. ಹರಿಣೀದೃಶಾsನ್ಯತಮಯಾ ಸವಿಭ್ರಮಂ
ಹರಿಚಂದನಂ ಧೃತಮಹೋಜಚಕ್ರಯೋಃ |
ಅನಯೋಃ ಕದಾsಪಿ ವಿರಹೋ ಸಂಭವೇ
ದಿತಿ ಶಾರ್ವತಸ್ಥಿತಿರಿವಾssತಪಾಂಕುರಃ ||

ಚಿಗರೆಗಂಗಳಿನ ಯುವತಿಯೋರ್ವಳು, ಚಕ್ರವಾಕಪಕ್ಷಿಗಳಿಗೆ/ಸ್ತನಯುಗ್ಮಗಳಿಗೆ ಎಂದೂ ವಿರಹ ಬಾರದಿರಲೆಂದು, ಶಾಶ್ವತವಾಗಿ/ಎಂದಿಗೂ ಬಿಸಿಲಿನ ಬೇಗೆ ಮೊಳಕೆಯೊಡೆಯದಿರಲಿ ಎಂದು ವಿಲಾಸದಿಂದಲೇ ಹರಚಂದನವನ್ನು ಲೇಪಿಸಿಕೊಂಡಿದ್ದಳು.

. ಮುಕುರೇ ಮುಧಾಕೃತಸುಧಾಂಶುಮಂಡಲೇ
ಪ್ರತಿಬಿಂಬನಂ ಪ್ರತಿ ಮೃಗೀದೃಶೋ ಬಭೌ |
ಗದಿತುಂ ಪ್ರಿಯಾಗಮಮುದಂ ಸಮಾಗತೋ
ನಿಜಮೂರ್ತಿಭೇದ ಇವ ತನ್ಮನೋಗತಃ ||

ಕನ್ನಡಿಯಲ್ಲಿ ಸುಂದರವಾಗಿರುವ ಚಂದ್ರಬಿಂಬಕ್ಕಿಂತಲೂ ಮಿಗಿಲಾದ ಹರಿಣಾಕ್ಷಿಯೊಬ್ಬಳ ಪ್ರತಿಬಿಂಬ ಮೂಡಿತ್ತು. ಪ್ರಿಯಾಗಮದ ಸಮಾಗಮದ ಸೂಚನೆಯಾಗಿ, ಮನದಾಳದ ಮಾತನ್ನು ಹೇಳುವ ನಿಜಸ್ವರೂಪವಾಗಿ ಆ ಪ್ರತಿಬಿಂಬ ತೋರುತ್ತಿತ್ತು.

. ಸ್ವನಿರೋಧಿನೀಂ ಕಿಲ ಪಯೋಧರೋನ್ನತೀಂ
ಸಮವೇಕ್ಷ್ಯ ಸಾಂತ್ವಯಿತುಮಾನನೇಂದುನಾ |
ಪರಿರಂಭಣೇ ವಲಯಿತೌ ಭುಜಾವಿವ
ಪ್ರಮದಾ ಬಭಾರ ನವಹಾರ ಮೇಕಿನಾ ||

ಪ್ರಮದೆಯೊಬ್ಬಳು ಧರಿಸಿದ ಹೊಸಹಾರವು, ಪಯೋಧರೋನ್ನತಿಯಿಂದಾಗಿ ಮುಖಚಂದ್ರನನ್ನು ನೋಡಲು ಅಡ್ಡವಾಯಿತೆಂದು, ಸಾಂತ್ವನಕ್ಕಾಗಿ ಸ್ವತಃ ಚಂದ್ರನೇ ತನ್ನ ಭುಜಗಳನ್ನು ಚಾಚಿ ಆಲಿಂಗನ ಮಾಡಿದಂತೆ ಕಾಣಿಸುತ್ತಿತ್ತು.

. ಪರಯಾ ಕಯಾsಪಿ ಮೃಗನಾಭಿಪಂಕಿಲೇ
ಪರಿಣಾಹಶಾಲಿನಿ ಪಯೋಧರಸ್ಥಲೇ |
ಯುವಲೋಕ ಲೋಚನಗತಾಗತೋಚಿತಾ
ನವಹಾರಮೌಕ್ತಿಕಶಿಲಾ ನ್ಯಧೀಯತ ||

ಮತ್ತೊಬ್ಬಳು ಕಸ್ತೂರಿ ಲೇಪನಮಾಡಿದ ವಿಸ್ತಾರವಾದ ವಕ್ಷಸ್ಥಳದಲ್ಲಿ ಧರಿಸಿದ ನವಮೌಕ್ತಿಕ ಹಾರವು ತರುಣ ಜನರ ದೃಷ್ಟಿ ಬೀಳಲು ಕಾರಣವಾಯಿತು.

. ಅವಲೋಕ್ಯ ಹಂಸಕುಲಮಂಚಿತೈರ್ಗತೈ
ರಭಿಭೂತಮೇತದಭಿಧಾನಸಾಮ್ಯತಃ |
ವಿಹಿತಾಗಸೇವ ಚರಣಾವಲಂಬಿನಾ
ವಿಲಲಾಸ ಹಂಸಕಯುಗೇನ ಕಾಚನ ||

ತನ್ನ ಸುಂದರವಾದ ನಡಿಗೆಯಿಂದ ಹಂಸಗಳ ಕುಲಸೋತುಹೋಯಿತು, ಎಂದು ತಾನು ತಪ್ಪು ಮಾಡಿದಳೋ ಎಂಬಂತೆ ಯುವತಿಯೊಬ್ಬಳು ಅವುಗಳ ಹೆಸರಿನ ಸಾಮ್ಯವನ್ನು ಹೊಂದಿರುವ ಹಂಸಕ ಕಾಲುಬಳೆಗಳನ್ನು ಧರಿಸಿ ವಿರಾಜಿಸಿದಳು.

. ವಿಟಮಮಂಡಲಿವಿಜಯಿನೋ ಮನೋಭುವೋ
ವಿಜಯಾಕ್ಷರಾವಲಿಮಿವೇತರಸ್ತ್ರೀಯಃ |
ಕುಚಶೈಲಸೀಮನಿ ಕುರಂಗನಾಭಿನಾ
ವಿಲಿಲೇಖ ಪತ್ರಲತಿಕಾಂ ಪ್ರಸಾಧಿಕಾ ||

ಪ್ರಸಾಧಿಕೆಯೋರ್ವಳು ವಿಟರ ಮಂಡಲವನ್ನು ಗೆದ್ದ ಮನ್ಮಥನ ವಿಜಯ ಲೇಖನದ ಅಕ್ಷರಗಳೆಂಬಂತೆ ಸ್ತ್ರೀಯರ ವಕ್ಷಸ್ಥಳದಲ್ಲಿ ಕಸ್ತೂರಿಯಿಂದ ಪತ್ರಲತೆಗಳನ್ನು ಬರೆದಳು.

. ಯವನೇತ್ರಖಂಜನಂಯುಗೇನ ಖೇಲತಾ
ಗದಿತಂ ನಿತಂಬಫಲಕಾವಲಂಬಿತಮ್ |
ಅವಿತುಂ ಮನೋಜನಿಧಿಮಾತ್ತವೇಷ್ಟನಃ
ಪರಯಾ ಫಣೀವ ಮಣಿಮೇಖಲಾದಧೇ ||

ನಿತಂಬಫಲಕವನ್ನು ಅವಲಂಬಿಸಿಕೊಂಡಿದ್ದ ಮನ್ಮಥನಿಧಿಯ ಬಗೆಗೆ ಯುವಕರ ಕಣ್ಣುಗಳೆಂಬ ಕಾಜಾಣ ಜೋಡಿಯು ಆಟವಾಡುವಾಗ ಅದನ್ನು ರಕ್ಷಿಸಲು ಸುತ್ತಿಕೊಂಡ ಹಾವೋ ಎಂಬಂತೆ ಇದ್ದ ಮಣಿಮೇಖಲೆಯನ್ನು ಸುಂದರಿಯು ಧರಿಸಿದ್ದಳು.

. ಇತರಸ್ತ್ರೀಯಸ್ಸರಸಯಾವಕಾರ್ಪಣಾ
ಚ್ಚರಣೌ. ನಿಕಾಮರುಣೌ ವ್ಯರಾಜತಾಮ್ |
ಪದಪಂಕ್ತಿಭಿಸ್ಸ್ವಪರಿಪಂಥಿಪಂಕಜ
ಪ್ರತಿಸೃಷ್ಟಯೇ ಧೃತರಜೋಗುಣಾವಿವ ||

ಇನ್ನೊಬ್ಬ ಸ್ತ್ರೀಯ ಲಾಕ್ಷಾರಸಲೇಪಿತವಾದ ಪಾದಗಳು ತುಂಬ ಕೆಂಪಾಗಿ ಶೋಭಿಸುತ್ತಿದ್ದವು. ತಮ್ಮ ಪ್ರತಿಪಕ್ಷವಾದ ತಾವರೆಗಳಿಗೆ ಹೆಜ್ಜೆಯ ಗುರುತುಗಳಾದ ಪ್ರತಿಸೃಷ್ಟಿಯನ್ನು ಮಾಡುವದಕ್ಕಾಗಿ ಅವು ರಜೋಗುಣವನ್ನು ಪಡದುಕೊಂಡಿವೆಯೋ ಎಂಬಂತ್ತಿತ್ತು.

. ಕುಟಿಲಭ್ರುವಾ ಕುಟಜಸೂನಗರ್ಭಕಂ
ಕಬರೀಭರೇ ವಿನಿಹಿತಂ ಕಯಾಚನ |
ವದನಾಭಿರೂಪ್ಯವಸುಚೌರ್ಯವಾಂಛಯಾ
ರುರುಚೇ ನಿಗೂಢ ಇವ ರೋಹಿಣಿವಿಟಃ ||

ವಕ್ರಹುಬ್ಬುಗಳಿರುವ ಒಬ್ಬ ಸುಂದರಿಯು ತನ್ನ ಕೇಶಪಾಶದೊಳಗೆ ಕುಟಜ ಪುಷ್ಪಗಳ ಗರ್ಭಕವನ್ನು ಧರಿಸಿದ್ದಳು. ಅವಳ ಮುಖದ ಸೌಂದರ್ಯವನ್ನು ಕದಿಯುವ ಬಯಕೆಯಿಂದ ಬಚ್ಚಿಟ್ಟುಕೊಂಡಿರುವ ಚಂದ್ರನಂತೆ ಅದು ಶೋಭಿಸುತ್ತಿತ್ತು.

೧೦. ಮಕರೀ ಸಖೀವಿಲಿಖಿತಾ ಮಹೀಯಸೋಃ
ಕುಟಿಲಭ್ರುವಃ ಕುಚಮಹೀಭೃತೋಸ್ತಟೇ |
ವಿಷಮಾಯುಧಸ್ಯ ವಿಶತೋ ಮನೋಗೃಹಂ
ಬಹಿರರ್ಪಿತಾಮನುಯಯೌ ಪತಾಕಿಕಾಮ್ ||

ವಕ್ರ ಹುಬ್ಬುಗಳಿಂದ ಕೂಡಿದ ಒಬ್ಬ ಸ್ತ್ರೀಯ ವಕ್ಷಸ್ಥಳದಲ್ಲಿ ಸಖಿಯು ಮೀನಿನ ಚಿಹ್ನೆಗಳನ್ನು ಚಿತ್ರಿಸಿದಳು. ಅವಳ ಮನಸ್ಸೆಂಬ ಮನೆಯನ್ನು ಹೊಕ್ಕ ಮನ್ಮಥನ ಪತಾಕೆಯೋ ಎಂಬಂತೆ ಅದು ಶೋಭಿಸುತಿತ್ತು.

೧೧. ಮುಖರಾಮಣೀಯಕಮುಧಾಸುಧಾಂಬುಧೌ
ವಿಟಮಾನಸೇ ವಿರಚಿತಾವಗಾಹನೇ |
ಉಪಜಾತಮೇಕಮುಪರೀವ ಬುದ್ಬುದಮ್
ನತಮಧ್ಯಮಾsವಹತ ನಾಸಿಕಾಮಣಿಮ್ ||

ಮುಖದ ಸೌಂದರ್ಯದ ಅಮೃತ ಸಮುದ್ರದಲ್ಲಿ ಪ್ರೇಮಿಯ ಮನಸ್ಸು ಮುಳುಗಿದಾಗ ಮೇಲೆ ಹುಟ್ಟಿದ ಒಂದು ನೀರ್ಗುಳ್ಳೆಯೋ ಎಂಬಂತೆ ಶೋಭಿಸುತ್ತಿದ್ದ ಮೂಗಿನ ನತ್ತನ್ನು ಸುಂದರಿಯೋರ್ವಳು ಧರಿಸಿದ್ದಳು.

೧೨. ಅಧಿಫಾಲಮಾಯತದೃಶಾsನ್ಯಯಾ ಧೃತು
ಕುಟಿಲಂ ಕುರಂಗಮದಭಂಗಚಿತ್ರಕಮ್ |
ಯುವಮಂಡಲೀಧೃತಿಗಲಗ್ರಹೋಚಿತೋ
ರುರುಚೇsರ್ಧಚಂದ್ರ ಇವರೂಪದರ್ಶಿತಃ ||

ಇನ್ನೊಬ್ಬ ಸುಂದರಿಯು ಹಣೆಯಲ್ಲಿ ಧರಿಸಿದ್ದ ಕಸ್ತೂರಿಯ ವಕ್ರತಿಲಕವು ಯುವಕರ ಗುಂಪಿನ ಕತ್ತನ್ನು ಹಿಡಿದು ತಳ್ಳಲು ಅರ್ಹವಾದ ಅರ್ಧಚಂದ್ರನಂತೆ ತನ್ನ ರೂಪವನ್ನು ತೋರಿಸಿ ಶೋಭಿಸುತ್ತಿತ್ತು.

೧೩. ಇತರಸ್ತ್ರೀಯಾ ವದನಮಿಂದುಮಂಡಲಂ
ಪರಿಭೂಯ ಚಂದನಲಲಾಮರೇಖಯಾ |
ಅಪಿ ತತ್ಕಲಾಶ್ರೀಯಮಜೀಜಯದೃತಃ
ಕಿಮು ತಿಷ್ಠತೇ ಸ್ವಯಮಣೀಯಸೇ ಮಹಾನ್ ||

ಇನ್ನೊಬ್ಬ ಸ್ತ್ರೀಯ ಮುಖವೆಂಬ ಚಂದ್ರಮಂಡಲವು ಚಂದನದಿಂದ ವಿರಚಿತವಾದ ತಿಲಕದಿಂದಲೇ ಚಂದ್ರನ ಕಲೆಗಳ ಶೋಭೆಯನ್ನು ಗೆದ್ದು ಬಿಟ್ಟಿತ್ತು. ದೊಡ್ಡವರು ಸಣ್ಣವರೊಡನೆ ತಾವೇ ಸ್ಪರ್ಧೆಗೆ ಇಳಿಯುವರೇ

೧೪. ಕುಚಶೈಲಸೀಮ್ನಿ ಕುಟಿಲಾಲಕಾsಪರಾ
ಕುತಕೇನ ಯಂ ವ್ಯಧಿತ ಕುಂಕುಮದ್ರವಮ್ |
ಬಭಾರ ವಲ್ಲಭನಖಾಂಕಚಂದ್ರಮ
ಶಶಕಲಸ್ಯ ಸಾಂಧ್ಯಸುಷುಮಾಮುದೇಷ್ಯತಃ ||

ಗುಂಗುರುಕೂದಲಿನ ಸುಂದರಿಯೋರ್ವಳು ಸಂಭ್ರಮದಿಂದ ಲೇಪಿಸಿಕೊಂಡಿದ್ದ ಕುಂಕುಮ ದ್ರವದಿಂದಾಗಿ ಹಾಗೂ ಪ್ರಿಯಕರನ ಉಗುರಿನ ಗುರುತಿನಿಂದಾಗಿ ವಕ್ಷಸ್ಥಳವು ಸಂಧ್ಯಾಕಾಲದಲ್ಲಿ ಉದಯಿಸುವ ಚಂದ್ರಕಾಂತಿಯ ತುಣುಕು ಎನ್ನುವ ಹಾಗೇ ವಿರಾಜಿಸುತ್ತಿತ್ತು.

೧೫. ಕಟಕೇನ ಮೌಕ್ತಿಕಕರಂಬಿತಶ್ರಿಯಾ
ಸಮಯೋಜಯಚ್ಚರಣಪಲ್ಲವಂ ಪರಾ |
ಅಪಹೃತ್ಯ ವೈರಮಿತರೇತರಾಶ್ರಿತಂ
ಶಶಿಪದ್ಮಯೋರಿವ ಸಖಿತ್ವಕಾರಿಣೀ ||

ಮುತ್ತುಗಳಿಂದ ಅಲಂಕೃತವಾಗಿದ್ದ ಕಾಳುಬಳೆಯನ್ನು ಇನ್ನೊಬ್ಬಳು ತನ್ನ ಪದ್ಮದಂತಿದ್ದ ಪಾದಗಳಿಗೆ ಜೋಡಿಸಿ ಚಂದ್ರನಿಗೂ ಪದ್ಮಕ್ಕೂ ಇರುವ ಪರಸ್ಪರ ವೈರವನ್ನು ಪರಿಹರಿಸಿ ಇಬ್ಬರಿಗೂ ಸ್ನೇಹವನ್ನು ಉಂಟುಮಾಡಿದ್ದಳು.

೧೬. ಅಬಲಾಸ್ವಲಂಕೃತಿತರಂಗಿತಾದರಾ
ಸ್ವಪರಾ ವಿಯೋಗಮಧಿಗಮ್ಯ ಕಾಮಿನಾ |
ಅಧಿಗಂಡಮರ್ಪಿತಕರಾಂಚಲಚ್ಛಲಾ
ದವತಂಸ ಪಲ್ಲವವತೀ ಕಿಲಾsರುಚತ್ ||

ಇತರ ಸ್ತ್ರೀಯರೆಲ್ಲ ಅಲಂಕಾರದಲ್ಲಿ ಆಸಕ್ತರಾಗಿರುವಾಗ ಒಬ್ಬ ವನಿತೆಯು ತನ್ನ ಪ್ರೇಮಿಯಿಂದ ವಿಮುಕ್ತಳಾಗಿ ತನ್ನ ಗಲ್ಲದ ಮೇಲೆ ಕೈಯಿಟ್ಟು ಕುಳಿತಿರಲು ಆ ಕೈಬೆರಳುಗಳೇ ನವಪಲ್ಲವವಾಗಿ ಆ ಕಾರಣಕ್ಕಾಗಿ ಕಿವಿಗೆ ಆಭರಣವಾಗಿ ಚಿಗುರನ್ನು ಧರಿಸಿದಂತೆ ಕಾಣುತ್ತಿತ್ತು.

೧೭. ಪರಿಚಾರಿಕಾಂಸಭೂವಿ ಬಾಹುವಲ್ಲರೀ
ಮಧಿಜಾಲಕಾಂತರಮಪಾಂಗವೀಚಿಕಾಮ್ |
ದದತೀ ಶುತೀ ಚತುರದೂತಿಕಾವಚ
ಸ್ಯಪರಾ ಪ್ರಿಯಾಗಮನಮಭ್ಯಪಾಲಯತ್ ||

ಪರಿಚಾರಿಕೆಯ ಹೆಗಲಿನಲ್ಲಿ ತೋಳಬಳ್ಳಿಯನ್ನು ಇಟ್ಟು ಕಿಟಕಿಯಲ್ಲಿ ತನ್ನ ಕುಡಿನೋಟವನ್ನು ಹರಿಸಿ, ಚತುರದೂತಿಯ ಮಾತಿಗೆ ಕಿವಿಯನ್ನು ಕೊಟ್ಟು ಇನ್ನೊಬ್ಬ ನಾರಿಯು ತನ್ನ ಪ್ರಿಯನ ಬರುವಿಕೆಗಾಗಿ ಕಾಯುತ್ತಿದ್ದಳು.

೧೮. ಸಮುಪೇಹಿ ತೂರ್ಣಮಿತಿ ಸಾವಲೇಪತಾ
ಸ್ವಯಮಸ್ಮಿ ತೇ ಪುರ ಇತಿ ಸ್ವತಂತ್ರತಾ |
ನಿಗದಾಮಿ ಖೇದಮಿತಿ ನೈಪುಣೀ ಗಿರಾ
ವದಾಮುದ್ಯಂತಮಿತಿ ಭಾವನಿಹ್ನವಃ ||

ಒಟ್ಟೊಟ್ಟಿಗೆ, ವೇಗವಾಗಿ, ಅಹಂಕಾರದಿಂದ ತಾ ಮುಂದು ಎಂದು ಸ್ವತಂತ್ರವಾಗಿ ಹೇಳುತ್ತೇನೆಂದು ಹೇಳಿದ ಮಾತು ಖೇದದಿಂದ ಕೂಡಿದ ನೈಪುಣ್ಯವಾದ ವೃತ್ತಾಂತವಾಗುವದು. ವಾಸ್ತವ ವಿಚಾರವನ್ನು ಅಲ್ಲವೆಂದು ಮರೆಸುವುದು ಮನೋಭಾವವನ್ನು ಮುಚ್ಚಿಟ್ಟಂತೆ ಆಗಿ ಬಿಡುತ್ತದೆ.

೧೯. ಪ್ರಣತಿಸ್ತವೇತಿ ಪರಯಾsಭಿಭಾಷಣಂ
ಪ್ರಣಯಃ ಕ್ವ ತಾದೃಶ ಇತಿ ಪ್ರತಾರಣಮ್ |
ಕುರು ಮೇ ಪ್ರಸಾದಮಿತಿ ಕೋಪನಿರ್ಣಯಃ
ಕ್ವ ಸಹೇ ವ್ಯಥಾಮಿತಿ ಮೃದುತ್ವಘೋಷಣಾ ||

ನಿನಗೆ ನಮಸ್ಕಾರ ಎಂದರೆ ನಿನ್ನಲ್ಲಿ ಪರಕೀಯತ್ವದ ಭಾವನೆಯನ್ನು ಕಲ್ಪಿಸಿದಂತಾಯಿತು. ಅಂಥ ಪ್ರಣಯ ಎಲ್ಲಿ ಎಂದರೆ ವಂಚನೆಯಾದೀತು. ನನ್ನಲ್ಲಿ ಪ್ರಸನ್ನನಾಗು ಎಂದು ಬೇಡಿದರೆ ಈಗ ನಿನ್ನಲ್ಲಿ ಕೋಪವಿದೆ ಎಂದು ನಿರ್ಣಯ ಮಾಡಿದಂತಾದೀತು. ವ್ಯಥೆಯನ್ನು ಹೇಗೆ ಸಹಿಸಲಿ? ಎಂದರೆ ನನ್ನ ಮೃದುತ್ವವನ್ನು ಹೇಳಿಕೊಂಡಂತೆ ಆದೀತು?

೨೦. ಕಠಿನಾಶಯಸ್ತಮಿತಿ ಕಾsಪಿ ಗರ್ಹಣಾ
ದಯಸೇ ಕದೇತ್ಯುನುಮತಿರ್ವಿಲಂಬನೇ |
ಹಿ ವೇದ್ಮಿಕೃತ್ಯಮಿತಿ ಮೌಗ್ಧ್ಯನಾಟಿಕಾ
ಜಿಜೀವಿಷೇತಿ ಕುತೋ ವಿಭಿಷಿಕಾ ||

ನೀನು ಕಠಿಣಹೃದಯದವನು ಎಂದರೆ ನಿಂದಿಸುವಂತಾಗುತ್ತದೆ. ಯಾವಾಗ ದಯೆಯನ್ನು ತೋರಿಸುವೆ ಎಂದರೆ ವಿಲಂಬ ಮಾಡಲು ಅನುಮತಿಯನ್ನು ಕೊಟ್ಟಂತೆ. ಏನು ಮಾಡುವುದೋ ತೋಚದಾಗಿದೆ, ಎಂದರೆ ಮುಗ್ಧತ್ವದ ನಟನೆ. ನನಗೆ ಜೀವಿಸಲು ಇಚ್ಛೆ ಇಲ್ಲ ಎಂದರೆ ಬೆದರಿಕೆಯನ್ನು ಹಾಕಿದಂತೆ.

೨೧. ಮಯೀ ಕೋಪರಾಧ ಇತಿ ಮಾನನಾssತ್ಮನೋ
ಮಮತಾ ಕುತಸ್ತವ ಮಯೀತಿ ಕಲ್ಪನಾ |
ಕಿಮಹಂ ವದಾಮಿ ತದಿಹೇತಿ ಮನ್ಮುಖಾ
ತ್ಕಿತವಂ ವದೇತ್ಯವದದೇಕಿಕಾ ಸಖೀಮ್ ||

ನನ್ನಲ್ಲಿ ಯಾವ ಅಪರಾಧವಿದೆ ಎಂದರೆ ನನ್ನನ್ನೇ ಅಭಿಮಾನಿಸಿಕೊಂಡಂತೆ ನಿನಗೆ ನನ್ನಲ್ಲಿ ಮಮತೆ ಎಲ್ಲಿದೆ ಎಂದರೆ ಕಲ್ಪನೆ. ಆದ್ದರಿಂದ ನಿನಗೆ ನಾನೇನು ಹೇಳಲಿ ಎಂದು ಆ ವಂಚಕನಿಗೆ ಹೇಳು ಎಂದು ಒಬ್ಬ ಸಖಿಗೆ ಹೇಳಿದಳು.

೨೩. ಕಿಮಪಿ ಪ್ರಿಯಾಯ ಗದಿತುಂ ಕೃತೋದ್ಯಮಾ
ಪರಮಾರ್ಥತಃ ಪತಿಮವೇತ್ಯಭಾಮಿನಿ |
ಅನುಚಿಂತನಾತ್ಮಕಮಜಾನತೀ ಸಖೀ
ಮನುಯೋಗಿನಿಂ ಪರುಷಮೈಕ್ಷತಾಪರಾ ||

ತನ್ನ ಪ್ರಿಯಕರನಿಗೆ ಏನನ್ನೋ ಹೇಳಲು ಪ್ರಯತ್ನಿಸಿದ ಭಾಮಿನಿಯು “ಅವನು ಪ್ರಿಯಕರನಲ್ಲ, ತನ್ನ ಗಂಡ ಎಂಬರ್ಥ ತಿಳಿದಾಗ ಮುಂದೆ ಎನನ್ನೂ ಚಿಂತಿಸಲಾಗದೆ ಗಂಡನೊಡನೆ ತನ್ನನ್ನು ಕೂಡಿಸಿದ ಸಖಿಯನ್ನು ಕೋಪದಿಂದ ನೋಡಿದಳು.

೨೪. ಅಯಿ ಮಾಂ ವಿಬೋಧಯಸಿ ಮೋಹಜಲ್ಪಿತಾ
ನ್ಯವದಸ್ತ್ವಮೇವಮವದಸ್ತಥೇತಿ |
ಕಥಯಾಮಿ ಕಿಂ ನು ಸಖಿ ಕಾಮಿನಃ ಕೃತೇ
ಕಥಯೋಚಿತಂ ತ್ವಮಿತಿ ಕಾಪ್ಯsಭಾಷತ ||

ಎಲೈ ನನ್ನನ್ನು ಎಚ್ಚರಗೊಳಿಸುತ್ತಿರುವೆ. ನೀನು ಹೀಗೂ ಹಾಗೂ ಮೋಹದ ಮಾತುಗಳನ್ನಾಡಿದೆ. ಆ ಕಾಮಿಗೋಸ್ಕರ ಏನನ್ನು ಹೇಳಲಿ? ನೀನೇ ಉಚಿತವಾದುದನ್ನು ಹೇಳಿ ಬಿಡು ಎಂದು ಯಾವಳೋ ಒಬ್ಬಳು ಮಾತನಾಡಿದಳು.

೨೫. ಭವತಿ ಕ್ಷಣಂ ವ್ಯವಹಿತೇ ಪರೀಕ್ಷಿತುಂ
ತವ ಕಾಮುಕೀ ಬತ ಕಾಮಗಾದ್ಧಶಾಮ್ |
ಇಯತೀಂ ಕ್ಷಮೇತ ಕಿಮಯಂ ವಿಲಂಬನಾ
ಮಿತಿ ಸಂದಿದೇಶ ದಯಿತುಂ ಪ್ರತೀತರಾ ||

ಬೇರೆ ಬೇರೆ ಕ್ಷಣಗಳಲ್ಲಿ ವ್ಯವಹರಿಸುವನದನಉ ಪರೀಕ್ಷಿಸಲು, ನಿನ್ನ ಪ್ರೇಮಿಯು ಅವಸ್ಥಾಂತರವನ್ನು ಹೊಂದಲಿಲ್ಲ. ಇನ್ನು ವಿಲಂಬವನ್ನು ಸಹಿಸುವನೇ? ಎಂದು ಪ್ರೇಮಿಗೆ ಇನ್ನೊಬ್ಬಳು ಸಂದೇಶವನ್ನು ಕಳುಹಿಸಿದಳು.

೨೬. ಅವಲೋಕಯೇತ್ಪ್ರಿಯಮನೇನ ಸಂಲಪೇ
ದಮುಮಂತಿಕಂ ಮಮ ನಯೇದಸಾವಿತಿ |
ಅಪರಾ ಸಖೀಮಭಿನವಾಮಿವಾದರಾ
ತ್ಸುಚಿರಂ ನಿಶಾಮ್ಯ ಸುಹೃದೇ ವ್ಯಸರ್ಜಯತ್ ||

ನನ್ನ ಪ್ರಿಯಕರನನ್ನು ಇವಳು ನೋಡಬಹುದು. ಅವನೊಡನೆ ಸಂಭಾಷಿಸಬಹುದು. ಅವನನ್ನು ನನ್ನ ಬಳಿಗೆ ಕರೆದುತರಬಹುದು, ಎಂದು ಯೋಚಿಸಿ ಇನ್ನೊಬ್ಬಳು ತನ್ನ ಹೊಸ ಸಖಿಯನ್ನು ಆದರದಿಂದ ಬಹಳ ಕಾಲದವರೆಗೆ ನೋಡಿ ಕಳುಹಿಸಿದಳು.

೨೭. ಅಥ ದೂತಿಕಾ ಹರಿಣಶಾಬಚಕ್ಷುಷಾ
ಮಭಿವಾಂಛಿತೇಷ್ಟಜನಮಂಜಸಾ ಯಯುಃ |
ಅಖಿಲಾಪಗಾಂತರಭಿಷೂರಣೋತ್ಸುಕಾಃ
ಪಯಸಾಂ ನಿಧೀಂ ಕಿಲ ಪಯೋದಮಾಲಿಕಾಃ ||

ಅನಂತರದಲ್ಲಿ ಹರಿಣಾಕ್ಷಿಯರ ದೂತಿಯರು ಅವರ ಅಭಿಮತರಾದ ಪ್ರಿಯರ ಬಳಿಗೆ ತೆರಳಿದರು. ಎಲ್ಲ ನದಿಗಳ ಹೃದಯವನ್ನು ತುಂಬಿಸುವದರಲ್ಲಿ ಉತ್ಸುಕವಾದ ಮೇಘಗಳು ಸಮುದ್ರದ ಬಳಿಗೆ ಹೋಗುವವಷ್ಟೇ

೨೮. ಸುಮುಖೀಮಣೇಸ್ಸುಲಭಕಾರ್ಶ್ಯಸಂಪದ
ಸ್ಸುಷಮೈವ ಕಾsಪಿ ಸುತರಾಂ ಪ್ರವರ್ಧತೇ |
ಸರಿತಃ ಪಯೋದಸಮಯಾವದೌ ಯಥಾ
ಪರಿಹೀಯಮಾನಪಯಸಃ ಪ್ರಸನ್ನತಾ ||

ಕೃಶತೆಯ ಸಂಪತ್ತು ಸುಲಭವಾಗಿರುವ ಸುಂದರೀಮಣಿಯ ವಿಶಿಷ್ಟ ಕಾಂತಿಯು ಮಳೆಗಾಲ ಮುಗಿದುಹೋದ ಮೇಲೆ ಪ್ರವಾಹ ಕಡಿಮೆಯಾದ ನದಿಗೆ ಪ್ರಸನ್ನತೆ ಹೆಚ್ಚುವ ಹಾಗೆ ವರ್ಧಿಸುತ್ತದೆ.

೨೯. ಕುಸುಮೇಷುಣಾsಭಿಹತಗುಂಫಿತಾಶಶರಾ
ಹೃದಯಸ್ಥಿತೇ ತ್ವಯಿ ಪತೇಯುರಿತ್ಯಸೌ |
ಕಿಮು ತಾನ್ನಿವಾರಯಿತುಮಮಾಯತಾಯತಾಂ
ಶ್ವಸಿತಾನಿಲಂ ಸುವದನಾ ವಿಮುಂಚತಿ ||

ಮನ್ಮಥನು ಅವಳ ಮೇಲೆ ಪ್ರಯೋಗಿಸಲು ಒಟ್ಟುಗೂಡಿಸಿಕೊಂಡಿರುವ ಬಾಣಗಳು ಅವಳ ಹೃದಯದಲ್ಲಿ ವಾಸಮಾಡುತ್ತಿರುವ ನಿನ್ನ ಮೇಲೆ ಬಿದ್ದಾವು ಎಂದು ಅವುಗಳನ್ನು ನಿವಾರಿಸಲೋಸುಗ ಆ ಸುಂದರಿಯು ದೀರ್ಘವಾದ ನಿಟ್ಟುಸಿರನ್ನು ಬಿಡುತ್ತಿದ್ದಾಳೆ.

೩೦. ಬಿಸದಾಮನಾಮನಿ ಬಿಲೇಶಯಾಧಿಪೇ
ಕುಚಹೇಮಭೂಮಿಧರಶೃಂಗಸಾಂಗಿನಿ |
ಶ್ವಸಿತಾನಿಲಸ್ಸುಲಭಯಾ ಕಿರ್ಮಿರ್ಷ್ಯಯಾ
ಪರಿವೃದ್ದಿಮೇತಿ ಪರಿಣಾಹಿಚಕ್ಷುಷಾ ||

ದೀರ್ಘಕಂಗಳಿನ ಸುಂದರಿಯ ಕುಚಗಳೆಂಬ ಹೇಮಾದ್ರಿಯ ಮೇಲೆ ತಾವರೆಯ ದಂಟಿನ ಎಳೆಯೆಂಬ ಹಾವು ಕುಳಿತಿರಲು ಅವರ ಮೇಲೆ ಈರ್ಷ್ಯೆಯಿಂದಲೇ ಏನೋ ಅವಳ ನಿಟ್ಟುಸಿರಿನ ಗಾಳಿಯು ಸುಲಭವಾಗಿ ಹೆಚ್ಚಾಗುತ್ತದೆ.

೩೧. ಸಮುಪಾಲಭೇ ಹಿ ಭವಂತಮೀದೃಶಾಂ
ಸರಸೀರುಹಪ್ರಭವಮೇವ ಸಾಂಪ್ರತಮ್ |
ಅಪಿ ವಿಪ್ರಯೋಗಮಧಿಗಮ್ಯ ಭಾವಿನಂ
ತನುತೇ ಸ್ಮ ಯತ್ತದಸಹಂ ತದ್ವಪುಃ ||

ಸುಂದರಿಯೇ ನಾನು ನಿನ್ನನ್ನು ನಿಂದಿಸುವುದಿಲ್ಲ. ಬ್ರಹ್ಮನನ್ನೇ ನಿಂದಿಸುತ್ತೇನೆ. ಏಕೆಂದರೆ, ಮುಂದೆ ಅವಳಿಗೆ ಇಂಥ ಪ್ರಿಯವಿರಹವು ಒದಗುವದೆಂದು ತಿಳಿದಿದ್ದರೂ ಅದನ್ನು ಸಹಿಸಲಾಗದ ಕೋಮಲ ಶರೀರವನ್ನು ಅವನು ನಿರ್ಮಿಸಿದ್ದಾನೆ.

೩೨. ಇಹ ದೇಹಿ ವೀಕ್ಷಣಮಿತೀರಿತಾssಲಿಭಿ
ರ್ನ ದದಾತಿ ಯದ್ಯಪಿ ದದಾತ್ಯ ಸಮ್ಮುಖಮ್ |
ಯದಿ ಸಮ್ಮುಖಂ ಸವಯಸೋ ವೇತ್ಯಸೌ
ಯದಿ ವೇತ್ತಿ ತಾ ವಿನಿಮಯೇನ ಮೋಹಿತಾ ||

‘ಈ ಕಡೆಗೆ ಕಣ್ಣುಗಳನ್ನು ಹಾಯಿಸು’ ಎಂದು ಸಖಿಯರು ಹೇಳಿದಾಗ ಅದರ ಕಡೆ ಅವಳು ತಿರುಗಿ ನೋಡುವದಿಲ್ಲ. ನೋಡಿದರೂ ಬೇರೆಲ್ಲೋ ನೋಡುತ್ತಾಳೆ. ಅವರ ಕಡೆಗೇ ನೋಡಿದರೂ ಸಖಿಯರನ್ನು ಗುರುತಿಸಲಾರಳು. ಗುರುತಿಸಿದರೂ ಒಬ್ಬರೊಡನೆ ಮತ್ತೊಬ್ಬರನ್ನು ತಪ್ಪಾಗಿ ಗುರುತಿಸುತ್ತಾಳೆ.

೩೩. ಸರಸಾಶಯೇಂಧನವಿಶೇಷ ಸಂಶ್ರಯಾ
ದ್ವಿತತಿಸ್ಪೃಶಾ ವಿರಹವಹ್ನಿಧೂಮ್ಯಯಾ |
ಕಲುಷಿಕ್ರತಾಕ್ಷಿಯುಗಲೇವ ಸಾ ಕಿರ
ತ್ಯನಿವಾರಿತಪ್ರಸರ ಮಶ್ರುನಿರ್ಝರಮ್ ||

ಸರಸವಾದ (ಒದ್ದೆಯಾದ) ಹೃದಯವೆಂಬ ಸೌದೆಯನ್ನು ಹೊಂದಿರುವದರಿಂದ ವಿರಹದ ಬೆಂಕಿಯು ವಿಸ್ತಾರವಾದ ಧೂಮಸಮೂಹವನ್ನು ಉತ್ಪಾದಿಸಿದೆ. ಇದರಿಂದ ಕಣ್ಣುಗಳು ಕಲುಷಿತಗೊಂಡವೋ ಎಂಬಂತೆ ಅವಳು ನಿವಾರಿಸಲು ಸಾಧ್ಯವಾಗದಷ್ಟು ಕಂಬನಿ ಹೊಳೆಯನ್ನು ಹರಿಸುತ್ತಿದ್ದಾಳೆ.

೩೪. ಕಥಮಪ್ಯಸೌ ಕಮಲಲೋಚನಾ ಮಮ
ಕ್ಷಮತೇ ವಿಯೋಗಮಿತಿ ನಾವಗಮ್ಯತಾಮ್ |
ಕಿಮುತ ಶ್ರುತಂ ಕಿಮುತ ವೀಕ್ಷಿತಂ
ಕುತೋಪ್ಯಪಹಾಯ ಮೇಘಮಚಿರಾಂಶುವರ್ತನಮ್ ||

ಈ ಕಮಲಲೋಚನೆಯು ನನ್ನ ವಿರಹವನ್ನು ಹೇಗೋ ಸಹಿಸಿಕೊಳ್ಳುವಳು ಎಂದು ತಿಳಿಯಬೇಡ. ಮೇಘವನ್ನು ತ್ಯಜಿಸಿ ಮಿಂಚು ಎಲ್ಲಾದರೂ ಇದ್ದುದನ್ನು ನೋಡಿರುವೆಯಾ ಅಥವಾ ಕೇಳಿರುವೆಯಾ?

೩೫. ಅನುವಾದತೋ ಗೃಹಶುಕೇ ಪ್ರಕಾಶಯ
ತ್ಯನುರಾಗವದ್ರಹಸಿ ಮೋಹಜಲ್ಪಿತಮ್ |
ವಿನತಾನನಾ ವಿಧುಮುಖೀ ತ್ರಪಾವಶಾ
ನ್ನಮತೀವ ತನ್ನ ಪುನರುಚ್ಯತಾಮಿತಿ ||

ಏಕಾಂತದಲ್ಲಿ ಮೋಹದಿಂದ ಪ್ರೇಮಪೂರ್ಣವಾದ ಮಾತುಗಳನ್ನು ಆಡುತ್ತಿದ್ದಾಗ ಅದನ್ನು ಕೇಳಿಸಿಕೊಂಡ ಗಿಳಿಯು ತಾನೂ ಅದೇ ರೀತಿ ಹೇಳಿ ಬಹಿರಂಗಪಡಿಸುವಾಗ ಅದನ್ನು ಪುನರುಚ್ಚರಿಸುವಂತೆ ನಾಚಿಕೆಯಿಂದ ಅತೀವವಾಗಿ ಆ ಚಂದ್ರಮುಖಿಯ ಮುಖವು ನಮಸ್ಕರಿಸುವಂತೆ ಇತ್ತು.

೩೬. ಶ್ವಸಿತಸ್ಯ ಸೌರಭಮಭಿಪ್ರಧಾವಿನಿ
ಸ್ವಗುಣೇ ಕ್ಷಣಂ ವಿರಮತಿಷು ವರ್ಷತಃ |
ಮದನಸ್ತದೌಷ್ಣ್ಯವಿನಿವರ್ತಿತೇ ಧನುಃ
ಪುನರಾಶ್ರಿತೇ ಪ್ರಹರತಿ ಪ್ರಿಯಾಂ ಶರೈಃ ||

ಅವಳ ಶ್ವಾಸದ ಸೌರಭ ಕಡೆಗೆ ತಮ್ಮ ಗುಣಾನುಸಾರಿಯಾಗಿ ವಿರಮಿಸುವ ಭ್ರಮರಗಳ ಸಾಲು ಅಲ್ಲಿರುವಾಗ ಮದನನು ಕ್ಷಣಕಾಲ ಬಾಣಗಳ ಸುರಿಸುವಿಕೆಯನ್ನು ತಡೆಯುತ್ತಾನೆ. ಆಮೇಲೆ ಶ್ವಾಸದ ಬಿಸಿಯಿಂದ ಭ್ರಮರಗಳು ಹಿಂದಿರುಗಿ ಮತ್ತೆ ಮದನನ ಧನುಸ್ಸನ್ನು ಆಶ್ರಯಿಸಿದಾಗ ಅವಳನ್ನು ಬಾಣಗಳಿಂದ ಹೊಡೆಯುತ್ತಾನೆ.

೩೭. ಕೃತಮೀರಿತೇನ ಬಹುನಾ ಕೃಶೋದರೀ
ವಿಕೃತಿಂ ಕಿಂ ವ್ರಜತಿ ವಿಪ್ರಯೋಗಜಾಮ್ |
ಅಪರೇತ್ಯಸಂಶಯಮವೇತ್ಯ ಹಂಸಿಕಾ
ಪ್ಯಭಿವರ್ಧಿತಾ ಭಜತೇ ತದಂತಿಕಮ್ ||

ಹೆಚ್ಚು ಮಾತನಾಡುವುದು ಬೇಡ. ಆ ಕೃಶೋದರಿಯು ವಿರಹದ ಯಾವ ಆಕಾರವನ್ನು ತಾನೇ ಪಡೆದಿಲ್ಲ? ಅವಳೇ ಬೆಳೆಸಿದ ಹೆಣ್ಣು ಹಂಸವು ಇವಳು ಯಾರೋ ಬೇರೆಯವಳು ಎಂದು ಭಾವಿಸಿ ಅವಳ ಬಳಿಗೆ ಬರುತ್ತಿಲ್ಲ.

೩೮. ಇತಿ ದೂತಿಕಾಹೃದಯಹಾರಿಣೀಗಿರಾ
ಸಮಯೋಜಯತ್ಸಹಚರಂ ಮೃಗೀದೃಶಾ |
ಪ್ರಿಯಾಯಾ ರಥಾಂಗಮಿವ ಭೃಂಗಝಂಕ್ರಿಯಾ
ಮುಖರೀಕೃತಾಂಬುಜಮುಖೀ ದಿನೇಂದಿರಾ ||

ದಿನಲಕ್ಷ್ಮಿಯು ಭೃಂಗಗಳ ಝೆಂಕಾರದಿಂದ ಶಬ್ದಾಯಮಾನವಾದ ಕಮಲವೆಂಬ ತನ್ನ ಮುಖದಿಂದ ಚಕ್ರವಾಕ ಪಕ್ಷಿಯನ್ನು ಅದರ ಪ್ರಿಯೆಯೊಡನೆ ಸೇರಿಸುವ ಹಾಗೆ ಹೃದಯಂಗಮವಾದ ಮಾತುಗಳಿಂದ ದೂತಿಯು ಸುಂದರಿಯೊಡನೆ ಅವಳ ಸಹಚರನನ್ನು ಕೂಡಿಸಿದಳು.

೩೯. ತರುಣೇ ಗೃಹಾಶ್ರಯಿಣಿ ತತ್ಕೃತಾಂ ವ್ಯಥಾ
ಮವಥೂಯ ಕಾsಪಿ ಸಮತುಷ್ಯದಂಗನಾ |
ಶರದಂ ಸಮೇಯುಷಿ ಶನೈರ್ಬಲಾಹಕೇ
ಕಲಹಂಸಿಕೇವ ಕಲುಷಿಕೃತಾಶಯಾ ||

ತರುಣನು ಮನೆಯನ್ನಾಶ್ರಯಿಸಿದಾಗ ಪತಿವಿರಹದಿಂದ ಉಂಟಾದ ಕ್ಲೇಶವನ್ನು ದೂತಿ ಒಬ್ಬಳು ಶರತ್ಕಾಲದಲ್ಲಿ ಬಲಾಹಕವೆಂಬ ಪಕ್ಷಿ ಬಂದಾಗ ಕಲುಷಿತವಾದ ಹೃದಯವುಳ್ಳದಾದರೂ ಹೆಣ್ಣು ಕಲಹಂಸದಂತೆ ಸಂತಸಪಟ್ಟಳು.

೪೦. ಅಪರಾಧಜಾತಮಧಿರೋಪಯಂತು
ಯ್ಯಬಲೇ ಕಿಂಚಿದಭಿಮರ್ಶನಾಧಿಕಮ್ |
ಅಥವಾsಸ್ತಿ ಚೇದಯಿ ನತಾಂಗಿ ಸಹ್ಯತಾ
ಮಿತಿಸಾಂತ್ವಯನ್ನಿವ ಚಾssಲಿಲಿಂಗ ತಾಮ್ ||

ನನ್ನಲ್ಲಿ ಅಪರಾಧಗಳ ರಾಶಿಯನ್ನು ಬೇಕಾದರೆ ಜನರು ಆರೋಪಿಸಲಿ. ನಾನು ಅಶಕ್ತರಲ್ಲಿ ಸ್ವಲ್ಪವೂ ಕೂಡ ಆಕ್ರಮಣ ಮಾಡುವುದಿಲ್ಲ ಅಥವಾ ಹಾಗೇನಾದರೂ ಆದರೆ ಸಹಿಸಿಕೋ ಎಂದು ಸುಂದರಿಯನ್ನು ಸಮಾಧಾನ ಪಡಿಸುವ ಹಾಗೆ ಆ ತರುಣನು ಅವಳನ್ನು ಆಲಂಗಿಸಿದನು.

೪೧. ಚರಮಾಂಗಮೇತ್ಯ ಸಹಚಾರಿಣಾsಪರಾ
ಪಿಹಿತೇಕ್ಷಣಾ ಪ್ರಿಯವಿನೋದವೇದಿನೀ |
ತ್ರಪತೇ ಸ್ಮ ಸಾ ತದಭಿಧಾನಶಂಸನೇ
ಸಮಸೂಚಯತ್ಪುಲಕ ಎವ ತತ್ಕ್ಷಣಮ್ ||

ಹಿಂದಿನಿಂದ ಬಂದ ಸಹಚರನೊಬ್ಬನು ಕಣ್ಣು ಮುಚ್ಚಿದಾಗ ತನ್ನ ಪ್ರಿಯಕರನೇ ಮಾಡಿದ ವಿನೋದವೆಂದು ತಿಳಿದು ಅವಳು ಅವನ ಹೆಸರನ್ನು ಹೇಳಲು ನಾಚಿಕೊಂಡಳು. ಆದರೆ ಆ ಕ್ಷಣಕ್ಕೆ ಕಾಣುತ್ತಿದ್ದ ಪುಲಕವೇ ಅದನ್ನು ಸೂಚಿಸುತ್ತಿತ್ತು.

೪೨. ಪ್ರಹಿತಾ ಪರೇಣ ಪರಮಾಣುಮಧ್ಯಮಾಂ
ಪ್ರಣಯಪ್ರಕೋಪಪರತಂತ್ರಮಾನಸಾಮ್ |
ಅಧಿಗಮ್ಯ ಸಾಂತ್ವಯಿಮಾಶು ದೂತಿಕಾ
ನಿಜಗಾದ ವಾಚಮಿತಿ ಸೈಪುಣೀಯುತಾಮ್ ||

ಪ್ರಣಯಕೋಪದಿಂದ ವಿವಶವಾಗಿರುವ ಮನಸ್ಸಿನ ಸುಂದರಿಯೊಬ್ಬಳಿಗೆ ಅವಳ ಪ್ರಿಯನು ಕಳುಹಿಸಿದ ದೂತಿಯು ಸಮೀಪಕ್ಕೆ ಬಂದು ಅವಳನ್ನು ಸಮಾಧಾನಪಡಿಸುವುದಕ್ಕಾಗಿ ಚಾತುರ್ಯಯುಕ್ತವಾದ ಮಾತುಗಳನ್ನು ಹೇಳಿದಳು.

೪೩. ಮುಖಮೀಕ್ಷ್ಯ ತೇ ಮುಕುಲಿತಸ್ಮಿತಾಂಕುರಂ
ವಿಭಾತಿ ಕೀರವಚನೇsಪಿ ಲಾಲನಾ |
ಮಸೃಣೋ ಮಮಾಪಿ ಸಮಾಗಮಾದರ
ಸ್ಖಲಿತಂ ಪ್ರಿಯೇಣ ಕಿಮು ಕಾತರೇಕ್ಷಣೇ ||

ಮುಗಳುನಗೆ ಮುಚ್ಚಿಹೋಗಿರುವ ನಿನ್ನ ಮುಖದಲ್ಲಿ ಗಿಣಿಯ ಮಾತನ್ನು ಕೇಳುವದರಲ್ಲೂ ನಿನಗೆ ಆಸಕ್ತಿಯಿಲ್ಲವೆಂದು ತೋರುತ್ತದೆ. ನಿಮ್ಮಿಬ್ಬರ ಸಮಾಗಮವಾಗಲಿ ಎಂದು ನನ್ನ ಆದರಪೂರ್ವಕ ಅಭಿಲಾಷೆ. ಕಾತರವಾದ ಕಣ್ಣಿನವಳೇ ನಿನ್ನ ಪ್ರಿಯನು ಏನು ತಪ್ಪುಮಾಡಿದನು

೪೪. ಸ್ಖಲಿತಂ ಯದಸ್ತಿ ಕಮಿತುರ್ವಿದಗ್ದಯಾ
ಸಹನೀಯಮಶ್ರುತಮಿವ ಶ್ರುತಂ ತತ್ |
ಇತಿ ಮೇ ಸೂಕ್ತಿಪಟಿಮಾsವಗಮ್ಯತಾಂ
ನಿಯತಂ ಮನೋಜನಿಗಮಾರ್ಥ ನಿರ್ಣಯಃ ||

ಪ್ರಿಯನಲ್ಲಿ ಏನಾದರೂ ತಪ್ಪಿದರೂ ಜಾಣೆಯು ಅದನ್ನು ಸಹಿಸಿಕೊಳ್ಳಬೇಕು. ಕೇಳಿಸಿಕೊಂಡರೂ ಕೇಳಿಸಲಿಲ್ಲವೆಂಬಂತೆ ಇರಬೇಕು. ಇದು ನನ್ನ ಮಾತಿನ ಚಾತುರ್ಯವಿಲ್ಲ. ಮನ್ಮನಥವೇದದ ಅರ್ಥನಿರ್ಣಯವೇ ಇದೆಂದು ತಿಳಿದುಕೋ.