ ವಿನಿವೇಶ್ಯ ಬಲಾ
ನ್ಯವಿಲಂಬಿತಂ ಸಮವರುಹ್ಯ ಹಯಾತ್ |
ಹರಿಪಾದಭಕ್ತಿಟುವಲಂಬ್ಯ ನೃಣಾ
ಮಧಿಪೋsಧ್ಯರುಕ್ಷದಹಿರಾಜಗಿರಿಮ್ ||

ಅಚ್ಯುತರಾಯನು ಚಂದ್ರಗಿರಿಯಲ್ಲಿ ಸಮಸ್ತ ಸೈನ್ಯವನ್ನು ಇಳಿಸಿ ಕುದುರೆಯಿಂದ ಇಳಿದು ನಾರಾಯಣನ ಚರಣಾರವಿಂದಗಳಲ್ಲಿ ಭಕ್ತಿಯನ್ನಿರಿಸಿ ಶೇಷಗಿರಿಯನ್ನು ಏರಿದನು.

೨೪. ಜ್ವಲಿತೈರ್ವಿವಾರ್ಕಮಣಿಭಿರ್ನಿಶಿ ಯಃ
ಸ್ಫುಟಮೋಷಧೀಭಿರಧಿಶೃಂಗತಟಮ್ |
ಸಫಣಾಮಣೀಗಣ ಇವಾರ್ಥವತೀ
ಮಭಿಧಾಮಹೀಂದ್ರಗಿರಿರಿತ್ಯಯತೇ ||

ಈ ಗಿರಿಪ್ರದೇಶವು ಹಗಲಿನಲ್ಲಿ ಸೂರ್ಯಕಾಂತ ಮಣಿಗಳಿಂದ ರಾತ್ರಿಯಲ್ಲಿಔಷಧಿಗಳೆಂಬ ಜ್ಯೋತಿರ್ಲತೆಗಳಿಂದ, ಹೆಡೆಯಲ್ಲಿ ರತ್ನವಿರುವ ಸರ್ಪಗಳಂತೆ ಶೇಷಾದ್ರಿ ಎಂಬ ಸಾರ್ಥಕವಾದ, ಔಚಿತ್ಯಪೂರ್ಣವಾದ ಹೆಸರನ್ನು ಪಡೆದುಕೊಂಡಿತ್ತು.

೨೫. ಕ್ಷಿತಿಪಾಲಮಂಡಲಕಿರೀಟಮಣೀ
ಪರಿಶೀಲನಾದಿವ ಪದದ್ವಿತಯಮ್ |
ಅಯಮಕ್ಷಮಿಷ್ಟ ವೃಷಭಾದ್ರಿಶಿಲಾ
ಸ್ವತಿಕರ್ಕಶಾಸು ನಿಜಮರ್ಪಯಿತುಮ್ ||

ರಾಜರುಗಳ ಕಿರೀಟಗಳಲ್ಲಿರುವ ರತ್ನದ ಕಾಠಿನ್ಯದ ಅಚ್ಯುತರಾಯನು ಪರಿಚಯವಿರುವ, ಅತಿ ಕಠಿಣವಾದ ವೃಷಭಾಚಲದ ಕಲ್ಲುಗಳಲ್ಲಿ ತನ್ನ ಪಾದಗಳನ್ನು ಇಡಲು ಸಮರ್ಥನಾದನು.

೨೬. ಪರಿಣೀಃ ಕ್ಷಿತೇರಥ ಕೃತಸ್ನಪನಃ
ಪರಿಧಾಯ ಧೌತಸಿಚಯದ್ವಿತಯಮ್ |
ಅವಗಾಹತೇ ಸ್ಮಮಣಿಧಾಮ ಹರೇ
ರದಸೀಯಚಿತ್ತಮಪಿ ಭಕ್ತಹಿತಃ ||

ಭೂಮಿಯ ನಾಯಕನಾದ ಅಚ್ಯುತರಾಯನು ಸ್ನಾನಾದಿಗಳನ್ನು ಮಾಡಿ, ಶುಚಿಗೊಳಿಸಿದ ವಸ್ತ್ರಯುಗ್ಮವನ್ನು ಧರಿಸಿ ವಿಷ್ಣುವಿನ ರತ್ನಖಚಿತ ಗೃಹವನ್ನು ಪ್ರವೇಶಿಸಿ ಭಕ್ತರ ಹಿತೈಷಿಯಾದ ಹರಿಯಲ್ಲಿ ಮನಸ್ಸನ್ನಿಟ್ಟನು.

೨೭. ವಪುಷಾ ವಲಾಹಕವಲಾರಿಶಿಲಾ
ವಹಮಾನರೋಚಿರವಮಾನಪುಷಾ |
ಅವತಾರಯಂತಮಹಿಮಾಂಶುಸುತಾ
ಮಪರಾಂ ಪದಾದಮರಸಿಂಧುಮಿವ ||

ಮೇಘವು, ಇಂದ್ರನೀಲರತ್ನವು ಹರಡುವ ಕಾಂತಿಯನ್ನು ತಿರಸ್ಕಾರ ಮಾಡುವುದಕ್ಕಾಗಿ ಶರೀರದ ಮೇಲೆ ಧರಿಸುವದಕ್ಕಿಂತ ಪಾದದಡಿಯಲ್ಲಿರುವ ಪವಿತ್ರವಾದ ಗಂಗೆಯಂತೆ ಇನ್ನೊಂದು ರೂಪವಾಗಿ ಯಮುನೆಯಾಗಿ ಪರಿವರ್ತಿತವಾಗಿ ಪ್ರವಹಿಸುತ್ತಿತ್ತು.

೨೮. ನಮತಾಮಿವಾಥ್ಯಹರಣಾಯ ನೃಣಾಂ
ನವರೋಚಿಷಾಂಜನವಿಶೇಷಪುಷಮ್ |
ಜಗತೀಮಿವಾರ್ಪಯಿತುಮಾದಧತ್ತಂ
ಜಠರೇಷು ವಂಧ್ಯಸುದೃಶಾಂ ಕ್ರಮಶಃ ||

ಭಕ್ತಿಯಿಂದ ನಮಿಸುವ ಮನುಷ್ಯರಿಗೆ ನೂತನಕಾಂತಿ ವಿಶಿಷ್ಟವಾದ ಕಾಡಿಗೆಯನ್ನು ತೀಡಿ ಅಂಧತ್ವ ಕಳೆಯುವ, ಮಕ್ಕಳಿಲ್ಲದ ಬಂಜೆಯರಿಗೆ ಸಂತಾನ ಕರುಣಿಸುವ ಜಗತ್ತನ್ನು ಧಾರಣಮಾಡಿ ನಿಂತಿರುವ

೨೯. ಪ್ರಥಮಾನಚಿತ್ಫಲಗುರುಂ ದ್ಯುತರುಂ
ಮುನಿಮಾನಸಾಂಬರಚರಂ ಮುದಿರಮ್ |
ಭವತಾರಣೀಂ ಪ್ರಣಮತಾಂ ತರಣೀಂ
ಶುತಿಶಾಖಿಕಾಗ್ರಸುಖಿನಂ ಶಿಖಿನi ||

ಪ್ರಸಿದ್ಧವಾದ ಜ್ಞಾನವೆಂಬ ಫಲವನ್ನು ಕೊಡುವ ಗುರುವಾದ ಕಲ್ಪವೃಕ್ಷವನ್ನು, ಮುನಿಗಳ ಮನಸ್ಸೆಂಬ ಆಕಾಶದಲ್ಲಿ ಚಲಿಸುವ ಮೇಘವನ್ನು, ಭಕ್ತರ ಸಂಸಾರಸಮುದ್ರವನ್ನು ದಾಟಿಸುವ ನಾವೆಯನ್ನು ವೇದವೆಂಬ ಶಾಖೆಯ ತುದಿಯಲ್ಲಿ ಸುಖಾಸೀನವಾಗಿರುವವನನ್ನು ಅಥವಾ ಕೊಂಬೆಯ ತುದಿಯಲ್ಲಿ ಕುಳಿತ ಮಯೂರವನ್ನು | ಅಥವಾ ವೇದ ಶಾಖಾಗ್ರವಾದ ಉಪನಿಷತ್ತು ಎಂದರ್ಥ.

೩೦. ಅಜಮವ್ಯಪಾಯಮಜರಂ ಜಗತಾ
ಮವನೈಕತಾನಮನಿದಾನದಯಮ್ |
ಅಭಿವಂಧ್ಯ ಕಾಮಫಲದಂ ಧರಣೇ
ರದಿಭೂಃ ಸಮಾರಭತ ವರ್ಣಯಿತುಮ್ ||

ಹುಟ್ಟು ಸಾವುಗಳಿಲ್ಲದಿರುವ, ಮುಪ್ಪಿಲ್ಲದಿರುವ, ಲೋಕಗಳ ರಕ್ಷಣೆಗೆ ಬದ್ಧವಾಗಿರುವ ಕೃಪಾಳುವಾದ, ಸರ್ವಾಭಿಷ್ಠ ಪೂರೈಸುವ ಭಗವಂತನಿಗೆ ನಮಸ್ಕರಿಸಿ ಭೂಮಿಯ ಅಧಿನಾಯಕನಾದ ಅಚ್ಯುತರಾಯನು ಸ್ತುತಿಸಲು ಪ್ರಾರಂಭಿಸಿದನು.

೩೧. ಜನಿಸಂಹೃತಿಸ್ಥಿತಿಕೃತೇ ಜಗತಾಂ
ಶ್ರಮಮೇಕ ಎವ ಭಜಾಮಿ ಪುರಾ |
ಇತಿ ಕಿಂ ತ್ರಿಧೈವ ಭವಾನಭವ
ದ್ವಿಧಿರಿತ್ಯುಮೇಶ ಇತಿ ವಿಷ್ಣುರಿತಿ ||

ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯ ನಿಮಿತ್ತಾರ್ಥಕವಾದ ಶ್ರಮವನ್ನು ಒಬ್ಬನೇ ಹೊರಲು ಅಸಹಾಯಕನಾಗಿದ್ದೇನೆ. ಮೊದಲು ನಿನ್ನನ್ನು ಆಶ್ರಯಿಸಲಿಲ್ಲ ಎಂದು ತಿಳಿದು ಪೂಜ್ಯನಾದ ನೀನು ದೈವವಾಗಿರುವೆ. (ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಸ್ವರೂಪವಾಗಿ)

೩೨. ಅನಿಲೋsನಲಃ ಸಲಿಲಮಿಂದುರಿನಃ
ಕಕುಭೋ ನಭೋ ವಸುಮತೀತ್ಯಖಿಲಮ್ |
ಫಣಭೃತ್ಫಣಾಗ್ರನಟನಸ್ಯ ವಿಭೋ
ಭವತೋ ವಿಭಾತಿ ಬಹುರೂಪಮಿದಮ್ ||

ಹೇ ಪ್ರಭುವೇ ವಾಯು, ಅಗ್ನಿ, ಜಲ, ಚಂದ್ರ, ಸೂರ್ಯ, ದಿಕ್ಕು, ಆಕಾಶ, ಭೂಮಿ ಎಂಬುದಾಗಿ ಸಮಸ್ತವನ್ನು ಧಾರಣಮಾಡಿದ ನೀನು ಕಾಳಿಂಗ ಸರ್ಪದ ಹೆಡೆಯ ಮೇಲೆ ನರ್ತನ ಮಾಡಿ ಅಂದರೆ ಶೇಷಾದ್ರಿಯ ಮೇಲೆ ನೆಲೆಸಿರುವ ನಿನ್ನಲ್ಲಿ ಬಹುರೂಪವನ್ನು ಕಾಣುತ್ತಿರುವೆ.

೩೩. ಅನುಪಾಧಿಕೋಕ್ತಿರಧಿದೈವವತೀ
ಜಗತೀ ಸ್ಥಿತಿಪ್ರಲಯಸರ್ಗವತೀ |
ಅಪವರ್ಗವೈಭವವತೀ ವಿಲಸ
ತ್ಯಪಿ ಮಂಡಲೀ ಶಮವತಾಂ ಭವತಾ ||

ವೇದಗಳು ನಿನ್ನಿಂದ ರಕ್ಷಿಸಲ್ಪಡುತ್ತವೆ. ಜಗತ್ತು ಸೃಷ್ಟಿ, ಸ್ಥಿತಿ, ಲಯಗಳಿಂದ ಕೂಡಿ ನಿನ್ನಿಂದ ನಿರ್ವಹಿಸಲ್ಪಡುತ್ತದೆ. ಯೋಗಿಗಳ ಗಣವು ನಿನ್ನಿಂದ ಮೋಕ್ಷದ ಮಹಿಮೆಯನ್ನು ಅರಿತುಕೊಳ್ಳುತ್ತದೆ.