೪೫. ಅಯಿ ನೈವ ವಾಂಛತಿ ಪರಮಸೌ ತಥಾs
ಪ್ಯಸಹಿಷ್ಣುಭಿಃ ಕಥಿತಮನ್ಯಥಾ ಯದಿ |
ಕ್ವಗತಾ ಮತಿಸ್ತವ ರತೇ ಋತೇ ಮನೋ
ಮದನೋ ವಿನೋದಯತಿ ಕಾಮುಪೇತ್ಯ ವಾ ||
ನಿನ್ನ ಪ್ರಿಯನು ಬೇರೆ ಯಾವಳನ್ನೋ ಪ್ರೀತಿಸುವುದಿಲ್ಲವಾದರೂ ಹಾಗೇ ಅಸಹಿಷ್ಣುಗಳಾದ ಯಾರೋ ಹೇಳಿದ್ದರೆ, ನಿನ್ನ ಬುದ್ದಿ ಎಲ್ಲಿ ಹೋಯಿತು ರತಿಯನ್ನು ಬಿಟ್ಟು ಬೇರೆ ಯಾವಳ ಬಳಿಗೋ ಹೋಗಿ ಮನ್ಮಥನು ತನ್ನ ಮನಸ್ಸಿಗೆ ವಿನೋದವನ್ನು ಪಡೆದುಕೊಳ್ಳುವನೇ?
೪೬. ಅತಿರೇಕತಃ ಪ್ರಣಯಪೂರಪೂರಿತಾ
ಹರಿಣಾಕ್ಷಿ ಚಿತ್ತಸರಸೀ ತವಾsಧುನಾ |
ರಮಣಾಪರಾಧಲಹರೀನಿಯೋಜನಂ
ಕ್ಷಮತೇ ನ ಕಿಂಚಿದಪಿ ಕಾತರಾsಸ್ಮ್ಯಹಮ್ ||
ಎಲೈ ಹರಿಣಾಕ್ಷಿ, ಈಗ ನಿನ್ನ ಮನಸ್ಸು ಅತಿಯಾಗಿ ಪ್ರಣಯ ಪ್ರವಾಹದಿಂದ ತುಂಬಿದೆ. ಪ್ರಿಯನ ಅಪರಾಧ ಅಲೆಯನ್ನು ಅದು ಸ್ವಲ್ಪವೂ ಕ್ಷಮಿಸುವುದಿಲ್ಲ. ಈ ಕಾರಣದಿಂದ ನಾನು ಕಾತರಾಳಗಿದ್ದೇನೆ.
೪೭. ಯುವಯೋಃ ಪರಸ್ಪರಮುಪೇತ್ಯಮೇಲನಂ
ಪಯಸೋರಿವ ಪ್ರಕಟಿತೈಕ ಭಾವಯೋಃ |
ಅಧುನಾ ಕಯಾ ವಿಧುತಪಕ್ಷಪಾತಯಾ
ಕಮಲಾಕ್ಷಿ ಶಂಸ ಕಲಹಂಸಿಕಾಯಿತಮ್ ||
ನಿಮ್ಮಿಬ್ಬರ ಮಿಲನವು ಒಂದೇ ಸ್ವಭಾವವುಳ್ಳ ಹಾಲುನೀರು ಸೇರಿದಂತಿದೆ. ಈಗ ಹಾಲು ನೀರು ಬೇರ್ಪಡಿಸುವ ಕಲಹಂಸದಂತೆ ಯಾವಳು ಪಕ್ಷಪಾತದಿಂದ ಈ ಹೊಗಳಿಕೆಗೆ ಪಾತ್ರಳಾಗಿರುವಳು.
೪೮. ಅಭಿಕೇ ತವಾಭಿರತಿರಸ್ತುಂ ವಾ ನ ವಾ
ಮಮಭಾಷಿತೇsಪಿ ಮದನಾಗಮಸ್ಪೃಶಿ |
ನ ಚ ದೃಶ್ಯತೇ ಕಥಮಿದಂ ನವಂನವಂ
ತನಿಮಾನಮೇಯುಷಿ ತವಾತ್ಮನಿ ಸ್ಪೃಹಾ ||
ನಿನ್ನ ಪ್ರೇಮಿಯಲ್ಲಿ ನಿನಗೆ ಆಸಕ್ತಿ ಇರಲಿ. ಅಥವಾ ಇಲ್ಲದಿರಲಿ, ಮನ್ಮಥಾಗಮನವನ್ನು ಅರಹುತ್ತಿರುವ ನನ್ನ ಮಾತಿನಲ್ಲೂ ನಿನ್ನ ಆಸಕ್ತಿ ಕಾಣಿಸುತ್ತಿಲ್ಲ. ಹೀಗೇಕೆ? ಮತ್ತೆ ಮತ್ತೆ ಕೃಶವಾಗುತ್ತಿರುವ ನಿನ್ನ ಶರೀರದಲ್ಲೂ ನಿನಗೆ ಆಸಕ್ತಿ ಇದ್ದಂತಿಲ್ಲವಲ್ಲ?
೪೯. ನ ಪರಂ ತವೈವ ನನು ಮಾನವಿಭ್ರಮಃ
ಕುಟಿಲಭ್ರುವಾಂ ನ ಹಿ ಕುಲಕ್ರಮಾಗತಃ |
ಕಿಮಯಂ ನಿರಾಗಸಿ ಕಿಮಂಗ ಸಾಗಸಿ
ಕ್ರಿಯತೇ ಕೃಶಾಂಗಿ ಕಿತವೇ ತದುಚ್ಯತಾಮ್ ||
ಹುಬ್ಬು ಕೊಂಕಿಸುವ ಪ್ರಣಯಕೋಪದ ವಿಲಾಸವು ನಿನಗೆ ಮಾತ್ರವಲ್ಲ. ಅದು ಎಲ್ಲ ಸುಂದರಿಯರಿಗೂ ಅದ ಕುಲಕ್ರಮಾಗತವಾಗಿದೆ. ಎಲೈ ಕೃಶಾಂಗಿ ಈ ಕೋಪವನ್ನು ಅಪರಾಧಿಯಾದ, ನಿನ್ನನ್ನು ವಂಚಿಸುವ ಪ್ರಿಯನಲ್ಲಿ ತೋರಿಸುವೆಯೋ ಅಥವಾ ಅವನು ನಿರಪರಾಧಿಯಾಗಿದ್ದಾಗಲೂ ತೋರಿಸುವೆಯೋ ಅಥವಾ ಅವನು ನಿರಪರಾಧಿಯಾಗಿದ್ದಾಗಲೂ ತೋರಿಸುವೆಯೋ ಹೇಳು.
೫೦. ಅಯಿ ಖೇದಕೃನ್ನ ಯುವಯೋರಮೇಲನಂ
ಹೃದಿ ಖೇದಹೇತುರಿದಮೇವ ಕೇವಲಮ್ |
ತಮಿಮಂ ವಿಹಾಯ ತವ ರೂಪಮೀದೃಶಂ
ವನಜಾಕ್ಷಿಯೇನ ವನಚಂದ್ರಿಕಾಯತೇ ||
ಕಮಲಾಕ್ಷಿಯೇ, ನಿಮ್ಮಿಬ್ಬರ ವಿಯೋಗವು ಅಷ್ಟು ಬೇಸರವನ್ನು ತರುತ್ತಿಲ್ಲ. ನನ್ನ ಹೃದಯದ ಬೇಸರಕ್ಕೆ ಕಾರಣವೇನೆಂದರೆ ಆ ನಿನ್ನ ಪ್ರಿಯನಿಲ್ಲದಿದ್ದಾಗ ಈ ನಿನ್ನ ಇಂಥ ರೂಪವು ಕಾಡಿನ ಬೆಳದಿಂಗಳಾಗುತ್ತದೆ.
೫೧. ನ ವಿಮುಚ್ಯತೇ ತ್ವಯಿ ನತಭ್ರೂಸಾಯಕಃ
ಕಿಮು ತದ್ವ್ಯಥೈಕಕೃತಿನಾ ಸುಮೇಷುಣಾ |
ಅಪಿ ಮುಕ್ತ ಎಷ ಕುರುತೇನ ಕಿಂ ವ್ಯಥಾ
ಮತಿಸೌಕುಮಾರ್ಯಚಿರಸೇಹೃದಾತ್ತನೋಃ ||
ಬಾಗಿದ ಹುಬ್ಬುಗಳ ಸುಂದರಿಯೇ ಆ ನಿನ್ನ ಪ್ರಿಯನಿಗೆ ವ್ಯಥೆಯನ್ನುಂಟುಮಾಡುವ ಮನ್ಮಥನು ನಿನ್ನ ಮೇಲೆ ಏಕೆ ಬಾಣಗಳನ್ನು ಬಿಡುತ್ತಿಲ್ಲ ಅಥವಾ ಅವನು ಬಿಟ್ಟರೂ ಆ ಬಾಣಗಳು ನಿನ್ನ ಶರೀರದ ಸೌಕುಮಾರ್ಯದ ಮೈತ್ರಿಯ ಕಾರಣದಿಂದ ನಿನ್ನನ್ನು ಬಾಧಿಸುವುದಿಲ್ಲವೇನು
೫೨. ಕುಟಿಲಾಕ್ಷಿ ಶೋಧಯಿತುಮೇವ ಮೇ ಮನಃ
ಕ್ವನು ಶಿಕ್ಷಿತಾ ಸುಹೃದಿ ಕೋಪನಾಟಿಕಾ |
ಶಯನೇ ಕದಾಚನ ಕದಾಚಿದಾಸನೇ
ಹೃದಿ ಚೈಕದಾ ತ್ವಮಸಿ ಯದ್ವಿಚಿಂತಿತಾ ||
ಚಂಚಲನೇತ್ರಿ, ನನ್ನ ಮನಸ್ಸನ್ನು ಪರೀಕ್ಷಿಸುವದಕ್ಕಾಗಿಯೇ ಮಿತ್ರನಲ್ಲಿ ಕೋಪದ ನಾಟವನ್ನಾಡುವದನ್ನು ಕಲಿತುಕೊಂಡಿರುವೆಯಾ? ಏಕೆಂದರೆ ಚಿಂತಿಸಿದಾಗ ನೀನು ಹಾಸಿಗೆಯಲ್ಲೊಮ್ಮೆ ಹೃದಯದಲ್ಲೊಮ್ಮೆ ಪೀಠದಲ್ಲೊಮ್ಮೆ ಕಾಣಿಸಿಕೊಳ್ಳುವೆ.
೫೩. ಯದಿ ಶಂಕಸೇ ಮಯಿ ಕಲಂಕಮೀಕ್ಷ್ಯತಾ
ಮಿತಿಕಾಮಿನೈವ ಹೃದಯಂ ಪ್ರವೇಶಿತಾ |
ನ ನಿವರ್ತಸೇ ಪುನರತೋ ನಿರಾಗಸಃ
ಕಮಿತುಃ ಪುರೋ ಭವಿತುಮೇವ ಕಾತರಾ ||
‘ನನ್ನಲ್ಲಿ ಕಳಂಕವಿದೆಯೆಂದು ಸಂಶಯಪಡುವೆಯಾದರೆ ನೀನೇ ಪರೀಕ್ಷಿಸಿನೋಡು’ ಎಂದು ನಿನ್ನನ್ನು ತನ್ನ ಹೃದಯದೊಳಕ್ಕೆ ಕಳುಹಿಸಿದ್ದಾನೆ (ಇರಿಸಿಕೊಂಡಿದ್ದಾನೆ) ನಿರಪರಾಧಿಯಾದ ಅವನ ಎದುರಿನಲ್ಲಿ ನಿಲ್ಲಲು ಹೆದರಿದ ನೀನು ಈಗ ಹೃದಯದಿಂದ ಹೊರಬರುವದೇ ಇಲ್ಲ.
೫೪. ಯುವಯೋಃ ಸ್ಮರೇಣ ಯುಗಪತ್ಪ್ರಯೋಜಿತಂ
ಸಹತೇ ನ ತೇ ಸಹಚರಕಶರೋತ್ಕರಮ್ |
ಕ್ಷಮಸೇ ತ್ವಮಾಶಯಮಲೀಢ ನೈಷ ಕಿಂ
ಸ್ತನಶೈಲಯೋಃ ಪ್ರತಿಹತಸ್ತಲೋದರೀ ||
ಮನ್ಮಥನು ನಿಮ್ಮಿಬ್ಬರ ಮೆಲೆ ಒಟ್ಟಿಗೆ ಬಾಣ ಸಮೂಹವನ್ನು ಪ್ರಯೋಗಿಸಿದನು. ನಿನ್ನ ಪ್ರೇಮಿಯು ಆ ಬಾಣಗಳ ಆಘಾತವನ್ನು ಸಹಿಸಲಾರನು. ನೀನು ಸಹಿಸಿಕೊಂಡಿರುವೆ. ಎಲೈ ಸುಂದರಿ, ಆ ಬಾಣ ಸಮೂಹವು ಸ್ತನಶೈಲಗಳಿಂದ ತಡೆಯಲ್ಪಡುವದರಿಂದ ನಿನ್ನ ಹೃದಯಕ್ಕೆ ತಾಕುತ್ತಿಲ್ಲವೇನು?
೫೫. ವಿರಹಾನಲೇನ ವಿಟಮಾನಸಂ ಯಥಾ
ಹೃದಯಂ ತವಾsಪಿ ಪರಿತಾಪ್ಯತೇ ತಥಾ |
ಯುವಯೋರ್ನ ಕಿಂ ನು ಯುಗಪದ್ವಿಮೇಲನಾ
ಸುಲಭಾ ಭವೇತ್ಸುರಭಿಬಾಣಶಿಲ್ಪಿನಃ ||
ವಿರಹಾಗ್ನಿಯಿಂದ ಕಾಮಿಯ ಮನಸ್ಸು ಹೇಗೆ ಸುಡುವದೋ ಹಾಗೆ ನಿನ್ನ ಮನಸ್ಸು ಪರಿತಪಿಸುತ್ತದೆ. ಆಗ ನಿಮ್ಮಿಬ್ಬರನ್ನು ಬೆಸೆದುಕೂಡಿಸಲು ಸುರಭಿಪುಷ್ಪಗಳನ್ನೇ ಬಾಣಗಳನ್ನಾಗಿ ಮಾಡಿಕೊಂಡಿರುವ ಬಾಣಶಿಲ್ಪಿಯಾದ ಮನ್ಮಥನಿಗೆ ಸುಲಭವಲ್ಲವೇ?
೫೬. ಸಮುದೀರ್ಯ ಸೂಕ್ತಿಭಿರತಿವ ದೂತಿಕಾ
ಸಮಯೋಜಯತ್ಸಹಚರೇಣ ಮಾನಿನೀಮ್ ||
ಕೃಪಣಾಂ ಚಿರಾಯ ಕಮಲೇವ ವಾರ್ಷಿಕೀ
ಸ್ತನಿತಾಂಚಿತಾ ತಟವತಿಮುದನ್ವತಾ ||
ಇಂತಹ ಸ್ಪಷ್ಟವಾದ ಮಾತುಗಳಿಂದ ದೂತಿಯು ಕೋಪಗೊಂಡಿದ್ದ ಮಾನಿನಿಯನ್ನು ಅವಳ ಪ್ರೇಮಿಯರೊಡನೆ ಯೋಜಿಸಿದಳು ಹೇಗೆಂದರೆ ಕೃಶವಾಗಿರುವ ನದಿಯನ್ನು ವರ್ಷಾಕಾಲದ ಮಳೆಯು ತುಂಬಿಸಿ ಭೋರ್ಗರೆದು ಸಮುದ್ರ ಸೇರಿಸುವಂತೆ.
೫೭. ಅಥ ಮಾನಿನೀರಜಹಿಮಂ ಸಮಂ ಪ್ರಿಯೈ
ರನುರಾಗಪಾವಕಶಿಖಾಜ್ಯಮೂರ್ಜಿತಮ್ |
ಮದವಾರಿಮನ್ಮಥಮದಾವಲೇಶಿತು
ರ್ಮಧುಪಾತಮೈಹತ ಮನಸ್ವಿನೀಜನಃ ||
ಮಾನಿನಿಯರ ಪ್ರಣಯಕೋಪವೆಂಬ ಕಮಲಕ್ಕೆ ಹಿಮದಂತಿರುವ, ಪ್ರಿಯಾನುರಾಗವೆಂಬ ಬೆಂಕಿಯ ಜ್ವಾಲೆಗಳಿಗೆ ತುಪ್ಪವಾಗಿ ಅಗ್ನಿಯ ಔರ್ಧ್ವಕ್ಕೆ ಕಾರಣವಾದ, ಮದನನೆಂಬ ದಿಗ್ಗಜದ ಮದಜಲವೆನಿಸಿದ ಮದ್ಯವನ್ನು ಕುಡಿಯಲು ಆ ಸುಂದರಿಯರು ಅಪೇಕ್ಷಿಸಿದರು.
೫೮. ಮಧುಪಾರಣೇ ವಿರಚಿತಂ ಮೃಗೀದೃಶಾ
ಮುಹರೇತದೀಯನುತಿಮೌಲಿಕಂಪನಮ್ |
ಮಧುಘೂರ್ಣಿತಸ್ಯ ಮಹತೋ ಭವಿಷ್ಯತಃ
ಪ್ರಥಮಾವತಾರಪದವೀಮವೀವೃಧತ್ ||
ಮಧುಪಾರಣೆಯ ಕಾಲದಲ್ಲಿ ರಚಿಸಿದ ಪ್ರಿಯನ ಸ್ತುತಿಯನ್ನು ಕೇಳಿ ಹರಿಣಾಕ್ಷಿಯು ಮಾಡಿದ ಮೌಲಿಕಂಪನವು ಮುಂದೆ ಉಂಟಾಗಲಿದ್ದ, ಮದ್ಯಪಾನ ಜನಿತವಾದ ಕಂಪನದ ಪೂರ್ವಾವತಾರದ ದಾರಿಯನ್ನು ವರ್ಧಿಸಿತು.
೫೯. ಅಧಿವಾಸಶಾಲಿ ಮಧು ಯೋಷಿತಾ(ದಾ)ಶಯಂ
ವಿಶದೇವ ದೂಷಿತವಿವೇಕವರ್ತನಮ್ |
ನಿಖಿಲಂ ನಿಗೂಹನವಚೋ ಬಹಿಸ್ಸ್ವಯಂ
ನಿರಕಾಸಯತ್ಕಿಮು ನಿವಾಸಕಾಂಕಕ್ಷಯಾ ||
ಸೌರಭದಿಂದ ಕೂಡಿದ್ದ ಮದ್ಯವು ಸ್ತ್ರೀಯರ ಹೊಟ್ಟೆಗೆ ಸೇರುತ್ತಿದ್ದಂತೆಯೇ ವಿವೇಕದ ದಾರಿಯನ್ನು ದೂಷಿತು. ತಾನು ಅವಳ ಹೃದಯದಲ್ಲಿ ವಾಸಮಾಡಬೇಕೆಂಬ ಇಚ್ಛೆಯಿಂದಲೋ ಎಂಬಂತೆ ಗುಟ್ಟಾಗಿಡಬೇಕಾದ ಮಾತುಗಳನ್ನು ಅದ ಹೊರಗೆ ತಳ್ಳಿತು.
೬೦. ಮದಿರೇಕ್ಷಣಾಮುಖಧೃತಂ ಮದೇsಭವ
ಚ್ಛಕ್ಷಕಾಶ್ರಿತಂ ಸಹಚರಸ್ಯ ನೋ ಮಧು |
ಸಲಿಲಂ ಫನಾಲಿಚುಲಕೀಕೃತೋಝಿತಂ
ಸ್ವದತೇ ಹಿ ನೈವ ಲವಣಾರ್ಣವಸ್ಥಿತಮ್ ||
ಮದಿರಾಕ್ಷಿಯ ಬಾಯಲ್ಲಿದ್ದ ಮದಿರೆಯು ಕಾಮಿಗೆ ಸಂತೋಷವನ್ನುಂಟು ಮಾಡಿದಂತೆ ಪಾತ್ರೆಯಲ್ಲಿದ್ದ ಮಧ್ಯವು ಆನಂದವನ್ನು ತರಲಿಲ್ಲ. ಮೋಡಗಳು ಕುಡಿದು ಸುರಿಸಿದ ನೀರು ಜನರಿಗೆ ರುಚಿಸುತ್ತದೆ. ಸಮುದ್ರದಲ್ಲಿರುವ ನೀರು ರುಚಿಸುವುದಿಲ್ಲ ಅಲ್ಲವೇ?
೬೧. ದಯಿತಾಜನಸ್ಯ ದೃಢಮಾನಕರ್ಕಶೇ
ಮೃದುತಾವಹಂ ಮಧು ಮನೋವಿಧೂಪಲೇ |
ಅನಿದಾನಹಾಸಮಯಕೌಮುದೀಂ ದಿಶ
ನ್ನಿವವಾರ ಸೋದರತಯಾ ವಿಧೋರ್ಗುಣಮ್ ||
ಮದ್ಯವು ದೃಢಕೋಪದಿಂದ ಕರ್ಕಶವಾಗಿದ್ದ ಸ್ತ್ರೀಯರ ಮನಸ್ಸೆಂಬ ಚಂದ್ರಕಾಂತ ಶಿಲೆಯಲ್ಲಿ ಮೃದುತ್ವವನ್ನು ತಂದಿತು. ಅಲ್ಲದೇ ನಿಷ್ಕಾರಣ ನಗುವೆಂಬ ಬೆಳದಿಂಗಳನ್ನು ಚೆಲ್ಲಿತು. ಹೀಗೆ ಮದ್ಯವು ತನ್ನ ಸೋದರನಾದ ಚಂದ್ರನ ಗುಣಗಳನ್ನೆಲ್ಲ ಪಡೆದುಕೊಂಡಿತು.
೬೨. ಅಖಿಲಂ ರಹಸ್ಯಮವದಜ್ಜನಾಗ್ರತೋ
ಮದಪಾರವಶ್ಯಮಧಿಗಮ್ಯ ಮಾನಿನೀ |
ಅಲಸಾಲಸಾಲಪಿತವರ್ಣಸಂತತೇ
ರನತಿಸ್ಫುಟತ್ವಮವತಿಸ್ಮ ತತ್ಪುನಃ ||
ಮದೋನ್ಮತ್ತಳಾಗಿ ಅತ್ಯಧಿಕ ಮದ್ಯವನ್ನು ಸೇವಿಸಿದ ಮಾನಿನಿಯು ಜನರ ಎದುರಿಗೆ ಹೇಳಿಬಿಟ್ಟಳು. ಆದರೆ ತೊದಲು ನುಡಿಗಳನ್ನು ಅವಳು ಮಾತನಾಡಿದಾಗ ವಚನವು ಅಸ್ಪಷ್ಟವಾಗಿದ್ದುದರಿಂದ ಅದೇ ರಹಸ್ಯವನ್ನು ಮತ್ತು ಪುನಃ ಕಾಪಾಡುತ್ತಿತ್ತು.
೬೩. ಅಪದೇ ಮದೇನ ಹಸಿತಂ ಚ ರೋದನಂ
ಪ್ರತಿಬಿಂಬನೇಷು ಬಹುಧಾsವಲಂಬನಮ್ |
ಅನಭಿಜ್ಞತಾ ಪರಿಚಿತೇಷ್ವಬಿಜ್ಞತಾ
ವಿದಿತೇತರೇಷು ವಿಲಲಾಸ ಸುಭ್ರುವಃ ||
ಮಧ್ಯದ ಮದದಿಂದ ಆಸ್ಥಾನದಲ್ಲಿ ನಗು ಅಳು ಎರಡೂ ಕೇಳಿಬರುತ್ತಿತ್ತು. ತಮ್ಮ ಪ್ರತಿಬಿಂಬವನ್ನು ಆಸರೆಯಾಗಿ ಹಿಡಿದುಕೊಳ್ಳುತ್ತಿದ್ದರು, ಅಪರಿಚತರು ಪರಿಚಿತರಾಗುತ್ತಿದ್ದರು. ಮತ್ತು ಕೆಲವೊಮ್ಮೆ ಪರಿಚಿತರೇ ಅಪರಿಚಿತರಾಗುತ್ತಿದ್ದರು. ಸುಂದರವಾದ ಹುಬ್ಬುಗಳಿಂದ ವಿಲಾಸ ಹೊಂದಿದ್ದರು.
೬೪. ವದನೇ ತಥಾ ಮನಸಿ ರಾಗವಿಭ್ರಮ
ಸ್ಖಲನಂ ಪದೇsಪಿ ಚ ಮದೇನ ಭಾಷಿತೇ |
ಅಧಿಲೋಚನದ್ವಯಮಪಿ ಭ್ರುವೋ ಮತೌ
ಶುಶುಭೇ ವಿಭಕ್ತಮಿವ ಸುಭ್ರುವೋsಖಿಲಮ್ ||
ಮುಖದಲ್ಲಿ ಹಾಗೇ ಮನಸ್ಸಿನಲ್ಲಿ ರಾಗಮಯ ಭ್ರಾಂತಿಯಿಂದಾಗಿ ನಡೆನುಡಿಗಳಲ್ಲಿ ತಪ್ಪು ಗೋಚರಿಸುತ್ತಿತ್ತಲ್ಲವೇ. ಕಣ್ಣುಗಳೆರಡರಲ್ಲಿ ಮತ್ತು ಬುದ್ದಿಯಲ್ಲಿ ಕೂಡ ಭ್ರಾಂತಿಯ ಸ್ಪಷ್ಟ ಲಕ್ಷಣಗಳು ಸುಂದರವಾದ ಹಲ್ಲುಗಳಿದ್ದರೂ ವಿಭಾಗಿಸಿದಂತೆ ಶೋಭಿಸಿದವು.
೬೫. ಮಹಿಲಾಜನಸ್ಯ ಮದಿರಾನಿಷೇವಣಾತ್
ತ್ಕೃತವೀರಪಾನನಟನಸ್ಯ ಕಾಮಿಭಿಃ |
ಪ್ರಣಯೋಲ್ಲಸತ್ಪುಲಕವರ್ಮಿತಾಕೃತೇ
ರ್ಮದನಾಹವಾಭಿಲಕ್ಷಿತಂ ಮನೋsಭವತ್ ||
ಮಹಿಳೆಯರು ಮದಿರೆಯನ್ನು ಪಾನಮಾಡಿದುದರಿಂದ, ವಿಟರಂತೆ ವೀರಪಾನದ ನಟನೆ ಮಾಡಿದರು ಪ್ರಣಯದಿಂದ ಹುಟ್ಟಿದ ರೋಮಾಂಚನದಿಂದ ಮನಸ್ಸಿನಲ್ಲಿ ಮನ್ಮಥಯುದ್ಧದ ಅಭಿಲಾಷೆ ಉಂಟಾಯಿತು.
೬೬. ಸುದೃಶೋ ವಿಧೂಯ ಬಹುಶೋ ನಿವಾರಣಂ
ಪ್ರಣಯೇನ ಮೋಚಯತಿ ಕಂಚುಲೀಂ ಪ್ರಿಯೇ |
ಲಘುಸಂಕುಚತ್ತನುಲತೈವ ಲಜ್ಜಯಾ
ಪುನರಪ್ಯಸೌ ಪುಲಕಕಂಚುಕಿಮಧಾತ್ ||
ಸುಂದರಿಯಿಂದ ಪ್ರಣಯದಲ್ಲಿ ಒದಗಿದ ಅಡೆತಡೆ ನಿವಾರಿಸಲು ಕುಂಚುಕವನ್ನು ಬಿಚ್ಚಿದಾಗ ಲಘುವಾಗಿ ಸಂಕೋಚಗೊಂಡ ಶರೀರವು ನಾಚಿಕೆಯಿಂದ ಪುನಃ ರೋಮಾಂಚನವೆಂಬ ಕಂಚುಕವನ್ನು ಧರಿಸಿತು.
೬೭. ಅಯಿ ಕಿಂ ಭಿಭೇಷಿ ಭದದಂತಿಕೇ ಸಖೀ
ನಿವಸತ್ಯಸೌ ನಿಪುಣಮೀಕ್ಷ್ಯತಾಮಿತಿ |
ಅದಸೀಯಬಿಂಬಮಧಿರತ್ನಭಿತ್ತಿಗಂ
ಪರಿಸೂಚ್ಯತಾಂ ಪತಿರರುಂಧ ಗತ್ವರೀಮ್ ||
ಪ್ರಿಯೇ ಏಕೆ ಹೆದರುವೆ? ನಿನ್ನ ಸಖಿಯು ಸಮೀಪದಲ್ಲೇ ವಾಸಿಸುವಳು ಪರೀಕ್ಷಿಸಿ ನೋಡು ಎಂದು ಪತಿಯು ಪತ್ನಿಗೆ ರತ್ನದ ಗೋಡೆಯಲ್ಲಿ ಮಾಡಿದ್ದ ಅವಳ ಪ್ರತಿಬಿಂಬವನ್ನೆ ತೋರಿಸಿ ಅಲ್ಲಿಂದ ಹೋಗಲು ಯತ್ನಿಸುತ್ತಿದ್ದ ಅವಳನ್ನು ತಡೆದನು.
೬೮. ಅಯಿ ಮಾರ್ಜ್ಯತೇ ಲಗತಿ ಚೇದಪಾಂಗ ಇ
ತ್ಯವಮಾರ್ಜಯನ್ನಿವ ತದಂಗಮಸ್ಪೃಶತ್ |
ಅತೀದೀನಮರ್ಹತಿ ನ ಗಾಢಬಂಧನಾ
ನ್ಯವಲಗ್ನ ಮಿತ್ಯಹರದಂಶುಕಾಂಚಲಮ್ ||
ತನ್ನ ದೃಷ್ಟಿತಾಗಿರಬಹುದೆಂದು ಪ್ರೇಮಿಯು ಅದನ್ನು ಸರಿಪಡಿಸುವ ನೆಪದಲ್ಲಿ ಅಂಗಗಳನ್ನು ಸ್ಪರ್ಶಿಸಿ ಮೃದುತ್ವಕ್ಕೆ ಬಂಧನವೇಕೆಂದು, ಬಂಧನವನ್ನು ಬಿಡಿಸಿದನು.
೬೯. ಅಧರಂ ಗೃಹೀತವತೀ ಕಾಮುಕೇ ಹಠಾ
ದತನೋತ್ಕುಚಾವರಣಮಾತ್ತಸಂಭ್ರಮಾ |
ಅಂಘುಸ್ತನಸ್ಪೃಶಿ ತತೋ ನವಾ ವದೂ
ರವತಿಸ್ಮ ನೀವಿಮವಲಂಬ್ಯ ಪಾಣಿನಾ ||
ಕಾಮುಕನಿಂದ ಅಧರವನ್ನು ಕಚ್ಚಿಸಿಕೊಂಡ ಅವಳು ಗಾಬರಿಯಿಂದ ತನ್ನನ್ನು ಸೀರೆಯಿಂದ ರಕ್ಷಿಸಿಕೊಳ್ಳುತ್ತಿದ್ದಳು.
೭೦. ಭುಜವಲ್ಲರೀಂ ದ್ವಿಗುಣಿತಾಮರೋಜಯೋಃ
ಪರಿಧಾನವಾಸಸಿ ಪರಂ ಕರಾಂಚಲಮ್ |
ದೃಶಮರ್ಪಯಂತ್ಯಪಿ ಚ ದೀಪಿಕಾರ್ಚಿಷಿ
ಪ್ರಮದಾ ನಿರೈಕ್ಷಿಗಮಿತಾ ಪ್ರಿಯಾಂತಿಕಮ್ ||
ಪ್ರಿಯನ ಬಳಿಗೆ ಬಂದ ಪ್ರಮದೆಯು ಬಳ್ಳಿಯಂತಹ ತನ್ನ ತೋಳುಗಳಿಂದ ತನ್ನನ್ನು ಪದೇ ಪದೇ ಬಟ್ಟೆಯಿಂದ ಸಂರಕ್ಷಿಸಿಕೊಳ್ಳುತ್ತಾ ದೀಪದಲ್ಲಿ ತನ್ನ ನೋಟವನ್ನು ಇಟ್ಟಳು.
೭೧. ದಯಿತೇ ಕರಸ್ಪೃಶಿ ದರಾನುರಾಗಯೋ
ಸ್ಸಮಮೈಕ್ಷಿ ಕಂಪಪುಲಕಶ್ರಮೋದಕಮ್ |
ಅಧರಂ ಹಠಾತ್ಕೃತವವತಿ ತ್ರಪಾಮುದೋ
ರಸಿತ ಭ್ರುವಸ್ಸದೃಶಮಕ್ಷೀಮಿಲನಮ್ ||
ಪ್ರೇಮಿಯ ಸ್ಪರ್ಶದಿಂದಾಗಿ ಭಯಾನುರಾಗಗಳ ಲಕ್ಷಣಗಳಾದ ಕಂಪನ, ರೋಮಾಂಚನ, ಬೆವರುವಿಕೆ ಉಂಟಾಯಿತು. ಅಧರ ಚುಂಬನದಿಂದಾಗಿ ನಾಚಿಕೆ ಮತ್ತು ಸಂತೋಷಗಳಿಂದಾಗಿ ಕಣ್ಣುಗಳು ಮುಚ್ಚಿಕೊಂಡವು.
೭೨. ಸವಿಧಂ ಪ್ರಿಯಸ್ಯ ಗಮಿತಾ ಸಖೀಜನೈ
ರ್ವಿನತಾನನಾ ವಿಧುಮುಖೀ ತ್ರಪಾವಶಾತ್ |
ಪ್ರತಿಬಿಂಬಭಾಜಿ ಪತಕೇ ಚ ಸಾ ದೃಶೌ
ನಿಮಿಮೀಲ ತಾಂ ನಿಭೃತಮಾಶ್ಲಿಷದ್ವಿಟಃ ||
ಸಖಿಯರಿಂದ ಪ್ರಿಯನ ಬಳಿಗೆ ಕಳುಹಿಸಲ್ಪಟ್ಟ ಚಂದ್ರಮುಖಿಯ ನಾಚಿಕೆಯಿಂದ ತಲೆತಗ್ಗಿಸಿದಳು. ಪಾತ್ರೆಯಲ್ಲಿ ಪ್ರತಿಬಿಂಬವಾಗಿ ತೋರುವ ತನ್ನನ್ನು ನೋಡಿ ಕಣ್ಣು ಮುಚ್ಚಿಕೊಂಡಳು ಮತ್ತು ಪ್ರಿಯನಿಂದ ಆಲಂಗಿಸಲ್ಪಟ್ಟಳು.
೭೩. ಅಪದಿಶ್ಯ ಕಿಂಚನ ಸಖೀಷು ಗತ್ವರೀ
ಷ್ವದವೀಯಸಿ ಪ್ರಿಯತಮೇ ತಮೋಮುಷಿ |
ಅಪಿ ದೀಪಿಕಾರ್ಚಿಷಿ ಮಹುಸ್ಸತರ್ಜನಂ
ಸಭಯಂ ಸರೋಷಮಭವತ್ತದೀಕ್ಷಣಮ್ ||
ಯಾವುದೋ ಕಾರಣವೊಡ್ಡಿ ಸಖಿಯರೆಲ್ಲ ಹೊರಟುಹೋದಾಗ, ಪ್ರೇಮಿಯು ಸನಿಹದಲ್ಲಿರವಾಗ, ಕತ್ತಲೆ ಕಳೆಯುವದಕ್ಕಾಗಿದ್ದ ಸಣ್ಣ ದೀಪದ ಕುಡಿಯ ಜ್ವಾಲೆಯಲ್ಲೂ ಅವಳ ಕಣ್ಣು ಭಯ ಮತ್ತು ರೋಷಗಳನ್ನು ತೋರಿಸಿತು.
೭೪. ಪ್ರಣಯೋತ್ತರಂ ಕಿಮಪಿ ಪ್ರಚ್ಛತಿ ಪ್ರಿಯೇ
ನ ಪರಂ ದದೇ ಪ್ರತಿವಚೋ ನವೋಢಯಾ |
ಅಥ ದತ್ತಮಪ್ಯಗಮಿ ನ ಶ್ರವಃ ಪದಂ
ಗಮಿತಂ ತದಪ್ಯಜನಿ ನ ಸ್ಫುಟೀಕೃತಮ್ ||
ಪ್ರಣಯದ ಪ್ರಶ್ನೆಗೆ ಉತ್ತರವನ್ನು ಪ್ರಿಯನು ಕೇಳಿದಾಗ ವಧು ಪ್ರತ್ಯುತ್ತರವನ್ನು ಕೊಡಲಿಲ್ಲ. ಅವಳು ಕೊಟ್ಟರೂ ಅದು ಅವನ ಕಿವಿಗೆ ತಲುಪಲಿಲ್ಲ. ತಲುಪಿದರೂ ಅದು ಸ್ಪಷ್ಟವಾಗಲಿಲ್ಲ.
೭೫. ಅವಲಂಬ್ಯ ರೋಮಲತಿಕಾಮವಾತತ್ಕು
ಟಿಲಭ್ರುವಃ ಕುಚವಹೀಧರಾದಯಮ್ |
ಅಥ ನಾಭಿಮಂಡಲಸುರಂಗಮಾವಿನ್ನ
ಭಿಕಸ್ಯ ಪಾಣಿರಥ ನೀವಿಮಗ್ರಹೀತ್ ||
ಪ್ರೇಮಿಯ ಹಸ್ತರಥವು ಸುಂದರಿಯ ಅಂಗಾಂಗಗಳಲ್ಲಿ ಪಯಣಿಸಿತು.
೭೬. ಕಬರೀಕಲಾಪತಮಸಾ ವಿಸಾರಿಣಾ
ಕಬಲೀಕೃತೇ ಸತಿ ಸುಖಕ್ಷಪಾಕರೇ |
ಪ್ರಮದೋತ್ತರಾವಿವ ಪಯೋಧರಾಭಿದೌ
ರಮಣೀಮಣೇಃ ರಥಪದಾವನೃತ್ಯತಾಮ್ ||
ಕೇಶಕಲಾಪವೆಂಬ ಕತ್ತಲೆಯು ಹರಡುವದರಿಂದಾಗಿ ಮುಖವೆಂಬ ಚಂದ್ರನು ಮರೆಮಾಡಲ್ಪಡಲು ಅತಿಯಾದ ಸಂತೋಷದಿಂದ ಸುಂದರಿಯ ಪಯೋಧರಗಳು ನರ್ತಿಸಿದವು.
೭೭. ಶಯಪಲ್ಲವಸ್ಸಹಚರಸ್ಯ ಸಾಹಸಾ
ದಹೃತೋತ್ತರೀಯಮಥ ತನ್ನಿವಾರಣೇ |
ಸುದೃಶಃ ಕರಾಗ್ರವಲಯೇನ ಚುಕ್ರುಶೇ
ಸ್ತನದುರ್ಗಮೇಷ ಗಮಿತಸ್ತದಾssಮುನಾ ||
ಪ್ರಿಯನ ಕರಪಲ್ಲವವು ಉತ್ತರೀಯವನ್ನು ಅಪಹರಿಸಿತು. ಅದನ್ನು ನಿವಾರಿಸಲು ಕೈಯಲ್ಲಿನ ಬಳೆಗಳು ಸದ್ದುಮಾಡಿದವು. ನಂತರ ಅದು ಸ್ತನದುರ್ಗದೊಳಗೆ ಅಸ್ತವಾಯಿತು.
೭೮. ನವಮೇಖಲಾನಿನದನಾಭ್ಯುದಂಚನಂ
ಕುಚಶೀರ್ಣಹಾರಕುಸಮಾಂಜಲಿಶ್ರೀಯಃ |
ಸ್ಫುಟಬಂಧಭೇದ ಬಹುಭೂಮಿಕಾವಿಟೈ
ಸ್ಸುದೃಶೋ ಬಭುಃ ಸುರತಲಾಸ್ಯವಿಭ್ರಮೇ ||
ಹೊಸ ಒಡ್ಯಾಣಗಳ ಶಬ್ದವೆಂಬ ವಾದ್ಯಸಂಗೀತದಲ್ಲಿ, ಹರಿದ ಮುತ್ತಿನಹಾರದ ಪುಷ್ಪಾಂಜಲಿಯನ್ನುಳ್ಳ ಸುಂದರಿಯರು, ವಿಟರೊಡನೆ ಸುರತಲಾಸ್ಯದ ವಿಲಾಸದಲ್ಲಿ ಸ್ಪಷ್ಟವಾದ ಬಂಧಭೇದಗಳೆಂಬ ಭೂಮಿಕೆಯಲ್ಲಿ ವಿರಾಜಿಸಿದರು.
೭೯. ಸಹಮೃಗನಯನಾಭಿಸ್ತತ್ರ ಸಂಕ್ರೀಡಮಾನ –
ಶಶಿಸಿಧವಲವಿತಾನೇ ಸಾಗರಸ್ಯೋಪಕಂಠೇ |
ಪತಿರಿವ ಕಮಲಾಯಾಃ ಪಾಥಸಿ ಕ್ಷೀರಸಿಂಧೋ
ಶಶಯನಮಯಮಯಾಸೀಚ್ಛಾಸಿತಾsಪಿ ಕ್ಷಮಾಯಾಃ ||
ಕ್ಷೀರಸಮುದ್ರದ ಹಾಲಿನಲ್ಲಿ ಲಕ್ಷ್ಮೀಪತಿಯು ಮಲಗಿದಂತೆ, ಕ್ಷಮಾಪತಿಯಾದ ಅಚ್ಯುತರಾಯನು ಸಾಗರದ ಸಮೀಪದಲ್ಲಿ ಚಂದ್ರನಂತೆ ಧವಲಕಾಂತಿಯುಳ್ಳ ಛತ್ರದಲ್ಲಿ, ಹರಿಣಾಕ್ಷಿಯರೊಡನೆ ಆಟವಾಡಿದ ಶಯನಮಾಡಿದನು.
Leave A Comment