೩೨. ಪ್ರಾಕ್ತನೇsಪಿ ಕುಟಜೇ ಪಯೋರುಹಾ
ಮಂಕುರೇsಪ್ಯನುಪಲಬ್ದಶೀಧವಃ |
ಮಾರದೈವತಮುದೇ ಮಧುವ್ರತಾ
ನಿಶ್ಚಯಾನ್ನಿರಶನವ್ರತಂ ದಧುಃ ||

ಭೃಂಗಗಳು ಬತ್ತಿಹೋದ ಕುಟಜಕುಸುಮದಲ್ಲಿಯೂ, ಪದ್ಮಗಳ ಮೊಗ್ಗುಗಳಲ್ಲಿಯೂ ಕೂಡ ಲಭ್ಯವಾಗದ ಮಕರಂದದಿಂದಾಗಿ ಮಕರಂದ ಸಿಗದೇ ಹೋಗಲು ಮನ್ಮಥನೆಂಬ ದೇವತೆಯ ಸಂತೋಷಕ್ಕಾಗಿ ನಿಶ್ಚಯವಾಗಿಯೂ ನಿರಶನ ವ್ರತವನ್ನು ಆಚರಿಸಿದವು.

೩೩. ಪಾಲಿತಾಖಿಲಭುವಾಂಬುವರ್ಷತಃ
ಪ್ರಾವೃಷಾಜನಿ ಶೈನೈಃ ಪ್ರಶಾಂತಯಾ |
ಪಾಂಡುಠಾಂಬುದಪರಂಪರಾನಿಭಾ
ದ್ಭಾಸತೇಸ್ಮದಿವಿ ತದ್ಯಶೋಭರಃ ||

ಸಮೃದ್ಧ ವರ್ಷಾಧಾರೆಯಿಂದ ಸಮಸ್ತ ಭೂಮಿಯು ಸಂಪೋಷಿತವಾಯಿತು. ವರ್ಷಾಕಾಲದಿಂದ ಕ್ರಮೇಣ ಶಾಂತವಾಯಿತು. ಸಮೃದ್ದಿಯ ದ್ಯೋತಕವಾಗಿ ಕೀರ್ತಿಯಭಾರದಿಂದ ಬಿಳಿಯದಾದ ಮೋಡಗಳು ಸಾಲಾಗಿ ಹೋಗುವ ನೆಪದಿಂದ ಆಕಾಶದಲ್ಲಿ ಮತ್ತು ಸ್ವರ್ಗದಲ್ಲಿ ಶೋಭಿಸುತಿದ್ದವು.

೩೪. ಆಸ್ತಿಕಸ್ತದನು ಹಲ್ಲಕಶ್ರೀಯಾಂ
ನಾಸ್ತಿಕಃ ಕುಟಜನೀಪಸಂಪದಾಮ್ |
ಪ್ರಾದುರಾಸ ವಿಧುಭಾನುಮತ್ವಿಷಾಂ
ಪ್ರತ್ಯವಾಯವಿಗಮೋ ಘನಾತ್ಯಯಃ ||

ವರ್ಷಾಕಾಲದನಂತರ ರಕ್ತಕಲ್ಹಾರಲಕ್ಷ್ಮೀಯ ಅನುಕೂಲಕ್ಕಾಗಿ ನೀಪಗಳ ಸಮೃದ್ದಿಯ ಅನಾನುಕೂಲಕ್ಕಾಗಿ ಚಂದ್ರನ ಮತ್ತು ಸೂರ್ಯನ ಕಾಂತಿಯನ್ನು ನಾಶಪಡಿಸಿ ಪಾಪ ಕಾರ್ಯಕ್ಕೆ ನಿವರ್ತಕನಾದ ಶರತ್ಕಾಲವು ಅವಿರ್ಭವಿಸಿತು.

೩೫. ಪಾಥಸಃ ಸಮುದಯನ್ಪ್ರಶುಷ್ಯತಃ
ಪದ್ಮಗರ್ಭಪರಿಲೀನಷಟ್ಟಿದಃ |
ದೃಷ್ಟಗಾಧ ಇವ ದರ್ಶಯನ್ ಶಯೇ
ಕರ್ದಮಂ ಕಮಲಿನೀಗಣೋ ಬಭೌ ||

ಬತ್ತಿಹೋಗುತ್ತಿರುವ ನೀರಿನಿಂದಾಗಿ ಕಮಲದ ಮಧ್ಯದಲ್ಲಿ ಕುಳಿತಿರುವ ಭ್ರಮರವು ಕಮಲದ ಪಕಳೆಗಳ ಮುಚ್ಚುವಿಕೆಯಿಂದ ಸಿಕ್ಕಿಹಾಕಿಕೊಂಡಂತೆ ಕಂಡರೂ ಕಮಲಗಳ ಸಮೂಹದಲ್ಲಿ ಆಳದಲ್ಲಿ ಕೆಸರಿನಲ್ಲಿ ಮಲಗಿದಂತೆ ಕಾಣಿಸುತ್ತಿತ್ತು.

೩೬. ಕುಂಠಿತೇಷು ಕುಷುಜಾದೀಷು ಸ್ಮರಃ
ಕೋರಕೇಷ್ವಯುತಭೇದನಾದಿವ |
ಅದದೇ ಪುನರದೋವ್ಯಥಾಕೃತೇ
ಹಲ್ಲಕಾಂಬುಜಮುಖಾಂಚ್ಛಿಲೀಮುಖಾನ್ ||

ಕುಟಜ, ಕೋರಕ ಪುಷ್ಪಗಳಿಂದಲೂ ವಿರಹಿಗಳಿಗೆ ದುಃಖದಲ್ಲಿ ಭೇದಕಾಣದೇ ಜರ್ಜರಿತರಾದುದರಿಂದ ಮನ್ಮಥನು ಮತ್ತೆ ವಿರಹಿಗಳ ದುಃಖನಿಮಿತ್ತಕವಾದ ಈ ಹೂಗಳನ್ನು ಬಿಟ್ಟು ರಕ್ತಕಲ್ಹಾರ ಪುಷ್ಪಗಳನ್ನು ತನ್ನ ಬಾಣಗಳಾಗಿ ಸ್ವೀಕರಿಸಿದನು.

೩೭. ವಿದ್ಯುತಾಮಿವ ವಿಯೋಗವಿಕ್ಲವಾಃ
ಕ್ವಾಪಿ ಮೌನಭರಿತಾಃ ಕ್ರಮಾತೆಕೃಶಾಃ |
ಪಾರಣೇಪಿ ಪಯಸ ಪರಾಙ್ಮುಖಾಃ
ಪಾಂಡಿಮಾನಮವಹನ್ವಯೋಮುಚಃ ||

ಮೇಘಗಳು ಮಿಂಚೆಂಬ ನಾಯಿಕೆಯ ವಿರಹದಿಂದ ಎಲ್ಲಿಯೋ ಮೌನದಿಂದ ಸುಮ್ಮನಿದ್ದು ಕ್ರಮವಾಗಿ ಕೃಶಗೊಂಡವು. ನೀರನ್ನು ಪಾರಣೇ ಮಾಡದೇ ಇರುವದರಿಂದ ಬಿಳಿಪಾದವು ಅಥವಾ ಕೃಶತೆಯಿಂದ ಪಾಂಡುವರ್ಣವನ್ನು ಹೊಂದಿದವು.

೩೮. ಪನ್ನಗೇಂದ್ರಶಯನಾಂತರೇ ಪರಃ
ಪುರುಷಃ ಸಮಜನಿಷ್ಟ ಬೋಧವಾನ್ |
ಇತ್ಯಸಂಶಯಮಪಾಂ ನಿಧಿಂ ಹ್ರೀಯಾ
ನಾಶ್ರಯನ್ನವನವಾ ನದೀಪ್ರಿಯಾಃ ||

ಆದಿಶೇಷನ ಮೇಲೆ ಮಲಗಿದ ಪರಮಪುರುಷ ನಾರಾಯಣನು ಎಚ್ಚರಗೊಂಡ ಕೂಡಲೇ ಲಜ್ಜೆಯಿಂದ ನೂತನ ವಧುಗಳಾದ ನದಿಗಳು ಗಂಡನೆನಿಸಿದ ಸಮುದ್ರವನ್ನು ಸೇರುವುದಿಲ್ಲ ಎನ್ನುವುದು ನಿಶ್ಚಯವು.

೩೯. ಶಾಂತಿಮೇಯುಷಿ ಪುರಃ ಸಮೀರಣೇ
ಕರ್ದಮೇsಪಿ ಕರಕೋಪಲೈಃ ಸಹ |
ಶಾರದಾಗಮಸಮಂಚಿತಃ ಕುತೋs
ಪ್ಯಸ್ಖಲದ್ಗತಿರಭೂದ್ರಥೋ ವಿಧೇಃ ||

ಸಾವಧಾನವನ್ನು ಹೊಂದಿದರೂ, ಪ್ರತಿಕೂಲಗಾಳಿಯಲ್ಲೂ, ಕೆಸರಿನಲ್ಲಿಯೂ ಆಲಿಕಲ್ಲುಗಳು ಬೀಳುತ್ತಿದ್ದರೂ ಕೂಡ ಬ್ರಹ್ಮನ ಮುಖವು ಆಗಮಗಳಿಂದ ಕೂಡಿ ಶೋಭಿತವಾಗಿರುತ್ತದೆ. ಎಲ್ಲಿಯೂ ಕೂಡ ಅಡೆತಡೆಗಳಿರುವುದಿಲ್ಲ. ರಥವು ಹೋಗುವಾಗ ಕೆಸರಿದ್ದರೆ ಚಲಿಸಲು ಸಾಧ್ಯವಿಲ್ಲವೆಂಬುದು ಸರ್ವವಿದಿತ. ಇನ್ನೊಂದರ್ಥ ಶರತಋತುವಿನ ಆರಂಭಕ್ಕೆ ಹಂಸಗಳು ಮಾನಸಸರೋವರಕ್ಕೆ ಹೋಗುತ್ತವೆ.

೪೦. ಪಾಲನಾಯ ಪರಿಬದ್ಧಕಂಕಣೇ
ಷ್ವಂಬುದೇಷು ಕೃಶತಾಮಪೋಹಿತುಮ್ |
ಅಕ್ಷಮಾ ಇವ ಭೃಶಂ ನಮನ್ಮುಖಾಃ
ಶಾಲಯಃ ಕಣಿಶಸಂಭೃತಾ ಬಭುಃ ||

ಕಣಿಶ, ಸಸ್ಯಮಂಜರಿಗಳಿಂದ ಸಂಪದ್ಭರಿತವಾಗಿದ್ದರೂ ಸಾಲವೃಕ್ಷಗಳು ತನ್ನ ಪೋಷಣೆಗಾಗಿ ಕಂಕಣಬದ್ಧವಾಗಿರುವ ಮೇಘಗಳಲ್ಲಿ ಕೃಶತೆಯನ್ನು ಹೋಗಲಾಡಿಸಲು ಅಂದರೆ ಮಳೆಯನ್ನು ತರಲು ಅಶಕ್ಯವಾಗಿ ಅತ್ಯಂತ ಲಜ್ಜೆಯಿಂದ ಮುಖವನ್ನು ಕೆಳಗಾಗಿಸಿದಂತೆ ಕಂಡವು.

೪೧. ಸಂಚಲಚ್ಛಫರಲೋಚನಾಃ ಸ್ಖಲ
ಚ್ಚಙಾಕ್ರಮಾ ನವವಧೂಜನಾ ಇವ |
ಅಂಬುಧೀಂ ಪತೀಮಶಿಶ್ರಿಯಂಛನೈ
ರಾಪಗಾಃ ಶಮಿತನೀಪದೀಪಿಕಾಃ ||

ಚಲಿಸುತ್ತಿರುವ ಮೀನುಗಳ ಕಣ್ಣುಗಳು ಓಡುತ್ತಿರುವ/ಪ್ರವಹಿಸುವ ನದಿಯು, ನವವಧುಗಳಂತೆ ಮುಗ್ಧವಾಗಿ ಶಾಂತವಾದ ಕದಂಬಪುಷ್ಪಗಳ ದೀಪದಂತೆ ಗಂಡನಾದ ಸಮುದ್ರವನ್ನು ಸಾವಕಾಶವಾಗಿ ಆಶ್ರಯಿಸುತ್ತವೆ.

೪೨. ಐಕ್ಷವೈರ್ಮಣಿಭಿರಂತಿಕಚ್ಯುತೈಃ
ಪಾಶಯನ್ನಪರಿಘೋಣೀತೋಜ್ಝಿತೈಃ |
ಪತ್ರಿಣಃ ಕಲಮತಃ ಪಲಾಯಯ
ನ್ಸ್ರಸ್ತಕೇಶತತಿ ಶಾಲಿಗೋಪಿಕಾಃ ||

ಭತ್ತದ ಗದ್ದೆಕಾಯುವ ಹೆಂಗಸರು ಹತ್ತಿರದಲ್ಲಿಯೇ ಅಕ್ಕಿಬಿಡಿಸುವ ಯಂತ್ರದಿಂದ ಬೇರ್ಪಡಿಸಲ್ಪಟ್ಟು ಚೆಲ್ಲಾಡಿದ ಮುತ್ತಿನಂತಿರುವ ಅಕ್ಕಿಕಾಳುಗಳನ್ನು ತಿನ್ನಲು ಬರುವ ಹಕ್ಕಿಗಳನ್ನು ಬಿಚ್ಚಿದ ಕೂದಲುಗಳನ್ನು ಸರಿಪಡಿಸಿಕೊಳ್ಳುತ್ತಲೇ ಓಡಿಸುತ್ತಿದ್ದರು.

೪೩. ಕುಂಠಿತೊರ್ಮಿಭರಶೃಂಗಮಾಪಗಾಃ
ಕೂಲದೇಶದಲನಾದ್ವಯರಂಸಿಷುಃ |
ಉನ್ಮದಾನ್ಯುರುಗಭೀರನಿಸ್ವನಂ
ತತ್ಪುನುರ್ವೃಷಕುಲಾನಿ ತೇ ನಿರೇ ||

ನದಿಯ ನೀರು ಬತ್ತಿಹೋದ ಪರಿಣಾಮವಾಗಿ ಅಲೆಗಳ ಮೊರೆತವಿಲ್ಲದಿರುವ ತೀರಪ್ರದೇಶದಲ್ಲಿ ವಿಶ್ರಮಿಸಿರುವ ವೃಷಭಸಮೂಹವು ಮದೋನ್ಮತ್ತತೆಯಿಂದ ಗಂಭೀರವಾದ ಧ್ವನಿಯಿಂದ ಗುಟುರು ಹಾಕುತ್ತಿದ್ದವು.

೪೪. ಅತ್ತಹರ್ಷಮನುಧಾವಿತಂ ಗವಾಂ
ಮಂಡಲೇನ ಶನಕೈರ್ಮಹೋಧಸಾ |
ತೂರ್ಣಮುನ್ನಮಿತಕರ್ಣವಾಲಕಂ
ತರ್ಣಕಾ ವವಲಿರೇ ತದಗ್ರತಃ ||

ಹರ್ಷದಿಂದ ಕೂಡಿದ, ಹಿಂಬಾಲಿಸಲ್ಪಟ್ಟ ಕರುಗಳುಳ್ಳ, ಗೋವುಗಳ ಸಮೂಹವು ಕೆಚ್ಚಲಿನ ಭಾರದಿಂದ ಮಂದವಾಗಿ ನಡೆಯುತ್ತಿದ್ದರೆ ಕರುಗಳು ಅವುಗಳ ಮುಂದೆ ಕಿವಿಗಳು ಮತ್ತು ಬಾಲಗಳನ್ನು ಎತ್ತಿ ವೇಗವಾಗಿ ಹೋಗುತ್ತಿದ್ದವು.

೪೫. ಹಂಸಲೋಕಮವಕಲ್ಪ್ಯ ದಿಕ್ತಟೇ
ಷ್ಯ್ವಾತ್ತಚಙಕ್ರಮಣಮಂಬುದಾತ್ಯಯಃ |
ವಿಶ್ವದಿಗ್ಜಯವಿನಿರ್ಗಮೇ ವ್ಯಧಾ
ದ್ರಾಜಹಂಸಮಪಿ ರಜ್ಯದಾಶಯಮ್ ||

ಶರತ್ಕಾಲವು ದಿಗಂತಗಳಲ್ಲಿ ಮೂಡಿ ಹಂಸಗಳೆಲ್ಲವೂ ಸಾಲುಸಾಲಾಗಿ ವಿಹಾರಮಾಡುತ್ತಾ ಹೋಗುವದನ್ನು ನೋಡಿ ರಾಜಶ್ರೇಷ್ಠನಾದ ಅಚ್ಯುತರಾಯನು ಕೂಡ ಸಮಸ್ತ ಭೂಮಂಡಲದ ದಿಗ್ವಿಜಯಕ್ಕಾಗಿ ಅಭಿಲಾಷೆಯಿಂದ ಮನಸ್ಸು ಮಾಡಿದನು.

೪೬. ಎಕದಾ ತು ಸಚಿವೋ ಯಥಾಕ್ರಮಂ
ಪ್ರೇಷಿತಪ್ರಣತರಾಜರಾಜಿಕಮ್ |
ಪ್ರಾಪ್ಯ ವೇಂಕಟವಿಲಾಸಮಂಟಪೇ
ಪ್ರಶ್ರಯೇಣ ನಿಜಗಾದ ಪಾರ್ಥಿವಮ್ ||

ಒಂದು ದಿನ ವೆಂಕಟವಿಲಾಸಮಂಟಪದಲ್ಲಿ ಯಥಾರೀತಿ ರಾಜರುಗಳಿಂದ ಕಳಿಸಲ್ಪಟ್ಟ ವಿನಂತಿಪೂರ್ವಕ ವಿಚಾರಗಳನ್ನು ಆಲಿಸುತ್ತಿದ್ದನು. ಆಗ ಸಚಿವನು ಅಚ್ಯುತರಾಯನಿಗೆ ವಿನಯದಿಂದ ಈ ರೀತಿ ಹೇಳಿದನು.

೪೭. ವೇತ್ಸಿ ಕಾರ್ಯಮಖಿಲಂ ವಿಶೇಷತೋ
ವೇದನೀಯಮಿಹ ತೇ ವಿದ್ಯತೇ |
ಶ್ರೋತಮರ್ಹಸಿ ಯದುಚ್ಯತೇ ಮಯಾ
ಮಂತ್ರಿಧರ್ಮ ಇತಿ ಮಾನವೇಶ್ವರ ||

ರಾಜನೇ ಸಮಸ್ತಕಾರ್ಯಗಳನ್ನು ನೀನು ತಿಳಿದೇ ಇರುವಿ. ಇಂಥ ವಿಷಯಗಳಲ್ಲಿ ನಿನಗೆ ಹೇಳುವದು ಏನೂ ಇರುವುದಿಲ್ಲ. ನನ್ನ ಮಂತ್ರಿ ಧರ್ಮಕ್ಕನುಗುಣವಾಗಿ ಅದನ್ನು ಹೇಳುತ್ತಿದ್ದೇನೆ. ಯಾವುದು ಉಚಿತವೋ, ಅದನ್ನು ಕೇಳಲು ನೀನು ಅರ್ಹನಾಗಿರುತ್ತಿ.

೪೮. ಸ್ವಲ್ಪಮಪ್ಯರಿಕುಲಂ ಸುಮೇಧಸಾ
ಪ್ರಮಾದ್ಯಮಿತಿ ನಾಥ ಬುಧ್ಯಸೇ |
ಹಾಸಸಾಥ್ಯಪುರಸಾಧನೆ ಕಿಯ
ತ್ಸಂಗರೋಪಕರಣೋ ಶಂಕರಃ ||

ಹೇ ನಾಥನೇ ಸುಬುದ್ದಿಯುಳ್ಳ ನೀನು ಅಲ್ಪವಾದರೂ ಶತ್ರು ಸಮೂಹವನ್ನು ಉಪೇಕ್ಷಿಸುವವನಲ್ಲ ಪರಮೇಶ್ವರನು ತ್ರಿಪುರಗಳನ್ನು ದಹಿಸುವ ದಾಹವನ್ನು ತಿಳಿದವನಾಗಿ ನೀನು ನಗುವಿನಿಂದಲೇ ಎಲ್ಲವನ್ನು ದಹಿಸುವ ಸಾಮರ್ಥ್ಯವುಳ್ಳವನಾದ ನೀನು ಅಧಿಕಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದವನು.

೪೯. ಕ್ವಾಪಿ ನಾಮ ಭುಜಧಾಮ ಕುತ್ರಚಿ
ತ್ಕಲ್ಪತೇ ಕ್ಷಿತಿಪ ಕಾರ್ಯಸಂಪದೇ |
ಕೋಪಿ ಪುಷ್ಯತಿ ಗಿರೈವ ಸುಭ್ರುವಾಂ
ಪಾದಪಶ್ಚರಣತಾಡನಾತ್ಪರಃ ||

ಹೇ ರಾಜನೇ ಕಾರ್ಯಸಂಪತ್ತಿಯಲ್ಲಿ ಕೆಲವು ಸಲ ಸಾಮೋಪಾಯ ಉಪಯುಕ್ತವಾಗಿರುತ್ತದೆ. ಕೆಲವು ಸಲ ಬಾಹುಪರಾಕ್ರಮವು ಉಪಯುಕ್ತವಾಗಿರುತ್ತದೆ. ಹೇಗೇ ಮಂದಾರ ವೃಕ್ಷವು ಸ್ತ್ರೀಯರ ಮಾತಿನಿಂದ ವಿಕಸಿಸುತ್ತದೆಯೋ. ಅಶೋಕವೃಕ್ಷವು ಪಾದತಾಡನದಿಂದ ವಿಕಸಿಸುತ್ತದೆಯೋ ಹಾಗೇ

೫೦. ಚಾರಕಲೋಕವಿದಿತಾರಿವರ್ತನಃ
ಶತ್ರುಸಾಧನಕೃತೀ ಜಾಯತೇ |
ದಂಡತೋsವಗತಗಾಧನಿರ್ಣಯಃ
ಪಾಥಸೋsವತರಣೇ ಪಟುರ್ಯಥಾ ||

ಕೈಯಲ್ಲಿರುವ ಕೋಲಿಂದ ನೀರಿನ ಆಳವನ್ನು ತಿಳಿಯುವ ಪುರುಷನು ನೀರನ್ನು ದಾಟಲು ಸಮರ್ಥನಾಗುವನು. ಹಾಗೆಯೇ ಗೂಢಚಾರರಿಂದ ಶತ್ರುಸ್ಥಿತಿಯನ್ನು ತಿಳಿದವನು ಶತ್ರುಗಳನ್ನು ಜಯಿಸಲು ಸಮರ್ಥನಾಗುವನು.

೫೧. ಆಕಲ್ಯ ಕಲಹಂ ಮಿಥೋ ರುಷಾ
ಪ್ರಾಪಯೇತ್ವಟುರರೀನ್ಪರಾಭವಮ್ |
ವ್ಯಂಜಯನ್ವ್ಯತಿಹತೀರದೋಭುವಾ
ವಹ್ನಿನೇವ ಪವನೋ ವನದ್ರುಮಾನ್ ||

ಬುದ್ದಿವಂತನು ಪರಸ್ಪರ ಕೋಪದಿಂದ ಜಗಳವನ್ನು ಕಟ್ಟಿಕೊಂಡರೆ ಶತ್ರುಗಳಿಂದ ಪರಾಭವ ಹೊಂದುತ್ತಾನೆ. ಹೇಗೆ ಗಾಳಿ ಬೆಂಕಿ ಪರಸ್ಪರ ಘರ್ಷಣೆಯಿಂದ ಅಗ್ನಿಯುಂಟಾಗಿ ಅಂತಹ ಒಂದು ವೃಕ್ಷವು ಇಡೀ ಕಾಡನ್ನು ನಾಶಮಾಡುವದೋ ಹಾಗೇ.

೫೨. ಸಾಮ ನೈವ ಗಣಯೇಜ್ಜಡಾಶಯಃ
ಸಾಧ್ಯತೇ ಕೃತಧಿಯಾ ದಂಡತಃ |
ರಾಘವಾನುನಯರೋಪಗೋಚರೋ
ನೀರಧಿರ್ಭವತಿ ತನ್ನಿದರ್ಶನಮ್ ||

ಮೂಢನು ಜಲಾಶಯವು ಸಾಂತ್ವನವನ್ನು ಮನ್ನಿಸುವುದಿಲ್ಲ ಬುದ್ದಿಮತ್ತೆಯಿಂದ ದಂಡಿಸಿ ಶಿಕ್ಷಿಸಿದಾಗಲೇ ಅವನನ್ನು ಸುಧಾರಿಸಬಹುದು. ರಾಮನ ಸಾಂತ್ವನ ಕೋಪಗಳೆರಡು ಗೊತ್ತಿರುವ ವಿಷಯವಾದ್ದರಿಂದಲೇ ಸಮುದ್ರವು ಮೊದಲಿನ ವಿಷಯಕ್ಕೆ ದೃಷ್ಟಾಂತವಾಗುತ್ತದೆ. ರಾಮನು ಸೇತುವೆಯನ್ನು ಕಟ್ಟುವದರಿಂದಲೇ ದಾರಿ ಸುಗಮವಾಯಿತು.

೫೩. ಅನತಸ್ಯ ನೃಪತೇರ್ಗರೀಂಯಸೀಂ
ಕ್ಷಾಂ ಪ್ರದಕ್ಷಿಣಯತಃ ಪುರೀಮಿವ |
ದಿಕ್ಷು ದಿಕ್ಷು ಪುರತೋ ಭವೇದ್ಯಶೋ
ಲಾಜವರ್ಷಲಟಹಾ ಜಯೇಂದಿರಾ ||

ವಿನೀತವಾಗಿ ಸಮಸ್ತವಾದ ಭೂಮಿಯನ್ನು ನಗರದಂತೆ ಪ್ರದಕ್ಷಿಣೆ ಹಾಕಿ ದಿಗ್ವಿಜಯಗೈಯುತ್ತಾ ಸುತ್ತುವ ರಾಜನಿಗೆ ಅಂದರೆ ದಿಗ್ವಿಯಜಯಕ್ಕಾಗಿ ಅಖಿಲ ಭೂಮಿಯನ್ನು ನಗರ ಸುತ್ತುವಂತೆ ಪ್ರಯಾಸವಿಲ್ಲದೇ ಸುತ್ತಿದ ರಾಜನಿಗೆ ದಿಕ್ಕುದಿಕ್ಕುಗಳಲ್ಲಿ ಮುಂದೆ ಜಯಲಕ್ಷ್ಮಿಯು ಕೀರ್ತಿಯ ರೂಪದಲ್ಲಿ ಅಕ್ಷತೆಯನ್ನು ಸುರಿಸುವದು ಮನೋಜ್ಞವಾಗಿತ್ತು.

೫೪. ಪ್ರತ್ಯನೀಕಿಬಲಿಸಾಧನೇನ ಯಃ
ಪ್ರೀಣಯೇದ್ಯದಿ ಪಿಶಾಚಮಂಡಲಮ್ |
ಆಶ್ರಯೇತ್ಸ ಪರಮಾಹವಾಂಕಣೇ
ನಿರ್ಭರಂ ನಿಧಿಮಿವಾಮಲಂ ಯಶಃ ||

ಯಾವನು ಶತ್ರುಗಳ ಬಲಿಸಾಧನದಿಂದ ಪಿಶಾಚಮಂಡಲಕ್ಕೆ ತರ್ಪಣವನ್ನು ಕೊಡುವನೋ ಅವನು ಯುದ್ಧಭೂಮಿಯಲ್ಲಿ ನಿರ್ಮಲವಾದ ಕೀರ್ತಿಯನ್ನು ಹೂತಿಟ್ಟ ನಿಧಿಯಂತೆ ವ್ಯರ್ಥಪ್ರಯಾಸವಿಲ್ಲದೇ ಪಡೆಯಬಹುದು.

೫೫. ತ್ವಯ್ಯುಪೇತಕಮಲೋದಯೇsಪ್ಯಹೋ
ತೋಯದಾ ಇವ ಶರದ್ವಿನಾಗಮೇ |
ಐಷ್ಯದಾಶುವಿಲಯಾ ಯಥಾಪುರಂ
ನಾರ್ಪಯಂತಿ ಕತಿಚಿನ್ನೃಪಾಃ ಕರಮ್ ||

ನಿನ್ನಿಂದಲೇ ಅತ್ಯಧಿಕ ಸಂಪತ್ತು ಪಡೆದವರಾದರೂ, ಕೆಲವು ರಾಜರುಗಳು ಮೊದಲಿನಂತೆ ರಾಜ್ಯಕ್ಕೆ ಕೊಡಬೇಕಾದ ಕರವನ್ನು ಕೊಡದೇ ನಾಶಹೊಂದುವರು. ಹೇಗೆ ಕಮಲಗಳು ಅರಳಿದರೂ ಶರತ್ಕಾಲದ ಮೋಡಗಳು ಬಂದೊಡನೆ ನಾಶಹೊಂದುವವೋ ಹಾಗೇ ಏನಾಶ್ಚರ್ಯ!

೫೬. ಛನ್ನವಿಗ್ರಹತಯಾ ಪಲಾಯಿತ
ಶ್ಚೇಲ್ಲಪೋ ವಸತಿ ಚೇರಸೀಮನಿ |
ತಚ್ಛರಣ್ಯಧರಣೀಭುಜಾ ಸಮಂ
ಶಿಷ್ಯ ಎವ ಚಿರಾಯುಷಾ ತ್ವಯಾ ||

ಯುದ್ಧದಲ್ಲಿ ತನ್ನ ನಿಜಸ್ವರೂಪವನ್ನು ಮರೆಮಾಚಿದ, ಪಲಾಯನಗೈದ ಚೆಲ್ಲಪ್ಪರಾಜನು ಚೇರರಾಜ್ಯದಲ್ಲಿ ಇರುತಿದ್ದಾನೆ. ಆದ್ದರಿಂದ ಅವನು ದೀರ್ಘಾಯುಷಿಯಾದ ನಿನ್ನಲ್ಲಿ ಚೇರಭೂಪತಿಯಿಂದೊಡಗೂಡಿದ್ದಾನೆ. ಈ ಕಾರಣಕ್ಕಾಗಿ ಅವರಿಬ್ಬರೂ ಶಿಕ್ಷಿಸಲ್ಪಡುವವರಾಗಿದ್ದಾರೆ. ಅಂದರೆ ಅವರಿಬ್ಬರನ್ನೂ ಶಿಕ್ಷಿಸಬೇಕಾಗಿದೆ.

೫೭. ಪ್ರಾಕ್ತನಾನ್ನಿಜಪದಾತ್ಪಂಚ್ಯುತಃ
ಪಾಲನೀಯ ಇಹ ಪಾಂಡ್ಯಭೂಪತಿ |
ಶಿಕ್ಷಣಂ ಮದವತಾಂ ಪುನಃ ಸತಾಂ
ರಕ್ಷಣಂ ನನು ರಾಜಲಕ್ಷಣಮ್ ||

ಪರಂಪರಾಗತವಾಗಿ ಬಂದ ರಾಜಪದವಿಯನ್ನು ಕಳೆದುಕೊಂಡು, ಭೃಷ್ಟನಾದ ಪಾಂಡ್ಯರಾಜನು ರಕ್ಷಣೆಗೆ ಅರ್ಹನಾಗಿರುವನು. ದುರ್ಜನರು ಶಿಕ್ಷಿಸಲ್ಪಡಬೇಕು ಸಜ್ಜನರು ರಕ್ಷಿಸಲ್ಪಡಬೇಕು. ಇದು ರಾಜಧರ್ಮವಲ್ಲವೇ

೫೮. ಇತ್ಯುಕ್ತಃ ಸಚಿವೇನ ರಾಗಕಣಿಕಾಮೀಷದೃಶೋರಂಚಲೇ
ವಿಭ್ರಾಣೋ ದಲದಂಬುಜೋದರದರಪ್ರಾಪ್ತಾತಪಶ್ರೀಮುಷಮ್ |
ಸಂರಂಭೇಣ ಚಮೂವಿನಿರ್ಗಮಕೃತೇ ಸಂದಿಶ್ಯ ಸೇನಾಪತಿಂ
ಪ್ರಸ್ಥಾತುಂ ಕೃತನಿಶ್ಚಯಃ ಸಮಜನಿ ಪ್ರಾಗ್ರೇಸರೋ ಭೂಭುಜಾಮ್ ||

ಮಂತ್ರಿಯು ಹೀಗೆ ನುಡಿದೊಡನೆ ಅಚ್ಯುತರಾಯನು ಅರಳುತ್ತಿರುವ ಕಮಲದ ಮಧ್ಯಭಾಗದ ಶೋಭೆಯನ್ನು ಕದಿಯುವ ಎಳೆಬಿಸಿಲ ಅರುಣರಾಗವನ್ನು ಕಡೆಗಣ್ಣಿನಲ್ಲಿ ಹೊಂದಿ, ಕೋಪದಿಂದ ಲಗುಬಗೆಯಲ್ಲಿ ಸೈನ್ಯ ತಯಾರಿಗಾಗಿ ಸೇನಾಪತಿಗೆ ಆಜ್ಞಾಪಿಸಿ ತಾನು ವಿಜಯಯಾತ್ರೆ ಕೈಕೊಳ್ಳಲು ನಿಶ್ಚಯ ಮಾಡಿದನು.