೨೬. ಕತಿ ಚಿತ್ಕರಾಲಕರವಾಲಿಕಯಾ
ಕತಿಚಿಚ್ಚ ಕುಂತಲತಯಾ ಶಿತಯಾ |
ವಿಶಿಖೈಃ ಪರೇ ಶಿತಮುಖೈರಭವ –
ನ್ವಿಭುಸೇನಯಾ ವಿದಲಿತಾ ವಿಮತಾಃ ||
ಅಚ್ಯುತರಾಯನ ಸೈನ್ಯದಿಂದ ಕೆಲವು ಶತ್ರುಗಳು ಭಯಂಕರವಾಗಿ ಖಡ್ಗದಿಂದ ತುಂಡರಿಸಲ್ಪಟ್ಟರು. ಕೆಲವರು ತೀಕ್ಷಣವಾಗಿ ಕೊಂತವೆಂಬ ಆಯುಧದಿಂದ ತುಂಡರಿಸಲ್ಪಟ್ಟರು. ಮತ್ತು ಕೆಲವರು ಹರಿತವಾಗಿರುವ ಬಾಣಗಳಿಂದ ತುಂಡರಿಸಲ್ಪಟ್ಟರು.
೨೭. ಅವಕೀರ್ಣಕರ್ಣಕನಕಾಭರಣಾ
ಹನನಾಜಹತ್ಕಿಣಗಣಾಂಸತಟಾಃ |
ಕರತೋ ವಿನಿರ್ಗಲಿತಖಂಗಧನುಃ –
ಪರಿಫಾದಿಮಪ್ರಹರಣಪ್ರಕರಾಃ ||
ಸುತ್ತಲೂ ಬಿದ್ದಿರುವ ಕನಕಮಯವಾದ ಕರ್ಣಭೂಷಣಗಳು, ಹೊಡೆತದಿಂದ ಉಂಟಾದ ಗಾಯದ ಮರೆಯಾಗದಿರುವ ಕಲೆಗಳಿಂದ ತೋಳು, ತಲೆ ಪ್ರದೇಶಗಳು ಕೈಗಳಿಂದ ಬಿದ್ದಿರುವ ಲೋಹ ನಿರ್ಮಿತ ಬಿಲ್ಲು ಬಾಣ ಆಯುಧಗಳ ರಾಶಿಯಿಂದ
೨೮. ಶ್ಲಥಮೌಲಿವೇಷ್ಟನದುಕೂಲಶಿಖಾ –
ಸ್ತರಣೇರಣೇ ಕುಣಪಭುಕ್ ಛರಣೇ |
ವಿಪುಲಾಂಸಕೂಟವಿಗಲದ್ವಲಯಾ –
ಶ್ಚಿರಮಸ್ವಪನ್ಸಂಪದಿ ಚೇರಭಟಾಃ ||
ಚೇರರಾಜನ ಸೈನಿಕರೆಲ್ಲರೂ ಮಂಡಿಗಂಟು ಶಿಥಿಲಗೊಂಡು ಜುಟ್ಟಿನಿಂದ ಮುಚ್ಚಿರುವ, ರಣಾಂಗಣದಲ್ಲಿ ಶವವಾಗಿ ಮಲಗಿರುವ, ವಿಸ್ತಾರವಾದ ಹೆಗಲಿನಿಂದ ಜಾರುತ್ತಿರುವ ಮಂಡಲದಂತಿರುವ ಆಭರಣದಿಂದ, ರಣಾಂಗಣದಲ್ಲಿ ಚಿರನಿದ್ರೆಯಲ್ಲಿ ಮುಳುಗಿದ್ದರು.
೨೯. ನಿಹತಾವಶಿಷ್ಟಸುಭಟಾನುಗತೋ
ವಿಜಯಿಷ್ಣುಸೈನ್ಯಮಧಿಜನ್ಯಮಮುಮ್ |
ಅಭಿಮನ್ಯು ಚೋಲಪತಿನಾತವಾ –
ನಪರಾವತಾರಮಮರೇಂದ್ರತರೋಃ ||
ಚೇರರಾಜನು ಅಳಿದುಳಿದ ಸೈನಿಕರಿಂದ ಹಿಂಬಾಲಿಸಲ್ಪಟ್ಟರೂ, ಯುದ್ಧದಲ್ಲಿ ಜಯಗಳಿಸಿದ ಸೈನ್ಯದವರು ಕಲ್ಪವೃಕ್ಷದ ಅಪರಾವತಾರವೆಂದು ಸಲಗರಾಜನ ಸೇನಾಪತಿಗೆ ಚೋಳರಾಜನನ್ನು ಅರ್ಪಿಸಿ ನಮಿಸಿದರು.
೩೦. ಅಯಮರ್ಪಿತಸ್ತವ ಪದಾಂಬುಜಯೋ –
ರಧಮಃ ಸ ತಿರ್ವಟಿರಧರ್ಮಪರಃ |
ಇತಿ ತಂ ನಿಗದ್ಯ ಸಮದಾನ್ದ್ವಿರದಾ –
ನುಪದೀಚಕಾರ ರಯಗಾಂಸ್ತುರಗಾನ್ ||
ಅಧರ್ಮಾಸಕ್ತನಾದ (\ರುವಾಂಕೂರಿನ) ತಿರುವಟಿರಾಜನು ನಿನ್ನ ಪಾದಗಳಲ್ಲಿ ಅರ್ಪಿತವಾದನು. ಅಂದರೆ ನಿನಗೆ ಶರಣುಬಂದನು ಎಂದು ಸಲಗ ಸೇನಾಪತಿಗೆ ಹೇಳಿ ಮದೋನ್ಮತ್ತವಾದ ಆನೆಗಳನ್ನು, ವೇಗವಾಗಿ ಹೋಗುವ ಕುದುರೆಗಳನ್ನು ಕಾಣಿಕೆಯಾಗಿ ಕೊಟ್ಟರು.
೩೧. ಅನುಗ್ರಹ್ಯ ನಮ್ರಮಸುರಕ್ಷಣತಃ
ಸ್ಥಿತಿಮಾನ್ನಯೇ ತಿರುವಟಿಕ್ಷಿತಿಪಮ್ |
ಅಪಿ ಪಾಂಡ್ಯಭೂಪಮದಸೀಯಪದಾ –
ಭ್ಯಧಿಕ ಪ್ರತಿಷ್ಠಮತನಿಷ್ಟನೃಪಃ ||
ನೀತಿವಂತನಾದ ಸಲಗರಾಜ ಸೇನಾಪತಿಯು ವಿನೀತನಾಗಿ ತಿರುವಟಿರಾಜನಿಗೆ ಅಭಯವನ್ನಿತ್ತು, ಪಾಂಡ್ಯರಾಜನನ್ನು ಈ ತಿರುವಟಿರಾಜನ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ರಾಜನನ್ನಾಗಿ ಮಾಡಿದನು.
೩೨. ಶಯನೇ ಶಯಾನಮುದಧೀಂ ಸಮಯಾ
ಪದಸೌರಭೋರ್ಮಿಪರಿಣಾಹವತಿ |
ಅಥ ನಂತುಮಚ್ಯುತ ಮಗಾದವನೇ –
ರಧಿಭೂರನಂತಶಿಯನಾಭಿಮುಖಮ್ ||
ಅನಂತರ ಪೃಥಿವೀಪತಿಯು, ಸಮುದ್ರ ಸಮೀಪದಲ್ಲಿ ಶಬ್ದಗಳಿಂದೊಡಗೂಡಿದ ಅಲೆಗಳ ಸಂಪತ್ತಿಯಿಂದ ಸಮೃದ್ಧವಾದ, ಆದಿಶೇಷನ ಮೇಲೆ ಪತಂಜಲಿ ರೂಪದಿಂದ ಶಬ್ದ ಸಾಧುತ್ವವನ್ನು ನಿರ್ಣಯಿಸುವಂತೆ ಮಲಗಿರುವ ಪದ್ಮನಾಭನನ್ನು ವಂದಿಸಲು ಅನಂತಶಯನ ಪಟ್ಟಣಕ್ಕೆ ಅಭಿಮುಖವಾಗಿ ಹೊರಟನು.
೩೩. ಆವಾಸಭೂಶ್ಚುಲಕದಘ್ನಮಹಾಂಬುರಾಶೇ –
ರಂತುರ್ಮುಖಸ್ಯ ಹಯರತ್ನಖನಿಃ ಸುಮೇಷೋಃ |
ಸಾಮ್ರಾಜ್ಯಭೂರುಗರಚಂದನವಾಟಿಕಾಯಾ
ಮಾರ್ಗೇsಜನಿಷ್ಟ ಮಲಯಾದ್ರಿರಮುಷ್ಯ ದೃಷ್ಟಯೋಃ ||
ಅಂಗೈಯಲ್ಲಿಯೋ ಮಹಾಸಮುದ್ರದ ನೀರನ್ನು ಅಚಮನ ಮಾಡಿದ, ಯೋಗಿಯಾದ ಅಗಸ್ತ್ಯಮಹರ್ಷಿಯ ಅವಾಸಸ್ಥಾನವಾದ, ಮನ್ಮಥನ ಶ್ರೇಷ್ಠಕುದುರೆಗಳ ಸ್ಥಾನವೆನಿಸಿದ ಕಣಜವಾಗಿರುವ, ಅಗರು, ಚಂದನ ಮರಗಳ ಸಾಲು ಪಂಕ್ತಿಗಳಿರುವ, ಚಕ್ರವರ್ತಿ ಸ್ಥಾನವೆನಿಸಿದ ಮಲಯ ಪರ್ವತವನ್ನು ಮಾರ್ಗದಲ್ಲಿ ಈ ರಾಜನು ನೋಡಿದನು.
೩೪. ವೀಥೀಷ್ವಂಬುರುಹಾಂ ವಿಹಾರನಿರತಾ ವಿಕ್ಷಿಪ್ಯ ಧೂಲೀಭರಂ
ತಾಮ್ರಾಯಾಂ ತರಲೋರ್ಮಿಕಾವಿರಚಿತಪ್ರೆಂಖೋಲಿಕಾಕೇಲಿಕಾಃ |
ಲಕ್ಷ್ಯಾಲಕ್ಷ್ಯರದಾಃ ಪಯಃ ಕಣಮಿಪಾಲ್ಲಂಬಾಲಕಾಃ ಷಟ್ಪದೈಃ
ಸೇನಾಶ್ರಾಂತಿಮಪಾಹರಂತಿ ಶಿಶವಃ ಶ್ರೀಖಂಡಶೈಲಾನಿಲಾಃ ||
ಪದ್ಮಗಳ ಸಾಲಿನಲ್ಲಿ ಕ್ರೀಡಾಸಕ್ತವಾಗಿ ಧೂಳಿನಿಂದ ಹರಡಿದ ತಾಮ್ರಪರ್ಣಿಯ ಚಂಚಲವಾದ ಅಲೆಗಳಿಂದ ಡೋಲಾವಿಹಾರ ಮಾಡುವ, ಕಣ್ಣಿಗೆ ಕಾಣುವ ಜಲಬಿಂದುವಿನ ನೆಪದಿಂದ ಆಟವಾಡುವ ಭ್ರಮರಗಳ, ಚಂದನ ಪರ್ವತ ಚೂರ್ಣಕುಂತಲ ಮರಗಳಿಂದ ಬೀಸುವ ಗಾಳಿಯು ಸೇನೆಯ ಆಯಾಸವನ್ನು ಅಪಹರಿಸಿದವು.
೩೫. ಮೈನಾಕಪ್ರಮುಖೈರ್ಮಹೀಧರಕುಲೈರ್ಮಾಹೇಂದ್ರಭೀತ್ಯಾಕುಲೈ –
ರ್ಮತ್ವಾ ಶೋಷಮಪಾಮಪಾಂಗಿತಚಮೂರಾಜೀರ ಚೋಮಂಡಲೈಃ |
ಅಭ್ಯುತ್ಥಾನ ಮಿವಾಚರಂಡಮಸಕೃತ್ಪ್ರೇಂಖತರಂಗಚ್ಛಲಾ
ದದ್ರಾಕ್ಷೀನ್ನಿಧಿಮಂಭಸಾಂ ಸ ನಯನಾಯಾಮಂ ಮಿಮಾನಂ ಕಿಲ ||
ಮೈನಾಕವೇ ಮೊದಲಾದ ಪ್ರಮುಖ ಪರ್ವತ ಕುಲಗಳ ಒಡೆಯನಾದ ಮಹೇಂದ್ರ ಪರ್ವತವು ಭೀತಿಗೊಂಡಿರುವದನ್ನು ತಿಳಿದು, ಬತ್ತಿದ ದೃಷ್ಟಿಯುಳ್ಳ ಸೇನಾಸಮೂಹ ಮಂಡಲಗಳಿಂದ/ಬತ್ತಿದ ನೀರಿನಿಂದ, ಬೇರೆಡೆಗೆ ಹೋಗುವದಕ್ಕಾಗಿ ಪದೇ ಪದೇ ಚಲಿಸುವ ತರಂಗಗಳಿಂದ ಕೂಡಿದ, ಕಣ್ಣುಗಳ ದರ್ಶನ ಶಕ್ತಿಯನ್ನು ಹೆಚಿಸುವ ಸಮುದ್ರವನ್ನು ನೋಡಿದನು.
Leave A Comment