‘ಅಚ್ಯುತರಾಯಾಭ್ಯುದಯಂ’ ಕೃತಿಯ ಅನುವಾದ ಯೋಜನೆಯನ್ನು ಕೈಗೊಳ್ಳಲು ಅನುಮೋದನೆ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೂ ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೂ ಹಿಂದಿನ ಕುಲಪತಿಗಳಾಗಿದ್ದ ಮಾನ್ಯ ಡಾ. ಕೆ.ವಿ. ನಾರಾಯಣ ಅವರಿಗೂ

ಭಾಷಾನಿಕಾಯದ ಡೀನರಾದ ಡಾ. ರಹಮತ್ ತರೀಕೆರೆ ಅವರಿಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ ಅವರಿಗೂ ಅಧ್ಯಯನಾಂಗದ ಹಿಂದಿನ ನಿರ್ದೇಶಕರಾದ ಡಾ. ಪಾಂಡುರಂಗಬಾಬು ಅವರಿಗೂ

ಈ ಯೋಜನೆಯ ವಸ್ತುವಿಷಯವನ್ನು ಸೂಚಿಸಿ, ತಾಳ್ಮೆಯಿಂದ ನನ್ನ ಸಂದೇಹಗಳನ್ನು ಪರಿಹರಿಸಿದ ಡಾ. ಕೆ.ಬಿ. ಅರ್ಚಕ ಅವರಿಗೂ ತಮ್ಮಲ್ಲಿರುವ ಮಾಹಿತಿ ಒದಗಿಸಿ, ತಪ್ಪುಗಳನ್ನು ತಿದ್ದಿ ಸೂಕ್ತ ಮಾರ್ಗದರ್ಶನ ನೀಡಿರುವ ಡಾ. ಎಂ.ಎಂ. ಕಲಬುರ್ಗಿ ಅವರಿಗೂ ಸಂದೇಹಗಳಿಗೆ ಸಮರ್ಥ ರೀತಿಯ ಪ್ರತಿಪಾದನೆಯಿಂದ ಅರಿವನ್ನು ಮೂಡಿಸಿದ ವಿದ್ವಾನ್ ರಾಜೇಶ್ವರ ಶಾಸ್ತ್ರೀ ಅವರಿಗೂ

ಯೋಜನೆಯ ಆರಂಭಿಕ ಹಂತದಿಂದಲೂ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ ನನ್ನ ವಿಭಾಗದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ಎ. ಸುಬ್ಬಣ್ಣ ರೈ, ಡಾ. ಮಾಧವ ಪೆರಾಜೆ, ಶ್ರೀ ಸಿ. ವೆಂಕಟೇಶ್ ಅವರಿಗೂ

ಪ್ರಕಟಣೆ ಹಂತದಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಮೋಹನ ಕುಂಟಾರ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೂ

ಸಂಸ್ಕೃತದ ಲಿಪಿಯನ್ನು ಅರ್ಥೈಸಿಕೊಂಡು ಸಮರ್ಥ ರೀತಿಯಲ್ಲಿ ದೋಷರಹಿತವಾಗಿ ಅಕ್ಷರ ಸಂಯೋಜನೆ ಮಾಡಿಕೊಟ್ಟ ಅಭಿ ಗ್ರಾಫಿಕ್ಸ್‌ನ ಡಾ. ಮಲ್ಲಿಕಾರ್ಜುನ ವಣೇನೂರು ಅವರಿಗೂ ವಿಭಾಗದ ಶ್ರೀ ಕೆ. ಲಿಂಗಪ್ಪ ಮತ್ತು ಶ್ರೀ ಈರಪ್ಪ ಅವರುಗಳಿಗೂ ಪತಿ ಶ್ರೀ ಪ್ರತಾಪ್ ಮತ್ತು ಮಗ ಆಶುತೋಷ ಹಾಗೂ ತಕ್ಕ ಸಂಸ್ಕಾರ ಕಲಿಸಿಕೊಟ್ಟ ತಂದೆ ತಾಯಿಗಳಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಡಾ. ಸುಚೇತಾ ನವರತ್ನ