. ವಾಸರೋಧ ವಸುಧಾವಲದ್ವಿಷೋ
ವಲ್ಲಭೇತಿ ಮಹಿಷೀಪದೇ ಮಹೀಮ್ |
ಅದರಾತ್ಕಿಮಭಿಷೇಕ್ತುಮಾಹರ
ನ್ನಂಬುವಾಹಮಣಿಕುಂಭಮಾಯಯೌ ||

ಕೆಲದಿನಗಳ ನಂತರ ಅಚ್ಯುತರಾಯನ ವಲ್ಲಭೆಯಾದ ಭೂಮಿಯನ್ನು ಪಟ್ಟಮಹಿಷಿಯಾಗಿಸಲು, ದೇವಿಸ್ಥಾನದಲ್ಲಿ ಪ್ರೀತಿಯಿಂದ ಅಭಿಷೇಕಗೊಳಿಸಲು ಮೋಡಗಳೇ ರತ್ನಖಚಿತ ಕೊಡಗಳನ್ನು ತಂದವೇನೋ ಅರ್ಥಾತ್ ಮಳೆಗಾಲ ಸಮೀಪಿಸಿತೇನೋ

. ಶೌರ್ಯಮಾರುತಸಖಸ್ಯ ಸಂನಿಧೌ
ಕಲ್ಪಿತಾನಘಕರಗ್ರಹೇ ನೃಪೇ |
ಮೇದಿನೀ ಪುಲಕಜಾಲಮೇದುರಾ
ನೀಪಕುಡ್ಮಲನಿಭಾದಭಾಸತ ||

ಮಾರುತನ ಸಖ ಅಂದರೆ ಅಗ್ನಿಯ ಸನ್ನಿಧಿಯಲ್ಲಿ ಮನೋಹರವಾಗಿ ಮಾಡಲ್ಪಟ್ಟ ಅಚ್ಯುತರಾಯನ ಜೊತೆಗಿನ ಪಾಣಿಗ್ರಹದಿಂದ ಭೂಮಿಯೆಲ್ಲಾ ನೀಪಮೊಗ್ಗುಗಳ ನೆಪದಿಂದ ರೋಮಾಂಚನಗೊಂಡು ನಿಂತಂತೆ ಭಾಸವಾಗುತ್ತಿತ್ತು.

. ಅಸ್ಯ ಕುರ್ತುಮಭಿಷೇಕಮಂಗಲಾ
ರಾತ್ರಿಕಶ್ರಿಯಮಿವಾವನೀಭುಜಾಃ |
ಪ್ರಾವೃಷಾಪ್ಯಜನಿ ಮೇಘಭಾಜನ
ಪ್ರಸ್ತುತಾಚಿರರುಚಿಪ್ರದೀಪಯಾ ||

ವರ್ಷಾಕಾಲವಾದ್ದರಿಂದ ರಾಜನ ಅಭಿಷೇಕ ಮಂಗಲಕಾರ್ಯದಲ್ಲಿ ನೀರಾಂಜನ ದೀಪಲಕ್ಷ್ಮಿಯನ್ನು ಬೆಳಗಿಸುವಂತೆ ಮೇಘಗಳು ಅಲ್ಲಲ್ಲಿ ಕೋಲ್ಮಿಂಚುಗಳನ್ನು ಘರ್ಷಣೆಯಿಂದ ಉತ್ಪತ್ತಿಮಾಡುತ್ತಿದ್ದವು.

. ಪಾಲಿತಾ ಪ್ರತಿನವೇನ ಭೂಭುಜಾ
ವಾರಿರಾಶಿರಶನಾ ವಸುಂಧರಾ |
ಕೇತಕೀಕುಸುಮಪಾಂಸುಕೈತವಾ
ತ್ಪ್ರಾಕ್ತನಾನ್ ಪರಿಜಹಾಸ ಪಾರ್ಥಿವನ್ ||

ಹೊಸ ಚೈತನ್ಯದಿಂದ ರಾಜನು ರಾಜ್ಯವನ್ನು ಪಾಲಿಸುತ್ತಿರಲು ಸಮುದ್ರಮೇಖಲಿಯಾದ ಭೂಮಿಯು ಕೇತಕಪುಷ್ಪದ ಪರಾಗದ ನೆಪದಿಂದ ಪ್ರಾಚೀನ ರಾಜರುಗಳನ್ನು ನೋಡಿ ನಗುತ್ತಿತ್ತು.

. ವರ್ಷಕಂ ಸಮವಲೋಕ್ಯ ವಾರಿದಂ
ಚಾತಕದ್ವಿಜಕುಲಸ್ಯ ಹೃಷ್ಯತಃ |
ಬಾಷ್ಪವರ್ಷಕೃತಸೇಚನಾ ನವಾ
ದ್ವರ್ಷತೋsಜನಿ ಪುರಾ ವಸುಂಧರಾ ||

ಮೇಘವನ್ನು ನೋಡಿ ಸಂತುಷ್ಟಗೊಂಡ ಜಾತಕಪಕ್ಷಿ/ದ್ವಿಜ ಸಂಕುಲದ ಆನಂದಭಾಷ್ಪದಿಂದ ಉಂಟಾದ ಸಿಂಚನದಿಂದ ಭೂಮಿ ಹೊಸದಾದ ಮಳೆಗೂ ಮೊದೇ ಪಡೆದುಕೊಂಡಿತ್ತು.

. ಅಭ್ರಪಂಕ್ತಿರತಿರತ್ಪಯಃ ಕಣಾ
ನ್ನಿರ್ಭರೋಷ್ಮಣಿ ನಿದಾಘತಃ ಕ್ಷಿತೌ |
ಗರ್ಭಿತಾಶನಿತಯಾ ತದುದ್ಭವಂ
ಘ್ರಾತುಮಾದರವತೀವ ಸೌರಭಮ್ ||

ಮೇಘಗಳ ಸಾಲು ಒಳಗಿರುವ ವಜ್ರರೂಪಿ ಮಿಂಚಿನಿಂದಾಗಿ ಗರ್ಭಿಣಿಯಾದಂತೆ ತೋರುತ್ತಿತ್ತು. ಭೂಮಿಯಲ್ಲಿ ಉತ್ಪತ್ತಿಯಾದ ಸುವಾಸನೆಯನ್ನು ಅನುಭವಿಸಲು ಬಯಕೆ ಉಂಟಾಗಿತ್ತು. ಗ್ರೀಷ್ಮ ಕಾಲದಿಂದಾಗಿ ಅಧಿಕ ಉಷ್ಣದಿಂದಾಗಿ ಭೂಮಿಯಲ್ಲಿ ಬೆವರಿನ ಬಿಂದುಗಳು ಕಾಣಿಸಿಕೊಂಡವು. [ಗರ್ಭಿಣಿಯು ಮಣ್ಣು ತಿನ್ನುವ ಮತ್ತು ಮಣ್ಣಿನ ವಾಸನೆಯನ್ನು ಆಸ್ವಾದಿಸುವದು ಲೋಕರೂಢಿ]

. ಅಂಬು ಪೀತಮವಪತ್ಯ ದುಸ್ತರಾ
ದಂಬರಾದತಿತರಾಮಪಾಂ ನಿಧೌ |
ಪ್ರಾವೃಷಾ ಪವನಚಕ್ರಯೋಜಿತಾ
ವಾರಿದಾ ವವಮರಂಚಿತಭ್ರಮಾಃ ||

ಅಸಾಧ್ಯವಾದ ಎರಲು ಸಾಧ್ಯವಾಗದ ಆಕಾಶದಿಂದ ಸಮುದ್ರದಲ್ಲಿ ಬೀಳುವ ಅತ್ಯಧಿಕವಾದ ನೀರನ್ನು ಮೇಘಗಳು ಕುಡಿದಿರುತ್ತವೆ. ವರ್ಷಾಕಾಲದಲ್ಲಿ ಗಾಳಿಯಿಂದೊಡಗೂಡಿ ಅಲ್ಲಲ್ಲಿ ಸುತ್ತಿ ವಾಂತಿಮಾಡಿಕೊಳ್ಳುತ್ತವೆ. [ಲೋಕದಲ್ಲಿಯೂ ಕೂಡ ಬಾವಿಯಲ್ಲಿ ಬಿದ್ದು ನೀರು ಕುಡಿದ ಮನುಷ್ಯನನ್ನು ಕುಂಬಾರನ ತಿರುಗುವ ಚಕ್ರದ ಮೇಲೆ ಮಲಗಿಸಿ ಕುಡಿದ ನೀರನ್ನು ಹೊರತೆಗೆಸುವಂತೆ ಇದು ಭಾಸವಾಗುತ್ತದೆ]

. ಅಂಭಸಾದ್ರಿತಮವಾದಯನ್ನಭಾ
ಸ್ತಾಪಯನ್ಹುತವಹೇ ತಟಿನ್ಮಯೇ |
ಮದ್ದಲಂ ಮದಜುಷಾಂ ಶಿಖಂಡಿನಾಂ
ತಾಂಡವಾನುಗುಣಮಭ್ರಮಂಡಲಮ್ ||

ವರ್ಷಾಕಾಲದ ಆಕಾಶದಲ್ಲಿ ನೀರಿಂದ ಕೂಡಿರುವ ಮೇಘಗಳ ಸಮೂಹವು ಮದ್ದಳೆಯನ್ನು, ಮಿಂಚನ್ನು ಅಗ್ನಿಯನ್ನು ತಣ್ಣಗಾಗಿಸಿದರೂ ಕೂಡ ಮದ್ದಾನೆಗಳು, ಮಯೂರಗಳು ತಾಂಡವ ನೃತ್ಯಕ್ಕೆ ಅನುಗುಣವಾಗಿ ವರ್ತಿಸುತ್ತಿದ್ದವು.

. ಚಾತಕಾಃ ಸತತಧಾರಮಕ್ಷಮಾಃ
ಪಾತುಮಂಬು ಪಂಪೀಡಿತಾ ಮುಖೇ |
ಪ್ರಾಕ್ಸಮೀರಶಿಥಿಲೈಃ ಪಯಃ ಕಣೈಃ
ಕುರ್ವತೇ ಸ್ಮ ನಿಜಕುಕ್ಷಿಪೂರಣಮ್ ||

ಚಾತಕಪಕ್ಷಿಗಳು ಬಾಯಿಯಲ್ಲಿ ಧಾರಾಕಾರವಾಗಿ ಬೀಳುವ ಮಳೆಯ ನೀರನ್ನು ಕುಡಿಯಲು ಅಶಕ್ತವಾದವು. ಮೊದಲೇ ಗಾಳಿಯಿಂದ ಚೆಲ್ಲಾಪಿಲ್ಲಿಯಾದ ಜಲಬಿಂದುಗಳು ಅವುಗಳ ಹೊಟ್ಟೆ ತುಂಬುವಂತೆ ಮಾಡಿದ್ದವು.

೧೦. ವಾರಿದೇ ಶರಮುಚಿ ಪ್ರಧಾವಿನೀ
ವಾಹಿನೀ ನಿವಿಶತೇ ಸ್ಮ ವಾರಿಧೌ |
ರಾಜಹಂಸಸದಸಾಪಿ ದುದ್ರುವೇ
ಲಕ್ಷ್ಯಮಸ್ತಿ ಕಿಮು ಜೀವನತ್ಯಚಾಮ್ ||

ಮೇಘಗಳು ಬಿಟ್ಟ ಬಾಣಗಳಿಂದ ಅಂದರೆ ಜಲಧಾರೆಯಿಂದ ವೇಗವಾಗಿ ಹರಿಯುವ ನದಿಯು ಸಮುದ್ರದಲ್ಲಿ ಸೇರುತ್ತದೆ. ರಾಜಹಂಸವೇ ತೇಲುತ್ತಿದ್ದರೂ/ಈಜುತ್ತಿದ್ದರೂ ನದಿಗೆ ಅದು ಲಕ್ಷ್ಯ(ಮುಖ್ಯ)ವಾಗುವುದಿಲ್ಲ. ಹೇಗೆಂದರೆ ಯುದ್ಧಮಾಡಿ ವೀರಸ್ವರ್ಗವನ್ನಾದರೂ ಸೇರಲೇಬೇಕೆಂಬ ಯೋಧನಿಗೆ ಯುದ್ಧ ಮುಖ್ಯವಾಗಿರುತ್ತದೆ. ರಾಜಹಂಸ(ರಾಜಶ್ರೇಷ್ಠ)ನಾದರೂ ಕೂಡ ಅವನ ಗುರಿ ಯುದ್ಧವೇ ಆಗಿರುತ್ತದೆ.

೧೧. ಅಗ್ರತಃ ಕೃತಶಿಖಂಡಿತಾಂಡವೋ
ಭೀಷ್ಮಮೇಘ ಶುಚಿಮುಚ್ಝಿತೈಃ ಶರೈಃ |
ವಂಚಯನ್ವಲಿತಜಿಷ್ಣುಕಾರ್ಮುಕೋ
ವಾಸರೋsರ್ಜುನವಿಕಾಸಮಾಸದತ್ ||

ಮಳೆಗಾಲದ ದಿನಗಳಲ್ಲಿ ಇಂದ್ರಧನುಸ್ಸಿನಿಂದ ಬಿಟ್ಟಬಾಣಗಳಿಂದ ಮಯೂರಗಳ ನೃತ್ಯವು ಸರಾಗವಾಗಿ ನಡೆದಿತ್ತು. ಇನ್ನೊಂದರ್ಥದಲ್ಲಿ ಅರ್ಜುನನು ತಂದು ನಿಲ್ಲಿಸಿದ ಶಿಖಂಡಿ ನರ್ತನದಿಂದ ಭೀಷ್ಮರ ಯುದ್ಧವು ಕೊನೆಗೊಂಡು ಅರ್ಜುನನ ವಿಕಾಸ ಕಂಡು ಬಂದಿತು. ಅಥವಾ ಗ್ರೀಷ್ಮದ ಭಯಂಕರ ತಾಪವನ್ನು ಕೊನೆಗೊಳಿಸಿ ಕಕುಭ (ಅರ್ಜುನ) ವೃಕ್ಷಗಳು ವಿಕಾಸ ಹೊಂದಿದವು.

೧೨. ಅಂಧ್ಯಮಂತರಭೀತಾಪಕಂದಲೀ
ಮಶ್ರು ನಿಶ್ವಸಿತಮಪ್ಯಯೋಗಿನಾಮ್ |
ಆರಚ್ಯ ವಿವವಾರ ವಾರಿದೋ
ಧೂಮಪಾವಕಜಲಾನಿಲಾತ್ಮತಾಮ್ ||

ಮೇಘವು ವಿರಹಿಗಳಿಗೆ ಕರ್ತವ್ಯಮೂಢತೆಯನ್ನು, ಮನಸ್ಸಿನಲ್ಲಿ ಸಂತಾಪದ ಮೊಳಕೆಗಳ ಸಮೂಹವನ್ನು, ಕಣ್ಣೀರನ್ನು, ನಿಟ್ಟುಸಿರುಗಳನ್ನು ಉತ್ಪಾದಿಸಿ ತನ್ನ ಧೂಮ ಜಲವಾಯುರೂಪತ್ವವನ್ನು ವಿವರಿಸುತ್ತದೆ. [ಕಾಳಿದಾಸನು ಮೇಘದ ಸ್ವರೂಪವನ್ನು ಕುರಿತು ಹೀಗೆ ಹೇಳುತ್ತಾನೆ ಧೂಮಜ್ಯೋತಿಃ ಸಲಿಂಮರುತಾಂ ಸನ್ನಿಪಾತಃ ಕ್ವ ಮೇಘಃ ಎಂದು]

೧೩. ಕ್ರೀಡಯಾ ದಿವಿ ತಟಿತ್ಕೃಪಾಣಿಕಾ
ವಲ್ಲಿಷು ವ್ಯತಿಹತಾಸು ವಾರಿದೈಃ |
ವಿಶ್ಲಥಾ ಇವ ವಿಭಾವಸೋ ಕಣಾಃ
ಶಕ್ರಗೋಪನಿಕರಾಶ್ಚಕಾಶಿರೇ ||

ಮೋಡಗಳಿಂದ ಆಕಾಶದಲ್ಲಿ ಲೀಲಾಜಾಲವಾಗಿ ಬಳ್ಳಿಯಂತಿರುವ ಮಿಂಚು ಘರ್ಷಣೆಯಿಂದಲೇ ಉಂಟಾಗುತ್ತದೆ. ಮೇಘಗಳಲ್ಲಿ ಘರ್ಷಣೆಯುಂಟಾಗಲು ಚೆಲ್ಲಾಪಿಲ್ಲಿಯಾದ ಅಗ್ನಿಕಣಗಳು ಶಕ್ರಗೋಪಗಳೆಂಬ ಕೀಟಗಳ ಸಮೂಹವಾಗಿ ಕಾಣಿಸುತ್ತವೆ.

೧೪. ಕೇಚನಾನಿಲವಶಾತ್ಕರೋಪಲಾ
ದ್ಯೋತಲಾತ್ತರಲಿತಾ ದಿಶಾಂ ಮುಖೇ |
ನಾಸಿಕಾಭರಣಮೌಕ್ತಿಕಶ್ರೀಯೋ
ನಾಟಿಕಾಂ ಕ್ಷಣಮಿವಾಲಲಂಬಿರೇ ||

ಗಾಳಿಯ ರಭಸದಿಂದ ಕೆಲವು ಆಲಿಕಲ್ಲುಗಳು ಆಕಾಶಪ್ರದೇಶದಿಂದ ಚೆಲ್ಲಾಪಿಲ್ಲಿಯಾಗಿ ಹರಡಿ ದಿಕ್ಕುಗಳೆಂಬ ಸ್ತ್ರೀಯರ ಮುಖದಲ್ಲಿನ ನಾಸಿಕಾಭರಣ (ನತ್ತಿನ) ಮುತ್ತುಗಳೆಂಬ ಸಂಪತ್ತಾಗಿ ಕ್ಷಣಕಾಲ ನಟನೆಯನ್ನು ತೋರಿಸುತ್ತಿದ್ದವು. [ದಿಕ್ಕಿಗೆ ಸ್ತ್ರೀಯೆಂಬ ಪರ‍್ಯಾಯವಾಚಕವಿದೆ]

೧೫. ವಿಷ್ವಗಂಬುದವಿಧುಂತುದೋ ರುಷಾ
ಚರ್ವತಿ ಸ್ಮ ರವಿಶರ್ವರೀವಿಟೌ |
ಶಕ್ರಗೋಪಕರಕೋಪಲಚ್ಛಲಾ
ತ್ಸೃಕ್ಕಣಾ ವಿಚಕಾರ ತತ್ಕಣಾನ್ ||

ಸರ್ವವ್ಯಾಪಿ ಮೇಘದಂತೆ ರಾಹುವು ಕೋಪದಿಂದ ಸೂರ್ಯಚಂದ್ರರಿಬ್ಬರನ್ನು ಅಗೆಯುತ್ತಿದ್ದನು. ರಾಹುವು ಶಕ್ರಗೋಪಗಳೆಂಬ ಮಿಂಚುಹುಳುವಿನ ಆಲಿಕಲ್ಲುಗಳನ್ನು ಸುರಿಸುವ ನೆಪದಿಂದ ಕ್ರಮೇಣ ಸೂರ್ಯಚಂದ್ರರುಗಳನ್ನು ಙಷ್ಠಪ್ರಾಂತದಿಂದ ಎಲ್ಲ ಕಡೆ ಹರಡಿದನು.

೧೬. ಅಂಬರಾಗ್ನಿಪತಿತೈಃ ಕರೋಪಲೈ
ರಾಹತಿವ್ಯತಿಕರಸ್ಪೃಶೋsವನೇಃ |
ಶಕ್ರಗೋಪವಪುಷಾ ಸಮಂತತೋ
ವಿಶ್ಲಥಃ ಕ್ಷತಜವಿಪ್ರುಷಾಂ ಚಯಃ ||

ಆಕಾಶದಿಂದ ಬಿದ್ದಂತಹ ಆಲಿಕಲ್ಲುಗಳ ಹೊಡೆತದಿಂದ ಭೂಮಿಗೆ ತಾಗಿ ಉಂಟಾದ ರಕ್ತದ ಹನಿಗಳ ಸಮೂಹ ಶಕ್ರಗೋಪಗಳೆಂಬ ಕೀಟಗಳ ಸ್ವರೂಪದಿಂದ ಎಲ್ಲ ಕಡೆ ಹರಡಿವೆ.

೧೭. ಅಬ್ಜಿನೀ ಪ್ರಣಯಿನಾ ಹಿಮದ್ಯುತೇ
ರನ್ವಕಾರಿ ಪರಂ ನಿರೂಷ್ಮತಾ |
ಅಲ್ಪದೃಶ್ಯವಪುಷಾ ಪಯೋಮುಚಾ
ಮಾವಲೀಷ್ವಪಿ ತತ್ಕಲಾತ್ಮತಾ ||

ಸೂರ್ಯನು ಚಂದ್ರನ ಶೀತಲಭಾವವನ್ನು ಅನ್ವಯಿಸಿಕೊಳ್ಳುವದಕ್ಕೆ ಸಾಧ್ಯವಾಗದೇ ಹೋದರೂ ಮೋಡಗಳ ಸಾಲಿನಲ್ಲಿ ಅಲ್ಪ ಅಲ್ಪವಾಗಿ ಕಾಣಿಸಿಕೊಳ್ಳುವ ಚಂದ್ರಕಲಾ ಸ್ವರೂಪವನ್ನು ಅನ್ವಯಿಸಿಕೊಳ್ಳುತ್ತಾನೆ.

೧೮. ಫೇನಕಂಚುಕಜುಷೋ ವಿಷೋತ್ಕಿರಃ
ಪ್ರಸ್ತುತೋರ್ಮಿಪವಮಾನಫೊತ್ಕ್ರಿಯಾಃ |
ಅಪಗಾಃ ಫಣಧರಾ ಇವಾಧ್ವಗಾ
ನ್ಕುರ್ವತೇ ಸ್ಮ ಪಥಿ ಕುಂಠಿತಕ್ರಮಾನ್ ||

ನೊರೆಯನ್ನೇ ತನ್ನ ಕವಚವನ್ನಾಗಿ ಹೊಂದಿರುವ, ಪ್ರವಹಿಸುತ್ತಿರುವ ತರಂಗಗಳ ಮೂಲಕ ಘೂತ್ಕರಿಸುವ ನದಿಯು ಬುರುಗನ್ನೆ ಕವಚದಂತೆ ಹೊಂದಿ, ವಿಷವನ್ನೆ ಹರಿಸುವ, ತರಂಗಗಳ ಗಾಳಿಯಿಂದ ಘೂತ್ಕರಿಸುವ ಸರ್ಪವು ಪಥಿಕರಿಗೆ ವಿಘ್ನವನ್ನುಂಟು ಮಾಡುತ್ತಿದ್ದವು. ಅಂದರೆ ಮಾರ್ಗಮಧ್ಯದಲ್ಲಿ ನದಿಯ ಪ್ರವಾಹವನ್ನು ದಾಟಲು ಅಸಮರ್ಥವಾಗಿದ್ದರು. [ಇನ್ನೊಂದು ವಿಚಾರವೆಂದರೆ ಪ್ರಯಾಣಮಾಡುವಾಗ ಎದುರಿಗೆ ಹಾವು ಬಂದರೆ ದುರ್ಗತಿಯಾಗುವದೆಂಬುದು ಲೋಕರೂಢಿ]

೧೯. ಶಶ್ವದಾರ್ದ್ರಿತವಿಶೋಪಿತಾಂಬರೋ
ವರ್ಷತೋಪಿ ಮರುತೋಧ್ವಗವ್ರಜಃ |
ಪಂಕಿಲೇ ಕಿಲ ಸಶೃಂಖಲೋsಭವ
ತ್ಪ್ರಾಪ್ತರಾಜ್ಯ ಇವ ಮಾರವೇ ಪಥಿ ||

ಮಳೆಯಿಂದ ಪದೇ ಪದೇ ತೋಯ್ದು ಶೋಧಿಸಿದ ಬಟ್ಟೆಯಂತೆ ಗಾಳಿಯಿಂದ ಪಥಿಕ ಸಮೂಹವು ಕೆಸರಿನಲ್ಲಿ ಪಾದಗಳನ್ನು ಎತ್ತಿ ಇಡಲು ಸಾಧ್ಯವಾಗದೇ ಕಟ್ಟಿಹಾಕಿದಂತಾಗಿ ದಾರಿಯಲ್ಲಿ ಅಡೆತಡೆಯುಂಟಾಗಿತ್ತು. ಅದೇ ರೀತಿ ಮಾರವಾಗಳ ಸ್ಥಿತಿಯೂ ಇತ್ತು.

೨೦. ತಿರ್ಯಗಾನತಗಲಂ ವಿಷಾಣಯೋ
ರ್ದೀರ್ಣವೃಷ್ಟಿ ಧೃತರೋಮವಿಕ್ರಿಯಮ್ |
ಪಾರ್ಶ್ವದೇಶಪರಿಲಿನತರ್ಣಕಂ
ಗೋಲಕಂ ನಿಖಿಲಮೈಕ್ಷ್ಯತಾಕುಲಮ್ ||

ಗೋಕುಲದ ಸಮಸ್ತ ಗೋ ಸಮುದಾಯವು ಕಂಠಪ್ರದೇಶದ ವರೆಗೂ ತಿರುಚಿಕೊಂಡಿರುವ ಕೋಡುಗಳ ಬೀಳುವಿಕೆಯಿಂದ, ಧಾರಾಕಾರ ಮಳೆಯಿಂದ ಮೈಮೇಲಿನ ಕೂದಲುಗಳ ವಿಕಾರದಿಂದಾಗಿ, ಮಗ್ಗುಲಗಳಲ್ಲಿ ಅಂಟಿಕೊಂಡಿರುವ ಕರುಗಳಿಂದ ಆತಂಕಗೊಂಡಂತೆ ಕಾಣುತ್ತಿತ್ತು.

೨೧. ಕ್ಲೇದಸಿಕ್ತಮಿವ ವರ್ಷಸೇಚನಾ
ತ್ಕಿಂ ಕೋಮಲಖುರಂ ಗವಾಂ ಕುಲಮ್ |
ಸಂಕುಚತನು ಸಮಗ್ರಕಂಪನಂ
ತರ್ಣಕಾನಧಿವನಂ ತದನ್ವಗಾತ್ ||

ಮಳೆಯ ಸಿಂಚನದಿಂದ ಹಸುಗಳು ವಾತ್ಸಲ್ಯದಿಂದ ಕರುಗಳ ಮೈನೆಕ್ಕುವಾಗ ಲಾಲಾರಸದಿಂದ ತೇವಗೊಂಡ, ಮೃದುವಾದ ಕಾಲಿನ ಗೊರುಸುಗಳ ನಡುಗುವಿಕೆಯಿಂದ ಸಣ್ಣದಾದ ಶರೀರದಿಂದ ಗೋವುಗಳೆಲ್ಲ ವನದಲ್ಲಿ ಕರುಗಳೊಂದಿಗೆ ಹೊರಟವು.

೨೨. ಭಾನುಮಂಬುಧರಬಂಧನಾಲಯೇ
ತಾಪಿನಂ ವಿರಚಯಂಸ್ತಪಾತ್ಯಯಃ |
ಅಸ್ಯ ಭೂರಿವಸುಭಾಗಸೌ ಪುರೇ
ತ್ಯಬ್ಜಿನಿಂ ಧ್ರುವಮಮಜ್ಜಯಜ್ಜಲೇ ||

ವರ್ಷಾಕಾಲವು ಈ ರೀತಿ ಸಂತಾಪವನ್ನುಂಟು ಮಾಡಲು ಸೂರ್ಯನನ್ನು ಮೋಡಗಳು ಸೆರೆಹಾಕಿದವು. ಆಗ ಕಮಲಗಳು ಮೊದಲಿನ ಈಗಾಗಲೇ ಇರುವ ಕಿರಣಗಳನ್ನು ಸ್ಮರಿಸಿಕೊಂಡು ನೀರಿನಲ್ಲಿ ಸ್ನಾನಮಾಡುತ್ತಿದ್ದವು.

೨೩. ಅಂಬುದಾ ಪರಮಂಚಿತಾರವಾ
ಸ್ತದ್ಭವಾನಿ ತಟಿನೀಜಲಾನ್ಯಪಿ |
ಸೇಹಿರೇ ತರಣೇರ್ವಿಜೃಂಭಣಂ
ಕಾರ್ಯಕಾರಣಭಿದಾ ಕಥಂ ಭವೇತ್ ||

ಮೇಘಗಳು ಗರ್ಜನೆ ಮಾಡುತ್ತಲೇ ಸೂರ್ಯನ ಪ್ರಕಾಶವನ್ನು ಸಹಿಸುವುದಿಲ್ಲ. ಇಷ್ಟೇ ಅಲ್ಲ ಈ ಮೇಘದಿಂದುಂಟಾದ ನದಿ ನೀರು ಕೂಡ ನೌಕೆಯ ಚಲನವಲನಕ್ಕೆ ಅಡ್ಡಿಯುಂಟು ಮಾಡುತ್ತದೆ. ಇದೇ ಸಮರ್ಥಿಸುತ್ತದೆಯಲ್ಲವೇ ಕಾರ್ಯಕಾರಣಗಳಲ್ಲಿ ಭೇದವಿಲ್ಲ ಎಂಬುದನ್ನು.

೨೪. ವಿದ್ಯುತಾಮಿವ ವಿಜೃಂಭಣಾ ಸಹಃ
ಶಾರ್ಙ್ಗಣೋಪಿ ಶಯನೀಯಪನ್ನಗಃ |
ಅತನೋದಧಿಪಯೋಧಿ ಗುಹನಂ
ಪಾಮರೇಷು ಫಣಭುತ್ಸು ಕಾ ಕಥಾ ||

ವಿಷ್ಣುವಿನ ಶಯ್ಯೆಯಾಗಿರುವ ಆದಿಶೇಷನು ಮಿಂಚುಗಳ ವಿಲಾಸವನ್ನು ತಡೆಯಲು ಅಸಮರ್ಥನಾಗಿ ಸಮುದ್ರದಲ್ಲಿ ಸ್ನಾನ ಮಾಡಿದನು. ಅಂದ ಮೇಲೆ ಪಾಮರರ ಪಾಡೇನು ಸಾಮಾನ್ಯ ಸರ್ಪಗಳ ವಿಷಯದಲ್ಲಿ ಹೇಳುವುದೇನಿದೆ?

೨೫. ಕಾಮಿನೀನಿವಹಮಾನವಿಗ್ರಹಃ
ಕಾಲಮಂತ್ರಿಕಪಲಾಯಿತೋ ಗ್ರಹಃ |
ಪ್ರಾದ್ರವತ್ಪ್ರಕಟಮಂಬುಭೃದ್ಧಟಂ
ಕಿಂ ವಿಬಿಧ್ಯ ಭುವಿ ಕೀರ್ಣಶಂಬರಮ್ ||

ಯುವತಿಯರ ಈರ್ಷ್ಯೆಯಿಂದೊಡಗೂಡಿದ ಕೋಪ ಅಂದರೆ ಪ್ರಣಯಕೋಪವು, ಪಿಶಾಚವು ವರ್ಷಾಕಾಲವೆಂಬ ಮಾಂತ್ರಿಕನಿಂದ ಓಡಿ ಹೋಯಿತು. ಮೇಘವೆಂಬ ಜಲಪೂರ್ಣ ಕೊಡವನ್ನು ಭೂಮಿಯಲ್ಲಿ ಸುರಿದ ಕೂಡಲೇ ಪ್ರಕಟಗೊಂಡು ಓಡಿಹೋಯಿತು. [ಮಾಂತ್ರಿಕನಿಂದ ಓಡಿಸಬೇಕಾದ ಪಿಶಾಚಿಗಾಗಿ ನೀರಿನ ಕೊಡವನ್ನು ತುಂಡರಿಸಲಾಗುತ್ತಿದೆ. ಹಾಗಾಗಿ ಮಾನಿನಿಯರ ಕೋಪವು ಮಳೆಗಾಲದಲ್ಲಿ ತಾನಾಗಿಯೇ ಹೋಗುವದು ಎನ್ನುವುದು ತಾತ್ಪರ್ಯ]

೨೬. ಪಂಕಿಲಾ ಪದವೀ ಪರಂ ನೃಣಾಂ
ದ್ಯೋಸದಾಮಪಿ ಬಭೂವ ದುರ್ದಿನೇ |
ಅಂತರಾ ಜಲಕಣೈರಣೂಪಮೈ
ರಾದ್ರಿತೇ ರಜಾಂಸಿ ನೀಪನಿಃಸೃತೇ ||

ಮೋಡಮುಸುಕಿದ ಮಳೆಗಾಲದ ದಿನದಲ್ಲಿ ಮನುಷ್ಯರ ನಡೆಯುವ ಮಾರ್ಗವು ಕೆಸರಿನಿಂದ ಕೂಡಿರುವದಿಲ್ಲ. ಆದರೆ ದೇವತೆಗಳ ಮಾರ್ಗವು ಕದಂಬ ವೃಕ್ಷಗಳ (ಗಗನದೆತ್ತರಕ್ಕೆ ಬೆಳೆದ) ಪರಾಗಗಳಿಂದ ಕೂಡಿರುವ ಜಲಬಿಂದುಗಳಿಂದ ತೇವಗೊಂಡು ಕೆಸರಾಗಿರುತ್ತದೆ.

೨೭. ಶಾಮ್ಯದುಚ್ಛಿತೃ ಪಯೋಧರಶ್ರೀಯಾ
ಸಂಕುಚತ್ಕುಟಜದಂಡಸಂಪದಾ |
ಪ್ರಾವೃಷಾ ಗಲಿತಭೂರಿವರ್ಷಯಾ
ಪ್ರತ್ಯಪದ್ಯತ ಘನಸ್ವರಾತ್ಯಯಃ ||

ಮೇಘಗಳ ಶ್ರಮಪರಿಹಾರಾರ್ಥವಾಗಿರುವ ಪರ್ವತಪ್ರದೇಶಗಳ ಶೋಭೆಯು ಗಿರಿಮಲ್ಲಿಗೆಯ ಸಂಪತ್ತಿನಿಂದಾಗಿ ಸಂಕೋಚಗೊಂಡಿತು. ಮಳೆಯಿಂದಾದ ಸುವರ್ಣವೃಷ್ಟಿಯಿಂದಾಗಿಮಳೆಯಿಂದ ಸುಸಂಪನ್ನವಾಗಿರುವ ಭೂಮಿಯಿಂದಾಗಿ ಮೇಘಗಳ ಗರ್ಜನೆಯ ಅಭಾವ ಉಂಟಾಯಿತು.

೨೮. ಶ್ವೇತಮಾನತಟಿದಾಲಿ ಸಂಕುಚ
ಚ್ಛಾತಮನ್ಯವಶರಾಸವಾಸನಮ್ |
ನಿಮ್ನಭೂಮಿಷು ನಿಲೀನನಿರ್ಝರಂ
ನಿರ್ಮರಂದಸನೀಪಕೋರಕಮ್ ||

ಸಂಕುಚಿತಗೊಂಡ ವಿರಳವಾದ, ಬಿಳಿಯಾದ ಶುಭ್ರಮೋಡಗಳ ಸಮೂಹವು, ಶತಮನ್ಯುವಿನ ಸಂಬಂಧಿಯಾದ ಇಂದ್ರನ ಧನುಸ್ಸಿನ ಸ್ಥಿತಿಯನ್ನು, ಇಳಿಜಾರಿನಲ್ಲಿ ಹರಿಯುವ ಗಿರಿನಿರ್ಝರಿಗಳನ್ನು, ಮಕರಂದವಿಲ್ಲದಿರುವ ಕದಂಬದ ಮೊಗ್ಗುಗಳನ್ನು

೨೯. ವಿಪ್ರಕರ್ಷಘನಸಂಕ್ರಮಂ ಸರಿ
ದ್ವ್ಯಜ್ಯಮಾನಸಿಕತಾವಿಜೃಂಭಣಮ್ |
ನಿಸ್ವತಾಶ್ರಯನಿಷದ್ವರೋಚ್ಚಯಂ
ನೃತ್ತಕೇಲಿವಿರಮಚ್ಛಿಖಾವಲಮ್ ||

ಮೋಡಗಳ ಅಭಾವದಿಂದ, ನದಿಗಳಿಂದ ಕಾಣಬರುವ ಮರಳಿನ ವಿಲಾಸದಿಂದ, ಕ್ಷೀಣವಾಗುತ್ತಿರುವ ಕೆಸರಿನ ಸಮೂಹದಿಂದ, ನಾಟ್ಯಲೀಲೆಗಳನ್ನು ಬಿಟ್ಟು ವಿರಮಿಸುತ್ತಿರುವ ಮಯೂರಗಳು

೩೦. ವಾರಿರಾಶಿಶಯನಾದುದಂಚಿತುಂ
ವ್ಯಂಚಿತಾಂಗವಲನೇಂದಿರಾಸಖಮ್ |
ಐಕ್ಷಿ ತದ್ದಿನಮಮುಕ್ತಸಂಶಯಂ
ಹಂಸಪಾಲೀಭಿರಪಾಂಗಿತಾಂಬರಮ್ ||

ಸಮುದ್ರದಲ್ಲಿ ಮಲಗಿರುವ, ಮೈಕೈ ಮುರಿಯುತ್ತ ಏಳುತ್ತಿರುವ ಇಂದಿರಾ ಸಖನಾದ ನಾರಾಯಣನು ವರ್ಷಾಕಾಲದ ನಂತರ ಶರದೃತುವಿನಲ್ಲಿ ಏಳುವನು ಎನ್ನುವುದು ಆಗಮೋಕ್ತಿ. ಕಣ್ಣು ತೆರೆದು ನೋಡಿದರೆ ಆಕಾಶದಲ್ಲೆಲ್ಲ ಹಂಸಗಳ ಸಾಲ ತುಂಬಿಕೊಂಡಿರುವದರಿಂದ ವರ್ಷಾಕಾಲ ಹೋಗಿರಬಹುದೆಂಬ ಸಂಶಯದಿಂದ ಆ ಹೊತ್ತಿನಲ್ಲಿ ನೋಡಿದನು.

೩೧. ಷಟ್ಪದಾಃ ಪದಸಮರ್ಪಣಾಸಹೇ
ಪ್ರಾಕ್ತನೇ ದಲಚಯೇ ಪರಿಶ್ಲಥೇ |
ಕಂಪವತ್ತನು ಕದಂಬಸಂತತೇಃ
ಕೀರ್ಣಕೋಪರಿ ಕಥಂಚಿದಾಸತ ||

ಭೃಂಗಗಳು ಕಾಲಿಟ್ಟೊಡನೆ ಕದಂಬವಂಶದ ನೀಪಕುಸುಮಗಳ ಸಮೂಹದ ಹಿಂದಿರುವ ಎಲೆಗಳ ಸಮೂಹದಲ್ಲಿ ಬಿದ್ದುಹೋದರೂ ಸಹ ಬೀಜಕೋಶದ ಮೇಲ್ಭಾಗದಲ್ಲಿ ಕಂಪಿಸುತ್ತಿರುವ ಶರೀರವನ್ನು ಆ ಕೆಲಸದಲ್ಲಿ ಹೇಗೋ ಪ್ರಯಾಸದಿಂದ ನಿಲ್ಲಿಸುತ್ತಿದ್ದವು.