. ಅಥಾವನೀವಾಸವಸೂನುರಭ್ಯಗಾ
ದನಂಗರಾಧ್ಧಂತಮಲಂಕ್ರಿಯಾಂ ತನೋಃ |
ವಧೂಜನಸ್ವಾಂತವಶಕ್ರಿಯೌಷದಂ
ವಯೋ ನವಂ ಶೈಶವವಾಸನಾಸಹಮ್ ||

ಆನಂತರ ರಾಜಕುಮಾರನು ಯೌವನಾವಸ್ಥೆಗನುಗುಣವಾಗಿ ಶರೀರದ ಅಲಂಕಾರದಿಂದಾಗಿ, ವಧೂಗಳ ಮನಸ್ಸನ್ನು ವಶೀಕರಿಸುವ ಔಷಧರೂಪವಾಗಿ, ಬಾಲ್ಯಾವಸ್ಥೆಯನ್ನು ಕಳೆದುಕೊಂಡು, ನೂತನವಾಗಿ ತಾರುಣ್ಯವನ್ನು ಪಡೆದುಕೊಂಡನು.

. ಚಮತ್ಕೃತಂ ಯೌವನಶಿಲ್ಪಿನಾ ತದಾ
ಸಮಂಚಿತಭ್ರೂಲತಯಾ ಸತೋರಣಮ್ |
ಅಭೂತ್ಪ್ರವೇಶಾರ್ಹಮನಂಗಭೂಪತೇ
ರದಃ ಪುರಂ ಕಾಂತ್ಯಾಮೃತಾತ್ತಸೇಚನಮ್ ||

ಭ್ರೂಲತೆಗಳ ವಿಲಾಸದಿಂದಾಗಿ ಹೊರಬಾಗಿಲಿನ ತೋರಣದಿಂದ, ಕಾಂತಿಸುಧೆಯೆಂಬ ಪನ್ನೀರಿನ ಸಿಂಪಡಿಸುವಿಕೆಯಿಂದ, ಯೌವ್ವನವೆಂಬ ಶಿಲ್ಪಿಯಿಂದ ಮಾಡಲ್ಪಟ್ಟ ಚಮತ್ಕೃತಿಯಿಂದಾಗಿ ರಾಜಕುಮಾರನ ದೇಹ ಮನ್ಮಥನ ಪ್ರವೇಶಕ್ಕೆ ಯೋಗ್ಯವಾಗಿತ್ತು. ಅಥವಾ ರಾಜಕುಮಾರನ ಶರೀರ ಸಿದ್ಧಗೊಂಡಿತ್ತು.

. ವಚೋsಂಧಿದೇವ್ಯಾ ವದನಾಂಚಿತಸ್ಥಿತೇ
ರ್ವತಂಸಕರ್ಣೋತ್ಪಲವರ್ಣಘೋರಣೀ |
ವ್ಯರಾಜತಾಮುಷ್ಯ ಕಪೋಲಮಂಡಲೇ
ವಿಕಸ್ವರಶ್ಮಶ್ರುಮಿಷೇಣ ಬಿಂಬಿತಾ ||

ಮುಖವಾಣಿಯಾಗಿ, ಪೂಜನೀಯಳಾದ ಸರಸ್ವತಿಯ ಅಲಂಕಾರವಾದ ಕರ್ಣೋತ್ಪಲದ ಕಪ್ಪುಬಣ್ಣವು ನೆಲೆಸಿರುವುದರ ನೆಪವಾಗಿ ರಾಜಕುಮಾರನ ಕಪೋಲಗಳ ಮೇಲೆ ಗಡ್ಡದ ರೂಪದಲ್ಲಿ ಪ್ರತಿಫಲಿತಗೊಂಡು ವಿರಾಜಿಸಿತು.

. ವಹತ್ಯವಿಚ್ಛಿನ್ನತಯೈವ ಕರ್ಣಿಕಾ
ಮಣಿಪ್ರಭಾಸ್ರೋತಸಿ ಮಾಂಸಲೋದಯೇ |
ಸಶೈವಲಾಂಕೂರಚಮತ್ಕೃತಿಯೇವ
ತ್ಕಪೋಲಭೂಃ ಶ್ಮಶ್ರುಕರಂಬಿತಾಭವತ್ ||

ಸುಪುಷ್ಟವಾಗಿ ಬೆಳವಣಿಗೆಯಾಗುತ್ತಿರುವ ರಾಜಕುಮಾರನಿಗೆ ಕರ್ಣಾಲಂಕಾರಗಳ ರತ್ನಗಳ ಹೊಳಪಿನಿಂದಾಗಿ ಕಾಂತಿಯು ಅವಚ್ಛಿನ್ನವಾಗಿ ತೋರುತ್ತಿತ್ತು. ಹಾಗಾಗಿ ಗಡ್ಡ ವ್ಯಾಪಿಸಿದ ಅವನ ಕಪೋಲ ಪ್ರದೇಶವು ಪಾಚಿಯಂತೆ ಚಮತ್ಕಾರವಾಗಿ ಶೋಭಿಸಿತು.

. ವಿಧಿಃ ಸರೋಜಂ ವ್ಯಧಿತ ಸ್ವಮಂದಿರಂ
ತುಷಾರಪಾತೋಪಿ ತೇನ ಸಹ್ಯತೇ |
ಇತೀವ ಸಾನಂದಮುಷ್ಯ ಬಂಧುರಂ
ಭುಜಾಂತರಂ ಮಂದಿರಮಿಂದಿರಾತನೋತ್ ||

ವಿಷ್ಣುವು ಕಮಲವನ್ನು ತನ್ನ ಮನೆಯನ್ನಾಗಿ ಮಾಡಿಕೊಂಡನು. ಹಿಮಪಾತವಾದರೆ ಆ ಕಮಲ ಸಹಿಸುವುದಿಲ್ಲವೆಂದು ತಿಳಿದು ಲಕ್ಷ್ಮಿಯು ಆನಂದದಿಂದ, ಮನೋಹರವಾದ ವಿಷ್ಣುವಿನ ಹೃದಯಕಮಲವನ್ನು ಮನೆಯಾಗಿ ಮಾಡಿಕೊಂಡಳು.

. ಫಣಾಧರೇಂದ್ರಂ ಪರಿಹೃತ್ಯ ಭೀಷಣಂ
ದೃಢಾದರಾಮಂಸತಚಾಧಿರೋಹಣೇ |
ಗೃಹೀತುಮಸ್ಯ ಪ್ರಸೃತಾವಿವ ಕ್ಷಮಾಂ
ವ್ಯರಾಜತಾಂ ಜಾನುವಿಲಂಬಿನೌ ಭುಜೌ ||

ಭಯಂಕರವಾದ ಅಜಾನುಬಾಹುಗಳು, ಆದಿಶೇಷನನ್ನು ಹೊರತುಪಡಿಸಿದರೆ ಭೂಮಿಯನ್ನು ಹಿಡಿದುಕೊಳ್ಳಲು ಅತ್ಯಂತ ಸಮರ್ಥವಾದವುಗಳು ಎಂಬಂತೆ ಕಂಗೊಳಿಸುತ್ತಿದ್ದವು.

. ಕ್ರಮಾತ್ಸಮಾಕ್ರಮ್ಯ ಶಿಶುತ್ವಸಂಶ್ರಿತಾಂ
ತದಂಗಸೀಮಾನಮಿದಂ ನವಂ ವಯಃ |
ಕಿಮಸ್ಯ ಭೂಯಃ ಕ್ರಶಿತಾತ್ಮನೋsತನೋ
ತ್ಕೃಪಾವಶಾನ್ಮಧ್ಯಮದೇಶಮಾಶ್ರಮ್ ||

ಈ ಯೌವನವು ಕ್ರಮವಾಗಿ ಶಿಶುವಾಗಿದ್ದಾಗಿನಿಂದ ರಾಜಕುಮಾರನ ಅವಯವಗಳನ್ನು ಸೇರಿಕೊಂಡು ಸುಷುಷ್ಟವಾಗಿದೆ. ಮತ್ತೆ ಕೃಪೆಯಿಂದ ಆತ್ಮದ ಸ್ವರೂಪವನ್ನು ತನ್ನ ಆಕಾರವನ್ನು ಸಣ್ಣಗಾಗಿಸಿ ಈಗ ಮಧ್ಯಮಾವಸ್ಥೆಗೆ ತಲುಪಿದೆ. ಅಂದರೆಮಧ್ಯಮಗಾತ್ರವನ್ನು ಹೊಂದಿದೆಯೇನೋ.

. ಸಮುಚಿತಂ ಶೋಣಿಮಸಂಪದಾಂಚಲೇ
ವ್ಯಶೋಭತಾಮುಷ್ಯ ವಿಲೋಚನದ್ವಯಮ್ |
ಅಪಾಂಗಲೀಲಾಸ್ವರವಿಂದಮಂದಿರಾ
ಪದಾಂಬುಜಾಲಕ್ತಕಪಂಕಿಲಂ ಕಿಲ ||

ಅಂಚಿನಲ್ಲಿ ರಕ್ತವರ್ಣದಿಂದ ಕೂಡಿದ ಆ ಕಣ್ಣುಗಳು ಕಡೆಗಣ್ಣನೋಟವೆಂಬ ಲೀಲೆಗಾಗಿ, ಲಕ್ಷ್ಮಿಯು ಪದಾಂಬುಜಗಳಿಂದ ಉಂಟಾದ ಅಲಕ್ತಕವೆಂಬ ಕೆಸರಿನಿಂದ ಹುಟ್ಟಿದ ಕೆಸರಿನಂತೆ ಶೋಭಿಸುತ್ತಿದ್ದವು.

. ಕರಾರವಿಂದೇ ಕಠಿನೇ ಮಾನಸಂ
ಭ್ರುವೌ ಕೌಟಿಲ್ಯಭುಪಾನ ವಾಙ್ಮಯಮ್ |
ವಿಮುಕ್ತಮರ್ಯಾದತಯಾ ವಿಜೃಂಭಿತಮ್
ನವಾಭಿರೂಪ್ಯಂ ಕದಾಪಿ ವರ್ತನಮ್ ||

ಕಮಲಗಳೆಂಬ ಕೈಗಳಲ್ಲಿ ಅನವರತ ಅಭ್ಯಾಸದಿಂದಾಗಿ ಕಾಠಿಣ್ಯವಿದ್ದರೂ ಮನಸ್ಸಿನಲ್ಲಿ ಇರಲಿಲ್ಲ. ಹುಬ್ಬುಗಳಲ್ಲಿ ಕೂಡ ಕೌಟಿಲ್ಯತೆ ಇದ್ದರೂ ಮಾತುಕತೆಯಲ್ಲಿರಲಿಲ್ಲ. ನೂತನವಾದ ರಮಣೀಯತೆಯನ್ನು ಹೊಂದಿದ್ದರೂ ಆಚಾರ ವಿಚಾರಗಳಲ್ಲಿ ಕೂಡ ಎಂದಿಗೂ ಮರ್ಯಾದೆಗೆ ಧಕ್ಕೆ ಬಾರದೇ ವಿಜೃಂಭಿಸುತ್ತಿತ್ತು.

೧೦. ನಿರರ್ಗಲಾಯಾಮನಿರೋಧವರ್ತ್ಮನಾ
ವಿನಾ ನಿದಾನಂ ಶ್ರವಣೇ ವಿರೋಧಿನೀ |
ಇತೀವ ಶೇಷಾತಿಶಯಸ್ಪೃಶೋದೃಶೋ
ರಶೋಭಿ ಕೋಣೇನ ವಿಶೋಣಿಮಾಣಿಮಾ ||

ಯಾವುದೇ ಪ್ರತಿಬಂಧವಿಲ್ಲದೇ, ದೀರ್ಘವಾದ ದಾರಿಗಳಿಂದ ನಿಷ್ಕಾರಣವಾಗಿ ಶತ್ರುಗಳ ಬರುವಿಕೆಯನ್ನು ಕಿವಿಯಿಂದ ಕೇಳಿದೊಡನೆ ಅತಿಶಯ ಸಿಟ್ಟಿನಿಂದ ಕಿವಿಗಳು ಅರುಣರಾಗ ಕೆಂಬಣ್ಣದಿಂದ ಕೂಡಿ ಶೋಭಿಸುತ್ತಿದ್ದವು.

೧೧. ಪ್ರಮೃಷ್ಟಕಂದರ್ಪಮದಸ್ಯ ದರ್ಪಣಃ
ಪ್ರಕಾಶ್ಯ ತಸ್ಯ ಪ್ರತಿಬಿಂಬಸಂಪದಮ್ |
ಸಮಾನತಾದುರ್ವಿಧತ್ತಾಂ ಜಹಾರ
ದ್ವಿಭೂತಿಮಾನ್ಯಸ್ಯ ವಿಜೃಂಭಣಂ ಹಿ ತತ್ ||

ಕನ್ನಡಿಯು ಮನ್ಮಥನ ಪ್ರಭಾವದಿಂದುಂಟಾದ ಅಚ್ಯುತರಾಯನ ಯೌವ್ವನ ರೂಪವನ್ನು ಪ್ರದರ್ಶಿಸಿ ನಿಸ್ತೇಜವಾಯಿತು. ಸದೃಶವಸ್ತುಗಳ ಸಂಪತ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗದೇ ದಾರಿದ್ರ್ಯವನ್ನು ಹೊಂದಿದರೂ ಐಶ್ವರ್ಯವೆಂಬ ಭಸ್ಮದಿಂದ ಮಾನ್ಯನಾಗಿ ವಿಲಾಸವನ್ನು ಹೊಂದಿದ್ದನು. ಅಂದರೆ ಆ ವಿಭೂತಿಯಿಂದ ದಾರಿದ್ರ್ಯವನ್ನು ಪರಿಹರಿಸಿಕೊಂಡಿದ್ದನು.

೧೨. ಅತತ್ಸಮಾನಬ್ಜಭವಃ ಸ್ಮರಾದಿಮಾ
ನವ್ಯಧತ್ತ ರೂಪವ್ಯಯಲೋಭವಾನಿವ |
ತದೇಕರೂಪವ್ಯದುರ್ವಿಧಃ ಕಿಂ
ತನೋತಿ ತನನ್ಯೂನತನುಶ್ರೀಯೋsಪರಾನ್ ||

ಬ್ರಹ್ಮನು ಆಸೆಯಿಂದ ಮನ್ಮಥನಿಗಿಂತ ಸುಂದರನಾಗಿ ಅಚ್ಯುತರಾಯನನ್ನು ಸೃಷ್ಟಿಸಿದನು. ಬ್ರಹ್ಮನು ಅಚ್ಯುತರಾಯನೊಬ್ಬನನ್ನೇ ಸೃಜಿಸುವದರಲ್ಲಿ ದರಿದ್ರನಾಗಿದ್ದನೇನೋ ಬೇರೊಬ್ಬನನ್ನು ಈ ಕಾರಣದಿಂದಾಗಿ ಸೃಜಿಸಲಿಲ್ಲವೇನೋ.

೧೩. ಕರಂಬಿತಂ ಯೌವನಕಾಂತಿಸಂಪದಾ
ಕುಮಾರಮಾಲೋಕ್ಯ ಕುತೂಹಲಾನ್ನೃಪಃ |
ಅಥಾನಿಯಾಯಾಸ್ಯ ವಿವಾಹ ಕರ್ಮಣೇ
ಮಹೀಭುಜಾಂ ಮಂತ್ರಿಮುಖೇನ ಕನ್ಯಕಾಃ ||

ನೃಸಿಂಹರಾಜನು ತಾರುಣ್ಯಾತಿಶಯದಿಂದ ಕಂಗೊಳಿಸುವ ಪೂರ್ಣಸ್ವರೂಪನಾದ ಮಗನನ್ನು ನೋಡಿ ಅಭಿಲಾಷೆಯಿಂದ ಅಚ್ಯುತರಾಯನ/ರಾಜಕುಮಾರನ ವಿವಾಹ ನೆರವೇರಿಸಲು ಮಂತ್ರಿಗಳ ಮೂಲಕ ರಾಜಕುಮಾರಿಯರನ್ನು ಕರೆಸಿದನು.

೧೪. ಕರೇಣ ಸೂನೋಃ ಕ್ಷಿತೀಪಾಲಕನ್ಯಕಾ
ಕರಾನಯಂ ಗ್ರಾಹ್ಯತಿ ಸ್ಮ ಭೂಪತಿಃ |
ಪ್ರಕಾಶಿತಾರುಣ್ಯರುಚೇಃ ಪಯೋಜಿನೀ
ಪ್ರಸೂನಪಾಲಿರ್ದಿವಸೋ ಯಥಾ ರವೇಃ ||

ನೃಸಿಂಹರಾಜನು ಯೌವನ ಭರಿತನಾಗಿ ಶೋಭಿಸುವ ಮಗನ ಕೈಗೆ ರಾಜಕುಮಾರಿಯ ಹಸ್ತವನ್ನು, ಹಗಲಿನಲ್ಲಿ ಪ್ರಕಾಶಿಸುತ್ತಿರುವ ಸೂರ್ಯನ ಕಿರಣಗಳು ಅರಳುವ ಪದ್ಮಿನಿದಳಗಳಲ್ಲಿ ಸೇರುವಂತೆ ಸೇರಿಸಿದನು.

೧೫. ಕುಲೋದ್ವಹಾಸ್ವರ್ಕಕುಮುದ್ವತೀಶಯೋ
ರ್ವಧೂಷಂ ದೇವೀ ವರದಾಂಬಿಕಾಭಿದಾ |
ಅಮುಷ್ಯ ಸಂತೋಷಮಪುಷ್ಯ ದಾಂತರಂ
ವಿಶಿಷ್ಯ ತಾರಾಸ್ವಿವ ರೋಹಿಣೀ ವಿಧೋಃ ||

ಸೂರ್ಯಚಂದ್ರರಿಬ್ಬರ ಕುಲದಲ್ಲಿ ಹುಟ್ಟಿದ ಹಲವಾರು ರಾಜಕುವರಿಯರಲ್ಲಿ ವರದಾಂಬಿಕಾ ಎಂಬ ಹೆಸರಿನ ರಾಜಕುವರಿಯು ಈ ಅಚ್ಯುತರಾಯನೆಂಬ ಚಂದ್ರನಿಗೆ ನಕ್ಷತ್ರಗಳಲ್ಲಿ ರೋಹಿಣಿಯಂತೆ, ವಿಶೇಷವಾಗಿ ಮನಸ್ಸಿನಲ್ಲಿ ಸಂತೋಷವನ್ನು ಹೊಂದಿದಳು.

೧೬. ತನೂಭೂವಸ್ತ್ರೀನಪಿ ತಾದೃಶಶ್ರೀಯಃ
ಸಮೀಕ್ಷ್ಯ ಸಾಮ್ರಾಜ್ಯಪದಾರ್ಹಲಕ್ಷಣಾನ್ |
ಅಮನ್ಯತೈವಾಂತರುದನ್ವದಂಬರಾಂ
ಪರಂಪರಾಭೋಜ್ಯತಯಾ ಪತಿಃ ಕ್ಷಿತೇ ||

ನೃಸಿಂಹರಾಜನು ತನ್ನ ಮೂವರು ಪುತ್ರರಲ್ಲಿ ಚಕ್ರವರ್ತಿ ಸ್ಥಾನಕ್ಕೆ ಅರ್ಹವಾದ ಲಕ್ಷಣಗಳನ್ನು ನೋಡಿ ಮನಸ್ಸಿನಲ್ಲಿ ಸಮುದ್ರಪರ್ಯಂತ ಭೂಮಿಯನ್ನು ಪರಂಪರಾಗತವಾಗಿ ಭೋಗಿಸುವ ಕಾರಣಕ್ಕಾಗಿ ರಕ್ಷಿಸಬೇಕಾಗಿರುವ ಹಿನ್ನೆಲೆಯಲ್ಲಿ ಅಖಂಡ ಭೂಭಾರವನ್ನು ವಹಿಸಿಕೊಡುವ ಬಗ್ಗೆ ಯೋಚಿಸಿದನು.

೧೭. ಸಮೇತ್ಯ ಸಾಮ್ರಾಜ್ಯರಮಾಂ ಮನೋರಮಾಂ
ವಿನೀತಿಮಾನ್ವೀರನೃಸಿಂಹಭೂಪತಿಃ |
ಬಹಿರ್ವ್ಯಧಾದ್ಬಂಧನಮಂದಿರಾದರೀ
ನ್ಧರಾಸುರಾನ್ಕಿಂ ದರಿದ್ರತಾಭಿಧಾತ್ ||

ವಿನಯಸಂಪನ್ನನಾದ ವೀರನೃಸಿಂಹಭೂಪತಿಯು ಸ್ತುತಿಸ್ಪಡುವ ಸಾಮ್ರಾಜ್ಯಲಕ್ಷ್ಮಿಯನ್ನು ಪಡೆದುಕೊಂಡು ಶತ್ರುಗಳನ್ನು ಕಾರಾಗೃಹದಿಂದ ಬಂಧಮುಕ್ತಗೊಳಿಸಿದನು. ಬ್ರಾಹ್ಮಣರನ್ನು ದಾರಿದ್ರ್ಯದಿಂದ ಅಂದರೆ ಧನ ಕನಕಗಳ ದಾನದಿಂದಾಗಿ ಮುಕ್ತಗೊಳಿಸಿದನು.

೧೮. ಅನಂತರಂ ಕೀರ್ತಿಧುರಂಧರೋದಧಾ
ತ್ಸ ಕೃಷ್ಣರಾಯಃ ಸಕಲಾಂ ವಸುಂಧರಾಂ |
ಅಮುಷ್ಯ ಶೀರ್ಣೈರಭಿಷೇಕವಾರಿಭಿಃ
ಶಶಾಮ ವಿದ್ವೇಷಣಶೌರ್ಯಪಾವಕಃ ||

ಅನಂತರ ಕೀರ್ತಿಶೇಷನಾದ ಕೃಷ್ಣರಾಯನು ಸಮಸ್ತ ಭೂಮಂಡಲಕ್ಕೆ ರಾಜನಾದನು. ಕೃಷ್ಣರಾಯನ ಅಭಿಷೇಕದ ನೀರಿನಿಂದ ಸುತ್ತಮುತ್ತಲಿನ ಶತ್ರುಗಳ ಶೌರ್ಯವೆಂಬ ಅಗ್ನಿಯು ಶಾಂತವಾಯಿತು.

೧೯. ಕೊಂಡವೀಟಿ ಪ್ರಮುಖಾನಿ ಸಂಗರೇ
ಮಹಂತಿ ದುರ್ಗಾಣಿ ಮತಂಗಜೇಶೀತುಃ |
ಪುರಾ ಗೃಹೀತ್ವಾ ಪ್ರಟುಪೇಟ್ಟನೂಪುರೇ
ನ್ಯಧಾದಥ ಸ್ತಂಭಮಸೌ ಮಹಾಬಲಃ ||

ಮಹಾಸೈನ್ಯದೊಂದಿಗೆ ಶ್ರೀಕೃಷ್ಣರಾಯನು ಯುದ್ಧದಲ್ಲಿ ಮದೋನ್ಮತ್ತನಾದ ಗಜಪತಿರಾಯನನ್ನು, ಕೊಂಡವೀಟಿಯ ಇತರ ಪ್ರಮುಖರನ್ನು ಕೊಂದು ಕೋಟೆಗಳನ್ನು ಮೊದಲಿಗೆ ವಶಪಡಿಸಿಕೊಂಡನು. ಅನಂತರ ಪುಟುಪೇಟ್ಟನೂಪುರ ಎಂಬ ನಗರದಲ್ಲಿ ಜಯಸ್ತಂಭವನ್ನು ನೆಡಿಸಿದನು.

೨೦. ಪಯೋಧಿರಾಂಚೀಪರಿಣೇತೃತಾಸ್ಪದೇ
ಪದೇsಭಿಷೇಕ್ತುಂ ತಮಥಾಚ್ಯುತಪ್ರಭುಮ್ |
ಕುಲಾದ್ರಿಕೂರ್ಮೋರಗಕುಂಜರಾಗ್ರಣೀ
ಶ್ರಮಾಪಹೃತೈ ಸಮನಾಹಿ ಮಂತ್ರಿಭಿಃ ||

ಅನಂತರ ಸಮುದ್ರಮೇಖಲೆಯಾದ ಭೂಮಿಯಲ್ಲಿ ಒಡೆಯನಾಗಿ ಅಚ್ಯುತರಾಯನನ್ನು ನಿಯುಕ್ತಿಗೊಳಿಸಲು ಅಥವಾ ಅಚ್ಯುರಾಯನಿಗೆ ಪಟ್ಟಾಭಿಷೇಕ ಮಾಡಲು, ನಿಶ್ಚಯಿಸಿ ಮಂದರ ಪರ್ವತವನ್ನು ಹೊತ್ತ ಕೂರ್ಮ, ಭೂಭಾರವನ್ನು ಹೊತ್ತ ಆದಿಶೇಷ, ರಾಜ್ಯಭಾರ ನಡೆಸುವ ಹಲವರು ದಿಗ್ಗಜರುಗಳ ಶ್ರಮಪರಿಹಾರಕ್ಕೋಸ್ಕರ ಮಂತ್ರಿಗಳು ಕಾರ್ಯಾರಂಭಮಾಡಿದರು.

೨೧. ಪ್ರಚೋದಿತಾಸ್ತೈಃ ಪರಿಚಾರಕಾಸ್ತತ
ಸ್ತಪಾತ್ಯಯೇನ ಸ್ತನಯಿತ್ರವೋ ಯಥಾ |
ಅಶೇಷತೀರ್ಥಾರ್ಣವವಾಹಿನೀಜಲಾ
ನ್ಯನೈಪುರಾಜ್ಞಾನಮಕಾಲಮಗ್ರತಃ ||

ಆನಂತರ ಮಂತ್ರಿಗಳಿಂದ ಆಜ್ಞಾಪಿತವಾದ ಸೇವಕರುಗಳು, ಮಳೆಗಾಲದಲ್ಲಿ ಪ್ರಚೋದಿತವಾದ ಮೋಡಗಳಂತೆ, ಸಮಸ್ತ ತೀರ್ಥಗಳ, ನದಿಗಳ ನೀರನ್ನು ಆಜ್ಞೆಯಾದ ಕ್ಷಣಾರ್ಧದಲ್ಲೇ ಎದುರಿಗೆ ತಂದಿಟ್ಟರು.

೨೨. ಯುವಾನಮಾಜಾನಭೂಜಾಯತೀಂ ತತೋ
ನಿಶಾಮ್ಯ ಸರ್ವೇರ್ನಿರಚಾಮಿ ಮಂತ್ರಿಭಿಃ |
ಭುಜಂಗರಾಜನ್ಯದೃತಾಂ ಭುವಂ ಕೃತೀ
ಭುಜಾಂಗದೀಕರ್ತುಮಸೌ ಭವೇದಿತಿ ||

ಅಜಾನುಬಾಹುವಾಗಿ ದೀರ್ಘ ಆಕಾರವನ್ನು ಹೊಂದಿದ ತರುಣನಾದ ಅಚ್ಯುತರಾಜನನ್ನು ನೋಡಿ ಮಂತ್ರಿಗಳು ಹೀಗೆ ನಿಶ್ಚಯಿಸಿದರು. ಅಚ್ಯುತರಾಜನು ಆದಿಶೇಷನಿಂದ ಹೊರಲ್ಪಟ್ಟ ಭೂಮಿಯನ್ನು ತನ್ನ ಹಸ್ತಗಳಿಂದ ಕೇಯೂರಮಯವಾಗಿಸಲು ಶಕ್ತನಿರುವನು ಎಂದು.

೨೩. ಪ್ರಣಾಮಶೀಲಃ ಫಣಿಶೈಲಶಾಸಿತುಃ
ಕದಾಚಿದಗ್ರೇ ಕರಶಂಖನಾರಿಣಾ |
ಪಯೋಧಿಕಾಂಚೀಪರಿಣೇತೃತಾಸ್ಪದೇ
ಪದೇಭಿಷಿಕ್ತಃ ಪರಂಪರಾಗತೇ ||

ವಿನಯಶೀಲನಾದ ಅಚ್ಯುತರಾಯನು ಒಮ್ಮೆ ಭಗವಂತನಾದ ಶೇಷಾಚಲಪತಿಯ ಎದುರಿನಲ್ಲಿಯೇ ಆತನ ಕೈಯಲ್ಲಿರುವ ಶಂಖುವಿನಿಂದ ಬಂದ ನೀರಿನಿಂದ ಕುಲಕ್ರಮಾಗತ ರಾಜತ್ವ ಪದವಿಗೆ, ಚಕ್ರವರ್ತಿ ಪದವಿಗೆ ಅಭಿಷಿಕ್ತನಾಗಿದ್ದನು.

೨೪. ಪ್ರಣೀಯ ವಿದ್ಯಾನಗರೀಂ ಪತೀಂ ಕ್ಷಿತೇ
ರಹೀಂದ್ರಶೈಲಾಧಿಭುವಾಸ್ಯ ಕಲ್ಪಿತಾಮ್ |
ಉದಾರವೃತ್ತೇರುದಯಂಜತೋತ್ಸವಂ
ವಿಧಿತ್ಸವಸ್ತೇ ಸಚಿವಾ ವಿಶೇಷತಃ ||

ಶೇಷಾದ್ರಿನಾಯಕನಿಂದ ಸಂಕಲ್ಪಿತವಾದ ಈ ಉತ್ಸವವನ್ನು ವಿಶೇಷವಾಗಿ ಮಾಡಲು ದೇವೇಚ್ಛೆಯನ್ನು ಸಾಕಾರಗೊಳಿಸಲು ವಿದ್ಯಾನಗರಿಯಲ್ಲೂ ಅಚ್ಯುತರಾಯನನ್ನು ಕರೆತಂದು ಗಾಂಭೀರ್ಯದಿಂದ ಮಂತ್ರಿಗಳು ಕಾರ್ಯೋನ್ಮುಖರಾದರು.

೨೫. ನಿಶಾಂತಸಂದಾನಿತವೈಜಯಂತಿಕಾ
ನಿರಂತರಚ್ಛಾಯನಿರಾಕೃತಾತಪಮ್ |
ಪರಿಷ್ಕೃತಾನೇಕವಿಧಪ್ರತೋಲಿಕಂ
ಪುರಂ ವಿಭೋರೈಕ್ಷ್ಯೇತ ಪುಂಖಿತೋತ್ಸವಮ್ ||

ವಿದ್ಯಾನಗರಿಯಲ್ಲಿ ಮನೆಗಳಲ್ಲಿ ಕಟ್ಟಲಾದ ಧ್ವಜಗಳ ನಿಬಿಡವಾದ ನೆರಳಿನಿಂದಾಗಿ ತಿರಸ್ಕೃತವಾದ ಬಿಸಿಲು, ಅಲಂಕೃತಗೊಂಡ ಅನೇಕ ವಿಧವಾದ ರಥಗಳಿಂದಾಗಿ ಉತ್ಸವದ ಸಂಭ್ರಮವು ಹೆಚ್ಚುತ್ತಿರುವಂತೆ ಕಂಡುಬಂದಿತು.

೨೬. ವಿಚಿತ್ರಕೌಶೇಯವಿತಾನಮಂಡಲೀ
ವಿಲಂಬಿಮುಕ್ತಾಮಣಿದಾಮಚಾಮರಮ್ |
ಪರಸ್ಪರಪ್ರಸ್ತುತತರ್ಕಶಿಲ್ಪವಿ
ತ್ಪ್ರವರ್ತಿತಾತ್ಯಮ್ಭತಚಿತ್ರಪುತ್ರಿಕಮ್ ||

ಇಲ್ಲಿ ಮುಂದೇ ಏಳು ಶ್ಲೋಕಗಳನ್ನು ಅನ್ವಯಿಸಿಕೊಳ್ಳಲಾಗಿದೆ. ಈ ರೀತಿಯಾಗಿ ರಾಜನ ಅರಮನೆಯು ಚಿತ್ರವಿಚಿತ್ರವಾದ, ಆಶ್ಚರ್ಯಕರವಾದ ನಾನಾ ಬಣ್ಣಗಳ ಬಟ್ಟೆಗಳಿಂದ ಶೃಂಗರಿತಗೊಂಡಿತ್ತು. ಮುತ್ತಿನ ಮಣಿಗಳ ಚಾಮರಗಳಿಂದ ಪರಸ್ಪರವಾಗಿ ಶಿಲ್ಪಕೌಶಲ್ಯದಲ್ಲಿ ಸ್ಪರ್ಧಾಳುಗಳಾದಂತಿರುವ ಶಿಲ್ಪಗಳಿಂದ ನಿರ್ಮಿತವಾದ ವೈವಿಧ್ಯಮಯವಾದ ಶಿಲ್ಪಗಳು.

೨೭. ವಿಶುದ್ಧ ಮುಕ್ತಾಫಲಧೂಲಿಪಾಲಿಕಾ
ತರಂಗಿತಪ್ರಾಂಙಾಕಣರಂಗವಲ್ಲಿಕಮ್ |
ಇತಸ್ತತಃ ಕ್ಲೃಪ್ತಹಿಮಾಂಬುಸೇಚನ
ಪ್ರಶಾಂತಬಾಹ್ಯಾಙಂಕಣಚಂದ್ರಧೂಲಿಕಮ್ ||

ವಿಶುದ್ಧವಾದ ಮೌಕ್ತಿಕ ಧೂಪ ಸರಣಿಯಿಂದ ಎಲ್ಲ ಕಡೆಗೂ ಸುತ್ತುವರೆದಿರುವ, ಅಂಗಳದಲ್ಲಿರುವ ರಂಗವಲ್ಲಿಯು, ಅಲ್ಲಲ್ಲಿ ತಣ್ಣೀರಿನ ಸಿಂಪಡಿಕೆಯಿಂದ ಪ್ರಶಾಂತವಾದ ಹೊರಾಂಗಣವು, ಕರ್ಪೂರದ ವಾಸನೆಯಿಂದ ತುಂಬಿರುವ

೩೮. ಸಮುಂಚಿತಾರಟ್ಪವಧೂನಖಾಂಚಲ
ಪ್ರಪಂಚಿತಾರಾವವಿಪಂಚಿಕಾಂಚಿತಮ್ |
ಸಕಂಕಣೀ ಪ್ರೇಙಣಾಂಗನಾ
ಮೃದಂಗಸಂತಾಡನಭಂಗಿಸಂಗತಮ್ ||

ಶ್ರೇಷ್ಠರಾದ ಅರಟ್ಟದೇಶದ ಸ್ತ್ರೀಯರು ತಮ್ಮ ನಖಾಗ್ರಗಳಿಂದ ಸುಮನೋಹರ ವೀಣೆಗಳನ್ನು ನುಡಿಸುವದರಿಂದ ಎಲ್ಲ ಕಡೆಗೂ ಧ್ವನಿಯು ಹರಡಿಕೊಂಡಿತ್ತು. ಬಳೆ ಮೊದಲಾದ ಹಸಾಭರಣಗಳಿಂದ ಕೂಡಿದ ಕೊಂಕಣಿ ಸ್ತ್ರೀಯರ ಮೃದಂಗವಾದನವು ಶೋಭೆಯನ್ನು ತಂದಿತ್ತು.

೨೯. ಕಲಿಂಗಸಾರಂಗದೃಗಾಲಿಘೂರ್ಣಿತೋ
ತ್ತರಂಗಸೌರಭ್ಯಕುರಂಗನಾಭಿಕಮ್ |
ಪಟೀರಕರ್ಪೂರವಿಮೇಲನಾರ್ಭಟೀ
ನಿರೂಢಲಾಟೀಕರಹಾಟಕೋತ್ಕಟಮ್ ||

ಕಳಿಂಗದೇಶದ ಮೃಗಾಕ್ಷಿಯರ, ಭೃಂಗಸಮೂಹಗಳಿಂದ ಮದೋನ್ಮತ್ತವಾದ ಸುಗಂಧದೊಡಗೂಡಿರುವ ಕಸ್ತೂರಿಯಿಂದ, ಚಂದನಕರ್ಪೂರ ಸಂಯೋಜನೆಯಿಂದ ಕೌಶಲ್ಯಪೂರ್ಣವಾಗಿರುವ ಲಾಟದೇಶದ ಸ್ತ್ರೀಯರ ಕರಪಲ್ಲವಗಳಿಂದ ಅಧಿಕವಾಗಿ ವ್ಯಾಪ್ತಗೊಂಡಿರುವ